Headlines

ಕೋಲಾರ: ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು, ಸಿಸಿಟಿವಿಲಿ ಸೆರೆಯಾಯ್ತು ಖದೀಮರ ಕೈಚಳಕ – Kannada News | Kolar Crime: Thieves Steal 1 Lakh from Bike Box Near Bethamangala Police Station; Caught by Public

ಕೋಲಾರ, ಮೇ 14: ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಬೇತಮಂಗಲದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು, ಬೈಕ್ ಬಾಕ್ಸ್‌ನಲ್ಲಿದ್ದ ಒಂದು ಲಕ್ಷ ರೂಪಾಯಿ ಹಣವನ್ನು ದೋಚಿ ಪರಾರಿಯಾಗಲು ಯತ್ನಿಸಿದ ಘಟನೆ ನಡೆದಿದೆ. ಬೇತಮಂಗಲ ನ್ಯೂಟೌನ್ ನಿವಾಸಿ ರಮೇಶ್ ಎಂಬುವವರು ಕೆನರಾ ಬ್ಯಾಂಕ್‌ನಿಂದ ಹಣ ಡ್ರಾ ಮಾಡಿ ಬೈಕ್ ಬಾಕ್ಸ್​ನಲ್ಲಿ ಇರಿಸಿದ್ದರು. ಬೈಕ್ ನಿಲ್ಲಿಸಿ ರಮೇಶ್ ಅಂಗಡಿಯೊಂದಕ್ಕೆ ಹೋದ ಸಂದರ್ಭದಲ್ಲಿ ಹೊಂಚು ಹಾಕಿದ್ದ ಕಳ್ಳರು ಹಣವನ್ನು ದೋಚಿದ್ದಾರೆ. ಅಚ್ಚರಿಯ ವಿಷಯವೆಂದರೆ ಈ ಕೃತ್ಯ ಬೇತಮಂಗಲ ಪೊಲೀಸ್ ಠಾಣೆಯ ಸಮೀಪವೇ…

Read More

ಸಾಯಿ ಪಲ್ಲವಿ ವಿಷಯದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ‘ರಾಮಾಯಣ’ ಟೀಂ – Kannada News | Sai Pallavi’s Hindi Pronunciation Sparks Ramayana Controversy: Dubbing Considered for Sita

ಬಾಲಿವುಡ್‌ನ ಬಹುನಿರೀಕ್ಷಿತ ಚಿತ್ರ ‘ರಾಮಾಯಣ’ದಲ್ಲಿ ಸೀತೆಯ ಪಾತ್ರ ನಿರ್ವಹಿಸುತ್ತಿರುವ ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಅವರಿಗೆ ಈಗ ಹೊಸ ಸಂಕಷ್ಟ ಎದುರಾಗಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಅವರ ಚೊಚ್ಚಲ ಹಿಂದಿ ಸಿನಿಮಾ ‘ಏಕ್ ದಿನ್’ ಸೋತಿರುವುದು ಮಾತ್ರವಲ್ಲದೆ, ಚಿತ್ರದಲ್ಲಿ ಅವರ ಹಿಂದಿ ಉಚ್ಚಾರಣೆಯ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಹೀಗಾಗಿ, ತಂಡ ದೊಡ್ಡ ನಿರ್ಧಾರ ಮಾಡಿದೆ ಎನ್ನಲಾಗಿದೆ. ‘ಏಕ್ ದಿನ್’ ಚಿತ್ರದಲ್ಲಿ ಆಮಿರ್ ಖಾನ್ ಪುತ್ರ ಜುನೈದ್ ಖಾನ್ ಜೊತೆ ಸಾಯಿ ಪಲ್ಲವಿ ನಟಿಸಿದ್ದಾರೆ. ಸಾಯಿ…

Read More

ಮದರಸಾದಲ್ಲಿ ನಿರಂತರ ಹಿಂಸೆ ಕೊಡುತ್ತಿದ್ದ ಧರ್ಮ ಬೋಧಕ: ದೌರ್ಜನ್ಯ ತಾಳಲಾರದೆ ತಪ್ಪಿಸಿಕೊಂಡ ಬಿಹಾರದ 24 ಮಕ್ಕಳು! – Kannada News | FIR Registered Against Tumakuru Madrasa Preacher for Physical Abuse and Forced Labour of 24 Children

ಸಾಂದರ್ಭಿಕ ಚಿತ್ರ (ಎಐ)Image Credit source: MediaForge AI ತುಮಕೂರು, ಮೇ 14: ತುಮಕೂರು (Tumakuru) ಜಿಲ್ಲೆಯ ಮದರಸಾವೊಂದರಲ್ಲಿ ಮಕ್ಕಳಿಗೆ ದೈಹಿಕ ಕಿರುಕುಳ ಮತ್ತು ಬಾಲಕಾರ್ಮಿಕ ಪದ್ಧತಿಯಂತಹ ಅಮಾನವೀಯ ಕೃತ್ಯ ಎಸಗಿದ ಆರೋಪದ ಮೇಲೆ ಧರ್ಮಬೋಧಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮದರಸಾದಲ್ಲಿ ನಡೆಯುತ್ತಿದ್ದ ದೌರ್ಜನ್ಯ ತಾಳಲಾರದೆ 24 ಮಕ್ಕಳು ಅಲ್ಲಿಂದ ತಪ್ಪಿಸಿಕೊಂಡು ಬಂದ ಸಿನಿಮೀಯ ಘಟನೆಯ ನಂತರ ಪೊಲೀಸರು ಆತನ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಮುಖ್ಯಾಂಶಗಳು ತುಮಕೂರು ಜಿಲ್ಲೆಯ ಆಮಲಾಪುರ ಗ್ರಾಮದ ಮದರಸಾದಲ್ಲಿ 24 ಮಕ್ಕಳಿಗೆ ದೈಹಿಕ…

Read More

ಬೆಂಗಳೂರು: ಆಟೋ ಕಳ್ಳಾಟಕ್ಕೆ ಟ್ರಾಫಿಕ್ ಪೊಲೀಸ್ ಬ್ರೇಕ್, ಮೂರೇ ತಿಂಗಳಲ್ಲಿ ಸುಮಾರು 3 ಸಾವಿರ ಕೇಸ್ ದಾಖಲು! – Kannada News | Bengaluru Traffic Police Crackdown: Nearly 3000 Cases Filed Against Auto Drivers for Overcharging and Refusal

ಬೆಂಗಳೂರು, ಮೇ 14: ಬೆಂಗಳೂರಿನಲ್ಲಿ (Bengaluru) ಪ್ರಯಾಣಿಕರ ಸುಲಿಗೆಗೆ ಇಳಿಯುವ ಮತ್ತು ಕರೆದ ಕಡೆ ಬರಲು ನಿರಾಕರಿಸುವ ಆಟೋ ಚಾಲಕರಿಗೆ ಬೆಂಗಳೂರು ಸಂಚಾರಿ ಪೊಲೀಸರು ಭರ್ಜರಿ ಬಿಸಿ ಮುಟ್ಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡುವ ಮತ್ತು ಸಂಜೆ ಆಗುತ್ತಿದ್ದಂತೆ ಮೀಟರ್ ದರಕ್ಕಿಂತ ಒಂದೂವರೆ ಪಟ್ಟು (One and Half) ಹಣ ಕೇಳುವ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದಾರೆ. ಮೂರು ತಿಂಗಳ ಅವಧಿಯಲ್ಲೇ 2,988 ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಖ್ಯಾಂಶಗಳು ಹೆಚ್ಚುವರಿ ಹಣ…

Read More

ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ – Kannada News | Dileep Raj Special Moment A journey of Legend actor

ದಿಲೀಪ್ ರಾಜ್ ಅವರು ಕೇವಲ ನಟರಾಗಿ ಮಾತ್ರವಲ್ಲದೆ, ‘ಪಾರು’, ‘ಹಿಟ್ಲರ್ ಕಲ್ಯಾಣ’ದಂತಹ ಜನಪ್ರಿಯ ಧಾರಾವಾಹಿಗಳ ಮೂಲಕ ನಿರ್ಮಾಣ ಮತ್ತು ನಿರ್ದೇಶನ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದರು. ಜೀ ಕನ್ನಡದ ಜೊತೆ ಅವರಿಗೆ ವಿಶೇಷ ನಂಟಿತ್ತು. ಈ ವಿಶೇಷ ವಿಡಿಯೋದಲ್ಲಿ ಅವರ ವೃತ್ತಿಜೀವನದ ಸುವರ್ಣ ಕ್ಷಣಗಳನ್ನು ಮೆಲುಕು ಹಾಕಲಾಗಿದೆ. ಅನೇಕ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಟ್ಟ ಅವರ ಅಗಲಿಕೆಗೆ ಇಡೀ ಕಲಾ ಲೋಕ ಕಂಬನಿ ಮಿಡಿದಿದೆ. ಜೀ ಕನ್ನಡ ಅವರಿಗೆ ವಿಶೇಷ ಗೌರವ ಸಲ್ಲಿಸಿದೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​…

Read More

ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ, ಸೂರಿಲ್ಲದೆ ಕಂಗಾಲಾದ ಜನ – Kannada News | Heavy Rain and Wind Havoc in Sambargi Village: Houses Damaged and Trees Uprooted in Belagavi District

ಬೆಳಗಾವಿ, ಮೇ 14: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಗುರುವಾರ ಸಂಜೆ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹಠಾತ್ ವರುಣಾರ್ಭಟಕ್ಕೆ ಗ್ರಾಮಸ್ಥರು ಕಂಗಾಲಾಗಿದ್ದು, ಸಾಲು ಸಾಲು ಅವಾಂತರಗಳು ಸೃಷ್ಟಿಯಾಗಿವೆ. ಗಾಳಿಯ ವೇಗಕ್ಕೆ ಐದಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿಗಳು ಹಾರಿ ಹೋಗಿದ್ದು, ಬಡ ಕುಟುಂಬಗಳು ಬೀದಿಗೆ ಬಿದ್ದಿವೆ. ಸುಮಾರು ಇನ್ನೂರು ಅಡಿಯಷ್ಟು ದೂರಕ್ಕೆ ತಗಡಿನ ಸೀಟ್‍ಗಳು ಹಾರಿ ಬಿದ್ದಿರುವುದು ಮಳೆಯ ತೀವ್ರತೆಗೆ ಸಾಕ್ಷಿಯಾಗಿದೆ. ಮನೆಯಲ್ಲಿದ್ದ ದವಸ ಧಾನ್ಯಗಳು, ಬಟ್ಟೆ ಮತ್ತು…

Read More

Ajinkya Rahane: ಈ ಒಂದು ‘ತಪ್ಪು’ ಮಾಡಿದ್ದೇ ಸೋಲಿಗೆ ಕಾರಣ! – Kannada News | Ajinkya Rahane Post Match Interview After RCB vs KKR Match

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 57ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸೋಲನುಭವಿಸಿದೆ. ರಾಯ್​ಪುರ್​ನಲ್ಲಿ ನಡೆದ ಆರ್​ಸಿಬಿ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಓವರ್​ಗಳಲ್ಲಿ 192 ರನ್​ ಕಲೆಹಾಕಿದ್ದರು. ಈ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 19.1 ಓವರ್​ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ ಕೆಕೆಆರ್ ತಂಡಕ್ಕೆ 6 ವಿಕೆಟ್​ಗಳಿಂದ ಸೋಲುಣಿಸಿದ್ದಾರೆ. ಈ ಸೋಲಿನ ಬಳಿಕ ಮಾತನಾಡಿದ ಕೆಕೆಆರ್ ತಂಡದ ನಾಯಕ ಅಜಿಂಕ್ಯ…

Read More

ಹೆಣ್ಮಕ್ಕಳಿಗೆ ಕೋರಮಂಗಲ ರಾತ್ರಿ ಸಂಚಾರಕ್ಕೆ ಡೇಂಜರ್​: ಗಂಡನ ಜೊತೆಗಿದ್ದರೂ ಬರ್ತೀಯಾ ಎಂದು ಕೇಳ್ತಾರೆ

ಬೆಂಗಳೂರು, ಮೇ,14: ಸಿಲಿಕಾನ್ ಸಿಟಿಯ ಅತ್ಯಂತ ಜನಪ್ರಿಯ ಹ್ಯಾಂಗ್‌ಔಟ್ ತಾಣಗಳಲ್ಲಿ ಒಂದಾದ ಕೋರಮಂಗಲವು ಈಗ ರಾತ್ರಿ ವೇಳೆ ಮಹಿಳೆಯರ ಸುರಕ್ಷತೆಯ ವಿಚಾರವಾಗಿ ಸುದ್ದಿಯಲ್ಲಿದೆ. ಸ್ನೇಹಿತರೊಂದಿಗೆ ಸಮಯ ಕಳೆಯಲು ಬರುವವರ ಸಂಖ್ಯೆ ಹೆಚ್ಚಿದ್ದರೂ, ಇತ್ತೀಚಿನ ದಿನಗಳಲ್ಲಿ ಮಹಿಳೆಯರನ್ನು ಕೆಣಕುವುದು ಮತ್ತು ಅಸಭ್ಯವಾಗಿ ವರ್ತಿಸುವ ಘಟನೆಗಳು ವರದಿಯಾಗುತ್ತಿವೆ.ರಾತ್ರಿ 1 ಗಂಟೆಯ ನಂತರ ರಸ್ತೆಗಳಲ್ಲಿ ಮಹಿಳೆಯರನ್ನು ಉದ್ದೇಶಿಸಿ ಕೂಗುವುದು ಅಥವಾ ಕಿರುಕುಳ ನೀಡುವುದರಿಂದಾಗಿ ಅನೇಕರು ಹೊರಬರಲು ಭಯಪಡುತ್ತಿದ್ದಾರೆ. ಬೆಂಗಳೂರಿನಂತಹ ಸುರಕ್ಷಿತ ನಗರದಲ್ಲಿ ಇಂತಹ ಪ್ರವೃತ್ತಿ ಬೆಳೆಯುತ್ತಿರುವುದು ವಿಷಾದನೀಯ. “ನಗರವು ಎಲ್ಲರಿಗೂ ಸೇರಿದ್ದು,…

Read More

ಭಲೇ ಭೇಷ್… ಕನ್ನಡಿಗನ ಕಮಾಲ್​ಗೆ ದಂಗಾದ ವಿರಾಟ್ ಕೊಹ್ಲಿ! – Kannada News | Virat Kohli’s Epic Reaction to Manish Pandey’s Blinder Catch!

ಐಪಿಎಲ್​ನ 57ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಹೈ-ವೋಲ್ಟೇಜ್ ಪಂದ್ಯದಲ್ಲಿ ಕ್ರಿಕೆಟ್ ಪ್ರೇಮಿಗಳು ಎಂದಿಗೂ ಮರೆಯದ ಅದ್ಭುತ ಕ್ಷಣವೊಂದು ದಾಖಲಾಗಿದೆ. ಕೆಕೆಆರ್ ತಂಡದ ಅನುಭವಿ ಆಟಗಾರ ಮನೀಶ್ ಪಾಂಡೆ ಗಾಳಿಯಲ್ಲಿ ಹಕ್ಕಿಯಂತೆ ಜಿಗಿದು ಹಿಡಿದ ಅಸಾಧಾರಣ ಕ್ಯಾಚ್ ಇಡೀ ಕ್ರೀಡಾಂಗಣವನ್ನು ರೋಮಾಂಚನಗೊಳಿಸಿತು. ಕೇವಲ ಸೆಕೆಂಡುಗಳ ಅವಧಿಯಲ್ಲಿ ನಡೆದ ಈ ‘ಸೂಪರ್‌ಮ್ಯಾನ್’ ಸಾಹಸಕ್ಕೆ ನಾನ್-ಸ್ಟ್ರೈಕರ್ ಎಂಡ್‌ನಲ್ಲಿದ್ದ ರನ್-ಮಷಿನ್ ವಿರಾಟ್ ಕೊಹ್ಲಿ ದಿಗ್ಭ್ರಮೆಗೊಂಡರು. ಆರ್​ಸಿಬಿ ಇನಿಂಗ್ಸ್​ನ 18ನೇ ಓವರ್‌ನಲ್ಲಿ ಕೆಕೆಆರ್…

Read More

Rajat Patidar: ಅವರನ್ನು ಹೊಗಳಲು ನನ್ನ ಬಳಿ ಪದಗಳೇ ಇಲ್ಲ..! – Kannada News | Rajat patidar post match interview after rcb vs kkr match

IPL 2026: ಐಪಿಎಲ್ ಸೀಸನ್-19 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭರ್ಜರಿ ಪ್ರದರ್ಶನ ಮುಂದುವರೆದಿದೆ. ಕಳೆದ ಮ್ಯಾಚ್​ನಲ್ಲಿ ಮುಂಬೈ ಇಂಡಿಯನ್ಸ್​ಗೆ ಸೋಲುಣಿಸಿದ್ದ ಆರ್​ಸಿಬಿ ಇದೀಗ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆದ್ದು ಬೀಗಿದೆ. ರಾಯ್​ಪುರ್​ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ 20 ಓವರ್​ಗಳಲ್ಲಿ 192 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಆರ್​ಸಿಬಿ 19.1 ಓವರ್​ಗಳಲ್ಲಿ ಚೇಸ್ ಮಾಡಿ 6 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನ ಬಳಿಕ ಮಾತನಾಡಿದ ರಾಯಲ್…

Read More