ತೀವ್ರ ಸ್ವರೂಪ ಪಡೆದ ಕರ್ನಾಟಕ ಯೂತ್ ಕಾಂಗ್ರೆಸ್​ ಗಲಾಟೆ: ಅಧ್ಯಕ್ಷ ವಿರುದ್ಧ ಗಂಭೀರ ಆರೋಪ – Kannada News | Karnataka Youth Congress Row: Deepika Reddy major allegations Against President Manjunath Gowda

ಬೆಂಗಳೂರು, (ಮೇ 18): ಕರ್ನಾಟಕ ಯುವ ಕಾಂಗ್ರೆಸ್​​​ನಲ್ಲಿ (Karnataka Youth Congress) ರಾಜಕೀಯ ಪ್ರಹಸನಗಳು ನಡೆಯುತ್ತಿವೆ. ಯೂತ್ ಕಾಂಗ್ರೆಸ್ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಸೇರಿದಂತೆ 15 ಪದಾಧಿಕಾರಿಗಳನ್ನ ವಜಾ ಮಾಡಿರುವುದು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದೀಗ ಪರಸ್ಪರ ಕೈ- ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಹೌದು…ಕೆಪಿಸಿಸಿ (KPCC) ಕಚೇರಿಯಲ್ಲಿಂದು ನೀಟ್​​​ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಪ್ರತಿಭಟನೆ ನಡೆಸಲು ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ (Manjunath Gowda) ಹಾಗೂ ಅಮಾನತುಗೊಂಡಿರುವ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಬೆಂಬಲಿಗರ ನಡುವೆ ತೀವ್ರ ವಾಗ್ವಾದ, ತಳ್ಳಾಟ-ನೂಕಾಟ ನಡೆದು ಕೊನೆಗೆ ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಇದರ ಮಧ್ಯೆ ದೀಪಿಕಾ ರೆಡ್ಡಿ (Deepika Reddy) ಅವರು ಪ್ರತಿಕ್ರಿಯಿಸಿದ್ದು, ಇದು ಶಿಸ್ತಿನ ಕ್ರಮವಲ್ಲ, ವೈಯಕ್ತಿಕ ಸೇಡು ಎಂದು ಅಧ್ಯಕ್ಷ ಎಚ್.ಎಸ್.ಮಂಜುನಾಥ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

  • ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಮಂಜುನಾಥ್ ವಿರುದ್ಧ ಗಂಭೀರ ಆರೋಪ.
  • ಪ್ರೆಸ್‌ನೋಟ್ ರಿಲೀಸ್ ಮಾಡಿದ ಆರೋಪಿಸಿದ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ
  • ಹುದ್ದೆ ತಡೆಹಿಡಿದಿದ್ದು ಕಾನೂನುಬಾಹಿರ ಹಾಗೂ ಪ್ರತೀಕಾರದ ಕ್ರಮ
  • ಇದು ಶಿಸ್ತಿನ ಕ್ರಮವಲ್ಲ, ವೈಯಕ್ತಿಕ ಸೇಡು ಎಂದು ಆರೋಪಿಸಿದ ದೀಪಿಕಾ ರೆಡ್ಡಿ

ಇದು ಶಿಸ್ತಿನ ಕ್ರಮವಲ್ಲ, ವೈಯಕ್ತಿಕ ಸೇಡು

ಕೆಪಿಸಿಸಿ ಕಚೇರಿಯಲ್ಲಿ ನಡೆದ ಗಲಾಟೆ ಬಳಿಕ ದೀಪಿಕಾ ರೆಡ್ಡಿ ಅವರು ಪ್ರೆಸ್‌ನೋಟ್ ರಿಲೀಸ್ ಮಾಡಿದ್ದು, ಹುದ್ದೆ ತಡೆಹಿಡಿದಿದ್ದು ಕಾನೂನುಬಾಹಿರ ಹಾಗೂ ಪ್ರತೀಕಾರದ ಕ್ರಮ. ಇದು ಶಿಸ್ತಿನ ಕ್ರಮವಲ್ಲ, ವೈಯಕ್ತಿಕ ಸೇಡು. ಸ್ತ್ರೀ ದ್ವೇಷದ ಪಿತೂರಿ ಮತ್ತು ಸೇಡಿನ ರಾಜಕೀಯಕ್ಕೆ ಮೌನವಾಗುವುದಿಲ್ಲ. ಕಾಂಗ್ರೆಸ್ ಪಕ್ಷ ಹಾಗೂ ಹೈಕಮಾಂಡ್ ಮೇಲಿನ ನಿಷ್ಠೆ ಅಚಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ನೋಡಿ: ಕೆಪಿಸಿಸಿ ಕಚೇರಿಯಲ್ಲಿಯೇ ಯೂತ್​​ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ: ಕಾರಣ ಇಲ್ಲಿದೆ

ಪಿತೂರಿ ಮತ್ತು ಮಾನಸಿಕ ಕಿರುಕುಳ

ಯುವ ಕಾಂಗ್ರೆಸ್ ಚುನಾವಣೆಯಲ್ಲಿ 2.95 ಲಕ್ಷ ಮತಗಳ ಪಡೆದಿದ್ದೇನೆ. ದೇಶದಲ್ಲೇ ಅತಿ ಹೆಚ್ಚು ಮತ ಪಡೆದ ಮಹಿಳಾ ಅಭ್ಯರ್ಥಿಗಳಲ್ಲಿ ನಾನು ಒಬ್ಬಳು. ಪುರುಷ ಪ್ರಾಬಲ್ಯದ ರಾಜಕೀಯದಲ್ಲಿ ಅವರ ವಿರುದ್ಧ ಹೋರಾಟ ನಡೆಸಿದ್ದೇನೆ. ಚುನಾವಣೆಯ ಬಳಿಕವೂ ಪಕ್ಷ ಸಂಘಟನೆಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದೇನೆ. ಎಚ್.ಎಸ್. ಮಂಜುನಾಥ್ ಅಭದ್ರತೆ ಮತ್ತು ಅಸೂಯೆಯಿಂದ ನಡೆದುಕೊಳ್ಳುತ್ತಿದ್ದಾರೆ. ಮಹಿಳಾ ನಾಯಕಿಯರನ್ನು ವ್ಯವಸ್ಥಿತವಾಗಿ ಗುರಿ ಮಾಡಲಾಗ್ತಿದೆ. ಮಂಜುನಾಥ್ ಗೌಡ ನೇತೃತ್ವದ ಯುವ ಕಾಂಗ್ರೆಸ್ ಮಹಿಳೆಯರಿಗೆ ಅಸುರಕ್ಷಿತ ವಾತಾವರಣ ನಿರ್ಮಿಸಲಾಗಿದೆ. ಚುನಾವಣೆಯ ಬಳಿಕ ರಾಜಕೀಯ ಪಿತೂರಿ ಮತ್ತು ಮಾನಸಿಕ ಕಿರುಕುಳ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸಾರ್ವಜನಿಕ ಬೆಂಬಲ ಹೊಂದಿರುವ ಮಹಿಳಾ ನಾಯಕರನ್ನು ಬೆದರಿಸಲು ಅಧಿಕಾರ ದುರುಪಯೋಗ ಮಾಡಿಕೊಳ್ತಿದ್ದಾರೆ. ಈ ಕ್ರಮಗಳು ನನ್ನನ್ನು ಬೆದರಿಸಲಾರವು. ಜನಾದೇಶವನ್ನು ಯಾವುದೇ ಆದೇಶ ಅಳಿಸಲಾರದು. ಈ ವಿಚಾರವನ್ನ ರಾಷ್ಟ್ರೀಯ ನಾಯಕರ ಮುಂದೆ ತೆಗೆದುಕೊಂಡು ಹೋಗುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ದಿಢೀರ್ 15 ಪದಾಧಿಕಾರಿಗಳ ವಜಾ: ಹೈಕಮಾಂಡ್​​ನ ಈ ದಿಟ್ಟ ಕ್ರಮಕ್ಕೆ ಕರ್ನಾಟಕ ಕಾಂಗ್ರೆಸ್​​ನಲ್ಲಿ ಸಂಚಲನ

ನನಗೆ 8 ಜಿಲ್ಲೆಗಳನ್ನ ಕೊಟ್ಟಿದ್ದಾರೆ. ಹೆದರದೆ ಕೆಲಸ ಮಾಡಿದ್ದೇನೆ. ನಾನು ಮಾಡಿದ ಕೆಲಸದ ಬಗ್ಗೆ ದಾಖಲೆ ಇದೆ. ರಾಹುಲ್ ಗಾಂಧಿ ಹೇಳಿದ ಹಾಗೆ ಚುನಾವಣೆಯಲ್ಲಿ‌ ಕೆಲಸ ಮಾಡಿದ್ದೇವೆ. ನನ್ನ ಬಿಟ್ಟು ಎಲ್ಲಾ ಪದಾಧಿಕಾರಿಗಳಿಗೆ ತೊಂದರೆ ಕೊಟ್ರು. ಹೊಡೆದು ಆಳುವ ನೀತಿಯನ್ನ ಮಂಜುನಾಥ್ ಮಾಡಿದ್ದಾರೆ. ಸಭೆಯಿಂದ ನಮ್ಮ‌ ಪದಾಧಿಕಾರಿ ಎದ್ದು ಹೊರಡಲು ಪ್ರಯತ್ನ ಮಾಡಿದ್ರು. ಎಲ್ಲರನ್ನೂ ಜೊತೆ ತೆಗೆದುಕೊಂಡು ಹೋಗುವುದು ರಾಹುಲ್ ಗಾಂಧಿ ಐಡಿಯಾಲಜಿ. ನಮ್ಮ ಸಮಸ್ಯೆಯನ್ನ ಡಿಸಿಎಂ, ಸಿಎಂ ಕರೆಸಿ ಬಗೆಹರಿಸುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ದುಬಾರೆ ಶಿಬಿರದಲ್ಲಿ ಸಾಕಾನೆಗಳ ಕಾದಾಟದ ವೇಳೆ ಅವುಗಳ ನಡುವೆ ಸಿಲುಕಿ ಮಹಿಳೆ ಸಾವು – Kannada News | Dubare Elephant Camp Tragedy: Tourist Killed in Kodagu as Elephants Fight

ಸಾಕಾನೆಗಳ ಕಾದಾಟದ ವೇಳೆ ಮಹಿಳೆ ಸಾವು

ಮಡಿಕೇರಿ, ಮೇ 18: ಸಾಕಾನೆಗಳ ಕಾದಾಟದ ವೇಳೆ ಅವುಗಳ ನಡುವೆ ಸಿಲುಕಿ ಮಹಿಳೆಯೋರ್ವರು ದಾರುಣವಾಗಿ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣದ ದುಬಾರೆ ಶಿಬಿರದಲ್ಲಿ ನಡೆದಿದೆ. ಒಂದು ಆನೆ ಕೊಂಬಿನಿಂದ ತಿವಿದ ಪರಿಣಾಮ ಮತ್ತೊಂದು ಆನೆ ನೆಲಕ್ಕುರಿಳಿದೆ. ಈ ವೇಳೆ ಅಲ್ಲೇ ಇದ್ದ ಮಹಿಳೆ ಆನೆಯಡಿ ಸಿಲುಕಿದ್ದಾರೆ. ಗಂಭೀರ ಗಾಯಗೊಂಡಿದ್ದ ಆಕೆಯನ್ನು ಕುಶಾಲನಗರ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಮೃತರನ್ನು ಚೆನ್ನೈ ಮೂಲದ ಜಿನ್ಶು(33) ಎಂದು ಗುರುತಿಸಲಾಗಿದೆ.

ಮುಖ್ಯಾಂಶಗಳು

  • ಸಾಕಾನೆಗಳ ಕಾದಾಟದ ವೇಳೆ ಅವುಗಳ ನಡುವೆ ಸಿಲುಕಿ ಮಹಿಳೆ ಸಾವು
  • ಕುಶಾಲನಗರ ತಾಲೂಕಿನ ನಂಜರಾಯಪಟ್ಟಣದ ದುಬಾರೆ ಶಿಬಿರದಲ್ಲಿ ಘಟನೆ
  • ಪ್ರವಾಸಕ್ಕೆಂದು ಬಂದು ಪ್ರಾಣ ಕಳೆದುಕೊಂಡ ಚೆನ್ನೈ ಮೂಲದ ಜಿನ್ಶು (33)

ಆಗಿದ್ದೇನು?

ಚೆನ್ನೈ ಮೂಲದ ಜಿನ್ಶು ಎಂಬ ಮಹಿಳೆ ಕುಟುಂಬ ಸಮೇತ ನಂಜರಾಯಪಟ್ಟಣದ ದುಬಾರೆ ಆನೆ ಶಿಬಿರಕ್ಕೆ ಪ್ರವಾಸಕ್ಕೆ ಬಂದಿದ್ದರು. ಅವರು ಕಾವೇರಿ ನೀರಲ್ಲಿ ಆಟವಾಡುತ್ತಿರುವ ಸಂದರ್ಭ ಮಾವುತರು ಆನೆಗಳನ್ನು ಸ್ನಾನಕ್ಕೆಂದು ಕರೆತಂದಿದ್ದರು. ಈ ವೇಳೆ ಆನೆಗಳ ನಡುವೆ ಕಾದಾಟ ಶುರುವಾಗಿದೆ. ದುರ್ದೈವ ಎಂಬಂತೆ ಅಲ್ಲೇ ಇದ್ದ ಪ್ರವಾಸಿ ಮಹಿಳೆಯ ಮೇಲೆ ಆನೆ ಬಿದ್ದಿದ್ದು, ನೆಲಕ್ಕೆ ಅಪ್ಪಳಿಸಿದ ಜಿನ್ಶು ಅವರ ತಲೆಗೆ ಗಂಭೀರ ಗಾಯವಾದ ಪರಿಣಾಮ ಅವರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಪ್ರವಾಸಿಗರೇ ಎಚ್ಚರ! 2000ಕ್ಕೂ ಹೆಚ್ಚು ಅಕ್ರಮ ಹೋಂಸ್ಟೇಗಳ ಕಪಿಮುಷ್ಠಿಯಲ್ಲಿ ಕೊಡಗು; ಕಠಿಣ ಕ್ರಮಕ್ಕೆ ಆಗ್ರಹ

ರಕ್ಷಣೆಗೆ ಹರಸಾಹಸ

ಆನೆಗಳ ಕಾದಾಟದ ವೇಳೆ ಅವುಗಳ ಕಾಲಿನ ಸಮೀಪ ಸಿಲುಕಿಕೊಂಡಿದ್ದ ಮಹಿಳೆ ಜಿನ್ಶು ರಕ್ಷಣೆಗೆ ಶಕ್ತಿಮೀರಿ ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಆನೆಗಳ ನಿಯಂತ್ರಣಕ್ಕೆ ಮಾವುತರು ಸತತ ಪ್ರಯತ್ನ ನಡೆಸಿರುವ ಹೊರತಾಗಿ, ಮಹಿಳೆಯ ರಕ್ಷಣೆಗೆ ಮಗುವನ್ನು ಕೈನಲ್ಲಿ ಹಿಡಿದ್ದ ವ್ಯಕ್ತಿ ಸೇರಿ ಕೆಲವರು ಯತ್ನಿಸಿದರಾದರೂ ಅದು ಫಲಪ್ರದವಾಗಿಲ್ಲ. ಅಲ್ಲೇ ಇದ್ದ ಇನ್ನು ಕೆಲ ಪ್ರವಾಸಿಗರು ಆನೆಗಳ ಕಾದಾಟಕ್ಕೆ ಬೆದರಿ ಕಾಲ್ಕಿತ್ತು ಓಡಿದ್ದು, ಅದೃಷ್ಟವಶಾತ್​​ ಎಂಬಂತೆ ಅವರೆಲ್ಲ ಬಚಾವ್​​ ಆಗಿದ್ದಾರೆ. ಆದರೆ ಪ್ರವಾಸಕ್ಕೆಂದು ಬಂದಿದ್ದ ಅಮಾಯಕ ಮಹಿಳೆಯ ಜೀವವನ್ನು ಸಾಕಾನೆಗಳು ಬಲಿ ಪಡೆದಿವೆ. ಘಟನೆ ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ವಿಚ್ಛೇದನದ ಬಳಿಕ ಮೌನಿ ರಾಯ್​​​ಗೆ ಸಿಕ್ಕ ಜೀವನಾಂಶ ಎಷ್ಟು? ಮಾಜಿ ಪತಿ ಹೇಳಿದ್ದಿಷ್ಟು – Kannada News | Mouni Roy Divorce: Suraj Nambiar Denies Alimony, Third Party Rumors and Confirms Separation

ಭಾರತ ಮೂಲದ ದುಬೈ ಉದ್ಯಮಿ ಸೂರಜ್ ನಂಬಿಯಾರ್ ಹಾಗೂ ಬಾಲಿವುಡ್ ನಟಿ ಮೌನಿ ರಾಯ್ ಇಬ್ಬರೂ ಡಿವೋರ್ಸ್ ಪಡೆದಿದ್ದಾರೆ. ಇಬ್ಬರ ಮಧ್ಯೆ ಮೂರನೇ ವ್ಯಕ್ತಿ ಎಂಟ್ರಿ ಆಗಿರುವುದೇ ಡಿವೋರ್ಸ್​​ಗೆ ಕಾರಣ ಎಂಬ ವದಂತಿ ಸೃಷ್ಟಿ ಆಗಿತ್ತು. ಅಲ್ಲದೆ, ನಟಿಗೆ ಸಾಕಷ್ಟು ಜೀವನಾಂಶ ಸಿಕ್ಕಿದೆ ಎಂದು ಕೂಡ ಹೇಳಲಾಗಿತ್ತು. ಈ ಎಲ್ಲಾ ವದಂತಿಗೆ ಸೂರಜ್ ನಂಬಿಯಾರ್ ಸ್ಪಷ್ಟನೆ ನೀಡಿದ್ದಾರೆ. ತಮ್ಮಿಬ್ಬರ ವಿಚ್ಛೇದನದ ಕುರಿತು ವರದಿಯಾಗುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳು, ಆಧಾರರಹಿತ ಮತ್ತು ದುರುದ್ದೇಶಪೂರಿತ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪರಸ್ಪರ ಗೌರವ ಮತ್ತು ಒಮ್ಮತದ ನಿರ್ಧಾರದಿಂದಲೇ ತಾವಿಬ್ಬರು ಬೇರೆಯಾಗುತ್ತಿರುವುದಾಗಿ ಸೂರಜ್ ತಿಳಿಸಿದ್ದಾರೆ. ಈ ನಿರ್ಧಾರದ ಹಿಂದೆ ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪವಿಲ್ಲ ಎಂದು ಹೇಳಿದ್ದಾರೆ. ಜೀವನಾಂಶ ಅಥವಾ ಇನ್ಯಾವುದೇ ವಿಷಯದ ಬಗ್ಗೆ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ಕಟ್ಟುಕಥೆಗಳು ಕೇವಲ ಇಬ್ಬರು ವ್ಯಕ್ತಿಗಳ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನವಷ್ಟೇ ಎಂದು ಅವರು ಬೇಸರ ಹೊರಹಾಕಿದ್ದಾರೆ. ಈ ಮೂಲಕ ಮೌನಿ ರಾಯ್ ಅವರು ಯಾವುದೇ ಜೀವನಾಂಶ ಕೇಳಿಲ್ಲ ಎಂಬುದು ಸ್ಪಷ್ಟವಾಗಿದೆ.

ಸಂಬಂಧವಿಲ್ಲದವರನ್ನು ಈ ವಿವಾದಕ್ಕೆ ಎಳೆದು ತರುತ್ತಿರುವುದರ ಬಗ್ಗೆ ಸೂರಜ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಾವಿಬ್ಬರೂ ಈ ಕಠಿಣ ಸಮಯದಲ್ಲಿ ಗೌರವಯುತವಾಗಿ ನಡೆದುಕೊಂಡಿದ್ದು, ಮಾಧ್ಯಮಗಳು ಮತ್ತು ಸಾರ್ವಜನಿಕರು ಕೂಡ ಜವಾಬ್ದಾರಿಯಿಂದ ವರ್ತಿಸಿ ತಮ್ಮ ಖಾಸಗಿತನಕ್ಕೆ ಗೌರವ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ:  ದಿಶಾ ಪಟಾನಿ-ಮೌನಿ ರಾಯ್​ ಈ ರೀತಿ ಸ್ನೇಹ; ಇದೇ ಕಾರಣಕ್ಕೆ ವಿಚ್ಛೇದನ ನೀಡಿದ್ರಾ ಸೂರಜ್?

ಈ ವದಂತಿಗಳಿಗೆ ನಟಿ ಮೌನಿ ರಾಯ್ ಕೂಡ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿದ್ದು, ಪತಿ ಸೂರಜ್ ನಂಬಿಯಾರ್ ಅವರಿಂದ ದೂರವಾಗುತ್ತಿರುವುದನ್ನು ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಈ ಸೂಕ್ಷ್ಮ ವಿಷಯವನ್ನು ಅತ್ಯಂತ ಗೌರವಯುತವಾಗಿ ಮತ್ತು ಖಾಸಗಿಯಾಗಿ ನಿಭಾಯಿಸಲು ಇಬ್ಬರೂ ಒಟ್ಟಾಗಿ ನಿರ್ಧರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶಾಲಾ-ಕಾಲೇಜು ಆರಂಭಕ್ಕೂ ಮುನ್ನ ಪೋಷಕರಿಗೆ ಡಬಲ್ ಶಾಕ್! – Kannada News | Karnataka Parents Face Double Shock: School Fees and Bus Fares Due to Fuel Prices

ಶಾಲಾ ವಾಹನಗಳ ದರ ಏರಿಕೆಗೆ ನಿರ್ಧಾರ (ಎಐ ಚಿತ್ರ)Image Credit source: tv9 kannada

ಬೆಂಗಳೂರು, ಮೇ 18: ಗಲ್ಫ್​ ಯುದ್ಧದ ಪರಿಣಾಮ ಇದೀಗ ರಾಜ್ಯದ (Karnataka) ಪೋಷಕರಿಗೂ (Parents) ತಟ್ಟಿದೆ. ಹೇಗೆ ಅಂದರೆ ಈ ವರ್ಷ ಖಾಸಗಿ ಶಾಲೆಗಳು ಈಗಾಗಲೇ ಶೇ.10ರಷ್ಟು ಶಾಲಾ ಶುಲ್ಕವನ್ನು ಹೆಚ್ಚಳ ಮಾಡಿವೆ. ಈ ಮಧ್ಯೆ ಇದೀಗ ಶಾಲಾ ಬಸ್ ಮತ್ತು ವ್ಯಾನ್ ದರ ಏರಿಕೆಗೆ (School van fare) ಮುಂದಾಗಿವೆ. ಹೀಗಾಗಿ ಶಾಲೆಗಳು ಆರಂಭಕ್ಕೂ ಮುನ್ನವೇ ಪೋಷಕರಿಗೆ ಡಬಲ್ ಡಬಲ್​ ಶಾಕ್ ಎದುರಾಗಿದೆ.

ಮುಖ್ಯಾಂಶಗಳು

  • ಸಾಲು ಸಾಲು ದರ ಏರಿಕೆ ಮಧ್ಯೆ ಮತ್ತೊಂದು ಶಾಕ್​​!
  • ದರ ಹೆಚ್ಚಳಕ್ಕೆ ಮುಂದಾದ ಶಾಲಾ ವಾಹನ ಮಾಲೀಕರು
  • ಶಾಲಾ ಆರಂಭಕ್ಕೆ ಮುನ್ನ ಪೋಷಕರಿಗೆ ಡಬಲ್ ಶಾಕ್!

ಎಷ್ಟು ಏರಿಕೆ?

ಪೆಟ್ರೋಲ್‌, ಡೀಸೆಲ್‌, ಸಿಎನ್‌ಜಿ ದರವೂ ಏರಿಕೆ ಕಂಡಿದೆ. ಇದು ವಾಹನ ಸವಾರರಿಗೆ ಮಾತ್ರವನ್ನ, ಜನ ಸಾಮಾನ್ಯರಿಗೂ ಸಂಕಷ್ಟ ತಂದಿದೆ. ಇಂಧನ ದರವೂ ಏರಿಕೆ ಆಗಿದೆ. ಇದೇ ಕಾರಣ ನೀಡಿ ಖಾಸಗಿ ಶಾಲಾ ವಾಹನ ಮಾಲೀಕರು ಶೇ.10ರಿಂದ 15ರಷ್ಟು ದರ ಏರಿಕೆಗೆ ಮುಂದಾಗಿದ್ದಾರೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ್ಯಂತ ಶಾಲೆಗಳು ಪುನರಾರಂಭಗೊಳ್ಳುತ್ತಿರುವ ಈ ಹಂತದಲ್ಲೇ ದರ ಹೆಚ್ಚಳದ ನಿರ್ಧಾರ ಮಾಡಿದ್ದಾರೆ.

ಇದನ್ನೂ ಓದಿ: ಮೇ 20ರಂದು ಸಾರಿಗೆ ನೌಕರರ ಮುಷ್ಕರ: ಸಿಬ್ಬಂದಿಗೆ ಖಡಕ್​​ ಎಚ್ಚರಿಕೆ ಕೊಟ್ಟ KSRTC

ಇನ್ನು ಕರ್ನಾಟಕದಲ್ಲಿ ಸುಮಾರು 20 ಸಾವಿರ ಖಾಸಗಿ ಶಾಲಾ ಬಸ್, ವ್ಯಾನ್‌ಗಳು ಕಾರ್ಯನಿರ್ವಹಿಸುತ್ತಿವೆ. ಗಲ್ಫ್​​ ಬಿಕ್ಕಟ್ಟಿನಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಏರಿಕೆಯಾಗಿದ್ದು, ಅದರ ನೇರ ಪರಿಣಾಮ ದೇಶೀಯ ಪೆಟ್ರೋಲ್-ಡೀಸೆಲ್ ದರದ ಮೇಲೆ ಬಿದ್ದಿದೆ. ಇದನ್ನೇ ಮುಂದಿಟ್ಟುಕೊಂಡು ವಾಹನ ಮಾಲೀಕರು ದರ ಏರಿಕೆಗೆ ಮುಂದಾಗಿದ್ದಾರೆ. ಇದರಿಂದಾಗಿ ಪೋಷಕರು ಮಾತ್ರ ಕಂಗಾಲಾಗಿದ್ದಾರೆ.

ಮಲ್ಲೇಶ್ವರಂ ಶಾಲೆಯ ಮುಖ್ಯ ಶಿಕ್ಷಕ ಚಂದ್ರಮೌಳಿ ಹೇಳಿದ್ದಿಷ್ಟು 

ಈ ಬಗ್ಗೆ ಮಲ್ಲೇಶ್ವರಂ ಶಾಲೆಯ ಮುಖ್ಯ ಶಿಕ್ಷಕ ಚಂದ್ರಮೌಳಿ ಪ್ರತಿಕ್ರಿಯಿಸಿದ್ದು, ಯುದ್ಧದ ಎಫೆಕ್ಟ್ ಪೋಷಕರಿಗೆ ಹೊರೆಯಾಗಿದೆ. ನಾವು ಈ ವರ್ಷ ಹಿಮಾಂಸು ಶಾಲೆಯ ಶುಲ್ಕವನ್ನ 7% ಮಾತ್ರ ಜಾಸಿ ಮಾಡಿದ್ದೇವೆ. ಶಾಲೆಯ ವ್ಯಾನ್, ಆಟೋ, ಮಿನಿ ಟಿಟಿ ಅಸೋಸಿಯೇಷನ್ ಜೊತೆ ಚರ್ಚೆ ಮಾಡಿದ್ದೇವೆ. ಗರಿಷ್ಠ 10% ಕ್ಕಿಂತ ಜಾಸ್ತಿ ವ್ಯಾನ್ ಶುಲ್ಕ ಏರಿಕೆ ಮಾಡಬೇಡಿ. ಪೋಷಕರಿಗೆ ಇದು ತುಂಬಾ ಹೊರೆಯಾಗುತ್ತದೆ. ಶಾಲೆಯ ದಾಖಲಾತಿ ಕಡಿಮೆ ಕೂಡ ಆಗುತ್ತದೆ. ಹೀಗಾಗಿ ಸಮಸ್ಯೆಗಳಿಗೆ ಅನುಗುಣವಾಗಿ 7-10% ಶುಲ್ಕ ಏರಿಕೆಗೆ ಸಲಹೆ ನೀಡಿದ್ದೇವೆ ಎಂದು ತಿಳಿಸಿದರು.

ಸರ್ಕಾರ ಕೊಂಚ ಇದಕ್ಕೆ ಕಡಿವಾಣ ಹಾಕಬೇಕು ಎಂದ ಪೋಷಕರು

ಇನ್ನು ಈ ಬಗ್ಗೆ ಪೋಷಕರೊಬ್ಬರು ಮಾತನಾಡಿದ್ದು, ಈ ವರ್ಷ ಶಾಲಾ ಶುಲ್ಕದ ಜೊತೆ ಶಾಲಾ ವಾಹನಗಳ ಬೆಲೆ ಏರಿಕೆ ಶಾಕ್ ನೀಡಿದೆ. ಇದು ಪೋಷಕರಿಗೆ ದೊಡ್ಡ ಹೊರೆಯಾಗಿದೆ. ದುಡ್ಡು ಇರುವವರು ಕಟ್ಟುತ್ತಾರೆ. ಮದ್ಯಮ ವರ್ಗದ ಪೋಷಕರಿಗೆ ಇದು ತುಂಬಾ ಹೊರೆ ಆಗಲಿದೆ. ಪ್ರತಿವರ್ಷ ಶುಲ್ಕ ಏರಿಕೆ ತುಂಬಾ ಕಷ್ಟ. ಬಸ್, ಆಟೋ ದರ ಏರಿಕೆಯಾಗುತ್ತಿದೆ. ಆದರೆ ನಮ್ಮ ಸಂಬಳ ಮಾತ್ರ ಅಷ್ಟೇ ಇದೆ. ನಾಳೆ ಯಾವುದು ಏರಿಕೆ ಆಗುತ್ತದೆ ಎಂಬ ಯೋಚನೆಯಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್-ಡೀಸೆಲ್ ದರ ಹೆಚ್ಚಳ ಬೆನ್ನಲ್ಲೇ ಬೆಂಗಳೂರಿಗರಿಗೆ ಮತ್ತೊಂದು ದರ ಏರಿಕೆ ಬಿಸಿ!

ಯುದ್ಧದಿಂದ ನಮ್ಮ ಕೆಲಸದ ಭದ್ರತೆಯೂ ಇಲ್ಲ. ಹೀಗಾಗಿ ಯಾವ ಶಾಲೆಗೆ ಸೇರಿಸಬೇಕು ಅಂತ ಚಿಂತೆಯಾಗಿದೆ. ಲಕ್ಷ ಸಂಬಳ ಇದ್ದರೂ ಸಾಕಾಗುತ್ತಿಲ್ಲ. ಶಾಲಾ ವಾಹನ ದರ ಏರಿಕೆಯಿಂದ ಏನು ಮಾಡಬೇಕು ಅಂತ ಗೊತ್ತಿಲ್ಲ. ಪೋಷಕರಿಗೆ ತುಂಬಾ ಸಮಸ್ಯೆಯಾಗಿದ್ದು, ಸರ್ಕಾರ ಕೊಂಚ ಇದಕ್ಕೆ ಕಡಿವಾಣ ಹಾಕಬೇಕು ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬ್ರಾಹ್ಮಣರ ಬಗ್ಗೆ ಅನುರಾಗ್ ಕಶ್ಯಪ್ ಅವಹೇಳನಕಾರಿ ಹೇಳಿಕೆ: ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶ – Kannada News | Anurag Kashyap legal trouble Surat Court orders FIR Brahmin Community Remarks

ಸಾಮಾಜಿಕ ಜಾಲತಾಣಗಳಲ್ಲಿ ಬ್ರಾಹ್ಮಣ ಸಮುದಾಯದ (Brahmin Community) ಕುರಿತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಬಾಲಿವುಡ್‌ನ ಖ್ಯಾತ ನಿರ್ದೇಶಕ ಮತ್ತು ನಟ ಅನುರಾಗ್ ಕಶ್ಯಪ್ (Anurag Kashyap) ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನುರಾಗ್ ಕಶ್ಯಪ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಗುಜರಾತ್‌ನ ಸೂರತ್ ನ್ಯಾಯಾಲಯವು ಪೊಲೀಸರಿಗೆ ಮಹತ್ವದ ಆದೇಶ ನೀಡಿದೆ. ವಿವಿಧ ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು, ಸಾರ್ವಜನಿಕ ಶಾಂತಿಗೆ ಭಂಗ ತರುವುದು, ಉದ್ದೇಶಪೂರ್ವಕ ಅವಮಾನ ಮತ್ತು ದಾರಿ ತಪ್ಪಿಸುವ ಮಾಹಿತಿ ಹರಡುವಿಕೆಗೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ನ್ಯಾಯಾಲಯವು ಅಧಿಕಾರಿಗಳಿಗೆ ಸೂಚನೆ ನೀಡಿದೆ.

ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನಾಯಕ ಮತ್ತು ವಕೀಲ ಕಮಲೇಶ್ ರಾವಲ್ ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ಎ.ಎಸ್. ಜಾನಿ ಅವರ ಪೀಠವು ಶನಿವಾರ (ಮೇ 16) ಈ ಆದೇಶವನ್ನು ಹೊರಡಿಸಿದೆ. ನಿರ್ದೇಶಕರ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ನಿರ್ದಿಷ್ಟ ಸಮುದಾಯದ ಘನತೆಗೆ ಧಕ್ಕೆ ತಂದಿವೆಯೇ ಮತ್ತು ಸಮಾಜದಲ್ಲಿ ಉದ್ವಿಗ್ನತೆ ಸೃಷ್ಟಿಸಲು ಕಾರಣವಾಗಿವೆಯೇ ಎಂಬುದನ್ನು ಪರಿಶೀಲಿಸಲು ಸಾಕಷ್ಟು ಆಧಾರಗಳಿವೆ ಎಂದು ನ್ಯಾಯಾಲಯ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದೆ.

ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಕಮಲೇಶ್ ರಾವಲ್ ಅವರು ಸಲ್ಲಿಸಿದ ದೂರಿನ ಪ್ರಕಾರ, ಅನುರಾಗ್ ಕಶ್ಯಪ್ ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬ್ರಾಹ್ಮಣ ಸಮುದಾಯವನ್ನು ಗುರಿಯಾಗಿಸಿಕೊಂಡು ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಕಳೆದ ವರ್ಷದ ಏಪ್ರಿಲ್‌ನಲ್ಲಿ ಬಿಡುಗಡೆಯಾಗಿದ್ದ ‘ಫುಲೆ’ ಹಿಂದಿ ಸಿನಿಮಾದ ಟ್ರೇಲರ್ ಕುರಿತಾದ ಟೀಕೆಗಳಿಗೆ ಪ್ರತಿಕ್ರಿಯಿಸುವಾಗ ಈ ವಿವಾದ ಆರಂಭವಾಗಿತ್ತು ಎನ್ನಲಾಗಿದೆ.

ತಮ್ಮ ಪೋಸ್ಟ್‌ಗಳಿಗೆ ಆಕ್ಷೇಪ ವ್ಯಕ್ತಪಡಿಸಿದ ಜನರಿಗೆ ಪ್ರತಿಕ್ರಿಯೆ ನೀಡುವಾಗಲೂ ಕಶ್ಯಪ್ ಅವರು ನಿರಂತರವಾಗಿ ಇಂತಹ ಹೇಳಿಕೆಗಳನ್ನು ಮುಂದುವರಿಸಿದ್ದರು ಎಂದು ದೂರುದಾರರು ಆರೋಪಿಸಿದ್ದಾರೆ. ಈ ಹೇಳಿಕೆಗಳು ಇಡೀ ಬ್ರಾಹ್ಮಣ ಸಮುದಾಯವನ್ನು ಅವಮಾನಿಸುವಂತಿವೆ ಮತ್ತು ಸಮುದಾಯಗಳ ನಡುವೆ ಒಡಕು ಮೂಡಿಸುವ ಸಾಮರ್ಥ್ಯ ಹೊಂದಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಸಿನಿಮಾ ಟೀಸರ್ ಬಗ್ಗೆ ಅನುರಾಗ್ ಕಶ್ಯಪ್ ಹೇಳಿದ್ದೇನು?

ಚಿತ್ರರಂಗದ ಪ್ರಭಾವಿ ವ್ಯಕ್ತಿಯಾಗಿರುವ ಅನುರಾಗ್ ಕಶ್ಯಪ್ ಅಂಥವರಿಗೆ ಸಮಾಜದಲ್ಲಿ ದೊಡ್ಡ ಅಭಿಮಾನಿ ಬಳಗ ಇರುತ್ತದೆ. ಹೀಗಾಗಿ ಅವರ ಸಾರ್ವಜನಿಕ ಹೇಳಿಕೆಗಳು ಸಮಾಜದ ಮೇಲೆ ತೀವ್ರ ಪರಿಣಾಮ ಬೀರುತ್ತವೆ ಎಂದು ರಾವಲ್ ವಾದಿಸಿದ್ದಾರೆ. ಇದರೊಂದಿಗೆ, 2020ರ ಜನವರಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಶ್ಯಪ್ ಮಾಡಿದ್ದ ಹಳೆಯ ಪೋಸ್ಟ್ ಒಂದನ್ನು ದೂರಿನಲ್ಲಿ ಪ್ರಸ್ತಾಪಿಸಲಾಗಿದ್ದು, ಅದರಲ್ಲಿ ಹಿಂದೂಗಳ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಲಾಗಿದೆ ಎಂದು ಆರೋಪಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಲ್ಲಿ ಲೇಡಿ ಡಾನ್ ಹಾವಳಿ? ರಿಯಲ್ ಎಸ್ಟೇಟ್ ಉದ್ಯಮಿ ಕಚೇರಿಗೆ ನುಗ್ಗಿ ಬೆದರಿಕೆ ಹಾಕಿ 10 ಲಕ್ಷ ರೂ. ಹಫ್ತಾಗೆ ಬೇಡಿಕೆ ಇಟ್ಟ ಮಹಿಳೆ – Kannada News | Bengaluru Real Estate Extortion Case Woman Posing as Youth Wing Chief Threatens Businessman for Rs 10 Lakh Huphta

ಬೆಂಗಳೂರು, ಮೇ 18: ಮಹಿಳೆಯೊಬ್ಬಳು ತಾನು ಸಂಘಟನೆಯೊಂದರ ಪ್ರಮುಖ ನಾಯಕಿ ಎಂದು ಹೇಳಿಕೊಂಡು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಕಚೇರಿಗೆ ನುಗ್ಗಿ, ಜೀವ ಬೆದರಿಕೆ ಹಾಕಿ ಭಾರಿ ಮೊತ್ತದ ಹಣಕ್ಕೆ ಬೇಡಿಕೆ ಇಟ್ಟಿರುವ ಆಘಾತಕಾರಿ ಘಟನೆ ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂಗೀತ ರಾಮ್ ಎಂಬ ಮಹಿಳೆ ಹಾಗೂ ಆಕೆಯೊಂದಿಗೆ ಬಂದಿದ್ದ ಇಬ್ಬರು ಪುರುಷರು ಸೇರಿ ರಿಯಲ್ ಎಸ್ಟೇಟ್ ಉದ್ಯಮಿ ವೆಂಕಟರಾಜು ಅವರಿಗೆ ಈ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಕೊಡಿಗೆಹಳ್ಳಿ ವ್ಯಾಪ್ತಿಯಲ್ಲಿರುವ ವೆಂಕಟರಾಜು ಅವರ ಕಚೇರಿಗೆ ನುಗ್ಗಿದ ಸಂಗೀತ ರಾಮ್, ತಾನು ಸಂಘಟನೆಯೊಂದರ ಯುವಸೇನೆಯ ಮುಖ್ಯಸ್ಥೆ ಹಾಗೂ ಮಹಿಳಾ ಸಂಘದ ಅಧ್ಯಕ್ಷೆ ಎಂದು ಹೇಳಿಕೊಂಡು ಧಮ್ಕಿ ಹಾಕಿದ್ದಾಳೆ ಎಂದು ಆರೋಪಿಸಲಾಗಿದೆ. ಶಿವಾಜಿನಗರದಲ್ಲಿರುವ ಸೈಟ್‌ ಒಂದನ್ನು ವೆಂಕಟರಾಜು ಅವರು ರಿಜಿಸ್ಟರ್ಡ್ ಅಗ್ರಿಮೆಂಟ್ ಮಾಡಿಸಿಕೊಂಡಿದ್ದರು. ಇದೇ ಜಾಗದ ವಿಚಾರವನ್ನು ಮುಂದಿಟ್ಟುಕೊಂಡು ಕಚೇರಿಯಲ್ಲಿ ರಂಪಾಟ ಮಾಡಿರುವ ಮಹಿಳೆ, ‘ನೀನು ಅಗ್ರಿಮೆಂಟ್ ಮಾಡಿಸಿಕೊಂಡಿದ್ದರೂ ಆ ಜಾಗದ ಕಡೆ ತಲೆಹಾಕಬಾರದು. ನಾವು ನಿನ್ನ ತಂಟೆಗೆ ಬರಬಾರದು ಎಂದರೆ ತಕ್ಷಣ 10 ಲಕ್ಷ ರೂಪಾಯಿ ನೀಡಬೇಕು’ ಎಂದು ಹಫ್ತಾಗೆ ಬೇಡಿಕೆ ಇಟ್ಟಿದ್ದಾಳೆ ಎಂದು ಆರೋಪಿಸಲಾಗಿದೆ.

ಅಲ್ಲದೆ, ಒಂದು ವೇಳೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಕಚೇರಿಗೆ ನುಗ್ಗಿ ಹೊಡೆಯುವುದಾಗಿ ಮತ್ತು 15 ರಿಂದ 20 ಜನರನ್ನು ಕರೆಸಿ ಕೊಲೆ ಮಾಡಿಸುವುದಾಗಿ ದರ್ಪ ತೋರಿದ್ದಾಳೆ ಎಂದು ಉದ್ಯಮಿ ವೆಂಕಟರಾಜು ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದರ ಆಧಾರದಲ್ಲಿ ಕೊಡಿಗೆಹಳ್ಳಿ ಪೊಲೀಸಲು ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊಟ್ಟಿರೋ 11 ಲಕ್ಷ ರೂ. ಸ್ಕಾರ್ಪಿಯೋ ಕಾರು ಸಾಕಾಗಿಲ್ಲ, ಹೆಚ್ಚು ಹಣ ತರುವಂತೆ ಕಿರುಕುಳ, ಮಹಡಿಯಿಂದ ಬಿದ್ದು ಮಹಿಳೆ ಸಾವು – Kannada News | Family Raises Dowry Harassment Allegations After Greater Noida Woman Found Dead

ನೋಯ್ಡಾ, ಮೇ 18: ಮಗಳ ಮದುವೆ(Marriage)ಗಾಗಿ ಆಕೆಯ ತಂದೆ ಬರೋಬ್ಬರಿ ಒಂದು ಕೋಟಿ ರೂಪಾಯಿ ಖರ್ಚು ಮಾಡಿದ್ದರು. ಕೇಳಿದ್ದೆಲ್ಲವನ್ನು ವರದಕ್ಷಿಣೆ ರೂಪದಲ್ಲಿ ಕೊಟ್ಟಿದ್ದರು. ಆದರೆ ವರದಕ್ಷಿಣೆಯ ರಕ್ಕಸ ಹಪಾಹಪಿಗೆ ಕೇವಲ 25 ವರ್ಷದ ದೀಪಿಕಾ ನಾರಂಗ್ ಎಂಬಾಕೆ ಪ್ರಾಣ ಕಳೆದುಕೊಂಡಿದ್ದಾಳೆ. ಮದುವೆಯಾಗಿ 17 ತಿಂಗಳಿಗೆ ಮೂರನೇ ಮಹಡಿಯಿಂದ ಹಾರಿ ಪ್ರಾಣ ಕಳೆದುಕೊಂಡಿದ್ದಾಳೆ. ಈ ಘಟನೆ ನೋಯ್ಡಾದಲ್ಲಿ ನಡೆದಿದೆ.

ಈಕೆಯ ತಂದೆ ಸಂಜಯ್ ನಾರಂಗ್ ಇದು ಆತ್ಮಹತ್ಯೆಯಲ್ಲ, ಇದೊಂದು ಭೀಕರ ಕೊಲೆ ಎಂದು ಕಣ್ಣೀರು ಹಾಕಿದ್ದಾರೆ. 2024ರ ಡಿಸೆಂಬರ್​​ನಲ್ಲಿ ದೀಪಿಕಾ ಮದುವೆ ಅದ್ದೂರಿಯಾಗಿ ನೆರವೇರಿತ್ತು. ಮಗಳು ಚೆನ್ನಾಗಿರಲೆಂದು ಸಂಜಯ್ 11 ಲಕ್ಷ ರೂ. ಹಾಗೂ ಐಷಾರಾಮಿ ಸ್ಕಾರ್ಪಿಯೋ ಕಾರು ಕೊಟ್ಟಿದ್ದರು. ಮದುವೆಯಾಗಿ ಮೂರ್ನಾಲ್ಕು ತಿಂಗಳಲ್ಲೇ ಅತ್ತೆ, ಮಾವ ಮತ್ತು ಪತಿ ರಿತಿಕ್ ವರದಕ್ಷಿಣೆ ಕೊಟ್ಟಿದ್ದು ಸಾಲದೆಂದು ಆಕೆಗೆ ಕಿರುಕುಳ ಕೊಡಲು ಶುರು ಮಾಡಿದ್ದರು.

ಭಾನುವಾರ ಮಧ್ಯಾಹ್ನ ದೀಪಿಕಾ ತನ್ನ ತಂದೆಗೆ ಅಳುತ್ತಾ ಕರೆ ಮಾಡಿದ್ದಳು, ಪತಿ ಮತ್ತು ಅತ್ತೆ ಮಾವ ಸೇರಿ ನನಗೆ ಹೊಡೆಯುತ್ತಾರೆ ಎಂದು ಅಳಲು ತೋಡಿಕೊಂಡಿದ್ದಳು. ಮಗಳ ಸ್ಥಿತಿ ಕೇಳಿ ಕಳವಳಗೊಂಡ ಸಂಜಯ್ ಅದೇ ದಿನ ಸಂಜೆ ಸಂಬಂಧಿಕರೊಟ್ಟಿಗೆ ಅತ್ತೆಯ ಮನೆಗೆ ಹೋಗಿ ಸಮಾಧಾನ ಮಾಡಲು ಪ್ರಯತ್ನಿಸಿದ್ದರು. ಬಳಿಕ ಮನೆಗೆ ವಾಪಸಾಗಿದ್ದರು. ಅವರು ಮನೆಗೆ ಬಂದ ಕೆಲವೇ ಗಂಟೆಗಳಲ್ಲಿ ರಾತ್ರಿ 12.30ರ ಸುಮಾರಿಗೆ ದೀಪಿಕಾ ಛಾವಣಿಯಿಂದ ಬಿದ್ದಿದ್ದಾಳೆ ಎನ್ನುವ ಆಘಾತಕಾರಿ ಕರೆ ಬಂದಿತ್ತು.

ಮತ್ತಷ್ಟು ಓದಿ: ಮದುವೆ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಆಘಾತ: ಆಮಂತ್ರಣ ಕೊಡಲು ಹೋದ ವೇಳೆ ಮನೆಗೆ ಕನ್ನ, ವಧುವಿಗೆಂದು ತಂದಿದ್ದ ಆಭರಣ ಕದ್ದ ಕಳ್ಳರು

ಅದು ಆತ್ಮಹತ್ಯೆಯಲ್ಲ ಆಕೆಯ ಹೊಟ್ಟೆಗೆ ಚಾಕು ಅಥವಾ ಸ್ಕ್ರೂಡ್ರೈವರ್​ನಿಂದ ಇರಿದು ಕೊಲೆ ಮಾಡಿ ಬಳಿಕ ಮೇಲಿಂದ ತಳ್ಳಿ, ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸಿದ್ದಾರೆ ಎಂದು ತಂದೆ ದೂರು ಕೊಟ್ಟಿದ್ದಾರೆ. ಕಳೆದ 10 ತಿಂಗಳಿನಿಂದ ಇವರ ಕಿರುಕುಳ ಹೆಚ್ಚಾಗಿತ್ತು. ಮಗಳ ಸಂಸಾರ ಹಾಳಾಗಬಾರದೆಂದು ನಾವು ಸುಮ್ಮನಿದ್ದೆವು , ಈಗ ಎಲ್ಲವೂ ಮುಗಿದುಹೋಗಿದೆ ಎಂದು ತಂದೆ ಆಕ್ರೋಶ ಹೊರಹಾಕಿದ್ದಾರೆ. ಆಸ್ಪತ್ರೆಯಲ್ಲಿದ್ದ ದೀಪಿಕಾ ದೇಹದ ಮೇಲೆ ಕೆಲವು ಗಾಯದ ಗುರುತುಗಳಿದ್ದು, ಮೂಗು ಮತ್ತು ಕಿವಿಗಳಿಂದ ರಕ್ತ ಬರುತ್ತಿತ್ತು ಎಂದು ಕುಟುಂಬಸ್ಥರು ಹೇಳಿದ್ದಾರೆ.

ಸಂತ್ರಸ್ತೆಯ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೃತಳ ಪತಿ ರಿತಿಕ್ ತನ್ವರ್ ಮತ್ತು ಮಾವ ಮನೋಜ್‌ನನ್ನು ಈಗಾಗಲೇ ಬಂಧಿಸಲಾಗಿದೆ” ಎಂದು ತಿಳಿಸಿದ್ದಾರೆ. ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಸಾವಿನ ಅಸಲಿ ರಹಸ್ಯ ಹೊರಬರಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅತ್ಯಂತ ಮೌಲ್ಯಯುತ ಭಾರತೀಯ ಕಂಪನಿಗಳು; ರಿಲಾಯನ್ಸ್ ನಂತರ ಏರ್ಟೆಲ್; ಎಚ್​ಡಿಎಫ್​ಸಿಯನ್ನು ಹಿಂದಿಕ್ಕಿದ ಭಾರತೀಯ ಟೆಲಿಕಾಂ ಕಂಪನಿ – Kannada News | Bharti Airtel briefly edges HDFC Bank to Become India’s 2nd Most Valued Company

ನವದೆಹಲಿ, ಮೇ 18: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಟೆಲಿಕಾಂ ದೈತ್ಯ ಭಾರ್ತಿ ಏರ್‌ಟೆಲ್ (Bharti Airtel) ಐತಿಹಾಸಿಕ ಸಾಧನೆ ಮಾಡಿದೆ. ದೇಶದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಆದ ಎಚ್‌ಡಿಎಫ್‌ಸಿ (HDFC Bank) ಅನ್ನು ಹಿಂದಿಕ್ಕುವ ಮೂಲಕ ಭಾರ್ತಿ ಏರ್‌ಟೆಲ್ ಮಾರುಕಟ್ಟೆ ಬಂಡವಾಳೀಕರಣದಲ್ಲಿ (Market Capitalisation) ಭಾರತದ ಎರಡನೇ ಅತ್ಯಂತ ಮೌಲ್ಯಯುತ ಕಂಪನಿಯಾಗಿ ಹೊರಹೊಮ್ಮಿದೆ. ಕಳೆದ ಕೆಲವು ದಿನಗಳಿಂದ ಏರ್‌ಟೆಲ್ ಷೇರುಗಳು ಸತತವಾಗಿ ಏರಿಕೆ ಕಾಣುತ್ತಿರುವುದು ಈ ಸಾಧನೆಗೆ ಕಾರಣವಾಗಿದೆ. ಮುಕೇಶ್ ಅಂಬಾನಿ ಅವರ ರಿಲಾಯನ್ಸ್ ಇಂಡಸ್ಟ್ರೀಸ್ ಅತಿಹೆಚ್ಚು ಮಾರುಕಟ್ಟೆ ಬಂಡವಾಳ ಹೊಂದಿರುವ ಭಾರತೀಯ ಕಂಪನಿ ಎನಿಸಿದೆ. ಆ ನಂತರದ ಸ್ಥಾನ ಎಚ್ಡಿಎಫ್​ಸಿ ಬ್ಯಾಂಕ್​ನದ್ದಾಗಿದೆ. ಇವತ್ತು ಒಂದು ಸಂದರ್ಭದಲ್ಲಿ ಭಾರ್ತಿ ಏರ್ಟೆಲ್ ಎರಡನೇ ಸ್ಥಾನ ಪಡೆದಿತ್ತು.

ಈ ಸುದ್ದಿಯ ಮುಖ್ಯಾಂಶಗಳು

  • ಸೋಮವಾರದ (ಮೇ 18) ವಹಿವಾಟಿನಲ್ಲಿ ಭಾರ್ತಿ ಏರ್‌ಟೆಲ್ ಕಂಪನಿಯ ಒಟ್ಟು ಮಾರುಕಟ್ಟೆ ಮೌಲ್ಯವು 11.80 ಲಕ್ಷ ಕೋಟಿ ರೂ ದಾಟಿದೆ.
  • ಈ ಭಾರಿ ಜಿಗಿತದೊಂದಿಗೆ ಕಂಪನಿಯು ಎಚ್‌ಡಿಎಫ್‌ಸಿ ಬ್ಯಾಂಕ್‌ನ 11.74 ಲಕ್ಷ ಕೋಟಿ ರೂ ಮೌಲ್ಯವನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದೆ.
  • ಏರ್‌ಟೆಲ್ ಸಂಸ್ಥೆಯ ಷೇರುಗಳು ಕೇವಲ 4 ಸೆಷನ್​ಗಳಲ್ಲಿ (ಟ್ರೇಡಿಂಗ್ ದಿನಗಳು) ಶೇ. 11ರಷ್ಟು ಮೌಲ್ಯ ಹೆಚ್ಚಳ ಕಂಡಿವೆ.

ಇದನ್ನೂ ಓದಿ: ಪೇಟಿಎಂನಲ್ಲಿ ಹೊಸ ಫೀಚರ್; ಪೋಷಕರಿಂದ ಮಕ್ಕಳು ಪಡೆಯಬಹುದು ಆನ್​ಲೈನ್ ಪಾಕೆಟ್ ಮನಿ

ಏರ್‌ಟೆಲ್ ಷೇರುಗಳ ಭಾರಿ ಏರಿಕೆಗೆ ಕಾರಣವೇನು?

ಭಾರ್ತಿ ಏರ್‌ಟೆಲ್ ಇತ್ತೀಚೆಗೆ ಪ್ರಕಟಿಸಿದ ಮಾರ್ಚ್ ತ್ರೈಮಾಸಿಕದ ಬಲವಾದ ಆರ್ಥಿಕ ಫಲಿತಾಂಶಗಳು ಹೂಡಿಕೆದಾರರಲ್ಲಿ ಭರವಸೆ ಮೂಡಿಸಿವೆ. ಕಂಪನಿಯು ತನ್ನ ಪ್ರತಿ ಗ್ರಾಹಕರಿಂದ ಬರುವ ಸರಾಸರಿ ಆದಾಯವನ್ನು (ARPU) ಹೆಚ್ಚಿಸಲು ಪ್ರೀಮಿಯಂ ಯೋಜನೆಗಳು ಮತ್ತು ಪೋಸ್ಟ್‌ಪೇಯ್ಡ್ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸುವತ್ತ ವಿಶೇಷ ಗಮನ ಹರಿಸಿದೆ. ಇದರೊಂದಿಗೆ ಏರ್‌ಟೆಲ್‌ನ ಆಫ್ರಿಕಾ ಉದ್ಯಮ ಮತ್ತು ದೇಶೀಯ ಹೋಮ್ ಬ್ರಾಡ್‌ಬ್ಯಾಂಡ್ ವಿಭಾಗಗಳು ಅತ್ಯುತ್ತಮ ಬೆಳವಣಿಗೆಯನ್ನು ದಾಖಲಿಸಿರುವುದು ಷೇರುಗಳ ಸತತ ಏರಿಕೆಗೆ ವೇಗ ನೀಡಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್ ಹಿನ್ನಡೆಗೆ ಕಾರಣ

ಮತ್ತೊಂದೆಡೆ, ಎಚ್‌ಡಿಎಫ್‌ಸಿ ಬ್ಯಾಂಕ್‌ನ ಷೇರುಗಳು ಇತ್ತೀಚಿನ ದಿನಗಳಲ್ಲಿ ತೀವ್ರ ಒತ್ತಡವನ್ನು ಎದುರಿಸುತ್ತಿವೆ. ಬ್ಯಾಂಕ್‌ನ ಅರೆಕಾಲಿಕ ಅಧ್ಯಕ್ಷ ಅತಾನು ಚಕ್ರವರ್ತಿ ಅವರ ಹಠಾತ್ ರಾಜೀನಾಮೆಯ ನಂತರ, ಮುಂದಿನ ನಾಯಕತ್ವದ ಉತ್ತರಾಧಿಕಾರ ಯೋಜನೆಯ ಕುರಿತು ಹೂಡಿಕೆದಾರರಲ್ಲಿ ಗೊಂದಲ ಮೂಡಿದೆ. ಆಡಳಿತ ಮಂಡಳಿಯು ಯಾವುದೇ ಆಡಳಿತಾತ್ಮಕ ದೋಷಗಳಿಲ್ಲ ಎಂದು ಸ್ಪಷ್ಟಪಡಿಸಿದ್ದರೂ, ಹೂಡಿಕೆದಾರರ ವಿಶ್ವಾಸದ ಕೊರತೆಯಿಂದಾಗಿ ಬ್ಯಾಂಕ್ ಷೇರುಗಳು ಈ ವರ್ಷ ಸುಮಾರು ಶೇ. 22 ರಷ್ಟು ಕುಸಿತ ಕಂಡಿವೆ.

ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ 18 ಲಕ್ಷ ಕೋಟಿ ರೂಗೂ ಅಧಿಕ ಮಾರುಕಟ್ಟೆ ಮೌಲ್ಯ ಹೊಂದಿರುವ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಈ ವರದಿ ಬರೆಯುವ ವೇಳೆ, ಎಚ್​ಡಿಎಫ್​ಸಿ ಬ್ಯಾಂಕ್ ಷೇರುಗಳು ಚೇತರಿಕೆ ಕಂಡು, ಸಂಸ್ಥೆ ಎರಡನೇ ಸ್ಥಾನ ಮರಳಿಗಿಟ್ಟಿಸಿದೆ. 11.83 ಲಕ್ಷ ಕೋಟಿ ರೂ ಮಾರ್ಕೆಟ್ ಕ್ಯಾಪ್ ಹೊಂದಿದೆ. ಏರ್ಟೆಲ್ 11.81 ಲಕ್ಷ ಕೋಟಿ ರೂ ಮಾರುಕಟ್ಟೆ ಬಂಡವಾಳೀಕರಣವಾಗಿದೆ. ಆದರೆ, ಒಂದಷ್ಟು ಹೊತ್ತು ಏರ್ಟೆಲ್ ಎರಡನೇ ಸ್ಥಾನ ಆಕ್ರಮಿಸಿದ್ದು ಗಮನಾರ್ಹ.

ಇದನ್ನೂ ಓದಿ: ಜನಸಾಮಾನ್ಯರಿಗೆ ಕಾದಿದೆಯಾ ವಿದ್ಯುತ್ ಆಘಾತ; ನಿಗದಿತ ಶುಲ್ಕ ಏರಿಸಲು ಪ್ರಸ್ತಾಪ

ಅತಿಹೆಚ್ಚು ಮಾರುಕಟ್ಟೆ ಬಂಡವಾಳವಿರುವ ಭಾರತೀಯ ಕಂಪನಿಗಳು

  1. ರಿಲಾಯನ್ಸ್ ಇಂಡಸ್ಟ್ರೀಸ್: 18 ಲಕ್ಷಕೋಟಿ ರೂ
  2. ಎಚ್​ಡಿಎಫ್​ಸಿ ಬ್ಯಾಂಕ್: 11.84 ಲಕ್ಷ ಕೋಟಿ ರೂ
  3. ಭಾರ್ತಿ ಏರ್ಟೆಲ್: 11.81 ಲಕ್ಷ ಕೋಟಿ ರೂ
  4. ಐಸಿಐಸಿಐ ಬ್ಯಾಂಕ್: 8.85 ಲಕ್ಷ ಕೋಟಿ ರೂ
  5. ಎಸ್​ಬಿಐ: 8.68 ಲಕ್ಷ ಕೋಟಿ ರೂ
  6. ಟಿಸಿಎಸ್: 8.24 ಲಕ್ಷ ಕೋಟಿ ರೂ
  7. ಬಜಾಜ್ ಫೈನಾನ್ಸ್: 5.71 ಲಕ್ಷ ಕೋಟಿ ರೂ
  8. ಎಲ್ ಅಂಡ್ ಟಿ: 5.37 ಲಕ್ಷ ಕೋಟಿ ರೂ
  9. ಹಿಂದುಸ್ತಾನ್ ಯುನಿಲಿವರ್: 5.28 ಲಕ್ಷ ಕೋಟಿ ರೂ
  10. ಎಲ್​ಐಸಿ: 4.99 ಲಕ್ಷ ಕೋಟಿ ರೂ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ದೇಶಕ್ಕೆ ಅನ್ನ ನೀಡುವ ರೈತರಿಗೂ ತಟ್ಟಿದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಿಸಿ – Kannada News | Petrol, Diesel Price Hike Affects Farmers: agricultural machinery Price Rise In Bidar

ಬೀದರ್, (ಮೇ 18): ಮಧ್ಯಪ್ರಾಚ್ಯ ಯುದ್ಧದ (War) ಪರಿಣಾಮ ಕಚ್ಚಾ ತೈಲ ಬೆಲೆ ಏರಿಕೆ, ವಿದೇಶಿ ವಿನಿಮಮ ಕೊರತೆ ಸೇರಿದಂತೆ ಹಲವು ಆರ್ಥಿಕ ಸಂಕಷ್ಟಗಳು ಎದುರಾಗಿದೆ. ಪರಿಣಾಮ ಭಾರತದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗಿದೆ (Petrol, Diesel Price Hike). ಇದರ ಬೆನ್ನಲ್ಲೇ ಅಗತ್ಯ ವಸ್ತಗಳು ಬೆಲೆ ಹೆಚ್ಚಳವಾಗುತ್ತಿದೆ. ಹೌದು…ಈಗಾಗಲೇ ಖಾಸಗಿ ಬಸ್, ಸ್ಕೂಲ್ ಬಸ್, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ದರ ಏರಿಯಾಗುತ್ತಿದ್ದು, ಇದೀಗ ತೈಲ ಬೆಲೆ ಏರಿಕೆ ಬಿಸಿ ಅನ್ನದಾತರಿಗೂ ತಟ್ಟಿದೆ. ಯಂತ್ರೋಪಕರಣಗಳಿಂದ ಕೃಷಿ ಚಟುವಟಿಕೆ ಮಾಡುತ್ತಿದ್ದ ರೈತರಿಗೆ ತೈಲ ಬೆಲೆ ಬಿಸಿ ತಟ್ಟಿದ್ದು, ರೈತರು ಬಿತ್ತನೆ ಹೊಲ ಹದಗೊಳಿಸುವ ಯಂತ್ರದ ಬಾಡಿಕೆ ದರ ಹೆಚ್ಚಳವಾಗಿದೆ. ಹೀಗಾಗಿ ರೈತರು ಕೃಷಿ ಚಟುವಟಿಕೆಗೆ ಎತ್ತುಗಳನ್ನ ಖರೀದಿಸಲು ಮುಂದಾಗಿದ್ದಾರೆ. ಎತ್ತು ಖರೀದಿಸಲು ತೆಲಂಗಾಣ ಮಹಾರಾಷ್ಟ್ರ ಬೀದರ್ ನಿಂದ ಔರಾದ್ ನ APMC ಜಾನುವಾರು ಮಾರುಕಟ್ಟೆ ಬರುತ್ತಿದ್ದು, ಒಂದು ಜೋಡಿ ಎತ್ತು ಒಂದೂವರೆ ಲಕ್ಷದಿಂದ ನಾಲ್ಕು ಲಕ್ಷ ರೂ, ವರೆಗೆ ಮಾರಾಟವಾಗುತ್ತಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

4,500 ಕೋಟಿ ರೂ. ವಂಚನೆ ಕೇಸ್​​: ಆರೋಪಿ ಶಿವಾನಂದ ನೀಲಣ್ಣವರ್​​ 10 ದಿನ ಸಿಐಡಿ ಕಸ್ಟಡಿಗೆ – Kannada News | Belagavi 4,500 Crore Fraud Case: Accused Shivanand Neelannavar Remanded to 10 Days CID Custody

ಬೆಳಗಾವಿ, ಮೇ 18: 4,500 ಕೋಟಿ ರೂ. ವಂಚನೆ ಆರೋಪ ಪ್ರಕರಣ ಸಂಬಂಧ ಆರೋಪಿ ಶಿವಾನಂದ ನೀಲಣ್ಣವರ್​​ನ 10 ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿ ಬೆಳಗಾವಿಯ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ. ಬೆಂಗಳೂರಿನ ಕಚೇರಿಗೆ ಆರೋಪಿ ಕರೆದೊಯ್ದು ವಿಚಾರಣೆ ಮಾಡಬೇಕಿದೆ. ಶಿವಾನಂದ ನೀಲಣ್ಣವರ್ ಬಳಿ 35,000 ಜನ ಹೂಡಿಕೆ ಮಾಡಿದ್ದು, ಒಂದು ಸಾವಿರ ಕೋಟಿಗೂ ಅಧಿಕ ಹಣದ ವ್ಯವಹಾರ ಆಗಿದೆ. ಹೀಗಾಗಿ 10 ದಿನ ಕಸ್ಟಡಿಗೆ ನೀಡುವಂತೆ ಸಿಐಡಿ ಅಧಿಕಾರಿಗಳು ಕೋರ್ಟ್​​ಗೆ ಮನವಿ ಮಾಡಿದ್ದರು. ಸಿಐಡಿ ವಕೀಲರ ಮನವಿ ಮೇರೆಗೆ ಆರೋಪಿಯನ್ನು ಕಸ್ಟಡಿಗೆ ನೀಡಿ 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್​ ಜಡ್ಜ್ ಗಂಗಾಧರ ಅವರು ಆದೇಶಿಸಿದ್ದಾರೆ.

ಮುಖ್ಯಾಂಶಗಳು

  • 4,500 ಕೋಟಿ ರೂ. ವಂಚನೆ ಆರೋಪ ಪ್ರಕರಣ
  • ಆರೋಪಿ ಶಿವಾನಂದ ನೀಲಣ್ಣವರ್​​ ಸಿಐಡಿ ಕಸ್ಟಡಿಗೆ
  • 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ಆದೇಶ

ಇನ್ನು ಆರೋಪಿ ಶಿವಾನಂದ ನೀಲಣ್ಣವರ್ ಆರೋಗ್ಯದ ಬಗ್ಗೆ ನ್ಯಾಯಾಧೀಶರು ವಿಚಾರಿಸಿದ್ದು, ತನಗೆ ಬಿಪಿ ಇದೆ ಎಂದು ನ್ಯಾಯಾಧೀಶರ ಮುಂದೆ ನೀಲಣ್ಣವರ್ ಹೇಳಿಕೊಂಡಿದ್ದಾರೆ. ಆಗ, ಸಂಬಂಧಪಟ್ಟ ವೈದ್ಯರಿಂದ ನಿಮಗೆ ಮಾತ್ರೆ ಸೇರಿ ಎಲ್ಲಾ ವ್ಯವಸ್ಥೆ ಮಾಡ್ತಾರೆ ಎಂದು ನ್ಯಾಯಾಧೀಶರು ಆರೋಪಿಗೆ ತಿಳಿಸಿದ್ದಾರೆ. ಅಲ್ಲದೆ, ಈ ವೇಳೆ 35,000 ಜನರಿಗೆ ಹಣ ಬೇಕಿಲ್ಲ, ನಾನು ಬೇಕಾಗಿದ್ದೇನೆ ಎಂದು ನೀಲಣ್ಣವರ್ ಹೇಳಿದ್ದು, ಇದಕ್ಕೆ ಮಧ್ಯಪ್ರವೇಶಿಸಿದ ನ್ಯಾಯಾಧೀಶರು ಅಮಾಯಕರಿಗೆ ಅನ್ಯಾಯ ಆಗಬಾರದು. ಸರ್ಕಾರ ಜನರ ತಂದೆ-ತಾಯಿ ಇದ್ದಂತೆ. ಅವರ ರಕ್ಷಣೆ ಮಾಡಬೇಕಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಖಾತೆಯಲ್ಲಿ ನೂರಾರು ಕೋಟಿ ಪತ್ತೆಯಾದ್ರೂ ಬ್ಯಾಂಕ್ ಗಪ್‌ಚುಪ್; ಶಿವಾನಂದನೊಂದಿಗೆ ಅಧಿಕಾರಿಗಳು ಶಾಮೀಲು?

ನೀವು ಜನರಿಗೆ ಬೇಕಾಗಿರಬಹುದು, ಒಳ್ಳೆಯದು ಮಾಡಿರಬಹುದು ಅದು ನನಗೆ ಗೊತ್ತಿಲ್ಲ.ಆದರೆ ಅಮಾಯಕ ಜನರಿದ್ದಾರೆ, ಅವರನ್ನ ರಕ್ಷಣೆ ಮಾಡೋದು ಸರ್ಕಾರದ ಜವಾಬ್ದಾರಿ. ಸಾಕಷ್ಟು ಜನ ಹಣ ತಗೊಂಡು ಓಡಿ ಹೋಗಿದ್ದಾರೆ. ಇತಿಹಾಸದಿಂದ ಪಾಠ ಕಲಿಯಲು ಈ ಕಾನೂನು ತಂದಿದ್ದಾರೆ. ಕಾನೂನಿನ ಅಡಿಯಲ್ಲಿ ನೀವೇನು ಮಾಡಿದ್ದೀರಿ ಅದು ಉಳಿಯುತ್ತೆ ಎಂದು ತಿಳಿಸಿರುವ ನ್ಯಾಯಾಧೀಶರು, ಧರ್ಮೋ ರಕ್ಷಿತಿ ರಕ್ಷಿತ ಎಂದು ಶ್ಲೋಕದ ಉದಾಹರಣೆ ಕೂಡ ನೀಡಿದ್ದಾರೆ.

ಕಣ್ಣೀರಿಟ್ಟ ಶಿವಾನಂದ ನೀಲಣ್ಣವರ್

10 ದಿನಗಳ ಕಾಲ ಆರೋಪಿಯನ್ನು ಸಿಐಡಿ ಕಸ್ಟಡಿಗೆ ನೀಡಿರುವ ನ್ಯಾಯಾಲಯ ಭದ್ರತೆ ಸೇರಿ ಆರೋಪಿ ಬಗ್ಗೆ ಕಾಳಜಿ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದೆ. ಕೋರ್ಟ್​​ ಹಾಲ್​​ನಿಂದ ಹೊರ ಬರುತ್ತಿದ್ದಂತೆ ಸಹೋದರನ ಕಂಡು ಆರೋಪಿ ಶಿವಾನಂದ ನೀಲಣ್ಣವರ್ ಕಣ್ಣೀರಿಟ್ಟ ಪ್ರಸಂಗವೂ ನಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version