SRH ತಂಡ ಗೆದ್ದರೆ ಎರಡು ತಂಡಗಳು ಪ್ಲೇಆಫ್​ಗೆ ಎಂಟ್ರಿ..!

Source link

ಏನೇನೋ ಹೇಳ್ಬೇಡ್ರಯ್ಯ; ತಿಲಕ್ ವರ್ಮಾ-ಶ್ರೀಲೀಲಾ ಡೇಟಿಂಗ್ ವದಂತಿಗೆ ಬ್ರೇಕ್ – Kannada News | Sreeleela Denies Tilak Varma Dating Rumors: Mother Swarnalatha Clarifies Truth

ಸೆಲೆಬ್ರಿಟಿಗಳು ಸಣ್ಣ ಸಣ್ಣ ವಿಷಯಕ್ಕೂ ಸುದ್ದಿ ಆಗುತ್ತಾರೆ. ಅವರು ಏನೇ ಮಾಡಿದರೂ ಚರ್ಚೆ ಆಗುತ್ತದೆ. ಸಣ್ಣ ಸಣ್ಣ ಕಾಕತಾಳೀಯಗಳೂ ಸಹ ದೊಡ್ಡ ಮಟ್ಟದ ಗಾಸಿಪ್‌ಗಳಾಗಿ ಮಾರ್ಪಡುತ್ತವೆ. ಒಂದೇ ಜಾಗದಲ್ಲಿ ಕಾಣಿಸಿಕೊಂಡರೆ ಸಾಕು, ಅವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಕಥೆ ಕಟ್ಟುವುದು ನೆಟ್ಟಿಗರಿಗೆ ಅಭ್ಯಾಸವಾಗಿಬಿಟ್ಟಿದೆ. ಈಗ ಇಂತಹದ್ದೇ ಒಂದು ಸುಳ್ಳು ವದಂತಿಗೆ ಸ್ಟಾರ್ ನಟಿ ಶ್ರೀಲೀಲಾ (Sreeleela) ಸಂತ್ರಸ್ತೆ ಆಗಿದ್ದಾರೆ. ಈಗ ಈ ವಿಷಯವಾಗಿ ಶ್ರೀಲೀಲಾ ತಾಯಿ ಸ್ವರ್ಣಲತಾ ಸ್ಪಷ್ಟನೆ ನೀಡಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ಯುವ ಆಟಗಾರ ತಿಲಕ್ ವರ್ಮ ಹಾಗೂ ಶ್ರೀಲೀಲಾ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿತ್ತು. ಆದರೆ, ಈಗ ಈ ಎಲ್ಲಾ ಸುದ್ದಿಗಳಿಗೆ ಶ್ರೀಲೀಲಾ ಅವರ ತಾಯಿ ಡಾ. ಸ್ವರ್ಣಲತಾ ಅವರು ಅಧಿಕೃತವಾಗಿ ತೆರೆ ಎಳೆದಿದ್ದಾರೆ.

ವೈಕುಂಠ ಏಕಾದಶಿಯ ಸಂದರ್ಭದಲ್ಲಿ ಶ್ರೀಲೀಲಾ ಮತ್ತು ತಿಲಕ್ ವರ್ಮ ಇಬ್ಬರೂ ಪ್ರತ್ಯೇಕವಾಗಿ ತಿರುಮಲಕ್ಕೆ ಭೇಟಿ ನೀಡಿದ್ದರು. ಇದಾದ ಬಳಿಕ ಮುಂಬೈ ಇಂಡಿಯನ್ಸ್ ಪಂದ್ಯದ ವೇಳೆ ಶ್ರೀಲೀಲಾ ಅವರ ತಾಯಿ ವಿಐಪಿ ಸ್ಟ್ಯಾಂಡ್‌ನಲ್ಲಿ ಕಾಣಿಸಿಕೊಂಡಿದ್ದರು. ಇಷ್ಟೇ ಅಲ್ಲದೆ ಶ್ರೀಲೀಲಾ ತಂಡದ ಸದಸ್ಯರೊಬ್ಬರು ತಿಲಕ್ ಹೆಸರಿನ ಜರ್ಸಿ ಧರಿಸಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು. ಈ ಸಣ್ಣ ವಿಷಯಗಳನ್ನೇ ಇಟ್ಟುಕೊಂಡು ನೆಟ್ಟಿಗರು ಇವರಿಬ್ಬರ ನಡುವೆ ಪ್ರೀತಿ ಬೆಳೆದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಥೆ ಹೆಣೆಯಲು ಶುರು ಮಾಡಿದ್ದರು.

ಈ ಬೇಡದ ಗಾಸಿಪ್‌ಗಳ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಶ್ರೀಲೀಲಾ ತಾಯಿ ಡಾ. ಸ್ವರ್ಣಲತಾ, ‘ಈ ಎಲ್ಲಾ ಸುದ್ದಿಗಳು ಸಂಪೂರ್ಣವಾಗಿ ಸುಳ್ಳು ಮತ್ತು ಆಧಾರರಹಿತ. ಇದರಲ್ಲಿ ಒಂದು ಚೂರೂ ಸತ್ಯಾಂಶವಿಲ್ಲ. ಶ್ರೀಲೀಲಾ ಮತ್ತು ತಿಲಕ್ ವರ್ಮ ಇದುವರೆಗೆ ಭೇಟಿಯೂ ಆಗಿಲ್ಲ, ಮಾತನಾಡಿಯೂ ಇಲ್ಲ. ಜನರು ಸಣ್ಣ ಸಣ್ಣ ವಿಷಯಗಳನ್ನು ಇಟ್ಟುಕೊಂಡು ತಮಗೆ ಬೇಕಾದ ಹಾಗೆ ಊಹಾಪೋಹಗಳನ್ನು ಸೃಷ್ಟಿಸುತ್ತಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಶ್ರೀಲೀಲಾ ಸದ್ಯಕ್ಕೆ ಸಿನಿಮಾ ಮತ್ತು ವಿದ್ಯಾಭ್ಯಾಸ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿದ್ದಾಳೆ. ಜೂನ್‌ನಲ್ಲಿ ನಡೆಯಲಿರುವ ನೀಟ್ ಪಿಜಿ ಪರೀಕ್ಷೆಗೆ ಅವಳು ತಯಾರಿ ನಡೆಸುತ್ತಿದ್ದಾಳೆ. ಅವಳಿಗೆ ವೈಯಕ್ತಿಕ ಜೀವನ, ಮದುವೆ ಅಂತೆಲ್ಲಾ ಯೋಚಿಸಲು ಇನ್ನೂ 5-6 ವರ್ಷಗಳ ಸಮಯವಿದೆ. ಸದ್ಯಕ್ಕಂತೂ ಅವಳ ಗಮನ ಪೂರ್ತಿ ಓದು ಮತ್ತು ಸಿನಿಮಾಗಳ ಮೇಲಷ್ಟೇ ಇದೆ’ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಕ್ರಿಕೆಟಿಗನ ಜೊತೆಗೆ ಶ್ರೀಲೀಲಾ ಡೇಟಿಂಗ್: ಸತ್ಯಾಂಶವೇನು?

ಶ್ರೀಲೀಲಾ ಇಂತಹ ವದಂತಿಗಳನ್ನು ಎದುರಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಜೊತೆಯೂ ಇವರ ಹೆಸರು ಕೇಳಿಬಂದಿತ್ತು. ‘ತು ಮೇರಿ ಜಿಂದಗಿ ಹೈ’ ಚಿತ್ರದಲ್ಲಿ ಇವರು ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

SSLC-2 ಪರೀಕ್ಷೆ: ಹಿಜಾಬ್ ಧರಿಸಿ ಬಂದವರಿಗಿಲ್ಲ ಅವಕಾಶ! ಈ ಹೊತ್ತಿನ ಪ್ರಮುಖ 4 ಸುದ್ದಿಗಳು ಇಲ್ಲಿವೆ – Kannada News | Today’s Top 4 News: No Hijab in Karnataka SSLC 2 Exam, HD Deve Gowda’s 94th Birthday, VD Satheesan Sworn in, KSRTC BMTC Strike Updates

ಸಾಂದರ್ಭಿಕ ಚಿತ್ರ (ಎಐ)Image Credit source: Google Gemini

ಬೆಂಗಳೂರು, ಮೇ 18: ಬೆಂಗಳೂರು (Bengaluru) ಸೇರಿದಂತೆ ಕರ್ನಾಟಕದಾದ್ಯಂತ ಎಸ್​ಎಸ್​ಎಲ್​​ಸಿ 2ನೇ (SSLC 2 Exam) ಪರೀಕ್ಷೆ ಇಂದಿನಿಂದ (ಮೇ 18) ಆರಂಭವಾಗಿದೆ. ಸರ್ಕಾರ ಇತ್ತೀಚೆಗೆ ಧಾರ್ಮಿಕ ಸಂಕೇತಗಳನ್ನು ಧರಿಸಿ ಪರೀಕ್ಷೆ ಬರೆಯುವ ಬಗ್ಗೆ ಹೊಸ ಆದೇಶ ಹೊರಡಿಸಿದೆ. ಅದರಂತೆ, ಜನಿವಾರ, ಶಿವ ದಾರ, ಲಿಂಗ, ರುದ್ರಾಕ್ಷಿ, ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶವಿದೆ. ಆದಾಗ್ಯೂ, ಎಸ್​ಎಸ್​ಎಲ್​​ಸಿ 2ನೇ ಪರೀಕ್ಷೆಯಲ್ಲಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿಲ್ಲ.

ಎಸ್​ಎಸ್​​ಎಲ್​ಸಿ ಒಂದನೇ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಬಿಟ್ಟಿಲ್ಲ. ಅದರಂತೆಯೇ ಈಗ 2ನೇ ಪರೀಕ್ಷೆಯನ್ನೂ ನಡೆಸಲಾಗುತ್ತಿದೆ. ಸರ್ಕಾರದಿಂದ ವಸ್ತ್ರಸಂಹಿತೆ ಬಗ್ಗೆ ಯಾವುದೇ ಆದೇಶ ಬಂದಿಲ್ಲ. ಹೀಗಾಗಿ ಕಳೆದ ಬಾರಿಯಂತೆ ಈಗ ಪರೀಕ್ಷೆ ನಡೆಸುತ್ತಿದ್ದೇವೆ. ಹಿಜಾಬ್ ಧರಿಸಿ ಬಂದ್ ವಿದ್ಯಾರ್ಥಿಗಳಿಗೆ ಹಿಜಾಬ್ ತೆಗಸಿ ಪರೀಕ್ಷೆಗೆ ಅವಕಾಶ ನೀಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದಿನಿಂದ ಮೇ 25 ರವರೆಗೆ SSLC -2 ಪರೀಕ್ಷೆ ನಡೆಯಲಿದೆ. ಈ ವರ್ಷ ಎರಡನೇ ಪರೀಕ್ಷೆಗೆ 1,15,112 ವಿದ್ಯಾರ್ಥಿಗಳು ನೊಂದಣಿ ಮಾಡಿಕೊಂಡಿದ್ದಾರೆ. ಈ ಪೈಕ 7658 ವಿದ್ಯಾರ್ಥಿಗಳು ಅಂಕ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ.

ಹೆಚ್​ಡಿ ದೇವೇಗೌಡರಿಗೆ 94ನೇ ಹುಟ್ಟುಹಬ್ಬದ ಸಂಭ್ರಮ

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್​​ಡಿ ದೇವೇಗೌಡರಿಗೆ ಇಂದು 94ನೇ ಜನ್ಮದಿನದ ಸಂಭ್ರಮ. ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ದೇವೇಗೌಡರು ವಿಶೇಷ ಪೂಜೆ ಸಲ್ಲಿಸಿದರು. ಅವರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಹಾಸನದ ನೀಲವಾಗಿಲು ಆಂಜನೇಯ ಸ್ವಾಮಿ ದೇವಾಲಯದಲ್ಲಿ ಜೆಡಿಎಸ್ ನಾಯಕರು ವಿಶೇಷ ಪೂಜೆ ಸಲ್ಲಿಸಿ ಹಿರಿಯ ನಾಯಕನಿಗೆ ಆಯುರಾರೋಗ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸಿದರು.

ಕೇರಳ ಸಿಎಂ ಸತೀಶನ್ ಪ್ರಮಾಣವಚನ ಸ್ವೀಕಾರ

ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿಡಿ ಸತೀಶನ್ ಪ್ರಮಾಣವಚನ ಸ್ವೀಕರಿಸಿದರು. ನೂತನ ಯುಡಿಎಫ್​ ಸರ್ಕಾರದ ಸಚಿವರಾಗಿ ವಿಡಿ ಸತೀಶನ್ ಜತೆ 20 ಮಂದಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಇತ್ತೀಚೆಗೆ ನಡೆದ ಕೇರಳಂ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​​ ನೇತೃತ್ವದ ಯುಡಿಎಫ್ ಭರ್ಜರಿ ಗೆಲುವು ಸಾಧಿಸಿದ್ದು, ದಶಕದ ನಂತರ ಮರಳಿ ಅಧಿಕಾರಕ್ಕೇರಿದೆ.

ಇದನ್ನೂ ಓದಿ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸತೀಶನ್

ಸಾರಿಗೆ ಮುಷ್ಕರ ಬಹುತೇಕ ಫಿಕ್ಸ್

ವೇತನ ಪರಿಷ್ಕರಣೆ ಮತ್ತು ಬಾಕಿ ಹಣ ಬಿಡುಗಡೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿರಿಸಿ ಕರ್ನಾಟಕ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಮುಷ್ಕರಕ್ಕೆ ಕರೆ ನೀಡಿದೆ. ಹೀಗಾಗಿ ಮೇ 20 ರಿಂದ ಕರ್ನಾಟಕದಾದ್ಯಂತ BMTC ಮತ್ತು KSRTC ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್ ಸಂಚಾರ ಸ್ಥಗಿತಗೊಳ್ಳಲಿದೆ.

ಇದನ್ನೂ ಓದಿ: ಬುಧವಾರದಿಂದ ಸಿಗಲ್ಲ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್! ಸಾರಿಗೆ ಮುಷ್ಕರ ಬಹುತೇಕ ಫಿಕ್ಸ್

ಮುಷ್ಕರ ತಪ್ಪಿಸುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆಯ ಆಯುಕ್ತರ ನೇತೃತ್ವದಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಸಭೆ ನಿಗದಿಯಾಗಿದ್ದು, ಇದು ಫಲಪ್ರದವಾದರೆ ಮುಷ್ಕರ ಹಿಂಪಡೆಯುವ ಸಾಧ್ಯತೆಯೂ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೇಟಿಎಂನಲ್ಲಿ ಹೊಸ ಫೀಚರ್; ಪೋಷಕರಿಂದ ಮಕ್ಕಳು ಪಡೆಯಬಹುದು ಆನ್​ಲೈನ್ ಪಾಕೆಟ್ ಮನಿ – Kannada News | Paytm ‘Pocket Money’ UPI Feature for children, with certain spending limit

ನವದೆಹಲಿ, ಮೇ 18: ಯುಪಿಐ ಬಳಸಬೇಕೆಂದರೆ ಬ್ಯಾಂಕ್ ಖಾತೆ ಹೊಂದಿರಬೇಕು. ಅಪ್ರಾಪ್ತ ವಯಸ್ಸಿನ ಮಕ್ಕಳು ಮತ್ತು ವಿದ್ಯಾರ್ಥಿಗಳು ಆನ್ಲೈನ್ ಪೇಮೆಂಟ್ ಮಾಡಲು ಪೋಷಕರನ್ನು ಅವಲಂಬಿಸಬೇಕು. ಪೇಟಿಎಂ (Paytm) ಇದಕ್ಕೊಂದು ಪರಿಹಾರ ಹುಡುಕಿದೆ. ಪಾಕೆಟ್ ಮನಿ (Pocket Money) ಎನ್ನುವ ಹೊಸ ಫೀಚರ್ ಜಾರಿಗೆ ತಂದಿದೆ. ಬ್ಯಾಂಕ್ ಖಾತೆ ಹೊಂದಿಲ್ಲದ ಅಪ್ರಾಪ್ತ ವಯಸ್ಕರು ಮತ್ತು ವಿದ್ಯಾರ್ಥಿಗಳು ಸಹ ತಮ್ಮ ಮೊಬೈಲ್ ಮೂಲಕವೇ ಸ್ವತಂತ್ರವಾಗಿ ಯುಪಿಐ (UPI) ಪಾವತಿ ಮಾಡಲು ಈ ಪೇಟಿಎಂ ಪಾಕೆಟ್ ಮನಿ ಅನುಕೂಲ ಮಾಡಿಕೊಡುತ್ತದೆ.

ಈ ಸುದ್ದಿಯ ಮುಖ್ಯಾಂಶಗಳು

  • ಪಾಕೆಟ್ ಮನಿ ಫೀಚರ್ ಮೂಲಕ ಹದಿಹರೆಯದವರು ತಮ್ಮದೇ ಆದ ಬ್ಯಾಂಕ್ ಖಾತೆ ಇಲ್ಲದಿದ್ದರೂ ಸ್ವತಂತ್ರವಾಗಿ ಯುಪಿಐ ಪಾವತಿ ಮಾಡಬಹುದು.
  • ಪೋಷಕರು ತಮ್ಮ ಪೇಟಿಎಂ ಆ್ಯಪ್ ಮೂಲಕ ಮಕ್ಕಳ ಖಾತೆಗೆ ಗರಿಷ್ಠ 15,000 ರೂವರೆಗೆ ಮಾಸಿಕ ಮಿತಿಯನ್ನು ನಿಗದಿಪಡಿಸಬಹುದು.
  • ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಅಭಿವೃದ್ಧಿಪಡಿಸಿರುವ ‘ಯುಪಿಐ ಸರ್ಕಲ್’ (UPI Circle) ಆಧಾರದ ಮೇಲೆ ಈ ಸೇವೆ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ: ಜನಸಾಮಾನ್ಯರಿಗೆ ಕಾದಿದೆಯಾ ವಿದ್ಯುತ್ ಆಘಾತ; ನಿಗದಿತ ಶುಲ್ಕ ಏರಿಸಲು ಪ್ರಸ್ತಾಪ

ಪಾಕೆಟ್ ಮನಿ ಹೇಗೆ ಕೆಲಸ ಮಾಡುತ್ತದೆ?

ಈ ವೈಶಿಷ್ಟ್ಯದ ಅಡಿಯಲ್ಲಿ ಪೋಷಕರು ತಮ್ಮ ಬ್ಯಾಂಕ್ ಖಾತೆಗೆ ಮಕ್ಕಳ ಪೇಟಿಎಂ ಆ್ಯಪ್ ಅನ್ನು ಲಿಂಕ್ ಮಾಡಬಹುದು. ಒಮ್ಮೆ ಲಿಂಕ್ ಮಾಡಿದ ನಂತರ, ಮಕ್ಕಳು ತಮ್ಮ ಶಾಲಾ-ಕಾಲೇಜು ಕ್ಯಾಂಟೀನ್, ಮೆಟ್ರೋ ಪ್ರಯಾಣ, ಕ್ಯಾಬ್ ಬುಕಿಂಗ್, ಮೊಬೈಲ್ ರೀಚಾರ್ಜ್ ಹಾಗೂ ಶಾಪಿಂಗ್‌ಗಾಗಿ ಸ್ವತಂತ್ರವಾಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸಬಹುದು. ಪ್ರತಿ ಬಾರಿ ಪಾವತಿ ಮಾಡುವಾಗಲೂ ಪೋಷಕರಿಂದ ಒಟಿಪಿ (OTP) ಪಡೆಯುವ ಅಥವಾ ಪೋಷಕರ ಮೊಬೈಲ್ ಬಳಸುವ ಅಗತ್ಯ ಇರುವುದಿಲ್ಲ.

ಪೋಷಕರ ನಿಯಂತ್ರಣ ಮತ್ತು ಸುರಕ್ಷತೆ

ಮಕ್ಕಳು ಹಣವನ್ನು ದುರುಪಯೋಗಪಡಿಸಿಕೊಳ್ಳದಂತೆ ತಡೆಯಲು ಪೇಟಿಎಂ ಹಲವು ಸುರಕ್ಷತಾ ಕ್ರಮಗಳನ್ನು ಒದಗಿಸಿದೆ. ಒಂದು ಬಾರಿ ಮಾಡುವ ಪಾವತಿಗೆ ಗರಿಷ್ಠ 5,000 ರೂ ಮಿತಿ ಇರಲಿದ್ದು, ಇಡೀ ತಿಂಗಳಿಗೆ ಒಟ್ಟು 15,000 ರೂ ಮಿತಿಯನ್ನು ನಿಗದಿಪಡಿಸಲಾಗಿದೆ. ವಿಶೇಷವೆಂದರೆ, ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಿದ ಮೊದಲ 30 ನಿಮಿಷಗಳಲ್ಲಿ ಕೇವಲ 500 ರೂ ಹಾಗೂ ಮೊದಲ 24 ಗಂಟೆಗಳಲ್ಲಿ 5,000 ರೂವರೆಗೆ ಮಾತ್ರ ಪಾವತಿಸಲು ಅವಕಾಶವಿರುತ್ತದೆ.

ಇದನ್ನೂ ಓದಿ: ಡಾಲರ್ ಎದುರು 96 ದಾಟಿ ಸಾರ್ವಕಾಲಿಕ ಕೆಳಮಟ್ಟಕ್ಕೆ ಕುಸಿದ ರೂಪಾಯಿ; ಭಾರತೀಯ ಕರೆನ್ಸಿಯ ಐತಿಹಾಸಿಕ ಕಳಪೆ ಸಾಧನೆ

ಮಕ್ಕಳು ಎಲ್ಲೆಲ್ಲಿ ಹಣ ಖರ್ಚು ಮಾಡುತ್ತಿದ್ದಾರೆ ಎಂಬುದನ್ನು ಪೋಷಕರು ತಮ್ಮ ಮೊಬೈಲ್‌ನಲ್ಲಿ ‘ರಿಯಲ್-ಟೈಮ್’ (ತಕ್ಷಣವೇ) ಆಗಿ ಟ್ರ್ಯಾಕ್ ಮಾಡಬಹುದು. ಪೇಟಿಎಂನ ‘ಸ್ಪೆಂಡ್ ಸಮ್ಮರಿ’ (Spend Summary) ಮೂಲಕ ವೆಚ್ಚಗಳನ್ನು ವಿವಿಧ ವಿಭಾಗಗಳಾಗಿ ವರ್ಗೀಕರಿಸಿ ನೋಡಲು ಸಾಧ್ಯವಿದ್ದು, ಪೋಷಕರು ಯಾವಾಗ ಬೇಕಾದರೂ ತಮ್ಮ ಯುಪಿಐ ಪಿನ್ (UPI PIN) ಬಳಸಿ ಮಕ್ಕಳ ಖಾತೆಯ ಮಿತಿಯನ್ನು ಬದಲಾಯಿಸಬಹುದು ಅಥವಾ ಸೇವೆಯನ್ನು ಸ್ಥಗಿತಗೊಳಿಸಬಹುದು. ಈ ಫೀಚರ್ ಬಳಸಿ ಅಂತರರಾಷ್ಟ್ರೀಯ ಪಾವತಿಯಾಗಲೀ ಮತ್ತು ಎಟಿಎಂನಿಂದ ಹಣ ವಿತ್​ಡ್ರಾ ಮಾಡಲಾಗಲೀ ಅವಕಾಶವಿರುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕಲಬುರ್ಗಿಯಲ್ಲಿ ಮೃಗಾಲಯ ಉದ್ಘಾಟಿಸಿದ ಸಚಿವ ಈಶ್ವರ ಖಂಡ್ರೆ! – Kannada News | Madabula Zoo Inaugurated: Ministers Khandre and Kharge Open 43 Acre Facility in Chittapur

ಕಲಬುರ್ಗಿ, ಮೇ 18: ಜಿಲ್ಲೆಯ ಚಿತ್ತಾಪುರ ತಾಲೂಕಿನ ಮಾಡಬೂಳ ಗ್ರಾಮದಲ್ಲಿ ನೂತನ ಮೃಗಾಲಯವನ್ನು ತೆರೆಯಲಾಗಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ಚಿತ್ತಾಪುರ ಕ್ಷೇತ್ರದಲ್ಲಿ 43 ಎಕರೆ ವಿಶಾಲ ಪ್ರದೇಶದಲ್ಲಿ ಈ ಮೃಗಾಲಯವನ್ನು ನಿರ್ಮಿಸಲಾಗಿದೆ.

ಉದ್ಘಾಟನಾ ಸಮಾರಂಭದಲ್ಲಿ ಸಚಿವರು ಹುಲಿ, ಚಿರತೆ ಸೇರಿದಂತೆ ವಿವಿಧ ವನ್ಯಜೀವಿಗಳು ಮತ್ತು ವಿದೇಶಿ ಪಕ್ಷಿಗಳನ್ನು ವೀಕ್ಷಿಸಿದರು. ಈ ಮೃಗಾಲಯವು ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಪರಿಸರ ಶಿಕ್ಷಣ ಮತ್ತು ವನ್ಯಜೀವಿ ಸಂರಕ್ಷಣೆಗೆ ಈ ಕೇಂದ್ರವು ಕೊಡುಗೆ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬರದಲ್ಲೂ ಬತ್ತಿಲ್ಲ ಈ ದೇಗುಲದ ಕೆರೆ: ಬಾಗಲಕೋಟೆಯ ಬಾದಾಮಿಯಲ್ಲೊಂದು ಅಚ್ಚರಿ!

ಬಾಗಲಕೋಟೆ, ಮೇ 18: ಜಿಲ್ಲೆಯಾದ್ಯಂತ ಬಿಸಿಲಿನ ತಾಪ ಹೆಚ್ಚಾಗಿದ್ದು, ನದಿ, ಕೆರೆ-ಕಟ್ಟೆಗಳು ಬತ್ತಿ ಬರಗಾಲದ ಛಾಯೆ ಆವರಿಸಿದೆ. ಇಂತಹ ಸಂದರ್ಭದಲ್ಲಿ ಬಾದಾಮಿ ತಾಲ್ಲೂಕಿನ ಮಹಾಕೂಟದಲ್ಲಿರುವ ಮಹಾಕೂಟೇಶ್ವರ ದೇವಸ್ಥಾನದ ಆವರಣದಲ್ಲಿರುವ ಪುಷ್ಕರಣಿ ಎಂದಿಗೂ ಬತ್ತದೆ ಭಕ್ತರಿಗೆ ಆಕರ್ಷಣೀಯ ಕೇಂದ್ರವಾಗಿದೆ. ದಕ್ಷಿಣ ಕಾಶಿ ಎಂದೇ ಖ್ಯಾತವಾಗಿರುವ ಈ ಐತಿಹಾಸಿಕ ಸ್ಥಳದಲ್ಲಿರುವ ಪುಷ್ಕರಣಿಯು ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡಿದ್ದು, ಸುಮಾರು ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ವಿಶೇಷವೆಂದರೆ, ಇಲ್ಲಿಯವರೆಗೂ ಈ ಪುಷ್ಕರಣಿ ಒಮ್ಮೆಯೂ ಬತ್ತಿದ ಉದಾಹರಣೆ ಇಲ್ಲ. ನಿರಂತರವಾಗಿ ನೀರಿನಿಂದ ಕೂಡಿರುವ ಈ ಪವಿತ್ರ ಹೊಂಡದಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು, ಪ್ರವಾಸಿಗರು ಪುಣ್ಯಸ್ನಾನ ಮಾಡುತ್ತಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

KSRTC, BMTC Strike: ಬುಧವಾರದಿಂದ ಸಿಗಲ್ಲ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್! ಸಾರಿಗೆ ಮುಷ್ಕರ ಬಹುತೇಕ ಫಿಕ್ಸ್ – Kannada News | KSRTC BMTC Strike: Karnataka Bus Services May Stop From Wednesday As Transport Unions Rigid On Wage Hikes

ಬೆಂಗಳೂರು, ಮೇ 18: ಬುಧವಾರದಿಂದ BMTC ಮತ್ತು KSRTC ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್ ಸೇವೆ ಸ್ಥಗಿತಗೊಳ್ಳಲಿದೆ. ವೇತನ ಪರಿಷ್ಕರಣೆ ಮತ್ತು ಬಾಕಿ ಹಣಕ್ಕಾಗಿ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಮುಷ್ಕರಕ್ಕೆ ಕರೆ ನೀಡಿರುವುದೇ ಇದಕ್ಕೆ ಕಾರಣ. ನೌಕರರು ಶೇ 25 ರ ವೇತನ ಪರಿಷ್ಕರಣೆಗೆ ಪಟ್ಟು ಹಿಡಿದಿದ್ದು, 38 ತಿಂಗಳ ವೇತನ ಹಿಂಬಾಕಿ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ. ಆದರೆ, ರಾಜ್ಯ ಸರ್ಕಾರ ಸದ್ಯಕ್ಕೆ ಶೇ 12.5 ವೇತನ ಪರಿಷ್ಕರಣೆಗೆ ಒಪ್ಪಿದೆ. ಅಲ್ಲದೆ, 26 ತಿಂಗಳ ವೇತನ ಹಿಂಬಾಕಿಯ ಮೊದಲ ಕಂತಾಗಿ 450 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ನೌಕರರು ಸರ್ಕಾರದ ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ತಮ್ಮ ಬೇಡಿಕೆಗಳು ಈಡೇರದ ಹೊರತು ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮುಷ್ಕರ ತಪ್ಪಿಸುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆಯ ಆಯುಕ್ತರ ನೇತೃತ್ವದಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಸಭೆ ನಿಗದಿಯಾಗಿದೆ. ಈ ಸಭೆಯಲ್ಲಿ ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಜಂಟಿ ಕ್ರಿಯಾ ಸಮಿತಿಯ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದು, ಸಂಧಾನದ ಮೂಲಕ ಸಮಸ್ಯೆ ಇತ್ಯರ್ಥಪಡಿಸಲು ಪ್ರಯತ್ನಿಸಲಿದ್ದಾರೆ. ಸಭೆಯ ಫಲಿತಾಂಶದ ಮೇಲೆ ಬುಧವಾರದ ಮುಷ್ಕರದ ಭವಿಷ್ಯ ನಿರ್ಧಾರವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಹಾರ: ಸಹೋದರನ ಕುಟುಂಬದ ನಾಲ್ವರನ್ನು ಕೊಂದು, ಶವಗಳ ಕತ್ತರಿಸಿ ಸೂಟ್‌ಕೇಸ್‌ಗಳಲ್ಲಿ ತುಂಬಿ ಎಸೆದ ವ್ಯಕ್ತಿ – Kannada News | Family of Four Found Dead in Shocking Case in Bihar

ಪಾಟ್ನಾ, ಮೇ 18: ಹಣದ ವ್ಯಾಮೋಹ ಮತ್ತು ಕೌಟುಂಬಿಕ ಕಲಹಕ್ಕೆ ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಅತ್ಯಂತ ಅಮಾನುಷವಾಗಿ ಹತ್ಯೆ(Murder) ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕಿರಿಯ ಸಹೋದರನೇ ತನ್ನ ಅಣ್ಣ, ಅತ್ತಿಗೆ ಹಾಗೂ ಅವರ ಇಬ್ಬರು ಮುಗ್ಧ ಮಕ್ಕಳನ್ನು ಉಸಿರುಗಟ್ಟಿಸಿ, ಚಾಕುವಿನಿಂದ ಇರಿದು ಕೊಂದಿದ್ದಾನೆ. ಅಷ್ಟಕ್ಕೇ ನಿಲ್ಲದ ಈತನ ಕ್ರೌರ್ಯ, ಸಾಕ್ಷ್ಯ ನಾಶಪಡಿಸಲು ನಾಲ್ವರ ಶವಗಳನ್ನು ತುಂಡು ತುಂಡಾಗಿ ಕತ್ತರಿಸಿ ಸೂಟ್‌ಕೇಸ್‌ ಹಾಗೂ ಚೀಲಗಳಲ್ಲಿ ತುಂಬಿ ವಿವಿಧ ನದಿ, ಕಾಲುವೆಗಳಿಗೆ ಎಸೆದಿದ್ದಾನೆ.

ರಹಸ್ಯ ಬಯಲಾಗಿದ್ದು ಹೇಗೆ?
ಮೇ 10 ರಂದು ಕೈಮೂರ್ ಜಿಲ್ಲೆಯ ನದಿಯೊಂದರ ಕೆಳಗೆ ಎರಡು ಶಂಕಾಸ್ಪದ ಸೂಟ್‌ಕೇಸ್‌ಗಳು ತೇಲುತ್ತಿದ್ದವು. ಪೊಲೀಸರು ಇವುಗಳನ್ನು ವಶಕ್ಕೆ ಪಡೆದು ತೆರೆದಾಗ, ಅದರಲ್ಲಿ ಕತ್ತರಿಸಿದ ಮಾನವ ದೇಹದ ಭಾಗಗಳು ಪತ್ತೆಯಾಗಿದ್ದವು. ಆರಂಭದಲ್ಲಿ ಇವು 3 ರಿಂದ 4 ಜನರ ಶವದ ಅವಶೇಷಗಳಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ನಂತರ ಮೇ 12 ರಂದು ರಾಮಗಢದ ಕಾಲುವೆಯ ಬಳಿ ಇನ್ನು ಎರಡು ಚೀಲಗಳಲ್ಲಿ ಹೆಚ್ಚಿನ ಭಾಗಗಳು ಪತ್ತೆಯಾಗಿದ್ದವು. ತನಿಖೆ ಆರಂಭಿಸಿದ ವಿಶೇಷ ತನಿಖಾ ತಂಡ (SIT), ಇವು ದಹರಕ್ ಗ್ರಾಮದ ಕೃಷ್ಣ ಮುರಾರಿ ಗುಪ್ತಾ ಅವರ ಕುಟುಂಬದ ಅವಶೇಷಗಳು ಎಂಬುದನ್ನು ಪತ್ತೆಹಚ್ಚಿತ್ತು.

ಪೊಲೀಸರು ಕೃಷ್ಣ ಮುರಾರಿ ಅವರ ಮನೆಗೆ ಹೋದಾಗ ಮನೆಗೆ ಬೀಗ ಹಾಕಲಾಗಿತ್ತು. ತಾಂತ್ರಿಕ ಸಾಕ್ಷ್ಯ ಹಾಗೂ ಮೊಬೈಲ್ ಲೊಕೇಶನ್ ಆಧಾರದ ಮೇಲೆ ಕೃಷ್ಣ ಮುರಾರಿ ಅವರ ಕಿರಿಯ ಸಹೋದರ ವಿಕಾಸ್ ಗುಪ್ತಾ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಹೊರಬಂದಿದೆ. ವಿಕಾಸ್ ತನ್ನ ಇನ್ನೊಬ್ಬ ತಮ್ಮ ರಾಹುಲ್ ಮತ್ತು ಮಹಾರಾಷ್ಟ್ರದ ಗೆಳೆಯ ದೀಪಕ್ ಕುಮಾರ್ ರಜಪೂತ್ ಜೊತೆ ಸೇರಿ ಈ ಭೀಕರ ಹತ್ಯೆ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾನೆ.

ಷೇರು ಮಾರುಕಟ್ಟೆ ಹೂಡಿಕೆ ಹಾಗೂ ಕೌಟುಂಬಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಿಕಾಸ್ ಈ ಕೊಲೆಗೆ ಸಂಚು ರೂಪಿಸಿದ್ದ. ಮೇ 7 ರಂದು ಪ್ಲಾನ್ ಮುಂಚಿತವಾಗಿಯೇ ಸಿದ್ಧವಾಗಿತ್ತು. ಅಂದು ಬೆಳಗ್ಗೆ ಕೋಣೆಯೊಂದರಲ್ಲಿ ಷೇರು ಮಾರುಕಟ್ಟೆಯ ಚರ್ಚೆ ನೆಪದಲ್ಲಿ ಅಣ್ಣ ಕೃಷ್ಣ ಮುರಾರಿಯನ್ನು ಕರೆಸಿಕೊಂಡ ವಿಕಾಸ್ ಮತ್ತು ಆತನ ಸಹಚರರು, ಏಕಾಏಕಿ ಆತನ ಮೇಲೆ ಮುಗಿಬಿದ್ದು ಚಾಕುವಿನಿಂದ ಇರಿದು ಕೊಂದರು. ಗದ್ದಲ ಕೇಳಿ ಓಡಿಬಂದ ಅತ್ತಿಗೆ ದುರ್ಗೇಶ್ ಕುಮಾರಿ ಪ್ರಾಣಭಯದಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಆಕೆಯನ್ನೂ ಹಿಡಿದು ಉಸಿರುಗಟ್ಟಿಸಿ ಕೊಲ್ಲಲಾಯಿತು.

ಮತ್ತಷ್ಟು ಓದಿ: ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಚನ್ನಗಿರಿ ಪೊಲೀಸರು

ಮಧ್ಯಾಹ್ನ ಶಾಲೆಯಿಂದ ಮನೆಗೆ ಮರಳಿದ ದಂಪತಿಯ ಇಬ್ಬರು ಮುಗ್ಧ ಮಕ್ಕಳಿಗೆ ಹೆತ್ತವರ ಹೆಣ ಕಾಣಿಸಬಾರದೆಂದು, ಆ ಕಟುಕರು ಮಕ್ಕಳನ್ನೂ ಕತ್ತು ಸೀಳಿ ಹತ್ಯೆ ಮಾಡಿದ್ದಾರೆ.ಹತ್ಯೆಯ ನಂತರ ಕೋಣೆಯೊಳಗೆ ಶವಗಳನ್ನು ಕೈ, ಕಾಲು, ತಲೆ ಎಂದು ಪ್ರತ್ಯೇಕವಾಗಿ ಕತ್ತರಿಸಲಾಯಿತು.

ಬಂಧಿತ ವಿಕಾಸ್ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಹತ್ಯೆಗೆ ಬಳಸಿದ ಚಾಕು, ಪಿಸ್ತೂಲ್, ಜೀವಂತ ಗುಂಡುಗಳು, ಕಬ್ಬಿಣದ ರಾಡ್ ಮತ್ತು ಸ್ಕೂಟರ್ ವಶಪಡಿಸಿಕೊಂಡಿದ್ದಾರೆ. ನದಿಗೆ ಎಸೆಯಲಾಗಿರುವ ಎರಡು ಕತ್ತರಿಸಿದ ತಲೆಗಳನ್ನು ಪತ್ತೆಹಚ್ಚಲು ನದಿಯಲ್ಲಿ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಕೊಲೆಗೆ ಒಂದು ದಿನ ಮುಂಚಿತವಾಗಿಯೇ ಮನೆಯ ಇತರ ಮಹಿಳೆಯರನ್ನು ತಾಯಿಯ ಮನೆಗೆ ಕಳುಹಿಸಿ ಈ ಪ್ಲಾನ್ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ತಲೆಮರೆಸಿಕೊಂಡಿರುವ ಉಳಿದ ಹಂತಕರ ಬಂಧನಕ್ಕೆ ತೀವ್ರ ಜಾಲ ಬೀಸಲಾಗಿದ್ದು, ಈ ಕೃತ್ಯ ಎಸಗಿದ ಆರೋಪಿಗಳಿಗೆ ನ್ಯಾಯಾಲಯದ ಮೂಲಕ ಕಠಿಣಾತಿ ಕಠಿಣ ಮರಣದಂಡನೆ ಶಿಕ್ಷೆ ಕೊಡಿಸಲು ಫಾಸ್ಟ್ ಟ್ರ್ಯಾಕ್ ಕೋರ್ಟ್ ಮೊರೆ ಹೋಗುವುದಾಗಿ ಕೈಮೂರ್ ಎಸ್ಪಿ ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮೇ 20ರಂದು ಸಾರಿಗೆ ನೌಕರರ ಮುಷ್ಕರ: ಸಿಬ್ಬಂದಿಗೆ ಖಡಕ್​​ ಎಚ್ಚರಿಕೆ ಕೊಟ್ಟ KSRTC – Kannada News | KSRTC Workers Strike on May 20: Corporation Warns Employees with Strict No Work, No Pay Order

ಸಿಬ್ಬಂದಿಗೆ ಖಡಕ್​​ ಎಚ್ಚರಿಕೆ ಕೊಟ್ಟ KSRTC

ಬೆಂಗಳೂರು, ಮೇ 18: ಮೇ 20ರಂದು ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆ ನೌಕರರಿಗೆ ಕೆಎಸ್ಆರ್​ಟಿಸಿ ಖಡಕ್ ಎಚ್ಚರಿಕೆ ನೀಡಿದೆ. ಬುಧವಾರ ಮುಷ್ಕರದಲ್ಲಿ ಭಾಗಿಯಾಗದಂತೆ ಸಿಬ್ಬಂದಿಗೆ ಸೂಚಿಸಿದ್ದು, ಯಾವುದೇ ಮುಷ್ಕರ ಮಾಡುವಂತಿಲ್ಲ. ಮುಷ್ಕರಕ್ಕೆ ಬೆಂಬಲವನ್ನು ಸೂಚಿಸುವಂತಿಲ್ಲ ಎಂದಿದೆ. ಬುಧವಾರ ಕೆಲಸಕ್ಕೆ ಹಾಜರಾಗದಿದ್ದರೆ ‘ನೋ ವರ್ಕ್ ನೋ ಪೇ’ ಎಂದು ಸಿಬ್ಬಂದಿಗೆ ತಿಳಿಸಲಾಗಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕೆಎಸ್ಆರ್​ಟಿಸಿ ಎಂಡಿ ಅಕ್ರಂಪಾಷಾ ಆದೇಶಿಸಿದ್ದಾರೆ.

ಮುಖ್ಯಾಂಶಗಳು

  • ಮೇ 20ರಂದು ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ಹಿನ್ನೆಲೆ
  • ನೌಕರರಿಗೆ ಕೆಎಸ್ಆರ್​ಟಿಸಿಯಿಂದ ಖಡಕ್ ಎಚ್ಚರಿಕೆ ಸಂದೇಶ
  • ಬುಧವಾರ ಮುಷ್ಕರದಲ್ಲಿ ಭಾಗಿಯಾಗದರೆ ಕ್ರಮದ ಎಚ್ಚರಿಕೆ

ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿರುವ ಕಾರಣ ಮೇ 20ರಂದು ಬಸ್​ ಸಂಚಾರದಲ್ಲಿ ವ್ಯತ್ಯಯ ಆಗದಂತೆ ಕ್ರಮ ಕೈಗೊಳ್ಳಬೇಕು. ಸಿಬ್ಬಂದಿಗೆ ಯಾವುದೇ ರೀತಿಯ ರಜೆ ಮಂಜೂರು ಮಾಡಬಾರದು. ಕೆಲಸಕ್ಕೆ ಗೈರಾಗುವ ನೌಕರರ ವಿರುದ್ಧ ‘ನೋ ವರ್ಕ್ ನೋ ಪೇ’ ಜಾರಿ ಮಾಡಿ. ಅನಿವಾರ್ಯ ಸಂದರ್ಭದಲ್ಲಿ ಅಥವಾ ಅವಶ್ಯವಿದ್ದಲ್ಲಿ, ನೌಕರರ ವಾರದ ರಜೆಯನ್ನು ರದ್ದುಗೊಳಿಸಿ ಕರ್ತವ್ಯದ ಮೇಲೆ ನಿಯೋಜಿಸುವಂತೆ ಅಕ್ರಂಪಾಷಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಬುಧವಾರದಿಂದ ಸಿಗಲ್ಲ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್! ಸಾರಿಗೆ ಮುಷ್ಕರ ಬಹುತೇಕ ಫಿಕ್ಸ್

ಶಿಸ್ತಿನ ಕ್ರಮದ ಎಚ್ಚರಿಕೆ

ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯವರು ಆಡಳಿತ ವರ್ಗಕ್ಕೆ ನೀಡಿರುವ ಮುಷ್ಕರದ ನೋಟಿಸ್ ಸಂಬಂಧಪಟ್ಟ ವಿವಾದವು ಸದ್ಯ ರಾಜ್ಯದ ಕಾರ್ಮಿಕ ಆಯುಕ್ತರ ಮುಂದೆ ರಾಜೀ ಸಂಧಾನದಲ್ಲಿದ್ದು, ಕೈಗಾರಿಕಾ ವಿವಾದಗಳ ಕಾಯಿದೆ-1947 ಮತ್ತು ನಿಯಮಗಳನ್ವಯ ‘ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆ’ ಯ ನೌಕರರ ಮುಷ್ಕರದ ನೋಟಿಸ್‌ ಸಂಬಂಧಪಟ್ಟ ವಿವಾದವು ರಾಜಿ ಸಂಧಾನದಲ್ಲಿ ರುವಾಗ ನೌಕರರು ಮುಷ್ಕರ ಹೂಡುವಂತಿಲ್ಲ. ಹೀಗಾಗಿ ನಿಗಮದ ನೌಕರರು ಯಾವುದೇ ಕಾರಣಕ್ಕೂ ಉದ್ದೇಶಿತ ಅನಿರ್ಧಿಷ್ಟಾವಧಿ ಮುಷ್ಕರದಲ್ಲಿ ಭಾಗವಹಿಸಬಾರದು. ಮತ್ತು ತಮ್ಮ ದೈನಂದಿನ ಕರ್ತವ್ಯಕ್ಕೆ ಅವಶ್ಯ ಹಾಜರಾಗಿ, ರಾಜ್ಯದ ಜನರ ಪ್ರೀತಿ ವಿಶ್ವಾಸಕ ಪಾತ್ರರಾಗಬೇಕಾಗಿ ಮನವಿ ಮಾಡಲಾಗಿದೆ. ವಿಶೇಷ ಸೂಚನೆಯಡಿ ನೀಡಿರುವ ನಿರ್ದೇಶನದನ್ವಯ ಕರ್ತವ್ಯಕ್ಕೆ ಗೈರುಹಾಜರಾದ ನೌಕರರ ವಿರುದ್ಧ ಶಿಸ್ತಿನ ಕ್ರಮವನ್ನು ತೆಗೆದುಕೊಳ್ಳುವುದಾಗಿಯೂ ಎಚ್ಚರಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:37 pm, Mon, 18 May 26

Source link

ಯಾರೂ ಊಹಿಸದಷ್ಟು ಬೋಲ್ಡ್ ಆಗಿ ಕಾಣಿಸಿದ ಮೌನ ಗುಡ್ಡೇಮನೆ; ಯಾವುದು ಈ ಸಿನಿಮಾ? – Kannada News | Mouna Guddemane’s Bold Avatar in ‘Love Punch’ Micro Series Shocks Fans

ಬಹುತೇಕ ಕಿರುತೆರೆ ನಟಿಯರು ತೆರೆಮೇಲೆ ಹೆಚ್ಚು ಟ್ರೆಡಿಷನಲ್ ಲುಕ್​​ನಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ, ತೆರೆಯ ಹಿಂದೆ ಅಥವಾ ಬೇರೆ ಸಿನಿಮಾಗಳಲ್ಲಿ ಅವರು ಹಾಗೆಯೇ ಕಾಣಿಸಿಕೊಳ್ಳಬೇಕು ಎಂಬ ಯಾವುದೇ ಕಂಡೀಷನ್ ಇಲ್ಲ. ಈಗ ಮೌನ ಗುಡ್ಡೇಮನೆ ವಿಷಯದಲ್ಲಿ ಹೀಗೆಯೇ ಆಗಿದೆ. ಕಿರುತೆರೆಯಲ್ಲಿ ಸಖತ್ ಟ್ರೆಡಿಷನಲ್ ಆಗಿ ಕಾಣಿಸಿಕೊಳ್ಳೋ ಅವರು, ಮೈಕ್ರೋ ಸರಣಿಗಾಗಿ ಬೋಲ್ಡ್ ಅವತಾರ ತಾಳಿದ್ದಾರೆ. ‘ಲವ್ ಪಂಚ್’ ಹೆಸರಿನ ಮೈಕ್ರೋ ಸರಣಿ ಮಾಡಿದ್ದಾರೆ. ಈ ಸರಣಿಯ ಕ್ಲಿಪ್​​ಗಳು ವೈರಲ್ ಆಗುತ್ತಿವೆ. ಇದನ್ನು ನೋಡಿದ ಫ್ಯಾನ್ಸ್ ಆಶ್ಚರ್ಯಚಕಿತರಾಗಿದ್ದಾರೆ.

ಮೌನ ಗುಡ್ಡೇಮನೆ ಅವರು ಈ ಮೊದಲು ‘ರಾಮಾಚಾರಿ’ ಹೆಸರಿನ ಧಾರಾವಾಹಿ ಮಾಡಿ ಗಮನ ಸೆಳೆದಿದ್ದರು. ಈ ಧಾರಾವಾಹಿಯಲ್ಲಿ ಚಾರುಲತಾ ಹೆಸರಿನ ಪಾತ್ರ ಮಾಡಿದ್ದರು. ಈ ಸೀರಿಯಲ್ ಗಮನ ಸೆಳೆಯಲು ಅವರ ಕೊಡುಗೆಯೂ ಹೆಚ್ಚಿದೆ. ಈಗ ‘ಕೃಷ್ಣ ರುಕ್ಕು’ ಹೆಸರಿನ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಸೀರಿಯಲ್ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ. ಹೀಗಿರುವಾಗಲೇ ಅವರ ಹೊಸ ಸರಣಿ ಸದ್ದು ಮಾಡುತ್ತಿದೆ.

‘ಪಾರು’ ಧಾರಾವಾಹಿ ಮೂಲಕ ಫೇಮಸ್ ಆಗಿದ್ದ ಶರತ್ ಪದ್ಮನಾಭ್ ಈ ಸರಣಿಗೆ ಹೀರೋ. ಅವರು ಜೀ ಕನ್ನಡದ ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಈಗ ಮೌನ ಹಾಗೂ ಶರತ್ ಅವರ ಬೋಲ್ಡ್ ಕೆಮಿಸ್ಟ್ರಿಗೆ ಎಲ್ಲರೂ ಫಿದಾ ಆಗಿದ್ದಾರೆ.

ಇದನ್ನೂ ಓದಿ: ಜೀ ಕನ್ನಡದ ‘ಕೃಷ್ಣ ರುಕ್ಕು’ ಧಾರಾವಾಹಿಗೆ ನಾಯಕಿಯಾದ ‘ರಾಮಾಚಾರಿ’ ಮೌನ

ಬುಲೆಟ್ ಮೈಕ್ರೋ ಡ್ರಾಮಾದಲ್ಲಿ ‘ಲವ್ ಪಂಚ್’ ಹೆಸರಿನ ಸರಣಿಯ ಟ್ರೇಲರ್ ತೆರೆಗೆ ಬಂದಿದೆ. ಇದೊಂದು ಕಾಲೇಜ್ ಲವ್​ ಸ್ಟೋರಿ. ಆರಂಭದಲ್ಲಿ ಕಿತ್ತಾಡಿಕೊಳ್ಳೋ ಇವರು ನಂತರ ಒಂದಾಗುತ್ತಾರೆ. ಪ್ರೀತಿ ಮೂಡುತ್ತದೆ. ಆದರೆ, ಕೊನೆಯಲ್ಲಿ ಒಂದು ಟ್ವಿಸ್ಟ್ ಕೂಡ ಇದೆ. ಇಷ್ಟು ವಿಷಯಗಳನ್ನು ಟ್ರೇಲರ್​​ನಲ್ಲಿ ತೋರಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version