ಸೊಳ್ಳೆ ಓಡಿಸಲು ಬಳಸುವ ಅಗರಬತ್ತಿಗಳಿಂದ ಬರಬಹುದು ಗಂಭೀರ ಕಾಯಿಲೆ! ಸಮೀಕ್ಷೆಯಲ್ಲಿ ಆತಂಕಕಾರಿ ಮಾಹಿತಿ ಬಹಿರಂಗ – Kannada News | Is Your Mosquito Agarbatti Safe? How To Identify Legal Vs Illegal Brands

ಮನೆಗಳಲ್ಲಿ ಸೊಳ್ಳೆಗಳಿಂದ ರಕ್ಷಿಸಿಕೊಳ್ಳಲು ಅನೇಕರು ಸೊಳ್ಳೆ ಅಗರಬತ್ತಿ (Mosquito Agarbatti), ಕಾಯಿಲ್ ಮತ್ತು ವಿವಿಧ ಮಸ್ಕಿಟೋ ರಿಪೆಲೆಂಟ್‌ಗಳನ್ನು ಬಳಸುತ್ತಾರೆ. ಇವು ಸೊಳ್ಳೆಗಳನ್ನು ದೂರವಿಡಲು ಸಹಾಯ ಮಾಡಿದರೂ, ಎಲ್ಲ ಉತ್ಪನ್ನಗಳು ಸಂಪೂರ್ಣ ಸುರಕ್ಷಿತವಾಗಿರುತ್ತವೆ ಎನ್ನುವುದು ತಪ್ಪು ಕಲ್ಪನೆ. ಅದರಲ್ಲಿಯೂ ಇತ್ತೀಚೆಗೆ ಬಿಡುಗಡೆಯಾದ ಎಚ್ಐಸಿಎ (Home Insect Control Association) ಎಂಬ ಸಮೀಕ್ಷೆ ಈ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದ್ದು ಇವು ಸೊಳ್ಳೆಗಳನ್ನು ಸಾಯಿಸುವುದರ ಜೊತೆಗೆ ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಹಾಗಾಗಿ ಸಿಐಆರ್ ನೋಂದಣಿ ಸಂಖ್ಯೆ ಇಲ್ಲದ ಸೊಳ್ಳೆ ನಿವಾರಕ ಉತ್ಪನ್ನಗಳನ್ನು ಖರೀದಿ ಮಾಡಬಾರದು ಎಂದು ಹೇಳಿದೆ. ಹಾಗಾದರೆ ಸಮೀಕ್ಷೆ ಹೇಗೆ ನಡೆಸಲಾಗಿತ್ತು, ಸೊಳ್ಳೆ ಅಗರಬತ್ತಿಗಳು ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಎಚ್ಐಸಿಎ ಸಮೀಕ್ಷೆಯಲ್ಲಿ ಬಹಿರಂಗವಾದ ವಿಷಯಗಳು;

ಈ ಸಮೀಕ್ಷೆಯನ್ನು ದೇಶದ 12 ನಗರಗಳಲ್ಲಿ ನಡೆಸಲಾಗಿದ್ದು ಇದರಲ್ಲಿ 1,264 ಕುಟುಂಬಗಳು ಮತ್ತು 405 ವೈದ್ಯರು ಒಳಗೊಂಡಿದ್ದರು. ಸಮೀಕ್ಷೆಯ ಪ್ರಕಾರ, 70 ಶೇಕಡಾ ವೈದ್ಯರು ಅನಧಿಕೃತ ಸೊಳ್ಳೆ ಅಗರಬತ್ತಿಗಳ ಹೊಗೆ ಉಸಿರಾಟದ ಸಮಸ್ಯೆಗೆ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಅದೇ ರೀತಿ 67 ಶೇಕಡಾ ವೈದ್ಯರು, ಕೆಲವು ಸೊಳ್ಳೆ ಅಗರಬತ್ತಿಗಳ ಹೊಗೆ ಸಿಗರೇಟ್ ಹೊಗೆಯಷ್ಟೇ ಹಾನಿಕಾರಕವಾಗಿರಬಹುದು ಎಂದು ತಿಳಿಸಿದ್ದಾರೆ. ವಿಶೇಷವಾಗಿ ಸಿಐಆರ್ (Central Insecticides Registration) ನೋಂದಣಿ ಸಂಖ್ಯೆ ಇಲ್ಲದ ಉತ್ಪನ್ನಗಳನ್ನು ಬಳಸಬಾರದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಸೊಳ್ಳೆ ಅಗರಬತ್ತಿಯ ಹೊಗೆ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ?

ನಿರಂತರವಾಗಿ ಸೊಳ್ಳೆ ಅಗರಬತ್ತಿ ಅಥವಾ ಕಾಯಿಲ್ ಬಳಕೆ ಮಾಡಿದರೆ ಉಸಿರಾಟದ ತೊಂದರೆ, ಕೆಮ್ಮು, ಗಂಟಲು ಕೆರೆತ ಮತ್ತು ಎದೆ ಉರಿ ಕಾಣಿಸಬಹುದು. ಕೆಲವರಿಗೆ ಕಣ್ಣಿನಲ್ಲಿ ಉರಿ, ತಲೆನೋವು ಮತ್ತು ಅಲರ್ಜಿ ಸಮಸ್ಯೆಯೂ ಕಾಣಿಸಬಹುದು. ಆಸ್ತಮಾ, ಸಿಓಪಿಡಿ ಮತ್ತು ಅಲರ್ಜಿ ಸಮಸ್ಯೆ ಇರುವವರಿಗೆ ಈ ಹೊಗೆ ಹೆಚ್ಚು ಅಪಾಯಕಾರಿಯಾಗಿದೆ. ಮಕ್ಕಳ ಮತ್ತು ವೃದ್ಧರ ಶ್ವಾಸಕೋಶಗಳು ಸಂವೇದನಾಶೀಲವಾಗಿರುವುದರಿಂದ ಅವರಿಗೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ: ಡೆಂಗ್ಯೂ ಜ್ವರದ ಬಗ್ಗೆ ನಿರ್ಲಕ್ಷ್ಯ ಬೇಡ, ಸಣ್ಣ ಅಸಡ್ಡೆಯೂ ಜೀವಕ್ಕೆ ಮಾರಕ

ಸುರಕ್ಷಿತವಾಗಿ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು?

ಸೊಳ್ಳೆ ನಿವಾರಕ ಉತ್ಪನ್ನಗಳನ್ನು ಖರೀದಿಸುವಾಗ ಪ್ಯಾಕ್ ಮೇಲೆ ಸಿಐಆರ್ ನೋಂದಣಿ ಸಂಖ್ಯೆ ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಲೇಬಲ್ ಇಲ್ಲದ ಅಥವಾ ಸ್ಥಳೀಯ ಅನಧಿಕೃತ ಉತ್ಪನ್ನಗಳನ್ನು ಬಳಸುವುದನ್ನು ತಪ್ಪಿಸುವುದು ಉತ್ತಮ. ಕೊಠಡಿಯಲ್ಲಿ ಗಾಳಿ ಸರಿಯಾಗಿ ಓಡಾಡುವಂತೆ ನೋಡಿಕೊಳ್ಳಬೇಕು. ಮಕ್ಕಳ ಹಾಗೂ ವೃದ್ಧರ ಕೋಣೆಗೆ ನಿರಂತರವಾಗಿ ಹೊಗೆ ಹೋಗುವುದನ್ನು ತಪ್ಪಿಸಬೇಕು. ಮಸ್ಕಿಟೋ ನೆಟ್, ಕಿಟಕಿಗಳಿಗೆ ಜಾಲಿ ಹಾಕುವುದು ಮುಂತಾದ ಸುರಕ್ಷಿತ ಪರ್ಯಾಯಗಳನ್ನು ಬಳಸುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

KKR vs GT: ಐಪಿಎಲ್‌ನಲ್ಲಿ ವಿಶೇಷ ದ್ವಿಶತಕ ಪೂರೈಸಿದ ಸುನಿಲ್ ನರೈನ್

Source link

PBKS vs RCB: ಆರ್​ಸಿಬಿಗೆ ಪಂಜಾಬ್ ಎದುರಾಳಿ; ಬದಲಾದ ಸಮಯದಲ್ಲಿ ನಡೆಯಲಿದೆ ಪಂದ್ಯ – Kannada News | RCB vs PBKS IPL 2026: Final Rematch! Match 61 Date, Time, Venue and Streaming

ಐಪಿಎಲ್ 2026 (IPL 2026) ರ 61 ನೇ ಪಂದ್ಯವು ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (PBKS vs RCB) ನಡುವೆ ನಡೆಯಲಿದೆ. ಕಳೆದ ಐಪಿಎಲ್ ಫೈನಲ್​ನಲ್ಲಿ ಮುಖಾಮುಖಿಯಾಗಿದ್ದ ಈ ಎರಡೂ ತಂಡಗಳು ಆ ಪಂದ್ಯದ ನಂತರ ಇದೇ ಮೊದಲ ಬಾರಿಗೆ ಎದುರು ಬದುರಾಗಿವೆ. ಒಂದೆಡೆ ಆರ್​ಸಿಬಿ ಫೈನಲ್​ನಲ್ಲಿ ಸೋಲಿಸಿದಂತೆ ಈ ಪಂದ್ಯದಲ್ಲೂ ಸೋಲಿಸಿ ಪ್ಲೇಆಫ್‌ಗೆ ಟಿಕೆಟ್ ಖಚಿತಪಡಿಸುವ ಇರಾದೆಯಲ್ಲಿದ್ದರೆ, ಇತ್ತ ಪಂಜಾಬ್ ಕಳೆದ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳುವುದರ ಜೊತೆಗೆ ಪ್ಲೇಆಫ್‌ ರೇಸ್​ನಲ್ಲಿ ಜೀವಂತವಾಗಿರಲು ಯತ್ನಿಸಲಿದೆ. ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಆರ್​ಸಿಬಿ ಅಗ್ರಸ್ಥಾನದಲ್ಲಿದ್ದರೆ, ಪಂಜಾಬ್ ತಂಡ ನಾಲ್ಕನೇ ಸ್ಥಾನದಲ್ಲಿದೆ.

ಆರ್​​ಸಿಬಿ ಹಾಗೂ ಪಂಜಾಬ್ ನಡುವಿನ ಐಪಿಎಲ್ 2026 ರ 61 ನೇ ಪಂದ್ಯ ಯಾವಾಗ ನಡೆಯಲಿದೆ?

ಆರ್​​ಸಿಬಿ ಹಾಗೂ ಪಂಜಾಬ್ ನಡುವಿನ ಐಪಿಎಲ್ 2026 ರ 61 ನೇ ಪಂದ್ಯ ಮೇ 17 ರಂದು ನಡೆಯಲಿದೆ.

ಆರ್​​ಸಿಬಿ ಹಾಗೂ ಪಂಜಾಬ್ ನಡುವಿನ ಐಪಿಎಲ್ 2026 ರ 61 ನೇ ಪಂದ್ಯ ಎಲ್ಲಿ ನಡೆಯಲಿದೆ?

ಆರ್​​ಸಿಬಿ ಹಾಗೂ ಪಂಜಾಬ್ ನಡುವಿನ ಐಪಿಎಲ್ 2026 ರ 61 ನೇ ಪಂದ್ಯ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ನಡೆಯಲಿದೆ.

ಆರ್​​ಸಿಬಿ ಹಾಗೂ ಪಂಜಾಬ್ ನಡುವಿನ ಐಪಿಎಲ್ 2026 ರ 61 ನೇ ಪಂದ್ಯ ಎಷ್ಟು ಗಂಟೆಗೆ ಆರಂಭ?

ಆರ್​​ಸಿಬಿ ಹಾಗೂ ಪಂಜಾಬ್ ನಡುವಿನ ಐಪಿಎಲ್ 2026 ರ 61 ನೇ ಪಂದ್ಯ ಮಧ್ಯಾಹ್ನ 3:30 ಕ್ಕೆ ಪ್ರಾರಂಭವಾಗಲಿದ್ದು, ಟಾಸ್ ಭಾರತೀಯ ಕಾಲಮಾನ ಮಧ್ಯಾಹ್ನ 3:00 ಗಂಟೆಗೆ ನಡೆಯಲಿದೆ.

ಆರ್​​ಸಿಬಿ ಹಾಗೂ ಪಂಜಾಬ್ ನಡುವಿನ ಐಪಿಎಲ್ 2026 ರ 61ನೇ ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಆರ್​​ಸಿಬಿ ಹಾಗೂ ಪಂಜಾಬ್ ನಡುವಿನ ಐಪಿಎಲ್ 2026 ರ 61ನೇ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಹಾಗೆಯೇ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಪಂದ್ಯವನ್ನು ವೀಕ್ಷಿಸಲು ಇಷ್ಟಪಡುವ ವೀಕ್ಷಕರಿಗೆ, ಜಿಯೋ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿರುತ್ತದೆ.

ಉಭಯ ತಂಡಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ಟಿಮ್ ಡೇವಿಡ್, ಜಾಕೋಬ್ ಬೆಥೆಲ್, ರೊಮಾರಿಯೊ ಶೆಫರ್ಡ್, ಜೋಶ್ ಹ್ಯಾಜಲ್‌ವುಡ್, ನುವಾನ್ ತುಷಾರ, ದೇವದತ್ ಪಡಿಕ್ಕಲ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ರಸಿಖ್ ದಾರ್, ಭುವನೇಶ್ವರ್ ಕುಮಾರ್, ಜೋರ್ಡಾನ್ ಕಾಕ್ಸ್, ವೆಂಕಟ್ ಸಿಂಗ್, ಸುಯಶ್ ಲ್ಯೂನ್ ಕಾಕ್ಸ್, ವೆಂಕಟ್ ಸಿಂಗ್ ಶರ್ಮಾ, ಭುವನೇಶ್ವರ್ ಕುಮಾರ್ ಕಾನಿಷ್ಕ್ ಚೌಹಾಣ್, ಅಭಿನಂದನ್ ಸಿಂಗ್, ಮಂಗೇಶ್ ಯಾದವ್, ಫಿಲ್ ಸಾಲ್ಟ್, ಸಾತ್ವಿಕ್ ದೇಸ್ವಾಲ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ.

ಪಂಜಾಬ್ ಕಿಂಗ್ಸ್ : ಶ್ರೇಯಸ್ ಲಿಯಾನ್ (ನಾಯಕ), ಪ್ರಿಯಾಂಶ್ ಆರ್ಯ, ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಅಜ್ಮತುಲ್ಲಾ ಉಮರ್‌ಜಾಯ್, ವಿಜಯ್‌ಕುಮಾರ್ ವೈಶಾಕ್, ಅರ್ಷ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ಹರ್‌ಪ್ರೀತ್ ಬ್ರಾರ್, ಸೂರ್ಯಾಂಶ್ ಶೆಡ್ಜ್, ವಿಷ್ಣು ವಿನೋದ್ (ವಿಕೆಟ್ ಕೀಪರ್), ಕ್ಸೇವಿಯರ್ ಬಾರ್ಟ್ಲೆಟ್, ಯಶ್ ಠಾಕೂರ್, ಮಿಚೆಲ್ ಓವನ್, ಹರ್ನೂರ್ ಸಿಂಗ್, ಮುಶೀರ್ ಖಾನ್, ಪಾಯಲ್ ಅವಿನಾಶ್, ಮಾರ್ಕೊ ಯಾನ್ಸನ್, ಲಾಕಿ ಫರ್ಗುಸನ್, ಕೂಪರ್ ಕೊನೊಲಿ, ಬೆನ್ ದ್ವಾರ್ಶುಯಿಸ್, ಪ್ರವೀಣ್ ದುಬೆ, ವಿಶಾಲ್ ನಿಶಾದ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯದಲ್ಲಿ ವರುಣನ ರೌದ್ರಾವತಾರಕ್ಕೆ ಇಬ್ಬರು ಬಲಿ: ಮೈಸೂರಲ್ಲಿ ರೈತ ಮಹಿಳೆ, ಬಳ್ಳಾರಿಯಲ್ಲಿ ಯುವಕ ಸಿಡಿಲಿಗೆ ಸಾವು! – Kannada News | Mysuru, Ballari Lightning Tragedy: Two Dead Amidst Rain; Weather Dept Issues Warning

ಮೈಸೂರು, ಮೇ.16: ರಾಜ್ಯಾದ್ಯಂತ ಹವಾಮಾನ ವೈಪರೀತ್ಯದ ಬೆನ್ನಲ್ಲೇ ಮಳೆರಾಯನ ಆರ್ಭಟಕ್ಕೆ ಇಬ್ಬರು ಬಲಿಯಾಗಿದ್ದಾರೆ. ಮೈಸೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಇಂದು (ಮೇ.16) ಸಂಜೆ ಸಂಭವಿಸಿದ ಪ್ರತ್ಯೇಕ ಸಿಡಿಲು ಬಡಿತದ ದುರಂತಗಳಲ್ಲಿ ಓರ್ವ ರೈತ ಮಹಿಳೆ ಹಾಗೂ ಯುವಕ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಸತ್ಯಗಾಲ ಗ್ರಾಮದಲ್ಲಿ ಸಿಡಿಲು ಬಡಿದು ಆಲನಹಳ್ಳಿ ನಿವಾಸಿಯಾದ ವಿನೋದಾ ಎಂಬ ರೈತ ಮಹಿಳೆ ಮೃತಪಟ್ಟಿದ್ದಾರೆ. ಇಂದು ಸಂಜೆ ಜಮೀನಿನಲ್ಲಿ ಕಟ್ಟಿಹಾಕಿದ್ದ ಹಸುಗಳನ್ನು ಮಳೆಯಿಂದಾಗಿ ವಾಪಸ್ ಮನೆಗೆ ಕರೆತರಲು ಹೋದಾಗ ಈ ದುರ್ಘಟನೆ ಸಂಭವಿಸಿದೆ. ಸಿಡಿಲಿನ ತೀವ್ರತೆಗೆ ವಿನೋದಾ ಮಾತ್ರವಲ್ಲದೆ ಅವರಿಗೆ ಸೇರಿದ ಎರಡು ಹಸುಗಳು ಕೂಡ ಸ್ಥಳದಲ್ಲೇ ಜೀವ ಕಳೆದುಕೊಂಡಿವೆ. ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಇಂದಿನಿಂದ 4 ದಿನ ರಾಜ್ಯದ ಈ ಭಾಗಗಳಲ್ಲಿ ಭಾರಿ ಮಳೆ: ಆಲಿಕಲ್ಲು ಮಳೆ , ಬಿರುಗಾಳಿಯ ಮುನ್ನೆಚ್ಚರಿಕೆ!

ಸಪೋಟ ತೋಟದಲ್ಲಿ ಕೆಲಸ ಮಾಡುತ್ತಿದ್ದ ಯುವಕನ ದುರ್ಮರಣ

ಬಳ್ಳಾರಿ ತಾಲೂಕಿನ ಡಿ. ನಾಗನಹಳ್ಳಿ ಗ್ರಾಮದಲ್ಲಿ ಕೃಷಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಸಿಡಿಲಿಗೆ ಬಲಿಯಾಗಿದ್ದಾನೆ. ಗಾದಿಲಿಂಗಪ್ಪ (32) ಮೃತಪಟ್ಟ ದುರ್ದೈವಿ. ಇಂದು ಸಂಜೆ ಸಪೋಟ ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಸಿಡಿಲು ಅಪ್ಪಳಿಸಿದೆ. ಸಿಡಿಲಿನ ಹೊಡೆತಕ್ಕೆ ಸಿಕ್ಕು ಗಾದಿಲಿಂಗಪ್ಪ ಸ್ಥಳದಲ್ಲೇ ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹವಾಮಾನ ಇಲಾಖೆಯು ಈಗಾಗಲೇ ಮುನ್ನೆಚ್ಚರಿಕೆ ನೀಡಿರುವುದರಿಂದ, ಸಾರ್ವಜನಿಕರು ಮಳೆ ಮತ್ತು ಗುಡುಗು ಮುನ್ಸೂಚನೆ ಇರುವಾಗ ಜಮೀನು, ತೋಟ ಅಥವಾ ಮುಕ್ತ ಪ್ರದೇಶಗಳಿಗೆ ಹೋಗದೆ ಸುರಕ್ಷಿತ ಕಟ್ಟಡಗಳಲ್ಲಿ ಆಶ್ರಯ ಪಡೆಯಬೇಕೆಂದು ಕಂದಾಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಳ್ಳಿ ಬಾರ್ ಆಮದಿಗೆ ಕೇಂದ್ರ ಬ್ರೇಕ್: ಇನ್ಮುಂದೆ ಪರವಾನಗಿ ಕಡ್ಡಾಯ

ನವದೆಹಲಿ, ಮೇ 16: ದೇಶದಲ್ಲಿ ಬೆಳ್ಳಿ ಬೆಲೆ ಗಗನಕ್ಕೇರಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ಬೆಳ್ಳಿ ಬಾರ್ ಆಮದು ಮಾಡಿಕೊಳ್ಳಲು ವಿಶೇಷ ಪರವಾನಗಿಯನ್ನು ಕಡ್ಡಾಯಗೊಳಿಸಿ ನಿರ್ಬಂಧ ಹೇರಿದೆ. ಈವರೆಗೂ ಸಿಲ್ವರ್ ಬಾರ್ಸ್ ಆಮದಿನ ಮೇಲೆ ಯಾವುದೇ ನಿರ್ಬಂಧ ಇರಲಿಲ್ಲ. ಆದರೆ, ಹೊಸ ನಿಯಮದ ಪ್ರಕಾರ 99.9% ಶುದ್ಧತೆಯ ಬೆಳ್ಳಿ ಬಾರ್‌ ಆಮದು ಮಾಡಲು ವಾಣಿಜ್ಯ ಸಚಿವಾಲಯದ ವಿಶೇಷ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ.

ಮತ್ತಷ್ಟು ಮಾಹಿತಿ ಅಪ್​​ಡೇಟ್​ ಆಗಲಿದೆ.

Source link

ಸೆಲೆಬ್ರಿಟಿಗಳ ಅಹಂಕಾರಕ್ಕೆ ತೆರೆ ಹಾಕಲು ನಿರ್ಧರಿಸಿದ ಬಾಲಿವುಡ್​ನ ಖ್ಯಾತ ಹೇರ್​​​ಸ್ಟೈಲಿಸ್ಟ್ – Kannada News | Hair stylist Aalim Hakim pens against celebrities rude behavior

ಬಾಲಿವುಡ್ (Bollywood) ಚಿತ್ರರಂಗದ ಮೋಸ್ಟ್ ಡಿಮ್ಯಾಂಡಿಂಗ್ ಹೇರ್ ಸ್ಟೈಲಿಸ್ಟ್ ಎಂದರೆ ಅದು ಆಲಿಮ್ ಹಕೀಮ್. ಅವರು ಅಹಂಕಾರಿ ವರ್ತನೆ ತೋರುವ ನಟರ ತಂಡಕ್ಕೆ ಬಿಸಿ ಮುಟ್ಟಿಸಿದ್ದಾರೆ. ಚಿತ್ರರಂಗದ ತೆರೆಯ ಹಿಂದೆ ಕೆಲಸ ಮಾಡುವ ಕಲಾವಿದರನ್ನು ಗೌರವಿಸದ ನಟರು ಮತ್ತು ಅವರ ಮ್ಯಾನೇಜರ್‌ಗಳ ಜೊತೆ ಇನ್ನು ಮುಂದೆ ಕೆಲಸ ಮಾಡುವುದಿಲ್ಲ ಎಂದು ಅವರು ಘೋಷಿಸಿದ್ದಾರೆ.

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಆಲಿಮ್, ‘ಯಾವ ನಟರ ಮ್ಯಾನೇಜರ್‌ಗಳು ಚಿತ್ರತಂಡದ ಸದಸ್ಯರನ್ನು ಕೀಳಾಗಿ ಕಾಣುತ್ತಾರೋ, ಅಂತಹ ನಟರ ಸಿನಿಮಾಗಳಿಂದ ನಾವು ಹಿಂದೆ ಸರಿಯಲು ನಿರ್ಧರಿಸಿದ್ದೇವೆ’ ಎಂದು ತಿಳಿಸಿದ್ದಾರೆ.

‘ಹೇರ್ ಡ್ರೆಸ್ಸರ್ಸ್, ಮೇಕಪ್ ಆರ್ಟಿಸ್ಟ್‌ಗಳು, ಸ್ಟೈಲಿಸ್ಟ್‌ಗಳು ಮತ್ತು ಅಸಿಸ್ಟೆಂಟ್‌ಗಳನ್ನು ‘ಕೇವಲ ಸ್ಟಾಫ್’ ಎಂದು ಕರೆಯಬೇಡಿ. ಪ್ರತಿಯೊಬ್ಬ ನಟನ ಸೌಂದರ್ಯ ಮತ್ತು ಸ್ಕ್ರೀನ್ ಅಪಿಯರೆನ್ಸ್ ಹಿಂದೆ ಈ ತಂತ್ರಜ್ಞರ ಶ್ರಮವಿರುತ್ತದೆ. ಹಬ್ಬ ಹರಿದಿನಗಳು, ನಿದ್ರೆ ಮತ್ತು ಕುಟುಂಬವನ್ನು ಮರೆತು ಕಲಾವಿದರು ಕೆಲಸ ಮಾಡುತ್ತಾರೆ. ಆದರೆ ಅವರ ಜೊತೆ ಮ್ಯಾನೇಜರ್‌ಗಳು ಅಸಭ್ಯವಾಗಿ ವರ್ತಿಸುವುದು, ಕಿರುಚಾಡುವುದು ಮತ್ತು ಅವಮಾನಿಸುವುದನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಆಲಿಮ್ ಬೇಸರ ವ್ಯಕ್ತಪಡಿಸಿದ್ದಾರೆ.

ನಟರ ಇಮೇಜ್‌ಗೆ ಧಕ್ಕೆ

ಹಲವು ಬಾರಿ ನಟರ ಮ್ಯಾನೇಜರ್‌ಗಳು ವ್ಯಾನಿಟಿ ವ್ಯಾನ್ ಹೊರಗಡೆ ತಂಡದ ಸದಸ್ಯರ ಜೊತೆ ತೋರುವ ಅಸಭ್ಯ ವರ್ತನೆಯಿಂದ ಆ ನಟರ ಘನತೆಗೂ ಧಕ್ಕೆ ಬರುತ್ತದೆ ಎಂಬ ಎಚ್ಚರಿಕೆಯನ್ನು ಅವರು ನೀಡಿದ್ದಾರೆ. ‘ಗೌರವ ನೀಡುವುದು ಮೂಲಭೂತ ಮಾನವೀಯತೆ, ಅದು ಉಪಕಾರವಲ್ಲ. ಪ್ರತಿಭೆಗೆ ಗೌರವ ಸಿಗಲೇಬೇಕು’ ಎಂದು ಅವರು ಪ್ರತಿಪಾದಿಸಿದ್ದಾರೆ.

ಆಲಿಮ್ ಅವರ ಈ ನಿರ್ಧಾರಕ್ಕೆ ಬಾಲಿವುಡ್‌ನ ಗಣ್ಯರಾದ ಫರಾ ಖಾನ್, ರಾಜಕುಮಾರ್ ರಾವ್, ಕಾಜೋಲ್, ಅರ್ಜುನ್ ರಾಂಪಾಲ್ ಸೇರಿದಂತೆ ಹಲವರು ಬೆಂಬಲ ಸೂಚಿಸಿದ್ದಾರೆ. ವಿಶೇಷವೆಂದರೆ ಆಲಿಮ್ ಹಕೀಮ್ ಅವರು ರಾಕಿಂಗ್ ಸ್ಟಾರ್ ಯಶ್, ಎಂ.ಎಸ್. ಧೋನಿ, ವಿರಾಟ್ ಕೊಹ್ಲಿ ಸೇರಿದಂತೆ ಭಾರತದ ಬಹುತೇಕ ಸ್ಟಾರ್ ನಟರ ನೆಚ್ಚಿನ ಹೇರ್ ಸ್ಟೈಲಿಸ್ಟ್ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕೇಂದ್ರದ ಒಂದು ರಾಷ್ಟ್ರ ಒಂದು ಚುನಾವಣೆ ಪ್ರಸ್ತಾವನೆಗೆ ಡಿಸಿಎಂ ಡಿಕೆ ಶಿವಕುಮಾರ್​​ ವಿರೋಧ – Kannada News | DK Shivakumar Opposes ‘One Nation, One Election’; it is a threat to Federalism and Democrtic system

ಡಿಸಿಎಂ ಡಿಕೆ ಶಿವಕುಮಾರ್​Image Credit source: DK Shivakumar/X

ಬೆಂಗಳೂರು, ಮೇ 16: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಒಂದು ರಾಷ್ಟ್ರ, ಒಂದು ಚುನಾವಣೆ’ (One Nation, One Election) ಪ್ರಸ್ತಾವನೆಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​​ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಅಧಿಕಾರ ಕೇಂದ್ರಿತ, ರಾಜಕೀಯ ಪ್ರೇರಿತ ಯೋಜನೆ. ರಾಜ್ಯಗಳನ್ನ ದುರ್ಬಲಗೊಳಿಸಲು ಇದನ್ನ ತರಲಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೂ ಧಕ್ಕೆ ತರುವ ಅಪಾಯವಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಕಿಡಿಕಾರಿದ್ದಾರೆ.

ಮುಖ್ಯಾಂಶಗಳು

  • ಒಂದು ದೇಶ ಒಂದು ಚುನಾವಣೆ ಕುರಿತು ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ವಿರೋಧ
  • ಇದು ರಾಜಕೀಯ ಪ್ರೇರಿತ ಯೋಜನೆ ಎಂದ ಡಿಕೆ ಶಿವಕುಮಾರ್​​
  • ಪ್ರಾಕ್ಟಿಕಲಿ ಇಂಪಾಸಿಬಲ್ ಎಂದ ಡಿಕೆ ಶಿವಕುಮಾರ್​​

ಒಕ್ಕೂಟ ವ್ಯವಸ್ಥೆಗೆ ತೀವ್ರ ಧಕ್ಕೆ: ಡಿಕೆ ಶಿವಕುಮಾರ್

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಂಸದ ಪಿ.ಪಿ.ಚೌಧರಿ ಅಧ್ಯಕ್ಷತೆಯ ಜಂಟಿ ಸಂಸದೀಯ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಡಿಕೆ ಶಿವಕುಮಾರ್​​, ಈ ಪ್ರಸ್ತಾವನೆಯಿಂದ ಒಕ್ಕೂಟ ವ್ಯವಸ್ಥೆಗೆ ತೀವ್ರ ಧಕ್ಕೆಯಾಗಲಿದೆ ಎಂದಿರುವ ಡಿಕೆ ಶಿವಕುಮಾರ್​, ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವವರ ಅನುಕೂಲಕ್ಕೆ ತಕ್ಕಂತೆ ಇದನ್ನು ಹೆಣೆಯಲಾಗುತ್ತಿದೆ. ಹೀಗಾಗಿ ಈ ಪ್ರಸ್ತಾವನೆಯನ್ನು ಕೆಪಿಸಿಸಿ ಅಧ್ಯಕ್ಷನಾಗಿ ಹಾಗೂ ಕರ್ನಾಟಕದ ಡಿಸಿಎಂ ಆಗಿ ಸಾರಾಸಗಟಾಗಿ ತಿರಸ್ಕರಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಬಿಟ್ಟರೆ ಸಿಎಂ ಆಗುವ ಅರ್ಹತೆ ಇರುವುದು ಮಲ್ಲಿಕಾರ್ಜುನ ಖರ್ಗೆಗೆ ಮಾತ್ರ: ಬಸವರಾಜ ರಾಯರೆಡ್ಡಿ

‘ಒಂದು ದೇಶ, ಒಂದು ಚುನಾವಣೆ’ ವಿರೋಧಿಸಿ ಕರ್ನಾಟಕ ವಿಧಾನಸಭೆ ಈಗಾಗಲೇ ನಿರ್ಣಯ ಅಂಗೀಕರಿಸಿದೆ ಎಂದಿರುವ ಡಿಕೆ ಶಿವಕುಮಾರ್​, ಸಭೆಯಲ್ಲಿ ಆ ನಿರ್ಣಯವನ್ನೂ ಓದಿ ಹೇಳಿದರು. ಈ ಪ್ರಸ್ತಾವನೆ ಬಗ್ಗೆ ಕರ್ನಾಟಕ ಸರ್ಕಾರದ ಸಹಮತವಿಲ್ಲ ಎಂದು ಅವರು ಪುನರುಚ್ಚರಿಸಿದರು.

ಪ್ರಾಕ್ಟಿಕಲಿ ಇಂಪಾಸಿಬಲ್

ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಅವಧಿಗೆ ಚುನಾವಣೆ ನಡೆಯುತ್ತದೆ ಎನ್ನುವುದನ್ನು ಉಲ್ಲೇಖಿಸಿದ ಡಿಕೆ ಶಿವಕುಮಾರ್​​, ಕರ್ನಾಟಕದಲ್ಲಿ ಮೂರು ವರ್ಷಗಳ ಹಿಂದೆ ಚುನಾವಣೆ ಆಗಿತ್ತು. ತಮಿಳುನಾಡು, ಕೇರಳದಲ್ಲಿ ಮೊನ್ನೆಯಷ್ಟೇ ಆಯಿತು. ಪಂಜಾಬ್, ತೆಲಂಗಾಣದಲ್ಲಿ ಬೇರೆ ಕಾಲದಲ್ಲಿ ಆಗಿದೆ. ಇವೆಲ್ಲವನ್ನೂ ಸಮಯಕರಿಸುವುದು ಹೇಗೆ? ಒಂದೊಮ್ಮೆ ಅವಿಶ್ವಾಸ, ಬಹುಮತದ ಕೊರತೆಯಿಂದ ಸರ್ಕಾರ ಅರ್ಧಕ್ಕೆ ಉರುಳಿದರೆ ಪರಿಹಾರ ಏನು? ಇದು ಕಾರ್ಯಸಾಧು ಯೋಜನೆಯಲ್ಲ, ಪ್ರಾಕ್ಟಿಕಲಿ ಇಂಪಾಸಿಬಲ್ ಎಂದು ಹೇಳಿದ್ದಾರೆ.

ಆಮ್ ಆದ್ಮಿ ಪಕ್ಷದಿಂದಲೂ ವಿರೋಧ

ಇನ್ನು ಒಂದು ದೇಶ ಒಂದು ಚುನಾವಣೆ ಕುರಿತು ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ಆಮ್ ಆದ್ಮಿ ಪಕ್ಷದಿಂದ ಕೂಡ ವಿರೋಧ ವ್ಯಕ್ತವಾಗಿದೆ. ಸಭೆಯಲ್ಲಿ ಭಾಗಿಯಾಗಿದ್ದ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಈ ಪ್ರಸ್ತಾವನೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯ ಬಿಜೆಪಿ ನಾಯಕರು ಬೆಂಬಲ ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 7:51 pm, Sat, 16 May 26

Source link

3 ಮಕ್ಕಳಾದರೆ 30,000 ರೂ., 4ನೇ ಮಗುವಿಗೆ 40,000 ರೂ! ಪಕ್ಕದ ರಾಜ್ಯ ಸರ್ಕಾರದಿಂದ ಹೊಸ ಆಫರ್ – Kannada News | This state announced Rs 30000 for third child Rs 40000 for fourth baby to boost population

ವಿಜಯವಾಡ, ಮೇ 16: ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu) ಇಂದು ರಾಜ್ಯದಲ್ಲಿ ಜನಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ ಕುತೂಹಲಕಾರಿಯಾದ ಯೋಜನೆಯನ್ನು ಘೋಷಿಸಿದ್ದಾರೆ. ನರಸನ್ನಪೇಟೆಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ರಾಜ್ಯದ ಯಾವುದೇ ಕುಟುಂಬದಲ್ಲಿ ಮೂರನೇ ಮಗುವಿನ ಜನನವಾದರೆ ಆ ಕುಟುಂಬಕ್ಕೆ ಸರ್ಕಾರವು 30,000 ರೂ. ಮತ್ತು ನಾಲ್ಕನೇ ಮಗುವಿಗೆ 40,000 ರೂ. ಪ್ರೋತ್ಸಾಹ ಧನ ನೀಡಲಿದೆ ಎಂದು ಹೇಳಿದ್ದಾರೆ.

ಆಂಧ್ರಪ್ರದೇಶದ ಜನಸಂಖ್ಯೆಯಲ್ಲಿ ಇಳಿಕೆಯಾಗುತ್ತಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ಮಕ್ಕಳನ್ನು ಹೊರೆಯಾಗಿ ನೋಡುವ ಬದಲು ದೇಶದ ಸಂಪತ್ತಾಗಿ ನೋಡಬೇಕು ಎಂದು ಅವರು ಒತ್ತಿ ಹೇಳಿದರು. ಈ ಘೋಷಣೆ ಜನಸಂಖ್ಯಾ ಬೆಳವಣಿಗೆಯನ್ನು ಉತ್ತೇಜಿಸುವ ರಾಜ್ಯ ಸರ್ಕಾರದ ಯೋಜನೆಯ ಭಾಗವಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ದಕ್ಷಿಣ ಭಾರತದಲ್ಲಿ ವೃದ್ಧರ ಸಂಖ್ಯೆ ಹೆಚ್ಚಳ, ಹೆಚ್ಚು ಮಕ್ಕಳನ್ನು ಹೊಂದುವಂತೆ ಯುವಕರಿಗೆ ಚಂದ್ರಬಾಬು ನಾಯ್ಡು ಸಲಹೆ

ಕುಸಿಯುತ್ತಿರುವ ಜನನ ದರಗಳು ಮತ್ತು ವಯಸ್ಸಾದ ಜನಸಂಖ್ಯೆ ಸೇರಿದಂತೆ ಬದಲಾಗುತ್ತಿರುವ ಜನಸಂಖ್ಯಾ ಮಾದರಿಗಳ ಕುರಿತು ಹಲವಾರು ರಾಜ್ಯಗಳಲ್ಲಿ ವ್ಯಾಪಕ ಚರ್ಚೆಗಳ ನಡುವೆ ಸಿಎಂ ಚಂದ್ರಬಾಬು ನಾಯ್ಡು ಅವರ ಈ ಹೇಳಿಕೆಗಳು ಬಂದಿವೆ.

ಜನಸಂಖ್ಯಾ ಬೆಳವಣಿಗೆಯನ್ನು ಉತ್ತೇಜಿಸುವ ಪ್ರಯತ್ನಗಳ ಭಾಗವಾಗಿ, ಮೂರನೇ ಮಗುವಿನ ಜನನದ ಕುಟುಂಬಗಳಿಗೆ 30,000 ರೂ. ಮತ್ತು ನಾಲ್ಕನೇ ಮಗುವಿನ ಜನನಕ್ಕೆ 40,000 ರೂ.ಗಳನ್ನು ಸರ್ಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಘೋಷಿಸಿದರು. “ನಾನು ಇದರ ಬಗ್ಗೆ ಹಲವು ಬಾರಿ ಯೋಚಿಸಿದ್ದೇನೆ. ಹಿಂದೆ, ನಾನು ಕುಟುಂಬ ಯೋಜನೆಗಾಗಿ ಕೆಲಸ ಮಾಡಿದ್ದೇನೆ. ಆದರೆ ಇಂದು ಮತ್ತೊಮ್ಮೆ, ಮಕ್ಕಳು ನಮ್ಮ ಸಂಪತ್ತು, ನಾವೆಲ್ಲರೂ ನಮ್ಮ ಮಕ್ಕಳ ಹಿತದೃಷ್ಟಿಯಿಂದ ಕೆಲಸ ಮಾಡುವ ಅವಶ್ಯಕತೆಯಿದೆ. ಅದಕ್ಕಾಗಿಯೇ ನಾನು ಮತ್ತೊಂದು ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಮೂರನೇ ಮಗು ಹುಟ್ಟಿದ ತಕ್ಷಣ 30,000 ರೂ. ನೀಡುತ್ತೇವೆ. ನಾಲ್ಕನೇ ಮಗುವಿಗೆ ನಾವು 40,000 ರೂ. ನೀಡುತ್ತೇವೆ” ಎಂದು ಅವರು ಹೇಳಿದ್ದಾರೆ.

ಆಂಧ್ರಪ್ರದೇಶವು ಸುಮಾರು 5.37 ಕೋಟಿಯಿಂದ 5.40 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ಇದು ಭಾರತದಲ್ಲಿ ಹತ್ತನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ. ಇದು ದೇಶದ ಒಟ್ಟು ಜನಸಂಖ್ಯೆಯ ಸುಮಾರು 3.76 ಪ್ರತಿಶತವನ್ನು ಹೊಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಗುವಿನ ಹೊಟ್ಟೆಯಲ್ಲಿದ್ದ 25 ಸೆಂ.ಮೀ ಕೂದಲಿನ ಗುಡ್ಡೆ ಹೊರಗೆ ತೆಗೆದ ವೈದ್ಯರು! – Kannada News | Rare Pediatric Surgery: Medicover Bengaluru Removes 480g Hairball from 2 Year Old Pica Patient

ಬೆಂಗಳೂರು, ಮೇ.16: ಸಿಲಿಕಾನ್ ಸಿಟಿಯ ಮೆಡಿಕವರ್ ಆಸ್ಪತ್ರೆಯ ವೈದ್ಯರು ಅತ್ಯಂತ ಅಪರೂಪದ ಮತ್ತು ಸಂಕೀರ್ಣವಾದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ 2 ವರ್ಷದ ಪುಟ್ಟ ಮಗುವಿಗೆ ಮರುಜೀವ ನೀಡಿದ್ದಾರೆ. ಮಗುವಿನ ಹೊಟ್ಟೆಯಲ್ಲಿದ್ದ ಬರೋಬ್ಬರಿ 480 ಗ್ರಾಂ ತೂಕದ ಕೂದಲಿನ ಗುಡ್ಡೆ ಹಾಗೂ ರಬ್ಬರ್ ಬ್ಯಾಂಡ್‌ಗಳನ್ನು ಲ್ಯಾಪರೋಸ್ಕೊಪಿಕ್ ಶಸ್ತ್ರಚಿಕಿತ್ಸೆಯ ಮೂಲಕ ಸುರಕ್ಷಿತವಾಗಿ ಹೊರತೆಗೆಯಲಾಗಿದೆ.

ವೈದ್ಯಕೀಯ ಜಗತ್ತಿನಲ್ಲಿ ಆಹಾರವಲ್ಲದ ವಸ್ತುಗಳನ್ನು (ಕೂದಲು, ರಬ್ಬರ್, ಪ್ಲಾಸ್ಟಿಕ್ ಇತ್ಯಾದಿ) ತಿನ್ನುವ ಇಂತಹ ವಿಚಿತ್ರ ಮಾನಸಿಕ ಮತ್ತು ದೈಹಿಕ ಅಭ್ಯಾಸವನ್ನು ‘ಪೈಕಾ’ (Pica) ಎನ್ನಲಾಗುತ್ತದೆ. ಈ 2 ವರ್ಷದ ಮಗುವಿಗೆ ಚಿಕ್ಕ ವಯಸ್ಸಿನಲ್ಲೇ ಕೂದಲು, ರಬ್ಬರ್ ಬ್ಯಾಂಡ್‌ಗಳು ಮತ್ತು ಬಲೂನ್ ತುಂಡುಗಳನ್ನು ತಿನ್ನುವ ವಿಚಿತ್ರ ಅಭ್ಯಾಸವಿತ್ತು. ಮಗು ನಿರಂತರವಾಗಿ ತಿಂದ ಕೂದಲು ಹೊಟ್ಟೆಯೊಳಗೆ ಸಂಗ್ರಹವಾಗಿ ದೊಡ್ಡ ಕೂದಲಿನ ಗುಡ್ಡೆಯಾಗಿ (Trichobezoar) ಮಾರ್ಪಟ್ಟಿತ್ತು. ಇದು ಹೊಟ್ಟೆಯಿಂದ ಆರಂಭವಾಗಿ ಸಣ್ಣ ಕರಳಿನವರೆಗೆ (Small Intestine) ಹರಡಿಕೊಂಡಿತ್ತು.

ಕಳೆದ ಕೆಲವು ದಿನಗಳಿಂದ ಮಗು ತೀವ್ರ ಹೊಟ್ಟೆನೋವು, ನಿರಂತರ ವಾಂತಿ ಮತ್ತು ಆಹಾರ ಸೇವನೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡಿದ್ದರಿಂದ ಆತಂಕಗೊಂಡ ಪೋಷಕರು ಆಸ್ಪತ್ರೆಗೆ ಕರೆತಂದಿದ್ದರು. ವೈದ್ಯಕೀಯ ತಪಾಸಣೆ ಮತ್ತು ಸ್ಕ್ಯಾನಿಂಗ್ ನಡೆಸಿದಾಗ ಕರಳು ಮತ್ತು ಹೊಟ್ಟೆಯ ಭಾಗದಲ್ಲಿ ದೊಡ್ಡ ತ್ಯಾಜ್ಯದ ರಾಶಿ ಇರುವುದು ಪತ್ತೆಯಾಗಿತ್ತು.

ಇದನ್ನೂ ಓದಿ: ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಹೊಸ ರೂಲ್ಸ್: 9ನೇ ತರಗತಿಯಿಂದ 3 ಭಾಷೆಗಳ ಅಧ್ಯಯನ ಕಡ್ಡಾಯ; ಕನಿಷ್ಠ 2 ಭಾರತೀಯ ಭಾಷೆಗಳಿರಬೇಕು!

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಮೆಡಿಕವರ್ ಆಸ್ಪತ್ರೆಯ ನಾಲ್ಕು ಪರಿಣಿತ ವೈದ್ಯರ ತಂಡವು ತಕ್ಷಣವೇ ಲ್ಯಾಪರೋಸ್ಕೊಪಿಕ್ ಶಸ್ತ್ರಚಿಕಿತ್ಸೆ (Laparoscopic Surgery) ನಡೆಸಲು ನಿರ್ಧರಿಸಿತು. ಯಶಸ್ವಿ ಕಾರ್ಯಾಚರಣೆಯ ಮೂಲಕ ಮಗುವಿನ ಹೊಟ್ಟೆಯಿಂದ 25 ಸೆಂ.ಮೀ ಉದ್ದ ಮತ್ತು 480 ಗ್ರಾಂ ತೂಕದ ಬೃಹತ್ ಕೂದಲಿನ ರಾಶಿಯನ್ನು ಹೊರತೆಗೆಯಲಾಗಿದೆ. ಸದ್ಯ ಮಗು ಅಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದೆ. ಇಷ್ಟು ಸಣ್ಣ ವಯಸ್ಸಿನ ಮಗುವಿನಲ್ಲಿ ಇಂತಹ ಪ್ರಕರಣ ಕಂಡುಬರುವುದು ಅತ್ಯಂತ ಅಪರೂಪ ಎಂದು ವೈದ್ಯರು ತಿಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

9 ಗಂಟೆ ಕಾರ್ಯಾಚರಣೆ ಬಳಿಕ ಕೊನೆಗೂ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ! – Kannada News | Punjab 4 year old Boy successfully rescued from borewell after 9 hour operation

ನವದೆಹಲಿ, ಮೇ 16: ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯಲ್ಲಿ 4 ವರ್ಷದ ಬಾಲಕ ಬೋರ್‌ವೆಲ್‌ಗೆ (borewell) ಬಿದ್ದಿದ್ದ. ಮಗು ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ಹೊಸದಾಗಿ ಕೊರೆದ ಬೋರ್‌ವೆಲ್‌ಗೆ ಬಿದ್ದಿದ್ದಾನೆ ಎಂದು ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಘಟನೆ ಶುಕ್ರವಾರ ರಾತ್ರಿ ನಡೆದಿತ್ತು. ಹೊಶಿಯಾರ್‌ಪುರ-ದಾಸುಯಾ ರಸ್ತೆಯ ಭಿಖೋವಾಲ್ ಬಳಿಯ ಚಕ್ ಸಮಾನಾ ಗ್ರಾಮದ 4 ವರ್ಷದ ಮಗು ಬೋರ್​​ವೆಲ್​ ಬಾವಿಯೊಳಗೆ ಬಿದ್ದಿದ್ದ. 9 ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿದ ಎನ್​ಡಿಆರ್​ಎಫ್​ ಸಿಬ್ಬಂದಿ ಆತನನ್ನು ಸುರಕ್ಷಿತವಾಗಿ ಹೊರಗೆ ತಂದಿದ್ದಾರೆ.

ಗುರ್ಕರನ್ ಸಿಂಗ್ ಎಂಬ ಬಾಲಕ ಶುಕ್ರವಾರ ಸಂಜೆ ಬೋರ್‌ವೆಲ್‌ಗೆ ಬಿದ್ದಿದ್ದ. ಆತ 30 ಅಡಿ ಆಳದಲ್ಲಿ ಸಿಲುಕಿದ್ದ. ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ಸ್ಥಳೀಯರನ್ನು ಒಳಗೊಂಡ ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯ ಪ್ರಾರಂಭಿಸಿದವು. ಮಧ್ಯರಾತ್ರಿ ಆ ಮಗುವನ್ನು ಹೊರತೆಗೆಯುವಲ್ಲಿ ಅವರು ಯಶಸ್ವಿಯಾದರು. ಬಾಲಕನನ್ನು ಆ್ಯಂಬುಲೆನ್ಸ್​​ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗುತ್ತಿದೆ. ಆತನ ಆರೋಗ್ಯ ಸ್ಥಿರವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version