Headlines

ಸಿಎಂ ಅನ್ನೇ ರಸ್ತೆಯಲ್ಲಿ ನಿಲ್ಲಿಸಿದ್ದ ರಜನೀಕಾಂತ್: ಯಾವ ಸಿನಿಮಾ ಸೀನ್​​ಗೂ ಕಮ್ಮಿ ಇಲ್ಲ – Kannada News | Rajinikanth once made CM Jayalalitha wait on road

ರಜನೀಕಾಂತ್ (Rajinikanth) ಭಾರತದ ಟಾಪ್ ಸೂಪರ್ ಸ್ಟಾರ್. ಸಿನಿಮಾಗಳಲ್ಲಿ ಸಖತ್ ಮಾಸ್ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾರೆ. ಈಗ ರಜನೀಕಾಂತ್ ರಾಜಕೀಯದಿಂದ ದೂರ ಉಳಿದಿದ್ದಾರೆ. 90ರ ದಶಕದಲ್ಲಿ ರಜನೀಕಾಂತ್ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಅದರಲ್ಲೂ ಜಯಲಲಿತಾ ವಿರುದ್ಧ ಸತತ ಪ್ರಚಾರಗಳನ್ನು ಮಾಡುತ್ತಿದ್ದರು. ಅದಕ್ಕೆ ಕಾರಣವೂ ಇತ್ತು. ಒಮ್ಮೆಯಂತೂ ಸಿಎಂ ಜಯಲಲಿತಾ ದಾರಿಯಲ್ಲಿ ನಿಲ್ಲುವಂತೆ ಮಾಡಿದ್ದರು. 1991 ರಲ್ಲಿ ಜಯಲಲಿತಾ ಮೊದಲ ಬಾರಿಗೆ ಸಿಎಂ ಆಗಿದ್ದರು. ಅವರು ಬರುವ ದಾರಿಯಲ್ಲಿ ಪೊಲೀಸರು ಬ್ಯಾರಿಕೇಡ್​​ಗಳನ್ನು ಹಾಕಿ ಇತರೆ ಗಾಡಿಗಳನ್ನೆಲ್ಲ ರಸ್ತೆಯಲ್ಲಿ ಅಡ್ಡಗಟ್ಟಿದ್ದರು, ಅದರಲ್ಲಿ ರಜನೀಕಾಂತ್…

Read More

ವೃತ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಬಯಸಿದರೆ ಈ ಅಭ್ಯಾಸಗಳನ್ನು ಇಂದೇ ಬಿಟ್ಟುಬಿಡಿ – Kannada News | These habits can ruin your image in the workplace and hinder your progress

ನಮ್ಮ ಕೌಶಲ್ಯ, ಪದವಿ ನಮಗೆ ಉದ್ಯೋಗವನ್ನು ತಂದುಕೊಡುತ್ತದೆ, ಅದೇ ನಮ್ಮ ನಡವಳಿಕೆಗಳು ಮತ್ತು ಅಭ್ಯಾಸಗಳು ನಮ್ಮ ವೃತ್ತಿ ಜೀವನದ (career) ಯಶಸ್ಸನ್ನು ನಿರ್ಧರಿಸುತ್ತದೆ. ಕೆಲವೊಮ್ಮೆ ನಾವು ತಿಳಿದೋ ತಿಳಿಯದೆಯೋ ಮಾಡುವ ಸಣ್ಣ ತಪ್ಪಿನಿಂದ  ನಮ್ಮ ಇಮೇಜ್‌ ಹಾಳಾಗುವ ಸಾಧ್ಯತೆ ಇರುತ್ತದೆ ಇದರಿಂದ ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಸಾಧಿಸಲು ಸಹ ಕಷ್ಟ ಸಾಧ್ಯವಾಗಬಹುದು, ಕಠಿಣ ಪರಿಶ್ರಮವೆಲ್ಲಾ ಹಾಳಾಗಬಹುದು. ಹಾಗಿದ್ದರೆ ನಮ್ಮ ಯಾವ ಅಭ್ಯಾಸಗಳು ವೃತ್ತಿ ಜೀವನದ ಯಶಸ್ಸಿಗೆ ಮುಳುವಾಗುತ್ತದೆ, ವೃತ್ತಿ ಜೀವನದ ಯಶಸ್ಸಿಗಾಗಿ ಯಾವ ಅಭ್ಯಾಸಗಳನ್ನು ಬದಲಾಯಿಸಬೇಕು ಎಂಬುದರ…

Read More

AFCAT 2 Recruitment 2026: ಭಾರತೀಯ ವಾಯುಪಡೆಯಲ್ಲಿ ಭರ್ಜರಿ ನೇಮಕಾತಿ; 300ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ! – Kannada News | AFCAT 2 Recruitment 2026: Apply for 300+ IAF Officer Posts – Last Date June 19!

ಭಾರತೀಯ ವಾಯುಪಡೆಯಲ್ಲಿ ಆಫೀಸರ್ ಹುದ್ದೆImage Credit source: Getty Images ಭಾರತೀಯ ವಾಯುಪಡೆಯಲ್ಲಿ ಆಫೀಸರ್ ಆಗಿ ದೇಶ ಸೇವೆ ಮಾಡಬಯಸುವ ಯುವಜನತೆಗೆ ಇಲ್ಲಿದೆ ಸುವರ್ಣಾವಕಾಶ. ಭಾರತೀಯ ವಾಯುಪಡೆಯು (IAF) ಏರ್‌ಫೋರ್ಸ್ ಕಾಮನ್ ಅಡ್ಮಿಷನ್ ಟೆಸ್ಟ್ (AFCAT 2) ಪರೀಕ್ಷೆಗಾಗಿ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿ ಅಭಿಯಾನದ ಮೂಲಕ ವಾಯುಪಡೆಯ ಫ್ಲೈಯಿಂಗ್ (ಹಾರಾಟ) ಮತ್ತು ಗ್ರೌಂಡ್ ಡ್ಯೂಟಿ (ನೆಲದ ಕರ್ತವ್ಯ) ಶಾಖೆಗಳಲ್ಲಿ ಒಟ್ಟು 300ಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಇದರಲ್ಲಿ 142 ಅಧಿಕಾರಿ…

Read More

ಇಂದಿನಿಂದ 4 ದಿನ ರಾಜ್ಯದ ಈ ಭಾಗಗಳಲ್ಲಿ ಭಾರಿ ಮಳೆ: ಆಲಿಕಲ್ಲು ಮಳೆ , ಬಿರುಗಾಳಿಯ ಮುನ್ನೆಚ್ಚರಿಕೆ! – Kannada News | IMD Forecast: Heavy Rain and Hailstorm Warning for Karnataka Districts; Public Alert

ಬೆಂಗಳೂರುಮ, ಮೇ,16: ರಾಜ್ಯದಲ್ಲಿ ಬಿಸಿಲಿನ ಬೇಗೆಯ ನಡುವೆಯೇ ವರುಣನ ಆರ್ಭಟ ಆರಂಭವಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (IMD) ನೀಡಿದೆ. ಮುಂದಿನ ಕೆಲವು ದಿನಗಳ ಕಾಲ ರಾಜ್ಯದ ದಕ್ಷಿಣ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಮುನ್ನೆಚ್ಚರಿಕೆಗಳನ್ನು ಘೋಷಣೆ ಮಾಡಿದೆ. ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮೇ 16 ರಿಂದ ಮೇ 19 ರವರೆಗೆ ಹವಾಮಾನದಲ್ಲಿ ಭಾರಿ ಏರುಪೇರಾಗಲಿದೆ. ಈ ಅವಧಿಯಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ 64.5mm ನಿಂದ 115.5mm ವರೆಗೆ ಭಾರಿ…

Read More

ಪೋಷಕರೇ ಮಗುವಿಗೆ ಹಸಿವಾಗಿರುವುದನ್ನು ಹೇಗೆ ತಿಳಿದುಕೊಳ್ಳಬೇಕು ಗೊತ್ತಾ? – Kannada News | How To Know If Your Toddler Is Hungry: Behavioral Signs To Watch

ಸಣ್ಣ ಮಕ್ಕಳು ತಮ್ಮ ಹಸಿವು ಅಥವಾ ಅಸಹಜತೆಯನ್ನು ಯಾವಾಗಲೂ ಸ್ಪಷ್ಟವಾಗಿ ಹೇಳಲು ಸಾಧ್ಯವಾಗುವುದಿಲ್ಲ. ವಿಶೇಷವಾಗಿ 5 ವರ್ಷಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳು ಅಳುವುದು, ಕೋಪಗೊಳ್ಳುವುದು ಅಥವಾ ವರ್ತನೆಯಲ್ಲಿ ಬದಲಾವಣೆ ತೋರಿಸುವ ಮೂಲಕ ತಮ್ಮ ಅಗತ್ಯಗಳನ್ನು ವ್ಯಕ್ತಪಡಿಸುತ್ತಾರೆ. ಆದ್ದರಿಂದ ಪೋಷಕರು ಮಕ್ಕಳ ದಿನನಿತ್ಯದ ವರ್ತನೆ ಮತ್ತು ಸೂಚನೆಗಳ ಮೇಲೆ ಗಮನ ಹರಿಸುವುದು ಬಹಳ ಮುಖ್ಯ ಎಂದು ತಜ್ಞರು ಹೇಳುತ್ತಾರೆ. ವೈದ್ಯರ ಪ್ರಕಾರ, ಹಸಿವಾದಾಗ ಮಕ್ಕಳು (Baby Hunger) ಸಾಮಾನ್ಯಕ್ಕಿಂತ ಹೆಚ್ಚು ಚಿಡಿಚಿಡಿಯಾಗಿ ವರ್ತಿಸುತ್ತಾರೆ ಅಥವಾ ಪದೇಪದೇ ಅಳಬಹುದು. ಕೆಲ…

Read More

ನೆದರ್ಲ್ಯಾಂಡ್ಸ್​​ನಿಂದ ಭಾರತಕ್ಕೆ ಹಿಂತಿರುಗಲಿವೆ ಚೋಳರ ಯುಗದ ತಾಮ್ರ ಶಾಸನಗಳು; ಏನಿದರ ವಿಶೇಷತೆ? – Kannada News | Netherlands to return 11th Century Chola era copper plates to India during PM Modi visit

ನವದೆಹಲಿ, ಮೇ 16: ಭಾರತದ ಪ್ರಧಾನಿ ನೆದರ್ಲ್ಯಾಂಡ್ಸ್ (PM Modi in Netherlands) ಪ್ರವಾಸದಲ್ಲಿದ್ದಾರೆ. ಕಳೆದ 14 ವರ್ಷಗಳ ರಾಜತಾಂತ್ರಿಕ ಪ್ರಯತ್ನಗಳ ಬಳಿಕ ಇದೀಗ ಪ್ರಧಾನಿ ನರೇಂದ್ರ ಮೋದಿಯವರು ನೆದರ್ಲ್ಯಾಂಡ್ಸ್​​ನಿಂದ 11ನೇ ಶತಮಾನದ ಇತಿಹಾಸವಿರುವ ಭಾರತದ ಅನೈಮಂಗಲಂ ಚೋಳ ತಾಮ್ರ ಶಾಸನಗಳನ್ನು ನಮ್ಮ ದೇಶಕ್ಕೆ ವಾಪಾಸ್ ತರಲಿದ್ದಾರೆ. ಆ ತಾಮ್ರದ ಶಾಸನಗಳನ್ನು ಭಾರತಕ್ಕೆ ಹಿಂತಿರುಗಿಸಲು ನೆದರ್ಲ್ಯಾಂಡ್ಸ್ ಒಪ್ಪಿಗೆ ನೀಡಿದೆ. ಲೈಡನ್ ಶಾಸನಗಳು ಎಂದೂ ಕರೆಯಲ್ಪಡುವ ಅನೈಮಂಗಲಂ ತಾಮ್ರ ಶಾಸನಗಳು ಚೋಳ ರಾಜವಂಶದ ಅತ್ಯಂತ ಮಹತ್ವದ ದಾಖಲೆಗಳಲ್ಲಿ ಒಂದಾಗಿದೆ….

Read More

Karnataka High Court Jobs: ಕರ್ನಾಟಕ ಹೈಕೋರ್ಟ್‌ನಲ್ಲಿ ಬೃಹತ್ ನೇಮಕಾತಿ: SSLC ಪಾಸಾದವರಿಗೆ ಸುವರ್ಣಾವಕಾಶ! – Kannada News | Karnataka High Court Jobs: Group D in Bangalore, Dharwad and Kalaburagi No Exam!

ಕರ್ನಾಟಕ ಹೈಕೋರ್ಟ್‌ನಲ್ಲಿ ಬೃಹತ್ ನೇಮಕಾತಿImage Credit source: gemini ai ಬೆಂಗಳೂರು: ಉದ್ಯೋಗಕ್ಕಾಗಿ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಹೈಕೋರ್ಟ್ ಭರ್ಜರಿ ಸಿಹಿ ಸುದ್ದಿ ನೀಡಿದೆ. ಬೆಂಗಳೂರು, ಧಾರವಾಡ ಮತ್ತು ಕಲಬುರಗಿಯಲ್ಲಿ ಖಾಲಿ ಇರುವ ವಿವಿಧ ಗ್ರೂಪ್-ಡಿ (Group D) ಹುದ್ದೆಗಳ ಭರ್ತಿಗಾಗಿ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಒಟ್ಟು 93 ರಿಂದ 100 ಹುದ್ದೆಗಳು ಖಾಲಿ ಇದ್ದು, ಇದೊಂದು ಸರ್ಕಾರಿ ಮತ್ತು ಕಾಯಂ (ಶಾಶ್ವತ) ಉದ್ಯೋಗವಾಗಿದೆ. ಯಾವೆಲ್ಲಾ ಹುದ್ದೆಗಳಿವೆ ಮತ್ತು ಅರ್ಹತೆ ಏನು? ಈ ನೇಮಕಾತಿಯಡಿ ಪಿಯೋನ್…

Read More

ಚಲನಚಿತ್ರ ರಂಗಕ್ಕೆ ಕಮಲ್ ಹಾಸನ್ ಕರೆ: ನೀಡಿದ ಸಲಹೆ ಏನು? – Kannada News | Kamal Haasan request movie industry people to cut down production cost

ಇತ್ತೀಚೆಗಷ್ಟೆ ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕತೆಗೆ ಸಂಬಂಧಿಸಿದಂತೆ ಕೆಲ ಮನವಿಗಳನ್ನು ಭಾರತೀಯ ಜನರಿಗೆ ಮಾಡಿದ್ದಾರೆ. ವರ್ಕ್​ ಫ್ರಂ ಹೋಮ್ ಮಾಡಿ, ಚಿನ್ನ ಖರೀದಿಸಬೇಡಿ, ವಿದೇಶ ಪ್ರಯಾಣ ಕಡಿಮೆ ಇನ್ನಿತರೆ ಸಲಹೆಗಳನ್ನು ನೀಡಿದ್ದಾರೆ. ಇದೀಗ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಕಮಲ್ ಹಾಸನ್ (Kamal Haasan) ಚಿತ್ರರಂಗದ ಆರ್ಥಿಕತೆಗೆ ಸಂಬಂಧಿಸಿದಂತೆ ಇದೇ ರೀತಿಯ ಸಲಹೆಗಳನ್ನು ನೀಡಿದ್ದು, ಸಿನಿಮಾ ನಿರ್ಮಾಪಕರು ಖರ್ಚು ಕಡಿಮೆ ಮಾಡುವಂತೆ ಮನವಿ ಮಾಡಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಗಗನಕ್ಕೇರುತ್ತಿರುವ ಚಲನಚಿತ್ರ ನಿರ್ಮಾಣ ವೆಚ್ಚಗಳು ಮತ್ತು ತಾರೆಯರ…

Read More

ಹಾವೇರಿಯಲ್ಲಿ ಸಿನಿಮೀಯ ಶೈಲಿಯಲ್ಲಿ ಕಳ್ಳತನ: ತಿಜೋರಿ ಸಮೇತ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ – Kannada News | Haveri Jewelry Heist: Lakhs Gold Stolen from Sharada Jewelers in Daring 45 Min Robbery

ಹಾವೇರಿ, ಮೇ 16: ಜಿಲ್ಲೆಯ ಹಾನಗಲ್ ತಾಲ್ಲೂಕಿನ ಚಿಕ್ಕಾಂಶಿ ಹೊಸೂರು ಗ್ರಾಮದಲ್ಲಿ ಜ್ಯುವೆಲರಿ ಅಂಗಡಿಯೊಂದರಲ್ಲಿ ಕಳ್ಳತನ ನಡೆದಿದೆ. ಸಿನಿಮೀಯ ರೀತಿಯಲ್ಲಿ ಕೇವಲ 45 ನಿಮಿಷಗಳಲ್ಲಿ ಖದೀಮರ ಗ್ಯಾಂಗ್ ಸುಮಾರು 70 ರಿಂದ 80 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದೆ. ಅಣ್ಣಪ್ಪ ಭಜಂತ್ರಿ ಎಂಬುವರಿಗೆ ಸೇರಿದ ಶಾರದಾ ಜ್ಯುವೆಲರಿ ಶಾಪ್​​ನಲ್ಲಿ ಈ ಕೃತ್ಯ ನಡೆದಿದೆ. ಮುಖಕ್ಕೆ ಮಾಸ್ಕ್ ಹಾಗೂ ಕೈಗೆ ಗ್ಲೌಸ್ ಧರಿಸಿ ಬಂದಿದ್ದ ಕಳ್ಳರು, ಅಂಗಡಿಯ ಬೀಗ ಮುರಿದು ಒಳನುಗ್ಗಿದ್ದಾರೆ. ಬಳಿಕ 7 ಕ್ವಿಂಟಲ್…

Read More

ನೆಲಮಂಗಲ ಬಳಿ ಭೀಕರ ಅಪಘಾತ: ಮಳೆಯ ನಡುವೆ ಕ್ಯಾಂಟರ್ ವಾಹನಕ್ಕೆ ಇವಿ ಬೈಕ್ ಡಿಕ್ಕಿ, ಸವಾರ ಸ್ಥಳದಲ್ಲೇ ಸಾವು! – Kannada News | Madavara Road Accident: EV Biker Killed in Nelamangala as Rain Causes Slippery Roads

ನೆಲಮಂಗಲ, ಮೇ.16: ಬೆಂಗಳೂರು ಹೊರವಲಯದ ನೆಲಮಂಗಲ ತಾಲ್ಲೂಕಿನ ಮಾದಾವರದಲ್ಲಿ ಇಂದು (ಮೇ.16) ಮಧ್ಯಾಹ್ನ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮಳೆಯ ಕಾರಣದಿಂದಾಗಿ ಚಲಿಸುತ್ತಿದ್ದ ಕ್ಯಾಂಟರ್ ವಾಹನಕ್ಕೆ ಎಲೆಕ್ಟ್ರಿಕ್ (EV) ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ದುರ್ದೈವಿಯನ್ನು ಲೋಕೇಶ್ (45) ಎಂದು ಗುರುತಿಸಲಾಗಿದೆ. ಇವರು ಮಧ್ಯಾಹ್ನ ಸುಮಾರು 2:30 ರ ವೇಳೆಗೆ ತಮ್ಮ ಇವಿ ಬೈಕ್‌ನಲ್ಲಿ ಬೆಂಗಳೂರಿನ ಕಡೆಗೆ ತೆರಳುತ್ತಿದ್ದರು. ಹೆದ್ದಾರಿಯಲ್ಲಿ ಮಳೆ ಬರುತ್ತಿದ್ದ ಕಾರಣ ಮುಂದೆ ಸಾಗುತ್ತಿದ್ದ ಕ್ಯಾಂಟರ್…

Read More