“ಮುಗಿಸುವುದಾಗಿ” ಬೆದರಿಕೆ: ರಾತ್ರೋರಾತ್ರಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಗಂಗೂಲಿ! – Kannada News | Sourav Ganguly Files Police Complaint Over Death Threats

ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಮತ್ತು ಅವರ ಪತ್ನಿ ಡೋನಾ ಗಂಗೂಲಿ ಅವರಿಗೆ ಅಪರಿಚಿತರಿಂದ ಜೀವ ಬೆದರಿಕೆ ಪತ್ರಗಳು ಬಂದಿವೆ. ಈ ಹಿನ್ನೆಲೆಯಲ್ಲಿ, ದಕ್ಷಿಣ ಕೋಲ್ಕತ್ತಾದ ಠಾಕೂರ್‌ಪುಕುರ್ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಲಾಗಿದೆ. ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ (CAB) ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಅವರ ಕಚೇರಿಗೆ ಇಂಗ್ಲಿಷ್ ಭಾಷೆಯಲ್ಲಿ ಪತ್ರಗಳು ಬಂದಿದ್ದು, ದಂಪತಿಯನ್ನು “ಮುಗಿಸುವುದಾಗಿ” ನೇರ ಎಚ್ಚರಿಕೆ ನೀಡಲಾಗಿದೆ.

ಕಳೆದ 6 ತಿಂಗಳಿನಿಂದ ಬರುತ್ತಿದ್ದ ಪತ್ರಗಳು:

ಗಂಗೂಲಿ ಅವರ ಖಾಸಗಿ ಕಾರ್ಯದರ್ಶಿ ತಾನಿಯಾ ಭಟ್ಟಾಚಾರ್ಯ ನೀಡಿರುವ ದೂರು ಹಾಗೂ ಕೌಟುಂಬಿಕ ಮೂಲಗಳ ಪ್ರಕಾರ, ಇಂತಹ ದ್ವೇಷಪೂರಿತ ಪತ್ರಗಳು ಕಳೆದ ನಾಲ್ಕರಿಂದ ಆರು ತಿಂಗಳಿನಿಂದ ನಿರಂತರವಾಗಿ ಬರುತ್ತಿದ್ದವು. ಆರಂಭದಲ್ಲಿ ಇವುಗಳನ್ನು ಅಭಿಮಾನಿಗಳ ಅತಿರೇಕ ಅಥವಾ ಸಾಮಾನ್ಯ ದ್ವೇಷದ ಸಂದೇಶಗಳು ಎಂದು ಪರಿಗಣಿಸಿ ನಿರ್ಲಕ್ಷಿಸಲಾಗಿತ್ತು.

ಆದರೆ, ಇತ್ತೀಚೆಗೆ ಬಂದ ಕೊನೆಯ ಎರಡು ಪತ್ರಗಳಲ್ಲಿ ಅತಿ ಉಗ್ರವಾದ ಭಾಷೆಯನ್ನು ಬಳಸಿ, “ಗಂಗೂಲಿ ದಂಪತಿ ಹಾಗೂ ಅವರ ಆಪ್ತರನ್ನು ಕೊಲ್ಲುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ” ಎಂದು ನೇರವಾಗಿ ಬರೆದಿದ್ದರಿಂದ ಕುಟುಂಬಸ್ಥರು ಆತಂಕಗೊಂಡು ಪೊಲೀಸರ ಮೊರೆ ಹೋಗಿದ್ದಾರೆ.

ಠಾಕೂರ್‌ಪುಕುರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್:

10 ಆಗಸ್ಟ್ 2026 ರಂದು ಸೌರವ್ ಗಂಗೂಲಿ ಅವರ ಕಚೇರಿಯಿಂದ ದಕ್ಷಿಣ ಕೋಲ್ಕತ್ತಾದ ಠಾಕೂರ್‌ಪುಕುರ್ ಪೊಲೀಸ್ ಠಾಣೆಯಲ್ಲಿ ಅಧಿಕೃತ ಲಿಖಿತ ದೂರನ್ನು ದಾಖಲಿಸಲಾಗಿದೆ. ಪ್ರಕರಣದ ಗಾಂಭೀರ್ಯತೆಯನ್ನು ಅರಿತು ಕೋಲ್ಕತ್ತಾ ಪೊಲೀಸರ ವಿಶೇಷ ಕಾರ್ಯಪಡೆ (STF) ಮತ್ತು ಪಶ್ಚಿಮ ಬಂಗಾಳ ಸರ್ಕಾರದ ಭದ್ರತಾ ವಿಭಾಗವು ತಕ್ಷಣವೇ ರಂಗಕ್ಕಿಳಿದಿವೆ.

ತನಿಖೆಯ ಪ್ರಮುಖ ಹಂತಗಳು:

ಪ್ರಾಥಮಿಕ ತನಿಖೆಯ ಪ್ರಕಾರ, ಈ ಪತ್ರಗಳನ್ನು ಕೊರಿಯರ್ ಸಂಸ್ಥೆಯೊಂದರ ಮೂಲಕ ಕಳುಹಿಸಲಾಗಿದೆ. ಪತ್ರದ ಮೇಲಿದ್ದ ವಿಳಾಸವು ಉತ್ತರ 24 ಪರಗಣ ಜಿಲ್ಲೆಯ ಬೆಲ್ಘಾರಿಯಾ ಮೂಲದ “ಅರುಣ್ ಕುಮಾರ್” ಎಂಬುವವರ ಹೆಸರನ್ನು ತೋರಿಸುತ್ತಿದೆ.

ಕೊರಿಯರ್ ಜಾಡನ್ನು ಹಿಡಿದು ಹೊರಟಿರುವ STF ತಂಡವು, ಗಂಗೂಲಿ ಅವರ ಬೆಹಾಲಾ ನಿವಾಸದಿಂದ ಸುಮಾರು 32 ಕಿಲೋಮೀಟರ್ ದೂರದಲ್ಲಿರುವ ಶಂಕಿತ ಸ್ಥಳವೊಂದನ್ನು ಗುರುತಿಸಿ ಅಲ್ಲಿ ದಾಳಿ ನಡೆಸಿದೆ.

ಪತ್ರದಲ್ಲಿದ್ದ ಮೊಬೈಲ್ ಸಂಖ್ಯೆಯೊಂದರ ಲೊಕೇಶನ್ ಹಾಗೂ ಸಿಮ್ ಕಾರ್ಡ್ ಚಲನವಲನಗಳನ್ನು ಸೈಬರ್ ಕ್ರೈಮ್ ವಿಭಾಗವು ತಾಂತ್ರಿಕವಾಗಿ ವಿಶ್ಲೇಷಿಸುತ್ತಿದೆ. ಇದು ನಿಜಕ್ಕೂ ಅರುಣ್ ಕುಮಾರ್ ಎಂಬುವವರೇ ಮಾಡಿರುವ ಕೃತ್ಯವೇ ಅಥವಾ ಯಾರಾದರೂ ಅವರ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಾರೆಯೇ ಎಂಬ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಏಕದಿನ ವಿಶ್ವಕಪ್​ಗೆ 10 ತಂಡಗಳು ಫೈನಲ್​: 4 ಸ್ಥಾನಕ್ಕಾಗಿ ಮುಂದಿನ ಪೈಪೋಟಿ!

ಭದ್ರತೆ ಹೆಚ್ಚಳ:

ಈ ಹೈ ಪ್ರೊಫೈಲ್ ಬೆದರಿಕೆ ಪ್ರಕರಣದ ಹಿನ್ನೆಲೆಯಲ್ಲಿ ಸೌರವ್ ಗಂಗೂಲಿ, ಅವರ ಪತ್ನಿ ಡೋನಾ ಮತ್ತು ಅವರ ನಿವಾಸಕ್ಕೆ ಕೋಲ್ಕತ್ತಾ ಪೊಲೀಸರು ಹೆಚ್ಚುವರಿ ಭದ್ರತೆಯನ್ನು ನಿಯೋಜಿಸಿದ್ದಾರೆ ಮತ್ತು ಭದ್ರತಾ ವ್ಯವಸ್ಥೆಯನ್ನು ಮರುಪರಿಶೀಲಿಸುತ್ತಿದ್ದಾರೆ. ಒಟ್ಟಾರೆಯಾಗಿ, ಈ ಆತಂಕಕಾರಿ ಘಟನೆಯು ದೇಶದಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದ್ದು, ಪೊಲೀಸರು ಶೀಘ್ರದಲ್ಲೇ ಆರೋಪಿಯನ್ನು ಪತ್ತೆಹಚ್ಚುವ ವಿಶ್ವಾಸದಲ್ಲಿದ್ದಾರೆ.

Source link

ಏಕದಿನ ವಿಶ್ವಕಪ್​ಗೆ 10 ತಂಡಗಳು ಫೈನಲ್​: 4 ಸ್ಥಾನಕ್ಕಾಗಿ ಮುಂದಿನ ಪೈಪೋಟಿ! – Kannada News | ODI World Cup 2027: 10 Teams Qualified, 4 Spots Up for Grabs!

ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆಯೋಜಿಸಲಿರುವ 2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್‌ಗೆ ಈಗಾಗಲೇ 10 ತಂಡಗಳು ಅಧಿಕೃತವಾಗಿ ಫೈನಲ್ ಆಗಿವೆ. ಈ ಹತ್ತು ತಂಡಗಳು ಐಸಿಸಿ ನಿಯಮಾವಳಿಗಳ ಅನ್ವಯ ನೇರ ಅರ್ಹತೆಯ ಮೂಲಕ ಟೂರ್ನಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ. ಆತಿಥೇಯ ರಾಷ್ಟ್ರಗಳ ಪೈಕಿ ಐಸಿಸಿ ಪೂರ್ಣ ಸದಸ್ಯತ್ವ ಹೊಂದಿರುವ ಸೌತ್ ಆಫ್ರಿಕಾ ಮತ್ತು ಝಿಂಬಾಬ್ವೆ ತಂಡಗಳು ಆಟೋಮ್ಯಾಟಿಕ್ ಆಗಿ ಅರ್ಹತೆ ಪಡೆದರೆ, ಉಳಿದ 8 ತಂಡಗಳು ಐಸಿಸಿ ಏಕದಿನ ಶ್ರೇಯಾಂಕದ (Rankings) ಆಧಾರದ ಮೇಲೆ ಆಯ್ಕೆಯಾಗಿವೆ.

10+4= 14 ತಂಡಗಳು:

ಮುಂಬರುವ 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಒಟ್ಟು 14 ತಂಡಗಳು ಭಾಗವಹಿಸಲಿವೆ. ಐಸಿಸಿ ನಿಯಮಾವಳಿಗಳ ಪ್ರಕಾರ ಈಗಾಗಲೇ 10 ತಂಡಗಳು ವಿಶ್ವಕಪ್‌ಗೆ ನೇರ ಅರ್ಹತೆ ಪಡೆದುಕೊಂಡಿವೆ. ಹೀಗಾಗಿ ಟೂರ್ನಿಯಲ್ಲಿ ಖಾಲಿ ಇರುವ ಇನ್ನುಳಿದ 4 ಸ್ಥಾನಗಳಿಗಾಗಿ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ.

ಅರ್ಹತಾ ಸುತ್ತಿನಲ್ಲಿ ವೆಸ್ಟ್ ಇಂಡೀಸ್!

ಉಳಿದಿರುವ 4 ಸ್ಥಾನಗಳಿಗಾಗಿ 2027ರ ಫೆಬ್ರವರಿ 22 ರಿಂದ ಮಾರ್ಚ್ 23 ರವರೆಗೆ ‘ಕ್ರಿಕೆಟ್ ವಿಶ್ವಕಪ್ ಕ್ವಾಲಿಫೈಯರ್’ ಟೂರ್ನಿ ನಡೆಯಲಿದೆ. ಶ್ರೇಯಾಂಕದಲ್ಲಿ ಹಿಂದೆ ಬಿದ್ದಿರುವ ಮಾಜಿ ಚಾಂಪಿಯನ್ ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್‌ನಂತಹ ಬಲಿಷ್ಠ ಪೂರ್ಣ ಪ್ರಮಾಣದ ಸದಸ್ಯ ರಾಷ್ಟ್ರಗಳು ಈ ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಬೇಕಾದ ಅನಿವಾರ್ಯತೆಗೆ ಸಿಲುಕಿವೆ. ಇವುಗಳೊಂದಿಗೆ ‘CWC ಲೀಗ್ 2’ ಮೂಲಕ ಈಗಾಗಲೇ ಅರ್ಹತೆ ಪಡೆದಿರುವ ಸ್ಕಾಟ್‌ಲ್ಯಾಂಡ್, ನೆದರ್ಲ್ಯಾಂಡ್ಸ್ ಮತ್ತು ಯುಎಸ್ಎ ತಂಡಗಳು ಕಠಿಣ ಪೈಪೋಟಿ ನೀಡಲಿವೆ.

ನೇರ ಅರ್ಹತೆ ಪಡೆದ 10 ತಂಡಗಳು:

  1. ಭಾರತ
  2. ಆಸ್ಟ್ರೇಲಿಯಾ
  3. ನ್ಯೂಝಿಲೆಂಡ್
  4. ಪಾಕಿಸ್ತಾನ್
  5. ಇಂಗ್ಲೆಂಡ್
  6. ಶ್ರೀಲಂಕಾ
  7. ಬಾಂಗ್ಲಾದೇಶ್
  8. ಅಫ್ಘಾನಿಸ್ತಾನ್
  9. ಸೌತ್ ಆಫ್ರಿಕಾ
  10. ಝಿಂಬಾಬ್ವೆ.

ಏಕದಿನ ವಿಶ್ವಕಪ್ ಯಾವಾಗ?

ಮುಂಬರುವ 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯು 2027ರ ಅಕ್ಟೋಬರ್ 4 ರಿಂದ ನವೆಂಬರ್ 21 ರವರೆಗೆ ನಡೆಯಲಿದೆ. ಐಸಿಸಿ  ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಈ ಟೂರ್ನಿಯ ಪ್ರಮುಖ ವಿವರಗಳು ಕೆಳಗಿನಂತಿವೆ:

  • ಆತಿಥೇಯ ರಾಷ್ಟ್ರಗಳು: ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾ.
  • ಪಂದ್ಯಗಳ ಸಂಖ್ಯೆ: 14 ತಂಡಗಳ ನಡುವೆ ಒಟ್ಟು 54 ಪಂದ್ಯಗಳು ಜರುಗಲಿವೆ.
  • ಕ್ರೀಡಾಂಗಣ: ಸೌತ್ ಆಫ್ರಿಕಾದ 8 ಕ್ರೀಡಾಂಗಣಗಳು ಸೇರಿದಂತೆ ಒಟ್ಟು 12 ನಗರಗಳಲ್ಲಿ ಪಂದ್ಯಗಳನ್ನು ನಡೆಸಲು ಐಸಿಸಿ ಮೈದಾನಗಳನ್ನು ಖಚಿತಪಡಿಸಿದೆ.

ಇದನ್ನೂ ಓದಿ: 11+3 ತಂಡಗಳು, ಸೂಪರ್-7: ಏಕದಿನ ವಿಶ್ವಕಪ್ ಸ್ವರೂಪ ಬದಲು

ಒಟ್ಟಾರೆಯಾಗಿ ಹೇಳುವುದಾದರೆ, 2027ರ ಏಕದಿನ ವಿಶ್ವಕಪ್ ಹೊಸ ಸ್ವರೂಪ, ಹೆಚ್ಚಿನ ತಂಡಗಳು ಮತ್ತು ಆಫ್ರಿಕಾ ಖಂಡದ ಆತಿಥ್ಯದೊಂದಿಗೆ ಕ್ರಿಕೆಟ್ ಇತಿಹಾಸದಲ್ಲೇ ಒಂದು ಮೈಲಿಗಲ್ಲಾಗಲು ಸಜ್ಜಾಗಿದೆ. ಈ ಮಹಾ ಸಮರಕ್ಕಾಗಿ ಈಗಾಗಲೇ 10 ಪ್ರಮುಖ ತಂಡಗಳು ನೇರ ಅರ್ಹತೆ ಪಡೆದು ಸಿದ್ಧವಾಗಿದ್ದು, ಅರ್ಹತಾ ಸುತ್ತಿನ ಮೂಲಕ ಲಗ್ಗೆಯಿಡಲಿರುವ ಇನ್ನುಳಿದ ನಾಲ್ಕು ತಂಡಗಳು ಯಾವುವು ಎಂಬುದನ್ನು ಕಾದು ನೋಡಬೇಕಿದೆ.

Source link

ವಿಧಾನಸಭೆ ಅಧಿವೇಶನಕ್ಕೆ ಇನ್ನೆರಡೇ ದಿನ ಬಾಕಿ: ಇಂದಾದರೂ ಹೊರಬೀಳುತ್ತಾ ಖಾತೆ ಹಂಚಿಕೆ ಪಟ್ಟಿ? – Kannada News | Karnataka Cabinet Portfolio Allocation Delay: DK Shivakumar Hints at Decision Before Assembly Session

ಸಚಿವರ ಪ್ರಮಾಣವಚನ ಸಂದರ್ಭದ ಚಿತ್ರ (ಸಾಂದರ್ಭಿಕ ಚಿತ್ರ)Image Credit source: tv9

ಬೆಂಗಳೂರು, ಆಗಸ್ಟ್ 11: ಕರ್ನಾಟಕ ಕಾಂಗ್ರೆಸ್ (Congress) ಸರ್ಕಾರದಲ್ಲಿ ಸಂಪುಟ ವಿಸ್ತರಣೆ ಮುಗಿದಿದ್ದರೂ ಸಚಿವರಿಗೆ ಖಾತೆ ಹಂಚಿಕೆ ಮಾತ್ರ ಇನ್ನೂ ಅಂತಿಮವಾಗಿಲ್ಲ. ವಿಧಾನಮಂಡಲ ಅಧಿವೇಶನ ಆರಂಭಕ್ಕೆ ಇನ್ನೆರಡು ದಿನ ಬಾಕಿ ಇರುವ ಹಿನ್ನೆಲೆಯಲ್ಲಿ, ಅಧಿವೇಶನದೊಳಗೆ ಖಾತೆ ಹಂಚಿಕೆ ಪೂರ್ಣಗೊಳಿಸುವುದಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನೀಡಿರುವ ಸುಳಿವು ಕುತೂಹಲ ಮೂಡಿಸಿದೆ. ಹೀಗಾಗಿ ಇಂದಾದರೂ ಖಾತೆ ಹಂಚಿಕೆ ಪಟ್ಟಿ ಹೊರಬೀಳುತ್ತಾ ಎಂಬ ಚರ್ಚೆ ಜೋರಾಗಿದೆ.

ಇತ್ತೀಚೆಗೆ ದೆಹಲಿಯಲ್ಲಿ ಹೈಕಮಾಂಡ್ ನಾಯಕರೊಂದಿಗೆ ಡಿ.ಕೆ. ಶಿವಕುಮಾರ್ ನಡೆಸಿದ ಸರಣಿ ಮಾತುಕತೆ ಬಳಿಕ ಖಾತೆ ಹಂಚಿಕೆ ಪಟ್ಟಿ ಬಹುತೇಕ ಅಂತಿಮಗೊಂಡಿದೆ ಎನ್ನಲಾಗುತ್ತಿದೆ. ಆದರೆ ಕೇವಲ ಖಾತೆಗಳನ್ನು ಹಂಚಿಕೆ ಮಾಡಲಾಗುತ್ತದೆಯೇ ಅಥವಾ ಕೆಲವು ಸಚಿವರ ಖಾತೆಗಳನ್ನು ಅದಲುಬದಲು ಮಾಡಲಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಇದರ ನಡುವೆ ಸಚಿವ ಸ್ಥಾನ ವಂಚಿತ ಹಿರಿಯ ಶಾಸಕರ ಅಸಮಾಧಾನವೂ ಮುಂದುವರಿದಿದೆ. ಹೀಗಾಗಿ ಕೆಲ ಸಚಿವರ ಬದಲಾವಣೆ, ಹೊಸಬರಿಗೆ ಅವಕಾಶ ಹಾಗೂ ಹೆಚ್ಚುವರಿ ಡಿಸಿಎಂ ಹುದ್ದೆಗಳ ಸೃಷ್ಟಿ ಸೇರಿದಂತೆ ಹಲವು ವಿಚಾರಗಳು ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಿವೆ ಎನ್ನಲಾಗುತ್ತಿದೆ.

ಸಂಪುಟ ಸಭೆ ಗುರುವಾರಕ್ಕೆ ಮುಂದೂಡಿಕೆ

ಶುಕ್ರವಾರದಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ನಾಳೆ (ಆಗಸ್ಟ್ 12) ನಡೆಯಬೇಕಿದ್ದ ಸಚಿವ ಸಂಪುಟ ಸಭೆಯನ್ನು ಗುರುವಾರಕ್ಕೆ ಮುಂದೂಡಲಾಗಿದೆ. ಖಾತೆ ಹಂಚಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಬಳಿಕವೇ ಪೂರ್ಣ ಪ್ರಮಾಣದ ಸಂಪುಟ ಸಭೆ ನಡೆಸಲು ಸರ್ಕಾರ ಮುಂದಾಗಿದೆ ಎಂಬ ಚರ್ಚೆ ಇದರಿಂದ ಮತ್ತಷ್ಟು ಬಲವಾಗಿದೆ.

ಅಧಿವೇಶನದೊಳಗೆ ಸಚಿವರಿಗೆ ಖಾತೆ ಹಂಚಿಕೆ ಪೂರ್ಣಗೊಳ್ಳಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈಗಾಗಲೇ ಹೇಳಿದ್ದಾರೆ. ಹೀಗಾಗಿ ಮುಂದಿನ 24-48 ಗಂಟೆಗಳಲ್ಲಿ ಸರ್ಕಾರದೊಳಗಿನ ಖಾತೆ ಹಂಚಿಕೆ ಕಸರತ್ತು ಅಂತಿಮ ಹಂತ ತಲುಪುವ ಸಾಧ್ಯತೆಯಿದೆ.

ಮುನಿಯಪ್ಪ, ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಚರ್ಚೆ

ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಹಾಗೂ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಹಂಚಿಕೆಯಾಗಿರುವ ಖಾತೆಗಳ ಬಗ್ಗೆ ಅಸಮಾಧಾನವಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಹೀಗಾಗಿ ಈ ಇಬ್ಬರು ಸಚಿವರ ಖಾತೆಗಳು ಅದಲುಬದಲಾಗುವ ಸಾಧ್ಯತೆಯ ಬಗ್ಗೆಯೂ ಮಾತುಗಳು ಕೇಳಿಬರುತ್ತಿವೆ.

ಇದರ ಜತೆಗೆ ಕೆ.ಎಚ್. ಮುನಿಯಪ್ಪ ಅವರ ಬದಲಿಗೆ ಅವರ ಪುತ್ರಿ ರೂಪಾ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆಯ ಕುರಿತೂ ಚರ್ಚೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ನಿರ್ಧಾರ ಹೊರಬಿದ್ದಿಲ್ಲ.

ಖಾತೆ ಹಂಚಿಕೆ ವಿಳಂಬಕ್ಕೆ ವಿಪಕ್ಷಗಳ ಟೀಕೆ

ಖಾತೆ ಹಂಚಿಕೆ ವಿಳಂಬವಾಗುತ್ತಿರುವುದನ್ನು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಟೀಕಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೈಕಮಾಂಡ್ ಮೇಲೆ ಅವಲಂಬಿತರಾಗಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಇದೇ ವಿಚಾರವಾಗಿ ಜೆಡಿಎಸ್ ಶಾಸಕ ಎಂ.ಟಿ. ಕೃಷ್ಣಪ್ಪ ಕೂಡ ಡಿ.ಕೆ. ಶಿವಕುಮಾರ್ ವಿರುದ್ಧ ವ್ಯಂಗ್ಯವಾಡಿದ್ದಾರೆ. ಒಂದು ಖಾತೆ ಹಂಚಿಕೆ ಮಾಡುವ ಅಧಿಕಾರವೂ ಇಲ್ಲದಿದ್ದರೆ ಮುಖ್ಯಮಂತ್ರಿ ಹುದ್ದೆ ಯಾರಿಗೆ ಬೇಕು ಎಂದು ಅವರು ಟೀಕಿಸಿದ್ದಾರೆ.

ಸಚಿವರಿಗೆ ಸ್ವಾಗತ, ಸಚಿವ ಸ್ಥಾನ ವಂಚಿತರಿಗೆ ಪ್ರತಿಭಟನೆ

ಹೊಸದಾಗಿ ಸಚಿವರಾದವರನ್ನು ಅವರ ಬೆಂಬಲಿಗರು ಅದ್ಧೂರಿಯಾಗಿ ಸ್ವಾಗತಿಸುತ್ತಿರುವ ಬೆನ್ನಲ್ಲೇ, ಸಚಿವ ಸ್ಥಾನ ಸಿಗದ ಶಾಸಕರ ಬೆಂಬಲಿಗರ ಅಸಮಾಧಾನವೂ ಮುಂದುವರಿದಿದೆ. ಅರಸೀಕೆರೆಯಲ್ಲಿ ಸಚಿವ ಶಿವಲಿಂಗೇಗೌಡ ಅವರಿಗೆ ಅಭಿಮಾನಿಗಳು ಭವ್ಯ ಸ್ವಾಗತ ನೀಡಿದರೆ, ಮೈಸೂರಿನಲ್ಲಿ ತನ್ವೀರ್ ಸೇಠ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ: ಖಾತೆ ಹಂಚಿಕೆ ಕಗ್ಗಂಟು: ದೆಹಲಿಯಲ್ಲಿ ತಡರಾತ್ರಿ ಖರ್ಗೆ ಭೇಟಿಯಾದ ಡಿಕೆಶಿ, ಇಂದು ಸಂಜೆಯೇ ಪಟ್ಟಿ ಫೈನಲ್ ಸಾಧ್ಯತೆ

ಹೀಗಾಗಿ ಸಂಪುಟ ವಿಸ್ತರಣೆ ಮುಗಿದರೂ ಖಾತೆ ಹಂಚಿಕೆ ಮಾತ್ರ ಕಾಂಗ್ರೆಸ್ ಸರ್ಕಾರಕ್ಕೆ ಮತ್ತೊಂದು ಸವಾಲಾಗಿ ಪರಿಣಮಿಸಿದೆ. ಅಧಿವೇಶನ ಆರಂಭಕ್ಕೂ ಮುನ್ನ ಈ ಕಗ್ಗಂಟು ಬಗೆಹರಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿನಿಮಾ ಆಪ್ತರಿಗೆ ಸಾಲು ಸಾಲು ಸರ್ಕಾರಿ ಹುದ್ದೆ; ಸಿಎಂ ವಿಜಯ್ ನಿರ್ಧಾರಕ್ಕೆ ಭಾರಿ ಚರ್ಚೆ – Kannada News | Archana Kalpathi Temple Panel Appointment Sparks Debate in Tamil Nadu  

ತಮಿಳುನಾಡು ಸರ್ಕಾರವು ದೇವಾಲಯಗಳ ಧರ್ಮದರ್ಶಿಗಳ ಆಯ್ಕೆ ಸಮಿತಿಗೆ ಸಿನಿಮಾ ನಿರ್ಮಾಪಕಿ ಅರ್ಚನಾ ಕಲ್ಪತಿ ಅವರನ್ನು ನೇಮಕ ಮಾಡಿದೆ. ಈ ನಿರ್ಧಾರವು ಈಗ ತಮಿಳುನಾಡಿನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಈ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ಮತ್ತು ಬೆಂಬಲ ಎರಡೂ ವ್ಯಕ್ತವಾಗುತ್ತಿವೆ. ಚಿತ್ರರಂಗದ ಜನರಿಗೆ ಸಾಲು ಸಾಲು ಸರ್ಕಾರಿ ಹುದ್ದೆ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಧರ್ಮದರ್ಶಿ ಸಮಿತಿಗೆ ಅರ್ಚನಾ ನೇಮಕ

ಎಜಿಎಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯ ನಿರ್ಮಾಪಕಿ ಅರ್ಚನಾ ಕಲ್ಪತಿ ಅವರನ್ನು ಎಚ್‌ಆರ್ & ಸಿಇ ಇಲಾಖೆಗೆ ನೇಮಿಸಲಾಗಿದೆ. ಹತ್ತು ಲಕ್ಷಕ್ಕಿಂತ ಹೆಚ್ಚು ಆದಾಯವಿರುವ ದೇವಾಲಯಗಳಿಗೆ ಧರ್ಮದರ್ಶಿಗಳನ್ನು ಆಯ್ಕೆ ಮಾಡುವುದು ಈ ಸಮಿತಿಯ ಕೆಲಸವಾಗಿದೆ. ಈ ಸಮಿತಿಯ ಅವಧಿ ಎರಡು ವರ್ಷಗಳ ಕಾಲ ಇರಲಿದೆ. ಸಮಿತಿಯಲ್ಲಿ ಹಿರಿಯ ನ್ಯಾಯಾಧೀಶರು ಮತ್ತು ನಿವೃತ್ತ ಐಎಎಸ್ ಅಧಿಕಾರಿಗಳು ಕೂಡ ಸದಸ್ಯರಾಗಿದ್ದಾರೆ.

ನೆಟ್ಟಿಗರ ವಾಗ್ದಾಳಿ ಮತ್ತು ವಿರೋಧ

ಈ ನೇಮಕಾತಿಯನ್ನು ಅನೇಕ ಜನರು ತೀವ್ರವಾಗಿ ಪ್ರಶ್ನಿಸಿದ್ದಾರೆ. ದೇವಾಲಯದ ಕೆಲಸಗಳಿಗೆ ಅರ್ಚನಾ ಅವರಿಗೆ ಇರುವ ಅರ್ಹತೆ ಏನು ಎಂದು ನೆಟ್ಟಿಗರು ಕೇಳುತ್ತಿದ್ದಾರೆ. ತಮಿಳುನಾಡು ಸರ್ಕಾರವು ಕಾಲಿವುಡ್‌ನ ಮನರಂಜನಾ ಕ್ಲಬ್‌ನಂತೆ ಬದಲಾಗಿದೆ ಎಂದು ಸಾರ್ವಜನಿಕರು ವ್ಯಂಗ್ಯವಾಡಿದ್ದಾರೆ. ನಟ ಹಾಗೂ ಸಿಎಂ ವಿಜಯ್ ಅವರ ಅಭಿಮಾನಿಗಳು ಇದನ್ನು ಕುರುಡಾಗಿ ಬೆಂಬಲಿಸುತ್ತಿದ್ದಾರೆ ಎಂದು ಹಲವರು ಟೀಕಿಸಿದ್ದಾರೆ.

ಇದನ್ನೂ ಓದಿ: ದುನಿಯಾ ವಿಜಯ್ ಸಿನಿಮಾದಲ್ಲಿ ಖಡಕ್ ಪಾತ್ರದ ಮೂಲಕ ಎಂಟ್ರಿ ಕೊಟ್ಟ ಟಬು

ಅಭಿಮಾನಿಗಳ ಬೆಂಬಲ ಮತ್ತು ಇತರೆ ನೇಮಕಗಳು

ವಿಜಯ್ ಅಭಿಮಾನಿಗಳು ಅರ್ಚನಾ ಅವರ ನೇಮಕವನ್ನು ಸಮರ್ಥಿಸಿಕೊಂಡಿದ್ದಾರೆ. ಅರ್ಚನಾ ಅವರು ಎರಡು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು ಯಶಸ್ವಿ ಉದ್ಯಮಿಯಾಗಿದ್ದಾರೆ. ಸರ್ಕಾರಕ್ಕೆ ತಮಗೆ ನಂಬಿಕೆ ಇರುವವರನ್ನು ನೇಮಿಸಿಕೊಳ್ಳುವ ಅಧಿಕಾರವಿದೆ ಎಂದು ವಾದಿಸಿದ್ದಾರೆ. ಈ ಹಿಂದೆ ಕೂಡ ವಿಜಯ್ ಅವರ ಮ್ಯಾನೇಜರ್ ಜಗದೀಶ್, ಛಾಯಾಗ್ರಾಹಕ ಮನೋಜ್ ಪರಮಹಂಸ ಮತ್ತು ನಿರ್ಮಾಪಕ ವೆಂಕಟ ನಾರಾಯಣ ಅವರಿಗೆ ಸರ್ಕಾರಿ ಹುದ್ದೆಗಳನ್ನು ನೀಡಲಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತೀವ್ರ ಅಲರ್ಜಿಯಿಂದ ಕಂಗಾಲಾದ ಶ್ರುತಿ ಹಾಸನ್; ಪ್ರೀತಿಪಾತ್ರವಾಗಿದ್ದನ್ನು ಬಿಟ್ಟ ನಟಿ – Kannada News | Shruti Haasan Forced to Rehome Adopted Cat Aslan Due to Severe Allergies

ನಟಿ ಶ್ರುತಿ ಹಾಸನ್ ತಮ್ಮ ಬದುಕಿನ ಅತ್ಯಂತ ನೋವಿನ ನಿರ್ಧಾರ ಒಂದನ್ನು ತೆಗೆದುಕೊಂಡಿದ್ದಾರೆ. ತಾವು ದತ್ತು ಪಡೆದಿದ್ದ ಆಸ್ಲನ್ ಎಂಬ ಬೆಕ್ಕಿನ ಮರಿಯನ್ನು ದೂರ ಮಾಡುವ ಪರಿಸ್ಥಿತಿ ಅವರಿಗೆ ಬಂದೊದಗಿದೆ. ತೀವ್ರ ಅಲರ್ಜಿ ಸಮಸ್ಯೆಯಿಂದಾಗಿ ಅವರು ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ. ಪ್ರಾಣಿ ಪ್ರಿಯೆಯಾಗಿರುವ ಶ್ರುತಿಯ ಈ ನಿರ್ಧಾರ ಅವರ ಮನಸ್ಸಿಗೆ ಭಾರಿ ಆಘಾತ ಹಾಗೂ ಬೇಸರ ತಂದಿದೆ. ಈ ಬಗ್ಗೆ ಬರೆದುಕೊಂಡಿದ್ದಾರೆ.

ಶ್ರುತಿ ಹಾಸನ್ ಮೂರು ತಿಂಗಳ ಹಿಂದೆ ಆಸ್ಲನ್ ಎಂಬ ಪರ್ಷಿಯನ್ ತಳಿಯ ಬೆಕ್ಕಿನ ಮರಿಯನ್ನು ದತ್ತು ಪಡೆದಿದ್ದರು. ಮನೆಯಲ್ಲಿ ಈಗಾಗಲೇ ಕ್ಲಾರಾ ಎಂಬ ಬೆಕ್ಕಿತ್ತು. ಆಸ್ಲನ್ ಬಂದ ಎರಡೇ ದಿನಗಳಲ್ಲಿ ಶ್ರುತಿಗೆ ತೀವ್ರ ಮುಖದ ಮೇಲೆ ದದ್ದುಗಳು ಮತ್ತು ಬೊಕ್ಕೆಗಳು ಕಾಣಿಸಿಕೊಂಡವು. ಪರೀಕ್ಷಿಸಿದ ಚರ್ಮರೋಗ ವೈದ್ಯರು ಬೆಕ್ಕಿನ ರೋಮ ಮತ್ತು ಜೊಲ್ಲಿನಿಂದ ಅಲರ್ಜಿ ಆಗುತ್ತಿದೆ ಎಂದು ತಿಳಿಸಿದರು. ಇದು ಶ್ರುತಿಗೆ ದೊಡ್ಡ ಆಘಾತ ನೀಡಿತು.

ಬೆಕ್ಕನ್ನು ಬಿಟ್ಟುಕೊಡಲು ಶ್ರುತಿಗೆ ಮನಸ್ಸಿರಲಿಲ್ಲ. ಅವರು ಏರ್ ಪ್ಯೂರಿಫೈಯರ್ ಅಳವಡಿಸಿದರು. ಬೆಕ್ಕಿನ ರೋಮವನ್ನು ಟ್ರಿಮ್ ಮಾಡಿಸಿದರು. ನಿರಂತರವಾಗಿ ಔಷಧಿಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು. ಆದರೆ ಯಾವುದೇ ಪ್ರಯತ್ನ ಫಲ ನೀಡಲಿಲ್ಲ. ಪ್ರಯಾಣ ಮುಗಿಸಿ ಮನೆಗೆ ಬಂದಾಗಲೆಲ್ಲಾ ಅಲರ್ಜಿ ಹೆಚ್ಚಾಗುತ್ತಿತ್ತು. ಬೆಕ್ಕನ್ನು ಮುಟ್ಟಿದರೆ ಕೈ ತೊಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದು ಅವರ ಕೆಲಸ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿತು.

So….

I put up a story  recently saying I needed some quiet time to make a tough decision and that I would proceed to explain what I meant when I could process it better .

I’m not feeling better about it but I thought I’ll explain what’s going on because sooner or later people are going to notice something that has truly broken my heart .

This is a long explanation but please be patient .

Three months ago I had the privilege of adopting a beautiful little Persian kitten called Aslan. I’ve been a cat person my whole adult life and I believe giving an animal a home is one of the greatest feelings you’ll ever feel knowing that hopefully their lives will be filled with love and comfort . Aslan came home adorable playful and truly one of the sweetest little kitties I’ve ever met . I was so happy to introduce him to all of you . There was a little friction  getting him and Clara to get along but that too subsided over time .

Two days after Aslan came home I broke out into a rash all over my face , straight up boils . I thought it’s because I over ate Mangoes and my skin was reacting .

I spoke to my dermatologist and we tried to figure out what was going on . It was the most disappointing pit in my stomach kind of dread when I realised it could be Aslan and his spit and fur that’s causing the reaction .

I tried trimming his hair , air purifiers, wiping him  down and changing his food . Nothing worked .

And no allergy medication was working to subside my boils either .

Finally I was on some really strong medication to reduce the allergy .

I genuinely thought over time we could figure this out together, me and Aslan . This also meant I couldn’t have him on my clothes and had to wash my hands every time I pet him . I would travel come back home and break out into those allergy boils every single time .

It started affecting my work and my skin and most of all my state of mind . Trying to manage my allergy and love him in the way he deserves with cuddles and affection  .

After trying incessantly I realised when I returned from Chennai to Mumbai and broke out into allergies all over again and this time even worse that I had to make one of the hardest decisions of my life .

I had to call aslans foster mum who had him before me and put him Back up for adoption 💔

Aslan no longer lives with me and and his foster mum and I along with the support  of my friends are working to re home him in a beautiful warm loving home through all the people we know that truly love and care for kitties .

It’s been so heartbreaking I cannot even begin to describe the guilt and the pain I’m feeling not even being able to explain to an innocent soul who loves me and my home why he has to leave . Saying goodbye to him was painful in a way I cannot even begin to describe .

Let this not be a story about failed adoption , I feel I failed with my allergies but providing a home to a beautiful little animal is one of the greatest things you can do.

Please send Aslan all your love .

And for those who thought I was unwell or something else this is what it  was . The fear of explaining  to you’ll what happened and the guilt I felt really had me caught in the tightest bind ever . There might be some of you who think why all this melodrama for a kitten , that only means you’ve never shared the true love of an animal who depends on you and loves you . For those of you who love your furry friends you know what this means . Saying goodbye to people is not even slightly close to what it means to say goodbye to an animal who cannot converse with you .

Thankyou for you love always and your patience on this long explanation

– Shruti haasan

Read on Substack

ಕೊನೆಗೆ ಶ್ರುತಿ ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಆಸ್ಲನ್‌ನನ್ನು ಅದರ ಹಳೆಯ ಮಾಲೀಕರಿಗೆ ಹಿಂತಿರುಗಿಸಿದರು. ‘ನನ್ನ ಅಲರ್ಜಿಯಿಂದಾಗಿ ನಾನು ಸೋತುಹೋದೆ. ಪ್ರಾಣಿಗಳಿಗೆ ಪರಿಸ್ಥಿತಿಯನ್ನು ವಿವರಿಸಿ ವಿದಾಯ ಹೇಳಲು ಸಾಧ್ಯವಿಲ್ಲ. ಇದು ಅತ್ಯಂತ ಹೃದಯವಿದ್ರಾವಕ ಸಂಗತಿ’ ಎಂದು ಶ್ರುತಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಈಗ ಆಸ್ಲನ್‌ಗೆ ಹೊಸ ಪ್ರೀತಿಯ ಮನೆ ಹುಡುಕುವ ಕೆಲಸ ನಡೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಜೀವನ ಆಧರಿಸಿ ಸಿನಿಮಾ ಘೋಷಿಸಿದ ಆರ್​ಜಿವಿ – Kannada News | Ram Gopal Varma Announces Police Company Starring Harshvardhan Rane

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (RGV) ಮತ್ತೆ ಮುಂಬೈ ಅಂಡರ್‌ವರ್ಲ್ಡ್ ಕಥೆಯನ್ನು ತೆರೆಗೆ ತರಲು ಸಿದ್ಧರಾಗಿದ್ದಾರೆ. ‘ಡಿ ಕಂಪನಿ’ಗಿಂತಲೂ ಅತ್ಯಂತ ಅಪಾಯಕಾರಿಯಾದ ಪಡೆಯೊಂದರ ಕಥೆಯನ್ನು ಅವರು ಹೇಳಲಿದ್ದಾರೆ. ತಮ್ಮ ಹೊಸ ಸಿನಿಮಾಗೆ ‘ಪೋಲಿಸ್ ಕಂಪನಿ’ ಎಂದು ಹೆಸರಿಟ್ಟಿದ್ದಾರೆ. ಪ್ರಸಿದ್ಧ ನಟ ಹರ್ಷವರ್ಧನ್ ರಾಣೆ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಆರ್​​ಜಿವಿ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದ್ದಾರೆ.

ಅಂಡರ್‌ವರ್ಲ್ಡ್ ಮತ್ತು ಪೋಲಿಸ್ ಕಂಪನಿ

ಸಿನಿಮಾ ಶೀರ್ಷಿಕೆಯ ಹಿನ್ನೆಲೆಯನ್ನು ವರ್ಮಾ ಸ್ಪಷ್ಟವಾಗಿ ವಿವರಿಸಿದ್ದಾರೆ. ‘ಪೋಲಿಸ್ ಎನ್ನುವುದು ಒಂದು ಜವಾಬ್ದಾರಿಯುತ ಸರ್ಕಾರಿ ಸಂಸ್ಥೆಯಾಗಿದೆ. ಅಂಡರ್‌ವರ್ಲ್ಡ್ ಕಂಪನಿಯು ಹಣ ಸಂಪಾದಿಸುವ ಅಕ್ರಮ ಜಾಲವಾಗಿದೆ. ಆದರೆ ಸಂಸ್ಥೆಗೆ ಹೆಚ್ಚಿನ ಅಧಿಕಾರ ಸಿಕ್ಕಾಗ ಅದು ಕಂಪನಿಯಾಗುತ್ತದೆ. ದಾವೂದ್ ಇಬ್ರಾಹಿಂ ತನ್ನ ವಿರೋಧಿಗಳನ್ನು ಮಟ್ಟಹಾಕಿ ದುಬೈಗೆ ಓಡಿಹೋಗಿದ್ದ. ನಂತರ ಛೋಟಾ ರಾಜನ್ ಜೊತೆ ಆತನಿಗೆ ಭಿನ್ನಾಭಿಪ್ರಾಯ ಮೂಡಿತು’ ಎಂದು ಬರೆದುಕೊಂಡಿದ್ದಾರೆ ಆರ್​​ಜಿವಿ.

300 ಗ್ಯಾಂಗ್‌ಸ್ಟರ್‌ಗಳ ಎನ್‌ಕೌಂಟರ್

‘ದಾವೂದ್ ಮತ್ತು ರಾಜನ್ ನಡುವಿನ ವೈರತ್ವದಿಂದ ಮುಂಬೈನಲ್ಲಿ ಅಪರಾಧ ಹೆಚ್ಚಾಯಿತು. ಅಪರಾಧ ಜಗತ್ತಿನ ಕತ್ತಲಿಗೆ ಅನೇಕ ಯುವಕರು ಬಲಿಯಾಗುತ್ತಿದ್ದರು. ರೌಡಿಗಳನ್ನು ತಡೆಯಲು ಪೋಲಿಸ್ ವ್ಯವಸ್ಥೆ ಸಂಪೂರ್ಣವಾಗಿ ಸೋತಿತ್ತು. ಆ ಸಮಯದಲ್ಲಿ ಸರ್ಕಾರ ಒಂದು ವಿಶೇಷ ಪೋಲಿಸ್ ಪಡೆಯನ್ನು ರಚಿಸಿತು. ಈ ಪಡೆ 1997 ರಿಂದ 2004 ರ ನಡುವೆ ಕಾರ್ಯಾಚರಣೆ ನಡೆಸಿತು. ಕೇವಲ ಏಳು ವರ್ಷಗಳಲ್ಲಿ 300 ಕ್ಕೂ ಹೆಚ್ಚು ಗ್ಯಾಂಗ್‌ಸ್ಟರ್‌ಗಳನ್ನು ಹೊಡೆದುರುಳಿಸಿತು’ ಎಂದಿದ್ದಾರೆ ಆರ್​ಜಿವಿ.

ಇದನ್ನೂ ಓದಿ: ರಾಮ್ ಗೋಪಾಲ್ ವರ್ಮಾ ಜೊತೆ ಗುಟ್ಟಾಗಿ ಮದುವೆ ಆಗಿದ್ದರು ಬಾಲಿವುಡ್ ಸ್ಟಾರ್ ನಟಿ

ದಯಾ ನಾಯಕ್ ಪಾತ್ರದಲ್ಲಿ ಹರ್ಷವರ್ಧನ್

ಈ ಎನ್‌ಕೌಂಟರ್ ಪಡೆಯ ರೋಮಾಂಚಕ ಕಥೆಯೇ ‘ಪೋಲಿಸ್ ಕಂಪನಿ’. ಖ್ಯಾತ ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಅವರ ರಿಯಲ್ ಜೀವನದ ಪಾತ್ರದಿಂದ ಈ ಕಥೆ ಪ್ರೇರಿತವಾಗಿದೆ. ದಯಾ ನಾಯಕ್ ಪಾತ್ರದಲ್ಲಿ ನಟ ಹರ್ಷವರ್ಧನ್ ರಾಣೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ದೊಡ್ಡ ತಾರಾಗಣ ಇರಲಿದೆ. ‘ಪೋಲಿಸ್ ಸ್ಟೇಷನ್ ಮೇಂ ಭೂತ್’ ಚಿತ್ರದಲ್ಲೂ ಹರ್ಷವರ್ಧನ್ ಕೆಲಸ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Namma Metro: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಂಪರ್ ಗಿಫ್ಟ್: ಪಿಂಕ್ ಹಾಗೂ ಬ್ಲೂ ಲೈನ್‌ನ ಸಿಬಿಟಿಸಿ ವ್ಯವಸ್ಥೆಗೆ ರೈಲ್ವೆ ಮಂಡಳಿ ಗ್ರೀನ್ ಸಿಗ್ನಲ್! – Kannada News | Namma Metro Good News: Railway Board Approves CBTC Signaling for Bengaluru Pink and Blue Lines

ಬೆಂಗಳೂರು, ಆಗಸ್ಟ್ 11: ಬೆಂಗಳೂರಿನ ಸಂಚಾರ ದಟ್ಟಣೆಗೆ ಬಹುದೊಡ್ಡ ಬ್ರೇಕ್ ಹಾಕಲಿರುವ ‘ನಮ್ಮ ಮೆಟ್ರೋ’ದ (Namma Metr0) ಪಿಂಕ್ ಮತ್ತು ಬ್ಲೂ ಲೈನ್ ಮಾರ್ಗಗಳಿಗೆ ಸಂಬಂಧಿಸಿದಂತೆ ಕೇಂದ್ರ ರೈಲ್ವೆ ಮಂಡಳಿಯಿಂದ ಅತ್ಯಂತ ಪ್ರಮುಖ ಹಾಗೂ ಮಹತ್ವದ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಇನ್ಮುಂದೆ ಈ ಮಾರ್ಗಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಮೆಟ್ರೋ ರೈಲುಗಳು ಸಂಚರಿಸಲಿದ್ದು, ಇದಕ್ಕೆ ಬೇಕಾದ ರೈಲು ನಿಯಂತ್ರಣ ವ್ಯವಸ್ಥೆಗೆ ಹಸಿರು ನಿಶಾನೆ ಸಿಕ್ಕಿದೆ. ಮೆಟ್ರೋದ ಪಿಂಕ್ ಹಾಗೂ ಬ್ಲೂ ಲೈನ್ ಮಾರ್ಗಗಳ ಕಮ್ಯುನಿಕೇಷನ್‌ ಬೇಸ್ಡ್‌ ಟ್ರೈನ್‌ ಕಂಟ್ರೋಲ್‌ (CBTC) ಸಿಗ್ನಲಿಂಗ್‌ ಮತ್ತು ರೈಲು ನಿಯಂತ್ರಣ ವ್ಯವಸ್ಥೆಗೆ ರೈಲ್ವೆ ಮಂಡಳಿಯು ತಾತ್ವಿಕ ಅನುಮೋದನೆ ನೀಡಿದೆ.

ಯಾವ ಯಾವ ಮಾರ್ಗಗಳಿಗೆ ಈ ಹೊಸ ಅನುಮೋದನೆ ಅನ್ವಯ?

  • ಗುಲಾಬಿ ಮಾರ್ಗ: ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಲು ಇದು ಪ್ರಮುಖ ಮೈಲಿಗಲ್ಲಾಗಿದೆ.
  • ನೀಲಿ ಮಾರ್ಗ: ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು (KIA) ಸಂಪರ್ಕಿಸುವ ಇಡೀ ಮಾರ್ಗಕ್ಕೆ ಈ ತಾಂತ್ರಿಕ ಅನುಮೋದನೆ ಅನ್ವಯಿಸುತ್ತದೆ.

ವಿಶೇಷವೆಂದರೆ, ಬ್ಲೂ ಲೈನ್‌ನಲ್ಲಿ ರೈಲು ಸಂಚಾರ ಅಧಿಕೃತವಾಗಿ ಆರಂಭವಾಗುವುದಕ್ಕೂ ಮುನ್ನವೇ ಈ ತಾಂತ್ರಿಕ ಒಪ್ಪಿಗೆ ಸಿಕ್ಕಿರುವುದರಿಂದ, ಮುಂದಿನ ದಿನಗಳಲ್ಲಿ ಅಗತ್ಯ ಪರೀಕ್ಷೆಗಳು ಹಾಗೂ ಸುರಕ್ಷತಾ ಪ್ರಮಾಣೀಕರಣ ಪ್ರಕ್ರಿಯೆಗಳನ್ನು ಯಾವುದೇ ವಿಳಂಬವಿಲ್ಲದೆ ಸಕಾಲದಲ್ಲಿ ಕೈಗೊಳ್ಳಲು ಬಿಎಂಆರ್‌ಸಿಎಲ್‌ಗೆ ಹಾದಿ ಸುಗಮವಾದಂತಾಗಿದೆ.

ವಾಣಿಜ್ಯ ಸಂಚಾರಕ್ಕೆ ಭರದಿಂದ ಸಾಗುತ್ತಿದೆ ಅಂತಿಮ ಸಿದ್ಧತೆ

ಸದ್ಯ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಪಿಂಕ್ ಲೈನ್ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭಿಸಲು ಕೊನೆಯ ಹಂತದ ಪ್ರಕ್ರಿಯೆಗಳು ಬಾಕಿ ಇವೆ. ಈ ಹೊಸ ಅನುಮೋದನೆಯ ಬೆನ್ನಲ್ಲೇ ಬಿಎಂಆರ್‌ಸಿಎಲ್ ಮುಂದಿನ ಹಂತದ ಕಾರ್ಯಗಳಿಗೆ ಸಜ್ಜಾಗಿದೆ.

ಆರ್‌ಡಿಎಸ್‌ಒ (RDSO) ಸಂಸ್ಥೆಯಿಂದ ಮಧ್ಯಂತರ ವೇಗ ಪ್ರಮಾಣೀಕರಣ ಪಡೆಯುವುದು, ರೈಲ್ವೆ ಸುರಕ್ಷತಾ ಮುಖ್ಯ ಆಯುಕ್ತಾಲಯದ (CCRS) ಮೂಲಕ ರೈಲುಗಳ ಸೂಕ್ಷ್ಮ ಪರಿಶೀಲನೆ ನಡೆಸುವುದು ಹಾಗೂ ಪ್ರಾಯೋಗಿಕ ಸಂಚಾರ (Trial Runs) ನಡೆಸಿ ಅಂತಿಮವಾಗಿ ಪ್ರಯಾಣಿಕರ ಸೇವೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್ ತಯಾರಿ ನಡೆಸುತ್ತಿದೆ.

ಯಾವಾಗ ಓಪನ್ ಆಗಲಿವೆ ಈ ಮಾರ್ಗಗಳು?

ಬೆಂಗಳೂರಿಗರು ಕಾತರದಿಂದ ಕಾಯುತ್ತಿರುವ ಈ ಎರಡು ಮೆಟ್ರೋ ಮಾರ್ಗಗಳಿಗೆ ಕೇಂದ್ರ ಸರ್ಕಾರ ಒಂದೊಂದೇ ಅಧಿಕೃತ ಒಪ್ಪಿಗೆಗಳನ್ನು ನೀಡುತ್ತಾ ಬರುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಬರುವ ಮುಂದಿನ ತಿಂಗಳಿನಲ್ಲಿಯೇ ಪಿಂಕ್ ಲೈನ್ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದ್ದು, ಮುಂದಿನ ವರ್ಷದ ವೇಳೆಗೆ ಏರ್‌ಪೋರ್ಟ್‌ ಸಂಪರ್ಕಿಸುವ ಬ್ಲೂ ಲೈನ್ ಓಪನ್ ಆಗಬಹುದು ಎಂದು ಅಂದಾಜಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

CSKಗೆ ಹೊಸ ವಿದೇಶಿ ಹೆಡ್ ಕೋಚ್: ರೇಸ್​​ನಲ್ಲಿ ನಾಲ್ವರು! – Kannada News | CSK Hunt for New Overseas Coach Ahead of IPL 2027

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ (CSK) ಮುಂಬರುವ ಐಪಿಎಲ್​ಗೂ ಮುನ್ನ ಮಹತ್ವದ ಬದಲಾವಣೆಗೆ ಸಜ್ಜಾಗಿದೆ. ಬರೋಬ್ಬರಿ 18 ವರ್ಷಗಳ ಕಾಲ ಸಿಎಸ್‌ಕೆ ತಂಡಕ್ಕೆ ಮುಖ್ಯ ತರಬೇತುದಾರರಾಗಿ ಮಾರ್ಗದರ್ಶನ ನೀಡಿ, ದಾಖಲೆಯ 5 ಐಪಿಎಲ್ ಟ್ರೋಫಿಗಳನ್ನು ತಂದುಕೊಟ್ಟಿದ್ದ ದಿಗ್ಗಜ ಹೆಡ್ ಕೋಚ್ ಸ್ಟೀಫನ್ ಫ್ಲೆಮಿಂಗ್ ಇತ್ತೀಚೆಗಷ್ಟೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸದ್ಯ ಅವರು ಇಂಗ್ಲೆಂಡ್ ಪುರುಷರ ಟೆಸ್ಟ್ ತಂಡದ ಮುಖ್ಯ ತರಬೇತುದಾರರಾಗಿ ಹೊಸ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಇದೀಗ ಫ್ಲೆಮಿಂಗ್ ನಿರ್ಗಮನದಿಂದ ತೆರವಾಗಿರುವ ಸ್ಥಾನವನ್ನು ತುಂಬಲು ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಭರ್ಜರಿ ತಯಾರಿ ನಡೆಸುತ್ತಿದ್ದು, ಅವರ ಜಾಗಕ್ಕೆ ಮತ್ತೊಬ್ಬ ಅನುಭವಿ ವಿದೇಶಿ ತಜ್ಞರನ್ನು ಹೆಡ್ ಕೋಚ್ ಆಗಿ ನೇಮಿಸಲು ಗಂಭೀರ ಚಿಂತನೆ ನಡೆಸಿದೆ. ಮುಂದಿನ ಮಿನಿ ಹರಾಜಿಗೂ ಮುನ್ನವೇ ಸಿಎಸ್‌ಕೆ ಹೊಸ ಕೋಚ್ ಹೆಸರನ್ನು ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆಯಿದೆ.

ಹೊಸ ಕೋಚ್‌ಗೆ ಸಂಪೂರ್ಣ ಸ್ವಾತಂತ್ರ್ಯ:

ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಮತ್ತು ರೂಪಾ ಗುರುನಾಥ್ ಅವರು ಹೊಸ ಕೋಚ್ ಹುಡುಕಾಟದಲ್ಲಿದ್ದಾರೆ. ಈ ಮಹತ್ವದ ನಿರ್ಧಾರದಲ್ಲಿ ಮಾಜಿ ನಾಯಕ ಎಂ.ಎಸ್. ಧೋನಿ ಹಾಗೂ ಪ್ರಸ್ತುತ ನಾಯಕ ರುತುರಾಜ್ ಗಾಯಕ್ವಾಡ್ ಅವರ ಸಲಹೆಗಳನ್ನು ಪಡೆಯಲಾಗುತ್ತಿದೆ. ವಿಶೇಷವೆಂದರೆ, ಬರುವ ಹೊಸ ಮುಖ್ಯ ಕೋಚ್‌ಗೆ ತನ್ನದೇ ಆದ ಸಹಾಯಕ ಸಿಬ್ಬಂದಿಯನ್ನು ಆಯ್ಕೆ ಮಾಡಿಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯವನ್ನು ಫ್ರಾಂಚೈಸಿ ನೀಡಲು ಮುಂದಾಗಿದೆ.

ರೇಸ್‌ನಲ್ಲಿರುವ ಪ್ರಮುಖ ವಿದೇಶಿ ದಿಗ್ಗಜರು:

ಬ್ರೆಂಡನ್ ಮೆಕಲಮ್: ಇಂಗ್ಲೆಂಡ್‌ನ ಸೀಮಿತ ಓವರ್‌ಗಳ ಕೋಚ್ ಆಗಿರುವ ಮಾಜಿ ಸಿಎಸ್‌ಕೆ ಆಟಗಾರ ಬ್ರೆಂಡನ್ ಮೆಕಲಮ್ ಸದ್ಯ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಇವರ ‘ಬಾಝ್​​ಬಾಲ್’ ತಂತ್ರ ತಂಡಕ್ಕೆ ಹೊಸ ಆಕ್ರಮಣಕಾರಿ ಶಕ್ತಿ ನೀಡಬಹುದು.

ಮೈಕೆಲ್ ಹಸ್ಸಿ: 2018 ರಿಂದ ಸಿಎಸ್‌ಕೆ ಬ್ಯಾಟಿಂಗ್ ಕೋಚ್ ಆಗಿರುವ ಹಸ್ಸಿಗೆ ತಂಡದ ಸಂಸ್ಕೃತಿ ಮತ್ತು ಆಟಗಾರರ ಸಾಮರ್ಥ್ಯದ ಬಗ್ಗೆ ಸಂಪೂರ್ಣ ಅರಿವಿದೆ.

ಅಲ್ಬಿ ಮಾರ್ಕೆಲ್: ಸಿಎಸ್‌ಕೆ ಮಾಜಿ ಆಲ್‌ರೌಂಡರ್ ಹಾಗೂ ಸದ್ಯ ಎಸ್‌ಎ20 ಲೀಗ್‌ನಲ್ಲಿ ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ ತಂಡದ ಕೋಚ್ ಆಗಿ ಯಶಸ್ವಿಯಾಗಿದ್ದಾರೆ.

ಮೈಕ್ ಹೆಸನ್: ಆರ್‌ಸಿಬಿ ಮತ್ತು ನ್ಯೂಝಿಲೆಂಡ್ ತಂಡಗಳ ಮಾಜಿ ಕೋಚ್ ಆಗಿರುವ ಇವರು ಅನುಭವದ ಆಧಾರದ ಮೇಲೆ ರೇಸ್‌ನಲ್ಲಿದ್ದಾರೆ.

ಧೋನಿ-ಫ್ಲೆಮಿಂಗ್ ಯುಗಾಂತ್ಯ:

ಸ್ಟೀಫನ್ ಫ್ಲೆಮಿಂಗ್ ಮತ್ತು ಎಂಎಸ್ ಧೋನಿ ಅವರ ಜುಗಲ್‌ಬಂದಿ ಐಪಿಎಲ್ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆಯುವಂತಹ ಯಶಸ್ಸು ತಂದುಕೊಟ್ಟಿದೆ. ಇದೀಗ ಫ್ಲೆಮಿಂಗ್ ನಿರ್ಗಮನದೊಂದಿಗೆ ಸಿಎಸ್‌ಕೆ ಪಾಳಯದಲ್ಲಿ ಒಂದು ಸುದೀರ್ಘ ಮತ್ತು ಯಶಸ್ವಿ ಅಧ್ಯಾಯ ಅಂತ್ಯಗೊಂಡಂತಾಗಿದೆ.

ಇದನ್ನೂ ಓದಿ: ಟೀಮ್ ಇಂಡಿಯಾ ಆಟಗಾರರು ಗಾಯಗೊಳ್ಳಲು IPL ಕಾರಣ!

ಮುಂಬರುವ ಐಪಿಎಲ್ 2027ರ ಮಿನಿ ಹರಾಜಿಗೂ ಮುನ್ನ ಹೊಸ ವಿದೇಶಿ ತರಬೇತುದಾರರ ಎಂಟ್ರಿಯಾಗಲಿದ್ದು, ಇದು ‘ಯೆಲ್ಲೋ ಆರ್ಮಿ’ಗೆ ಸಂಪೂರ್ಣ ಹೊಸ ರೂಪ ನೀಡುವ ಸಾಧ್ಯತೆಯಿದೆ. ಹೊಸ ಕೋಚ್ ತನ್ನದೇ ಆದ ತಂತ್ರಗಾರಿಕೆ ಮತ್ತು ಬೆಂಬಲ ಸಿಬ್ಬಂದಿಯೊಂದಿಗೆ ಚೆನ್ನೈ ಫ್ರಾಂಚೈಸಿಯನ್ನು ಮುನ್ನಡೆಸಲಿದ್ದಾರೆ. ರುತುರಾಜ್ ಗಾಯಕ್ವಾಡ್ ನಾಯಕತ್ವ ಹಾಗೂ ಹೊಸ ತರಬೇತುದಾರರ ಈ ಹೊಸ ಕಾಂಬಿನೇಷನ್ ಸಿಎಸ್‌ಕೆಗೆ ಮತ್ತಷ್ಟು ಐತಿಹಾಸಿಕ ಗೆಲುವುಗಳನ್ನು ತಂದುಕೊಡಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

Source link

3 ದಿನಗಳಲ್ಲಿ ಬೆಂಗಳೂರಿನ 60 ಸ್ಟಾರ್ ಹೋಟೆಲ್‌ಗಳ ಮೇಲೆ ದಾಳಿ: 1 ವರ್ಷಕ್ಕೂ ಹಳೆಯ ಮಾಂಸ ಪತ್ತೆ! – Kannada News | Bengaluru Star Hotel Raids: 60 Hotels Inspected in 3 Days, Over One Year Old Meat Found

ಬೆಂಗಳೂರಿನ ಸ್ಟಾರ್ ಹೋಟೆಲ್​ಗಳ ಮೇಲೆ ದಾಳಿ ಸಂದರ್ಭದ ಚಿತ್ರImage Credit source: tv9

ಬೆಂಗಳೂರು, ಆಗಸ್ಟ್ 10: ಬೆಂಗಳೂರಿನ (Bengaluru) ಸ್ಟಾರ್ ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ ಮುಂದುವರಿದಿದ್ದು, ಮೂರು ದಿನಗಳಲ್ಲಿ ಬರೋಬ್ಬರಿ 60 ಸ್ಟಾರ್ ಹೋಟೆಲ್‌ಗಳ ಮೇಲೆ ದಾಳಿ ನಡೆಸಲಾಗಿದೆ. ತಪಾಸಣೆ ವೇಳೆ ಕೊಳೆತ ಮಾಂಸ, ಅವಧಿ ಮೀರಿದ ಆಹಾರ ಪದಾರ್ಥಗಳು, ಕೊಳೆತ ತರಕಾರಿಗಳು, ಬಳಸಿದ ಅಡುಗೆ ಎಣ್ಣೆ ಸೇರಿದಂತೆ ಹಲವು ಆಹಾರ ಸುರಕ್ಷತಾ ನಿಯಮ ಉಲ್ಲಂಘನೆಗಳು ಪತ್ತೆಯಾಗಿವೆ. ಅಚ್ಚರಿ ಎಂದರೆ, ಒಂದು ವರ್ಷಕ್ಕೂ ಹೆಚ್ಚು ಅವಧಿ ಮೀರಿರುವ ಮಾಂಸಾಹಾರ ಉತ್ಪನ್ನಗಳೂ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

77 ಆಹಾರ ಮಾದರಿ ಸಂಗ್ರಹ

ದಾಳಿ ವೇಳೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಒಟ್ಟು 77 ಆಹಾರ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ತಪಾಸಣೆಯಲ್ಲಿ 640 ಕೆ.ಜಿ. ಚಿಕನ್, ಮಟನ್ ಮತ್ತು ಮೀನು, 276 ಕೆ.ಜಿ. ಕೊಳೆತ ತರಕಾರಿ, 45 ಲೀಟರ್ ಅವಧಿ ಮೀರಿದ ಹಾಲು ಮತ್ತು ಮೊಸರು, 12 ಕೆ.ಜಿ. ಬೇಕರಿ ಉತ್ಪನ್ನಗಳು ಹಾಗೂ 67 ಕೆ.ಜಿ. ಅವಧಿ ಮೀರಿದ ಮತ್ತು ತಪ್ಪು ಲೇಬಲಿಂಗ್ ಹೊಂದಿದ್ದ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ.

ಇದರ ಜೊತೆಗೆ 49 ಲೀಟರ್ ಬಳಸಿದ ಹಾಗೂ ನಿಯಮಬಾಹಿರ ಅಡುಗೆ ಎಣ್ಣೆ ಕೂಡ ವಶಕ್ಕೆ ಪಡೆಯಲಾಗಿದೆ. ಎಕ್ಸ್‌ಪೈರಿ ದಿನಾಂಕವಿಲ್ಲದ ಮತ್ತು ಒಂದು ವರ್ಷಕ್ಕೂ ಹೆಚ್ಚು ಅವಧಿ ಮೀರಿರುವ ಮಾಂಸಾಹಾರ ಉತ್ಪನ್ನಗಳು ಪತ್ತೆಯಾಗಿರುವುದು ಅಧಿಕಾರಿಗಳಿಗೂ ಆಘಾತ ಮೂಡಿಸಿದೆ. ಅವಧಿ ಮೀರಿದ ಆಹಾರವನ್ನು ಮತ್ತೆ ಪ್ಯಾಕ್ ಮಾಡಿ ಬಳಸಲು ಸಿದ್ಧಪಡಿಸಿರುವುದು ಕೂಡ ತಪಾಸಣೆ ವೇಳೆ ಬೆಳಕಿಗೆ ಬಂದಿದೆ.

ಹೋಟೆಲ್‌ಗಳಲ್ಲಿ ಏನೆಲ್ಲ ಪತ್ತೆ?

ಯುಬಿ ಸಿಟಿ, ಎಂಜಿ ರೋಡ್, ಬ್ರಿಗೇಡ್ ರೋಡ್ ಸೇರಿದಂತೆ ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿರುವ ಹೋಟೆಲ್‌ಗಳು ಹಾಗೂ ರೆಸ್ಟೋರೆಂಟ್‌ಗಳ ಅಡುಗೆಮನೆ ಮತ್ತು ಆಹಾರ ಸಂಗ್ರಹಣಾ ಸ್ಥಳಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ಅಲ್ಲಿ ಪತ್ತೆಯಾಗಿರುವ ಕಳಪೆ ಆಹಾರವಸ್ತುಗಳ ವಿವರ ಇಲ್ಲಿದೆ;

ಹೋಟೆಲ್ ಸ್ಕೈ, ಯುಬಿ ಸಿಟಿ

  • 45 ಕೆ.ಜಿ. ಕೊಳೆತ ಕೋಳಿ ಮತ್ತು ಬೀಫ್
  • 6 ಕೆ.ಜಿ. ವೆಜಿಟೇಬಲ್ ಕಟ್ಲೆಟ್
  • 15 ಲೀಟರ್ ಬಳಸಿದ ಅಡುಗೆ ಎಣ್ಣೆ.

ರಾಯಲ್ ಚೈನ್ ಹೋಟೆಲ್

  • 50 ಕೆ.ಜಿ. ಡಕ್ ಮಾಂಸ ವಶ
  • 5 ಕೆ.ಜಿ. ಮೀನು ವಶಕ್ಕೆ

ಮದ್ರಾಸ್ ಕಿಚನ್

  • 5 ಕೆ.ಜಿ. ಹಸಿ ಬಟಾಣಿ ಜಪ್ತಿ

ಟೆಸ್ಕಾನ್ ಹೋಟೆಲ್

  • 5 ಕೆ.ಜಿ. ಕಳಪೆ ಮಶ್ರೂಮ್ ಪತ್ತೆ, ಆಹಾರ ಸುರಕ್ಷತೆ ಕುರಿತು ಪರಿಶೀಲನೆ

ಸೆಂಚೆಜ್ ಹೋಟೆಲ್

  • 3 ಕೆ.ಜಿ. ಮೀನು
  • 7 ಕೆ.ಜಿ. ಕೇಕ್
  • ಆಲೂಗಡ್ಡೆ ಸೇರಿದಂತೆ ಇತರೆ ಆಹಾರ ಪದಾರ್ಥಗಳ ಜಪ್ತಿ

ಚೀಸ್‌ನಲ್ಲಿ ಸತ್ತ ಜಿರಳೆ, ಮಶ್ರೂಮ್‌ಗೆ ಫಂಗಸ್!

ತಪಾಸಣೆ ವೇಳೆ ಕೆಲವು ಹೋಟೆಲ್‌ಗಳಲ್ಲಿ ಆಹಾರ ಪದಾರ್ಥಗಳ ಸ್ಥಿತಿ ಅಧಿಕಾರಿಗಳಿಗೆ ಅಚ್ಚರಿ ಮೂಡಿಸಿದೆ. ಚೀಸ್ ಪ್ಯಾಕೆಟ್‌ನಲ್ಲಿ ಸತ್ತ ಜಿರಳೆ, ಮಶ್ರೂಮ್‌ನಲ್ಲಿ ಫಂಗಸ್ ಹಾಗೂ ಬೇಬಿ ಕಾರ್ನ್‌ನಲ್ಲಿ ಕೀಟಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫ್ರೀಜರ್‌ಗಳಲ್ಲಿ ಸೂಕ್ತ ರೀತಿಯಲ್ಲಿ ಸಂಗ್ರಹಿಸದ ಮಾಂಸಾಹಾರ ಪದಾರ್ಥಗಳೂ ಪತ್ತೆಯಾಗಿವೆ.

ಯುಬಿ ಸಿಟಿಯಲ್ಲಿರುವ ಹೋಟೆಲ್ ಸ್ಕೈನಲ್ಲಿ ದೊಡ್ಡ ಪ್ರಮಾಣದ ಮಾಂಸ ಮತ್ತು ಇತರೆ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಅಡುಗೆಮನೆಗೆ ಬೀಗ ಹಾಕಿ ಸೀಲ್ ಮಾಡಲಾಗಿದೆ.

ಮ್ಯಾಕ್‌ಡೊನಾಲ್ಡ್ಸ್ ಸೇರಿ ಇತರೆ ಸಂಸ್ಥೆಗಳಲ್ಲೂ ತಪಾಸಣೆ

ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ ಸ್ಟಾರ್ ಹೋಟೆಲ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ. KFC, ಮ್ಯಾಕ್‌ಡೊನಾಲ್ಡ್ಸ್ ಮತ್ತು ಸಬ್‌ವೇ ಸೇರಿದಂತೆ ಹಲವು ಆಹಾರ ಮಳಿಗೆಗಳಲ್ಲೂ ತಪಾಸಣೆ ಮುಂದುವರಿದಿದೆ. ಆಹಾರ ಸಂಗ್ರಹಿಸುವ ಗೋದಾಮುಗಳಲ್ಲೂ ನಿಯಮಗಳ ಪಾಲನೆ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.

ಮ್ಯಾಕ್‌ಡೊನಾಲ್ಡ್ಸ್‌ನಲ್ಲಿ ಅಡುಗೆ ಎಣ್ಣೆ ಶುದ್ಧೀಕರಿಸಲು ಮೆಗ್ನೀಸಿಯಂ ಸಲ್ಫೈಟ್ ಬಳಕೆ

ಬ್ರಿಗೇಡ್ ರಸ್ತೆಯಲ್ಲಿರುವ ಮ್ಯಾಕ್‌ಡೊನಾಲ್ಡ್ಸ್‌ನಲ್ಲಿ ಬಳಸಿದ ಅಡುಗೆ ಎಣ್ಣೆಯನ್ನು ಶುದ್ಧೀಕರಿಸಲು ಮೆಗ್ನೀಸಿಯಂ ಸಲ್ಫೈಟ್ ಬಳಸಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಆಹಾರ ಸುರಕ್ಷತಾ ನಿಯಮಗಳ ದೃಷ್ಟಿಯಿಂದ ಗಂಭೀರ ವಿಚಾರವಾಗಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಯುಬಿ ಸಿಟಿ ಫೈವ್ ಸ್ಟಾರ್ ಹೋಟೆಲ್‌ಗಳ ಮೇಲೆ ದಾಳಿ: 45 ಕೆಜಿ ಕೊಳೆತ ಮಾಂಸ, 15 ಲೀ. ಕರಿದ ಅಡುಗೆ ಎಣ್ಣೆ ಪತ್ತೆ

ಸದ್ಯ ಜಪ್ತಿ ಮಾಡಿರುವ ಆಹಾರ ಪದಾರ್ಥಗಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಲ್ಯಾಬ್ ವರದಿ ಬಂದ ಬಳಿಕ ನಿಯಮ ಉಲ್ಲಂಘಿಸಿರುವ ಹೋಟೆಲ್‌ಗಳು ಮತ್ತು ಆಹಾರ ಸಂಸ್ಥೆಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಾಯಗೊಂಡರೂ ಶೂಟಿಂಗ್‌ಗೆ ಮರಳಲು ರಶ್ಮಿಕಾ ಮಂದಣ್ಣ ಉತ್ಸುಕ: ‘ರಣಬಾಲಿ’ ಚಿತ್ರತಂಡಕ್ಕೆ ಆಸರೆ – Kannada News | Rashmika Mandanna Ready to Resume Ranabaali Shoot After Injury

ಚಿತ್ರೀಕರಣದ ವೇಳೆ ಗಂಭೀರವಾಗಿ ಗಾಯಗೊಂಡಿದ್ದರೂ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ತಮ್ಮ ವೃತ್ತಿಪರತೆಗೆ ಸಾಟಿಯಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ತೀವ್ರ ಗಾಯದ ನಡುವೆಯೂ ತಮ್ಮ ಬಹುನಿರೀಕ್ಷಿತ ‘ರಣಬಾಲಿ’ ಸಿನಿಮಾದ ಶೂಟಿಂಗ್ ಸೆಟ್‌ಗೆ ಬೇಗನೇ ಮರಳಿ, ಬಾಕಿ ಇರುವ ದೃಶ್ಯಗಳ ಚಿತ್ರೀಕರಣವನ್ನು ಪೂರ್ಣಗೊಳಿಸಲು ಅವರು ತೀವ್ರ ಆಸಕ್ತಿ ತೋರಿದ್ದಾರೆ. ಈ ಮೂಲಕ ಅಂದುಕೊಂಡ ದಿನಾಂಕದಂದು ಸಿನಿಮಾ ರಿಲೀಸ್​​ ಮಾಡಲು ಮುಂದಾಗಿದ್ದಾರೆ.

ರಶ್ಮಿಕಾಗೆ ಗಾಯ

ಇತ್ತೀಚೆಗೆ ಅವರು ಚಿತ್ರ ‘ಮೈಸಾ’ ಶೂಟಿಂಗ್‌ನಲ್ಲಿ ನಿರತರಾಗಿದ್ದಾಗ ರಶ್ಮಿಕಾ ತೀವ್ರ ಸ್ವರೂಪದ ಅಪಘಾತಕ್ಕೆ ಈಡಾಗಿದ್ದರು. ಡ್ಯಾನ್ಸ್ ದೃಶ್ಯದ ಚಿತ್ರೀಕರಣದ ವೇಳೆ ಅವರ ಬಲ ಸೊಂಟದ ಸ್ನಾಯುಖಂಡಕ್ಕೆ ಗಾಯವಾಗಿತ್ತು. ವೈದ್ಯರು ಅವರಿಗೆ ಸುಮಾರು ಆರು ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಮತ್ತು ಫಿಸಿಯೋಥೆರಪಿ ಚಿಕಿತ್ಸೆ ಪಡೆಯುವಂತೆ ಕಟ್ಟುನಿಟ್ಟಿನ ಸಲಹೆ ನೀಡಿದ್ದಾರೆ. ಈ ಆಕಸ್ಮಿಕ ಗಾಯದಿಂದಾಗಿ ‘ಮೈಸಾ’ ಹಾಗೂ ‘ರಣಬಾಲಿ’ ಎರಡೂ ದೊಡ್ಡ ಬಜೆಟ್ ಚಿತ್ರಗಳ ಶೂಟಿಂಗ್ ವೇಳಾಪಟ್ಟಿಗೆ ತಾತ್ಕಾಲಿಕವಾಗಿ ತಡೆ ಬಿದ್ದಿತ್ತು.

ಶೂಟಿಂಗ್ ಮಾಡಲು ಪಣ

ಪ್ರಸ್ತುತ ರಶ್ಮಿಕಾ ಅವರ ಚೇತರಿಕೆ ವೇಗವಾಗಿ ಮತ್ತು ಉತ್ತಮವಾಗಿ ಸಾಗುತ್ತಿದ್ದು, ಚಿತ್ರತಂಡದಲ್ಲಿ ಹೊಸ ಭರವಸೆ ಮೂಡಿದೆ. ಇತ್ತ ‘ರಣಬಾಲಿ’ ನಿರ್ಮಾಪಕರು ಚಿತ್ರವನ್ನು ಅಕ್ಟೋಬರ್ 30ರಂದು ಅದ್ಧೂರಿಯಾಗಿ ಪ್ರದರ್ಶನಕ್ಕೆ ತರಲು ಯೋಜನೆ ರೂಪಿಸಿದ್ದಾರೆ. ಸಿನಿಮಾ ಬಿಡುಗಡೆಯ ದಿನಾಂಕ ಹತ್ತಿರವಾಗುತ್ತಿರುವುದರಿಂದ, ಯಾವುದೇ ವಿಳಂಬವಿಲ್ಲದೆ ತಮಗೆ ನಿಗದಿಪಡಿಸಿದ ಭಾಗದ ಶೂಟಿಂಗ್ ಮುಗಿಸಿಕೊಡಲು ರಶ್ಮಿಕಾ ಪಣ ತೊಟ್ಟಿದ್ದಾರೆ.
ವಿಜಯ್​ಗೆ ಮುಖ್ಯ

‘ರಣಬಾಲಿ’ ಸಿನಿಮಾ ನಟ ವಿಜಯ್ ದೇವರಕೊಂಡ ಅವರಿಗೆ ಅತ್ಯಂತ ನಿರ್ಣಾಯಕವಾಗಿದೆ. ಇತ್ತೀಚಿನ ಅವರ ಕೆಲವು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಹಿನ್ನೆಲೆಯಲ್ಲಿ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆಯಿದೆ. ಜೊತೆಗೆ, ಪತಿ ವಿಜಯ್ ದೇವರಕೊಂಡ ನಾಯಕನಾಗಿ ನಟಿಸುತ್ತಿರುವ ಚಿತ್ರವಾದ್ದರಿಂದ ರಶ್ಮಿಕಾ ಅವರಿಗೂ ಇದು ಭಾವನಾತ್ಮಕವಾಗಿ ಅತ್ಯಂತ ವಿಶೇಷವಾದ ಯೋಜನೆಯಾಗಿದೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಸೊಂಟಕ್ಕೆ ಪೆಟ್ಟಾಗಿದ್ದು ಹೇಗೆ? ಎಲ್ಲವನ್ನೂ ವಿವರಿಸಿದ ನಟಿ

ಗಾಯದ ನೋವಿದ್ದರೂ ರಶ್ಮಿಕಾ ತೋರಿಸುತ್ತಿರುವ ಈ ಕಮಿಟ್‌ಮೆಂಟ್ ಕಂಡು ‘ರಣಬಾಲಿ’ ಚಿತ್ರತಂಡ ಅಚ್ಚರಿಗೊಂಡಿದ್ದು, ಯೋಜಿಸಿದಂತೆ ಶೂಟಿಂಗ್ ಪೂರ್ಣಗೊಳಿಸಿ ಅಕ್ಟೋಬರ್ 30ಕ್ಕೆ ತೆರೆಗೆ ತರಲು ಭರದ ಸಿದ್ಧತೆ ನಡೆಸುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version