ಸಚಿನ್, ಕೊಹ್ಲಿಯಲ್ಲ: ಸರ್ವ ಶ್ರೇಷ್ಠ ಕ್ರಿಕೆಟಿಗನನ್ನು ಹೆಸರಿಸಿದ ಬ್ರೇಟ್ ಲೀ – Kannada News | Brett Lee Picks Jacques Kallis as Cricket’s Ultimate GOAT

ವಿಶ್ವ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ (GOAT – Greatest of All Time) ಯಾರು ಎಂಬ ಚರ್ಚೆ ಬಂದಾಗಲೆಲ್ಲಾ ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಅಥವಾ ವೆಸ್ಟ್ ಇಂಡೀಸ್‌ನ ವಿವಿಯನ್ ರಿಚರ್ಡ್ಸ್ ಅವರ ಹೆಸರುಗಳು ಮುಂಚೂಣಿಗೆ ಬರುತ್ತವೆ. ಆದರೆ ಆಸ್ಟ್ರೇಲಿಯಾದ ಮಾಜಿ ಮಾರಕ ವೇಗಿ ಬ್ರೆಟ್ ಲೀ ಈ ಚರ್ಚೆಗೆ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ಅವರ ಪ್ರಕಾರ, ಸಚಿನ್ ತೆಂಡೂಲ್ಕರ್ ಅವರನ್ನೂ ಮೀರಿಸಿ ಕ್ರಿಕೆಟ್ ಇತಿಹಾಸದ ಅತ್ಯಂತ ಶ್ರೇಷ್ಠ ಆಟಗಾರನಾಗಿ ನಿಲ್ಲುವುದು ಸೌತ್ ಆಫ್ರಿಕಾದ ಆಲ್‌ರೌಂಡರ್ ಜ್ಯಾಕ್ ಕಾಲಿಸ್! ಇತ್ತೀಚಿಗೆ ಪಾಡ್‌ಕಾಸ್ಟ್​ವೊಂದರಲ್ಲಿ ಮಾತನಾಡಿದ ಬ್ರೆಟ್ ಲೀ, ಈ ಕುರಿತು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಸಚಿನ್ ಶ್ರೇಷ್ಠ ಬ್ಯಾಟರ್, ಕಾಲಿಸ್ ‘GOAT’!

ಬ್ರೆಟ್ ಲೀ ತಮ್ಮ ಹೇಳಿಕೆಯಲ್ಲಿ ಬ್ಯಾಟಿಂಗ್ ಮತ್ತು ಒಟ್ಟಾರೆ ಕ್ರಿಕೆಟ್ ಸಾಮರ್ಥ್ಯದ ನಡುವಿನ ವ್ಯತ್ಯಾಸವನ್ನು ಸ್ಪಷ್ಟಪಡಿಸಿದ್ದಾರೆ. “ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಜಗತ್ತು ಕಂಡ ಅತ್ಯಂತ ಶ್ರೇಷ್ಠ ಬ್ಯಾಟರ್ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ನೀವು ಇಡೀ ಕ್ರಿಕೆಟ್ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ (GOAT) ಕ್ರಿಕೆಟಿಗನನ್ನು ಆಯ್ಕೆ ಮಾಡಬೇಕಾದರೆ, ಅಲ್ಲಿ ಜ್ಯಾಕ್ ಕಾಲಿಸ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ” ಎಂದು ಲೀ ಹೇಳಿದ್ದಾರೆ.

ಕಾಲಿಸ್ ಅವರನ್ನೇ ಆಯ್ಕೆ ಮಾಡಲು ಕಾರಣಗಳೇನು?

ಟೆಸ್ಟ್ ಮತ್ತು ಏಕದಿನ, ಎರಡೂ ಮಾದರಿಗಳಲ್ಲಿ 10,000 ಕ್ಕೂ ಹೆಚ್ಚು ರನ್ ಹಾಗೂ 250 ಕ್ಕೂ ಹೆಚ್ಚು ವಿಕೆಟ್ ಪಡೆದ ವಿಶ್ವದ ಏಕೈಕ ಆಟಗಾರ ಜ್ಯಾಕ್ ಕಾಲಿಸ್. ಇಂತಹ ಸಾಧನೆ ಮತ್ತೊಬ್ಬರಿಗೆ ಅಸಾಧ್ಯ ಎಂದು ಬ್ರೇಟ್ ಲೀ ಬಣ್ಣಿಸಿದ್ದಾರೆ.

ಕಾಲಿಸ್ ಕೇವಲ ಪಾರ್ಟ್-ಟೈಮ್ ಬೌಲರ್ ಆಗಿರಲಿಲ್ಲ. ತಂಡದ ಪ್ರಮುಖ ಬ್ಯಾಟರ್ ಆಗಿ ಆಡುವ ಜೊತೆಗೆ, ಗಂಟೆಗೆ 140 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದರು. ಅಷ್ಟೇ ಅಲ್ಲದೆ, ಸ್ಲಿಪ್ ಫೀಲ್ಡಿಂಗ್‌ನಲ್ಲಿ ಅದ್ಭುತ ಕ್ಯಾಚ್‌ಗಳನ್ನು ಹಿಡಿಯುತ್ತಿದ್ದರು.

ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದಲ್ಲಿ ಕಾಲಿಸ್ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದ ಲೀ, “ಪಂದ್ಯದ ಒತ್ತಡದ ಸಮಯದಲ್ಲಿ ಬ್ಯಾಟಿಂಗ್‌ಗೆ ಹೋಗುವ ಮುನ್ನವೂ  ಅವರ ಹೃದಯ ಬಡಿತ ಅತ್ಯಂತ ಸಾಮಾನ್ಯ ಸ್ಥಿತಿಯಲ್ಲಿರುತ್ತಿತ್ತು. ಅಷ್ಟೊಂದು ಕೂಲ್ ಆಗಿ ಅವರು ಇರುತ್ತಿದ್ದರು” ಎಂದು ನೆನಪಿಸಿಕೊಂಡಿದ್ದಾರೆ.

ಈ ಎಲ್ಲಾ ಕಾರಣಗಳಿಂದಾಗಿ ಬ್ರೇಟ್ ಲೀ ಜ್ಯಾಕ್ ಕಾಲಿಸ್ ಅವರನ್ನು ಗ್ರೇಟೆಸ್ಟ್​ ಆಫ್ ಆಲ್​ ಟೈಮ್ (GOAT)  ಕ್ರಿಕೆಟಿಗ ಎಂದು ಬಣ್ಣಿಸಿದ್ದಾರೆ.

ಸಚಿನ್ vs ಕಾಲಿಸ್ ಅಂಕಿ ಅಂಶಗಳು:

  • ಟೆಸ್ಟ್ ಕ್ರಿಕೆಟ್: ಸಚಿನ್ 15,921 ರನ್ (ಸರಾಸರಿ 53.78) ಗಳಿಸಿದ್ದರೆ, ಕಾಲಿಸ್ 13,289 ರನ್ (ಸರಾಸರಿ 55.37) ಗಳಿಸಿದ್ದಾರೆ. ಆದರೆ ಬೌಲಿಂಗ್‌ನಲ್ಲಿ ಸಚಿನ್ 46 ವಿಕೆಟ್ ಪಡೆದರೆ, ಕಾಲಿಸ್ ಬರೋಬ್ಬರಿ 292 ವಿಕೆಟ್ ಕಬಳಿಸಿದ್ದಾರೆ.
  • ಏಕದಿನ ಕ್ರಿಕೆಟ್: ಸಚಿನ್ 18,426 ರನ್ ಹಾಗೂ 154 ವಿಕೆಟ್ ಪಡೆದಿದ್ದಾರೆ. ಕಾಲಿಸ್ 11,579 ರನ್ ಹಾಗೂ 273 ವಿಕೆಟ್ ಕಬಳಿಸಿದ್ದಾರೆ.
  • ಕ್ಯಾಚ್‌ಗಳು: ಫೀಲ್ಡಿಂಗ್‌ನಲ್ಲಿ ಕಾಲಿಸ್ ಟೆಸ್ಟ್‌ನಲ್ಲಿ 200 ಕ್ಯಾಚ್‌ಗಳನ್ನು ಹಿಡಿದು ಸಚಿನ್ (115 ಕ್ಯಾಚ್) ಅವರಿಗಿಂತ ಮುಂದಿದ್ದಾರೆ.

ಬ್ರೆಟ್ ಲೀ ಮಾತ್ರವಲ್ಲದೆ, ಆಸ್ಟ್ರೇಲಿಯಾದ ಇತರ ದಿಗ್ಗಜರಾದ ರಿಕ್ಕಿ ಪಾಂಟಿಂಗ್ ಮತ್ತು ಸ್ಟೀವ್ ಸ್ಮಿತ್ ಕೂಡ ಜ್ಯಾಕ್ ಕಾಲಿಸ್ ಅವರನ್ನು ಕ್ರಿಕೆಟ್‌ನ ಅತ್ಯಂತ ಪ್ರಭಾವಶಾಲಿ ಆಟಗಾರ ಎಂದು ಈ ಹಿಂದೆ ಹಲವು ಬಾರಿ ಒಪ್ಪಿಕೊಂಡಿದ್ದಾರೆ. ಕಾಲಿಸ್ ಅವರಂತಹ ಆಟಗಾರ ತಂಡದಲ್ಲಿದ್ದರೆ ಅದು ಇಬ್ಬರು ವಿಶ್ವದರ್ಜೆಯ ಆಟಗಾರರನ್ನು ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಡಿಸಿದಂತೆ ಎಂಬುದು ಲೀ ಅವರ ಅಭಿಪ್ರಾಯವಾಗಿದೆ.

ಇದನ್ನೂ ಓದಿ: IPL 2027: ಹಾರ್ದಿಕ್ ಪಾಂಡ್ಯ ಖರೀದಿಗೆ ಐದು ಫ್ರಾಂಚೈಸಿಗಳ ಬಿಗ್ ಪ್ಲ್ಯಾನ್!

ಒಟ್ಟಾರೆಯಾಗಿ ಹೇಳುವುದಾದರೆ, ಬ್ರೆಟ್ ಲೀ ಅವರ ವಿಶ್ಲೇಷಣೆಯು ಸಚಿನ್ ಮತ್ತು ಕಾಲಿಸ್ ನಡುವಿನ ಶ್ರೇಷ್ಠತೆಯ ಚರ್ಚೆಗೆ ಹೊಸ ಆಯಾಮ ನೀಡಿದೆ. ಸಚಿನ್ ಬ್ಯಾಟಿಂಗ್‌ನಲ್ಲಿ ಸಾಟಿಯಿಲ್ಲದ ‘ದೇವರು’ ಎನಿಸಿದರೆ, ಜ್ಯಾಕ್ ಕಾಲಿಸ್ ಏಕಾಂಗಿಯಾಗಿ ಪಂದ್ಯದ ಗತಿಯನ್ನು ಬದಲಿಸಬಲ್ಲ ಅತ್ಯಂತ ಪರಿಪೂರ್ಣ ‘ಆಲ್‌ರೌಂಡರ್’ ಎಂಬುದನ್ನು ಒಪ್ಪಲೇಬೇಕಾಗುತ್ತದೆ.

Source link

ಮೈಸೂರಿನಲ್ಲಿ ಛಿದ್ರವಾಯ್ತಾ ಮಾಜಿ ಸಿಎಂ ಸಿದ್ದರಾಮಯ್ಯ ಟೀಂ?: ಕುತೂಹಲ ಮೂಡಿಸಿದ ಸಚಿವ ಸ್ಥಾನ ವಂಚಿತ ಶಾಸಕರ ಸಭೆ – Kannada News | Siddaramaiah Camp in Disarray? Meeting of Ministerial Aspirants in Mysuru Sparks Curiosity

ಮೈಸೂರು, ಆಗಸ್ಟ್​​ 11: ಇತ್ತೀಚೆಗೆ ರಚನೆಯಾದ ರಾಜ್ಯ ಸಚಿವ ಸಂಪುಟ ವಿಸ್ತರಣೆ ವೇಳೆ ಸ್ಥಾನ ವಂಚಿತರಾದ ಕಾಂಗ್ರೆಸ್‌ನ ಮೂವರು ಹಿರಿಯ ಶಾಸಕರು ಮೈಸೂರಿನಲ್ಲಿ ಪ್ರತ್ಯೇಕ ಸಭೆ ನಡೆಸಿರುವುದು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಟೀಂ ಛಿದ್ರವಾಯ್ತಾ? ಎಂಬ ಪ್ರಶ್ನೆಯೂ ಈ ಬೆಳವಣಿಗೆ ಬೆನ್ನಲ್ಲೇ ಉದ್ಭವಿಸಿದೆ. ಸಿದ್ದರಾಮಯ್ಯ ಪರಮಾಪ್ತರಾಗಿರುವ ಮಹದೇವಪ್ಪ, ಕೆ.ವೆಂಕಟೇಶ್ ಮತ್ತು ತನ್ವೀರ್ ಸೇಠ್​​ ಸಭೆ ನಡೆಸಿರೋದು ತೀವ್ರ ಕುತೂಹಲ ಮೂಡಿಸಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ತಮಿಳುನಾಡು ವಿಧಾನಸಭೆಯಲ್ಲಿ ನೀಟ್ ವಿರುದ್ಧ ನಿರ್ಣಯ; ಸರ್ಕಾರಕ್ಕೆ ಹೆಚ್ಚಿನ ವಿಪಕ್ಷಗಳ ಬೆಂಬಲ; ಬಿಜೆಪಿಯಿಂದ ಸಭಾತ್ಯಾಗ – Kannada News | Opposing NEET, Tamil Nadu government’s resolution gets support from opposition parties, except BJP

ನವದೆಹಲಿ, ಆಗಸ್ಟ್ 11: ತಮಿಳುನಾಡು ವಿಧಾನಸಭೆಯಲ್ಲಿ ನೀಟ್ (NEET) ಪರೀಕ್ಷೆಯನ್ನು ರದ್ದುಗೊಳಿಸಬೇಕೆಂದು ಕೇಂದ್ರವನ್ನು ಒತ್ತಾಯಿಸಿ ಸಿಎಂ ವಿಜಯ್ ನೇತೃತ್ವದ ಸರ್ಕಾರವು ಇಂದು ಮಂಗಳವಾರ ಮಹತ್ವದ ನಿರ್ಣಯವನ್ನು ಮಂಡಿಸಿದೆ. ಬಿಜೆಪಿ ಹೊರತುಪಡಿಸಿ ಹೆಚ್ಚಿನ ವಿಪಕ್ಷಗಳು ಸರ್ಕಾರದ ಈ ನಿರ್ಣಯಕ್ಕೆ ಬೆಂಬಲ ನೀಡಿವೆ. ಬಿಜೆಪಿ ಸದಸ್ಯರು ಈ ನಿರ್ಣಯ ವಿರೋದಿಸಿ ಸದನದಿಂದ ಹೊರನಡೆದರು.

ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್’ ತಮಿಳುನಾಡಿನ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಸರ್ಕಾರ ವಾದಿಸಿ, ರಾಜ್ಯದಲ್ಲಿ ನೀಟ್ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ವಿಧಾನಸಭೆಯಲ್ಲಿ ಅಧಿಕೃತ ನಿರ್ಣಯವನ್ನು ಮಂಡಿಸಿತು.

ರಾಜ್ಯದ ಹಕ್ಕುಗಳ ಪ್ರತಿಪಾದನೆ: ಶಿಕ್ಷಣವು ರಾಜ್ಯ ಪಟ್ಟಿಯ ವಿಷಯವಾಗಿದ್ದು, ಕೇಂದ್ರ ಸರ್ಕಾರವು ನೀಟ್ ಪರೀಕ್ಷೆಯನ್ನು ಹೇರಿರುವುದು ಫೆಡರಲ್ ವ್ಯವಸ್ಥೆಗೆ ವಿರುದ್ಧವಾಗಿದೆ ಎಂಬುದು ಸರ್ಕಾರದ ಮುಖ್ಯ ವಾದ. ತಮಿಳುನಾಡು ತನ್ನದೇ ಆದ ಪ್ರವೇಶ ಪರೀಕ್ಷಾ ವಿಧಾನವನ್ನು ಹೊಂದಲು ಬಯಸುತ್ತಿದೆ ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ: ನಶೆ ಏಟಲ್ಲ, ತಾಂತ್ರಿಕ ದೋಷ ಕಾರಣ; ಏರ್ ಇಂಡಿಯಾ ವಿಮಾನ ಗಿರಕಿ ಹೊಡೆದ ಘಟನೆಗೆ ಕಾರಣ ಹುಡುಕಿದ ತನಿಖೆ

ಬಿಜೆಪಿಯಿಂದ ವಿರೋಧ ಮತ್ತು ಸಭೆತ್ಯಾಗ: ಈ ನಿರ್ಣಯಕ್ಕೆ ತಮಿಳುನಾಡು ಬಿಜೆಪಿಯು ತೀವ್ರ ವಿರೋಧ ವ್ಯಕ್ತಪಡಿಸಿದೆ. ನಿರ್ಣಯವನ್ನು ಮಂಡಿಸಿದ ತಕ್ಷಣ ಬಿಜೆಪಿ ಶಾಸಕರು ಸದನದಲ್ಲಿ ಪ್ರತಿಭಟನೆ ನಡೆಸಿ, ಸಭಾಧ್ಯಕ್ಷರ ಬಾವಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು. ಅಂತಿಮವಾಗಿ, ಸರ್ಕಾರದ ಕ್ರಮವನ್ನು ಖಂಡಿಸಿ ಬಿಜೆಪಿ ಸದಸ್ಯರು ಸದನದಿಂದ ವಾಕೌಟ್ ಮಾಡಿದರು.

ಸರ್ಕಾರದ ಸಮರ್ಥನೆ: ವಿರೋಧ ಪಕ್ಷದ ನಾಯಕರು ಈ ನಿರ್ಣಯವನ್ನು ಕೇವಲ ರಾಜಕೀಯ ಪ್ರೇರಿತ ಎಂದು ಟೀಕಿಸಿದರೆ, ಸಿಎಂ ವಿಜಯ್ ಅವರು, “ಇದು ನಮ್ಮ ರಾಜ್ಯದ ವಿದ್ಯಾರ್ಥಿಗಳ ಭವಿಷ್ಯ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆಯಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಆಗಸ್ಟ್ 29ರಂದು ಅಮೆರಿಕದಲ್ಲಿ RSS ಮುಖ್ಯಸ್ಥ ಮೋಹನ್ ಭಾಗವತ್ ಭಾಷಣ

ರಾಜ್ಯ ಸರ್ಕಾರವು ಮಂಡಿಸಿರುವ ಈ ನಿರ್ಣಯವನ್ನು ರಾಜ್ಯಪಾಲರಿಗೆ ಕಳುಹಿಸಲಾಗುವುದು. ಅಲ್ಲಿಂದ ಇದು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕೇಂದ್ರ ಸರ್ಕಾರಕ್ಕೆ ರವಾನೆಯಾಗಬೇಕಿದೆ. ಈ ಪ್ರಕ್ರಿಯೆಯು ಕೇಂದ್ರ ಮತ್ತು ರಾಜ್ಯಗಳ ನಡುವಿನ ಮತ್ತೊಂದು ಸಂಘರ್ಷಕ್ಕೆ ನಾಂದಿ ಹಾಡುವ ಸಾಧ್ಯತೆಯಿದೆ. ಈ ಬೆಳವಣಿಗೆಯು ತಮಿಳುನಾಡು ರಾಜಕೀಯದಲ್ಲಿ ನೀಟ್ ವಿರೋಧಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬರ ವೀಕ್ಷಣೆ ವೇಳೆ ಅಧಿಕಾರಿಗಳಿಗೆ ಡಿಸಿಎಂ‌ ಪರಮೇಶ್ವರ್ ಕ್ಲಾಸ್! – Kannada News | DCM Parameshwar Lashes Out at Officials Over Shoddy Drought Relief Work and Water Crisis

ತುಮಕೂರು, ಆಗಸ್ಟ್ 11: ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಹೋಬಳಿಯ ಯಡವನಹಳ್ಳಿಗೆ ಬರ ವೀಕ್ಷಣೆಗಾಗಿ ಭೇಟಿ ನೀಡಿದ್ದು, ಗ್ರಾಮದಲ್ಲಿ ಅಳವಡಿಸಲಾಗಿದ್ದ ಕಳಪೆ ಗುಣಮಟ್ಟದ ನೀರಿನ ನಲ್ಲಿಗಳನ್ನು ಕಂಡು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಕಾಟಾಚಾರಕ್ಕೆ ಮಾಡ್ತೀರಾ?” ಎಂದು ಪ್ರಶ್ನಿಸಿದ ಪರಮೇಶ್ವರ್, ಕಳಪೆ ಕಾಮಗಾರಿಯ ಹಿಂದೆ ಕಮಿಷನ್ ದಂಧೆ ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಸಿ.ಎ.ಪಿ ಅನುದಾನದಡಿ ಕೊರೆಸಿದ ಬೋರ್‌ವೆಲ್‌ಗಳ ಪರಿಶೀಲನೆ ವೇಳೆ, ಪೈಪ್‌ಗಳು ಕಳಪೆಯಾಗಿದ್ದು, ಮಕ್ಕಳು ಸುಲಭವಾಗಿ ಕಿತ್ತಾಕಬಹುದು ಎಂದು ಎಚ್ಚರಿಸಿದರು. ಕಳಪೆ ಗುಣಮಟ್ಟದ ಕಾಮಗಾರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಗ್ರಾಮಸ್ಥರು ಮತ್ತು ರೈತರು ನೀರಿಲ್ಲದೆ ಅನುಭವಿಸುತ್ತಿರುವ ತೊಂದರೆಗಳನ್ನು ಪರಮೇಶ್ವರ್ ಅವರ ಗಮನಕ್ಕೆ ತಂದರು. ಫೆಬ್ರವರಿಯಿಂದ 14 ಹಳ್ಳಿಗಳಿಗೆ ಕುಡಿಯುವ ನೀರಿಲ್ಲ, ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು. ಉಳ್ಳಾಗಡ್ಡಿ ಬೆಳೆ ಹಾನಿ ಮತ್ತು 20 ವರ್ಷಗಳಿಂದ ನೀರಿಲ್ಲದ ಸಮಸ್ಯೆಯನ್ನು ರೈತರು ವಿವರಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಿಯಾನ್ ವಿಕ್ರಮ್ ವಿರುದ್ಧ ತನಿಖೆಗೆ ಮುಂದಾದ ಅರಣ್ಯಾಧಿಕಾರಿಗಳು, ನಟ ಮಾಡಿದ್ದೇನು? – Kannada News | Chiyaan Vikram lands in trouble after posting a video with rare animal

ಚಿಯಾನ್ ವಿಕ್ರಮ್ (Chiyaan Vikram) ತಮಿಳಿನ ಸ್ಟಾರ್ ನಟ. ‘ಅನ್ನಿಯನ್’, ‘ಸೇತು’ ಸೇರಿದಂತೆ ಹಲವಾರು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ವಿಕ್ರಂ ಅವರಿಗೆ ಈಗ ಅರಣ್ಯ ಇಲಾಖೆಯಿಂದ ಸಂಕಷ್ಟ ಎದುರಾಗಿದೆ. ಚಿಯಾನ್ ವಿಕ್ರಂ ಅವರು ಇತ್ತೀಚೆಗಷ್ಟೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಆ ವಿಡಿಯೋನಲ್ಲಿ ಅವರು ಅಪರೂಪದ ಪ್ರಾಣಿಯೊಂದನ್ನು ಹಿಡಿದುಕೊಂಡಿದ್ದರು. ಇದೀಗ ಆ ವಿಡಿಯೋ ಇಂದಲೇ ಚಿಯಾನ್ ವಿಕ್ರಂಗೆ ಸಂಕಷ್ಟ ಶುರುವಾಗಿದ್ದು, ಅರಣ್ಯ ಇಲಾಖೆ ತನಿಖೆ ನಡೆಸಲು ಮುಂದಾಗಿದೆ.

ವಿಡಿಯೋನಲ್ಲಿ ಚಿಯಾನ್ ವಿಕ್ರಂ ಅವರು ಅಪರೂಪದ ಕೋತಿಯೊಂದನ್ನು ಹಿಡಿದುಕೊಂಡಿದ್ದರು. ಆ ಕೋಪಿ ಪ್ರಭೇದದ ಪ್ರಾಣಿಯ ಹೆಸರು ‘ಲಾರ್ ಗಿಬ್ಬನ್’. ಭಾರತದಲ್ಲಿ ಇಂತಹ ಅಪರೂಪದ ಪ್ರಾಣಿಯನ್ನು ಸಾಕುವುದು ನಿಯಮಬಾಹಿರ. ಈ ಕುರಿತು ಚಿಯಾನ್ ಅವರ ವಿಡಿಯೋಕ್ಕೆ ಸಾಕಷ್ಟು ಮಂದಿ ಕಮೆಂಟ್ ಮಾಡಿದ್ದರು. ಕೂಡಲೇ ಚಿಯಾನ್ ಅವರು ವಿಡಿಯೋ ಡಿಲೀಟ್ ಮಾಡಿದ್ದಾರಾದರೂ, ವಿಡಿಯೋ ತಮಿಳುನಾಡು ಅರಣ್ಯ ಇಲಾಖೆಯ ಗಮನ ಸೆಳೆದಿದ್ದು, ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು ತನಿಖೆಗೆ ಮುಂದಾಗಿದೆ.

ಕೆಲ ಮಾಧ್ಯಮ ವರದಿಗಳ ಪ್ರಕಾರ, ಚಿಯಾನ್ ಹಿಡಿದುಕೊಂಡಿದ್ದ ಆ ಪ್ರಾಣಿಯು ಕ್ಯಾವಿನ್ ಕೇರ್ (CavinKare) ಸಂಸ್ಥಾಪಕ ಸಿ.ಕೆ. ರಂಗನಾಥನ್ ಅವರಿಗೆ ಸೇರಿದ್ದು ಎನ್ನಲಾಗಿದೆ. ರಂಗನಾಥ್, ಅವರು ವಿಕ್ರಮ್ ಅವರ ಮಗಳು ಅಕ್ಷಿತಾ ಅವರ ಪತಿಯಾದ ಮನು ರಂಜಿತ್ ಅವರ ತಂದೆಯಾಗಿದ್ದಾರೆ. ಈ ರೀಲ್ ಅನ್ನು ರಂಗನಾಥನ್ ಅವರ ಈಸ್ಟ್ ಕೋಸ್ಟ್ ರೋಡ್‌ನ ಫಾರ್ಮ್‌ಹೌಸ್‌ನಲ್ಲಿ ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ. ಆದಾಗ್ಯೂ, ವನ್ಯಜೀವಿ ಅಧಿಕಾರಿಗಳು ಈಗ ಈ ಪ್ರಾಣಿಯ ಮಾಲೀಕತ್ವ ಮತ್ತು ಕಾನೂನುಬದ್ಧತೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಜೀವನ ಆಧರಿಸಿ ಸಿನಿಮಾ ಘೋಷಿಸಿದ ಆರ್​ಜಿವಿ

ಲಾರ್ ಗಿಬ್ಬನ್ ಎಂಬುದು ಆಗ್ನೇಯ ಏಷ್ಯಾದ ಪ್ರದೇಶಗಳಲ್ಲಿ ಕಂಡುಬರುವ ಒಂದು ಕಾಡು ಪ್ರಾಣಿಯಾಗಿದ್ದು, ಈ ರೀತಿಯ ಅಪರೂಪದ ಪ್ರಾಣಿಗಳನ್ನು ಆಮದು ಮಾಡಿಕೊಳ್ಳುವುದು, ಸಾಕು ಪ್ರಾಣಿಯಾಗಿ ಇರಿಸಿಕೊಳ್ಳುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಈ ಬಗ್ಗೆ ಸಾಕಷ್ಟು ಕಠಿಣವಾದ ಕಟ್ಟಳೆಗಳು ಕಾನೂನಿನಲ್ಲಿವೆ. ಈಗ ಚಿಯಾನ್ ವಿಕ್ರಂ ವಿಡಿಯೋನಲ್ಲಿರುವ ಲಾರ್ ಗಿಬ್ಬನ್ ಪ್ರಾಣಿಯು ಅಳಿವಿನಂಚಿನಲ್ಲಿರುವ ಪ್ರಭೇದ ಎಂದು ವರ್ಗೀಕೃತವಾಗಿದೆ. ಹಾಗಾಗಿ ಚಿಯಾನ್ ವಿಕ್ರಂ ಅಥವಾ ಆ ಪ್ರಾಣಿಯನ್ನು ಹೊಂದಿರುವ ಯಾರೇ ಆಗಲಿ ಕಠಿಣ ಕಾನೂನು ಪ್ರಕ್ರಿಯೆಗೆ ಒಳಪಡಬೇಕಾಗುತ್ತದೆ. ಈ ಹಿಂದೆ ನಟ ದರ್ಶನ್ ಫಾರಂ ಹೌಸ್​​ನಲ್ಲಿ ಸಹ ಅಪರೂಪದ ಪಕ್ಷಿಗಳು ಪತ್ತೆ ಆಗಿತ್ತು, ಅರಣ್ಯ ಇಲಾಖೆಯು ನೊಟೀಸ್ ನೀಡಿ ಪಕ್ಷಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಮಲಯಾಳಂ ಸ್ಟಾರ್ ಮೋಹನ್​​ಲಾಲ್ ಸಹ ಇಂಥಹುದೇ ಕಾರಣಕ್ಕೆ ವಿವಾದಕ್ಕೆ ಸಿಲುಕಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಇಂದಿರಾ ಕ್ಯಾಂಟೀನ್​​ಗಳ ಅಡುಗೆ ಮನೆಗಳ ಮೇಲೆ ದಾಳಿ: ಇಲಿ, ಹೆಗ್ಗಣಗಳ ಕಂಡು ಹೌಹಾರಿದ ಅಧಿಕಾರಿಗಳು! – Kannada News | Food Safety Officials Raid Bengaluru’s Indira Canteens; Gottigere Outlet Seized Over Rodent Infestation

ಇಂದಿರಾ ಕ್ಯಾಂಟೀನ್​​ಗಳ ಅಡುಗೆ ಮನೆಗಳ ಮೇಲೆ ದಾಳಿImage Credit source: Tv9 Kannada

ಬೆಂಗಳೂರು, ಆಗಸ್ಟ್​​ 11: ಪಂಚತಾರಾ ಹಾಗೂ ಪ್ರಮುಖ ಸ್ಟಾರ್ ಹೋಟೆಲ್‌ಗಳ ಮೇಲೆ ದಾಳಿ ಮಾಡಿ ಅವಧಿ ಮೀರಿದ ಆಹಾರ ಪದಾರ್ಥಗಳು, ಕಳಪೆ ಗುಣಮಟ್ಟದ ಮಾಂಸ, ತರಕಾರಿಗಳ ಪತ್ತೆ ಮಾಡುವ ಮೂಲಕ ಮಾಲೀಕರಿಗೆ ಶಾಕ್​​ ಕೊಟ್ಟಿದ್ದ ಬೆಂಗಳೂರಿನ (Bengaluru) ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಇಂದೀಗ ಇಂದಿರಾ ಕ್ಯಾಂಟೀನ್‌ಗಳ ಅಡುಗೆಮನೆಗಳ ಮೇಲೆಯೂ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಕ್ಯಾಂಟೀನ್​​ಗಳ ದುರಾವಸ್ಥೆ ಕಂಡು ಹೌಹಾರಿದ್ದಾರೆ.

ಗೊಟ್ಟಿಗೆರೆಯ ಇಂದಿರಾ ಕ್ಯಾಂಟೀನ್ ಸೀಜ್​​

ಗೊಟ್ಟಿಗೆರೆ, ಲಿಂಗರಾಜಪುರ ಸೇರಿ ನಗರದ ಹಲವೆಡೆ ಇರುವ ಇಂದಿರಾ ಕ್ಯಾಂಟೀನ್​​ಗಳ ಅಡುಗೆ ಮನೆಯನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಅಡುಗೆ ಮನೆಯಲ್ಲಿ ಆಹಾರ ತಯಾರಿಕೆ ಮತ್ತು ಸಂಗ್ರಹಣಾ ವ್ಯವಸ್ಥೆ ಪರಿಶೀಲನೆಯ ಜೊತೆಗೆ ತರಕಾರಿ, ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ಆಹಾರ ಪದಾರ್ಥಗಳ ಗುಣಮಟ್ಟವನ್ನೂ ಈ ವೇಳೆ ಪರೀಕ್ಷಿಸಲಾಗಿದೆ. ಅವಧಿ ಮೀರಿದ ಹಾಗೂ ಹಾಳಾದ ಆಹಾರ ಇದೆಯೇ ಎಂಬ ಬಗ್ಗೆಯೂ ತೀವ್ರ ತಪಾಸಣೆ ನಡೆಸಲಾಗಿದೆ. ಗೊಟ್ಟಿಗೆರೆಯ ಇಂದಿರಾ ಕ್ಯಾಂಟೀನ್​​ನಲ್ಲಿ ಪರಿಶೀಲನೆ ವೇಳೆ ಹೆಗ್ಗಣ ಮತ್ತು ಇಲಿಗಳು ಕಂಡುಬಂದ ಪರಿಣಾಮ ಕ್ಯಾಂಟೀನ್​​ ಸೀಜ್​ ಮಾಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಆಹಾರ ಸುರಕ್ಷತಾ ಇಲಾಖೆ ಆಯುಕ್ತ ಶ್ರೀನಿವಾಸ್ ಅವರು, ಅಡುಗೆ ಮನೆ ಸ್ವಚ್ಛವಾಗಿರಲಿಲ್ಲ. ಹೀಗಾಗಿ ಇಂದಿರಾ ಕ್ಯಾಂಟೀನ್ ಗುತ್ತೆಗೆ ಪಡೆದವರಿಗೆ ನೋಟಿಸ್ ಕೂಡ ನೀಡಿರೋದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:  ಯುಬಿ ಸಿಟಿ ಫೈವ್ ಸ್ಟಾರ್ ಹೋಟೆಲ್‌ಗಳ ಮೇಲೆ ದಾಳಿ: 45 ಕೆಜಿ ಕೊಳೆತ ಮಾಂಸ, 15 ಲೀ. ಕರಿದ ಅಡುಗೆ ಎಣ್ಣೆ ಪತ್ತೆ

ಕೆಲ ದಿನಗಳ ಹಿಂದಷ್ಟೇ ನಗರದ ಐಷಾರಾಮಿ ಹೋಟೆಲ್​​ಗಳ ಮೇಲೆ ರೇಡ್​​ ನಡೆಸಿದ್ದ ಅಧಿಕಾರಿಗಳು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನಿಯಮಗಳಿಗೆ ಅನುಗುಣವಾಗಿರದ ಆಹಾರ ಪದಾರ್ಥಗಳನ್ನು ಪತ್ತೆ ಮಾಡಿದ್ದರು. ಮಾಂಸಾಹಾರ ಪದಾರ್ಥಗಳನ್ನು ಸಮರ್ಪಕವಾಗಿ ಪ್ರತ್ಯೇಕವಾಗಿ ಸಂಗ್ರಹಿಸದಿರುವುದು, ತಪ್ಪು ಲೇಬಲ್ ಹೊಂದಿರುವ ಆಹಾರ ಉತ್ಪನ್ನಗಳು ಹಾಗೂ ಶಿಲೀಂಧ್ರ ಬಾಧಿತ ತರಕಾರಿ ಮತ್ತು ಇತರ ಆಹಾರ ಪದಾರ್ಥಗಳೂ ಈ ವೇಳೆ ಹೋಟೆಲ್​​ಗಳಲ್ಲಿ ಕಂಡು ಬಂದಿತ್ತು. ಆ ಬೆನ್ನಲ್ಲೇ ಈಗ ಬಡವರ ಹಸಿವು ನೀಗಸಲೆಂದೇ ಸರ್ಕಾರ ಆರಂಭಿಸಿರುವ ಇಂದಿರಾ ಕ್ಯಾಂಟೀನ್​​ಗಳ ಗುತ್ತಿಗೆದಾರರಿಗೂ ಆಹಾರ ಸುರಕ್ಷತಾ ಇಲಾಖೆ ಭರ್ಜರಿ ಶಾಕ್​​ ನೀಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಖ್ಯೆ ನಿರೀಕ್ಷೆಗಿಂತ ಕಡಿಮೆ: CAG ವರದಿಯಲ್ಲಿ ಮಹತ್ವದ ಅಂಶಗಳು ಬಯಲು – Kannada News | Bengaluru Metro Ridership Falls Short of Projections, CAG Flags Revenue and Land Cost Issues

ಬೆಂಗಳೂರು, ಆಗಸ್ಟ್ 11: ಬೆಂಗಳೂರಿನ ಮೆಟ್ರೋ (BMRCL Bengaluru Metro) ರೈಲುಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಯಾಣಿಕರ ಸಂಖ್ಯೆ ದಾಖಲಾಗಿಲ್ಲ ಎಂದು ಭಾರತೀಯ ಮಹಾಲೆಕ್ಕಪರಿಶೋಧಕರ (CAG) ಕಾರ್ಯಕ್ಷಮತಾ ಲೆಕ್ಕಪರಿಶೋಧನಾ ವರದಿ ತಿಳಿಸಿದೆ. ಮೆಟ್ರೋ ಪ್ರಯಾಣಿಕರ ಸಂಖ್ಯೆ ಮತ್ತು ಆದಾಯದ ಗುರಿ ಸಾಧನೆಯಲ್ಲಿ ಭಾರಿ ಅಂತರ ಕಂಡುಬಂದಿದ್ದು, ಭೂಸ್ವಾಧೀನ ವೆಚ್ಚವೂ ಸಾವಿರಾರು ಕೋಟಿ ರೂಪಾಯಿ ಹೆಚ್ಚಾಗಿದೆ. ಸಿಎಜಿಯ (Implementation of Phase 1 and Phase 2 of Bangalore Metro Rail Project by Bangalore Metro Rail Corporation Limited) ವರದಿಯನ್ನು ಸೋಮವಾರ ಸಂಸತ್ತಿನಲ್ಲಿ ಮಂಡಿಸಲಾಗಿದೆ. ವರದಿಯಲ್ಲಿ ಬೆಂಗಳೂರು ಮೆಟ್ರೋ ಹಂತ-1 ಮತ್ತು ಹಂತ-2ರ ಯೋಜನೆ, ಹಣಕಾಸು ನಿರ್ವಹಣೆ, ಪ್ರಯಾಣಿಕರ ಸಂಖ್ಯೆ, ಭೂಸ್ವಾಧೀನ ಹಾಗೂ ಸಾರ್ವಜನಿಕ ಸಾರಿಗೆ ಸಂಪರ್ಕದ ಕುರಿತು ಹಲವು ಅಂಶಗಳನ್ನು ಉಲ್ಲೇಖಿಸಲಾಗಿದೆ.

ಪ್ರಯಾಣಿಕರ ಸಂಖ್ಯೆ ನಿರೀಕ್ಷೆಗಿಂತ ಭಾರಿ ಕಡಿಮೆ

2021ರಲ್ಲಿ ಮೆಟ್ರೋದ ಪೀಕ್ ಅವರ್ ಪೀಕ್ ಡೈರೆಕ್ಷನ್ ಟ್ರಾಫಿಕ್ (PHPDT) 6,429ರಿಂದ 8,852 ಪ್ರಯಾಣಿಕರಷ್ಟಿತ್ತು. ಆದರೆ ಹೆವಿ ಮೆಟ್ರೋ ವ್ಯವಸ್ಥೆ ಪ್ರಸ್ತಾಪಿಸಬೇಕಿದ್ದರೆ ನಿಗದಿಪಡಿಸಿದ್ದ ಮಾನದಂಡ 15,000 ಪ್ರಯಾಣಿಕರಾಗಿತ್ತು. 2023ರಲ್ಲೂ BMRCL 2007ಕ್ಕೆ ಮಾಡಿದ್ದ ಮೂಲ ಪ್ರಯಾಣಿಕರ ಗುರಿಯನ್ನು ಸಾಧಿಸಿರಲಿಲ್ಲ ಎಂದು ಸಿಎಜಿ ಗಮನಿಸಿದೆ.

ಮೆಟ್ರೋ ಆದಾಯದ ಮೇಲೂ ಪರಿಣಾಮ

ಪ್ರಯಾಣಿಕರ ಕೊರತೆಯಿಂದ ಮೆಟ್ರೋ ಆದಾಯದ ಮೇಲೂ ಪರಿಣಾಮ ಬೀರಿದೆ. 2016-17ರಿಂದ 2022-23ರ ಅವಧಿಯಲ್ಲಿ ₹7,736.70 ಕೋಟಿ ಆದಾಯದ ನಿರೀಕ್ಷೆ ಇತ್ತು. ಆದರೆ ವಾಸ್ತವವಾಗಿ ₹1,758.13 ಕೋಟಿ ಮಾತ್ರ ಸಂಗ್ರಹವಾಗಿದ್ದು, ಗುರಿಯ ಕೇವಲ 22.72% ಸಾಧನೆಯಾಗಿದೆ.

ಪ್ರಯಾಣಿಕರು ಕಡಿಮೆಯಾಗಲು ಕಾರಣವೇನು?

ಮೆಟ್ರೋ ನಿಲ್ದಾಣಗಳ ಸುತ್ತಮುತ್ತ ಸೂಕ್ತ ಕೊನೆಯ ಹಂತದ ಸಂಪರ್ಕ ವ್ಯವಸ್ಥೆ, ಬಿಎಂಟಿಸಿ ಜೊತೆ ಸಮರ್ಪಕ ಸಂಪರ್ಕ ಮತ್ತು ಪಾರ್ಕಿಂಗ್ ಸೌಲಭ್ಯಗಳ ಕೊರತೆಯೂ ಪ್ರಯಾಣಿಕರ ಸಂಖ್ಯೆ ಹೆಚ್ಚಳಕ್ಕೆ ಅಡ್ಡಿಯಾಗಿದೆ ಎಂದು ವರದಿ ಹೇಳಿದೆ.

ಭೂಸ್ವಾಧೀನ ವೆಚ್ಚ ₹6,603 ಕೋಟಿ ಹೆಚ್ಚಳ

ಮೆಟ್ರೋ ಯೋಜನೆಯ ಭೂಸ್ವಾಧೀನ ವೆಚ್ಚದಲ್ಲಿ ₹6,603.39 ಕೋಟಿ ಹೆಚ್ಚಳವಾಗಿರುವುದನ್ನು CAG ಗುರುತಿಸಿದೆ. ಹಂತ-1ರಲ್ಲಿ ₹835.81 ಕೋಟಿ ಹಾಗೂ ಹಂತ-2ರಲ್ಲಿ ₹5,767.58 ಕೋಟಿ ಹೆಚ್ಚುವರಿ ವೆಚ್ಚವಾಗಿದೆ. ಹಂತ-1ರಲ್ಲಿ 45.24 ಹೆಕ್ಟೇರ್ ಭೂಮಿ ಅಗತ್ಯವೆಂದು ಅಂದಾಜಿಸಲಾಗಿದ್ದರೂ 62.67 ಹೆಕ್ಟೇರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಹಂತ-2ರಲ್ಲಿ 165.09 ಹೆಕ್ಟೇರ್ ಅಗತ್ಯವೆಂದು ಅಂದಾಜಿಸಿದ್ದರೂ 145.16 ಹೆಕ್ಟೇರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಭೂಸ್ವಾಧೀನ ವಿಳಂಬದಿಂದ ಹೆಚ್ಚುವರಿ ₹186.86 ಕೋಟಿ ಬಡ್ಡಿ ವೆಚ್ಚವೂ ತೆರಬೇಕಾಗಿದೆ ಎಂದು ವರದಿ ಉಲ್ಲೇಖಿಸಿದೆ. ಅಲ್ಲದೆ, ₹294.72 ಕೋಟಿ ಹೆಚ್ಚುವರಿ ಭೂ ಪರಿಹಾರ ಪಾವತಿಯನ್ನೂ ಸಿಎಜಿ ಉಲ್ಲೇಖಿಸಿದೆ.

ನಾಗಸಂದ್ರ, ಪೀಣ್ಯ, ಪೀಣ್ಯ ಇಂಡಸ್ಟ್ರಿಯಲ್ ಏರಿಯಾ, ಜಾಲಹಳ್ಳಿ ಮತ್ತು ದಾಸರಹಳ್ಳಿ ಮೆಟ್ರೋ ನಿಲ್ದಾಣಗಳ ಬಳಿ ರಾಷ್ಟ್ರೀಯ ಹೆದ್ದಾರಿ ದಾಟಲು ಸೂಕ್ತ ಫುಟ್ ಓವರ್‌ಬ್ರಿಡ್ಜ್ ಅಥವಾ ಅಂಡರ್‌ಪಾಸ್‌ಗಳ ಕೊರತೆಯನ್ನೂ ಸಿಎಜಿ ಪ್ರಸ್ತಾಪಿಸಿದೆ.

ಹಣಕಾಸಿನ ಮೇಲೂ ಸಿಎಜಿ ಕಳವಳ

2013-14ರಿಂದ 2021-22ರವರೆಗೆ ಬಿಎಂಆರ್​ಸಿಎಲ್ ನಷ್ಟ ಅನುಭವಿಸಿದೆ. ಸ್ವಂತ ಆದಾಯದಿಂದ ಬಾಹ್ಯ ಸಾಲಗಳ ಮರುಪಾವತಿ ಹೊಣೆ ನಿಭಾಯಿಸಲು ಸಾಧ್ಯವಾಗದ ಕಾರಣ ರಾಜ್ಯ ಸರ್ಕಾರದ ಮೇಲಿನ ಅವಲಂಬನೆ ಮುಂದುವರಿದಿದೆ ಎಂದು ವರದಿ ಹೇಳಿದೆ. ಮೆಟ್ರೋ ಆಸ್ತಿ ಬಳಕೆಯಲ್ಲಿಯೂ ಕೊರತೆ ಕಂಡುಬಂದಿದ್ದು, ಸುಮಾರು 2.23 ಲಕ್ಷ ಚದರ ಅಡಿ ಮೆಟ್ರೋ ಆಸ್ತಿ ಖಾಲಿ ಉಳಿದಿತ್ತು. ಇದರಿಂದ ಅಂದಾಜು ₹38.53 ಕೋಟಿ ಗುತ್ತಿಗೆ ಆದಾಯದ ಅವಕಾಶ ಕಳೆದುಹೋಗಿದೆ ಎಂದು ಸಿಎಜಿ ಲೆಕ್ಕ ಹಾಕಿದೆ.

ಸಿಎಜಿ ವರದಿಯ ಪ್ರಮುಖ ಅಂಕಿ-ಅಂಶಗಳು

  • ನಿರೀಕ್ಷಿತ ಆದಾಯ: ₹7,736.70 ಕೋಟಿ
  • ವಾಸ್ತವ ಆದಾಯ: ₹1,758.13 ಕೋಟಿ
  • ಗುರಿ ಸಾಧನೆ: 22.72%
  • ಭೂಸ್ವಾಧೀನ ವೆಚ್ಚ ಹೆಚ್ಚಳ: ₹6,603.39 ಕೋಟಿ
  • ಹೆಚ್ಚುವರಿ ಭೂ ಪರಿಹಾರ: ₹294.72 ಕೋಟಿ
  • ಭೂಸ್ವಾಧೀನ ವಿಳಂಬದ ಹೆಚ್ಚುವರಿ ಬಡ್ಡಿ: ₹186.86 ಕೋಟಿ
  • ಖಾಲಿ ಮೆಟ್ರೋ ಆಸ್ತಿ: 2.23 ಲಕ್ಷ ಚದರ ಅಡಿ
  • ಕಳೆದುಹೋದ ಸಾಧ್ಯ ಗುತ್ತಿಗೆ ಆದಾಯ: ₹38.53 ಕೋಟಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCF Apprentice 2026: ರೈಲ್ವೆಯಲ್ಲಿ 734 ಅಪ್ರೆಂಟಿಸ್ ಹುದ್ದೆಗಳ ಬಂಪರ್ ನೇಮಕಾತಿ; ಯಾವುದೇ ಲಿಖಿತ ಪರೀಕ್ಷೆಯಿಲ್ಲ! – Kannada News | RCF Apprentice Recruitment 2026: Apply for 734 ITI Vacancies at Kapurthala Rail Coach Factory

ರೈಲ್ವೆಯಲ್ಲಿ ಬಂಪರ್ ನೇಮಕಾತಿ
Image Credit source: Getty Images

ಭಾರತೀಯ ರೈಲ್ವೆಯ ರೈಲು ಕೋಚ್ ಫ್ಯಾಕ್ಟರಿ (RCF) ಭಾರಿ ಸಂಖ್ಯೆಯ ಅಪ್ರೆಂಟಿಸ್‌ಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಪಂಜಾಬ್​​ನಲ್ಲಿರುವ ಕಪುರ್ತಲಾದ ತಾಂತ್ರಿಕ ತರಬೇತಿ ಕೇಂದ್ರದಲ್ಲಿ ‘ಆಕ್ಟ್ ಅಪ್ರೆಂಟಿಸ್’ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 734 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಫಿಟ್ಟರ್, ಮೆಷಿನಿಸ್ಟ್, ಪೇಂಟರ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಎಲೆಕ್ಟ್ರಿಷಿಯನ್ ಸೇರಿದಂತೆ ವಿವಿಧ ಟ್ರೇಡ್‌ಗಳಲ್ಲಿ ಅವಕಾಶಗಳಿವೆ.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ ಶೇ.50 ಅಂಕಗಳೊಂದಿಗೆ 10ನೇ ತರಗತಿಯಲ್ಲಿ (ಎಸ್‌ಎಸ್‌ಎಲ್‌ಸಿ) ಉತ್ತೀರ್ಣರಾಗಿರಬೇಕು. ಇದರೊಂದಿಗೆ ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ (ITI) ಅರ್ಹತೆಯನ್ನು ಹೊಂದಿರಬೇಕಾಗುತ್ತದೆ. ಇನ್ನು ಅಭ್ಯರ್ಥಿಗಳ ವಯೋಮಿತಿಯ ಕುರಿತು ಹೇಳುವುದಾದರೆ, ಸೆಪ್ಟೆಂಬರ್ 5, 2026ರ ವೇಳೆಗೆ 15 ರಿಂದ 24 ವರ್ಷಗಳ ನಡುವೆ ಇರಬೇಕು. ಸರ್ಕಾರಿ ನಿಯಮಾವಳಿಗಳ ಪ್ರಕಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದ್ದು, ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಸಡಿಲಿಕೆ ಲಭ್ಯವಿರುತ್ತದೆ.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ಅರ್ಜಿ ಶುಲ್ಕದ ವಿವರ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದರೆ ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಬಿಡಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ, ಅಂದರೆ ಅವರು ಉಚಿತವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಆಯ್ಕೆ ಪ್ರಕ್ರಿಯೆ ಮತ್ತು ಪ್ರಮುಖ ಮಾಹಿತಿ:

ಈ ಅಪ್ರೆಂಟಿಸ್‌ಶಿಪ್ ನೇಮಕಾತಿಯಲ್ಲಿ ಅಭ್ಯರ್ಥಿಗಳಿಗೆ ಯಾವುದೇ ಲಿಖಿತ ಪರೀಕ್ಷೆ ಅಥವಾ ನೇರ ಸಂದರ್ಶನ ಇರುವುದಿಲ್ಲ. ಅಭ್ಯರ್ಥಿಗಳು 10ನೇ ತರಗತಿ ಮತ್ತು ಐಟಿಐ ಪರೀಕ್ಷೆಯಲ್ಲಿ ಪಡೆದ ಅಂಕಗಳ (ಮೆರಿಟ್) ಆಧಾರದ ಮೇಲೆ ಅಭ್ಯರ್ಥಿಗಳನ್ನು ನೇರವಾಗಿ ಆಯ್ಕೆ ಮಾಡಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 5 ರೊಳಗೆ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಲಾದ ಶೈಕ್ಷಣಿಕ ಅರ್ಹತೆಗಳು, ವ್ಯಾಪಾರ-ವಾರು (Trade-wise) ಖಾಲಿ ಹುದ್ದೆಗಳು ಮತ್ತು ಇತರ ಶರತ್ತುಗಳನ್ನು ಕೂಲಂಕಷವಾಗಿ ಪರಿಶೀಲಿಸುವುದು ಸೂಕ್ತ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On – 1:20 pm, Tue, 11 August 26

Source link

ಹೈಸ್ಕೂಲ್, ಪಿಯುಸಿ ಮಕ್ಕಳಿಗೆ ಸಿಗಲಿದೆ ಬಿಗ್ ಮೆಂಟಲ್ ಹೆಲ್ತ್ ಸಪೋರ್ಟ್! – Kannada News | Karnataka to Boost Mental Health Support for High School and PU Students

ಬೆಂಗಳೂರು, ಆಗಸ್ಟ್ 11: ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡ, ಖಿನ್ನತೆ ಮತ್ತು ಶೈಕ್ಷಣಿಕ ಆತಂಕಗಳನ್ನು ನಿವಾರಿಸಲು ಕರ್ನಾಟಕ ಸರ್ಕಾರವು ಅತ್ಯಂತ ಮಹತ್ವದ ಹೆಜ್ಜೆಯನ್ನಿಟ್ಟಿದೆ. ರಾಜ್ಯದ ಪ್ರೌಢಶಾಲೆ (High School) ಹಾಗೂ ಪದವಿ ಪೂರ್ವ (PU) ವಿದ್ಯಾರ್ಥಿಗಳಿಗಾಗಿ ವಿಶೇಷ ಮಾನಸಿಕ ಆರೋಗ್ಯ (Mental Health) ಬೆಂಬಲ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರ ಬೃಹತ್ ಯೋಜನೆಯೊಂದನ್ನು ರೂಪಿಸಿದೆ. ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿ, ಪರೀಕ್ಷೆಗಳ ಒತ್ತಡ ಹಾಗೂ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದಾಗಿ ಹದಿಹರೆಯದ ವಿದ್ಯಾರ್ಥಿಗಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆ ಜಂಟಿಯಾಗಿ ಈ ಹೊಸ ಕಾರ್ಯಕ್ರಮವನ್ನು ಜಾರಿಗೆ ತರುತ್ತಿವೆ.

ಯೋಜನೆಯ ಪ್ರಮುಖ ಉದ್ದೇಶಗಳು ಮತ್ತು ವೈಶಿಷ್ಟ್ಯಗಳು

ವಿದ್ಯಾರ್ಥಿಗಳಿಗೆ ಕೇವಲ ಪಠ್ಯ ಶಿಕ್ಷಣ ಮಾತ್ರವಲ್ಲದೆ, ಅವರ ಒಟ್ಟಾರೆ ಮಾನಸಿಕ ಸ್ಥಿತಿಯನ್ನು ಸದೃಢಗೊಳಿಸಲು ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

  • ವಿಶೇಷ ಕೌನ್ಸಿಲಿಂಗ್ ಕೇಂದ್ರಗಳು: ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಆಪ್ತಸಮಾಲೋಚನೆ (Counseling) ನಡೆಸಲು ವಿಶೇಷ ತರಬೇತಿ ಪಡೆದ ಕೌನ್ಸಿಲರ್‌ಗಳನ್ನು ನೇಮಕ ಮಾಡಲಾಗುತ್ತದೆ ಅಥವಾ ಶಿಕ್ಷಕರಿಗೇ ವಿಶೇಷ ತರಬೇತಿ ನೀಡಲಾಗುತ್ತದೆ.
  • ಒತ್ತಡ ನಿರ್ವಹಣಾ ಕಾರ್ಯಾಗಾರಗಳು: ಪರೀಕ್ಷಾ ಸಮಯದಲ್ಲಿ ಎದುರಾಗುವ ಭಯ ಮತ್ತು ಆತಂಕವನ್ನು ಎದುರಿಸಲು ವಿದ್ಯಾರ್ಥಿಗಳಿಗೆ ನಿಯಮಿತವಾಗಿ ಯೋಗ, ಧ್ಯಾನ ಮತ್ತು ಒತ್ತಡ ನಿರ್ವಹಣೆಯ (Stress Management) ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
  • ಶಿಕ್ಷಕರು ಮತ್ತು ಪೋಷಕರಿಗೆ ಜಾಗೃತಿ: ಮಕ್ಕಳಲ್ಲಿ ಕಂಡುಬರುವ ಖಿನ್ನತೆ ಅಥವಾ ನಡವಳಿಕೆಯ ಬದಲಾವಣೆಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಲು ಶಿಕ್ಷಕರು ಹಾಗೂ ಪೋಷಕರಿಗೆ ವಿಶೇಷ ಜಾಗೃತಿ ಮೂಡಿಸುವ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಏಕಾಗ್ರತೆ ಮತ್ತು ಆತ್ಮವಿಶ್ವಾಸ ಹೆಚ್ಚಳಕ್ಕೆ ಆದ್ಯತೆ

ವಿದ್ಯಾರ್ಥಿ ದೆಸೆಯಲ್ಲೇ ಮಾನಸಿಕ ಆರೋಗ್ಯದ ಕಡೆಗೆ ಗಮನ ಹರಿಸುವುದರಿಂದ ಅವರ ಶೈಕ್ಷಣಿಕ ಸಾಧನೆ ಉತ್ತಮಗೊಳ್ಳುವುದಲ್ಲದೆ, ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರಗಳಿಗೆ ಬ್ರೇಕ್ ಹಾಕಬಹುದು ಎಂಬುದು ಸರ್ಕಾರದ ಆಶಯವಾಗಿದೆ. ಟೆಲಿ-ಮಾನಸ (Tele-MANAS) ಸಹಾಯವಾಣಿಯ ಸೌಲಭ್ಯವನ್ನು ಕೂಡ ಶಾಲಾ ಮಟ್ಟದಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆ.13ರ ಕರ್ನಾಟಕ ಬಂದ್​​ಗೆ ಕ್ಯಾಮ್ಸ್​​ನಿಂದ ನೈತಿಕ ಬೆಂಬಲ ಮಾತ್ರ: ಖಾಸಗಿ ಶಾಲೆಗಳಿಗಿಲ್ಲ ರಜೆ! – Kannada News | CAMS Withdraws Direct Support for August 13th Karnataka Bandh; Bengaluru Schools to Remain Open

ಬೆಂಗಳೂರು, ಆಗಸ್ಟ್​​ 11: ಕಾವೇರಿ ಜಲವಿವಾದ ಸಂಬಂಧ ಕನ್ನಡಪರ ಸಂಘಟನೆಗಳು ಗುರುವಾರ, ಅಂದರೆ ಆಗಸ್ಟ್ 13ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಆರಂಭದಲ್ಲಿ ಬೆಂಬಲ ಸೂಚಿಸಿದ್ದ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘಟನೆ (ಕ್ಯಾಮ್ಸ್) ಈಗ ತನ್ನ ನಿರ್ಧಾರವನ್ನು ಬದಲಾಯಿಸಿದ್ದು, ಕೇವಲ ನೈತಿಕ ಬೆಂಬಲ ನೀಡಲು ಮುಂದಾಗಿದೆ. ಹೀಗಾಗಿ ಅಂದು ಬೆಂಗಳೂರಿನ ಖಾಸಗಿ ಶಾಲೆಗಳಿಗೆ ರಜೆ ಇರುವುದಿಲ್ಲ ಎಂದು ಕ್ಯಾಮ್ಸ್ ಸ್ಪಷ್ಟಪಡಿಸಿದೆ. ಮಕ್ಕಳ ಹಿತದೃಷ್ಟಿಯಿಂದ ಬಂದ್​​ಗೆ ಬೆಂಬಲದಿಂದ ಹಿಂದೆ ಸರಿಯಲಾಗುದೆ. ಶಿಕ್ಷಕರು ಮತ್ತು ಸಿಬ್ಬಂದಿ ಕಪ್ಪು ಪಟ್ಟಿ ಧರಿಸುವ ಮೂಲಕ ನೈತಿಕ ಬೆಂಬಲ ವ್ಯಕ್ತಪಡಿಸಲಿದ್ದಾರೆ ಎಂದು ಕ್ಯಾಮ್ಸ್ ತಿಳಿಸಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version