ಹಾಲಿವುಡ್ ಸೂಪರ್ ಸ್ಟಾರ್ ಸಿನಿಮಾ ನಿರ್ದೇಶಿಸಲಿರುವ ತೆಲುಗು ನಿರ್ದೇಶಕ – Kannada News | Indian origin director Aneesh Chaganty to direct Tom Cruise’s next movie
ಭಾರತದ ಕೆಲವಾರು ನಟ-ನಟಿಯರು ಈಗಾಗಲೇ ಹಾಲಿವುಡ್ಗೆ (Hollywood) ಪದಾರ್ಪಣೆ ಮಾಡಿ, ಅಲ್ಲಿನ ಸ್ಟಾರ್ ನಟ-ನಟಿಯರೊಡನೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಐಶ್ವರ್ಯಾ ರೈ, ಆಲಿಯಾ ಭಟ್, ದೀಪಿಕಾ ಪಡುಕೋಣೆ, ಇರ್ಫಾನ್ ಖಾನ್, ಅಮಿತಾಬ್ ಬಚ್ಚನ್, ಧನುಶ್ ಇನ್ನೂ ಕೆಲವರು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಭಾರತದ ನಿರ್ದೇಶಕರು ಹಾಲಿವುಡ್ ಸಿನಿಮಾಗಳನ್ನು ನಿರ್ದೇಶಿಸಿದ್ದಿಲ್ಲ. ಭಾರತೀಯ ಮೂಲದ ಕೆಲವೇ ಕೆಲವು ಸಿನಿಮಾ ನಿರ್ದೇಶಕರುಗಳು ಹಾಲಿವುಡ್ನಲ್ಲಿದ್ದಾರೆ. ಇದೀಗ ಭಾರತೀಯ ಮೂಲದ ನಿರ್ದೇಶಕರೊಬ್ಬರು ಹಾಲಿವುಡ್ನ ಸೂಪರ್ ಸ್ಟಾರ್ ಟಾಮ್ ಕ್ರೂಸ್ ಅವರ ಸಿನಿಮಾ ನಿರ್ದೇಶಿಸಲಿದ್ದಾರೆ. ‘ಮಿಷನ್…