ವಾರದ ಪ್ರೇಮ – ಪ್ರೀತಿ: ಈ ರಾಶಿಯವರಿಗೆ ಒದಗಿಬರಲಿದೆ ಕಂಕಣ ಭಾಗ್ಯ, ಯಾರಿಗೆ ಕಾಯ್ದಿದೆ ಗುಪ್ತ ಸಂಬಂಧದ ಗಂಡಾಂತರ? – Kannada News | Love and Compatibility: Zodiac Predictions May 17 25 with Venus Transit

ಮೇ 17ರಿಂದ ಮೇ 25ರವರೆಗೆ ಪ್ರೇಮ, ಸ್ತ್ರೀ ಪುರುಷರ ನಡುವೆ ಹೊಂದಾಣಿಕೆ ಹೇಗಿದೆ ಎಂದು ತಿಳಿಯಲು ಮುಖ್ಯವಾಗಿ ನೋಡಬೇಕಾದ ಶುಕ್ರನ ಸ್ಥಾನವು ರಾಶಿಯ ಪ್ರಕಾರ ಮಿಥುನದಲ್ಲಿ, ಹೋರೆಯ ಪ್ರಕಾರ ಸಿಂಹದಲ್ಲಿ, ದ್ರೇಕ್ಕಾಣದ ಪ್ರಕಾರ ಮಿಥುನದಲ್ಲಿ, ನವಾಂಶದ ಪ್ರಕಾರ ತುಲಾದಲ್ಲಿ ಇರುವ ಕಾರಣ ತನ್ನ ಸ್ಥಾನದ ಆಧಾರದ ಮೇಲೆ ಫಲವನ್ನು ನೀಡುವನು.

ಮೇಷ ರಾಶಿ :

​ಶುಕ್ರನ ಸಂಚಾರವು ಪ್ರೇಮದಲ್ಲಿ ಹೊಸ ಉತ್ಸಾಹ ತರಲಿದೆ. ವಿವಾಹ ಆಕಾಂಕ್ಷಿಗಳಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ಹಳೆ ವಿವಾದ ಮರೆತು ಸಂಗಾತಿಯ ಜೊತೆ ಸುಂದರ ಕ್ಷಣ ಕಳೆಯಿರಿ. ಕಾಮನೆಗಳ ಮೇಲೆ ಹಿಡಿತವಿರಲಿ, ಇಲ್ಲವಾದರೆ ಮನಸ್ತಾಪ ಸಂಭವ.

ವೃಷಭ ರಾಶಿ :

​ನಿಮ್ಮ ರಾಶಿಯಲ್ಲಿ ಗ್ರಹಗಳ ಸಮಾಗಮವಿರುವುದರಿಂದ ಆಕರ್ಷಣೆ ಹೆಚ್ಚಲಿದೆ. ಪ್ರೇಮ ಜೀವನದಲ್ಲಿ ಮಧುರತೆ ಇರಲಿದೆ. ಆದರೆ, ಸಣ್ಣ ವಿಷಯಕ್ಕೆ ವಿಚ್ಛೇದನದ ಮಾತು ಬೇಡ. ತಾಳ್ಮೆಯಿಂದ ವರ್ತಿಸಿದರೆ ಸಂಬಂಧ ಗಟ್ಟಿಯಾಗುವುದು. ಕಾಮದ ಹಸಿವಿಗಿಂತ ಭಾವನೆಗೆ ಒತ್ತು ನೀಡಿ.

ಮಿಥುನ ರಾಶಿ :

​ಮಿಥುನ ರಾಶಿಯವರಿಗೆ ಈ ವಾರ ಸ್ವಲ್ಪ ಮಿಶ್ರಫಲ. ಸಂಗಾತಿಯೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಮೂಡಬಹುದು. ಕಾಮಪ್ರಚೋದಕ ಆಲೋಚನೆಗಳು ಹೆಚ್ಚಾಗಲಿವೆ. ಸಂಬಂಧದಲ್ಲಿ ಪಾರದರ್ಶಕತೆ ಇರಲಿ. ಮದುವೆಯ ಮಾತುಕತೆ ಸದ್ಯಕ್ಕೆ ಮುಂದುೂಡುವುದು ಒಳಿತು.

​ಕರ್ಕಾಟಕ ರಾಶಿ :

​ಭಾವನಾತ್ಮಕ ಜೀವಿಗಳಾದ ನಿಮಗೆ ಸಂಗಾತಿಯ ಬೆಂಬಲ ಸಿಗಲಿದೆ. ಪ್ರೇಮ ವಿವಾಹಕ್ಕೆ ಮನೆಯವರ ಒಪ್ಪಿಗೆ ಸಿಗುವ ಸಾಧ್ಯತೆ ಇದೆ. ಹಳೆಯ ಸಂಬಂಧದ ನೆನಪುಗಳು ಕಾಡಬಹುದು. ದೈಹಿಕ ಸುಖಕ್ಕಿಂತ ಮಾನಸಿಕ ನೆಮ್ಮದಿಗೆ ಆದ್ಯತೆ ನೀಡಿ, ಸಂಬಂಧ ಸುಸ್ಥಿರವಾಗಿರುತ್ತದೆ.

ಸಿಂಹ ರಾಶಿ :

​ಸಂಗಾತಿಯ ಮೇಲೆ ಸವಾರಿಕೆ ಮಾಡಬೇಡಿ. ಪ್ರೇಮ ಜೀವನದಲ್ಲಿ ಅಹಂಕಾರ ಬೇಡ. ವಿಚ್ಛೇದನದ ಅಂಚಿನಲ್ಲಿರುವವರಿಗೆ ರಾಜಿ ಸಂಧಾನದ ಅವಕಾಶವಿದೆ. ವೈವಾಹಿಕ ಜೀವನದಲ್ಲಿ ಕಾಮ ಮತ್ತು ಸಂವಹನ ಸಮತೋಲನದಲ್ಲಿರಲಿ. ಹೊಸ ವ್ಯಕ್ತಿಯ ಪರಿಚಯ ಆಕರ್ಷಣೆಗೆ ನಾಂದಿ ಹಾಡಬಹುದು.

ಕನ್ಯಾ ರಾಶಿ :

​ಅತಿಯಾದ ವಿಮರ್ಶೆ ಪ್ರೇಮವನ್ನು ಕೊಲ್ಲಬಹುದು. ಸಂಗಾತಿಯ ತಪ್ಪು ಹುಡುಕುವುದನ್ನು ಬಿಟ್ಟರೆ ವಾರ ಸುಗಮವಾಗಿರುತ್ತದೆ. ವಿವಾಹ ಪ್ರಸ್ತಾಪಗಳು ಯಶಸ್ವಿಯಾಗಲಿವೆ. ಏಕಾಂತದ ಕ್ಷಣಗಳು ಸಂಬಂಧವನ್ನು ಮತ್ತಷ್ಟು ಹತ್ತಿರ ತರಲಿವೆ. ಕಾಮನೆಗಳ ಪೂರೈಕೆಯಲ್ಲಿ ಪರಸ್ಪರ ಗೌರವವಿರಲಿ.

ತುಲಾ ರಾಶಿ :

​ಶುಕ್ರನ ಪ್ರಭಾವದಿಂದ ನಿಮ್ಮ ಆಕರ್ಷಣೆ ಹೆಚ್ಚಲಿದೆ. ಪ್ರೇಮ ಸಂಬಂಧಗಳು ವಿವಾಹಕ್ಕೆ ನಾಂದಿ ಹಾಡಲಿವೆ. ಕಾಮದ ತುಡಿತ ಹೆಚ್ಚಿದ್ದರೂ, ವಿವೇಚನೆ ಮರೆಯಬೇಡಿ. ಕಾನೂನುಬದ್ಧ ವಿಚ್ಛೇದನ ಪ್ರಕ್ರಿಯೆಗಳಲ್ಲಿ ಸ್ವಲ್ಪ ವಿಳಂಬವಾಗಬಹುದು. ಸಂಬಂಧದಲ್ಲಿ ಸಾಮರಸ್ಯ ಕಾಪಾಡಿಕೊಳ್ಳಿ.

ವೃಶ್ಚಿಕ ರಾಶಿ :

ವಿಚ್ಛೇದನದಲ್ಲಿ ನಿಮಗೆ ತೀವ್ರವಾದ ಕಾಮನೆಗಳು ಕಾಡಲಿವೆ. ಗುಪ್ತ ಸಂಬಂಧಗಳಿಂದ ದೂರವಿರಿ, ಇದು ಸಂಸಾರದಲ್ಲಿ ಬಿರುಕು ತರಬಹುದು. ದಾಂಪತ್ಯದಲ್ಲಿ ವಿಚ್ಛೇದನದ ಆಲೋಚನೆ ಬಿಟ್ಟು ಸಮನ್ವಯಕ್ಕೆ ಪ್ರಯತ್ನಿಸಿ. ಪ್ರೇಮದಲ್ಲಿ ನಂಬಿಕೆಯೇ ಜೀವಾಳ, ಅದನ್ನು ಹೇಗಾದರೂ ಉಳಿಸಿಕೊಳ್ಳಿ.

​ಧನು ರಾಶಿ :

ಸದಾ ​ಸ್ವಾತಂತ್ರ್ಯವನ್ನೇ ಬಯಸುವ ನಿಮಗೆ ಸಂಗಾತಿಯ ಅತಿಯಾದ ಹಸ್ತಕ್ಷೇಪ ಕಿರಿಕಿರಿ ಎನಿಸಬಹುದು. ವಿವಾಹ ಜೀವನದಲ್ಲಿ ತಾಳ್ಮೆ ಅಗತ್ಯ. ಪ್ರೇಮಿಗಳಿಗೆ ಪ್ರವಾಸದ ಯೋಗ ತಾನಾಗಿಯೇ ಒದಗುವ ಸಾಧ್ಯಯೆ ಇದೆ. ಕಾಮದ ವಿಷಯದಲ್ಲಿ ನವೀನತೆ ಬಯಸುವಿರಿ. ಹಳೆಯ ವಿವಾದಗಳನ್ನು ಕೆದಕದೆ ವರ್ತಮಾನದಲ್ಲಿ ಬದುಕಿದರೆ ಚೆನ್ನ.

​ಮಕರ ರಾಶಿ :

​ಕೆಲಸದ ಒತ್ತಡದ ನಡುವೆ ಪ್ರೇಮಕ್ಕೆ ಸಮಯ ಮೀಸಲಿಡಿ. ಸಂಗಾತಿಯ ಪ್ರೀತಿಯನ್ನು ಕೇವಲವಾಗಿ ಕಂಡು ಕಡೆಗಣಿಸಬೇಡಿ. ವಿವಾಹ ಕಾರ್ಯಗಳು ಸುಗಮವಾಗಿ ನೆರವೇರಲಿವೆ. ವಿಚ್ಛೇದನ ಬಯಸುವವರಿಗೆ ಹಿರಿಯರ ಮಧ್ಯಸ್ಥಿಕೆಯಿಂದ ಸಹಾಯವಾಗಲಿದೆ. ಸಂಬಂಧದಲ್ಲಿ ಸ್ಥಿರತೆ ಮತ್ತು ಬದ್ಧತೆ ಮುಖ್ಯವಾಗಲಿ.

ಇದನ್ನೂ ಓದಿ: ಮನೆಯಲ್ಲಿ ಆಮೆ ಪ್ರತಿಮೆ ಇಟ್ಟರೆ ಅದೃಷ್ಟ ಖುಲಾಯಿಸುತ್ತಾ? ವಾಸ್ತು ಶಾಸ್ತ್ರ ಹೇಳುವುದೇನು?

ಕುಂಭ ರಾಶಿ :

​ವ್ಯಕ್ತಿತ್ವದಲ್ಲಿನ ಬದಲಾವಣೆ ಸಂಗಾತಿಗೆ ಅಚ್ಚರಿ ತರಬಹುದು. ಪ್ರೇಮದಲ್ಲಿ ಹೊಸತನ ಕಾಣುವಿರಿ. ದೈಹಿಕ ಆಕರ್ಷಣೆಗಿಂತ ಬೌದ್ಧಿಕ ಸಂವಾದ ಆಪ್ತವೆನಿಸಲಿದೆ. ವಿಚ್ಛೇದನ ಪ್ರಕರಣಗಳಲ್ಲಿ ನಿಮ್ಮ ಪರ ತೀರ್ಪು ಬರುವ ಸಾಧ್ಯತೆ ಇದೆ. ಮದುವೆಯ ಮಾತುಕತೆ ಯಶಸ್ವಿಯಾಗಲಿದೆ.

​ಮೀನ ರಾಶಿ :

​ಕನಸಿನ ಲೋಕದಿಂದ ಹೊರಬಂದು ವಾಸ್ತವದ ಪ್ರೇಮವನ್ನು ಒಪ್ಪಿಕೊಳ್ಳುವುದು ಕಷ್ಟ. ಸಂಗಾತಿಯ ಜೊತೆಗಿನ ಕಾಮನೆಗಳು ತೃಪ್ತಿ ನೀಡಲಿವೆ. ವಿವಾಹ ಆಕಾಂಕ್ಷಿಗಳಿಗೆ ಶುಭ ವಾರ್ತೆಯಿಂದ ಸಂತೋಷ. ವಿಚ್ಛೇದನದ ಭಯ ದೂರವಾಗಿ ಮತ್ತೆ ಒಂದಾಗುವ ಲಕ್ಷಣಗಳಿವೆ. ಪ್ರೀತಿಯಲ್ಲಿ ನಿಃಸ್ವಾರ್ಥತೆ ಇರಲಿ.

– ಲೋಹಿತ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಲ್ಲಾ ಸುಳ್ಳು.. ಮೊಹ್ಸಿನ್ ನಖ್ವಿಗೆ ಯಾವುದೇ ಆಹ್ವಾನ ನೀಡಿಲ್ಲ – Kannada News | Mohsin Naqvi Not Invited to IPL Final 2026 in Ahmedabad; Attends ICC Meet Virtually

ಮೇ 31 ರಂದು 2026 ರ ಐಪಿಎಲ್​ನ (IPL 2026) ಫೈನಲ್ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿದೆ. ಅದೇ ದಿನ ಐಸಿಸಿಯ (ICC) ವಾರ್ಷಿಕ ಮಂಡಳಿ ಸಭೆಯೂ ಅಹಮದಾಬಾದ್‌ನಲ್ಲಿ ನಡೆಯಲಿದೆ. ಹೀಗಾಗಿ ಈ ಎರಡು ಕಾರ್ಯಕ್ರಮಗಳಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿಗೆ (Mohsin Naqvi) ಆಹ್ವಾನ ಬಂದಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿದ್ದವು. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ನಖ್ವಿಗೆ ಆಹ್ವಾನ ನೀಡಿರುವುದಕ್ಕೆ ಭಾರತೀಯರು ಆಕ್ರೋಶ ಹೊರಹಾಕಿದ್ದರು. ಆದರೀಗ ಈ ಬಗ್ಗೆ ಆಪ್ತ ಮೂಲಗಳಿಂದ ಮಾಹಿತಿ ಹೊರಬಿದ್ದಿದ್ದು, ಮೊಹ್ಸಿನ್ ನಖ್ವಿಗೆ ಯಾವುದೇ ರೀತಿಯ ಆಹ್ವಾನ ನೀಡಲಾಗಿಲ್ಲ ಎಂಬುದು ತಿಳಿದುಬಂದಿದೆ. ಅಲ್ಲದೆ ನಖ್ವಿ ವಿಡಿಯೋ ಕಾನ್ಫರೆನ್ಸ್ ಮೂಲಕ ಐಸಿಸಿ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.

ಭಾರತಕ್ಕೆ ಆಹ್ವಾನಿಸಲಾಗಿಲ್ಲ

ಪಿಟಿಐ ವರದಿಯ ಪ್ರಕಾರ, ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರನ್ನು ಅಹಮದಾಬಾದ್‌ನಲ್ಲಿ ನಡೆಯುವ ಐಪಿಎಲ್ 2026 ರ ಫೈನಲ್‌ಗೆ ಆಹ್ವಾನಿಸಲಾಗಿಲ್ಲ. ಅಲ್ಲದೆ ನಖ್ವಿ ಮೇ 31 ರಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಐಸಿಸಿ ಮಂಡಳಿಯ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಯು ಮೂಲತಃ ಕಳೆದ ತಿಂಗಳು ದೋಹಾದಲ್ಲಿ ನಡೆಯಬೇಕಿತ್ತು, ಆದರೆ ಪಶ್ಚಿಮ ಏಷ್ಯಾದಲ್ಲಿನ ಪ್ರಸ್ತುತ ಬಿಕ್ಕಟ್ಟಿನಿಂದಾಗಿ ಮುಂದೂಡಲ್ಪಟ್ಟಿತು. ಇದೀಗ ಆ ಸಭೆ ಭಾರತದಲ್ಲಿ ನಡೆಯಲಿದೆ.

ಸಭೆಯಲ್ಲಿ ಏನೆಲ್ಲ ಚರ್ಚೆಯಾಗಲಿದೆ?

ವಾಸ್ತವವಾಗಿ ಪ್ರಯಾಣಿಸಲು ಸಾಧ್ಯವಾಗದ ಸದಸ್ಯ ಪ್ರತಿನಿಧಿಗಳಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ಅದರಂತೆ ನಖ್ವಿ ಸೇರಿದಂತೆ ಇನ್ನು ಇಬ್ಬರು ಪ್ರತಿನಿಧಿಗಳಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಇನ್ನು ಈ ಸಭೆಯಲ್ಲಿ ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಸಮಿತಿ (ಸಿಇಸಿ) ಮತ್ತು ಮಂಡಳಿ ಸೇರಿದಂತೆ ಹಲವಾರು ಸಭೆಗಳನ್ನು ನಡೆಸಲು ನಿರ್ಧರಿಸಲಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ನ ಭವಿಷ್ಯದ ರಚನೆ ಮತ್ತು ನಿರ್ದೇಶನದ ಬಗ್ಗೆಯೂ ಚರ್ಚಿಸುವ ನಿರೀಕ್ಷೆಯಿದೆ.

ಪಾಕ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿಗೆ ತನ್ನ ದೇಶದ ಪ್ರಧಾನಿ ಹೆಸರೇ ಗೊತ್ತಿಲ್ಲ

ಫೈನಲ್ ಬೆಂಗಳೂರಿನಿಂದ ಶಿಫ್ಟ್

ಐಪಿಎಲ್ 2026 ರ ಫೈನಲ್ ಪಂದ್ಯವನ್ನು ಹಾಲಿ ಚಾಂಪಿಯನ್ ಆರ್‌ಸಿಬಿಯ ತವರು ಮೈದಾನ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದಾಗ್ಯೂ, ಟಿಕೆಟ್ ವಿವಾದದಿಂದಾಗಿ, ಬಿಸಿಸಿಐ ಫೈನಲ್ ಪಂದ್ಯವನ್ನು ಅಹಮದಾಬಾದ್‌ಗೆ ಸ್ಥಳಾಂತರಿಸಿತು. ಪ್ಲೇಆಫ್ ಪಂದ್ಯಗಳು ಮೇ 26 ರಂದು ಪ್ರಾರಂಭವಾಗಲಿವೆ. ಮೊದಲ ಕ್ವಾಲಿಫೈಯರ್ ಪಂದ್ಯವು ಮೇ 26 ರಂದು ಧರ್ಮಶಾಲಾದಲ್ಲಿ ನಡೆಯಲಿದೆ. ಎಲಿಮಿನೇಟರ್ ಮತ್ತು ಕ್ವಾಲಿಫೈಯರ್ 2 ಕ್ರಮವಾಗಿ ಮೇ 27 ಮತ್ತು 29 ರಂದು ನ್ಯೂ ಚಂಡೀಗಢದಲ್ಲಿ ನಡೆಯಲಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಚನ್ನಗಿರಿ ಪೊಲೀಸರು

ದಾವಣಗೆರೆ, ಮೇ.16: ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದಲ್ಲಿ ನಡೆದ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಅತಾವುಲ್ಲಾ (42) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ನಿನ್ನೆ ರಾತ್ರಿ ಸುಮಾರು 10:00-10:45ರ ಸಮಯದಲ್ಲಿ ನಲ್ಲೂರು ಗ್ರಾಮದ ಮುಖ್ಯ ರಸ್ತೆಯಲ್ಲಿ ಅತಾವುಲ್ಲಾ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ಮೃತರ ಅಣ್ಣ ಶೇಖ್ ಜಾಕೀರ್ ಅವರು ನೀಡಿದ ದೂರಿನ ಮೇರೆಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಚನ್ನಗಿರಿ ಇನ್ಸ್‌ಪೆಕ್ಟರ್ ರವೀಶ್ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ಶೇಖ್ ದಸ್ತಗಿರ್ (68) ಮತ್ತು ಅವರ ಮಗ ಶೇಖ್ ಜಬಿಲ್ಲ (29) ಎಂಬುವವರನ್ನು ಬಂಧಿಸಲಾಗಿದೆ. ಇವರಿಬ್ಬರೂ ಭದ್ರಾವತಿ ತಾಲೂಕಿನ ಕಾಗೆ ಕೊಡುಮಗೆ ಗ್ರಾಮದವರಾಗಿದ್ದಾರೆ. ಆರೋಪಿಗಳು ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಅತಾವುಲ್ಲಾ ಅವರು ಆರೋಪಿಗಳ ಕುಟುಂಬಕ್ಕೆ ಎರಡು ಲಕ್ಷ ರೂಪಾಯಿ ಸಾಲ ಮರುಪಾವತಿಸದಿರುವುದು ಮತ್ತು ಮದುವೆ ವಿಚಾರಕ್ಕೆ ಸಂಬಂಧಿಸಿದ ದ್ವೇಷ ಕೊಲೆಗೆ ಪ್ರಮುಖ ಕಾರಣವಾಗಿದೆ. ಪೊಲೀಸರು ಕೊಲೆಗೆ ಬಳಸಿದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

KKR vs GT: 34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್

ಐಪಿಎಲ್ 2026 ರ 60 ನೇ ಪಂದ್ಯದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆರಂಭಿಕ ಆಟಗಾರ ಫಿನ್ ಅಲೆನ್ ಗುಜರಾತ್ ಟೈಟಾನ್ಸ್ ವಿರುದ್ಧ ಸ್ಫೋಟಕ ಇನ್ನಿಂಗ್ಸ್ ಆಡಿದರು. ಈಡನ್ ಗಾರ್ಡನ್ಸ್‌ನಲ್ಲಿ ಸಿಕ್ಸರ್‌ಗಳ ಮಳೆ ಸುರಿಸಿದ ಅಲೆನ್ ಕೇವಲ 7 ರನ್​ಗಳಿಂದ ಶತಕ ವಂಚಿತರಾದರು. ಆದಾಗ್ಯೂ ಅಲೆನ್ ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು.

ಫಿನ್ ಅಲೆನ್ ಕೇವಲ 35 ಎಸೆತಗಳಲ್ಲಿ ನಾಲ್ಕು ಬೌಂಡರಿಗಳು ಮತ್ತು ಹತ್ತು ಸಿಕ್ಸರ್‌ಗಳ ಸಹಿತ 93 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿದರು. ವಾಸ್ತವವಾಗಿ ಅಲೆನ್​ಗೆ ಈ ಪಂದ್ಯದಲ್ಲಿ ಎರಡು ಜೀವದಾನಗಳು ಸಿಕ್ಕವು. ಇನ್ನಿಂಗ್ಸ್​ನ ಆರಂಭದಲ್ಲಿ ಹೋಲ್ಡನ್ ಸ್ವಲ್ಪ ಕಷ್ಟಕರವಾದ ಕ್ಯಾಚ್ ಬಿಟ್ಟರೆ, ಅಲೆನ್ 34 ರನ್ ಬಾರಿಸಿದ್ದಾಗ ಮೊಹಮ್ಮದ್ ಸಿರಾಜ್ ಸುಲಭವಾದ ಕ್ಯಾಚ್​ ಕೈಬಿಟ್ಟರು. ಈ ಎರಡು ಜೀವದಾನಗಳ ಲಾಭ ಪಡೆದ ಅಲೆನ್ ಗುಜರಾತ್ ಬೌಲರ್​ಗಳನ್ನು ಹೈರಾಣಾಗಿಸಿದರು.

Source link

ಪೊಲೀಸ್ ಠಾಣೆಯಲ್ಲೇ ಪ್ರೇಮಿಗಳ ಕುಟುಂಬದ ಮಧ್ಯೆ ಗಲಾಟೆ, ಗರ್ಭಿಣಿ ಮೇಲೂ ಹಲ್ಲೆ! – Kannada News | Hubballi Law and Order Crisis: Family Brawl in Police Station Over Love, Pregnant Woman Assaulted

, ಹುಬ್ಬಳ್ಳಿ ಪೊಲೀಸ್ ಠಾಣೆ ಗಲಾಟೆImage Credit source: Tv9 kannada

ಹುಬ್ಬಳ್ಳಿ, ಮೇ.16: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಾನೂನು ಸುವ್ಯವಸ್ಥೆಗೆ ಸವಾಲು ಹಾಕುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಪ್ರೀತಿಯ ವಿಚಾರಕ್ಕೆ ಸಂಬಂಧಿಸಿದಂತೆ ಕೇಶ್ವಾಪುರ ಪೊಲೀಸ್ ಠಾಣೆಯ ಒಳಗೇ ಎರಡು ಕುಟುಂಬಗಳ ಮಧ್ಯೆ ಭೀಕರ ಗಲಾಟೆ ನಡೆದಿದ್ದು, ಪೊಲೀಸರ ಕಣ್ಣೆದುರಲ್ಲೇ ಗರ್ಭಿಣಿ ಮಹಿಳೆ ಸೇರಿದಂತೆ ಯುವಕನ ಕುಟುಂಬಸ್ಥರ ಮೇಲೆ ಕಟ್ಟಿಗೆಯಿಂದ ಹಲ್ಲೆ ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ.

ಈಶ್ವರ ತಾಳಂಬರಿ ಮತ್ತು ನಿಖಿತಾ ಎಂಬುವರು ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ, ಇವರ ಪ್ರೇಮ ಸಂಬಂಧಕ್ಕೆ ಯುವತಿ ನಿಖಿತಾ ಕುಟುಂಬಸ್ಥರಿಂದ ತೀವ್ರ ವಿರೋಧವಿತ್ತು. ಇದೇ ವಿಚಾರವಾಗಿ ಯುವತಿಯ ಸಹೋದರ ಗಿರೀಶ್ ಎಂಬಾತ ಈಶ್ವರ್ ಮೇಲೆ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಈ ಬಗ್ಗೆ ದೂರು ನೀಡಲು ಈಶ್ವರ್ ತನ್ನ ಕುಟುಂಬಸ್ಥರೊಂದಿಗೆ ಕೇಶ್ವಾಪುರ ಪೊಲೀಸ್ ಠಾಣೆಗೆ ಆಗಮಿಸಿದ್ದರು.

ಈಶ್ವರ್ ಕುಟುಂಬ ದೂರು ನೀಡಲು ಬಂದ ವಿಷಯ ತಿಳಿದು ಯುವತಿಯ ಕಡೆಯವರು ಕೂಡ ಠಾಣೆಗೆ ಧಾವಿಸಿದ್ದಾರೆ. ಈ ವೇಳೆ ಪೊಲೀಸ್ ಸಿಬ್ಬಂದಿಯ ಕಣ್ಣೆದುರಲ್ಲೇ ಮಾತಿಗೆ ಮಾತು ಬೆಳೆದು, ಯುವತಿಯ ಕಡೆಯವರು ಠಾಣೆಯ ಒಳಗೇ ಇಟ್ಟಿದ್ದ ಕಟ್ಟಿಗೆಯಿಂದ ಯುವಕನ ಕುಟುಂಬಸ್ಥರ ಮೇಲೆ ಮುಗಿಬಿದ್ದಿದ್ದಾರೆ. ಹಲ್ಲೆಯ ತೀವ್ರತೆಗೆ ಗರ್ಭಿಣಿ ಮಹಿಳೆ ಎಂದೂ ನೋಡದೆ ಆಕೆಯ ಮೇಲೂ ಕೈ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಠಾಣೆಯ ಒಳಗೆ ಗಲಾಟೆ ಜೋರಾಗುತ್ತಿದ್ದಂತೆ ಅಲ್ಲಿದ್ದ ಸಿಬ್ಬಂದಿಗಳು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ವರುಣನ ರೌದ್ರಾವತಾರಕ್ಕೆ ಇಬ್ಬರು ಬಲಿ: ಮೈಸೂರಲ್ಲಿ ರೈತ ಮಹಿಳೆ, ಬಳ್ಳಾರಿಯಲ್ಲಿ ಯುವಕ ಸಿಡಿಲಿಗೆ ಸಾವು!

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಯುವಕ ಈಶ್ವರ್‌ನನ್ನು ತಕ್ಷಣವೇ ಚಿಕಿತ್ಸೆಗಾಗಿ ಕಿಮ್ಸ್ (KIMS) ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಎರಡೂ ಕುಟುಂಬಗಳಿಂದ ದೂರು ಮತ್ತು ಪ್ರತಿದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟೊಮೆಟೋದಲ್ಲಿ ಈ ಎರಡು ವಸ್ತುಗಳನ್ನು ಬೆರೆಸಿ ಮನೆಯ ಮೂಲೆಗಳಲ್ಲಿಟ್ಟರೆ ಜಿರಳೆಗಳ ಕಾಟವೇ ಇರೋದಿಲ್ಲ – Kannada News | These simple home remedies are effective in getting rid of cockroach

ಮನೆಯನ್ನು ಎಷ್ಟೇ ಸ್ವಚ್ಛವಾಗಿ ಇಟ್ಟುಕೊಂಡರೂ ಜಿರಳೆಗಳ (cockroach) ಹಾವಳಿ ಇದ್ದೇ ಇರುತ್ತದೆ. ಅದರಲ್ಲೂ ಅಡುಗೆ ಮನೆಯಲ್ಲಿ ಇವುಗಳ ಕಾಟ ತುಸು ಹೆಚ್ಚೇ ಇರುತ್ತದೆ. ಆಹಾರ ಪದಾರ್ಥಗಳನ್ನಿಟ್ಟಿರುವ ಸ್ಥಳ, ಸಿಂಕ್‌, ಕಸದ ಬುಟ್ಟಿ ಇತ್ಯಾದಿ ಸ್ಥಳಗಳಲ್ಲಿ ಜಿರಳೆಗಳು ಹೆಚ್ಚಾಗಿ ಓಡಾಡುತ್ತಿರುತ್ತವೆ. ಹೀಗೆ ಸುಳಿದಾಡುವ ಇವು ಪಾತ್ರೆಗಳು, ಆಹಾರ ಪದಾರ್ಥಗಳನ್ನು ಸ್ಪರ್ಶಿಸುವ ಮೂಲಕ ನಮಗೆ ರೋಗಗಳನ್ನು ಹರಡುತ್ತವೆ. ಇದು ಅಲರ್ಜಿ, ಕೆಂಪು, ತುರಿಕೆ ಮತ್ತು ಉಸಿರಾಟದ ಸಮಸ್ಯೆಗಳು ಸೇರಿದಂತೆ ಹಲವು ಕಾಯಿಲೆಗಳನ್ನು ಉಂಟು ಮಾಡಬಹುದು. ಹಾಗಾಗಿ ಇವುಗಳ ಹಾವಳಿಯಿಂದ ಮುಕ್ತಿ ಪಡೆಯಲು ಬಹುತೇಕರು ರಾಸಯನಿಕಯುಕ್ತ ಸ್ಪ್ರೇ ಇತ್ಯಾದಿ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಇದು ಆರೋಗ್ಯದ ದೃಷ್ಟಿಯಿಂದ ಅಷ್ಟೇನೂ ಒಳ್ಳೆಯದಲ್ಲ. ಹೀಗಿರುವಾಗ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರ ಜೊತೆಗೆ ಟೊಮೆಟೋದಲ್ಲಿ ಈ ಎರಡು ವಸ್ತುಗಳನ್ನು ಬೆರೆಸಿ ಜಿರಳೆಗಳು ಓಡಾಡುವ ಸ್ಥಳದಲ್ಲಿ ಇರುವ ಮೂಲಕ ಇವುಗಳ ಹಾವಳಿಯಿಂದ ಮುಕ್ತಿ ಪಡೆಯಬಹುದು.

ಜಿರಳೆಗಳ ಹಾವಳಿಯಿಂದ ಮುಕ್ತಿ ಪಡೆಯಲು ಇಲ್ಲಿದೆ ಸುಲಭ ಉಪಾಯ:

ನಿಮ್ಮ ಅಡುಗೆಮನೆಯಲ್ಲಿ ಮತ್ತು ನಿಮ್ಮ ಕೋಣೆಗಳಲ್ಲಿ ಜಿರಳೆಗಳು ಓಡಾಡುವುದನ್ನು ನೀವು ನೋಡಿದರೆ, ಅವುಗಳು ಎಲ್ಲಿ ಓಡಾಡುತ್ತದೆಯೋ ಅಲ್ಲಿ ಟೊಮೆಟೊದಲ್ಲಿ ಅಡುಗೆ ಸೋಡಾ ಮತ್ತು ಸಕ್ಕರೆಯನ್ನು ಮಿಶ್ರಣ ಮಾಡಿ ಇಟ್ಟುಬಿಡಿ. ಈ ಪರಿಣಾಮಕಾರಿ ಮನೆಮದ್ದು ಜಿರಳೆಗಳನ್ನು ಪರಿಣಾಮಕಾರಿಯಾಗಿ ತೊಡೆದು ಹಾಕುತ್ತವೆ. ಇದಕ್ಕಾಗಿ ಟೊಮೆಟೊವನ್ನು ಕತ್ತರಿಸಿ, ಅದರ ಬೀಜಗಳು ಮತ್ತು ತಿರುಳನ್ನು ತೆಗೆದುಹಾಕಿ ಬಳಿಕ ಅದಕ್ಕೆ ಅರ್ಧ ಟೀಚಮಚ ಅಡಿಗೆ ಸೋಡಾ ಮತ್ತು ಒಂದು ಟೀಚಮಚ ಸಕ್ಕರೆಯನ್ನು ಹಾಕಿ ಮಿಶ್ರಣ ಮಾಡಿ,  ಜಿರಳೆಗಳು ಹೆಚ್ಚಾಗಿ ಇರುವ ಪ್ರದೇಶಗಳಲ್ಲಿ ಇರಿಸಿ. ಸಕ್ಕರೆ ಮತ್ತು ಟೊಮೆಟೊದ ವಾಸನೆಗೆ ಈ ಮಿಶ್ರಣದತ್ತ ಬರುವ ಜಿರಳೆಗಳು ಈ ಮಿಶ್ರಣವನ್ನು ತಿಂದು ಸಾಯುತ್ತವೆ.

ಇದನ್ನೂ ಓದಿ: ಬೇಸಿಗೆಯಲ್ಲಿ ಹಾವುಗಳು ಪದೇ ಪದೇ ಮನೆ ಬಳಿ ಕಾಣಿಸಿಕೊಳ್ಳಲು ಮರ ಗಿಡಗಳೇ ಮುಖ್ಯ ಕಾರಣ

ಜಿರಳೆಗಳನ್ನು ಓಡಿಸುವ ಇತರೆ ಪರಿಣಾಮಕಾರಿ ಮನೆಮದ್ದುಗಳು:

  • ನಿಮ್ಮ ಅಡುಗೆಮನೆಯ ಸಿಂಕ್, ಕಪಾಟು ಅಥವಾ ಡ್ರಾಯರ್‌ನಲ್ಲಿ ಕೆಲವು ಪಲಾವ್‌ ಎಲೆಗಳನ್ನು ಇರಿಸಿ. ಅವುಗಳ ವಾಸನೆಯು ಜಿರಳೆಗಳನ್ನು ಓಡಿಸುತ್ತವೆ.
  • 1-2 ಚಮಚ ಬೇವಿನ ಎಣ್ಣೆಯನ್ನು ನೀರಿನೊಂದಿಗೆ ಬೆರೆಸಿ. ಅದನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿ ಜಿರಳೆಗಳು ಓಡಾಡಸುವ ಸ್ಥಳದಲ್ಲಿ ಸಿಂಪಡಿಸಿ.
  • ನಿಮ್ಮ ಅಡುಗೆಮನೆ ಮತ್ತು ಸ್ನಾನಗೃಹದಲ್ಲಿ ಎಲ್ಲೆಡೆ ಕರ್ಪೂರದ ತುಂಡುಗಳನ್ನು ಇರಿಸಿ. ಇದರ ವಾಸನೆಗೆ ಜಿರಳೆಗಳು ಓಡಿ ಹೋಗುತ್ತವೆ.
  • ನೆಲ ಒರೆಸುವ ನೀರಿಗೆ ಬಿಳಿ ವಿನೆಗರ್ ಮತ್ತು ನಿಂಬೆ ರಸವನ್ನು ಸೇರಿಸಿ, ಆ ನೀರಿನಲ್ಲಿ ನೆಲ ಒರೆಸಿ, ಇದು ಜಿರಳೆಗಳು ಮತ್ತು ಇರುವೆಗಳನ್ನು ಓಡಿಸುತ್ತವೆ. ನೆಲದ ಮೇಲೆ ಅಂಟಿರುವ ಇದು ಬ್ಯಾಕ್ಟೀರಿಯಾಗಳನ್ನು ಸಹ ಕೊಲ್ಲುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೀಟ್ ಹಗರಣದ ಬೆನ್ನಲ್ಲೇ ಎನ್‌ಟಿಎ ಸರ್ಜರಿ: ನಾಲ್ವರು ಖಡಕ್ ಅಧಿಕಾರಿಗಳ ಎಂಟ್ರಿ – Kannada News | NTA Overhaul: Joint Secretaries Appointed; NEET UG Shifts to Online Exams from 2027

ದೆಹಲಿ, ಮೇ16: ನೀಟ್-ಯುಜಿ (NEET-UG 2026) ಪರೀಕ್ಷೆಯ ಅಕ್ರಮ ಮತ್ತು ಪೇಪರ್ ಲೀಕ್ ಹಗರಣದ ತನಿಖೆಯನ್ನು ಸಿಬಿಐ (CBI) ಚುರುಕುಗೊಳಿಸಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರವು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಯನ್ನು ಸಂಪೂರ್ಣವಾಗಿ ಪುನರ್ರಚಿಸಲು ಮುಂದಾಗಿದೆ. ಶನಿವಾರದ (ಮೇ.16) ಮಹತ್ವದ ಬೆಳವಣಿಗೆಯಲ್ಲಿ, ಕ್ಯಾಬಿನೆಟ್‌ನ ನೇಮಕಾತಿ ಸಮಿತಿಯು ಎನ್‌ಟಿಎಗೆ ಇಬ್ಬರು ಜಂಟಿ ಕಾರ್ಯದರ್ಶಿಗಳು (Joint Secretaries) ಮತ್ತು ಇಬ್ಬರು ಜಂಟಿ ನಿರ್ದೇಶಕರನ್ನು (Joint Directors) ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಿ ಆದೇಶ ಹೊರಡಿಸಿದೆ.

ಅನುಜಾ ಬಾಪತ್ (ISS – 1998 ಬ್ಯಾಚ್) ಜಂಟಿ ಕಾರ್ಯದರ್ಶಿಯಾಗಿ 5 ವರ್ಷಗಳ ಅವಧಿಗೆ ನೇಮಕ. ರುಚಿತಾ ವಿಜ್ (IRS ಕಸ್ಟಮ್ಸ್ – 2004 ಬ್ಯಾಚ್) ಜಂಟಿ ಕಾರ್ಯದರ್ಶಿಯಾಗಿ 5 ವರ್ಷಗಳ ಅವಧಿಗೆ ನೇಮಕ. ಆಕಾಶ್ ಜೈನ್ (IRS ಆದಾಯ ತೆರಿಗೆ – 2013 ಬ್ಯಾಚ್) ಜಂಟಿ ನಿರ್ದೇಶಕರಾಗಿ ನೇಮಕ. ಆದಿತ್ಯ ರಾಜೇಂದ್ರ ಭೋಜಗಾಢಿಯಾ (IA&AS – 2013 ಬ್ಯಾಚ್) ಜಂಟಿ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.

ಪೇಪರ್ ಲೀಕ್ ಜಾಲಕ್ಕೆ ಶಾಶ್ವತ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಮುಂದಿನ ವರ್ಷದಿಂದ (2027) ನೀಟ್ ಪರೀಕ್ಷೆಯನ್ನು ಸಂಪೂರ್ಣವಾಗಿ ಕಂಪ್ಯೂಟರ್ ಆಧಾರಿತ (Computer-Based Test) ಆನ್‌ಲೈನ್ ಮಾದರಿಯಲ್ಲಿ ನಡೆಸುವುದಾಗಿ ಅಧಿಕೃತವಾಗಿ ಘೋಷಿಸಿದೆ.

ಇದನ್ನೂ ಓದಿ: ಮಗುವಿನ ಹೊಟ್ಟೆಯಲ್ಲಿದ್ದ 25 ಸೆಂ.ಮೀ ಕೂದಲಿನ ಗುಡ್ಡೆ ಹೊರಗೆ ತೆಗೆದ ವೈದ್ಯರು!

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಎನ್‌ಟಿಎ ಸಂಸ್ಥೆಯಲ್ಲಿ ಲೋಪದೋಷಗಳಿರುವುದನ್ನು ಒಪ್ಪಿಕೊಂಡಿದ್ದು, “ಸಂಸ್ಥೆಯನ್ನು ಶೂನ್ಯ-ದೋಷ (Zero-Error) ಮುಕ್ತವಾಗಿಸುವುದು ನಮ್ಮ ಜವಾಬ್ದಾರಿ, ಇದಕ್ಕಾಗಿ ಬಲವಾದ ಸುಧಾರಣೆಗಳನ್ನು ತರುತ್ತೇವೆ” ಎಂದು ಹೇಳಿದ್ದಾರೆ. ಕಳೆದ ಮೇ 3 ರಂದು ನಡೆದಿದ್ದ, ಸುಮಾರು 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರೆದಿದ್ದ ನೀಟ್-ಯುಜಿ ಪರೀಕ್ಷೆಯನ್ನು ಪೇಪರ್ ಲೀಕ್ ಆರೋಪದ ಹಿನ್ನೆಲೆಯಲ್ಲಿ ಈ ವಾರದ ಆರಂಭದಲ್ಲಿ ರದ್ದುಗೊಳಿಸಲಾಗಿತ್ತು. ಪ್ರಸ್ತುತ ಈ ಮರುಪರೀಕ್ಷೆಯನ್ನು (Retest) ಜೂನ್ 21 ರಂದು ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:00 pm, Sat, 16 May 26

Source link

ಸೊಳ್ಳೆ ಓಡಿಸಲು ಬಳಸುವ ಅಗರಬತ್ತಿಗಳಿಂದ ಬರಬಹುದು ಗಂಭೀರ ಕಾಯಿಲೆ! ಸಮೀಕ್ಷೆಯಲ್ಲಿ ಆತಂಕಕಾರಿ ಮಾಹಿತಿ ಬಹಿರಂಗ – Kannada News | Is Your Mosquito Agarbatti Safe? How To Identify Legal Vs Illegal Brands

ಮನೆಗಳಲ್ಲಿ ಸೊಳ್ಳೆಗಳಿಂದ ರಕ್ಷಿಸಿಕೊಳ್ಳಲು ಅನೇಕರು ಸೊಳ್ಳೆ ಅಗರಬತ್ತಿ (Mosquito Agarbatti), ಕಾಯಿಲ್ ಮತ್ತು ವಿವಿಧ ಮಸ್ಕಿಟೋ ರಿಪೆಲೆಂಟ್‌ಗಳನ್ನು ಬಳಸುತ್ತಾರೆ. ಇವು ಸೊಳ್ಳೆಗಳನ್ನು ದೂರವಿಡಲು ಸಹಾಯ ಮಾಡಿದರೂ, ಎಲ್ಲ ಉತ್ಪನ್ನಗಳು ಸಂಪೂರ್ಣ ಸುರಕ್ಷಿತವಾಗಿರುತ್ತವೆ ಎನ್ನುವುದು ತಪ್ಪು ಕಲ್ಪನೆ. ಅದರಲ್ಲಿಯೂ ಇತ್ತೀಚೆಗೆ ಬಿಡುಗಡೆಯಾದ ಎಚ್ಐಸಿಎ (Home Insect Control Association) ಎಂಬ ಸಮೀಕ್ಷೆ ಈ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದ್ದು ಇವು ಸೊಳ್ಳೆಗಳನ್ನು ಸಾಯಿಸುವುದರ ಜೊತೆಗೆ ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಹಾಗಾಗಿ ಸಿಐಆರ್ ನೋಂದಣಿ ಸಂಖ್ಯೆ ಇಲ್ಲದ ಸೊಳ್ಳೆ ನಿವಾರಕ ಉತ್ಪನ್ನಗಳನ್ನು ಖರೀದಿ ಮಾಡಬಾರದು ಎಂದು ಹೇಳಿದೆ. ಹಾಗಾದರೆ ಸಮೀಕ್ಷೆ ಹೇಗೆ ನಡೆಸಲಾಗಿತ್ತು, ಸೊಳ್ಳೆ ಅಗರಬತ್ತಿಗಳು ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಎಚ್ಐಸಿಎ ಸಮೀಕ್ಷೆಯಲ್ಲಿ ಬಹಿರಂಗವಾದ ವಿಷಯಗಳು;

ಈ ಸಮೀಕ್ಷೆಯನ್ನು ದೇಶದ 12 ನಗರಗಳಲ್ಲಿ ನಡೆಸಲಾಗಿದ್ದು ಇದರಲ್ಲಿ 1,264 ಕುಟುಂಬಗಳು ಮತ್ತು 405 ವೈದ್ಯರು ಒಳಗೊಂಡಿದ್ದರು. ಸಮೀಕ್ಷೆಯ ಪ್ರಕಾರ, 70 ಶೇಕಡಾ ವೈದ್ಯರು ಅನಧಿಕೃತ ಸೊಳ್ಳೆ ಅಗರಬತ್ತಿಗಳ ಹೊಗೆ ಉಸಿರಾಟದ ಸಮಸ್ಯೆಗೆ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಅದೇ ರೀತಿ 67 ಶೇಕಡಾ ವೈದ್ಯರು, ಕೆಲವು ಸೊಳ್ಳೆ ಅಗರಬತ್ತಿಗಳ ಹೊಗೆ ಸಿಗರೇಟ್ ಹೊಗೆಯಷ್ಟೇ ಹಾನಿಕಾರಕವಾಗಿರಬಹುದು ಎಂದು ತಿಳಿಸಿದ್ದಾರೆ. ವಿಶೇಷವಾಗಿ ಸಿಐಆರ್ (Central Insecticides Registration) ನೋಂದಣಿ ಸಂಖ್ಯೆ ಇಲ್ಲದ ಉತ್ಪನ್ನಗಳನ್ನು ಬಳಸಬಾರದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಸೊಳ್ಳೆ ಅಗರಬತ್ತಿಯ ಹೊಗೆ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ?

ನಿರಂತರವಾಗಿ ಸೊಳ್ಳೆ ಅಗರಬತ್ತಿ ಅಥವಾ ಕಾಯಿಲ್ ಬಳಕೆ ಮಾಡಿದರೆ ಉಸಿರಾಟದ ತೊಂದರೆ, ಕೆಮ್ಮು, ಗಂಟಲು ಕೆರೆತ ಮತ್ತು ಎದೆ ಉರಿ ಕಾಣಿಸಬಹುದು. ಕೆಲವರಿಗೆ ಕಣ್ಣಿನಲ್ಲಿ ಉರಿ, ತಲೆನೋವು ಮತ್ತು ಅಲರ್ಜಿ ಸಮಸ್ಯೆಯೂ ಕಾಣಿಸಬಹುದು. ಆಸ್ತಮಾ, ಸಿಓಪಿಡಿ ಮತ್ತು ಅಲರ್ಜಿ ಸಮಸ್ಯೆ ಇರುವವರಿಗೆ ಈ ಹೊಗೆ ಹೆಚ್ಚು ಅಪಾಯಕಾರಿಯಾಗಿದೆ. ಮಕ್ಕಳ ಮತ್ತು ವೃದ್ಧರ ಶ್ವಾಸಕೋಶಗಳು ಸಂವೇದನಾಶೀಲವಾಗಿರುವುದರಿಂದ ಅವರಿಗೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ: ಡೆಂಗ್ಯೂ ಜ್ವರದ ಬಗ್ಗೆ ನಿರ್ಲಕ್ಷ್ಯ ಬೇಡ, ಸಣ್ಣ ಅಸಡ್ಡೆಯೂ ಜೀವಕ್ಕೆ ಮಾರಕ

ಸುರಕ್ಷಿತವಾಗಿ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು?

ಸೊಳ್ಳೆ ನಿವಾರಕ ಉತ್ಪನ್ನಗಳನ್ನು ಖರೀದಿಸುವಾಗ ಪ್ಯಾಕ್ ಮೇಲೆ ಸಿಐಆರ್ ನೋಂದಣಿ ಸಂಖ್ಯೆ ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಲೇಬಲ್ ಇಲ್ಲದ ಅಥವಾ ಸ್ಥಳೀಯ ಅನಧಿಕೃತ ಉತ್ಪನ್ನಗಳನ್ನು ಬಳಸುವುದನ್ನು ತಪ್ಪಿಸುವುದು ಉತ್ತಮ. ಕೊಠಡಿಯಲ್ಲಿ ಗಾಳಿ ಸರಿಯಾಗಿ ಓಡಾಡುವಂತೆ ನೋಡಿಕೊಳ್ಳಬೇಕು. ಮಕ್ಕಳ ಹಾಗೂ ವೃದ್ಧರ ಕೋಣೆಗೆ ನಿರಂತರವಾಗಿ ಹೊಗೆ ಹೋಗುವುದನ್ನು ತಪ್ಪಿಸಬೇಕು. ಮಸ್ಕಿಟೋ ನೆಟ್, ಕಿಟಕಿಗಳಿಗೆ ಜಾಲಿ ಹಾಕುವುದು ಮುಂತಾದ ಸುರಕ್ಷಿತ ಪರ್ಯಾಯಗಳನ್ನು ಬಳಸುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

KKR vs GT: ಐಪಿಎಲ್‌ನಲ್ಲಿ ವಿಶೇಷ ದ್ವಿಶತಕ ಪೂರೈಸಿದ ಸುನಿಲ್ ನರೈನ್

Source link

PBKS vs RCB: ಆರ್​ಸಿಬಿಗೆ ಪಂಜಾಬ್ ಎದುರಾಳಿ; ಬದಲಾದ ಸಮಯದಲ್ಲಿ ನಡೆಯಲಿದೆ ಪಂದ್ಯ – Kannada News | RCB vs PBKS IPL 2026: Final Rematch! Match 61 Date, Time, Venue and Streaming

ಐಪಿಎಲ್ 2026 (IPL 2026) ರ 61 ನೇ ಪಂದ್ಯವು ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (PBKS vs RCB) ನಡುವೆ ನಡೆಯಲಿದೆ. ಕಳೆದ ಐಪಿಎಲ್ ಫೈನಲ್​ನಲ್ಲಿ ಮುಖಾಮುಖಿಯಾಗಿದ್ದ ಈ ಎರಡೂ ತಂಡಗಳು ಆ ಪಂದ್ಯದ ನಂತರ ಇದೇ ಮೊದಲ ಬಾರಿಗೆ ಎದುರು ಬದುರಾಗಿವೆ. ಒಂದೆಡೆ ಆರ್​ಸಿಬಿ ಫೈನಲ್​ನಲ್ಲಿ ಸೋಲಿಸಿದಂತೆ ಈ ಪಂದ್ಯದಲ್ಲೂ ಸೋಲಿಸಿ ಪ್ಲೇಆಫ್‌ಗೆ ಟಿಕೆಟ್ ಖಚಿತಪಡಿಸುವ ಇರಾದೆಯಲ್ಲಿದ್ದರೆ, ಇತ್ತ ಪಂಜಾಬ್ ಕಳೆದ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳುವುದರ ಜೊತೆಗೆ ಪ್ಲೇಆಫ್‌ ರೇಸ್​ನಲ್ಲಿ ಜೀವಂತವಾಗಿರಲು ಯತ್ನಿಸಲಿದೆ. ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಆರ್​ಸಿಬಿ ಅಗ್ರಸ್ಥಾನದಲ್ಲಿದ್ದರೆ, ಪಂಜಾಬ್ ತಂಡ ನಾಲ್ಕನೇ ಸ್ಥಾನದಲ್ಲಿದೆ.

ಆರ್​​ಸಿಬಿ ಹಾಗೂ ಪಂಜಾಬ್ ನಡುವಿನ ಐಪಿಎಲ್ 2026 ರ 61 ನೇ ಪಂದ್ಯ ಯಾವಾಗ ನಡೆಯಲಿದೆ?

ಆರ್​​ಸಿಬಿ ಹಾಗೂ ಪಂಜಾಬ್ ನಡುವಿನ ಐಪಿಎಲ್ 2026 ರ 61 ನೇ ಪಂದ್ಯ ಮೇ 17 ರಂದು ನಡೆಯಲಿದೆ.

ಆರ್​​ಸಿಬಿ ಹಾಗೂ ಪಂಜಾಬ್ ನಡುವಿನ ಐಪಿಎಲ್ 2026 ರ 61 ನೇ ಪಂದ್ಯ ಎಲ್ಲಿ ನಡೆಯಲಿದೆ?

ಆರ್​​ಸಿಬಿ ಹಾಗೂ ಪಂಜಾಬ್ ನಡುವಿನ ಐಪಿಎಲ್ 2026 ರ 61 ನೇ ಪಂದ್ಯ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ನಡೆಯಲಿದೆ.

ಆರ್​​ಸಿಬಿ ಹಾಗೂ ಪಂಜಾಬ್ ನಡುವಿನ ಐಪಿಎಲ್ 2026 ರ 61 ನೇ ಪಂದ್ಯ ಎಷ್ಟು ಗಂಟೆಗೆ ಆರಂಭ?

ಆರ್​​ಸಿಬಿ ಹಾಗೂ ಪಂಜಾಬ್ ನಡುವಿನ ಐಪಿಎಲ್ 2026 ರ 61 ನೇ ಪಂದ್ಯ ಮಧ್ಯಾಹ್ನ 3:30 ಕ್ಕೆ ಪ್ರಾರಂಭವಾಗಲಿದ್ದು, ಟಾಸ್ ಭಾರತೀಯ ಕಾಲಮಾನ ಮಧ್ಯಾಹ್ನ 3:00 ಗಂಟೆಗೆ ನಡೆಯಲಿದೆ.

ಆರ್​​ಸಿಬಿ ಹಾಗೂ ಪಂಜಾಬ್ ನಡುವಿನ ಐಪಿಎಲ್ 2026 ರ 61ನೇ ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಆರ್​​ಸಿಬಿ ಹಾಗೂ ಪಂಜಾಬ್ ನಡುವಿನ ಐಪಿಎಲ್ 2026 ರ 61ನೇ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಹಾಗೆಯೇ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಪಂದ್ಯವನ್ನು ವೀಕ್ಷಿಸಲು ಇಷ್ಟಪಡುವ ವೀಕ್ಷಕರಿಗೆ, ಜಿಯೋ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿರುತ್ತದೆ.

ಉಭಯ ತಂಡಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ಟಿಮ್ ಡೇವಿಡ್, ಜಾಕೋಬ್ ಬೆಥೆಲ್, ರೊಮಾರಿಯೊ ಶೆಫರ್ಡ್, ಜೋಶ್ ಹ್ಯಾಜಲ್‌ವುಡ್, ನುವಾನ್ ತುಷಾರ, ದೇವದತ್ ಪಡಿಕ್ಕಲ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ರಸಿಖ್ ದಾರ್, ಭುವನೇಶ್ವರ್ ಕುಮಾರ್, ಜೋರ್ಡಾನ್ ಕಾಕ್ಸ್, ವೆಂಕಟ್ ಸಿಂಗ್, ಸುಯಶ್ ಲ್ಯೂನ್ ಕಾಕ್ಸ್, ವೆಂಕಟ್ ಸಿಂಗ್ ಶರ್ಮಾ, ಭುವನೇಶ್ವರ್ ಕುಮಾರ್ ಕಾನಿಷ್ಕ್ ಚೌಹಾಣ್, ಅಭಿನಂದನ್ ಸಿಂಗ್, ಮಂಗೇಶ್ ಯಾದವ್, ಫಿಲ್ ಸಾಲ್ಟ್, ಸಾತ್ವಿಕ್ ದೇಸ್ವಾಲ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ.

ಪಂಜಾಬ್ ಕಿಂಗ್ಸ್ : ಶ್ರೇಯಸ್ ಲಿಯಾನ್ (ನಾಯಕ), ಪ್ರಿಯಾಂಶ್ ಆರ್ಯ, ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಅಜ್ಮತುಲ್ಲಾ ಉಮರ್‌ಜಾಯ್, ವಿಜಯ್‌ಕುಮಾರ್ ವೈಶಾಕ್, ಅರ್ಷ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ಹರ್‌ಪ್ರೀತ್ ಬ್ರಾರ್, ಸೂರ್ಯಾಂಶ್ ಶೆಡ್ಜ್, ವಿಷ್ಣು ವಿನೋದ್ (ವಿಕೆಟ್ ಕೀಪರ್), ಕ್ಸೇವಿಯರ್ ಬಾರ್ಟ್ಲೆಟ್, ಯಶ್ ಠಾಕೂರ್, ಮಿಚೆಲ್ ಓವನ್, ಹರ್ನೂರ್ ಸಿಂಗ್, ಮುಶೀರ್ ಖಾನ್, ಪಾಯಲ್ ಅವಿನಾಶ್, ಮಾರ್ಕೊ ಯಾನ್ಸನ್, ಲಾಕಿ ಫರ್ಗುಸನ್, ಕೂಪರ್ ಕೊನೊಲಿ, ಬೆನ್ ದ್ವಾರ್ಶುಯಿಸ್, ಪ್ರವೀಣ್ ದುಬೆ, ವಿಶಾಲ್ ನಿಶಾದ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version