ಬೇಲಿಯೇ ಎದ್ದು ಹೊಲ ಮೇಯ್ದಂತೆ; ಮಹಿಳೆ ಮೇಲೆ ಪೊಲೀಸ್ ಅಧಿಕಾರಿಯಿಂದಲೇ ಲೈಂಗಿಕ ದೌರ್ಜನ್ಯ – Kannada News | Tamil Nadu police arrested for Physical harassment on woman in Kallakurichi
ಚೆನ್ನೈ, ಜನವರಿ 13: ತಮಿಳುನಾಡಿನಲ್ಲಿ (Tamil Nadu) ಪೊಲೀಸ್ ಅಧಿಕಾರಿಯೇ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ನಡೆದಿದೆ. ಕಲ್ಲಕುರಿಚಿ ಜಿಲ್ಲೆಯ 32 ವರ್ಷದ ಮಹಿಳೆಯ ಪತಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದರು. ಆ ಮಹಿಳೆ ಕೆಲವು ಬೇಡಿಕೆಗಳ ಕುರಿತು ಕೆಲವು ಜನರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದಾಗ, ಅವರು ಉಲುಂದೂರ್ಪೇಟೆ ಬಳಿಯ ಪಲಯಂ ಕುಂಚರಂ ಗ್ರಾಮದ 36 ವರ್ಷದ ಶೇಖ್ ಸಲೀಂ ಎಂಬುವವರನ್ನು ಭೇಟಿಯಾದರು. ಕಲ್ಲಕುರಿಚಿ ಪೊಲೀಸ್ ಠಾಣೆಯಲ್ಲಿ ಪ್ರಥಮ ಪೊಲೀಸ್ ಆಗಿ ಕೆಲಸ ಮಾಡುತ್ತಿದ್ದ ಅವರು ಭದ್ರತಾ…