ವಿಜಯ್ ಬಳಿಕ ತೆಲುಗು ರಾಜ್ಯಗಳಲ್ಲಿ ಜೂ ಎನ್​​ಟಿಆರ್, ರಾಜಕೀಯ ಎಂಟ್ರಿ ಸುಳಿವು ಕೊಟ್ಟ ನಟ? – Kannada News | Jr NTR to start 100 crore rs welfare fund, will he enter politics

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ವಿಜಯ್ (Vijay) ಈಗ ತಮಿಳುನಾಡಿನ ಸಿಎಂ ಆಗಿದ್ದಾರೆ. ಸೂಪರ್ ಸ್ಟಾರ್ ಆಗಿ ಸಿಕ್ಕ ಪ್ರಚಾರ, ಜನಪ್ರಿಯತೆಯನ್ನು ಅವರು ರಾಜಕೀಯ ಪ್ರವೇಶಕ್ಕೆ ಮೆಟ್ಟಿಲಾಗಿ ಬಳಸಿಕೊಂಡಿದ್ದು ಮಾತ್ರವಲ್ಲದೆ ಸಿಎಂ ಸಹ ಆಗಿದ್ದಾರೆ. ವಿಜಯ್ ಅವರ ಈ ಯಶಸ್ಸು, ಇತರೆ ಕೆಲವು ಸೂಪರ್ ಸ್ಟಾರ್​​ಗಳಲ್ಲಿ ರಾಜಕೀಯ ಮಹಾತ್ವಾಕಾಂಕ್ಷೆಯನ್ನು ಹುಟ್ಟಿಸಿರುವುದು ಸುಳ್ಳಲ್ಲ. ವಿಜಯ್ ಸಿಎಂ ಆದ ಬೆನ್ನಲ್ಲೆ, ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಜೂ ಎನ್​​ಟಿಆರ್ ಸಹ ತಮ್ಮ ರಾಜಕೀಯ ಎಂಟ್ರಿಯನ್ನು ಪರೋಕ್ಷವಾಗಿ ಪ್ರದರ್ಶಿಸಿದ್ದಾರೆ. ಅವರ ಹುಟ್ಟುಹಬ್ಬದಂದು ಮಹತ್ ಕಾರ್ಯವೊಂದಕ್ಕೆ ಜೂ ಎನ್​​ಟಿಆರ್ ಕೈ ಹಾಕಿದ್ದಾರೆ.

ಜೂ ಎನ್​​ಟಿಆರ್ ಮೇ 20 ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಆ ದಿನ ಅವರ ಅಭಿಮಾನಿಗಳ ಸಂಘಗಳ ನೆರವಿನೊಂದಿಗೆ ದೊಡ್ಡ ಸಾಮಾಜಿಕ ಕಾರ್ಯಕ್ಕೆ ಕೈ ಹಾಕಿದ್ದಾರೆ. ಆ ದಿನ ಜೂ ಎನ್​​ಟಿಆರ್ ಹೆಸರಲ್ಲಿ 100 ಕೋಟಿ ಮೌಲ್ಯದ ‘ಸೋಷಿಯಲ್ ವೆಲ್​​ಫೇರ್ ಫಂಡ್’ ಒಂದನ್ನು ಸೃಷ್ಟಿಸಲು ಮುಂದಾಗಿದ್ದಾರೆ. ಈ ವೆಲ್​​ಫೇರ್ ಫಂಡ್ ಮೂಲಕ ಎರಡೂ ತೆಲುಗು ರಾಜ್ಯಗಳಲ್ಲಿ ತಮ್ಮ ಅಭಿಮಾನಿ ಸಂಘಗಳನ್ನು ಬಳಸಿಕೊಂಡು ಜೂ ಎನ್​​ಟಿಆರ್ ಅವರು ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಲಿದ್ದಾರೆ. ನಟರ ‘ಸಾಮಾಜಿಕ ಕಾರ್ಯ’ದ ದೂರಗಾಮಿ ಪ್ರತಿಫಲ ಏನೆಂದು ಎಲ್ಲರಿಗೂ ಗೊತ್ತಿರುವುದೇ, ನಟರು ಸಾಮಾಜಿಕ ಕಾರ್ಯಕ್ಕೆ ಇಳಿದರೆಂದರೆ ಅದರ ಹಿಂದೆ ರಾಜಕೀಯ ಮಹತ್ವಾಕಾಂಕ್ಷೆ ಬಹುತೇಕ ಖಾತ್ರಿ.

ಇದನ್ನೂ ಓದಿ:ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ಸಿ. ಜೋಸೆಫ್​​ ವಿಜಯ್​​

ಅಂದಹಾಗೆ ಜೂ ಎನ್​​ಟಿಆರ್ ಅವರಿಗೆ ರಾಜಕೀಯ ಹೊಸದಲ್ಲ. ಅವರು ಯುವಕರಾಗಿದ್ದಾಗಲೇ ರಾಜಕೀಯಕ್ಕೆ ಧುಮುಕಿದವರು. ಈಗ ಆಂಧ್ರದಲ್ಲಿ ಆಡಳಿತದಲ್ಲಿರುವ ಟಿಡಿಪಿ ಪಕ್ಷದ ಯುವ ರಾಜ್ಯಾಧ್ಯಕ್ಷರು ಸಹ ಆಗಿದ್ದರು ಜೂ ಎನ್​​ಟಿಆರ್. ಟಿಡಿಪಿಯ ಸ್ಟಾರ್ ಪ್ರಚಾರಕರಾಗಿಯೂ ಕೆಲಸ ಮಾಡಿದ್ದಾರೆ. ಅಖಂಡ ಆಂಧ್ರ ಪ್ರದೇಶದ ಹಲವು ನಗರಗಳನ್ನು ಸುತ್ತಿ ಟಿಡಿಪಿ ಪರವಾಗಿ ಪ್ರಚಾರವನ್ನೂ ಸಹ ಜೂ ಎನ್​​ಟಿಆರ್ ಮಾಡಿದ್ದಾರೆ. ಜೂ ಎನ್​​ಟಿಆರ್ ಅವರನ್ನು ಪಕ್ಷದ ಆಸ್ತಿಯೆಂದು ಚಂದ್ರಬಾಬು ನಾಯ್ಡು ಬಣ್ಣಿಸಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ಪಕ್ಷದ ಮುಖಂಡರಾದ ಚಂದ್ರಬಾಬು ನಾಯ್ಡು ಮತ್ತು ನಂದಮೂರಿ ಬಾಲಕೃಷ್ಣ ಅವರುಗಳು ಜೂ ಎನ್​​ಟಿಆರ್ ಅವರನ್ನು ಪಕ್ಷದಿಂದ ದೂರ ಇರಿಸಿದ್ದಾರೆ.

ಆದರೆ ಜೂ ಎನ್​​ಟಿಆರ್ ಅವರು ತಮ್ಮದೇ ಸ್ವಂತ ಪಕ್ಷ ಕಟ್ಟುವ ಯೋಜನೆ ಹಾಕಿಕೊಂಡಂತಿದ್ದು, ಅದೇ ಕಾರಣದಿಂದ ಈಗ ಅಭಿಮಾನಿ ಸಂಘಗಳ ಮೂಲಕ ರಾಜ್ಯದಾದ್ಯಂತ ಸಾಮಾಜ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ವಿಜಯ್ ಸಹ ತಮ್ಮ ಅಭಿಮಾನಿ ಸಂಘಟನೆ ‘ವಿಜಯ್ ಮಕ್ಕಳ್ ಇಯಕ್ಕಂ’ ಮೂಲಕ ಸಾಮಾಜಿಕ ಕಾರ್ಯವನ್ನು ಮಾಡಿ, ಸಂಘವನ್ನು ಬಲಪಡಿಸಿ ಅದರ ಬಲದಿಂದಲೇ ಟಿವಿಕೆ ಪಕ್ಷವನ್ನು ಕಟ್ಟಿ ಬೆಳೆಸಿ ಈಗ ಸಿಎಂ ಆಗಿದ್ದಾರೆ. ಜೂ ಎನ್​​ಟಿಆರ್ ಸಹ ಇದೇ ಹಾದಿಯಲ್ಲಿ ನಡೆಯುವ ನಿರ್ಧಾರ ಮಾಡಿದಂತಿದ್ದಾರೆ.

ಜೂ ಎನ್​​ಟಿಆರ್​ ಭಾರಿ ಅಭಿಮಾನಿಗಳನ್ನು ಹೊಂದಿರುವ ನಟ. ಜೊತೆಗೆ ಅದ್ಭುತ ಮಾತುಗಾರ ಸಹ. ಅವರ ಕುಟುಂಬವೇ ರಾಜಕೀಯ ಕುಟುಂಬ ಹಾಗಾಗಿ ರಾಜಕೀಯ ಪಟ್ಟುಗಳು ಅವರಿಗೆ ಹೊಸದೇನೂ ಅಲ್ಲ. ಈಗಾಗಲೇ ಸಚಿವರಾಗಿರುವ, ಶಾಸಕರಾಗಿರುವ ಹಲವು ರಾಜಕಾರಣಿಗಳು ಜೂ ಎನ್​​ಟಿಆರ್ ಅವರಿಗೆ ಬಲು ಹತ್ತಿರದವರು. ಅಲ್ಲದೆ ಯಾವುದೇ ವಿವಾದ ಇಲ್ಲದ, ಎಲ್ಲ ರಾಜಕೀಯ ಪಕ್ಷಗಳು ಸಮಾನ ಗೌರವ ಕೊಡುವ ವ್ಯಕ್ತಿಯೂ ಅವರಾಗಿದ್ದಾರೆ. ಹಾಗಾಗಿ ಅವರು ರಾಜಕೀಯಕ್ಕೆ ಬಂದರೆ ಗೆಲುವು ತೀರ ಕಷ್ಟವೇನೂ ಅಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

RCB ಯಶಸ್ಸಿಗೆ ನಾನು ಕೂಡ ಕಾರಣ: ಅಂಬಾಟಿ ರಾಯುಡು ವಾದ! – Kannada News | Ambati Rayudu deserves credit for RCB’s success

ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವೈಫಲ್ಯಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು, ಈಗ ಆರ್‌ಸಿಬಿ ತಂಡದ ಭರ್ಜರಿ ಯಶಸ್ಸಿನ ಸಂಪೂರ್ಣ ಶ್ರೇಯಸ್ಸು ತನಗೆ ಸಲ್ಲಬೇಕು ಎಂದಿದ್ದಾರೆ! ತಾವು ಮಾಡಿದ ಕಟು ಟೀಕೆಗಳೇ ಆರ್‌ಸಿಬಿ ಮ್ಯಾನೇಜ್‌ಮೆಂಟ್‌ ಕಣ್ಣು ತೆರೆಸುವಂತೆ ಮಾಡಿತು ಮತ್ತು ಆ ತಪ್ಪುಗಳನ್ನು ತಿದ್ದಿಕೊಂಡಿದ್ದರಿಂದಲೇ ಇಂದು ತಂಡವು ಐಪಿಎಲ್‌ನಲ್ಲಿ ಅಬ್ಬರಿಸುತ್ತಿದೆ ಎಂಬುದು ರಾಯುಡು ಅವರ ವಾದ.

 ಅಂಬಾಟಿ ರಾಯುಡು ಮುಂದಿಟ್ಟಿರುವ ವಾದಗಳೇನು?

ನಾನು ವರ್ಷಗಳಿಂದ RCB ತಂಡದ ಮೇಲೆ ಮಾಡುತ್ತಿದ್ದ ಟೀಕೆಗಳು ಕೇವಲ ದ್ವೇಷದಿಂದ ಕೂಡಿರಲಿಲ್ಲ. ಬದಲಿಗೆ ಅವುಗಳ ಹಿಂದೆ ಬಲವಾದ ತಾರ್ಕಿಕ ಕಾರಣಗಳಿದ್ದವು ಎಂದು ರಾಯುಡು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ತಂಡವು ತಮ್ಮ ಹಳೆಯ ಸಲಹೆಗಳನ್ನು ಪಾಲಿಸಿ ಮೂರು ಪ್ರಮುಖ ಬದಲಾವಣೆಗಳನ್ನು ಮಾಡಿಕೊಂಡಿದ್ದರಿಂದಲೇ ಗೆಲುವಿನ ಹಾದಿಗೆ ಮರಳಿದೆ ಎಂದು ಅವರು ಹೇಳಿದ್ದಾರೆ. ಆ ಬದಲಾವಣೆಗಳೆಂದರೆ…

  • ಭಾರತೀಯ ಮಧ್ಯಮ ಕ್ರಮಾಂಕದ ಬಲ: ಈ ಹಿಂದೆ RCB ಕೇವಲ ಜಾಗತಿಕ ಸ್ಟಾರ್ ಆಟಗಾರರ ಮೇಲಷ್ಟೇ ಅವಲಂಬಿತವಾಗಿತ್ತು. ಆದರೆ ಈ ಬಾರಿ ಅನುಭವಿ ಭಾರತೀಯ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಿಗೆ ಜವಾಬ್ದಾರಿ ನೀಡಿರುವುದನ್ನು ರಾಯುಡು ಶ್ಲಾಘಿಸಿದ್ದಾರೆ.
  •  ಸ್ಥಿರ ಪ್ರದರ್ಶನದ ಫಿನಿಶರ್‌ಗಳು: ಒತ್ತಡದ ಸಮಯದಲ್ಲಿ ಪಂದ್ಯವನ್ನು ಮುಗಿಸಿಕೊಡಬಲ್ಲ ಗುಣಮಟ್ಟದ ದೇಶಿ ಫಿನಿಶರ್‌ಗಳನ್ನು ತಂಡಕ್ಕೆ ಸೇರಿಸಿಕೊಂಡಿರುವುದು ಯಶಸ್ಸಿಗೆ ಪ್ರಮುಖ ಕಾರಣ ಎಂದಿದ್ದಾರೆ.
  •  ಅನುಭವಿ ಬೌಲಿಂಗ್ ಲೈನ್-ಅಪ್: ಈ ಹಿಂದೆ RCB ಬೌಲಿಂಗ್ ವಿಭಾಗವನ್ನು ತೀವ್ರವಾಗಿ ಟೀಕಿಸುತ್ತಿದ್ದ ರಾಯುಡು, ಈ ಬಾರಿ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹೇಝಲ್​ವುಡ್ ಅವರಂತಹ ಹಿರಿಯ ವೇಗಿಗಳನ್ನು ತಂಡಕ್ಕೆ ಸೇರಿಸಿಕೊಂಡಿರುವುದೇ ಬೌಲಿಂಗ್ ಸುಧಾರಿಸಲು ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಎಲ್ಲಾ ಟೀಕೆಗಳನ್ನು ನಾನು ಈ ಹಿಂದಿನಿಂದಲೂ ಮಾಡುತ್ತಾ ಬಂದಿದ್ದೀನಿ. ನಾನು ಮಾಡಿದ ಕಟು ಟೀಕೆಗಳೇ RCB ಮ್ಯಾನೇಜ್‌ಮೆಂಟ್‌ ಕಣ್ಣು ತೆರೆಸುವಂತೆ ಮಾಡಿತು. ಅದರಂತೆ ಕಳೆದ ಸೀಸನ್​ನಲ್ಲಿ ಆರ್​ಸಿಬಿ ಮೂರು ವಿಭಾಗಗಳಲ್ಲಿ ಅತ್ಯುತ್ತಮ ಆಟಗಾರರನ್ನು ಆಯ್ಕೆ ಮಾಡಿಕೊಂಡಿದೆ. ಅದರ ಫಲವಾಗಿ ಇದೀಗ ಆರ್​ಸಿಬಿ ಗೆಲ್ಲುತ್ತಿದೆ.

ಇದನ್ನೂ ಓದಿ: RCB ಗೆಲುವಿನಿಂದ ಸಂಕಷ್ಟಕ್ಕೆ ಸಿಲುಕಿದ 6 ತಂಡಗಳು!

ಅಂದರೆ ಹೇಳಿದ ತಪ್ಪುಗಳನ್ನು ತಿದ್ದಿಕೊಂಡಿದ್ದರಿಂದಲೇ ಇಂದು RCB ತಂಡವು ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ಹೀಗಾಗಿ ಇದರ ಶ್ರೇಯಶಸ್ಸು ನನಗೂ ಸಲ್ಲಬೇಕು ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.

ಅಭಿಮಾನಿಗಳ ಆಕ್ರೋಶ:

ಅಂಬಾಟಿ ರಾಯುಡು ಅವರ ಈ ಹೇಳಿಕೆಯನ್ನು ರಾಯಲ್ ಚಾಲೆಂಜರ್ಸ್​ ಬೆಂಗಳೂರು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಇದಕ್ಕೆ ರಾಯುಡು ಮತ್ತು RCB ನಡುವಿನ ಹಳೆಯ ಇತಿಹಾಸವೇ ಕಾರಣ. ಅದೇನೆಂದು ನೋಡುವುದಾದರೆ…

    • ಟ್ರೋಫಿ ಸಂಖ್ಯೆಯ ಲೇವಡಿ: RCB ತನ್ನ ಮೊದಲ ಐಪಿಎಲ್ ಟ್ರೋಫಿ ಗೆದ್ದಾಗ ಲೇವಡಿ ಮಾಡಿದ್ದ ರಾಯುಡು, “ನಿಮಗೆ ಒಂದು ಕಪ್ ಗೆಲ್ಲಲು 18 ವರ್ಷ ಬೇಕಾಯಿತು, ಹಾಗಾದರೆ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ 5 ಟ್ರೋಫಿಗಳ ದಾಖಲೆ ಸರಿಗಟ್ಟಲು ನಿಮಗೆ 72 ವರ್ಷ ಬೇಕಾಗಬಹುದು” ಎಂದು ಕಾಲೆಳೆದಿದ್ದರು.
    • ಸಂಭ್ರಮಾಚರಣೆಗೆ ಟೀಕೆ: 2024ರ ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡವನ್ನು ಟೂರ್ನಿಯಿಂದ ಹೊರಹಾಕಿದಾಗ ಆರ್‌ಸಿಬಿ ಆಟಗಾರರು ಮತ್ತು ಅಭಿಮಾನಿಗಳು ರಸ್ತೆಯಲ್ಲಿ ಅತಿಯಾಗಿ ಸಂಭ್ರಮಿಸಿದ್ದನ್ನು ರಾಯುಡು ಟೀಕಿಸಿದ್ದರು. “ಕೇವಲ ಸಂಭ್ರಮಾಚರಣೆಗಳು ನಿಮಗೆ ಟ್ರೋಫಿ ತಂದುಕೊಡುವುದಿಲ್ಲ” ಎಂದು ತಿವಿದಿದ್ದರು.
    • ಕ್ರೆಡಿಟ್ ಕದಿಯುವ ಯತ್ನ: ಪ್ರಸ್ತುತ ಅಭಿಮಾನಿಗಳು ರಾಯುಡು ಅವರ ಹೇಳಿಕೆಯನ್ನು ತಳ್ಳಿಹಾಕಿದ್ದು, ಸಿಎಸ್‌ಕೆ ಪರವಾಗಿರುವ ಪಕ್ಷಪಾತದಿಂದಾಗಿ ಅವರು ಆರ್‌ಸಿಬಿ ತಂಡದ ನೈಜ ಪರಿಶ್ರಮದ ಕ್ರೆಡಿಟ್ ಅನ್ನು ತಾವೇ ಕದಿಯಲು ಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


ಒಟ್ಟಾರೆಯಾಗಿ, ಆರ್‌ಸಿಬಿ ತಂಡದ ಆಡಳಿತ ಮಂಡಳಿಯು ತನ್ನ ಹಳೆಯ ತಪ್ಪುಗಳನ್ನು ತಿದ್ದಿಕೊಂಡು ಬಲಿಷ್ಠ ತಂಡವನ್ನು ಕಟ್ಟಿರುವುದೇ ಸದ್ಯದ ಯಶಸ್ಸಿಗೆ ಕಾರಣವಾಗಿದ್ದರೂ, ಅಂಬಾಟಿ ರಾಯುಡು ಮಾತ್ರ ಇದರ ಸಂಪೂರ್ಣ ಶ್ರೇಯಸ್ಸು ತಮ್ಮ ಟೀಕೆಗಳಿಗೇ ಸಲ್ಲಬೇಕು ಎಂದು ವಾದಿಸಿರುವುದು ಮಾತ್ರ ವಿಪರ್ಯಾಸ.

Source link

ಮೌನಿ ರಾಯ್-ಸೂರಜ್ ದಾಂಪತ್ಯಕ್ಕೆ ಮುಳುವಾಯ್ತು ನಟಿಯ ಜನಪ್ರಿಯತೆ – Kannada News | Mouni Roy and Suraj Nambiar Divorce Rumors: Unpacking The Split Reasons

ಖ್ಯಾತ ನಟಿ ಮೌನಿ ರಾಯ್ (Mouni Roy) ಮತ್ತು ದುಬೈ ಮೂಲದ ಉದ್ಯಮಿ ಸೂರಜ್ ನಂಬಿಯಾರ್ 2022ರಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಆದರೆ, ಕಳೆದ ಕೆಲವು ದಿನಗಳಿಂದ ಈ ಜೋಡಿ ಡಿವೋರ್ಸ್ ಪಡೆಯುತ್ತಿದೆ ಎಂಬ ವದಂತಿಗಳು ಬಲವಾಗಿ ಕೇಳಿಬರುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ್ದಲ್ಲದೆ, ಮದುವೆಯ ಫೋಟೋಗಳನ್ನೂ ಡಿಲೀಟ್ ಮಾಡಿದ್ದಾರೆ. ಈ ಮಧ್ಯೆ ಇವರ ವಿಚ್ಛೇದನಕ್ಕೆ ಅಸಲಿ ಕಾರಣವೇನು ಎಂಬ ಬಗ್ಗೆ ಒಂದು ಮಾಹಿತಿ ಹರಿದಾಡುತ್ತಿದೆ.

ವರದಿಗಳ ಪ್ರಕಾರ, ಸೂರಜ್ ನಂಬಿಯಾರ್ ಅವರಿಗೆ ಪತ್ನಿ ಮೌನಿ ರಾಯ್ ಅವರ ಜನಪ್ರಿಯತೆಯೇ ಮುಳ್ಳಾಗಿದೆ ಎನ್ನಲಾಗುತ್ತಿದೆ. ಖ್ಯಾತ ಪತ್ರಕರ್ತ ವಿಕ್ಕಿ ಲಾಲ್ವಾನಿ ಅವರ ವರದಿಯ ಪ್ರಕಾರ, ‘ಅಭಿಮಾನ್ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಅವರು ಪತ್ನಿ ಜಯಾ ಬಚ್ಚನ್ ಅವರ ಯಶಸ್ಸನ್ನು ಕಂಡು ಹೇಗೆ ಕೀಳರಿಮೆ ಅನುಭವಿಸಿದ್ದರೋ, ಸೂರಜ್ ಕೂಡ ಭಾರತಕ್ಕೆ ಬಂದಾಗ ಅದೇ ರೀತಿ ಅನುಭವಿಸುತ್ತಿದ್ದರಂತೆ. ಸೂರಜ್ ಕೋಟ್ಯಧಿಪತಿಯಾಗಿದ್ದರೂ, ಮುಂಬೈನಲ್ಲಿ ಅವರನ್ನು ಯಾರೂ ಗುರುತಿಸುತ್ತಿರಲಿಲ್ಲ. ಆದರೆ ಮೌನಿ ಹೋದ ಕಡೆಯಲ್ಲೆಲ್ಲಾ ಜನ ಮುತ್ತಿಕೊಳ್ಳುತ್ತಿದ್ದರು. ಅವರಿಗೆ ಇದರಿಂದ ತಾವು ನಿರ್ಲಕ್ಷ್ಯ ಭಾವನೆ ಮೂಡಿತು ಎನ್ನಲಾಗಿದೆ.

ಮತ್ತೊಂದು ಆಘಾತಕಾರಿ ಆರೋಪ:

ಕೇವಲ ಕೀಳರಿಮೆ ಮಾತ್ರವಲ್ಲದೆ, ಸೂರಜ್ ಅವರು ಮೌನಿ ರಾಯ್ ಅವರಿಗೆ ಮೋಸ ಮಾಡಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಪ್ರಚಾರಕ್ಕಾಗಿ ಮೌನಿಯನ್ನು ಬಳಸಿಕೊಂಡ ಸೂರಜ್, ಪತ್ನಿಯ ಹಣವನ್ನೂ ವೈಯಕ್ತಿಕವಾಗಿ ಉಪಯೋಗಿಸಿಕೊಂಡಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಸದ್ಯ ಸೂರಜ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ಡಿಲೀಟ್ ಮಾಡಿದ್ದಾರೆ.

ಇದನ್ನೂ ಓದಿ: ಮದುವೆ ಆಗಿ ನಾಲ್ಕೇ ವರ್ಷಕ್ಕೆ ಖ್ಯಾತ ನಟಿ ಮೌನಿ ರಾಯ್ ಸಂಸಾರದಲ್ಲಿ ಬಿರುಕು

ಈ ಎಲ್ಲಾ ವದಂತಿಗಳ ನಡುವೆ ಮೌನಿ ರಾಯ್ ಅವರು ಮೌನ ಮುರಿದಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿರುವ ಅವರು, ‘ದಯವಿಟ್ಟು ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ. ನಮಗೆ ಸ್ವಲ್ಪ ಖಾಸಗಿತನ ನೀಡಿ’ ಎಂದು ಮನವಿ ಮಾಡಿದ್ದಾರೆ. ಆದರೆ ಅವರು ವಿಚ್ಛೇದನದ ಸುದ್ದಿಯನ್ನು ಎಲ್ಲಿಯೂ ಸ್ಪಷ್ಟವಾಗಿ ನಿರಾಕರಿಸಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಬೆಳಗಾವಿ, ಸಿಕಂದರಾಬಾದ್, ಚರ್ಲಪಲ್ಲಿ ವೀಕ್ಲಿ ವಿಶೇಷ ರೈಲುಗಳು ಇನ್ನು ಕಾಯಂ! – Kannada News | Railway Board Regularizes Charlapalli and Secunderabad to Belagavi Weekly Express Trains: Know travel timings here

ಬೆಂಗಳೂರು, ಮೇ 14: ಕರ್ನಾಟಕ (Karnataka), ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ನಡುವೆ ರೈಲ್ವೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ರೈಲ್ವೆ ಮಂಡಳಿಯು (Railway Board) ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಪ್ರಯಾಣಿಕರ ದಟ್ಟಣೆ ಮತ್ತು ಬೇಡಿಕೆಯನ್ನು ಪರಿಗಣಿಸಿ, ಈ ಹಿಂದೆ ವಿಶೇಷ ರೈಲುಗಳಾಗಿ ಸಂಚರಿಸುತ್ತಿದ್ದ ಎರಡು ಪ್ರಮುಖ ವೀಕ್ಲಿ ರೈಲುಗಳನ್ನು ಈಗ ಕಾಯಂ (Regularization) ಗೊಳಿಸಿ ಆದೇಶ ಹೊರಡಿಸಿದೆ. ಈ ಕ್ರಮವು ಬೆಳಗಾವಿ ಹಾಗೂ ಹೈದರಾಬಾದ್ ಭಾಗದ ಪ್ರಯಾಣಿಕರಿಗೆ ಪ್ರಯೋಜನಕಾರಿಯಾಗಲಿದೆ.

ಮುಖ್ಯಾಂಶಗಳು

  • ಚರ್ಲಪಲ್ಲಿ – ಬೆಳಗಾವಿ – ಚರ್ಲಪಲ್ಲಿ ವೀಕ್ಲಿ ಎಕ್ಸ್‌ಪ್ರೆಸ್ ರೈಲು ಇನ್ಮುಂದೆ ಕಾಯಂ ಆಗಿ ಸಂಚರಿಸಲಿದೆ.
  • ಸಿಕಂದರಾಬಾದ್ – ಬೆಳಗಾವಿ – ಸಿಕಂದರಾಬಾದ್ ವೀಕ್ಲಿ ಎಕ್ಸ್‌ಪ್ರೆಸ್ ರೈಲಿಗೂ ರೈಲ್ವೆ ಮಂಡಳಿಯಿಂದ ಕಾಯಂ ಮಾನ್ಯತೆ.
  • ಈ ನಿರ್ಧಾರದಿಂದ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ನಡುವಿನ ರೈಲ್ವೆ ಸಂಪರ್ಕ ಮತ್ತಷ್ಟು ವೃದ್ಧಿಯಾಗಲಿದೆ.

ನೈಋತ್ಯ ರೈಲ್ವೆ ಸಂಪರ್ಕ ಕ್ರಾಂತಿ

ದಕ್ಷಿಣ ನೈಋತ್ಯ ರೈಲ್ವೆಯ ಮಾಹಿತಿಯಂತೆ, ಹೈದರಾಬಾದ್‌ನ ಉಪನಗರವಾದ ಚರ್ಲಪಲ್ಲಿಯಿಂದ ಬೆಳಗಾವಿಗೆ ಸಂಚರಿಸುವ ರೈಲು ಹಾಗೂ ಸಿಕಂದರಾಬಾದ್‌ನಿಂದ ಬೆಳಗಾವಿಗೆ ಸಂಚರಿಸುವ ರೈಲುಗಳನ್ನು ಕಾಯಂಗೊಳಿಸಿರುವುದರಿಂದ ಪ್ರವಾಸಿಗರಿಗೆ ಮತ್ತು ಉದ್ಯೋಗದ ನಿಮಿತ್ತ ಸಂಚರಿಸುವವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಮೊದಲು ಈ ರೈಲುಗಳು ಸೀಮಿತ ಅವಧಿಯ ವಿಶೇಷ ರೈಲುಗಳಾಗಿ ಸಂಚರಿಸುತ್ತಿದ್ದವು. ಈಗ ಇವುಗಳಿಗೆ ಅಧಿಕೃತ ಮಾನ್ಯತೆ ಸಿಕ್ಕಿರುವುದರಿಂದ ವೇಳಾಪಟ್ಟಿಯಲ್ಲಿ ಸ್ಥಿರತೆ ಬರಲಿದ್ದು, ಮುಂಗಡ ಕಾಯ್ದಿರಿಸುವಿಕೆಗೂ ಸಹಕಾರಿಯಾಗಲಿದೆ.

ನೈಋತ್ಯ ರೈಲ್ವೆ ಎಕ್ಸ್ ಸಂದೇಶ

ಸಿಕಂದರಾಬಾದ್ ಮತ್ತು ಬೆಳಗಾವಿ ನಡುವಿನ ರೈಲು ತೆಲಂಗಾಣ ಮಾತ್ರವಲ್ಲದೆ ಆಂಧ್ರಪ್ರದೇಶದ ಭಾಗಗಳಿಗೂ ಸಂಪರ್ಕ ಕಲ್ಪಿಸುವುದರಿಂದ ಮೂರು ರಾಜ್ಯಗಳ ನಡುವಿನ ಆರ್ಥಿಕ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳಿಗೆ ವೇಗ ಸಿಗಲಿದೆ. ದಕ್ಷಿಣ ನೈಋತ್ಯ ರೈಲ್ವೆಯು ಈ ಬಗ್ಗೆ ತನ್ನ ಅಧಿಕೃತ ಎಕ್ಸ್ (X) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸುಧಾರಿತ ರೈಲ್ವೆ ಸಂಪರ್ಕದ ಬಗ್ಗೆ ಹರ್ಷ ವ್ಯಕ್ತಪಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

AI Monks: ಧರ್ಮ ಪ್ರಚಾರಕ್ಕೆ ಬಂದ ‘ರೋಬೋಟ್ ಸನ್ಯಾಸಿ’! ಎಐ ಬುದ್ಧನ ಬೋಧನೆಗೆ ಜಗತ್ತೇ ಫಿದಾ – Kannada News | AI Monks: The Future of Spirituality? Robot Priests in Japan and Korea Transforming Faith

ಧರ್ಮ ಪ್ರಚಾರಕ್ಕೆ ಬಂದ ‘ರೋಬೋಟ್ ಸನ್ಯಾಸಿ’Image Credit source: Pinterest

ಟೋಕಿಯೋ: ಆಧುನಿಕ ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ (AI) ಕೇವಲ ಉದ್ಯಮ ಮತ್ತು ಶಿಕ್ಷಣಕ್ಕೆ ಸೀಮಿತವಾಗಿಲ್ಲ, ಈಗ ಅದು ಆಧ್ಯಾತ್ಮಿಕ ಲೋಕಕ್ಕೂ ಕಾಲಿಟ್ಟಿದೆ. ದಕ್ಷಿಣ ಕೊರಿಯಾ ಮತ್ತು ಜಪಾನ್‌ನಲ್ಲಿ ಈಗ ‘ರೋಬೋಟ್ ಸನ್ಯಾಸಿಗಳು’ ಧರ್ಮ ಬೋಧನೆ ಮಾಡುತ್ತಿದ್ದು, ಭವಿಷ್ಯದಲ್ಲಿ ರೋಬೋಟ್‌ಗಳೇ ಧಾರ್ಮಿಕ ಗುರುಗಳಾಗಲಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ.

ದಕ್ಷಿಣ ಕೊರಿಯಾದಲ್ಲಿ ‘ಗಾಬಿ’ ಎಂಬ ಎಐ ಸನ್ಯಾಸಿ:

ದಕ್ಷಿಣ ಕೊರಿಯಾದ ರಾಜಧಾನಿ ಸೋಲ್‌ನಲ್ಲಿರುವ ಪ್ರಸಿದ್ಧ ‘ಜೋಗ್ಯೆಸಾ’ ದೇಗುಲದಲ್ಲಿ ‘ಗಾಬಿ’ (Gabi) ಎಂಬ ಹ್ಯೂಮನಾಯ್ಡ್ ರೋಬೋಟ್ ಸನ್ಯಾಸಿಯನ್ನು ಪರಿಚಯಿಸಲಾಗಿದೆ. 130 ಸೆಂಟಿಮೀಟರ್ ಎತ್ತರವಿರುವ ಈ ರೋಬೋಟ್, ಸಾಂಪ್ರದಾಯಿಕ ಬೌದ್ಧ ಉಡುಪನ್ನು ಧರಿಸಿ, ಬೌದ್ಧ ದೀಕ್ಷೆಯನ್ನೂ ಸ್ವೀಕರಿಸಿದೆ. ಅಷ್ಟೇ ಅಲ್ಲದೆ, “ನಾನು ಬೌದ್ಧ ಧರ್ಮಕ್ಕೆ ನನ್ನನ್ನು ಅರ್ಪಿಸಿಕೊಳ್ಳುತ್ತೇನೆ” ಎಂದು ಹೇಳುವ ಮೂಲಕ ನೆರೆದಿದ್ದ ಭಕ್ತರನ್ನು ಆಶ್ಚರ್ಯಚಕಿತಗೊಳಿಸಿದೆ.

ಜಪಾನ್‌ನ 400 ವರ್ಷ ಹಳೆಯ ದೇವಸ್ಥಾನದಲ್ಲಿ ರೋಬೋಟ್ ಉಪದೇಶ:

ಜಪಾನ್‌ನ ಕ್ಯೋಟೋದಲ್ಲಿರುವ 400 ವರ್ಷಗಳ ಇತಿಹಾಸವಿರುವ ಕೊಡೈ-ಜಿ ದೇಗುಲದಲ್ಲಿ ‘ಕಾನನ್’ (Kannon) ಎಂಬ ರೋಬೋಟ್ ಅನ್ನು ಸ್ಥಾಪಿಸಲಾಗಿದೆ. ಯುವ ಪೀಳಿಗೆಯನ್ನು ಆಧ್ಯಾತ್ಮದತ್ತ ಸೆಳೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಈ ರೋಬೋಟ್ ಜಪಾನಿ ಭಾಷೆಯಲ್ಲಿ ಬೌದ್ಧ ಧರ್ಮದ ತತ್ವಗಳನ್ನು ಬೋಧಿಸುತ್ತದೆ ಮತ್ತು ಅದನ್ನು ಇಂಗ್ಲಿಷ್ ಹಾಗೂ ಚೈನೀಸ್ ಭಾಷೆಗಳಿಗೂ ಭಾಷಾಂತರಿಸುವ ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ: ಅನಂತ್ ಅಂಬಾನಿ ಕೈಯಲ್ಲಿದೆ 12 ಕೋಟಿಯ ‘ಶಿವ’ ವಾಚ್; ಈ ವಜ್ರಖಚಿತ ಗಡಿಯಾರದ ವಿಶೇಷತೆ ತಿಳಿದರೆ ಅಚ್ಚರಿ ಪಡುತ್ತೀರಿ!

ರೋಬೋಟ್ ಸನ್ಯಾಸಿಗಳ ಅಗತ್ಯವೇಕೆ?

ಜಪಾನ್ ಮತ್ತು ದಕ್ಷಿಣ ಕೊರಿಯಾದಂತಹ ದೇಶಗಳಲ್ಲಿ ಬೌದ್ಧ ಸನ್ಯಾಸಿಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಈ ಕೊರತೆಯನ್ನು ನೀಗಿಸಲು ತಂತ್ರಜ್ಞಾನದ ಮೊರೆ ಹೋಗಲಾಗುತ್ತಿದೆ. ಇದಲ್ಲದೇ ಎಐ ರೋಬೋಟ್‌ಗಳು ಕಠಿಣವಾದ ಧರ್ಮಗ್ರಂಥಗಳನ್ನು ಸಾಮಾನ್ಯ ಜನರಿಗೆ ಅರ್ಥವಾಗುವಂತಹ ಸರಳ ಭಾಷೆಯಲ್ಲಿ ವಿವರಿಸಬಲ್ಲವು. ತಂತ್ರಜ್ಞಾನದ ಮೇಲೆ ಆಸಕ್ತಿ ಹೊಂದಿರುವ ಇಂದಿನ ಯುವಕರಿಗೆ ಈ ‘ಹೈಟೆಕ್’ ಬೋಧನೆ ಹೆಚ್ಚು ಹತ್ತಿರವಾಗುತ್ತಿದೆ.

ಮನುಷ್ಯರ ಸ್ಥಾನ ತುಂಬಬಲ್ಲವೇ ಈ ರೋಬೋಟ್‌ಗಳು?

ರೋಬೋಟ್‌ಗಳು ಮಾಹಿತಿ ಮತ್ತು ಜ್ಞಾನವನ್ನು ನೀಡಬಲ್ಲವೇ ಹೊರತು, ಮನುಷ್ಯರಂತೆ ಕರುಣೆ, ದಯೆ ಅಥವಾ ಆಧ್ಯಾತ್ಮಿಕ ಅನುಭೂತಿಯನ್ನು ಹೊಂದಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಇವು ಕೇವಲ ಮೊದಲೇ ಪ್ರೋಗ್ರಾಂ ಮಾಡಲಾದ ಡೇಟಾ ಆಧಾರದ ಮೇಲೆ ಕೆಲಸ ಮಾಡುತ್ತವೆ. ಆದರೆ, ಬದಲಾಗುತ್ತಿರುವ ಕಾಲಘಟ್ಟದಲ್ಲಿ ಧರ್ಮ ಮತ್ತು ತಂತ್ರಜ್ಞಾನದ ಈ ಮಿಲನವು ಹೊಸ ಸಂಚಲನವನ್ನಂತೂ ಸೃಷ್ಟಿಸಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜನಸಾಮಾನ್ಯರ ಜೇಬಿಗೆ ಮತ್ತೆ ಕತ್ತರಿ: ಅಡುಗೆ ಎಣ್ಣೆ ಬೆನ್ನಲ್ಲೇ ಅಕ್ಕಿ ದರವೂ ಭಾರಿ ಏರಿಕೆ! – Kannada News | Rice and Cooking Oil Prices Hike in Bengaluru: Common Man Hit by Double Blow of Price Rise

ಬೆಂಗಳೂರು, ಮೇ 14: ಬೆಂಗಳೂರಿನ (Bengaluru) ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ಕಳೆದ ವಾರವಷ್ಟೇ ಅಡುಗೆ ಎಣ್ಣೆಯ ಬೆಲೆ ಏರಿಕೆಯಾಗಿದ್ದು, ಅದರ ಬೆನ್ನಲ್ಲೇ ಈಗ ಅಕ್ಕಿ ದರವೂ (Rice Price) ಗಗನಕ್ಕೇರಲು ಸಜ್ಜಾಗಿದೆ. ಕಚ್ಚಾ ವಸ್ತುಗಳ ಕೊರತೆ ಹಾಗೂ ರಫ್ತು ಪ್ರಮಾಣದಲ್ಲಿನ ಏರಿಕೆಯಿಂದಾಗಿ ಸಿಲಿಕಾನ್ ಸಿಟಿಯಲ್ಲಿ ಅಕ್ಕಿ ಬೆಲೆ ಏರಿಕೆಯಾಗಲಿದೆ ಎಂದು ವ್ಯಾಪಾರಿಗಳು ಮುನ್ಸೂಚನೆ ನೀಡಿದ್ದಾರೆ. ಇದರೊಂದಿಗೆ ಇಂಧನ, ಆಟೋ ಎಲ್​​ಪಿಜಿ, ಕಮರ್ಷಿಯಲ್ ಸಿಲಿಂಡರ್, ಅಡುಗೆ ಎಣ್ಣೆ ಸೇರಿ ಬಹುತೇಕ ಅಗತ್ಯ ವಸ್ತುಗಳು ತುಟ್ಟಿಯಾದಂತಾಗಿದೆ.

ಮುಖ್ಯಾಂಶಗಳು

  • ಅಕ್ಕಿ ಬೆಲೆಯಲ್ಲಿ ಸಗಟು ದರದಲ್ಲಿ 4 ರಿಂದ 5 ರೂಪಾಯಿ ಹಾಗೂ ಚಿಲ್ಲರೆ ದರದಲ್ಲಿ 8 ರಿಂದ 10 ರೂಪಾಯಿವರೆಗೆ ಏರಿಕೆ.
  • ಅಡುಗೆ ಎಣ್ಣೆ ದರವು ಸಗಟು ಮಾರುಕಟ್ಟೆಯಲ್ಲಿ ಲೀಟರ್‌ಗೆ 3 ರೂಪಾಯಿ ಹಾಗೂ ಚಿಲ್ಲರೆ ಮಾರುಕಟ್ಟೆಯಲ್ಲಿ 5 ರಿಂದ 10 ರೂಪಾಯಿವರೆಗೆ ಏರಿಕೆ.
  • ಶ್ರೀಲಂಕಾ ಸೇರಿದಂತೆ ವಿದೇಶಗಳಿಗೆ ಅಕ್ಕಿ ರಫ್ತು ಹೆಚ್ಚಾಗಿರುವುದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಅಕ್ಕಿ ಕೊರತೆ ಮತ್ತು ಬೆಲೆ ಏರಿಕೆ ಭೀತಿ.

ಬೆಲೆ ಏರಿಕೆಯ ವಿವರ

ಹೋಲ್‌ಸೇಲ್ (ಸಗಟು) ಮಾರುಕಟ್ಟೆಯಲ್ಲಿ ಒಂದು ಅಕ್ಕಿ ಚೀಲದ ಬೆಲೆ 55 ರಿಂದ 60 ರೂಪಾಯಿಯಷ್ಟು ಏರಿಕೆಯಾಗುತ್ತಿದ್ದು, ರಿಟೇಲ್ (ಚಿಲ್ಲರೆ) ಮಾರುಕಟ್ಟೆಯಲ್ಲಿ ಒಂದು ಚೀಲದ ಮೇಲೆ 60 ರಿಂದ 80 ರೂಪಾಯಿಯಷ್ಟು ಹೊರೆ ಬೀಳಲಿದೆ. ಇಷ್ಟೇ ಅಲ್ಲದೆ, ಈ ತಿಂಗಳ ಅಂತ್ಯದ ವೇಳೆಗೆ ಅಕ್ಕಿ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದ್ದು, ಸಗಟು ದರದಲ್ಲಿ ಮತ್ತೆ 4 ರಿಂದ 5 ರೂಪಾಯಿ ಏರಿಕೆಯಾಗಲಿದೆ ಎಂದು ಬೆಂಗಳೂರಿನಲ್ಲಿ ವ್ಯಾಪಾರಿಗಳು ಅಂದಾಜಿಸಿದ್ದಾರೆ.

ಅಕ್ಕಿ ಬೆಲೆ ಏರಿಕೆಗೆ ಕಾರಣಗಳೇನು?

ಕೃಷಿ ಉತ್ಪನ್ನಗಳ ಕಚ್ಚಾ ವಸ್ತುಗಳ ಕೊರತೆಯು ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಇದರೊಂದಿಗೆ ಭಾರತದಿಂದ ಶ್ರೀಲಂಕಾಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ರಫ್ತು ಆಗುತ್ತಿದ್ದು, ಅಲ್ಲಿಂದ ಇತರ ದೇಶಗಳಿಗೆ ರಫ್ತಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಅಕ್ಕಿ ದಾಸ್ತಾನು ಕಡಿಮೆಯಾಗುತ್ತಿದ್ದು, ಬೆಂಗಳೂರಿನ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಅನಿವಾರ್ಯವಾಗಿದೆ.

ಇದನ್ನೂ ಓದಿ: ಯುದ್ಧದ ಎಫೆಕ್ಟ್: ಗ್ಯಾಸ್ ಅಭಾವದ ಬೆನ್ನಲ್ಲೇ ರೋಗಿಗಳಿಗೂ ಶಾಕ್, ಔಷಧ ಬೆಲೆ ಏರಿಕೆ

ಅಡುಗೆ ಎಣ್ಣೆಯ ಬೆಲೆಯೂ ಈಗಾಗಲೇ ಏರಿಕೆಯಾಗಿರುವುದರಿಂದ ಸಾಮಾನ್ಯ ಜನರ ಮಾಸಿಕ ಬಜೆಟ್ ಮೇಲೆ ಇದು ದೊಡ್ಡ ಪರಿಣಾಮ ಬೀರಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕಾಂಗ್ರೆಸ್​​ ಶಾಸಕ ಕೆ.ಎನ್​​. ರಾಜಣ್ಣ – Kannada News | K. N. Rajanna Says Narendra Modi Is the Most Popular Leader After Indira Gandhi

ತುಮಕೂರು, ಮೇ 14: ಇಂದಿರಾ ಗಾಂಧಿ ಬಿಟ್ಟರೆ ಮಾಸ್​​ ಲೀಡರ್​​ ನರೇಂದ್ರ ಮೋದಿಯೇ ಎಂದು ಮಾಜಿ ಸಚಿವ, ಕಾಂಗ್ರೆಸ್​​ ಶಾಸಕ ಕೆ.ಎನ್​​. ರಾಜಣ್ಣ ಹೇಳಿದ್ದಾರೆ. ನಾನು ಹೀಗೆ ಹೇಳಿರೋದನ್ನು ಕೇಳಿದರೆ ನಮ್ಮಲ್ಲಿ ಕೆಲವರ ಕಣ್ಣು ಕೆಂಪಾಗುತ್ತೆ. ನಾನೇನು ಅವರನ್ನು ಹೊಗಳುತ್ತಿಲ್ಲ ಇರುವ ವಾಸ್ತವಾಂಶವನ್ನು ಹೇಳುತ್ತಿದ್ದೇನೆ ಎಂದವರು ತಿಳಿಸಿದ್ದಾರೆ. ಇದೇ ವೇಳೆ ಕರ್ನಾಟಕದಲ್ಲಿ ಸಿಎಂ ಕುರ್ಚಿ ಕಿತ್ತಾಟ ಬಗ್ಗೆ ಮೋದಿ ಹೇಳಿಕೆ ಸಂಬಂಧ ಕಿಡಿ ಕಾರಿರುವ ರಾಜಣ್ಣ, ಸಿಎಂ ಕುರ್ಚಿ ಅಲುಗಾಡುತ್ತಿದೆಯೋ ಅಥವಾ ಇಲ್ಲವೋ ಅದು ನಮ್ಮ ಪಕ್ಷದ ವಿಚಾರ. ಸಿಎಂ ಸ್ಥಾನಕ್ಕೂ ಪ್ರಧಾನಿ ಮೋದಿಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪತ್ನಿ ನಿಧನ, ಬ್ಯಾಂಕ್ ಖಾತೆ ಫ್ರೀಝ್: ಸಂಕಷ್ಟಕ್ಕೆ ಸಿಲುಕಿದ ಮಾಜಿ ಕ್ರಿಕೆಟಿಗ – Kannada News | Bank Freezes Ex Cricketer Coutinho’s Account Post Wife’s Death

ಖ್ಯಾತ ಕ್ರೀಡಾ ಅಂಕಣಕಾರ ಹಾಗೂ ಕ್ರಿಕೆಟ್ ತರಬೇತುದಾರ ಆಸ್ಟಿನ್ ಕೌಟಿನ್ಹೋ ಅವರ ಜಂಟಿ ಬ್ಯಾಂಕ್ ಖಾತೆಯನ್ನು ಇಂಡಿಯನ್ ಬ್ಯಾಂಕ್ ನಿಯಮಬಾಹಿರವಾಗಿ ಫ್ರೀಝ್ (ಸ್ಥಗಿತ) ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಪತ್ನಿಯ ನಿಧನದ ನಂತರದ ಕಠಿಣ ಪರಿಸ್ಥಿತಿಯಲ್ಲಿ, ಬ್ಯಾಂಕ್ ಸಿಬ್ಬಂದಿಯ ಈ ಅಮಾನವೀಯ ಧೋರಣೆ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳ ಸೇವಾ ನ್ಯೂನತೆಯ ವಿರುದ್ಧ ಕೌಟಿನ್ಹೋ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ತಮ್ಮ ದಿವಂಗತ ಪತ್ನಿಯ ಪಿಂಚಣಿ ಬಾಕಿ ಇದೆ ಎಂಬ ನೆಪವೊಡ್ಡಿ, ಮುಂಬೈನ ಚೆಂಬೂರು ಶಾಖೆಯ ಇಂಡಿಯನ್ ಬ್ಯಾಂಕ್ ಅಧಿಕಾರಿಗಳು ಇವರ ಜಂಟಿ ಉಳಿತಾಯ ಖಾತೆಯನ್ನು ಕಳೆದ ಎರಡು ತಿಂಗಳಿನಿಂದ ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದಾರೆ.

ರಾಜ್ಯ ಮತ್ತು ಐಪಿಎಲ್ ಮಟ್ಟದ ಯುವ ಕ್ರೀಡಾಪಟುಗಳಿಗೆ ಆರ್ಥಿಕ ನೆರವು ಹಾಗೂ ಉಚಿತ ಮಾರ್ಗದರ್ಶನ ನೀಡುವ ಉದಾತ್ತ ಉದ್ದೇಶಕ್ಕಾಗಿ ತಮಗೆ ಈ ಹಣದ ತುರ್ತು ಅಗತ್ಯವಿದೆ ಎಂದು ಕೌಟಿನ್ಹೋ ಸ್ಪಷ್ಟಪಡಿಸಿದ್ದಾರೆ.

ಆದಾಗ್ಯೂ, ಅಗತ್ಯ ದಾಖಲೆಗಳನ್ನು ಸಲ್ಲಿಸಿದ ಹೊರತಾಗಿಯೂ ಒಬ್ಬ ಹಿರಿಯ ನಾಗರಿಕರನ್ನು ಬ್ಯಾಂಕ್ ನಡೆಸಿಕೊಂಡ ರೀತಿ ಸಾರ್ವಜನಿಕ ವಲಯದ ಬ್ಯಾಂಕಿಂಗ್ ವ್ಯವಸ್ಥೆಯ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಬ್ಯಾಂಕ್ ಪ್ರತಿಕ್ರಿಯೆ:

ಈ ವಿಷಯ ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ನಲ್ಲಿ ಚರ್ಚೆಯಾಗುತ್ತಿದ್ದಂತೆ, ಇಂಡಿಯನ್ ಬ್ಯಾಂಕ್ ಗ್ರಾಹಕರಿಗೆ ಆದ ಅನಾನುಕೂಲತೆಗೆ ಕ್ಷಮೆಯಾಚಿಸಿದೆ.

ಸಮಸ್ಯೆಯನ್ನು ಪರಿಹರಿಸಲು ತಮ್ಮ ಸಂಪರ್ಕ ವಿವರಗಳನ್ನು ನೇರ ಸಂದೇಶದ (DM) ಮೂಲಕ ಕಳುಹಿಸುವಂತೆ ಬ್ಯಾಂಕ್ ಕೇಳಿಕೊಂಡಿದೆ ಮತ್ತು ಗೌಪ್ಯತೆಯ ಕಾರಣಗಳಿಗಾಗಿ ಸಾರ್ವಜನಿಕ ಟ್ವೀಟ್ ಅನ್ನು ಡಿಲೀಟ್ ಮಾಡುವಂತೆ ಆಸ್ಟಿನ್ ಕೌಟಿನ್ಹೋ ಅವರಲ್ಲಿ ಮನವಿ ಮಾಡಿದ್ದಾರೆ.

 ಸಾರ್ವಜನಿಕರ ಬೆಂಬಲ:

ಈ ವಿಷಯಕ್ಕೆ ಸಂಬಂಧಿಸಿದಂತೆ, ಸಂಸದ ಕಾರ್ತಿ ಪಿ ಚಿದಂಬರಂ ಸೇರಿದಂತೆ ಹಲವು ಪ್ರಮುಖರು ಕೌಟಿನ್ಹೋ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಭಾರತದಲ್ಲಿ ಸಾಮಾನ್ಯ ಜನರು ಬ್ಯಾಂಕಿಂಗ್ ಪ್ರಕ್ರಿಯೆಗಳಲ್ಲಿ ಎದುರಿಸುತ್ತಿರುವ ಕಠಿಣ ಸವಾಲುಗಳನ್ನು ಈ ಘಟನೆ ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

ಬ್ಯಾಂಕಿಂಗ್ ನಿಯಮಗಳು: ಗ್ರಾಹಕರ ನಿಧನದ ನಂತರ ಏನಾಗುತ್ತೆ?

  • ಖಾತೆ ಫ್ರೀಝ್: ಸಾಮಾನ್ಯವಾಗಿ ಯಾವುದೇ ಗ್ರಾಹಕರು ಮೃತಪಟ್ಟಾಗ, ಅವರ ಖಾತೆಯ ಹಣದ ದುರುಪಯೋಗ ತಡೆಯಲು ಬ್ಯಾಂಕ್‌ಗಳು ಕಾನೂನು ಪ್ರಕ್ರಿಯೆ ಮುಗಿಯುವವರೆಗೆ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತವೆ.
  • ಜಂಟಿ ಖಾತೆ: ಒಂದು ವೇಳೆ ಅದು ‘ಐದರ್ ಆರ್ ಸರ್ವೈವರ್’ (Either or Survivor) ಜಂಟಿ ಖಾತೆಯಾಗಿದ್ದರೆ, ಜೀವಂತವಿರುವ ಸಂಗಾತಿಯು ಖಾತೆಯನ್ನು ಮುಂದುವರಿಸಬಹುದು. ಆದರೆ ಮೃತರ ಹೆಸರನ್ನು ತೆಗೆದುಹಾಕಬೇಕಾಗುತ್ತದೆ.
  • ಅಗತ್ಯ ದಾಖಲೆಗಳು: ಮೃತರ ಖಾತೆಯಿಂದ ಹಣವನ್ನು ಹಿಂಪಡೆಯಲು ಅಥವಾ ಕ್ಲೈಮ್ ಮಾಡಲು ಮರಣ ಪ್ರಮಾಣಪತ್ರ, ಉತ್ತರಾಧಿಕಾರಿಗಳ ಗುರುತಿನ ಚೀಟಿ ಮತ್ತು ನಿಗದಿತ ಕ್ಲೈಮ್ ಫಾರ್ಮ್ ಅನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.

ಆರ್​ಸಿಬಿ ನಿಯಮ ಏನು ಹೇಳುತ್ತೆ?

ಜಂಟಿ ಬ್ಯಾಂಕ್ ಖಾತೆದಾರರಲ್ಲಿ ಒಬ್ಬರು ಮರಣ ಹೊಂದಿದಾಗ ಅನುಸರಿಸಬೇಕಾದ ಪ್ರಕ್ರಿಯೆಗಳ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಅತ್ಯಂತ ಸ್ಪಷ್ಟ ಹಾಗೂ ಗ್ರಾಹಕ ಸ್ನೇಹಿ ಮಾರ್ಗಸೂಚಿಗಳನ್ನು ಹೊರಡಿಸಿದೆ.  ಆಸ್ಟಿನ್ ಕೌಟಿನ್ಹೋ ಅವರ ಪ್ರಕರಣದ ಹಿನ್ನೆಲೆಯಲ್ಲಿ ಆರ್‌ಬಿಐ ನಿಯಮಗಳು ಏನು ಹೇಳುತ್ತವೆ ಎಂಬ ವಿವರ ಇಲ್ಲಿದೆ…

  1. ಖಾತಾ ನಿಯಮ: ಜಂಟಿ ಖಾತೆಯು ‘ಐದರ್ ಆರ್ ಸರ್ವೈವರ್ರ್’ (Either or Survivor) ಅಥವಾ ‘ಫಾರ್ಮರ್ ಆರ್ ಸರ್ವೈವರ್’ ನಿಯಮದ ಅಡಿಯಲ್ಲಿದ್ದರೆ, ಒಬ್ಬ ಖಾತೆದಾರರು ಮೃತಪಟ್ಟ ತಕ್ಷಣ ಉಳಿದ ಖಾತೆದಾರನಿಗೆ ಆ ಖಾತೆಯನ್ನು ನಿರ್ವಹಿಸಲು ಬ್ಯಾಂಕ್‌ಗಳು ಅಬಾಧಿತ ಪ್ರವೇಶ (Unimpeded Access) ನೀಡಬೇಕು.
  2. ಖಾತೆ ಫ್ರೀಝ್ ಮಾಡುವಂತಿಲ್ಲ: ಆರ್‌ಬಿಐ ನಿಯಮಗಳ ಪ್ರಕಾರ, ಇಂತಹ ಜಂಟಿ ಖಾತೆಗಳನ್ನು ಬ್ಯಾಂಕ್‌ಗಳು ಅನಗತ್ಯವಾಗಿ ಫ್ರೀಝ್ (ಸ್ಥಗಿತ) ಮಾಡುವಂತಿಲ್ಲ. ಬದುಕುಳಿದಿರುವ ವ್ಯಕ್ತಿಗೆ ಹಣವನ್ನು ಹಿಂಪಡೆಯಲು ಪೂರ್ಣ ಹಕ್ಕಿರುತ್ತದೆ.
  3. ಸರಳ ಪ್ರಕ್ರಿಯೆ: ಮೃತರ ಖಾತೆಯಲ್ಲಿರುವ ಹಣವನ್ನು ಬದುಕುಳಿದಿರುವವರಿಗೆ ವರ್ಗಾಯಿಸಲು ಬ್ಯಾಂಕ್‌ಗಳು ಯಾವುದೇ ತಕರಾರು ಮಾಡುವಂತಿಲ್ಲ.

ಯಾವ ದಾಖಲೆಗಳು ಬೇಕಾಗಿಲ್ಲ?

ಇಂತಹ ಸಂದರ್ಭಗಳಲ್ಲಿ ಬ್ಯಾಂಕ್‌ಗಳು ಉತ್ತರಾಧಿಕಾರ ಪ್ರಮಾಣಪತ್ರ (Succession Certificate), ಇಚ್ಛಾಪತ್ರ (Probate of Will), ಅಥವಾ ಯಾವುದೇ ರೀತಿಯ ಬಾಂಡ್ ಅಥವಾ ಶ್ಯೂರಿಟಿಯನ್ನು ಕಡ್ಡಾಯವಾಗಿ ಕೇಳುವಂತಿಲ್ಲ.

ಯಾವ ದಾಖಲೆಗಳು ಸಾಕು?

ಕೇವಲ ಮರಣ ಪ್ರಮಾಣಪತ್ರ, ನಿಗದಿತ ಕ್ಲೈಮ್ ಫಾರ್ಮ್ ಮತ್ತು ಬದುಕುಳಿದಿರುವ ವ್ಯಕ್ತಿಯ ಅಧಿಕೃತ ಗುರುತಿನ ಚೀಟಿ (OVD/KYC) ಸಲ್ಲಿಸಿದರೆ ಸಾಕು. ಎಲ್ಲಾ ಅಗತ್ಯ ದಾಖಲೆಗಳನ್ನು ಸಲ್ಲಿಸಿದ 15 ದಿನಗಳ ಒಳಗಾಗಿ ಬ್ಯಾಂಕ್‌ಗಳು ಇಂತಹ ಕ್ಲೈಮ್‌ಗಳನ್ನು ಇತ್ಯರ್ಥಪಡಿಸಬೇಕು.

ವಿನಾಕಾರಣ ಎರಡು ತಿಂಗಳ ಕಾಲ ಜಂಟಿ ಖಾತೆಯನ್ನು ಫ್ರೀಜ್ ಮಾಡುವುದು ಮತ್ತು ಹಿರಿಯ ನಾಗರಿಕರಿಗೆ ತೊಂದರೆ ಕೊಡುವುದು ಆರ್‌ಬಿಐನ ‘ಗ್ರಾಹಕ ಸೇವಾ ನೀತಿ’ಯ ಸ್ಪಷ್ಟ ಉಲ್ಲಂಘನೆಯಾಗಿದೆ.

ಗ್ರಾಹಕರು ಏನು ಮಾಡಬಹುದು?

ಇಂತಹ ಸಂದರ್ಭಗಳಲ್ಲಿ ಬ್ಯಾಂಕ್ ಅಧಿಕಾರಿಗಳು ಸ್ಪಂದಿಸದಿದ್ದರೆ ಗ್ರಾಹಕರು ಈ ಕೆಳಗಿನ ಕ್ರಮ ಕೈಗೊಳ್ಳಬಹುದು…

  • ಲಿಖಿತ ದೂರು: ಮೊದಲು ಬ್ಯಾಂಕಿನ ವ್ಯವಸ್ಥಾಪಕರಿಗೆ (ಬ್ಯಾಕ್ ಮ್ಯಾನೇಜರ್) ಆರ್‌ಬಿಐ ನಿಯಮಾವಳಿಗಳನ್ನು ಉಲ್ಲೇಖಿಸಿ ಲಿಖಿತ ದೂರು ನೀಡಬೇಕು.
  • ಬ್ಯಾಂಕಿಂಗ್ ಒಂಬುಡ್ಸ್‌ಮನ್: ಬ್ಯಾಂಕ್ 30 ದಿನಗಳ ಒಳಗಾಗಿ ಸೂಕ್ತ ಪರಿಹಾರ ನೀಡದಿದ್ದರೆ, ಗ್ರಾಹಕರು ನೇರವಾಗಿ ಆರ್‌ಬಿಐ ಬ್ಯಾಂಕಿಂಗ್ ಒಂಬುಡ್ಸ್‌ಮನ್ ಗೆ ಆನ್‌ಲೈನ್ ಮೂಲಕ ದೂರು ಸಲ್ಲಿಸಿ ನ್ಯಾಯ ಪಡೆಯಬಹುದು.

ಇದನ್ನೂ ಓದಿ: RCB ಗೆಲುವಿನಿಂದ ಸಂಕಷ್ಟಕ್ಕೆ ಸಿಲುಕಿದ 6 ತಂಡಗಳು!

ಒಟ್ಟಾರೆಯಾಗಿ ಹೇಳುವುದಾದರೆ, ದೇಶದ ಹಿರಿಯ ನಾಗರಿಕರು ಮತ್ತು ಪಿಂಚಣಿದಾರರ ಆರ್ಥಿಕ ಹಿತರಕ್ಷಣೆಗೆ ಆರ್‌ಬಿಐ ಅತ್ಯಂತ ಸ್ಪಷ್ಟ ಮತ್ತು ಜನಸ್ನೇಹಿ ನಿಯಮಗಳನ್ನು ರೂಪಿಸಿದೆ. ಆದರೆ ತಳಮಟ್ಟದ ಬ್ಯಾಂಕ್ ಶಾಖೆಗಳು ಈ ನಿಯಮಗಳನ್ನು ಗಾಳಿಗೆ ತೂರಿ, ಜಂಟಿ ಖಾತೆಗಳನ್ನು ಅನಗತ್ಯವಾಗಿ ಫ್ರೀಝ್ ಮಾಡುವ ಮೂಲಕ ಗ್ರಾಹಕರಿಗೆ ಮಾನಸಿಕ ಹಾಗೂ ಆರ್ಥಿಕ ಕಿರುಕುಳ ನೀಡುತ್ತಿರುವುದು ಖಂಡನೀಯ. ಇಂತಹ ಸನ್ನಿವೇಶಗಳಲ್ಲಿ ಗ್ರಾಹಕರು ಬ್ಯಾಂಕುಗಳ ವಿಳಂಬ ನೀತಿಗೆ ಮಣಿಯದೆ, ಆರ್‌ಬಿಐ ಒಂಬುಡ್ಸ್‌ಮನ್ ವೇದಿಕೆಯನ್ನು ಬಳಸಿಕೊಂಡು ದಂಡದ ಸಹಿತ ಪರಿಹಾರ ಪಡೆಯಲು ಮುಂದಾಗಬೇಕು. ಬ್ಯಾಂಕಿಂಗ್ ವ್ಯವಸ್ಥೆಯು ಕೇವಲ ಲಾಭದ ಕೇಂದ್ರವಾಗದೆ, ಸಾರ್ವಜನಿಕರ ನಂಬಿಕೆಗೆ ಅರ್ಹವಾದ ಮತ್ತು ಮಾನವೀಯತೆಯುಳ್ಳ ಸೇವೆಯನ್ನು ಒದಗಿಸಿದಾಗ ಮಾತ್ರ ಇಂತಹ ವ್ಯವಸ್ಥಿತ ದೋಷಗಳಿಗೆ ಶಾಶ್ವತ ಮುಕ್ತಿ ಸಿಗಲು ಸಾಧ್ಯ.

Source link

ಬೆಂಗಳೂರು-ಮುಂಬೈ ಪ್ರಯಾಣಿಕರಿಗೆ ಗುಡ್ ನ್ಯೂಸ್: ಜೂನ್‌ನಿಂದ ಓಡಲಿದೆ ಸೂಪರ್ ಫಾಸ್ಟ್ ರೈಲು; ಬೆಳಗಾವಿ, ಹುಬ್ಬಳ್ಳಿ ಜನರಿಗೂ ಲಾಭ!

ಬೆಂಗಳೂರು, ಮೇ.14 : ಕರ್ನಾಟಕದ ರಾಜಧಾನಿ ಬೆಂಗಳೂರು ಮತ್ತು ದೇಶದ ವಾಣಿಜ್ಯ ನಗರಿ ಮುಂಬೈ ನಡುವೆ ವೇಗದ ರೈಲು ಸಂಪರ್ಕ ಕಲ್ಪಿಸುವ ದಶಕಗಳ ಬೇಡಿಕೆ ಈಗ ಈಡೇರುವ ಸಮಯ ಬಂದಿದೆ. ಈ ವರ್ಷದ ಜೂನ್ ಅಂತ್ಯದೊಳಗೆ ಈ ಮಾರ್ಗದಲ್ಲಿ ಹೊಸ ಸೂಪರ್ ಫಾಸ್ಟ್ ರೈಲು ಸಂಚಾರ ಆರಂಭಿಸಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.

ದೆಹಲಿಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿದ ಪ್ರಲ್ಹಾದ್ ಜೋಶಿ ಅವರು, ಕರ್ನಾಟಕದ ರೈಲ್ವೆ ಯೋಜನೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಈ ವೇಳೆ, ಬೆಂಗಳೂರು-ಮುಂಬೈ ಸೂಪರ್ ಫಾಸ್ಟ್ ರೈಲಿಗೆ ಸಚಿವರು ಹಸಿರು ನಿಶಾನೆ ತೋರಿಸಿದ್ದು, ಮುಂದಿನ ಕೆಲವು ವಾರಗಳಲ್ಲಿ ಇದರ ವೇಳಾಪಟ್ಟಿ ಬಿಡುಗಡೆಯಾಗಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.

ಸಂಚರಿಸುವ ಪ್ರಮುಖ ನಗರಗಳು:

ಈ ಹೊಸ ರೈಲು ಮಧ್ಯ ಮತ್ತು ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳ ಮೂಲಕ ಹಾದು ಹೋಗಲಿದ್ದು, ಈ ಭಾಗದ ಪ್ರಯಾಣಿಕರಿಗೆ ಮುಂಬೈ ತಲುಪಲು ಸುಲಭವಾಗಲಿದೆ. ಪ್ರಮುಖ ನಿಲ್ದಾಣಗಳು ಇಲ್ಲಿವೆ:

ತುಮಕೂರು

ದಾವಣಗೆರೆ

ಹಾವೇರಿ

ಹುಬ್ಬಳ್ಳಿ-ಧಾರವಾಡ

ಬೆಳಗಾವಿ

ಇದನ್ನೂ ಓದಿ: ಇಂದಿನ ಹವಾಮಾನ ವರದಿ: ವರುಣನ ಆಗಮನಕ್ಕೆ ಸಜ್ಜಾದ ಬೆಂಗಳೂರು; ನಿಮ್ಮ ಜಿಲ್ಲೆಯ ಸ್ಥಿತಿ ಹೇಗಿದೆ ನೋಡಿ!

ಪ್ರಸ್ತುತ ಬೆಂಗಳೂರು ಮತ್ತು ಮುಂಬೈ ನಡುವೆ ಪ್ರಯಾಣಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುವ ಅಥವಾ ವಿಮಾನ ಯಾನವನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಈ ಸೂಪರ್ ಫಾಸ್ಟ್ ರೈಲು ಪ್ರಯಾಣದ ಸಮಯವನ್ನು ಗಣನೀಯವಾಗಿ ಉಳಿಸಲಿದ್ದು, ಭವಿಷ್ಯದಲ್ಲಿ ಇದನ್ನು ‘ವಂದೇ ಭಾರತ್ ಸ್ಲೀಪರ್’ ರೈಲನ್ನಾಗಿ ಮೇಲ್ದರ್ಜೆಗೇರಿಸುವ ಯೋಜನೆಯೂ ಇದೆ ಎಂದು ಜೋಶಿ ತಿಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನನ್ನನ್ನು 25 ಬಾರಿ ಬೆತ್ತಲು ಮಾಡಿದರು, ಖಾಸಗಿ ಭಾಗ ಎತ್ತಿ ನೋಡಿದರು; ನಟಿ ಕಣ್ಣೀರು – Kannada News | Sandeepa Virk Exposes Jail Horror: 25 Nude Inspections and Humiliation of Women

ನಟಿ ಮತ್ತು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಸಂದೀಪಾ ವಿರ್ಕ್ ಪ್ರಸ್ತುತ ತಮ್ಮ ವೃತ್ತಿಜೀವನಕ್ಕಿಂತ ವೈಯಕ್ತಿಕ ಕಾರಣಗಳಿಗಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ . 6 ಕೋಟಿ ರೂ.ಗಳ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂತು. ಅವರು ದೆಹಲಿಯ ತಿಹಾರ್ ಜೈಲಿನಲ್ಲಿ ನಾಲ್ಕು ತಿಂಗಳುಗಳನ್ನು ಕಳೆಯಬೇಕಾಯಿತು. ಈಗ ಅವರು ಜಾಮೀನು ಪಡೆದು ಹೊರಬಂದಿದ್ದಾರೆ. ಹೊರಬಂದ ನಂತರ, ಅವರು ಜೈಲಿನಲ್ಲಿ ತಮ್ಮ ನೋವಿನ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ. ಅವರು ತುಂಬಾ ಆಘಾತಕಾರಿ ವಿಷಯಗಳನ್ನು ಹೇಳಿದ್ದಾರೆ.

ಸಂದೀಪಾ ವಿರ್ಕ್ ತುಂಬಾ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರು ಈ ವಿಷಯಗಳನ್ನು ಪಾಡ್‌ಕ್ಯಾಸ್ಟ್‌ನಲ್ಲಿ ವಿವರಿಸಿದ್ದಾರೆ. ‘ಜೈಲಿನಲ್ಲಿ ನನ್ನನ್ನು ಪದೇ ಪದೇ ಬೆತ್ತಲೆಗೊಳಿಸಲಾಯಿತು. ನ್ಯಾಯಾಲಯಕ್ಕೆ ಹಾಜರಾದ ನಂತರ, ಬಸ್ ಹತ್ತುವ ಮೊದಲು ಎಲ್ಲರ ಮುಂದೆ ಒಮ್ಮೆ ನನ್ನನ್ನು ಬೆತ್ತಲೆಗೊಳಿಸಲಾಗುತ್ತದೆ. ಯೋಚಿಸಿ. ನನ್ನನ್ನು ಮೂರು ಬಾರಿ ಬೆತ್ತಲೆಗೊಳಿಸಲಾಯಿತು. ಜನರು ನಾನು ಜೈಲಿಗೆ ಮಾತ್ರ ಹೋಗಿದ್ದೇನೆ ಎಂದು ಭಾವಿಸುತ್ತಾರೆ. ಆದರೆ ಹಾಗಲ್ಲ. ಅದರ ನಂತರ ಏನಾಯಿತು ಎಂದು ನನಗೆ ತಿಳಿದಿದೆ. ಆದರೆ ಕಳೆದ ನಾಲ್ಕು ತಿಂಗಳಲ್ಲಿ ತಪಾಸಣೆಯ ಹೆಸರಿನಲ್ಲಿ ನನ್ನನ್ನು 25-30 ಬಾರಿ ಬೆತ್ತಲೆಗೊಳಿಸಲಾಗಿದೆ’ ಎಂದು ಹೇಳುತ್ತಾ, ಸಂದೀಪಾ ಕಣ್ಣೀರು ಹಾಕಿದರು.

‘ಜೈಲಿಗೆ ಹೋಗುವ ಪ್ರಕ್ರಿಯೆಯು ಎಷ್ಟು ಭಯಾನಕ ಮತ್ತು ಅವಮಾನಕರವಾಗಿರುತ್ತದೆಯೆಂದರೆ, ಒಬ್ಬ ವ್ಯಕ್ತಿಯು ತನ್ನನ್ನು ತಾನು ಮರೆತುಬಿಡುತ್ತಾನೆ. ನಮ್ಮ ಸಮಾಜ ಮತ್ತು ವ್ಯವಸ್ಥೆಯಲ್ಲಿರುವ ದೊಡ್ಡ ನ್ಯೂನತೆಯೆಂದರೆ, ನೀವು ತಪ್ಪಿತಸ್ಥರೆಂದು ಸಾಬೀತಾಗುವ ಮೊದಲೇ ನಿಮ್ಮನ್ನು ಆರೋಪಿ ಎಂದು ಪರಿಗಣಿಸಲಾಗುತ್ತದೆ. ಜೈಲಿಗೆ ಪ್ರವೇಶಿಸುವ ಸಮಯದಲ್ಲಿ ನಡೆಯುವ ತಪಾಸಣೆ ಮಹಿಳೆಯ ಸ್ವಾಭಿಮಾನವನ್ನು ನಾಶಪಡಿಸುತ್ತದೆ. ಸ್ತನಗಳನ್ನು ಮೇಲಕ್ಕೆತ್ತಿ ಎಲ್ಲಾ ಕಡೆಯಿಂದ ಪರಿಶೀಲಿಸಲಾಗುತ್ತದೆ’ ಎಂದು ಅವರು ಹೇಳಿದರು.

‘ಜೈಲಿನಲ್ಲಿ ಭದ್ರತೆಗಾಗಿ ನಿಯೋಜಿಸಲಾದ ಮಹಿಳಾ ಭದ್ರತಾ ಸಿಬ್ಬಂದಿಗಳು ತುಂಬಾ ಕೆಟ್ಟವರಾಗಿದ್ದಾರೆ. ಜೈಲಿನಲ್ಲಿ ಮಹಿಳೆಯರ ತಪಾಸಣೆ ತುಂಬಾ ನಾಚಿಕೆಗೇಡಿನ ಸಂಗತಿ. ಸ್ತನ ಗಾತ್ರ ದೊಡ್ಡದಾಗಿರುವ ಮಹಿಳೆಯರ ಸ್ತನಗಳನ್ನು ಎತ್ತಿ ಪರಿಶೀಲಿಸಲಾಗುತ್ತದೆ. ಅವರ ಅಡಿಯಲ್ಲಿ ಏನಾದರೂ ಅಡಗಿದೆಯೇ ಎಂದು ಪರಿಶೀಲಿಸಲು ಇದನ್ನು ಮಾಡಲಾಗುತ್ತದೆ. ಇದೆಲ್ಲವೂ ಅಸಹ್ಯಕರ ಮತ್ತು ಅಸಂವೇದನಾಶೀಲವಾಗಿದೆ’ ಎಂದು ಅವರು ಹೇಳಿದರು.

‘ಅತ್ಯಂತ ಆಘಾತಕಾರಿ ವಿಷಯವೆಂದರೆ, ಮಹಿಳಾ ಭದ್ರತಾ ಸಿಬ್ಬಂದಿ ಒಮ್ಮೆ ತಪಾಸಣೆ ಮಾಡಿದ ಮೇಲೆಯೂ ಇದು ಮುಗಿಯುವುದಿಲ್ಲ. ಬೇರೆ ಬೇರೆ ಕರ್ತವ್ಯದ ಭದ್ರತಾ ಸಿಬ್ಬಂದಿಯ ಮುಂದೆ ನೀವು ಪದೇ ಪದೇ ಬೆತ್ತಲೆಯಾಗಬೇಕಾಗುತ್ತದೆ. ನ್ಯಾಯಾಲಯದಿಂದ ಜೈಲಿಗೆ ಬಂದಾಗಲೂ ಮತ್ತೊಮ್ಮೆ ವಿವಸ್ತ್ರಗೊಳಿಸಿ ತಪಾಸಣೆ ಮಾಡುತ್ತಾರೆ. ಹೀಗೆ ದಿನಕ್ಕೆ ಮೂರು ಬಾರಿ ಬೆತ್ತಲೆಯಾಗಬೇಕಾದ ಪರಿಸ್ಥಿತಿ ಇರುತ್ತದೆ. ಇಷ್ಟೇ ಅಲ್ಲದೆ, ಮಹಿಳಾ ಅಪರಾಧಿಗಳನ್ನು ಟಾರ್ಚ್ ಬೆಳಕಿನ ಮೂಲಕವೂ ತಪಾಸಣೆ ಮಾಡಲಾಗುತ್ತದೆ’ ಎಂದು ಅವರು ನೋವಿನಿಂದ ಹೇಳಿದರು.

ಇದನ್ನೂ ಓದಿ: ‘ನಾನು ಸಾವಿಗಾಗಿ ಕೋರಿದೆ’; ಡಾರ್ಲಿಂಗ್ ಕೃಷ್ಣ ಸಿನಿಮಾ ನಟಿಯ ತಿಹಾರ್ ಜೈಲು ಅನುಭವ

ಸಂದೀಪಾ ಮಾಡೆಲಿಂಗ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ, ಅವರು ಪಂಜಾಬಿ ಚಿತ್ರರಂಗದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಕಾಸ್ಟಿಂಗ್ ಕೌಚ್ ಎದುರಿಸಬೇಕಾಗಿ ಬಂದ ಕಾರಣ ಅವರು ಚಿತ್ರೀಕರಣದ ಸಮಯದಲ್ಲಿ ಅನೇಕ ಚಿತ್ರಗಳನ್ನು ತೊರೆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version