ಔಟರ್ ರಿಂಗ್ ರಸ್ತೆಯಲ್ಲಿ ಶೀಘ್ರದಲ್ಲೇ ಆದ್ಯತಾ ಪಥ: ಟ್ರಾಫಿಕ್ ಕಿರಿಕಿರಿಗೆ ಬ್ರೇಕ್ ಹಾಕಲು ಮಾಸ್ಟರ್ ಪ್ಲಾನ್ – Kannada News | BMTC Bus Lane Returns to Bengaluru’s ORR: Solution to Ease IT Corridor Traffic Congestion

ಪ್ರಾತಿನಿಧಿಕ ಚಿತ್ರ (ಎಐ ಚಿತ್ರ)Image Credit source: tv9 kannada

ಬೆಂಗಳೂರು, ಮೇ 15: ಬೆಂಗಳೂರಿನ (Bangaluru) ಹೊರವರ್ತುಲ ರಸ್ತೆಯಲ್ಲಿ ಈ ಹಿಂದೆ ಚಾಲ್ತಿಯಲ್ಲಿದ್ದ ಬಸ್ ಪಥವನ್ನ ಹೊಸ ರೂಪದಲ್ಲಿ ಅಂದರೆ ಆದ್ಯತಾ ಪಥವನ್ನಾಗಿ ಮತ್ತೆ ಅನುಷ್ಠಾನ ಮಾಡಲು ಅಧಿಕಾರಿಗಳು ಸಜ್ಜಾಗಿದ್ದಾರೆ. ಈ ಮೂಲಕ ಐಟಿಬಿಟಿ ಕಂಪನಿಗಳು ಹೆಚ್ಚಾಗಿರುವ ಪ್ರದೇಶದಲ್ಲಿ ಟ್ರಾಫಿಕ್ (traffic) ದಟ್ಟಣೆ ನಿಯಂತ್ರಣ ಮಾಡಲು ಬೆಂಗಳೂರು ಟ್ರಾಫಿಕ್ ಪೊಲೀಸರು ಸಿದ್ಥತೆ ನಡೆಸಿದ್ದಾರೆ.

ಮುಖ್ಯಾಂಶಗಳು

  • ಹೊರವರ್ತುಲ ರಸ್ತೆಯಲ್ಲಿ ಹೆಚ್ಚಿದ ವಾಹನ ದಟ್ಟಣೆ
  • ಬಿಎಂಟಿಸಿ ಆದ್ಯತಾ ಪಥ ಮರು ಅನುಷ್ಠಾನಕ್ಕೆ ಸಿದ್ಧತೆ
  • ಐಟಿ ಕಾರಿಡಾರ್‌ಗಳಲ್ಲಿ ಸುಗಮ ಸಂಚಾರಕ್ಕೆ ಮಾಸ್ಟರ್ ಪ್ಲಾನ್

ಬೆಂಗಳೂರಿನ ಹೊರವರ್ತುಲ ರಸ್ತೆಯಲ್ಲಿ ಬಿಎಂಟಿಸಿ ಬಸ್​​ಗಳ ಸಂಚಾರಕ್ಕಾಗಿಯೇ ಬಸ್ ಲೇನ್​ಗಳನ್ನ ಪರಿಚಯಿಸಲಾಗಿತ್ತು. ಈ ವೇಳೆ ಬಿಎಂಟಿಸಿ ಬಳಸುವವರ ಸಂಖ್ಯೆ ಕೂಡ ಈ ಭಾಗದಲ್ಲಿ ಹೆಚ್ಚಾಗಿತ್ತು. ಆದರೆ ಕಾರಣಾಂತರಗಳಿಂದ ಅದು ಸ್ಥಗಿತವಾಗಿತ್ತು. ಈಗ ಮತ್ತೆ ಬಸ್ ಪಥವನ್ನ ಆದ್ಯತಾ ಪಥವನ್ನಾಗಿ ಹೊಸ ರೂಪದಲ್ಲಿ ಪರಿಚಯಿಸಲು ಬೆಂಗಳೂರು ಟ್ರಾಫಿಕ್ ಪೊಲೀಸರು ಮತ್ತು ಜಿಬಿಎ ಅಧಿಕಾರಿಗಳು ಮುಂದಾಗಿದ್ದಾರೆ.

ರಸ್ತೆಯ ಸಾಮರ್ಥ್ಯಕ್ಕಿಂತ 2.5 ಪಟ್ಟು ವಾಹನಗಳು ಹೆಚ್ಚಳ

ಇಬ್ಬಲೂರು, ಬೆಳ್ಳಂದೂರು, ಮಾರತಹಳ್ಳಿ ಭಾಗದ ಔಟರ್ ರಿಂಗ್ ರಸ್ತೆಯ ಸಾಮರ್ಥ್ಯಕ್ಕಿಂತ 2.5 ಪಟ್ಟು ವಾಹನಗಳು ಹೆಚ್ಚಾಗಿದೆ. ಹೀಗಾಗಿ ಬಿಎಂಟಿಸಿ ಬಸ್ ಸೇರಿ ಸಮೂಹ ಸಾರಿಗೆ ವ್ಯವಸ್ಥೆಯ ವಾಹನಗಳಿಗೆ ಆದ್ಯತಾ ಪಥವನ್ನ ನಿರ್ಮಿಸುವ ಆಲೋಚನೆ ಇದೆ. ಈ ಕುರಿತಾಗಿ ಬಿಎಂಟಿಸಿ, ಜಿಬಿಎ ಅಧಿಕಾರಿಗಳ ಜೊತೆ ಟ್ರಾಫಿಕ್ ಪೊಲೀಸರು ಈಗಾಗಲೇ ಸಭೆ ಕೂಡ ಮಾಡಿದ್ದಾರೆ. ಇನ್ನು ಆದ್ಯತಾ ಪಥ ಮಾಡುವುದರ ಬಗ್ಗೆ ಪ್ರಯಾಣಿಕರು ಸಹಮತ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ: ಮೇ 17ರಂದು ಈ ಮಾರ್ಗದ ನಮ್ಮ ಮೆಟ್ರೋ ಸಂಚಾರ ತಾತ್ಕಾಲಿಕ ಸ್ಥಗಿತ

ಒಟ್ಟಾರೆಯಾಗಿ, ಈ ಆದ್ಯತಾ ಪಥವು ಆದಷ್ಟು ಬೇಗ ನಿರ್ಮಾಣಗೊಂಡು, ಜನರು ಖಾಸಗಿ ವಾಹನಗಳ ವ್ಯಾಮೋಹ ಬಿಟ್ಟು ಬಿಎಂಟಿಸಿ ಸಮೂಹ ಸಾರಿಗೆಯನ್ನು ಹೆಚ್ಚಾಗಿ ಬಳಸುವಂತಾಗಲಿ ಮತ್ತು ಹೊರವರ್ತುಲ ರಸ್ತೆಯ ಸಂಚಾರ ಸುಗಮವಾಗಲಿ ಎನ್ನುವುದೇ ಸಾರ್ವಜನಿಕರ ಆಶಯವಾಗಿದೆ.

ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಟ್ರ್ಯಾಕ್ಟರ್ ಬಿದ್ದು 6 ಜನರ ದುರಂತ ಅಂತ್ಯ: ದುರ್ಘಟನೆ ಸಂಭವಿಸಿದ್ಹೇಗೆ? ಎಳೆ ಎಳೆಯಾಗಿ ಬಿಚ್ಚಿಟ್ಟ ಐಜಿಪಿ

ವಿಜಯನಗರ, (ಮೇ 15): ಭೀಕರ ರಸ್ತೆ ಅಪಘಾತದಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಕನಿಷ್ಠ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹತ್ತಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ಸಮೀಪದ ಟಿಬಿ ಡ್ಯಾಂ ಬಳಿಯ ಮುನಿರಾಬಾದ್‌ ನಲ್ಲಿ ಸಂಭವಿಸಿದೆ. ಹುಲಿಗಿ ಜಾತ್ರೆಗೆ ತೆರಳುತ್ತಿದ್ದ ಟ್ರ್ಯಾಕ್ಟರ್​​​ ಹಿಂಬದಿಗೆ ಕ್ಯಾಂಟರ್ ಗುದ್ದಿದೆ. ಪರಿಣಾಮ ಟ್ರ್ಯಾಕ್ಟರ್ ಸೇತುವೆ ಮೇಲಿಂದ ಕೆಳಕ್ಕೆ ಬಿದ್ದಿದೆ. ಇನ್ನು ಗಾಯಾಳುಗಳನ್ನ ಹೊಸಪೇಟೆ ಹಾಗೂ ಕೊಪ್ಪಳ ಆಸ್ಪತ್ರೆಗಳಿಗೆ ರವಾನಿಸಲಾಗಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಐಜಿಪಿ ಹರ್ಷ ಅವರು ಭೇಟಿ ನೀಡಿ ಪರಿಶೀಲನೆ ಮಾಡಿ ಬಳಿಕ ದುರ್ಘಟನೆ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟರು.

ಇದನ್ನೂ ಓದಿ: ತುಂಗಭದ್ರಾ ಸೇತುವೆ ಮೇಲಿಂದ ಕೆಳಗೆ ಬಿದ್ದ ಟ್ರ್ಯಾಕ್ಟರ್: 6 ಮಂದಿ ದಾರುಣ ಸಾವು, ಹಲವರ ಸ್ಥಿತಿ ಗಂಭೀರ

Source link

ಸಿಎಂ ವಿಜಯ್ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ನಾಚಿ ನೀರಾದ ನಟಿ ತ್ರಿಶಾ: ವಿಡಿಯೋ ವೈರಲ್ – Kannada News | Actress Trisha Krishnan blushes as fan mentions CM Vijay at Karuppu screening

ಖ್ಯಾತ ನಟಿ ತ್ರಿಶಾ ಕೃಷ್ಣನ್ (Trisha Krishnan) ಅವರು ಇತ್ತೀಚಿನ ದಿನಗಳಲ್ಲಿ ಸಖತ್ ಸುದ್ದಿ ಆಗುತ್ತಿದ್ದಾರೆ. ಇತ್ತೀಚೆಗಷ್ಟೇ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಟ ವಿಜಯ್ (Thalapathy Vijay) ಮತ್ತು ತ್ರಿಶಾ ನಡುವೆ ಆಪ್ತ ಗೆಳತನವಿದೆ ಎಂಬ ವದಂತಿಗಳು ಕಾಲಿವುಡ್‌ನಲ್ಲಿ ದಟ್ಟವಾಗಿವೆ. ಈ ನಡುವೆ, ಅಭಿಮಾನಿಯೊಬ್ಬರು ವಿಜಯ್ ಹೆಸರು ಎತ್ತುತ್ತಿದ್ದಂತೆ ತ್ರಿಶಾ ಸಿಕ್ಕಾಪಟ್ಟೆ ನಾಚಿಕೊಂಡಿರುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಶುಕ್ರವಾರ (ಮೇ 15) ಚೆನ್ನೈನ ಪ್ರಖ್ಯಾತ ರೋಹಿಣಿ ಸಿಲ್ವರ್ ಸ್ಕ್ರೀನ್ಸ್ ಚಿತ್ರಮಂದಿರದಲ್ಲಿ ತ್ರಿಶಾ ಮತ್ತು ಸೂರ್ಯ ನಟನೆಯ ಬಿಗ್ ಬಜೆಟ್ ಸಿನಿಮಾ ‘ಕರುಪ್ಪು’ ಚಿತ್ರದ ಮೊದಲ ಪ್ರದರ್ಶನ ಇತ್ತು. ಈ ವೇಳೆ ಚಿತ್ರಮಂದಿರದಿಂದ ಹೊರಬಂದ ತ್ರಿಶಾ ಅವರನ್ನು ಅಭಿಮಾನಿಗಳು ಸುತ್ತುವರಿದರು. ತ್ರಿಶಾ ಅವರು ತಮ್ಮ ಕಾರಿನೊಳಗೆ ಕುಳಿತುಕೊಳ್ಳುತ್ತಿದ್ದಂತೆಯೇ ಫೋಟೋ ಮತ್ತು ವಿಡಿಯೋಗಳಿಗಾಗಿ ಅಭಿಮಾನಿಗಳು ಮುಗಿಬಿದ್ದರು.

ಈ ವೇಳೆ ಕಾರಿನ ಬಳಿ ಬಂದ ಅಭಿಮಾನಿಯೊಬ್ಬರು, ‘ದಳಪತಿಯನ್ನು ಕೇಳಿದೆ ಅಂತ ಹೇಳಿ’ ಎಂದು ನಗುತ್ತಾ ಹೇಳಿದರು. ಇದನ್ನು ಕೇಳಿದ ತಕ್ಷಣ ತ್ರಿಶಾ ಮುಖದಲ್ಲಿ ದೊಡ್ಡ ನಗು ಮೂಡಿತು. ಅವರು ನಗುತ್ತಲೇ ‘ಖಂಡಿತವಾಗಿ’ ಎಂದು ಉತ್ತರಿಸಿ, ನಾಚಿಕೆಯಿಂದ ತಲೆ ತಗ್ಗಿಸಿದರು. ಕಾರಿನಲ್ಲಿ ಕುಳಿತು ಯಾರಿಗೋ ಮೆಸೇಜ್ ಕಳುಹಿಸುತ್ತಾ ಅವರು ನಿರಂತರವಾಗಿ ಮುಗುಳ್ನಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಬಳಿಕ ತಮ್ಮ ಹೆಸರು ಕೂಗುತ್ತಿದ್ದ ಅಭಿಮಾನಿಗಳತ್ತ ಕೈ ಬೀಸಿದರು.

ತ್ರಿಶಾ ವೈರಲ್ ವಿಡಿಯೋ:

ಮೇ 10ರಂದು ವಿಜಯ್ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆ ಭವ್ಯ ಸಮಾರಂಭದಲ್ಲಿ ತ್ರಿಶಾ ಅವರು ಎಲ್ಲರ ಗಮನ ಸೆಳೆದಿದ್ದರು. ಅತ್ಯಾಕರ್ಷಕ ನೀಲಿ ಮತ್ತು ಬಂಗಾರದ ಬಣ್ಣದ ಸೀರೆಯನ್ನು ಉಟ್ಟು, ಮಲ್ಲಿಗೆ ಮುಡಿದು ಬಂದಿದ್ದ ಅವರು ವಿಜಯ್ ತಾಯಿ ಶೋಭಾ ಅವರನ್ನು ಅತ್ಯಂತ ಪ್ರೀತಿಯಿಂದ ಮಾತನಾಡಿಸಿದ್ದರು. ಅಲ್ಲದೆ, ವಿಜಯ್ ಅವರ ತಂದೆ ಎಸ್‌ಎ ಚಂದ್ರಶೇಖರ್ ಮತ್ತು ತಾಯಿಯ ಜೊತೆಗೇ ಮುಂಭಾಗದ ಸಾಲಿನಲ್ಲಿ ಕುಳಿತಿದ್ದರು.

ಇದನ್ನೂ ಓದಿ: ತ್ರಿಶಾಗೆ ಒಲಿದು ಬಂದ ಬಿಗ್ ಆಫರ್; ರಜನಿ-ಕಮಲ್ ಹೊಸ ಸಿನಿಮಾಗೆ ನಾಯಕಿ?

ತ್ರಿಶಾ ಅವರಿಗೆ 2015ರಲ್ಲಿ ಉದ್ಯಮಿ ವರುಣ್ ಮಣಿಯನ್ ಜೊತೆ ನಿಶ್ಚಿತಾರ್ಥ ಆಗಿತ್ತಾದರೂ ಅದೇ ವರ್ಷ ಆ ಸಂಬಂಧ ಮುರಿದುಬಿದ್ದಿತ್ತು. ಇತ್ತ ನಟ ವಿಜಯ್ ಅವರು 1999ರಲ್ಲಿ ತಮ್ಮ ಅಭಿಮಾನಿ ಸಂಗೀತಾ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ಆದರೆ, ಸುಮಾರು ಮೂರು ದಶಕಗಳ ದಾಂಪತ್ಯ ಜೀವನದ ನಂತರ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವಿಜಯ್ ಅವರು ಖ್ಯಾತ ನಟಿಯೊಬ್ಬರ ಜೊತೆ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಸಂಗೀತಾ ಆರೋಪಿಸಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಡಯಾಬಿಟಿಸ್ ಇರುವವರು ಮಾತ್ರವಲ್ಲ, ನಿಮಗೆ ಈ ಆರೋಗ್ಯ ಸಮಸ್ಯೆ ಇದ್ರೂ ಐಸ್‌ಕ್ರೀಂ ತಿನ್ನುವುದು ಒಳ್ಳೆಯದಲ್ಲ! – Kannada News | Is Ice Cream Bad For You? Medical Reasons To Avoid It

ಬೇಸಿಗೆಯಲ್ಲಿ ಐಸ್‌ಕ್ರೀಂ (Ice Cream) ತಿನ್ನುವುದು ಬಹುತೇಕರಿಗೆ ಇಷ್ಟವಾದರೂ, ಕೆಲವು ಆರೋಗ್ಯ ಸಮಸ್ಯೆಗಳಿರುವವರು ಇದನ್ನು ತಿನ್ನದಿರುವುದೇ ಉತ್ತಮ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಕಾರಣವಿಷ್ಟೇ, ಐಸ್‌ಕ್ರೀಂನಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ, ಕೊಬ್ಬು ಮತ್ತು ಕ್ಯಾಲೊರಿಗಳು ಇರುವುದರಿಂದ ಇದು ಕೆಲ ರೋಗಗಳಲ್ಲಿ ಆರೋಗ್ಯ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಬಹುದು. ಸಾಮಾನ್ಯವಾಗಿ ಮಧುಮೇಹ ಇರುವವರಿಗೆ ಐಸ್‌ಕ್ರೀಂ ಕಡಿಮೆ ಪ್ರಮಾಣದಲ್ಲಿ ಮಾತ್ರ ಸೇವಿಸಲು ಸಲಹೆ ನೀಡಲಾಗುತ್ತದೆ. ಆದರೆ ಡಯಾಬಿಟಿಸ್ ಇರುವವರು ಮಾತ್ರವಲ್ಲದೆ ಇನ್ನಿತರ ಆರೋಗ್ಯ ಸಮಸ್ಯೆ ಇದ್ದಾಗಲೂ ಕೂಡ ಐಸ್‌ಕ್ರೀಂ ತಿನ್ನಬಾರದು. ಹಾಗಾದರೆ ಯಾವ ಆರೋಗ್ಯ ಸಮಸ್ಯೆ ಇದ್ದಾಗ ಐಸ್‌ಕ್ರೀಂ ತಿನ್ನುವುದು ಒಳ್ಳೆಯದಲ್ಲ, ಐಸ್‌ಕ್ರೀಂ ಬದಲು ಯಾವ ಆಹಾರವನ್ನು ಪರ್ಯಾಯವಾಗಿ ಸೇವನೆ ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಯಾವ ರೀತಿಯ ಆರೋಗ್ಯ ಸಮಸ್ಯೆ ಇದ್ದಾಗ ಐಸ್‌ಕ್ರೀಂ ತಿನ್ನಬಾರದು?

ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಪ್ರೊಫೆಸರ್ ಡಾ. ಸುಭಾಷ್ ಗಿರಿ ಅವರು ಹೇಳುವ ಪ್ರಕಾರ, ಫ್ಯಾಟಿ ಲಿವರ್, ಅತಿಯಾದ ತೂಕ, ಹೈ ಕೊಲೆಸ್ಟ್ರಾಲ್, ಲ್ಯಾಕ್ಟೋಸ್ ಇಂಟಾಲರೆನ್ಸ್ ಹಾಗೂ ಅಜೀರ್ಣ ಸಮಸ್ಯೆಗಳಿರುವವರೂ ಐಸ್‌ಕ್ರೀಂ ಸೇವನೆಯಲ್ಲಿ ಎಚ್ಚರಿಕೆ ವಹಿಸಬೇಕಾಗಿದೆ. ಏಕೆಂದರೆ ಫ್ಯಾಟಿ ಲಿವರ್ ಇರುವವರಲ್ಲಿ ಹೆಚ್ಚು ಸಕ್ಕರೆ ಮತ್ತು ಕೊಬ್ಬಿನ ಆಹಾರ ಲಿವರ್ ಮೇಲೆ ಹೆಚ್ಚುವರಿ ಒತ್ತಡ ಉಂಟುಮಾಡಬಹುದು. ಅತಿಯಾದ ತೂಕ ಹೊಂದಿರುವವರಲ್ಲಿ ಐಸ್‌ಕ್ರೀಂನ ಹೆಚ್ಚುವರಿ ಕ್ಯಾಲೊರಿಗಳು ತೂಕವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಜೊತೆಗೆ ಹೈ ಕೊಲೆಸ್ಟ್ರಾಲ್ ಇರುವವರಿಗೆ ಹೆಚ್ಚು ಫ್ಯಾಟ್ ಇರುವ ಆಹಾರ ಹೃದಯದ ಆರೋಗ್ಯಕ್ಕೂ ಹಾನಿಕಾರಕವಾಗಬಹುದು. ಲ್ಯಾಕ್ಟೋಸ್ ಇಂಟಾಲರೆನ್ಸ್ ಇರುವವರು ಐಸ್‌ಕ್ರೀಂ ಸೇವಿಸಿದರೆ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್, ಜಜ್ಜು ಸಮಸ್ಯೆ ಕಾಣಿಸಬಹುದು. ಅಜೀರ್ಣ ಅಥವಾ ಆಸಿಡಿಟಿ ಸಮಸ್ಯೆ ಇರುವವರಲ್ಲಿ ತಣ್ಣನೆಯ ಮತ್ತು ಭಾರವಾದ ಆಹಾರ ಅಸ್ವಸ್ಥತೆಯನ್ನು ಹೆಚ್ಚಿಸಬಹುದು. ಐಸ್‌ಕ್ರೀಂ ಹೆಚ್ಚು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುವುದು, ತೂಕ ಏರಿಕೆ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳು ಉಂಟಾಗಬಹುದು. ಕೆಲವರಿಗೆ ಹೊಟ್ಟೆನೋವು, ಗ್ಯಾಸ್ಟ್ರಿಕ್ ಮತ್ತು ಆಸಿಡಿಟಿ ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಬೇಸಿಗೆಯಲ್ಲಿ ಐಸ್ ಕ್ರೀಮ್ ತಿಂದ್ರೆ ನಿಜವಾಗಿಯೂ ದೇಹ ತಂಪಾಗುತ್ತಾ? ಡಾ. ಸಂದೀಪ್ ಈ ಬಗ್ಗೆ ಏನ್ ಹೇಳ್ತಾರೆ ನೋಡಿ

ಉತ್ತಮ ಪರ್ಯಾಯಗಳು ಯಾವುವು?

ಐಸ್‌ಕ್ರೀಂ ಬದಲು ಮನೆಯಲ್ಲೇ ತಯಾರಿಸಿದ ಮೊಸರು, ಸಕ್ಕರೆ ರಹಿತ ಸ್ಮೂದಿ, ತಾಜಾ ಹಣ್ಣು ಅಥವಾ ಫ್ರೋಜನ್ ಯೋಗರ್ಟ್ ಉತ್ತಮ ಆಯ್ಕೆಯಾಗಬಹುದು. ಜೊತೆಗೆ ಎಳೆನೀರು, ಮಜ್ಜಿಗೆ ಮತ್ತು ಹಣ್ಣಿನ ತಂಪು ಪಾನೀಯಗಳು ಬೇಸಿಗೆಯಲ್ಲಿ ದೇಹಕ್ಕೆ ತಂಪು ಹಾಗೂ ಹೈಡ್ರೇಶನ್ ನೀಡಲು ಸಹಾಯಕವಾಗುತ್ತವೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

LSG vs CSK: 3 ವಿಕೆಟ್ ಉರುಳಿಸಿ ಚೀಟಿ ಹೊರ ತೆಗೆದು ಸಂಭ್ರಮಿಸಿದ ಲಕ್ನೋ ವೇಗಿ – Kannada News | Akash Singh’s IPL 2026 Heroics: LSG Pacer Shines vs CSK with 3 Wicket Haul

ಐಪಿಎಲ್ 2026 ರ 59 ನೇ ಪಂದ್ಯದಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ವೇಗಿ ಆಕಾಶ್ ಸಿಂಗ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಅದ್ಭುತ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದರು. ಈ ಸೀಸನ್​ನಲ್ಲಿ ಮೊದಲ ಪಂದ್ಯವನ್ನಾಡಿದ ಆಕಾಶ್ ಸಿಕ್ಕ ಅವಕಾಶವನ್ನು ಸ್ಮರಣೀಯವಾಗಿಸಿದರು. ಆಕಾಶ್ ಸಿಂಗ್ ತಮ್ಮ ಮೊದಲ ಓವರ್‌ನಲ್ಲಿ ಕೇವಲ 7 ರನ್‌ಗಳನ್ನು ಬಿಟ್ಟುಕೊಟ್ಟು ಉತ್ತಮ ಆರಂಭ ಪಡೆದರು. ನಂತರ, ತಮ್ಮ ಎರಡನೇ ಓವರ್‌ನಲ್ಲಿ, ಚೆನ್ನೈ ನಾಯಕ ರುತುರಾಜ್ ಗಾಯಕ್ವಾಡ್ ಅವರನ್ನು ಔಟ್ ಮಾಡಿ, ಸೀಸನ್​ನ ಮೊದಲ ವಿಕೆಟ್ ಪಡೆದರು.

ವಿಕೆಟ್ ಪಡೆದ ನಂತರ ವಿಶಿಷ್ಟ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದ ಆಕಾಶ್ ತಮ್ಮ ಜೇಬಿನಿಂದ ಒಂದು ಕಾಗದದ ತುಣುಕನ್ನು ಹೊರತೆಗೆದರು, ಅದರಲ್ಲಿ “ಅಕ್ಕಿ ಆನ್ ಫೈಯರ್! ಟಿ20 ಪಂದ್ಯಗಳಲ್ಲಿ ವಿಕೆಟ್ ಪಡೆಯುವುದು ಹೇಗೆ ಎಂಬುದು ಆಕಾಶ್​ಗೆ ಗೊತ್ತು ಎಂದು ಬರೆಯಲಾಗಿತ್ತು. ನಂತರ, ಮೂರನೇ ಓವರ್‌ನಲ್ಲಿ, ಸಂಜು ಸ್ಯಾಮ್ಸನ್ ಅವರನ್ನು ಔಟ್ ಮಾಡುವ ಮೂಲಕ ತಮ್ಮ ಎರಡನೇ ವಿಕೆಟ್ ಪಡೆದರು. ಆಗಲೂ ಸಹ ಮತ್ತದೇ ಕಾಗದದ ತುಣುಕನ್ನು ಹೊರ ತೆಗೆದು ಆಚರಿಸಿದರು.

ಪವರ್‌ಪ್ಲೇ ನಂತರವೂ ಬೌಲಿಂಗ್ ಮುಂದುವರೆಸಿದ ಆಕಾಶ್ ಸಿಂಗ್ ತಮ್ಮ ಸತತ ನಾಲ್ಕನೇ ಓವರ್ ಬೌಲಿಂಗ್ ಮಾಡಿದರು. ಈ ಓವರ್‌ನಲ್ಲಿ ಅವರು ಉರ್ವಿಲ್ ಪಟೇಲ್ ಅವರನ್ನು ಸಹ ಔಟ್ ಮಾಡಿದರು. ಇದರರ್ಥ ಅವರು 4 ಓವರ್‌ಗಳಲ್ಲಿ 26 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಬಳಿಸಿದರು, ಇದು ಅವರ ಐಪಿಎಲ್ ವೃತ್ತಿಜೀವನದ ಅತ್ಯುತ್ತಮ ಸ್ಪೆಲ್ ಆಗಿದೆ.

Source link

ನಿರುದ್ಯೋಗಿ ಯುವಕರು ಜಿರಳೆಗಳಿದ್ದಂತೆ; ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಸಮಾಧಾನ – Kannada News | Unemployed youth like cockroaches CJI Surya Kant slams for attacking system

ನವದೆಹಲಿ, ಮೇ 15: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ (Justice Surya Kant) ಇಂದು ನಿರುದ್ಯೋಗಿ ಯುವಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಿರುದ್ಯೋಗಿ ಯುವಕರು ಸಾಮಾಜಿಕ ಮಾಧ್ಯಮದ ಮೂಲಕ ಎಲ್ಲರ ಮೇಲೆ ದಾಳಿ ಮಾಡುತ್ತಾರೆ ಎಂದು ಅವರು ಟೀಕಿಸಿದ್ದಾರೆ. ಸಿಜೆಐ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠವು ಹಿರಿಯ ವಕೀಲ ಹುದ್ದೆಯನ್ನು ಬಯಸುತ್ತಿರುವ ವಕೀಲರನ್ನು ತರಾಟೆಗೆ ತೆಗೆದುಕೊಂಡಾಗ ಈ ಹೇಳಿಕೆಗಳು ಬಂದವು.

ಸಿಜೆಐ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠದ ಮುಂದೆ ವಕೀಲರನ್ನು ಹಿರಿಯ ವಕೀಲರನ್ನಾಗಿ ನೇಮಿಸುವುದಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಈ ಹೇಳಿಕೆಗಳು ಬಂದವು. ಹಿರಿಯ ವಕೀಲ ಹುದ್ದೆಗಾಗಿ ಆಕ್ರಮಣಕಾರಿಯಾಗಿ ವರ್ತಿಸಿದ್ದಕ್ಕಾಗಿ ನ್ಯಾಯಾಲಯವು ಅರ್ಜಿದಾರರ ವಕೀಲರನ್ನು ಖಂಡಿಸಿತು. ಅವರು ಫೇಸ್‌ಬುಕ್‌ನಲ್ಲಿ ಬಳಸಿದ್ದಾರೆ ಎನ್ನಲಾದ ಭಾಷೆ ಸೇರಿದಂತೆ ಅವರ ನಡವಳಿಕೆಯನ್ನು ಪ್ರಶ್ನಿಸಿತು.

ಇದನ್ನೂ ಓದಿ: ಸನಾತನ ಧರ್ಮದ ವಿಷಯಕ್ಕೆ ಬಂದರೆ ಸುಮ್ಮನಿರುವುದಿಲ್ಲ; ಸಿಜೆಐ ಮೇಲಿನ ಶೂ ದಾಳಿ ಬಳಿಕ ಅಮಾನತುಗೊಂಡ ವಕೀಲ ಹೇಳಿದ್ದೇನು?

“ದೇಶದಲ್ಲಿ ಜಿರಳೆಗಳಂತೆ ಯುವಕರು ಇದ್ದಾರೆ. ಅವರಲ್ಲಿ ಬಹುತೇಕರು ನಿರುದ್ಯೋಗಿಗಳು. ಅವರಿಗೆ ಇಂಥದ್ದೇ ಅಂತ ಒಂದು ವೃತ್ತಿ ಇರುವುದಿಲ್ಲ. ಅವರಿಗೆ ವೃತ್ತಿಯಲ್ಲಿ ಯಾವುದೇ ಸ್ಥಾನವಿರುವುದಿಲ್ಲ. ಅವರಲ್ಲಿ ಕೆಲವರು ಮಾಧ್ಯಮಗಳಲ್ಲಿ ತೊಡಗಿಸಿಕೊಳ್ಳುತ್ತಾರೆ, ಕೆಲವರು ಸಾಮಾಜಿಕ ಮಾಧ್ಯಮ, ಆರ್‌ಟಿಐ ಕಾರ್ಯಕರ್ತರು ಮತ್ತು ಇತರ ಕಾರ್ಯಕರ್ತರಾಗುತ್ತಾರೆ. ಆ ಪ್ಲಾಟ್​ಫಾರ್ಮ್​ಗಳ ಮೂಲಕ ಅವರು ಎಲ್ಲರ ಮೇಲೂ ದಾಳಿ ಮಾಡಲು ಪ್ರಾರಂಭಿಸುತ್ತಾರೆ” ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯೂರಿನ್ ಇನ್ಫೆಕ್ಷನ್ ಯಾವಾಗ ಅಪಾಯಕಾರಿಯಾಗಬಹುದು ಗೊತ್ತಾ? ಈ ಸೋಂಕಿನಿಂದ ರಕ್ಷಿಸಿಕೊಳ್ಳಲು ಇಲ್ಲಿದೆ ಟಿಪ್ಸ್ – Kannada News | Recurrent Urine Infections: Causes, Remedies, And How To Stop Them

ಯೂರಿನ್ ಇನ್ಫೆಕ್ಷನ್‌ (ಮೂತ್ರನಾಳದ ಸೋಂಕು) ಸಾಮಾನ್ಯ ಸಮಸ್ಯೆಯಾದರೂ, ಸಮಯಕ್ಕೆ ಚಿಕಿತ್ಸೆ ಪಡೆಯದೇ ಇದ್ದರೆ ಇದು ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಆರಂಭದಲ್ಲಿ ಕೇವಲ ಮೂತ್ರ ವಿಸರ್ಜನೆಯಾಗುವಾಗ ಉರಿಯೂತ ಅಥವಾ ಪದೇಪದೇ ಮೂತ್ರಕ್ಕೆ ಹೋಗುವ ಸಮಸ್ಯೆಯಂತೆ ಕಾಣಿಸಿದರೂ, ಸೋಂಕು ಹೆಚ್ಚಾದರೆ ಕಿಡ್ನಿಗೂ ಹಾನಿಯಾಗುವ ಅಪಾಯವಿದೆ. ತಜ್ಞರ ಪ್ರಕಾರ, ಯೂರಿನ್ ಇನ್ಫೆಕ್ಷನ್‌ (Urine Infection) ಸಾಮಾನ್ಯವಾಗಿ ಇ.ಕೋಲಿ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಈ ಬ್ಯಾಕ್ಟೀರಿಯಾ ಮೂತ್ರನಾಳದ ಮೂಲಕ ದೇಹಕ್ಕೆ ಪ್ರವೇಶಿಸಿ ಸೋಂಕು ಉಂಟುಮಾಡುತ್ತದೆ. ವೈಯಕ್ತಿಕ ಸ್ವಚ್ಛತೆಯ ಕೊರತೆ, ಕಡಿಮೆ ನೀರು ಕುಡಿಯುವುದು, ಅಸ್ವಚ್ಛ ಶೌಚಾಲಯ ಬಳಕೆ ಹಾಗೂ ಅನಗತ್ಯವಾಗಿ ಆಂಟಿಬಯೋಟಿಕ್‌ ಸೇವಿಸುವುದರಿಂದ ಈ ಸೋಂಕಿನ ಅಪಾಯ ಹೆಚ್ಚಾಗುತ್ತದೆ. ಹಾಗಾದರೆ ಈ ಸಮಸ್ಯೆ ಯಾವಾಗ ಅಪಾಯಕಾರಿಯಾಗಬಹುದು, ಈ ಸೋಂಕಿನಿಂದ ರಕ್ಷಿಸಿಕೊಳ್ಳುವುದು ಹೇಗೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಯೂರಿನ್ ಇನ್ಫೆಕ್ಷನ್ ಯಾವಾಗ ಅಪಾಯಕಾರಿ?

ಸೋಂಕು ಕೇವಲ ಮೂತ್ರಾಶಯದವರೆಗೆ ಸೀಮಿತವಾಗಿದ್ದರೆ ಸಾಮಾನ್ಯವಾಗಿ ಗಂಭೀರ ಸಮಸ್ಯೆಯಾಗುವುದಿಲ್ಲ. ಆದರೆ ಅದು ಕಿಡ್ನಿವರೆಗೆ ಹರಡಿದರೆ ಪರಿಸ್ಥಿತಿ ಗಂಭೀರವಾಗಬಹುದು. ದೀರ್ಘಕಾಲ ಸೋಂಕು ಮುಂದುವರಿದರೆ ಕಿಡ್ನಿ ಕಾರ್ಯಕ್ಷಮತೆ ಕುಸಿಯುವ ಅಪಾಯವೂ ಇದೆ. ತೀವ್ರ ಜ್ವರ, ಶೀತ, ವಾಂತಿ, ಮೂತ್ರದಲ್ಲಿ ರಕ್ತದ ಗುರುತು ಕಾಣಿಸುವುದು ಅಥವಾ ಬೆನ್ನುನೋವು ಕಂಡುಬಂದರೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಬೇಕು.

ಸಾಮಾನ್ಯ ಲಕ್ಷಣಗಳು ಯಾವುವು?

  • ಮೂತ್ರ ವಿಸರ್ಜನೆಯಾಗುವಾಗ ಉರಿಯೂತ
  • ಪದೇಪದೇ ಮೂತ್ರಕ್ಕೆ ಹೋಗಬೇಕು ಎಂದು ಅನಿಸುವುದು
  • ಕಡಿಮೆ ಪ್ರಮಾಣದಲ್ಲಿ ಮೂತ್ರ ವಿಸರ್ಜನೆ
  • ಮೂತ್ರದಿಂದ ದುರ್ವಾಸನೆ ಬರುವುದು
  • ಹೊಟ್ಟೆಯ ಕೆಳಭಾಗದಲ್ಲಿ ನೋವು

ಇದನ್ನೂ ಓದಿ: ಕೆಳಹೊಟ್ಟೆಯ ನೋವನ್ನು ನಿರ್ಲಕ್ಷಿಸಬೇಡಿ; ಇದು ಗಂಭೀರ ಕಾಯಿಲೆಗಳ ಸೂಚನೆಯಾಗಿರಬಹುದು

ಯಾರಲ್ಲಿ ಈ ಅಪಾಯ ಹೆಚ್ಚಾಗಿ ಕಂಡುಬರುತ್ತದೆ?

  • ವೃದ್ಧರು
  • ಮಧುಮೇಹ ರೋಗಿಗಳು
  • ಗರ್ಭಿಣಿಯರು
  • ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ

ಸೋಂಕಿನಿಂದ ಹೇಗೆ ರಕ್ಷಿಸಿಕೊಳ್ಳಬೇಕು?

ಸರಿಯಾಗಿ ನೀರು ಕುಡಿಯುವುದು, ಮೂತ್ರವನ್ನು ಹೆಚ್ಚು ಸಮಯ ತಡೆಯದೇ ಇರುವುದು ಮತ್ತು ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ವೈದ್ಯರ ಸಲಹೆ ಇಲ್ಲದೆ ಆಂಟಿಬಯೋಟಿಕ್‌ ಸೇವಿಸಬಾರದು. ಮಧುಮೇಹ ಇರುವವರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:20 pm, Fri, 15 May 26

Source link

ಬಾಲಕಿಯರ ವಿಡಿಯೋ ಚಿತ್ರೀಕರಿಸಿ ಆನ್‌ಲೈನ್‌ಗೆ ಅಪ್ಲೋಡ್‌: ಹುಡುಕಿ ಇಬ್ಬರನ್ನ ಬಂಧಿಸಿದ ರಾಮನಗರ ಪೊಲೀಸ್ರು – Kannada News | Bengaluru South Cybercrime police arrests two for creating and uploading videos involving minors

ರಾಮನಗರ, (ಮೇ 15): ಪರಿಚಿತರ ಅಪ್ರಾಪ್ತ ಮಕ್ಕಳನ್ನು ಲೈಂಗಿಕವಾಗಿ ಶೋಷಿಸಿ ಬಳಿಕ ಆ ಕೃತ್ಯದ ವಿಡಿಯೋವನ್ನು ಚಿತ್ರೀಕರಿಸಿ ಆನ್‌ಲೈನ್ ಗೆ ಅಪ್‌ಲೋಡ್ ಮಾಡಿದ್ದ ಇಬ್ಬರು ಕಿಡಿಗೇಡಿಗಳನ್ನು ಬೆಂಗಳೂರು ದಕ್ಷಿಣ (Bengaluru South) ಜಿಲ್ಲೆಯ ರಾಮನಗರ (Ramanagara) ಸೆನ್ ಪೊಲೀಸರು ಬಂಧಿಸಿದ್ದಾರೆ. ಕಗ್ಗಲಿಪುರದ ಕಿರಣ್ ಕುಮಾರ್ ಹಾಗೂ ಆದಿತ್ಯ ಬಂಧಿತರಾಗಿದ್ದು, ಆರೋಪಿಗಳಿಂದ ಮೊಬೈಲ್ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಎನ್‌ಸಿಆರ್‌ಪಿ ಪೋರ್ಟಲ್‌ನ ಟಿಫ್‌ಲೈನ್ ಮೂಲಕ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ದೃಶ್ಯಾವಳಿ (ಸಿಎಸ್‌ಎಎಂ) ಕುರಿತು ಸಿಐಡಿಗೆ ಮಾಹಿತಿ ಬಂದಿತ್ತು. ಈ ಸುಳಿವು ಆಧರಿಸಿ ತನಿಖೆ ನಡೆಸಿದ ಪೊಲೀಸರು, ಕಿಡಿಗೇಡಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

  • ಬಾಲಕಿಯರ ವಿಡಿಯೋ ಚಿತ್ರೀಕರಿಸಿ ಆನ್​ಲೈನ್​ಗೆ ಅಪ್ಲೋಡ್.
  • ಇಬ್ಬರು ಆರೋಪಿಗಳನ್ನ ಬಂಧಿಸಿದ ರಾಮನಗರ ಸೆನ್ ಪೊಲೀಸರು
  • ಕಗ್ಗಲೀಪುರ ಮೂಲದ ಕಿರಣ್ ಕುಮಾರ್, ಆದಿತ್ಯ ಬಂಧಿತರು
  • ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿ, ರೆಕಾರ್ಡ್​ ಮಾಡಿ ಆನ್​​ಲೈನ್​ಗೆ ಅಪ್ಲೋಡ್​ ಮಾಡಿದ್ದ ಆರೋಪಿಗಳು

ಪರಿಚಿತರ ಸೋಗಿನಲ್ಲಿ ಕಿರುಕುಳ

ಚಿತ್ರದುರ್ಗ ಜಿಲ್ಲೆ ಯಮ್ಮನಗಟ್ಟಿ ಗ್ರಾಮದ ಕಿರಣ್ ಕುಮಾರ್‌ಕುರಿಗಾಯಿ ಆಗಿದ್ದು, ತನ್ನ 50 ಕುರಿಗಳ ಮೇಯಿಸಲು ಕಗ್ಗಲಿಪುರಕ್ಕೆ ಆತ ಬಂದಿದ್ದ. ಇನ್ನು ಕನಕಪುರ ರಸ್ತೆಯ ರೆಸಾರ್ಟ್‌ನಲ್ಲಿ ಆದಿತ್ಯ ಈಜುಕೊಳ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದ. ಆರೋಪಿಗಳಿಬ್ಬರು ಸೋದರ ಸಂಬಂಧಿಗಳಾಗಿದ್ದಾರೆ. ಕುರಿ ಮೇಯಿಸುವಾಗ ಆತನಿಗೆ ಸಂತ್ರಸ್ತೆಯರ ಕುಟುಂಬದವರ ಎಂ.ಕೆ.ಆದಿತ್ಯ ಹಾಗೂ ಕಿರಣ್ ಕುಮಾರ್ ಸ್ನೇಹವಾಗಿದೆ. ಈ ಪರಿಚಯದ ನೆಪದಲ್ಲಿ 13 ಹಾಗೂ 15 ವರ್ಷದಬಾಲಕಿಯರನ್ನು ನಿರ್ಜನ ಪ್ರದೇಶಕ್ಕೆಕರೆದೊಯ್ದು ಲೈಂಗಿಕವಾಗಿ ಶೋಷಣೆ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಮದರಸಾದಲ್ಲಿ ನಿರಂತರ ಹಿಂಸೆ ಕೊಡುತ್ತಿದ್ದ ಧರ್ಮ ಬೋಧಕ: ದೌರ್ಜನ್ಯ ತಾಳಲಾರದೆ ತಪ್ಪಿಸಿಕೊಂಡ ಬಿಹಾರದ 24 ಮಕ್ಕಳು!

ಗೂಗಲ್‌ನಲ್ಲಿ ಆಪ್‌ಲೋಡ್

ತಾವು ಅಪ್ರಾಪ್ತ ಬಾಲಕಿಯರ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯ ಕೃತ್ಯವನ್ನು ಮೊಬೈಲ್‌ನಲ್ಲಿ ಕಿರಣ್ ಹಾಗೂ ಆದಿತ್ಯ ವಿಡಿಯೋ ಚಿತ್ರೀಕರಿಸಿಕೊಂಡಿದ್ದರು. ಮೊಬೈಲ್‌ನ ಫೋಲ್ಡರ್‌ನಲ್ಲಿದ್ದ ಆ ವಿಡಿಯೋಗಳು ಗೂಗಲ್ ಗೆ ಆಪ್ ಲೋಡ್ ಆಗಿವೆ. ಬಳಿಕ ಆನ್‌ಲೈನಲ್ಲಿ ಆ ಆಶ್ಲೀಲ ವಿಡಿಯೋಗಳು ಹರಿದಾಡಿವೆ. ಈ ಬಗ್ಗೆ ಎನ್‌ಸಿಆ‌ರ್ ಎನ್‌ಸಿಆರ್‌ಪಿ ಪೋರ್ಟಲ್‌ನಲ್ಲಿ ವರದಿಯಾಗಿದ್ದು, ಆ ವಿಡಿಯೋಗಳನ್ನು ಪರಿಶೀಲಿಸಿದಾಗ ಕಗ್ಗಲೀಪುರ ಸರಹದ್ವಿನಲ್ಲಿ ನಡೆದಿರುವುದು ಗೊತ್ತಾಗಿದೆ. ಕೂಡಲೇ ಸಂತ್ರಸ್ತೆಯರ ಕುಟುಂಬದವರನ್ನು ಪೊಲೀಸರು ಸಂಪರ್ಕಿಸಿ ಮಾಹಿತಿ ಪಡೆದಿದ್ದಾರೆ. ಈ ಕೃತ್ಯ ಎಸಗಿದ ಬಳಿಕ ಅಲ್ಲೇ ಇದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಅಪರೂಪದ ಪ್ರಕರಣ

ಡಿಜಿಪಿ ಸೈಬರ್ ಕಮಾಂಡ್ ಸಾಮಾನ್ಯವಾಗಿ ಸಿಎಎಎಂ ಪ್ರಕರಣಗಳಲ್ಲಿ ಇಂಟರ್‌ನೆಟ್ ಅಥವಾ ಇತರೆ ಮೂಲಗಳಿಂದ ಮಕ್ಕಳ ಲೈಂಗಿಕ ದೌರ್ಜನ್ಯ ದೃಶ್ಯಾವಳಿಯನ್ನು ಡೌನ್ ಲೋಡ್ ಮಾಡಿ ಸಂಗ್ರಹಿಸಿಟ್ಟಿದ್ದ ಆರೋ ಪಿಗಳನ್ನು ಪೊಲೀಸರು ಬಂಧಿಸುತ್ತಿದ್ದರು. ಆದರೆ ಈ ಪ್ರಕರಣದಲ್ಲಿ ತಾವೇ ಆಶ್ಲೀಲ ವಿಡಿಯೋ ಸೃಷ್ಟಿಸಿ ಇಂಟರ್‌ನೆಟ್‌ಗೆ ಆಪ್‌ ಲೋಡ್ ಮಾಡಿದ್ದ ಆರೋಪಿಗಳನ್ನು ಬಂಧಿಸಿರುವ ಅಪರೂಪದ ಕೆಲವೇ ಪ್ರಕರಣಗಳಲ್ಲೊಂದಾಗಿದೆ ಎಂದು  ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ – Kannada News | PM Narendra Modi Receives grand Ceremonial Welcome In UAE

ಅಬುಧಾಬಿ, ಮೇ 15: ಪ್ರಧಾನಿ ನರೇಂದ್ರ ಮೋದಿ (PM Modi in UAE) ಇಂದು ಕೇವಲ 4 ಗಂಟೆಗಳ ಭೇಟಿಗಾಗಿ ಅಬುಧಾಬಿಗೆ ತೆರಳಿದ್ದರು. ಈ ಮೂಲಕ ಅವರು ತಮ್ಮ 5 ರಾಷ್ಟ್ರಗಳ ಪ್ರವಾಸವನ್ನು ಪ್ರಾರಂಭಿಸಿದರು. ಅಲ್ಲಿ ಅವರಿಗೆ ಯುಎಇಯ ನಾಯಕರಿಂದ ಭವ್ಯ ಸ್ವಾಗತ ದೊರೆಯಿತು.

ಅಬುಧಾಬಿಯ ವಿಮಾನ ನಿಲ್ದಾಣದಲ್ಲಿ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಪ್ರಧಾನಿ ಮೋದಿಯನ್ನು ತಬ್ಬಿಕೊಂಡು ಸ್ವಾಗತಿಸಿದರು. ಬಳಿಕ ಅವರಿಗೆ ಗೌರವ ರಕ್ಷೆ ನೀಡಲಾಯಿತು. ಈ ಆತ್ಮೀಯ ಸ್ವಾಗತಕ್ಕಾಗಿ ಮೋದಿ ಯುಎಇ ನಾಯಕರಿಗೆ ಧನ್ಯವಾದ ಅರ್ಪಿಸಿದರು. ಈ ದೇಶಕ್ಕೆ ಭೇಟಿ ನೀಡುವುದು ನನಗೆ ಎರಡನೇ ಮನೆಗೆ ಬಂದಂತೆ ಭಾಸವಾಗುತ್ತದೆ ಎಂದು ಮೋದಿ ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದರ್ಶನ್​ಗೆ ಸಿಗಲಿಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು? – Kannada News | Darshan Thoogudeepa Bail plea rejected by Supreme Court lawyer gives hiring details

ಜಾಮೀನು ಪಡೆಯುವ ನಿರೀಕ್ಷೆಯಲ್ಲಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Case) ಆರೋಪಿ, ನಟ ದರ್ಶನ್ ಅವರಿಗೆ ನಿರಾಸೆ ಆಗಿದೆ. ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಇಂದು (ಮೇ 15) ನ್ಯಾಯಾಲಯದಲ್ಲಿ ವಿಚಾರಣೆ ಹೇಗೆ ನಡೆಯಿತು ಎಂಬುದನ್ನು ಲಾಯರ್ ಸಾಕೇತ್ ಅವರು ವಿವರಿಸಿದ್ದಾರೆ. ಅವರು ಮಾತನಾಡಿದ ವಿಡಿಯೋ ಇಲ್ಲಿದೆ. ‘ದರ್ಶನ್ (Darshan Thoogudeepa) ಓರ್ವ ವಿಚಾರಣಾಧೀನ ಕೈದಿ. ಜೈಲಿನಲ್ಲಿ ಬೇರೆ ಕೈದಿಗಳಿಗೆ ಸಿಗುತ್ತಿರುವ ಸವಲತ್ತುಗಳು ತಮಗೆ ಸಿಗುತ್ತಿಲ್ಲ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದರು. ಒಟ್ಟು 272 ಸಾಕ್ಷಿಗಳಿವೆ. ಇನ್ನೂ 150 ಸಾಕ್ಷಿಗಳ ವಿಚಾರಣೆ ಆಗಬೇಕಿದೆ. ಅದರಲ್ಲಿ 60 ಸಾಕ್ಷಿಗಳು ಮುಖ್ಯವಾಗಿವೆ. ಅವುಗಳ ವಿಚಾರಣೆ ನಡೆಯುವ ತನಕ ದರ್ಶನ್ ಅವರಿಗೆ ಜಾಮೀನು ನೀಡಬಾರದು ಎಂದು ರಾಜ್ಯ ಸರ್ಕಾರ ಕೇಳಿಕೊಂಡಿದೆ. ಒಂದು ವರ್ಷದಲ್ಲಿ 60 ಮುಖ್ಯ ಸಾಕ್ಷಿಗಳ ವಿಚಾರಣೆ ಮಾಡಬೇಕು ಎಂದು ಗಡುವು ನೀಡಲಾಗಿದೆ. ಆ ಸಾಕ್ಷಿಗಳ ವಿಚಾರಣೆ ಮುಗಿದ ಬಳಿಕ ಜಾಮೀನು (Bail) ನೀಡಬೇಕೋ ಅಥವಾ ಬೇಡವೋ ಎಂಬುದನ್ನು ಪರಿಗಣಿಸಲಾಗುವುದು ಅಂತ ನ್ಯಾಯಾಲಯ ತಿಳಿಸಿದೆ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version