ಬೆಂಗಳೂರಿನ ಐಫೋನ್ ಫ್ಯಾಕ್ಟರಿಯಲ್ಲಿ ಕ್ಷಿಪ್ರವೇಗದಲ್ಲಿ 30,000 ಉದ್ಯೋಗಿಗಳ ನೇಮಕ; ಭಾರತದಲ್ಲಿ ಸಿಕ್ಕಾಪಟ್ಟೆ ಆಗುತ್ತಿದೆ ಐಟಿ ಹೈರಿಂಗ್ – Kannada News | Bengaluru Foxconn iPhone unit’s fastest hiring, Indian IT job recruitment rises
ಬೆಂಗಳೂರು, ಡಿಸೆಂಬರ್ 22: ದೇವನಹಳ್ಳಿ ಸಮೀಪ ಫಾಕ್ಸ್ಕಾನ್ ಸಂಸ್ಥೆ ನಿರ್ಮಿಸಿರುವ ಐಫೋನ್ ಫ್ಯಾಕ್ಟರಿಯಲ್ಲಿ (Foxconn’s iPhone assembly unit) ಭಾರೀ ಪ್ರಮಾಣದಲ್ಲಿ ನೇಮಕಾತಿ ನಡೆಯುತ್ತಿದೆ. ವರದಿಗಳ ಪ್ರಕಾರ, ಕೇವಲ ಎಂಟು ತಿಂಗಳಲ್ಲಿ ಇಲ್ಲಿಗೆ ಬರೋಬ್ಬರಿ 30,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಭಾರತದಲ್ಲಿ ಯಾವುದೇ ಸಂಸ್ಥೆಯು, ಅಥವಾ ಯಾವುದೇ ಫ್ಯಾಕ್ಟರಿಯೂ ಇಷ್ಟು ವೇಗದಲ್ಲಿ ಇಷ್ಟು ಪ್ರಮಾಣದಲ್ಲಿ ನೇಮಕಾತಿ ಮಾಡಿಕೊಂಡಿದ್ದೇ ಇಲ್ಲ. ಐಫೋನ್ ಫ್ಯಾಕ್ಟರಿಯಲ್ಲಿ ಶೇ. 80 ಮಹಿಳೆಯರು 300 ಎಕರೆ ಜಾಗದಲ್ಲಿ ತೈವಾನ್ ಮೂಲದ ಫಾಕ್ಸ್ಕಾನ್ ಕಂಪನಿ ನಿರ್ಮಿಸಿರುವ…