ಆದಾಯ 11 ಕೋಟಿ, ಖರ್ಚು 60 ಕೋಟಿ ರೂ; ರಾಹುಲ್ ಗಾಂಧಿ ವಿದೇಶೀ ಪ್ರವಾಸಗಳಿಗೆ ಫಂಡಿಂಗ್ ಯಾರದು? ಬಿಜೆಪಿ ಪ್ರಶ್ನೆ – Kannada News | Rahul Gandhi Foreign Trips: BJP Alleges Rs 60 Cr Expenses vs Rs 11 Cr Income Discrepancy

ನವದೆಹಲಿ, ಮೇ 14: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿದೇಶಿ ಪ್ರವಾಸಗಳ (Rahul Gandhi’s foreign trips) ವೆಚ್ಚ ಮತ್ತು ಅವರ ಘೋಷಿತ ಆದಾಯದ ನಡುವೆ ಭಾರಿ ವ್ಯತ್ಯಾಸವಿದೆ ಎಂದು ಬಿಜೆಪಿ ಸಂಸದ ಸಂಬಿತ್ ಪಾತ್ರ (Sambit Patra) ಗಂಭೀರ ಆರೋಪ ಮಾಡಿದ್ದಾರೆ. 2004 ರಿಂದ 2026 ರ ಅವಧಿಯಲ್ಲಿ ರಾಹುಲ್ ಗಾಂಧಿ ಕೈಗೊಂಡಿರುವ 54 ವೈಯಕ್ತಿಕ ವಿದೇಶಿ ಪ್ರವಾಸಗಳಿಗಾಗಿ ಸುಮಾರು 60 ಕೋಟಿ ರೂ ವೆಚ್ಚವಾಗಿದೆ, ಆದರೆ ಅವರ ಘೋಷಿತ ಆದಾಯ ಕೇವಲ 11 ಕೋಟಿ ರೂ ಎಂದು ಬಿಜೆಪಿ ವಕ್ತಾರರೂ ಆದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದಾರೆ.

ಆದಾಯ 11 ಕೋಟಿ, ವೆಚ್ಚ 60 ಕೋಟಿ ರೂ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಬಿತ್ ಪಾತ್ರ, “2013-14 ರಿಂದ 2022-23 ರವರೆಗಿನ ಫಾರ್ಮ್ 26 ಅಫಿಡವಿಟ್ ಪ್ರಕಾರ ರಾಹುಲ್ ಅವರ 10 ವರ್ಷಗಳ ಒಟ್ಟು ಆದಾಯ 11 ಕೋಟಿ ರೂ. ಆಗಿದೆ. ಆದರೆ ಅವರ ವಿದೇಶಿ ಪ್ರವಾಸಗಳ ಮಾದರಿಯನ್ನು ಗಮನಿಸಿದರೆ, ಭದ್ರತೆ, ಪಂಚತಾರಾ ಹೋಟೆಲ್ ವಾಸ್ತವ್ಯ ಮತ್ತು ವಿಮಾನ ಪ್ರಯಾಣ ಸೇರಿ ಅಂದಾಜು 60 ಕೋಟಿ ರೂ. ಖರ್ಚಾಗಿದೆ. ಈ ಹಣ ಎಲ್ಲಿಂದ ಬಂತು?” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಆಮದು ಮಾಡಿಕೊಳ್ಳದೆ ಚಿನ್ನದ ಬೇಡಿಕೆ ಈಡೇರಿಸುವ ಉಪಾಯಗಳನ್ನು ಮುಂದಿಟ್ಟ ಆಭರಣ ಉದ್ಯಮಿಗಳು

ಸಂಬಿತ್ ಪಾತ್ರ ನೀಡಿರುವ ಮಾಹಿತಿ ಪ್ರಕಾರ, ರಾಹುಲ್ ಗಾಂಧಿ ಅವರು ಈ 22 ವರ್ಷದ ಅವಧಿಯಲ್ಲಿ ಇಟಲಿ, ಲಂಡನ್, ನ್ಯೂಯಾರ್ಕ್, ಬರ್ಲಿನ್, ವಿಯೆಟ್ನಾಂ, ದುಬೈ ಸೇರಿದಂತೆ ಹಲವು ದೇಶಗಳಿಗೆ ಒಟ್ಟು 54 ಬಾರಿ ಭೇಟಿ. ಅಂದಾಜು 60 ಕೋಟಿ ರೂ ವ್ಯಯಿಸಿದ್ದಾರೆ. 2015ರ ಆಗ್ನೇಯ ಏಷ್ಯಾ ಪ್ರವಾಸವೊಂದಕ್ಕೇ ಅಂದಾಜು 4.5 ಕೋಟಿ ರೂ. ಖರ್ಚಾಗಿದೆ. ಆದರೆ ಆ ವರ್ಷ ಅವರ ಆದಾಯ ಕೇವಲ 86.55 ಲಕ್ಷ ರೂ. ಮಾತ್ರ ಇತ್ತು ಎಂದು ಆರೋಪಿಸಿದ್ದಾರೆ ಬಿಜೆಪಿ ನಾಯಕ.

ಎಫ್​ಸಿಆರ್​ಎ ನಿಯಮಗಳ ಉಲ್ಲಂಘನೆ

ವಿದೇಶಿ ಆತಿಥ್ಯ ಸ್ವೀಕರಿಸುವ ಮೊದಲು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ಸೆಕ್ಷನ್ 6ರ ಅಡಿ ಕೇಂದ್ರ ಗೃಹ ಸಚಿವಾಲಯದಿಂದ ಅನುಮತಿ ಪಡೆಯುವುದು ಕಡ್ಡಾಯ. ರಾಹುಲ್ ಗಾಂಧಿ ಅಂತಹ ಯಾವುದೇ ಅನುಮತಿ ಪಡೆದಿಲ್ಲ ಎಂದು ಬಿಜೆಪಿ ಸಂಸದರು ದೂರಿದ್ದಾರೆ.

ಆರು ಅಘೋಷಿತ ಪ್ರವಾಸಗಳ ಗುಟ್ಟು?

ಸೆಪ್ಟೆಂಬರ್ 2025ರ ಸಿಆರ್‌ಪಿಎಫ್ (CRPF) ಪತ್ರವನ್ನು ಉಲ್ಲೇಖಿಸಿದ ಪಾತ್ರ, ಡಿಸೆಂಬರ್ 2024 ಮತ್ತು ಸೆಪ್ಟೆಂಬರ್ 2025 ರ ನಡುವೆ ನಡೆದ ಆರು ವಿದೇಶಿ ಪ್ರವಾಸಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದರು. ಇತ್ತೀಚಿನ ಮೇ 2026 ರ ಓಮನ್ ಪ್ರವಾಸದ ಬಗ್ಗೆಯೂ ಯಾವುದೇ ಸಾರ್ವಜನಿಕ ವಿವರಗಳಿಲ್ಲ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಪೋಸ್ಟ್ ಆಫೀಸ್ ಆವರ್ತನ ಠೇವಣಿ ಯೋಜನೆಯಲ್ಲಿ ತಿಂಗಳಿಗೆ 5,000 ರೂ ಹೂಡಿಕೆಯಿಂದ ಎಷ್ಟು ರಿಟರ್ನ್ಸ್?

“ಇದು ರಾಜಕೀಯ ದ್ವೇಷದ ಪ್ರಶ್ನೆಯಲ್ಲ, ಇದು ದಾಖಲೆಗಳ ಪ್ರಶ್ನೆ. ವಿದೇಶಿ ಸಂಸ್ಥೆಗಳು ಹಣ ನೀಡಿದ್ದರೆ FCRA ಅನುಮತಿ ಎಲ್ಲಿ? ವೈಯಕ್ತಿಕ ಹಣವಾಗಿದ್ದರೆ ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ಏಕೆ ಉಲ್ಲೇಖಿಸಿಲ್ಲ? ಅಥವಾ ಯಾರಾದರೂ ಉಡುಗೊರೆಯಾಗಿ ನೀಡಿದ್ದಾರೆಯೇ? ಹಾಗಿದ್ದರೆ ರಾಹುಲ್ ಗಾಂಧಿಯ ವಿದೇಶೀ ಪ್ರವಾಸಗಳಿಗೆ ಫಂಡಿಂಗ್ ಮಾಡುತ್ತಿರುವ ವಿದೇಶಿಗರು ಯಾರು?” ಎಂದು ಸಂಬಿತ್ ಪಾತ್ರ ಖಾರವಾಗಿ ಪ್ರಶ್ನಿಸಿದ್ದಾರೆ.

ಜನಪ್ರತಿನಿಧಿಗಳ ಕಾಯ್ದೆ ಮತ್ತು ಆದಾಯ ತೆರಿಗೆ ಕಾಯ್ದೆಯಡಿ ಪ್ರತಿಯೊಂದು ಪೈಸೆಗೂ ಲೆಕ್ಕವಿರಬೇಕು. ವಿದೇಶಿ ಪ್ರವಾಸಗಳ ಈ “ಹಣದ ದಾರಿ” (Money Trail) ಅಸ್ಪಷ್ಟವಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಕುರಿತು ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಪಾರದರ್ಶಕ ದಾಖಲೆಗಳನ್ನು ಪ್ರದರ್ಶಿಸಲಿ ಎಂದು ಬಿಜೆಪಿ ನಾಯಕ ಸವಾಲು ಹಾಕಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

British Scholarships 2026: ಬ್ರಿಟನ್‌ನಲ್ಲಿ ಉಚಿತವಾಗಿ ಓದಬೇಕೇ? ಭಾರತೀಯ ವಿದ್ಯಾರ್ಥಿಗಳಿಗಾಗಿ ಇಲ್ಲಿದೆ ‘ಬ್ರಿಟಿಷ್ ಸ್ಕಾಲರ್‌ಶಿಪ್’ ಕಂಪ್ಲೀಟ್ ಗೈಡ್! – Kannada News | British Scholarships 2026 for Indian Students: Study in UK with Full Funding

ಬ್ರಿಟನ್‌ನಲ್ಲಿ ಉಚಿತವಾಗಿ ಓದಬೇಕೇ? Image Credit source: Pinterest

ಲಂಡನ್ ಸೇರಿದಂತೆ ಯುಕೆಯ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆಯಲು ಇಚ್ಛಿಸುವವರಿಗಾಗಿ ಬ್ರಿಟಿಷ್ ಸರ್ಕಾರ ಮತ್ತು ವಿವಿಧ ಸಂಸ್ಥೆಗಳು ಪ್ರತಿ ವರ್ಷ ವಿದ್ಯಾರ್ಥಿವೇತನವನ್ನು ನೀಡುತ್ತವೆ. ಈ ಸ್ಕಾಲರ್‌ಶಿಪ್‌ಗಳು ನಿಮ್ಮ ಬೋಧನಾ ಶುಲ್ಕ ಮಾತ್ರವಲ್ಲದೆ, ವಾಸದ ವೆಚ್ಚವನ್ನೂ ಭರಿಸಬಲ್ಲವು. ಆದ್ದರಿಂದ ಭಾರತೀಯ ವಿದ್ಯಾರ್ಥಿಗಳಿಗಾಗಿ ‘ಬ್ರಿಟಿಷ್ ಸ್ಕಾಲರ್‌ಶಿಪ್ 2026’ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರಮುಖ ಸ್ಕಾಲರ್‌ಶಿಪ್‌ಗಳು ಯಾವುವು?

ಚೆವೆನಿಂಗ್ ಸ್ಕಾಲರ್‌ಶಿಪ್ (Chevening Scholarship):

ಇದು ಬ್ರಿಟಿಷ್ ಸರ್ಕಾರದ ಅತ್ಯಂತ ಪ್ರತಿಷ್ಠಿತ ವಿದ್ಯಾರ್ಥಿವೇತನವಾಗಿದೆ. ನಾಯಕತ್ವದ ಗುಣ ಹೊಂದಿರುವ ವಿದ್ಯಾರ್ಥಿಗಳಿಗೆ ಯಾವುದೇ ವಿಷಯದಲ್ಲಿ ಒಂದು ವರ್ಷದ ಸ್ನಾತಕೋತ್ತರ ಪದವಿ (Master’s) ಮಾಡಲು ಇದು ಸಂಪೂರ್ಣ ಆರ್ಥಿಕ ನೆರವು ನೀಡುತ್ತದೆ.

ಕಾಮನ್‌ವೆಲ್ತ್ ಸ್ಕಾಲರ್‌ಶಿಪ್ (Commonwealth Scholarship):

ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಇದನ್ನು ನೀಡಲಾಗುತ್ತದೆ. ಇದು ಬೋಧನಾ ಶುಲ್ಕ, ವಿಮಾನ ಪ್ರಯಾಣ ವೆಚ್ಚ ಮತ್ತು ಜೀವನ ನಿರ್ವಹಣಾ ಭತ್ಯೆಯನ್ನು ಒಳಗೊಂಡಿರುತ್ತದೆ.

ಗ್ರೇಟ್ ಸ್ಕಾಲರ್‌ಶಿಪ್ (GREAT Scholarships):

ಯುಕೆಯ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಓದಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ವಿದ್ಯಾರ್ಥಿವೇತನವಿದು. ಇದು ಕನಿಷ್ಠ 10,000 ಪೌಂಡ್‌ಗಳಷ್ಟು ಆರ್ಥಿಕ ನೆರವು ನೀಡುತ್ತದೆ.

ಚಾರ್ಲ್ಸ್ ವ್ಯಾಲೇಸ್ ಇಂಡಿಯಾ ಟ್ರಸ್ಟ್ (Charles Wallace India Trust):

ಕಲೆ, ಪರಂಪರೆ ಸಂರಕ್ಷಣೆ ಅಥವಾ ಮಾನವಿಕ ವಿಷಯಗಳಲ್ಲಿ ಸಂಶೋಧನೆ ಅಥವಾ ಕೋರ್ಸ್ ಮಾಡಲು ಬಯಸುವವರಿಗೆ ಈ ಟ್ರಸ್ಟ್ ಸಹಾಯ ಮಾಡುತ್ತದೆ.

ಅರ್ಹತಾ ಮಾನದಂಡಗಳೇನು?

  • ಅರ್ಜಿದಾರರು ಭಾರತೀಯ ನಾಗರಿಕರಾಗಿರಬೇಕು.
  • ಪದವಿ ಅಥವಾ ಸ್ನಾತಕೋತ್ತರ ಶಿಕ್ಷಣದಲ್ಲಿ ಉತ್ತಮ ಅಂಕಗಳನ್ನು ಪಡೆದಿರಬೇಕು.
  • ಇಂಗ್ಲಿಷ್ ಭಾಷಾ ಪ್ರಾವೀಣ್ಯತೆಯ ಪರೀಕ್ಷೆಗಳಾದ IELTS ಅಥವಾ PTE ನಲ್ಲಿ ನಿಗದಿತ ಸ್ಕೋರ್ ಪಡೆದಿರಬೇಕು.
  • ಕೆಲವು ಸ್ಕಾಲರ್‌ಶಿಪ್‌ಗಳಿಗೆ ಕನಿಷ್ಠ 2 ವರ್ಷಗಳ ಕೆಲಸದ ಅನುಭವ ಕಡ್ಡಾಯವಾಗಿರುತ್ತದೆ.

ಇದನ್ನೂ ಓದಿ: ನಟ ವಿಜಯ್ ಪುತ್ರಿ ದಿವ್ಯಾ ಸಾಶಾ ಬಗ್ಗೆ ನಿಮಗೆಷ್ಟು ಗೊತ್ತು? ಶೈಕ್ಷಣಿಕ ಹಿನ್ನೆಲೆಯ ಬಗ್ಗೆ ಇಲ್ಲಿದೆ ಮಾಹಿತಿ

ಅಗತ್ಯವಿರುವ ದಾಖಲೆಗಳು

  • ಪಾಸ್‌ಪೋರ್ಟ್ ಪ್ರತಿ
  • ಅಂಕಪಟ್ಟಿಗಳು ಮತ್ತು ಪದವಿ ಪ್ರಮಾಣಪತ್ರಗಳು
  • ಶಿಫಾರಸು ಪತ್ರಗಳು (Letters of Recommendation).
  • ಸ್ಟೇಟ್‌ಮೆಂಟ್ ಆಫ್ ಪರ್ಪಸ್ (SOP) – ನೀವು ಯಾಕೆ ಈ ಕೋರ್ಸ್ ಮಾಡಬೇಕೆಂದು ವಿವರಿಸುವ ಪ್ರಬಂಧ

ಅರ್ಜಿ ಸಲ್ಲಿಸುವುದು ಹೇಗೆ?

ಹೆಚ್ಚಿನ ವಿದ್ಯಾರ್ಥಿವೇತನಗಳಿಗೆ ಆಯಾ ಅಧಿಕೃತ ವೆಬ್‌ಸೈಟ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. 2026ರ ಸಾಲಿನ ಪ್ರವೇಶಾತಿಗಾಗಿ ಅರ್ಜಿ ಪ್ರಕ್ರಿಯೆಗಳು ಸಾಮಾನ್ಯವಾಗಿ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಿನಿಂದಲೇ ಆರಂಭವಾಗುತ್ತವೆ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿಲೀಪ್ ಅವರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನ ಹೇಗಿತ್ತು, ವಿವರಿಸಿದ ಆಟೋ ಚಾಲಕ – Kannada News | Auto Driver who tried to save Dileep Raj’s life talks about the incident

ನಟ ದಿಲೀಪ್ ರಾಜ್ (Dileep Raj) ನಿನ್ನೆ (ಮೇ 13) ನಿಧನ ಹೊಂದಿದರು. ದಿಲೀಪ್ ಸಾವಿಗೆ ಹೃದಯಾಘಾತ ಕಾರಣ ಎನ್ನಲಾಗಿದೆ. ದಿಲೀಪ್ ಅವರು ಮನೆಯ ಬಳಿ ಕುಸಿದು ಬಿದ್ದಾಗ ಅವರನ್ನು ಅವರ ಪತ್ನಿಯ ಜೊತೆಗೆ ಆಸ್ಪತ್ರೆಗೆ ಕರೆದೊಯ್ದ ಆಟೋ ಚಾಲಕ ಇದೀಗ ಟಿವಿ9 ಜೊತೆಗೆ ಮಾತನಾಡಿದ್ದು, ದಿಲೀಪ್ ಅವರ ಕೊನೆಯ ಕ್ಷಣಗಳು ಹೇಗಿದ್ದವು ಎಂದು ವಿವರಿಸಿದ್ದಾರೆ. ಅಲ್ಲದೆ, ದಿಲೀಪ್ ಅವರನ್ನು ಉಳಿಸಿಕೊಳ್ಳಲು ಅವರ ಪತ್ನಿ ಶ್ರೀದೇವಿ ಮಾಡಿದ ಪ್ರಯತ್ನಗಳು ಹೇಗಿತ್ತು, ದಿಲೀಪ್ ಅವರ ಸಾವಿನ ಘೋಷಣೆ ಬಳಿಕ ಅವರ ಪ್ರತಿಕ್ರಿಯೆ ಎಷ್ಟು ಕರುಣಾಜನಕವಾಗಿತ್ತು ಎಂದು ಆಟೋ ಚಾಲಕ ವಿವರಿಸಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಂದು ವಿದ್ಯಾರ್ಥಿ ನಾಯಕ, ಇಂದು ಮುಖ್ಯಮಂತ್ರಿ! ಕೇರಳ ನೂತನ ಸಿಎಂ ವಿಡಿ ಸತೀಶನ್ ರಾಜಕೀಯ ಹಾದಿಯ ಹಿನ್ನೋಟ ಇಲ್ಲಿದೆ – Kannada News | VD Satheesan Profile: From Student Leader to Kerala’s New Chief Minister from UDF

ವಿ.ಡಿ. ಸತೀಶನ್Image Credit source: PTI

ತಿರುವನಂತಪುರ, ಮೇ 14: ಕೇರಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) 102 ಸ್ಥಾನಗಳನ್ನು ಗೆದ್ದು ಐತಿಹಾಸಿಕ ಜಯ ದಾಖಲಿಸಿದ 10 ದಿನಗಳ ನಂತರ ಹಿರಿಯ ನಾಯಕ ವಿಡಿ ಸತೀಶನ್ (VD Satheesan) ಕೇರಳದ (Kerala) ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ದಶಕಗಳ ಕಾಲ ಕಾಂಗ್ರೆಸ್ ಪಕ್ಷದ ಪ್ರಖರ ಧ್ವನಿಯಾಗಿ ಗುರುತಿಸಿಕೊಂಡಿದ್ದ ಸತೀಶನ್, ಹೈಕಮಾಂಡ್‌ನ ಸುದೀರ್ಘ ಚರ್ಚೆಯ ನಂತರ ಮುಖ್ಯಮಂತ್ರಿ ಗದ್ದುಗೆಗೆ ಆಯ್ಕೆಯಾಗಿದ್ದಾರೆ.

ಮುಖ್ಯಾಂಶಗಳು

  • 61 ವರ್ಷದ ವಿಡಿ ಸತೀಶನ್ ಪರವೂರು ಕ್ಷೇತ್ರದಿಂದ ಸತತ ಆರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.
  • 2021ರಲ್ಲಿ ವಿರೋಧ ಪಕ್ಷದ ನಾಯಕರಾಗಿ ನೇಮಕ
  • ಪರಿಸರವಾದಿಯಾಗಿ ಗುರುತಿಸಿಕೊಂಡಿರುವ ಸತೀಶನ್, ಪಶ್ಚಿಮ ಘಟ್ಟಗಳ ರಕ್ಷಣೆಗಾಗಿ ಮಾಧವ್ ಗಾಡ್ಗೀಳ್ ವರದಿಯನ್ನು ಬಹಿರಂಗವಾಗಿ ಬೆಂಬಲಿಸಿದವರು.

1964ರಲ್ಲಿ ಕೇರಳದ ಕೊಚ್ಚಿಯ ನೆಟ್ಟೂರಿನಲ್ಲಿ ಜನಿಸಿದ ಸತೀಶನ್ ಅವರು ಕಾನೂನು ಪದವೀಧರರಾಗಿದ್ದು, ವಿದ್ಯಾರ್ಥಿ ದೆಸೆಯಿಂದಲೇ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. 1996ರ ಚುನಾವಣೆಯಲ್ಲಿ ಸೋಲು ಕಂಡರೂ ಎದೆಗುಂದದ ಅವರು, ನಂತರ ಪರವೂರು ಕ್ಷೇತ್ರವನ್ನು ಕಾಂಗ್ರೆಸ್‌ನ ಭದ್ರಕೋಟೆಯನ್ನಾಗಿ ಪರಿವರ್ತಿಸಿದರು. ಸತತ 2001 ರಿಂದ 2026ರವರೆಗೆ ಆರು ಚುನಾವಣೆಗಳನ್ನು ಗೆದ್ದ ದಾಖಲೆ ಇವರದ್ದಾಗಿದೆ.

ವಿಧಾನಸಭೆಯ ಒಳಗೆ ಅಂಕಿಅಂಶಗಳೊಂದಿಗೆ ಎದುರಾಳಿಗಳನ್ನು ಕಟ್ಟಿಹಾಕುವ ಇವರ ಶೈಲಿ ಅಪಾರ ಜನಮನ್ನಣೆ ಗಳಿಸಿದೆ. 2006-2011ರ ನಡುವೆ ಪ್ರತಿಪಕ್ಷದ ನಾಯಕರಾಗಿದ್ದ ಉಮ್ಮನ್ ಚಾಂಡಿ ಅವರ ಅವಧಿಯಲ್ಲಿ 33 ನಿಲುವಳಿ ಸೂಚನೆಗಳನ್ನು ಮಂಡಿಸುವ ಮೂಲಕ ಸತೀಶನ್ ಇತಿಹಾಸ ನಿರ್ಮಿಸಿದ್ದರು. ಬಣ ರಾಜಕೀಯದಿಂದ ದಶಕಗಳ ಕಾಲ ಸಚಿವ ಸ್ಥಾನ ಸೇರಿದಂತೆ ಹಲವು ಅವಕಾಶಗಳಿಂದ ವಂಚಿತರಾಗಿದ್ದರೂ, ಈಗ ಕೇರಳದ ಅತ್ಯುನ್ನತ ರಾಜಕೀಯ ಸ್ಥಾನವನ್ನು ಅಲಂಕರಿಸಿದ್ದಾರೆ. ಈ ಮೂಲಕ ಸತೀಶನ್ ಅವರ ತಾಳ್ಮೆಗೆ ಫಲ ದೊರೆತಿದೆ.

ವಿದ್ಯಾರ್ಥಿ ದೆಸೆಯಿಂದಲೇ ರಾಜಕೀಯದಲ್ಲಿ ಸಕ್ರಿಯ

ಸವಿದ್ಯಾರ್ಥಿ ದೆಸೆಯಿಂದಲೇ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಸತೀಶನ್, 1986-1987ರಲ್ಲಿ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಯೂನಿಯನ್ ಅಧ್ಯಕ್ಷರಾಗಿ ಮತ್ತು ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (NSUI) ರಾಷ್ಟ್ರೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಕೊನೆಗೂ ಕೇರಳದ ಸಿಎಂ ಹೆಸರು ಘೋಷಿಸಿದ AICC: ವಿ.ಡಿ.ಸತೀಶನ್​ ದೇವರನಾಡಿನ ನೂತನ ಮುಖ್ಯಮಂತ್ರಿ

ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಉಪಾಧ್ಯಕ್ಷರಾಗಿ ಮತ್ತು ಎಐಸಿಸಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. 2021ರಲ್ಲಿ ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ನೇಮಕಗೊಂಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊನೆಗೂ ಕೇರಳದ ಸಿಎಂ ಹೆಸರು ಘೋಷಿಸಿದ AICC: ವಿ.ಡಿ.ಸತೀಶನ್​ ದೇವರನಾಡಿನ ನೂತನ ಮುಖ್ಯಮಂತ್ರಿ – Kannada News | Congress Leader V. D. Satheesan Elected as New Chief Minister of Kerala

ತಿರುವನಂತಪುರಂ/ದೆಹಲಿ, ಮೇ 14: ಸಾಕಷ್ಟು ಅಳೆದು ತೂಗಿ, ನಾನಾ ಲೆಕ್ಕಾಚಾರಗಳ ಬಳಿಕ ಕೊನೆಗೂ ಕೇರಳದ ನೂತನ ಸಿಎಂ ಆಗಿ ವಿ.ಡಿ.ಸತೀಶನ್ ಅವರ ಹೆಸರನ್ನು ಎಐಸಿಸಿ ಘೋಷಿಸಿದೆ. ಕೇರಳ ಕಾಂಗ್ರೆಸ್ ನಾಯಕರಾದ ಕೆ.ಸಿ ವೇಣುಗೋಪಾಲ್,  ವಿ.ಡಿ ಸತೀಶನ್ ಮತ್ತು  ರಮೇಶ್ ಚೆನ್ನಿತ್ತಲ ಹೆಸರುಗಳು ಪ್ರಮುಖವಾಗಿ ಸಿಎಂ ರೇಸ್​​ನಲ್ಲಿದ್ದವು. ಆದರೆ ಈ ಪೈಕಿ ವಿ.ಡಿ.ಸತೀಶನ್ ಅವರನ್ನು ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ.

ಎಐಸಿಸಿ ಕೇರಳ ಉಸ್ತುವಾರಿ ದೀಪಾ ದಾಸ್ಮುನ್ಸಿ ಹಾಗೂ ಪಕ್ಷದ ಕೇಂದ್ರ ವೀಕ್ಷಕರಾದ ಅಜಯ್ ಮಾಕನ್ ಮತ್ತು ಮುಕುಲ್ ವಾಸ್ನಿಕ್ ಅವರು ಸುದ್ದಿಗೋಷ್ಠಿಯಲ್ಲಿ ನೂತನ ಸಿಎಂ ಹೆಸರು ಪ್ರಕಟಿಸಿದ್ದಾರೆ. ಮುಖ್ಯಮಂತ್ರಿ ಹೆಸರು ಘೋಷಣೆಗೆ ಮುನ್ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಹಿರಿಯ ನಾಯಕರೊಂದಿಗೆ ಕೊನೆಯ ಹಂತದ ಸಮಾಲೋಚನೆಗಳನ್ನು ನಡೆಸಿದ್ದರು. ಮೂಲಗಳ ಪ್ರಕಾರ, ಖರ್ಗೆ ಅವರು ಎಐಸಿಸಿ ಕೇರಳ ಉಸ್ತುವಾರಿ ದೀಪಾ ದಾಸ್ಮುನ್ಸಿ ಹಾಗೂ ಹಿರಿಯ ವೀಕ್ಷಕರೊಂದಿಗೆ ಚರ್ಚೆ ನಡೆಸಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ 2 ಬಣವಾದ ಎನ್​ಡಿಎ; ಎಐಎಡಿಎಂಕೆಯಿಂದ ಬಂಡಾಯ ನಾಯಕರನ್ನು ಉಚ್ಛಾಟಿಸಿದ ಇಪಿಎಸ್

ಏಪ್ರಿಲ್​​ 9ರಂದು ಕೇರಳ ವಿಧಾನಸಭಾ ಚುನಾವಣೆ ನಡೆದಿದ್ದು, ಇದರ ಫಲಿತಾಂಶ ಮೇ 4ರಂದು ಪ್ರಕಟಗೊಂಡಿತ್ತು. ಕಾಂಗ್ರೆಸ್ ನೇತೃತ್ವದ ಯುಡಿಎಫ್ 140 ವಿಧಾನಸಭಾ ಸ್ಥಾನಗಳ ಪೈಕಿ 102 ಸ್ಥಾನಗಳನ್ನು ಗೆಲ್ಲುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆಡಳಿತಾರೂಢ ಎಲ್​​ಡಿಎಫ್​​ ಕೇವಲ 35 ಸ್ಥಾನಗಳನ್ನು ಪಡೆಯುವ ಮೂಲಕ ಹೀನಾಯ ಸೋಲುಂಡಿತ್ತು. ಹೀಗಿದ್ದರೂ ನೂತನ ಸಿಎಂ ಆಯ್ಕೆಗೆ ಬರೋಬ್ಬರಿ 10 ದಿನಗಳನ್ನು ಕಾಂಗ್ರೆಸ್​​ ನಾಯಕರು ತೆಗೆದುಕೊಂಡಿದ್ದಾರೆ.

ಕೇರಳದಲ್ಲಿ ಸಂಭ್ರಮಾಚರಣೆ

ಕೇರಳ ರಾಜ್ಯದ ನೂತನ ಸಿಎಂ ಆಗಿ ವಿ.ಡಿ.ಸತೀಶನ್​ ಆಯ್ಕೆ ಬೆನ್ನಲ್ಲೇ ತಿರುವನಂತಪುರಂನಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರಿಂದ ಸಂಭ್ರಮಾಚರಣೆ ನಡೆದಿದೆ.

ಒಳ್ಳೆಯ ನಿರ್ಧಾರ ಎಂದ ಸನ್ನಿ ಜೋಸೆಫ್​

ನೂತನ ಸಿಎಂ ಆಗಿ ವಿ.ಡಿ.ಸತೀಶನ್ ಆಯ್ಕೆ ಸಂಬಂಧ ಕೇರಳ ಕಾಂಗ್ರೆಸ್ ಅಧ್ಯಕ್ಷ ಸನ್ನಿ ಜೋಸೆಫ್​ ಪ್ರತಿಕ್ರಿಯೆ ನೀಡಿದ್ದಾರೆ. ತಿರುವನಂತಪುರಂನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದು ತುಂಬಾ ಒಳ್ಳೆಯ ನಿರ್ಧಾರ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:09 pm, Thu, 14 May 26

Source link

ವಿಜಯ್ ಬಳಿಕ ತೆಲುಗು ರಾಜ್ಯಗಳಲ್ಲಿ ಜೂ ಎನ್​​ಟಿಆರ್, ರಾಜಕೀಯ ಎಂಟ್ರಿ ಸುಳಿವು ಕೊಟ್ಟ ನಟ? – Kannada News | Jr NTR to start 100 crore rs welfare fund, will he enter politics

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ವಿಜಯ್ (Vijay) ಈಗ ತಮಿಳುನಾಡಿನ ಸಿಎಂ ಆಗಿದ್ದಾರೆ. ಸೂಪರ್ ಸ್ಟಾರ್ ಆಗಿ ಸಿಕ್ಕ ಪ್ರಚಾರ, ಜನಪ್ರಿಯತೆಯನ್ನು ಅವರು ರಾಜಕೀಯ ಪ್ರವೇಶಕ್ಕೆ ಮೆಟ್ಟಿಲಾಗಿ ಬಳಸಿಕೊಂಡಿದ್ದು ಮಾತ್ರವಲ್ಲದೆ ಸಿಎಂ ಸಹ ಆಗಿದ್ದಾರೆ. ವಿಜಯ್ ಅವರ ಈ ಯಶಸ್ಸು, ಇತರೆ ಕೆಲವು ಸೂಪರ್ ಸ್ಟಾರ್​​ಗಳಲ್ಲಿ ರಾಜಕೀಯ ಮಹಾತ್ವಾಕಾಂಕ್ಷೆಯನ್ನು ಹುಟ್ಟಿಸಿರುವುದು ಸುಳ್ಳಲ್ಲ. ವಿಜಯ್ ಸಿಎಂ ಆದ ಬೆನ್ನಲ್ಲೆ, ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಜೂ ಎನ್​​ಟಿಆರ್ ಸಹ ತಮ್ಮ ರಾಜಕೀಯ ಎಂಟ್ರಿಯನ್ನು ಪರೋಕ್ಷವಾಗಿ ಪ್ರದರ್ಶಿಸಿದ್ದಾರೆ. ಅವರ ಹುಟ್ಟುಹಬ್ಬದಂದು ಮಹತ್ ಕಾರ್ಯವೊಂದಕ್ಕೆ ಜೂ ಎನ್​​ಟಿಆರ್ ಕೈ ಹಾಕಿದ್ದಾರೆ.

ಜೂ ಎನ್​​ಟಿಆರ್ ಮೇ 20 ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಆ ದಿನ ಅವರ ಅಭಿಮಾನಿಗಳ ಸಂಘಗಳ ನೆರವಿನೊಂದಿಗೆ ದೊಡ್ಡ ಸಾಮಾಜಿಕ ಕಾರ್ಯಕ್ಕೆ ಕೈ ಹಾಕಿದ್ದಾರೆ. ಆ ದಿನ ಜೂ ಎನ್​​ಟಿಆರ್ ಹೆಸರಲ್ಲಿ 100 ಕೋಟಿ ಮೌಲ್ಯದ ‘ಸೋಷಿಯಲ್ ವೆಲ್​​ಫೇರ್ ಫಂಡ್’ ಒಂದನ್ನು ಸೃಷ್ಟಿಸಲು ಮುಂದಾಗಿದ್ದಾರೆ. ಈ ವೆಲ್​​ಫೇರ್ ಫಂಡ್ ಮೂಲಕ ಎರಡೂ ತೆಲುಗು ರಾಜ್ಯಗಳಲ್ಲಿ ತಮ್ಮ ಅಭಿಮಾನಿ ಸಂಘಗಳನ್ನು ಬಳಸಿಕೊಂಡು ಜೂ ಎನ್​​ಟಿಆರ್ ಅವರು ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಲಿದ್ದಾರೆ. ನಟರ ‘ಸಾಮಾಜಿಕ ಕಾರ್ಯ’ದ ದೂರಗಾಮಿ ಪ್ರತಿಫಲ ಏನೆಂದು ಎಲ್ಲರಿಗೂ ಗೊತ್ತಿರುವುದೇ, ನಟರು ಸಾಮಾಜಿಕ ಕಾರ್ಯಕ್ಕೆ ಇಳಿದರೆಂದರೆ ಅದರ ಹಿಂದೆ ರಾಜಕೀಯ ಮಹತ್ವಾಕಾಂಕ್ಷೆ ಬಹುತೇಕ ಖಾತ್ರಿ.

ಇದನ್ನೂ ಓದಿ:ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ಸಿ. ಜೋಸೆಫ್​​ ವಿಜಯ್​​

ಅಂದಹಾಗೆ ಜೂ ಎನ್​​ಟಿಆರ್ ಅವರಿಗೆ ರಾಜಕೀಯ ಹೊಸದಲ್ಲ. ಅವರು ಯುವಕರಾಗಿದ್ದಾಗಲೇ ರಾಜಕೀಯಕ್ಕೆ ಧುಮುಕಿದವರು. ಈಗ ಆಂಧ್ರದಲ್ಲಿ ಆಡಳಿತದಲ್ಲಿರುವ ಟಿಡಿಪಿ ಪಕ್ಷದ ಯುವ ರಾಜ್ಯಾಧ್ಯಕ್ಷರು ಸಹ ಆಗಿದ್ದರು ಜೂ ಎನ್​​ಟಿಆರ್. ಟಿಡಿಪಿಯ ಸ್ಟಾರ್ ಪ್ರಚಾರಕರಾಗಿಯೂ ಕೆಲಸ ಮಾಡಿದ್ದಾರೆ. ಅಖಂಡ ಆಂಧ್ರ ಪ್ರದೇಶದ ಹಲವು ನಗರಗಳನ್ನು ಸುತ್ತಿ ಟಿಡಿಪಿ ಪರವಾಗಿ ಪ್ರಚಾರವನ್ನೂ ಸಹ ಜೂ ಎನ್​​ಟಿಆರ್ ಮಾಡಿದ್ದಾರೆ. ಜೂ ಎನ್​​ಟಿಆರ್ ಅವರನ್ನು ಪಕ್ಷದ ಆಸ್ತಿಯೆಂದು ಚಂದ್ರಬಾಬು ನಾಯ್ಡು ಬಣ್ಣಿಸಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ಪಕ್ಷದ ಮುಖಂಡರಾದ ಚಂದ್ರಬಾಬು ನಾಯ್ಡು ಮತ್ತು ನಂದಮೂರಿ ಬಾಲಕೃಷ್ಣ ಅವರುಗಳು ಜೂ ಎನ್​​ಟಿಆರ್ ಅವರನ್ನು ಪಕ್ಷದಿಂದ ದೂರ ಇರಿಸಿದ್ದಾರೆ.

ಆದರೆ ಜೂ ಎನ್​​ಟಿಆರ್ ಅವರು ತಮ್ಮದೇ ಸ್ವಂತ ಪಕ್ಷ ಕಟ್ಟುವ ಯೋಜನೆ ಹಾಕಿಕೊಂಡಂತಿದ್ದು, ಅದೇ ಕಾರಣದಿಂದ ಈಗ ಅಭಿಮಾನಿ ಸಂಘಗಳ ಮೂಲಕ ರಾಜ್ಯದಾದ್ಯಂತ ಸಾಮಾಜ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ವಿಜಯ್ ಸಹ ತಮ್ಮ ಅಭಿಮಾನಿ ಸಂಘಟನೆ ‘ವಿಜಯ್ ಮಕ್ಕಳ್ ಇಯಕ್ಕಂ’ ಮೂಲಕ ಸಾಮಾಜಿಕ ಕಾರ್ಯವನ್ನು ಮಾಡಿ, ಸಂಘವನ್ನು ಬಲಪಡಿಸಿ ಅದರ ಬಲದಿಂದಲೇ ಟಿವಿಕೆ ಪಕ್ಷವನ್ನು ಕಟ್ಟಿ ಬೆಳೆಸಿ ಈಗ ಸಿಎಂ ಆಗಿದ್ದಾರೆ. ಜೂ ಎನ್​​ಟಿಆರ್ ಸಹ ಇದೇ ಹಾದಿಯಲ್ಲಿ ನಡೆಯುವ ನಿರ್ಧಾರ ಮಾಡಿದಂತಿದ್ದಾರೆ.

ಜೂ ಎನ್​​ಟಿಆರ್​ ಭಾರಿ ಅಭಿಮಾನಿಗಳನ್ನು ಹೊಂದಿರುವ ನಟ. ಜೊತೆಗೆ ಅದ್ಭುತ ಮಾತುಗಾರ ಸಹ. ಅವರ ಕುಟುಂಬವೇ ರಾಜಕೀಯ ಕುಟುಂಬ ಹಾಗಾಗಿ ರಾಜಕೀಯ ಪಟ್ಟುಗಳು ಅವರಿಗೆ ಹೊಸದೇನೂ ಅಲ್ಲ. ಈಗಾಗಲೇ ಸಚಿವರಾಗಿರುವ, ಶಾಸಕರಾಗಿರುವ ಹಲವು ರಾಜಕಾರಣಿಗಳು ಜೂ ಎನ್​​ಟಿಆರ್ ಅವರಿಗೆ ಬಲು ಹತ್ತಿರದವರು. ಅಲ್ಲದೆ ಯಾವುದೇ ವಿವಾದ ಇಲ್ಲದ, ಎಲ್ಲ ರಾಜಕೀಯ ಪಕ್ಷಗಳು ಸಮಾನ ಗೌರವ ಕೊಡುವ ವ್ಯಕ್ತಿಯೂ ಅವರಾಗಿದ್ದಾರೆ. ಹಾಗಾಗಿ ಅವರು ರಾಜಕೀಯಕ್ಕೆ ಬಂದರೆ ಗೆಲುವು ತೀರ ಕಷ್ಟವೇನೂ ಅಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

RCB ಯಶಸ್ಸಿಗೆ ನಾನು ಕೂಡ ಕಾರಣ: ಅಂಬಾಟಿ ರಾಯುಡು ವಾದ! – Kannada News | Ambati Rayudu deserves credit for RCB’s success

ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವೈಫಲ್ಯಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು, ಈಗ ಆರ್‌ಸಿಬಿ ತಂಡದ ಭರ್ಜರಿ ಯಶಸ್ಸಿನ ಸಂಪೂರ್ಣ ಶ್ರೇಯಸ್ಸು ತನಗೆ ಸಲ್ಲಬೇಕು ಎಂದಿದ್ದಾರೆ! ತಾವು ಮಾಡಿದ ಕಟು ಟೀಕೆಗಳೇ ಆರ್‌ಸಿಬಿ ಮ್ಯಾನೇಜ್‌ಮೆಂಟ್‌ ಕಣ್ಣು ತೆರೆಸುವಂತೆ ಮಾಡಿತು ಮತ್ತು ಆ ತಪ್ಪುಗಳನ್ನು ತಿದ್ದಿಕೊಂಡಿದ್ದರಿಂದಲೇ ಇಂದು ತಂಡವು ಐಪಿಎಲ್‌ನಲ್ಲಿ ಅಬ್ಬರಿಸುತ್ತಿದೆ ಎಂಬುದು ರಾಯುಡು ಅವರ ವಾದ.

 ಅಂಬಾಟಿ ರಾಯುಡು ಮುಂದಿಟ್ಟಿರುವ ವಾದಗಳೇನು?

ನಾನು ವರ್ಷಗಳಿಂದ RCB ತಂಡದ ಮೇಲೆ ಮಾಡುತ್ತಿದ್ದ ಟೀಕೆಗಳು ಕೇವಲ ದ್ವೇಷದಿಂದ ಕೂಡಿರಲಿಲ್ಲ. ಬದಲಿಗೆ ಅವುಗಳ ಹಿಂದೆ ಬಲವಾದ ತಾರ್ಕಿಕ ಕಾರಣಗಳಿದ್ದವು ಎಂದು ರಾಯುಡು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ತಂಡವು ತಮ್ಮ ಹಳೆಯ ಸಲಹೆಗಳನ್ನು ಪಾಲಿಸಿ ಮೂರು ಪ್ರಮುಖ ಬದಲಾವಣೆಗಳನ್ನು ಮಾಡಿಕೊಂಡಿದ್ದರಿಂದಲೇ ಗೆಲುವಿನ ಹಾದಿಗೆ ಮರಳಿದೆ ಎಂದು ಅವರು ಹೇಳಿದ್ದಾರೆ. ಆ ಬದಲಾವಣೆಗಳೆಂದರೆ…

  • ಭಾರತೀಯ ಮಧ್ಯಮ ಕ್ರಮಾಂಕದ ಬಲ: ಈ ಹಿಂದೆ RCB ಕೇವಲ ಜಾಗತಿಕ ಸ್ಟಾರ್ ಆಟಗಾರರ ಮೇಲಷ್ಟೇ ಅವಲಂಬಿತವಾಗಿತ್ತು. ಆದರೆ ಈ ಬಾರಿ ಅನುಭವಿ ಭಾರತೀಯ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಿಗೆ ಜವಾಬ್ದಾರಿ ನೀಡಿರುವುದನ್ನು ರಾಯುಡು ಶ್ಲಾಘಿಸಿದ್ದಾರೆ.
  •  ಸ್ಥಿರ ಪ್ರದರ್ಶನದ ಫಿನಿಶರ್‌ಗಳು: ಒತ್ತಡದ ಸಮಯದಲ್ಲಿ ಪಂದ್ಯವನ್ನು ಮುಗಿಸಿಕೊಡಬಲ್ಲ ಗುಣಮಟ್ಟದ ದೇಶಿ ಫಿನಿಶರ್‌ಗಳನ್ನು ತಂಡಕ್ಕೆ ಸೇರಿಸಿಕೊಂಡಿರುವುದು ಯಶಸ್ಸಿಗೆ ಪ್ರಮುಖ ಕಾರಣ ಎಂದಿದ್ದಾರೆ.
  •  ಅನುಭವಿ ಬೌಲಿಂಗ್ ಲೈನ್-ಅಪ್: ಈ ಹಿಂದೆ RCB ಬೌಲಿಂಗ್ ವಿಭಾಗವನ್ನು ತೀವ್ರವಾಗಿ ಟೀಕಿಸುತ್ತಿದ್ದ ರಾಯುಡು, ಈ ಬಾರಿ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹೇಝಲ್​ವುಡ್ ಅವರಂತಹ ಹಿರಿಯ ವೇಗಿಗಳನ್ನು ತಂಡಕ್ಕೆ ಸೇರಿಸಿಕೊಂಡಿರುವುದೇ ಬೌಲಿಂಗ್ ಸುಧಾರಿಸಲು ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಎಲ್ಲಾ ಟೀಕೆಗಳನ್ನು ನಾನು ಈ ಹಿಂದಿನಿಂದಲೂ ಮಾಡುತ್ತಾ ಬಂದಿದ್ದೀನಿ. ನಾನು ಮಾಡಿದ ಕಟು ಟೀಕೆಗಳೇ RCB ಮ್ಯಾನೇಜ್‌ಮೆಂಟ್‌ ಕಣ್ಣು ತೆರೆಸುವಂತೆ ಮಾಡಿತು. ಅದರಂತೆ ಕಳೆದ ಸೀಸನ್​ನಲ್ಲಿ ಆರ್​ಸಿಬಿ ಮೂರು ವಿಭಾಗಗಳಲ್ಲಿ ಅತ್ಯುತ್ತಮ ಆಟಗಾರರನ್ನು ಆಯ್ಕೆ ಮಾಡಿಕೊಂಡಿದೆ. ಅದರ ಫಲವಾಗಿ ಇದೀಗ ಆರ್​ಸಿಬಿ ಗೆಲ್ಲುತ್ತಿದೆ.

ಇದನ್ನೂ ಓದಿ: RCB ಗೆಲುವಿನಿಂದ ಸಂಕಷ್ಟಕ್ಕೆ ಸಿಲುಕಿದ 6 ತಂಡಗಳು!

ಅಂದರೆ ಹೇಳಿದ ತಪ್ಪುಗಳನ್ನು ತಿದ್ದಿಕೊಂಡಿದ್ದರಿಂದಲೇ ಇಂದು RCB ತಂಡವು ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ಹೀಗಾಗಿ ಇದರ ಶ್ರೇಯಶಸ್ಸು ನನಗೂ ಸಲ್ಲಬೇಕು ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.

ಅಭಿಮಾನಿಗಳ ಆಕ್ರೋಶ:

ಅಂಬಾಟಿ ರಾಯುಡು ಅವರ ಈ ಹೇಳಿಕೆಯನ್ನು ರಾಯಲ್ ಚಾಲೆಂಜರ್ಸ್​ ಬೆಂಗಳೂರು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಇದಕ್ಕೆ ರಾಯುಡು ಮತ್ತು RCB ನಡುವಿನ ಹಳೆಯ ಇತಿಹಾಸವೇ ಕಾರಣ. ಅದೇನೆಂದು ನೋಡುವುದಾದರೆ…

    • ಟ್ರೋಫಿ ಸಂಖ್ಯೆಯ ಲೇವಡಿ: RCB ತನ್ನ ಮೊದಲ ಐಪಿಎಲ್ ಟ್ರೋಫಿ ಗೆದ್ದಾಗ ಲೇವಡಿ ಮಾಡಿದ್ದ ರಾಯುಡು, “ನಿಮಗೆ ಒಂದು ಕಪ್ ಗೆಲ್ಲಲು 18 ವರ್ಷ ಬೇಕಾಯಿತು, ಹಾಗಾದರೆ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ 5 ಟ್ರೋಫಿಗಳ ದಾಖಲೆ ಸರಿಗಟ್ಟಲು ನಿಮಗೆ 72 ವರ್ಷ ಬೇಕಾಗಬಹುದು” ಎಂದು ಕಾಲೆಳೆದಿದ್ದರು.
    • ಸಂಭ್ರಮಾಚರಣೆಗೆ ಟೀಕೆ: 2024ರ ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡವನ್ನು ಟೂರ್ನಿಯಿಂದ ಹೊರಹಾಕಿದಾಗ ಆರ್‌ಸಿಬಿ ಆಟಗಾರರು ಮತ್ತು ಅಭಿಮಾನಿಗಳು ರಸ್ತೆಯಲ್ಲಿ ಅತಿಯಾಗಿ ಸಂಭ್ರಮಿಸಿದ್ದನ್ನು ರಾಯುಡು ಟೀಕಿಸಿದ್ದರು. “ಕೇವಲ ಸಂಭ್ರಮಾಚರಣೆಗಳು ನಿಮಗೆ ಟ್ರೋಫಿ ತಂದುಕೊಡುವುದಿಲ್ಲ” ಎಂದು ತಿವಿದಿದ್ದರು.
    • ಕ್ರೆಡಿಟ್ ಕದಿಯುವ ಯತ್ನ: ಪ್ರಸ್ತುತ ಅಭಿಮಾನಿಗಳು ರಾಯುಡು ಅವರ ಹೇಳಿಕೆಯನ್ನು ತಳ್ಳಿಹಾಕಿದ್ದು, ಸಿಎಸ್‌ಕೆ ಪರವಾಗಿರುವ ಪಕ್ಷಪಾತದಿಂದಾಗಿ ಅವರು ಆರ್‌ಸಿಬಿ ತಂಡದ ನೈಜ ಪರಿಶ್ರಮದ ಕ್ರೆಡಿಟ್ ಅನ್ನು ತಾವೇ ಕದಿಯಲು ಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


ಒಟ್ಟಾರೆಯಾಗಿ, ಆರ್‌ಸಿಬಿ ತಂಡದ ಆಡಳಿತ ಮಂಡಳಿಯು ತನ್ನ ಹಳೆಯ ತಪ್ಪುಗಳನ್ನು ತಿದ್ದಿಕೊಂಡು ಬಲಿಷ್ಠ ತಂಡವನ್ನು ಕಟ್ಟಿರುವುದೇ ಸದ್ಯದ ಯಶಸ್ಸಿಗೆ ಕಾರಣವಾಗಿದ್ದರೂ, ಅಂಬಾಟಿ ರಾಯುಡು ಮಾತ್ರ ಇದರ ಸಂಪೂರ್ಣ ಶ್ರೇಯಸ್ಸು ತಮ್ಮ ಟೀಕೆಗಳಿಗೇ ಸಲ್ಲಬೇಕು ಎಂದು ವಾದಿಸಿರುವುದು ಮಾತ್ರ ವಿಪರ್ಯಾಸ.

Source link

ಮೌನಿ ರಾಯ್-ಸೂರಜ್ ದಾಂಪತ್ಯಕ್ಕೆ ಮುಳುವಾಯ್ತು ನಟಿಯ ಜನಪ್ರಿಯತೆ – Kannada News | Mouni Roy and Suraj Nambiar Divorce Rumors: Unpacking The Split Reasons

ಖ್ಯಾತ ನಟಿ ಮೌನಿ ರಾಯ್ (Mouni Roy) ಮತ್ತು ದುಬೈ ಮೂಲದ ಉದ್ಯಮಿ ಸೂರಜ್ ನಂಬಿಯಾರ್ 2022ರಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಆದರೆ, ಕಳೆದ ಕೆಲವು ದಿನಗಳಿಂದ ಈ ಜೋಡಿ ಡಿವೋರ್ಸ್ ಪಡೆಯುತ್ತಿದೆ ಎಂಬ ವದಂತಿಗಳು ಬಲವಾಗಿ ಕೇಳಿಬರುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ್ದಲ್ಲದೆ, ಮದುವೆಯ ಫೋಟೋಗಳನ್ನೂ ಡಿಲೀಟ್ ಮಾಡಿದ್ದಾರೆ. ಈ ಮಧ್ಯೆ ಇವರ ವಿಚ್ಛೇದನಕ್ಕೆ ಅಸಲಿ ಕಾರಣವೇನು ಎಂಬ ಬಗ್ಗೆ ಒಂದು ಮಾಹಿತಿ ಹರಿದಾಡುತ್ತಿದೆ.

ವರದಿಗಳ ಪ್ರಕಾರ, ಸೂರಜ್ ನಂಬಿಯಾರ್ ಅವರಿಗೆ ಪತ್ನಿ ಮೌನಿ ರಾಯ್ ಅವರ ಜನಪ್ರಿಯತೆಯೇ ಮುಳ್ಳಾಗಿದೆ ಎನ್ನಲಾಗುತ್ತಿದೆ. ಖ್ಯಾತ ಪತ್ರಕರ್ತ ವಿಕ್ಕಿ ಲಾಲ್ವಾನಿ ಅವರ ವರದಿಯ ಪ್ರಕಾರ, ‘ಅಭಿಮಾನ್ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಅವರು ಪತ್ನಿ ಜಯಾ ಬಚ್ಚನ್ ಅವರ ಯಶಸ್ಸನ್ನು ಕಂಡು ಹೇಗೆ ಕೀಳರಿಮೆ ಅನುಭವಿಸಿದ್ದರೋ, ಸೂರಜ್ ಕೂಡ ಭಾರತಕ್ಕೆ ಬಂದಾಗ ಅದೇ ರೀತಿ ಅನುಭವಿಸುತ್ತಿದ್ದರಂತೆ. ಸೂರಜ್ ಕೋಟ್ಯಧಿಪತಿಯಾಗಿದ್ದರೂ, ಮುಂಬೈನಲ್ಲಿ ಅವರನ್ನು ಯಾರೂ ಗುರುತಿಸುತ್ತಿರಲಿಲ್ಲ. ಆದರೆ ಮೌನಿ ಹೋದ ಕಡೆಯಲ್ಲೆಲ್ಲಾ ಜನ ಮುತ್ತಿಕೊಳ್ಳುತ್ತಿದ್ದರು. ಅವರಿಗೆ ಇದರಿಂದ ತಾವು ನಿರ್ಲಕ್ಷ್ಯ ಭಾವನೆ ಮೂಡಿತು ಎನ್ನಲಾಗಿದೆ.

ಮತ್ತೊಂದು ಆಘಾತಕಾರಿ ಆರೋಪ:

ಕೇವಲ ಕೀಳರಿಮೆ ಮಾತ್ರವಲ್ಲದೆ, ಸೂರಜ್ ಅವರು ಮೌನಿ ರಾಯ್ ಅವರಿಗೆ ಮೋಸ ಮಾಡಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಪ್ರಚಾರಕ್ಕಾಗಿ ಮೌನಿಯನ್ನು ಬಳಸಿಕೊಂಡ ಸೂರಜ್, ಪತ್ನಿಯ ಹಣವನ್ನೂ ವೈಯಕ್ತಿಕವಾಗಿ ಉಪಯೋಗಿಸಿಕೊಂಡಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಸದ್ಯ ಸೂರಜ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ಡಿಲೀಟ್ ಮಾಡಿದ್ದಾರೆ.

ಇದನ್ನೂ ಓದಿ: ಮದುವೆ ಆಗಿ ನಾಲ್ಕೇ ವರ್ಷಕ್ಕೆ ಖ್ಯಾತ ನಟಿ ಮೌನಿ ರಾಯ್ ಸಂಸಾರದಲ್ಲಿ ಬಿರುಕು

ಈ ಎಲ್ಲಾ ವದಂತಿಗಳ ನಡುವೆ ಮೌನಿ ರಾಯ್ ಅವರು ಮೌನ ಮುರಿದಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿರುವ ಅವರು, ‘ದಯವಿಟ್ಟು ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ. ನಮಗೆ ಸ್ವಲ್ಪ ಖಾಸಗಿತನ ನೀಡಿ’ ಎಂದು ಮನವಿ ಮಾಡಿದ್ದಾರೆ. ಆದರೆ ಅವರು ವಿಚ್ಛೇದನದ ಸುದ್ದಿಯನ್ನು ಎಲ್ಲಿಯೂ ಸ್ಪಷ್ಟವಾಗಿ ನಿರಾಕರಿಸಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಬೆಳಗಾವಿ, ಸಿಕಂದರಾಬಾದ್, ಚರ್ಲಪಲ್ಲಿ ವೀಕ್ಲಿ ವಿಶೇಷ ರೈಲುಗಳು ಇನ್ನು ಕಾಯಂ! – Kannada News | Railway Board Regularizes Charlapalli and Secunderabad to Belagavi Weekly Express Trains: Know travel timings here

ಬೆಂಗಳೂರು, ಮೇ 14: ಕರ್ನಾಟಕ (Karnataka), ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ನಡುವೆ ರೈಲ್ವೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ರೈಲ್ವೆ ಮಂಡಳಿಯು (Railway Board) ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಪ್ರಯಾಣಿಕರ ದಟ್ಟಣೆ ಮತ್ತು ಬೇಡಿಕೆಯನ್ನು ಪರಿಗಣಿಸಿ, ಈ ಹಿಂದೆ ವಿಶೇಷ ರೈಲುಗಳಾಗಿ ಸಂಚರಿಸುತ್ತಿದ್ದ ಎರಡು ಪ್ರಮುಖ ವೀಕ್ಲಿ ರೈಲುಗಳನ್ನು ಈಗ ಕಾಯಂ (Regularization) ಗೊಳಿಸಿ ಆದೇಶ ಹೊರಡಿಸಿದೆ. ಈ ಕ್ರಮವು ಬೆಳಗಾವಿ ಹಾಗೂ ಹೈದರಾಬಾದ್ ಭಾಗದ ಪ್ರಯಾಣಿಕರಿಗೆ ಪ್ರಯೋಜನಕಾರಿಯಾಗಲಿದೆ.

ಮುಖ್ಯಾಂಶಗಳು

  • ಚರ್ಲಪಲ್ಲಿ – ಬೆಳಗಾವಿ – ಚರ್ಲಪಲ್ಲಿ ವೀಕ್ಲಿ ಎಕ್ಸ್‌ಪ್ರೆಸ್ ರೈಲು ಇನ್ಮುಂದೆ ಕಾಯಂ ಆಗಿ ಸಂಚರಿಸಲಿದೆ.
  • ಸಿಕಂದರಾಬಾದ್ – ಬೆಳಗಾವಿ – ಸಿಕಂದರಾಬಾದ್ ವೀಕ್ಲಿ ಎಕ್ಸ್‌ಪ್ರೆಸ್ ರೈಲಿಗೂ ರೈಲ್ವೆ ಮಂಡಳಿಯಿಂದ ಕಾಯಂ ಮಾನ್ಯತೆ.
  • ಈ ನಿರ್ಧಾರದಿಂದ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ನಡುವಿನ ರೈಲ್ವೆ ಸಂಪರ್ಕ ಮತ್ತಷ್ಟು ವೃದ್ಧಿಯಾಗಲಿದೆ.

ನೈಋತ್ಯ ರೈಲ್ವೆ ಸಂಪರ್ಕ ಕ್ರಾಂತಿ

ದಕ್ಷಿಣ ನೈಋತ್ಯ ರೈಲ್ವೆಯ ಮಾಹಿತಿಯಂತೆ, ಹೈದರಾಬಾದ್‌ನ ಉಪನಗರವಾದ ಚರ್ಲಪಲ್ಲಿಯಿಂದ ಬೆಳಗಾವಿಗೆ ಸಂಚರಿಸುವ ರೈಲು ಹಾಗೂ ಸಿಕಂದರಾಬಾದ್‌ನಿಂದ ಬೆಳಗಾವಿಗೆ ಸಂಚರಿಸುವ ರೈಲುಗಳನ್ನು ಕಾಯಂಗೊಳಿಸಿರುವುದರಿಂದ ಪ್ರವಾಸಿಗರಿಗೆ ಮತ್ತು ಉದ್ಯೋಗದ ನಿಮಿತ್ತ ಸಂಚರಿಸುವವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಮೊದಲು ಈ ರೈಲುಗಳು ಸೀಮಿತ ಅವಧಿಯ ವಿಶೇಷ ರೈಲುಗಳಾಗಿ ಸಂಚರಿಸುತ್ತಿದ್ದವು. ಈಗ ಇವುಗಳಿಗೆ ಅಧಿಕೃತ ಮಾನ್ಯತೆ ಸಿಕ್ಕಿರುವುದರಿಂದ ವೇಳಾಪಟ್ಟಿಯಲ್ಲಿ ಸ್ಥಿರತೆ ಬರಲಿದ್ದು, ಮುಂಗಡ ಕಾಯ್ದಿರಿಸುವಿಕೆಗೂ ಸಹಕಾರಿಯಾಗಲಿದೆ.

ನೈಋತ್ಯ ರೈಲ್ವೆ ಎಕ್ಸ್ ಸಂದೇಶ

ಸಿಕಂದರಾಬಾದ್ ಮತ್ತು ಬೆಳಗಾವಿ ನಡುವಿನ ರೈಲು ತೆಲಂಗಾಣ ಮಾತ್ರವಲ್ಲದೆ ಆಂಧ್ರಪ್ರದೇಶದ ಭಾಗಗಳಿಗೂ ಸಂಪರ್ಕ ಕಲ್ಪಿಸುವುದರಿಂದ ಮೂರು ರಾಜ್ಯಗಳ ನಡುವಿನ ಆರ್ಥಿಕ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳಿಗೆ ವೇಗ ಸಿಗಲಿದೆ. ದಕ್ಷಿಣ ನೈಋತ್ಯ ರೈಲ್ವೆಯು ಈ ಬಗ್ಗೆ ತನ್ನ ಅಧಿಕೃತ ಎಕ್ಸ್ (X) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸುಧಾರಿತ ರೈಲ್ವೆ ಸಂಪರ್ಕದ ಬಗ್ಗೆ ಹರ್ಷ ವ್ಯಕ್ತಪಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

AI Monks: ಧರ್ಮ ಪ್ರಚಾರಕ್ಕೆ ಬಂದ ‘ರೋಬೋಟ್ ಸನ್ಯಾಸಿ’! ಎಐ ಬುದ್ಧನ ಬೋಧನೆಗೆ ಜಗತ್ತೇ ಫಿದಾ – Kannada News | AI Monks: The Future of Spirituality? Robot Priests in Japan and Korea Transforming Faith

ಧರ್ಮ ಪ್ರಚಾರಕ್ಕೆ ಬಂದ ‘ರೋಬೋಟ್ ಸನ್ಯಾಸಿ’Image Credit source: Pinterest

ಟೋಕಿಯೋ: ಆಧುನಿಕ ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ (AI) ಕೇವಲ ಉದ್ಯಮ ಮತ್ತು ಶಿಕ್ಷಣಕ್ಕೆ ಸೀಮಿತವಾಗಿಲ್ಲ, ಈಗ ಅದು ಆಧ್ಯಾತ್ಮಿಕ ಲೋಕಕ್ಕೂ ಕಾಲಿಟ್ಟಿದೆ. ದಕ್ಷಿಣ ಕೊರಿಯಾ ಮತ್ತು ಜಪಾನ್‌ನಲ್ಲಿ ಈಗ ‘ರೋಬೋಟ್ ಸನ್ಯಾಸಿಗಳು’ ಧರ್ಮ ಬೋಧನೆ ಮಾಡುತ್ತಿದ್ದು, ಭವಿಷ್ಯದಲ್ಲಿ ರೋಬೋಟ್‌ಗಳೇ ಧಾರ್ಮಿಕ ಗುರುಗಳಾಗಲಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ.

ದಕ್ಷಿಣ ಕೊರಿಯಾದಲ್ಲಿ ‘ಗಾಬಿ’ ಎಂಬ ಎಐ ಸನ್ಯಾಸಿ:

ದಕ್ಷಿಣ ಕೊರಿಯಾದ ರಾಜಧಾನಿ ಸೋಲ್‌ನಲ್ಲಿರುವ ಪ್ರಸಿದ್ಧ ‘ಜೋಗ್ಯೆಸಾ’ ದೇಗುಲದಲ್ಲಿ ‘ಗಾಬಿ’ (Gabi) ಎಂಬ ಹ್ಯೂಮನಾಯ್ಡ್ ರೋಬೋಟ್ ಸನ್ಯಾಸಿಯನ್ನು ಪರಿಚಯಿಸಲಾಗಿದೆ. 130 ಸೆಂಟಿಮೀಟರ್ ಎತ್ತರವಿರುವ ಈ ರೋಬೋಟ್, ಸಾಂಪ್ರದಾಯಿಕ ಬೌದ್ಧ ಉಡುಪನ್ನು ಧರಿಸಿ, ಬೌದ್ಧ ದೀಕ್ಷೆಯನ್ನೂ ಸ್ವೀಕರಿಸಿದೆ. ಅಷ್ಟೇ ಅಲ್ಲದೆ, “ನಾನು ಬೌದ್ಧ ಧರ್ಮಕ್ಕೆ ನನ್ನನ್ನು ಅರ್ಪಿಸಿಕೊಳ್ಳುತ್ತೇನೆ” ಎಂದು ಹೇಳುವ ಮೂಲಕ ನೆರೆದಿದ್ದ ಭಕ್ತರನ್ನು ಆಶ್ಚರ್ಯಚಕಿತಗೊಳಿಸಿದೆ.

ಜಪಾನ್‌ನ 400 ವರ್ಷ ಹಳೆಯ ದೇವಸ್ಥಾನದಲ್ಲಿ ರೋಬೋಟ್ ಉಪದೇಶ:

ಜಪಾನ್‌ನ ಕ್ಯೋಟೋದಲ್ಲಿರುವ 400 ವರ್ಷಗಳ ಇತಿಹಾಸವಿರುವ ಕೊಡೈ-ಜಿ ದೇಗುಲದಲ್ಲಿ ‘ಕಾನನ್’ (Kannon) ಎಂಬ ರೋಬೋಟ್ ಅನ್ನು ಸ್ಥಾಪಿಸಲಾಗಿದೆ. ಯುವ ಪೀಳಿಗೆಯನ್ನು ಆಧ್ಯಾತ್ಮದತ್ತ ಸೆಳೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಈ ರೋಬೋಟ್ ಜಪಾನಿ ಭಾಷೆಯಲ್ಲಿ ಬೌದ್ಧ ಧರ್ಮದ ತತ್ವಗಳನ್ನು ಬೋಧಿಸುತ್ತದೆ ಮತ್ತು ಅದನ್ನು ಇಂಗ್ಲಿಷ್ ಹಾಗೂ ಚೈನೀಸ್ ಭಾಷೆಗಳಿಗೂ ಭಾಷಾಂತರಿಸುವ ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ: ಅನಂತ್ ಅಂಬಾನಿ ಕೈಯಲ್ಲಿದೆ 12 ಕೋಟಿಯ ‘ಶಿವ’ ವಾಚ್; ಈ ವಜ್ರಖಚಿತ ಗಡಿಯಾರದ ವಿಶೇಷತೆ ತಿಳಿದರೆ ಅಚ್ಚರಿ ಪಡುತ್ತೀರಿ!

ರೋಬೋಟ್ ಸನ್ಯಾಸಿಗಳ ಅಗತ್ಯವೇಕೆ?

ಜಪಾನ್ ಮತ್ತು ದಕ್ಷಿಣ ಕೊರಿಯಾದಂತಹ ದೇಶಗಳಲ್ಲಿ ಬೌದ್ಧ ಸನ್ಯಾಸಿಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಈ ಕೊರತೆಯನ್ನು ನೀಗಿಸಲು ತಂತ್ರಜ್ಞಾನದ ಮೊರೆ ಹೋಗಲಾಗುತ್ತಿದೆ. ಇದಲ್ಲದೇ ಎಐ ರೋಬೋಟ್‌ಗಳು ಕಠಿಣವಾದ ಧರ್ಮಗ್ರಂಥಗಳನ್ನು ಸಾಮಾನ್ಯ ಜನರಿಗೆ ಅರ್ಥವಾಗುವಂತಹ ಸರಳ ಭಾಷೆಯಲ್ಲಿ ವಿವರಿಸಬಲ್ಲವು. ತಂತ್ರಜ್ಞಾನದ ಮೇಲೆ ಆಸಕ್ತಿ ಹೊಂದಿರುವ ಇಂದಿನ ಯುವಕರಿಗೆ ಈ ‘ಹೈಟೆಕ್’ ಬೋಧನೆ ಹೆಚ್ಚು ಹತ್ತಿರವಾಗುತ್ತಿದೆ.

ಮನುಷ್ಯರ ಸ್ಥಾನ ತುಂಬಬಲ್ಲವೇ ಈ ರೋಬೋಟ್‌ಗಳು?

ರೋಬೋಟ್‌ಗಳು ಮಾಹಿತಿ ಮತ್ತು ಜ್ಞಾನವನ್ನು ನೀಡಬಲ್ಲವೇ ಹೊರತು, ಮನುಷ್ಯರಂತೆ ಕರುಣೆ, ದಯೆ ಅಥವಾ ಆಧ್ಯಾತ್ಮಿಕ ಅನುಭೂತಿಯನ್ನು ಹೊಂದಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಇವು ಕೇವಲ ಮೊದಲೇ ಪ್ರೋಗ್ರಾಂ ಮಾಡಲಾದ ಡೇಟಾ ಆಧಾರದ ಮೇಲೆ ಕೆಲಸ ಮಾಡುತ್ತವೆ. ಆದರೆ, ಬದಲಾಗುತ್ತಿರುವ ಕಾಲಘಟ್ಟದಲ್ಲಿ ಧರ್ಮ ಮತ್ತು ತಂತ್ರಜ್ಞಾನದ ಈ ಮಿಲನವು ಹೊಸ ಸಂಚಲನವನ್ನಂತೂ ಸೃಷ್ಟಿಸಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version