ಅಸಭ್ಯ ಮೆಸೇಜ್ ಮಾಡಿದ ಪೊಲೀಸಪ್ಪನ ವಿರುದ್ಧ ಪೊಲೀಸರಿಗೆ ಚೈತ್ರಾ ದೂರು – Kannada News | Chaithra J Achar calls out a policeman who trash messaged her

ನಟಿಯರು ಸಾಮಾಜಿಕ ಜಾಲತಾಣದಲ್ಲಿ (Social Media) ತೀವ್ರ ಕಿರುಕುಳ ಅನುಭಿವಿಸುತ್ತಾರೆ. ಕೀಳು ಮಟ್ಟದ ಕಮೆಂಟ್​​ಗಳು, ಅಸಭ್ಯ ಚಿತ್ರಗಳನ್ನು ಕಳಿಸುವುದು, ನಿಂದನೆ, ಕೆಟ್ಟ ಟೀಕೆ, ವೇಶ್ಯೆಯರಿಗೆ ಹೋಲಿಕೆ ಹೀಗೆ ತೀರಾ ಕೀಳು ಮಟ್ಟದ ಟ್ರೋಲಿಂಗ್ ಅನ್ನು ನಟಿಯರು ಎದುರಿಸುತ್ತಿದ್ದಾರೆ. ಕೆಲವು ನಟಿಯರು ಮಾತ್ರ ಈ ಆನ್​ಲೈನ್ ದೌರ್ಜನ್ಯದ ವಿರುದ್ಧ ಗಟ್ಟಿ ದನಿ ಎತ್ತಿ ಮಾತನಾಡುತ್ತಾರೆ. ಅವರಲ್ಲಿ ಕನ್ನಡದ ಪ್ರತಿಭಾವಂತ ನಟಿ ಚೈತ್ರಾ ಆಚಾರ್ ಸಹ ಒಬ್ಬರು. ಚೈತ್ರಾ ಅದೆಷ್ಟು ಗಟ್ಟಿಗಿತ್ತಿಯೆಂದರೆ ತಮಗೆ ಕೆಟ್ಟ ಸಂದೇಶ ಕಳಿಸಿದ ಪೊಲೀಸ್ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾರೆ.

ಮಹಿಳೆಯರ ರಕ್ಷಣೆಯ ಪ್ರತಿಜ್ಞೆ ಮಾಡಿರುವ ಪೊಲೀಸಪ್ಪನೇ ಒಬ್ಬ ನಟಿ ಚೈತ್ರಾ ಆಚಾರ್ ಅವರಿಗೆ ಅತ್ಯಂತ ಕೀಳು ಮಟ್ಟದ ಸಂದೇಶವನ್ನು ಕಳಿಸಿದ್ದ. ಸಾಮಾನ್ಯ ಮಹಿಳೆಯರು, ನಟಿಯರಾದರೆ ಪೊಲೀಸ್ ಸಮವಸ್ತ್ರ ನೋಡಿ ಅಂಜುತ್ತಿದ್ದರೇನೋ ಆದರೆ ಚೈತ್ರಾ ಆಚಾರ್, ಆ ವ್ಯಕ್ತಿ ಕಳಿಸಿದ್ದ ಸಂದೇಶದ ಸ್ಕ್ರೀನ್ ಶಾಟ್ ತೆಗೆದು, ಆ ವ್ಯಕ್ತಿಯ ಫೋಟೊದ ಸಮೇತ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಮಾತ್ರವಲ್ಲದೆ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಈ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದಿದ್ದಾರೆ.

ಬಳಿಕ, ಚೈತ್ರಾ ಅವರಿಗೆ ಕೀಳು ಸಂದೇಶ ಕಳಿಸಿದ್ದ ಹೊಸಮನಿ ಎಂಬ ಪೊಲೀಸ್ ಇಲಾಖೆಗೆ ಸೇರಿದ ವ್ಯಕ್ತಿ, ‘ತಪ್ಪಾಯಿತು, ನಿಮ್ಮ ಮೇಲಿನ ಕಾಳಜಿಯಿಂದಲೇ ಆ ಸಂದೇಶ ಕಳಿಸಿದೆ, ನೀವು ಹಂಚಿಕೊಂಡಿರುವ ಪೋಸ್ಟ್ ಅನ್ನು ಡಿಲೀಟ್ ಮಾಡಿ, ಅದು ನನ್ನ ಕೆಲಸಕ್ಕೆ ತೊಂದರೆ ಕೊಡುತ್ತದೆ’ ಎಂದು ಗೋಗರೆದಿದ್ದಾನೆ. ಆದರೆ ಚೈತ್ರಾ ಆಚಾರ್, ಅದಕ್ಕೆಲ್ಲ ಕರಗದೆ, ಆ ಸಂದೇಶದ ಸ್ಕ್ರೀನ್ ಶಾಟ್ ಅನ್ನೂ ಹಂಚಿಕೊಂಡಿದ್ದು, ‘ನನ್ನ ವೃತ್ತಿಯ ಬಗ್ಗೆ ಮಾತನಾಡುವಾಗ ಇದು ಅರಿವಾಗಲಿಲ್ಲವೇ’ ಎಂದು ಪ್ರಶ್ನೆ ಮಾಡಿದ್ದಾರೆ. ಆ ಸಂದೇಶವನ್ನೂ ಸಹ ಅವರು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.

ಇದನ್ನೂ ಓದಿ:ವೀಕೆಂಡ್​ನಲ್ಲೂ ವರ್ಕೌಟ್ ತಪ್ಪಿಸಿಲ್ಲ ಚೈತ್ರಾ ಆಚಾರ್

ಚೈತ್ರಾ ಆಚಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ತಮ್ಮ ಫೋಟೊಗಳನ್ನು ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಚಿತ್ರಗಳಿಗೆ ನಾನಾ ಜನ ನಾನಾ ರೀತಿಯ ಕಮೆಂಟುಗಳನ್ನು ಮಾಡುತ್ತಿರುತ್ತಾರೆ. ತೀರ ಅಸಭ್ಯ, ಕೀಳು ಅಭಿರುಚಿಯ ಕಮೆಂಟುಗಳ ಬಂದಾಗ ನಟಿ ಚೈತ್ರಾ ಆಚಾರ್, ಹಿಂದೆ-ಮುಂದೆ ನೋಡದೆ ಅಂಥಹವರ ಚಳಿ ಬಿಡಿಸುತ್ತಾರೆ.

ಚೈತ್ರಾ ಆಚಾರ್ ಇದೀಗ ಕನ್ನಡ ಮಾತ್ರವಲ್ಲದೆ ಪರ ಭಾಷೆ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಪ್ರಭಾಸ್ ನಟನೆಯ ‘ಫೌಜಿ’ ಸಿನಿಮಾನಲ್ಲೂ ಚೈತ್ರಾ ಆಚಾರ್ ಪ್ರಮುಖವಾದ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ತಮಿಳಿನ ಕೆಲ ಸಿನಿಮಾಗಳಲ್ಲಿ ಈಗಾಗಲೇ ನಟಿಸಿ ಸೈ ಎನಿಸಿಕೊಂಡಿದ್ದಾರೆ. ‘ಸ್ಟ್ರಾಬೆರ್ರಿ’, ‘ಲೈಲಾಸ್ ಸ್ವೀಟ್ ಡ್ರೀಮ್ಸ್’, ತಮಿಳಿನ ‘ಮೀಸೆಯಾ ಮುರುಕ್ಕು 2’ ಸಿನಿಮಾಗಳಲ್ಲಿ ಚೈತ್ರಾ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ಮುಂದಿನ 3 ದಿನ ಮಳೆ ಅಬ್ಬರ, ಮುಕ್ಕಾಲು ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್​​ – Kannada News | India meteorological department warns of 3 day rain spell yellow alert across three fourths of karnataka

ಬೆಂಗಳೂರು, ಮೇ 15: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಗುಡುಗು ಮಿಂಚು, ಗಾಳಿ ಸಹಿತ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಸಿದೆ. ಈ ಹಿನ್ನೆಲೆಯಲ್ಲಿ ಹಲವು ಪ್ರದೇಶಗಳಿಗೆ ಆರೆಂಜ್ ಅಲರ್ಟ್ ಮತ್ತು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. IMD ಪ್ರಕಾರ, ಕರ್ನಾಟಕದ ಉತ್ತರ ಒಳನಾಡು ಭಾಗದಲ್ಲಿ 17ರವರೆಗೆ ಗಂಟೆಗೆ 40-50 ಕಿಮೀ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಮಿಂಚು ಹಾಗೂ ಬಿರುಗಾಳಿಯಿಂದ ಕೆಲ ಪ್ರದೇಶಗಳಲ್ಲಿ ಅಪಾಯದ ಪರಿಸ್ಥಿತಿ ಉಂಟಾಗಬಹುದು ಎಂದು ಎಚ್ಚರಿಸಲಾಗಿದೆ.

ಮುಖ್ಯಾಂಶಗಳು

  • ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ 3 ದಿನಗಳ ಕಾಲ ಮಳೆ
  • ಗುಡುಗು-ಮಿಂಚು ಮತ್ತು ಗಾಳಿ ಸಹಿತ ವರುಣನ ಅಬ್ಬರದ ನಿರೀಕ್ಷೆ
  • ಮುಕ್ಕಾಲು ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್​​ ಘೋಷಿಸಿದ ಇಲಾಖೆ

ವಾಯುಭಾರ ಕುಸಿತದ ಎಫೆಕ್ಟ್​​

ಮೇ 18ರಂದು ಗಾಳಿಯ ವೇಗ ಸ್ವಲ್ಪ ಕಡಿಮೆಯಾಗಬಹುದಾದರೂ, ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಗಂಟೆಗೆ 30-40 ಕಿಮೀ ವೇಗದ ಗಾಳಿಯೊಂದಿಗೆ ಗುಡುಗು ಮಳೆಯಾಗುವ ಸಾಧ್ಯತೆ ಮುಂದುವರಿಯಲಿದೆ. ಉತ್ತರ ಕರ್ನಾಟಕ ಮಾತ್ರವಲ್ಲದೆ, ದಕ್ಷಿಣ ಒಳನಾಡು ಕರ್ನಾಟಕದಲ್ಲೂ ಈ ಅವಧಿಯಲ್ಲಿ ಗಂಟೆಗೆ 40-50 ಕಿಮೀ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತದ ಪ್ರಭಾವದ ಪರಿಣಾಮ ಭಾರಿ ಮಳೆಯನ್ನು ಅಂದಾಜಿಸಲಾಗಿದೆ. ರಾಜ್ಯದ ಶೇ.50ಕ್ಕಿಂತ ಹೆಚ್ಚಿನ ಪ್ರದೇಶಗಳಲ್ಲಿ ಗುಡುಗು ಮತ್ತು ಮಿಂಚಿನ ಸಮೇತ ವರುಣ ಅಬ್ಬರಿಸಲಿದ್ದಾನೆ. ಹೀಗಾಗಿ ಮುಕ್ಕಾಲು ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್​​ ಘೋಷಿಸಲಾಗಿದೆ ಎಂದು ಹವಾಮಾನ ತಜ್ಞ ಸಿ.ಎಸ್​​. ಪಾಟೀಲ್​​ ತಿಳಿಸಿದ್ದಾರೆ.

ಇದನ್ನೂ ಓದಿ: ವಾಯುಭಾರ ಕುಸಿತ; ಕರ್ನಾಟಕದಲ್ಲಿ 3 ದಿನ ಭಾರೀ ಮಳೆ, ಎಲ್ಲೆಲ್ಲಿ?

ಎಲ್ಲೆಲ್ಲಿ ಯೆಲ್ಲೋ ಅಲರ್ಟ್​​?

ಯಾದಗಿರಿ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಧಾರವಾಡ, ಗದಗ, ಬಳ್ಳಾರಿ, ವಿಜಯನಗರ, ಹಾವೇರಿ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಉಡುಪಿ ಮತ್ತು ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಸನ, ತುಮಕೂರು, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಶಾಸಕರಾದ ಬಳಿಕ ಮೊದಲ ಸಭೆಗೆ ಲ್ಯಾಪ್​​ಟಾಪ್ ಹಿಡಿದು ಬಂದ ಸಮರ್ಥ್, ಕುಡಿಯುವ ನೀರಿಗೆ ಹೊತ್ತು – Kannada News | Samarth Shamanur First Meeting With Officer after MLA at Davanagere

ದಾವಣಗೆರೆ, (ಮೇ 15): ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸಮರ್ಥ್ ಶಾಮನೂರು (Samarth Shamanur) ಮೊದಲ ಬಾರಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ನಿನ್ನೆ (ಮೇ 14) ವಿಧಾನಸೌಧಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಸಮರ್ಥ್ ಮರುದಿನವೇ ಅಂದರೆ ಇಂದು (ಮೇ 15) ಅಧಿಕಾರಿಗಳ ಸಭೆ ನಡೆಸಿ ಗಮನಸೆಳೆದಿದ್ದಾರೆ. ದಾವಣಗೆರೆ (Davanagere) ನಗರದ ಅರುಣಾ ಸರ್ಕಲ್ ಬಳಿ ಇರುವ ಪಶುಸಂಗೋಪನೆ ಇಲಾಖೆ ಸಭಾಂಗಣದಲ್ಲಿ ಸಭೆ ನಡೆದಿದ್ದು, ಅಧಿಕಾರಿಗಳು ನೀಡಿದ ಮಾಹಿತಿಯನ್ನು ಲ್ಯಾಪ್​ಟಾಪ್​​ನಲ್ಲಿ ದಾಖಲು ಮಾಡಿಕೊಂಡರು. ಇನ್ನು ಸಭೆಯಲ್ಲೇ ಪ್ರಮುಖವಾಗಿ ಕುಡಿಯುವ ನೀರಿಗೆ ಹೊತ್ತು ಕೊಟ್ಟಿರುವುದು ವಿಶೇಷವಾಗಿದೆ.

ಹೌದು..ಯಾವ ಯಾವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎನ್ನುವ ಬಗ್ಗೆ ಚರ್ಚಿಸಿದ್ದು,‌   ತಕ್ಷಣಕ್ಕೆ ನಾಲ್ಕು ಕಡೆ ಬೋರ್ ವೆಲ್ ಕೊರೆಯಿಸಲು ನಿರ್ಧರಿಸಲಾಗಿದೆ. ಇನ್ನು ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಾಸಕ ಸಮರ್ಥ್, ಅಧಿಕಾರಿಗಳು, ಸಾರ್ವಜನಿಕರು ಹಾಗೂ ಮಾಧ್ಯಮ ಪ್ರತಿನಿಧಿಗಳು ನೀಡುವ ಮಾಹಿತಿ ಪಡೆದು ಸೂಕ್ತ ನಿರ್ಧಾರ ತೆಗೆದುಕೊಳ್ಳುವೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಈ ತಂತ್ರ ಬಳಸಿದರೆ, 12 ಲಕ್ಷ ಮಾತ್ರವಲ್ಲ, 15 ಲಕ್ಷ ರೂವರೆಗೆ ಆದಾಯಕ್ಕೆ ಶೂನ್ಯ ತೆರಿಗೆ – Kannada News | Tips and tricks to get zero tax liablity for upto Rs 15 lakh annual income

ಹೊಸ ಟ್ಯಾಕ್ಸ್ ವ್ಯವಸ್ಥೆಯಲ್ಲಿ (New Income Tax Regime) 12,00,000 ರೂವರೆಗಿನ ವಾರ್ಷಿಕ ಆದಾಯ ಇರುವವರಿಗೆ ಟ್ಯಾಕ್ಸ್ ಮನ್ನಾ ಮಾಡಲಾಗಿದೆ. ಸಂಬಳದಾರರಿಗೆ 75,000 ರೂ ಸ್ಟ್ಯಾಂಡರ್ಡ್ ಡಿಡಕ್ಷನ್ ಸೇರಿಸಿದರೆ 12.75 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ಇರುವುದಿಲ್ಲ. ಕೆಲವು ಭತ್ಯೆಗಳು (Allowances) ಮತ್ತು ಸೌಲಭ್ಯಗಳನ್ನು (Perks) ಸರಿಯಾಗಿ ಬಳಸಿಕೊಳ್ಳುವ ಮೂಲಕ 15 ಲಕ್ಷ ರೂಪಾಯಿ ವಾರ್ಷಿಕ ಆದಾಯ (CTC) ಹೊಂದಿರುವವರು ಕೂಡ ಶೂನ್ಯ ತೆರಿಗೆ ಅವಕಾಶ ಹೊಂದಬಹುದು. ಇಲ್ಲಿವೆ ಆ ತಂತ್ರಗಳು:

ಹೊಸ ತೆರಿಗೆ ಪದ್ಧತಿಯಲ್ಲಿ ತೆರಿಗೆ ವಿನಾಯಿತಿ ಪಡೆಯಲು ಲಭ್ಯವಿರುವ ಕೆಲವು ಪ್ರಮುಖ ಮಾರ್ಗಗಳು ಇಲ್ಲಿವೆ:

  • ಊಟದ ಕೂಪನ್‌ಗಳು (Meal Coupons): ಸೋಡೆಕ್ಸೊ (Sodexo) ನಂತಹ ಮೀಲ್ ಕೂಪನ್‌ಗಳ ಮಿತಿಯನ್ನು ಪ್ರತಿ ಊಟಕ್ಕೆ 50 ರೂ. ನಿಂದ 200 ರೂ. ಗೆ ಹೆಚ್ಚಿಸಲಾಗಿದೆ. ಇದರಿಂದ ವಾರ್ಷಿಕವಾಗಿ ಸುಮಾರು 1 ಲಕ್ಷ ರೂ. ವರೆಗೆ ತೆರಿಗೆ ಉಳಿಸಬಹುದು.
  • ಗ್ಯಾಜೆಟ್ ಭತ್ಯೆ (Gadget Allowance): ಕಚೇರಿ ಕೆಲಸಕ್ಕಾಗಿ ಕಂಪನಿಯು ನೀಡುವ ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಅಥವಾ ಮೊಬೈಲ್ ಫೋನ್‌ಗಳ ವೆಚ್ಚದ ಮರುಪಾವತಿಯ ಮೇಲೆ ತೆರಿಗೆ ಇರುವುದಿಲ್ಲ.
  • ದೂರವಾಣಿ ಮತ್ತು ಇಂಟರ್ನೆಟ್ ಮರುಪಾವತಿ: ಅಧಿಕೃತ ಕೆಲಸಕ್ಕಾಗಿ ಬಳಸುವ ಫೋನ್ ಮತ್ತು ಇಂಟರ್ನೆಟ್ ಬಿಲ್‌ಗಳ ಮರುಪಾವತಿ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿದೆ.
  • ವಾಹನ ಮತ್ತು ಚಾಲಕನ ಭತ್ಯೆ (Car & Driver Reimbursement): ಅಧಿಕೃತ ಕೆಲಸಗಳಿಗಾಗಿ ಕಂಪನಿಯ ಕಾರು ಅಥವಾ ಇಂಧನ ವೆಚ್ಚ ಮತ್ತು ಚಾಲಕನ ಸಂಬಳದ ಮರುಪಾವತಿಯನ್ನು ಪಡೆದರೆ ಅದು ತೆರಿಗೆಗೆ ಒಳಪಡುವುದಿಲ್ಲ.
  • ಆರೋಗ್ಯ ಮತ್ತು ಜಿಮ್ ಸೌಲಭ್ಯ: ಕಂಪನಿಯು ಎಲ್ಲಾ ಉದ್ಯೋಗಿಗಳಿಗೆ ಸಮಾನವಾಗಿ ನೀಡುವ ಜಿಮ್ ಸದಸ್ಯತ್ವ ಅಥವಾ ಆರೋಗ್ಯ ತಪಾಸಣೆಯ ಸೌಲಭ್ಯಗಳು ತೆರಿಗೆ ಮುಕ್ತವಾಗಿರುತ್ತವೆ.
  • ಸ್ಟಾಂಡರ್ಡ್ ಡಿಡಕ್ಷನ್ (Standard Deduction): ಸಂಬಳ ಪಡೆಯುವ ಉದ್ಯೋಗಿಗಳಿಗೆ ಸಿಗುವ 75,000 ರೂ. (ಇತ್ತೀಚಿನ ಬದಲಾವಣೆಯಂತೆ) ಸ್ಟಾಂಡರ್ಡ್ ಡಿಡಕ್ಷನ್ ಇಲ್ಲಿ ಅನ್ವಯಿಸುತ್ತದೆ.

ಇದನ್ನೂ ಓದಿ: 18 ಮಿಲಿಯನ್ ಡಾಲರ್ ದಂಡ ಪಾವತಿಸುವ ಎಸ್​​ಇಸಿ ಪ್ರಸ್ತಾವಕ್ಕೆ ಅದಾನಿ ಒಪ್ಪಿಗೆ

ಒಬ್ಬ ವ್ಯಕ್ತಿಯ 15 ಲಕ್ಷ ರೂ. ಆದಾಯದಲ್ಲಿ ಈ ಮೇಲಿನ ಭತ್ಯೆಗಳನ್ನು (ಸುಮಾರು 7.5 ಲಕ್ಷ ರೂವರೆಗೆ) ಕಡಿತಗೊಳಿಸಿದಾಗ, ಅವರ ತೆರಿಗೆಗೆ ಒಳಪಡುವ ಆದಾಯವು 7.5 ಲಕ್ಷ ರೂ.ಗಿಂತ ಕೆಳಗೆ ಬರುತ್ತದೆ. ಹೊಸ ತೆರಿಗೆ ಪದ್ಧತಿಯಲ್ಲಿ 12 ಲಕ್ಷ ರೂ.ವರೆಗೆ (ರಿಬೇಟ್ ಸೇರಿ ಪ್ರಾಯೋಗಿಕವಾಗಿ 12.75 ಲಕ್ಷ ರೂ.ವರೆಗೆ) ಆದಾಯವಿದ್ದರೆ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. 60,000 ರೂ ಟ್ಯಾಕ್ಸ್ ರಿಬೇಟ್ ಇರುವುದರಿಂದ ಯಾವುದೇ ತೆರಿಗೆ ಕಟ್ಟುವ ಅಗತ್ಯ ಇರುವುದಿಲ್ಲ.

ಮೇಲಿನ ಅಂಶಗಳಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಈ ಸೌಲಭ್ಯಗಳನ್ನು ಪಡೆಯಲು ನಿಮ್ಮ ಕಂಪನಿಯ ಸಂಬಳದ ರಚನೆ (Salary Structure) ಅದಕ್ಕೆ ಪೂರಕವಾಗಿರಬೇಕು ಮತ್ತು ನೀವು ಸರಿಯಾದ ಬಿಲ್‌ಗಳನ್ನು ಸಲ್ಲಿಸಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಗಳ ಮದುವೆಯಲ್ಲಿ ಕನ್ಯಾದಾನ ಮಾಡುವಾಗಲೇ ಹೃದಯಾಘಾತದಿಂದ ಅಪ್ಪ ಸಾವು! – Kannada News | Father dies of heart attack during daughters Kanyadan Wedding Ritual in Buldhana

ನವದೆಹಲಿ, ಮೇ 15: ಮದುವೆ ಮನೆಯ ತುಂಬ ಸಂತೋಷದ ವಾತಾವರಣವಿತ್ತು. ಮನೆ ಮಗಳ ಮದುವೆಯಾದ್ದರಿಂದ ಕುಟುಂಬದವರೆಲ್ಲ ಸಂಭ್ರಮದಲ್ಲಿದ್ದರು. ಆದರೆ, ಕಣ್ಮುಚ್ಚಿ ಬಿಡುವಷ್ಟರಲ್ಲಿ ಆ ಮದುವೆ (Wedding) ಮನೆ ಸೂತಕದ ಮನೆಯಾಗಿಹೋಯಿತು. ಮಹಾರಾಷ್ಟ್ರದ ಸಿಂಧ್‌ಖೇಡ್ ರಾಜಾ ತಾಲ್ಲೂಕಿನ ವರ್ದಾದಿಯಲ್ಲಿ ವಧುವಿನ ಕನ್ಯಾದಾನ ಮಾಡಿದ ತಂದೆ ತಂದೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ವರ್ದಾದಿಯ ಕುರುಮದಾಸ್ ಭೂತೇಕರ್ ಅವರ ಪುತ್ರಿ ನಂದಿನಿ, ಜಲ್ನಾ ಜಿಲ್ಲೆಯ ಮಾಂಥಾದ ಪ್ರದೀಪ್ ನಾನೋಟೆ ಅವರನ್ನು ವಿವಾಹವಾದರು. ಗುರುವಾರ ಸಂಜೆ ಮುಖ್ಯ ವಿವಾಹ ಸಮಾರಂಭ ಪ್ರಾರಂಭವಾಯಿತು. ಅದ್ದೂರಿಯಾಗಿ ನಡೆದ ಈ ವಿವಾಹದಲ್ಲಿ ಕುರುಮದಾಸ್ ತನ್ನ ಮಗಳ ಕೈಯನ್ನು ವರನ ಮನೆಯವರ ಕೈಗೆ ಒಪ್ಪಿಸುವ ಸಂದರ್ಭದಲ್ಲೇ ಇದ್ದಕ್ಕಿದ್ದಂತೆ ಅವರಿಗೆ ಎದೆಯಲ್ಲಿ ನೋವುಂಟಾಯಿತು. ಅದರ ನಂತರ, ಅವರು ವಿವಾಹ ಸಮಾರಂಭ ನಡೆಯುತ್ತಿರುವ ಸ್ಥಳದಲ್ಲಿಯೇ ಕುಸಿದುಬಿದ್ದರು.

ಇದನ್ನೂ ಓದಿ: ಜೈಲಿನೊಳಗೊಂದು ಲವ್ ಸ್ಟೋರಿ! ಕೊಲೆ ಅಪರಾಧಿಯನ್ನು ಮದುವೆಯಾದ ಜೈಲು ಅಧಿಕಾರಿ

ಆರಂಭದಲ್ಲಿ, ಅಲ್ಲಿದ್ದವರು ಒತ್ತಡ ಅಥವಾ ಆಯಾಸದಿಂದ ಅವರು ಮೂರ್ಛೆ ಹೋಗಿರಬೇಕು ಎಂದು ಭಾವಿಸಿದ್ದರು. ಸಂಬಂಧಿಕರು ಅವರನ್ನು ಬೇಗನೆ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಆಸ್ಪತ್ರೆ ತಲುಪುವ ಮೊದಲೇ ಅವರು ಮೃತಪಟ್ಟಿದ್ದರು. ವೈದ್ಯರು ಅವರನ್ನು ಪರೀಕ್ಷಿಸಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಇದರಿಂದಾಗಿ ಸಂತೋಷ ತುಂಬಿದ್ದ ಮದುವೆ ಮಂಟಪದಲ್ಲಿ ಸೂತಕದ ಛಾಯೆ ಆವರಿಸಿತು.

ಮೃತ ಕುರುಮದಾಸ್ ಭೂಟೇಕರ್ ಅವರ ಆರೋಗ್ಯ ಸ್ವಲ್ಪ ಸಮಯದಿಂದ ಕ್ಷೀಣಿಸುತ್ತಿತ್ತು. ಡಿಸೆಂಬರ್‌ನಲ್ಲಿ ಅವರಿಗೆ ಬೈಪಾಸ್ ಸರ್ಜರಿ ನಡೆದಿತ್ತು. ವೈದ್ಯರು ವಿಶ್ರಾಂತಿ ಪಡೆಯಲು ಸಲಹೆ ನೀಡಿದ್ದರು. ಆದರೆ ಅವರು ತಮ್ಮ ಮಗಳ ಮದುವೆಯನ್ನು ತಾವೇ ಮುಂದೆ ನಿಂತು ಅದ್ದೂರಿಯಾಗಿ ಮಾಡಿಸುವ ಕನಸನ್ನು ಹೊಂದಿದ್ದರು. ಈ ಕನಸನ್ನು ನನಸಾಗಿಸಲು ಅವರು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಆದರೆ, ಮಗಳ ಮದುವೆಯಲ್ಲೇ ಅವರು ಪ್ರಾಣ ಬಿಡುವಂತಾಯಿತು.

ಇದನ್ನೂ ಓದಿ: Video: ವಂದೇ ಭಾರತ್ ರೈಲು ಟಿಕೆಟ್‌ ಹಾಫ್ ರೇಟ್‌ಗೆ ಮಾರಾಟ, ಟಿಟಿಇ ಅಮಾನತು

ಈ ಘಟನೆಯ ಸುದ್ದಿ ಆ ಪ್ರದೇಶದಲ್ಲಿ ಕಾಡ್ಗಿಚ್ಚಿನಂತೆ ಹರಡಿತು. ಮಗಳನ್ನು ಸಂತೋಷದಿಂದ ಗಂಡನ ಮನೆಗೆ ಕಳುಹಿಸಬೇಕಾದ ಮನೆಯಿಂದ ತಂದೆಯ ಅಂತ್ಯಕ್ರಿಯೆಯ ಮೆರವಣಿಗೆ ಹೊರಡುವಂತಾಯಿತು. ಇದು ಕುಟುಂಬಸ್ಥರ ಮತ್ತು ಗ್ರಾಮಸ್ಥರ ಕಣ್ಣಲ್ಲಿ ನೀರು ತರಿಸಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿಶಾ ಪಟಾನಿ-ಮೌನಿ ರಾಯ್​ ಈ ರೀತಿ ಸ್ನೇಹ; ಇದೇ ಕಾರಣಕ್ಕೆ ವಿಚ್ಛೇದನ ನೀಡಿದ್ರಾ ಸೂರಜ್? – Kannada News | Mouni Roy disables Instagram comments after Divorce announcement Disha Patani trolled

ಬಾಲಿವುಡ್ ಹಾಗೂ ಕಿರುತೆರೆಯ ಖ್ಯಾತ ನಟಿ ಮೌನಿ ರಾಯ್ (Mouni Roy) ತಮ್ಮ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಉದ್ಯಮಿ ಸೂರಜ್ ನಂಬಿಯಾರ್ ಅವರೊಂದಿಗೆ ವಿಚ್ಛೇದನ (Divorce) ಪಡೆಯುತ್ತಿರುವುದಾಗಿ ಅವರು ಅಧಿಕೃತವಾಗಿ ಘೋಷಿಸಿದ್ದಾರೆ. ಆದರೆ, ಈ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಶುರುವಾಗಿದ್ದು, ಮೌನಿ ರಾಯ್ ಅವರು ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳ ಕಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ. ಈ ಡಿವೋರ್ಸ್ ವಿಷಯದಲ್ಲಿ ಮೌನಿ ರಾಯ್ ಅವರ ಆಪ್ತ ಗೆಳತಿ, ನಟಿ ದಿಶಾ ಪಟಾನಿ (Disha Patani) ಹೆಸರನ್ನು ಎಳೆದು ತಂದು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.

ಕಳೆದ ಕೆಲವು ದಿನಗಳಿಂದ ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ಪರಸ್ಪರ ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿಕೊಂಡಿದ್ದರಿಂದ ಇಬ್ಬರ ಮಧ್ಯೆ ಬಿರುಕು ಮೂಡಿದೆ ಎಂಬ ವದಂತಿ ಹರಡಿತ್ತು. ಅದಕ್ಕೆ ಪ್ರತಿಕ್ರಿಯಿಸಿದ ಅವರು, ಜಂಟಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ತಾವು ಬೇರೆಯಾಗುತ್ತಿರುವುದನ್ನು ಖಚಿತಪಡಿಸಿದ್ದಾರೆ. ‘ನಮ್ಮ ವೈಯಕ್ತಿಕ ಆದ್ಯತೆಗಳ ಬದಲಾವಣೆಯಿಂದಾಗಿ ನಾವು ಪರಸ್ಪರ ಗೌರವದಿಂದಲೇ ಪ್ರತ್ಯೇಕ ಹಾದಿಯಲ್ಲಿ ನಡೆಯಲು ನಿರ್ಧರಿಸಿದ್ದೇವೆ. ಈ ಕಷ್ಟದ ಸಮಯದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಿ, ಯಾವುದೇ ಸುಳ್ಳು ಕಥೆಗಳನ್ನು ಹಬ್ಬಿಸಬೇಡಿ’ ಎಂದು ಮೌನಿ ಮತ್ತು ಸೂರಜ್ ಮನವಿ ಮಾಡಿಕೊಂಡಿದ್ದಾರೆ.

ಮೌನಿ ರಾಯ್ ಅವರು ವಿಚ್ಛೇದನದ ಪೋಸ್ಟ್ ಹಂಚಿಕೊಳ್ಳುತ್ತಿದ್ದಂತೆಯೇ ನೆಟ್ಟಿಗರು ಕಮೆಂಟ್ ಬಾಕ್ಸ್‌ನಲ್ಲಿ ನಟಿ ದಿಶಾ ಪಟಾನಿ ಅವರನ್ನೇ ಗುರಿಯಾಗಿಸಿಕೊಂಡು ಟ್ರೋಲ್ ಮಾಡಲು ಆರಂಭಿಸಿದರು. ಮೌನಿ ಮತ್ತು ದಿಶಾ ಇಬ್ಬರೂ ಅತ್ಯಂತ ಆಪ್ತ ಸ್ನೇಹಿತೆಯರಾಗಿದ್ದು, ಹೆಚ್ಚಾಗಿ ಜೊತೆಯಾಗಿಯೇ ಪಾರ್ಟಿ, ಪ್ರವಾಸಗಳಿಗೆ ಹೋಗುತ್ತಿರುತ್ತಾರೆ. ದಿಶಾ ಪಟಾನಿ ಅವರೇ ಈ ದಂಪತಿಯ ಸಂಸಾರ ಒಡೆಯಲು ಕಾರಣ ಎಂದು ನೆಟ್ಟಿಗರು ಯಾವುದೇ ಆಧಾರವಿಲ್ಲದೆ ಆರೋಪಿಸಲು ಶುರು ಮಾಡಿದರು.

‘ಮೌನಿ ಮತ್ತು ಸೂರಜ್ ನಡುವೆ ನೀನೇ ಜಗಳ ತಂದಿಟ್ಟೆ’ ಎಂದು ಕೆಲವರು ಆರೋಪ ಮಾಡಿದರೆ, ಇನ್ನೂ ಕೆಲವರು ತೀರಾ ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ಮೌನಿ ರಾಯ್ ಮತ್ತು ದಿಶಾ ಪಟಾನಿ ಅವರ ಸ್ನೇಹವನ್ನು ಕೆಲವರು ಸಲಿಂಗ ಕಾಮ ಇರಬಹುದು ಎಂದು ಕೂಡ ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದಾರೆ. ಹಲವು ಮೀಮ್ ಪೇಜ್​ಗಳಲ್ಲಿ ಈ ರೀತಿ ಟ್ರೋಲ್ ಮಾಡಲಾಗಿದೆ.

ಇದನ್ನೂ ಓದಿ: ನಾವು ದೂರಾಗುತ್ತಿದ್ದೇವೆ: ಡಿವೋರ್ಸ್ ವಿಷಯ ಒಪ್ಪಿಕೊಂಡ ಮೌನಿ ರಾಯ್, ಸೂರಜ್ ನಂಬಿಯಾರ್

ತಮ್ಮ ಡಿವೋರ್ಸ್ ಪೋಸ್ಟ್‌ನಲ್ಲಿ ಅತಿಯಾದ ನೆಗೆಟಿವಿಟಿ ಮತ್ತು ಗೆಳತಿ ದಿಶಾ ಪಟಾನಿ ವಿರುದ್ಧ ಹರಿದು ಬರುತ್ತಿದ್ದ ಟ್ರೋಲ್‌ಗಳನ್ನು ತಡೆಯಲು ಮೌನಿ ರಾಯ್ ತಕ್ಷಣವೇ ಆ ಪೋಸ್ಟ್‌ನ ಕಮೆಂಟ್ಸ್ ಅನ್ನು ಆಫ್ ಮಾಡಿದರು. ಆದರೂ ಬಿಡದ ನೆಟ್ಟಿಗರು ಮೌನಿ ರಾಯ್ ಅವರ ಹಳೆಯ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಿಗೆ ಹೋಗಿ ದಿಶಾ ವಿರುದ್ಧ ಕಮೆಂಟ್ ಮಾಡಲು ಆರಂಭಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Monsoon 2026: ಈ ಬಾರಿ ವಾಡಿಕೆಗಿಂತ ಮುಂಚಿತವಾಗಿಯೇ ಮುಂಗಾರು ಪ್ರವೇಶ: ಮೇ 26ಕ್ಕೆ ಕೇರಳಂಗೆ, ಕರ್ನಾಟಕಕ್ಕೆ ಯಾವಾಗ ಎಂಟ್ರಿ? – Kannada News | Hailstorms and Strong Winds Expected in North Karnataka; Heavy Downpour Predicted for South Interior Districts

ಕೇರಳಂ, ಮೇ.15: ದೇಶದ ಕೃಷಿ ವಲಯದ ಜೀವನಾಡಿ ಎನಿಸಿಕೊಂಡಿರುವ ನೈಋತ್ಯ ಮುಂಗಾರು ಮಳೆಯು ಈ ವರ್ಷ ನಿಗದಿತ ಸಮಯಕ್ಕಿಂತ ಸ್ವಲ್ಪ ಮುಂಚಿತವಾಗಿಯೇ ಕೇರಳವನ್ನು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಮೇ 26 ರಂದು ಕೇರಳಕ್ಕೆ ಮುಂಗಾರು ಅಪ್ಪಳಿಸುವ ಸಾಧ್ಯತೆಯಿದ್ದು, ಇದರಲ್ಲಿ 4 ದಿನಗಳ ಹೆಚ್ಚು-ಕಡಿಮೆ (Model Error) ಇರಬಹುದು ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಸಾಮಾನ್ಯವಾಗಿ ಜೂನ್ 1 ರಂದು ಕೇರಳಕ್ಕೆ ಪ್ರವೇಶಿಸುವ ಮುಂಗಾರು, ಈ ಬಾರಿ ಸುಮಾರು ಒಂದು ವಾರ ಮುಂಚಿತವಾಗಿಯೇ ಆರಂಭವಾಗುತ್ತಿರುವುದು ರೈತರಲ್ಲಿ ಸಂತಸ ತಂದಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಈಗಾಗಲೇ ಮುಂಗಾರು ಪ್ರವೇಶಿಸಿದ್ದು, ಅಲ್ಲಿಂದ ಕೇರಳದತ್ತ ವೇಗವಾಗಿ ಚಲಿಸುತ್ತಿದೆ.

ಇಲ್ಲಿದೆ ನೋಡಿ ಎಕ್ಸ್​​ ಪೋಸ್ಟ್​​:

ಕರ್ನಾಟಕಕ್ಕೆ ಯಾವಾಗ?:

ಕೇರಳಕ್ಕೆ ಪ್ರವೇಶಿಸಿದ ಸುಮಾರು ಒಂದು ವಾರದ ನಂತರ ಮುಂಗಾರು ಮಳೆಯು ಕರ್ನಾಟಕವನ್ನು ಪ್ರವೇಶಿಸುತ್ತದೆ. ಈ ಲೆಕ್ಕಾಚಾರದ ಪ್ರಕಾರ, ಜೂನ್ ಮೊದಲ ವಾರದಲ್ಲೇ ಕರುನಾಡಿಗೆ ಮಳೆಯ ಸಿಂಚನವಾಗುವ ನಿರೀಕ್ಷೆಯಿದೆ. ಕಳೆದ ವರ್ಷ ಮಳೆ ಕೊರತೆಯಿಂದ ತತ್ತರಿಸಿದ್ದ ರಾಜ್ಯಕ್ಕೆ ಈ ಬಾರಿಯ ಮುನ್ಸೂಚನೆ ಆಶಾದಾಯಕವಾಗಿದೆ.

ಮುಂದಿನ 7 ದಿನ ರಾಜ್ಯದಲ್ಲಿ ಭಾರೀ ಮಳೆ:

ಕರ್ನಾಟಕ ರಾಜ್ಯದಾದ್ಯಂತ ಮುಂದಿನ ಒಂದು ವಾರದ ಕಾಲ ಹವಾಮಾನದಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡುಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಹಲವೆಡೆ ಬಿಸಿಲಿನ ಬೇಗೆ ಮುಂದುವರಿಯಲಿದ್ದರೂ, ಸಂಜೆಯ ವೇಳೆಗೆ ಮಳೆಯ ಸಿಂಚನವಾಗುವ ಸಾಧ್ಯತೆಯಿದೆ. ರಾಜ್ಯದಾದ್ಯಂತ ಒಣ ಹವೆ ಮತ್ತು ಬಿಗುವಿನ ಬಿಸಿಲಿನ ವಾತಾವರಣ ಮುಂದುವರಿಯಲಿದೆ. ವಿಶೇಷವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ತಾಪಮಾನ ಏರಿಕೆಯಾಗುವ ನಿರೀಕ್ಷೆಯಿದೆ. ತಿದಿನ ಮಧ್ಯಾಹ್ನದ ನಂತರ ರಾಜ್ಯದ ಹಲವೆಡೆ ಮೋಡ ಕವಿದ ವಾತಾವರಣ ನಿರ್ಮಾಣವಾಗಲಿದೆ.

ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು, ಸಿಡಿಲು ಮತ್ತು ಜೋರಾದ ಗಾಳಿಯೊಂದಿಗೆ (Thunderstorms & Squall) ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಗುಡುಗು-ಸಿಡಿಲು ಸಂಭವಿಸುವಾಗ ಬಯಲು ಪ್ರದೇಶದಲ್ಲಿ ಇರಬಾರದು ಮತ್ತು ವಿದ್ಯುತ್ ಉಪಕರಣಗಳಿಂದ ದೂರವಿರುವಂತೆ ಸೂಚಿಸಲಾಗಿದೆ. ಬಿರುಗಾಳಿಯಿಂದಾಗಿ ಮರಗಳು ಅಥವಾ ದುರ್ಬಲ ಕಟ್ಟಡಗಳು ಬೀಳುವ ಸಾಧ್ಯತೆಯಿರುವುದರಿಂದ ಎಚ್ಚರಿಕೆ ವಹಿಸುವುದು ಅಗತ್ಯ.

ಇದನ್ನೂ ಓದಿ: ಹವಾಮಾನ ವರದಿ: ವಾರಾಂತ್ಯಕ್ಕೆ ಬೆಂಗಳೂರಲ್ಲಿ ವರುಣನ ಅಬ್ಬರ, ಮೇ 17ರ ವರೆಗೆ ರಾಜ್ಯದ ವಿವಿಧೆಡೆ ಮಳೆ

ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ‘ಯೆಲ್ಲೋ’ ಹಾಗೂ ‘ಆರೆಂಜ್’ ಅಲರ್ಟ್!

ರಾಜ್ಯದಲ್ಲಿ ಬಿಸಿಲಿನ ಬೇಗೆಯ ನಡುವೆಯೇ ಮಳೆಯ ಆರ್ಭಟ ಶುರುವಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಬಂಗಾಳ ಉಪಸಾಗರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ರಾಜ್ಯದ ದಕ್ಷಿಣ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮೇ 15 ರಿಂದ 18 ರವರೆಗೆ ಗುಡುಗು ಸಹಿತ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಈ ಅವಧಿಯಲ್ಲಿ ಕೆಲವು ಪ್ರದೇಶಗಳಲ್ಲಿ 64.5mm ನಿಂದ 115.5mm ವರೆಗೆ ಮಳೆಯಾಗುವ ಸಾಧ್ಯತೆಯಿದ್ದು, ಐಎಂಡಿ ಈ ಜಿಲ್ಲೆಗಳಲ್ಲಿ ಯೆಲ್ಲೋಅಲರ್ಟ್ ಘೋಷಿಸಿದೆ.

ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಹವಾಮಾನದಲ್ಲಿ ಭಾರಿ ಬದಲಾವಣೆಯಾಗಲಿದೆ. ಗುಡುಗು, ಮಿಂಚು ಮಾತ್ರವಲ್ಲದೆ ಗಂಟೆಗೆ 40-50 ಕಿಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಕೆಲವು ಸ್ಥಳಗಳಲ್ಲಿ ಆಲಿಕಲ್ಲು ಮಳೆ (Hailstorm) ಬೀಳುವ ಮುನ್ಸೂಚನೆ ಇರುವುದರಿಂದ ಈ ಭಾಗದ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ನೀಡಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:35 pm, Fri, 15 May 26

Source link

HAL Recruitment 2026: ಲಿಖಿತ ಪರೀಕ್ಷೆಯಿಲ್ಲದೆ ಉದ್ಯೋಗ ಪಡೆಯುವ ಸುವರ್ಣಾವಕಾಶ; 205 ಐಟಿಐ ಅಪ್ರೆಂಟಿಸ್ ಹುದ್ದೆಗಳಿಗೆ ನೇರ ಸಂದರ್ಶನ! – Kannada News | HAL ITI Apprentice Recruitment 2026 27: 205 Posts, Direct Interview

ಐಟಿಐ ಅಪ್ರೆಂಟಿಸ್ ಹುದ್ದೆಗಳಿಗೆ ನೇರ ಸಂದರ್ಶನImage Credit source: Pinterest

ಐಟಿಐ ಮುಗಿಸಿ ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಭರ್ಜರಿ ಸಿಹಿಸುದ್ದಿ ನೀಡಿದೆ. ಹೈದರಾಬಾದ್‌ನಲ್ಲಿರುವ HAL ಏವಿಯಾನಿಕ್ಸ್ ವಿಭಾಗವು 2026-27ನೇ ಸಾಲಿಗೆ ಒಟ್ಟು 205 ಐಟಿಐ ಅಪ್ರೆಂಟಿಸ್ ತರಬೇತಿ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿಯ ವಿಶೇಷವೆಂದರೆ, ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ ಕೇವಲ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಯಾವೆಲ್ಲಾ ಟ್ರೇಡ್‌ಗಳಿಗೆ ಅವಕಾಶವಿದೆ?

ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಫಿಟ್ಟರ್, ಎಲೆಕ್ಟ್ರಿಷಿಯನ್, ಮೆಷಿನಿಸ್ಟ್, ಟರ್ನರ್, ವೆಲ್ಡರ್, ರೆಫ್ರಿಜರೇಷನ್ & ಎಸಿ, ಸಿಒಪಿಎ (COPA), ಪ್ಲಂಬರ್, ಪೇಂಟರ್, ಡೀಸೆಲ್ ಮೆಕ್ಯಾನಿಕ್, ಮೋಟಾರ್ ವೆಹಿಕಲ್ ಮೆಕ್ಯಾನಿಕ್, ಡ್ರಾಫ್ಟ್ಸ್‌ಮನ್ (ಸಿವಿಲ್ ಮತ್ತು ಮೆಕ್ಯಾನಿಕಲ್) ಹಾಗೂ ಎಲೆಕ್ಟ್ರೋಪ್ಲೇಟರ್ ವಿಭಾಗಗಳಲ್ಲಿ ಈ ಹುದ್ದೆಗಳು ಖಾಲಿ ಇವೆ. ಆಸಕ್ತರು NCVT ಇಂದ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಸಂಬಂಧಿತ ಐಟಿಐ ಪೂರ್ಣಗೊಳಿಸಿರಬೇಕು. ಆಯ್ಕೆಯಾದವರಿಗೆ 1961ರ ಅಪ್ರೆಂಟಿಸ್‌ಶಿಪ್ ಕಾಯ್ದೆಯನ್ವಯ ಶಿಷ್ಯವೇತನ ನೀಡಲಾಗುತ್ತದೆ.

ನೇರ ಸಂದರ್ಶನದ ದಿನಾಂಕ ಮತ್ತು ಸಮಯ:

ಅಭ್ಯರ್ಥಿಗಳು ತಮ್ಮ ಟ್ರೇಡ್‌ಗಳಿಗೆ ನಿಗದಿಪಡಿಸಿದ ದಿನಾಂಕದಂದು ಹೈದರಾಬಾದ್‌ನ ಬಾಲನಗರದಲ್ಲಿರುವ HAL ಕಚೇರಿಗೆ ಹಾಜರಾಗಬೇಕು:

  • ಮೇ 28: ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಡೀಸೆಲ್ ಮೆಕ್ಯಾನಿಕ್ (ಬೆಳಿಗ್ಗೆ); ಫಿಟ್ಟರ್, ಪ್ಲಂಬರ್, ಪೇಂಟರ್ (ಮಧ್ಯಾಹ್ನ).
  • ಮೇ 29: COPA, ಮೋಟಾರ್ ವೆಹಿಕಲ್ ಮೆಕ್ಯಾನಿಕ್ (ಬೆಳಿಗ್ಗೆ); ಎಲೆಕ್ಟ್ರಿಷಿಯನ್, ಡ್ರಾಫ್ಟ್ಸ್‌ಮನ್ ಮೆಕ್ಯಾನಿಕಲ್ (ಮಧ್ಯಾಹ್ನ).
  • ಜೂನ್ 1: ಮೆಷಿನಿಸ್ಟ್, ರೆಫ್ರಿಜರೇಷನ್ ಆ್ಯಂಡ್ ಎಸಿ (ಬೆಳಿಗ್ಗೆ); ಡ್ರಾಫ್ಟ್ಸ್‌ಮನ್ ಸಿವಿಲ್, ವೆಲ್ಡರ್, ಎಲೆಕ್ಟ್ರೋಪ್ಲೇಟರ್ (ಮಧ್ಯಾಹ್ನ).

ಇದನ್ನೂ ಓದಿ: ಇನ್ಫೋಸಿಸ್‌ನಿಂದ ಭರ್ಜರಿ ಉದ್ಯೋಗಾವಕಾಶ; 20,000 ಫ್ರೆಶರ್ಸ್‌ ನೇಮಕಾತಿ ಘೋಷಣೆ

ಸಂದರ್ಶನಕ್ಕೆ ಬೇಕಾಗುವ ಅಗತ್ಯ ದಾಖಲೆಗಳು:

ಸಂದರ್ಶನಕ್ಕೆ ಹೋಗುವಾಗ ಅಭ್ಯರ್ಥಿಗಳು ಈ ಕೆಳಗಿನ ದಾಖಲೆಗಳ ಮೂಲ ಮತ್ತು ಜೆರಾಕ್ಸ್ ಪ್ರತಿಗಳನ್ನು ಕಡ್ಡಾಯವಾಗಿ ಕೊಂಡೊಯ್ಯಬೇಕು:

  • ಆಧಾರ್ ಕಾರ್ಡ್ ಮತ್ತು ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ.
  • ಐಟಿಐ ಪ್ರಮಾಣಪತ್ರ ಮತ್ತು ಜಾತಿ ಪ್ರಮಾಣಪತ್ರ.
  • ಅಪ್ರೆಂಟಿಸ್‌ಶಿಪ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿದ ಪ್ರತಿ (Registration Copy).
  • ಜನ್ಮ ದಿನಾಂಕ ದೃಢೀಕರಣ ಪತ್ರ.

ಸಂದರ್ಶನ ನಡೆಯುವ ಸ್ಥಳ: ಉತ್ಸವ್ ಸದನ್ ಆಡಿಟೋರಿಯಂ, HAL ಏವಿಯಾನಿಕ್ಸ್ ವಿಭಾಗ, ಬಾಲನಗರ, ಹೈದರಾಬಾದ್ – 500042.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

BAN vs PAK: 8 ಅಂಕಗಳೊಂದಿಗೆ ಭಾರಿ ದಂಡ; ಪಾಕ್ ತಂಡಕ್ಕೆ ಮರ್ಮಾಘಾತ ನೀಡಿದ ಐಸಿಸಿ – Kannada News | Pakistan WTC Points Deducted by ICC for Slow Over Rate in Bangladesh Test

ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಬಾಂಗ್ಲಾದೇಶ ಪ್ರವಾಸ ಮಾಡಿರುವ ಪಾಕಿಸ್ತಾನ ತಂಡ ಮೊದಲ ಟೆಸ್ಟ್ ಪಂದ್ಯವನ್ನು ಹೀನಾಯವಾಗಿ ಸೋತಿತ್ತು. ಹೀಗಾಗಿ ಪಾಕ್ ತಂಡಕ್ಕೆ ಸರಣಿ ಗೆಲ್ಲುವ ಅವಕಾಶ ಕೈತಪ್ಪಿದರೂ ಮುಂದಿನ ಪಂದ್ಯವನ್ನು ಗೆದ್ದು ಸರಣಿ ಸಮಬಲಗೊಳಿಸುವ ಅವಕಾಶವಿದೆ. ಆದರೆ ಆ ಪಂದ್ಯ ಆರಂಭಕ್ಕೂ ಮುನ್ನವೇ ಪಾಕ್ ತಂಡಕ್ಕೆ ಐಸಿಸಿ ( ICC) ದೊಡ್ಡ ಶಾಕ್ ನೀಡಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ಓವರುಗಳನ್ನು ಮುಗಿಸದ ಕಾರಣ ಐಸಿಸಿ, ಪಾಕ್ ತಂಡದ ಡಬ್ಲ್ಯೂಟಿಸಿ ಅಂಕಗಳನ್ನು ಕಡಿತಗೊಳಿಸಿದೆ (WTC points penalty).

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಪಾಕಿಸ್ತಾನ ಎಂಟು ಓವರ್‌ಗಳನ್ನು ನಿಧಾನವಾಗಿ ಬೌಲ್ ಮಾಡಿದ್ದರಿಂದ ಎಂಟು ಡಬ್ಲ್ಯೂಟಿಸಿ ಅಂಕಗಳನ್ನು ಕಡಿತಗೊಳಿಸಿದೆ. ಇದರ ಜೊತೆಗೆ ಪಾಕಿಸ್ತಾನ ತಂಡದ ಪಂದ್ಯ ಶುಲ್ಕದ ಶೇಕಡಾ 40 ರಷ್ಟು ಮೊತ್ತವನ್ನು ಕಡಿತಗೊಳಿಸಲಾಗಿದೆ.

8 ಅಂಕಗಳನ್ನುಕಿತ್ತುಕೊಂಡ ಐಸಿಸಿ

ನಿಧಾನಗತಿಯ ಓವರ್ ರೇಟ್​ಗೆ ಸಂಬಂಧಿಸಿದಂತೆ ಐಸಿಸಿಯ ನಿಯಮಗಳು ತುಂಬಾ ಕಟ್ಟುನಿಟ್ಟಾಗಿವೆ. ಐಸಿಸಿ ನಿಯಮಗಳ ಪ್ರಕಾರ, ಪ್ರತಿ ತಂಡವು ಒಂದು ಗಂಟೆಯಲ್ಲಿ 15 ಓವರ್‌ಗಳನ್ನು ಬೌಲ್ ಮಾಡಬೇಕು. ಪಂದ್ಯ ಮುಗಿದ ನಂತರ ಇದನ್ನು ಲೆಕ್ಕಹಾಕಲಾಗುತ್ತದೆ. ತಪ್ಪಿದ ಪ್ರತಿ ಓವರ್‌ಗೆ ಒಂದು ಅಂಕವನ್ನು ಕಡಿತಗೊಳಿಸಲಾಗುತ್ತದೆ. 8 ಓವರ್‌ಗಳನ್ನು ನಿಧಾನವಾಗಿ ಬೌಲ್ ಮಾಡಿದ್ದಕ್ಕಾಗಿ ಪಾಕಿಸ್ತಾನಕ್ಕೆ 8 ಅಂಕಗಳನ್ನು ಕಳೆದುಕೊಳ್ಳಬೇಕಾಗಿದೆ. ಐಸಿಸಿಯ ಈ ಕ್ರಮದ ನಂತರ, ಪಾಕಿಸ್ತಾನದ ಡಬ್ಲ್ಯೂಟಿಸಿ ಪಾಯಿಂಟ್‌ಗಳು ಈಗ ಕೇವಲ 4 ಕ್ಕೆ ಇಳಿದಿದ್ದು, 7 ನೇ ಸ್ಥಾನದಲ್ಲಿದೆ.

ಬಾಂಗ್ಲಾ ವಿರುದ್ಧ ಹೀನಾಯ ಸೋಲು

ಮೊದಲ ಟೆಸ್ಟ್ ಪಂದ್ಯದ ಬಗ್ಗೆ ಹೇಳುವುದಾದರೆ.. ಆತಿಥೇಯ ಬಾಂಗ್ಲಾದೇಶ, ಪಾಕಿಸ್ತಾನವನ್ನು104 ರನ್‌ಗಳಿಂದ ಸೋಲಿಸಿತು. ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ನಲ್ಲಿ 413 ರನ್‌ ಕಲೆಹಾಕಿದರೆ, ಪಾಕಿಸ್ತಾನ 386 ರನ್‌ ಕಲೆಹಾಕಲಷ್ಟೇ ಶಕ್ತವಾಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶ 240 ರನ್‌ಗಳಿಗೆ ಡಿಕ್ಲೇರ್ ಮಾಡಿ ಪಾಕಿಸ್ತಾನಕ್ಕೆ 268 ರನ್‌ಗಳ ಗುರಿಯನ್ನು ನೀಡಿತು. ಇದಕ್ಕೆ ಉತ್ತರವಾಗಿ ಪಾಕಿಸ್ತಾನ ಕೇವಲ 163 ರನ್‌ಗಳಿಗೆ ಆಲೌಟ್ ಆಯಿತು.

ICC Awards: ಐಸಿಸಿ ಪ್ರಶಸ್ತಿಗೆ ಬುಮ್ರಾ, ಸ್ಯಾಮ್ಸನ್ ನಡುವೆ ಪೈಪೋಟಿ

ಈ ಪಂದ್ಯದಲ್ಲಿ, ಬಾಂಗ್ಲಾದೇಶದ ನಾಯಕ ನಜ್ಮುಲ್ ಹೊಸೈನ್ ಶಾಂಟೋ ಮತ್ತು ವೇಗಿ ನಹಿದ್ ರಾಣಾ ಉತ್ತಮ ಪ್ರದರ್ಶನ ನೀಡಿದರು ಶಾಂಟೋ ಮೊದಲ ಇನ್ನಿಂಗ್ಸ್‌ನಲ್ಲಿ 101 ರನ್‌ಗಳು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 87 ರನ್‌ಗಳ ಇನ್ನಿಂಗ್ಸ್ ಆಡಿದರೆ, ನಹಿದ್ ರಾಣಾ ಐದು ವಿಕೆಟ್‌ಗಳನ್ನು ಪಡೆದರು. ಸರಣಿಯ ಕೊನೆಯ ಟೆಸ್ಟ್ ಪಂದ್ಯವು ಈಗ ಮೇ 16 ರಂದು ಸಿಲ್ಹೆಟ್‌ನಲ್ಲಿ ನಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿತರಕ-ಪ್ರದರ್ಶಕ-ನಿರ್ಮಾಪಕರ ಸಭೆ ಯಶಸ್ವಿ, ‘ಪೆದ್ದಿ’ಗೆ ಸಮಸ್ಯೆಯಿಲ್ಲ – Kannada News | Telugu Movie Industry: Difference between Exhibitors and Producers resolved

ತೆಲುಗು ಚಿತ್ರರಂಗದ (Tollywood) ಭಾರತದ ಅತ್ಯಂತ ಯಶಸ್ವಿ ಚಿತ್ರರಂಗ. ಅತಿ ಹೆಚ್ಚು ಸಿನಿಮಾಗಳನ್ನು ಗೆಲ್ಲುತ್ತಿರುವುದು ಲಾಭ ಮಾಡುತ್ತಿರುವುದು ಅದೇ ಚಿತ್ರರಂಗದಲ್ಲಿ. ಹಣದ ಹರಿವು ಹೆಚ್ಚಾದಂತೆ ಚಿತ್ರರಂಗದಲ್ಲಿ ಭಿನ್ನಾಭಿಪ್ರಾಯಗಳು ಮೂಡಿದ್ದು, ಕಳೆದ ಒಂದೆರಡು ವಾರಗಳಿಂದ, ನಿರ್ಮಾಪಕರು, ವಿತರಕರು ಪರಸ್ಪರ ಬಹಿರಂಗವಾಗಿ ಟೀಕೆ, ನಿಂದನೆಗಳನ್ನು ಮಾಡುತ್ತಿದ್ದರು. ಆದರೆ ತೆಲುಗು ಸಿನಿಮಾ ಚೇಂಬರ್​​ ಮಧ್ಯಸ್ಥಿಕೆಯಲ್ಲಿ ಇಂದು ಅತ್ಯಂತ ಮಹತ್ವದ ಸಭೆ ನಡೆದಿದ್ದು, ಸಭೆಯಲ್ಲಿ ಸಹ ಬಹಳ ಕಾವೇರಿದ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಕೊನೆಗೂ ಎಲ್ಲವೂ ಶಾಂತವಾಗಿ ಮುಗಿದಿದೆ ಎನ್ನಲಾಗಿದೆ.

ವಿತರಕರು ಮತ್ತು ಸಿನಿಮಾ ಪ್ರದರ್ಶಕರು ತಮಗೂ ಲಾಭ ಹಂಚಿಕೆ ವಿಧಾನದಲ್ಲಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಮಲ್ಟಿಪ್ಲೆಕ್ಸ್​​ಗಳು ಹೇಗೆ ಸಿನಿಮಾದ ಗಳಿಕೆಯಲ್ಲಿ ಪರ್ಸೆಂಟೇಜು ಲಾಭ ಪಡೆಯುತ್ತವೆಯೋ ಹಾಗೆಯೇ ತಮಗೂ ಪರ್ಸೆಂಟೇಜು ಮಾದರಿಯಲ್ಲಿ ಹಣ ಬೇಕು ಎಂದು ಒತ್ತಾಯಿಸಿದ್ದರು. ಆದರೆ ಸಿನಿಮಾ ನಿರ್ಮಾಪಕರುಗಳು ಇದಕ್ಕೆ ಒಪ್ಪಿರಲಿಲ್ಲ. ಇದೇ ಕಾರಣಕ್ಕೆ ತೆಲುಗು ಚಿತ್ರರಂಗದಲ್ಲಿ ಎರಡು ಮೂರು ಬಣಗಳೇ ಆಗಿಬಿಟ್ಟಿದ್ದವು. ನಿರ್ಮಾಪಕ ನಾಗವಂಶಿ ಹಾಗೂ ಇನ್ನಿತರರು ಕೆಲ ವಿತರಕರು, ಸಿನಿಮಾ ಪ್ರದರ್ಶಕರ ಮೇಲೆ ಏಕವಚನದ ವಾಗ್ದಾಳಿ ಸಹ ನಡೆಸಿದ್ದರು. ವಿಶೇಷವಾಗಿ ಖ್ಯಾತ ನಿರ್ಮಾಪಕ, ಹಲವಾರು ಸಿನಿಮಾ ಮಂದಿರಗಳ ಮಾಲೀಕ ಆಗಿರುವ ಏಷಿಯನ್ ಸುನಿಲ್ ವಿರುದ್ಧ ಹಲವು ನಿರ್ಮಾಪಕರುಗಳು ಗರಂ ಆಗಿದ್ದರು.

ಇದನ್ನೂ ಓದಿ:ಪವನ್ ಕಲ್ಯಾಣ್ ಸಿನಿಮಾಗೆ ಕಂಬ್ಯಾಕ್ ತಡವಾಗುತ್ತಿರುವುದಕ್ಕೆ ರಾಜಕೀಯವಲ್ಲ ಕಾರಣ

ಆದರೆ ಇಂದು ಚೇಂಬರ್ ಅಧ್ಯಕ್ಷ ಖ್ಯಾತ ನಿರ್ಮಾಪಕ ಸುರೇಶ್ ಬಾಬು ನೇತೃತ್ವದಲ್ಲಿ ಸಭೆ ನಡೆದಿದ್ದು, ಸಭೆಯಲ್ಲೂ ಸಹ ನಾಗವಂಶಿ ಸೇರಿದಂತೆ ಕೆಲವಾರು ನಿರ್ಮಾಪಕರು ಏಷಿಯನ್ ಸುನಿಲ್ ಮತ್ತು ಅವರ ಆಪ್ತರೊಡನೆ ಏರಿದ ಧನಿಯಲ್ಲಿ ಜಗಳ ಮಾಡಿದ್ದಾರೆ. ಆದರೆ ಸುರೇಶ್ ಹಾಗೂ ತೆಲಂಗಾಣ ಸಿನಿಮಾ ಸಮಿತಿ ಅಧ್ಯಕ್ಷ ದಿಲ್ ರಾಜು ಅವರ ಮಧ್ಯಸ್ಥಿಕೆಯಿಂದ ಸಂಧಾನ ಯಶಸ್ವಿ ಆಗಿದ್ದು, ನಿರ್ಮಾಪಕರುಗಳು ಲಾಭಾಂಶ ಹಂಚಿಕೆಗೆ ಒಪ್ಪಿಗೆ ನೀಡಿದ್ದಾರೆ.

ಸಭೆಯ ಬಳಿಕ ಫಿಲಂ ಚೇಂಬರ್ ಅಧ್ಯಕ್ಷ ಸುರೇಶ್ ಬಾಬು ಹೇಳಿದಂತೆ, ‘ನಿರ್ಮಾಪಕರುಗಳು ಲಾಭಾಂಶ ಹಂಚಿಕೆಗೆ ಒಪ್ಪಿಕೊಂಡಿದ್ದು, ಕೆಲವೇ ದಿನಗಳಲ್ಲಿ ಈ ಕುರಿತು ಸಮಿತಿಯೊಂದನ್ನು ರಚಿಸಲಾಗುತ್ತದೆ. ಮತ್ತು ಆ ಸಮಿತಿಯು ವಿವಿಧ ಸೆಂಟರ್​​ಗಳ ಲಾಭಾಂಶ ಹಂಚಿಕೆ ಪ್ರಮಾಣವನ್ನು ನಿರ್ಧರಿಸುತ್ತದೆ’ ಎಂದಿದ್ದಾರೆ. ‘ಪೆದ್ದಿ’ ಸಿನಿಮಾಕ್ಕೂ ಲಾಭಾಂಶ ಹಂಚಿಕೆ ಬೇಕೆಂದು ಪ್ರದರ್ಶಕರು, ವಿತರಕರು ಪಟ್ಟು ಹಿಡಿದಿದ್ದರು, ಆದರೆ ನಿರ್ಮಾಪಕರು ಕಡ್ಡಾಯವಾಗಿ ಇದಕ್ಕೆ ಒಪ್ಪದ ಕಾರಣ ‘ಪೆದ್ದಿ’ ಸಿನಿಮಾದ ಬಳಿಕ ಬಿಡುಗಡೆ ಆಗುವ ಸಿನಿಮಾಗಳಿಗೆ ಮಾತ್ರವೇ ಲಾಭಾಂಶ ಹಂಚಿಕೆ ಆಗಲಿದೆ. ಲಾಭಾಂಶ ಹಂಚಿಕೆ ಮಾದರಿಯಿಂದ ತಪ್ಪಿಸಿಕೊಳ್ಳಲೆಂದು ಕೆಲವು ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಬೇಗನೆ ಬಿಡುಗಡೆ ಮಾಡುವ ಸಾಧ್ಯತೆಯೂ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version