ನೀಟ್ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್: ರಾಜ್ಯಕ್ಕೆ 1122 ಸರ್ಕಾರಿ ಮೆಡಿಕಲ್‌ ಸೀಟ್‌ ಲಭ್ಯ; ಡಾ ಶರಣಪ್ರಕಾಶ ಪಾಟೀಲ್ – Kannada News | Good News for NEET Aspirants: Karnataka Gets 1,122 Additional Government Medical Seats, Says Dr. Sharan Prakash Patil

ಬೆಂಗಳೂರು, ಮೇ 16: ನೀಟ್ ಪರೀಕ್ಷೆ (NEET Exam) ಅಕ್ರಮ ದೇಶಾದ್ಯಂತ ಸದ್ದು ಮಾಡುತ್ತಿದೆ. ಬಗೆದಷ್ಟು ನೀಟ್​ ಮಾಫಿಯಾ ಬಯಲಾಗುತ್ತಿದೆ. ಒಂದೆಡೆ ಪರೀಕ್ಷಾ ಅಕ್ರಮಕ್ಕೆ ವಿದ್ಯಾರ್ಥಿಗಳು ಬೇಸತ್ತು ಹೋಗಿದ್ದಾರೆ. ಆದರೆ ಈ ಮಧ್ಯೆ ರಾಜ್ಯದ (Karnataka) ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ ಒಂದು ಒದಗಿಬಂದಿದೆ. ಅದೇನೆಂದರೆ ರಾಜ್ಯಕ್ಕೆ ಹೆಚ್ಚುವರಿ 1122 ಸರ್ಕಾರಿ ಮೆಡಿಕಲ್‌ ಸೀಟ್​ಗಳು ಮಂಜೂರಾಗಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ಘೋಷಿಸಿದ್ದಾರೆ. ಆ ಮೂಲಕ ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್​ ನೀಡಿದ್ದಾರೆ.

ಮುಖ್ಯಾಂಶಗಳು

  • ಮೆಡಿಕಲ್ ಸೀಟ್ ಲಭ್ಯತೆಯಲ್ಲಿ ಕರ್ನಾಟಕದ ಹೊಸ ದಾಖಲೆ
  • ರಾಜ್ಯಕ್ಕೆ ದಾಖಲೆಯ 1,122 ಹೆಚ್ಚುವರಿ ಮೆಡಿಕಲ್ ಸೀಟುಗಳ ಮಂಜೂರಾತಿ
  • ಮೆಡಿಕಲ್ ಸೀಟ್ ಲಭ್ಯತೆಯಲ್ಲಿ ಕರ್ನಾಟಕದ ಹೊಸ ದಾಖಲೆ

ಶನಿವಾರ ವಿಕಾಸಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್​​, ರಾಜ್ಯದಲ್ಲಿ ಮೆಡಿಕಲ್‌ ಸೀಟು ಲಭ್ಯತೆ ಹೆಚ್ಚಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸುವವರಿಗೆ ಸುವರ್ಣ ಅವಕಾಶ ಲಭಿಸಲಿದೆ. ರಾಜ್ಯಕ್ಕೆ ಹೆಚ್ಚುವರಿ 1122 ಸೀಟುಗಳು ದೊರೆಯಲಿವೆ ಎಂದರು. ನಮ್ಮ ರಾಜ್ಯದ ವೈದ್ಯಕೀಯ ಕ್ಷೇತ್ರದ ದೇಶದಲ್ಲೇ ಮುಂಚೂಣಿಯಲ್ಲಿದೆ. ಒಂದು ರಾಜ್ಯಕ್ಕೆ ಒಂದೇ ಬಾರಿ ಸಾವಿರಕ್ಕೂ ಹೆಚ್ಚು ಮೆಡಿಕಲ್ ಸೀಟು ಸಿಕ್ಕಿರುವುದು ದಾಖಲೆಯಾಗಿದೆ. ಇದು ಕರ್ನಾಟಕದ ಸಾಧನೆಗೆ ಪೂರಕ ಸಾಕ್ಷಿ ಎಂದು ಅವರು ಹೇಳಿದರು.

ಎಲ್ಲೆಲ್ಲಿ ಹೆಚ್ಚುವರಿ ಸೀಟು?

ಹೊಸದಾಗಿ ಮಂಜೂರಾದ ಸೀಟುಗಳು ಕೊಪ್ಪಳ, ಗದಗ, ಚಾಮರಾಜನಗರ, ಕಾರವಾರ, ಕಾವೇರಿ ಸೇರಿದಂತೆ ಹಲವು ಜಿಲ್ಲೆಗಳ ವೈದ್ಯಕೀಯ ಕಾಲೇಜುಗಳಿಗೆ ಹಂಚಿಕೆಯಾಗಲಿವೆ.

1090 ಕೋಟಿ ರೂ ಅನುದಾನ

ಕೇಂದ್ರ ಸರ್ಕಾರ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯು ಮೇ 15ರಂದು ಇದಕ್ಕೆ ಅಂತಿಮ ಮುದ್ರೆ ಹಾಕಿದೆ. ಪದವಿಪೂರ್ವ ವೈದ್ಯಕೀಯ ಸೀಟುಗಳಿಗೆ 495 ಕೋಟಿ ರೂ. ಹಾಗೂ ಸ್ನಾತಕೋತ್ತರ ಸೀಟುಗಳಿಗೆ 541 ಕೋಟಿ ರೂ. ಸೇರಿ ಒಟ್ಟು 1090 ಕೋಟಿ ರೂ. ಅನುದಾನ ರಾಜ್ಯಕ್ಕೆ ದೊರೆಯಲಿದೆ ಎಂದು ಸಚಿವರು ಮಾಹಿತಿ ನೀಡಿದರು.

ಇದನ್ನೂ ಓದಿ: ‘ಎರಡು ವರ್ಷದ ಶ್ರಮ ವ್ಯರ್ಥವಾಯಿತು’: ನೀಟ್ ಪರೀಕ್ಷೆ ರದ್ದತಿಗೆ ವಿದ್ಯಾರ್ಥಿನಿ ಬೇಸರ

ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುವವರಿಗೆ ಕರ್ನಾಟಕದಲ್ಲಿ ಈಗ ವಿಫುಲ ಅವಕಾಶಗಳು ಸೃಷ್ಟಿಯಾಗಿವೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಡಾ. ಶರಣಪ್ರಕಾಶ ಪಾಟೀಲ್ ಕರೆ ನೀಡಿದರು.

ರಾಜ್ಯದ ಮೆಡಿಕಲ್ ಸೀಟುಗಳ ವಿವರ

  • ಒಟ್ಟು ವೈದ್ಯಕೀಯ ಕಾಲೇಜು- 72 (ಖಾಸಗಿ, ಡೀಮ್ಡ್ ಸೇರಿ)
  • ಈಗ ಲಭ್ಯವಿರುವ UG ಸೀಟು- 13,945
  • ಈಗ ಲಭ್ಯವಿರುವ PG ಸೀಟು- 7,727
  • ಹೊಸದಾಗಿ ಸೇರ್ಪಡೆಯಾದ ಸೀಟು- 1,122

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 5:53 pm, Sat, 16 May 26

Source link

ಝಲ್ಮುರಿ ಇಲ್ಲಿಗೂ ತಲುಪಿತೇ? ಪ್ರಧಾನಿ ಮೋದಿ ಪ್ರಶ್ನೆಗೆ ನೆದರ್ಲ್ಯಾಂಡ್​​​ನ ಭಾರತೀಯ ವಲಸಿಗರ ಕರತಾಡನ – Kannada News | Has Jhalmuri Reached Here Too? PM Modis question to Indian diaspora In Netherlands

ಹೇಗ್, ಮೇ 16: ಪ್ರಧಾನಿ ನರೇಂದ್ರ ಮೋದಿ ನೆದರ್ಲ್ಯಾಂಡ್ಸ್​​ ಪ್ರವಾಸದಲ್ಲಿದ್ದಾರೆ. ಈ ವೇಳೆ ಅವರು ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸಿದ್ದಾರೆ. ಈ ವೇಳೆ ಪಂಚ ರಾಜ್ಯಗಳ ಚುನಾವಣೆಯ ಬಗ್ಗೆಯೂ ಪ್ರಸ್ತಾಪಿಸಿದ ಮೋದಿ (PM Modi) ನಗುತ್ತಾ ಝಲ್ಮುರಿ ಇಲ್ಲಿಗೂ ತಲುಪಿದೆಯೇ? ಎಂದು ಕೇಳಿದರು. ಝಲ್ಮುರಿ ಹೆಸರು ಕೇಳುತ್ತಿದ್ದಂತೆ ನೆರೆದಿದ್ದ ಭಾರತೀಯರು ಚಪ್ಪಾಳೆ ತಟ್ಟುತ್ತಾ ಸ್ಪಂದಿಸಿದರು. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಶೇ. 80ರಿಂದ 90ರಷ್ಟಿತ್ತು. ಈ ಬಾರಿ ಮಹಿಳೆಯರು ಹೆಚ್ಚು ಮತದಾನ ಮಾಡಿದ್ದಾರೆ ಎಂದು ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ಜನಪ್ರಿಯ ಬಂಗಾಳಿ ತಿಂಡಿಯಾದ ಝಲ್ಮುರಿಯನ್ನು ಪ್ರಧಾನಿ ಮೋದಿ ತಿನ್ನುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದು ಟಿಎಂಸಿಯಿಂದ ತೀವ್ರ ಟೀಕೆಯನ್ನು ಎದುರಿಸಿತ್ತು. ಇದಕ್ಕೆ ಪ್ರತಿಯಾಗಿ ಬಂಗಾಳದಲ್ಲಿ ಬಿಜೆಪಿ ಗೆದ್ದ ಬಳಿಕ ಬಿಜೆಪಿ ಕಾರ್ಯಕರ್ತರು ಝಲ್ಮುರಿ ಹಂಚಿ ಸಂಭ್ರಮಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಅನ್ನೇ ರಸ್ತೆಯಲ್ಲಿ ನಿಲ್ಲಿಸಿದ್ದ ರಜನೀಕಾಂತ್: ಯಾವ ಸಿನಿಮಾ ಸೀನ್​​ಗೂ ಕಮ್ಮಿ ಇಲ್ಲ – Kannada News | Rajinikanth once made CM Jayalalitha wait on road

ರಜನೀಕಾಂತ್ (Rajinikanth) ಭಾರತದ ಟಾಪ್ ಸೂಪರ್ ಸ್ಟಾರ್. ಸಿನಿಮಾಗಳಲ್ಲಿ ಸಖತ್ ಮಾಸ್ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾರೆ. ಈಗ ರಜನೀಕಾಂತ್ ರಾಜಕೀಯದಿಂದ ದೂರ ಉಳಿದಿದ್ದಾರೆ. 90ರ ದಶಕದಲ್ಲಿ ರಜನೀಕಾಂತ್ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಅದರಲ್ಲೂ ಜಯಲಲಿತಾ ವಿರುದ್ಧ ಸತತ ಪ್ರಚಾರಗಳನ್ನು ಮಾಡುತ್ತಿದ್ದರು. ಅದಕ್ಕೆ ಕಾರಣವೂ ಇತ್ತು. ಒಮ್ಮೆಯಂತೂ ಸಿಎಂ ಜಯಲಲಿತಾ ದಾರಿಯಲ್ಲಿ ನಿಲ್ಲುವಂತೆ ಮಾಡಿದ್ದರು.

1991 ರಲ್ಲಿ ಜಯಲಲಿತಾ ಮೊದಲ ಬಾರಿಗೆ ಸಿಎಂ ಆಗಿದ್ದರು. ಅವರು ಬರುವ ದಾರಿಯಲ್ಲಿ ಪೊಲೀಸರು ಬ್ಯಾರಿಕೇಡ್​​ಗಳನ್ನು ಹಾಕಿ ಇತರೆ ಗಾಡಿಗಳನ್ನೆಲ್ಲ ರಸ್ತೆಯಲ್ಲಿ ಅಡ್ಡಗಟ್ಟಿದ್ದರು, ಅದರಲ್ಲಿ ರಜನೀಕಾಂತ್ ಅವರ ಕಾರು ಸಹ ಇತ್ತು. ನಟ ರಜನೀಕಾಂತ್ ಪೊಲೀಸರನ್ನು ತಮ್ಮ ಕಾರು ಬಿಡುವಂತೆ ಕೇಳಿದರು ಆದರೆ ಪೊಲೀಸ್, ರಜನೀಕಾಂತ್​​ರ ಕಾರನ್ನು ಬಿಡಲಿಲ್ಲ ಬದಲಿಗೆ ಅರ್ಧ ಇಲ್ಲೇ ಕಾಯಬೇಕು ಎಂದರಂತೆ.

ಇದು ರಜನೀಕಾಂತ್​​ಗೆ ತೀವ್ರ ಸಿಟ್ಟು ತರಿಸಿತ್ತು. ಕೂಡಲೇ ರಜನೀಕಾಂತ್ ಕಾರಿನಿಂದ ಇಳಿದು ಪಕ್ಕದಲ್ಲೇ ಇದ್ದ ಸಣ್ಣ ಗೂಡಂಗಡಿ ಬಳಿ ತೆರಳಿ ಒಂದು 555 ಸಿಗರೇಟು ಖರೀದಿಸಿ ಸೇದುತ್ತಾ ನಿಂತರಂತೆ. ರಜನೀಕಾಂತ್ ಅವರನ್ನು ರಸ್ತೆಯಲ್ಲಿ ನೋಡಿದ ಜನ ಕೂಡಲೇ ಅವರ ಸುತ್ತ ನೆರೆದರು. ನೋಡ ನೋಡುತ್ತಲೇ ನೂರಾರು ಜನ ಆಗಿ ಬಿಟ್ಟರು. ಅದೇ ಸಮಯದಲ್ಲಿ ಜಯಲಲಿತಾ ಕಾರು ಸಹ ಬರುತ್ತಿತ್ತು. ಜನ ಸಹ ಬಹಳ ಹೆಚ್ಚಿದ್ದರು, ಹಾಗಾಗಿ ಪೊಲೀಸರು ಜಯಲಲಿತಾ ಕಾರನ್ನು ತಡೆದು, ಮೊದಲು ರಜಿನೀಕಾಂತ್ ಅವರನ್ನು ಅಲ್ಲಿಂದ ಕಳಿಸಿದರಂತೆ.

ಇದನ್ನೂ ಓದಿ:ರಜನೀಕಾಂತ್ ಜೊತೆ ನಟಿಸಿದ ಅನುಭವ ಹಂಚಿಕೊಂಡ ನಟಿ ಮೇಘನಾ ರಾಜ್

ಆದರೆ ಈ ಘಟನೆ ರಜನೀಕಾಂತ್ ಮತ್ತು ಜಯಲಲಿತಾ ಮಧ್ಯೆ ತೀವ್ರ ದ್ವೇಷ ಮೂಡಿಸಿತ್ತು. 1996ರ ಚುನಾವಣೆ ಸಂದರ್ಭ ನಟ ರಜನೀಕಾಂತ್, ಜಯಲಲಿತಾ ವಿರುದ್ಧ ತೀವ್ರ ಪ್ರಚಾರ ಮಾಡಿದರು. ಆ ಚುನಾವಣೆಯಲ್ಲಿ ಜಯಲಲಿತಾ ಪಕ್ಷ ಗೆದ್ದಿದ್ದು ಕೇವಲ ನಾಲ್ಕು ಸೀಟು. 1991 ರ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳು ಸೇರಿ 235 ಸೀಟು ಗೆದ್ದಿದ್ದ ಪಕ್ಷ ಕೇವಲ ನಾಲ್ಕು ಸೀಟುಗಳಿಗೆ ಸೀಮಿತವಾಗಲು ರಜನೀಕಾಂತ್ ಕೊಟ್ಟ ಏಟು ಪ್ರಮುಖ ಕಾರಣವಾಗಿತ್ತು.

ರಜನೀಕಾಂತ್ ಅವರಿಗೂ ಖುದ್ದು ರಾಜಕೀಯ ಮಹಾತ್ವಾಕಾಂಕ್ಷೆ ಇತ್ತು. ಖುದ್ದು ರಜನೀಕಾಂತ್ ಅವರು ರಾಜಕೀಯ ಪಕ್ಷ ಸ್ಥಾಪಿಸಿದ್ದರು. ಆದರೆ ಆರೋಗ್ಯ ಸಮಸ್ಯೆಯ ಕಾರಣದಿಂದ ರಾಜಕೀಯಕ್ಕೆ ಬರುವ ನಿರ್ಧಾರದಿಂದ ಅವರು ಹಿಂದೆ ಸರಿದರು. ರಾಜಕೀಯ ಪಕ್ಷವನ್ನು ಸಾಮಾಜಿಕ ಸೇವಾ ಸಂಸ್ಥೆಯಾಗಿ ಬದಲಾಯಿಸಿಬಿಟ್ಟರು. ಒಂದೊಮ್ಮೆ ಅವರು ಈ ಬಾರಿ ಚುನಾವಣೆಯಲ್ಲಿ ನಿಂತಿದ್ದರೆ ವಿಜಯ್ ಅವರಿಗೆ ಅವಕಾಶವೇ ಇರಲಿಲ್ಲವೇನೋ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವೃತ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಬಯಸಿದರೆ ಈ ಅಭ್ಯಾಸಗಳನ್ನು ಇಂದೇ ಬಿಟ್ಟುಬಿಡಿ – Kannada News | These habits can ruin your image in the workplace and hinder your progress

ನಮ್ಮ ಕೌಶಲ್ಯ, ಪದವಿ ನಮಗೆ ಉದ್ಯೋಗವನ್ನು ತಂದುಕೊಡುತ್ತದೆ, ಅದೇ ನಮ್ಮ ನಡವಳಿಕೆಗಳು ಮತ್ತು ಅಭ್ಯಾಸಗಳು ನಮ್ಮ ವೃತ್ತಿ ಜೀವನದ (career) ಯಶಸ್ಸನ್ನು ನಿರ್ಧರಿಸುತ್ತದೆ. ಕೆಲವೊಮ್ಮೆ ನಾವು ತಿಳಿದೋ ತಿಳಿಯದೆಯೋ ಮಾಡುವ ಸಣ್ಣ ತಪ್ಪಿನಿಂದ  ನಮ್ಮ ಇಮೇಜ್‌ ಹಾಳಾಗುವ ಸಾಧ್ಯತೆ ಇರುತ್ತದೆ ಇದರಿಂದ ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಸಾಧಿಸಲು ಸಹ ಕಷ್ಟ ಸಾಧ್ಯವಾಗಬಹುದು, ಕಠಿಣ ಪರಿಶ್ರಮವೆಲ್ಲಾ ಹಾಳಾಗಬಹುದು. ಹಾಗಿದ್ದರೆ ನಮ್ಮ ಯಾವ ಅಭ್ಯಾಸಗಳು ವೃತ್ತಿ ಜೀವನದ ಯಶಸ್ಸಿಗೆ ಮುಳುವಾಗುತ್ತದೆ, ವೃತ್ತಿ ಜೀವನದ ಯಶಸ್ಸಿಗಾಗಿ ಯಾವ ಅಭ್ಯಾಸಗಳನ್ನು ಬದಲಾಯಿಸಬೇಕು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.

ವೃತ್ತಿ ಜೀವನದ ಯಶಸ್ಸಿಗೆ ಮುಳುವಾಗುವ ಅಭ್ಯಾಸಗಳಿವು:

ಸಮಯಪಾಲನೆ ಮಾಡದಿರುವುದು: ಯಾವಾಗಲೂ ಕಚೇರಿಗೆ ತಡವಾಗಿ ಬರುವುದು, ಮೀಟಿಂಗ್‌ಗಳಿಗೆ ತಡವಾಗಿ ಹಾಜರಾಗುವುದು ಸಣ್ಣದೆಂದು ತೋರುವ ಈ ಅಭ್ಯಾಸಗಳು ನಿಮ್ಮ ಬೇಜವಾಬ್ದಾರಿತನವನ್ನು ತೋರಿಸುತ್ತದೆ. ನೀವು ಸಮಯವನ್ನು ಗೌರವಿಸುವುದಿಲ್ಲ ಮತ್ತು ನಿಮ್ಮ ಕೆಲಸದ ಬಗ್ಗೆ ನೀವು ಗಂಭೀರವಾಗಿಲ್ಲ ಎಂಬುದನ್ನು ತೋರಿಸುತ್ತದೆ. ಹೀಗಿದ್ದರೆ ಖಂಡಿತವಾಗಿ ಕೆಲಸದ ಸ್ಥಳದಲ್ಲಿ ನಿಮಗೆ ಗೌರವ ಸಿಗುವುದಿಲ್ಲ ಜೊತೆಗೆ ವೃತ್ತಿ ಜೀವನದಲ್ಲಿ ಯಶಸ್ಸು ಲಭಿಸುವುದಿಲ್ಲ. ಯಶಸ್ಸನ್ನು ಗಳಿಸಬೇಕಾದರೆ ಪ್ರತಿಯೊಂದು ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸಿ, ಸಮಯವನ್ನು ಗೌರವಿಸಿ.

ಕಚೇರಿ ಗಾಸಿಪ್‌ನಲ್ಲಿ ತೊಡಗುವುದು: ಆಫೀಸ್‌ಗಳಲ್ಲಿ ಸಹದ್ಯೋಗಿಗಳ ನಡುವೆ ಗಾಸಿಪ್‌ಗಳು ನಡೆಯುವುದು ಸಾಮಾನ್ಯ. ಆದರೆ ಹೀಗೆ ಗಾಸಿಪ್‌ ಮಾಡುವುದು, ಇತರರ ಹಿಂದೆ ಮಾತನಾಡುವುದು, ರಾಜಕೀಯ ಮಾಡುವುದು ಇವೆಲ್ಲವು ವೃತ್ತಿಪರ ಲಕ್ಷಣವಲ್ಲ. ಈ ರೀತಿ ಅನಗತ್ಯ ವಿಚಾರದಲ್ಲಿ ತೊಡಗಿಕೊಂಡರೆ ನಿಮ್ಮ ಕೆಲಸ ಸಾಗುವುದಿಲ್ಲ, ಇದು ಯಶಸ್ಸಿಗೆ ಅಡ್ಡಿ ಉಂಟುಮಾಡುತ್ತದೆ. ವೃತ್ತಿಪರರು ಯಾವಾಗಲೂ ಜನರ ಬಗ್ಗೆ ಅಲ್ಲ, ಕೆಲಸದ ಬಗ್ಗೆ ಮಾತ್ರ ಮಾತನಾಡುತ್ತಾರೆ. ಅದೇ ರೀತಿ ನೀವು ಕೂಡ ಕೆಲಸದ ಬಗ್ಗೆ ಮಾತ್ರ ಹೆಚ್ಚು ಗಮನ ಹರಿಸಬೇಕು.

ಎಲ್ಲದಕ್ಕೂ ನೆಪ ಹೇಳುವ ಅಭ್ಯಾಸ: ತಪ್ಪುಗಳು ಸಾಮಾನ್ಯ, ಆದರೆ ಕೆಲಸದಲ್ಲಿ ನಡೆಯುವ ನಿಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವ ಬದಲು ಸಂದರ್ಭಗಳನ್ನು ಅಥವಾ ಇತರರನ್ನು ದೂಷಿಸುವುದು ಕೆಟ್ಟ ಅಭ್ಯಾಸ, ಈ ಅಭ್ಯಾಸ ನಿಮ್ಮನ್ನು ಯಶಸ್ಸಿನತ್ತ ಸಾಗುವುದನ್ನು ತಡೆಯುತ್ತದೆ. ಜವಾಬ್ದಾರಿಯನ್ನು ತೆಗೆದುಕೊಂಡು, ಮಾಡಿದ ತಪ್ಪುಗಳನ್ನು ತಿದ್ದಿ ನಡೆಯುವವನು ಮಾತ್ರ ಯಶಸ್ಸಿನ ಹಾದಿಯನ್ನು ತಲುಪಲು ಸಾಧ್ಯ.

ಹೊಸ ವಿಷಯಗಳನ್ನು ಕಲಿಯಲು ಆಸಕ್ತಿ ತೋರದಿರುವುದು: ನೀವು ಹೊಸ ಕೌಶಲ್ಯಗಳನ್ನು,  ಕೆಲಸಕ್ಕೆ ಸಂಬಂಧಿಸಿದ ಹೊಸ ಹೊಸ ವಿಷಯಗಳನ್ನು ಕಲಿಯಲು ಆಸಕ್ತಿಯನ್ನು ತೋರದಿದ್ದರೆ, ಕೆಲಸದ ಸ್ಥಳದಲ್ಲಿ ನಿಮ್ಮ ಉಪಯುಕ್ತತೆ ಕ್ರಮೇಣ ಕಡಿಮೆಯಾಗಬಹುದು. ಅದೇ ನಿಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಂಡಷ್ಟು ನಿಮಗೆ ಬೇಡಿಕೆ ಹೆಚ್ಚಾಗುತ್ತದೆ, ನೀವು ಸುಲಭವಾಗಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ತಂದೆಯ ಅಭ್ಯಾಸಗಳು ಮಕ್ಕಳನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ

ಆತ್ಮವಿಶ್ವಾಸದ ಕೊರತೆ: ನನ್ನಿಂದ ಇದು ಸಾಧ್ಯವಿಲ್ಲ ಎಂಬ ಭಯ, ಹಿಂಜರಿಕೆ ಆತ್ಮವಿಶ್ವಾಸದ ಕೊರತೆಯು ನಿಮ್ಮನ್ನು ಯಶಸ್ಸಿನತ್ತ ಸಾಗದಂತೆ ತಡೆಯುತ್ತದೆ. ನೀವು ವೃತ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಬಯಸಿದರೆ, ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ, ಅಪಾಯಗಳನ್ನು ತೆಗೆದುಕೊಳ್ಳಲು ಹೆದರಬೇಡಿ.

ಹೀಗೆ ವೃತ್ತಿ ಜೀವನದ ಯಶಸ್ಸಿಗೆ ಕಠಿಣ ಪರಿಶ್ರಮವೊಂದೇ ಅಲ್ಲ ಸರಿಯಾದ ಮನಸ್ಥಿತಿ, ನಡವಳಿಕೆ ಮತ್ತು ಅಭ್ಯಾಸಗಳು ಸಹ ಅಗತ್ಯವಾಗಿರುತ್ತದೆ. ಮೇಲೆ ಹೇಳಿರುವ ಈ ಅಭ್ಯಾಸಗಳನ್ನು ಬಿಟ್ಟು ಬಿಡುವುದರಿಂದ ನಿಮ್ಮ ಕಾರ್ಯಕ್ಷಮತೆ ಸುಧಾರಿಸುವುದಲ್ಲದೆ, ನಿಮ್ಮ ವೃತ್ತಿ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಾಣುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

AFCAT 2 Recruitment 2026: ಭಾರತೀಯ ವಾಯುಪಡೆಯಲ್ಲಿ ಭರ್ಜರಿ ನೇಮಕಾತಿ; 300ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ! – Kannada News | AFCAT 2 Recruitment 2026: Apply for 300+ IAF Officer Posts – Last Date June 19!

ಭಾರತೀಯ ವಾಯುಪಡೆಯಲ್ಲಿ ಆಫೀಸರ್ ಹುದ್ದೆImage Credit source: Getty Images

ಭಾರತೀಯ ವಾಯುಪಡೆಯಲ್ಲಿ ಆಫೀಸರ್ ಆಗಿ ದೇಶ ಸೇವೆ ಮಾಡಬಯಸುವ ಯುವಜನತೆಗೆ ಇಲ್ಲಿದೆ ಸುವರ್ಣಾವಕಾಶ. ಭಾರತೀಯ ವಾಯುಪಡೆಯು (IAF) ಏರ್‌ಫೋರ್ಸ್ ಕಾಮನ್ ಅಡ್ಮಿಷನ್ ಟೆಸ್ಟ್ (AFCAT 2) ಪರೀಕ್ಷೆಗಾಗಿ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿ ಅಭಿಯಾನದ ಮೂಲಕ ವಾಯುಪಡೆಯ ಫ್ಲೈಯಿಂಗ್ (ಹಾರಾಟ) ಮತ್ತು ಗ್ರೌಂಡ್ ಡ್ಯೂಟಿ (ನೆಲದ ಕರ್ತವ್ಯ) ಶಾಖೆಗಳಲ್ಲಿ ಒಟ್ಟು 300ಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಇದರಲ್ಲಿ 142 ಅಧಿಕಾರಿ ಹುದ್ದೆಗಳು ಸೇರಿವೆ.

ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಸಲ್ಲಿಸುವ ಲಿಂಕ್:

AFCAT 2 ಪರೀಕ್ಷೆಗಾಗಿ ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಮೇ 20 ರಿಂದ ಅಧಿಕೃತವಾಗಿ ಪ್ರಾರಂಭವಾಗಲಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ವಾಯುಪಡೆಯ ಅಧಿಕೃತ ವೆಬ್‌ಸೈಟ್ afcat.cdac.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಜೂನ್ 19 ಕೊನೆಯ ದಿನಾಂಕವಾಗಿದೆ.

ಶೈಕ್ಷಣಿಕ ಅರ್ಹತೆ ಏನಿರಬೇಕು?

Ground Duty ಮತ್ತು ತಾಂತ್ರಿಕ ಶಾಖೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಶೇ.60 ಅಂಕಗಳೊಂದಿಗೆ ಏರೋನಾಟಿಕಲ್ ಎಂಜಿನಿಯರಿಂಗ್ (ಎಲೆಕ್ಟ್ರಾನಿಕ್ಸ್) ಪದವಿ ಪಡೆದಿರಬೇಕು. ಅಥವಾ 12ನೇ ತರಗತಿಯಲ್ಲಿ ಗಣಿತ ಮತ್ತು ಭೌತಶಾಸ್ತ್ರ ವಿಷಯಗಳಲ್ಲಿ ಕನಿಷ್ಠ ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಮತ್ತು ಅದರೊಂದಿಗೆ ಕನಿಷ್ಠ ಶೇ.60 ಅಂಕಗಳೊಂದಿಗೆ 3 ವರ್ಷಗಳ ಯಾವುದೇ ಪದವಿ ಅಥವಾ ಬಿಇ/ಬಿ.ಟೆಕ್ (BE/B.Tech) ಪದವಿ ಮುಗಿಸಿರಬೇಕು.

ವಯೋಮಿತಿ ಮತ್ತು ಸಡಿಲಿಕೆ ವಿವರ:

ಹುದ್ದೆಗಳಿಗೆ ಅನುಗುಣವಾಗಿ ವಯೋಮಿತಿಯನ್ನು ನಿಗದಿಪಡಿಸಲಾಗಿದ್ದು, ಜುಲೈ 1, 2027 ಕ್ಕೆ ಅನ್ವಯವಾಗುವಂತೆ ವಯಸ್ಸನ್ನು ಲೆಕ್ಕಹಾಕಲಾಗುತ್ತದೆ.

  • ಫ್ಲೈಯಿಂಗ್ ಬ್ರಾಂಚ್ (Flying Branch): ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ಮತ್ತು ಗರಿಷ್ಠ 24 ವರ್ಷ ವಯಸ್ಸಾಗಿರಬೇಕು. (DGCA ನೀಡಿದ ಮಾನ್ಯ ವಾಣಿಜ್ಯ ಪೈಲಟ್ ಪರವಾನಗಿ-CPL ಹೊಂದಿರುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 26 ವರ್ಷಗಳವರೆಗೆ ಸಡಿಲಿಕೆ ಇರುತ್ತದೆ).
  • ಗ್ರೌಂಡ್ ಡ್ಯೂಟಿ ಮತ್ತು ತಾಂತ್ರಿಕೇತರ ಶಾಖೆ: ಅಭ್ಯರ್ಥಿಗಳು ಕನಿಷ್ಠ 20 ವರ್ಷ ಮತ್ತು ಗರಿಷ್ಠ 26 ವರ್ಷ ವಯಸ್ಸಿನೊಳಗಿರಬೇಕು.

ಅರ್ಜಿ ಶುಲ್ಕದ ಮಾಹಿತಿ:

ಸಾಮಾನ್ಯ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು 550ರೂ. ನಿಗದಿಪಡಿಸಲಾಗಿದೆ. ಆದರೆ, ಎನ್‌ಸಿಸಿ (NCC) ಸ್ಪೆಷಲ್ ಎಂಟ್ರಿ ಮತ್ತು ಗೇಟ್ (GATE) ಮೂಲಕ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ, ಅವರಿಗೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ.

ಇದನ್ನೂ ಓದಿ: ರೈಲ್ವೆಯಲ್ಲಿ 11,127 ಹುದ್ದೆಗಳಿಗೆ ನೇಮಕಾತಿ; ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ

ಪರೀಕ್ಷಾ ಮಾದರಿ ಹೇಗಿರಲಿದೆ?

AFCAT 2 ಪರೀಕ್ಷೆಯು ಒಟ್ಟು 300 ಅಂಕಗಳನ್ನು ಒಳಗೊಂಡಿರುತ್ತದೆ ಮತ್ತು ಪರೀಕ್ಷೆ ಬರೆಯಲು ಎರಡು ಗಂಟೆಗಳ ಕಾಲಾವಕಾಶ ನೀಡಲಾಗುತ್ತದೆ. ಈ ಪರೀಕ್ಷೆಯಲ್ಲಿ ನೆಗೆಟಿವ್ ಮಾರ್ಕಿಂಗ್ (Negative Marking) ವ್ಯವಸ್ಥೆ ಇರಲಿದ್ದು, ಪ್ರತಿ ತಪ್ಪು ಉತ್ತರಕ್ಕೆ ಒಂದು ಅಂಕವನ್ನು ಕಡಿತಗೊಳಿಸಲಾಗುತ್ತದೆ. ಪರೀಕ್ಷೆಯಲ್ಲಿ ಮುಖ್ಯವಾಗಿ ಸಾಮಾನ್ಯ ಜ್ಞಾನ (GK), ಇಂಗ್ಲಿಷ್ ವರ್ಬಲ್ ಎಬಿಲಿಟಿ, ನ್ಯೂಮರಿಕಲ್ ಎಬಿಲಿಟಿ (ಗಣಿತ), ರೀಸನಿಂಗ್ ಮತ್ತು ಮಿಲಿಟರಿ ಆಪ್ಟಿಟ್ಯೂಡ್‌ಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಆಯ್ಕೆಯಾದ ನಂತರ ತರಬೇತಿ ಎಲ್ಲಿ?

ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅಂತಿಮವಾಗಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಜುಲೈ 2027 ರ ಮೊದಲ ವಾರದಿಂದ ಹೈದರಾಬಾದ್‌ನ ದುಂಡಿಗಲ್‌ನಲ್ಲಿರುವ ಏರ್‌ಫೋರ್ಸ್ ಅಕಾಡೆಮಿಯಲ್ಲಿ ತರಬೇತಿ ಆರಂಭವಾಗಲಿದೆ. ಫ್ಲೈಯಿಂಗ್ ಬ್ರಾಂಚ್ ಮತ್ತು ಗ್ರೌಂಡ್ ಡ್ಯೂಟಿ (ತಾಂತ್ರಿಕ) ಶಾಖೆಯ ಅಭ್ಯರ್ಥಿಗಳಿಗೆ 62 ವಾರಗಳ ಕಾಲ ಹಾಗೂ ಗ್ರೌಂಡ್ ಡ್ಯೂಟಿ (ತಾಂತ್ರಿಕೇತರ) ಶಾಖೆಯ ಅಭ್ಯರ್ಥಿಗಳಿಗೆ 50 ವಾರಗಳ ಕಾಲ ತರಬೇತಿ ನೀಡಲಾಗುತ್ತದೆ. ಮುಖ್ಯವಾಗಿ, ಆಯ್ಕೆಯಾದ ಅಭ್ಯರ್ಥಿಗಳು ತರಬೇತಿಗೆ ಸೇರುವ ಸಮಯದಲ್ಲಿ ಪ್ಯಾನ್ ಕಾರ್ಡ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಅಥವಾ ಯಾವುದೇ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಸಕ್ರಿಯ ಬ್ಯಾಂಕ್ ಖಾತೆಯನ್ನು ಹೊಂದಿರುವುದು ಕಡ್ಡಾಯವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಇಂದಿನಿಂದ 4 ದಿನ ರಾಜ್ಯದ ಈ ಭಾಗಗಳಲ್ಲಿ ಭಾರಿ ಮಳೆ: ಆಲಿಕಲ್ಲು ಮಳೆ , ಬಿರುಗಾಳಿಯ ಮುನ್ನೆಚ್ಚರಿಕೆ! – Kannada News | IMD Forecast: Heavy Rain and Hailstorm Warning for Karnataka Districts; Public Alert

ಬೆಂಗಳೂರುಮ, ಮೇ,16: ರಾಜ್ಯದಲ್ಲಿ ಬಿಸಿಲಿನ ಬೇಗೆಯ ನಡುವೆಯೇ ವರುಣನ ಆರ್ಭಟ ಆರಂಭವಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (IMD) ನೀಡಿದೆ. ಮುಂದಿನ ಕೆಲವು ದಿನಗಳ ಕಾಲ ರಾಜ್ಯದ ದಕ್ಷಿಣ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಮುನ್ನೆಚ್ಚರಿಕೆಗಳನ್ನು ಘೋಷಣೆ ಮಾಡಿದೆ.

ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮೇ 16 ರಿಂದ ಮೇ 19 ರವರೆಗೆ ಹವಾಮಾನದಲ್ಲಿ ಭಾರಿ ಏರುಪೇರಾಗಲಿದೆ. ಈ ಅವಧಿಯಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ 64.5mm ನಿಂದ 115.5mm ವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಯೆಲ್ಲೋಅಲರ್ಟ್ (Yellow Alert) ಘೋಷಿಸಿದೆ.

ಇಲ್ಲಿದೆ ನೋಡಿ ಸ್ಟೋರಿ:

ಇನ್ನೊಂದೆಡೆ, ರಾಜ್ಯದ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಇಂದು ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರಿ ಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಗುಡುಗು, ಮಿಂಚು ಮಾತ್ರವಲ್ಲದೆ ಗಂಟೆಗೆ 40-50 ಕಿಮೀ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಕೆಲವು ಕಡೆಗಳಲ್ಲಿ ಆಲಿಕಲ್ಲು ಮಳೆ (Hailstorm) ಸಂಭವಿಸುವ ಸಾಧ್ಯತೆಯಿದೆ. ಹೀಗಾಗಿ ಉತ್ತರ ಒಳನಾಡಿನ ಭಾಗಕ್ಕೆ ಆರೆಂಜ್ಅಲರ್ಟ್ ನೀಡಲಾಗಿದೆ.

ಇದನ್ನೂ ಓದಿ: ನೆಲಮಂಗಲ ಬಳಿ ಭೀಕರ ಅಪಘಾತ: ಮಳೆಯ ನಡುವೆ ಕ್ಯಾಂಟರ್ ವಾಹನಕ್ಕೆ ಇವಿ ಬೈಕ್ ಡಿಕ್ಕಿ, ಸವಾರ ಸ್ಥಳದಲ್ಲೇ ಸಾವು!

ಬಿರುಗಾಳಿ ಮತ್ತು ಸಿಡಿಲಿನ ಮುನ್ಸೂಚನೆ ಇರುವುದರಿಂದ ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಲು ಕೋರಲಾಗಿದೆ. ಮರದ ಕೆಳಗೆ ಅಥವಾ ವಿದ್ಯುತ್ ಕಂಬಗಳ ಬಳಿ ನಿಲ್ಲದಂತೆ ಹಾಗೂ ಆಲಿಕಲ್ಲು ಮಳೆಯಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ರೈತರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಇಲಾಖೆ ಸೂಚಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೋಷಕರೇ ಮಗುವಿಗೆ ಹಸಿವಾಗಿರುವುದನ್ನು ಹೇಗೆ ತಿಳಿದುಕೊಳ್ಳಬೇಕು ಗೊತ್ತಾ? – Kannada News | How To Know If Your Toddler Is Hungry: Behavioral Signs To Watch

ಸಣ್ಣ ಮಕ್ಕಳು ತಮ್ಮ ಹಸಿವು ಅಥವಾ ಅಸಹಜತೆಯನ್ನು ಯಾವಾಗಲೂ ಸ್ಪಷ್ಟವಾಗಿ ಹೇಳಲು ಸಾಧ್ಯವಾಗುವುದಿಲ್ಲ. ವಿಶೇಷವಾಗಿ 5 ವರ್ಷಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳು ಅಳುವುದು, ಕೋಪಗೊಳ್ಳುವುದು ಅಥವಾ ವರ್ತನೆಯಲ್ಲಿ ಬದಲಾವಣೆ ತೋರಿಸುವ ಮೂಲಕ ತಮ್ಮ ಅಗತ್ಯಗಳನ್ನು ವ್ಯಕ್ತಪಡಿಸುತ್ತಾರೆ. ಆದ್ದರಿಂದ ಪೋಷಕರು ಮಕ್ಕಳ ದಿನನಿತ್ಯದ ವರ್ತನೆ ಮತ್ತು ಸೂಚನೆಗಳ ಮೇಲೆ ಗಮನ ಹರಿಸುವುದು ಬಹಳ ಮುಖ್ಯ ಎಂದು ತಜ್ಞರು ಹೇಳುತ್ತಾರೆ. ವೈದ್ಯರ ಪ್ರಕಾರ, ಹಸಿವಾದಾಗ ಮಕ್ಕಳು (Baby Hunger) ಸಾಮಾನ್ಯಕ್ಕಿಂತ ಹೆಚ್ಚು ಚಿಡಿಚಿಡಿಯಾಗಿ ವರ್ತಿಸುತ್ತಾರೆ ಅಥವಾ ಪದೇಪದೇ ಅಳಬಹುದು. ಕೆಲ ಮಕ್ಕಳು ಅಡುಗೆಮನೆಯ ಕಡೆ ಹೋಗುವುದು, ಆಹಾರದ ಡಬ್ಬಿ ಅಥವಾ ಚಮಚವನ್ನು ನೋಡಿದಾಗ ಉತ್ಸಾಹ ತೋರಿಸುವುದು ಕೂಡ ಹಸಿವಿನ ಪ್ರಮುಖ ಸೂಚನೆಗಳಾಗಿವೆ. ಕೆಲವೊಮ್ಮೆ ಆಟದಲ್ಲಿ ಆಸಕ್ತಿ ಕಡಿಮೆಯಾಗುವುದು, ದಣಿವು ಕಾಣಿಸಿಕೊಳ್ಳುವುದು ಅಥವಾ ಗಮನ ಕೇಂದ್ರೀಕರಿಸಲು ಕಷ್ಟಪಡುವುದು ಕೂಡ ಹಸಿವಿನ ಲಕ್ಷಣವಾಗಿರಬಹುದು.

ಮಕ್ಕಳಿಗೆ ಸಮಯಕ್ಕೆ ಆಹಾರ ನೀಡುವುದು ಏಕೆ ಮುಖ್ಯ?

ತಜ್ಞರ ಪ್ರಕಾರ, ಮಕ್ಕಳಿಗೆ ಸರಿಯಾದ ಸಮಯಕ್ಕೆ ಆಹಾರ ನೀಡುವುದರಿಂದ ದೇಹಕ್ಕೆ ಅಗತ್ಯವಾದ ಪ್ರೋಟೀನ್, ವಿಟಮಿನ್ ಮತ್ತು ಪೋಷಕಾಂಶಗಳು ದೊರೆಯುತ್ತವೆ. ಇದು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಸಮಯಕ್ಕೆ ಸರಿಯಾಗಿ ಊಟ ಮಾಡುವ ಅಭ್ಯಾಸದಿಂದ ಮಕ್ಕಳ ರೋಗನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ ಮತ್ತು ದಿನಪೂರ್ತಿ ಚುರುಕಾಗಿ ಇರುತ್ತಾರೆ. ನಿಯಮಿತ ಆಹಾರ ಸೇವನೆಯಿಂದ ಮಕ್ಕಳ ತೂಕ ಮತ್ತು ಎತ್ತರ ಸಮತೋಲನವಾಗಿ ಹೆಚ್ಚಾಗಲು ಸಹಾಯವಾಗುತ್ತದೆ. ಜೊತೆಗೆ ಪೌಷ್ಟಿಕಾಂಶ ಕೊರತೆಯ ಅಪಾಯ ಕಡಿಮೆಯಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

ಮಗು ದೀರ್ಘಕಾಲ ಆಹಾರ ತಿನ್ನಲು ನಿರಾಕರಿಸಿದರೆ, ತೂಕ ಸರಿಯಾಗಿ ಹೆಚ್ಚಾಗದಿದ್ದರೆ ಅಥವಾ ವಯಸ್ಸಿಗೆ ತಕ್ಕ ಬೆಳವಣಿಗೆ ಕಾಣಿಸದಿದ್ದರೆ ವೈದ್ಯರ ಸಲಹೆ ಪಡೆಯುವುದು ಅಗತ್ಯ. ಪದೇಪದೇ ವಾಂತಿ, ಊಟದ ನಂತರ ಹೊಟ್ಟೆನೋವು ಅಥವಾ ನಿರಂತರ ದೌರ್ಬಲ್ಯ ಕಂಡುಬಂದರೂ ಪರೀಕ್ಷೆ ಮಾಡಿಸಬೇಕು. ಮಕ್ಕಳ ಆಹಾರ ಪದ್ಧತಿ ಮತ್ತು ಆರೋಗ್ಯದಲ್ಲಿ ಆಗುವ ಬದಲಾವಣೆಗಳನ್ನು ಪೋಷಕರು ಸಮಯಕ್ಕೆ ಗಮನಿಸಿದರೆ, ಪೌಷ್ಟಿಕಾಂಶ ಸಂಬಂಧಿತ ಸಮಸ್ಯೆಗಳನ್ನು ಆರಂಭದಲ್ಲೇ ಗುರುತಿಸಿ ಸರಿಯಾದ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೆದರ್ಲ್ಯಾಂಡ್ಸ್​​ನಿಂದ ಭಾರತಕ್ಕೆ ಹಿಂತಿರುಗಲಿವೆ ಚೋಳರ ಯುಗದ ತಾಮ್ರ ಶಾಸನಗಳು; ಏನಿದರ ವಿಶೇಷತೆ? – Kannada News | Netherlands to return 11th Century Chola era copper plates to India during PM Modi visit

ನವದೆಹಲಿ, ಮೇ 16: ಭಾರತದ ಪ್ರಧಾನಿ ನೆದರ್ಲ್ಯಾಂಡ್ಸ್ (PM Modi in Netherlands) ಪ್ರವಾಸದಲ್ಲಿದ್ದಾರೆ. ಕಳೆದ 14 ವರ್ಷಗಳ ರಾಜತಾಂತ್ರಿಕ ಪ್ರಯತ್ನಗಳ ಬಳಿಕ ಇದೀಗ ಪ್ರಧಾನಿ ನರೇಂದ್ರ ಮೋದಿಯವರು ನೆದರ್ಲ್ಯಾಂಡ್ಸ್​​ನಿಂದ 11ನೇ ಶತಮಾನದ ಇತಿಹಾಸವಿರುವ ಭಾರತದ ಅನೈಮಂಗಲಂ ಚೋಳ ತಾಮ್ರ ಶಾಸನಗಳನ್ನು ನಮ್ಮ ದೇಶಕ್ಕೆ ವಾಪಾಸ್ ತರಲಿದ್ದಾರೆ. ಆ ತಾಮ್ರದ ಶಾಸನಗಳನ್ನು ಭಾರತಕ್ಕೆ ಹಿಂತಿರುಗಿಸಲು ನೆದರ್ಲ್ಯಾಂಡ್ಸ್ ಒಪ್ಪಿಗೆ ನೀಡಿದೆ. ಲೈಡನ್ ಶಾಸನಗಳು ಎಂದೂ ಕರೆಯಲ್ಪಡುವ ಅನೈಮಂಗಲಂ ತಾಮ್ರ ಶಾಸನಗಳು ಚೋಳ ರಾಜವಂಶದ ಅತ್ಯಂತ ಮಹತ್ವದ ದಾಖಲೆಗಳಲ್ಲಿ ಒಂದಾಗಿದೆ.

21 ತಾಮ್ರ ಶಾಸನಗಳು 11ನೇ ಶತಮಾನದಲ್ಲಿ ದಕ್ಷಿಣ ಭಾರತವನ್ನು ಆಳಿದ ರಾಜರಾಜ ಚೋಳ Iರ ಆಳ್ವಿಕೆಗೂ ಹಿಂದಿನವು. ಇಂದಿನ ತಮಿಳುನಾಡಿನ ನಾಗಪಟ್ಟಣಂ ನಗರವು ಡಚ್ ಈಸ್ಟ್ ಇಂಡಿಯಾ ಕಂಪನಿ ನಿಯಂತ್ರಣದಲ್ಲಿದ್ದಾಗ ಕ್ರಿಶ್ಚಿಯನ್ ಮಿಷನರಿಯಾಗಿ ಭಾರತದಲ್ಲಿದ್ದ ಫ್ಲೋರೆಂಟಿಯಸ್ ಕ್ಯಾಂಪರ್ ಈ ಶಾಸನಗಳನ್ನು ನೆದರ್ಲ್ಯಾಂಡ್ಸ್‌ಗೆ ತೆಗೆದುಕೊಂಡು ಹೋಗಿದ್ದರು. ಈ ಶಾಸನಗಳನ್ನು ವಾಪಾಸ್ ಪಡೆಯಲು ಭಾರತ ಸಾಕಷ್ಟು ಪ್ರಯತ್ನಪಟ್ಟಿತ್ತು.

ಈ ಫಲಕಗಳನ್ನು ಲೈಡೆನ್ ವಿಶ್ವವಿದ್ಯಾಲಯಕ್ಕೆ ದಾನ ಮಾಡಲಾಗಿತ್ತು. ಈ ಶಾಸನಗಳು ಮೂರು ಶತಮಾನಗಳಿಗೂ ಹೆಚ್ಚು ಕಾಲ ಈ ವಿಶ್ವವಿದ್ಯಾಲಯದ ಗ್ರಂಥಾಲಯದ ಏಷ್ಯನ್ ವಿಭಾಗದಲ್ಲಿತ್ತು. ಭಾರತವು 2012ರಲ್ಲಿ ಈ ಶಾಸನಗಳನ್ನು ವಾಪಾಸ್ ತರುವ ಪ್ರಕ್ರಿಯೆಯನ್ನು ಪ್ರಾರಂಭಿಸಿತು. 2023ರಲ್ಲಿ ದ್ವಿಪಕ್ಷೀಯ ಮಾತುಕತೆಯ ಮೂಲಕ ಈ ಭಾರತೀಯ ಪಾರಂಪರಿಕ ಶಾಸನಗಳನ್ನು ಹಿಂದಿರುಗಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ನೆದರ್ಲ್ಯಾಂಡ್ಸ್ ಭಾರತ ಒತ್ತಾಯಿಸಿತು. UNESCO ಬೆಂಬಲಿತ ಈ ಪ್ರಕ್ರಿಯೆಯು ಅಂತಿಮವಾಗಿ ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವೆ ಒಪ್ಪಂದಕ್ಕೆ ಕಾರಣವಾಯಿತು. ಹೀಗಾಗಿ, ಇದೀಗ ಪ್ರಧಾನಿ ಮೋದಿ ನೆದರ್ಲ್ಯಾಂಡ್ಸ್ ದೇಶಕ್ಕೆ ಭೇಟಿ ನೀಡಿರುವುದರಿಂದ ಈ ಶಾಸನಗಳನ್ನು ಹಿಂದಿರುಗಿಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ನೆದರ್‌ಲ್ಯಾಂಡ್ಸ್‌ ತಲುಪಿದ ಪ್ರಧಾನಿ ನರೇಂದ್ರ ಮೋದಿ; ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ

ಈ ತಾಮ್ರದ ಶಾಸನದ ಮಹತ್ವವೇನು?:

ಈ ಶಾಸನಗಳನ್ನು ಭಾರತೀಯ ಇತಿಹಾಸ ಮತ್ತು ತಮಿಳು ಶಿಲಾಶಾಸನದ ಹಲವಾರು ವಿದ್ವಾಂಸರು ಅಧ್ಯಯನ ಮಾಡಿದ್ದಾರೆ. ಕಲ್ಕಿ ಕೃಷ್ಣಮೂರ್ತಿಯವರ ಐತಿಹಾಸಿಕ ಕಾದಂಬರಿ ‘ಪೊನ್ನಿಯಿನ್ ಸೆಲ್ವನ್’ನಲ್ಲಿ ಕೂಡ ಈ ಬಗ್ಗೆ ಉಲ್ಲೇಖಿಸಲಾಗಿದೆ. ಈ ಶಾಸನಗಳು ಹಿಂದೂ ದೇವರಾದ ವಿಷ್ಣುವಿನ ಸ್ತುತಿಗಳೊಂದಿಗೆ ಪ್ರಾರಂಭವಾಗಿ, ದೇವರ ಪೂರ್ವಜರ ಸಂಪೂರ್ಣ ಪಟ್ಟಿಯ ಮೂಲಕ ಮುಂದುವರಿಯುವ ಮೂಲಕ ತಂಜಾವೂರಿನ ಚೋಳ ರಾಜವಂಶದ ವಂಶಾವಳಿಯನ್ನು ಒಳಗೊಂಡಿದೆ. ಈ ಶಾಸನವನ್ನು ಕಂಚಿನ ಕಡಗದಲ್ಲಿ ಸೇರಿಸಿಡಲಾಗಿದೆ. ಇದು ರಾಜೇಂದ್ರ ಚೋಳ I ಅವರ ಮುದ್ರೆಯನ್ನು ಕೂಡ ಹೊಂದಿದೆ. ತಾಳೆಗರಿಯಲ್ಲಿ ಇತಿಹಾಸವನ್ನು ಕೆತ್ತನೆ ಮಾಡುತ್ತಿದ್ದಂತೆಯೇ ಆಗಿನ ಕಾಲದಲ್ಲಿ ತಾಮ್ರದ ಹಾಳೆಗಳಲ್ಲಿ ಕೆತ್ತನೆ ಮಾಡಲಾಗುತ್ತಿತ್ತು. ಇದು ಭಾರತದ ಪಾಲಿಗೆ ದೊಡ್ಡ ಐತಿಹಾಸಿಕ ದಾಖಲೆಯಾಗಿದೆ.

18ನೇ ಶತಮಾನದಲ್ಲಿ ಕೋರಮಂಡಲ್ ಕರಾವಳಿಯಲ್ಲಿ ಡಚ್ ವಸಾಹತುಶಾಹಿ ಆಳ್ವಿಕೆಯಲ್ಲಿ ತಾಮ್ರದ ಶಾಸನಗಳನ್ನು ನೆದರ್‌ಲ್ಯಾಂಡ್ಸ್‌ಗೆ ಕೊಂಡೊಯ್ಯಲಾಯಿತು. ನಾಗಪಟ್ಟಣಂ ಡಚ್ ಈಸ್ಟ್ ಇಂಡಿಯಾ ಕಂಪನಿಯ ನಿಯಂತ್ರಣದಲ್ಲಿದ್ದಾಗ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕ್ರಿಶ್ಚಿಯನ್ ಮಿಷನರಿಯ ಮೂಲಕ ಡಚ್ ಅಧಿಕಾರಿ ಫ್ಲೋರೆಂಟಿಯಸ್ ಕ್ಯಾಂಪರ್ ಅವುಗಳನ್ನು ಸ್ವಾಧೀನಪಡಿಸಿಕೊಂಡರು ಎಂದು ಇತಿಹಾಸಕಾರರು ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಯುಎಇ ಭೇಟಿಯಲ್ಲಿ ಹಲವು ಒಪ್ಪಂದಗಳಿಗೆ ಸಹಿ

1690ರಲ್ಲಿ ಡಚ್ ಈಸ್ಟ್ ಇಂಡಿಯಾ ಕಂಪನಿಯು ತನ್ನ ಕೋರಮಂಡಲ್ ಪ್ರಧಾನ ಕಚೇರಿಯನ್ನು ಪುಲಿಕಾಟ್‌ನಿಂದ ನಾಗಪಟ್ಟಣಂಗೆ ಸ್ಥಳಾಂತರಿಸಿತು. ಈ ಅವಧಿಯಲ್ಲಿ ಈ ಕಲಾಕೃತಿಗಳು ಮತ್ತು ಶಾಸನಗಳು ಯುರೋಪಿಯನ್ ಕೈಗೆ ತಲುಪಿದವು. ಇದಾದ ನಂತರ ಶಾಸನಗಳು 1862ರಲ್ಲಿ ಪ್ರೊಫೆಸರ್ ಹೆಂಡ್ರಿಕ್ ಅರೆಂಟ್ ಹಮಾಕರ್ ಅವರ ಎಸ್ಟೇಟ್ ಮೂಲಕ ಲೈಡೆನ್ ವಿಶ್ವವಿದ್ಯಾಲಯದ ಸಂಗ್ರಹವನ್ನು ಪ್ರವೇಶಿಸಿದವು. ಇವು ವಿಶ್ವವಿದ್ಯಾಲಯದ ಗ್ರಂಥಾಲಯದ ಏಷ್ಯನ್ ಸಂಗ್ರಹಗಳಲ್ಲಿ ಇರಿಸಲ್ಪಟ್ಟವು. ಇದನ್ನು ಇತಿಹಾಸಕಾರರು ಮತ್ತು ತಮಿಳು ಶಿಲಾಶಾಸನಕಾರರು ಅಧ್ಯಯನ ಮಾಡಿದರು. ಸಂಸ್ಕೃತ ಮತ್ತು ತಮಿಳು ಎರಡು ಭಾಷೆಯಲ್ಲೂ ಶಾಸನಗಳನ್ನು ಹೊಂದಿರುವ ಈ ಕಲಾಕೃತಿಗಳನ್ನು ಮೂಲತಃ ರಾಜರಾಜ ಚೋಳ I ಕ್ರಿ.ಶ. 985 ಮತ್ತು 1012ರ ನಡುವೆ ತಮಿಳುನಾಡಿನ ನಾಗಪಟ್ಟಣಂನಲ್ಲಿರುವ ಬೌದ್ಧ ವಿಹಾರದ ಸ್ವಾಧೀನತೆಯ ಸ್ಮರಣಾರ್ಥವಾಗಿ ಬಿಡುಗಡೆ ಮಾಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:51 pm, Sat, 16 May 26

Source link

Karnataka High Court Jobs: ಕರ್ನಾಟಕ ಹೈಕೋರ್ಟ್‌ನಲ್ಲಿ ಬೃಹತ್ ನೇಮಕಾತಿ: SSLC ಪಾಸಾದವರಿಗೆ ಸುವರ್ಣಾವಕಾಶ! – Kannada News | Karnataka High Court Jobs: Group D in Bangalore, Dharwad and Kalaburagi No Exam!

ಕರ್ನಾಟಕ ಹೈಕೋರ್ಟ್‌ನಲ್ಲಿ ಬೃಹತ್ ನೇಮಕಾತಿImage Credit source: gemini ai

ಬೆಂಗಳೂರು: ಉದ್ಯೋಗಕ್ಕಾಗಿ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಹೈಕೋರ್ಟ್ ಭರ್ಜರಿ ಸಿಹಿ ಸುದ್ದಿ ನೀಡಿದೆ. ಬೆಂಗಳೂರು, ಧಾರವಾಡ ಮತ್ತು ಕಲಬುರಗಿಯಲ್ಲಿ ಖಾಲಿ ಇರುವ ವಿವಿಧ ಗ್ರೂಪ್-ಡಿ (Group D) ಹುದ್ದೆಗಳ ಭರ್ತಿಗಾಗಿ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಒಟ್ಟು 93 ರಿಂದ 100 ಹುದ್ದೆಗಳು ಖಾಲಿ ಇದ್ದು, ಇದೊಂದು ಸರ್ಕಾರಿ ಮತ್ತು ಕಾಯಂ (ಶಾಶ್ವತ) ಉದ್ಯೋಗವಾಗಿದೆ.

ಯಾವೆಲ್ಲಾ ಹುದ್ದೆಗಳಿವೆ ಮತ್ತು ಅರ್ಹತೆ ಏನು?

ಈ ನೇಮಕಾತಿಯಡಿ ಪಿಯೋನ್ (Peon), ವಾಚ್‌ಮನ್ (Watchman), ಸ್ವೀಪರ್ (Sweeper) ಮತ್ತು ಲಿಫ್ಟ್ ಅಟೆಂಡರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎಸ್‌ಎಸ್‌ಎಲ್‌ಸಿ (SSLC – 10ನೇ ತರಗತಿ) ಪಾಸ್ ಆಗಿರುವುದು ಕಡ್ಡಾಯವಾಗಿದೆ. ಇನ್ನು ಅನುಭವದ ವಿಷಯಕ್ಕೆ ಬಂದರೆ, ಲಿಫ್ಟ್ ಅಟೆಂಡರ್ ಮತ್ತು ಟೈಲರ್ ಹುದ್ದೆಗಳಿಗೆ ಮಾತ್ರ ಪೂರ್ವ ಅನುಭವದ ಅಗತ್ಯವಿದ್ದು, ಉಳಿದ ಹುದ್ದೆಗಳಿಗೆ ಯಾವುದೇ ಅನುಭವದ ಅಗತ್ಯವಿರುವುದಿಲ್ಲ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕಚೇರಿ ಸಹಾಯ, ಫೈಲ್ ಕೆಲಸ, ಸ್ವಚ್ಛತೆ ಹಾಗೂ ಕೋರ್ಟ್ ಸಹಾಯದಂತಹ ಕೆಲಸದ ಜವಾಬ್ದಾರಿಗಳು ಇರಲಿವೆ.

ವಯೋಮಿತಿ ಮತ್ತು ಸಂಬಳದ ವಿವರ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಮತ್ತು ಗರಿಷ್ಠ 40 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ನಿಯಮಾವಳಿಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಇರಲಿದ್ದು, ಒಬಿಸಿ (OBC) ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಎಸ್‌ಸಿ/ಎಸ್‌ಟಿ (SC/ST) ಅಭ್ಯರ್ಥಿಗಳಿಗೆ 5 ವರ್ಷಗಳ ವಿನಾಯಿತಿ ಸಿಗಲಿದೆ. ಇನ್ನು ಸಂಬಳದ ಶ್ರೇಣಿಯು ಅತ್ಯಂತ ಆಕರ್ಷಕವಾಗಿದ್ದು, ಹುದ್ದೆಗಳ ಆಧಾರದ ಮೇಲೆ ತಿಂಗಳಿಗೆ 19,900 ರಿಂದ 63,200 ರೂ. ಹಾಗೂ 21,700 ರಿಂದ 69,100ರೂ. ರವರೆಗೆ ವೇತನ ದೊರೆಯಲಿದೆ.

ಪರೀಕ್ಷೆ ಇಲ್ಲದೆ ನೇರ ಆಯ್ಕೆ:

ಈ ನೇಮಕಾತಿಯ ಅತ್ಯಂತ ಪ್ರಮುಖ ಆಕರ್ಷಣೆಯೆಂದರೆ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಲಿಖಿತ ಅಥವಾ ಬರವಣಿಗೆ ಪರೀಕ್ಷೆ ಇರುವುದಿಲ್ಲ. ಬದಲಿಗೆ, ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ (Merit List) ಮತ್ತು ನೇರ ಸಂದರ್ಶನದ (Interview) ಮೂಲಕ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ. ಅರ್ಜಿ ಶುಲ್ಕವಾಗಿ ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 200 ಹಾಗೂ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 100ರೂ. ನಿಗದಿಪಡಿಸಲಾಗಿದೆ.

ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನ:

ಅರ್ಜಿ ಪ್ರಕ್ರಿಯೆಯು ಈಗಾಗಲೇ 22 ಏಪ್ರಿಲ್ 2026 ರಿಂದ ಆರಂಭವಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು 21 ಮೇ 2026 ಕೊನೆಯ ದಿನಾಂಕವಾಗಿದೆ.

ಇದನ್ನೂ ಓದಿ: ಇನ್ಫೋಸಿಸ್‌ನಿಂದ ಭರ್ಜರಿ ಉದ್ಯೋಗಾವಕಾಶ; 20,000 ಫ್ರೆಶರ್ಸ್‌ ನೇಮಕಾತಿ ಘೋಷಣೆ

ಅರ್ಜಿ ಸಲ್ಲಿಸುವ ಹಂತಗಳು:

ಅರ್ಹ ಅಭ್ಯರ್ಥಿಗಳು ಹೈಕೋರ್ಟ್‌ನ ಅಧಿಕೃತ ವೆಬ್‌ಸೈಟ್ karnatakajudiciary.kar.nic.in ಗೆ ಭೇಟಿ ನೀಡಿ ಈ ಕೆಳಗಿನಂತೆ ಅರ್ಜಿ ಸಲ್ಲಿಸಬಹುದು:

  • ವೆಬ್‌ಸೈಟ್‌ಗೆ ಭೇಟಿ ನೀಡಿ ‘Recruitment’ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
  • ಅದರಲ್ಲಿ ‘Group-D’ ಆಯ್ಕೆಯನ್ನು ಆರಿಸಿಕೊಳ್ಳಿ.
  • ಕೇಳಲಾದ ವಿವರಗಳೊಂದಿಗೆ ಅರ್ಜಿಯನ್ನು (Application Form) ಭರ್ತಿ ಮಾಡಿ.
  • ಅಗತ್ಯವಿರುವ ದಾಖಲೆಗಳನ್ನು (Documents) ಅಪ್‌ಲೋಡ್ ಮಾಡಿ.
  • ನಿಗದಿತ ಶುಲ್ಕವನ್ನು ಪಾವತಿಸಿ ಅರ್ಜಿಯನ್ನು ‘Submit’ ಮಾಡಿ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಲನಚಿತ್ರ ರಂಗಕ್ಕೆ ಕಮಲ್ ಹಾಸನ್ ಕರೆ: ನೀಡಿದ ಸಲಹೆ ಏನು? – Kannada News | Kamal Haasan request movie industry people to cut down production cost

ಇತ್ತೀಚೆಗಷ್ಟೆ ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕತೆಗೆ ಸಂಬಂಧಿಸಿದಂತೆ ಕೆಲ ಮನವಿಗಳನ್ನು ಭಾರತೀಯ ಜನರಿಗೆ ಮಾಡಿದ್ದಾರೆ. ವರ್ಕ್​ ಫ್ರಂ ಹೋಮ್ ಮಾಡಿ, ಚಿನ್ನ ಖರೀದಿಸಬೇಡಿ, ವಿದೇಶ ಪ್ರಯಾಣ ಕಡಿಮೆ ಇನ್ನಿತರೆ ಸಲಹೆಗಳನ್ನು ನೀಡಿದ್ದಾರೆ. ಇದೀಗ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಕಮಲ್ ಹಾಸನ್ (Kamal Haasan) ಚಿತ್ರರಂಗದ ಆರ್ಥಿಕತೆಗೆ ಸಂಬಂಧಿಸಿದಂತೆ ಇದೇ ರೀತಿಯ ಸಲಹೆಗಳನ್ನು ನೀಡಿದ್ದು, ಸಿನಿಮಾ ನಿರ್ಮಾಪಕರು ಖರ್ಚು ಕಡಿಮೆ ಮಾಡುವಂತೆ ಮನವಿ ಮಾಡಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ ಗಗನಕ್ಕೇರುತ್ತಿರುವ ಚಲನಚಿತ್ರ ನಿರ್ಮಾಣ ವೆಚ್ಚಗಳು ಮತ್ತು ತಾರೆಯರ ಸಂಭಾವನೆಗಳ ಕುರಿತು ಹಿರಿಯ ನಟ ಕಮಲ್ ಹಾಸನ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಸಿನಿಮಾ ಉದ್ಯಮವನ್ನು ಉಳಿಸಲು ನಿರ್ಮಾಣ ವೆಚ್ಚಗಳನ್ನು ನಿಯಂತ್ರಿಸುವುದು ಅತ್ಯಗತ್ಯ ಎಂದು ಕಮಲ್ ಹಾಸನ್ ಹೇಳಿದ್ದರೆ. ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿ ಎಂದು ಕಮಲ್ ಸಲಹೆ ನೀಡಿದ್ದಾರೆ.

ಹೆಚ್ಚುತ್ತಿರುವ ಬೆಲೆಗಳು ಸಿನಿಮಾ ನಿರ್ಮಾಣದ ಮೇಲೆ ಮತ್ತು ಸಿನಿಮಾ ಟಿಕೆಟ್ ಬೆಲೆಗಳ ಮೇಲೆ ಪರಿಣಾಮ ಬೀರುತ್ತಿವೆ. ನಟರು, ನಿರ್ಮಾಪಕರು, ಚಿತ್ರರಂಗದ ಎಲ್ಲ ವಿಭಾಗದವರು ಸೇರಿ ಸಿನಿಮಾ ರಂಗದ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸಬೇಕಿದೆ. ಪ್ರತಿ ಲವ್ ಸ್ಟೋರಿಗೆ ಪ್ಯಾರಿಸ್​​ಗೆ ಹೋಗುವುದು ಪ್ರತಿ ಹನಿಮೂನ್ ಶಾಟ್​​ಗೆ ತೆಗೆಯಲು ಸ್ವಿಟ್ಜರ್​​ಲ್ಯಾಂಡ್​​ಗೆ ಹೋಗುವುದನ್ನು ನಿರ್ದೇಶಕರು ಬಿಡಬೇಕಿದೆ ಎಂದಿರುವ ಕಮಲ್ ಹಾಸನ್, ವಿದೇಶಗಳಲ್ಲಿ ಚಿತ್ರೀಕರಣ ಮಾಡುವುದನ್ನು ಕಡಿಮೆ ಮಾಡಿ ಎಂದಿದ್ದಾರೆ.

ಇದನ್ನೂ ಓದಿ:ಕಮಲ್ ಹಾಸನ್ ಮೇಲೆ ಭುಗಿಲೆದ್ದ ಆಕ್ರೋಶ: 50 ಸಾವಿರ ಮರಳಿಸುವಂತೆ ಒತ್ತಾಯ

ಕಮಲ್ ಹಾಸನ್ ಅವರ ಹೇಳಿಕೆ ಭಿನ್ನ-ಭಿನ್ನ ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿವೆ. ಸ್ವತಃ ಕಮಲ್ ನಟಿಸುತ್ತಿರುವ ‘ಕಲ್ಕಿ 2898 ಎಡಿ’ ಸಿನಿಮಾದ ನಿರ್ಮಾಪಕ ಅಶ್ವಿನಿ ದತ್ ಮಾತನಾಡಿ, ‘ಕಮಲ್ ಹಾಸನ್ ಅವರು ಹೇಳಿರುವುದು ನೂರಕ್ಕೆ ನೂರು ನಿಜ ಮತ್ತು ಉದ್ಯಮದ ಹಿತದೃಷ್ಟಿಯಿಂದ ಅದು ಅತ್ಯಂತ ಪ್ರಸ್ತುತವಾಗಿದೆ. ಆದರೆ, ಇಂದಿನ ಮಾರುಕಟ್ಟೆಯಲ್ಲಿ ಜಾಗತಿಕ ಮಟ್ಟದ ಸಿನಿಮಾಗಳನ್ನು ನೀಡಬೇಕಾದರೆ ಭಾರಿ ಹೂಡಿಕೆ ಅನಿವಾರ್ಯವಾಗುತ್ತದೆ. ಕಥೆಯ ಬೇಡಿಕೆಗೆ ತಕ್ಕಂತೆ ತಂತ್ರಜ್ಞಾನ ಮತ್ತು ನಟರ ಕಾಂಬಿನೇಷನ್ ಅನ್ನು ತರಬೇಕಾದಾಗ ಬಜೆಟ್ ತಾನಾಗಿಯೇ ದೊಡ್ಡದಾಗುತ್ತದೆ. ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡಲು ಮತ್ತು ಚಿತ್ರೀಕರಣದ ದಿನಗಳನ್ನು ಯೋಜಿತವಾಗಿ ನಿರ್ವಹಿಸಲು ನಿರ್ಮಾಪಕರು ಹೆಚ್ಚು ಜಾಗರೂಕರಾಗಿರಬೇಕು’ ಎಂದು ಹೇಳಿದರು.

ಕಮಲ್ ಹಾಸನ್ ಪ್ರಸ್ತುತ ‘ಕಲ್ಕಿ 2898 ಎಡಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ರಜನೀಕಾಂತ್ ಜೊತೆಗೆ ಹೊಸದೊಂದು ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇವುಗಳ ಜೊತೆಗೆ ರಜನೀಕಾಂತ್ ಅವರ ಹೊಸ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಶಿವಕಾರ್ತಿಕೇಯನ್ ನಟಿಸಲಿರುವ ಮತ್ತೊಂದು ಸಿನಿಮಾವನ್ನು ಸಹ ಅವರು ನಿರ್ಮಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version