Gold Rate: ಚಿನ್ನದ ಬೆಲೆ ಗ್ರಾಮ್​ಗೆ 510 ರೂ ಇಳಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 14th May 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಮೇ 14: ನಿನ್ನೆ ಚಿನ್ನ, ಬೆಳ್ಳಿ ಮೇಲೆ ಕೇಂದ್ರದ ಆಮದು ಸುಂಕ ಏರಿಕೆಯಿಂದ ಶೇ. 6ರಿಂದ 8ರಷ್ಟು ಬೆಲೆ ಹೆಚ್ಚಳ ಆಗಿತ್ತು. ಅದರ ಬೆನ್ನಲ್ಲೇ ಇವೆರಡು ಲೋಹಗಳ ಬೆಲೆ ಸುಮಾರಉ 300-400 ರೂನಷ್ಟು ಇಳಿಕೆ ಆಗಿದೆ. ಹೂಡಿಕೆದಾರರು ಲಾಭಕ್ಕಾಗಿ ಚಿನ್ನ (Gold) ಮಾರಿರುವುದು ಇದಕ್ಕೆ ಕಾರಣವಿರಬಹುದು. ಎಂಸಿಎಕ್ಸ್​ನಲ್ಲಿ ಬೆಲೆ ತಗ್ಗಿದೆ. ಬೆಳ್ಳಿ ಬೆಲೆಯೂ 10 ರೂ ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,48,800 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,62,330 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 30,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,48,800 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 30,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 32,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮೇ 14ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,233 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,880 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,592 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 300 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,789 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,880 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 300 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,880 ರೂ
  • ಚೆನ್ನೈ: 15,001 ರೂ
  • ಮುಂಬೈ: 14,880 ರೂ
  • ದೆಹಲಿ: 14,895 ರೂ
  • ಕೋಲ್ಕತಾ: 14,880 ರೂ
  • ಕೇರಳ: 14,880 ರೂ
  • ಅಹ್ಮದಾಬಾದ್: 14,885 ರೂ
  • ಜೈಪುರ್: 14,895 ರೂ
  • ಲಕ್ನೋ: 14,895 ರೂ
  • ಭುವನೇಶ್ವರ್: 14,880 ರೂ

ಇದನ್ನೂ ಓದಿ: ಆಮದು ಮಾಡಿಕೊಳ್ಳದೆ ಚಿನ್ನದ ಬೇಡಿಕೆ ಈಡೇರಿಸುವ ಉಪಾಯಗಳನ್ನು ಮುಂದಿಟ್ಟ ಆಭರಣ ಉದ್ಯಮಿಗಳು

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 569 ರಿಂಗಿಟ್ (13,866 ರುಪಾಯಿ)
  • ದುಬೈ: 522 ಡಿರಾಮ್ (13,612 ರುಪಾಯಿ)
  • ಅಮೆರಿಕ: 146.50 ಡಾಲರ್ (14,033 ರುಪಾಯಿ)
  • ಸಿಂಗಾಪುರ: 186.10 ಸಿಂಗಾಪುರ್ ಡಾಲರ್ (14,004 ರುಪಾಯಿ)
  • ಕತಾರ್: 520 ಕತಾರಿ ರಿಯಾಲ್ (13,665 ರೂ)
  • ಸೌದಿ ಅರೇಬಿಯಾ: 531 ಸೌದಿ ರಿಯಾಲ್ (13,557 ರುಪಾಯಿ)
  • ಓಮನ್: 55.50 ಒಮಾನಿ ರಿಯಾಲ್ (13,809 ರುಪಾಯಿ)
  • ಕುವೇತ್: 43 ಕುವೇತಿ ದಿನಾರ್ (13,446 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 300 ರೂ
  • ಚೆನ್ನೈ: 320 ರೂ
  • ಮುಂಬೈ: 300 ರೂ
  • ದೆಹಲಿ: 300 ರೂ
  • ಕೋಲ್ಕತಾ: 300 ರೂ
  • ಕೇರಳ: 320 ರೂ
  • ಅಹ್ಮದಾಬಾದ್: 300 ರೂ
  • ಜೈಪುರ್: 300 ರೂ
  • ಲಕ್ನೋ: 300 ರೂ
  • ಭುವನೇಶ್ವರ್: 320 ರೂ
  • ಪುಣೆ: 300

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 11:09 am, Thu, 14 May 26

Source link

ಕಾಡಿನ ರಾಜ ‘ಸಿಂಹ’ ಕಣ್ರೋ… KKR ಟ್ರೋಲ್​ಗೆ RCB ತಿರುಗೇಟು! – Kannada News | Ipl 2026: rcb reply back to kkrs troll

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ನಡುವಿನ ರೈವಲ್ರಿ ಅತ್ಯಂತ ರೋಚಕವಾದದ್ದು. ಕೇವಲ ಮೈದಾನದಲ್ಲಷ್ಟೇ ಅಲ್ಲದೆ, ಸೋಶಿಯಲ್ ಮೀಡಿಯಾದಲ್ಲೂ ಈ ಎರಡು ತಂಡಗಳ ಅಭಿಮಾನಿಗಳು ಹಾಗೂ ಫ್ರಾಂಚೈಸಿಗಳ ನಡುವೆ ಸದಾ ಯುದ್ಧ ನಡೆಯುತ್ತಲೇ ಇರುತ್ತದೆ. ಅದು ಈ ಬಾರಿ ಕೂಡ ನಡೆದಿದೆ. ಐಪಿಎಲ್​ನ 57ನೇ ಪಂದ್ಯಕ್ಕೂ ಮುನ್ನ ಕೊಲ್ಕತ್ತಾ ನೈಟ್ ರೈಡರ್ಸ್​ ತಂಡವು ಆರ್‌ಸಿಬಿಯನ್ನು ಕಾಲೆಳೆಯಲು ಹೈ-ಬಜೆಟ್ ‘ಫಾರೆಸ್ಟ್ ಕಿಂಗ್’ ಎಂಬ ಜಂಗಲ್ ಥೀಮ್ ಪ್ರೋಮೋ ಬಿಡುಗಡೆ ಮಾಡಿತ್ತು.

ಈ ವಿಡಿಯೋದಲ್ಲಿ ಹುಲಿಯನ್ನು ಬಳಸಿಕೊಳ್ಳುವ ಮೂಲಕ ಯಾರು ಏನೇ ಹೇಳಿದರೂ, ಕಾಡಿನ ನಿಜವಾದ ರಾಜ ಯಾರು ಎಂಬುದು ಕಾಡಿಗೆ ಗೊತ್ತು ಎಂದು  ಕೆಕೆಆರ್ ಸ್ಪಷ್ಟ ಸಂದೇಶ ನೀಡಿದ್ದರು. ಇಲ್ಲಿ ಹುಲಿಯನ್ನು ರೂಪಕವಾಗಿ ಬಳಸಿಕೊಂಡಿದ್ದು ಬೆಂಗಾಲ್ ಟೈಗರ್ಸ್​ (ಕೆಕೆಆರ್) ಎಂಬುದಾಗಿ. ಇನ್ನು ಕಾಡಿನ ನಿಜವಾದ ರಾಜ ಹುಲಿ ಎನ್ನಲು ಮುಖ್ಯ ಕಾರಣ ಆರ್​ಸಿಬಿ ಸಿಂಬಲ್ ಸಿಂಹ ಆಗಿರುವುದು.

ಅಷ್ಟೇ ಅಲ್ಲದೆ ಈ ವಿಡಿಯೋದಲ್ಲಿ 49 ಸಂಖ್ಯೆಯನ್ನು ತೋರಿಸುವ ಮೂಲಕ ಆರ್​ಸಿಬಿಯ ಹೀನಾಯ ದಾಖಲೆಯನ್ನು ಹೀಯಾಳಿಸಿದ್ದರು. ಇನ್ನು ಎದುರಾಳಿ ತಂಡ ಎಷ್ಟೇ ಬಲಿಷ್ಠವಾಗಿದ್ದರೂ, ಅವರ ಅಬ್ಬರಕ್ಕೆ ತಾನು ಹೆದರುವುದಿಲ್ಲ. ಕಾಡಿನ ರಾಜ ಯಾರೆಂಬುದು ಗೊತ್ತಿದೆ. ಈ ಬೇಟೆಯೊಂದಿಗೆ ಪ್ಲೇಆಫ್​ಗೇರುತ್ತೇವೆ ಎಂದು ಪರೋಕ್ಷವಾಗಿ ಆರ್​ಸಿಬಿಗೆ ಸವಾಲು ಹಾಕಿದ್ದರು.

ಆದರೆ ಈ “ಮಾತಿಗೆ ಮಾತಿಗಿಂತ, ಬ್ಯಾಟಿನ ಸೌಂಡೇ ಸೂಕ್ತ ಉತ್ತರ” ಎಂಬಂತೆ, ಆರ್‌ಸಿಬಿಯ ಅಸಲಿ ‘ಕಿಂಗ್’ ವಿರಾಟ್ ಕೊಹ್ಲಿ ಮೈದಾನದಲ್ಲಿ ಅಬ್ಬರಿಸಿ ಕೆಕೆಆರ್ ಅಹಂಕಾರವನ್ನು ಧೂಳೀಪಟ ಮಾಡಿದ್ದಾರೆ. ಈ ಪಂದ್ಯದಲ್ಲಿ ಕೆಕೆಆರ್ ನೀಡಿದ 193 ರನ್​ಗಳ ಗುರಿಯನ್ನು ಆರ್​ಸಿಬಿ 19.1 ಓವರ್​ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಇತ್ತ ಪಂದ್ಯ ಮುಗಿಯುತ್ತಿದ್ದಂತೆ ರೆಡ್ಡಿಟ್ ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ಆರ್‌ಸಿಬಿ ಅಭಿಮಾನಿಗಳು ಕೆಕೆಆರ್‌ಗೆ ‘ಕರ್ಮ’ದ ಪಾಠ ಕಲಿಸಿದ್ದಾರೆ. “ಕೆಕೆಆರ್ ಮೀಡಿಯಾ ತಂಡ ಪ್ರೋಮೋ ಮಾಡುವುದರಲ್ಲಿ ಬ್ಯುಸಿಯಾಗಿದ್ದರೆ, ಆರ್‌ಸಿಬಿ ಪಂದ್ಯ ಗೆಲ್ಲುವುದರಲ್ಲಿ ಬ್ಯುಸಿಯಾಗಿದೆ” ಎಂದು ಅಭಿಮಾನಿಗಳು ಲೇವಡಿ ಮಾಡುತ್ತಿದ್ದಾರೆ.

ಅಷ್ಟೇ ಅಲ್ಲದೆ ಆರ್​ಸಿಬಿ ಸೋಷಿಯಲ್ ಮೀಡಿಯಾದಲ್ಲಿ ಸಿಂಹ ನೈಟ್ ರೈಡರ್ಸ್​ ಅನ್ನು ಭೇಟೆಯಾಡಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಕಾಡಿನ ರಾಜ ಸಿಂಹನೇ ಎಂದು ಕೆಕೆಆರ್ ಕಾಲೆಳೆದಿದ್ದಾರೆ.

ಇದರ ಜೊತೆಗೆ  “ಮುಂದಿನ ವರ್ಷವಾದರೂ ಈ ದಶಕಕ್ಕೆ ಹೊಂದುವಂತಹ ಹೊಸ ಡೈಲಾಗ್ ಅಥವಾ ಮ್ಯಾಟರ್‌ಗಳ ಜೊತೆ ಬನ್ನಿ. ಕೆಕೆಆರ್​ ಇನ್ನು ಹಳೆಯ ಇತಿಹಾಸ ಮತ್ತು ಹಳೇ ಡೈಲಾಗ್‌ಗಳನ್ನೇ ನಂಬಿಕೊಂಡಿದೆ ಎಂದು RCB ಲೇವಡಿ ಮಾಡಿದೆ.

ಒಟ್ಟಿನಲ್ಲಿ ಉಭಯ ತಂಡಗಳ ಪಂದ್ಯಗಳ ಮನರಂಜನೆಯ ಜೊತೆಗೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಸೋಷಿಯಲ್ ಮೀಡಿಯಾ ಫೈಟ್ ಅಭಿಮಾನಿಗಳ ಪಾಲಿಗೆ ಭರಪೂರ ಮನರಂಜನೆ ನೀಡುತ್ತಿದೆ. ಮೈದಾನದ ಒಳಗಿನ ರೋಚಕ ಸಿಕ್ಸರ್-ಬೌಂಡರಿಗಳು ಒಂದೆಡೆಯಾದರೆ, ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಈ ಡಿಜಿಟಲ್ ಜಿದ್ದಾಜಿದ್ದಿ ಐಪಿಎಲ್ ಕ್ರಿಕೆಟ್ ಹಬ್ಬದ ಮಜಾವನ್ನು ದುಪ್ಪಟ್ಟು ಮಾಡಿದೆ ಎಂದರೆ ತಪ್ಪಾಗಲಾರದು.

Published On – 10:38 am, Thu, 14 May 26

Source link

‘ಒಮ್ಮೆ ಜೋರಾಗಿ ಉಸಿರು ತೆಗೆದರು’; ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ – Kannada News | Auto Driver Explain The Last moment of Dileep Raj

ನಟ ದಿಲೀಪ್ ರಾಜ್ ಅವರ ಅಂತಿಮ ಕ್ಷಣಗಳ ಬಗ್ಗೆ ಆಟೋ ಚಾಲಕ ದೇವೇಂದ್ರ ನಾಯ್ಡು ವಿವರಿಸಿದ್ದಾರೆ. ದಿಲೀಪ್ ಅವರು ಮನೆಯಲ್ಲಿ ಬಿದ್ದಿದ್ದ ಸ್ಥಿತಿಯಲ್ಲಿದ್ದರು. ದೇವೇಂದ್ರ ಮತ್ತು ಮನೆಯ ಸೆಕ್ಯೂರಿಟಿ ಸೇರಿ ಅವರನ್ನು ಆಟೋದಲ್ಲಿ ಕೂರಿಸಿಕೊಂಡರು. ಬೆಂಗಳೂರು ಆರ್​​​ಆರ್​​ ನಗರದ ಆರ್ಚ್​​​ ಬಳಿ ಬರುವಾಗ ದಿಲೀಪ್ ರಾಜ್ ಒಮ್ಮೆ ಜೋರಾಗಿ ಉಸಿರು ತೆಗೆದುಕೊಂಡಂರಂತೆ. ಆಗಲೇ ಉಸಿರು ಹೋಗಿತ್ತು ಎಂಬ ಅನುಮಾನ ಆಟೋ ಚಾಲಕನದ್ದು. ಅವರು ಕೊನೆಯ ಕ್ಷಣ ಹೇಗಿತ್ತು ಎಂಬುದನ್ನು ಸಂಪೂರ್ಣವಾಗಿ ವಿವರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಾಲಿವುಡ್ ಸೂಪರ್ ಸ್ಟಾರ್​ ಸಿನಿಮಾ ನಿರ್ದೇಶಿಸಲಿರುವ ತೆಲುಗು ನಿರ್ದೇಶಕ – Kannada News | Indian origin director Aneesh Chaganty to direct Tom Cruise’s next movie

ಭಾರತದ ಕೆಲವಾರು ನಟ-ನಟಿಯರು ಈಗಾಗಲೇ ಹಾಲಿವುಡ್​​ಗೆ (Hollywood) ಪದಾರ್ಪಣೆ ಮಾಡಿ, ಅಲ್ಲಿನ ಸ್ಟಾರ್ ನಟ-ನಟಿಯರೊಡನೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಐಶ್ವರ್ಯಾ ರೈ, ಆಲಿಯಾ ಭಟ್, ದೀಪಿಕಾ ಪಡುಕೋಣೆ, ಇರ್ಫಾನ್ ಖಾನ್, ಅಮಿತಾಬ್ ಬಚ್ಚನ್, ಧನುಶ್ ಇನ್ನೂ ಕೆಲವರು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಭಾರತದ ನಿರ್ದೇಶಕರು ಹಾಲಿವುಡ್ ಸಿನಿಮಾಗಳನ್ನು ನಿರ್ದೇಶಿಸಿದ್ದಿಲ್ಲ. ಭಾರತೀಯ ಮೂಲದ ಕೆಲವೇ ಕೆಲವು ಸಿನಿಮಾ ನಿರ್ದೇಶಕರುಗಳು ಹಾಲಿವುಡ್​​ನಲ್ಲಿದ್ದಾರೆ. ಇದೀಗ ಭಾರತೀಯ ಮೂಲದ ನಿರ್ದೇಶಕರೊಬ್ಬರು ಹಾಲಿವುಡ್​ನ ಸೂಪರ್ ಸ್ಟಾರ್ ಟಾಮ್ ಕ್ರೂಸ್ ಅವರ ಸಿನಿಮಾ ನಿರ್ದೇಶಿಸಲಿದ್ದಾರೆ.

‘ಮಿಷನ್ ಇಂಪಾಸಿಬಲ್’, ‘ಟಾಪ್ ಗನ್’ ಸೇರಿದಂತೆ ಹಲವು ವಿಶ್ವಿ ವಿಖ್ಯಾತ ಆಕ್ಷನ್ ಸಿನಿಮಾ ಸರಣಿಗಳಲ್ಲಿ ನಟಿಸಿರುವ ಟಾಮ್ ಕ್ರೂಸ್, ವಿಶ್ವದ ಟಾಪ್ ನಟರಲ್ಲಿ ಪ್ರಮುಖರು. ವಿಶ್ವದಲ್ಲಿ ಅತಿ ಹೆಚ್ಚು ಪರಿಚಿತ ನಟ ಸಹ ಹೌದು. ಇದೀಗ ಟಾಮ್ ಕ್ರೂಸ್ ಅವರು ‘ಡೂಪ್ಲಾಂಗರ್’ ಹೆಸರಿನ ಹೊಸ ಸಿನಿಮಾ ಒಪ್ಪಿಕೊಂಡಿದ್ದು, ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವುದು ಭಾರತೀಯ ಮೂಲದ ನಿರ್ದೇಶಕ. ಅದೂ ತೆಲುಗು ಮೂಲದ ನಿರ್ದೇಶಕ ಎಂಬುದು ಮತ್ತಷ್ಟು ವಿಶೇಷ. ತೆಲುಗು ಮೂಲದ ಅನೀಶ್ ಚಗಂಟಿ ಅವರು ಟಾಮ್ ಕ್ರೂಸ್ ಅವರ ಮುಂದಿನ ಸಿನಿಮಾ ನಿರ್ದೇಶಿಸಲಿದ್ದಾರೆ. ಅನೀಶ್ ನಿರ್ದೇಶಿಸಲಿರುವ ಈ ಸಿನಿಮಾ ಸಸ್ಪನ್ಸ್ ಥ್ರಿಲ್ಲರ್ ಜೊತೆಗೆ ಆಕ್ಷನ್ ಕತೆಯನ್ನೂ ಸಹ ಒಳಗೊಂಡಿದ್ದು, ಟಾಮ್ ಕ್ರೂಸ್ ಸಹ ಆಸಕ್ತಿ ವ್ಯಕ್ತಪಡಿಸಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಆರಂಭವಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಹಾಲಿವುಡ್ ಮಂದಿಯ ಎದುರು ಹೇಗೆ ಮಾತಾಡಿದ್ರು ನೋಡಿ ಯಶ್

ಅನೀಶ್ ಅವರ ಪೋಷಕರು ಅವಿಭಜಿತ ಆಂಧ್ರ ಪ್ರದೇಶದವರು. 1980 ರಲ್ಲಿ ಅವರು ಅಮೆರಿಕಕ್ಕೆ ವಲಸೆ ಹೋದರು. ಅನೀಶ್ ಚಗಂಟಿಗೆ ಆರಂಭದಿಂದಲೂ ಸಿನಿಮಾಗಳ ಮೇಲೆ ಅಪಾರ ಪ್ರೀತಿ ಇತ್ತು. ಅವರು ಹಲವಾರು ಶಾರ್ಟ್ ಸಿನಿಮಾಗಳನ್ನು ನಿರ್ದೇಶಿಸಿದ್ದು, ನಿರ್ಮಾಣ ಸಹ ಮಾಡಿದ್ದಾರೆ. ಅವುಗಳಲ್ಲಿ ಹಲವು ಶಾರ್ಟ್ ಸಿನಿಮಾಗಳಿಗೆ ಅಂತರಾಷ್ಟ್ರೀಯ ಪ್ರಶಸ್ತಿಗಳು ಸಹ ಲಭಿಸಿವೆ.

2018 ರಲ್ಲಿ ಬಿಡುಗಡೆ ಆದ ‘ಸರ್ಚಿಂಗ್’ ಅನೀಶ್ ಅವರ ಮೊದಲ ಸಿನಿಮಾ. ತಂದೆಯೊಬ್ಬ ಕಾಣೆಯಾದ ಮಗಳನ್ನು ಕೇವಲ ಮೊಬೈಲ್, ಇಂಟರ್ನೆಟ್, ಸೋಷಿಯಲ್ ಮೀಡಿಯಾ ಬಳಸಿ ಹುಡುಕುವ ಕತೆಯನ್ನು ಆ ಸಿನಿಮಾ ಒಳಗೊಂಡಿದ್ದು, ಆ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಒಟಿಟಿಯಲ್ಲಿ ಈಗಲೂ ಸಹ ದೊಡ್ಡ ಸಂಖ್ಯೆಯ ವೀಕ್ಷಕರು ಆ ಸಿನಿಮಾಕ್ಕೆ ಇದ್ದಾರೆ. ಆ ಬಳಿಕ ‘ರನ್’ ಹೆಸರಿನ ಮತ್ತೊಂದು ಥ್ರಿಲ್ಲರ್ ಸಿನಿಮಾವನ್ನು ಅನೀಶ್ ನಿರ್ದೇಶಿಸಿದ್ದರು. 2023 ರಲ್ಲಿ ‘ಮಿಸ್ಸಿಂಗ್’ ಹೆಸರಿನ ಸಿನಿಮಾವನ್ನು ಅನೀಶ್ ನಿರ್ದೇಶಿಸಿದರು. ಇದೂ ಸಹ ಸಾಮಾಜಿಕ ಜಾಲತಾಣಕ್ಕೆ ಸಂಬಂಧಿಸಿದ ಸಸ್ಪೆನ್ಸ್ ಥ್ರಿಲ್ಲರ್ ಕತೆಯನ್ನು ಒಳಗೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Optical Illusion: ನೀವು ಬುದ್ಧಿವಂತರಾಗಿದ್ರೆ ಈ ಚಿತ್ರದಲ್ಲಿ ಅಡಗಿರುವ ಪಾಂಡವನ್ನು ಕಂಡು ಹಿಡಿಯಿರಿ – Kannada News | Optical Illusion: Let’s find the panda hidden in this picture within 10 seconds

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: kurir.mk

ಪ್ರತಿನಿತ್ಯ ಸೋಶಿಯಲ್ ಮೀಡಿಯಾದಲ್ಲಿ ಆಪ್ಟಿಕಲ್‌ ಇಲ್ಯೂಷನ್‌ (optical illusion) ಒಗಟಿನ ಚಿತ್ರಗಳನ್ನು ಬಿಡಿಸುತ್ತ ಕುಳಿತರೆ ಸಮಯ ಕಳೆದಿದ್ದೇ ತಿಳಿಯುವುದಿಲ್ಲ. ಕೆಲವರು ಕ್ಷಣಾರ್ಧದಲ್ಲಿ ಒಗಟು ಬಿಡಿಸಿ ಜಾಣರು ಎನಿಸಿಕೊಳ್ಳುತ್ತಾರೆ. ಆದರೆ, ಈ ಚಿತ್ರಗಳು ನಿಮ್ಮ ದೃಷ್ಟಿ ಸಾಮರ್ಥ್ಯ ಹಾಗೂ ಬುದ್ಧಿವಂತಿಕೆಗೆ ಸವಾಲೊಡ್ದುತ್ತವೆ. ಇದೀಗ ಈ ಚಿತ್ರದಲ್ಲಿ ಜನರ ಹಿಂಡು ಇದೆ. ಈ ಜನರ ನಡುವೆ ಪಾಂಡವೊಂದು ಅಡಗಿ ಕುಳಿತಿದೆ. ಈ ಪ್ರಾಣಿಯನ್ನು ಕಂಡು ಹಿಡಿಯುವ ಸವಾಲು ನಿಮ್ಮ ಮುಂದಿದೆ. ನಿರ್ದಿಷ್ಟ ಸಮಯದೊಳಗೆ ಈ ಒಗಟು ಬಿಡಿಸಲು ಪ್ರಯತ್ನಿಸಿ.

ಈ ಚಿತ್ರ ನೋಡಿದಾಗ ನಿಮಗೆ ಏನು ಅನಿಸಿತು?

ಟ್ರಿಕ್ಕಿ ಒಗಟಿನ ಚಿತ್ರ ಬಿಡಿಸುವುದು ಅಷ್ಟು ಸುಲಭವಲ್ಲ. ಈ ಒಗಟು ಅಷ್ಟೇ ಸವಾಲಿನದ್ದಾಗಿದೆ. ಈ ಚಿತ್ರದಲ್ಲಿ ನೀವು ಜನರ ಗುಂಪನ್ನು ನೋಡುತ್ತೀರಿ. ಈ ಜನರ ನಡುವೆ ಪಾಂಡವೊಂದು ಅಡಗಿದೆ. ನೀವು 10 ಸೆಕೆಂಡುಗಳ ಒಳಗೆ ಸರಿಯಾದ ಉತ್ತರ ಹೇಳಿದರೆ ನಿಮ್ಮ ವೀಕ್ಷಣಾ ಕೌಶಲ್ಯಕ್ಕೆ ಅತ್ಯುತ್ತಮವಾಗಿದೆ ಎಂದರ್ಥ. ನೀವು ಈ ಸವಾಲಿಗೆ ಸಿದ್ಧರಿದ್ದರೆ, ನಿಮ್ಮ ಸಮಯ ಈಗ ಪ್ರಾರಂಭವಾಗುತ್ತದೆ.

ಇದನ್ನೂ ಓದಿ: ನಿಮ್ಮ ಕಣ್ಣಿಗೊಂದು ಸವಾಲ್; ಶ್ವಾನಗಳ ನಡುವೆ ಇರುವ ಚಿನ್ನದ ನಾಣ್ಯವನ್ನು ಗುರುತಿಸಬಲ್ಲಿರಾ

ಪಾಂಡ ನಿಮ್ಮ ಕಣ್ಣಿಗೆ ಕಾಣಿಸಿತೇ?

ನಿರ್ದಿಷ್ಟ ಸಮಯದೊಳಗೆ ಈ ಚಿತ್ರದಲ್ಲಿ ಅಡಗಿರುವ ಪಾಂಡವನ್ನು ಹುಡುಕಿ ಒಗಟು ಬಿಡಿಸಲು ಸಾಧ್ಯವಾಗಿದ್ದರೆ ನಿಮಗೆ ಅಭಿನಂದನೆಗಳು. ನಿಮಗೆ ಈ ಪ್ರಾಣಿ ಕಣ್ಣಿಗೆ ಬಿದ್ದಿಲ್ಲವಾದರೆ ಹೆಚ್ಚು ಚಿಂತಿಸಬೇಡಿ. ಕೆಳಗೆ ನೀಡಲಾದ ಚಿತ್ರದಲ್ಲಿ ಪಾಂಡ ಇರುವ ಸ್ಥಳವನ್ನು ಕೆಂಪು ವೃತ್ತದಲ್ಲಿ ಗುರುತಿಸಿದ್ದೇವೆ. ನಿಮ್ಮ ಕಣ್ಣಿಗೆ ಪಾಂಡ ಕಾಣಿಸಿತು ಎಂದು ಭಾವಿಸುತ್ತೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:47 am, Thu, 14 May 26

Source link

Viral: ಅರೆಬರೆ ಬಟ್ಟೆ ತೊಟ್ಟು ರೀಲ್ಸ್​ ಮಾಡುತ್ತಿದ್ದ ಹೆಂಡತಿ; ಅವಮಾನ ತಾಳಲಾರದೇ ಆಕೆಗೆ ‘ಪಿಂಡದಾನ’ ಮಾಡಿದ ಗಂಡ! – Kannada News | Haridwar Shocker: Husband Performs Pind Daan for Living Wife Over Reels Addiction

ಪತ್ನಿಯ ರೀಲ್ಸ್​​ ಹುಚ್ಚಿಗೆ ಆಕೆಗೆ ‘ಪಿಂಡದಾನ’ ಮಾಡಿದ ಗಂಡImage Credit source: instagram

ಹರಿದ್ವಾರ: ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ರೀಲ್ಸ್ ಹುಚ್ಚು ಸಂಸಾರಗಳ ಮಧ್ಯೆ ಎಂತಹ ಬಿರುಕು ಮೂಡಿಸುತ್ತಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ತನ್ನ ಮಾತನ್ನು ಕೇಳದೆ ಸದಾ ಅರೆಬರೆ ಬಟ್ಟೆ ತೊಟ್ಟು ರೀಲ್ಸ್ ಮಾಡುವುದರಲ್ಲಿ ಮಗ್ನಳಾಗಿದ್ದ ಪತ್ನಿಯ ವರ್ತನೆಯಿಂದ ರೋಸಿಹೋದ ವ್ಯಕ್ತಿಯೊಬ್ಬ, ಆಕೆ ಬದುಕಿದ್ದಾಗಲೇ ಹರಿದ್ವಾರದಲ್ಲಿ ಆಕೆಗೆ ‘ಪಿಂಡದಾನ’ ಮಾಡಿದ ಆಘಾತಕಾರಿ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗುತ್ತಿದೆ.

ಏನಿದು ಘಟನೆ?

ವರದಿಗಳ ಪ್ರಕಾರ, ರೀಲ್ಸ್ ಸ್ಟಾರ್ ಆಗಿರುವ ಹೇಮಾ ಚೌಧರಿ(@hemachoudhary986) ಎಂಬುವವರ ಪತಿಯೇ ಈ ವಿಚಿತ್ರ ಸಾಹಸಕ್ಕೆ ಕೈಹಾಕಿದವರು. ಹೇಮಾ ಅವರು ಸದಾ ಕಾಲ ಸೋಶಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕ್ರಿಯೇಟ್ ಮಾಡುವುದು ಮತ್ತು ರೀಲ್ಸ್ ಮಾಡುವುದರಲ್ಲಿ ಬ್ಯುಸಿಯಾಗಿರುತ್ತಿದ್ದಳು. ಈ ವಿಚಾರವಾಗಿ ದಂಪತಿಗಳ ನಡುವೆ ಸಾಕಷ್ಟು ಬಾರಿ ಜಗಳ ನಡೆದಿತ್ತು. “ರೀಲ್ಸ್ ಮಾಡುವುದನ್ನು ನಿಲ್ಲಿಸು, ಸಂಸಾರದ ಕಡೆ ಗಮನ ಕೊಡು” ಎಂಬ ಪತಿಯ ಮನವಿಗೆ ಹೇಮಾ ಕಿವಿಗೊಟ್ಟಿರಲಿಲ್ಲ ಎನ್ನಲಾಗಿದೆ.

ಪಿಂಡದಾನ ಮಾಡುವ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ನಮ್ಮ ಮಸಾಲ ದೋಸೆಗೆ ವಿಶ್ವ ಮಟ್ಟದಲ್ಲಿ ಭಾರೀ ಡಿಮ್ಯಾಂಡ್​; ‘ಟಾಪ್ 10’ ಅತ್ಯುತ್ತಮ ಪ್ಯಾನ್‌ಕೇಕ್‌ಗಳ ಪಟ್ಟಿಯಲ್ಲಿ ಸ್ಥಾನ!

ಬದುಕಿರುವಾಗಲೇ ಪತ್ನಿಗೆ ಅಂತ್ಯಸಂಸ್ಕಾರದ ವಿಧಿವಿಧಾನ:

ಅರೆಬರೆ ಬಟ್ಟೆತೊಟ್ಟು ರೀಲ್ಸ್​​ ಮಾಡುತ್ತಿದ್ದ ಪತ್ನಿಯಿಂದ ಅಸಮಾಧಾನಗೊಂಡ ಪತಿ ಆಯ್ದುಕೊಂಡ ದಾರಿ ಹರಿದ್ವಾರ. ಅಲ್ಲಿಗೆ ತೆರಳಿದ ಆತ, ಸಾಮಾನ್ಯವಾಗಿ ಸತ್ತವರಿಗೆ ಮಾಡುವ ‘ಪಿಂಡದಾನ’ ವಿಧಿವಿಧಾನವನ್ನು ತನ್ನ ಪತ್ನಿಯ ಹೆಸರಿನಲ್ಲಿ ನೆರವೇರಿಸಿದ್ದಾರೆ. ವಿಶೇಷವೆಂದರೆ, ಪತ್ನಿ ರೀಲ್ಸ್ ಮಾಡುವುದನ್ನು ವಿರೋಧಿಸುತ್ತಿದ್ದ ಪತಿ, ತಾನು ಮಾಡಿದ ಈ ಪಿಂಡದಾನದ ಇಡೀ ಪ್ರಕ್ರಿಯೆಯನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. “ನನ್ನ ಪತ್ನಿ ಈಗ ನನಗೆ ಸತ್ತಂತೆ” ಎಂಬ ಸಂದೇಶವನ್ನು ರವಾನಿಸಲು ಆತ ಈ ರೀತಿ ಮಾಡಿದ್ದಾರೆ ಎನ್ನಲಾಗುತ್ತಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಗತ್ತಿನ ಎರಡು ದೊಡ್ಡ ಶಕ್ತಿಗಳ ಸಮ್ಮಿಲನ: ಸಂಘರ್ಷ ಬೇಡ ಸಹಕಾರವಿರಲಿ ಎಂದ ಜಿನ್‌ಪಿಂಗ್ – Kannada News | Xi Jinping to Trump: US and China Must Be Partners, Not Rivals, for Global Stability

ಬೀಜಿಂಗ್, ಮೇ.14: ಜಗತ್ತಿನ ಎರಡು ಬಲಿಷ್ಠ ಆರ್ಥಿಕತೆಗಳಾದ ಅಮೆರಿಕ ಮತ್ತು ಚೀನಾ ಪರಸ್ಪರ ಸಂಘರ್ಷದ ಹಾದಿ ಬಿಟ್ಟು ಸಹಕಾರದೊಂದಿಗೆ ಸಾಗಬೇಕೆಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕರೆ ನೀಡಿದ್ದಾರೆ. ಚೀನಾಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬೀಜಿಂಗ್‌ನಲ್ಲಿ ಬರಮಾಡಿಕೊಂಡ ಜಿನ್‌ಪಿಂಗ್, ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧದ ಬಗ್ಗೆ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. ನಾವು ಶತ್ರುಗಳಲ್ಲ, ಪಾಲುದಾರರಾಗಬೇಕು ಎಂದು ಹೇಳಿದ್ದಾರೆ.

ಅಮೆರಿಕ ಮತ್ತು ಚೀನಾ “ವೈರಿಗಳಾಗುವ ಬದಲಿಗೆ ಪಾಲುದಾರರಾಗಬೇಕು” (Partners, not rivals). ಸಹಕಾರದಿಂದ ಎರಡೂ ದೇಶಗಳಿಗೆ ಲಾಭವಾಗಲಿದ್ದು, ಸಂಘರ್ಷದಿಂದ ನಷ್ಟವೇ ಹೆಚ್ಚು ಎಂದು ಅವರು ಪ್ರತಿಪಾದಿಸಿದರು. ಇಡೀ ಜಗತ್ತು ಪ್ರಸ್ತುತ ಕಳೆದ ಒಂದು ಶತಮಾನದಲ್ಲೇ ಕಂಡರಿಯದ ಬದಲಾವಣೆಗೆ ಸಾಕ್ಷಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಉಭಯ ದೇಶಗಳ ನಡುವಿನ ಸ್ಥಿರ ಸಂಬಂಧ ಜಗತ್ತಿಗೆ ಅತ್ಯಗತ್ಯವಾಗಿದೆ ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಚೀನಾ ಹಾಗೂ ಅಮೆರಿಕದ ನಡುವೆ ಸಂಘರ್ಷ ನಡೆಯುವ ಸಾಧ್ಯತೆ ಇದೆ ಎಂಬ ಜಾಗತಿಕ ಆತಂಕವನ್ನು ಮೀರಿ, ಹೊಸ ಮಾದರಿಯ ರಾಜತಾಂತ್ರಿಕ ಸಂಬಂಧ ಬೆಳೆಸುವ ಅಗತ್ಯವಿದೆ ಎಂದು ಜಿನ್‌ಪಿಂಗ್ ತಿಳಿಸಿದರು.

ಇದನ್ನೂ ಓದಿ: 9 ವರ್ಷಗಳ ಬಳಿಕ ಚೀನಾಕ್ಕೆ ಅಮೆರಿಕ ಅಧ್ಯಕ್ಷರ ಭೇಟಿ: ಟ್ರಂಪ್-ಕ್ಸಿ ಜಿನ್‌ಪಿಂಗ್ ಮಹತ್ವದ ಮಾತುಕತೆ!

ಒಂಬತ್ತು ವರ್ಷಗಳ ನಂತರ ಚೀನಾಕ್ಕೆ ಭೇಟಿ ನೀಡಿದ ಟ್ರಂಪ್ ಅವರನ್ನು ಜಿನ್‌ಪಿಂಗ್ ಅಭಿನಂದಿಸಿದರು. ಅಲ್ಲದೆ, ಅಮೆರಿಕದ ಸ್ವಾತಂತ್ರ್ಯದ 250ನೇ ವರ್ಷಾಚರಣೆಯ ಸಂದರ್ಭದಲ್ಲಿ ಅಮೆರಿಕದ ಜನತೆಗೆ ಶುಭಾಶಯ ಕೋರಿದರು. ಈ ಭೇಟಿಯು ವ್ಯಾಪಾರ, ತಂತ್ರಜ್ಞಾನ ಮತ್ತು ಜಾಗತಿಕ ಭದ್ರತೆಯ ದೃಷ್ಟಿಯಿಂದ ಹೊಸ ಆಯಾಮ ನೀಡುವ ನಿರೀಕ್ಷೆಯಿದೆ.

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:04 am, Thu, 14 May 26

Source link

Shivlinga Worship: ಕಲ್ಲು, ಬೆಳ್ಳಿ ಲಿಂಗಗಳಿಗಿಂತ ಪಾದರಸ ಶಿವಲಿಂಗದ ಪೂಜೆ ಏಕೆ ಶ್ರೇಷ್ಠ? ಇಲ್ಲಿದೆ ಅಸಲಿ ಕಾರಣ! – Kannada News | Unlocking Divine Grace: A Guide to Mercury Shivlinga Worship

ಹಿಂದೂ ಧರ್ಮದಲ್ಲಿ ಶಿವನನ್ನು ವಿವಿಧ ರೂಪಗಳಲ್ಲಿ, ವಿಶೇಷವಾಗಿ ಶಿವಲಿಂಗ ರೂಪದಲ್ಲಿ ಪೂಜಿಸಲಾಗುತ್ತದೆ. ಬೆಳ್ಳಿ, ಹಿತ್ತಾಳೆ, ಪಂಚಲೋಹ, ಕಲ್ಲು ಇತ್ಯಾದಿಗಳಿಂದ ಮಾಡಿದ ಶಿವಲಿಂಗಗಳನ್ನು ಪೂಜಿಸುವ ಪದ್ಧತಿ ಅನಾದಿ ಕಾಲದಿಂದಲೂ ಇದೆ. ಆದರೆ, ತಕ್ಷಣವೇ ಸಂಪೂರ್ಣ ಶಿವಾನುಗ್ರಹಕ್ಕೆ ಪಾತ್ರರಾಗಲು ಒಂದು ವಿಶೇಷವಾದ ಶಿವಲಿಂಗ ಪೂಜಾ ವಿಧಾನವಿದೆ, ಅದುವೇ ಪಾದರಸ ಶಿವಲಿಂಗ ಪೂಜೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಯಾರಿಗೆ ಜೀವನದಲ್ಲಿ ಸಂಕಷ್ಟಗಳು ಎದುರಾಗಿವೆಯೋ, ದಾರಿ ಕಾಣದೆ ದಿಕ್ಕು ತೋಚದಂತಾಗಿರುತ್ತದೆಯೋ ಅಂತಹವರಿಗೆ ಪಾದರಸ ಶಿವಲಿಂಗದ ಆರಾಧನೆಯು ಅತ್ಯಂತ ಪರಿಣಾಮಕಾರಿ ಎಂದು ನಂಬಲಾಗಿದೆ. ಯಾರು ಸತತವಾಗಿ 48 ದಿನಗಳ ಕಾಲ ಪಾದರಸ ಶಿವಲಿಂಗಕ್ಕೆ ಅಭಿಷೇಕವನ್ನು ಮಾಡುತ್ತಾರೆ, ಅವರಿಗೆ ಎಂತಹದೇ ಸಂಕಷ್ಟಗಳಿದ್ದರೂ ಅವು ನಿವಾರಣೆಯಾಗಿ ಶುಭ ಫಲಗಳು ಪ್ರಾಪ್ತಿಯಾಗುತ್ತವೆ. ಶಿವನು ಅಭಿಷೇಕ ಪ್ರಿಯನಾಗಿದ್ದಾನೆ ಎಂಬುದು ಇದರ ಹಿಂದಿನ ಮುಖ್ಯ ಕಾರಣ. ವಿಷ್ಣು ಅಲಂಕಾರ ಪ್ರಿಯ, ಗಣಪತಿ ನೈವೇದ್ಯ ಪ್ರಿಯ, ಭಾಸ್ಕರ ನಮಸ್ಕಾರ ಪ್ರಿಯರಾದಂತೆ, ಶಿವನಿಗೆ ಕೇವಲ ಸ್ವಲ್ಪ ನೀರನ್ನು ಅರ್ಪಿಸಿ ಪ್ರಾರ್ಥಿಸಿದರೆ ತಕ್ಷಣವೇ ಭೋಳಾಶಂಕರನು ಒಲಿಯುತ್ತಾನೆ.

ಪುರಾಣಗಳ ಪ್ರಕಾರ, ಚಿನ್ನದ ಶಿವಲಿಂಗವನ್ನು ಪೂಜಿಸುವುದರಿಂದ ದೊರೆಯುವ ಫಲಕ್ಕಿಂತ ಪಾದರಸ ಶಿವಲಿಂಗವನ್ನು ಪೂಜಿಸುವುದರಿಂದ ಒಂದು ಕೋಟಿ ಪಟ್ಟು ಹೆಚ್ಚಿನ ಫಲ ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಇದು ಹಿಂದಿನ ಜನ್ಮದ ಕರ್ಮಗಳನ್ನು, ಪಾಪಗಳನ್ನು ಹೋಗಲಾಡಿಸುವ ಸಾಮರ್ಥ್ಯವನ್ನು ಹೊಂದಿದೆ. ಯಾರು ಪ್ರತಿ ಸೋಮವಾರ ಸಂಧ್ಯಾಕಾಲದಲ್ಲಿ ಪಾದರಸ ಶಿವಲಿಂಗಕ್ಕೆ ಅಭಿಷೇಕ ಮಾಡಿ, ಆ ಅಭಿಷೇಕದ ನೀರನ್ನು ತೀರ್ಥವಾಗಿ ಸ್ವೀಕರಿಸುತ್ತಾರೋ, ಅಂತಹವರ ಪೂರ್ವ ಜನ್ಮದ ಕರ್ಮಗಳು ಮತ್ತು ಪಾಪಗಳು ಕಡಿಮೆಯಾಗುತ್ತವೆ. ಇದು ಔಷಧಿ ಸೇವಿಸಿದಂತೆ ತಕ್ಷಣಕ್ಕೆ ಪರಿಹಾರ ನೀಡಿ, ಕ್ರಮೇಣ ಸಮಸ್ಯೆಗಳನ್ನು ನಿವಾರಿಸುತ್ತದೆ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ

ಪಾದರಸ ಶಿವಲಿಂಗ ಪೂಜೆಯಿಂದ ಕೇವಲ ಶಿವನ ಅನುಗ್ರಹ ಮಾತ್ರವಲ್ಲದೆ, ಸರ್ವ ದೇವತೆಗಳ ಆಶೀರ್ವಾದವೂ ದೊರೆಯುತ್ತದೆ. ಶಾಸ್ತ್ರಗಳ ಪ್ರಕಾರ, ಈ ಶಿವಲಿಂಗವನ್ನು ಪೂಜಿಸುವುದರಿಂದ ಲಕ್ಷ್ಮಿ ಮತ್ತು ಕುಬೇರರ ಕೃಪೆಯೂ ಲಭಿಸುತ್ತದೆ. ಈ ಪಾದರಸ ಶಿವಲಿಂಗವನ್ನು ಮನೆಯಲ್ಲೂ ಕೂಡ ಇಟ್ಟು ಪೂಜಿಸಬಹುದು. ಅನಾರೋಗ್ಯದಿಂದ ಬಳಲುತ್ತಿರುವವರು ಈ ಶಿವಲಿಂಗದ ಅಭಿಷೇಕದ ನೀರನ್ನು ಸ್ನಾನದ ನೀರಿಗೆ ಸೇರಿಸಿ ಸ್ನಾನ ಮಾಡುವುದರಿಂದ ಉತ್ತಮ ಆರೋಗ್ಯ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.

ಪಾದರಸ ಶಿವಲಿಂಗ ಪೂಜೆಗೆ ಯಾವುದೇ ವಿಧಿವಿಧಾನಗಳಲ್ಲಿ ಅಥವಾ ಮಂತ್ರಗಳಲ್ಲಿ ವಿಶೇಷ ಮಾರ್ಪಾಡುಗಳಿಲ್ಲ. ಕೇವಲ ಶ್ರದ್ಧೆಯಿಂದ ನೀರಿನ ಅಭಿಷೇಕವನ್ನು ಮಾಡುವುದರಿಂದಲೇ ಶುಭ ಫಲಗಳು ದೊರೆಯುತ್ತವೆ ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿಲೀಪ್ ರಾಜ್ ಕೊನೆಯ ಕ್ಷಣಗಳು ಹೇಗಿತ್ತು? ಅಂಬ್ಯುಲೆನ್ಸ್ ನೀಡಿದ್ದರೆ ಉಳಿಯುತ್ತಿತ್ತು ಜೀವ? – Kannada News | Dileep Raj Demise: Auto driver Explains Wife Vidya’s Tragic Fight; Hospital Negligence Questioned

ಕನ್ನಡದ ಜನಪ್ರಿಯ ನಟ ಮತ್ತು ನಿರ್ಮಾಪಕ ದಿಲೀಪ್ ರಾಜ್ ಅವರ ಅಕಾಲಿಕ ನಿಧನ ಇಡೀ ಚಿತ್ರರಂಗವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಮೇ 13ರಂದು ಮುಂಜಾನೆ ಹೃದಯಾಘಾತದಿಂದ ನಿಧನರಾದ ದಿಲೀಪ್ ರಾಜ್ ಅವರನ್ನು ಉಳಿಸಿಕೊಳ್ಳಲು ಅವರ ಪತ್ನಿ ಶ್ರೀವಿದ್ಯಾ ನಡೆಸಿದ ಹೋರಾಟ ಈಗ ಕಣ್ಣೀರು ತರಿಸುವಂತಿದೆ. ಆ ಕೊನೆಯ ಕ್ಷಣಗಳಲ್ಲಿ ನಡೆದಿದ್ದೇನು ಎಂಬುದನ್ನು ಸ್ವತಃ ಆಟೋ ಚಾಲಕ ದೇವೇಂದ್ರ ನಾಯ್ಡು ವಿವರಿಸಿದ್ದಾರೆ.

‘ನಾನು ದಿಲೀಪ್ ಅವರ ಮನೆಯ ಹತ್ತಿರವೇ ಇದ್ದೆ. ಬೆಳಿಗ್ಗೆ ಸುಮಾರು 6:10ಕ್ಕೆ ಅವರ ಪತ್ನಿ ಶ್ರೀವಿದ್ಯಾ  ಆತಂಕದಿಂದ ಕರೆದರು. ಕೂಡಲೇ ಹೋದೆ. ನಾನು ಮತ್ತು ಅವರ ಮನೆಯ  ಭದ್ರತಾ ಸಿಬ್ಬಂದಿ ಸೇರಿ ದಿಲೀಪ್ ಅವರನ್ನು ಆಟೋದಲ್ಲಿ ಕೂರಿಸಿಕೊಂಡೆವು. ಆ ಸಮಯದಲ್ಲಿ ಅವರಿಗೆ ಸಿಪಿಆರ್ (CPR) ಕೂಡ ಮಾಡಿದೆವು. ಸ್ವಲ್ಪ ಉಸಿರಾಟ ಇತ್ತು. ಆದರೆ 6:15ರ ಸುಮಾರಿಗೆ ರಾಜರಾಜೇಶ್ವರಿ ನಗರದ ಆರ್ಚ್ ಹತ್ತಿರ ಬರುತ್ತಿದ್ದಂತೆ ದೊಡ್ಡ ಉಸಿರು ಬಿಟ್ಟರು’ ಎಂದು ದೇವೇಂದ್ರ ನಾಯ್ಡು ಆ ಕ್ಷಣಗಳನ್ನು ನೆನೆದಿದ್ದಾರೆ.

‘ದಿಲೀಪ್ ಅವರ ಸ್ಥಿತಿ ಕಂಡು ಪತ್ನಿ ಶ್ರೀವಿದ್ಯಾ  ಅವರು ಮೊದಲು ಜಯದೇವ ಆಸ್ಪತ್ರೆಗೆ ಹೋಗೋಣ ಎಂದಿದ್ದರು. ಆದರೆ ಅದು ದೂರವಾಗುತ್ತದೆ ಎಂಬ ಕಾರಣಕ್ಕೆ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮೊದಲು ಹೋದ ಆಸ್ಪತ್ರೆಯಲ್ಲಿ ವೈದ್ಯರಿರಲಿಲ್ಲ. ಸಿಬ್ಬಂದಿಗಳು ಕೇವಲ ಬಿಪಿ ಚೆಕ್ ಮಾಡಿ, ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದರು. ಕೆಆರ್ ಆಸ್ಪತ್ರೆಯಲ್ಲಿ ಇಸಿಜಿ ಮಾಡಿದಾಗ ಯಾವುದೇ ಸ್ಪಂದನೆ ಬರಲಿಲ್ಲ’ ಎಂದು ಆಟೋ ಚಾಲಕ ವಿವರಿಸಿದ್ದಾರೆ.

ಅಂಬ್ಯುಲೆನ್ಸ್ ನೀಡದ ಆಸ್ಪತ್ರೆ ವಿರುದ್ಧ ಆಕ್ರೋಶ:

ದಿಲೀಪ್ ಅವರನ್ನು ಉಳಿಸಿಕೊಳ್ಳಲು ಮತ್ತೊಂದು ಆಸ್ಪತ್ರೆಗೆ ಸಾಗಿಸಲು ಅಂಬ್ಯುಲೆನ್ಸ್ ಸಹಾಯ ಕೇಳಿದಾಗ ಕೆಆರ್ ಆಸ್ಪತ್ರೆಯವರು ನಿರಾಕರಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ‘ಅಲ್ಲಿ ಎರಡು ಅಂಬ್ಯುಲೆನ್ಸ್ ಇತ್ತು. ಆದರೂ ಅವರು ನಮಗೆ ಸಹಾಯ ಮಾಡಲಿಲ್ಲ. ಬಹುಶಃ ಭಯದಿಂದ ಇರಬಹುದು ಅಥವಾ ಅವರಿಗೆ ಮೊದಲೇ ಮೃತಪಟ್ಟಿದ್ದಾರೆ ಎಂದು ತಿಳಿದಿರಬಹುದು. ಆದರೆ ಮಾನವೀಯತೆ ದೃಷ್ಟಿಯಿಂದ ಅಂಬ್ಯುಲೆನ್ಸ್ ನೀಡಿದ್ದರೆ ಇಂದು ದಿಲೀಪ್ ಅವರು ನಮ್ಮೊಂದಿಗೆ ಇರುತ್ತಿದ್ದರೇನೋ’ ಎಂದು ಆಟೋ ಚಾಲಕ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಲವ್ ಮಾಕ್ಟೇಲ್ 3’ ಚಿತ್ರ ಒಟಿಟಿಯಲ್ಲಿ ಗಮನ ಸೆಳೆಯುವಾಗಲೇ ಕೊನೆಯುಸಿರೆಳೆದ ದಿಲೀಪ್ ರಾಜ್

ಆಸ್ಪತ್ರೆಯಲ್ಲಿ ಪತ್ನಿಯ ಆಕ್ರಂದನ:

‘ಕೊನೆಗೆ ಕಾರ್ ಮೂಲಕ ಸಾಗರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿನ ವೈದ್ಯರು ಪರೀಕ್ಷಿಸಿ ಅವರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಈ ಸುದ್ದಿ ಕೇಳುತ್ತಿದ್ದಂತೆ ದಿಲೀಪ್ ಪತ್ನಿ ಇಡೀ ಆಸ್ಪತ್ರೆಗೆ ಕೇಳಿಸುವಂತೆ ಜೋರಾಗಿ ಕಿರುಚಾಡಿ ಅತ್ತಿದ್ದಾರೆ. ಎಲ್ಲಾ ದೇವರಿಗೂ ಬೇಡಿಕೊಂಡರು, ಹೇಗಾದರೂ ಮಾಡಿ ಉಳಿಸಿಕೊಡಿ ಎಂದು ಪ್ರಾರ್ಥಿಸಿದರು. ಆದರೆ ವಿಧಿ ಆಟವೇ ಬೇರೆಯಾಗಿತ್ತು’ ಎಂದು ದೇವೇಂದ್ರ ನಾಯ್ಡು ಭಾವುಕರಾಗಿ ವಿವರಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

RCB ಗೆಲುವಿನಿಂದ ಸಂಕಷ್ಟಕ್ಕೆ ಸಿಲುಕಿದ 6 ತಂಡಗಳು!

Source link

Exit mobile version