Horoscope Today 16th​​ March​: ಇಂದು ಈ ರಾಶಿಯವರ ಅಡೆತಡೆಗಳು ನಿವಾರಣೆ

Horoscope Today 16th​​ March​: ಇಂದು ಈ ರಾಶಿಯವರ ಅಡೆತಡೆಗಳು ನಿವಾರಣೆ

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್​ 1​​​​6, ಸೋಮವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಪಾಲ್ಗುಣ ಮಾಸ, ಶಿಶಿರ ಋತು, ಕೃಷ್ಣ ಪಕ್ಷ ದ್ವಾದಶಿ, ಧನಿಷ್ಠ ನಕ್ಷತ್ರ, ಶಿವಯೋಗ ಮತ್ತು ತೈತಲ ಕರಣವನ್ನು ಒಳಗೊಂಡಿದೆ.

ಬೆಳಿಗ್ಗೆ 7 ಗಂಟೆ 56 ನಿಮಿಷದಿಂದ 9 ಗಂಟೆ 27 ನಿಮಿಷದವರೆಗೆ ರಾಹುಕಾಲ ಇರುತ್ತದೆ. ಹಾಗೆಯೇ 9 ಗಂಟೆ 27 ನಿಮಿಷದಿಂದ 10 ಗಂಟೆ 58 ನಿಮಿಷದವರೆಗೆ ಸಂಕಲ್ಪ ಕಾಲ ಅಥವಾ ಶುಭಕಾಲವಿರುತ್ತದೆ. ಇದು ಸೋಮ ಪ್ರದೋಷದ ಪರ್ವ ದಿನವಾಗಿದೆ. ಪೆರ್ಡೂರಿನಲ್ಲಿ ರಥೋತ್ಸವ, ಧಾರವಾಡದಲ್ಲಿ ಮೃತ್ಯುಂಜಯ ಶ್ರೀಗಳ ವರ್ಧಂತ್ಯೋತ್ಸವ ಮತ್ತು ರಾಷ್ಟ್ರೀಯ ಲಸಿಕಾ ದಿನದ ಆಚರಣೆಯಿದೆ. ರವಿ ಮೀನ ರಾಶಿಯಲ್ಲಿ ಮತ್ತು ಚಂದ್ರ ಕುಂಭ ರಾಶಿಯಲ್ಲಿ ಸಂಚಾರ ಮಾಡುತ್ತಾರೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

 

 

 

Source link

ಸಮುದ್ರ ತೀರದಲ್ಲಿ ರಶ್ಮಿಕಾ-ಆನಂದ್ ದೇವರಕೊಂಡ ಆಹ್ವಾನಿಸಿದ್ದು ಯಾರನ್ನ? ಫನ್ ಫೋಟೋ ವೈರಲ್

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ (Vijay Devarakonda) ವಿವಾಹ ಆಗಿ ಹಾಯಾಗಿದ್ದಾರೆ. ಇವರು ಮದುವೆಗೂ ಮೊದಲು ಅನೇಕ ಕಡೆಗಳಲ್ಲಿ ಸುತ್ತಾಟ ನಡೆಸಿದ್ದರು. ವಿಶೇಷ ಎಂದರೆ ಈ ರೀತಿ ಸುತ್ತಾಟ ನಡೆಸುವಾಗ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ಜೊತೆ ಆನಂದ್ ದೇವರಕೊಂಡ ಕೂಡ ಇರುತ್ತಿದ್ದರು. ರಶ್ಮಿಕಾ ಹಾಗೂ ಆನಂದ್​ದು ಅತ್ತಿಗೆ-ಬಾವ ಸಂಬಂಧ. ಇವರ ಸಂಬಂಧ ಕ್ರೇಜಿ ಆಗಿದೆ ಎಂದು ಹೇಳಿಕೊಂಡಿದ್ದಾರೆ.

ವಿಜಯ್, ರಶ್ಮಿಕಾ ಹಾಗೂ ಆನಂದ್ ಈ ಮೊದಲು ಅನೇಕ ಕಡೆಗಳಲ್ಲಿ ಸುತ್ತಾಟ ನಡೆಸಲು ತೆರಳಿದ್ದು ಇದೆ. ಈ ವೇಳೆ ವಿಜಯ್ ದೇವರಕೊಂಡ ಅವರು ಒಂದು ಫನ್​ ಫೋಟೋನ ಕ್ಲಿಕ್ ಮಾಡಿದ್ದರು. ಈ ಫೋಟೋದಲ್ಲಿ ರಶ್ಮಿಕಾ ಹಾಗೂ ಆನಂದ್ ಸಮುದ್ರ ನೋಡುತ್ತಾ ನಿಂತಿದ್ದಾರೆ. ಅಲ್ಲದೆ, ಸಿಳ್ಳೆ ಹೊಡೆಯುತ್ತಾ ಇದ್ದಾರೆ. ಈ ಪೋಸ್ ನೋಡಿ ವಿಜಯ್ ದೇವರಕೊಂಡ ಅವರು ಒಂದು ಫನ್​ ಕಮೆಂಟ್​​ನ ಪಾಸ್ ಮಾಡಿದ್ದರಂತೆ. ಜೀವನದಲ್ಲಿ ಯಾವಾಗಲೂ ಇಷ್ಟೇ ಕ್ರೇಜಿ ಆಗಿರಬೇಕು ಎಂದು ರಶ್ಮಿಕಾ ಹೇಳಿದ್ದಾರೆ.

‘ಮೀನನ್ನು ಕರೆಯುವಂತೆ ಕಾಣಿಸುತ್ತಿದೆ ಎಂದು ವಿಜಯ್ ದೇವರಕೊಂಡ ಅವರು ಹೇಳಿದ್ದರು’ ಎಂದು ವಿಜಯ್ ದೇವರಕೊಂಡ ಫನ್ ಕಮೆಂಟ್ ಮಾಡಿದ್ದರಂತೆ. ಈ ಫೋಟೋನ ಹಂಚಿಕೊಂಡು, ಆನಂದ್​​ಗೆ ರಶ್ಮಿಕಾ ಬರ್ತ್​​ಡೇ ವಿಶ್ ಮಾಡಿದ್ದಾರೆ. ‘ಆನಂದಾ… ಹ್ಯಾಪಿ ಹ್ಯಾಪಿ ಹ್ಯಾಪಿಯೆಸ್ಟ್ ಬರ್ತ್​​ಡೇ. ನೀನು ಶೂಟಿಂಗ್ ಕಾರಣಕ್ಕೆ ಹೊರಕ್ಕೆ ಇರುವುದರಿಂದ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇವೆ’ ಎಂದು ರಶ್ಮಿಕಾ ಹೇಳಿದ್ದಾರೆ.

ಇದನ್ನೂ ಓದಿ: ರಶ್ಮಿಕಾ-ವಿಜಯ್ ದೇವರಕೊಂಡ ವಿವಾಹಕ್ಕೆ ಅಂತಿಮವಾಗಿ ಖರ್ಚಾಗಿದ್ದೆಷ್ಟು?

ವಿಜಯ್ ದೇವರಕೊಂಡ ಸಹೋದರ ಆನಂದ್ ಅವರು ಕೆಲವು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದಾರೆ. ವಿಜಯ್ ಹೀರೋ ಆಗಿ ಮಿಂಚಿದ ಬಳಿಕ ಆನಂದ್ ಕೂಡ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಆನಂದ್ ನಟನೆಯ ಸ್ಯಾಡ್ ಎಂಡಿಂಗ್ ಇರೋ ‘ಬೇಬಿ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದ ಬಳಿಕ ಆನಂದ್ ಜನಪ್ರಿಯತೆ ಹೆಚ್ಚಿತು. ಅವರು ಸದ್ಯ ಆಯ್ದ ಕೆಲವು ಪ್ರಾಜೆಕ್ಟ್​​ಗಳನ್ನು ಒಪ್ಪಿ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

200ಕ್ಕೂ ಹೆಚ್ಚು ಹೋಟೆಲ್‌ ಸಿಬ್ಬಂದಿಯ ಕೆಲಸಕ್ಕೂ ಕುತ್ತು: ಸಂಬಳ ಕಡಿತ, ಉದ್ಯೋಗ ಕಳೆದುಕೊಳ್ಳುವ ಆತಂಕ

ಬೆಂಗಳೂರು, ಮಾರ್ಚ್ 16: ಕರ್ನಾಟಕದಲ್ಲಿ (Karnataka) ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರಗೊಂಡಿದ್ದು, ಹೋಟೆಲ್ ಉದ್ಯಮ (Hotel Business) ಗಂಭೀರ ಸಂಕಷ್ಟಕ್ಕೆ ಸಿಲುಕಿದೆ. ಗಲ್ಫ್ ಪ್ರದೇಶದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಕಮರ್ಷಿಯಲ್ ಗ್ಯಾಸ್ ಪೂರೈಕೆ ವ್ಯತ್ಯಯಗೊಂಡಿದ್ದು, ಹಲವು ಹೋಟೆಲ್‌ಗಳು ಕಾರ್ಯಾಚರಣೆ ನಡೆಸಲು ಸಾಧ್ಯವಾಗದೆ ಬಾಗಿಲು ಮುಚ್ಚುವ ಪರಿಸ್ಥಿತಿ ಎದುರಾಗಿದೆ. ಕೆಲ ಹೋಟೆಲ್‌ಗಳು ಸೌದೆ ಒಲೆಗಳನ್ನು ಬಳಸಿಕೊಂಡು ಸೀಮಿತ ಮೆನುಗಳೊಂದಿಗೆ ಆಹಾರ ತಯಾರಿಸುತ್ತಿದ್ದರೆ, ಇನ್ನೂ ಕೆಲವು ಸಂಪೂರ್ಣವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿವೆ.

ಗ್ಯಾಸ್ ಸಿಲಿಂಡರ್ ಸಿಗದೆ ಹೋಟೆಲ್ ಉದ್ಯಮಿಗಳು ಕಂಗಾಲಾಗಿದ್ದಾರೆ. ಹಣ ಕೊಟ್ಟರೂ ಸಿಲಿಂಡರ್ ಸಿಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಗೃಹಬಳಕೆ ಸಿಲಿಂಡರ್ ಬಳಸುವುದಕ್ಕೂ ನಿಯಮಗಳ ಅಡ್ಡಿಯಿದೆ. ಇನ್ನೊಂದೆಡೆ ಸೌದೆ ಒಲೆಗಳನ್ನು ಬಳಸಲು ಬೇಕಾದಷ್ಟು ಜಾಗವೂ ಲಭ್ಯವಿಲ್ಲದ ಕಾರಣ ಹೋಟೆಲ್ ಮಾಲೀಕರು ದಿಕ್ಕೇ ತೋಚದ ಸ್ಥಿತಿಗೆ ತಲುಪಿದ್ದಾರೆ.

ರಾಜ್ಯದ ಹಲವೆಡೆ ಹೋಟೆಲ್‌ಗಳು ಬಂದ್

ಬೆಂಗಳೂರಿನ ಗಾಂಧಿನಗರದಲ್ಲಿರುವ ಐಡಿಸಿ ಹೋಟೆಲ್, ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿರುವ ಹೋಳಿಗೆ ಮನೆ, ಬಸವನಗುಡಿಯ ಬೈಟು ಕಾಫಿ ಹೋಟೆಲ್, ಆನಂದರಾವ್ ಸರ್ಕಲ್‌ನ ಕೃಷ್ಣಸಾಗರ ಹೋಟೆಲ್ ಮತ್ತು ಬಸವನಗುಡಿಯ ದೇವೇಗೌಡ ಅಪ್ಪಾಜಿ ಕ್ಯಾಂಟೀನ್ ಸೇರಿದಂತೆ ಹಲವು ಹೋಟೆಲ್‌ಗಳು ಬಾಗಿಲು ಮುಚ್ಚಿವೆ.

ಇದೇ ರೀತಿ ಚಾಮರಾಜನಗರ ಜಿಲ್ಲೆಯ ಒಂದರಲ್ಲೇ 18ಕ್ಕೂ ಹೆಚ್ಚು ಹೋಟೆಲ್‌ಗಳು ಕಾರ್ಯಾಚರಣೆ ಸ್ಥಗಿತಗೊಳಿಸಿವೆ. ಚನ್ನಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ವೆಂಕಟಾದ್ರಿ ಹೋಟೆಲ್, ಧಾರವಾಡದ 100 ವರ್ಷಗಳ ಇತಿಹಾಸವಿರುವ ಬಾಂಬೆ ರೆಸ್ಟೋರೆಂಟ್, ಶಿವಮೊಗ್ಗ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ರಾಜಭವನ ಹೋಟೆಲ್, ಸಕಲೇಶಪುರದ ಮೈತ್ರಿ ಹಾಗೂ ಕರ್ನಾಟಕ ಹೋಟೆಲ್‌ಗಳು, ಯಾದಗಿರಿ ಬಸ್ ನಿಲ್ದಾಣದ ಬಳಿ ಇರುವ ಗುರುಮೂರ್ತಿ ಖಾನಾವಳಿ ಮತ್ತು ತುಮಕೂರಿನ ಅಂತರಸನಹಳ್ಳಿ ಇಂದಿರಾ ಕ್ಯಾಂಟೀನ್ ಕೂಡ ಸಿಲಿಂಡರ್ ಕೊರತೆಯಿಂದ ಬಂದ್ ಆಗಿವೆ.

ಇದೇ ರೀತಿಯಾಗಿ ಇನ್ನೂ ನೂರಾರು ಹೋಟೆಲ್‌ಗಳು ಸಿಲಿಂಡರ್ ಸಿಗದೆ ಅನಿವಾರ್ಯವಾಗಿ ಶಟರ್ ಎಳೆಯಬೇಕಾದ ಪರಿಸ್ಥಿತಿಗೆ ತಲುಪಿವೆ. ಕೆಲವರು ಸಿಲಿಂಡರ್ ಸಿಗದೆ ಹೋಟೆಲ್ ಮುಚ್ಚಿದರೆ, ಇನ್ನೂ ಕೆಲವರು ಕಾಳಸಂತೆಯಲ್ಲಿ ದುಪ್ಪಟ್ಟು ಹಣ ನೀಡಿ ಹೋಟೆಲ್ ನಡೆಸುತ್ತಿದ್ದಾರೆ.

ಐದು ದಿನದಲ್ಲಿ 100 ಕೋಟಿ ರೂಪಾಯಿಗೂ ಹೆಚ್ಚು ನಷ್ಟ

ಗ್ಯಾಸ್ ಕೊರತೆಯಿಂದ ಅನೇಕ ಹೋಟೆಲ್‌ಗಳು ಬಂದ್ ಆಗಿರುವುದು ಹಾಗೂ ಮೆನು ಕಡಿತಗೊಂಡಿರುವುದರಿಂದ ಕಳೆದ ಐದು ದಿನಗಳಲ್ಲಿ ಹೋಟೆಲ್ ಉದ್ಯಮಕ್ಕೆ 100 ರೂಪಾಯಿಗೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಉದ್ಯಮಿಗಳು ಅಂದಾಜಿಸಿದ್ದಾರೆ.

ಸಿಬ್ಬಂದಿಗೆ ಉದ್ಯೋಗ ನಷ್ಟ ಭೀತಿ

ಹೋಟೆಲ್‌ಗಳು ಬಂದ್ ಆಗುತ್ತಿದ್ದಂತೆ ಸಿಬ್ಬಂದಿಗೂ ಸಂಕಷ್ಟ ಎದುರಾಗಿದೆ. ಸಂಪಾದನೆ ಇಲ್ಲದಿದ್ದರೆ ಸಿಬ್ಬಂದಿಗೆ ಸಂಬಳ ನೀಡಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಹಲವೆಡೆ 200ಕ್ಕೂ ಹೆಚ್ಚು ಮಂದಿ ಹೋಟೆಲ್ ಸಿಬ್ಬಂದಿ ಉದ್ಯೋಗ ಕಳೆದುಕೊಂಡಿದ್ದಾರೆ.

ಕಲಬುರಗಿಯ ಇಂದಿರಾ ಕ್ಯಾಂಟೀನ್ ಅಡುಗೆಮನೆಯಲ್ಲಿ ಕೆಲಸ ಮಾಡುತ್ತಿದ್ದ 10 ಮಹಿಳೆಯರು ಕೂಡ ಉದ್ಯೋಗ ಕಳೆದುಕೊಂಡಿದ್ದಾರೆ. ಚಪಾತಿ ಹಾಗೂ ರೊಟ್ಟಿ ತಯಾರಿಸುತ್ತಿದ್ದ ಸಿಬ್ಬಂದಿಗೆ ಸಿಲಿಂಡರ್ ಸಿಗುವವರೆಗೆ ಕೆಲಸಕ್ಕೆ ಬರಬೇಡಿ ಎಂದು ಗುತ್ತಿಗೆದಾರರು ತಿಳಿಸಿರುವುದಾಗಿ ಹೇಳಲಾಗಿದೆ.

ಗೃಹಬಳಕೆ ಸಿಲಿಂಡರ್ ಬಳಕೆ: ಅಧಿಕಾರಿಗಳ ದಾಳಿ

ಇನ್ನೂ ಕೆಲವು ಹೋಟೆಲ್ ಮಾಲೀಕರು ಅನಿವಾರ್ಯವಾಗಿ ಗೃಹಬಳಕೆ ಸಿಲಿಂಡರ್ ಬಳಸಿ ಅಡುಗೆ ಮಾಡುತ್ತಿರುವುದು ಪತ್ತೆಯಾಗಿದ್ದು, ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ. ಕೋಲಾರದಲ್ಲಿ ಎರಡು ಬೇಕರಿ ಮತ್ತು ಐದು ಹೋಟೆಲ್‌ಗಳಿಂದ 21 ಗೃಹಬಳಕೆ ಸಿಲಿಂಡರ್‌ಗಳನ್ನು ಜಪ್ತಿ ಮಾಡಲಾಗಿದೆ.

ಸರ್ಕಾರ ಅಲರ್ಟ್: ಇಂದು ಮುಖ್ಯ ಕಾರ್ಯದರ್ಶಿ ಸಭೆ

ರಾಜ್ಯದಲ್ಲಿ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆ ರಾಜ್ಯ ಸರ್ಕಾರವೂ ಎಚ್ಚೆತ್ತುಕೊಂಡಿದೆ. ಅನಿಲ ಪೂರೈಕೆ ಕಂಪನಿಗಳೊಂದಿಗೆ ಇಂದು ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಹೋಟೆಲ್‌ಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.

ಇದರ ಮಧ್ಯೆ ಗ್ಯಾಸ್ ಕೊರತೆ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ‘ಪರ್ಯಾಯ ವ್ಯವಸ್ಥೆ ಮಾಡುವುದು ಕೇಂದ್ರದ ಜವಾಬ್ದಾರಿ’ ಎಂದು ಹೇಳಿದ್ದಾರೆ.

ಗ್ಯಾಸ್ ಬುಕ್ಕಿಂಗ್‌ಗೆ ಮುಗಿಬೀಳುತ್ತಿರುವ ಜನ

ಹೋಟೆಲ್‌ಗಳ ಪರಿಸ್ಥಿತಿ ನೋಡಿದ ಸಾರ್ವಜನಿಕರಲ್ಲಿ ಕೂಡ ಆತಂಕ ಮೂಡಿದೆ. ಮನೆಗಳಿಗೆ ಗ್ಯಾಸ್ ಸಿಲಿಂಡರ್ ಸಿಗುತ್ತದೆಯೇ ಎಂಬ ಭೀತಿಯಿಂದ ಜನರು ಮುಂಗಡ ಬುಕ್ಕಿಂಗ್ ಮಾಡಲು ಮುಗಿಬಿದ್ದಿದ್ದಾರೆ. ಭಾನುವಾರ ಒಂದೇ ದಿನದಲ್ಲಿ ಸುಮಾರು 88 ಲಕ್ಷ 70 ಸಾವಿರ ಗ್ಯಾಸ್ ಬುಕ್ಕಿಂಗ್ ನಡೆದಿರುವುದಾಗಿ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: LPG ಸಿಲಿಂಡರ್​​ ಸಮಸ್ಯೆಗೆ ತಲ್ಲಣಿಸಿದ ಹೋಟೆಲ್​ ಉದ್ಯಮ: ಐದೇ ದಿನಗಳಲ್ಲಿ 100 ಕೋಟಿಗೂ ಅಧಿಕ ನಷ್ಟ!

ಈ ಹಿಂದೆ ಬುಕ್ ಮಾಡಿಕೊಂಡಿದ್ದವರು ಕೂಡ ತಾಳ್ಮೆ ಕಳೆದುಕೊಂಡು ಗ್ಯಾಸ್ ಏಜೆನ್ಸಿಗಳ ಮುಂದೆ ಸಿಲಿಂಡರ್ ಪಡೆಯಲು ಕಾಯುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ಒಟ್ಟಿನಲ್ಲಿ, ಗ್ಯಾಸ್ ಕೊರತೆಯಿಂದ ರಾಜ್ಯದಲ್ಲಿ ಹೋಟೆಲ್ ಉದ್ಯಮ ಹಾಗೂ ಸಾಮಾನ್ಯರ ಜೀವನ ಎರಡೂ ಸಂಕಷ್ಟಕ್ಕೆ ಸಿಲುಕಿರುವುದು ಸ್ಪಷ್ಟವಾಗುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 16ರ ದಿನಭವಿಷ್ಯ

ಈ ದಿನ ಸಂಜೆ ಮನೆಯ ಹೊಸ್ತಿಲಲ್ಲಿ ತುಪ್ಪದ ದೀಪ ಹಚ್ಚುವುದರಿಂದ ಕೌಟುಂಬಿಕ ಕಲಹಗಳು ಕಡಿಮೆಯಾಗಿ, ಮನೆಯಲ್ಲಿ ಸುಖದ ವಾತಾವರಣ ನಿರ್ಮಾಣವಾಗುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಸೋದರ ಸಂಬಂಧಿಗಳ ಆರ್ಥಿಕ ಸ್ಥಿತಿ ಒಂದಿಷ್ಟು ಒತ್ತಡವನ್ನು ತರಲಿದೆ. ಮಕ್ಕಳ ಆರೋಗ್ಯ ವಿಚಾರವು ಆತಂಕಕ್ಕೆ ಕಾರಣ ಆಗಲಿದೆ. ಇನ್ನು ಹಣಕಾಸನ್ನು ಹೊಂದಿಸುವುದಕ್ಕೆ ಹಾಗೂ ಇತರ ಜವಾಬ್ದಾರಿಗಳನ್ನು ನಿರ್ವಹಿಸುವುದಕ್ಕೆ ಹೆಚ್ಚಿನ ಶ್ರಮವನ್ನು ಹಾಕಬೇಕಾಗುತ್ತದೆ. ನಿಮ್ಮ ಮೇಲೆ ಹಗೆ ತೀರಿಸಿಕೊಳ್ಳಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ ಎಂಬುದು ನಿಮ್ಮ ಗಮನಕ್ಕೆ ಬರಲಿದೆ. ಇಂಥವರಿಗೆ ಹೇಗೆ ಉತ್ತರ ಕೊಡಬೇಕು ಎಂದು ಆಲೋಚಿಸುವಂತೆ ಆಗುತ್ತದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಕುಟುಂಬದ ಸಲುವಾಗಿಯೇ ಹೆಚ್ಚು ಸಮಯವನ್ನು ಮೀಸಲಿಡಲಿದ್ದೀರಿ. ಕಾರು ಅಥವಾ ಬೈಕ್ ಸರ್ವೀಸ್ ಮಾಡಿಸಿದ್ದೀರಾ ಎಂಬುದನ್ನು ನೋಡಿಕೊಳ್ಳಿ. ಒಂದು ವೇಳೆ ಮುಖ್ಯ ವ್ಯಕ್ತಿಯನ್ನು ಭೇಟಿ ಆಗಬೇಕು ಎಂದಿದ್ದಲ್ಲಿ ಸಮಯಕ್ಕೆ ಸರಿಯಾಗಿ ಅಲ್ಲಿರುವಂತೆ ನೋಡಿಕೊಳ್ಳಿ. ಸಂಬಂಧಿಕರು, ಸ್ನೇಹಿತರ ಮನೆಗೆ ತೆರಳಬೇಕು ಎಂದಿದ್ದಲ್ಲಿ ಅಲ್ಲಿನ ಪರಿಸ್ಥಿತಿ, ವಾತಾವರಣ ಹೇಗಿದೆ ಎಂಬುದನ್ನು ಅವಲೋಕಿಸಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಇವರು ಏನು ನನಗೆ ಹೇಳುವುದು ಎಂಬ ಧೋರಣೆ ಯಾವುದೇ ಕಾರಣಕ್ಕೂ ಬೇಡ. ಈ ದಿನ ಇತರರು ನಿಮ್ಮ ಜತೆಗೆ ಮಾತನಾಡುವಾಗ ಶ್ರದ್ಧೆಯಿಂದ ಕೇಳಿಸಿಕೊಳ್ಳಿ. ಈ ಹಿಂದೆ ಯಾವಾಗಲೋ ನಡೆದಿದ್ದ ಘಟನೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು, ಯಾವುದೇ ತೀರ್ಮಾನಕ್ಕೆ ಬರಬೇಡಿ. ಇನ್ನು ಈ ದಿನ ಸೋದರ- ಸೋದರಿಯರಿಗೆ ನಿಮ್ಮ ನೆರವಿನ ಅಗತ್ಯ ಕಂಡುಬರಲಿದೆ.

ಲೇಖನ- ಸ್ವಾತಿ ಎನ್.ಕೆ.

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 16ರ ದಿನಭವಿಷ್ಯ

ಈ ದಿನ ಮಾನಸಿಕ ಶಾಂತಿ ದೊರೆಯುವುದಕ್ಕಾಗಿ ಶಿವನಿಗೆ ಅಥವಾ ದೇವಿಗೆ ಬಿಳಿ ಹೂವುಗಳನ್ನು ಅರ್ಪಿಸಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಈ ದಿನ ನಿಮ್ಮ ಪರಿಸ್ಥಿತಿ ಬಗ್ಗೆ ನಿಮಗೆ ಮರುಕ ಹುಟ್ಟಲಿದೆ. ಆದ್ದರಿಂದ ಮೇಲುನೋಟಕ್ಕೆ ಕಾಣುವಂಥ ವಿಚಾರಗಳು ಆಳದಲ್ಲಿ ಅಷ್ಟು ಗಂಭೀರವಾಗಿ ಇರುವುದಿಲ್ಲ ಎಂಬುದನ್ನು ಅರಿತುಕೊಳ್ಳುವುದು ಮುಖ್ಯವಾಗುತ್ತದೆ. ಕಟ್ಟಡ ನಿರ್ಮಾಣ ವೃತ್ತಿಯಲ್ಲಿ ಇರುವವರಿಗೆ ಹೊಸ ಕೆಲಸಗಳು ದೊರೆಯಲಿವೆ. ವಿಷಯಕ್ಕೆ ಹಾಗೂ ವ್ಯಕ್ತಿಗಳಿಗೆ ಎಷ್ಟು ಪ್ರಾಮುಖ್ಯವೋ ಅಷ್ಟು ಮಾತ್ರ ನೀಡಿ. ಮನೆಗೆ ಕೆಲವು ಎಲೆಕ್ಟ್ರಿಕಲ್ ವಸ್ತುಗಳನ್ನು ಖರೀದಿಸುವ ಯೋಗವಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನಿಮ್ಮ ಲೆಕ್ಕಾಚಾರಲ್ಲಿ ತಪ್ಪಿದೆಯಾ ಎಂದು ಪದೇಪದೇ ಅನಿಸಲಿದೆ. ವಿಪರೀತ ಗಾಬರಿ, ಆತಂಕ ಸೃಷ್ಟಿ ಆಗಲಿದೆ. ಏಕೋ ಅಂದುಕೊಂಡಂತೆ ಏನೂ ಆಗುತ್ತಿಲ್ಲ ಅಂತಲೂ ಅನಿಸಲಿದೆ. ಇನ್ನೂ ಮುಂದುವರಿದು ಸಣ್ಣ ಸಮಸ್ಯೆಗೆ ಇಡೀ ದಿನ ತಲೆ ಕೆಡಿಸಿಕೊಳ್ಳುವಂತೆ ಆಗುತ್ತದೆ. ಆದರೆ ವಾಸ್ತವ ಹೇಗಿರುತ್ತದೆ, ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡರು ಎಂಬ ಮಾತಿದೆಯಲ್ಲಾ ಹಾಗೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಈಗಾಗಲೇ ಮಾಡಿದ್ದ ಹೂಡಿಕೆ ಅಥವಾ ಸೇವಿಂಗ್ಸ್ ಮುರಿಸಬೇಕಾಗಬಹುದು. ಈ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಲಿದ್ದೀರಿ. ಕಾರ್ಯಕ್ರಮ ಅಥವಾ ಸಮಾರಂಭಗಳಲ್ಲಿ ಭಾಗವಹಿಸುವ ಸಲುವಾಗಿ ಪ್ರಯಾಣ ಮಾಡಬೇಕಾಗಬಹುದು. ಇದರಿಂದ ದಣಿವು ಸಹ ಆಗಲಿದೆ. ನೀವು ಲೆಕ್ಕ ಹಾಕಿಕೊಂಡಂತೆಯೇ ಕೆಲವು ವ್ಯವಹಾರಗಳ ನಡೆಯಲಿವೆ. ಮತ್ತೆ ಬಾರದು ಎಂದುಕೊಂಡಿದ್ದ ಹಣವೊಂದು ಕೈ ಸೇರುವುದಕ್ಕೆ ಏನು ಮಾಡಬೇಕು ಎಂಬ ಮಾರ್ಗ ಗೋಚರ ಆಗಲಿದೆ.
ಲೇಖನ- ಸ್ವಾತಿ ಎನ್.ಕೆ.

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 16ರ ದಿನಭವಿಷ್ಯ

ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಚಿಂತೆ ಇರುವವರು “ಓಂ ನಮೋ ಭಗವತೇ ವಾಸುದೇವಾಯ ಧನ್ವಂತರಯೇ ನಮಃ” ಮಂತ್ರವನ್ನು ಸ್ಮರಿಸಿ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಹಲವು ವಿಚಾರ- ವಿವಾದಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಬೇಕಾದ ವೇದಿಕೆ ಸಿಗಲಿದೆ. ಈ ಹಿಂದೆ ಸಿಟ್ಟಿನಲ್ಲಿ ನೀವು ಆಡಿದ್ದ ಮಾತಿನಿಂದ ಆದ ಬೇಸರವನ್ನು ಕಡಿಮೆ ಮಾಡುವುದಕ್ಕೆ ಸರಿಯಾದ ದಿನ ಇದಾಗಿರುತ್ತದೆ. ಖರ್ಚಿನ ವಿಚಾರದಲ್ಲಿಯೂ ಉದಾರವಾಗಿ ವರ್ತಿಸಲಿದ್ದೀರಿ. ಪ್ರೀತಿಪಾತ್ರರಿಗೆ ಉಡುಗೊರೆಗಳನ್ನು ನೀಡುವ ಯೋಗ ಸಹ ಇದೆ. ರೆಸಾರ್ಟ್, ರೆಸ್ಟೋರೆಂಟ್, ಸಿನಿಮಾ ಹೀಗೆ ಮನರಂಜನೆಗಾಗಿ ಹೆಚ್ಚಿನ ಸಮಯವನ್ನು ಮೀಸಲಿಡಲಿದ್ದೀರಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಪ್ರೇಮಿಗಳಿಗೆ ಉತ್ತಮವಾದ ಸಮಯವನ್ನು ಕಳೆಯುವಂಥ ಯೋಗ ಇದೆ. ವಿದೇಶಗಳಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ಕೆಲಸ ಬದಲಾವಣೆ ಮಾಡುವುದಕ್ಕೆ ಸ್ನೇಹಿತರ ಸಹಾಯ ದೊರೆಯಲಿದೆ. ಈ ಹಿಂದೆ ನೀವು ಪಟ್ಟ ಶ್ರಮವನ್ನು ಗುರುತಿಸಿ, ಉಡುಗೊರೆಗಳನ್ನು ನೀಡಬಹುದು. ಚಿನ್ನ- ಬೆಳ್ಳಿ ಖರೀದಿ ಮಾಡಬೇಕು ಎಂದುಕೊಂಡಿದ್ದಲ್ಲಿ ದಿನದ ಮಟ್ಟಿಗೆ ನಿರ್ಧಾರವನ್ನು ಮುಂದೆ ಹಾಕುವುದು ಉತ್ತಮ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ನೀವು ಯಾರ ಜತೆಗೆ ಭಾವನಾತ್ಮಕವಾಗಿ ಬಹಳ ಹತ್ತಿರ ಆಗಿರುತ್ತೀರಿ ಅವರ ಬದುಕಿನಲ್ಲಿ ಅನಿರೀಕ್ಷಿತ ಬೆಳವಣಿಗೆಯಿಂದ ಕುಗ್ಗಿಹೋಗುವ ಸಾಧ್ಯತೆಗಳಿವೆ. ಮತ್ತು ಇದೇ ದಿನ ತಂದೆ- ತಾಯಿಯ ಆರೋಗ್ಯ ವಿಚಾರ ಚಿಂತೆಗೆ ಕಾರಣ ಆಗಲಿದೆ. ನೀವು ಯಾರನ್ನು ಭೇಟಿ ಆಗಬಾರದು, ಮಾತನಾಡಬಾರದು ಅಂದುಕೊಂಡಿರುತ್ತೀರೋ ಅಂಥ ವ್ಯಕ್ತಿ ನಿರೀಕ್ಷೆಯೇ ಮಾಡದ ರೀತಿಯಲ್ಲಿ ಎದುರಾಗಿ, ಆ ವ್ಯಕ್ತಿಯ ಮುಖಾಮುಖಿಯಿಂದಾಗಿ ಮುಜುಗರ, ಮಾನಸಿಕ ಹಿಂಸೆ ಅನುಭವಿಸಬೇಕಾಗುತ್ತದೆ.

ಲೇಖನ- ಸ್ವಾತಿ ಎನ್.ಕೆ.

Source link

Horoscope Today 16 March: ಇಂದು ಈ ರಾಶಿಯವರು ಯಾರ ಹಸ್ತಕ್ಷೇಪವನ್ನೂ ಸಹಿಸಲಾರರು

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಮೀನ, ಮಹಾನಕ್ಷತ್ರ : ಪೂರ್ವಾಭಾದ್ರ, ವಾರ : ಸೋಮ, ಪಕ್ಷ : ಕೃಷ್ಣ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಧನಿಷ್ಠಾ, ಯೋಗ : ಶಿವ, ಕರಣ : ಗರಜ, ಸೂರ್ಯೋದಯ – 06 – 32 am, ಸೂರ್ಯಾಸ್ತ – 06 – 33 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 08:03 – 09:33, ಯಮಗಂಡ ಕಾಲ 11:03 – 12:33, ಗುಳಿಕ ಕಾಲ 14:03 – 15:33

ಮೇಷ ರಾಶಿ: ನಿಮ್ಮನ್ನು ಲಕ್ಷಿಸಲು ಸಾಧ್ಯವಾಗದ ದೊಡ್ಡ ವ್ಯಕ್ತಿತ್ವ ನಿಮ್ಮದಾಗುವುದು. ಸ್ವಕೀಯರೇ ನಿಮ್ಮ ನಿಜವಾದ ವೇಗವನ್ನು ಕುಂಠಿತಗೊಳಿಸುವರು. ಬರಹಗಳು ನಿಮ್ಮ ಆದಾಯಕ್ಕೆ ಹೆಚ್ಚಿನ ಒತ್ತನ್ನು ಕೊಡುವುದು. ಕಣ್ಣಿಗೆ ಪ್ರತ್ಯಕ್ಷ ಕಂಡರೂ ಪ್ರಮಾಣೀಕರಿಸಿ ನೋಡು ಎನ್ನುವಂತೆ ಪರಿಶೀಲಿಸಿ ಕಾರ್ಯ ಪ್ರವೃತ್ತರಾಗಿ. ತಪ್ಪು ಮಾಹಿತಿ ನೀಡಿ ನಿಮ್ಮ ದಾರಿ ತಪ್ಪಿಸಬಹುದು. ಯಾವುದನ್ನು ಖಂಡಿಸುವಾಗಲೂ ಅದರ ಪೂರ್ಣ ಮಾಹಿತಿ ಇರಲಿ. ಸ್ನೇಹಿತರ ಸಹವಾಸ ಅಧಿಕಾಗುವುದು. ಮಾತಿನಲ್ಲಿ ಲವಲವಿಕೆ ಇರುವುದು.

ವೃಷಭ ರಾಶಿ: ಆರ್ಥಿಕತೆಯ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ವಾಹನದ ಖರೀದಿಸುವ ಆಸೆಯು ಪ್ರಬಲವಾಗಬಹುದು. ನಯವಂಚಕತನವು ನಿಮಗೆ ಪ್ರಿಯವಾಗಬಹುದು. ಅದಕ್ಕೆ ತಲೆ ಕೆಡಿಸಿಕೊಳ್ಳದೆ ನಿಮ್ಮ ಕಾರ್ಯದಲ್ಲಿ ಪ್ರವೃತ್ತರಾಗಿ ಕಾರ್ಯದಲ್ಲಿ ನಿಷ್ಠೆಯನ್ನು ತೋರಿಸಿ. ದುಂದುವೆಚ್ಚದಿಂದ ಬೇಸರ. ಮಕ್ಕಳ ಜೊತೆ ಸಂತೋಷದ ಕ್ಷಣವು ಇರಲಿದೆ. ಶ್ರದ್ಧೆಯಿಂದ ಯಾವುದನ್ನೂ ಇಂದು ಮಾಡಲಾರಿರಿ.

ಮಿಥುನ ರಾಶಿ: ವ್ಯಾಪಾರದ ಬದಲಾವಣೆಗಳನ್ನು ಅಧ್ಯಯನ‌ ಮಾಡಿ ಬದಲಾಯಿಸಿ. ಚುರುಕುತನವು ನಿಮಗೆ ಸಾಧ್ಯವಾಗದು. ನಿಮ್ಮ ಒಳ್ಳೆಯತನವನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಕೆ ಆದೀತು. ನೆರೆಯವರು ನಿಮ್ಮ ವ್ಯವಹಾರದಲ್ಲಿ ಪ್ರವೇಶಪಡೆಯಬಹುದು. ನಿಮ್ಮದೇ ಆದ ಕುಟುಂಬದಲ್ಲಿ ಹಲವರು ಕಿರಿಕಿರಿ ಮಾಡಬಹುದು. ಹಿಂದೆ ಮುಂದೆ ಯೋಚಿಸದೆ ಏಕಾಏಕಿಯಾಗಿ ಯಾರಿಗೂ ಮಾತು ಕೊಡುವುದು ಬೇಡ. ಪ್ರತ್ಯಕ್ಷವಾಗಿ ಕಾಣುವ ವ್ಯಕ್ತಿಗಳಿಗೆ ನಿಮ್ಮ ಬಗೆಗಿನ ದೃಷ್ಟಿಕೋನವೇ ಬದಲಾಗುವುದು.

ಕರ್ಕಾಟಕ ರಾಶಿ: ಆದಾಯದ ಗೌಪತೆಯನ್ನು ಕಾಪಾಡಿಕೊಳ್ಳಿ. ಮನಸ್ಸಿಗೆ ಮಂಕು ಕವಿದಂತೆ ಇರುವಿರಿ. ಜೀವನವು ಅಸಾರವಾದುದ್ದು ಎಂಬ ಭಾವವು ಬರಬಹುದು. ವಂಚನೆಯ ಕರೆಗಳಿಂದ ಆದಷ್ಟು ಎಚ್ಚರವಾಗಿರಿ. ನಿಮ್ಮ ಸುತ್ತಮುತ್ತಲಿನವರಿಂದ ತೊಂದರೆಯಾಗಬಹುದು. ಅಲ್ಪ ಆದಾಯವನ್ನು ಹೆಚ್ಚು ಮಾಡಿ ಹೇಳುವಿರಿ. ನಿಮ್ಮ ವಿಚಾರದಲ್ಲಿ ಅನ್ಯರ ಹಸ್ತಕ್ಷೇಪ, ಮೇಲಧಿಕಾರಿಗಳೊಂದಿಗೆ ಗುಟ್ಟಾಗಿ ನಿಮ್ಮ ಬಗ್ಗೆ ಚಾಡಿ ಮಾತುಗಳು ಒಂದಾದಮೇಲೊಂದು ಬರುವುವು.

ಸಿಂಹ ರಾಶಿ: ನಿಮ್ಮ ಇಂದಿನ ಆರ್ಥಿಕಲಾಭವು ನಿಮಗೆ ಹೆಚ್ಚು ಸುಖವನ್ನು ಕೊಡಬಹುದು. ಸಂತಾನವು ನಿಮ್ಮ ಖುಷಿಯನ್ನು ಹೆಚ್ಚಿಸುವುದು. ಮಕ್ಕಳಿಂದ ಅನಿರೀಕ್ಷಿತ ಉಡುಗೊರೆ ಸಿಗಬಹುದು. ಮಕ್ಕಳ ವಿವಾಹದ ಚಿಂತೆಯು ಕಾಡಬಹುದು. ಬುದ್ಧಿಶಕ್ತಿಗೆ ತಕ್ಕಂತೆ ಕೆಲಸದಲ್ಲಿ ಜಯವನ್ನು ಸಾಧಿಸುವಿರಿ. ಔಷಧದ ವ್ಯಾಪಾರದಿಂದ ನಿಮಗೆ ಅಧಿಕ ಲಾಭವಾಗಬಹುದು. ಧೈರ್ಯದಿಂದ ಮುನ್ನಡೆಯುವ ಇಚ್ಛಾಶಕ್ತಿಯನ್ನು ರೂಢಿಸಿಕೊಳ್ಳಿ.

ಕನ್ಯಾ ರಾಶಿ: ಕಡಿಮೆ ಖರ್ಚು ಮತ್ತು ಆದಾಯದ ಉದ್ಯಮಕ್ಕೆ ಆದ್ಯತೆ ಕೊಡುವಿರಿ. ನಿಮ್ಮ ಯಶಸ್ಸಿಗೆ ವಿರೋಧಿಗಳು ಅಡ್ಡಗಾಲು ಹಾಕಬಹುದು. ಸ್ಥಿರಾಸ್ತಿಯಲ್ಲಿ ಲಾಭವನ್ನು ಪಡೆಯಲು ತಂತ್ರವನ್ನು ಬಳಸುವಿರಿ. ಮಕ್ಕಳ ವಿಚಾರದಲ್ಲಿ ನೀವು ಬಹಳ ಮೃದು ಸ್ವಭಾವವಿರುವುದು. ವಿಶ್ವಾಸವನ್ನು ಗಟ್ಟಿಗೊಳಿಸುವ ಪ್ರಯತ್ನವನ್ನು ಮಾಡಲಿದ್ದೀರಿ. ಇಂದಿನ ಕೆಲಸಗಳು ಬೇಗ ಮುಕ್ತಾಯವಾಗಿ ನಿಶ್ಚಿಂತೆಯಿಂದ ಇರುವಿರಿ. ವೈದ್ಯಕೀಯ ಕ್ಷೇತ್ರದ ಕಲಿಕೆ ಬಹಳ ಕಷ್ಟವೆನಿಸಬಹುದು. ಕೆಲವು ವಿಚಾರದಲ್ಲಿ ಮರೆವೂ ನಿಮಗೆ ವರವಾದಂತೆ ಅನ್ನಿಸುವುದು.

ತುಲಾ ರಾಶಿ: ಹಿರಿಯರ ಮಾತಿನಿಂದ ಅಧಿಕ ಆದಾಯದಿಂದ ನಿಮ್ಮ ನೆಮ್ಮದಿಯ ಹರಣವಾಗಿದೆ ಎಂದು ಅನ್ನಿಸಲೂಬಹುದು. ಸಂಗಾತಿಯ ಮಾತನ್ನು ನಡೆಸಿಕೊಡಲಾಗದು. ಹಣಕ್ಕಾಗಿ ಕಿರಿಕಿರಗಳು ಅಧಿಕವಾದಂತೆ ತೋರುವುದು. ಮಕ್ಕಳಿಗೆ ಯಾವುದಾದರೂ ಉತ್ತಮ ಹವ್ಯಾಸದ ರುಚಿ ಬರುವಂತೆ ಮಾಡುವಿರಿ. ಒತ್ತಡ ಕಡಿಮೆಯಾಗಿ ಮನೆಯಲ್ಲಿ ನೆಮ್ಮದಿಯಿಂದ ಇರುವಿರಿ. ಮಕ್ಕಳ ವೃತ್ತಿಯಲ್ಲಿ ಹೆಚ್ಚಿನ ಏಳ್ಗೆಯನ್ನು ಕಂಡು ಸುಖಿಸುವಿರಿ. ಬರಲಿರುವ ಹಣವನ್ನು ಸರಿಯಾಗಿ ವಿನಿಯೋಗಿಸಿ.

ವೃಶ್ಚಿಕ ರಾಶಿ: ಮಾತುಗಳನ್ನು ಬದಲಿಸಿ, ಎಲ್ಲರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ. ಮಕ್ಕಳು ನಿಮ್ಮ ವರ್ತನೆಯನ್ನು ವಿರೋಧಿಸಬಹುದು. ಅಂತರಂಗವನ್ನು ಆದಷ್ಟು ಗೌಪ್ಯವಾಗಿ ಇಡುವುದು ಬೇಕಾದೀತು‌. ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಪಾರದರ್ಶಕತೆ ಮಾತ್ರ ಇರಲಿ. ಸ್ತ್ರೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ಸಿಗಬಹುದು. ಇನ್ನೊಬ್ಬರ ನೋವಿಗಿ ಸ್ಪಂದಿಸುವ್ವಿರಿ. ದಾಂಪತ್ಯದಲ್ಲಿ ಸಾಮರಸ್ಯದ ಅಗತ್ಯವು ಬಹಳ ಇರಲಿದೆ. ಅಸಹಜ ವ್ಯವಹಾರದಿಂದ ಹಿಂದೆ ಸರಿಯುವುದು ಉತ್ತಮ.

ಧನು ರಾಶಿ: ಧಾರ್ಮಿಕ ಕಾರ್ಯಗಳು ಶ್ರದ್ಧೆಯಿಂದ ಪೂರ್ಣವಾಗಲಿದೆ. ಬಹಳ‌ ದಿನಗಳ ಅನಂತರ ಸಹೋದರರ ಭೇಟಿಯಾಗಲಿದ್ದು, ಸಂತೋಷವು ಇಮ್ಮಡಿಸುವುದು. ರಾಜಕೀಯ ಪ್ರೇರಿತ ಕಾರ್ಯದಲ್ಲಿ ಸಿಕ್ಕಿಕೊಳ್ಳುವಿರಿ. ಸಕಾರಾತ್ಮಕವಾಗಿ ಚಿಂತಿಸಿ ಕಾರ್ಯದಲ್ಲಿ ತೊಡಗಿಕೊಳ್ಳಿ. ಭೂಮಿಯ ವಿವಾದ ಹೊಸದಾಗಿ ಆರಂಭವಾಗಲಿದೆ. ತೀರ್ಥ ಕ್ಷೇತ್ರದಲ್ಲಿ ವಾಸಮಾಡುವ ಸಂದರ್ಭವು ಬರಬಹುದು. ಪುಣ್ಯವೆಂದು ಭಾವಿಸಿ. ವ್ಯವಹಾರದಲ್ಲಿ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಅನಗತ್ಯ ವಾದ ವಿವಾದಗಳಿಂದ ದೂರವಿರಿ.

ಮಕರ ರಾಶಿ: ಮಾತು ಎಷ್ಟೇ ಸಹೃದಯತೆಯಿಂದ ಇದ್ದರೂ ಕೇಳಿಸಿಕೊಳ್ಳುವ ಸಹೃದಯರು ಸಿಗುವುದಿಲ್ಲ. ಉದ್ವಿಗ್ನತೆಯು ಉಂಟಾದಾಗ ಏನನ್ನಾದರೂ ಮಾಡಿಕೊಳ್ಳುವಿರಿ. ಸಿಗಲಿರುವ ಸ್ಥಿರಾಸ್ತಿಯು ಕೈತಪ್ಪಿಹೋಗಬಹುದು. ನಿಮ್ಮ ಸಮಸ್ಯೆಗಳಿಗೆ ಹಲವರು ಹಲವು ರೀತಿಯ ಸಲಹೆಗಳನ್ನು ನೀಡಬಹುದು. ಎಲ್ಲವೂ ನಿಮ್ಮಿಂದ ಆದರೂ ಹೇಳಿಕೊಳ್ಳುವಾಗ ಗೌಣವಾಗಿರಲಿ. ದಾಂಪತ್ಯದಲ್ಲಿ ಸಲುಗೆಯು ಅತಿಯಾಗಲಿದೆ.

ಕುಂಭ ರಾಶಿ: ಕಲಿಕೆಯಲ್ಲಿ ಚುರುಕುತನವನ್ನು ರೂಢಿಸಿಕೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ. ಇಂದು ನಿಮ್ಮಲ್ಲಿ ಆತ್ಮಸ್ಥೈರ್ಯವು ಇರಲಿದೆ. ಮಾನಸಿಕವಾಗಿ ಸದೃಢರಾಗುವಿರಿ. ಗುರಿಯ ಸಾಧನೆಗೆ ಸಾರ್ವಜನಿಕ ಸಂಪರ್ಕವನ್ನು ಕಳೆದುಕೊಳ್ಳುವಿರಿ. ಹೊಸ ವಿಚಾರಗಳ ಕಡೆ ಹೊರಳುವ ಆಲೋಚನೆ ಮನಸ್ಸಿಗೆ ಬರಲಿದೆ. ನಿಮ್ಮಿಂದ ಆಗದೇ ಇರುವ ಕಾರ್ಯ ಎಂದು ಯಾವುದೂ ಇರದು. ಆದರೆ ಕೆಲವಕ್ಕೆ ಸಮಯ ಹೆಚ್ಚು ಬೇಕು ಅಷ್ಟೇ.

ಮೀನ ರಾಶಿ: ನಿಮ್ಮ ದೈನಂದಿನ ಕಾರ್ಯದಲ್ಲಿ ವ್ಯತ್ಯಾಸ. ಆಧ್ಯಾತ್ಮಿಕ ಚಿಂತನೆಗಳಿಂದ ಮನಸ್ಸಿಗೆ ಶಾಂತತೆಯನ್ನು ಪಡೆಯುವಿರಿ. ಮನೆ ಹಿರಿಯರ ಆರೋಗ್ಯದ ಕಡೆ ಗಮನ ನೀಡಿ. ನಿಮ್ಮ ಪರಿಶ್ರಮಕ್ಕೆ ತಕ್ಕಷ್ಟು ಹಣ ಬರದೆ ತೊಂದರೆ ಅನುಭವಿಸುವಿರಿ. ಮಂದಗತಿಯಲ್ಲಿ ಸಾಗುವ ಕೆಲಸಗಳಿಗೆ ವೇಗವನ್ನು ಕೊಡುವಿರಿ. ಏಕತಾನತೆಯ ಜೀವನವು ನಿಮಗೆ ಬೇಸರವನ್ನು ಕೊಟ್ಟಿದ್ದು, ಹೊಸತನ್ನು ನೀವು ಬಯಸುವಿರಿ. ಇಂದು ನೀವು ಹೊಸ ಹೂಡಿಕೆಗೆ ಮನಸ್ಸು ಮಾಡುವಿರಿ.

ಲೋಹಿತ ಹೆಬ್ಬಾರ್ – 8762924271 (what’s app only)

Source link

BCCI Awards: ಕನ್ನಡಿಗ ರಾಹುಲ್ ದ್ರಾವಿಡ್​ಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರಧಾನ

ಪ್ರತಿ ವರ್ಷದಂತೆ ಈ ವರ್ಷವೂ ಬಿಸಿಸಿಐ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದೆಹಲಿಯಲ್ಲಿ ಹಮ್ಮಿಕೊಂಡಿತ್ತು. ಈ ಸಮಾರಂಭದಲ್ಲಿ ಕಳೆದ ವರ್ಷದಲ್ಲಿ ಅಂತರರಾಷ್ಟ್ರೀಯ ಹಾಗೂ ದೇಶಿಯ ಕ್ರಿಕೆಟ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಆಟಗಾರರು ಮತ್ತು ಆಟಗಾರ್ತಿಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೆಯೇ ಐಸಿಸಿ ಟ್ರೋಫಿಗಳನ್ನು ಗೆದ್ದಿದ್ದ ಪುರುಷರ ಹಾಗೂ ಮಹಿಳಾ ತಂಡಗಳನ್ನು ಗೌರವಿಸಲಾಯಿತು. ಇದೇ ವೇಳೆ ಕನ್ನಡಿಗ ರಾಹುಲ್ ದ್ರಾವಿಡ್, ರೋಜರ್ ಬಿನ್ನಿ ಹಾಗೂ ಮಿಥಾಲಿ ರಾಜ್​ಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬಿಸಿಸಿಐ, ಕನ್ನಡಿಗ ರಾಹುಲ್ ದ್ರಾವಿಡ್, ರೋಜರ್ ಬಿನ್ನಿ ಮತ್ತು ಮಿಥಾಲಿ ರಾಜ್ ಅವರಿಗೆ ಭಾರತೀಯ ಕ್ರಿಕೆಟ್‌ಗೆ ನೀಡಿದ ಕೊಡುಗೆಗಳಿಗಾಗಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿತು. ಮೂವರಿಗೂ ವಿಶೇಷ ಟ್ರೋಫಿ ನೀಡಲಾಯಿತು. ಅದರಲ್ಲಿ ಕನ್ನಡಿಗ ರಾಹುಲ್ ದ್ರಾವಿಡ್ ಅವರನ್ನು ಸನ್ಮಾನಿಸಿದ ವಿಡಿಯೋವನ್ನು ಬಿಸಿಸಿಐ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.

ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ‘ದಿ ವಾಲ್’ ಎಂದೇ ಖ್ಯಾತಿ ಪಡೆದಿರುವ ಕನ್ನಡಿಗ ರಾಹುಲ್ ದ್ರಾವಿಡ್, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 24,000 ಕ್ಕೂ ಹೆಚ್ಚು ರನ್ ಗಳಿಸಿದ್ದು, ಒಂದು ದಶಕಕ್ಕೂ ಹೆಚ್ಚು ಕಾಲ ಭಾರತದ ಬ್ಯಾಟಿಂಗ್‌ನ ಬೆನ್ನೆಲುಬಾಗಿದ್ದವರು. ಹಾಗೆಯೇ ನಾಯಕನಾಗಿ ಭಾರತವನ್ನು ಅನೇಕ ಸ್ಮರಣೀಯ ವಿಜಯಗಳಿಗೆ ಕರೆದೊಯ್ದವರು. ನಿವೃತ್ತಿಯ ನಂತರ, ದ್ರಾವಿಡ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕ್ರಿಕೆಟ್ ಮುಖ್ಯಸ್ಥರಾಗಿ ಯುವ ಆಟಗಾರರಿಗೆ ತರಬೇತಿ ನೀಡಿದರು. 2018 ರಲ್ಲಿ ಅಂಡರ್-19 ವಿಶ್ವಕಪ್ ಗೆದ್ದ ತಂಡಕ್ಕೂ ಅವರು ತರಬೇತಿ ನೀಡಿದರು. ಭಾರತೀಯ ಪುರುಷರ ತಂಡದ ಮುಖ್ಯ ತರಬೇತುದಾರರಾಗಿ, ಅವರು 2024 ರ ಟಿ20 ವಿಶ್ವಕಪ್‌ನಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

BAN vs PAK: ಆಘಾ ಶತಕ ವ್ಯರ್ಥ; ಪಾಕ್ ವಿರುದ್ಧ ಏಕದಿನ ಸರಣಿ ಗೆದ್ದ ಬಾಂಗ್ಲಾದೇಶ

ಮಿರ್‌ಪುರದಲ್ಲಿ ನಡೆದ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಪಾಕಿಸ್ತಾನವನ್ನು 11 ರನ್‌ಗಳಿಂದ ಸೋಲಿಸಿದ ಆತಿಥೇಯ ಬಾಂಗ್ಲಾದೇಶ (Bangladesh vs Pakistan) ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು. ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ, ತಂಜಿದ್ ಹಸನ್ (Tanzid Hasan) ಅವರ 107 ರನ್‌ಗಳ ಇನ್ನಿಂಗ್ಸ್‌ ಆಧಾರದ ಮೇಲೆ 50 ಓವರ್‌ಗಳಲ್ಲಿ ಐದು ವಿಕೆಟ್‌ಗಳ ನಷ್ಟಕ್ಕೆ 290 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ್ದ ಪಾಕಿಸ್ತಾನ ಪರ ಸಲ್ಮಾನ್ ಅಲಿ ಆಘಾ (Salman Ali Agha) ಕೂಡ 106 ರನ್‌ಗಳ ಇನ್ನಿಂಗ್ಸ್ ಆಡಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಪಾಕಿಸ್ತಾನ ತಂಡ 279 ರನ್‌ಗಳಿಗೆ ಆಲೌಟ್ ಆಯಿತು.

ತಂಜಿದ್ ಹಸನ್ ಶತಕ

ಮೂರು ಪಂದ್ಯಗಳ ಏಕದಿನ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ, 5 ವಿಕೆಟ್‌ಗೆ 290 ರನ್ ಗಳಿಸಿತು. ತಂಡದ ಪರ ಆರಂಭಿಕ ತಂಜಿದ್ ಹಸನ್ ತಮೀಮ್ 107 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಇದು ಅವರ ಅಂತರರಾಷ್ಟ್ರೀಯ ವೃತ್ತಿಜೀವನದ ಮೊದಲ ಶತಕವೂ ಆಗಿದೆ. ತಂಜಿದ್ ಹೊರತುಪಡಿಸಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಲಿಟ್ಟನ್ ದಾಸ್ 51 ಎಸೆತಗಳಲ್ಲಿ 41 ರನ್ ಗಳಿಸಿದರೆ, ಕೊನೆಯಲ್ಲಿ, ತೌಹಿದ್ ಹೃದಯ್ 44 ಎಸೆತಗಳಲ್ಲಿ ಅಜೇಯ 48 ರನ್ ಗಳಿಸಿ ತಂಡದ ಸ್ಕೋರ್ ಅನ್ನು 290ಕ್ಕೆ ತಲುಪಿಸಿದರು. ಇವರ ಜೊತೆಗೆ ಆರಂಭಿಕ ಆಟಗಾರ ಸೈಫ್ ಹಸನ್ 36 ರನ್ ಮತ್ತು ನಜ್ಮುಲ್ ಹೊಸೈನ್ ಶಾಂಟೊ 27 ರನ್​ಗಳ ಕಾಣಿಕೆಯನ್ನು ನೀಡಿದರು.

ದುಬಾರಿಯಾದ ಬೌಲರ್ಸ್​

ಪಾಕಿಸ್ತಾನ ಪರ ಹ್ಯಾರಿಸ್ ರೌಫ್ 10 ಓವರ್‌ಗಳಲ್ಲಿ 52 ರನ್‌ ನೀಡಿ ಮೂರು ವಿಕೆಟ್‌ಗಳನ್ನು ಪಡೆದರೆ, ನಾಯಕ ಶಾಹೀನ್ ಅಫ್ರಿದಿ 10 ಓವರ್‌ಗಳಲ್ಲಿ 55 ರನ್‌ಗಳಿಗೆ ಒಂದು ವಿಕೆಟ್ ಪಡೆದರು. ಅಬ್ರಾರ್ ಅಹ್ಮದ್ 10 ಓವರ್‌ಗಳಲ್ಲಿ 49 ರನ್‌ ನೀಡಿ ಒಂದು ವಿಕೆಟ್ ಪಡೆದರು. ಶಾದ್ ಮಸೂದ್ 8 ಓವರ್‌ಗಳಲ್ಲಿ 55 ರನ್‌ ಬಿಟ್ಟುಕೊಟ್ಟರು.

ಏಕದಿನ ತಂಡದಿಂದಲೂ ಬಾಬರ್ ಔಟ್; 6 ಹೊಸ ಮುಖಗಳಿಗೆ ಚೊಚ್ಚಲ ಅವಕಾಶ

ಸಲ್ಮಾನ್ ಆಘಾ ಹೋರಾಟ ವ್ಯರ್ಥ

ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ಕಳಪೆ ಆರಂಭ ಪಡೆಯಿತು. ಆರಂಭಿಕರಿಬ್ಬರು ತಲಾ 6 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಅನುಭವಿ ಮೊಹಮ್ಮದ್ ರಿಜ್ವಾನ್ ಕೂಡ 4 ರನ್​ಗಳಿಗೆ ಸುಸ್ತಾದರು. ಆದರೆ ಆ ಬಳಿಕ ಬಂದ ಸಲ್ಮಾನ್ ಆಘಾ, ಅಬ್ದುಲ್ ಸಮದ್ ಜೊತೆಗೂಡಿ ಇನ್ನಿಂಗ್ಸ್ ನಿಭಾಯಿಸಿದರು. ಸಮದ್ 34 ರನ್ ಬಾರಿಸಿ ಔಟಾದರೆ, ಆ ಬಳಿಕ ಬಂದ ಸಾದ್ ಮಸೂದ್ 38 ರನ್​ಗಳ ಕಾಣಿಕೆ ನೀಡಿದರು. ನಾಯಕ ಶಾಹೀನ್ ಅಫ್ರಿದಿ 37 ರನ್ ಬಾರಿಸಿದರು. ಸತತ ವಿಕೆಟ್​ಗಳ ಪತನದ ನಡುವೆಯೂ ಹೋರಾಟ ನೀಡಿದ ಆಘಾ, 98 ಎಸೆತಗಳಲ್ಲಿ 106 ರನ್​ಗಳ ಇನ್ನಿಂಗ್ಸ್ ಆಡಿದರು. ಆದರೆ ನಿರ್ಣಾಯಕ ಹಂತದಲ್ಲಿ ವಿಕೆಟ್ ಕೈಚೆಲ್ಲುವ ಮೂಲಕ ತಂಡವನ್ನು ಸೋಲಿನ ಸುಳಿಗೆ ತಳ್ಳಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಕೆಜಿಎಫ್’ ಸಿನಿಮಾವನ್ನು ಕೊಂಡಾಡಿದ ಕೊರಿಯನ್ ಸ್ಟಾರ್ ನಟ

ಕೊರಿಯನ್ ಸಿನಿಮಾಗಳು (Cinema) ವಿಶ್ವದಾದ್ಯಂತ ಮೋಡಿ ಮಾಡಿವೆ. ವಿಶ್ವದಲ್ಲಿಯೇ ಅತ್ಯುತ್ತಮ ಸಿನಿಮಾಗಳನ್ನು ನಿರ್ಮಿಸುವ ದೇಶಗಳಲ್ಲಿ ಕೊರಿಯಾ ಸಹ ಒಂದು. ಕೋವಿಡ್ ನಂತರದ ಒಟಿಟಿ ಕ್ರಾಂತಿಯ ಬಳಿಕವಂತೂ ಕೊರಿಯನ್ ಸಿನಿಮಾಗಳು ಸಣ್ಣ ಪುಟ್ಟ ನಗರ-ಪಟ್ಟಣಗಳನ್ನೂ ತಲುಪಿವೆ. ಕೊರಿಯನ್ ಶೋಗಳು, ಕೊರಿಯನ್ ಹಾಡುಗಳು ಭಾರತದಲ್ಲಿಯೂ ಸಹ ಸಖತ್ ಜನಪ್ರಿಯ. ಇತ್ತೀಚೆಗಿನ ‘ಸ್ಕ್ವಿಡ್ ಗೇಮ್ಸ್’ ವೆಬ್ ಸರಣಿ ಸಹ ಭಾರಿ ದೊಡ್ಡ ಹಿಟ್ ಆಗಿತ್ತು. ಇದೀಗ ಈ ‘ಸ್ಕ್ವಿಡ್ ಗೇಮ್’ ಸೇರಿದಂತೆ ಕೊರಿಯಾದ ಹಲವು ಸಿನಿಮಾ, ಶೋಗಳಲ್ಲಿ ನಟಿಸಿರುವ ಸ್ಟಾರ್ ನಟರೊಬ್ಬರು ಕನ್ನಡದ ‘ಕೆಜಿಎಫ್’ ಸಿನಿಮಾ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ.

‘ಸ್ಕ್ವಿಡ್ ಗೇಮ್ಸ್’, ‘ದಿ ಚೇಸ್’, ‘ಮಿಡ್​​ನೈಟ್’ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿರುವ ಕೊರಿಯಾದ ಸ್ಟಾರ್ ನಟರುಗಳಲ್ಲಿ ಒಬ್ಬರಾಗಿರುವ ವಿ ಹಾ ಜುನ್ ಅವರು ಇತ್ತೀಚೆಗೆ ಭಾರತಕ್ಕೆ ಬಂದಿದ್ದಾಗ ಭಾರತೀಯ ಸಿನಿಮಾಗಳ ಬಗ್ಗೆ ಮಾತನಾಡುತ್ತಾ ಮೊದಲು ‘ಕೆಜಿಎಫ್’ ಸಿನಿಮಾದ ಬಗ್ಗೆ ಮಾತನಾಡಿದರು. ‘ನನಗೆ ಕೆಲವು ಭಾರತೀಯ ಸಿನಿಮಾಗಳ ಪರಿಚಯ ಇದೆ. ಕೆಲವು ಸಿನಿಮಾಗಳನ್ನು ನೋಡಿದ್ದೇನೆ. ‘ಕೆಜಿಎಫ್’ ಸಿನಿಮಾ ನನಗೆ ಬಹಳ ಇಷ್ಟ. ಅದೊಂದು ಅದ್ಭುತವಾದ ಬಹಳ ಅದ್ಧೂರಿಯಾದ ಆಕ್ಷನ್ ಸಿನಿಮಾ. ಬಹಳ ಇಂಟೆನ್ಸ್ ಆದ ಆಕ್ಷನ್ ಮತ್ತು ಸನ್ನಿವೇಶಗಳನ್ನು ಆ ಸಿನಿಮಾ ಹೊಂದಿದೆ’ ಎಂದಿದ್ದಾರೆ.

‘ಕೆಜಿಎಫ್’ ಸಿನಿಮಾ ಅದ್ಧೂರಿ ಸ್ಕೇಲ್ ಹೊಂದಿರುವ ಸೀಟಿನ ತುದಿಗೆ ಕೂರಿಸುವ ಸಿನಿಮಾ, ಮತ್ತು ಅಷ್ಟೇ ಮನೊರಂಜನಾತ್ಮಕವೂ ಇದೆ. ನಾನು ಸಹ ಅಂಥಹಾ ಒಂದು ಅದ್ಧೂರಿ ಮತ್ತು ಇಂಟೆನ್ಸ್ ಆಗಿರುವ ಆಕ್ಷನ್ ಸಿನಿಮಾನಲ್ಲಿ ನಟಿಸಲು ಕಾತರದಿಂದ ಕಾಯುತ್ತಿದ್ದೀನಿ. ನನಗೆ ಅಂಥಹಾ ಸಿನಿಮಾಗಳಲ್ಲಿ ನಟಿಸುವ ಆಸೆ ಇದೆ. ಅದು ಮಾತ್ರವೇ ಅಲ್ಲದೆ ವಿಶ್ವದಾದ್ಯಂತ ಜನಪ್ರಿಯವಾಗಿರುವ ‘3 ಇಡಿಯಟ್ಸ್’ ಸಿನಿಮಾವನ್ನು ಸಹ ನಾನು ಇನ್ನು ಮೆನ್ಷನ್ ಮಾಡಲೇ ಬೇಕು. ಅದು ಬಹಳ ಮನೊರಂಜನಾತ್ಮಕ ಮತ್ತು ಅಷ್ಟೆ ಹಾಸ್ಯಮಯ ಸಿನಿಮಾ ಅದರ ಜೊತೆಗೆ ಸಮಾಜಕ್ಕೆ ಒಂದು ಅದ್ಭುತ ಸಂದೇಶವನ್ನು ಸಹ ಹೊಂದಿದೆ’ ಎಂದು ಅವರು ಹೇಳಿದರು.

ಇದನ್ನೂ ಓದಿ:RCB: ವಿವಾದದ ನಡುವೆ ಗುಟ್ಟಾಗಿ ಸಪ್ತಪದಿ ತುಳಿದ ಆರ್‌ಸಿಬಿ ವೇಗಿ ಯಶ್ ದಯಾಳ್

ಕನ್ನಡದ ಸಿನಿಮಾಗಳು ಕರ್ನಾಟಕದ ಗಡಿಯನ್ನೇ ದಾಟದ ಸಮಯವೊಂದಿತ್ತು. ಆದರೆ ಈಗ ವಿಶ್ವದ ಗಡಿಯನ್ನು ದಾಟುವುದು ಮಾತ್ರವಲ್ಲದೆ, ಭಾರತೀಯ ಸಿನಿಮಾಗಳ ಬಗ್ಗೆ ಮಾತನಾಡುವಾಗ ವಿದೇಶಿ ನಟನೊಬ್ಬ ‘ಕೆಜಿಎಫ್’ ಅನ್ನು ಉದಾಹರಣೆಯಾಗಿ ನೀಡುವುದು ‘ಕೆಜಿಎಫ್’ ಸಿನಿಮಾ ಸೃಷ್ಟಿಸಿರುವ ಪ್ರಭಾವಕ್ಕೆ ಅದ್ಭುತ ಉದಾಹರಣೆ ಆಗಿದೆ. ‘ಕೆಜಿಎಫ್’ ಮೂಲಕ ಯಶ್ ಮತ್ತು ಪ್ರಶಾಂತ್ ನೀಲ್ ಅದ್ಭುತವನ್ನೇ ಸೃಷ್ಟಿಸಿದ್ದಾರೆ. ಆ ಸಿನಿಮಾದ ಮೂಲಕ ಮನೊರಂಜನಾ ಕ್ಷೇತ್ರದಲ್ಲಿ ಕರ್ನಾಟಕದ ಹೆಸರನ್ನು ದೇಶ-ವಿದೇಶಗಳಿಗೆ ವಿಸ್ತರಿಸಿದ್ದಾರೆ.

ಈಗ ಯಶ್ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದು ಅದುವೇ ‘ಟಾಕ್ಸಿಕ್’ ಈ ಸಿನಿಮಾವನ್ನು ಸಹ ಅವರು ಅಂತರಾಷ್ಟ್ರೀಯ ಸಿನಿಮಾ ಮಾರುಕಟ್ಟೆಯನ್ನು ಗಮನದಲ್ಲಿ ಇಟ್ಟುಕೊಂಡೇ ನಿರ್ಮಿಸಿದ್ದಾರೆ. ಸಿನಿಮಾವನ್ನು ಗೀತು ಮೋಹನ್​​ದಾಸ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಯಶ್ ಮತ್ತು ಕೆವಿಎನ್ ಬಂಡವಾಳ ಹೂಡಿದ್ದು, ಸಿನಿಮಾ ಜೂನ್ 04 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version