ದಿಲೀಪ್ ರಾಜ್ ಸಾವಿಗೆ ಕಾರಣವೇನು: ಹೃದ್ರೋಗ ತಜ್ಞ ಮಂಜುನಾಥ್ ವಿಶ್ಲೇಷಣೆ – Kannada News | Heart specialist Dr Manjunath talks about Dileep Raj’s death

ನಟ ದಿಲೀಪ್ ರಾಜ್ (Dileep Raj) ನಿಧನ ಹೊಂದಿ ಕೆಲ ದಿನಗಳಷ್ಟೆ ಕಳೆದಿದೆ. ದಿಲೀಪ್ ರಾಜ್ ಇನ್ನಿಲ್ಲವಾದ ದಿನ ಅವರ ಅಭಿಮಾನಿಗಳು, ಸ್ನೇಹಿತರು, ಕುಟುಂಬ ಸದಸ್ಯರು ತೀವ್ರ ದುಖಃ ವ್ಯಕ್ತಪಡಿಸಿದ್ದರು. ಆದರೆ ಇದೀಗ ದಿಲೀಪ್ ರಾಜ್ ಅವರ ಸಾವಿನ ಬಗ್ಗೆ ಚರ್ಚೆಗಳು ಶುರುವಾಗಿವೆ. ಅವರ ಬಹುತೇಕ ಗೆಳೆಯರು ಹೇಳಿರುವಂತೆ ದಿಲೀಪ್ ರಾಜ್ ಅವರಿಗೆ ಯಾವುದೇ ದುರಭ್ಯಾಸಗಳು ಇರಲಿಲ್ಲ, ವ್ಯಾಯಾಮ, ಜಿಮ್ ಮಾಡುತ್ತಾ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದರು ಎಂದು. ಹಾಗಿದ್ದರೂ ಅವರಿಗೆ ಹೃದಯಾಘಾತ ಆಗಿದ್ದು ಹೇಗೆ? ಇದೀಗ ಕರ್ನಾಟಕದ ಖ್ಯಾತ ಹೃದ್ರೋಗ ತಜ್ಞರೂ, ಸಂಸದರೂ ಆಗಿರುವ ಡಾ ಮಂಜುನಾಥ್ ಅವರು ದಿಲೀಪ್ ಅವರ ಹಠಾತ್ ಸಾವಿನ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ನನಗೆ ಗೊತ್ತಿರುವ ಪ್ರಕಾರ, ದಿಲೀಪ್ ರಾಜ್‌ಗೆ ಅವರಿಗೆ ಹಿಂದಿನ ದಿನ ಎದೆ ಉರಿ ಕಾಣಿಸಿಕೊಂಡಿತ್ತಂತೆ. ಎದೆಯಲ್ಲಿ ಡಿಸ್ಕಂಫರ್ಟ್ (ಅಸ್ವಸ್ಥತೆ) ಕಾಣಿಸಿಕೊಂಡಿತ್ತು. ಆದರೆ ಅದನ್ನು ಅವರು ಉಪೇಕ್ಷಿಸಿದರು. ಗ್ಯಾಸ್ಟ್ರಿಕ್ ಇರಬಹುದು ಎಂದು ಅದರ ಬಗ್ಗೆ ಗಮನ ಹರಿಸಲಿಲ್ಲ. ಈಗ 20 ರಿಂದ 25 ಪರ್ಸೆಂಟ್ ಹಾರ್ಟ್ ಅಟ್ಯಾಕ್, ಗ್ಯಾಸ್ಟ್ರಿಟಿಸ್ ರೂಪದಲ್ಲಿ ಕಾಣಿಸಿಕೊಳ್ಳುತ್ತೆ. ಕೆಲವರು ‘ಓ ಖಾರ ತಿಂದ್ಬಿಟ್ಟಿದ್ದೀನಿ’ ಅಥವಾ ‘ಡ್ರಿಂಕ್ಸ್ ಮಾಡ್ಬಿಟ್ಟಿದ್ದೀನಿ’ ಎಂದುಕೊಂಡು ಅದನ್ನ ನಿರ್ಲಕ್ಷ್ಯ ಮಾಡುತ್ತಾರೆ. ಅದು ಸರಿಯಲ್ಲ’ ಎಂದು ಮಂಜುನಾಥ್ ಹೇಳಿದ್ದಾರೆ.

‘ಇನ್ನು ಕೆಲವರಿಗೆ ಹೃದಯಾಘಾತ ಆಗುವ ಮುಂಚೆ ಗಂಟಲು ನೋವು ಬರಬಹುದು, ಅಥವಾ ದವಡೆಯಲ್ಲಿ ನೋವು ಬರಬಹುದು. ಇನ್ನು ಕೆಲವರಿಗೆ ಬೆನ್ನಿನ ಮೇಲ್ಭಾಗದಲ್ಲಿ ನೋವು ಬರಬಹುದು. ಆ ನೋವುಗಳನ್ನು, ಆ ಸೂಚನೆಗಳನ್ನು ನಾವು ನಿರ್ಲಕ್ಷ್ಯ ಮಾಡಬಾರದು. ನಾವುಗಳು ರಕ್ತದ ಒತ್ತಡ, ಸಕ್ಕರೆ ಅಂಶ, ಕೊಲೆಸ್ಟ್ರಾಲ್ ಇದೆಲ್ಲವನ್ನೂ ನಾವು ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕು. ಕಡ್ಡಾಯವಾಗಿ ವ್ಯಾಯಾಮ ಮಾಡಬೇಕು, ಆದರೆ ಅತಿಯಾದ ವ್ಯಾಯಾಮವೂ ಸಹ ಒಳ್ಳೆಯದಲ್ಲ’ ಎಂದು ವೈದ್ಯ ಮಂಜುನಾಥ್ ಹೇಳಿದ್ದಾರೆ.

ಇದನ್ನೂ ಓದಿ:‘ಲವ್ ಮಾಕ್ಟೆಲ್ 3’ ಸೆಟ್​ನಲ್ಲಿ ದಿಲೀಪ್ ರಾಜ್: ಸುಂದರ ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ

‘ನೈಸರ್ಗಿಕವಾದ ಪ್ರೋಟೀನ್ ಅನ್ನು ಸೇವಿಸುವುದಕ್ಕೆ ನಾವು ಹೆಚ್ಚು ಒತ್ತು ನೀಡಬೇಕು.ಮೊಳಕೆ ಕಾಳುಗಳು ಆಗಬಹುದು, ಬೇಳೆಕಾಳುಗಳು ಆಗಬಹುದು, ಮೊಟ್ಟೆ ಆಗಬಹುದು, ಹಣ್ಣು, ತರಕಾರಿಗಳು ಹೆಚ್ಚು ಸೇವನೆ ಮಾಡಬೇಕು. ಇತ್ತೀಚೆಗೆ ಬೇಗ ಸಾಧನೆ ಮಾಡುವ ಹಪಹಪಿ ಎಲ್ಲರಲ್ಲೂ ಹೆಚ್ಚಾಗಿದೆ, ನಾನು ಬೇಗ ಕರಿಯರ್ ಬಿಲ್ಡ್ ಮಾಡಬೇಕು’ ಅನ್ನೋ ಅತಿಯಾದ ಆಸೆ ಒಂದಿದೆ, ಯಾವುದೇ ಕ್ಷೇತ್ರ ಆಗಬಹುದು ಅದು. ಅದು ವೃತ್ತಿಪರ ಕ್ಷೇತ್ರ ಆಗಬಹುದು, ವೃತ್ತಿ ಬೇರೆ ತರ… ಆಮೇಲೆ ಏನಾಗಿದೆ ಸಂತೋಷ ಇಲ್ಲ, ನೆಮ್ಮದಿ ಇಲ್ಲ, ನಿದ್ದೆ ಇಲ್ಲ ಇವುಗಳಿಂದ ದೇಹದ ಮೇಲೆ ಒತ್ತಡ ಹೆಚ್ಚಾಗಿದೆ’ ಎಂದು ಮಂಜುನಾಥ್ ಅವರು ವಿವರಿಸಿದ್ದಾರೆ.

ದಿಲೀಪ್ ರಾಜ್ ಅವರು ನಟರಾಗಿದ್ದ ಜೊತೆಗೆ ನಿರ್ಮಾಪಕರೂ ಆಗಿದ್ದರು. ದಿಲೀಪ್ ರಾಜ್ ಅಗಲಿಕೆ ಬಳಿಕ ಟಿವಿ ಲೋಕದಲ್ಲಿನ ಒತ್ತಡದ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಒಟ್ಟಾರೆ ಒಬ್ಬ ಅದ್ಭುತವಾದ ನಟ, ವ್ಯಕ್ತಿ ಇಹಲೋಕ ತ್ಯಜಿಸಿದ್ದಾರೆ. ಅವರ ಕುಟುಂಬವನ್ನು ಒಬ್ಬಂಟಿ ಮಾಡಿ ಹೋಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Personality Test: ನಿಮ್ಮ ನೆಚ್ಚಿನ ಹಣ್ಣು ಯಾವುದು? ಇದುವೇ ಹೇಳುತ್ತೆ ವ್ಯಕ್ತಿತ್ವದ ಗುಟ್ಟು – Kannada News | Personality Test: Your favorite fruit can reveal the secret of your personality

ಹಣ್ಣುಗಳು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅದಕ್ಕಾಗಿ ಪ್ರತಿಯೊಬ್ಬರೂ ಸಹ ಹಣ್ಣುಗಳನ್ನು ತಿನ್ನುತ್ತಾರೆ. ಆದರೆ ಕೆಲವರು ತಮ್ಮಿಷ್ಟದ ಹಣ್ಣುಗಳನ್ನು ಮಾತ್ರ ಸೇವನೆ ಮಾಡುತ್ತಾರೆ. ಕೆಲವರಿಗೆ ಮಾವು ಇಷ್ಟವಾದರೆ, ಇನ್ನೂ ಕೆಲವರಿಗೆ ಬಾಳೆ ಹಣ್ಣು ಎಂದರೆ ಸಿಕ್ಕಾಪಟ್ಟೆ ಇಷ್ಟ. ಹೀಗೆ ನೀವು ಇಷ್ಟಪಟ್ಟು ತಿನ್ನುವ  ಹಣ್ಣಿನ ಮೂಲಕವೂ ನಿಮ್ಮ ವ್ಯಕ್ತಿತ್ವದ ರಹಸ್ಯವನ್ನು ತಿಳಿದುಕೊಳ್ಳಬಹುದಂತೆ. ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಟೆಸ್ಟ್‌ (Personality Test), ಕೈ ಮೂಗು, ಕಿವಿ, ಕೂದಲು ಸೇರಿದಂತೆ ದೇಹಾಕಾರದ ಮೂಲಕ ವ್ಯಕ್ತಿತ್ವದ ರಹಸ್ಯವನ್ನು ತಿಳಿದುಕೊಳ್ಳುವಂತೆ, ನೀವು ಇಷ್ಟಪಡುವ ಹಣ್ಣಿನ ಮೂಲಕ ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿದುಕೊಳ್ಳಬಹುದು.

ನಿಮ್ಮ ನೆಚ್ಚಿನ ಹಣ್ಣು ಕೂಡ ಬಹಿರಂಗಪಡಿಸುತ್ತೆ ವ್ಯಕ್ತಿತ್ವದ ಗುಟ್ಟು:

ಕಿತ್ತಳೆ: ಕಿತ್ತಳೆ ಹಣ್ಣು ಇಷ್ಟಪಡುವ ಜನರು ತಾಳ್ಮೆಯಿಂದಿರುತ್ತಾರೆ ಮತ್ತು ಅವರು ವಿಶ್ವಾಸಾರ್ಹರು ಹೌದು.  ಅವರು ಸುಳ್ಳು ಹೇಳಲು ಇಷ್ಟಪಡುವುದಿಲ್ಲ. ಅವರು ತುಂಬಾ ಗಂಭೀರ ಮತ್ತು ಚಿಂತನಶೀಲರಾಗಿರುತ್ತಾರೆ.

ಬಾಳೆಹಣ್ಣು: ಬಾಳೆಹಣ್ಣು ಸಕಾರಾತ್ಮಕತೆ ಮತ್ತು ಭರವಸೆಯನ್ನು ಸಂಕೇತಿಸುತ್ತವೆ. ಹೀಗಿರುವಾಗ ನೀವು ಬಾಳೆಹಣ್ಣನ್ನು ಇಷ್ಟಪಡುವವರಾಗಿದ್ದರೆ ಅವು ನೀವು ದಯಾಳು ವ್ಯಕ್ತಿ ಎಂದು ಸೂಚಿಸುತ್ತವೆ. ನೀವು ಸ್ನೇಹಪರ ಮತ್ತು ಸಭ್ಯರಾಗಿರುತ್ತೀರಿ. ನಿಮ್ಮ ಒಳ್ಳೆಯ ಸ್ವಭಾವದವರಾದ ನಿಮ್ಮನ್ನು ಕೆಲವೊಮ್ಮೆ ಜನರು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಮಾವು: ಮಾವಿನ ಹಣ್ಣುಗಳನ್ನು ಇಷ್ಟಪಡುವ ಜನರು ಸಾಮಾನ್ಯವಾಗಿ ಹಠಮಾರಿಗಳಾಗಿರುತ್ತಾರೆ. ಅವರು ಎಚ್ಚರಿಕೆಯಿಂದ ಪರಿಗಣಿಸಿದ ನಂತರವೇ ಪ್ರತಿಯೊಂದು ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಮಾವಿನ ಹಣ್ಣುಗಳನ್ನು ಇಷ್ಟಪಡುವ ಜನರು ಹಠಮಾರಿಗಳಾಗಿರುತ್ತಾರೆ, ಆದರೆ ಇವರು ತರ್ಕಬದ್ಧ ಚಿಂತನೆಯನ್ನು ಹೊಂದಿರುವ ವ್ಯಕ್ತಿಗಳೂ ಹೌದು.

ಸೇಬು: ಸೇಬು ಇಷ್ಟಪಡುವವರು ಫಿಟ್ ಆಗಿರಲು ಇಷ್ಟಪಡುತ್ತಾರೆ. ಶಿಸ್ತು ಅವರ ಜೀವನದ ಒಂದು ಪ್ರಮುಖ ಭಾಗವಾಗಿದೆ. ಈ ಜನರು ಬಹಿರ್ಮುಖಿಗಳು ಮತ್ತು ಎಲ್ಲರೊಂದಿಗೂ ಬೆರೆಯಲು ಇಷ್ಟಪಡುತ್ತಾರೆ. ಅವರು ಯಾವುದೇ ಕೆಲಸವನ್ನು ಬಹಳ ಉತ್ಸಾಹದಿಂದ ಮಾಡುತ್ತಾರೆ. ಅವರು ಯಾವಾಗಲೂ ಖುಷಿಯಿಂದ ಇರಲು ಬಯಸುತ್ತಾರೆ.

ಪೇರಳೆ:  ಪೇರಳೆ ಹಣ್ಣುಗಳನ್ನು ಇಷ್ಟಪಡುವ ಜನರು ತುಂಬಾ ಉತ್ಸಾಹಭರಿತರು. ಅವರು ಸುಲಭವಾಗಿ ಚಡಪಡಿಸುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಅವರು ಸುಲಭವಾಗಿ ಕೋಪಗೊಳ್ಳುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಮುಂಗೋಪಿ ಮತ್ತು ಉತ್ಸಾಹಭರಿತರಲ್ಲದೆ, ಅವರು ಹರ್ಷಚಿತ್ತದಿಂದ ಕೂಡಿದ ವ್ಯಕ್ತಿಗಳೂ ಹೌದು.

ಚೆರ್ರಿ: ಚೆರ್ರಿ ಹಣ್ಣನ್ನು ಇಷ್ಟಪಡುವವರು ಸಾಮಾನ್ಯವಾಗಿ ಅಂತರ್ಮುಖಿಗಳಾಗಿರುತ್ತಾರೆ. ಅವರು ತುಂಬಾ ನಾಚಿಕೆ ಸ್ವಭಾವದವರು ಮತ್ತು ತಮ್ಮ ಬಗ್ಗೆ ಬಹಿರಂಗವಾಗಿ ಮಾತನಾಡಲು ಇಷ್ಟಪಡುವುದಿಲ್ಲ. ಚೆರ್ರಿ ಪ್ರಿಯರು ಸಾಮಾನ್ಯವಾಗಿ ಸರಳ ಸ್ವಭಾವದವರು, ಸುಲಭವಾಗಿ ಕ್ಷಮಿಸುವವರು ಮತ್ತು ಯಾರನ್ನೂ ಎಂದಿಗೂ ಅನುಮಾನಿಸುವುದಿಲ್ಲ.

ಇದನ್ನೂ ಓದಿ: ಕಾಲ್ಬೆರಳುಗಳಲ್ಲಿ ಕೂದಲಿದ್ದರೆ ಏನರ್ಥ ಗೊತ್ತಾ?

ಕಲ್ಲಂಗಡಿ: ಕಲ್ಲಂಗಡಿ ಹಣ್ಣನ್ನು ಇಷ್ಟಪಡುವ ಜನರು ತುಂಬಾ ಶ್ರಮಶೀಲರು, ಬಲವಾದ ಸೃಜನಶೀಲ ಪ್ರಜ್ಞೆಯನ್ನು ಹೊಂದಿರುತ್ತಾರೆ ಮತ್ತು ಸಾಕಷ್ಟು ಬುದ್ಧಿವಂತರು ಎಂದರ್ಥ.

ದಾಳಿಂಬೆ: ದಾಳಿಂಬೆ ಇಷ್ಟಪಡುವ ಜನರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿರುತ್ತಾರೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಬಯಸುತ್ತಾರೆ. ಅಲ್ಲದೆ ಅವರು ಹೆಚ್ಚು ಸಕಾರಾತ್ಮಕ ಮನಸ್ಥಿತಿಯನ್ನು ಹೊಂದಿರುವ ವ್ಯಕ್ತಿಗಳೂ ಹೌದು. ಇವರಿಗೆ ತಾಳ್ಮೆಯೂ ಹೆಚ್ಚು.

ಅನಾನಸ್: ಅನಾನಸ್ ಇಷ್ಟಪಡುವವರು ಕುತೂಹಲ ಮತ್ತು ಹಠಾತ್ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಅವರು ಸಕಾರಾತ್ಮಕ ಮತ್ತು ಉತ್ಸಾಹಭರಿತರೂ ಹೌದು. ಅಲ್ಲದೆ ಇವರು ಸ್ವಾವಲಂಬಿ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೇಸಿಗೆಯಲ್ಲೂ ಬತ್ತದ ದಕ್ಷಿಣ ಕಾಶಿಯ ಪುಷ್ಕರಣಿ: ಸಾವಿರ ವರ್ಷ ಕಳೆದ್ರೂ ಕಮ್ಮಿಯಾಗದ ಹೊಂಡದ ನೀರು – Kannada News | Mystery of Mahakuta Pushkarani: The Sacred Pond in Badami That Never Runs Dry

ಬಾಗಲಕೋಟೆ, ಮೇ 17: ರಾಜ್ಯಾದ್ಯಂತ ಬಿರುಬಿಸಿಲಿನ ಬೇಗೆ (heatwaves) ಜೋರಾಗಿದೆ. ನದಿ, ಕೆರೆ, ಕಟ್ಟೆಗಳು ಸೇರಿದಂತೆ ಬಹುತೇಕ ಜಲಮೂಲಗಳು ಸಂಪೂರ್ಣವಾಗಿ ಒಣಗುತ್ತಿವೆ. ಎಲ್ಲೆಡೆ ಬರದ ಭೀಕರ ಚಿತ್ರಣ ಕಣ್ಣೆದುರು ಬರ್ತಿದೆ. ಆದರೆ, ಇಂತಹ ಕಡು ಬೇಸಿಗೆಯಲ್ಲೂ ಮಹಾಕೂಟ (Mahakuta) ಪುಣ್ಯಕ್ಷೇತ್ರದ ಪವಿತ್ರ ಪುಷ್ಕರಣಿ ಮಾತ್ರ ಇದುವರೆಗೂ ಒಮ್ಮೆಯೂ ಬತ್ತಿಲ್ಲ. ಬಿರುಬಿಸಿಲಿನಲ್ಲೂ ಸದಾ ಕಾಲ ಕಣ್ಣು ತುಂಬಿಕೊಳ್ಳುವಂತೆ ಕಂಗೊಳಿಸುತ್ತಿದ್ದು, ಭಕ್ತರು ಪುಣ್ಯಸ್ನಾನದಲ್ಲಿ ಮಿಂದೇಳುತ್ತಿದ್ದಾರೆ.

ಮುಖ್ಯಾಂಶಗಳು

  • ಸಾವಿರ ವರ್ಷ ಕಳೆದ್ರೂ ಕಮ್ಮಿಯಾಗದ ಹೊಂಡದ ನೀರು
  • ಚರ್ಮರೋಗ ನೀಗಿಸುವ ಮಹಾಕೂಟದ ಪವಿತ್ರ ತೀರ್ಥ
  • ಪುಣ್ಯಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ: ಭಕ್ತರು ಆಕ್ರೋಶ

ಒಂದೇ ಒಂದು ಬಾರಿಯೂ ಬತ್ತದ ಪುಷ್ಕರಣಿ 

ಚಾಲುಕ್ಯರ ಐತಿಹಾಸಿಕ ತಾಣ, ‘ದಕ್ಷಿಣ ಕಾಶಿ’ ಎಂದೇ ಮಹಾಕೂಟ ಕ್ಷೇತ್ರ ಪ್ರಸಿದ್ಧಿಯಾಗಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಹಾಕೂಟ ಪುಣ್ಯಕ್ಷೇತ್ರಕ್ಕೆ ರಾಜ್ಯ, ಹೊರರಾಜ್ಯ ಮಾತ್ರವಲ್ಲದೇ ದೇಶ-ವಿದೇಶಗಳಿಂದಲೂ ಪ್ರವಾಸಿಗರು ಲಗ್ಗೆ ಇಡುತ್ತಾರೆ. ಇಲ್ಲಿಗೆ ಬರುವ ಭಕ್ತರನ್ನು ಪ್ರಮುಖವಾಗಿ ಆಕರ್ಷಿಸುವುದೇ ಈ ಪುಷ್ಕರಣಿ ಹೊಂಡ. ಈಗ ರಾಜ್ಯದ ಎಲ್ಲೆಡೆ ಭೀಕರ ಬರಗಾಲವಿದ್ದರೂ, ಈ ಪವಿತ್ರ ಹೊಂಡದ ನೀರು ಮಾತ್ರ ಇದುವರೆಗೂ ಒಂದೇ ಒಂದು ಬಾರಿಯೂ ಬತ್ತಿದ ಇತಿಹಾಸವಿಲ್ಲ.

ಇದನ್ನೂ ಓದಿ: ಬಿಸಿಲ ಝಳಕ್ಕೆ ಭಣಗುಡುತ್ತಿವೆ ಐತಿಹಾಸಿಕ ತಾಣಗಳು: ಬಾದಾಮಿ, ಐಹೊಳೆ, ಪಟ್ಟದಕಲ್ಲಿಗೆ ಪ್ರವಾಸಿಗರ ಬರ

ಚಾಲುಕ್ಯರ ಕಾಲದಲ್ಲಿ ಅತ್ಯಂತ ವೈಜ್ಞಾನಿಕವಾಗಿ ಮತ್ತು ಕಲಾತ್ಮಕವಾಗಿ ನಿರ್ಮಾಣವಾಗಿರುವ ಈ ಪುಷ್ಕರಣಿ ಹೊಂಡ ಮಹಾಕೂಟೇಶ್ವರ ದೇವಸ್ಥಾನದ ಪಕ್ಕದಲ್ಲೇ ಇದೆ. ದೇವಸ್ಥಾನಕ್ಕೆ ಬರುವ ಭಕ್ತರು ಮೊದಲು ಈಶ್ವರನ ದರ್ಶನ ಪಡೆದು, ನಂತರ ಈ ಹೊಂಡದಲ್ಲಿ ಮಿಂದೇಳುತ್ತಾರೆ. ಈ ಪುಷ್ಕರಣಿಯ ನೀರಿನ ವಿಶೇಷತೆ ಎಂದರೆ, ಇಲ್ಲಿ ಒಮ್ಮೆ ಇಳಿದರೆ ಸಾಕು ವಾಪಸ್ ಹೊರಗೆ ಬರಲು ಮನಸ್ಸೇ ಒಪ್ಪುವುದಿಲ್ಲ. ಅಷ್ಟೊಂದು ಸುಮಧುರ ಮತ್ತು ತಂಪಾದ ಅನುಭವ ಭಕ್ತರಿಗೆ ಸಿಗುತ್ತದೆ.

ಮೈಕೈ ನೋವು; ಚರ್ಮ ರೋಗಗಳು ದೂರ

ಸಾವಿರಾರು ವರ್ಷಗಳ ಇತಿಹಾಸವಿರುವ ಈ ಹೊಂಡಕ್ಕೆ ಕಾಶಿಯಿಂದಲೇ ಗಂಗಾ ನದಿ ಅಂತರ್ಜಲದ ರೂಪದಲ್ಲಿ ಹರಿದು ಬರುತ್ತದೆ ಎಂಬ ಬಲವಾದ ನಂಬಿಕೆ ಇದೆ. ಅಲ್ಲದೇ ಈ ಪವಿತ್ರ ನೀರಿನಲ್ಲಿ ಸ್ನಾನ ಮಾಡಿದರೆ ಮೈಕೈ ನೋವು ದೂರವಾಗುವುದರ ಜೊತೆಗೆ, ಚರ್ಮ ರೋಗಗಳೂ ವಾಸಿಯಾಗುತ್ತವೆ ಎಂಬುದು ಭಕ್ತರ ಅಪಾರ ವಿಶ್ವಾಸ.

ಮೂಲಭೂತ ಸೌಕರ್ಯಗಳ ಕೊರತೆ

ಇಷ್ಟೆಲ್ಲಾ ಇತಿಹಾಸ ಮತ್ತು ಮಹತ್ವ ಹೊಂದಿರುವ ಈ ಪ್ರವಾಸಿ ತಾಣದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರುವುದು ಮಾತ್ರ ಬೇಸರದ ಸಂಗತಿ. ಇಲ್ಲಿಗೆ ಬರುವ ಮಹಿಳಾ ಪ್ರವಾಸಿಗರಿಗೆ ಬಟ್ಟೆ ಬದಲಿಸಲು ಸೂಕ್ತ ಕೊಠಡಿಗಳಿಲ್ಲ ಹಾಗೂ ಶೌಚಾಲಯದ ವ್ಯವಸ್ಥೆಯೂ ಸರಿಯಾಗಿಲ್ಲ. ಹೀಗಾಗಿ ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆ ತಕ್ಷಣವೇ ಗಮನಹರಿಸಿ, ಈ ಐತಿಹಾಸಿಕ ಸ್ಥಳಕ್ಕೆ ಇನ್ನಷ್ಟು ಮೆರುಗು ನೀಡಬೇಕೆಂದು ಭಕ್ತರಾದ ವಿನುತಾ ಮತ್ತು ಲೀಲಾ ಅವರು ಆಗ್ರಹಿಸಿದರು.

ಪವಿತ್ರ ಪುಷ್ಕರಣಿ

ಒಟ್ಟಿನಲ್ಲಿ, ಬಿಸಿಲ ನಾಡಿನ ಬರದ ಬೇಗೆಯ ನಡುವೆಯೂ ಮಹಾಕೂಟದ ಈ ಪುಷ್ಕರಣಿ ಹೊಂಡ ಭಕ್ತರ ಮೈಗೆ ತಂಪು ಎರೆೆಯುತ್ತಾ, ಮನಸ್ಸಿಗೆ ನೆಮ್ಮದಿ ನೀಡುವ ದಿವ್ಯ ತಾಣವಾಗಿ ಕಂಗೊಳಿಸುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:43 pm, Sun, 17 May 26

Source link

PBKS vs RCB: ‘49/ 3, ಮತ್ತೆ ಹೀಗ್ ಮಾಡ್ಬೇಡಿ’.. ಗೇಲಿ ಮಾಡಿದ್ದ ಪಂಜಾಬ್​ ಕಿವಿ ಹಿಂಡಿದ ಆರ್​ಸಿಬಿ – Kannada News | IPL 2026: RCB Avenge Humiliation, Trolls Punjab Kings After Playoff Qualify

2026 ರ ಐಪಿಎಲ್​ನ (IPL 2026) ಎರಡು ಬಲಿಷ್ಠ ತಂಡಗಳಾದ ಆರ್​ಸಿಬಿ ಹಾಗೂ ಪಂಜಾಬ್ ಕಿಂಗ್ಸ್ (RCB vs PBKS) ಹೈವೋಲ್ಟೇಜ್ ಕದನದಲ್ಲಿ ಇಂದು ಮುಖಾಮುಖಿಯಾಗಿದ್ದವು. ಈ ಪಂದ್ಯ ಎರಡೂ ತಂಡಗಳಿಗೆ ಸೇಡಿನ ಸಮರವಾಗಿತ್ತು. ಒಂದೆಡೆ ಪಂಜಾಬ್​ ಕಳೆದ ಐಪಿಎಲ್ ಫೈನಲ್​ನ ಸೋಲಿಗೆ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿದ್ದರೆ, ಇತ್ತ ಆರ್​ಸಿಬಿ ಸೋಶಿಯಲ್ ಮೀಡಿಯಾದಲ್ಲಿ ಪಂಜಾಬ್ ಮಾಡಿದ್ದ ಅವಮಾನಕ್ಕೆ ಸೇಡು ತೀರಿಸಿಕೊಳ್ಳುವ ಗುರಿಯೊಂದಿಗೆ ಕಣಕ್ಕಿಳಿದಿತ್ತು. ಅದರಂತೆ ಈ ಸೇಡಿನ ಸಮರದಲ್ಲಿ ಮೇಲುಗೈ ಸಾಧಿಸಿದ ಆರ್​ಸಿಬಿ, ಪಂಜಾಬ್ ತಂಡವನ್ನು ಸರಿಯಾಗಿಯೇ ಟ್ರೋಲ್ ಮಾಡಿದೆ.

ವಾಸ್ತವವಾಗಿ ಕಳೆದ ಐಪಿಎಲ್‌ ಫೈನಲ್​ನಲ್ಲಿ ಆರ್​ಸಿಬಿ ವಿರುದ್ಧ ಸೋತಿದ್ದ ಪಂಜಾಬ್ ಈ ಬಾರಿಯಾದರೂ ಟ್ರೋಫಿ ಗೆಲ್ಲಲಿ ಎಂಬುದು ಎಲ್ಲರ ಆಶಯವಾಗಿತ್ತು. ಅದರಂತೆ ಪಂಜಾಬ್ ಕೂಡ ಮೊದಲ 6 ಪಂದ್ಯಗಳಲ್ಲಿ ಚಾಂಪಿಯನ್ ಪ್ರದರ್ಶನ ನೀಡಿತ್ತು. ಹೀಗಾಗಿ ಪಂಜಾಬ್ ತಂಡಕ್ಕೆ ಆರ್​ಸಿಬಿ ಅಭಿಮಾನಿಗಳಿಂದಲೂ ಬೇಷರತ್ ಬೆಂಬಲ ಸಿಕ್ಕಿತ್ತು. ಆರ್​ಸಿಬಿ ತಂಡವನ್ನು ಬೆಂಬಲಿಸಿದ ರೀತಿಯಲ್ಲೇ ಪಂಜಾಬ್ ತಂಡವನ್ನು ಆರ್​​ಸಿಬಿ ಅಭಿಮಾನಿಗಳು ಬೆಂಬಲಿಸಿದ್ದರು. ಆದರೆ ಗೆಲುವಿನ ಅಮಲಿನಲ್ಲಿ ತೇಲುತ್ತಿದ್ದ ಪಂಜಾಬ್, ಸೋಶಿಯಲ್ ಮೀಡಿಯಾದಲ್ಲಿ ಅನಗತ್ಯ ಪೋಸ್ಟ್​​ವೊಂದನ್ನು ಹಂಚಿಕೊಂಡು ಆರ್​​ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಅಂದಿನಿಂದ ಆರ್​ಸಿಬಿ ಅಭಿಮಾನಿಗಳು ಪಂಜಾಬ್ ತಂಡವನ್ನು ಕಂಡರೆ ಉರಿದು ಬೀಳುತ್ತಿದ್ದರು.

ಆರ್​ಸಿಬಿ ಕಾಲೆಳೆದಿದ್ದ ಪಂಜಾಬ್

ಆರ್​ಸಿಬಿ ಅಭಿಮಾನಿಗಳು ಈ ಮಟ್ಟಕ್ಕೆ ಕೋಪಗೊಳ್ಳಲು ಕಾರಣವೂ ಇತ್ತು. ಏಪ್ರಿಲ್ 28 ರಂದು ನಡೆದಿದ್ದ ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್ ಮೊದಲ 4.3 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು 49 ರನ್ ಕಲೆಹಾಕಿತ್ತು. ಈ ಸ್ಕೋರ್ ಕಾರ್ಡ್​ ಅನ್ನು ಪಂಜಾಬ್ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿತ್ತು. ಈ ಪೋಸ್ಟ್ ಮೂಲಕ ಪಂಜಾಬ್, ಆರ್​ಸಿಬಿ ತಂಡವನ್ನು ಗೇಲಿ ಮಾಡುವ ಕೆಲಸ ಮಾಡಿತ್ತು.

ವಾಸ್ತವವಾಗಿ ಐಪಿಎಲ್‌ನಲ್ಲಿ ಆರ್​ಸಿಬಿ ಅತ್ಯಂತ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ. 2017 ರಲ್ಲಿ ನಡೆದಿದ್ದ ಐಪಿಎಲ್ ಪಂದ್ಯದಲ್ಲಿ ಕೆಕೆಆರ್ ನೀಡಿದ್ದ 137 ರನ್​ಗಳ ಗುರಿ ಬೆನ್ನಟ್ಟಿದ್ದ ಆರ್​ಸಿಬಿ 49 ರನ್​ಗಳಿಗೆ ಆಲೌಟ್ ಆಗಿ ಅವಮಾನಕರ ಸೋಲಿಗೆ ಕೊರಳೊಡ್ಡಿತ್ತು. ಅಂದಿನ ಕಹಿ ಘಟನೆಯನ್ನು ಆರ್​ಸಿಬಿಗೆ ಮತ್ತೆ ನೆನೆಪಿಸುವ ಕೆಲಸವನ್ನು ಪಂಜಾಬ್ ಮಾಡಿತ್ತು. ಪಂಜಾಬ್​ ಮಾಡಿದ್ದ ಪೋಸ್ಟ್​ ಆರ್​ಸಿಬಿ ಫ್ರಾಂಚೈಸಿ ಹಾಗೂ ಅದರ ಅಭಿಮಾನಿಗಳನ್ನು ಕೆರಳಿಸಿತ್ತು.

ಪಂಜಾಬ್​ ಕಿವಿ ಹಿಂಡಿದ ಆರ್​ಸಿಬಿ

ಇಂದು ನಡೆದ ಪಂದ್ಯದಲ್ಲಿ ಪಂಜಾಬ್ ತಂಡವನ್ನು 23 ರನ್​ಗಳಿಂದ ಸೋಲಿಸಿದ ಆರ್​ಸಿಬಿ ಮೊಟ್ಟ ಮೊದಲ ತಂಡವಾಗಿ ಪ್ಲೇಆಫ್​ಗೆ ಅರ್ಹತೆ ಪಡೆದಿದೆ. ಇತ್ತ ಆರ್​ಸಿಬಿ ವಿರುದ್ಧ ಸೋತ ಪಂಜಾಬ್ ಪ್ಲೇಆಫ್‌ ರೇಸ್​ನಿಂದ ಹೊರಬೀಳುವ ಆತಂಕದಲ್ಲಿದೆ. ಇದೀಗ ಏಪ್ರಿಲ್ 28 ರಂದು ಪಂಜಾಬ್ ಮಾಡಿದ್ದ ಅವಮಾನಕರ ಪೋಸ್ಟ್​ಗೆ ತಿರುಗೇಟು ನೀಡಿರುವ ಆರ್​ಸಿಬಿ, ತನ್ನ ಎಕ್ಸ್​ ಖಾತೆಯಲ್ಲಿ ಎರಡು ಪೋಸ್ಟ್​ಗಳನ್ನು ಹಂಚಿಕೊಂಡಿದೆ. ಮೊದಲನೆಯ ಪೋಸ್ಟ್​ನಲ್ಲಿ ‘6 ಓವರ್​ಗಳಲ್ಲಿ 49 ರನ್​ ನೀಡಿ 3 ವಿಕೆಟ್ ಕಿತ್ತಿದ್ದೇವೆ’ ಎಂಬುದನ್ನು ತೊರಿಸಿಲಾಗಿದೆ. ಹಾಗೆಯೇ ಎರಡನೇ ಪೋಸ್ಟ್​ನಲ್ಲಿ ‘ಪಂಜಾಬ್ ವಿರುದ್ಧ 23 ರನ್​ಗಳಿಂದ ಗೆದ್ದಿದ್ದೇವೆ. ಆಗಿದ್ದು ಆಯ್ತು, ಮತ್ತೊಮ್ಮೆ ಹೀಗೆ ಮಾಡಬೇಡಿ’ ಎಂದು ಬರೆದು ಪೋಸ್ಟ್ ಮಾಡುವ ಮೂಲಕ ಪಂಜಾಬ್ ತಂಡ ಮುಟ್ಟಿ ನೋಡಿಕೊಳ್ಳುವಂತ ಉತ್ತರ ನೀಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:43 pm, Sun, 17 May 26

Source link

ದಿಢೀರ್ 15 ಪದಾಧಿಕಾರಿಗಳ ವಜಾ: ಹೈಕಮಾಂಡ್​​ನ ಈ ದಿಟ್ಟ ಕ್ರಮಕ್ಕೆ ಕರ್ನಾಟಕ ಕಾಂಗ್ರೆಸ್​​ನಲ್ಲಿ ಸಂಚಲನ – Kannada News | Karnataka Youth Congress 15 office bearers removed By IYC

ಬೆಂಗಳೂರು, (ಮೇ 17): ಕರ್ನಾಟಕ ಯುವ ಕಾಂಗ್ರೆಸ್‌ನ (Karnataka Youth Congress) 15 ಪದಾಧಿಕಾರಿಗಳನ್ನು ಏಕಾಏಕಿ ವಜಾ ಮಾಡಲಾಗಿದೆ. ರಾಜ್ಯ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಹಾಗೂ ಎಂಟು ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಹಲವರ ಮೇಲೆ ಶಿಸ್ತುಕ್ರಮ ಜರುಗಿಸಲಾಗಿದೆ. ಸಂಘಟನಾ ಚಟುವಟಿಕೆಗಳಲ್ಲಿ ಭಾಗವಹಿಸದ ಮತ್ತು ಕರ್ತವ್ಯ ಲೋಪವೆಸಗಿದ ಹಿನ್ನೆಲೆಯಲ್ಲಿ ಹೈಕಮಾಂಡ್ ಈ ಕಠಿಣ ನಿರ್ಧಾರ ಕೈಗೊಂಡಿದೆ. ​ಕರ್ತವ್ಯ ಲೋಪ ಹಾಗೂ ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿ ನಿಷ್ಕ್ರಿಯರಾಗಿದ್ದ ಕಾರಣಕ್ಕಾಗಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅವರ ಜವಾಬ್ದಾರಿಗಳಿಂದ ತಾತ್ಕಾಲಿಕವಾಗಿ ಮುಕ್ತಗೊಳಿಸಿ ಭಾರತೀಯ ಯುವ ಕಾಂಗ್ರೆಸ್ ಆದೇಶ ಹೊರಡಿಸಿದೆ.

ಯುವ ಕಾಂಗ್ರೆಸ್ ಪದಾಧಿಕಾರಿಗಳು ಸಂಘಟನೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು, ನಾಯಕತ್ವ ಗುಣ ಪ್ರದರ್ಶಿಸಬೇಕು ಮತ್ತು ಕಡ್ಡಾಯ ಸಭೆಗಳಿಗೆ ಹಾಜರಾಗಬೇಕು ಎಂಬ ನಿಯಮವಿದೆ. ಆದರೆ, ಈ 15 ಪದಾಧಿಕಾರಿಗಳು ಕಳೆದ ಕೆಲವು ಸಮಯದಿಂದ ಸಂಘಟನಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿಲ್ಲ ಮತ್ತು ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸುತ್ತಿಲ್ಲ ಎಂಬುದು ಪರಿಶೀಲನೆಯಲ್ಲಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸಂಘಟನೆಯ ಹಿತದೃಷ್ಟಿಯಿಂದ ಹೈಕಮಾಂಡ್ ಈ ದಿಟ್ಟ ಕ್ರಮ ಕೈಗೊಂಡಿದೆ.

ಇದನ್ನೂ ಓದಿ: ದೇವೇಗೌಡರ ಭೇಟಿ ಬಳಿಕ ಜಿಟಿಡಿ ಸ್ಫೋಟಕ ಹೇಳಿಕೆ: ಎಲ್ಲಾ ಅಂತೆ-ಕಂತೆಗಳಿಗೆ ತೆರೆ!

ಮೇ 13 ರಂದೇ ಭಾರತೀಯ ಯುವ ಕಾಂಗ್ರೆಸ್ ನೀಡಿರುವ ಅಧಿಕೃತ ನೋಟಿಸ್‌ನಲ್ಲಿ ಅತ್ಯಂತ ಕಠಿಣ ಸಂದೇಶವನ್ನು ರವಾನಿಸಲಾಗಿದೆ. “ಈ ಪತ್ರದ ಮೂಲಕ ಔಪಚಾರಿಕವಾಗಿ ನಿಮಗೆ ಸೂಚನೆ ನೀಡಲಾಗುತ್ತಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಮ್ಮನ್ನು ಅಮಾನತಿನಲ್ಲಿಡಲಾಗಿದೆ . ಅಲ್ಲದೆ, KPYCC ಅಡಿಯಲ್ಲಿ ನಿಮ್ಮ ಕರ್ತವ್ಯಗಳು ಮತ್ತು ಜವಾಬ್ದಾರಿಗಳಿಂದ ನಿಮ್ಮನ್ನು ತಾತ್ಕಾಲಿಕವಾಗಿ ಮುಕ್ತಗೊಳಿಸಲಾಗಿದೆ,” ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ವಜಾಗೊಂಡ ಪದಾಧಿಕಾರಿಗಳ ಪಟ್ಟಿ ಹೀಗಿದೆ

  • ದೀಪಿಕಾ ರೆಡ್ಡಿ, ರಾಜ್ಯ ಉಪಾಧ್ಯಕ್ಷರು

ರಾಜ್ಯ ಪ್ರಧಾನ ಕಾರ್ಯದರ್ಶಿಗಳು

  • ಸಿ.ಎಸ್. ಫ್ರಾನ್ಸಿಸ್ ಬೆನಿಟೊ
  • ಬಿಂದು ಗೌಡ
  •  ಸುಮನ್ ಸೋಮಶೇಖರ್
  • ಅಫ್ನಾನಖಾನಂ
  • ಲಕ್ಷ್ಮಿ ಕೆ
  • ವಾಣಿ ಕಾಂಬ್ಳೆ
  • ದಕ್ಷಿಣಮೂರ್ತಿ ಎಸ್

ರಾಜ್ಯ ಕಾರ್ಯದರ್ಶಿಗಳು

  • ಅಬ್ದುಲ್ ರವೂಫ್ ಬಿ.ಎಂ.
  • ಸೈಯದ್ ಹುಸೇನ್ ಖಾದ್ರಿ
  • ಮೊಹಮ್ಮದ್ ಆಸಿಫ್ ಹುಸೇನ್
  • ಎಸ್.ಆರ್.ಎಸ್ ಚಂದ್ ಬಾಷಾ
  • ಗೋವರ್ಧನ್ ಜಿ.ಸಿ.
  • ಪವನ್ ಸಾಲಿಯಾನ್
  • ನವೀನ್ ಕುಮಾರ್ ಎಸ್.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

PBKS vs RCB: ಸತತ 5ನೇ ಪಂದ್ಯದಲ್ಲೂ ಫೇಲ್; ಆರ್​ಸಿಬಿ ವಿರುದ್ಧ ಯಶಸ್ಸಿನ ಹುಡುಕಾಟದಲ್ಲಿ ಶ್ರೇಯಸ್

Source link

ಸಾರ್ವಜನಿಕರೇ ಬೆಂಗಳೂರಿನ ಈ ರಸ್ತೆಗಳಲ್ಲಿ ಓಡಾಡುವಾಗ ಹುಷಾರ್!

ಬೆಂಗಳೂರು, (ಮೇ 17): ಇನ್ನೇನು ಬೇಸಿಗೆ ಕಳೆದು ಮಳೆಗಾಲ ಶುರುವಾಗಲಿದೆ. ಹೀಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಎಲ್ಲಾ ಪಾಲಿಕೆಗಳ ಆಯುಕ್ತರು ಹಾಗೂ ಜಿಬಿಎ ಅಧಿಕಾರಿಗಳಿಗೆ ಮಳೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ನೀಡಲಾಗಿದೆ. ಆದರೂ ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ. ಹೌದು..ನಗರದ ಹಲವು ಏರಿಯಾಗಳಲ್ಲಿ ಅಪಾಯಕಾರಿ ಮರಗಳು ಜನರನ್ನು ಬಲಿಪಡೆಯಲು ಕಾದು ಕುಳಿತಿವೆ. ರಾಜಾಜಿನಗರದ 13ನೇ ಮುಖ್ಯ ರಸ್ತೆಯಲ್ಲಿ ಮರದ ಕೊಂಬೆಗಳು ನೇತಾಡುತ್ತಿದ್ದು, ಯಾವಾಗ ಬೀಳುತ್ತೋ ಎನ್ನುವ ಭಯದಲ್ಲಿ ಓಡಾಡುವಂತಾಗಿದೆ. ಈ ಬಗ್ಗೆ ಸ್ಥಳೀಯರು ಸಹ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಅನಾಹುತಕ್ಕೂ ಮುನ್ನ ಕ್ರಮ ಕೈಗೊಳ್ಳುವಂತೆ ಸ್ಥಳೀಯರ ಒತ್ತಾಯಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹುಬ್ಬಳ್ಳಿಯಲ್ಲೊಂದು ಕರುಳು ಹಿಂಡುವ ಘಟನೆ: ಮಗನ ಜೀವ ಉಳಿಸಲು ಕಿವಿಯೋಲೆ ಮಾರಿದ ತಾಯಿ – Kannada News | Bone Marrow Transplant: Hubballi Mother Sells Earrings to Save Son’s Life

ಹುಬ್ಬಳ್ಳಿ, ಮೇ 17: ಕಿತ್ತು ತಿನ್ನುವ ಬಡತನ ಒಂದೆಡೆ, ಮಗನಿಗೆ ಬಂದಿರೋ ಮಹಾಮಾರಿ ರೋಗ ಮತ್ತೊಂದೆಡೆ. ಖಾಸಗಿ ಆಸ್ಪತ್ರೆಗೆ ಕೊಡಲು ಲಕ್ಷ ಲಕ್ಷ ಹಣವಿಲ್ಲದೇ ಹೆತ್ತ ತಾಯಿ (Mother) ತನ್ನ ಕಿವಿಯೋಲೆಯನ್ನೇ ಮಾರಿ ಮಗನನ್ನ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಹುಬ್ಬಳ್ಳಿ (Hubballi) ಕಿಮ್ಸ್‌ನಲ್ಲಿ ಕಣ್ಣೀರು ಹಾಕುತ್ತಾ ಪರದಾಟ ನಡೆಸಿರುವ ತಾಯಿಯನ್ನ ನೋಡಿದರೆ ಯಾರಿಗಾದರೂ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡುತ್ತವೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಈ ಹೃದಯವಿದ್ರಾವಕ ಘಟನೆಗೆ ಸಾಕ್ಷಿಯಾಗಿದೆ.

ಮುಖ್ಯಾಂಶಗಳು

  • 11 ವರ್ಷದ ಬಾಲಕನಿಗೆ ಬೋನ್ ಮ್ಯಾರೋ ಸಮಸ್ಯೆ
  • 26 ಲಕ್ಷ ರೂ. ಚಿಕಿತ್ಸಾ ವೆಚ್ಚ ಭರಿಸಲಾಗದೆ ಕೂಲಿ ಕಾರ್ಮಿಕ ದಂಪತಿ ಕಂಗಾಲು
  • ಸಿಎಂ ಪರಿಹಾರ ನಿಧಿಯಿಂದ ನೆರವಿನ ಭರವಸೆ ನೀಡಿದ ಮಹಿಳಾ ಆಯೋಗದ ಅಧ್ಯಕ್ಷೆ

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿ ಗ್ರಾಮದ ಸುನಿತಾ ಕೆಂಚಪ್ಪನವರ್ ಎಂಬುವವರು ತನ್ನ ಮಗ ಸಾಗರ್‌ನ ಜೀವ ಉಳಿಸಲು ಹೋರಾಡುತ್ತಿದ್ದಾರೆ. 11 ವರ್ಷದ ಸಾಗರ್ ಹುಟ್ಟಿದಾಗಿನಿಂದ ಚೆನ್ನಾಗಿಯೇ ಇದ್ದ, ಆದರೆ ಇತ್ತೀಚೆಗೆ ರಕ್ತದ ಕೊರತೆಯಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ. ವೈದ್ಯರ ಬಳಿ ತಪಾಸಣೆ ನಡೆಸಿದಾಗ ಬಾಲಕನಿಗೆ ಬೋನ್ ಮ್ಯಾರೋ ಟ್ರಾನ್ಸಪ್ಲೆಂಟ್ (ಮೂಳೆ ಮಜ್ಜೆ ಕಸಿ) ಸಮಸ್ಯೆ ಇರುವುದು ಬೆಳಕಿಗೆ ಬಂದಿದೆ.

ಕಿವಿಯೋಲೆಯನ್ನೇ ಮಾರಿದ ತಾಯಿ 

ಬೆಂಗಳೂರಿನ ಇಂದಿರಾಗಾಂಧಿ ಆಸ್ಪತ್ರೆ, ಜೈನ್ ಆಸ್ಪತ್ರೆ ಸೇರಿದಂತೆ ಹಲವು ಸರ್ಕಾರಿ ಆಸ್ಪತ್ರೆಗಳಿಗೆ ತಾಯಿ ಸುನಿತಾ ಅಲೆದಾಡಿದ್ದಾರೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಕಾಯಿಲೆಗೆ ಚಿಕಿತ್ಸೆ ಲಭ್ಯವಿಲ್ಲದ ಕಾರಣ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದಾರೆ. ಆದರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬರೋಬ್ಬರಿ 20 ರಿಂದ 26 ಲಕ್ಷ ರೂ ವೆಚ್ಚವಾಗುತ್ತದೆ ಎಂದು ಹೇಳಿದ್ದಾರೆ. ದಿನವಿಡೀ ಕೂಲಿ ಕೆಲಸ ಮಾಡಿ ಜೀವನ ನಡೆಸುವ ದಂಪತಿಗೆ ಅಷ್ಟೊಂದು ದೊಡ್ಡ ಮೊತ್ತ ಹೊಂದಿಸುವುದು ಅಸಾಧ್ಯದ ಮಾತಾಗಿದೆ.

ಇದನ್ನೂ ಓದಿ: ಮಗುವಿನ ಹೊಟ್ಟೆಯಲ್ಲಿದ್ದ 25 ಸೆಂ.ಮೀ ಕೂದಲಿನ ಗುಡ್ಡೆ ಹೊರಗೆ ತೆಗೆದ ವೈದ್ಯರು!

ಸದ್ಯ ಆರೋಗ್ಯ ಭಾಗ್ಯ ಸಂಜೀವಿನಿ ಯೋಜನೆಯಡಿ ಮಗನಿಗೆ ಚಿಕಿತ್ಸೆಗೆ ಸರ್ಕಾರದಿಂದ ಮಂಜೂರಾತಿ ಸಿಕ್ಕಿದೆಯಾದರೂ, ಚಿಕಿತ್ಸೆ ಆರಂಭಿಸಲು ಕನಿಷ್ಠ 2 ಲಕ್ಷ ರೂ ಹಣದ ತುರ್ತು ಅವಶ್ಯಕತೆ ಇದೆ. ಈ ವೆಚ್ಚವನ್ನು ಭರಿಸಲು ತಾಯಿ ತನ್ನ ಕಿವಿಯೋಲೆಯನ್ನೇ ಮಾರಿ ಹುಬ್ಬಳ್ಳಿ ಕಿಮ್ಸ್‌ಗೆ ಮಗನನ್ನು ಕರೆದುಕೊಂಡು ಬಂದಿದ್ದಾರೆ.

ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣ ಕೊಡಿಸುವುದಾಗಿ ಡಾ. ನಾಗಲಕ್ಷ್ಮಿ ಚೌದರಿ ಭರವಸೆ

ಇಂದು ಹುಬ್ಬಳ್ಳಿ ಕಿಮ್ಸ್‌ಗೆ ಭೇಟಿ ನೀಡಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ಮುಂದೆ ತಾಯಿ ಸುನಿತಾ ತನ್ನ ಕಣ್ಣೀರ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ತಾಯಿಯ ಅಳಲನ್ನು ಕೇಳಿ ಮನಕರಗಿದ ನಾಗಲಕ್ಷ್ಮಿ ಚೌದರಿ, ಸದ್ಯ ಚಿಕಿತ್ಸೆ ಆರಂಭಿಸಲು ಬೇಕಾಗಿರುವ 2 ಲಕ್ಷ ರೂ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಕೊಡಿಸುವ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಶಿರಸಿಯ 3ನೇ ಕ್ಲಾಸ್​ ವಿದ್ಯಾರ್ಥಿಯಿಂದ ವಿಶ್ವದಾಖಲೆ: ಶೀರ್ಷಾಸನದಲ್ಲಿ ಶಿವತಾಂಡವ ಪಠಿಸಿದ ಬಾಲ ಪ್ರತಿಭೆ

ಒಟ್ಟಿನಲ್ಲಿ ಬೋನ್ ಮ್ಯಾರೋ ಟ್ರಾನ್ಸಪ್ಲೆಂಟ್ ಸಮಸ್ಯೆ ಹೊಂದಿರುವ 11 ವರ್ಷದ ಬಾಲಕ ಸಾಗರ್, ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ನರಳುತ್ತಿದ್ದಾನೆ. ಆತನನ್ನು ಬದುಕಿಸಲು ಹೆತ್ತವರು ಕಷ್ಟ ಪಡುತ್ತಿದ್ದಾರೆ. ಹೀಗಾಗಿ ಸರ್ಕಾರ ಚಿಕಿತ್ಸೆಗೆ ಅಗತ್ಯ ನೆರವು ನೀಡಿ, ಬಾಲಕನ ಜೀವ ಉಳಿಸುವ ಕೆಲಸ ಮಾಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

PBKS vs RCB: ಪಂಜಾಬ್ ಮಣಿಸಿ ಅಧಿಕೃತವಾಗಿ ಪ್ಲೇಆಫ್​ಗೇರಿದ ಆರ್​ಸಿಬಿ – Kannada News | RCB Dominates Punjab Kings in IPL 2026 Match 61: 222 Runs Secure Playoff Race

ಐಪಿಎಲ್ 2026 ರ 61ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದವು. ಕಳೆದ ಬಾರಿಯ ಫೈನಲಿಸ್ಟ್​ಗಳ ನಡುವಿನ ಪಂದ್ಯವಾಗಿದ್ದರಿಂದ ಸಾಕಷ್ಟು ನಿರೀಕ್ಷೆಗಳಿದ್ದವು. ಒಂದೆಡೆ ಆರ್​ಸಿಬಿಗೆ ಪ್ಲೇಆಫ್‌ ಟಿಕೆಟ್ ಪಡಿಸಿಕೊಳ್ಳುವ ಇರಾದೆಯಿದ್ದರೆ, ಇತ್ತ ಪಂಜಾಬ್​ಗೆ ಕಳೆದ ಫೈನಲ್​ಗೆ ಸೇಡು ತೀರಿಸಿಕೊಳ್ಳುವುದರ ಜೊತೆಗೆ ಪ್ಲೇಆಫ್‌ ರೇಸ್​ನಲ್ಲಿ ಜೀವಂತವಾಗಿರಲು ಈ ಪಂದ್ಯದ ಗೆಲುವು ಅತ್ಯವಶ್ಯಕವಾಗಿತ್ತು. ಆದರೆ ಈ ಪಂದ್ಯದಲ್ಲಿ ಕಳೆದ ಬಾರಿಯ ಫೈನಲ್ ಫಲಿತಾಂಶವನ್ನು ಪುನರಾವರ್ತಿಸಿದ ಆರ್​ಸಿಬಿ, ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸುವ ಮೂಲಕ ತನ್ನ ಗೆಲುವಿನ ಓಟವನ್ನು ಮುಂದುವರೆಸಿತು. ಇತ್ತ ಸೋತ ಪಂಜಾಬ್ ತನ್ನ ಪ್ಲೇಆಫ್‌ ಹಾದಿಯನ್ನು ಮತ್ತಷ್ಟು ಕಠಿಣ ಮಾಡಿಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆರ್​ಸಿಬಿ 222 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಪಂಜಾಬ್ 199 ರನ್ ಗಳಿಸಲಷ್ಟೇ ಶಕ್ತವಾಗಿ 23 ರನ್​ಗಳಿಂದ ಸೋಲನುಭವಿಸಿತು.

Published On – 7:20 pm, Sun, 17 May 26

Source link

ದರ್ಶನ್ ಜೈಲು ಡೈರಿ: ಬಹಿರಂಗವಾಯ್ತು ಹಲವು ಮಾಹಿತಿ – Kannada News | Darshan Jail Dairy details here is how many he met his family members

ನಟ ದರ್ಶನ್ (Darshan)​​, ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್, ಇತ್ತೀಚೆಗಷ್ಟೆ ಜಾಮೀನಿಗಾಗಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆದರೆ ದರ್ಶನ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್, ಇನ್ನೂ ಒಂದು ವರ್ಷಗಳ ಕಾಲ ದರ್ಶನ್​​ಗೆ ಜೈಲು ಖಾಯಂ ಆಗುವಂತೆ ಮಾಡಿದೆ. ಸುಪ್ರೀಂಕೋರ್ಟ್​​ ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಸಿದ್ದ ದರ್ಶನ್, ಅರ್ಜಿಯಲ್ಲಿ ಜೈಲಿನ ಅವ್ಯವಸ್ಥೆಗಳ ಬಗ್ಗೆ ಹೇಳಿಕೊಂಡಿದ್ದರು. ಕುಟುಂಬದ ಭೇಟಿಗೆ ಅವಕಾಶ ನೀಡಲಾಗುತ್ತಿಲ್ಲ ಎಂಬುದು ಸಹ ಅವುಗಳಲ್ಲಿ ಒಂದಾಗಿತ್ತು. ಆರೋಪಕ್ಕೆ ಪ್ರತಿಯಾಗಿ ಜೈಲಧಿಕಾರಿಗಳು ದರ್ಶನ್ ಅವರ ಜೈಲು ಡೈರಿಯ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅದರ ಮಾಹಿತಿ ಇದೀಗ ಹೊರಬಿದ್ದಿದೆ.

ನಟ ದರ್ಶನ್ ಎಷ್ಟು ಬಾರಿ ಕುಟುಂಬದವರನ್ನು ಭೇಟಿ ಆಗಿದ್ದರು, ಎಷ್ಟು ಬಾರಿ ವಕೀಲರನ್ನು ಭೇಟಿ ಆಗಿದ್ದರು, ಎಷ್ಟು ಕರೆಗಳನ್ನು ಮಾಡಿದ್ದರು ಇನ್ನಿತರೆ ಮಾಹಿತಿಗಳನ್ನು ಜೈಲಧಿಕಾರಿಗಳು ನ್ಯಾಯಾಲಯಕ್ಕೆ ಒದಗಿಸಿದ್ದರು. ಅದರಂತೆ ದರ್ಶನ್ ಬರೋಬ್ಬರಿ 70ಕ್ಕೂ ಹೆಚ್ಚು ಬಾರಿ ಕುಟುಂಬದವರನ್ನು ಭೇಟಿ ಮಾಡಿದ್ದಾರೆ. 28 ಬಾರಿ ವಕೀಲರನ್ನು ಭೇಟಿ ಮಾಡಿದ್ದಾರೆ. ಇಷ್ಟು ಬಾರಿ ವಕೀಲರ ಭೇಟಿ ಮಾಡಿದ್ದರೂ ಸಹ ಜಾಮೀನು ಸಿಗದೇ ಇರುವುದು ವಿಪರ್ಯಾಸ. ಇವುಗಳ ಜೊತೆಗೆ 73 ಬಾರಿ ಫೋನ್ ಕರೆಗಳನ್ನು ನಟ ದರ್ಶನ್ ಜೈಲಿನಿಂದ ಮಾಡಿದ್ದಾರೆ.

ಇದನ್ನೂ ಓದಿ:ದರ್ಶನ್​ಗೆ ಸಿಗಲಿಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು?

ಇನ್ನು ದರ್ಶನ್​​ಗೆ ಜೈಲಿನಲ್ಲಿ ಇತರೆ ಖೈದಿಗಳಿಗೆ ಒದಗಿಸುವ ಎಲ್ಲ ಸೌಕರ್ಯಗಳ ಜೊತೆಗೆ ನ್ಯಾಯಾಲಯದ ಆದೇಶದಂತೆ ಹೆಚ್ಚುವರಿ ಬೆಡ್ ಶೀಟ್, ಬಾಚಣಿಗೆ ಇತರೆ ಸೌಲಭ್ಯಗಳನ್ನು ಸಹ ನೀಡಲಾಗಿದೆ. ಜೈಲು ಖೈದಿಗಳಿಗೆ ಎಫ್​​ಎಸ್​​ಎಸ್​ಎಐ ನಿಯಮದಂತೆ ನೀಡುವ ಊಟದ ಜೊತೆಗೆ ಹೆಚ್ಚುವರಿಯಾಗಿ ಹಾಲು ಮತ್ತು ಮೊಟ್ಟೆ ಸಹ ನೀಡಲಾಗುತ್ತಿದೆ. ಹಾಗೂ ಸಂದರ್ಶಕರು ನೀಡುವ ಡ್ರೈ ಫ್ರೂಟ್ಸ್ ಮತ್ತು ಹಣ್ಣುಗಳನ್ನು ಸ್ವೀಕರಿಸಲು ಸಹ ಅನುಮತಿ ನೀಡಲಾಗಿದೆ ಎಂದು ಜೈಲಧಿಕಾರಿಗಳು ಸುಪ್ರೀಂಕೋರ್ಟ್​​ಗೆ ಮಾಹಿತಿ ನೀಡಿದ್ದಾರೆ.

ಇತರೆ ಖೈದಿಗಳಿಂದ ಬೆದರಿಕೆ ಇದೆ ಎಂದು ಸಹ ದರ್ಶನ್, ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಅದಕ್ಕೆ ಪ್ರತಿಯಾಗಿ ದರ್ಶನ್​​ಗೆ ನೀಡಲಾಗಿರುವ ಭದ್ರತೆ ಬಗ್ಗೆಯೂ ಜೈಲಧಿಕಾರಿಗಳು ಮಾಹಿತಿ ನೀಡಿದ್ದು, ಹಗಲಿನಲ್ಲಿ ಭದ್ರತೆಗೆ ಒಬ್ಬ ಸಹಾಯಕ ಜೈಲರ್ ಮತ್ತು ವಾರ್ಡನ್ ಒಬ್ಬರನ್ನು ನೇಮಿಸಲಾಗಿದೆ. ರಾತ್ರಿ ವೇಳೆ ಇಬ್ಬರು ಹೆಡ್ ವಾರ್ಡರ್‌ಗಳು ದರ್ಶನ್ ಭದ್ರತೆ ಮತ್ತು ಕಾವಲಿಗೆ ನಿಯೋಜನೆಗೊಂಡಿದ್ದಾರೆ. ಅಷ್ಟೇ ಅಲ್ಲದೆ ಬೇರೆ ಕೈದಿಗಳು ಕಾರಿಡಾರ್‌ಗೆ ಬಾರದಂತೆ ಭದ್ರತೆಗಾಗಿ ವ್ಯವಸ್ಥೆ ಮಾಡಲಾಗಿದ್ದು ಬ್ಯಾರಕ್ ಮುಂಭಾಗದ ಕಾರಿಡಾರ್‌ನಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version