ಜನಸಾಮಾನ್ಯರ ಜೇಬಿಗೆ ಮತ್ತೆ ಕತ್ತರಿ: ಅಡುಗೆ ಎಣ್ಣೆ ಬೆನ್ನಲ್ಲೇ ಅಕ್ಕಿ ದರವೂ ಭಾರಿ ಏರಿಕೆ! – Kannada News | Rice and Cooking Oil Prices Hike in Bengaluru: Common Man Hit by Double Blow of Price Rise
ಬೆಂಗಳೂರು, ಮೇ 14: ಬೆಂಗಳೂರಿನ (Bengaluru) ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ಕಳೆದ ವಾರವಷ್ಟೇ ಅಡುಗೆ ಎಣ್ಣೆಯ ಬೆಲೆ ಏರಿಕೆಯಾಗಿದ್ದು, ಅದರ ಬೆನ್ನಲ್ಲೇ ಈಗ ಅಕ್ಕಿ ದರವೂ (Rice Price) ಗಗನಕ್ಕೇರಲು ಸಜ್ಜಾಗಿದೆ. ಕಚ್ಚಾ ವಸ್ತುಗಳ ಕೊರತೆ ಹಾಗೂ ರಫ್ತು ಪ್ರಮಾಣದಲ್ಲಿನ ಏರಿಕೆಯಿಂದಾಗಿ ಸಿಲಿಕಾನ್ ಸಿಟಿಯಲ್ಲಿ ಅಕ್ಕಿ ಬೆಲೆ ಏರಿಕೆಯಾಗಲಿದೆ ಎಂದು ವ್ಯಾಪಾರಿಗಳು ಮುನ್ಸೂಚನೆ ನೀಡಿದ್ದಾರೆ. ಇದರೊಂದಿಗೆ ಇಂಧನ, ಆಟೋ ಎಲ್ಪಿಜಿ, ಕಮರ್ಷಿಯಲ್ ಸಿಲಿಂಡರ್, ಅಡುಗೆ ಎಣ್ಣೆ ಸೇರಿ ಬಹುತೇಕ ಅಗತ್ಯ ವಸ್ತುಗಳು ತುಟ್ಟಿಯಾದಂತಾಗಿದೆ….