ಒರಿಜಿನಲ್ ಅಂತ ನಕಲಿ 2nd PU ಪ್ರಶ್ನೆಪತ್ರಿಕೆ ಹರಿಬಿಟ್ಟಿದ್ದ ಕಿಡಿಗೇಡಿಗಳು: ಯೂಟ್ಯೂಬ್ ಖಾತೆ ವಿರುದ್ಧ ದೂರು – Kannada News | Complaint Filed Against YouTube Over Miscreants Who Leaked Fake 2nd PUC Question Paper Claiming It Was Original
ಬೆಂಗಳೂರು, ಜನವರಿ 12: ದ್ವೀತಿಯ ಪಿಯುಸಿ (2nd PUC) ವಾರ್ಷಿಕ ಪರೀಕ್ಷೆಗೆ ದಿನಗಣನೆ ಶುರುವಾಗಿದೆ. ಹೀಗಾಗಿ ಕರ್ನಾಟಕದಾದ್ಯಂತ ಪ್ರಿಪರೇಟರಿ ಎಕ್ಸಾಂ ನಡೆಸಲಾಗುತ್ತಿದೆ. ಪರೀಕ್ಷೆ ಆರಂಭ ಬೆನ್ನಲ್ಲೇ ಪ್ರಶ್ನೆ ಪತ್ರಿಕೆ ಲೀಕ್ ಹಾವಳಿ ಕೂಡ ಜೋರಾಗಿದೆ. ಶಿಕ್ಷಣ ಇಲಾಖೆ ವೈಫಲ್ಯವನ್ನೇ ಖದೀಮರು ಬಂಡವಾಳ ಮಾಡಿಕೊಂಡಿದ್ದಾರೆ. ಕೆಎಸ್ಇಎಬಿ (KSEAB) ತಯಾರು ಮಾಡಿದ ಪ್ರಶ್ನೆ ಪತ್ರಿಕೆ ರೀತಿಯೇ ಹೋಲುವಂತೆ ಪ್ರಶ್ನೆಪತ್ರಿಕೆ ತಯಾರಿಸಿದ್ದಾರೆ. ಆ ಮೂಲಕ ನಕಲಿ ಪ್ರಶ್ನೆಪತ್ರಿಕೆ ಹರಿಬಿಟ್ಟು ಇದೇ ಒರಿಜಿನಲ್ ಅಂತ ಬಿಂಬಿಸಿದ್ದಾರೆ. ಸದ್ಯ ಈ ಬಗ್ಗೆ ಬೆಂಗಳೂರು ನಾರ್ತ್…