Gold Rates: ಚಿನ್ನದ ಬೆಲೆ ಗುರುವಾರವೂ ಕುಸಿತ; ಈ ತಿಂಗಳು 10 ಗ್ರಾಮ್ ಬೆಲೆ 17,000 ರೂ ಇಳಿಕೆ

Gold Rates: ಚಿನ್ನದ ಬೆಲೆ ಗುರುವಾರವೂ ಕುಸಿತ; ಈ ತಿಂಗಳು 10 ಗ್ರಾಮ್ ಬೆಲೆ 17,000 ರೂ ಇಳಿಕೆ

ಬೆಂಗಳೂರು, ಮಾರ್ಚ್ 19: ಚಿನ್ನ ಮತ್ತು ಬೆಳ್ಳಿ ಬೆಲೆಗಳ ಸತತ ಇಳಿಕೆ ಮುಂದುವರಿದಿದೆ. ಯುಗಾದಿ ಹಬ್ಬದ ದಿನವಾದ ಇಂದು ಗುರುವಾರ ಚಿನ್ನದ ಬೆಲೆ (Gold Rates) ಒಂದು ಗ್ರಾಮ್​ಗೆ 265 ರೂಗಳಷ್ಟು ಇಳಿಕೆ ಆಗಿದೆ. ಕಳೆದ 10 ದಿನದಲ್ಲಿ ಅದರ ಬೆಲೆ ಗ್ರಾಮ್​ಗೆ 700 ರೂಗೂ ಅಧಿಕ ಮೊತ್ತದಷ್ಟು ಕಡಿಮೆಗೊಂಡಿದೆ. ಮಾರ್ಚ್ ತಿಂಗಳ ಈ 19 ದಿನದಲ್ಲಿ ಇದರ ಬೆಲೆಯಲ್ಲಿ ಬರೋಬ್ಬರಿ 1,700 ರೂಗಳಷ್ಟು ತಗ್ಗಿದೆ. ಅಂದರೆ 10 ಗ್ರಾಮ್ ಆಭರಣ ಚಿನ್ನದ ಬೆಲೆಯಲ್ಲಿ 17,000 ರೂಗಳಷ್ಟು ತಗ್ಗಿರುವುದು ಗಮನಾರ್ಹ. ಬೆಳ್ಳಿ ಬೆಲೆಯೂ ಸತತವಾಗಿ ಇಳಿದಿದೆ. ಈ ಮಾರ್ಚ್ ತಿಂಗಳಲ್ಲಿ ಅದರ ಬೆಲೆ 315 ರೂನಿಂದ 260 ರೂಗೆ ಇಳಿದಿರುವುದು ವಿಶೇ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,41,750 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,54,640 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,41,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 26,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮಾರ್ಚ್ 19ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,464 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,175 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,598 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,464 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,175 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,175 ರೂ
  • ಚೆನ್ನೈ: 14,300 ರೂ
  • ಮುಂಬೈ: 14,175 ರೂ
  • ದೆಹಲಿ: 14,190 ರೂ
  • ಕೋಲ್ಕತಾ: 14,175 ರೂ
  • ಕೇರಳ: 14,175 ರೂ
  • ಅಹ್ಮದಾಬಾದ್: 14,180 ರೂ
  • ಜೈಪುರ್: 14,190 ರೂ
  • ಲಕ್ನೋ: 14,190 ರೂ
  • ಭುವನೇಶ್ವರ್: 14,175 ರೂ

ಇದನ್ನೂ ಓದಿ: ಏಪ್ರಿಲ್ 1ರಿಂದ ಹೊಸ ಪ್ಯಾನ್ ಅಪ್ಲಿಕೇಶನ್ ನಿಯಮಗಳು ಜಾರಿಗೆ; ಅರ್ಜಿ ಪ್ರಕ್ರಿಯೆ ಸುಲಭವಿರಲ್ಲ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 585 ರಿಂಗಿಟ್ (13,845 ರುಪಾಯಿ)
  • ದುಬೈ: 544.50 ಡಿರಾಮ್ (13,811 ರುಪಾಯಿ)
  • ಅಮೆರಿಕ: 152 ಡಾಲರ್ (14,168 ರುಪಾಯಿ)
  • ಸಿಂಗಾಪುರ: 193.30 ಸಿಂಗಾಪುರ್ ಡಾಲರ್ (14,037 ರುಪಾಯಿ)
  • ಕತಾರ್: 541 ಕತಾರಿ ರಿಯಾಲ್ (13,833 ರೂ)
  • ಸೌದಿ ಅರೇಬಿಯಾ: 553 ಸೌದಿ ರಿಯಾಲ್ (13,730 ರುಪಾಯಿ)
  • ಓಮನ್: 58.05 ಒಮಾನಿ ರಿಯಾಲ್ (14,055 ರುಪಾಯಿ)
  • ಕುವೇತ್: 44.74 ಕುವೇತಿ ದಿನಾರ್ (13,600 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 260 ರೂ
  • ಚೆನ್ನೈ: 265 ರೂ
  • ಮುಂಬೈ: 260 ರೂ
  • ದೆಹಲಿ: 260 ರೂ
  • ಕೋಲ್ಕತಾ: 260 ರೂ
  • ಕೇರಳ: 265 ರೂ
  • ಅಹ್ಮದಾಬಾದ್: 260 ರೂ
  • ಜೈಪುರ್: 260 ರೂ
  • ಲಕ್ನೋ: 260 ರೂ
  • ಭುವನೇಶ್ವರ್: 265 ರೂ
  • ಪುಣೆ: 260

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕನ್ಯಾ ರಾಶಿಯವರಿಗೆ ‘ಲಕ್ಷ್ಮೀ’ ಯೋಗ ಇದ್ರೂ ಆಸ್ತಿ ಕಳೆದುಕೊಳ್ಳವ ಸಾಧ್ಯತೆ!

ಬೆಂಗಳೂರು, ಮಾ.19: ಯುಗಾದಿ ಭವಿಷ್ಯ 2026 ರ ಪ್ರಕಾರ, ಕನ್ಯಾ ರಾಶಿಯವರಿಗೆ ಈ ವರ್ಷ ಶ್ರಮದಿಂದ ಸಾಧನೆ ಲಭಿಸಲಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಹೊಸ ಕಲಿಕೆ ಸಿಗಲಿದ್ದು, ಹಣಕಾಸು ಹಾಗೂ ಲೆಕ್ಕಪತ್ರಗಳ ವಿಷಯದಲ್ಲಿ ಎಚ್ಚರಿಕೆ ವಹಿಸುವುದು ಉತ್ತಮ. ಮನೆಯ ದಾಖಲೆಗಳನ್ನು ಸುರಕ್ಷಿತವಾಗಿರಿಸಿಕೊಳ್ಳುವುದು ಮುಖ್ಯ. ಕುಟುಂಬದಲ್ಲಿ ಸಹೋದರರ ನೆರವು ದೊರೆಯುತ್ತದೆ. ಆರೋಗ್ಯದ ದೃಷ್ಟಿಯಿಂದ ಚರ್ಮದ ಸಮಸ್ಯೆಗಳ ಬಗ್ಗೆ ಜಾಗರೂಕರಾಗಿರುವುದು ಅವಶ್ಯಕ. ಉಷ್ಣ ಪದಾರ್ಥಗಳ ಸೇವನೆಯಿಂದ ದೂರವಿರುವುದು ಒಳಿತು. ಗ್ರಹಗತಿಗಳ ಬಗ್ಗೆ ನೋಡುವುದಾದರೆ, ಚಂದ್ರನ ಸ್ಥಾನ ದೇಹ ಸೌಖ್ಯವನ್ನು ನೀಡಿದರೆ, ಬುಧ ಮತ್ತು ರಾಹುವಿನ ಸ್ಥಾನಗಳು ದ್ರವ್ಯಲಾಭ ಮತ್ತು ಲಕ್ಷ್ಮಿಕರ ಯೋಗವನ್ನು ತರುತ್ತವೆ. ಆದಾಗ್ಯೂ, ರವಿ, ಕುಜ, ಶನಿ, ಗುರು ಮತ್ತು ಕೇತುಗಳ ಸ್ಥಾನಗಳು ಸ್ಥಾನಚಲನೆ, ಭಯ, ಕಲಹ, ಸ್ಥಾನನಾಶ ಮತ್ತು ಶತ್ರುಭಯವನ್ನು ಸೂಚಿಸುತ್ತವೆ. ಈ ಪ್ರತಿಕೂಲ ಪ್ರಭಾವಗಳನ್ನು ಕಡಿಮೆ ಮಾಡಲು ದೇವರ ಆರಾಧನೆ ಮತ್ತು ಧಾನ್ಯ ದಾನಗಳಂತಹ ಪರಿಹಾರಗಳನ್ನು ಕೈಗೊಳ್ಳುವುದು ಸೂಕ್ತ. ಇದರಿಂದ ಒಂಬತ್ತು ಗ್ರಹಗಳ ಶಾಂತಿ ನೆಲೆಸಲಿದ್ದು, ಉತ್ತಮ ಫಲಿತಾಂಶಗಳು ಸಿಗುತ್ತವೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Ugadi Bhavishya 2026: ಯುಗಾದಿ ವರ್ಷ ಭವಿಷ್ಯ; ತುಲಾ ರಾಶಿಯವರ ಸಮಗ್ರ ಭವಿಷ್ಯ ಮತ್ತು ಪರಿಹಾರಗಳು

2026ರ ಯುಗಾದಿ ತುಲಾ ರಾಶಿಯವರಿಗೆ ಸಮತೋಲನದ ವರ್ಷವಾಗಿರಲಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತುತಜ್ಞ ವೇದಬ್ರಹ್ಮ ಕೆ. ವೆಂಕಟೇಶ್ ಶರ್ಮಾ ಅವರು ಭವಿಷ್ಯ ನುಡಿದಿದ್ದಾರೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಪಾಲುದಾರಿಕೆಯಿಂದ ಉತ್ತಮ ಫಲಿತಾಂಶಗಳು ಸಿಗುವ ಸಾಧ್ಯತೆಯಿದೆ. ಆದಾಯ ಮತ್ತು ಖರ್ಚು ಸಮನಾಗಿರುವುದರಿಂದ ಆರ್ಥಿಕ ಸ್ಥಿತಿ ಸ್ಥಿರವಾಗಿರುತ್ತದೆ. ಕುಟುಂಬ ಮತ್ತು ದಾಂಪತ್ಯ ಜೀವನದಲ್ಲಿ ಉತ್ತಮ ಹೊಂದಾಣಿಕೆ ಹಾಗೂ ಅನ್ಯೋನ್ಯತೆ ಹೆಚ್ಚುತ್ತದೆ. ಕಳೆದ ವರ್ಷದ ಕಲಹಗಳು ದೂರವಾಗಿ ಸಂಬಂಧಗಳಲ್ಲಿ ಸಾಮರಸ್ಯ ಮೂಡಲಿದೆ.

ಆರೋಗ್ಯದ ವಿಷಯದಲ್ಲಿ ಬೆನ್ನುನೋವು ಕುರಿತು ಎಚ್ಚರ ವಹಿಸುವುದು ಅಗತ್ಯ. ಐದನೇ ರಾಹುವಿನ ಪ್ರಭಾವದಿಂದ ಕಷ್ಟಪ್ರಾಪ್ತಿಯಾಗುವ ಸಾಧ್ಯತೆಗಳಿದ್ದು, ಇದನ್ನು ನಿವಾರಿಸಲು ಸ್ವಾತಿ ನಕ್ಷತ್ರದ ದಿನ ಬೆಲ್ಲದ ಅಥವಾ ನಿಂಬೆಹಣ್ಣಿನ ದೀಪ ಹಚ್ಚುವುದು ಉತ್ತಮ ಎಂದು ಸಲಹೆ ನೀಡಲಾಗಿದೆ. ಆರನೇ ಕುಜ, ಬುಧ ಮತ್ತು ಶನಿ ಗ್ರಹಗಳು ಲಕ್ಷ್ಮೀಕರರಾಗಿರುವುದರಿಂದ ಧನಲಾಭವಾಗುವ ಸೂಚನೆಗಳಿವೆ. ದೋಷ ಪರಿಹಾರಕ್ಕಾಗಿ ಹಿಮಕುಂದಮೃಣಾಲಾಭಂ ಶ್ಲೋಕ ಪಠಣ ಹಾಗೂ ಶುಕ್ರಾಯ ನಮಃ ಜಪದಿಂದ ಶುಭ ಫಲಗಳನ್ನು ಪಡೆಯಬಹುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.

 

ಇದನ್ನೂ ಓದಿ: ಯುಗಾದಿ ಬಳಿಕ 1 ವರ್ಷ ಈ ರಾಶಿಗೆ ಸಾಕಷ್ಟು ಅದೃಷ್ಟ ಕೂಡಿಬರಲಿದೆ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಗಲಕೋಟೆ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಕಂತೆ ಕಂತೆ ಹಣ ನಾಯನೇಗಲಿ ಚೆಕ್ ಪೋಸ್ಟ್​ನಲ್ಲಿ ಸೀಜ್

ಬಾಗಲಕೋಟೆ, ಮಾರ್ಚ್ 19: ಉಪಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಅಧಿಕಾರಿಗಳು ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿದ್ದು, ದಾಖಲೆ ಇಲ್ಲದೆ ಸಾಗಿಸುತ್ತಿದ್ದ 15.50 ಲಕ್ಷ ರೂ. ನಗದನ್ನು ಜಪ್ತಿ ಮಾಡಿದ್ದಾರೆ. ಬಾಗಲಕೋಟೆ ತಾಲ್ಲೂಕಿನ ನಾಯನೇಗಲಿ ಚೆಕ್‌ಪೋಸ್ಟ್‌ನಲ್ಲಿ ನಡೆದ ವಾಹನ ತಪಾಸಣೆಯ ವೇಳೆ, ಕೆಎ-28 ಎಎ-4833 ಸಂಖ್ಯೆಯ ಸ್ವಿಫ್ಟ್ ಡಿಜೈರ್ ಕಾರಿನಲ್ಲಿ ಸಾಗಿಸುತ್ತಿದ್ದ ಹಣವನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರದಿಂದ ಕುಷ್ಟಗಿ ಕಡೆಗೆ ತೆರಳುತ್ತಿದ್ದ ಈ ಕಾರಿನಲ್ಲಿ ವಿಜಯ್ ಮೇಲಗಡೆ ಹಾಗೂ ಕುಮಾರ ಹಿರೇಮಠ ಎಂಬುವರು ಪ್ರಯಾಣಿಸುತ್ತಿದ್ದರು.

ಚುನಾವಣೆ ಹಿನ್ನಲೆಯಲ್ಲಿ ನಿಯೋಜಿಸಲಾದ ಫ್ಲೈಯಿಂಗ್ ಸ್ಕ್ವಾಡ್ ತಂಡವು ಬುಧವಾರ ಸಂಜೆ ಸುಮಾರು 7 ಗಂಟೆಯ ಸುಮಾರಿಗೆ ವಾಹನ ತಪಾಸಣೆ ನಡೆಸಿದಾಗ, ಯಾವುದೇ ಸರಿಯಾದ ದಾಖಲೆಗಳಿಲ್ಲದೆ ಸಾಗಿಸಲಾಗುತ್ತಿದ್ದ ನಗದು ಪತ್ತೆಯಾಯಿತು. ತಕ್ಷಣವೇ ಹಣವನ್ನು ವಶಕ್ಕೆ ಪಡೆದು ಮುಂದಿನ ಪರಿಶೀಲನೆಗೆ ಒಪ್ಪಿಸಲಾಗಿದೆ. ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉಪ ಚುನಾವಣೆ: ಕಾಂಗ್ರೆಸ್​​ನಲ್ಲಿ ಬಗೆಹರಿಯದ ಟಿಕೆಟ್​​ ಕಗ್ಗಂಟು; ಮುಂದುವರಿದ ಗೊಂದಲ

ಬೆಂಗಳೂರು, ಮಾರ್ಚ್​​ 19: ದಾವಣೆಗೆರೆ ದಕ್ಷಿನ ಮತ್ತು ಬಾಗಲಕೋಟೆ ಉಪ ಚುನಾವಣೆಗಳಿಗೆ ವಿಪಕ್ಷ ಬಿಜೆಪಿ ಈಗಾಗಲೇ ತನ್ನ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ. ಆದರೆ ಆಡಳಿತಾರೂಢ ಕಾಂಗ್ರೆಸ್​​ನಲ್ಲಿ ಈ ಬಗ್ಗೆ ಗೊಂದಲ ಮುಂದುವರಿದಿದ್ದು ಅಭ್ಯರ್ಥಿಗಳ ಆಯ್ಕೆಯೇ ಕಗ್ಗಂಟಾಗಿ ಮಾರ್ಪಟ್ಟಿದೆ. ಬಾಗಲಕೋಟೆಯಲ್ಲಿ ಮೇಟಿ ಕುಟುಂಬಸ್ಥರಿಗೇ ಟಿಕೆಟ್​​ ಪಕ್ಕಾ ಎನ್ನಲಾಗಿದ್ದರೂ ನಾಲ್ವರು ಮಕ್ಕಳ ಪೈಕಿ ಯಾರಿಗೆ ಪಕ್ಷ ಮಣೆ ಹಾಕಲಿದೆ ಎಂಬ ಪ್ರಶ್ನೆ ಸದ್ಯ ಉದ್ಭವಿಸಿದೆ. ಮತ್ತೊಂದೆಡೆ ದಾವಣಗೆರೆ ದಕ್ಷಿಣ ಕ್ಕ್ಷೆತ್ರದಲ್ಲಿ ಟಿಕೆಟ್​​ಗಾಗಿ ಕೈಮನೆಯ ಒಳಗೆಯೇ ಭಾರಿ ಗುದ್ದಾಟ ನಡೆಯುತ್ತಿರುವ ಕಾರಣ ಅಭ್ಯರ್ಥಿ ಯಾರಾಗಬಹುದೆಂಬ ಬಗ್ಗೆ ಸ್ವಪಕ್ಷ ನಾಯಕರಿಗೇ ಸ್ಪಷ್ಟತೆ ಸಿಕ್ಕಿಲ್ಲ.

ಮೇಟಿ ಮಕ್ಕಳ ನಡುವೆಯೇ ವಾರ್​​

ಬಾಗಲಕೋಟೆ ಉಪಚುನಾವಣೆ ಟಿಕೆಟ್​​ ವಿಚಾರವಾಗಿ ಹೆಚ್​​.ವೈ. ಮೇಟಿ ಅವರ ಮಕ್ಕಳ ನಡುವೆಯೇ ದಂಗಲ್​​ ಶುರುವಾಗಿದೆ. ಈ ಕುಟುಂಬದರೇ ಪಕ್ಕಾ ಕಾಂಗ್ರೆಸ್​​ ಕ್ಯಾಂಡಿಡೇಟ್​​ ಎನ್ನಲಾಗಿದ್ದರೂ ಮೇಟಿ ಮಕ್ಕಳ ಪೈಕಿ ಯಾರನ್ನು ಪಕ್ಷ ಆಯ್ಕೆ ಮಾಡಲಿದೆ ಎಂಬ ಗೊಂದಲ ಉದ್ಭವಿಸಿದೆ. ಯಾರಿಗೆ ಟಿಕೆಟ್​​ ಸಿಕ್ಕರೂ ಒಗ್ಗಟ್ಟಾಗಿ ಕೆಲಸ ಮಾಡುವಂತೆ ಮೇಟಿ ಮಕ್ಕಳಿಗೆ ಸಿಎಂ ಸಲಹೆ, ಸೂಚನೆಯನ್ನು ಅದಾಗಲೇ ನೀಡಿದ್ದಾರೆ. ಹೀಗಿದ್ದರೂ ಟಿಕೆಟ್​​ ಕೊಡದಿದ್ದರೆ ಬಂಡಾಯ ಸ್ಪರ್ಧೆ ಎಂದು ಮೇಟಿಯವರ ಕಿರಿಯ ಪುತ್ರಿ ಮಹಾದೇವಿ ಮೇಟಿ ಹೇಳುತ್ತಿರೋದು ತಲೆನೋವಾಗಿ ಮಾರ್ಪಟ್ಟಿದೆ. ಮಲ್ಲಿಕಾರ್ಜುನ ಮೇಟಿ ಅಥವಾ ಉಮೇಶ್ ಮೇಟಿ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್​​ ನೀಡಲು ಕೈ ನಾಯಕರು ಚರ್ಚೆ ನಡೆಸಿದ್ದು, ಆ ಪೈಕಿ ಉಮೇಶ್ ಮೇಟಿಗೆ ಬಹುತೇಕ ಟಿಕೆಟ್​​ ಸಿಗುವ ಸಾಧ್ಯತೆ ಇದೆ. ಒಂದೊಮ್ಮೆ ಹೀಗೇ ಆದಲ್ಲಿ ಮಹಾದೇವಿ ಮೇಟಿ ನಡೆ ಏನು ಎಂಬ ಬಗ್ಗೆಯೂ ಕುತೂಹಲ ಹೆಚ್ಚಿದೆ.

ಇದನ್ನೂ ಓದಿ:  ಬಾಗಲಕೋಟೆ, ದಾವಣಗೆರೆ ದಕ್ಷಿಣಕ್ಕೆ ಬಿಜೆಪಿ ಅಭ್ಯರ್ಥಿಗಳ ಘೋಷಣೆ, ಯಾರು ಗೊತ್ತಾ?

ದಾವಣೆಗೆರೆ ‘ಕೈ’ ಮನೆಯಲ್ಲಿ ದಂಗಲ್​

ಇತ್ತ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್​​ಗಾಗಿ ದೊಡ್ಡ ಪೈಪೋಟಿಯೇ ನಡೆಯುತ್ತಿದೆ. ಅಲ್ಪಸಂಖ್ಯಾತ ಸಮುದಾಯದವರೇ ಅಭ್ಯರ್ಥಿ ಆಗಬೇಕು ಎಂದು ಮುಸ್ಲಿಂ ನಾಯಕರು ಪಟ್ಟು ಹಿಡಿದ್ದರೆ, ಮತ್ತೊಂದೆಡೆ ತಮ್ಮ ಪುತ್ರ ಸಮರ್ಥ್​​ನನ್ನು ಪಕ್ಷ ಅಭ್ಯರ್ಥಿಯನ್ನಾಗಿ ಘೋಷಿಸಬೇಕೆಂದು ಸಚಿವ ಎಸ್. ಎಸ್. ಮಲ್ಲಿಕಾರ್ಜುನ ಹಠ ಹಿಡಿದಿದ್ದಾರೆ. ಕಳೆದ ಮೂರು ದಿನಗಳಿಂದ ವಿಧಾನಸಭಾ ಅಧಿವೇಶನಕ್ಕೂ ಹಾಜರಾಗದ ಮಲ್ಲಿಕಾರ್ಜುನ್​​, ಉಸ್ತುವಾರಿ ಸಮಿತಿ ಸಭೆಗೂ ಗೈರಾಗಿದ್ದಾರೆ. ಹೀಗಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ವಿಚಾರದಲ್ಲಿ ಕಾಂಗ್ರೆಸ್​​ ನಾಯಕರ ನಡುವೆಯೇ ಭಿನ್ನಾಭಿಪ್ರಾಯ ವ್ಯಕ್ತವಾಗುತ್ತಿದೆ. ಶಾಮನೂರು ಕುಟುಂಬಸ್ಥರ ಪರ ಕೆಲವು ಸಚಿವರು ಬ್ಯಾಟಿಂಗ್​​ ಮಾಡಿದ್ದರೆ, ಇನ್ನು ಕೆಲವರು ಮುಸ್ಲಿಂ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲು ಆಗ್ರಹಿಸಿದ್ದಾರೆ. ಉಸ್ತುವಾರಿ ಸಮಿತಿ ಸಭೆಯಲ್ಲೂ ಎಂಟು ಮಂದಿಯ ಹೆಸರು ಪ್ರಸ್ತಾಪವಾಗಿದ್ದು, ಆ ಪೈಕಿ ಐವರ ಹೆಸರು ಅಲ್ಪಸಂಖ್ಯಾತ ಸಮುದಾಯದವರದ್ದಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Ugadi Bhavishya 2026: ಯುಗಾದಿ ವರ್ಷ ಭವಿಷ್ಯ; ಈ ವರ್ಷ ಮಿಥುನ ರಾಶಿಯವರಿಗೆ ಹೇಗಿರಲಿದೆ?

2026ರ ಯುಗಾದಿ ಮಿಥುನ ರಾಶಿಯವರಿಗೆ ಹಲವು ಬದಲಾವಣೆಗಳನ್ನು ತರಲಿದೆ ಎಂದು ಜ್ಯೋತಿಷಿ ಕೆ. ವೆಂಕಟೇಶ್ ಶರ್ಮಾ ತಿಳಿಸಿದ್ದಾರೆ. ಈ ವರ್ಷ ಹೊಸ ಅವಕಾಶಗಳು ಮಿಥುನ ರಾಶಿಯವರನ್ನು ಹುಡುಕಿಕೊಂಡು ಬರಲಿದ್ದು, ಉದ್ಯೋಗ ಮತ್ತು ವ್ಯಾಪಾರದಲ್ಲಿ ಸಕಾರಾತ್ಮಕ ಬದಲಾವಣೆಗಳು ನಿರೀಕ್ಷಿತವಾಗಿವೆ. ಹಣಕಾಸಿನ ವಿಚಾರದಲ್ಲಿ ಮಿಶ್ರ ಫಲಿತಾಂಶಗಳು ಕಂಡುಬರುತ್ತವೆ. ಕುಟುಂಬದಲ್ಲಿ ಸಹೋದರ, ಸಹೋದರಿಯರಿಂದ ಬೆಂಬಲ ಸಿಗಲಿದೆ.

ಆರೋಗ್ಯದ ವಿಷಯದಲ್ಲಿ ವಿಶೇಷ ಕಾಳಜಿ ವಹಿಸಬೇಕು, ವಿಶೇಷವಾಗಿ ನರ ಸಂಬಂಧಿತ ಸಮಸ್ಯೆಗಳ ಬಗ್ಗೆ ಜಾಗ್ರತೆ ಅಗತ್ಯ. ಗುರು ಗ್ರಹದ ಪ್ರಭಾವದಿಂದ ಮನಸ್ಸಿಗೆ ಕಷ್ಟವಾಗಬಹುದು. ಇದಕ್ಕೆ ದತ್ತಾತ್ರೇಯ ಸ್ವಾಮಿಯ ಪ್ರಾರ್ಥನೆ ಉತ್ತಮ ಪರಿಹಾರ. ಕೇತು ಗ್ರಹವು ಹಣಕಾಸಿನ ಲಾಭವನ್ನು ತಂದರೆ, ಚಂದ್ರನು ರೋಗಭಯವನ್ನು ಉಂಟುಮಾಡಬಹುದು. ಈಶ್ವರನಿಗೆ ಅಭಿಷೇಕ ಮಾಡಿಸುವುದು ಶುಭ. ಬುಧ ಮತ್ತು ರಾಹು ಗ್ರಹಗಳು ಕಾರ್ಯ ನಷ್ಟಕ್ಕೆ ಕಾರಣವಾಗಬಹುದು. ಲಕ್ಷ್ಮಿ ನರಸಿಂಹ ಮತ್ತು ಸುಬ್ರಮಣ್ಯ ಸ್ವಾಮಿಯನ್ನು ಸ್ವಾತಿ ನಕ್ಷತ್ರದಂದು ದರ್ಶನ ಮಾಡುವುದರಿಂದ ರಾಹು ದೋಷ ನಿವಾರಣೆಯಾಗುತ್ತದೆ. ರವಿ ಧನಲಾಭವನ್ನು ತಂದರೆ, ಶನಿ ಮತ್ತು ಕುಜ ದ್ರವ್ಯ ನಷ್ಟಕ್ಕೆ ಕಾರಣರಾಗಬಹುದು. 11ನೇ ಶುಕ್ರನು ಸುಖ ಭೋಜನ ಮತ್ತು ಉತ್ತಮ ಅನುಕೂಲಗಳನ್ನು ತರಲಿದ್ದಾನೆ. ಎಳ್ಳು, ಹೆಸರು ಕಾಳು, ಉದ್ದಿನ ಕಾಳುಗಳನ್ನು ದೇವಸ್ಥಾನಗಳಿಗೆ ದಾನ ಮಾಡುವುದು ಮತ್ತು “ಓಂ ಬುಧಾಯ ನಮಃ” ಮಂತ್ರ ಜಪಿಸುವುದು ಉತ್ತಮ ಪರಿಹಾರಗಳಾಗಿವೆ.

ಇದನ್ನೂ ಓದಿ: ಯುಗಾದಿ ಬಳಿಕ 1 ವರ್ಷ ಈ ರಾಶಿಗೆ ಸಾಕಷ್ಟು ಅದೃಷ್ಟ ಕೂಡಿಬರಲಿದೆ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಕರ್ಕಾಟಕ ರಾಶಿಯವರಿಗೆ ಯುಗಾದಿಯಂದು ಈ ಭಾಗ್ಯ ಖಂಡಿತ ಲಭಿಸುತ್ತದೆ!: ಆದರೆ ಈ ತಪ್ಪು ಎಲ್ಲವನ್ನೂ ನಾಶ ಮಾಡತ್ತದೆ

ಬೆಂಗಳೂರು, ಮಾ.19: 2026ರ ಯುಗಾದಿ ದಿನದಂದು ಕರ್ಕಾಟಕ ರಾಶಿಗೆ ಇರುವ ಫಲಗಳ ಬಗ್ಗೆ ಕೆ. ವೆಂಕಟೇಶ್ ಶರ್ಮಾ ಅವರು ವಿವರಿಸಿದ್ದಾರೆ. ಈ ವರ್ಷ ಕರ್ಕಾಟಕ ರಾಶಿಯವರಿಗೆ ಭಾವನಾತ್ಮಕ ಸ್ಥಿರತೆ ಮತ್ತು ಉದ್ಯೋಗ, ವ್ಯಾಪಾರದಲ್ಲಿ ಹೆಚ್ಚಳ ಕಂಡುಬರಲಿದೆ. ಜವಾಬ್ದಾರಿಗಳು ಅಧಿಕವಾಗುವ ಸಾಧ್ಯತೆಗಳಿವೆ. ಹಣಕಾಸು ವಿಚಾರದಲ್ಲಿ ಪ್ರಗತಿ ಕಂಡುಬರಲಿದ್ದು, ಮನೆ ಅಥವಾ ಭೂಮಿ ಖರೀದಿಯ ಸಾಧ್ಯತೆಗಳು ಸಹ ಇವೆ. ಆರೋಗ್ಯದ ವಿಚಾರದಲ್ಲಿ ಕುಟುಂಬದ ಹಿರಿಯರ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ಸ್ವಂತ ಆರೋಗ್ಯದಲ್ಲಿ ಜೀರ್ಣಕ್ರಿಯೆ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಎರಡನೇ ಮನೆಯ ಕೇತು ಸ್ವಲ್ಪ ವ್ಯಾಧಿಯನ್ನು ತರಬಹುದಾಗಿದ್ದು, ಗಣಪತಿ ಆರಾಧನೆ ಮಾಡುವುದು ಅನುಕೂಲಕರವಾಗಿದೆ. ಎಂಟನೇ ಮನೆಯ ರಾಹು ಮೃತ್ಯುಭಯವನ್ನು ಸೂಚಿಸುವುದರಿಂದ, ವಾಹನ ಚಾಲನೆಯಲ್ಲಿ ಎಚ್ಚರ ವಹಿಸುವುದು ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ. ಪರಿಹಾರಗಳಾಗಿ “ಓಂ ಚಂದ್ರಾಯ ನಮಃ” ಮಂತ್ರ ಪಠಣ ಹಾಗೂ ಕಪ್ಪು ಉದ್ದು, ಎಳ್ಳು ಮತ್ತು ಅಕ್ಕಿ ದಾನ ಮಾಡುವುದು ಸೂಕ್ತ. ಸೋಮವಾರ, ಮಂಗಳವಾರ, ಗುರುವಾರಗಳು ಶುಭ ದಿನಗಳಾಗಿದ್ದು, ಬಿಳಿ, ಕೆಂಪು, ಹಳದಿ ಶುಭ ವರ್ಣಗಳಾಗಿವೆ. ವಾಯುವ್ಯ ದಿಕ್ಕು ಹಾಗೂ 2, 3, 9 ಶುಭ ಸಂಖ್ಯೆಗಳಾಗಿವೆ. ಯಾವುದೇ ಶುಭ ಕಾರ್ಯಗಳನ್ನು 2, 7, 11, 16, 20, 23, 25ನೇ ತಾರೀಖುಗಳಲ್ಲಿ ಕೈಗೊಂಡರೆ ಶುಭ ಫಲಗಳು ಪ್ರಾಪ್ತವಾಗುತ್ತವೆ ಎಂದು ಕೆ. ವೆಂಕಟೇಶ್ ಶರ್ಮಾ ಅವರು ತಿಳಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೆಟ್ರೋದಲ್ಲಿ ಹಾಡು ಹಾಡಿದವರ ವಿರುದ್ಧ ಪ್ರಕರಣ ದಾಖಲು!

ಬೆಂಗಳೂರು, ಮಾರ್ಚ್ 19: ನಮ್ಮ ಮೆಟ್ರೋ ರೈಲಿನಲ್ಲಿ ಹಾಡು ಹಾಡಿ ಸಾರ್ವಜನಿಕರಿಗೆ ತೊಂದರೆ ನೀಡಿದ ಘಟನೆಗೆ ಸಂಬಂಧಿಸಿದಂತೆ ಮೆಟ್ರೋ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಭಾನುವಾರ ರಾತ್ರಿ ನಮ್ಮ ಮೆಟ್ರೋದಲ್ಲಿ ಈ ಘಟನೆ ನಡೆದಿತ್ತು. ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮರಳುತ್ತಿದ್ದ ಯುವತಿಯರ ಗುಂಪೊಂದು ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾಗ, ಜೋರಾಗಿ ಹಾಡು ಹಾಡಿ ನೃತ್ಯ ಮಾಡಿತ್ತು. ಇದರಿಂದ ಮೆಟ್ರೋದಲ್ಲಿದ್ದ ಇತರೆ ಪ್ರಯಾಣಿಕರಿಗೆ ಅಸೌಕರ್ಯ ಮತ್ತು ತೊಂದರೆ ಉಂಟಾಗಿದೆ. ನಿರ್ದಿಷ್ಟವಾಗಿ, ಕೆಲವು ಯುವತಿಯರು ಮೆಟ್ರೋ ಬೋಗಿಯ ನೆಲದ ಮೇಲೆ ಕುಳಿತು ಹಾಡು ಹಾಡಿದ್ದರು ಎನ್ನಲಾಗಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿತ್ತು.

ಈ ವರ್ತನೆಯ ಹಿನ್ನೆಲೆಯಲ್ಲಿ, ನಮ್ಮ ಮೆಟ್ರೋ ಸಿಬ್ಬಂದಿ ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ, ಪೀಣ್ಯ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ (Non-Cognizable Report) ದಾಖಲಿಸಲಾಗಿದೆ. ಮೆಟ್ರೋ ಆವರಣದಲ್ಲಿ ಸಾರ್ವಜನಿಕ ಸೌಕರ್ಯಗಳಿಗೆ ಧಕ್ಕೆ ತರುವ ಇಂತಹ ವರ್ತನೆಗಳನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಹಳೆಯ ಕಮರ್ಷಿಯಲ್ ಸಿನಿಮಾ’;‘ಉಸ್ತಾದ್ ಭಗತ್ ಸಿಂಗ್’ ನೋಡಿದವರು ಏನಂದ್ರು?

ಪವನ್ ಕಲ್ಯಾಣ್ (Pawan Kalyan) ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಇಂದು (ಮಾರ್ಚ್ 19) ರಿಲೀಸ್ ಆಗಿದೆ. ಸಿನಿಮಾ ನೋಡಿದ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಪವನ್ ಕಲ್ಯಾಣ್ ರಾಜಕೀಯದಲ್ಲಿ ಬ್ಯುಸಿ ಇರೋದ್ರಿಂದ ಸದ್ಯದ ಮಟ್ಟಿಗೆ ಇದು ಅವರ ಕೊನೆಯ ಸಿನಿಮಾ ಆಗಿರಲಿದೆ. ಈ ಕಾರಣದಿಂದ ಸಿನಿಮಾ ನಿರೀಕ್ಷೆ ಹುಟ್ಟುಹಾಕಿತ್ತು. ಸಿನಿಮಾ ನೋಡಿದ ಅನೇಕರು ಚಿತ್ರದ ವಿಮರ್ಶೆ ತಿಳಿಸುತ್ತಿದ್ದಾರೆ. ಕೆಲವರು ಸಿನಿಮಾನ ಇಷ್ಟಪಟ್ಟರೆ, ಇನ್ನೂ ಕೆಲವರು ಚಿತ್ರ ಹಳೆಯ ಕಮರ್ಷಿಯಲ್ ಅಂಶಗಳನ್ನು ಹೊಂದಿದೆ ಎಂದು ಹೇಳಿದ್ದಾರೆ.

ಪವನ್ ಕಲ್ಯಾಣ್ ಅವರು ‘ಉತ್ಸಾದ್ ಭಗತ್ ಸಿಂಗ್’ ಸಿನಿಮಾದಲ್ಲಿ ಭಗತ್ ಸಿಂಗ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ತಮಿಳಿನ ‘ಥೇರಿ’ ಚಿತ್ರದ ರಿಮೇಕ್. ಎಂದು ಹೇಳಲಾಗಿತ್ತು. ಆದರೆ, ಇದು ರಿಮೇಕ್ ಅಲ್ಲ ಎಂದು ನಿರ್ದೇಶಕ ಹರೀಶ್ ಶಂಕರ್ ಅವರು ಹೇಳಿದ್ದಾರೆ. ಚಿತ್ರ ನೋಡಿದ ಅನೇಕರು ತಮ್ಮ ವಿಮರ್ಶೆ ತಿಳಿಸಿದ್ದಾರೆ.

ಇದನ್ನೂ ಓದಿ: ಶ್ರೀಲೀಲಾ ಜೊತೆ ಕಾಣಿಸಿಕೊಳ್ಳುವುದು ಇಷ್ಟವಿಲ್ಲ ಎಂದ ಪವನ್ ಕಲ್ಯಾಣ್: ಕಾರಣ?

‘ಇದು ಔಟ್​​​ಡೇಟೆಡ್ ಆಯ್ತು ಎಂದೆನಿಸಿದೆ. ವಿಂಟೇಜ್ ಸ್ವ್ಯಾಗ್ ಹಾಗೂ ಎನರ್ಜಿ ಇದೆ. ಥಮನ್ ಬಿಜಿಎಂ, ದೇವಿಶ್ರೀ ಪ್ರಸಾದ್ ಹಾಡು ಗಮನ ಸೆಳೆದಿದೆ’ ಎಂದು ಕೆಲವರು ಹೇಳಿದ್ದಾರೆ. ‘ ಇದು ಸಂಪೂರ್ಣವಾಗಿ ಹಳೆಯ ಕಮರ್ಷಿಯಲ್ ಸಿನಿಮಾ. ಇಂತಹ ಕಮರ್ಷಿಯಲ್ ಚಿತ್ರಕ್ಕೆ ಸಾಮಾನ್ಯ ಬರವಣಿಗೆಯ ಅಗತ್ಯವಿರುವುದಿಲ್ಲ. ಆದರೆ ಕನಿಷ್ಠ ಸ್ವಲ್ಪ ತಾಜಾತನವಾದರೂ ಬೇಕು. ಆರಂಭದಿಂದ ಕೊನೆಯವರೆಗೂ ಸಿನಿಮಾ ಹಳೆಯದಾಗಿದೆ ಎಂದು ಭಾಸವಾಗುತ್ತದೆ’ ಎಂದಿದ್ದಾರೆ ಕೆಲವರು.

ಪವನ್ ಕಲ್ಯಾಣ್ ಅವರು ಇತ್ತೀಚೆಗೆ ನಿರಂತರವಾಗಿ ಸೋಲು ಕಾಣುತ್ತಿದ್ದಾರೆ. ಅವರಿಗೆ ದೊಡ್ಡ ಮಟ್ಟದಲ್ಲಿ ಗೆಲುವು ಸಿಕ್ಕಿಲ್ಲ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ. ಈಗ ಉಸ್ತಾದ್ ಭಗತ್ ಸಿಂಗ್ ಚಿತ್ರವೂ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ​ಗಿರಿ: ಹಿಂದೂ ವಿದ್ಯಾರ್ಥಿನಿಯರ ಜತೆ ಜಾತ್ರೆಗೆ ಬಂದಿದ್ದ ಮುಸ್ಲಿಂ ವಿದ್ಯಾರ್ಥಿ ಮೇಲೆ ಹಲ್ಲೆ

ಮಂಗಳೂರು, ಮಾ.19: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಜಾತ್ರೆಯ ಸಂಭ್ರಮದ ನಡುವೆಯೇ ಅಹಿತಕರ ಘಟನೆಯೊಂದು ನಡೆದಿದೆ. ಹಿಂದೂ ಸ್ನೇಹಿತೆಯರ ಜೊತೆ ಜಾತ್ರೆ ನೋಡಲು ಬಂದಿದ್ದ 17 ವರ್ಷದ ಮುಸ್ಲಿಂ ಬಾಲಕನ ಮೇಲೆ ಬಜರಂಗದಳದ ಕಾರ್ಯಕರ್ತರ ಗುಂಪೊಂದು ಹಲ್ಲೆ ನಡೆಸಿ, ಅಪಹರಿಸಿರುವ ದೂರು ದಾಖಲಾಗಿದೆ. ಮಾರ್ಚ್ 18ರಂದು ಸಂಜೆ ಉಜಿರೆ ಜಾತ್ರಾ ಮೈದಾನದಲ್ಲಿ ಈ ಘಟನೆ ನಡೆದಿದೆ. ಮುಸ್ಲಿಂ ಬಾಲಕನು ತನ್ನ ಹಿಂದೂ ಸ್ನೇಹಿತೆಯರೊಂದಿಗೆ ಜಾತ್ರೆ ವೀಕ್ಷಿಸುತ್ತಿದ್ದನು.

ಈ ವೇಳೆ ಸ್ಥಳಕ್ಕೆ ಬಂದ ಯುವಕರ ಗುಂಪು, “ಹಿಂದೂ ಹುಡುಗಿಯರನ್ನು ಲಾಡ್ಜ್‌ಗೆ ಕರೆದೊಯ್ಯುತ್ತಿದ್ದೀಯಾ?” ಎಂದು ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದೆ. ಅಲ್ಲದೆ, ಬಾಲಕನ ಮೇಲೆ ಮನಬಂದಂತೆ ಹಲ್ಲೆ ನಡೆಸಲಾಗಿದೆ. ಹಲ್ಲೆಯ ಬಳಿಕ ಬಾಲಕನನ್ನು ಬಲವಂತವಾಗಿ ಅಪಹರಿಸಿದ ಆರೋಪಿಗಳು, ಮೊಬೈಲ್‌ನಲ್ಲಿ ಬಲವಂತವಾಗಿ ವಿಡಿಯೋ ರೆಕಾರ್ಡಿಂಗ್ ಮಾಡಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಕ್ರೈಸ್ತ ವ್ಯಕ್ತಿಯಿಂದ ದೈವ ನರ್ತನ ಸೇವೆ ಆರೋಪ:ಜಾತಿ ಪ್ರಮಾಣಪತ್ರ ಮೂಲಕ ದೈವ ನರ್ತಕ ಸ್ಪಷ್ಟನೆ

ಸಂತ್ರಸ್ತ 17 ವರ್ಷದ ಬಾಲಕ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಎಸ್ಪಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. 17 ವರ್ಷದ ಬಾಲಕ ನೀಡಿದ ದೂರಿನನ್ವಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 341 (ಅಕ್ರಮ ತಡೆ), 323 (ಹಲ್ಲೆ), 363 (ಅಪಹರಣ), 504 (ನಿಂದನೆ) ಮತ್ತು 506 (ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಈಗಾಗಲೇ ವಿಶೇಷ ತಂಡವನ್ನು ರಚಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Exit mobile version