ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಹೊಸ ರೂಲ್ಸ್: 9ನೇ ತರಗತಿಯಿಂದ 3 ಭಾಷೆಗಳ ಅಧ್ಯಯನ ಕಡ್ಡಾಯ; ಕನಿಷ್ಠ 2 ಭಾರತೀಯ ಭಾಷೆಗಳಿರಬೇಕು! – Kannada News | NEP 2020 Impact: CBSE Makes 3 Languages Compulsory for 9th Grade Students

ದೆಹಲಿ, ಮೇ.16: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯು (CBSE) ತನ್ನ ಪಠ್ಯಕ್ರಮದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಮತ್ತು ಶಾಲಾ ಶಿಕ್ಷಣದ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (NCF-SE) 2023 ರ ಮಾರ್ಗಸೂಚಿಗಳಿಗೆ ಅನುಗುಣವಾಗಿ, ಜುಲೈ 1, 2026 ರಿಂದ ಆರಂಭವಾಗುವ ಶೈಕ್ಷಣಿಕ ವರ್ಷದಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಮೂರು ಭಾಷೆಗಳ (R1, R2, R3) ಅಧ್ಯಯನವನ್ನು ಕಡ್ಡಾಯಗೊಳಿಸಿದೆ. ಇದೀಗ ಈ ನೀತಿ ಜಾರಿಯಿಂದ ಕರ್ನಾಟಕದಲ್ಲೂ ಕೂಡ ಮಕ್ಕಳು ಕನ್ನಡ ಕಲಿಯುವ ಅವಕಾಶ ಇದೆ. ಈ ಮೂಲಕ ಸಿಬಿಎಸ್​​​​​ಇ ಮಕ್ಕಳಿಗೂ ಸುಲಭವಾಗಿ ಕನ್ನಡ ಕಲಿಯಬಹುದು.

ವಿದ್ಯಾರ್ಥಿಗಳು ಕಲಿಯುವ ಒಟ್ಟು ಮೂರು ಭಾಷೆಗಳಲ್ಲಿ ಕನಿಷ್ಠ ಎರಡು ಭಾಷೆಗಳು ಕಡ್ಡಾಯವಾಗಿ ಭಾರತೀಯ ಮೂಲದ ಸ್ಥಳೀಯ ಭಾಷೆಗಳಾಗಿರಬೇಕು. 9ನೇ ತರಗತಿಯಿಂದ ಮೂರು ಭಾಷೆಗಳ ಕಲಿಕೆ ಕಡ್ಡಾಯವಾಗಿದ್ದರೂ, 10ನೇ ತರಗತಿಯಲ್ಲಿ ಮೂರನೇ ಭಾಷೆಗೆ (R3) ಯಾವುದೇ ಪ್ರಮುಖ ಬೋರ್ಡ್ ಪರೀಕ್ಷೆ ಇರುವುದಿಲ್ಲ ಎಂದು ಸಿಬಿಎಸ್‌ಇ ಸ್ಪಷ್ಟಪಡಿಸಿದೆ. ಇದು ವಿದ್ಯಾರ್ಥಿಗಳ ಮೇಲಿನ ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡಲಿದೆ.

ಇದನ್ನೂ ಓದಿ: 61ನೇ ವಯಸ್ಸಿನಲ್ಲಿ 10ನೇ ತರಗತಿ ಪಾಸ್; 650ಕ್ಕೆ 500 ಅಂಕ ಪಡೆದ ಮಹಿಳೆ

ಮೇ 15 ರಂದು ಹೊರಡಿಸಲಾದ ಅಧಿಕೃತ ಸುತ್ತೋಲೆಯಲ್ಲಿ, ಬಹುಭಾಷಾ ಜ್ಞಾನ ಮತ್ತು ಭಾರತೀಯ ಭಾಷೆಗಳ ಸಂರಕ್ಷಣೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಂಡಳಿ ತಿಳಿಸಿದೆ. ಈ ಹೊಸ ಬದಲಾವಣೆಯು ಸಿಬಿಎಸ್‌ಇ ಶಾಲೆಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಯೋಜನೆಯನ್ನು ಮರುರೂಪಿಸಿಕೊಳ್ಳುವಂತೆ ಮಾಡಲಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವೃತ್ತಿಯಲ್ಲಿ ಬ್ಯೂಟಿಷಿಯನ್, ಗಂಡ ದಂತವೈದ್ಯ; ನೀಟ್ ಹಗರಣದಲ್ಲಿ ಸಿಕ್ಕಿಬಿದ್ದ ಮನಿಷಾ ಬಗ್ಗೆ ನಿಮಗೆಷ್ಟು ಗೊತ್ತು? – Kannada News | Who is Manisha Sanjay Waghmare Pune beautician an alleged agent in NEET UG 2026 paper leak case

ನವದೆಹಲಿ, ಮೇ 16: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಈಗಾಗಲೇ ಹಲವು ಆರೋಪಿಗಳನ್ನು ಕೇಂದ್ರ ತನಿಖಾ ದಳ (ಸಿಬಿಐ) ಬಂಧಿಸಿದೆ. ದೇಶದ ಅತಿದೊಡ್ಡ ವೈದ್ಯಕೀಯ ಪರೀಕ್ಷೆ ನೀಟ್ ಯುಜಿ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯನ್ನು ಸಿಬಿಐ ಆರಂಭಿಸಿದೆ. ಈ ಪ್ರಕರಣದ ಬೇರುಗಳನ್ನು ಸಿಬಿಐ ಅಗೆಯಲು ಪ್ರಾರಂಭಿಸಿದೆ. ಈ ಪ್ರಕರಣದ ಜಾಲ ರಾಜಸ್ಥಾನದಿಂದ ಮಹಾರಾಷ್ಟ್ರಕ್ಕೆ ಹರಡಿದೆ. ಮಹಾರಾಷ್ಟ್ರದಲ್ಲಿ ಸಿಬಿಐ ಮತ್ತೋರ್ವ ಮಾಸ್ಟರ್ ಮೈಂಡ್ ಅನ್ನು ಬಂಧಿಸಿದೆ. ಮಹಿಳೆಯಾಗಿರುವ ಈ ಆರೋಪಿಯ ಹೈ ಪ್ರೊಫೈಲ್ ಜೀವನಶೈಲಿ ಮತ್ತು ಬ್ಯಾಂಕ್ ವಹಿವಾಟುಗಳನ್ನು ನೋಡಿ ಸಿಬಿಐ ಕೂಡ ಆಘಾತಕ್ಕೊಳಗಾಗಿದೆ.

ಸಿಬಿಐನಿಂದ ಬಂಧಿತರಾದ ಈ ಮಹಿಳೆ ಆರ್ಥಿಕವಾಗಿ ಸ್ಥಿತಿವಂತ ಕುಟುಂಬದ ಹಿನ್ನೆಲೆಯಿಂದಲೇ ಬಂದವರು. ಅವರಿಗೆ ಹಣಕಾಸಿನ ತೊಂದರೆಯೇನೂ ಇರಲಿಲ್ಲ. ಆದರೂ ಲಕ್ಷಾಂತರ ರೂ. ಹಣದಾಸೆಗೆ ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಿ ವಿದ್ಯಾರ್ಥಿಗಳ ಜೀವನದಲ್ಲಿ ಆಟವಾಡಿದ್ದಾರೆ. ಈ ಮಹಿಳೆಯ ಹೆಸರು ಮನೀಷಾ ವಾಘ್ಮರೆ. ಮನಿಷಾ ವೃತ್ತಿಯಲ್ಲಿ ಬ್ಯೂಟಿಷಿಯನ್. ಅವರು ಪುಣೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಕೂಡ ನಡೆಸುತ್ತಿದ್ದರು. ವಿಶೇಷವೆಂದರೆ ಈ ಮಹಿಳೆಯ ಪತಿ ದಂತವೈದ್ಯರು. ಅವರು ಪುಣೆಯಲ್ಲಿ ತಮ್ಮದೇ ಆದ ಕ್ಲಿನಿಕ್ ಹೊಂದಿದ್ದಾರೆ.

ಇದನ್ನೂ ಓದಿ: ನೀಟ್ ಹಗರಣಕ್ಕೆ ಬಿಗ್ ಟ್ವಿಸ್ಟ್: ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದ ಎನ್‌ಟಿಎ ತಜ್ಞೆ ಮನೀಷಾ ಮಂಢಾರೆ ಸಿಬಿಐ ಬಲೆಗೆ!

ಮೇ 3ರಂದು ನಡೆದ ನೀಟ್ ಪರೀಕ್ಷೆಯ ಮೊದಲು ಮತ್ತು ನಂತರ ಖೈರ್ನರ್ ಎಂಬ ಆರೋಪಿಯು ಯಶ್ ಯಾದವ್ ಎಂಬ ವಿದ್ಯಾರ್ಥಿಗೆ ನೀಟ್ ಪ್ರಶ್ನೆಪತ್ರಿಕೆಯನ್ನು ನೀಡಿದಾಗ ವಾಘ್ಮರೆ ಮತ್ತು ಇನ್ನೋರ್ವ ಆರೋಪಿ ಲೋಖಂಡೆ ಪರಸ್ಪರ ಸಂಪರ್ಕಕ್ಕೆ ಬಂದರು. ಅದರ ನಂತರ, ರಾಜಸ್ಥಾನದ ಬಿವಾಲ್ ಕುಟುಂಬದ ಸದಸ್ಯರಿಗೆ ಪ್ರಶ್ನೆಪತ್ರಿಕೆಯನ್ನು ನೀಡಲಾಯಿತು.

ಮನಿಷಾ ವಾಘ್ಮರೆ ಅವರ ಹಿನ್ನೆಲೆಯಲ್ಲಿ ಪರಿಶೀಲಿಸಿದ ನಂತರ, ಆಕೆಯ ಖಾತೆಗೆ ದೊಡ್ಡ ಪ್ರಮಾಣದ ಹಣ ಬರುತ್ತಿರುವುದು ಕಂಡುಬಂದಿದೆ. ನೀಟ್ ಪರೀಕ್ಷೆಗೆ ಮೊದಲು ಮತ್ತು ನಂತರ, ದೇಶದ ವಿವಿಧ ಭಾಗಗಳಿಂದ ಇದ್ದಕ್ಕಿದ್ದಂತೆ ದೊಡ್ಡ ಪ್ರಮಾಣದ ಹಣ ಅವರ ಖಾತೆಗೆ ಬಂದಿತ್ತು. ಆರಂಭಿಕ ತನಿಖೆಯಲ್ಲಿ ಸಿಬಿಐ 20 ಲಕ್ಷ ರೂ.ಗಳ ವಹಿವಾಟುಗಳನ್ನು ಕಂಡುಹಿಡಿದಿದೆ. ಮೂಲಗಳ ಪ್ರಕಾರ, ಮನಿಷಾ ವಾಘ್ಮರೆ ಅವರ ಖಾತೆಗೆ ಹಣ ಕಳುಹಿಸಿದ ಎಲ್ಲಾ ವಿದ್ಯಾರ್ಥಿಗಳು ಮತ್ತು ಅವರ ಸಂಬಂಧಿಕರು ಇತರ ರಾಜ್ಯಗಳವರು.

ಇದನ್ನೂ ಓದಿ: ಕೊನೆಗೂ ಸಿಕ್ಕಿಬಿದ್ದ ನೀಟ್ ಹಗರಣದ ಕಿಂಗ್​ಪಿನ್; ಕೋಚಿಂಗ್​ ಕ್ಲಾಸ್​ನಲ್ಲಿ ಪ್ರಶ್ನೆ ಪತ್ರಿಕೆ ಹಂಚಿದ್ದ ಪ್ರೊಫೆಸರ್ ಬಂಧನ

ಈ ಹಣವು ಇತರ ರಾಜ್ಯಗಳಿಂದ ಮನಿಷಾಳ ಖಾತೆಗೆ ಬಂದಿದೆ. ಅಂತಹ 21 ಖಾತೆಗಳ ಬಗ್ಗೆ ಮಾಹಿತಿ ಬೆಳಕಿಗೆ ಬಂದಿದೆ. ಅದಕ್ಕಾಗಿಯೇ ಈ ಎಲ್ಲಾ ಖಾತೆಗಳು ಈಗ ಸಿಬಿಐನ ಕಣ್ಗಾವಲಿನಲ್ಲಿವೆ. ಪ್ರಶ್ನೆಪತ್ರಿಕೆ ಸೋರಿಕೆಯ ವಿಷಯ ಹೊರಬೀಳುತ್ತಿದ್ದಂತೆ ಹೆದರಿದ ಮನಿಷಾ ವಾಘ್ಮರೆ ಮತ್ತು ಲೋಖಂಡೆ ತಮ್ಮ ಮೊಬೈಲ್‌ಗಳಿಂದ ಮೆಸೇಜ್​ಗಳು ಮತ್ತು ಚಾಟ್‌ಗಳನ್ನು ಡಿಲೀಟ್ ಮಾಡಿದ್ದರು. ಆದರೆ ಸಿಬಿಐ ಮನಿಷಾ ಮತ್ತು ಇತರ ಆರೋಪಿಗಳ ಮೊಬೈಲ್‌ಗಳನ್ನು ವಶಪಡಿಸಿಕೊಂಡಿತು. ಡೇಟಾ ಮರುಪಡೆಯುವಿಕೆಗಾಗಿ ಈ ಮೊಬೈಲ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಎಲ್ಲಾ ಆರೋಪಿಗಳು ಸಿಂಡಿಕೇಟ್ ರೀತಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಸಿಬಿಐ ತನಿಖೆಯಿಂದ ತಿಳಿದುಬಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

KKR vs GT IPL 2026 Live Score: ಟಾಸ್ ಗೆದ್ದ ಗುಜರಾತ್ ಬೌಲಿಂಗ್ ಆಯ್ಕೆ – Kannada News | Kolkata Knight Riders vs Gujarat Titans IPL 2026 Live Cricket Score KKR vs GT Match on 16th May latest news in Kannada

ಐಪಿಎಲ್ 2026 ರ 60 ನೇ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯುತ್ತಿದೆ. ಉಭಯ ತಂಡಗಳು ಈ ಆವೃತ್ತಿಯಲ್ಲಿ ಪರಸ್ಪರ ಮುಖಾಮುಖಿಯಾಗುತ್ತಿರುವುದು ಎರಡನೇ ಬಾರಿ. ಕೆಕೆಆರ್ ಪ್ಲೇಆಫ್ ತಲುಪುವುದು ಕಷ್ಟ. ಆದಾಗ್ಯೂ, ಪ್ಲೇಆಫ್‌ನಲ್ಲಿ ಕೆಕೆಆರ್‌ನ ಸವಾಲು ಉಳಿದಿದೆ. ಗುಜರಾತ್ ಪಂದ್ಯವನ್ನು ಗೆದ್ದು ಅಧಿಕೃತವಾಗಿ ಪ್ಲೇಆಫ್‌ಗೆ ಟಿಕೆಟ್ ಪಡೆಯುವ ಅವಕಾಶವಿದೆ. ಆದ್ದರಿಂದ, ಗುಜರಾತ್ ತನ್ನ ಒಟ್ಟು ಒಂಬತ್ತನೇ ಪಂದ್ಯವನ್ನು ಗೆಲ್ಲುವ ಮೂಲಕ ಪ್ಲೇಆಫ್ ತಲುಪಿದ ಮೊದಲ ತಂಡವಾಗುತ್ತದೆಯೇ ಅಥವಾ ಕೆಕೆಆರ್ ಕೊನೆಯ ಸೋಲಿಗೆ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತದೆಯೇ? ಎಂಬುದು ಪಂದ್ಯದ ಬಳಿಕ ಗೊತ್ತಾಗಲಿದೆ.

Source link

IPL 2026: ಐದಾರು ಕ್ಯಾಮೆರಾ, ಜೊತೆಗೆ ರೋಬೋ ಶ್ವಾನ; ಖಾಸಗಿತನದ ಹರಣಕ್ಕೆ ಕೊಹ್ಲಿ ಬೇಸರ

ಆರ್​​ಸಿಬಿಯ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ, ಐಪಿಎಲ್‌ನಲ್ಲಿ ಬಳಸಲಾಗುತ್ತಿರುವ ರೋಬೋ ಶ್ವಾನ್ ಚಂಪಕ್ ಮೇಲೆ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಚಂಪಕ್​ನಿಂದ ನಮ್ಮ ಖಾಸಗಿತನಕ್ಕೆ ಭಂಗ ತಂದಿದೆ ಎಂಬುದು ಕೊಹ್ಲಿ ಆರೋಪವಾಗಿದೆ. ಆರ್‌ಸಿಬಿ ಪಾಡ್‌ಕ್ಯಾಸ್ಟ್‌ನಲ್ಲಿ ಮಾಯಂತಿ ಲ್ಯಾಂಗರ್ ಅವರೊಂದಿಗೆ ಮಾತನಾಡಿದ ವಿರಾಟ್, ಅಭ್ಯಾಸದ ಸಮಯದಲ್ಲಿ ನಿರಂತರವಾಗಿ ಕ್ಯಾಮೆರಾಗಳು ತಮ್ಮನ್ನು ಫಾಲೋ ಮಾಡುವುದು ಆಟಗಾರರಿಗೆ ತುಂಬಾ ಕಸಿವಿಸಿಯನ್ನುಂಟು ಮಾಡುತ್ತಿದೆ ಎಂದಿರುವ ಕೊಹ್ಲಿ, ಬಿಸಿಸಿಐನ ರೋಬೋ-ನಾಯಿ ಚಂಪಕ್ ತನ್ನ ವೈಯಕ್ತಿಕ ಕ್ಷಣಗಳನ್ನು ರೆಕಾರ್ಡ್ ಮಾಡುತ್ತಿದ್ದ ಘಟನೆಯನ್ನು ಸಹ ನೆನಪಿಸಿಕೊಂಡಿದ್ದಾರೆ.

ಲಕ್ನೋ ಸೂಪರ್​ಜೈಂಟ್ಸ್ ವಿರುದ್ಧದ ಪಂದ್ಯದ ನಡುವೆ ನಡೆದ ಘಟನೆಯನ್ನು ವಿವರಿಸಿರುವ ಕೊಹ್ಲಿ, ‘ನಾನು ನನ್ನ ಸ್ನೇಹಿತ ಕೇನ್ ವಿಲಿಯಮ್ಸನ್ ಜೊತೆ ಗಂಭೀರ ವಿಷಯದ ಬಗ್ಗೆ ಮಾತನಾಡುತ್ತಿದ್ದಾಗ, ರೋಬೋ ಶ್ವಾನ ಚಂಪಕ್ ನಮ್ಮ ಹತ್ತಿರ ಬಂದು ನನ್ನತ್ತ ಕೈ ಬೀಸಲಾರಂಭಿಸಿತು. ಇದು ನಮ್ಮ ಖಾಸಗಿತನಕ್ಕೆ ಧಕ್ಕೆ ತಂದಿತು. ಕೂಡಲೇ ನಾನು ರೋಬೋ ಶ್ವಾನವನ್ನು ನಿಯಂತ್ರಿಸುವ ವ್ಯಕ್ತಿಗೆ ದಯವಿಟ್ಟು ರೋಬೋ ಶ್ವಾನವನ್ನು ನಮ್ಮ ಬಳಿಯಿಂದ ದೂರಕ್ಕೆ ಕರೆದುಕೊಂಡು ಹೋಗಿ, ನಮ್ಮಿಬ್ಬರಿಗೆ ಸಮಾಧಾನದಿಂದ ಮಾತನಾಡಲು ಬಿಡಿ’ಎಂದು ಹೇಳಿದೆ ಎಂದಿದ್ದಾರೆ.

ಮುಂದುವರೆದು ಮಾತನಾಡಿರುವ ಕೊಹ್ಲಿ , ‘ನೀವು ಅಭ್ಯಾಸಕ್ಕೆ ಹೋದಾಗ, ಆರು ಕ್ಯಾಮೆರಾಗಳು ನಿಮ್ಮನ್ನು ಹಿಂಬಾಲಿಸುತ್ತವೆ. ಇದು ಸರಿಯಲ್ಲ. ಆಟಗಾರರು ತಮ್ಮ ಆಟದ ಮೇಲೆ ಶಾಂತಿಯಿಂದ ಕೆಲಸ ಮಾಡುವ ಸ್ವಾತಂತ್ರ್ಯ ಹೊಂದಿರಬೇಕು. ಎಲ್ಲವೂ ಚಿತ್ರೀಕರಣ ಮತ್ತು ಚರ್ಚೆಗೆ ಅವಕಾಶವಾಗಿದ್ದರೆ, ಆಟಗಾರರು ಸ್ವಾಭಾವಿಕವಾಗಿ ಉಳಿಯಲು ಸಾಧ್ಯವಾಗುವುದಿಲ್ಲ. ನನ್ನ ಪಂದ್ಯದ ಪ್ರದರ್ಶನದ ಮೇಲೆ ನಮ್ಮನ್ನು ನಿರ್ಣಯಿಸಿ. ಅದನ್ನು ಬಿಟ್ಟು ನನ್ನ ಅಭ್ಯಾಸದ ಮೇಲೆ ಅಲ್ಲ’ ಎಂದಿದ್ದಾರೆ.

Source link

ಗದಗಿನ ಲಕ್ಕುಂಡಿಯಲ್ಲಿ ನಿಧಿ ಪತ್ತೆ ಕೇಸ್​: 664 ಗ್ರಾಂ ಆಂಟಿಕ್ ಚಿನ್ನದ ಮೌಲ್ಯ 8 ಕೋಟಿ ರೂ – Kannada News | Gadag’s Lakkundi Unearths 600 Year Old Gold Treasure Valued at 8 Crore

ಗದಗ, ಮೇ 16: ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಲಕ್ಕುಂಡಿ ಗ್ರಾಮದಲ್ಲಿ ಇತ್ತೀಚೆಗೆ ಪತ್ತೆಯಾಗಿದ್ದ ನಿಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಇಲ್ಲಿ ಸಿಕ್ಕಿರುವ ಒಟ್ಟು 664 ಗ್ರಾಂ ತೂಕದ ಅಪರೂಪದ ಹಳೆಯ ಚಿನ್ನಾಭರಣಗಳ ಅಂದಾಜು ಮೌಲ್ಯ ಬರೋಬ್ಬರಿ 8 ಕೋಟಿ ರೂ ಎಂದು ಅಂದಾಜಿಸಲಾಗಿದೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪತ್ತೆಯಾಗಿರುವ ಆಭರಣಗಳು ಸುಮಾರು 600 ವರ್ಷಗಳಷ್ಟು ಹಳೆಯದಾದ, ಐತಿಹಾಸಿಕ ಪ್ರಾಮುಖ್ಯತೆ ಹೊಂದಿರುವ ಆಂಟಿಕ್ (ಪ್ರಾಚೀನ) ಒಡವೆಗಳಾಗಿರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಇವುಗಳಿಗೆ ಇಷ್ಟೊಂದು ಬೃಹತ್ ಮೌಲ್ಯ ಬಂದಿದೆ. ಕೇವಲ ಅರ್ಧ ಕೆಜಿಗಿಂತ ಸ್ವಲ್ಪ ಹೆಚ್ಚು ತೂಕವಿರುವ ಈ ನಿಧಿಯ ನೈಜ ಮೌಲ್ಯವನ್ನು ವೈಜ್ಞಾನಿಕವಾಗಿ ನಿರ್ಧರಿಸಲು ಪುರಾತತ್ವ ಇಲಾಖೆಯ ಆಯುಕ್ತರು ತಜ್ಞರ ವಿಶೇಷ ಸಮಿತಿಯೊಂದನ್ನು ರಚಿಸಿದ್ದರು. ಜಿಲ್ಲಾಧಿಕಾರಿಗಳ (DC) ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ಈ ಏಳೆಂಟು ಜನರ ಸಮಿತಿಯಲ್ಲಿ ಪ್ರಮುಖ ಇತಿಹಾಸಕಾರರು ಹಾಗೂ ತಜ್ಞರು ಭಾಗವಹಿಸಿ, ಆಭರಣಗಳ ಐತಿಹಾಸಿಕ ಹಿನ್ನೆಲೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಈ ವರದಿಯನ್ನು ನೀಡಿದ್ದಾರೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Vasthu Tips: ಉದಯಿಸುತ್ತಿರುವ ಸೂರ್ಯನ ಫೋಟೋ ಮನೆಯಲ್ಲಿಡುವುದು ಶುಭವೇ? ವಾಸ್ತು ಹೇಳುವುದೇನು? – Kannada News | Vastu Shastra: Rising Sun Picture Placement for Prosperity, Success and Positive Energy

ಉದಯಿಸುವ ಸೂರ್ಯನ ಚಿತ್ರImage Credit source: Ai generated

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಉದಯಿಸುತ್ತಿರುವ ಸೂರ್ಯನ (Rising Sun) ಚಿತ್ರವನ್ನು ನೇತುಹಾಕುವುದು ಅತ್ಯಂತ ಶುಭ ಮತ್ತು ಮಂಗಳಕರ ಎಂದು ಪರಿಗಣಿಸಲಾಗಿದೆ. ಸೂರ್ಯನು ಶಕ್ತಿ, ಜ್ಞಾನ ಮತ್ತು ಯಶಸ್ಸಿನ ಸಂಕೇತ. ಶಾಸ್ತ್ರಗಳ ಪ್ರಕಾರ, ಈ ಚಿತ್ರವನ್ನು ಮನೆಯಲ್ಲಿ ಇಡುವುದರಿಂದ ಕುಟುಂಬದ ಸದಸ್ಯರಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ, ಹೊಸ ಭರವಸೆ ಮೂಡುತ್ತದೆ ಮತ್ತು ಪ್ರಗತಿಯ ಹಾದಿ ಸುಲಭವಾಗುತ್ತದೆ. ಆದರೆ, ಇದರ ಪೂರ್ಣ ಲಾಭ ಸಿಗಬೇಕಾದರೆ ವಾಸ್ತು ನಿಯಮಗಳ ಪ್ರಕಾರ ಸರಿಯಾದ ದಿಕ್ಕಿನಲ್ಲಿ ಇಡುವುದು ಅತಿ ಮುಖ್ಯ.

ಉದಯಿಸುವ ಸೂರ್ಯನ ಚಿತ್ರ ಇಡಬೇಕಾದ ಸರಿಯಾದ ದಿಕ್ಕು:

ವಾಸ್ತು ಶಾಸ್ತ್ರದ ಪ್ರಕಾರ, ಉದಯಿಸುತ್ತಿರುವ ಸೂರ್ಯನ ಚಿತ್ರವನ್ನು ಯಾವಾಗಲೂ ಮನೆಯ ಪೂರ್ವ ದಿಕ್ಕಿನಲ್ಲಿ (East) ಮಾತ್ರ ನೇತುಹಾಕಬೇಕು. ಏಕೆಂದರೆ ಪೂರ್ವ ದಿಕ್ಕು ಸೂರ್ಯ ದೇವನಿಗೆ ಪ್ರಿಯವಾದ ದಿಕ್ಕಾಗಿದೆ. ಇಲ್ಲಿ ಈ ಚಿತ್ರವನ್ನು ಇಡುವುದರಿಂದ ಮನೆಗೆ ಹೊಸ ಚೈತನ್ಯ ಬರುತ್ತದೆ ಮತ್ತು ಮನೆಯಲ್ಲಿರುವ ಶಕ್ತಿಗಳು ಗಮನಾರ್ಹವಾಗಿ ಸಮತೋಲನಗೊಳ್ಳುತ್ತವೆ.

ಲಿವಿಂಗ್ ರೂಮ್ನಲ್ಲಿ ಇಡುವುದರಿಂದಾಗುವ ಪ್ರಯೋಜನಗಳು:

ನಿಮ್ಮ ಮನೆಯ ಲಿವಿಂಗ್ ರೂಮ್ ನಲ್ಲಿ ಉದಯಿಸುತ್ತಿರುವ ಸೂರ್ಯನ ಚಿತ್ರವನ್ನು ನೇತುಹಾಕುವುದರಿಂದ ಕುಟುಂಬದ ಸದಸ್ಯರ ನಡುವಿನ ಬಾಂಧವ್ಯ ಮತ್ತಷ್ಟು ಬಲಗೊಳ್ಳುತ್ತದೆ. ಇದು ಪರಸ್ಪರ ತಿಳುವಳಿಕೆ ಮತ್ತು ಪ್ರೀತಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ, ಮನೆಯಲ್ಲಿರುವ ಮಾನಸಿಕ ಒತ್ತಡಗಳು ಕಡಿಮೆಯಾಗಿ, ಆರ್ಥಿಕ ಪರಿಸ್ಥಿತಿ ಕ್ರಮೇಣ ಸುಧಾರಿಸಲು ಆರಂಭವಾಗುತ್ತದೆ.

ಕಚೇರಿ ಅಥವಾ ವ್ಯಾಪಾರ ಸ್ಥಳದಲ್ಲಿ ಸೂರ್ಯನ ಚಿತ್ರ:

ನಿಮ್ಮ ವೃತ್ತಿಪರ ಜೀವನದಲ್ಲಿ ಮುನ್ನಡೆ ಸಾಧಿಸಲು ಅಥವಾ ಉದ್ಯೋಗ-ವ್ಯಾಪಾರದಲ್ಲಿ ಎದುರಾಗುತ್ತಿರುವ ಅಡೆತಡೆಗಳನ್ನು ನಿವಾರಿಸಲು ಈ ಚಿತ್ರವನ್ನು ನಿಮ್ಮ ಕಚೇರಿಯಲ್ಲಿ (Office) ನೇತುಹಾಕಬಹುದು. ವಾಸ್ತು ಪ್ರಕಾರ, ಇದು ನಿಮ್ಮ ಕೆಲಸದ ಮೇಲಿನ ಗಮನವನ್ನು ಹೆಚ್ಚಿಸುತ್ತದೆ, ನಿರ್ಧಾರ ತೆಗೆದುಕೊಳ್ಳುವ ಆತ್ಮವಿಶ್ವಾಸವನ್ನು ಬೆಳೆಸುತ್ತದೆ ಮತ್ತು ವೃತ್ತಿಜೀವನದ ತ್ವರಿತ ಬೆಳವಣಿಗೆಗೆ ಉತ್ತೇಜನ ನೀಡುತ್ತದೆ.

ಇದನ್ನೂ ಓದಿ: ನಿಮ್ಮ ಜನ್ಮ ದಿನಾಂಕದಲ್ಲೇ ಅಡಗಿದೆ ಮದುವೆಯ ರಹಸ್ಯ; ನಿಮಗಾಗುವುದು ಪ್ರೇಮ ವಿವಾಹವೋ ಅಥವಾ ಅರೇಂಜ್ ಮ್ಯಾರೇಜ್?

ಮರೆತೂ ಕೂಡ ಇಲ್ಲಿ ಸೂರ್ಯನ ಚಿತ್ರ ಇಡಬೇಡಿ:

ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಮಲಗುವ ಕೋಣೆಯಲ್ಲಿ (Bedroom) ಅತ್ಯಂತ ಪ್ರಕಾಶಮಾನವಾದ ಬೆಳಕು ಅಥವಾ ಕಡು ಕೆಂಪು ಬಣ್ಣವಿರುವ ಉದಯಿಸುತ್ತಿರುವ ಸೂರ್ಯನ ಚಿತ್ರವನ್ನು ಇಡಬಾರದು. ಇದು ದಂಪತಿಗಳ ನಡುವೆ ಆತಂಕ, ಕೋಪ ಮತ್ತು ಒತ್ತಡವನ್ನು ಹೆಚ್ಚಿಸಬಹುದು.

ಸೂರ್ಯನ ಇಂತಹ ಚಿತ್ರಗಳಿಂದ ದೂರವಿರಿ:

ನಿಮ್ಮ ಮನೆಯಲ್ಲಿ ಎಂದಿಗೂ ಸೂರ್ಯ ಮುಳುಗುತ್ತಿರುವ (Sunset) ಚಿತ್ರಗಳನ್ನು ಅಥವಾ ದುಃಖ, ನಿರಾಸೆಯನ್ನು ಬಿಂಬಿಸುವ ಚಿತ್ರಗಳನ್ನು ನೇತುಹಾಕಬೇಡಿ. ವಾಸ್ತು ಶಾಸ್ತ್ರದ ಪ್ರಕಾರ, ಅಂತಹ ಚಿತ್ರಗಳು ಮನೆಯ ವಾತಾವರಣವನ್ನು ಕೆಡಿಸಿ, ಜೀವನದಲ್ಲಿ ನಿರಾಶೆ ಮತ್ತು ನಕಾರಾತ್ಮಕತೆಯನ್ನು ತಂದೊಡ್ಡುತ್ತವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಪಂಜಾಬ್ ಸೋಲಿಗೆ ಅದರ ಮಾಲೀಕರೇ ಕಾರಣ..! ಮಾಜಿ ನಾಯಕನ ಗಂಭೀರ ಆರೋಪ – Kannada News | R Ashwin Reveals Why Punjab Kings Lost 5 Straight in IPL 2026; Owners’ Dual Home Ground Strategy at Fault

2026 ರ ಐಪಿಎಲ್‌ನಲ್ಲಿ (IPL 2026) ಸತತ 6 ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ರಾರಾಜಿಸುತ್ತಿದ್ದ ಪಂಜಾಬ್ ಕಿಂಗ್ಸ್ (Punjab Kings) ತಂಡ ಅದ್ಯಾಕೋ 6 ರ ಪಂದ್ಯಗಳ ನಂತರ ಲಯ ಕಳೆದುಕೊಂಡಿದೆ. ಇದರ ಪರಿಣಾಮವಾಗಿ ಆ ನಂತರ ನಡೆದ ಸತತ ಐದು ಪಂದ್ಯಗಳನ್ನು ಸೋತಿದೆ. ಆರಂಭದಲ್ಲಿ ಸತತ ಗೆಲುವುಗಳಿಂದ ಸುಲಭವಾಗಿ ಪ್ಲೇಆಫ್‌ಗೇರುವ ಭರವಸೆ ಮೂಡಿಸಿದ್ದ ಪಂಜಾಬ್ ಇದೀಗ ಸತತ ಸೋಲುಗಳಿಂದಾಗಿ ಪ್ಲೇಆಫ್‌ ರೇಸ್​ನಿಂದ ಹೊರಗುಳಿಯುವ ಆತಂಕದಲ್ಲಿದೆ. ಅದರಲ್ಲೂ ಪಂಜಾಬ್ ತನ್ನ ತವರು ನೆಲದಲ್ಲೇ ಸೋಲುತ್ತಿರುವುದು ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಿದೆ. ಇದೀಗ ಪಂಜಾಬ್ ಸೋಲಿಗೆ ಕಾರಣ ವಿವರಿಸಿರುವ ಪಂಜಾಬ್ ತಂಡದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್(R Ashwin), ಪಂಜಾಬ್ ಕಿಂಗ್ಸ್ ತಂಡದ ಸತತ ಐದು ಸೋಲುಗಳಿಗೆ ತಂಡದ ಮಾಲೀಕರೇ ಕಾರಣ ಎಂದಿದ್ದಾರೆ.

2 ತವರು ಮೈದಾನಗಳು ಪಂಜಾಬ್ ಸೋಲಿಗೆ ಕಾರಣ

ವಾಸ್ತವವಾಗಿ ಐಪಿಎಲ್‌ನಲ್ಲಿ ಪ್ರತಿಯೊಂದು ತಂಡವೂ ಒಂದು ತವರು ಮೈದಾನವನ್ನು ಹೊಂದಿರುತ್ತವೆ. ಇದು ತಂಡಗಳು ತವರು ಮೈದಾನದ ಲಾಭ ಪಡೆದು ತಂತ್ರರೂಪಿಸಿ ಗೆಲುವು ಸಾಧಿಸಲು ನೆರವಾಗುತ್ತದೆ. ಆದರೆ ಪಂಜಾಬ್ ತಂಡ ಎರಡೆರಡು ಮೈದಾನಗಳನ್ನು ತವರು ಮೈದಾನವಾಗಿ ಆಯ್ಕೆ ಮಾಡಿಕೊಂಡಿದೆ. ಇದು ತಂಡದ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಅಶ್ವಿನ್ ಕೂಡ ಇದನ್ನೇ ಹೇಳಿದ್ದಾರೆ.

ಅತ್ಯಂತ ಯಶಸ್ವಿ ಐಪಿಎಲ್ ತಂಡಗಳು ತಮ್ಮ ತವರು ಮೈದಾನಗಳನ್ನು ಎಂದಿಗೂ ಬದಲಾಯಿಸಿಲ್ಲ. ಆದರೆ ಪಂಜಾಬ್ ಎರಡು ಮೈದಾನಗಳಲ್ಲಿ ಪಂದ್ಯಗಳನ್ನು ಆಡುತ್ತದೆ.ಇದು ಅವರ ಗೆಲುವಿನ ಓಟಕ್ಕೆ ಅಡ್ಡಿಯಾಗಿದೆ. ಆಟಗಾರರು ಹೊಸ ಮೈದಾನಗಳಿಗೆ ಬೇಗನೆ ಹೊಂದಿಕೊಳ್ಳಲು ಸಾಧ್ಯವಾಗುವುದಿಲ್ಲ, ಅದಕ್ಕಾಗಿಯೇ ಗೆಲುವಿನ ಸರಣಿಗೆ ಅಡ್ಡಿಯಾಗುತ್ತದೆ. ಹೀಗಾಗಿ ಪಂಜಾಬ್ ತಂಡದ ಮಾಲೀಕರು ಎರಡೆರಡು ಮೈದಾನಗಳನ್ನು ತವರು ಮೈದಾನವಾಗಿ ಆಯ್ಕೆ ಮಾಡಿರುವುದು ತಂಡಕ್ಕೆ ಕಂಟಕವಾಗುತ್ತಿದೆ ಎಂದು ಅಶ್ವಿನ್ ಅಭಿಪ್ರಾಯ ಪಟ್ಟಿದ್ದಾರೆ.

ಕಾರಣ ವಿವರಿಸಿದ ಅಶ್ವಿನ್

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಅಶ್ವಿನ್, ‘ನನಗೊಂದು ಪ್ರಶ್ನೆ ಇದೆ. ಕೆಕೆಆರ್, ಮುಂಬೈ ಮತ್ತು ಸಿಎಸ್‌ಕೆ 19 ಸೀಸನ್‌ಗಳಲ್ಲಿ ಅತಿ ಹೆಚ್ಚು ಟ್ರೋಫಿಗಳನ್ನು ಗೆದ್ದ ತಂಡಗಳು. ಅವರು ಒಟ್ಟು 13 ಟ್ರೋಫಿಗಳನ್ನು ಗೆದ್ದಿದ್ದಾರೆ. ಎಸ್‌ಆರ್‌ಎಚ್ ಕೂಡ ಎರಡು (ಡೆಕ್ಕನ್ ಚಾರ್ಜರ್ಸ್ ಸೇರಿದಂತೆ) ಗೆದ್ದಿದೆ. ಈ ತಂಡಗಳು ಎಂದಾದರೂ ತಮ್ಮ ತವರು ನೆಲವನ್ನು ಬದಲಾಯಿಸಿದ್ದಾರೆಯೇ? ಹೊರಗಿನಿಂದ ನೋಡಿದರೆ ಪಂಜಾಬ್ ತಂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ನೀವು ಭಾವಿಸಬಹುದು. ಆದರೆ ನಾನು ತಂಡದಲ್ಲಿದ್ದಾಗ ನನಗೂ ಇದೇ ಅನುಭವವಾಗಿದೆ. 2018 ರ ಆವೃತ್ತಿಯಲ್ಲಿ ನಾವು ಮೊಹಾಲಿಯಲ್ಲಿ ಐದು ಪಂದ್ಯಗಳನ್ನು ಗೆದ್ದಿದ್ದೆವು. ಆದರೆ ಆನಂತರ ಮೈದಾನವನ್ನು ಬದಲಾಯಿಸಿದ ಕಾರಣದಿಂದಾಗಿ ಸತತವಾಗಿ ಸೋತು ಟೂರ್ನಮೆಂಟ್‌ನಿಂದ ಹೊರಬಿದ್ದೆವು.

PBKS vs MI: ನಾಯಕನಾಗಿ ಚೊಚ್ಚಲ ಪಂದ್ಯದಲ್ಲಿ ಗೆದ್ದ ಬುಮ್ರಾ; ಪಂಜಾಬ್​ಗೆ ಸತತ 5ನೇ ಸೋಲು

ಪಂಜಾಬ್ ಮುಲ್ಲನ್‌ಪುರದ ಜೊತೆಗೆ ಧರ್ಮಶಾಲಾವನ್ನು ತವರು ನೆಲವಾಗಿ ಆಯ್ಕೆ ಮಾಡಿಕೊಂಡಿದೆ. ಆದರೆ ಧರ್ಮಶಾಲಾದಲ್ಲಿ ಪಂಜಾಬ್​ಗೆ ಯಶಸ್ಸು ಸಿಗುತ್ತಿಲ್ಲ. ಅಲ್ಲಿನ ಪಿಚ್ ಬ್ಯಾಟಿಂಗ್‌ಗೆ ಅಷ್ಟೊಂದು ಉತ್ತಮವಾಗಿಲ್ಲ. ಹೀಗಾಗಿ ಮೊದಲ ಬ್ಯಾಟಿಂಗ್‌ ಮಾಡುವ ತಂಡಗಳಿಗೆ ಪಿಚ್​ಗೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಇದರ ಪರಿಣಾಮವಾಗಿ ಪಂಜಾಬ್‌ ಬ್ಯಾಟಿಂಗ್ ಮಾಡುವಾಗ 30-40 ರನ್‌ಗಳು ಕಡಿಮೆಯಾಗಿದೆ. ಏಕೆಂದರೆ ಅವರು ಇನ್ನೂ ಆ ಮೈದಾನದಲ್ಲಿ ಹೊಂದಿಕೊಳ್ಳಲು ಸಾಧ್ಯವಾಗಿಲ್ಲ’ ಎಂದು ಅಶ್ವಿನ್ ಹೇಳಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:26 pm, Sat, 16 May 26

Source link

ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ ಆಗಿದ್ದೇನು? ವಿಡಿಯೋ

ತಮಿಳು ಚಿತ್ರರಂಗದ (Tamil Industry) ಜನಪ್ರಿಯ ನಾಯಕ ನಟರಲ್ಲಿ ಒಬ್ಬರಾಗಿರುವ ಜಯಂ ರವಿ ಸುದ್ದಿಗೋಷ್ಠಿ ನಡೆಸಿದ್ದು, ಸುದ್ದಿಗೋಷ್ಠಿಯಲ್ಲಿ ತೀವ್ರ ಆಕ್ರೋಶ ಹೊರಹಾಕಿ ಕಣ್ಣೀರು ಸಹ ಹಾಕಿದ್ದಾರೆ. ತಮಗೆ ತಮ್ಮ ಪತ್ನಿ ಆರತಿಯಿಂದ ವಿಚ್ಛೇದನ ಸಿಗುವವರೆಗೆ ಯಾವ ಸಿನಿಮಾನಲ್ಲೂ ನಟಿಸುವುದಿಲ್ಲ ಎಂದಿದ್ದಾರೆ. ಅಷ್ಟಕ್ಕೂ ಜಯಂ ರವಿ ಜೀವನದಲ್ಲಿ ಆಗಿರುವುದೇನು? ಇಂದಿನ ಅವರ ಈ ಭಾವುಕ ಆಕ್ರೋಶಕ್ಕೆ ಕಾರಣವೇನು? ಜೊತೆಗಿದ್ದ ಗೆಳತಿಯ ಕತೆ ಏನಾಯ್ತು? ವಿವರ ಇಲ್ಲಿದೆ, ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ನೀಟ್ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್: ರಾಜ್ಯಕ್ಕೆ 1122 ಸರ್ಕಾರಿ ಮೆಡಿಕಲ್‌ ಸೀಟ್‌ ಲಭ್ಯ; ಡಾ ಶರಣಪ್ರಕಾಶ ಪಾಟೀಲ್ – Kannada News | Good News for NEET Aspirants: Karnataka Gets 1,122 Additional Government Medical Seats, Says Dr. Sharan Prakash Patil

ಬೆಂಗಳೂರು, ಮೇ 16: ನೀಟ್ ಪರೀಕ್ಷೆ (NEET Exam) ಅಕ್ರಮ ದೇಶಾದ್ಯಂತ ಸದ್ದು ಮಾಡುತ್ತಿದೆ. ಬಗೆದಷ್ಟು ನೀಟ್​ ಮಾಫಿಯಾ ಬಯಲಾಗುತ್ತಿದೆ. ಒಂದೆಡೆ ಪರೀಕ್ಷಾ ಅಕ್ರಮಕ್ಕೆ ವಿದ್ಯಾರ್ಥಿಗಳು ಬೇಸತ್ತು ಹೋಗಿದ್ದಾರೆ. ಆದರೆ ಈ ಮಧ್ಯೆ ರಾಜ್ಯದ (Karnataka) ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ ಒಂದು ಒದಗಿಬಂದಿದೆ. ಅದೇನೆಂದರೆ ರಾಜ್ಯಕ್ಕೆ ಹೆಚ್ಚುವರಿ 1122 ಸರ್ಕಾರಿ ಮೆಡಿಕಲ್‌ ಸೀಟ್​ಗಳು ಮಂಜೂರಾಗಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ಘೋಷಿಸಿದ್ದಾರೆ. ಆ ಮೂಲಕ ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್​ ನೀಡಿದ್ದಾರೆ.

ಮುಖ್ಯಾಂಶಗಳು

  • ಮೆಡಿಕಲ್ ಸೀಟ್ ಲಭ್ಯತೆಯಲ್ಲಿ ಕರ್ನಾಟಕದ ಹೊಸ ದಾಖಲೆ
  • ರಾಜ್ಯಕ್ಕೆ ದಾಖಲೆಯ 1,122 ಹೆಚ್ಚುವರಿ ಮೆಡಿಕಲ್ ಸೀಟುಗಳ ಮಂಜೂರಾತಿ
  • ಮೆಡಿಕಲ್ ಸೀಟ್ ಲಭ್ಯತೆಯಲ್ಲಿ ಕರ್ನಾಟಕದ ಹೊಸ ದಾಖಲೆ

ಶನಿವಾರ ವಿಕಾಸಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್​​, ರಾಜ್ಯದಲ್ಲಿ ಮೆಡಿಕಲ್‌ ಸೀಟು ಲಭ್ಯತೆ ಹೆಚ್ಚಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸುವವರಿಗೆ ಸುವರ್ಣ ಅವಕಾಶ ಲಭಿಸಲಿದೆ. ರಾಜ್ಯಕ್ಕೆ ಹೆಚ್ಚುವರಿ 1122 ಸೀಟುಗಳು ದೊರೆಯಲಿವೆ ಎಂದರು. ನಮ್ಮ ರಾಜ್ಯದ ವೈದ್ಯಕೀಯ ಕ್ಷೇತ್ರದ ದೇಶದಲ್ಲೇ ಮುಂಚೂಣಿಯಲ್ಲಿದೆ. ಒಂದು ರಾಜ್ಯಕ್ಕೆ ಒಂದೇ ಬಾರಿ ಸಾವಿರಕ್ಕೂ ಹೆಚ್ಚು ಮೆಡಿಕಲ್ ಸೀಟು ಸಿಕ್ಕಿರುವುದು ದಾಖಲೆಯಾಗಿದೆ. ಇದು ಕರ್ನಾಟಕದ ಸಾಧನೆಗೆ ಪೂರಕ ಸಾಕ್ಷಿ ಎಂದು ಅವರು ಹೇಳಿದರು.

ಎಲ್ಲೆಲ್ಲಿ ಹೆಚ್ಚುವರಿ ಸೀಟು?

ಹೊಸದಾಗಿ ಮಂಜೂರಾದ ಸೀಟುಗಳು ಕೊಪ್ಪಳ, ಗದಗ, ಚಾಮರಾಜನಗರ, ಕಾರವಾರ, ಕಾವೇರಿ ಸೇರಿದಂತೆ ಹಲವು ಜಿಲ್ಲೆಗಳ ವೈದ್ಯಕೀಯ ಕಾಲೇಜುಗಳಿಗೆ ಹಂಚಿಕೆಯಾಗಲಿವೆ.

1090 ಕೋಟಿ ರೂ ಅನುದಾನ

ಕೇಂದ್ರ ಸರ್ಕಾರ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯು ಮೇ 15ರಂದು ಇದಕ್ಕೆ ಅಂತಿಮ ಮುದ್ರೆ ಹಾಕಿದೆ. ಪದವಿಪೂರ್ವ ವೈದ್ಯಕೀಯ ಸೀಟುಗಳಿಗೆ 495 ಕೋಟಿ ರೂ. ಹಾಗೂ ಸ್ನಾತಕೋತ್ತರ ಸೀಟುಗಳಿಗೆ 541 ಕೋಟಿ ರೂ. ಸೇರಿ ಒಟ್ಟು 1090 ಕೋಟಿ ರೂ. ಅನುದಾನ ರಾಜ್ಯಕ್ಕೆ ದೊರೆಯಲಿದೆ ಎಂದು ಸಚಿವರು ಮಾಹಿತಿ ನೀಡಿದರು.

ಇದನ್ನೂ ಓದಿ: ‘ಎರಡು ವರ್ಷದ ಶ್ರಮ ವ್ಯರ್ಥವಾಯಿತು’: ನೀಟ್ ಪರೀಕ್ಷೆ ರದ್ದತಿಗೆ ವಿದ್ಯಾರ್ಥಿನಿ ಬೇಸರ

ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುವವರಿಗೆ ಕರ್ನಾಟಕದಲ್ಲಿ ಈಗ ವಿಫುಲ ಅವಕಾಶಗಳು ಸೃಷ್ಟಿಯಾಗಿವೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಡಾ. ಶರಣಪ್ರಕಾಶ ಪಾಟೀಲ್ ಕರೆ ನೀಡಿದರು.

ರಾಜ್ಯದ ಮೆಡಿಕಲ್ ಸೀಟುಗಳ ವಿವರ

  • ಒಟ್ಟು ವೈದ್ಯಕೀಯ ಕಾಲೇಜು- 72 (ಖಾಸಗಿ, ಡೀಮ್ಡ್ ಸೇರಿ)
  • ಈಗ ಲಭ್ಯವಿರುವ UG ಸೀಟು- 13,945
  • ಈಗ ಲಭ್ಯವಿರುವ PG ಸೀಟು- 7,727
  • ಹೊಸದಾಗಿ ಸೇರ್ಪಡೆಯಾದ ಸೀಟು- 1,122

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 5:53 pm, Sat, 16 May 26

Source link

ಝಲ್ಮುರಿ ಇಲ್ಲಿಗೂ ತಲುಪಿತೇ? ಪ್ರಧಾನಿ ಮೋದಿ ಪ್ರಶ್ನೆಗೆ ನೆದರ್ಲ್ಯಾಂಡ್​​​ನ ಭಾರತೀಯ ವಲಸಿಗರ ಕರತಾಡನ – Kannada News | Has Jhalmuri Reached Here Too? PM Modis question to Indian diaspora In Netherlands

ಹೇಗ್, ಮೇ 16: ಪ್ರಧಾನಿ ನರೇಂದ್ರ ಮೋದಿ ನೆದರ್ಲ್ಯಾಂಡ್ಸ್​​ ಪ್ರವಾಸದಲ್ಲಿದ್ದಾರೆ. ಈ ವೇಳೆ ಅವರು ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸಿದ್ದಾರೆ. ಈ ವೇಳೆ ಪಂಚ ರಾಜ್ಯಗಳ ಚುನಾವಣೆಯ ಬಗ್ಗೆಯೂ ಪ್ರಸ್ತಾಪಿಸಿದ ಮೋದಿ (PM Modi) ನಗುತ್ತಾ ಝಲ್ಮುರಿ ಇಲ್ಲಿಗೂ ತಲುಪಿದೆಯೇ? ಎಂದು ಕೇಳಿದರು. ಝಲ್ಮುರಿ ಹೆಸರು ಕೇಳುತ್ತಿದ್ದಂತೆ ನೆರೆದಿದ್ದ ಭಾರತೀಯರು ಚಪ್ಪಾಳೆ ತಟ್ಟುತ್ತಾ ಸ್ಪಂದಿಸಿದರು. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಶೇ. 80ರಿಂದ 90ರಷ್ಟಿತ್ತು. ಈ ಬಾರಿ ಮಹಿಳೆಯರು ಹೆಚ್ಚು ಮತದಾನ ಮಾಡಿದ್ದಾರೆ ಎಂದು ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ಜನಪ್ರಿಯ ಬಂಗಾಳಿ ತಿಂಡಿಯಾದ ಝಲ್ಮುರಿಯನ್ನು ಪ್ರಧಾನಿ ಮೋದಿ ತಿನ್ನುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದು ಟಿಎಂಸಿಯಿಂದ ತೀವ್ರ ಟೀಕೆಯನ್ನು ಎದುರಿಸಿತ್ತು. ಇದಕ್ಕೆ ಪ್ರತಿಯಾಗಿ ಬಂಗಾಳದಲ್ಲಿ ಬಿಜೆಪಿ ಗೆದ್ದ ಬಳಿಕ ಬಿಜೆಪಿ ಕಾರ್ಯಕರ್ತರು ಝಲ್ಮುರಿ ಹಂಚಿ ಸಂಭ್ರಮಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version