ನೂತನ ರೈಲಿಗೆ ಚಾಲನೆ ಕಾರ್ಯಕ್ರಮದಲ್ಲಿ ಕನ್ನಡ ಮಂಗಮಾಯ: ಸಚಿವ ವಿ. ಸೋಮಣ್ಣ ಹೇಳಿದ್ದೇನು? – Kannada News | Kannada Language Ignored at Bengaluru Mumbai Train Inauguration

ನೂತನ ರೈಲಿಗೆ ಚಾಲನೆ ಕಾರ್ಯಕ್ರಮದಲ್ಲಿ ಕನ್ನಡ ಮಂಗಮಾಯImage Credit source: Tv9 Kannada

ಬೆಂಗಳೂರು, ಮೇ 17: ಬೆಂಗಳೂರು-ಮುಂಬೈ ನಡುವೆ ಸಂಚಾರ ಮಾಡಲಿರುವ ಹೊಸ ಎಕ್ಸ್ಪ್ರೆಸ್ ರೈಲಿಗೆ ಬೈಯ್ಯಪ್ಪನಹಳ್ಳಿ ಬಳಿಯ ಎಸ್ಎಂವಿಟಿ ರೈಲ್ವೇ ನಿಲ್ದಾಣದಲ್ಲಿ ಇಂದು (ಮೇ 17) ಚಾಲನೆ ನೀಡಲಾಗಿದೆ. ದುರ್ದೈವ ಅಂದ್ರೆ ರೈಲ್ವೇ ಇಲಾಖೆಯ ಈ ಕಾರ್ಯಕ್ರಮದಲ್ಲಿ ಕನ್ನಡ ಮಂಗಮಾಯವಾಗಿತ್ತು. ಮುಖ್ಯ ವೇದಿಕೆಯಲ್ಲಿ ಹಾಕಿರುವ ಫ್ಲೆಕ್ಸ್​​ನಲ್ಲಿಇಂಗ್ಲಿಷ್​​ನಲ್ಲಿ ಮಾತ್ರ ನಾಮ ಫಲಕ ಹಾಕಲಾಗಿದ್ದು, ಕರ್ನಾಟಕದ ಸಂಸದ ವಿ.ಸೋಮಣ್ಣ ಅವರೇ ರೈಲ್ವೇ ಇಲಾಖೆಯ ರಾಜ್ಯ ಖಾತೆ ಸಚಿವರಾಗಿದ್ದರೂ ಕನ್ನಡದ ಬಗ್ಗೆ ಇಷ್ಟು ನಿರ್ಲಕ್ಷ್ಯ ಯಾಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

ಮುಖ್ಯಾಂಶಗಳು

  • ಬೆಂಗಳೂರು-ಮುಂಬೈ ನಡುವೆ ಹೊಸ ಎಕ್ಸ್​​ಪ್ರೆಸ್​ ರೈಲಿಗೆ ಚಾಲನೆ
  • ರೈಲ್ವೇ ಇಲಾಖೆಯ ಈ ಕಾರ್ಯಕ್ರಮದಲ್ಲಿ ಕನ್ನಡ ಮಂಗಮಾಯ
  • ಬೇಕಂತಲೇ ಕನ್ನಡವನ್ನು ನಿರ್ಲಕ್ಷಿಸಿದರಾ ಹಿರಿಯ ಅಧಿಕಾರಿಗಳು?

ಕನ್ನಡ ಫೆಕ್ಸ್ ಹಾಕಲು ಹಿರಿಯ ಅಧಿಕಾರಿಗಳ ಅಡ್ಡಿ?

ಇನ್ನು ಕಾರ್ಯಕ್ರಮ ಸಂಬಂಧ ಕನ್ನಡದಲ್ಲಿ ಫ್ಲೆಕ್ಸ್​​ ಹಾಕಲು ಅಡ್ಡಿಪಡಿಸಿರೋದು ಇಲಾಖೆಯ ಹಿರಿಯ ಅಧಿಕಾರಿಗಳು ಎಂಬ ಮಾತುಗಳೂ ಕೇಳಿಬಂದಿವೆ. ರಾಜ್ಯದ ರೈಲ್ವೆ ಅಧಿಕಾರಿಗಳು ಸ್ಥಳೀಯ ಭಾಷೆಯಾದ ಕನ್ನಡದಲ್ಲಿಯೇ ಫ್ಲೆಕ್ಸ್​ ಹಾಕಲು ಮುಂದಾಗಿದ್ದರು. ಆದರೆ ಹಿರಿಯ ರೈಲ್ವೇ ಅಧಿಕಾರಿಗಳು ಈ ಫ್ಲೆಕ್ಸ್​​ ಅಳವಡಿಸಲು ಅವಕಾಶ ನೀಡಿಲ್ಲವಂತೆ. ಹೀಗಾಗಿ ಕನ್ನಡದಲ್ಲಿ ಪ್ರಿಂಟ್​​ ಆಗಿದ್ದ ಫ್ಲೆಕ್ಸ್​​ಗಳನ್ನು ವೇದಿಕೆಯ ಹಿಂಭಾಗದಲ್ಲಿ ಇಟ್ಟಿರುವುದು ಕಂಡುಬಂದಿದೆ.

ಇದನ್ನೂ ಓದಿ: ರೈಲ್ವೇ ಪ್ರಯಾಣಿಕರಿಗೆ ಗುಡ್​​ನ್ಯೂಸ್​​; ಬೆಂಗಳೂರು, ಮುಂಬೈ ಎಕ್ಸ್​​ಪ್ರೆಸ್​​ ಟ್ರೈನ್​​ಗೆ ಹಸಿರು ನಿಶಾನೆ

ಸಚಿವ ಸೋಮಣ್ಣ ಏನಂದ್ರು?

ಇನ್ನು ಕಾರ್ಯಕ್ರಮದ ಫ್ಲೆಕ್ಸ್​​ನಲ್ಲಿ ಕನ್ನಡದಲ್ಲಿ ಒಂದೇ ಒಂದು ಪದ ಇಲ್ಲದಿರುವ ಬಗ್ಗೆ ಸಚಿವ ವಿ. ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಇದು ದಿಢೀರ್​​ ಕಾರ್ಯಕ್ರಮ. ನಿನ್ನೆ ನಾನು ಬೇರೆ ಕಾರ್ಯಕ್ರಮದಲ್ಲಿ ಇದ್ದೆ. ನಾನು ಸಚಿವನಾದ ಮೇಲೆ ಕನ್ನಡಕ್ಕೆ ಆದ್ಯತೆ ಕೊಟ್ಟಿದ್ದೇನೆಯೋ ಇಲ್ಲವೋ ನೀವೇ ಹೇಳಿ. ಮುಂದೆ ಈ ರೀತಿಯ ಘಟನೆಗಳು ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಅವರು ಭರವಸೆ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Gold Rate: ಚಿನ್ನ, ಬೆಳ್ಳಿ ಬೆಲೆ ಸತತ ಇಳಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 17th May 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಮೇ 17: ಚಿನ್ನದ ಬೆಲೆಯ ಸತತ ಇಳಿಕೆ ಮುಂದುವರಿದಿದೆ. ವಾರಾಂತ್ಯದಲ್ಲಿ 290 ರೂಗಳಷ್ಟು ಬೆಲೆ ತಗ್ಗಿದೆ. ಈ ವಾರ ಬಂಗಾರದ ದರ (Gold Rate) ಗ್ರಾಮ್​ಗೆ ಹೆಚ್ಚೂಕಡಿಮೆ ಒಂದು ಸಾವಿರ ರೂಗಳಷ್ಟು ಇಳಿದಿರುವುದು ಗಮನಾರ್ಹ. ವಿದೇಶಗಳಲ್ಲೂ ಇದರ ಬೆಲೆಯಲ್ಲಿ ಸತತ ಇಳಿಕೆ ಆಗುತ್ತಿದೆ. ಚಿನ್ನದಂತೆ ಬೆಳ್ಳಿ ಬೆಲೆಯೂ ಭರ್ಜರಿ ಇಳಿಕೆಯಾಗಿದೆ. ಈ ವಾರ ಬಹುತೇಕ 30 ರೂಗಳಷ್ಟು ತಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,43,850 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,56,930 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 28,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,43,850 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 28,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 29,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮೇ 17ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,693 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,385 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,770 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 290 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,693 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,385 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 290 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,385 ರೂ
  • ಚೆನ್ನೈ: 14,750 ರೂ
  • ಮುಂಬೈ: 14,385 ರೂ
  • ದೆಹಲಿ: 14,400 ರೂ
  • ಕೋಲ್ಕತಾ: 14,385 ರೂ
  • ಕೇರಳ: 14,385 ರೂ
  • ಅಹ್ಮದಾಬಾದ್: 14,390 ರೂ
  • ಜೈಪುರ್: 14,400 ರೂ
  • ಲಕ್ನೋ: 14,400 ರೂ
  • ಭುವನೇಶ್ವರ್: 14,385 ರೂ

ಇದನ್ನೂ ಓದಿ: ಆಟೋ, ಟ್ಯಾಕ್ಸಿ​ ಚಾಲಕರಿಗೆ ಮತ್ತೆ ಶಾಕ್​​ ಕೊಟ್ಟ ಕೇಂದ್ರ ಸರ್ಕಾರ: CNG ದರ ಕೆಜಿಗೆ 1 ರೂ. ಹೆಚ್ಚಳ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 558 ರಿಂಗಿಟ್ (13,558 ರುಪಾಯಿ)
  • ದುಬೈ: 506.50 ಡಿರಾಮ್ (13,238 ರುಪಾಯಿ)
  • ಅಮೆರಿಕ: 142 ಡಾಲರ್ (13,632 ರುಪಾಯಿ)
  • ಸಿಂಗಾಪುರ: 180.70 ಸಿಂಗಾಪುರ್ ಡಾಲರ್ (13,546 ರುಪಾಯಿ)
  • ಕತಾರ್: 504 ಕತಾರಿ ರಿಯಾಲ್ (13,273 ರೂ)
  • ಸೌದಿ ಅರೇಬಿಯಾ: 515 ಸೌದಿ ರಿಯಾಲ್ (13,175 ರುಪಾಯಿ)
  • ಓಮನ್: 53.70 ಒಮಾನಿ ರಿಯಾಲ್ (13,390 ರುಪಾಯಿ)
  • ಕುವೇತ್: 41.71 ಕುವೇತಿ ದಿನಾರ್ (13,070 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 280 ರೂ
  • ಚೆನ್ನೈ: 290 ರೂ
  • ಮುಂಬೈ: 280 ರೂ
  • ದೆಹಲಿ: 280 ರೂ
  • ಕೋಲ್ಕತಾ: 280 ರೂ
  • ಕೇರಳ: 290 ರೂ
  • ಅಹ್ಮದಾಬಾದ್: 280 ರೂ
  • ಜೈಪುರ್: 280 ರೂ
  • ಲಕ್ನೋ: 280 ರೂ
  • ಭುವನೇಶ್ವರ್: 290 ರೂ
  • ಪುಣೆ: 280

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕೇವಲ 200 ರೂ.ಗಾಗಿ ನಡೀತು ಕೊಲೆ! ತಾಯಿಗೇ ಚಾಕು ಇರಿದಿದ್ದವನಿಂದ ಮತ್ತೊಂದು ಹೇಯ ಕೃತ್ಯ – Kannada News | Karnataka Crime News: Tea Shop Owner Killed Over Rs 200; Ex BSF Soldier Murdered in Kalaburagi

ಕೇವಲ 200 ರೂ.ಗಾಗಿ ನಡೀತು ಕೊಲೆ! ತಾಯಿಗೇ ಚಾಕು ಇರಿದಿದ್ದವನಿಂದ ಮತ್ತೊಂದು ಹೇಯ ಕೃತ್ಯ

ಬೆಂಗಳೂರು, ಮೇ 17: ಸಮಾಜದಲ್ಲಿ ಹಳೆಯ ದ್ವೇಷಕ್ಕೆ, ರೋಷಕ್ಕೆ ಕೊಲೆ ನಡೆದ ಉದಾಹರಣೆಗಳಿವೆ. ಹೆಣ್ಣಿಗಾಗಿ, ಹಣಕ್ಕಾಗಿಯೂ ಕೊಲೆ, ಸುಲಿಗೆಗಳು ನಡೆಯುತ್ತವೆ. ಆದರೆ ಕೇವಲ 200 ರೂ. ಸಾಲ (Loan) ವಾಪಸ್ ಕೇಳಿದ್ದಕ್ಕೆ ಕೊಲೆ ಮಾಡಿದ ಪ್ರಕರಣ ಇದೇ ಮೊದಲಿರಬಹುದು. ಹೌದು, ಟೀ ಅಂಗಡಿ ಮಾಲೀಕ ಬಾಕಿ ಇರುವ ಹಣ ನೀಡುವಂತೆ ಕೇಳಿದ ಕಾರಣಕ್ಕೇ ದೊಡ್ಡಬಳ್ಳಾಪುರ ತಾಲೂಕಿನ ಅಪ್ಪಕಾರನಹಳ್ಳಿ ಗೇಟ್​ನಲ್ಲಿ ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈದಿದ್ದಾನೆ.

ಮುಖ್ಯಾಂಶಗಳು

  • ದೊಡ್ಡಬಳ್ಳಾಪುರದಲ್ಲಿ ಕೇವಲ 200 ರೂಪಾಯಿ ಸಾಲದ ಜಗಳಕ್ಕೆ ಟೀ ಮಾಲೀಕನ ಕೊಲೆಯಾಗಿದೆ.
  • ತಾಯಿಗೆ ಚಾಕು ಹಾಕಿದ್ದ ಹಳೇ ಆರೋಪಿ ಮುನಿಯಪ್ಪ ಈಗ ಮಂಜುನಾಥ್‌ನನ್ನು ಕೊಂದಿದ್ದಾನೆ.
  • ಕಲಬುರಗಿಯಲ್ಲಿ ಜಾಗದ ವಿವಾದಕ್ಕೆ ನಿವೃತ್ತ ಬಿಎಸ್‌ಎಫ್ ಸೈನಿಕ ರವಿಚಂದ್ರನ ಬರ್ಬರ ಹತ್ಯೆಯಾಗಿದೆ.

ಇನ್ನು ಮುಂದೆ ಸಾಲ ಕೊಡುವುದಿಲ್ಲ ಎಂದಿದ್ದ ಮಾಲೀಕ

ದ್ಯಾವಸಂದ್ರ ಗ್ರಾಮದ ಮಂಜುನಾಥ (40) ಕೊಲೆಯಾದ ದುರ್ದೈವಿ. ಮೇ 12 ರಂದು ಅಪ್ಪಕಾರನಹಳ್ಳಿಯ ಮುನಿಯಪ್ಪ ಎಂಬಾತ ಮಂಜುನಾಥ್ ಅವರ ಟೀ ಅಂಗಡಿಗೆ ಬಂದು ಮತ್ತೆ ಸಾಲ ಕೇಳಿದ್ದ. ಈ ವೇಳೆ ಮಾಲೀಕ ಮಂಜುನಾಥ್, ಹಳೆಯ ಟೀ ಸಾಲದ ಬಾಕಿ ಹಣ 200 ರೂ.ಕೊಡು, ಇನ್ನು ಮುಂದೆ ಸಾಲ ಕೊಡುವುದಿಲ್ಲ ಎಂದು ಹೇಳಿದ್ದ.

ಈ ವಿಚಾರವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಆರೋಪಿ ಮುನಿಯಪ್ಪ, ಪಕ್ಕದಲ್ಲೇ ಇದ್ದ ನೀಲಗಿರಿ ದೊಣ್ಣೆಯನ್ನು ತೆಗೆದುಕೊಂಡು ಮಂಜುನಾಥ್ ತಲೆಗೆ ಮನಸೋಇಚ್ಛೆ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ್ದ. ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಂಜುನಾಥ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಹೆತ್ತ ತಾಯಿಗೂ ಚಾಕು ಹಾಕಿದ್ದ ಆರೋಪಿ!

ಆರೋಪಿ ಮುನಿಯಪ್ಪ ಈ ಹಿಂದೆ ಹೆತ್ತ ತಾಯಿಗೂ ಚಾಕು ಹಾಕಿ ಜೈಲು ಸೇರಿದ್ದ. ಇತ್ತೀಚೆಗಷ್ಟೇ ಬೇಲ್ ಮೇಲೆ ಹೊರಗೆ ಬಂದಿದ್ದ ಈತ ಈಗ ಮತ್ತೊಂದು ಕೊಲೆ ಮಾಡಿದ್ದಾನೆ. ದೊಡ್ಡಬೆಳವಂಗಲ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

ಕಬ್ಬಿಣದ ರಾಡ್‌ನಿಂದ ಹೊಡೆದು ಮಾಜಿ ಬಿಎಸ್‌ಎಫ್ ಸೈನಿಕನ ಹತ್ಯೆ!

ಕಲಬುರಗಿ ನಗರದ ರಾಮಮಂದಿರದ ಬಳಿ ನಿವೃತ್ತ ಸೈನಿಕ ರವಿಚಂದ್ರ ಖೇಡ್ (45) ಎಂಬುವವರನ್ನು ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಬರ್ಬರ ಹತ್ಯೆ ಮಾಡಲಾಗಿದೆ. ನಾಲ್ಕು ವರ್ಷಗಳ ಹಿಂದೆ ಬಿಎಸ್‌ಎಫ್‌ನಿಂದ (BSF) ನಿವೃತ್ತಿಯಾಗಿದ್ದ ಇವರು, ಪ್ರಸ್ತುತ ಇಂಡಿಯನ್ ಆಯಿಲ್ ಡಿಪೋದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ ಪೋಕ್ಸೋ ಕೇಸ್​​ನಲ್ಲಿ ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ಪುತ್ರ ಭಗೀರಥ್ ಸಾಯಿ ಅರೆಸ್ಟ್​​

ರವಿಚಂದ್ರ ನೈಟ್ ಶಿಫ್ಟ್‌ನಲ್ಲಿದ್ದಾಗ ಖಾಸಗಿ ಜಾಗದಲ್ಲಿ ಈ ಕೊಲೆ ನಡೆದಿದೆ. ಕಳೆದ ತಿಂಗಳು ಈ ವಿವಾದಿತ ಜಾಗದಲ್ಲಿ ಟಿನ್ ಶೆಡ್ ಕಾಂಪ್ಲೆಕ್ಸ್ ನಿರ್ಮಿಸಲಾಗಿತ್ತು. ಆದರೆ ವಿರೋಧಿ ಗುಂಪೊಂದು ರಾತ್ರೋರಾತ್ರಿ ಜೆಸಿಬಿ ತಂದು ಅದನ್ನು ಕೆಡವಿ ಹಾಕಿತ್ತು. ಇದೇ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಗ್ಯಾಂಗ್ ಮಾಜಿ ಸೈನಿಕನನ್ನು ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಸ್ಟೇಷನ್ ಬಜಾರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB vs PBKS: ವೇಗಿಗಳದ್ದೇ ಸಾಮ್ರಾಜ್ಯ: ಆದರೂ ರನ್ ಮಳೆ ಗ್ಯಾರಂಟಿ! – Kannada News | IPL 2026 PBKS vs RCB: Dharamsala Pitch Report

IPL 2026: ಐಪಿಎಲ್ 2026 ರ 61 ನೇ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಪಂಜಾಬ್ ಕಿಂಗ್ಸ್ (PBKS) ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ವಿಶ್ವದ ಅತ್ಯಂತ ಸುಂದರ ಕ್ರಿಕೆಟ್ ಕ್ರೀಡಾಂಗಣಗಳಲ್ಲಿ ಒಂದಾದ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (HPCA) ಮೈದಾನದಲ್ಲಿ ಮಧ್ಯಾಹ್ನ 3:30 ಕ್ಕೆ ಆರಂಭವಾಗಲಿದೆ. ಈ ಪಂದ್ಯವು ಉಭಯ ತಂಡಗಳ ಪಾಲಿಗೆ ತುಂಬಾ ಮಹತ್ವದ್ದು.

ಏಕೆಂದರೆ ಈ ಮ್ಯಾಚ್​ನಲ್ಲಿ ಗೆದ್ದರೆ ಆರ್​ಸಿಬಿ ತಂಡವು ತನ್ನ ಪ್ಲೇಆಫ್ ಪ್ರವೇಶವನ್ನು ಖಚಿತಪಡಿಸಿಕೊಳ್ಳಲಿದೆ. ಅತ್ತ ಪ್ಲೇಆಫ್ ರೇಸ್​ನಲ್ಲಿ ಉಳಿಯಬೇಕಿದ್ದರೆ ಈ ಮ್ಯಾಚ್​ನಲ್ಲಿ ಪಂಜಾಬ್ ಕಿಂಗ್ಸ್ ತಂಡ ಗೆಲ್ಲುವುದು ಅನಿವಾರ್ಯ. ಹೀಗಾಗಿ ಈ ಮ್ಯಾಚ್​ನಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

ಇನ್ನು ಧರ್ಮಶಾಲಾದ ಪಿಚ್ ಯಾರಿಗೆ ಹೆಚ್ಚು ಸಹಕಾರಿಯಾಗಲಿದೆ? ಇಲ್ಲಿನ ಸರಾಸರಿ ಸ್ಕೋರ್ ಎಷ್ಟು? ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿರಲಿದೆ…

ವೇಗದ ಬೌಲರ್‌ಗಳ ಸ್ವರ್ಗ:

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (HPCA) ಮೈದಾನದ ಪಿಚ್ ಸಾಂಪ್ರದಾಯಿಕವಾಗಿ ವೇಗದ ಬೌಲರ್‌ಗಳಿಗೆ ಸ್ವರ್ಗ ಎನಿಸಿಕೊಂಡಿದೆ.

  • ಸ್ವಿಂಗ್ ಮತ್ತು ಬೌನ್ಸ್: ಇಲ್ಲಿನ ಪಿಚ್‌ನಲ್ಲಿ ಹೊಸ ಚೆಂಡಿನಲ್ಲಿ ವೇಗಿಗಳಿಗೆ ಅತ್ಯುತ್ತಮ ಸೀಮ್, ಬೌನ್ಸ್ ಮತ್ತು ಸ್ವಿಂಗ್ ಲಭ್ಯವಾಗುತ್ತದೆ.
  •  ವೇಗಿಗಳ ದರ್ಬಾರ್: ಈ ಸೀಸನ್‌ನಲ್ಲಿ ಇಲ್ಲಿ ನಡೆದ ಮೊದಲ ಪಂದ್ಯದಲ್ಲಿ (PBKS Vs DC) ಒಂದೂ ಓವರ್ ಸ್ಪಿನ್ ಬೌಲಿಂಗ್ ಮಾಡಲಾಗಿರಲಿಲ್ಲ, ಎಲ್ಲಾ ಓವರ್‌ಗಳನ್ನು ವೇಗಿಗಳೇ ಎಸೆದಿದ್ದರು. ಎರಡನೇ ಪಂದ್ಯದಲ್ಲೂ ವೇಗಿಗಳದ್ದೇ ಮೇಲುಗೈ ಆಗಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲೂ ಫಾಸ್ಟ್ ಬೌಲರ್‌ಗಳು ಪ್ರಮುಖ ಪಾತ್ರ ವಹಿಸಲಿದ್ದಾರೆ.

ಬ್ಯಾಟರ್‌ಗಳಿಗೆ ಪರಾಕ್ರಮ:

ಇಲ್ಲಿನ ಪಿಚ್​ ವೇಗಿಗಳಿಗೆ ಆರಂಭದಲ್ಲಿ ನೆರವು ನೀಡಿದರೂ, ಒಮ್ಮೆ ಕ್ರೀಸ್‌ನಲ್ಲಿ ಸೆಟ್ ಆದ ನಂತರ ಬ್ಯಾಟರ್‌ಗಳು ಇಲ್ಲಿ ಸುಲಭವಾಗಿ ರನ್ ಗಳಿಸಬಹುದು.

  • ತೆಳು ಗಾಳಿಯ ಪ್ರಭಾವ: ಧರ್ಮಶಾಲಾ ಮೈದಾನವು ಸಮುದ್ರ ಮಟ್ಟದಿಂದ ಸುಮಾರು 1,457 ಮೀಟರ್ ಎತ್ತರದಲ್ಲಿದೆ. ಇಲ್ಲಿ ಗಾಳಿಯ ಸಾಂದ್ರತೆ ಕಡಿಮೆ ಇರುವುದರಿಂದ ಚೆಂಡು ಗಾಳಿಯಲ್ಲಿ ವೇಗವಾಗಿ ಚಲಿಸುತ್ತದೆ. ಇದರಿಂದಾಗಿ ಬ್ಯಾಟರ್‌ಗಳಿಗೆ ಸಿಕ್ಸರ್ ಮತ್ತು ಬೌಂಡರಿಗಳನ್ನು ಬಾರಿಸುವುದು ತುಂಬಾ ಸುಲಭವಾಗುತ್ತದೆ.
  • ಹೈ-ಸ್ಕೋರಿಂಗ್ ಪಂದ್ಯಗಳು: ಐಪಿಎಲ್ 2026 ರಲ್ಲಿ ಇಲ್ಲಿ ನಡೆದ ಎರಡೂ ಪಂದ್ಯಗಳು ಹೈ-ಸ್ಕೋರಿಂಗ್ ಆಗಿದ್ದು, ತಂಡಗಳು 200+ ರನ್‌ಗಳನ್ನು ಸುಲಭವಾಗಿ ದಾಟಿವೆ. ಈ ಮೈದಾನದಲ್ಲಿ ಸ್ಪರ್ಧಾತ್ಮಕ ಮೊತ್ತವೆಂದರೆ 190 ರಿಂದ 210 ರನ್.

ಇದನ್ನೂ ಓದಿ: ಕೊನೆಯ 10 ಪಂದ್ಯಗಳಲ್ಲಿ 8 ತಂಡಗಳ ಪ್ಲೇಆಫ್​ ಭವಿಷ್ಯ ನಿರ್ಧಾರ!

ಸ್ಪಿನ್ನರ್‌ಗಳಿಗೆ ಕಠಿಣ ಸವಾಲು:

ಧರ್ಮಶಾಲಾ ಪಿಚ್‌ನಲ್ಲಿ ಸ್ಪಿನ್ನರ್‌ಗಳಿಗೆ ಯಾವುದೇ ರೀತಿಯ ಟರ್ನ್ ಅಥವಾ ಹೆಚ್ಚಿನ ನೆರವು ಸಿಗುವುದಿಲ್ಲ. ಸ್ಪಿನ್ನರ್‌ಗಳು ಇಲ್ಲಿ ವಿಕೆಟ್ ಪಡೆಯುವುದಕ್ಕಿಂತ ರನ್ ನಿಯಂತ್ರಿಸುವುದರ ಕಡೆಗೇ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಅವರು ತಮ್ಮ ಲೈನ್, ಲೆಂತ್ ಮತ್ತು ವೇಗದಲ್ಲಿ ವೈವಿಧ್ಯತೆ ತಂದರೆ ಮಾತ್ರ ರನ್ ಹರಿವಿಗೆ ಬ್ರೇಕ್ ಹಾಕಬಹುದು.

 ಟಾಸ್ ಮತ್ತು ಚೇಸಿಂಗ್:

  • ಮಧ್ಯಾಹ್ನದ ಪಂದ್ಯ: ಇಂದಿನ ಪಂದ್ಯವು ಮಧ್ಯಾಹ್ನ 3:30 ಕ್ಕೆ ಆರಂಭವಾಗುತ್ತಿರುವುದರಿಂದ ಇಬ್ಬನಿಯ  ಯಾವುದೇ ಪ್ರಭಾವ ಇರುವುದಿಲ್ಲ.
  •  ಚೇಸಿಂಗ್ ಸುಲಭ: ಈ ಸೀಸನ್‌ನಲ್ಲಿ ಇಲ್ಲಿ ನಡೆದ ಎರಡೂ ಪಂದ್ಯಗಳಲ್ಲಿ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ತಂಡಗಳೇ ಗೆಲುವು ಸಾಧಿಸಿವೆ.
  • ಟಾಸ್ ಆಯ್ಕೆ: ಪಂದ್ಯ ಸಾಗಿದಂತೆ ಪಿಚ್ ಬ್ಯಾಟಿಂಗ್‌ಗೆ ಮತ್ತಷ್ಟು ಉತ್ತಮಗೊಳ್ಳುವುದರಿಂದ, ಟಾಸ್ ಗೆಲ್ಲುವ ನಾಯಕ ಮೊದಲು ಬೌಲಿಂಗ್ ಮಾಡುವ ಸಾಧ್ಯತೆ ಹೆಚ್ಚು.

Published On – 11:47 am, Sun, 17 May 26

Source link

ದಿ ಹೇಗ್‌ನಲ್ಲಿ 16 ಡಚ್ ಸಿಇಒಗಳನ್ನು ಭೇಟಿಯಾದ ಪ್ರಧಾನಿ ಮೋದಿ: ಏನಿದು ಒಪ್ಪಂದ? ಏನು ಚರ್ಚೆಯಾಯಿತು? – Kannada News | Narendra Modi and Dutch PM roundtable meet with 16 CEOs; Economic ties and investments discussed

ನೆದರ್​ಲ್ಯಾಂಡ್ಸ್ ದೇಶದ ಕಂಪನಿಗಳ ಮುಖ್ಯಸ್ಥರೊಂದಿಗೆ ಮೋದಿ ಸಭೆImage Credit source: Narendra Modi’s X account

ನವದೆಹಲಿ, ಮೇ 17: ನೆದರ್‌ಲ್ಯಾಂಡ್ಸ್‌ನ ‘ದಿ ಹೇಗ್’ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನೆದರ್‌ಲ್ಯಾಂಡ್ಸ್ ಪ್ರಧಾನಿ ರಾಬ್ ಜೆಟ್ಟನ್ (Rob Jetten) ಅವರೊಂದಿಗೆ ಜಂಟಿಯಾಗಿ ಪ್ರಮುಖ ಡಚ್ ಕಂಪನಿಗಳ 16 ಸಿಇಒಗಳ (CEO) ಜೊತೆ ದುಂಡುಮೇಜಿನ (Roundtable meet) ಸಭೆ ನಡೆಸಿದರು. ಭಾರತದಲ್ಲಿ ಬಂಡವಾಳ ಹೂಡಿಕೆ, ನಾವೀನ್ಯತೆ ಹಾಗೂ ಉದ್ಯಮವನ್ನು ವಿಸ್ತರಿಸುವಂತೆ ಜಾಗತಿಕ ಉದ್ಯಮಿಗಳಿಗೆ ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಮುಕ್ತ ಆಹ್ವಾನ ನೀಡಿದರು.

ಮುಖ್ಯ ಒಪ್ಪಂದ: ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಮೈತ್ರಿ

ಸಭೆಗೂ ಮುನ್ನ ಭಾರತದ ಉದ್ಯಮ ರಂಗದಲ್ಲಿ ಐತಿಹಾಸಿಕ ಒಪ್ಪಂದವೊಂದು ಏರ್ಪಟ್ಟಿತು. ಜಾಗತಿಕ ಸೆಮಿಕಂಡಕ್ಟರ್ ದೈತ್ಯ ಕಂಪನಿಯಾದ ASML ಮತ್ತು ಭಾರತದ ಟಾಟಾ ಎಲೆಕ್ಟ್ರಾನಿಕ್ಸ್ (Tata Electronics) ಸಂಸ್ಥೆಗಳು ಒಪ್ಪಂದಕ್ಕೆ ಸಹಿ ಹಾಕಿದವು. ಗುಜರಾತ್‌ನ ಧೋಲೇರಾದಲ್ಲಿ ಸ್ಥಾಪನೆಯಾಗಲಿರುವ ಭಾರತದ ಮೊದಲ ಅತ್ಯಾಧುನಿಕ ‘ಫ್ರಂಟ್-ಎಂಡ್ ಸೆಮಿಕಂಡಕ್ಟರ್ ಫ್ಯಾಬ್’ (Semiconductor FAB) ನಿರ್ಮಾಣಕ್ಕೆ ಈ ಒಪ್ಪಂದವು ಭಾರಿ ಬೆಂಬಲ ನೀಡಲಿದೆ.

ಭಾರತವು ವೇಗ ಮತ್ತು ಸ್ಥಿರತೆಯ ಸಂಕೇತ: ಮೋದಿ

ಇಂದಿನ ಭಾರತವು ಜಾಗತಿಕ ಮಟ್ಟದಲ್ಲಿ ಸ್ಥಿರತೆ ಹಾಗೂ ಬೃಹತ್ ಮಾರುಕಟ್ಟೆಯ ಸಂಕೇತವಾಗಿದೆ. ಮೂಲಸೌಕರ್ಯ, ಸ್ವಚ್ಛ ಇಂಧನ ಮತ್ತು ಸಂಪರ್ಕದ (Connectivity) ವಿಷಯದಲ್ಲಿ ಜಗತ್ತಿನ ಯಾವುದೇ ದೇಶವೂ ಭಾರತದ ವೇಗಕ್ಕೆ ಸಾಟಿಯಿಲ್ಲ. ಜಾಗತಿಕ ಆರ್ಥಿಕ ಬೆಳವಣಿಗೆಗೆ ಭಾರತವು ಪ್ರಸ್ತುತ ಶೇಕಡಾ 17 ರಷ್ಟು ಕೊಡುಗೆ ನೀಡುತ್ತಿದೆ ಎಂದು ಪ್ರಧಾನಿ ತಿಳಿಸಿದರು.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯ ತಲೆನೋವೇ ಬೇಡ; ಆಯಿಲ್ ಪೈಪ್​ಲೈನ್ ಯೋಜನೆ ಜಾರಿಗೆ ಯುಎಇ ಮುಂದು

ಭಾರತದ ಆರ್ಥಿಕತೆಯ ಡಿಎನ್‌ಎಯನ್ನು ನಿರಂತರ ಸುಧಾರಣೆಗಳ ಮೂಲಕ ಬದಲಾಯಿಸಲಾಗಿದೆ. ಖಾಸಗಿ ವಲಯಕ್ಕೆ ಹೆಚ್ಚಿನ ಸ್ಥಿರ ನೀತಿ (Predictability) ನೀಡಲು ಬಾಹ್ಯಾಕಾಶ, ಗಣಿಗಾರಿಕೆ ಮತ್ತು ಪರಮಾಣು ಇಂಧನ ಕ್ಷೇತ್ರಗಳನ್ನು ಮುಕ್ತಗೊಳಿಸಲಾಗಿದೆ. ತೆರಿಗೆ, ಕಾರ್ಮಿಕ ಕಾಯ್ದೆ ಹಾಗೂ ಸುಲಭ ವ್ಯಾಪಾರ (Ease of Doing Business) ಪ್ರಕ್ರಿಯೆಗಳನ್ನು ಸರಳಗೊಳಿಸಲಾಗಿದೆ ಎಂದು ನರೇಂದ್ರ ಮೋದಿ ವಿವರಿಸಿದರು.

ಚರ್ಚೆಯಾದ ವಿಷಯಗಳು

ಉದ್ಯಮಿಗಳನ್ನು ಪ್ರಮುಖವಾಗಿ ಮೂರು ಗುಂಪುಗಳಾಗಿ (Clusters) ವಿಂಗಡಿಸಿ ವಿಚಾರ ಮಂಡನೆ (Presentations) ಆಲಿಸಲಾಯಿತು:

  • ಸೆಮಿಕಂಡಕ್ಟರ್ಸ್, ತಂತ್ರಜ್ಞಾನ ಮತ್ತು ನಾವೀನ್ಯತೆ (Innovation)
  • ಮೂಲಸೌಕರ್ಯ, ಲಾಜಿಸ್ಟಿಕ್ಸ್ ಮತ್ತು ಕಡಲ ಉದ್ಯಮ (Maritime)
  • ಸುಸ್ಥಿರತೆ, ಹಸಿರು ಇಂಧನ ಮತ್ತು ಕೃಷಿ ಕ್ಷೇತ್ರ

ಪ್ರಧಾನಿ ಮೋದಿ ಅವರು ಕಡಲ ಉದ್ಯಮ, ನವೀಕರಿಸಬಹುದಾದ ಇಂಧನ, ಕೃತಕ ಬುದ್ಧಿಮತ್ತೆ (AI), ಡಿಜಿಟಲ್ ತಂತ್ರಜ್ಞಾನ ಮತ್ತು ಆರೋಗ್ಯ ರಕ್ಷಣಾ ಕ್ಷೇತ್ರಗಳಲ್ಲಿ ಭಾರತದಲ್ಲಿರುವ ಅಪಾರ ಅವಕಾಶಗಳನ್ನು ಬಳಸಿಕೊಳ್ಳಲು ಡಚ್ ಕಂಪನಿಗಳಿಗೆ ಕರೆ ನೀಡಿದರು. ಇದರೊಂದಿಗೆ ಭಾರತ-ಇಯು (India-EU) ಮುಕ್ತ ವ್ಯಾಪಾರ ಒಪ್ಪಂದವನ್ನು (FTA) ಶೀಘ್ರವಾಗಿ ಜಾರಿಗೆ ತರಲು ಉಭಯ ದೇಶಗಳ ಪ್ರಧಾನಿಗಳು ಒಲವು ತೋರಿದರು.

ಇದನ್ನೂ ಓದಿ: ಹಾರ್ಮುಜ್‌ ಸುತ್ತಲಿನ ಪ್ರದೇಶವೂ ಸುರಕ್ಷಿತವಲ್ಲ! ಮತ್ತೆ ಭಾರತದ ಹಡಗಿನ ಮೇಲೆ ದಾಳಿ

ಮೋದಿಯವರನ್ನು ಭೇಟಿಯಾದ 16 ಡಚ್ ಸಿಇಒಗಳು ಮತ್ತು ಕಂಪನಿಗಳ ಪಟ್ಟಿ

  1. ಎಪಿಎಂ ಟರ್ಮಿನಲ್ಸ್ (APM Terminals) ಸಿಇಒ ಕೀತ್ ಸ್ವೆಂಡ್ಸೆನ್
  2. ಎಎಸ್‌ಎಂಎಲ್ (ASML) ಸಿಇಒ ಕ್ರಿಸ್ಟೋಫ್ ಫೌಕೆಟ್
  3. ಡೇಮೆನ್ ಶಿಪ್‌ಯಾರ್ಡ್ಸ್ ಗ್ರೂಪ್ (Damen Shipyards Group) ಸಿಇಒ ಅರ್ನೌಟ್ ಡೇಮೆನ್
  4. ಹೇನಿಕನ್ (Heineken) ಸಿಇಒ ಡಾಲ್ಫ್ ವಾನ್ ಡೆನ್ ಬ್ರಿಂಕ್
  5. ಕೆಎಲ್‌ಎಂ ರಾಯಲ್ ಡಚ್ ಏರ್‌ಲೈನ್ಸ್ (KLM) ಸಿಇಒ ಮಾರ್ಜನ್ ರಿಂಟೆಲ್
  6. ಎನ್‌ಎಕ್ಸ್‌ಪಿ ಸೆಮಿಕಂಡಕ್ಟರ್ಸ್ (NXP Semiconductors) ನೆದರ್​ಲ್ಯಾಂಡ್ಸ್ ಸಿಇಒ ಮಾರಿಸ್ ಗೆರಾಟ್ಸ್
  7. ಫಿಲಿಪ್ಸ್ (Philips) ಸಿಇಒ ರಾಯ್ ಜಾಕೋಬ್ಸ್
  8. ಪೋರ್ಟ್ ಆಫ್ ರೋಟರ್‌ಡ್ಯಾಮ್ (Port of Rotterdam) – ಬೌಡೆವಿಜ್ನ್ ಸೀಮನ್ಸ್ (ಸಿಇಒ)
  9. ಪವರ್2ಎಕ್ಸ್ (Power2X) ಸಿಇಒ ಒಕ್ಕೊ ರೂಲೋಫ್ಸೆನ್
  10. ಪ್ರೊಸಸ್ (Prosus) ಸಿಇಒ ಫ್ಯಾಬ್ರಿಸಿಯೊ ಬ್ಲೋಯಿಸಿ
  11. ರಾಂಡ್‌ಸ್ಟಾಡ್ (Randstad) ಸಿಇಒ ಸ್ಯಾಂಡರ್ ವ್ಯಾನ್ ‘ಟ್ ನೂರ್ಡೆಂಡೆ
  12. ರಿಜ್ಕ್ ಜ್ವಾನ್ (Rijk Zwaan) ಸಿಇಒ ಮಾರ್ಟಿಜ್ನ್ ಎಗ್ಗಿಂಕ್
  13. ರಾಯಲ್ ಎಚ್‌ಝಡ್‌ಪಿಸಿ ಗ್ರೂಪ್ (Royal HZPC Group) ಸಿಇಒ ಹಾನ್ಸ್ ಹುಯಿಸ್ಟ್ರಾ
  14. ರಾಯಲ್ ಐಎಚ್‌ಸಿ (Royal IHC) ಸಿಇಒ ಡೆರ್ಕ್ ಟೆ ಬೊಕ್ಕೆಲ್
  15. ರಾಯಲ್ ವೋಪಾಕ್ (Royal Vopak) ಸಿಇಒ ಡಿಕ್ ರಿಚೆಲ್
  16. ವ್ಯಾನ್ ಊರ್ಡ್ (Van Oord) ಸಿಇಒ ಗೋವರ್ಟ್ ವ್ಯಾನ್ ಊರ್ಡ್

ಈ ಎಲ್ಲಾ ಉದ್ಯಮಿಗಳು ಭಾರತ ಸರ್ಕಾರದ ಸುಧಾರಣಾ ಕ್ರಮಗಳನ್ನು ಶ್ಲಾಘಿಸಿದ್ದು, ಭಾರತದಲ್ಲಿ ತಮ್ಮ ಉದ್ಯಮ ವಿಸ್ತರಣೆಗೆ ಅತ್ಯಂತ ಆಸಕ್ತಿ ಹೊಂದಿದ್ದೇವೆ ಎಂದು ಭರವಸೆ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Optical Illusion: ಈ ಚಿತ್ರದಲ್ಲಿ ಅಡಗಿ ಕುಳಿತಿರುವ ಚಿಟ್ಟೆಯನ್ನು ಹುಡುಕಬಲ್ಲಿರಾ – Kannada News | Optical illusion can you find the butterfly hiding in this picture

ಆಪ್ಟಿಕಲ್ ಇಲ್ಯೂಷನ್ ಚಿತ್ರImage Credit source: TinEye

ಒಗಟು ಎಂದರೆ ಎಲ್ಲರ ಕಿವಿ ನೆಟ್ಟಗಾಗುತ್ತದೆ. ಹೀಗಾಗಿ ಬಿಡುವುದು ಸಿಕ್ಕಾಗಲೆಲ್ಲಾ ಕೆಲವರು ಆಪ್ಟಿಕಲ್‌ ಇಲ್ಯೂಷನ್‌ನಂತಹ (Optical Illusion) ಒಗಟಿನ ಆಟಗಳತ್ತ ಆಸಕ್ತಿ ತೋರಿಸುತ್ತಾರೆ. ಇದು ನಿಮ್ಮ ಕಣ್ಣಿನ ದೃಷ್ಟಿ, ತಾಳ್ಮೆ ಹಾಗೂ ಬುದ್ಧಿವಂತಿಕೆ ಎಷ್ಟಿದೆ ಎಂದು ಪರೀಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದೀಗ ನಿಮ್ಮ ವೀಕ್ಷಣಾ ಸಾಮರ್ಥ್ಯ ಪರೀಕ್ಷಿಸುವ ಸಮಯ. ಈ ಚಿತ್ರದಲ್ಲಿರುವ ಚಿಟ್ಟೆಯನ್ನು ಕಂಡುಹಿಡಿಯುವುದೇ ನಿಮ್ಮ ಮುಂದಿರುವ ಸವಾಲು. ಕೇವಲ 5 ಸೆಕೆಂಡುಗಳಲ್ಲಿ ಬಣ್ಣದ ಚಿಟ್ಟೆಯನ್ನು ಕಂಡುಹಿಡಿಯಲು ಸಾಧ್ಯವಾದರೆ, ನೀವು ಜಾಣರು ಎನ್ನುವುದು ಖಚಿತವಾಗುತ್ತದೆ.

ಈ ಚಿತ್ರ ನೋಡಿದಾಗ ಏನು ಕಾಣಿಸಿತು?

ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವು ನಿಮ್ಮ ವೀಕ್ಷಣಾ ಕೌಶಲ್ಯವನ್ನು ನೂರಕ್ಕೆ ನೂರರಷ್ಟು ಪರೀಕ್ಷಿಸುತ್ತದೆ. ಈ ಚಿತ್ರ ನೋಡಿದಾಗ ನಿಮ್ಮ ಕಣ್ಣಿಗೆ ಬೀಳುವುದೇ ಲಿವಿಂಗ್ ರೂಮ್. ಈ ರೂಮ್‌ನಲ್ಲಿ ವೃದ್ಧ ವ್ಯಕ್ತಿ ಕುಳಿತುಕೊಂಡಿದ್ದಾನೆ. ಆತನ ಪಕ್ಕದಲ್ಲಿ ಫೋಟೋ ಫ್ರೇಮ್‌ಗಳಿವೆ. ಮನೆಯ ಸಾಕು ನಾಯಿ ಕೂಡ ಪಕ್ಕದ ಸೋಫಾದಲ್ಲಿ ಕುಳಿತಿದೆ, ಇಲ್ಲಿ ಚಿಟ್ಟೆಯೊಂದಿದೆ. ನೀವು ಅದನ್ನು ಕೇವಲ 5 ಸೆಕೆಂಡುಗಳಲ್ಲಿ ಕಂಡುಹಿಡಿಯಬೇಕು.

ಇದನ್ನೂ ಓದಿ: ನೀವು ಬುದ್ಧಿವಂತರಾಗಿದ್ರೆ ಈ ಚಿತ್ರದಲ್ಲಿ ಅಡಗಿರುವ ಪಾಂಡವನ್ನು ಕಂಡು ಹಿಡಿಯಿರಿ

ನಿಮ್ಮ ಕಣ್ಣಿಗೆ ಚಿಟ್ಟೆ ಕಾಣಿಸಿತೇ ?

ಕೆಲವೊಮ್ಮೆ ಇಂತಹ ಒಗಟನ್ನು ಬಿಡಿಸುವಾಗ ತಾಳ್ಮೆ ಹಾಗೂ ಏಕಾಗ್ರತೆ ಬಹಳ ಮುಖ್ಯ. ಈ ಚಿತ್ರದಲ್ಲಿ ಚಿಟ್ಟೆಯೊಂದಿದೆ. ತೀಕ್ಷ್ಣವಾದ ಕಣ್ಣು ನಿಮ್ಮದಾಗಿದ್ದರೆ ಈ ಚಿತ್ರದ ಇಂಚಿಂಚು ಕಣ್ಣಾಯಿಸಿ. ಎಷ್ಟೇ ಪ್ರಯತ್ನ ಪಟ್ಟರೂ ಚಿಟ್ಟೆ ಕಣ್ಣಿಗೆ ಬಿದ್ದಿಲ್ಲವೇ, ನಾವೇ ನಿಮಗೆ ಈ ಒಗಟಿನ ಉತ್ತರ ಹೇಳುತ್ತೇವೆ. ಈ ಕೆಳಗಿನ ಚಿತ್ರದಲ್ಲಿ ಚಿಟ್ಟೆ ಎಲ್ಲಿದೆ ಎಂದು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಣವೀರ್ ಸಿಂಗ್, ಆದಿತ್ಯ ಚೋಪ್ರಾ ರಹಸ್ಯ ಸಭೆ; ಹಳೇ ಮುನಿಸು ಮರೆತು ಒಂದಾದ ಗುರು-ಶಿಷ್ಯ – Kannada News | Ranveer Singh Aditya Chopra hold closed door meeting at YRF after Dhurandhar success

ಬಾಲಿವುಡ್‌ನ ಎನರ್ಜಿಟಿಕ್ ಸ್ಟಾರ್ ರಣವೀರ್ ಸಿಂಗ್ (Ranveer Singh) ಸದ್ಯ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಬ್ಯಾಕ್-ಟು-ಬ್ಯಾಕ್ ಎರಡು ಭರ್ಜರಿ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಕೇವಲ ನಾಲ್ಕೇ ತಿಂಗಳಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ಆಗಿ ಹೊರಹೊಮ್ಮಿದ್ದಾರೆ. ಸದ್ಯ ಬಾಲಿವುಡ್‌ನ ಪ್ರಮುಖ ನಿರ್ಮಾಪಕರು, ನಿರ್ದೇಶಕರು ಮತ್ತು ದೊಡ್ಡ ಬ್ರ್ಯಾಂಡ್‌ಗಳ ಮೊದಲ ಆಯ್ಕೆಯಾಗಿರುವ ರಣವೀರ್ ಸಿಂಗ್, ಇತ್ತೀಚೆಗಷ್ಟೇ ತಮಗೆ ಚಿತ್ರರಂಗದಲ್ಲಿ ಮೊದಲ ಬ್ರೇಕ್ ನೀಡಿದ್ದ ಖ್ಯಾತ ನಿರ್ಮಾಪಕ ಆದಿತ್ಯ ಚೋಪ್ರಾ (Aditya Chopra) ಅವರನ್ನು ರಹಸ್ಯವಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಯಶ್ ರಾಜ್ ಫಿಲ್ಮ್ಸ್ ಕಚೇರಿಯಲ್ಲಿ ನಡೆದ ಗೌಪ್ಯ ಸಭೆಯು ಬಾಲಿವುಡ್ ಅಂಗಳದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಮೂಲಗಳ ಪ್ರಕಾರ, ರಣವೀರ್ ಸಿಂಗ್ ಅವರ ಇತ್ತೀಚಿನ ಬಿಗ್ ಹಿಟ್ ಸಿನಿಮಾ ‘ಧುರಂಧರ್’ ಸಾಧಿಸಿದ ಅಭೂತಪೂರ್ವ ಯಶಸ್ಸು ಆದಿತ್ಯ ಚೋಪ್ರಾಗೆ ವೈಯಕ್ತಿಕವಾಗಿ ತುಂಬಾ ಸಂತೋಷ ತಂದಿದೆ. ಏಕೆಂದರೆ, ರಣವೀರ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿ, ಅವರು ಇಂದು ಈ ಮಟ್ಟಕ್ಕೆ ಬೆಳೆಯಲು ಬಲವಾದ ಅಡಿಪಾಯ ಹಾಕಿಕೊಟ್ಟಿದ್ದೇ ಆದಿತ್ಯ ಚೋಪ್ರಾ.

ಕಳೆದ ಕೆಲವು ವರ್ಷಗಳಿಂದ ಇಬ್ಬರ ನಡುವೆ ಇದ್ದ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಈ ಸಭೆಯಲ್ಲಿ ಬಗೆಹರಿಸಿಕೊಂಡಿದ್ದಾರೆ ಎನ್ನಲಾಗಿದೆ. ಇಬ್ಬರೂ ಪರಸ್ಪರ ಆಲಂಗಿಸಿಕೊಂಡಿದ್ದಾರೆ. ಈ ಸುದೀರ್ಘ ಸಭೆಯಲ್ಲಿ ಇಬ್ಬರ ಭವಿಷ್ಯದ ಯೋಜನೆಗಳು, ‘ಧುರಂಧರ್’ ಸಿನಿಮಾದ ಭಾರಿ ಯಶಸ್ಸು ಹಾಗೂ ಮುಂದೆ ಜೊತೆಯಾಗಿ ಕೆಲಸ ಮಾಡುವ ಕುರಿತು ಸುದೀರ್ಘ ಚರ್ಚೆ ನಡೆದಿದೆ.

ಈ ರಹಸ್ಯ ಸಭೆಯಲ್ಲಿ ಆದಿತ್ಯ ಚೋಪ್ರಾ ಮತ್ತು ರಣವೀರ್ ಸಿಂಗ್ ದೊಡ್ಡ ಮಟ್ಟದ ಸಿನಿಮಾವೊಂದಕ್ಕಾಗಿ ಕೈಜೋಡಿಸಲು ಆಸಕ್ತಿ ತೋರಿಸಿದ್ದಾರೆ. ಮುಂಬರುವ 6 ತಿಂಗಳ ಒಳಗಾಗಿ ರಣವೀರ್ ಸಿಂಗ್‌ಗಾಗಿ ಒಂದು ಭರ್ಜರಿ ಕಥೆಯನ್ನು ಸಿದ್ಧಪಡಿಸಿಕೊಂಡು ಬರುವುದಾಗಿ ಆದಿತ್ಯ ಚೋಪ್ರಾ ಭರವಸೆ ನೀಡಿದ್ದಾರೆ. ರಣವೀರ್ ಕೂಡ ಈ ಖ್ಯಾತ ನಿರ್ದೇಶಕ-ನಿರ್ಮಾಪಕನ ಕಥೆ ಕೇಳಲು ಕಾತುರರಾಗಿದ್ದಾರೆ. ರಣವೀರ್ ಸಿಂಗ್ ಅವರಿಗೆ ವೈಆರ್‌ಎಫ್ ಬ್ಯಾನರ್‌ಗೆ ಮರಳುವುದು ತವರು ಮನೆಗೆ ಮರಳಿದಷ್ಟೇ ವಿಶೇಷವಾಗಿದೆ.

ಇದನ್ನೂ ಓದಿ: ಮತ್ತೆ ಒಂದಾದ ‘ಧುರಂಧರ್’ ಜೋಡಿ; ಆದಿತ್ಯ ಧಾರ್ ಹೊಸ ಚಿತ್ರಕ್ಕೆ ರಣವೀರ್ ಹೀರೋ

ರಣವೀರ್ ಸಿಂಗ್ ಸದ್ಯ ಮತ್ತೊಂದು ದೊಡ್ಡ ಸಾಹಸಕ್ಕೆ ಕೈಹಾಕಿದ್ದಾರೆ. ಪ್ರಸಿದ್ಧ ಲೇಖಕ ಅಮಿಶ್ ತ್ರಿಪಾಠಿ ಅವರ ಬೆಸ್ಟ್ ಸೆಲ್ಲರ್ ಕಾದಂಬರಿ ‘ಇಮ್ಮಾರ್ಟಲ್ಸ್ ಆಫ್ ಮೆಲುಹಾ’ ಹಕ್ಕುಗಳನ್ನು ರಣವೀರ್ ಪಡೆದುಕೊಂಡಿದ್ದು, ಸದ್ಯ ಇದು ಸ್ಕ್ರಿಪ್ಟಿಂಗ್ ಹಂತದಲ್ಲಿದೆ. ಒಟ್ಟಿನಲ್ಲಿ, ಯಶ್ ರಾಜ್ ಫಿಲ್ಮ್ಸ್ ಮತ್ತು ರಣವೀರ್ ಸಿಂಗ್ ಕಾಂಬಿನೇಷನ್ ಮತ್ತೆ ಒಂದಾಗುತ್ತಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Blue Sapphire: ನೀಲಮಣಿ ಧರಿಸುವ ಮುನ್ನ ಎಚ್ಚರ;ಈ 3 ರತ್ನಗಳ ಜೊತೆಯಾಗಿ ಧರಿಸಿದರೆ ಸಂಕಷ್ಟ ಗ್ಯಾರಂಟಿ! – Kannada News | Neelamani Gemstone: Best and Worst Pairings in Vedic Astrology for Success

ನೀಲಮಣಿ ರತ್ನ ಧರಿಸುವ ಮುನ್ನ ಎಚ್ಚರImage Credit source: Pinterest

ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ರತ್ನಗಳಿಗೆ ಅತ್ಯಂತ ಪ್ರಮುಖವಾದ ಸ್ಥಾನವಿದ್ದು, ನವಗ್ರಹಗಳ ದೋಷ ನಿವಾರಣೆಗೆ ಇವುಗಳನ್ನು ಧರಿಸಲಾಗುತ್ತದೆ. ಇವುಗಳಲ್ಲಿ ಕರ್ಮಫಲ ದಾತನಾದ ಶನಿದೇವನಿಗೆ ಪ್ರಿಯವಾದ ನೀಲಮಣಿ (Blue Sapphire) ರತ್ನವನ್ನು ಅತ್ಯಂತ ಶಕ್ತಿಶಾಲಿ ಎಂದು ಪರಿಗಣಿಸಲಾಗಿದೆ. ಜಾತಕದಲ್ಲಿ ಕಾಡುವ ಶನಿಯ ಸಾಡೇ ಸಾತಿ (ಏಳೂವರೆ ಶನಿ) ಮತ್ತು ಧೈಯ್ಯಾ ಪ್ರಭಾವದಿಂದ ಉಂಟಾಗುವ ಕಷ್ಟಗಳನ್ನು ನಿವಾರಿಸಿ, ಜೀವನದಲ್ಲಿ ಶುಭ ಫಲಗಳನ್ನು ತರಲು ನೀಲಮಣಿ ಸಹಕಾರಿಯಾಗಿದೆ.

ರತ್ನಗಳ ಸಂಯೋಜನೆಯಲ್ಲಿ ಎಚ್ಚರಿಕೆ ಅಗತ್ಯ:

ಜ್ಯೋತಿಷ್ಯ ಶಾಸ್ತ್ರದ ನಿಯಮಗಳ ಪ್ರಕಾರ, ಕೆಲವು ರತ್ನಗಳನ್ನು ನೀಲಮಣಿಯೊಂದಿಗೆ ಎಂದಿಗೂ ಧರಿಸಬಾರದು. ಶನಿ ದೇವನಿಗೆ ಶತ್ರುವಾಗಿರುವ ಗ್ರಹಗಳ ರತ್ನಗಳನ್ನು ಒಟ್ಟಿಗೆ ಧರಿಸುವುದರಿಂದ ವಿರುದ್ಧ ಪರಿಣಾಮಗಳು ಉಂಟಾಗುತ್ತವೆ. ಇಂತಹ ತಪ್ಪು ಮಾಡುವುದರಿಂದ ಜೀವನದಲ್ಲಿ ಧನಾತ್ಮಕ ಫಲಿತಾಂಶಗಳು ಸಿಗುವ ಬದಲು ಸಾಲು ಸಾಲು ತೊಂದರೆಗಳು ಎದುರಾಗಬಹುದು. ಹಾಗಾಗಿ, ನೀಲಮಣಿ ಧರಿಸುವಾಗ ಪ್ರಮುಖವಾಗಿ ಮೂರು ರತ್ನಗಳಿಂದ ದೂರವಿರಬೇಕಾಗುತ್ತದೆ.

ಮಾಣಿಕ್ಯ ರತ್ನವನ್ನು ಜೊತೆಯಾಗಿ ಧರಿಸಬೇಡಿ:

ಮಾಣಿಕ್ಯ ರತ್ನವು ಗ್ರಹಗಳ ರಾಜನಾದ ಸೂರ್ಯನನ್ನು ಪ್ರತಿನಿಧಿಸುತ್ತದೆ. ಜ್ಯೋತಿಷ್ಯದ ಪ್ರಕಾರ ಸೂರ್ಯ ಮತ್ತು ಶನಿ ತಂದೆ-ಮಗನ ಸಂಬಂಧವನ್ನು ಹೊಂದಿದ್ದರೂ, ಪರಸ್ಪರ ಕಡು ಶತ್ರುಗಳಾಗಿದ್ದಾರೆ. ಆದ್ದರಿಂದ ನೀಲಮಣಿ ಮತ್ತು ಮಾಣಿಕ್ಯವನ್ನು ಒಟ್ಟಿಗೆ ಧರಿಸುವುದು ಜ್ಯೋತಿಷ್ಯದಲ್ಲಿ ವಿರುದ್ಧಚಿಹ್ನೆಯನ್ನು ಹೊಂದಿದೆ. ಈ ಎರಡು ರತ್ನಗಳನ್ನು ಜೊತೆಯಾಗಿ ಧರಿಸುವುದರಿಂದ ಉದ್ಯೋಗ ಅಥವಾ ವ್ಯವಹಾರ ಕ್ಷೇತ್ರದಲ್ಲಿ ಮಾನ-ಗೌರವಕ್ಕೆ ಧಕ್ಕೆ ಬರಬಹುದು. ಪ್ರತಿಯೊಂದು ಕೆಲಸದಲ್ಲೂ ಅಡೆತಡೆಗಳು ಉಂಟಾಗುವುದರ ಜೊತೆಗೆ ಆರೋಗ್ಯದ ಸಮಸ್ಯೆಗಳು ಕಾಡುವ ಸಾಧ್ಯತೆ ಇರುತ್ತದೆ.

ಮುತ್ತು ಧರಿಸಬೇಡಿ:

ಮುತ್ತು ಮನಸ್ಕಾರಕನಾದ ಚಂದ್ರ ಗ್ರಹಕ್ಕೆ ಸಂಬಂಧಿಸಿದ ರತ್ನವಾಗಿದೆ. ವೈದಿಕ ಜ್ಯೋತಿಷ್ಯದ ಪ್ರಕಾರ ಶನಿ ಮತ್ತು ಚಂದ್ರ ಗ್ರಹಗಳ ನಡುವೆ ತೀವ್ರ ವೈರತ್ವವಿದೆ. ಇವೆರಡರ ಸಂಯೋಜನೆಯನ್ನು ಜ್ಯೋತಿಷ್ಯದಲ್ಲಿ ಅಶುಭ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ನೀಲಮಣಿಯೊಂದಿಗೆ ಮುತ್ತನ್ನು ಧರಿಸುವುದರಿಂದ ಮನಸ್ಸಿನ ಶಾಂತಿ ಸಂಪೂರ್ಣವಾಗಿ ಹಾಳಾಗುತ್ತದೆ. ಇದು ವ್ಯಕ್ತಿಯಲ್ಲಿ ವಿಪರೀತ ಮಾನಸಿಕ ಒತ್ತಡ, ನಕಾರಾತ್ಮಕ ಆಲೋಚನೆಗಳು ಮತ್ತು ಖಿನ್ನತೆಯನ್ನು (Depression) ಉಂಟುಮಾಡಬಹುದು.

ಇದನ್ನೂ ಓದಿ: ನಿಮ್ಮ ಜನ್ಮ ದಿನಾಂಕದಲ್ಲೇ ಅಡಗಿದೆ ಮದುವೆಯ ರಹಸ್ಯ; ನಿಮಗಾಗುವುದು ಪ್ರೇಮ ವಿವಾಹವೋ ಅಥವಾ ಅರೇಂಜ್ ಮ್ಯಾರೇಜ್?

ಹವಳದ ಧರಿಸುವಿಕೆಯಿಂದ ಆರ್ಥಿಕ ನಷ್ಟದ ಭೀತಿ:

ಹವಳವು ಧೈರ್ಯ ಮತ್ತು ಶಕ್ತಿಯ ಸಂಕೇತವಾದ ಮಂಗಳ ಗ್ರಹಕ್ಕೆ ಸಂಬಂಧಿಸಿದ ರತ್ನವಾಗಿದೆ. ಮಂಗಳ ಮತ್ತು ಶನಿ ಪರಸ್ಪರ ವಿರುದ್ಧ ಸ್ವಭಾವದ ಗ್ರಹಗಳಾಗಿರುವುದರಿಂದ, ಇವೆರಡರ ರತ್ನಗಳ ಸಮಾಗಮ ಒಳ್ಳೆಯದಲ್ಲ. ನೀಲಮಣಿಯೊಂದಿಗೆ ಹವಳವನ್ನು ಧರಿಸುವುದರಿಂದ ವ್ಯಕ್ತಿಯ ಸ್ವಭಾವದಲ್ಲಿ ಆಕ್ರಮಣಕಾರಿ ಗುಣ ಮತ್ತು ಸಿಟ್ಟು ವಿಪರೀತವಾಗಿ ಹೆಚ್ಚಾಗುತ್ತದೆ. ಮಾತು ಮತ್ತು ವರ್ತನೆಯ ಮೇಲಿನ ನಿಯಂತ್ರಣ ತಪ್ಪಿ, ಭಾರಿ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗಬಹುದು ಎಂದು ನಂಬಲಾಗಿದೆ.

ನೀಲಮಣಿಯೊಂದಿಗೆ ಧರಿಸಬಹುದಾದ ಶುಭ ರತ್ನಗಳು:

ಶನಿ ದೇವನಿಗೆ ಮಿತ್ರ ಗ್ರಹಗಳಾದ ಬುಧ, ಶುಕ್ರ ಮತ್ತು ರಾಹುವಿನ ರತ್ನಗಳನ್ನು ನೀಲಮಣಿಯೊಂದಿಗೆ ಧರಿಸುವುದು ಅತ್ಯಂತ ಶುಭ ಫಲಗಳನ್ನು ನೀಡುತ್ತದೆ. ಬುಧನ ರತ್ನವಾದ ಪಚ್ಚೆ (Emerald), ಶುಕ್ರನ ರತ್ನವಾದ ವಜ್ರ (Diamond) ಮತ್ತು ರಾಹುವಿನ ರತ್ನವಾದ ಗೋಮೇಧಿಕವನ್ನು (Hessonite) ನೀಲಮಣಿಯೊಂದಿಗೆ ಧರಿಸಬಹುದು. ಈ ರತ್ನಗಳ ಸಂಯೋಜನೆಯು ವ್ಯಕ್ತಿಗೆ ಭೌತಿಕ ಸೌಕರ್ಯಗಳು, ವ್ಯವಹಾರ ಮತ್ತು ವೃತ್ತಿಜೀವನದಲ್ಲಿ ಅಭೂತಪೂರ್ವ ಯಶಸ್ಸು ಹಾಗೂ ಅಪಾರ ಸಂಪತ್ತನ್ನು ತಂದುಕೊಡುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವರುಣನ ಅಬ್ಬರಕ್ಕೆ ದಾವಣಗೆರೆಯಲ್ಲಿ ಅಲ್ಲೋಲ ಕಲ್ಲೋಲ: ಅಡಿಕೆ ತೋಟ ಸರ್ವನಾಶ

ದಾವಣಗೆರೆ, ಮೇ 17: ಜಿಲ್ಲೆಯ ಹಲವೆಡೆ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಯು ವ್ಯಾಪಕ ಅವಾಂತರಕ್ಕೆ ಕಾರಣವಾಗಿದೆ. ಬೇಸಿಗೆ ಮಳೆಯು ಆಲಿಕಲ್ಲು ಸಹಿತ ಅಪ್ಪಳಿಸಿದ್ದು, ಗಾಳಿಯ ರಭಸಕ್ಕೆ ದೇವಸ್ಥಾನದ ತಗಡಿನ ಶೀಟ್‌ಗಳು ಹಾರಿಹೋಗಿವೆ. ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಗ್ರಾಮದಲ್ಲಿ ಬಿರುಗಾಳಿ ಮತ್ತು ಮಳೆಯಿಂದ ನೂರಾರು ಅಡಿಕೆ ಮರಗಳು ನೆಲಕ್ಕುರುಳಿವೆ. ಬಸವಾಪಟ್ಟಣ ಗ್ರಾಮದ ಶಾಂತಗೌಡರು ಎಂಬುವರ ತೋಟದಲ್ಲಿ ಅರ್ಧ ಎಕರೆಯಷ್ಟು ಅಡಿಕೆ ಮರಗಳು ಬುಡ ಸಮೇತ ಕಿತ್ತು ಬಿದ್ದಿವೆ. ಹತ್ತಾರು ವರ್ಷಗಳಿಂದ ಫಲ ನೀಡುತ್ತಿದ್ದ ಅಡಿಕೆ ಮರಗಳು ನೆಲಸಮಗೊಂಡಿರುವುದು ರೈತರಿಗೆ ಆರ್ಥಿಕ ನಷ್ಟ ಉಂಟುಮಾಡಿದೆ. ಈ ಘಟನೆಯು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ್ದು, ಮಳೆಯಿಂದ ಉಂಟಾದ ಹಾನಿಯ ಪ್ರಮಾಣದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

20 ಸಿಕ್ಸ್​… ಅಲೆನ್ ಆರ್ಭಟಕ್ಕೆ ಹೊಸ ಇತಿಹಾಸ ನಿರ್ಮಾಣ!

Source link

Exit mobile version