Headlines

ಸ್ಥಳೀಯ ಸಂಸ್ಥೆ ಚುನಾವಣೆಗೆ ಬಿಜೆಪಿ-JDS ಮೈತ್ರಿಯಲ್ಲಿ ಭಿನ್ನರಾಗ: ಹೆಚ್​​ಡಿಕೆ ಮುಂದಿನ ನಡೆ ಏನು? – Kannada News | Rift Emerges in BJP JDS Alliance Over Karnataka Local Body Polls

ಬಿಜೆಪಿ-ಜೆಡಿಎಸ್​​ ಮೈತ್ರಿಯಲ್ಲಿ ಭಿನ್ನರಾಗ ಬೆಂಗಳೂರು, ಜನವರಿ 14: ಸ್ಥಳೀಯ ಸಂಸ್ಥೆ ಚುನಾವಣೆ ಮೈತ್ರಿ ವಿಚಾರವೀಗ ಬಿಜೆಪಿ, ಜೆಡಿಎಸ್​​ಗೆ ಕಗ್ಗಂಟಾಗಿ ಮಾರ್ಪಟ್ಟಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್​​ ಜೊತೆ ಮೈತ್ರಿಗೆ ಬಿಜೆಪಿಯ ಕೆಲವರು ವಿರೋಧ ವ್ಯಕ್ತಪಡಿಸಿದ ಕಾರಣ,  ಬಿಜೆಪಿ ಹೈಕಮಾಂಡ್ ಜೊತೆ ಕೇಂದ್ರ ಸಚಿವ ಮತ್ತು ಜೆಡಿಎಸ್​​ ನಾಯಕ ಕುಮಾರಸ್ವಾಮಿ ಶೀಘ್ರದಲ್ಲೇ ಸಭೆ ನಡೆಸಲಿದ್ದಾರೆ. ಆ ಮೂಲಕ  ಸಂಕ್ರಾಂತಿ ಬಳಿಕ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲು  ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಎಲ್ಲ ಚುನಾವಣೆಯಲ್ಲೂ ಮೈತ್ರಿಗೆ ಜೆಡಿಎಸ್​​ ಒಲವು ಸ್ಥಳೀಯ…

Read More

SBI ATM Charges: ಎಟಿಎಂ ಶುಲ್ಕದ ನಂತರ ಐಎಂಪಿಎಸ್ ಶುಲ್ಕವನ್ನೂ ಹೆಚ್ಚಿಸಿದ ಎಸ್​ಬಿಐ; ಇಲ್ಲಿದೆ ವಿವರ – Kannada News | SBI revises charges on IMPS and ATM transactions, details of the new rules here

ನವದೆಹಲಿ, ಜನವರಿ 14: ಕಳೆದ ತಿಂಗಳು ಎಟಿಎಂ ಟ್ರಾನ್ಸಾಕ್ಷನ್ ಶುಲ್ಕ ಪರಿಷ್ಕರಿಸಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮುಂದಿನ ತಿಂಗಳು ಐಎಂಪಿಎಸ್ ಟ್ರಾನ್ಸಾಕ್ಷನ್​ನಲ್ಲೂ (IMPS charges) ಏರಿಕೆ ಮಾಡುತ್ತಿದೆ. ದೊಡ್ಡ ಮೊತ್ತದ ಹಣವನ್ನು ಐಎಂಪಿಎಸ್ ಮೂಲಕ ಕಳುಹಿಸುತ್ತಿದ್ದರೆ ಹೆಚ್ಚಿನ ಶುಲ್ಕ ತೆರಬೇಕಾಗಬಹುದು. ಎಟಿಎಂ ಟ್ರಾನ್ಸಾಕ್ಷನ್​ನ (ATM transaction charges) ಹೊಸ ಶುಲ್ಕಗಳು 2025ರ ಡಿಸೆಂಬರ್ 1ರಿಂದ ಜಾರಿಗೆ ಬಂದಿವೆ. ಆದರೆ, ಐಎಂಪಿಎಸ್ ಶುಲ್ಕ ಏರಿಕೆಯು 2026ರ ಫೆಬ್ರುವರಿ 15ರಿಂದ ಜಾರಿಗೆ ಬರಬಹುದು. ಐಎಂಪಿಎಸ್ ಶುಲ್ಕದಲ್ಲಿ ಎಷ್ಟು…

Read More

ಚೊಚ್ಚಲ ಪಂದ್ಯ… ಅರ್ಧದಲ್ಲೇ ಬ್ಯಾಟಿಂಗ್ ನಿಲ್ಲಿಸಿ ವಾಪಸ್ ಕರೆಸಿದ ಕೋಚ್..! – Kannada News | Ayushi Soni becomes first player to be retired out in WPL 2026

ವುಮೆನ್ಸ್ ಪ್ರೀಮಿಯರ್ ಲೀಗ್​ನ 6ನೇ ಪಂದ್ಯವು ನಾಟಕೀಯ ಕ್ಷಣಗಳಿಗೆ ಸಾಕ್ಷಿಯಾಗಿದೆ. ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್​ನಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕಿ ಹರ್ಮನ್​ಪ್ರೀತ್ ಕೌರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಗುಜರಾತ್ ಜೈಂಟ್ಸ್ ತಂಡವು 4 ವಿಕೆಟ್ ಕಳೆದುಕೊಂಡು 10 ಓವರ್​ಗಳಲ್ಲಿ 99 ರನ್ ಕಲೆಹಾಕಿತ್ತು. ಅತ್ತ ಕನಿಕಾ ಅಹುಜಾ ಔಟಾಗುತ್ತಿದ್ದಂತೆ ಆಯುಷಿ…

Read More

ಕಾರವಾರ: JDS ಮುಖಂಡೆ ಪುತ್ರನ ಕಿರುಕಳಕ್ಕೆ ಯುವತಿ ಆತ್ಮಹತ್ಯೆ ಕೇಸ್​​ಗೆ ಸ್ಫೋಟಕ ಟ್ವಿಸ್ಟ್​​ – Kannada News | Twist in Rishala D’Souza suicide: Mother alleges physical harassment by JDS leader’s son

ಕಾರವಾರ, ಜನವರಿ 14: ಜೆಡಿಎಸ್​​ ಮುಖಂಡೆ ಪುತ್ರನ ಕಿರುಕಳಕ್ಕೆ ಯುವತಿ ಆತ್ಮಹತ್ಯೆ ಕೇಸ್​​ಗೆ ಸ್ಫೋಟಕ ಟ್ವಿಸ್ಟ್​​ ಸಿಕ್ಕಿದೆ. ತನ್ನ ಮಗಳ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ ಕಿರುಕುಳವನ್ನೂ ಆರೋಪಿ ನೀಡಿದ ಕಾರಣ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ರಿಶಾಲ ಡಿಸೋಜಾ ತಾಯಿ ಕ್ರಿಸ್ತೋದ ಡಿಸೋಜಾ ಗಂಭೀರ ಆರೋಪ ಮಾಡಿದ್ದಾರೆ. ಅಂತ್ಯ ಸಂಸ್ಕಾರಕ್ಕೂ ಮುನ್ನ ನಾವು ಮೃತದೇಹಕ್ಕೆ ಸ್ನಾನ ಮಾಡಿಸುತ್ತೇವೆ. ಈ ವೇಳೆ ಮಗಳ ಖಾಸಗಿ ಭಾಗ ಸೇರಿದಂತೆ ದೇಹದ ಬಹುತೇಕ ಕಡೆ ಕಚ್ಚಿದ ಮಾರ್ಕ್ ಕಂಡುಬಂದಿದೆ. ಖಾಸಗಿ ಭಾಗದಿಂದ…

Read More

ನಮ್ಮ ಮೆಟ್ರೋ ನೀಲಿ ಮಾರ್ಗದ ಕಾಮಗಾರಿ ವೇಳೆ ಕ್ರೇನ್​​ ಪಲ್ಟಿ: ತಪ್ಪಿದ ಭಾರೀ ದುರಂತ – Kannada News | Bengaluru Metro Construction: Crane Topples on Silk Board Airport Route

ಬೆಂಗಳೂರು, ಜನವರಿ 14: ಅಗರ ಬಳಿ ನಮ್ಮ ಮೆಟ್ರೋ ನೀಲಿ ಮಾರ್ಗದ ಕಾಮಗಾರಿ ವೇಳೆ ಭಾರಿ ದುರಂತವೊಂದು ತಪ್ಪಿದೆ. ಕಂಟ್ರೋಲ್ ತಪ್ಪಿ ಬೃಹತ್ ಕ್ರೇನ್ ವಾಹನ ಆಯತಪ್ಪಿ ಬಿದ್ದಿದ್ದು, ಅದೃಷ್ವಶಾತ್​​ ಯಾವುದೇ ಪ್ರಾಣಹಾನಿ ಈ ವೇಳೆ ಸಂಭವಿಸಿಲ್ಲ. ಕ್ರೇನ್​​ ಹಿಂದಕ್ಕೆ ತೂಕದ ವಸ್ತು ಹಾಕದೆ ಮುಂದೆಯಿಂದ ಗರ್ಡರ್‌ ಎತ್ತಲು ಮುಂದಾದಾಗ ಬ್ಯಾಲೆನ್ಸ್​​ ತಪ್ಪಿದೆ. ಈ ವೇಳೆ ಆಪರೇಟರ್​​ ಕ್ರೇನ್​​ ವಾಹನದಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಮುಂಜಾನೆ 3.45ರ ಸುಮಾರಿಗೆ ಘಟನೆ ನಡೆದಿದ್ದು, ಸ್ಥಳಕ್ಕೆ HSR ಸಂಚಾರ ಪೊಲೀಸರು…

Read More

ದೆಹಲಿ: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ನಿವಾಸದಲ್ಲಿ ಅಗ್ನಿ ಅವಘಡ – Kannada News | Fire Erupts at Union Minister Ravi Shankar Prasad’s Delhi Residence

ನವದೆಹಲಿ, ಜನವರಿ 14: ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರ ದೆಹಲಿ ನಿವಾಸದಲ್ಲಿ ಬುಧವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ. 8.05ರ ಸುಮಾರಿಗೆ ಅಗ್ನಿಶಾಮಕ ದಳ ಅಲ್ಲಿಗೆ ತಲುಪಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮನೆಯೊಳಗೆ, ಒಂದು ಕೋಣೆಯೊಳಗಿನ ಹಾಸಿಗೆಯಲ್ಲಿ ಬೆಂಕಿ ಹೊತ್ತಿಕೊಂಡಿತ್ತು.ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು, ಮತ್ತಷ್ಟು ಹರಡುವುದನ್ನು ತಡೆದಿದ್ದಾರೆ. ಯಾರಿಗೂ ಗಾಯಗಳಾಗಿಲ್ಲ.     ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ    Source link

Read More

ಹಾಸನ ಜಿಲ್ಲೆಯ ವಿವಿಧೆಡೆ ಭಾರಿ ಮಳೆ: ಒಣಗಲು ಹಾಕಿದ್ದ ಕಾಫಿ ಬೆಳೆಗೆ ಹಾನಿ – Kannada News | Heavy Rains Lash Hassan District, Dried Coffee Crop Damaged Across Several Areas

ಹಾಸನ, ಜನವರಿ 14: ಹಾಸನ ಜಿಲ್ಲೆಯ ವಿವಿಧೆಡೆ ಸುರಿದ ಭಾರಿ ಮಳೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಕಾಲಿಕ ಮಳೆ ಕಾಫಿ ಬೆಳೆಗಾರರನ್ನು ಕಂಗಾಲಾಗಿಸಿದೆ. ಕಟಾವು ಮಾಡಿ ಒಣಗಲು ಹಾಕಿದ್ದ ಕಾಫಿ ಬೆಳೆಗೆ ಮಳೆಯಿಂದಾಗಿ ಹಾನಿಯುಂಟಾಗಿದೆ. ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಅನಿರೀಕ್ಷಿತವಾಗಿ ಸುರಿದ ಮಳೆಯಿಂದಾಗಿ, ಕೊಯ್ಲು ಮಾಡಿ ಒಣಗಿಸಲು ಹಾಕಲಾಗಿದ್ದ ಕಾಫಿ ಬೀಜಗಳು ಮಳೆಯಲ್ಲಿ ನೆನೆದು ಸಂಪೂರ್ಣ ಹಾಳಾಗಿವೆ. ಇದರಿಂದ ಕಾಫಿ ಬೆಳೆಗಾರರು ಭಾರೀ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಮಳೆ ಹಾನಿಯಿಂದಾಗಿ ಕಾಫಿ ಹೂವುಗಳು, ಕಾಫಿ ಗಿಡಗಳು ಮತ್ತು…

Read More

Makar Sankranti: ಮಕರ ಸಂಕ್ರಾಂತಿಗೆ ಈ ವಸ್ತು ಮನೆಗೆ ತನ್ನಿ; ನಿಮ್ಮ ಅದೃಷ್ಟವೇ ಬದಲಾಗಲಿದೆ – Kannada News | Makar sankranti attract wealth and positivity with these 5 auspicious vastu items

ಹಿಂದೂ ಸಂಪ್ರದಾಯದಲ್ಲಿ ಮಕರ ಸಂಕ್ರಾಂತಿಗೆ ಹೆಚ್ಚಿನ ಮಹತ್ವವಿದೆ. ಈ ದಿನ ಕೆಲವು ವಸ್ತುಗಳನ್ನು ಮನೆಗೆ ತರುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಆದ್ದರಿಂದ ಮನೆಯಲ್ಲಿರುವ ಆರ್ಥಿಕ ಸಮಸ್ಯೆಗಳನ್ನು ತೊಡೆದುಹಾಕಲು ಮತ್ತು ಲಕ್ಷ್ಮಿ ದೇವಿಯ ಅನುಗ್ರಹವನ್ನು ಆಕರ್ಷಿಸಲು ಈ ಹಬ್ಬದಂದು ಯಾವ ವಸ್ತುಗಳನ್ನು ಖರೀದಿಸಬೇಕು ಎಂಬುದನ್ನುಇಲ್ಲಿ ತಿಳಿದುಕೊಳ್ಳಿ. ಗಾಳಿ ಗಂಟೆಗಳು(Wind Chimes): ಸಂಕ್ರಾಂತಿಯಂದು ಗಾಳಿ ಗಂಟೆಗಳನ್ನು ತಂದು ಗಾಳಿ ಬೀಸುವ ಸ್ಥಳದಲ್ಲಿ ಇರಿಸಿ. ಇವುಗಳ ಶಬ್ದವು ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ಹೊರಹಾಕುತ್ತದೆ ಮತ್ತು…

Read More

ಬದಲಾಗಲ್ಲ ಬಾಲಿವುಡ್, ಮತ್ತೆ ‘ಕಾಂತಾರ’ಕ್ಕೆ ಅವಮಾನ ಮಾಡುವ ಯತ್ನ – Kannada News | CBFC removes Kantara movie reference from Bollywood movie Rahu Ketu

‘ಕಾಂತಾರ’ ಮತ್ತು ‘ಕಾಂತಾರ: ಚಾಪ್ಟರ್ 1’ (Kantara) ಸಿನಿಮಾನಲ್ಲಿ ಕರಾವಳಿಯ ದೈವ ಆರಾಧನೆ ಅದರ ಮಹಿಮೆ ಇನ್ನಿತರೆ ವಿಚಾರಗಳನ್ನು ತೋರಿಸಲಾಗಿದೆ. ಸಿನಿಮಾ ಮಾಡುವಾಗ ತಾವು ದೈವಗಳಿಗೆ ಅಪಚಾರ ಆಗದಂತೆ ಬಲು ನೇಮ-ನಿಷ್ಠೆಯಿಂದ ಸಿನಿಮಾ ಮಾಡಿರುವುದಾಗಿ ರಿಷಬ್ ಶೆಟ್ಟಿ ಹೇಳಿದ್ದರು. ಅಲ್ಲದೆ ಯಾರೂ ಸಹ ದೈವವನ್ನು ಅನುಕರಣೆ ಮಾಡುವುದು ಬೇಡ, ದೈವವನ್ನು ಹಾಸ್ಯಕ್ಕೆ ಬಳಸಿಕೊಳ್ಳುವುದು ಅಕ್ಷಮ್ಯ ಎಂದು ಸಹ ಹೇಳಿದ್ದರು. ಆದರೂ ಸಹ ಕೆಲವರು ಅದನ್ನು ಮಾಡುತ್ತಲೇ ಬಂದಿದ್ದಾರೆ. ಇತ್ತೀಚೆಗಷ್ಟೆ ಬಾಲಿವುಡ್​​ನ ಸ್ಟಾರ್ ನಟ ರಣ್ವೀರ್ ಸಿಂಗ್, ವೇದಿಕೆ…

Read More

ಗದಗದಲ್ಲಿ ಚಿನ್ನದ ನಿಧಿ: ಲಕ್ಕುಂಡಿಯ ಈ ಸ್ಥಳದಲ್ಲಿ ಇಂದಿಗೂ ಸಿಗುತ್ತದೆ ಚಿನ್ನ, ರತ್ನ, ಹವಳ – Kannada News | Beyond Gold: A Locals 45 Year Insight into Lakkundis Historical Finds

ಗದಗ, ಜ.14: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮವು ಪುರಾತನ ಕಾಲದ ನಿಧಿಗಳಿಗೆ ಹೆಸರುವಾಸಿಯಾಗಿದೆ. ಇತ್ತೀಚೆಗೆ ಲಕ್ಕುಂಡಿಯಲ್ಲಿ ಚಿನ್ನ ಪತ್ತೆಯಾದ ನಂತರ ಇಲ್ಲಿನ ಇನ್ನು ಇಂತಹ ಚಿನ್ನ ಸಿಗುವ ಸ್ಥಳಗಳು ಇವೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದೀಗ ಲಕ್ಕುಂಡಿಯ ನಿಧಿಗಳ ಬಗ್ಗೆ ಸ್ಥಳೀಯರಾದ ಬಸಪ್ಪ ಬಡಿಗೇರ ಅವರು ಟಿವಿ9 ಕನ್ನಡಕ್ಕೆ ಹಲವು ಆಸಕ್ತಿದಾಯಕ ಮಾಹಿತಿಗಳನ್ನು ನೀಡಿದ್ದಾರೆ. ಬಸಪ್ಪ ಬಡಿಗೇರರ ಪ್ರಕಾರ, ಲಕ್ಕುಂಡಿಯಲ್ಲಿ ಮುತ್ತು, ರತ್ನ, ಹವಳಗಳಲ್ಲದೆ ಚಿನ್ನವೂ ದೊರೆಯುತ್ತದೆ. ರಾಜಮಹಾರಾಜರ ಕಾಲದಲ್ಲಿ ನಡೆದ ಭೀಕರ ಯುದ್ಧಗಳಲ್ಲಿ ಮಡಿದವರ…

Read More