ಹಾವೇರಿಯಲ್ಲಿ ಸಿನಿಮೀಯ ಶೈಲಿಯಲ್ಲಿ ಕಳ್ಳತನ: ತಿಜೋರಿ ಸಮೇತ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ – Kannada News | Haveri Jewelry Heist: Lakhs Gold Stolen from Sharada Jewelers in Daring 45 Min Robbery

ಹಾವೇರಿ, ಮೇ 16: ಜಿಲ್ಲೆಯ ಹಾನಗಲ್ ತಾಲ್ಲೂಕಿನ ಚಿಕ್ಕಾಂಶಿ ಹೊಸೂರು ಗ್ರಾಮದಲ್ಲಿ ಜ್ಯುವೆಲರಿ ಅಂಗಡಿಯೊಂದರಲ್ಲಿ ಕಳ್ಳತನ ನಡೆದಿದೆ. ಸಿನಿಮೀಯ ರೀತಿಯಲ್ಲಿ ಕೇವಲ 45 ನಿಮಿಷಗಳಲ್ಲಿ ಖದೀಮರ ಗ್ಯಾಂಗ್ ಸುಮಾರು 70 ರಿಂದ 80 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದೆ. ಅಣ್ಣಪ್ಪ ಭಜಂತ್ರಿ ಎಂಬುವರಿಗೆ ಸೇರಿದ ಶಾರದಾ ಜ್ಯುವೆಲರಿ ಶಾಪ್​​ನಲ್ಲಿ ಈ ಕೃತ್ಯ ನಡೆದಿದೆ. ಮುಖಕ್ಕೆ ಮಾಸ್ಕ್ ಹಾಗೂ ಕೈಗೆ ಗ್ಲೌಸ್ ಧರಿಸಿ ಬಂದಿದ್ದ ಕಳ್ಳರು, ಅಂಗಡಿಯ ಬೀಗ ಮುರಿದು ಒಳನುಗ್ಗಿದ್ದಾರೆ. ಬಳಿಕ 7 ಕ್ವಿಂಟಲ್ ತೂಕದ ತಿಜೋರಿ ಸಮೇತ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ದೋಚಿದ್ದಾರೆ. ಖದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಈ ಹಿಂದೆ​​ ಎರಡು ಭಾರಿ ಕೂಡ ಶಾರದಾ ಜ್ಯುವೆಲರಿ ಶಾಪ್​ನಲ್ಲಿ​ ಕಳ್ಳತನಕ್ಕೆ ಯತ್ನಿಸಲಾಗಿತ್ತು. ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ಅಣ್ಣಪ್ಪ ಬಾರ್ಕಿ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ನೆಲಮಂಗಲ ಬಳಿ ಭೀಕರ ಅಪಘಾತ: ಮಳೆಯ ನಡುವೆ ಕ್ಯಾಂಟರ್ ವಾಹನಕ್ಕೆ ಇವಿ ಬೈಕ್ ಡಿಕ್ಕಿ, ಸವಾರ ಸ್ಥಳದಲ್ಲೇ ಸಾವು! – Kannada News | Madavara Road Accident: EV Biker Killed in Nelamangala as Rain Causes Slippery Roads

ನೆಲಮಂಗಲ, ಮೇ.16: ಬೆಂಗಳೂರು ಹೊರವಲಯದ ನೆಲಮಂಗಲ ತಾಲ್ಲೂಕಿನ ಮಾದಾವರದಲ್ಲಿ ಇಂದು (ಮೇ.16) ಮಧ್ಯಾಹ್ನ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮಳೆಯ ಕಾರಣದಿಂದಾಗಿ ಚಲಿಸುತ್ತಿದ್ದ ಕ್ಯಾಂಟರ್ ವಾಹನಕ್ಕೆ ಎಲೆಕ್ಟ್ರಿಕ್ (EV) ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ದುರ್ದೈವಿಯನ್ನು ಲೋಕೇಶ್ (45) ಎಂದು ಗುರುತಿಸಲಾಗಿದೆ. ಇವರು ಮಧ್ಯಾಹ್ನ ಸುಮಾರು 2:30 ರ ವೇಳೆಗೆ ತಮ್ಮ ಇವಿ ಬೈಕ್‌ನಲ್ಲಿ ಬೆಂಗಳೂರಿನ ಕಡೆಗೆ ತೆರಳುತ್ತಿದ್ದರು.

ಹೆದ್ದಾರಿಯಲ್ಲಿ ಮಳೆ ಬರುತ್ತಿದ್ದ ಕಾರಣ ಮುಂದೆ ಸಾಗುತ್ತಿದ್ದ ಕ್ಯಾಂಟರ್ ವಾಹನವು ವೇಗವಾಗಿ ಚಲಿಸುತ್ತಿತ್ತು. ಈ ವೇಳೆ ಕ್ಯಾಂಟರ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದಾನೆ ಎನ್ನಲಾಗಿದೆ. ಮಳೆಯ ಕಾರಣ ರಸ್ತೆ ಜಾರುತ್ತಿದ್ದುದರಿಂದ, ಕ್ಯಾಂಟರ್‌ನ ಹಿಂಬದಿಯಲ್ಲೇ ಇವಿ ಬೈಕ್‌ನಲ್ಲಿ ಬರುತ್ತಿದ್ದ ಲೋಕೇಶ್ ಅವರಿಗೆ ವಾಹನವನ್ನು ನಿಯಂತ್ರಿಸಲು ಸಾಧ್ಯವಾಗದೆ ನೇರವಾಗಿ ಕ್ಯಾಂಟರ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದಾರೆ. ತೀವ್ರವಾಗಿ ಪೆಟ್ಟು ಬಿದ್ದ ಕಾರಣ ಲೋಕೇಶ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ನೀಟ್ ಹಗರಣಕ್ಕೆ ಬಿಗ್ ಟ್ವಿಸ್ಟ್: ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದ ಎನ್‌ಟಿಎ ತಜ್ಞೆ ಮನೀಷಾ ಮಂಢಾರೆ ಸಿಬಿಐ ಬಲೆಗೆ!

ಘಟನೆ ನಡೆದ ತಕ್ಷಣ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲದ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಮಳೆಯ ಸಮಯದಲ್ಲಿ ವಾಹನ ಸವಾರರು ಜಾಗರೂಕರಾಗಿರಬೇಕು ಮತ್ತು ಮುಂದಿನ ವಾಹನಗಳ ನಡುವೆ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ವರದಿ: ಮಂಜುನಾಥ್ ನೆಲಮಂಗಲ

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಲಕ್ನೋ ತಂಡದ ನಾಯಕ ರಿಷಭ್ ಪಂತ್​ಗೆ ದಂಡದ ಬರೆ ಎಳೆದ ಬಿಸಿಸಿಐ

Source link

ದರ ಏರಿಕೆ ಬಿಸಿ​​: ಸರ್ಕಾರದ ಮೊರೆ ಹೋದ ಆಟೋ ಚಾಲಕರು; ಒನ್ ಸಿಟಿ ಒನ್ ರೇಟ್​ ಜಾರಿಗೆ ಮನವಿ – Kannada News | Price hike: Auto drivers appeal to government for implementation of One City One Rate

ಪ್ರಾತಿನಿಧಿಕ ಚಿತ್ರ (ಎಐ ಚಿತ್ರ)Image Credit source: tv9 kannada

ಬೆಂಗಳೂರು, ಮೇ 16: ಸದ್ಯ ರಾಜ್ಯದ (Karnataka) ಜನರಿಗೆ ಬೆಲೆ ಏರಿಕೆ (price hike) ಬಿಸಿ ತಟ್ಟುತ್ತಿದೆ. ಇರಾನ್-ಅಮೆರಿಕ ಯುದ್ಧದ ಎಫೆಕ್ಟ್, ಆಮದು ವೆಚ್ಚದ ಪರಿಣಾಮ, ಪೆಟ್ರೋಲ್, ಡೀಸೆಲ್ ದರ ಭರ್ತಿ ಮೂರು ರೂ ಏರಿಕೆಯಾಗಿದೆ. ಸಿಎನ್‌ಜಿ, ಎಲ್​​ಪಿಜಿ ಗ್ಯಾಸ್​ ದರವೂ ಏರಿಕೆ ಆಗಿದೆ. ಈ ಬೆನ್ನಲ್ಲೇ ಸ್ನೇಹಜೀವಿ ಆಟೋ ಚಾಲಕರ (auto drivers) ಟ್ರೇಡ್ ಯೂನಿಯನ್​​ ಸರ್ಕಾರದ ಮೊರೆ ಹೋಗಿದ್ದಾರೆ. ಆಟೋ ಮೀಟರ್​​ ದರ ಏರಿಸುವಂತೆ ಒತ್ತಾಯಿಸಿದ್ದು, ನಮ್ಮ ಮಕ್ಕಳ ಶಾಲಾ ಶುಲ್ಕವನ್ನು ಸರ್ಕಾರವೇ ನಿಭಾಯಿಸಿವಂತೆ ಬೇಡಿಕೆ ಇಟ್ಟಿದ್ದಾರೆ.

ಮುಖ್ಯಾಂಶಗಳು

  • ದರ ಏರಿಕೆ ಬೆನ್ನಲ್ಲೇ ಸರ್ಕಾರದ ಮೊರೆಹೋದ ಆಟೋ ಚಾಲಕರು
  • ಒನ್ ಸಿಟಿ ಒನ್ ರೇಟ್ ಜಾರಿಗೆ ಮನವಿ
  • ದಿನಕ್ಕೆ 14 ಗಂಟೆ ಕೆಲಸ ಮಾಡಿದ್ರು ಜೀವನ ನಡೆಸುವುದು ಕಷ್ಟ

ದರ ಗಗನಕ್ಕೇರಿದ ಬೆನ್ನಲ್ಲೇ ತತ್ತರಿಸಿದ ಆಟೋ ಚಾಲಕರು

ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಹಾಗೂ ಎಲ್‌ಪಿಜಿ ಸೇರಿದಂತೆ ಇಂಧನ ದರಗಳು ಗಗನಕ್ಕೇರಿರುವ ಹಿನ್ನೆಲೆಯಲ್ಲಿ ತತ್ತರಿಸಿರುವ ಆಟೋ ಚಾಲಕರು ತಮ್ಮ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮೊರೆ ಹೋಗಿದ್ದಾರೆ. ದುಬಾರಿ ದುನಿಯಾದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಇಂಧನ ಬೆಲೆಯಿಂದಾಗಿ ಆಟೋ ಚಾಲಕರ ಜೀವನ ದುಸ್ತರವಾಗಿದೆ. ದಿನಕ್ಕೆ 14 ಗಂಟೆಗಳ ಕಾಲ ದುಡಿದರೂ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ ಎಂದು ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಅಳಲು ತೋಡಿಕೊಂಡಿದೆ.

ಇದನ್ನೂ ಓದಿ: ತೈಲ ಬೆಲೆ ಹೆಚ್ಚಳ ಭಾರತದಲ್ಲೇ ಕನಿಷ್ಠ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟನೆ

ಈ ಹಿನ್ನೆಲೆಯಲ್ಲಿ ಟ್ರೇಡ್ ಯೂನಿಯನ್ ಸರ್ಕಾರಕ್ಕೆ ಹಲವು ಪ್ರಮುಖ ಬೇಡಿಕೆಗಳನ್ನು ಸಲ್ಲಿಸಿದೆ. ರಾಜ್ಯಾದ್ಯಂತ ‘ಒನ್ ಸಿಟಿ ಒನ್ ರೇಟ್’ ನೀತಿಯನ್ನು ಜಾರಿಗೊಳಿಸಬೇಕು, ಪ್ರಸ್ತುತ ಇರುವ ಆಟೋ ಮೀಟರ್ ದರವನ್ನು ಪರಿಷ್ಕರಿಸಿ ಹೆಚ್ಚಿಸಬೇಕು ಎಂದು ಒತ್ತಾಯಿಸಿದೆ. ಅಲ್ಲದೇ, ಕ್ಯಾಬ್ ಅಗ್ರಿಗೇಟರ್‌ಗಳಲ್ಲಿ ಕಡಿಮೆ ದರ ಸಿಗುತ್ತಿರುವುದರಿಂದ ಆದಾಯಕ್ಕೆ ಪೆಟ್ಟು ಬಿದ್ದಿದೆ. ಎಲ್ಲ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿರುವುದರಿಂದ ಜೀವನ ನಡೆಸುವುದು ಕಷ್ಟವಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಕರೆಗೆ ಓಗೊಟ್ಟ ಕರ್ನಾಟಕ ರಾಜ್ಯಸಭಾ ಸದಸ್ಯನ ಕುಟುಂಬ: ಎಲೆಕ್ಟ್ರಿಕ್ ಸ್ಟವ್ ಬಳಕೆ, ಸೈಕಲ್ ಸವಾರಿ

ಇದರೊಂದಿಗೆ, ಆರ್ಥಿಕ ಸಂಕಷ್ಟದಲ್ಲಿರುವ ಆಟೋ ಚಾಲಕರ ಮಕ್ಕಳ ಶಾಲಾ ಶುಲ್ಕವನ್ನು ಸರ್ಕಾರವೇ ಭರಿಸಬೇಕು ಎಂಬ ಮಹತ್ವದ ಬೇಡಿಕೆಯನ್ನೂ ಯೂನಿಯನ್ ಮುಂದಿಟ್ಟಿದೆ. ಇಂಧನ ಬೆಲೆ ಏರಿಕೆಯ ನೇರ ಪರಿಣಾಮ ಆಟೋ ಚಾಲಕರ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರಿದ್ದು, ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಪರಿಹಾರ ಕಲ್ಪಿಸಬೇಕು ಎಂದು ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಮನವಿ ಮಾಡಿದೆ.

ವರದಿ: ನಟರಾಜ್​​ 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಭಾರತೀಯ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ

ಹೇಗ್, ಮೇ 16: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ನೆದರ್‌ಲ್ಯಾಂಡ್ಸ್‌ಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಹೇಗ್‌ನಲ್ಲಿ ನಡೆದ ಸಮುದಾಯ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿದ ಮೋದಿಯವರಿಗೆ ಭಾರತ ಮೂಲದ ಯುವ ಕಲಾವಿದರು ಭಾರತೀಯ ಸಂಪ್ರದಾಯಗಳು ಮತ್ತು ಪರಂಪರೆಯನ್ನು ಪ್ರದರ್ಶಿಸುವ ಸಂಗೀತ, ನೃತ್ಯ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಪ್ರಧಾನ ಮಂತ್ರಿಯವರು ಮೇ 15ರಿಂದ 20ರವರೆಗೆ 5 ರಾಷ್ಟ್ರಗಳ ಪ್ರವಾಸದಲ್ಲಿದ್ದಾರೆ. ನೆದರ್ಲ್ಯಾಂಡ್ಸ್​ ಬಳಿಕ ಸ್ವೀಡನ್, ನಾರ್ವೆ ಮತ್ತು ಇಟಲಿಗೆ ಕೂಡ ಭೇಟಿ ನೀಡಲಿದ್ದಾರೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೀಟ್ ಹಗರಣಕ್ಕೆ ಬಿಗ್ ಟ್ವಿಸ್ಟ್: ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದ ಎನ್‌ಟಿಎ ತಜ್ಞೆ ಮನೀಷಾ ಮಂಢಾರೆ ಸಿಬಿಐ ಬಲೆಗೆ! – Kannada News | CBI Busts NEET UG 2026 Biology Paper Leak Scam: Pune NTA Expert Manisha Mandhare Arrested

ಪುಣೆ, ಮೇ.16: ದೇಶದ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ 2026’ (NEET-UG) ಬಯಾಲಜಿ (ಜೀವಶಾಸ್ತ್ರ) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (CBI) ಮತ್ತೊಬ್ಬ ಪ್ರಮುಖ ಸೂತ್ರಧಾರಿಯನ್ನು ಬಂಧಿಸಿದೆ. ಮಹಾರಾಷ್ಟ್ರದ ಪುಣೆಯ ಹಿರಿಯ ಸಸ್ಯಶಾಸ್ತ್ರ (Botany) ಶಿಕ್ಷಕಿ ಮನೀಷಾ ಗುರುನಾಥ್ ಮಂಢಾರೆ ಎಂಬಾಕೆಯನ್ನು ದೆಹಲಿಯಲ್ಲಿ ತೀವ್ರ ವಿಚಾರಣೆಯ ನಂತರ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.

ಬಂಧಿತ ಮನೀಷಾ ಮಂಢಾರೆ ಅವರನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ನೀಟ್ ಪರೀಕ್ಷಾ ಪ್ರಕ್ರಿಯೆಯ ತಜ್ಞರನ್ನಾಗಿ (Expert) ನೇಮಿಸಿತ್ತು. ಈ ಕಾರಣದಿಂದಾಗಿ ಆಕೆಗೆ ಸಸ್ಯಶಾಸ್ತ್ರ (Botany) ಮತ್ತು ಪ್ರಾಣಿಶಾಸ್ತ್ರ (Zoology) ಪ್ರಶ್ನೆ ಪತ್ರಿಕೆಗಳನ್ನು ನೋಡುವ ಸಂಪೂರ್ಣ ಅವಕಾಶವಿತ್ತು. ಇದರ ದುರುಪಯೋಗ ಪಡಿಸಿಕೊಂಡ ಆಕೆ, ಈ ಹಿಂದೆ (ಮೇ 14) ಬಂಧಿತಳಾಗಿದ್ದ ಮನೀಷಾ ವಾಗ್ಮಾರೆ ಮೂಲಕ ನೀಟ್ ಅಭ್ಯರ್ಥಿಗಳನ್ನು ಸಂಪರ್ಕಿಸಿದ್ದಾಳೆ.

ಇಲ್ಲಿದೆ ನೋಡಿ ಎಕ್ಸ್​​ ಪೋಸ್ಟ್​:

ಏಪ್ರಿಲ್ 2026 ರ ಅವಧಿಯಲ್ಲಿ ಮನೀಷಾ ಮಂಢಾರೆ ತನ್ನ ಪುಣೆಯ ನಿವಾಸದಲ್ಲಿ ಆಯ್ಕೆಯಾದ ಕೆಲವು ವಿದ್ಯಾರ್ಥಿಗಳಿಗೆ ವಿಶೇಷ ಕೋಚಿಂಗ್ ತರಗತಿಗಳನ್ನು ನಡೆಸಿದ್ದಾಳೆ. ಈ ತರಗತಿಗಳಲ್ಲಿ ಆಕೆ ನೀಟ್ ಪರೀಕ್ಷೆಗೆ ಬರಲಿದ್ದ ಬಯಾಲಜಿ ಪ್ರಶ್ನೆಗಳನ್ನು ಮುಂಚಿತವಾಗಿಯೇ ಬಹಿರಂಗಪಡಿಸಿ, ವಿದ್ಯಾರ್ಥಿಗಳ ನೋಟ್‌ಬುಕ್ ಮತ್ತು ಪಠ್ಯಪುಸ್ತಕಗಳಲ್ಲಿ ಗುರುತು ಮಾಡಿಸಿದ್ದಾಳೆ. ಮೇ 3 ರಂದು ನಡೆದ ನಿಜವಾದ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗೆ ಈ ಪ್ರಶ್ನೆಗಳು ಸಂಪೂರ್ಣವಾಗಿ ತಾಳೆಯಾಗಿರುವುದು ಸಿಬಿಐ ತನಿಖೆಯಲ್ಲಿ ದೃಢಪಟ್ಟಿದೆ.

ಇದನ್ನೂ ಓದಿ: ಗಾರ್ಡನ್ ಸಿಟಿ ಟು ಗಾರ್ಬೇಜ್ ಸಿಟಿ: ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?

ಕಳೆದ 24 ಗಂಟೆಗಳಲ್ಲಿ ಸಿಬಿಐ ದೇಶದ 6 ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದು, ಹಗರಣಕ್ಕೆ ಸಂಬಂಧಿಸಿದ ಲ್ಯಾಪ್‌ಟಾಪ್‌ಗಳು, ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು, ಮೊಬೈಲ್ ಫೋನ್‌ಗಳು ಮತ್ತು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಈವರೆಗೆ ದೆಹಲಿ, ಜೈಪುರ, ಗುರುಗ್ರಾಮ, ನಾಸಿಕ್, ಪುಣೆ ಮತ್ತು ಅಹ್ಲಿಯಾನಗರದಿಂದ ಒಟ್ಟು 9 ಆರೋಪಿಗಳನ್ನು ಬಂಧಿಸಲಾಗಿದೆ. ಇವರಲ್ಲಿ ಐವರನ್ನು ಈಗಾಗಲೇ 7 ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು, ಟ್ರಾನ್ಸಿಟ್ ರಿಮಾಂಡ್ ಮೂಲಕ ಉಳಿದ ಆರೋಪಿಗಳನ್ನು ದೆಹಲಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಕ್ರಮ ಕೈಗೊಳ್ಳಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಚ್ಛೇದನ ಸಿಗುವವರೆಗೆ ಸಿನಿಮಾಗಳಲ್ಲಿ ನಟಿಸಲ್ಲ: ಜಯಂ ರವಿ ಘೋಷಣೆ – Kannada News | Jayam Ravi says he will not act in movies until he divorce from wife

ಜಯಂ ರವಿ (Jayam Ravi), ತಮಿಳು ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರು. ತಮಿಳಿನ ‘ಜಯಂ’ ಸಿನಿಮಾ ಮೂಲಕ ನಟರಾದ ರವಿ ಮೋಹನ್, ಆ ನಂತರ ನಾಯಕರಾಗಿ ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನಿಡಿದ್ದಾರೆ. ಆದರೆ ಇತ್ತೀಚೆಗೆ ಜಯಂ ರವಿ ಅವರು ಸಿನಿಮಾಗಳ ಬದಲಿಗೆ ತಮ್ಮ ಖಾಸಗಿ ಬದುಕಿನಿಂದಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಜಯಂ ರವಿ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಗಾಯಕಿ ಕೆನೀಶಾ ಪ್ರಾನ್ಸಿಸ್​ ಜೊತೆ ಸಂಬಂಧದಲ್ಲಿದ್ದರು. ಇದೀಗ ರವಿ ಚೆನ್ನೈನಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಮುಖ ಘೋಷಣೆ ಮಾಡಿದ್ದಾರೆ. ‘ವಿಚ್ಛೇದನ ಸಿಗುವವರೆಗೆ ನಾನು ಸಿನಿಮಾಗಳಲ್ಲಿ ನಟಿಸುವುದಿಲ್ಲ’ ಎಂದಿದ್ದಾರೆ.

ರವಿ, ತಮ್ಮ ಪತ್ನಿ ಆರತಿ ಇಂದ ಪ್ರತ್ಯೇಕವಾಗಿದ್ದು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ರವಿ, ತಮ್ಮ ಮನೆಯನ್ನು ಸಹ ಪತ್ನಿಗೆ ಬಿಟ್ಟುಕೊಟ್ಟಿದ್ದರು. ಆದರೆ ಅವರಿಗೆ ಇನ್ನೂ ಅಧಿಕೃತವಾಗಿ ವಿಚ್ಛೇದನ ದೊರೆತಿಲ್ಲ. ಇದೀಗ ಸುದ್ದಿಗೋಷ್ಠಿ ನಡೆಸಿ ಭಾವುಕರಾಗಿ ಮಾತನಾಡಿದ ಅವರು, ‘ನನ್ನನ್ನು ಗುಲಾನಂತೆ ಇರಿಸಿಕೊಳ್ಳಲಾಗಿತ್ತು’ ಎಂದಿದ್ದಾರೆ. ಸುದ್ದಿಗೋಷ್ಠಿ ಸಂದರ್ಭದಲ್ಲಿ ಜೋರಾಗಿ ಕಿರುಚಾಡಿ, ಕೂಗಾಡಿ ಜಯಂ ರವಿ ಮಾತನಾಡಿದ್ದು, ಅದರ ವಿಡಿಯೋಗಳು ಇದೀಗ ವೈರಲ್ ಆಗಿವೆ.

‘ನನಗೆ ವಿಚ್ಛೇದನ ಸಿಗುವವರೆಗೆ ನಾನು ಸಿನಿಮಾಗಳಲ್ಲಿ ನಟಿಸಲ್ಲ. ನನಗೆ ಆಗಿರುವ ಅವಮಾನಗಳು, ಹಾನಿ ಆಗಿರುವ ನನ್ನ ಖಾಸಗಿ ಬದುಕು ಎಲ್ಲವನ್ನೂ ನಾನು ಸರಿ ಮಾಡಿಕೊಳ್ಳುವೆ. ಅಲ್ಲಿಯ ವರೆಗೆ ನನಗೆ ನಟಿಸಲು ಆಗುವುದಿಲ್ಲ. ನಾನು ಸುಮ್ಮನೆ ಕೂರುವುದೂ ಇಲ್ಲ. ಎಲ್ಲ ಸತ್ಯವನ್ನು ಹೊರಗೆ ತೆಗೆದುಕೊಂಡು ಬರುವೆ, 14 ವರ್ಷಗಳಿಂದ ಸುಮ್ಮನಿದ್ದೆ, ಆದರೆ ಇನ್ನು ಮುಂದೆ ನಾನು ಸುಮ್ಮನೆ ಕೂರುವುದಿಲ್ಲ’ ಎಂದು ರವಿ ಹೇಳಿದ್ದಾರೆ.

‘ಆನ್​​ಲೈನ್ ನಿಂದನೆ ಮಾಡುವವರ ವಿರುದ್ಧ ಹೋರಾಡುತ್ತೇನೆ. ನನ್ನ ಮಕ್ಕಳ ಮೇಲೆ ಪ್ರೀತಿ ಇಲ್ಲ ಎಂದು ಹೇಗೆ ಹೇಳುತ್ತೀರಿ, ಮಕ್ಕಳ ಫೀಸು 90 ಲಕ್ಷ ರೂಪಾಯಿ ಕಟ್ಟುತ್ತಿದ್ದೇನೆ. ಸಣ್ಣ ಮಗನ ಜೊತೆಗೆ ಪ್ರತಿದಿನ ಚೆಸ್ ಆಡುತ್ತಿದ್ದೆ. ಮಕ್ಕಳ ಮೇಲೆ ಪ್ರೀತಿ ಇಲ್ಲ ಎಂದು ಹೇಗೆ ಹೇಳುತ್ತಾರೆ. ಈಗ ನನ್ನ ಮಕ್ಕಳನ್ನೇ ನೋಡಲು ಬಿಡುತ್ತಿಲ್ಲ. ಶಾಲೆಗೆ ಬಾಡಿಗಾರ್ಡ್ ಜೊತೆಗೆ ಕಳಿಸುತ್ತಿದ್ದಾರೆ’ ಎಂದಿದ್ದಾರೆ.

ಇದನ್ನೂ ಓದಿ:ಮಾಜಿ ಪತ್ನಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ನಟ ಜಯಂ ರವಿ

‘ನಾನು ಇದ್ದಾಗ ನನ್ನನ್ನು ಗುಲಾಮನಂತೆ ನೋಡಿದರು. ಇರಬೇಕಾದರೆ ನೋಡಿಕೊಳ್ಳಲು ಆಗಲಿಲ್ಲ ಎಂದಮೇಲೆ, ಇಲ್ಲದೇ ಇದ್ದಾಗ ಮುಚ್ಚಿಕೊಂಡು ಇರಬೇಕು. ನಾನು ಸಾಕಷ್ಟು ನೊಂದಿದ್ದೀನಿ, ಈ ಆನ್​​ಲೈನ್ ನಿಂದನೆಯಿಂದ ಇನ್ನಷ್ಟು ನೋಯಿಸಬೇಡಿ. ಈಗಾಗಲೇ ಒಬ್ಬ ಮಹಿಳೆಯನ್ನು ಹಾಳು ಮಾಡಿದ್ದೀರಿ, ಚೆನ್ನೈನಿಂದ ದೂರ ಹೋಗುವಂತೆ ಮಾಡಿದ್ದೀರಿ (ಗೆಳತಿ ಕೆನೀಶಾ ಚೆನ್ನೈ ಬಿಟ್ಟು ಹೋದ ಬಗ್ಗೆ) ಇದನ್ನು ಮುಂದುವರೆಸಬೇಡಿ, ಮುಂದಿನ ದಿನಗಳಲ್ಲಿ ಸಾಕಷ್ಟು ಸತ್ಯಗಳು ಹೊರಗೆ ಬರಲಿವೆ’ ಎಂದು ರವಿ ಹೇಳಿದ್ದಾರೆ.

ರವಿ ಜೊತೆಗೆ ಆಪ್ತವಾಗಿದ್ದ ಗಾಯಕಿ ಕೆನೀಶಾ ಫ್ರಾನ್ಸಿಸ್ ಈಗ ರವಿ ಅವರ ಜೊತೆಗೆ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಕನ್ನಡಿಯ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿಕೊಂಡಿರುವ ಫೋಟೋ ಒಂದನ್ನು ಕೆನೀಶಾ ಹಂಚಿಕೊಂಡಿದ್ದಾರೆ. ಅದಕ್ಕೆ ಅವರು ಬರೆದಿರುವ ಶೀರ್ಷಿಕೆ ನೆಟ್ಟಿಗರ ಗಮನ ಸೆಳೆದಿದೆ. ಅವರು, ‘ವಿದಾಯ ಚೆನ್ನೈ, ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ಅಂದಹಾಗೆ, ಅವನು ಈಗ ಸಂಪೂರ್ಣವಾಗಿ ನಿಮ್ಮವನೇ’ ಎಂದು ಬರೆದುಕೊಂಡಿದ್ದಾರೆ. ಅದರ ಬೆನ್ನಲ್ಲೆ ಇದೀಗ ರವಿ, ಸುದ್ದಿಗೋಷ್ಠಿ ನಡೆಸಿ ಪರೋಕ್ಷವಾಗಿ ಪತ್ನಿಯ ವಿರುದ್ಧ ಟ್ರೋಲಿಗರ ವಿರುದ್ಧ ಕಿಡಿ ಕಾರಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 3:18 pm, Sat, 16 May 26

Source link

Video: ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ – Kannada News | Brazil Goiania: Car Plows into Pedestrians; Child Injured, Driver Beaten, CCTV Viral

ಬ್ರೆಜಿಲ್‌ನ ಗೋಯಾನಿಯಾದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಮದ್ಯದ ಅಂಗಡಿಯ ಮುಂಭಾಗದ ಫುಟ್‌ಪಾತ್‌ಗೆ ನುಗ್ಗಿದ ಪರಿಣಾಮ, ಮಗು ಸೇರಿದಂತೆ ಕನಿಷ್ಠ ಮೂವರು ಭೀಕರವಾಗಿ ಗಾಯಗೊಂಡಿದ್ದಾರೆ. ಬ್ರೂನೋ ಕುನ್ಹಾ ಗೊಂಟಿಜೊ (45) ಎಂಬಾತ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು ಫುಟ್‌ಪಾತ್ ಮೇಲಿದ್ದ ಮ್ಯಾಥ್ಯೂಸ್ (19), ಪಾಮೆಲ್ಲಾ (20) ಮತ್ತು ಆಕೆಯ ಮಗುವಿಗೆ ಬಲವಾಗಿ ಡಿಕ್ಕಿ ಹೊಡೆದಿದ್ದು, ತಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಅಪಘಾತದಿಂದ ರೊಚ್ಚಿಗೆದ್ದ ಸ್ಥಳೀಯರು ಚಾಲಕನಿಗೆ ಮನಬಂದಂತೆ ಥಳಿಸಿದ್ದು, ಆತನ ಸ್ಥಿತಿಯೂ ಗಂಭೀರವಾಗಿದೆ. ಘಟನೆಗೆ ಸಂಬಂಧಿಸಿದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಇದನ್ನೂ ಓದಿ: ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸೆಲ್ಫಿ ಕ್ಲಿಕ್ ಮಾಡುವಾಗ ‘ಪೀಸ್’ ಸೈನ್ ತೋರಿಸ್ತೀರಾ? ಹುಷಾರ್! ನಿಮ್ಮ ಬೆರಳಚ್ಚು ಕದ್ದು ಬ್ಯಾಂಕ್ ಖಾತೆ ಖಾಲಿ ಮಾಡ್ತಾರೆ ಖದೀಮರು! – Kannada News | AI Cyber Threat: How Flashing a Peace Sign in Selfies Can Risk Your Fingerprint Data

ಸೆಲ್ಫಿ ಕ್ಲಿಕ್ ಮಾಡುವಾಗ ‘ಪೀಸ್’ ಸೈನ್ ತೋರಿಸ್ತೀರಾ? ಹುಷಾರ್!

ಬೆಂಗಳೂರು, ಮೇ 16: ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಅಥವಾ ಸೆಲ್ಫಿ ಪೋಸ್ಟ್ ಮಾಡುವಾಗ ಸಾಮಾನ್ಯವಾಗಿ ‘ಪೀಸ್’ ಸೈನ್ ತೋರಿಸುವ ಅಭ್ಯಾಸ ಹಲವರಿಗೆ ಇರುತ್ತದೆ. ನಿಮ್ಮ ಈ ಒಂದು ಸಣ್ಣ ಸ್ಟೈಲ್ ನಿಮ್ಮ ಇಡೀ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಲು ಹ್ಯಾಕರ್‌ಗಳಿಗೆ (Hackers) ದಾರಿ ಮಾಡಿಕೊಡಬಹುದು. ಹೌದು, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ ನಿಮ್ಮ ಫೋಟೋಗಳಿಂದಲೇ ಬೆರಳಚ್ಚುಗಳನ್ನು (Fingerprints) ಕದಿಯುವ ಹೊಸ ವಂಚನೆ ಜಾಲ ಈಗ ಜಾಗತಿಕವಾಗಿ ಆತಂಕ ಮೂಡಿಸಿದೆ.

ಮುಖ್ಯಾಂಶಗಳು

  • ಫೋಟೋಗಳಲ್ಲಿ ಪೀಸ್ ಸೈನ್ ತೋರಿಸುವುದರಿಂದ ಬೆರಳಚ್ಚು ಕದಿಯುವ ಹೊಸ ಎಐ ಆತಂಕ.
  • ಗೂಗಲ್ ವರದಿ ಪ್ರಕಾರ ಎಐ ಆಧಾರಿತ ಹ್ಯಾಕಿಂಗ್ ಜಾಗತಿಕ ಸೈಬರ್ ದಾಳಿಯಾಗಿ ಮಾರ್ಪಾಡು.
  • ದುರ್ಬಳಕೆ ತಡೆಯಲು ಶಕ್ತಿಶಾಲಿ ಮೈಥೋಸ್ ಎಐ ಬಿಡುಗಡೆ ನಿರಾಕರಿಸಿದ ಆಂಥ್ರೊಪಿಕ್ ಸಂಸ್ಥೆ.

ಚೀನಾ ರಿಯಾಲಿಟಿ ಶೋನಲ್ಲಿ ಬಯಲಾಯ್ತು ಸತ್ಯ!

ಕಳೆದ ತಿಂಗಳು ಚೀನಾದ ಉದ್ಯೋಗ ಆಧಾರಿತ ರಿಯಾಲಿಟಿ ಶೋ ಒಂದರಲ್ಲಿ ಭದ್ರತಾ ತಜ್ಞ ಲೀ ಚಾಂಗ್ ಎಂಬುವವರು ಈ ಆಘಾತಕಾರಿ ಸತ್ಯವನ್ನು ಜಗತ್ತಿನ ಮುಂದೆ ಇಟ್ಟಿದ್ದಾರೆ. ಸೆಲೆಬ್ರಿಟಿ ಒಬ್ಬರ ಸಾಮಾನ್ಯ ಸೆಲ್ಫಿ ಫೋಟೋವನ್ನು ಬಳಸಿ, ಅದರಲ್ಲಿರುವ ‘ಪೀಸ್’ ಸೈನ್ ಮೂಲಕ ಬೆರಳಚ್ಚಿನ ಮಾಹಿತಿಯನ್ನು ಹೇಗೆ ಸುಲಭವಾಗಿ ಕದಿಯಬಹುದು ಎಂಬುದನ್ನು ಅವರು ಲೈವ್ ಆಗಿ ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ‘ಸೌತ್ ಚೀನಾ ಮಾರ್ನಿಂಗ್ ಪೋಸ್ಟ್’ ವರದಿ ಮಾಡಿದೆ.

ಕ್ಯಾಮೆರಾ ಲೆನ್ಸ್‌ನಿಂದ ಸುಮಾರು 1.5 ಮೀಟರ್ (ಸುಮಾರು 5 ಅಡಿ) ಒಳಗೆ ಬೆರಳಿನ ಮುಂಭಾಗದ ಭಾಗವು ನೇರವಾಗಿ ಕಾಣಿಸುವಂತೆ ಫೋಟೋ ತೆಗೆದರೆ, ಅದರಿಂದ ಅತ್ಯಂತ ಸ್ಪಷ್ಟವಾಗಿ ಫಿಂಗರ್‌ಪ್ರಿಂಟ್ ಡೇಟಾವನ್ನು ಪಡೆದುಕೊಳ್ಳಬಹುದು. ಇನ್ನು 1.5 ರಿಂದ 3 ಮೀಟರ್ ದೂರದಿಂದ ತೆಗೆದ ಫೋಟೋಗಳಿಂದಲೂ ಅರ್ಧದಷ್ಟು ಬೆರಳಚ್ಚಿನ ವಿವರಗಳನ್ನು ಎಐ ತಂತ್ರಜ್ಞಾನದ ಮೂಲಕ ಸುಲಭವಾಗಿ ಮರುಸೃಷ್ಟಿಸಬಹುದು ಎಂದು ಲಿ ಚಾಂಗ್ ಎಚ್ಚರಿಸಿದ್ದಾರೆ. ಬರಿಗಣ್ಣಿಗೆ ಮಸುಕಾಗಿ ಕಾಣುವ ಫೋಟೋಗಳನ್ನು ಎಐ ಪರಿಕರಗಳ (AI Tools) ಮೂಲಕ ಶಾರ್ಪ್ ಮಾಡಿ, ಹ್ಯಾಕರ್‌ಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಫಿಂಗರ್‌ಪ್ರಿಂಟ್ ಮತ್ತು ಫೇಸ್ ಲಾಕ್‌ನಂತಹ ಬಯೋಮೆಟ್ರಿಕ್ ಡೇಟಾವನ್ನು ಬದಲಾಯಿಸಲು ಸಾಧ್ಯವಿಲ್ಲದ ಕಾರಣ, ಇದು ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು.

ಕೈಗಾರಿಕಾ ಮಟ್ಟದ ದಂಧೆಯಾದ ಎಐ ಹ್ಯಾಕಿಂಗ್!

ಗೂಗಲ್‌ನ ಥ್ರೆಟ್ ಇಂಟೆಲಿಜೆನ್ಸ್ ಗ್ರೂಪ್ (Google’s Threat Intelligence Group) ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಕೇವಲ ಮೂರೇ ತಿಂಗಳಲ್ಲಿ ಎಐ ಆಧಾರಿತ ಹ್ಯಾಕಿಂಗ್ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಚೀನಾ, ಉತ್ತರ ಕೊರಿಯಾ ಮತ್ತು ರಷ್ಯಾದಂತಹ ದೇಶಗಳ ಸೈಬರ್ ಅಪರಾಧಿಗಳು ಹಾಗೂ ಸರ್ಕಾರಿ ಪ್ರಾಯೋಜಿತ ಹ್ಯಾಕರ್‌ಗಳು ಮುಕ್ತವಾಗಿ ಸಿಗುವ ಜೆಮಿನಿ (Gemini), ಕ್ಲೋಡ್ (Claude) ಮತ್ತು ಓಪನ್ ಏಐ (OpenAI) ನಂತಹ ಜನಪ್ರಿಯ ಎಐ ಮಾಡೆಲ್‌ಗಳನ್ನು ಬಳಸಿಕೊಂಡು ಅಕ್ರಮ ಎಸಗುತ್ತಿದ್ದಾರೆ.

ಹ್ಯಾಕರ್‌ಗಳು ತಮ್ಮ ದಾಳಿಯ ವೇಗ ಮತ್ತು ತಾಂತ್ರಿಕತೆಯನ್ನು ಹೆಚ್ಚಿಸಲು ಎಐ ಬಳಸುತ್ತಿದ್ದಾರೆ. ಇದರಿಂದಾಗಿ ಅವರು ಹೆಚ್ಚು ಅಪಾಯಕಾರಿ ಮಾಲ್‌ವೇರ್ (Malware) ಸೃಷ್ಟಿಸುತ್ತಿದ್ದಾರೆ ಎಂದು ಗೂಗಲ್ ಗ್ರೂಪ್‌ನ ಮುಖ್ಯ ವಿಶ್ಲೇಷಕ ಜಾನ್ ಹಲ್ಟ್‌ಕ್ವಿಸ್ಟ್ ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ ಕ್ಯೂಆರ್ ಕೋಡ್ ಮೆನು ಬಳಸಿ ಫುಡ್​ ಆರ್ಡರ್​ ಮಾಡಿದ ಯುವತಿ; ಮಧ್ಯರಾತ್ರಿ ರೆಸ್ಟೋರೆಂಟ್ ಸಿಬ್ಬಂದಿಯಿಂದ ಮೆಸೇಜ್​ ಮೂಲಕ ಕಿರುಕುಳ!

ಬಿಡುಗಡೆಯಾಗದ ಅತ್ಯಂತ ಶಕ್ತಿಶಾಲಿ ‘ಮೈಥೋಸ್’ (Mythos) ಎಐ!

ಎಐ ತಂತ್ರಜ್ಞಾನ ಎಷ್ಟು ಅಪಾಯಕಾರಿಯಾಗಿ ಬೆಳೆಯುತ್ತಿದೆ ಎಂದರೆ, ಪ್ರಮುಖ ತಂತ್ರಜ್ಞಾನ ಸಂಸ್ಥೆಯಾದ ಆಂಥ್ರೊಪಿಕ್ (Anthropic) ಕಳೆದ ತಿಂಗಳು ತನ್ನ ಹೊಸ ಎಐ ಮಾಡೆಲ್ ‘ಮೈಥೋಸ್’ ಅನ್ನು ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡಲು ನಿರಾಕರಿಸಿದೆ. ಈ ತಂತ್ರಜ್ಞಾನವು ದುಷ್ಟರ ಕೈ ಸೇರಿದರೆ ಜಾಗತಿಕ ಭದ್ರತೆ, ಹಣಕಾಸು ವ್ಯವಸ್ಥೆ ಮತ್ತು ಸರ್ಕಾರಗಳಿಗೇ ನೇರ ಮುಳುವಾಗಬಹುದು ಎಂದು ಕಂಪನಿ ಎಚ್ಚರಿಸಿದೆ. ಹಾಗಾಗಿ ಇನ್ಮುಂದೆ ಸಾಮಾಜಿಕ ಜಾಲತಾಣಗಳಲ್ಲಿ ಹೈ-ರೆಸಲ್ಯೂಶನ್ ಫೋಟೋಗಳನ್ನು ಹಾಕುವ ಮುನ್ನ ಜಾಗ್ರತೆ ವಹಿಸಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:58 pm, Sat, 16 May 26

Source link

ಗಾರ್ಡನ್ ಸಿಟಿ ಟು ಗಾರ್ಬೇಜ್ ಸಿಟಿ: ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ? – Kannada News | J.P. Park Flyover Underpass: Bengaluru’s New Dump Yard Sparks Resident Anger

ಬೆಂಗಳೂರು, ಮೇ,16: ಸಿಲಿಕಾನ್ ಸಿಟಿ ಬೆಂಗಳೂರಿನ ಜೆ.ಪಿ. ಪಾರ್ಕ್ ಹಿಂಭಾಗದಲ್ಲಿರುವ ಎಂಇಎಸ್ (MES) ರಸ್ತೆ ಮೇಲ್ಸೇತುವೆಯ ಕೆಳಭಾಗವು ಪ್ರಸ್ತುತ ಅನಧಿಕೃತ ಕಸದ ತೊಟ್ಟಿಯಾಗಿ (Black Spot) ಮಾರ್ಪಟ್ಟಿದೆ. ನಾಗರಿಕ ಪ್ರಜ್ಞೆಯ ಕೊರತೆ ಮತ್ತು GBA ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಈ ಪ್ರದೇಶವೇ ಸಾಕ್ಷಿಯಾಗಿದ್ದು, ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಕೊಳೆತ ಆಹಾರದ ಪೊಟ್ಟಣಗಳು ಮತ್ತು ಇತರ ಕಸದ ರಾಶಿಯನ್ನು ನೋಡಿದರೆ ಇದು ಕೇವಲ ಒಂದು ದಿನದಲ್ಲಿ ಸೃಷ್ಟಿಯಾದದ್ದಲ್ಲ ಎಂಬುದು ಸ್ಪಷ್ಟವಾಗುತ್ತದೆ. ಯಾವುದೇ ಕಾನೂನಿನ ಭಯವಿಲ್ಲದೆ ಬೇಜವಾಬ್ದಾರಿ ನಾಗರಿಕರು ಮತ್ತು ಸ್ಥಳೀಯ ವ್ಯಾಪಾರಿಗಳು ಈ ಸಾರ್ವಜನಿಕ ಜಾಗವನ್ನು ಕಸ ಸುರಿಯುವ ಕಸದ ತೊಟ್ಟಿಯನ್ನಾಗಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ಇಡೀ ಪ್ರದೇಶವು ದುರ್ನಾತ ಬೀರುತ್ತಿದ್ದು, ಸಾರ್ವಜನಿಕರ ಆರೋಗ್ಯಕ್ಕೆ ಭಾರಿ ಕುತ್ತು ತಂದಿಟ್ಟಿದೆ. ಈ ಬಗ್ಗೆ ವಿಡಿಯೋವೊಂದನ್ನು @KarnatakaPortfolio ಎಂಬ ಎಕ್ಸ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:52 pm, Sat, 16 May 26

Source link

Exit mobile version