Daily Devotional: ಸಕಲ ಸಮಸ್ಯೆಗಳಿಗೂ ಇದೊಂದು ಪರಿಹಾರ ಮಾರ್ಗ! – Kannada News | Discover a Simple, Cost Free Shiva Ritual for All Lifes Problems

ಸಕಲ ಸಮಸ್ಯೆಗಳಿಗೂ ಇದೊಂದುಪರಿಹಾರ ಮಾರ್ಗವನ್ನ ಆಚರಿಸಿ ಎಂದು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಜೀವನದಲ್ಲಿ ಎದುರಾಗುವ ಹಳೆಯ, ಹೊಸ ಮತ್ತು ಬರಲಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮಾರ್ಗವನ್ನು ನಿತ್ಯಭಕ್ತಿ ಕಾರ್ಯಕ್ರಮವು ವಿವರಿಸುತ್ತದೆ. ಹಣಕಾಸು, ಆರೋಗ್ಯ, ಉದ್ಯೋಗ, ವಿದ್ಯಾಭ್ಯಾಸ, ವಿವಾಹ, ವಸತಿ, ಪ್ರಯಾಣ ಅಥವಾ ಶತ್ರು ಕಾಟದಂತಹ ಯಾವುದೇ ಸಮಸ್ಯೆಯಿರಲಿ, ಅವೆಲ್ಲದಕ್ಕೂ ಒಂದು ಸಾರ್ವತ್ರಿಕ ಮತ್ತು ವೆಚ್ಚರಹಿತ ಪರಿಹಾರವಿದೆ. ಈ ಪರಿಹಾರವನ್ನು ಪಡೆಯಲು ಯಾವುದೇ ಜಾತಿ, ಮತ, ಲಿಂಗ ಅಥವಾ ನಿರ್ದಿಷ್ಟ ಆಹಾರ ಪದ್ಧತಿಯ ನಿಯಮಗಳಿಲ್ಲ.

ಶಿವನನ್ನು ಬೋಳಾಶಂಕರ, ಲಯಕಾರಕ ಎಂದು ಕರೆಯಲಾಗುತ್ತದೆ ಮತ್ತು ಅವರ ಆಶೀರ್ವಾದ ಬೇಗ ಸಿಗುತ್ತದೆ ಎಂದು ನಂಬಲಾಗಿದೆ. ಮೂರು ಸೋಮವಾರಗಳ ಕಾಲ ಸಂಧ್ಯಾಕಾಲದಲ್ಲಿ, ಅಂದರೆ ಸಂಜೆ 6:05 ರಿಂದ 8:30ರ ಒಳಗೆ ಈ ಪರಿಹಾರವನ್ನು ಆಚರಿಸಬಹುದು ಎಂದು ಅವರು ವಿವರಿಸಿದ್ದಾರೆ

 

 

 

Source link

Horoscope Today: ಇಂದು ಈ ರಾಶಿಯವರಿಗೆ ಆರೋಗ್ಯ ಸಮಸ್ಯೆ ಕಾಡಬಹುದು

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮೇ 18, ಸೋಮವಾರದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ಸೋಮವಾರದ ಈ ಶುಭ ದಿನವು ಉತ್ತರಾಯಣ, ಜೇಷ್ಠ ಮಾಸ, ಶುಕ್ಲ ಪಕ್ಷದ ಬಿದಿಗೆ, ರೋಹಿಣಿ ನಕ್ಷತ್ರ ಮತ್ತು ಸುಕರ್ಮ ಯೋಗದಿಂದ ಕೂಡಿದೆ. ರವಿ ಮತ್ತು ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುತ್ತಿದ್ದು, ಇದು ಗ್ರಹಗತಿಗಳ ಮೇಲೆ ಪ್ರಮುಖ ಪರಿಣಾಮ ಬೀರಲಿದೆ.

ರಾಹುಕಾಲವು ಬೆಳಿಗ್ಗೆ 7:29 ರಿಂದ 9:00 ರವರೆಗೆ ಇದ್ದು, ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ ಮತ್ತು ಶುಭಕಾಲವು 9:00 ರಿಂದ 10:40 ರವರೆಗೆ ಇರುತ್ತದೆ. ಈ ದಿನವನ್ನು ಶಿವನ ಕೃಪೆಗೆ ಪಾತ್ರರಾಗಲು “ಓಂ ನಮಃಶಿವಾಯ” ಮಂತ್ರ ಜಪಿಸಲು ಪವಿತ್ರ ದಿನವೆಂದು ಗುರೂಜಿ ತಿಳಿಸಿದ್ದಾರೆ.

 

 

Source link

ದಿನ ಭವಿಷ್ಯ: ಇಂದು ಈ ರಾಶಿಯವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದು – Kannada News | Horoscope Today, May 18, 2026: Monday Dina Rashi Bhavishya for All Zodiac Signs; Check Details Here

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ಮೇಷ, ಮಹಾನಕ್ಷತ್ರ : ಕೃತ್ತಿಕಾ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ರೋಹಿಣೀ, ಯೋಗ : ಅತಿಗಂಡ, ಕರಣ : ಬಾಲವ, ಸೂರ್ಯೋದಯ – 05 – 57 am, ಸೂರ್ಯಾಸ್ತ – 06 – 44 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:34 – 09:09, ಯಮಗಂಡ ಕಾಲ 10:45 – 12:21, ಗುಳಿಕ ಕಾಲ 13:57 – 15:33.

ಮೇಷ ರಾಶಿ: ಹತ್ತಿರದ ಸಂಬಂಧಿಗಳೊಂದಿಗೆ ಪ್ರಮುಖ ಚರ್ಚೆಯನ್ನು ಮಾಡುವಿರಿ. ಮಕ್ಕಳಿಂದ ಲಾಭ, ಹೆಮ್ಮೆ ಸಿಗಬಹುದು. ಸಮಯವನ್ನು ಸಮಾಜಮುಖಿ ಕಾರ್ಯಗಳಲ್ಲಿ ಬಳಸಿದರೆ ಒಳಿತು. ಪ್ರೀತಿಯಲ್ಲಿ ತಿಳಿವಳಿಕೆ ಹೆಚ್ಚಾಗುತ್ತದೆ. ಯಾರ ಸ್ನೇಹವನ್ನೂ ವೇಗವಾಗಿ ಒಪ್ಪಿಕೊಳ್ಳಲಾರಿರಿ. ನಿಮ್ಮ ಮನಸ್ಸಿಗೆ ಸರಿ ಎನಿಸಿದ್ದರೆ ಮುಂದುವರಿಯಿರಿ. ಉಡುಗೊರೆಯನ್ನು ಸ್ನೇಹಿತರಿಂದ ಸ್ವೀಕರಿಸುವಿರಿ. ಭೂಮಿಯ ವ್ಯವಹಾರದಲ್ಲಿ ಹಿನ್ನಡೆಯಾಗಲಿದೆ. ಇಂದಿನ ಸಮಯವು ವ್ಯರ್ಥವಾಗುವುದು.

ವೃಷಭ ರಾಶಿ: ಹೊಸ ಸ್ನೇಹಿತರು ನಿಮ್ಮ ವ್ಯಕ್ತಿತ್ವದಿಂದ ಆಕರ್ಷಿತರಾಗುತ್ತಾರೆ. ಸಂಗಾತಿಯ ಭಾವನೆಗಳ ಬಗ್ಗೆ ನಿಮ್ಮ ನಿರ್ಲಕ್ಷ್ಯ ತೊಂದರೆ ಉಂಟುಮಾಡಬಹುದು. ನಿಮ್ಮನ್ನು ಕೆಟ್ಟವರ ಸಹವಾಸದಿಂದ ಮನೆಯವರು ದೂರಮಾಡುವರು. ಸಂಭಾಷಣೆಯ ಕೊರತೆ ಮದುವೆಯ ಸಂಬಂಧದಲ್ಲಿ ಬಿರುಕು ತರಬಹುದು. ಸಾಹಸ ಕಾರ್ಯಕ್ಕೆ ಒಮ್ಮೆಲೇ ಮುಂದಾಗುವುದು ಬೇಡ. ಅಸತ್ಯವನ್ನು ಹೇಳುವುದು ಗೊತ್ತಾದೀತು. ಹಿತವಚನದಿಂದ ಯಾವ ಪರಿವರ್ತನೆಯೂ ಆಗದು.

ಮಿಥುನ ರಾಶಿ: ಹಣಕಾಸಿನ ವಿಚಾರಕ್ಕೆ ಮನೆಯಲ್ಲಿ ಕಲಹದಿಂದ ಮನಸ್ಸು ಹಾಳಾಗಲಿದೆ. ಹಣದ ವಿಚಾರದಲ್ಲಿ ತ್ವರಿತ ನಿರ್ಧಾರದಿಂದ ದೂರವಿರಿ. ಮಕ್ಕಳು ನಿಮ್ಮನ್ನು ಪ್ರೀತಿಸುವರು. ಅತಿಥಿಗಳ ಬಳಿ ಉಗ್ರವಾಗಿ ವರ್ತಿಸದಿರಿ. ಸಂಬಂಧಗಳ ಕಾಳಜಿ ಇಟ್ಟುಕೊಳ್ಳಿ. ನಿಮ್ಮ‌ ಮೇಲೆ ಸಂದೇಹವು ಬರಬಹುದು. ಭವಿಷ್ಯದ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳುವಿರಿ. ನಿಮ್ಮ ಮನೆಯ ಸಮಸ್ಯೆಯನ್ನು ಬೇರೆಯವರ ಜೊತೆ ಹಂಚಿಕೊಳ್ಳುವುದು ಬೇಡ.

ಕರ್ಕಾಟಕ ರಾಶಿ: ಹಿರಿಯರ ಒತ್ತಡದಿಂದ ಕೆಲಸಕ್ಕೆ ಏಕಾಗ್ರತೆ ಕಡಿಮೆಯಾಗಬಹುದು. ಹಣದ ಬಗ್ಗೆ ತುರ್ತು ನಿರ್ಧಾರ ತೆಗೆದುಕೊಳ್ಳುವುದು ತೊಂದರೆ ತರಬಹುದು. ಅತಿಥಿಗಳಿಂದ ದೂರವಿರಲು ಶಿಸ್ತಿನಿಂದ ನಡೆದುಕೊಳ್ಳಿ. ಪ್ರೀತಿಯಲ್ಲಿ ತಾಳ್ಮೆ ಮತ್ತು ಸಹನಶೀಲತೆ ಮುಖ್ಯ. ನಿಮ್ಮದಲ್ಲದ್ದನ್ನು ಉಳಿಸಿಕೊಳ್ಳುವುದು ಕಷ್ಟವಾಗುವುದು. ಯಾವುದನ್ನೂ ಅನುಭವಿಸಲೂ ಯೋಗ್ಯವಾದ ಕಾಲವು ಬೇಕಾಗುವುದು. ಇಂದು ನೀವು ಯಾವುದಾದರೂ ವಿಚಾರವನ್ನು ಮಾತಿನಿಂದ ನೀವು ಗೆಲ್ಲವುದು ಸುಲಭವಲ್ಲ.

ಸಿಂಹ ರಾಶಿ: ಪ್ರೀತಿಯಲ್ಲಿ ನಿಮಗೆ ಮನಸ್ಸಿನಲ್ಲಿ ಶೂನ್ಯತೆ ಇಂದು ಕಾಡಬಹುದು. ವೃತ್ತಿಜೀವನದಲ್ಲಿ ಹಡವಿಟ್ಟ ನಿರ್ಧಾರ ತಪ್ಪು ತರುವ ಸಾಧ್ಯತೆ. ಸಮಸ್ಯೆಗಳ ಪರಿಹಾರದಲ್ಲಿ ನಿಮ್ಮ ಬುದ್ಧಿಮತ್ತೆ ಸ್ಪಷ್ಟ ಸಂಗಾತಿಯ ಆರೋಗ್ಯ ಸಮಸ್ಯೆಯಿಂದ ಕೆಲಸದಲ್ಲಿ ಅಡಚಣೆ. ತಾಳ್ಮೆಯಿಂದ ದಿನ ಕಳೆಯಿರಿ. ಸಂತೃಪ್ತಿಯಿಂದ ಇರಲಿದ್ದೀರಿ. ವೃತ್ತಿಪರರು ಗೌರವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುವರು. ಉದ್ಯೋಗದ ಅವಕಾಶಗಳ ನಿರೀಕ್ಷೆಯಲ್ಲಿ ಇರುವಿರಿ. ಅಧಿಕಾರಿವರ್ಗದಿಂದ ನಿಮ್ಮ ಗೌರವಕ್ಕೆ ದಕ್ಕೆ ಆಗಬಹುದು. ಸಂಗಾತಿಯ ಇಂಗಿತವನ್ನೇ ಅರಿತು ಕಾರ್ಯವನ್ನು ಮಾಡುವಿರಿ.

ಕನ್ಯಾ ರಾಶಿ: ಪರಸ್ಪರ ಸಂವಹನದ ಮೂಲಕ ವ್ಯಾಪಾರದಲ್ಲಿ ಉತ್ತಮ ಪ್ರಗತಿಯನ್ನು ಕಾಣುವಿರಿ. ಮನೆಯ ಕೆಲಸಗಳಲ್ಲಿ ಗಮನ ಹರಿಸಿ. ಪ್ರೇಮ ಸಂಬಂಧದಲ್ಲಿ ನಿರೀಕ್ಷೆಯಂತಿಲ್ಲದ ಪರಿಣಾಮ ಸಿಗಬಹುದು. ತಮಾಷೆಯ ಆಟದಲ್ಲಿ ಗೆಲುವಾಗದು. ಕಚೇರಿಯಲ್ಲಿ ಒಬ್ಬ ಮೋಸವಾಗಬಹುದು. ಕರಕುಶಲತೆಗಳಿಗೆ ಹೆಚ್ಚು ಸಮಯ ಕೊಡುವಿರಿ. ಕುಟುಂಬದ ಜೊತೆ ಸೌಹಾರ್ದತೆ ಉಂಟಾಗುವುದು. ಇತರರ ಜೊತೆ ನಿಮ್ಮ ಮಾತಿನ ಮೇಲೆ ವಿಶ್ವಾಸದ ಕೊರತೆ ಕಾಣಲಿದೆ.

ತುಲಾ ರಾಶಿ: ಸಮಾಜದಿಂದ ಗೌರವ ಸಮ್ಮಾನಗಳು ಸಿಗಲಿವೆ. ಆಸ್ತಿ ಖರೀದಿಸುವ ಯೋಚನೆ ಇದ್ದರೆ ಖರೀದಿಸಿ. ಇಂದು ಕಾಲ ಚೆನ್ನಾಗಿದೆ. ಕೋಪವನ್ನು ತೋರಿಸಲು ಹೋಗಬೇಡಿ. ಬಲವರ್ಧನೆಗೆ ಹೊಸ ಸಂಬಂಧದ ಮೂಲಕ ಅವಕಾಶ. ಮನೆಯ ಕಾರ್ಯಕ್ಕೆ ಆಪ್ತರನ್ನು ಆಮಂತ್ರಿಸುವಿರಿ. ನಿಮ್ಮ ಹೆಸರನ್ನು ಬಳಸಿ ಬೇರೆಯವರು ಕೆಲಸ ಮಾಡಿಕೊಳ್ಳಬಹುದು. ನಿಮ್ಮ ನಿರ್ಧಾರವನ್ನು ಯಾರು ಏನೇ ಹೇಳಿದರೂ ಬದಲಾಯಿಸುವುದಿಲ್ಲ. ಇನ್ನೊಬ್ಬರ ಬಗ್ಗೆ ಪ್ರೀತಿ ಇರಲಿ.

ವೃಶ್ಚಿಕ ರಾಶಿ: ಆತ್ಮವಿಶ್ವಾಸವು ಋಣಾತ್ಮಕ ಸಂದರ್ಭದಲ್ಲಿಯೂ ಧೈರ್ಯದಿಂದ ಇರುವಂತೆ ಮಾಡುತ್ತದೆ. ವಾಹನ ಸಂಚಾರದಲ್ಲಿ ಎಚ್ಚರಿಕೆ ಇರಲಿ. ಇಂದಿನ ಸೋಲಿನಿಂದ ಪಾಠ ಕಲಿಯಬೇಕಾದೀತು. ಸಂಪತ್ತೇ ನಿಮಗೆ ಹೊರೆಯಾಗಬಹುದು. ಸ್ನೇಹಿತರ ಜೊತೆಗೆ ಸಂತೋಷದ ಸಮಯ. ಪ್ರೇಮ ಸಂಬಂಧದಲ್ಲಿ ಭರವಸೆ ಅಧಿಕವಾಗಲಿದೆ. ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಪರಾಜಯ ಆಗಬಹುದು. ಭಾವನಾತ್ಮಕ ವಿಚಾರಗಳಿಗೆ ಸ್ಪಂದಿಸುವುದು ಕಷ್ಟವಾಗಲವಾಗಲಿದೆ.

ಧನು ರಾಶಿ: ಸಾಲ ಕೊಡಲಿಕ್ಕಾಗಿ ಬರುವ ದೂರವಾಣಿ ಕರೆಗಳನ್ನು ನಿರ್ಲಕ್ಷಿಸಲಿದ್ದೀರಿ. ಇಂದು ನೀವು ಪ್ರಮುಖ ನಿರ್ಧಾರಗಳನ್ನು ಸ್ವೀಕರಿಸುವ ಸಾಧ್ಯತೆ ಇದೆ. ನಿಮ್ಮ ಖಾಸಗಿ ವಿಷಯಗಳನ್ನು ಬಹಿರಂಗಪಡಿಸದಿರಿ. ಪ್ರೀತಿಯಲ್ಲಿ ತಾತ್ಕಾಲಿಕ ಸಂತೋಷವಿದ್ದರೂ ಭರವಸೆಯ ಕ್ಷಣ. ಪರಾಧೀನ ಸ್ಥಿತಿಯಿಂದ ಮಾನಸಿಕ ಹಿಂಸೆಯಾದೀತು. ಅಧಿಕಾರದಿಂದ ಮಾತ್ರ ಎಲ್ಲವೂ ಸರಿಯಾಗುವುದು ಎಂಬ ಭ್ರಮೆ‌ ಬೇಡ. ಇಂದಿನ ಕಾರ್ಯವು ಯಾವುದೇ ತೊಂದರೆಗಳಿಲ್ಲದೇ ಮುಗಿಯುವುದು.

ಮಕರ ರಾಶಿ: ಅಪರಿಚಿತರು ಭೇಟಿಯಾಗಿ ನಿಮ್ಮ ಕಿವಿ ಹಿಂಡುವರು. ನೀವು ಮಾಡಲಿರುವ ಕೆಲಸದ‌ ಮೇಲೆ ನಿಮ್ಮ ಗಮನವಿರಲಿ. ಹೂಡಿಕೆಯಲ್ಲಿ ಜಾಣತನದಿಂದ ಲಾಭ ಸಿಗುವುದು ಖಚಿತ. ಕುಟುಂಬದ ಬೆಂಬಲದಿಂದ ನೈಜ ಸಮಾಧಾನ. ಪ್ರೀತಿಯಲ್ಲಿ ಶುಭ ಸೂಚನೆಗಳು ಸಿಗುತ್ತವೆ. ಉದ್ಯೋಗದಲ್ಲಿ ಉನ್ನತಿ ಸಾಧ್ಯ. ಹೊಸತರ ಕಲಿಕೆಯಲ್ಲಿ ಆಸಕ್ತಿಯು ಅಧಿಕವಾಗುವುದು. ಸಮಾರಂಭಗಳಿಗೆ ತೆರಳುವಿರಿ. ಕೃಷಿಕರಿಗೆ ಲಾಭದಲ್ಲಿ ಸ್ವಲ್ಪ ಇಳಿಮುಖ ಇರಲಿದೆ‌.

ಕುಂಭ ರಾಶಿ: ಅನಗತ್ಯ ಖರ್ಚು ನಿಮಗೆ ವಿಷಾದ ತರಬಹುದು. ನಿಮಗೆ ಸಿಕ್ಕ ಸಮಯವನ್ನು ಸದುಪಯೋಗ ಮಾಡಿಕೊಳ್ಳುವಿರಿ. ಇಡೀ ಕುಟುಂಬಕ್ಕೆ ಸಂತೋಷವನ್ನು ತರುವ ಸುದ್ದಿ ಸಿಗುವುದು ಸಾಧ್ಯ. ಪ್ರೀತಿಯಲ್ಲಿ ಸ್ಪಂದನೆ. ಹೊಸ ವ್ಯವಹಾರಗಳಿಗೆ ಉತ್ತಮ ಸಮಯ. ಸಮಸ್ಯೆ ಪರಿಹಾರದಲ್ಲಿ ನಿಮ್ಮ ಪ್ರತಿಭೆ ಬೆಳಗಲಿದೆ. ಉದ್ಯಮದಲ್ಲಿ ಅಧಿಕ ಚಿಂತೆಯು ಇರಲಿದ್ದು ಪ್ರಯತ್ನವು ಅಧಿಕವಾಗಿ ಇರುವುದು. ಸಂಗಾತಿಯ ಮಾತನ್ನು ಇಂದು ಅನುಸರಿಸುವಿರಿ.

ಮೀನ ರಾಶಿ: ಪರಿಚಯ ಆತ್ಮೀಯವಾಗಿ ನಿಮಗೆ ಉತ್ತಮ ಅವಕಾಶಗಳನ್ನು ಕೊಡಿಸುವುದು. ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಆರ್ಥಿಕ ಸಲಹೆ ನೀಡುವ ವ್ಯಕ್ತಿ ನಿಮ್ಮ ನೆರವಾಗಬಹುದು. ಮಕ್ಕಳ ಸಾಧನೆ ಸಂತೋಷ ತರುತ್ತದೆ. ಉದ್ಯೋಗ ನಿರ್ಧಾರದಲ್ಲಿ ಸ್ವತಂತ್ರತೆ ಉತ್ತಮ. ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಿ ಕುಟುಂಬದೊಂದಿಗೆ ಕಾಲ ಕಳೆಯಿರಿ. ಆಸ್ತಿಯನ್ನು ಖರೀದಿಸುವ ಕುರಿತು ಮನೆಯಲ್ಲಿ ಚರ್ಚೆಗಳು ನಡೆಯುವುದು.

ಲೋಹಿತ ಹೆಬ್ಬಾರ್-8762924271 (what’s app only)

Source link

DC vs RR: ರಾಜಸ್ಥಾನ್ ವಿರುದ್ಧ ಕೊನೆಯ ಓವರ್​ನಲ್ಲಿ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ – Kannada News | IPL 2026: Delhi Capitals Defeat Rajasthan Royals, Climb to 7th; RR Playoff Hopes Dim

ಐಪಿಎಲ್ 2026 ರ 62 ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ ಲೀಗ್​ನಲ್ಲಿ ತನ್ನ 6ನೇ ಗೆಲುವು ದಾಖಲಿಸುವುದರ ಜೊತೆಗೆ 7ನೇ ಸ್ಥಾನಕ್ಕೇರಿದೆ. ಇತ್ತ ಡೆಲ್ಲಿ ವಿರುದ್ಧ ಸೋತ ರಾಜಸ್ಥಾನ್ ತನ್ನ ಪ್ಲೇಆಫ್‌ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್ ಟಾಪ್ ಆರ್ಡರ್​ನ ಅಬ್ಬರದ ಬ್ಯಾಟಿಂಗ್‌ ನೆರವಿನಿಂದಾಗಿ 194 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕರಿಬ್ಬರ ಅರ್ಧಶತಕದ ನೆರವಿನಿಂದ ಈ ಪಂದ್ಯವನ್ನು ಗೆದ್ದುಕೊಂಡಿತು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ಪರ ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್ ಮತ್ತು ನಾಯಕ ರಿಯಾನ್ ಪರಾಗ್ ಅಬ್ಬರದ ಇನ್ನಿಂಗ್ಸ್ ಆಡಿದರು. ವೈಭವ್ ಸೂರ್ಯವಂಶಿ ರಾಜಸ್ಥಾನಕ್ಕೆ ಭರ್ಜರಿ ಆರಂಭ ನೀಡಿದರು. ಆದರೆ ಅದರ ನಂತರವೂ ರಾಜಸ್ಥಾನ 200 ರನ್​ಗಳ ಗಡಿ ತಲುಪಲು ಸಾಧ್ಯವಾಗಲಿಲ್ಲ. ಯಶಸ್ವಿ ಜೈಸ್ವಾಲ್ 19 ರನ್‌ಗಳಿಗೆ ಔಟಾದರೆ, ವೈಭವ್ ಸೂರ್ಯವಂಶಿ ಮತ್ತು ಧ್ರುವ್ ಜುರೆಲ್ ಎರಡನೇ ವಿಕೆಟ್‌ಗೆ ಕೇವಲ 34 ಎಸೆತಗಳಲ್ಲಿ 70 ರನ್‌ಗಳ ಪಾಲುದಾರಿಕೆಯನ್ನು ನೀಡಿದರು.

ವೈಭವ್ ಸೂರ್ಯವಂಶಿ 21 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 5 ಬೌಂಡರಿಗಳೊಂದಿಗೆ 46 ರನ್ ಗಳಿಸಿ ಔಟಾದರು. ವೈಭವ್ ಔಟಾದ ನಂತರ, ಧ್ರುವ್ ಮತ್ತು ನಾಯಕ ರಿಯಾನ್ ಮೂರನೇ ವಿಕೆಟ್‌ಗೆ 41 ಎಸೆತಗಳಲ್ಲಿ 72 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ರಯಾನ್ ಪರಾಗ್ 40 ಎಸೆತಗಳಲ್ಲಿ 53 ರನ್‌ಗಳಿಗೆ ಔಟಾದರು. ಇಲ್ಲಿಂದ ರಾಜಸ್ಥಾನದ ಪತನ ಶುರುವಾಯಿತು. 30 ರನ್​ಗಳ ಅಂತರದಿಂದ ರಾಜಸ್ಥಾನ್ ತಂಡದ 6 ವಿಕೆಟ್​ಗಳು ಪತನಗೊಂಡವು. ದೆಹಲಿ ಪರ ಮಿಚೆಲ್ ಸ್ಟಾರ್ಕ್ 4 ವಿಕೆಟ್‌ ಪಡೆದರೆ, ಲುಂಗಿ ಎನ್‌ಗಿಡಿ ಮತ್ತು ಮಾಧವ್ ತಿವಾರಿ ತಲಾ 2 ವಿಕೆಟ್ ಪಡೆದರು.

ಈ ಗುರಿ ಬೆನ್ನಟ್ಟಿದ ಡೆಲ್ಲಿ ಪರ ಆರಂಭಿಕರಾದ ಅಭಿಷೇಕ್ ಹಾಗೂ ರಾಹುಲ್ ಮೊದಲ ವಿಕೆಟ್​ಗೆ 105 ರನ್​ಗಳ ಜೊತೆಯಾಟ ನೀಡಿದರು. ಅಭಿಷೇಕ್ 31 ಎಸೆತಗಳಲ್ಲಿ 51 ರನ್ ಬಾರಿಸಿ ಔಟಾದರೆ, ಅನುಭವಿ ಕೆಎಲ್ ರಾಹುಲ್ 42 ಎಸೆತಗಳಲ್ಲಿ 56 ರನ್​ಗಳ ಇನ್ನಿಂಗ್ಸ್ ಆಡಿದರು. ಕೊನೆಯಲ್ಲಿ ನಾಯಕನ ಇನ್ನಿಂಗ್ಸ್ ಆಡಿದ ಅಕ್ಷರ್ ಪಟೇಲ್ ಅಜೇಯ 34 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಕ್ಷರ್ ಜೊತೆಗೆ ಅಶುತೋಷ್ ಶರ್ಮಾ ಕೂಡ 18 ರನ್​ಗಳ ಅಜೇಯ ಇನ್ನಿಂಗ್ಸ್ ಆಡಿ ಗೆಲುವಿನ ರೂವಾರಿ ಎನಿಸಿಕೊಂಡರು.

Source link

ವಿಜಯ್ ಮತ್ತು ರಜನೀಕಾಂತ್ ನಡುವೆ ಭಿನ್ನಾಭಿಪ್ರಾಯ? ವಿಡಿಯೋ ನೋಡಿ

ನಟ ವಿಜಯ್ (Vijay) ತಮಿಳುನಾಡಿನ ಸಿಎಂ ಆಗಿದ್ದಾರೆ. ಆದರೆ ವಿಜಯ್ ಸಿಎಂ ಆದ ಬಳಿಕ ನಟ ರಜನೀಕಾಂತ್ ಅವರು ಡಿಎಂಕೆ ಮುಖಂಡ ಮಾಜಿ ಸಿಎಂ ಸ್ಟಾಲಿನ್ ಅವರ ಭೇಟಿಯಾಗಿ ಸಾಂತ್ವನ ಹೇಳಿದ್ದರು. ವಿಜಯ್ ಬಗ್ಗೆ ಪತ್ರಕರ್ತರು ಪ್ರಶ್ನೆ ಮಾಡಿದಾಗಲೂ ಪ್ರಶ್ನೆಗಳಿಗೆ ಉತ್ತರಿಸದೆ ಜಾರಿ ಕೊಂಡಿದ್ದರು. ವಿಜಯ್ ಬಗ್ಗೆ ಅವರ ವರ್ತನೆ ತುಸು ಅಸೂಯೆಯಿಂದ ಕೂಡಿರುವಂತೆ ತೋರಿತ್ತು. ಆದರೆ ಇದೀಗ ನಟ ರಜನೀಕಾಂತ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ವಿಜಯ್ ಬಗ್ಗೆ ತಮಗೆ ಯಾವುದೇ ಅಸೂಯೆ ಇಲ್ಲ ಎಂದಿದ್ದಾರೆ. ಮಾತ್ರವಲ್ಲದೆ ಇನ್ನೂ ಕೆಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ವಿವರಕ್ಕಾಗಿ ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕೊರಗಜ್ಜನಿಗೆ ತಲೆಬಾಗಿ ನಮಿಸಿದ ನಟಿ ರಚಿತಾ ರಾಮ್: ವಿಡಿಯೋ ನೋಡಿ

ನಟಿ ರಚಿತಾ ರಾಮ್ (Rachita Ram) ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೆಂಜನಪದವಿನ ಕೊರಗಜ್ಜ ಸನ್ನಿಧಿಗೆ ಕುಟುಂಬ ಸಮೇತ ಭೇಟಿ ನೀಡಿ, ಶನಿವಾರ ರಾತ್ರಿ ಹರಕೆಯ ಕೋಲ ಸೇವೆ ಸಲ್ಲಿಸಿದ್ದಾರೆ. ರಚಿತಾ ರಾಮ್ ಅಪ್ಪಟ ದೈವ ಭಕ್ತೆ ಆಗಿದ್ದು, ಇದೀಗ ಕೊರಗಜ್ಜನಿಗೆ ಸೇವೆ ಸಲ್ಲಿಸುವ ಮೂಲಕ ಹರಕೆ ತೀರಿಸಿದ್ದಾರೆ. ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿದ ಸುಂದರ ವಿಡಿಯೋ ಒಂದನ್ನು ಸಹ ನಟಿ ರಚಿತಾ ರಾಮ್ ತಮ್ಮ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಸ್ವೀಡನ್​​​​​ನಲ್ಲಿ ಮೋದಿಗೆ ‘ರಾಯಲ್ ಆರ್ಡರ್ ಆಫ್ ಪೋಲಾರ್ ಸ್ಟಾರ್, ಕಮಾಂಡರ್ ಗ್ರಾಂಡ್ ಕ್ರಾಸ್’ ಪ್ರಶಸ್ತಿ – Kannada News | PM Modi receives Sweden’s Royal Order of Polar Star, Commander Grand Cross; 31st global honour so far

ನವದೆಹಲಿ, (ಮೇ 17): ಪ್ರಧಾನಿ ನರೇಂದ್ರ ಮೋದಿ (PM Modi Modi) ಅವರು ಆರು ದಿನಗಳ ಐದು ರಾಷ್ಟ್ರಗಳ ಪ್ರವಾಸದಲ್ಲಿದ್ದು, ಯುಎಇ ಸೇರಿದಂತೆ ಐದು ದೇಶಗಳ ರಾಜತಾಂತ್ರಿಕ ಪ್ರವಾಸ ಕೈಗೊಂಡಿದ್ದಾರೆ. ಪಶ್ಚಿಮ ಏಷ್ಯಾದ ಯುದ್ಧದ ಭೀತಿಯ ನಡುವೆ ಇಂಧನ ಭದ್ರತೆ  ಹಾಗೂ ಯುರೋಪ್ ರಾಷ್ಟ್ರಗಳೊಂದಿಗೆ ರಕ್ಷಣೆ ಮತ್ತು ವ್ಯಾಪಾರ ಒಪ್ಪಂದಗಳನ್ನು ಬಲಪಡಿಸುವುದು ಈ ಭೇಟಿಯ ಮುಖ್ಯ ಗುರಿಯಾಗಿದೆ. ಯುಎಇ ಹಾಗೂ ನೆದರ್ಲ್ಯಾಂಡ್ ಭೇಟಿ ಬಳಿಕ ಇಂದು (ಮೇ 17) ಸ್ವೀಡನ್ ಗೆ (Sweden) ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವೀಡನ್‌ನ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಇದೇ ವೇಳೆ ಮೋದಿಗೆ ಸ್ವೀಡನ್‌ನ ಅತ್ಯುನ್ನತ ನಾಗರಿಕ ಗೌರವವಾದ ‘ರಾಯಲ್ ಆರ್ಡರ್ ಆಫ್ ಪೋಲಾರ್ ಸ್ಟಾರ್, ಕಮಾಂಡರ್ ಗ್ರಾಂಡ್ ಕ್ರಾಸ್’ (Sweden’s Royal Order of Polar Star, Commander Grand Cross) ಪ್ರಶಸ್ತಿ ನೀಡಿ ಗೌರವಿಸಲಾಯ್ತು

ಮೋದಿ ಅವರಿಗೆ ದೊರೆತ 31ನೇ ಜಾಗತಿಕ ಗೌರವ

ಎರಡು ದಿನಗಳ ಭೇಟಿಗಾಗಿ ಭಾನುವಾರ ಸ್ವೀಡನ್‌ಗೆ ಆಗಮಿಸಿದ ಮೋದಿ ಅವರನ್ನ ಸ್ವೀಡನ್‌ನ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಅವರು ಗೋಥೆನ್‌ಬರ್ಗ್ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡಿದ್ದು, ಬಳಿಕ ಉಭಯ ನಾಯಕರು ವ್ಯಾಪಾರ, ತಂತ್ರಜ್ಞಾನ, ರಕ್ಷಣೆ ಮತ್ತು ಇತರ ಪ್ರಮುಖ ಕ್ಷೇತ್ರಗಳ ಕುರಿತು ಚರ್ಚೆ ನಡೆಸಿದರು. ಇದೇ ವೇಳೆ ಮೋದಿಗೆ ರಾಯಲ್ ಆರ್ಡರ್ ಆಫ್ ಪೋಲಾರ್ ಸ್ಟಾರ್ ಕಮಾಂಡರ್ ಗ್ರ್ಯಾಂಡ್ ಕ್ರಾಸ್ ಪ್ರಶಸ್ತಿಯ ಪ್ರದಾನ ಮಾಡಲಾಯ್ತು. ರಾಯಲ್ ಆರ್ಡರ್ ಆಫ್ ಪೋಲಾರ್ ಸ್ಟಾರ್, ಕಮಾಂಡರ್ ಗ್ರ್ಯಾಂಡ್ ಕ್ರಾಸ್ ಎಂಬುದು ಸರ್ಕಾರದ ಮುಖ್ಯಸ್ಥರಿಗೆ ನೀಡುವ ಅತ್ಯುನ್ನತ ಮನ್ನಣೆ ಮತ್ತು ಗೌರವವಾಗಿದೆ. ಇನ್ನು ಇದು ಪ್ರಧಾನಿ ಮೋದಿ ಅವರಿಗೆ ದೊರೆತ 31ನೇ ಜಾಗತಿಕ ಗೌರವ ಇದಾಗಿದೆ.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ನೆದರ್‌ಲ್ಯಾಂಡ್ಸ್ ಭೇಟಿಯಿಂದ ಭಾರತಕ್ಕೆ ಏನೆಲ್ಲ ಲಾಭ? ಇಲ್ಲಿದೆ ಮಾಹಿತಿ

ಭಾರತದ ಆರ್ಥಿಕ ಅಭಿವೃದ್ಧಿ, ಸ್ವಾವಲಂಬನೆ ಮತ್ತು ಜಾಗತಿಕ ಪೂರೈಕೆ  ಬಲಪಡಿಸಲು ಮೋದಿಯವರ ಈ ಭೇಟಿ ಮೈಲಿಗಲ್ಲಾಗಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಕಳೆದ 2025 ರಲ್ಲಿ ಎರಡು ದೇಶಗಳ ನಡುವಿನ ವ್ಯಾಪಾರ 7.75 ಬಿಲಿಯನ್ ಡಾಲರ್ ತಲುಪಿತ್ತು. ಈಗ ಭಾರತದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ 280ಕ್ಕೂ ಹೆಚ್ಚು ಸ್ವೀಡಿಷ್ ಕಂಪನಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ.

ಸ್ವೀಡನ್‌ನ ರಕ್ಷಣಾ ದೈತ್ಯ ಕಂಪನಿ ‘ಸಾಬ್’ (Saab), ಹರಿಯಾಣದ ಝಜ್ಜರ್‌ನಲ್ಲಿ ಕಾರ್ಲ್-ಗಸ್ಟಾಫ್ ಯುದ್ಧೋಪಕರಣ ಉತ್ಪಾದನಾ ಘಟಕವನ್ನು ನಿರ್ಮಿಸುತ್ತಿದೆ. ಇದು ಶೇ. 100 ರಷ್ಟು ನೇರ ವಿದೇಶಿ ಹೂಡಿಕೆ (FDI) ಹೊಂದಿರುವ ಭಾರತದ ಮೊದಲ ರಕ್ಷಣಾ ಉತ್ಪಾದನಾ ಯೋಜನೆಯಾಗಿದೆ. ಇದು ‘ಮೇಕ್ ಇನ್ ಇಂಡಿಯಾ’ ಮತ್ತು ತಂತ್ರಜ್ಞಾನ ವರ್ಗಾವಣೆಯನ್ನು (Technology Transfer) ಜಗತ್ತಿನಲ್ಲೇ ಅತ್ಯಂತ ಬಲಿಷ್ಠಗೊಳಿಸಲಿದೆ. ಇನ್ನು ತನ್ನ ಜಿಡಿಪಿಯ ಶೇ. 3ಕ್ಕಿಂತ ಹೆಚ್ಚು ಹಣವನ್ನು ರಿಸರ್ಚ್‌ಗೆ ಖರ್ಚು ಮಾಡುವ ಸ್ವೀಡನ್, ಈಗ ಭಾರತದೊಂದಿಗೆ ಕೃತಕ ಬುದ್ಧಿಮತ್ತೆ (AI), ಕ್ವಾಂಟಮ್, ಸೆಮಿಕಂಡಕ್ಟರ್ ಮತ್ತು 6G ಕ್ಷೇತ್ರಗಳಲ್ಲಿ ಕೈಜೋಡಿಸುತ್ತಿದೆ.

2025ರಲ್ಲಿ 7.75 ಶತಕೋಟಿ ಅಮೆರಿಕನ್ ಡಾಲರ್‌ ತಲುಪಿದ್ದ ದ್ವಿಪಕ್ಷೀಯ ವ್ಯಾಪಾರವನ್ನು ಮತ್ತಷ್ಟು ಹೆಚ್ಚಿಸಲು ಹೊಸ ಸಹಕಾರ ಮಾರ್ಗಗಳ ಬಗ್ಗೆ ಮಾತುಕತೆಗಳಾಗಿದ್ದವು. ಕೃತಕ ಬುದ್ಧಿಮತ್ತೆ (AI), ಉದಯೋನ್ಮುಖ ತಂತ್ರಜ್ಞಾನಗಳು, ನವೋದ್ಯಮಗಳು (ಸ್ಟಾರ್ಟ್‌ಅಪ್‌ಗಳು), ರಕ್ಷಣೆ, ಬಾಹ್ಯಾಕಾಶ, ಹವಾಮಾನ ವೈಪರೀತ್ಯ ನಿಯಂತ್ರಣ ಮತ್ತು ಜನರ ನಡುವಿನ ಬಾಂಧವ್ಯವನ್ನು ವೃದ್ಧಿಸುವ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಉಭಯ ನಾಯಕರು ಒತ್ತು ನೀಡಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:49 pm, Sun, 17 May 26

Source link

ನದಿಯಲ್ಲಿ ಮುಳುಗಿ ನಿರ್ಮಾಪಕ ಸಾವು, ಆತ್ಮಹತ್ಯೆ ಶಂಕೆ – Kannada News | Tamil Movie producer K Rajan died drowning in river

ಸಿನಿಮಾ ನಿರ್ಮಾಪಕರು (Producer) ಸಂಕಷ್ಟದಲ್ಲಿದ್ದಾರೆ ಎಂಬ ಚರ್ಚೆ ಚಾಲ್ತಿಯಲ್ಲಿರುವಾಗಲೇ ತಮಿಳು ಚಿತ್ರರಂಗದ ಹಿರಿಯ ಮತ್ತು ಜನಪ್ರಿಯ ನಿರ್ಮಾಪಕರೊಬ್ಬರು ನಿಧನ ಹೊಂದಿದ್ದು, ಅವರ ಸಾವನ್ನು ಆತ್ಮಹತ್ಯೆ ಎಂದು ಬಲವಾಗಿ ಶಂಕಿಸಲಾಗಿದೆ. ತಮ್ಮ ನೇರ ಮಾತುಗಳು ಮತ್ತು ವಿವಾದಾತ್ಮಕ ಹೇಳಿಕೆಗಳಿಗೆ ಹೆಸರುವಾಸಿಯಾಗಿದ್ದ ತಮಿಳು ಚಿತ್ರರಂಗದ ಹಿರಿಯ ನಿರ್ಮಾಪಕ ಕೆ ರಾಜನ್ ಅವರು ಇಂದು (ಮೇ 17) ನಿಧನ ಹೊಂದಿದ್ದಾರೆ. ಅವರು ಅಡ್ಯಾರ್ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.

ತಮಿಳು ಮಾಧ್ಯಮಗಳ ವರದಿಯಂತೆ, ಕೆ ರಾಜನ್ ಚೆನ್ನೈನ ಅಡ್ಯಾರ್ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಅವರ ಮೃತದೇಹವನ್ನು ಹೊರತೆಗೆದು ಆಸ್ಪತ್ರೆಗೆ ರವಾನಿಸಿದ್ದಾರೆ. ಇದು ಆತ್ಮಹತ್ಯೆಯೋ ಅಥವಾ ಆಕಸ್ಮಿಕ ಸಾವೋ ಎಂಬ ಬಗ್ಗೆ ಚೆನ್ನೈ ಪೊಲೀಸರು ತನಿಖೆ ನಡೆಸಲಿದ್ದಾರೆ. ತಮಿಳು ಚಿತ್ರರಂಗದ ಪ್ರಮುಖ ವ್ಯಕ್ತಿಯಾಗಿದ್ದ ಕೆ. ರಾಜನ್ ಅವರು ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಯೂಟ್ಯೂಬ್ ಚಾನೆಲ್‌ಗಳು ಮತ್ತು ಮಾಧ್ಯಮಗಳೊಂದಿಗೆ ಆಗಾಗ್ಗೆ ಮಾತನಾಡುತ್ತಿದ್ದರು. ಖುದ್ದು ತಮ್ಮನ್ನೂ ಸೇರಿದಂತೆ ನಿರ್ಮಾಪಕರು ಸಮಸ್ಯೆಯಲ್ಲಿದ್ದಾರೆ ಎಂದು ಹೇಳುತ್ತಿದ್ದರು.

ಕೆ ರಾಜನ್ ಅವರು 1980ರ ದಶಕದಿಂದಲೂ ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರು 1983 ರಲ್ಲಿ ಸುರೇಶ್ ನಟನೆಯ ‘ಬ್ರಹ್ಮಚಾರಿಗಳ್’ ಚಿತ್ರದ ಮೂಲಕ ನಿರ್ಮಾಪಕರಾಗಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ತಮ್ಮ ‘ಗಣೇಶ್ ಸಿನೆ ಆರ್ಟ್ಸ್’ ಬ್ಯಾನರ್ ಅಡಿಯಲ್ಲಿ ಹಲವಾರು ಚಿತ್ರಗಳನ್ನು ನಿರ್ಮಿಸಿದ ಅವರು, ಅಬ್ಬಾಸ್ ಮತ್ತು ಕುನಾಲ್ ನಟನೆಯ ‘ಉನರ್ಚಿಗಳ್’ ಸೇರಿದಂತೆ ಕೆಲವು ಚಿತ್ರಗಳನ್ನು ನಿರ್ದೇಶನ ಸಹ ಮಾಡಿದ್ದರು. ಜೊತೆಗೆ ಕೆಲವಾರು ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದಾರೆ. ಚಲನಚಿತ್ರ ನಿರ್ಮಾಣದ ಹೊರತಾಗಿ, ಅವರು ಚಲನಚಿತ್ರ ವಾಣಿಜ್ಯ ವಲಯದಲ್ಲೂ ಪ್ರಭಾವಶಾಲಿ ಪಾತ್ರ ವಹಿಸಿದ್ದರು. 2000ನೇ ಇಸವಿಯಲ್ಲಿ ಅವರು ಚೆನ್ನೈ ಚಲನಚಿತ್ರ ವಿತರಕರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ:‘ಜನ ನಾಯಗನ್’ ಸಿನಿಮಾ ಬಿಡುಗಡೆ ತಡೆದಿದ್ದು ಯಾರು? ಮಾಹಿತಿ ನೀಡಿದ ನಿರ್ಮಾಪಕ

ಅವರ ಮಗ ಪ್ರಭುಕಾಂತ್ ಕೂಡ ನಟನಾಗಿ ತಮಿಳು ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ಕೆ ರಾಜನ್ ಅವರು ವಿಶೇಷವಾಗಿ ಆಡಿಯೋ ಬಿಡುಗಡೆ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಮ್ಮ ನೇರ ಮತ್ತು ನಿರ್ಭೀತ ಭಾಷಣಗಳಿಗೆ ಹೆಸರುವಾಸಿಯಾಗಿದ್ದರು. ಅವರು ತಮಿಳು ಚಿತ್ರರಂಗ ಎದುರಿಸುತ್ತಿರುವ ಹೋರಾಟಗಳು, ನಿರ್ಮಾಪಕರ ಆರ್ಥಿಕ ನಷ್ಟ, ನಟರ ಗಗನಕ್ಕೇರುತ್ತಿರುವ ಸಂಭಾವನೆ ಮತ್ತು ಚಿತ್ರರಂಗದಲ್ಲಿನ ಅವ್ಯವಸ್ಥೆಗಳ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿದ್ದರು. ಅವರ ಮುಕ್ತ ಅಭಿಪ್ರಾಯಗಳು ವೈರಲ್ ಆಗುತ್ತಿರುತ್ತಿದ್ದವು.

85ನೇ ವಯಸ್ಸಿನಲ್ಲಿ ಇಂತಹ ಹಿರಿಯ ವ್ಯಕ್ತಿಯೊಬ್ಬರ ದುರಂತ ಅಂತ್ಯವು ಚಿತ್ರರಂಗದಲ್ಲಿ ವ್ಯಾಪಕ ಚರ್ಚೆ ಮತ್ತು ಶೋಕವನ್ನು ಉಂಟುಮಾಡಿದೆ. ಅವರ ನಿಧನಕ್ಕೆ ಚಿತ್ರರಂಗದ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಲ್ಲೆಲ್ಲೋ ಯುದ್ಧ ನಡೀತಿದ್ರೆ ಇಲ್ಯಾಕೆ ಚಿನ್ನ ಖರೀದಿ ಮಾಡಬಾರದು? ಬಂಗಾರ ಖರೀದಿ ನಿಲ್ಲಿಸಿದ್ರೆ ದೇಶಕ್ಕಾಗುವ ಲಾಭವೇನು? – Kannada News | How Economic Crises and Wars Impact Gold Prices, What Benefits if Stop purchase gold

ಬೆಂಗಳೂರು, (ಮೇ 17): ಯುದ್ಧದ (War) ಬಿಕ್ಕಟ್ಟಿನಿಂದ ದೇಶದ ಆರ್ಥಿಕ ದೃಷ್ಠಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಪೆಟ್ರೋಲ್ ಡಿಸೇಲ್ , ಅಡುಗೆ ಎಣ್ಣೆ ಹಾಗೂ ಚಿನ್ನವನ್ನ ಖರೀದಿ ಮಾಡೋದನ್ನ ನಿಲ್ಲಿಸಿ, ಅನಾವಶ್ಯಕವಾಗಿ ಚಿನ್ನ ಖರೀದಿ ಬೇಡ ಎಂದು ಕರೆ ನೀಡಿದ್ದಾರೆ. ಹೌದು.. ಗಲ್ಫ್ ರಾಷ್ಟ್ರಗಳ ಯುದ್ಧದ ಎಫೆಕ್ಟ್ ದೇಶದ ಆರ್ಥಿಕ ಸಂಕಷ್ಟಕ್ಕೆ ಕಾರವಾಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಮುಂದಿನ ವರ್ಷ ಗೋಲ್ಡ್ ಖರೀದಿ ಕಡಿಮೆ ಮಾಡಿ, ಅಡುಗೆ ಎಣ್ಣೆ ಮಿತವಾಗಿ ಬಳಸಿ, ಪೆಟ್ರೋಲ್ ಡಿಸೇಲ್ ಕಡಿಮೆ ಬಳಸಿ ಅವಶ್ಯಕತೆ ಇದ್ರೆ ಮಾತ್ರ ಕಾರು ಬಳಸಿ ಇಲ್ಲದೆ ಇದ್ರೆ ಸಾರ್ವಜನಿಕ ಸಾರಿಗೆ ಬಸ್ ಮೆಟ್ರೋ ಬಳಕೆಗೆ ಕರೆ ನೀಡಿದ್ದು ಪಿಎಂ ಸಂದೇಶವನ್ನು ಕೆಲವರು ಸ್ವಾಗತಿಸಿದ್ರೆ, ಇನ್ನೊಂದೆಡೆ ಟೀಕೆಗಳು ಸಹ ವ್ಯಕ್ತವಾಗುತ್ತಿವೆ. ಹಾಗಾದ್ರೆ, ಚಿನ್ನ ಖರೀದಿ ಯುದ್ಧಕ್ಕೆ ಏನು ಸಂಬಂಧ? ಅಲ್ಲೆಲ್ಲೋ ಯುದ್ಧ ನಡೀತಿದ್ರೆ ಇಲ್ಯಾಕೆ ಚಿನ್ನ ಖರೀದಿ ಮಾಡಬಾರದು? ಬಂಗಾರ ಖರೀದಿ ನಿಲ್ಲಿಸಿದ್ರೆ ದೇಶಕ್ಕಾಗುವ ಲಾಭವೇನು? ಎನ್ನುವ ಡಿಟೇಲ್ಸ್ ಇಲ್ಲಿದೆ ನೋಡಿ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯಾದ್ಯಂತ ವರುಣನ ರೌದ್ರಾವತಾರ: ಸಿಡಿಲಿಗೆ ಇಬ್ಬರು ಬಲಿ; ಮರ-ಕಂಬಗಳು ಬಿದ್ದು ಭಾರೀ ಅವಾಂತರ – Kannada News | Karnataka heavy rain and lightning havoc 3 dead roads flooded trees uprooted

ಬೆಂಗಳೂರು, ಮೇ 17: ರಾಜ್ಯದ ಹಲವೆಡೆ ಮಳೆ ಆರ್ಭಟಿಸುತ್ತಿದೆ. ಮಳೆ (Rain) ಗಾಳಿಗೆ ಜನ ತತ್ತರಿಸಿ ಹೋಗಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸಗೂರಿನಲ್ಲಿ ಸಿಡಿಲು ಬಡಿದು 45 ವರ್ಷದ ಕರಿಯಪ್ಪ ಎಂಬುವವರು ಮೃತಪಟ್ಟಿದ್ದಾರೆ. ಟ್ರ್ಯಾಕ್ಟರ್‌ಗೆ ಗೊಬ್ಬರ ತುಂಬುತ್ತಿದ್ದಾಗ ಸಿಡಿಲು ಬಡಿದಿದ್ದು, ಮತ್ತೊಬ್ಬರಿಗೆ ಗಾಯವಾಗಿದೆ. ಧಾರವಾಡದ ಕವಲಗೇರಿಯಲ್ಲಿ 36 ವರ್ಷದ ಜಯಶ್ರಿ ಎಂಬುವವರು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ (death).

ಸಿಡಿಲು ಬಡಿದು ವ್ಯಕ್ತಿ ಸಾವು: ಮತ್ತೊಬ್ಬರಿಗೆ ಗಂಭೀರ ಗಾಯ

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕೋಮಲಾಪುರ ಗ್ರಾಮದಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ವ್ಯಕ್ತಿಯನ್ನು ಕೋಮಲಾಪುರ ಗ್ರಾಮದ ಕರಿಯಪ್ಪ ಗೆನ್ನಾಕಿಹಾಳ್ (45) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ವ್ಯಕ್ತಿ ಬಸವರಾಜ್ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Karnataka Weather Forecast: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆ ಎಚ್ಚರಿಕೆ, ಎಲ್ಲೆಲ್ಲಿ?

ಗ್ರಾಮದಲ್ಲಿ ಟ್ರ್ಯಾಕ್ಟರ್‌ಗೆ ಗೊಬ್ಬರ ತುಂಬುತ್ತಿದ್ದ ವೇಳೆ ಏಕಾಏಕಿ ಸಿಡಿಲು ಬಡಿದಿದೆ. ಸಿಡಿಲಿನ ತೀವ್ರತೆಗೆ ಕರಿಯಪ್ಪ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಜೊತೆಗಿದ್ದ ಬಸವರಾಜ್‌ಗೂ ಸಿಡಿಲು ಬಡಿದು ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುದುಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಮಹಿಳೆ ಸಾವು

ಇನ್ನು ಧಾರವಾಡ ಜಿಲ್ಲೆಯಲ್ಲಿ ಸುರಿದ ಭಾರೀ ಸಿಡಿಲು ಸಹಿತ ಮಳೆಗೆ ಓರ್ವ ಮಹಿಳೆ ಬಲಿಯಾಗಿದ್ದಾರೆ. ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ. ಮೃತ ಮಹಿಳೆಯನ್ನು ಕವಲಗೇರಿಯ ಜಯಶ್ರೀ ಶಿರಸಂಗಿ (36) ಎಂದು ಗುರುತಿಸಲಾಗಿದೆ. ಪತಿ ಹನುಮಂತಪ್ಪ ಶಿರಸಂಗಿ ಜೊತೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಸಿಡಿಲು ಬಡಿದಿದೆ. ಸಿಡಿಲಿನ ತೀವ್ರತೆಗೆ ಜಯಶ್ರೀ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತಿ ಹನುಮಂತಪ್ಪ ಅವರಿಗೂ ಗಾಯಗಳಾಗಿದ್ದು, ಅವರನ್ನು ಕೂಡಲೇ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಧಾರವಾಡ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಡಿಲು ಬಡಿದು ಮೂರು ಹಸುಗಳು ಸಾವು

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಮಂಗಳವಾಡ ಗ್ರಾಮದಲ್ಲಿ ಸಿಡಿಲು ಬಡಿದು ಮೂರು ಹಸುಗಳು ಸ್ಥಳದಲ್ಲೇ ಮೃತಪಟ್ಟಿವೆ. ಜೊತೆಗೆ ಮಂಗಳವಾಡದ ಸರ್ಕಾರಿ ಪ್ರೌಢಶಾಲೆ ಕಟ್ಟಡಕ್ಕೂ ಹಾನಿಯಾಗಿದೆ. ಮೃತಪಟ್ಟ ಹಸುಗಳು ಗ್ರಾಮದ ರೋಮನ್ ಬಾವಟಿಸ್ ದಾಲ್ಮತ್ ಎಂಬುವವರಿಗೆ ಸೇರಿದ್ದಾಗಿವೆ. ಸಿಡಿಲಿನ ತೀವ್ರತೆಗೆ ಸರ್ಕಾರಿ ಪ್ರೌಢಶಾಲೆ ಕಟ್ಟಡದ ಮೇಲ್ಛಾವಣಿಗೂ ಹಾನಿಯಾಗಿದೆ.

ಮಳೆ ಆರ್ಭಟ: ಉರುಳಿದ ಮರ, ರಸ್ತೆ ಜಲಾವೃತ; ಜನಜೀವನ ಅಸ್ತವ್ಯಸ್ತ

ರಾಜ್ಯದ ಹಲವೆಡೆ ಭಾರಿ ಗಾಳಿ-ಮಳೆ ಅಬ್ಬರಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದು, ಹಲವೆಡೆ ರಸ್ತೆಗಳು ಜಲಾವೃತಗೊಂಡಿವೆ. ಭಾರಿ ಗಾಳಿ ಮಳೆಗೆ ಹುಬ್ಬಳ್ಳಿಯ ಮಂಜುನಾಥ ನಗರ ಹಾಗೂ ಆನಂದ ನಗರ ರಸ್ತೆಯಲ್ಲಿ ಮರ ಉರುಳಿ ಬಿದ್ದಿದೆ. ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಆಗಮಿಸಿದ ಪಾಲಿಕೆ ಸಿಬ್ಬಂದಿ ಮರ ತೆರವುಗೊಳಿಸಿದ್ದಾರೆ.

ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ಹೆಚ್ಚಿದ ಗಾಳಿಯ ವೇಗ: ಲಂಗರು ಹಾಕಿದ ನೂರಾರು ಬೋಟ್​​​​​ ಗಳು

ಇನ್ನು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಭಾರಿ ಮಳೆಗೆ ರಸ್ತೆಗಳು ಜಲಾವೃತಗೊಂಡಿವೆ. ಕೆಂಚಲಾಪುರ ಓಣಿ, ಬನಶಂಕರಿ ದೇಗುಲದ ರಸ್ತೆ ಸಂಪೂರ್ಣ ನೀರಿನಿಂದ ಆವೃತವಾಗಿವೆ. ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರಿ ಗಾಳಿಗೆ ನಗರದ ಮಕಾನಗಲ್ಲಿ, ಕೆ.ಎಚ್.ಪಾಟೀಲ್ ಜಿಲ್ಲಾ ಕ್ರೀಡಾಂಗಣ ಬಳಿ ಬೃಹತ್ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ಇಂದು ರವಿವಾರ ಮಾರ್ಕೆಟ್ ಬಂದ್ ಇದ್ದ ಕಾರಣ ಮಕಾನಗಲ್ಲಿಯಲ್ಲಿ ದೊಡ್ಡ ದುರಂತ ತಪ್ಪಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version