ನೀವು ರಸ್ತೆಯಲ್ಲಿ ಹೋಗುವಾಗ ಮಾಡುವ ಒಂದು ತಪ್ಪಿನಿಂದ ಎಂಥಾ ದೊಡ್ಡ ಅಪಘಾತ ಸಂಭವಿಸಬಹುದು. ಸಿಮೆಂಟ್ ಮಿಕ್ಸರ್ ಟ್ರಕ್ ಒಂದು ಬರುವಾಗ ಪಕ್ಕದಲ್ಲಿ ಬರುತ್ತಿದ್ದ ಬೈಕ್ ಸವಾರ ನಿಧಾನವಾಗಿ ಎಡಕ್ಕೆ ಚಲಿಸಿದ್ದಾನೆ. ಆಗ ಟ್ರಕ್ ಚಾಲಕ ಗೊತ್ತಾಗದೇ ಬೈಕ್ ಮೇಲೆ ವಾಹನ ಹತ್ತಿಸಿದ್ದಾರೆ. ದೊಡ್ಡ ವಾಹನಗಳು ಬ್ಲೈಂಡ್ ಸ್ಪಾಟ್ಗಳನ್ನು ಹೊಂದಿರುತ್ತವೆ. ಹಾಗಾಗಿ ನೀವು ಮಾಡುವ ಒಂದು ಸಣ್ಣ ತಪ್ಪು ದೊಡ್ಡ ಸಮಸ್ಯೆಯನ್ನೇ ತಂದೊಡ್ಡಬಹುದು.
ಪಾಟ್ನಾ: ಬಿಹಾರದ ರೈಲೊಂದರ ಜನರಲ್ ಬೋಗಿಯಲ್ಲಿ ಸೀಟಿಗಾಗಿ ನಡೆದ ಜಗಳದ ವಿಡಿಯೋ ಸೋಶಿಯಲ್ ಮಿಡಿಯಾಗಳಲ್ಲಿ ಭಾರೀ ಹರಿದಾಡುತ್ತಿದೆ. ಯುವಕನೊಂದಿಗೆ ಮಹಿಳೆಯೊಬ್ಬಳು ಏಕಾಏಕಿ ಜಗಳಕ್ಕೆ ಇಳಿದಿದ್ದು, ಚಪ್ಪಲಿ ತೋರಿಸಿ ಆತನಿಗೆ ಬೈಯಲು ಶುರು ಮಾಡಿದ್ದಾಳೆ. ಆದರೂ ಕೂಡ ಎಲ್ಲವನ್ನೂ ಕೇಳಿಸಿ ಸಹಿಸಿಕೊಂಡು ಸುಮ್ಮನಾಗಿದ್ದಾನೆ. ಆದರೆ ಮಹಿಳೆ ಯಾವಾಗ ತನ್ನ ಪತ್ನಿಯ ಬಗ್ಗೆ ಕೆಟ್ಟದಾಗಿ ಮಾತನಾಡಲು ಶುರುಮಾಡುತ್ತಿದ್ದಂತೆ ಕೆರಳಿದ ಯುವಕ ಆಕೆ ಮಹಿಳೆಯೆಂದು ಲೆಕ್ಕಿಸದೇ ಮುಖಮೂತಿ ನೋಡದೆ ಸರಿಯಾಗಿ ಜಾಡಿಸಿದ್ದಾನೆ. ಸದ್ಯ ವಿಡಿಯೋ ಎಲ್ಲಡೆ ವೈರಲ್ ಆಗಿದ್ದು, ಬಾರೀ ಚರ್ಚೆಗೆ ಕಾರಣವಾಗಿದೆ.
ಮಹಿಳೆ ಕೈಯಲ್ಲಿ ಚಪ್ಪಲಿ ಹಿಡಿದು ಯುವಕನಿಗೆ ಬೆದರಿಕೆ ಹಾಕುತ್ತಿರುವುದು, ನನ್ನ ಮಗ ಬೆಂಗಳೂರಿನಲ್ಲಿ ಇಂಜಿನಿಯರ್, ನನ್ನ ಪತಿ ಸೂಪರ್‌ವೈಸರ್ ಎಂದು ಅಹಂಕಾರದಿಂದ ಹೇಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆದರೂ ಕೂಡ ಶಾಂತ ರೀತಿಯಿಂದಲೇ ಯುವಕ ವರ್ತಿಸಿರುವುದನ್ನು ಕಾಣಬಹುದು. ಆದರೆ ತನ್ನ ಪತ್ನಿಗೆ ಮುಜುಗರಕ್ಕೀಡುಮಾಡುವಂತಹ ಪದಗಳನ್ನು ಮಹಿಳೆ ಬಳಸುತ್ತಿದ್ದಂತೆ ಕೋಪಗೊಂಡ ಯುವಕ ಏಕಾಏಕಿ ಸೀಟಿನಿಂದ ಎದ್ದು ಸರಿಯಾಗಿ ಆ ಹೆಂಗಸಿಗೆ ಕಾಪಾಳಮೋಕ್ಷ ಮಾಡಿದ್ದಾನೆ. @bihta_vision ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಸದ್ಯ ವ್ಯಾಪಕವಾಗಿ ಹರಿದಾಡುತ್ತಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಮಹಿಳೆಯ ವರ್ತನೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ರೈಲು ಪ್ರಯಾಣದಂತಹ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊಬ್ಬರೂ ಪರಸ್ಪರ ಗೌರವದಿಂದ ನಡೆದುಕೊಳ್ಳುವುದು ಅವಶ್ಯಕ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಮಂಗಳೂರು, ಮಾರ್ಚ್ 14: ಗಲ್ಫ್ ರಾಷ್ಟ್ರದಲ್ಲಿ ನಡೆಯುತ್ತಿರುವ ಯುದ್ಧ ಭಾರತದಲ್ಲಿ ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ ನೀಡಿದೆ. ಗ್ಯಾಸ್ (Gas) ಎಮರ್ಜೆನ್ಸಿ ಗ್ರಾಹಕರ ಉಸಿರುಗಟ್ಟಿಸಿದೆ. ಇತ್ತ ಕರ್ನಾಟಕದ ಜಿಲ್ಲೆ ಜಿಲ್ಲೆಗಳಲ್ಲೂ ಸಿಲಿಂಡರ್ ಕೊರತೆ ಉಂಟಾಗಿದ್ದು, ಸೌದೆ ಒಲೆಯತ್ತ ಮುಖ ಮಾಡುತ್ತಿದ್ದರೆ, ಮತ್ತೆ ಕೆಲ ಹೋಟೆಲ್‌ಗಳು ಬಂದ್ ಮಾಡಲಾಗುತ್ತಿದೆ. ಈ ಮಧ್ಯೆ ಮಂಗಳೂರಿನ ಹೋಟೆಲ್ ಉದ್ಯಮ ಸಂಸ್ಥೆಯೊಂದು ಸ್ಪೆಷಲ್ ಆಫರ್ ನೀಡಿದೆ. ಅದೆನೇಂದರೆ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಕೊಟ್ಟವರಿಗೆ ಸುಮಾರು 5,500 ರೂ ಮೌಲ್ಯದ ಫುಡ್ ಉಚಿತವಾಗಿ ನೀಡಲಾಗುತ್ತಿದೆ.
ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದ ಹೋಟೆಲ್
ಮಂಗಳೂರಿನ ವೋಕ್ ಆ್ಯಂಡ್ ಫೋರ್ಕ್ ಮತ್ತು ಬಿಗ್ ಫ್ಯಾಟ್ ರೋಲ್ ಸಂಸ್ಥೆಯಿಂದ ಈ ಭರ್ಜರಿ ಆಫರ್ ನೀಡಲಾಗಿದೆ. ಮಂಗಳೂರು, ಬೆಂಗಳೂರು ಸೇರಿದಂತೆ ಹಲವು ಕಡೆ ಸಂಸ್ಥೆ ತನ್ನ ಔಟ್ಲೆಟ್ ಹೊಂದಿದೆ. ಹತ್ತಿರದ ಯಾವುದೇ ಔಟ್ಲೆಟ್ಗೆ ಹೋದರೆ ಈ ಆಫರ್ ಸಿಗುತ್ತದೆ ಎಂದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ.
ಗ್ಯಾಸ್ ಅಭಾವ ಹಿನ್ನೆಲೆ ಮಂಗಳೂರಿನ ವೋಕ್ ಆ್ಯಂಡ್ ಫೋರ್ಕ್ ಮತ್ತು ಬಿಗ್ ಫ್ಯಾಟ್ ರೋಲ್ ಸಂಸ್ಥೆ ಆಫರ್ ಮೊರೆ ಹೋಗಿದೆ. ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡಿದವರಿಗೆ 50 ಪ್ಲೇಟ್ ಮೊಮೊಸ್, ಇನ್ನೊಂದು ಸಂಸ್ಥೆಯಿಂದ 25 ರೋಲ್ ಸಿಗಲಿದೆ. ಅಂದರೆ ಬರೋಬ್ಬರಿ 5,500 ರೂ ಮೌಲ್ಯದ ಫುಡ್ ಉಚಿತವಾಗಿ ದೊರೆಯಲಿದೆ.
ಗ್ಯಾಸ್ ತಂದು ಕೊಟ್ಟವರಿಗೆ ಈ ಆಫರ್: ಮ್ಯಾನೇಜರ್ ಅನಾಸ್
ಇನ್ನು ಈ ಉಚಿತ ಫುಡ್ ಆಫರ್ ಬಗ್ಗೆ ಟಿವಿ 9ಗೆ ಹೋಟೆಲ್ ಮ್ಯಾನೇಜರ್ ಅನಾಸ್ ಪ್ರತಿಕ್ರಿಯಿಸಿದ್ದು, ಇದು ಸೀಮಿತ ಅವಧಿಗೆ ಮಾತ್ರ ನೀಡಲಾಗುತ್ತಿರುವ ಆಫರ್. ನಮಗೆ ಎಲ್ಲಿಯೂ ಕಮರ್ಷಿಯಲ್ ಗ್ಯಾಸ್ ಸಿಗುತ್ತಿಲ್ಲ. ಈಗ ಫುಡ್ ಕಸ್ಟಮೈಸ್ ಮಾಡಿ ಕೊಡುತ್ತಿದ್ದೇವೆ. ಗ್ಯಾಸ್ ಡೆಲಿವರಿ ಮಾಡುತ್ತಿದ್ದವರು ಕೈ ಕೊಟ್ಟಿದ್ದಾರೆ. ಹೀಗಾಗಿ ಕಮರ್ಷಿಯಲ್ ಗ್ಯಾಸ್ ತಂದು ಕೊಟ್ಟವರಿಗೆ ಈ ಆಫರ್ ಸಿಗುತ್ತೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಗ್ರಾಹಕರ ಪ್ರತಿಕ್ರಿಯೆ ಹೇಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆಫರ್ ಬಗ್ಗೆ ಘೋಷಣೆ ಮಾಡಿದ ಬಳಿಕ ವಿಚಾರಿಸುತ್ತಿದ್ದಾರೆ. ಆದರೆ ಈವರೆಗೆ ಯಾರು ತಂದು ಕೊಟ್ಟಿಲ್ಲ. 50 ಪ್ಲೇಟ್ ಮೊಮೊಸ್ಗೆ 5,500 ರೂಪಾಯಿ ಆಗುತ್ತೆ. ಆದರೆ ನಮಗೆ ಗ್ಯಾಸ್ ಸಿಗಬೇಕು. ಹೀಗಾಗಿ ನಮ್ಮ ಮುಖ್ಯ ಉದ್ದೇಶ ಗ್ಯಾಸ್. ನಮಗೆ ನಿತ್ಯ ಒಂದು ಸಿಲಿಂಡರ್ ಬೇಕು. ಆದರೆ ಈಗ ಗ್ಯಾಸ್ ಹೆಚ್ಚಾಗಿ ಖರ್ಚಾಗುವ ಫುಡ್ ಮಾಡುವುದನ್ನ ನಿಲ್ಲಿಸಿದ್ದೇವೆ ಎಂದು ಅನಾಸ್ ಅವರು ಹೇಳಿದ್ದಾರೆ.
ಮೈಸೂರು, (ಮಾರ್ಚ್ 14): ಅಮೆರಿಕ, ಇಸ್ರೇಲ್ ಹಾಗೂ ಇರಾನ್ ದೇಶಗಳ ನಡೆಯುತ್ತಿರುವ ಯುದ್ಧವು ತೀವ್ರ ಸ್ವರೂಪವನ್ನು ಪಡೆದುಕೊಂಡಿದ್ದು, ಭಾರತದಲ್ಲಿ ವಾಣಿಜ್ಯ ಹಾಗೂ ಅಡುಗೆ ಅನಿಲ ಸಿಲಿಂಡರ್ ಕೊರತೆಯ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಗ್ಯಾಸ್ ಸಿಲಿಂಡರ್ ಅಭಾವದಿಂದಾಗಿ ಕರ್ನಾಟಕದ ದೇವಸ್ಥಾನದ ಪ್ರಸಾದಕ್ಕೂ ಬಿಸಿ ತಟ್ಟಿದೆ. ಹೌದು…ದೇವಸ್ಥಾನಗಳಲ್ಲಿ ಭಕ್ತರಿಗೆ ತಯಾರಿಸುವ ಪ್ರಸಾದಕ್ಕೆ ಗ್ಯಾಸ್ ಸಮಸ್ಯೆ ಎದುರಾಗಿದೆ. ಹೀಗಾಗಿ ಕೆಲ ದೇವಾಲಯಗಳು ಸೌದೆ ಒಲೆ ಮೊರೆ ಹೋಗಿವೆ. ಹೌದು.. ಮೈಸೂರು ಇತಿಹಾಸ ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯದಲ್ಲೂ ಸಹ ಸೌದೆ ಒಲೆಯಿಂದಲೇ ಪ್ರಸಾದ ತಯಾರಿಸಲಾಗುತ್ತಿದೆ. ಹೀಗಾಗಿ ಗ್ಯಾಸ್ ಇಲ್ಲದಿದ್ದರೂ ಸಹ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಹೊಟ್ಟೆ ತುಂಬ ಪ್ರಸಾದ ದೊರೆಯುತ್ತಿದೆ.
ರಾಯಚೂರು, ಮಾರ್ಚ್ 14: ಜಿಲ್ಲೆಯ ಸಿಂಧನೂರು ತಾಲೂಕಿನ ಉಮಲೂಟಿ ಗ್ರಾಮದಲ್ಲಿ ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಹಾವು ಕಚ್ಚಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಾರ್ಚ್ 8ರಂದು ರಾತ್ರಿ ಈ ಘಟನೆ ನಡೆದಿದ್ದು, ಯಲ್ಲಮ್ಮ ಎಂಬ ವೃದ್ಧೆ ಬೇಸಿಗೆ ಹಿನ್ನೆಲೆ ಮನೆಯ ಹೊರಾಂಗಣದಲ್ಲಿ ಮಲಗಿದ್ದರು. ಈ ವೇಳೆ ಕಪ್ಪೆಯನ್ನು ಅಟ್ಟಾಡಿಸಿಕೊಂಡು ಬಂದ ಹಾವು ಹಾಸಿಗೆಯೊಳಗೆ ನುಗ್ಗಿ ಯಲ್ಲಮ್ಮಗೆ ಕಚ್ಚಿದೆ. ಹಾವು ಕಡಿತದ ದೃಶ್ಯ ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾವು ಕಚ್ಚುತ್ತಿದ್ದಂತೆ ಯಲ್ಲಮ್ಮ ಥಟ್ಟನೆ ಎದ್ದು ಕುಳಿತುಕೊಂಡು ಹಾವನ್ನು ಹೊಡೆಯಲು ಯತ್ನಿಸಿರುವುದು ದೃಶ್ಯದಲ್ಲಿ ಕಾಣಿಸುತ್ತದೆ. ಸದ್ಯ ಯಲ್ಲಮ್ಮ ಅವರನ್ನು ಸಿಂಧನೂರು ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಾರ್ಚ್ 15ರಿಂದ 21ರವರೆಗೆ ಮೂರನೇ ವಾರ. ಉದ್ಯೋಗಸ್ಥರಿಗೆ ವಿದೇಶ ಪ್ರವಾಸ ಆಸೆ ಅಧಿಕ, ಕಿರಿಕಿರಿ ಕೆಲವರಿಗೆ, ಒತ್ತಡದ ಸುಧಾರಣೆಗೆ ಪ್ರಯತ್ನ ಇವೆಲ್ಲ ಬೇಕಾಗುವುದು. ಅಂತರಿಕ ಕಲಹ ಶಮನವಾಗಲಿದೆ.
ಮೇಷ:
ಉದ್ಯೋಗದಲ್ಲಿ ಸ್ಥಿರತೆ ಇರಲಿದೆ. ಹೊಸ ಜವಾಬ್ದಾರಿಗಳು ಉನ್ನತ ಸ್ಥಾನಕ್ಕೆ ದಾರಿಯಾಗಲಿವೆ. ಉದ್ಯಮ ಸ್ಥಾಪನೆಗೆ ಇದು ಸಕಾಲ. ವೃತ್ತಿ ನಿಮಿತ್ತ ಕಿರು ಪ್ರಯಾಣ ಸಂಭವಿಸುವುದು. ಹಿರಿಯ ಅಧಿಕಾರಿಗಳ ಬೆಂಬಲ ಸಿಗಲಿದೆ.
ವೃಷಭ:
ವೃತ್ತಿ ಬದಲಾವಣೆಗೆ ಪ್ರಯತ್ನಿಸುತ್ತಿದ್ದರೆ ಯಶಸ್ಸು ಸಿಗಲಿದೆ. ವಿದೇಶಿ ಕಂಪನಿಗಳಲ್ಲಿ ಉದ್ಯೋಗಾವಕಾಶ ಅಥವಾ ಉದ್ಯೋಗದ ಕಾರಣ ದೂರದ ಪ್ರಯಾಣವಿರುತ್ತದೆ. ಹೊಸ ಉದ್ಯಮ ಆರಂಭಿಸಲು ಹೂಡಿಕೆದಾರರು ಲಭ್ಯವಾಗುವ ಸಾಧ್ಯತೆ ಇದೆ.
ಮಿಥುನ:
ಕೆಲಸದಲ್ಲಿ ಅತಿಯಾದ ಒತ್ತಡವಿದ್ದರೂ ಸ್ಥಾನಮಾನ ಹೆಚ್ಚಾಗಲಿದೆ. ಸರ್ಕಾರಿ ಕೆಲಸಗಳಿಗೆ ಪ್ರಯತ್ನಿಸುವವರಿಗೆ ಶುಭ ಸುದ್ದಿ ಸಿಗಲಿದೆ. ಉದ್ಯಮದಲ್ಲಿ ಲಾಭಾಂಶ ಹೆಚ್ಚಾಗಲಿದ್ದು, ಹೊಸ ಪಾಲುದಾರಿಕೆ ವ್ಯವಹಾರಕ್ಕೆ ಉತ್ತಮ ಸಮಯ.
ಕರ್ಕಾಟಕ:
ಉದ್ಯೋಗದಲ್ಲಿ ವರ್ಗಾವಣೆ ಅಥವಾ ಬದಲಾವಣೆಯ ಸಾಧ್ಯತೆ ದಟ್ಟವಾಗಿದೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಮತ್ತು ಉನ್ನತ ಹುದ್ದೆ ಲಭಿಸಲಿದೆ. ಉದ್ಯಮ ಸ್ಥಾಪನೆಗೆ ಕುಟುಂಬದ ಸಹಕಾರ ದೊರೆಯಲಿದ್ದು, ಆತ್ಮವಿಶ್ವಾಸ ಹೆಚ್ಚಾಗುವುದು.
ಸಿಂಹ:
ನಿಮ್ಮ ನಾಯಕತ್ವ ಗುಣಕ್ಕೆ ಮನ್ನಣೆ ಸಿಗಲಿದೆ. ಉದ್ಯೋಗದಲ್ಲಿ ಬಡ್ತಿ ಹೊಂದುವ ಯೋಗವಿದೆ. ವೃತ್ತಿ ಸಂಬಂಧಿತ ಪ್ರಯಾಣಗಳು ಲಾಭದಾಯಕವಾಗಿರಲಿವೆ. ಹೊಸ ಉದ್ಯಮ ಆರಂಭಿಸಲು ತಾಂತ್ರಿಕ ನೆರವು ಹಾಗೂ ಆರ್ಥಿಕ ಸೌಲಭ್ಯ ದೊರೆಯಲಿದೆ.
ಕನ್ಯಾ:
ಸ್ಥಿರವಾದ ಉದ್ಯೋಗ ಜೀವನವಿರಲಿದೆ. ಕೆಲಸದ ಸ್ಥಳದಲ್ಲಿ ಹೊಸ ಬದಲಾವಣೆಗಳು ಕಂಡುಬರುತ್ತವೆ. ವ್ಯಾಪಾರ ವಿಸ್ತರಣೆಗೆ ಇದು ಪೂರಕ ಸಮಯ. ದೀರ್ಘಕಾಲದ ಉದ್ಯೋಗದ ಸಮಸ್ಯೆಗಳು ಬಗೆಹರಿದು ಮಾನಸಿಕ ಶಾಂತಿ ಸಿಗಲಿದೆ.
ತುಲಾ:
ವೃತ್ತಿ ಜೀವನದಲ್ಲಿ ದೊಡ್ಡ ಬದಲಾವಣೆ ನಿರೀಕ್ಷಿಸಬಹುದು. ಪ್ರತಿಷ್ಠಿತ ಸಂಸ್ಥೆಗಳಿಂದ ಉದ್ಯೋಗದ ಆಫರ್ ಬರಬಹುದು. ಉದ್ಯಮದಲ್ಲಿ ನಾವೀನ್ಯತೆ ತರಲು ಪ್ರಯತ್ನಿಸುವಿರಿ. ಉದ್ಯೋಗದ ನಿಮಿತ್ತ ರಾಜ್ಯದ ಹೊರಗೆ ಪ್ರಯಾಣಿಸುವ ಸಾಧ್ಯತೆ ಇದೆ.
ವೃಶ್ಚಿಕ:
ಉದ್ಯೋಗದಲ್ಲಿ ಅಸ್ಥಿರತೆ ದೂರವಾಗಿ ನೆಮ್ಮದಿ ಸಿಗಲಿದೆ. ಉನ್ನತ ವ್ಯಾಸಂಗದ ಜೊತೆಗೆ ಉದ್ಯೋಗ ಮಾಡುವವರಿಗೆ ಪ್ರಗತಿ ಇರಲಿದೆ. ಸ್ವಂತ ಉದ್ಯಮ ಆರಂಭಿಸಲು ತಜ್ಞರ ಸಲಹೆ ಪಡೆಯುವುದು ಉತ್ತಮ. ಕಠಿಣ ಸವಾಲುಗಳನ್ನು ಜಯಿಸುವಿರಿ.
ಧನು:
ಭಾಗ್ಯೋದಯದ ಸಮಯವಿದು. ಉದ್ಯೋಗದಲ್ಲಿ ಬಡ್ತಿ ಮತ್ತು ಸಂಬಳ ಹೆಚ್ಚಳದ ಸೂಚನೆ ಇದೆ. ಉದ್ಯಮ ಸ್ಥಾಪನೆಗೆ ಬೇಕಾದ ಭೂಮಿ ಅಥವಾ ಕಟ್ಟಡದ ಯೋಗವಿದೆ. ವೃತ್ತಿ ನಿಮಿತ್ತ ಪ್ರವಾಸಗಳು ಯಶಸ್ವಿಯಾಗಿ ಮುಕ್ತಾಯಗೊಳ್ಳಲಿವೆ.
ಮಕರ:
ಉದ್ಯೋಗದಲ್ಲಿ ಶಿಸ್ತು ಮತ್ತು ಸಮಯ ಪಾಲನೆ ನಿಮಗೆ ಉನ್ನತ ಸ್ಥಾನ ತಂದುಕೊಡಲಿದೆ. ಹಳೆಯ ಉದ್ಯಮದಲ್ಲಿ ಲಾಭ ಹೆಚ್ಚಾಗಲಿದ್ದು, ಹೊಸ ಶಾಖೆ ತೆರೆಯಲು ನಿರ್ಧರಿಸುವಿರಿ. ಕೆಲಸದ ಒತ್ತಡದ ನಡುವೆಯೂ ಯಶಸ್ಸು ನಿಮ್ಮದಾಗಲಿದೆ.
ಕುಂಭ:
ವೃತ್ತಿ ಬದಲಾವಣೆ ಲಾಭದಾಯಕವಾಗಿರಲಿದೆ. ಸೃಜನಶೀಲ ಕ್ಷೇತ್ರದಲ್ಲಿರುವವರಿಗೆ ಉತ್ತಮ ಅವಕಾಶಗಳು ಸಿಗಲಿವೆ. ಹೊಸ ಸ್ಟಾರ್ಟ್‌ಅಪ್ ಆರಂಭಿಸಲು ಇದು ಶುಭ ಸಮಯ. ವಿದೇಶಿ ಪ್ರವಾಸ ಅಥವಾ ದೂರದ ಊರಿಗೆ ಪ್ರಯಾಣ ಬೆಳೆಸುವಿರಿ.
ಮೀನ:
ಉದ್ಯೋಗದಲ್ಲಿ ಸ್ಥಿರತೆ ಕಾಯ್ದುಕೊಳ್ಳುವಿರಿ. ಹಿರಿಯರ ಮಾರ್ಗದರ್ಶನದಿಂದ ಉನ್ನತ ಹುದ್ದೆ ಅಲಂಕರಿಸುವಿರಿ. ಉದ್ಯಮದಲ್ಲಿ ಹೂಡಿಕೆ ಮಾಡಲು ಹಣಕಾಸಿನ ನೆರವು ಸಿಗಲಿದೆ. ವೃತ್ತಿ ಜೀವನದಲ್ಲಿ ಮಹತ್ವದ ತಿರುವು ಪಡೆಯುವ ಸಾಧ್ಯತೆ ಇದೆ.
ಕಾಲಿವುಡ್ ನಟ ಅಜಿತ್ ಕುಮಾರ್ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರು ರೇಸ್ಗಾಗಿ ದುಬೈನಲ್ಲಿ ಇದ್ದರು. ಆದ್ರೆ, ಅಮೆರಿಕ-ಇಸ್ರೇಲ್ ಹಾಗೂ ಇರಾನ್ ಮಧ್ಯೆ ನಡೆಯುತ್ತಿರುವ ಯುದ್ಧ ರೀತಿಯ ಪರಿಸ್ಥಿತಿಯಿಂದ ವಿಮಾನಗಳ ಹಾರಾಟಕ್ಕೆ ಅಡಚಣೆ ಉಂಟಾಗಿತ್ತು. ಈ ಕಾರಣದಿಂದ ಅಜಿತ್ ಅವರು ದುಬೈನಲ್ಲೇ ಉಳಿದುಕೊಳ್ಳಬೇಕಾದ ಪರಿಸ್ಥಿತಿ ಬಂದಿತ್ತು. ಈಗ ಅವರು ಚೆನ್ನೈಗೆ ಮರಳಿದ್ದಾರೆ. ಇಲ್ಲಿಗೆ ಆಗಮಿಸುತ್ತಿದ್ದಂತೆ ಅವರು 24 ಲಕ್ಷ ರೂಪಾಯಿ ಕಾರು ಖರೀದಿ ಮಾಡಿದ್ದಾರೆ.
ಅಜಿತ್ ಅವರು ಚೆನ್ನೈಗೆ ಮರಳಿದ ಬಳಿಕ ಸಾಯಿ ಬಾಬ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಸಾಯಿ ಬಾಬಾ ಮಂದಿರದವರೇ ಈ ವಿಡಿಯೋನ ಹಂಚಿಕೊಂಡಿದ್ದರು. ಬಿಗಿ ಭದ್ರತೆ ಜೊತೆ ಅಜಿತ್ ಅವರು ದೇವಸ್ಥಾನಕ್ಕೆ ತೆರಳಿದ್ದರು. ಆ ಬಳಿಕ ಅವರು ಚೆನ್ನೈಗೆ ಮರಳಿದ್ದಾರೆ ಎನ್ನಲಾಗಿದೆ.
#AjithKumar took delivery of the Mahindra BE 6 Formula E Edition from Mr. Velusamy R, President.
ಅವರು ಮಹಿಂದ್ರ ಕಂಪನಿಯ ಬಿಇ6 ಕಾರನ್ನು ಖರೀದಿ ಮಾಡಿದ್ದಾರೆ. ಮಹಿಂದ್ರಾ ಎಲೆಕ್ಟ್ರಿಕ್ ಈ ವಿಷಯವನ್ನು ರಿವೀಲ್ ಮಾಡಿದೆ. ಕಂಪನಿಯ ವೆಬ್ಸೈಟ್ ಪ್ರಕಾರ ಅಜಿತ್ ಖರೀದಿಸಿದ ಕಾರಿನ ಬೆಲೆ 24 ಲಕ್ಷ ರೂಪಾಯಿ. ಅವರು ಟ್ಯಾಂಗೋ ರೆಡ್ ಬಣ್ಣದ ಕಾರು ಇದಾಗಿದೆ. ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.
ಅಜಿತ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ಸ್ಪೋರ್ಟ್ಸ್ ಬಗ್ಗೆಯೂ ಆಸಕ್ತಿ ಇದೆ. ಅವರ ಬಳಿ ಫೇರಾರಿ ಸೇರಿದಂತೆ ಸಾಕಷ್ಟು ದುಬಾರಿ ಕಾರುಗಳು ಇವೆ. ಆದಾಗ್ಯೂ ಅವರು ಮಹಿಂದ್ರಾ ಕಾರನ್ನು ಆಯ್ಕೆ ಮಾಡಿಕೊಂಡಿದ್ದು ಸಾಕಷ್ಟು ಖುಷಿ ಮೂಡಿದೆ.
ನಟಿಯರಿಗೆ ಆನ್ಲೈನ್ (Onlie) ಕಿರುಕುಳ ಎಂಬುದು ಪಿಡುಗಾಗಿ ಪರಿಣಮಿಸಿದೆ. ಹಲವಾರು ನಟಿಯರು ಆನ್ಲೈನ್ ಕಿರುಕುಳದಿಂದ ತೀವ್ರ ಸಮಸ್ಯೆ, ಮಾನಸಿಕ ಹಿಂಸೆ ಅನುಭವಿಸುತ್ತಲೇ ಇದ್ದಾರೆ. ಅಶ್ಲೀಲ ಕಮೆಂಟುಗಳು, ಎಐ ಜನರೇಟೆಡ್ ಅಶ್ಲೀಲ ವಿಡಿಯೋಗಳು, ತಿರುಚಿದ ಚಿತ್ರಗಳು ಹೀಗೆ ನಟಿಯರನ್ನು ಹಲವು ರೀತಿಯಲ್ಲಿ ದುರುಳರು ಕಾಡುತ್ತಲೇ ಬಂದಿದ್ದಾರೆ. ಆದರೆ ಕೆಲವು ನಟಿಯರು ಮಾತ್ರ ಇಂಥಹವರ ವಿರುದ್ಧ ಹೋರಾಡುವ ಧೈರ್ಯ ತೋರುತ್ತಾರೆ. ಇತ್ತೀಚೆಗೆ ಸೈಬರ್ ಪೊಲೀಸರು ಸಹ ಇಂಥಹಾ ಟ್ರೋಲ್ಗಳ ವಿರುದ್ಧ ಗಂಭೀರವಾಗಿದ್ದು, ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ. ಇದೀಗ ತೆಲುಗಿನ ಗ್ಲಾಮರಸ್ ನಟಿಯೊಬ್ಬರಿಗೆ ಆನ್ಲೈನ್ ಕಿರುಕುಳ ನೀಡಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ತೆಲುಗು ಚಿತ್ರರಂಗ ಮತ್ತು ಟಿವಿ ಲೋಕದ ಜನಪ್ರಿಯ ನಟಿ ಹಾಗೂ ನಿರೂಪಕಿ ಆಗಿರುವ ಅನುಸೂಯ ಭಾರಧ್ವಜ (Anusuya Bharadwaj) ಅವರಿಗೆ ಆನ್ಲೈನ್ನಲ್ಲಿ ಕಿರುಕುಳ ನೀಡಿದ ಇಬ್ಬರನ್ನು ಸೈಬರಾಬಾದ್ ಸೈಬರ್ ಪೊಲೀಸರು ಬಂಧಿಸಿದ್ದಾರೆ. ಜನಾರ್ದನ್ (29) ಮತ್ತು ಕೊಂಡಪುರಂ ಅರುಣ್ ಕುಮಾರ್ ಎಂಬುವರು ಇದೀಗ ಬಂಧನಕ್ಕೆ ಒಳಗಾಗಿದ್ದಾರೆ. ಈ ಇಬ್ಬರು ದುರುಳರು ಎಐ ಬಳಸಿ ಅನುಸೂಯ ಅವರ ಅಶ್ಲೀಲ ವಿಡಿಯೋಗಳನ್ನು ನಿರ್ಮಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ಬಗ್ಗೆ ನಟಿ ಅನುಸೂಯ ಅವರು ದೂರು ನೀಡಿದ್ದರು. ಅದರಂತೆ ಪೊಲೀಸರು ಬಂಧಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್ 23 ರಂದು ದೂರು ನೀಡಿದ್ದ ಅನುಸೂಯ ಅವರು ಸೈಬರ್ ಪೊಲೀಸರಿಗೆ ದೂರು ನೀಡಿದ್ದರು. ಹಲವು ಸಾಮಾಜಿಕ ಮಾಧ್ಯಮ ಪುಟಗಳು ತನ್ನ ವಿರುದ್ಧ ಮಾನಹಾನಿಕರ, ನಿಂದನಾತ್ಮಕ ಮತ್ತು ಅಶ್ಲೀಲ ವಿಷಯಗಳನ್ನು ಪ್ರಸಾರ ಮಾಡುತ್ತಿವೆ ಎಂದು ದೂರಿನಲ್ಲಿ ಆರೋಪಿಸಿದ್ದರು. ಇದು ತನ್ನ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುತ್ತಿದೆ ಎಂದು ಅವರು ದೂರಿದ್ದರು. ಕೂಡಲೇ ಅಂಥಹವರನ್ನು ಗುರುತಿಸಿ ದುಷ್ಟರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದರು.
ದೂರು ಸ್ವೀಕರಿಸಿ ತನಿಖೆ ನಡೆಸಿದ ಸೈಬರಾಬಾದ್ ಸೈಬರ್ ಪೊಲೀಸರು ಹೈದರಾಬಾದ್ನಲ್ಲಿ ವಾಸವಿದ್ದ, ಆಂಧ್ರಪ್ರದೇಶದ ಕಡಪಾ ಮೂಲದ ಜನಾರ್ದನ್ ಎಂಬಾತನನ್ನು ಬಂಧಿಸಿದ್ದರು. ಈತ ‘@mmtt_official’ ಎಂಬ ಇನ್‌ಸ್ಟಾಗ್ರಾಮ್ ಖಾತೆಯನ್ನು ನಡೆಸುತ್ತಿದ್ದ. ಈ ಖಾತೆಯ ಮೂಲಕ ಅನುಸೂಯ ಸೇರಿದಂತೆ ಇತರೆ ಕೆಲವು ನಟಿಯರನ್ನು ಗುರಿಯಾಗಿಸಿಕೊಂಡು ಎಐ ನಿರ್ಮಿತ ಅಶ್ಲೀಲ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದ. ಸಿಕಂದರಾಬಾದ್‌ನ ಪಶ್ಚಿಮ ಮಾರೇಡ್‌ಪಲ್ಲಿಯ ಆಟೋ ಚಾಲಕನಾಗಿರುವ ಅರುಣ್ ಕುಮಾರ್ ಎಂಬಾತನನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಯೂಟ್ಯೂಬ್ ರೀಲ್ಸ್‌ನಲ್ಲಿ ನಟಿಯ ವಿರುದ್ಧ ಅತ್ಯಂತ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಕ್ಕಾಗಿ ಈತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಈ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ (IT Act) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಿಧಿವಿಜ್ಞಾನ (Forensic) ತನಿಖೆಗೆ ಕಳುಹಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ ಒಟ್ಟು 73 ವ್ಯಕ್ತಿಗಳು ಮತ್ತು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದ್ದಾರೆ. ಇದರಲ್ಲಿ ಕೆಲವು ಮಾಧ್ಯಮ ಪ್ರತಿನಿಧಿಗಳು ಮತ್ತು ಪ್ರಭಾವಿ ವ್ಯಕ್ತಿಗಳ ಹೆಸರೂ ಇದೆ ಎಂದು ತಿಳಿದುಬಂದಿದೆ. ನಟಿ ಅನಸೂಯ ಅವರು ಮಹಿಳೆಯರ ಉಡುಪಿನ ಕುರಿತಾದ ಚರ್ಚೆಯೊಂದರಲ್ಲಿ ತಮ್ಮ ವೈಯಕ್ತಿಕ ಸ್ವಾತಂತ್ರ್ಯದ ಪರವಾಗಿ ಮಾತನಾಡಿದ್ದರು. ಇದರ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ಟ್ರೋಲ್ ಮತ್ತು ಹರಿತವಾದ ನಿಂದನೆಗಳು ಆರಂಭವಾಗಿದ್ದವು.
ಮಾರ್ಚ್ 15ರಿಂದ ಮಾರ್ಚ್ 21ರವರೆಗೆ ಪ್ರೇಮದಲ್ಲಿ ಭಗ್ನತೆ, ಹಳೆಯ ಪ್ರೇಮದ ಹೊಸ ಹುಟ್ಟು ಕಾಣಿಸುವುದು. ಮರು ವಿವಾಹಕ್ಕೆ ಪ್ರಯತ್ನ ಸಾಗಲಿದೆ. ಪ್ರೇಮಕ್ಕೆ ಆಕರ್ಷಣೆಯ ಲೇಪವನ್ನು ಹಚ್ಚುವಿರಿ. ಎಲ್ಲವೂ ಕ್ಷಣಿಕವೆಂದು ಅರಿವಾದಾಗ ಕಾಲ ಕಳೆಯುತ್ತದೆ. ಹೆಜ್ಜೆ ಇಟ್ಟು ದೃಷ್ಟಿ ಹರಿಸುವ ಬದಲು, ದೃಷ್ಟಿ ಇಟ್ಟು ಹೆಜ್ಜೆ ಹಾಕಿ.
ಮೇಷ
ಈ ವಾರ ಸಂಗಾತಿಯೊಂದಿಗೆ ಸಣ್ಣಪುಟ್ಟ ವಾಗ್ವಾದಗಳಾಗಬಹುದು, ತಾಳ್ಮೆ ಅಗತ್ಯ. ಪ್ರೇಮಿಗಳಿಗೆ ಮನೆಯವರಿಂದ ಹಸಿರು ನಿಶಾನೆ ಸಿಗುವ ಸಾಧ್ಯತೆ ಇದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರುವ ಸುಸಮಯವಿದು.
ವೃಷಭ
ಹಳೆಯ ಪ್ರೇಮ ನೆನಪಾಗಿ ಮನಸ್ಸು ಸ್ವಲ್ಪ ಚಂಚಲವಾಗಬಹುದು. ದಾಂಪತ್ಯದಲ್ಲಿ ಪರಸ್ಪರ ಗೌರವ ಹೆಚ್ಚಲಿದೆ. ಹೊಸ ಸಂಬಂಧಕ್ಕೆ ಕೈಹಾಕುವ ಮೊದಲು ಯೋಚಿಸಿ, ಪ್ರೇಮಭಂಗದ ಭೀತಿ ಇರುವವರು ಮೌನವಾಗಿರುವುದು ಒಳಿತು.
ಮಿಥುನ
ಸಂವಹನ ಕೊರತೆಯಿಂದ ದೂರವಾಗಿದ್ದ ಪ್ರೇಮಿಗಳು ಈ ವಾರ ಮತ್ತೆ ಒಂದಾಗುವರು. ಸಂಗಾತಿಗೆ ವಿಶೇಷ ಉಡುಗೊರೆ ನೀಡುವ ಮೂಲಕ ಪ್ರೀತಿ ಬಲಪಡಿಸುವಿರಿ. ವಿವಾಹ ಆಕಾಂಕ್ಷಿಗಳಿಗೆ ಉತ್ತಮ ಸಂಬಂಧಗಳು ಹುಡುಕಿ ಬರಲಿವೆ.
ಕಟಕ
ಕುಟುಂಬದಲ್ಲಿ ವಿವಾಹದ ಮಾತುಕತೆಗಳು ಶುಭ ಫಲ ನೀಡಲಿವೆ. ಪ್ರೇಮ ಜೀವನದಲ್ಲಿ ಮೂರನೇ ವ್ಯಕ್ತಿಯ ಹಸ್ತಕ್ಷೇಪದಿಂದ ಮನಸ್ತಾಪ ಉಂಟಾಗಬಹುದು. ಸಂಗಾತಿಯ ಭಾವನೆಗಳಿಗೆ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ.
ಸಿಂಹ
ನಿಮ್ಮ ಆಕರ್ಷಕ ವ್ಯಕ್ತಿತ್ವದಿಂದ ಸಂಗಾತಿಯ ಮನ ಗೆಲ್ಲುವಿರಿ. ಪ್ರೇಮ ನಿವೇದನೆಗೆ ಇದು ಅತ್ಯಂತ ಶುಭ ವಾರ. ವಿವಾಹ ಜೀವನದಲ್ಲಿ ಹೊಸ ಚೈತನ್ಯ ಮೂಡಲಿದ್ದು, ದಂಪತಿಗಳ ನಡುವೆ ಸಾಮರಸ್ಯ ವೃದ್ಧಿಯಾಗಲಿದೆ.
ಕನ್ಯಾ
ಕೆಲಸದ ಒತ್ತಡದಿಂದ ಸಂಗಾತಿಯಿಂದ ದೂರ ಉಳಿಯುವ ಸಂದರ್ಭ ಬರಬಹುದು. ಅನಗತ್ಯ ಸಂಶಯಗಳು ಪ್ರೇಮಭಂಗಕ್ಕೆ ದಾರಿಯಾಗದಂತೆ ಎಚ್ಚರವಹಿಸಿ. ವಿವಾಹ ಪ್ರಸ್ತಾವನೆಗಳು ಅಂತಿಮವಾಗಲು ಇನ್ನೂ ಸ್ವಲ್ಪ ಸಮಯ ಕಾಯಬೇಕಾಗಬಹುದು.
ತುಲಾ
ಸಂಗಾತಿಯೊಂದಿಗೆ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವ ಯೋಗವಿದೆ. ಪ್ರೇಮಿಗಳ ನಡುವೆ ಇದ್ದ ಗೊಂದಲಗಳು ಬಗೆಹರಿಯಲಿವೆ. ಹೊಸದಾಗಿ ವಿವಾಹವಾದವರಿಗೆ ಈ ವಾರ ಅತ್ಯಂತ ಮಧುರವಾದ ಕ್ಷಣಗಳನ್ನು ಕಳೆಯುವ ಅವಕಾಶ ಸಿಗಲಿದೆ.
ವೃಶ್ಚಿಕ
ನಿಮ್ಮ ಹಠಮಾರಿತನ ಪ್ರೇಮ ಸಂಬಂಧದಲ್ಲಿ ಬಿರುಕು ಮೂಡಿಸಬಹುದು, ಹೊಂದಾಣಿಕೆ ಮುಖ್ಯ. ಪ್ರೇಮ ವೈಫಲ್ಯ ಅನುಭವಿಸಿದವರಿಗೆ ಹಳೆಯ ನೋವಿನಿಂದ ಹೊರಬರಲು ಮಿತ್ರರ ಸಹಾಯ ಸಿಗಲಿದೆ. ಮದುವೆಯ ಮಾತುಕತೆಗಳಲ್ಲಿ ವಿಳಂಬ ಸಾಧ್ಯತೆ.
ಧನು
ಪ್ರೇಮ ಜೀವನದಲ್ಲಿ ನಂಬಿಕೆ ಮತ್ತು ಬದ್ಧತೆ ಹೆಚ್ಚಾಗಲಿದೆ. ಮನೆಯ ಹಿರಿಯರ ಸಮ್ಮತಿಯೊಂದಿಗೆ ವಿವಾಹ ನಿಶ್ಚಿತವಾಗುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಭವಿಷ್ಯದ ಬಗ್ಗೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ.
ಮಕರ
ವೃತ್ತಿಜೀವನದ ಬಿಡುವಿಲ್ಲದ ವೇಳಾಪಟ್ಟಿಯಿಂದ ಪ್ರೇಮ ಜೀವನಕ್ಕೆ ಸಮಯ ನೀಡುವುದು ಕಷ್ಟವಾಗಬಹುದು. ಇದು ಸಂಗಾತಿಯ ಅಸಮಾಧಾನಕ್ಕೆ ಕಾರಣವಾಗಬಹುದು. ಪ್ರೇಮಿಗಳು ಪರಸ್ಪರ ಸಹಕರಿಸುವುದರಿಂದ ಸಂಬಂಧ ಗಟ್ಟಿಯಾಗಲಿದೆ.
ಕುಂಭ
ಹೊಸಬರ ಪರಿಚಯ ಗಾಢವಾದ ಪ್ರೇಮವಾಗಿ ಬದಲಾಗುವ ಲಕ್ಷಣಗಳಿವೆ. ವಿಚ್ಛೇದನ ಅಥವಾ ಪ್ರೇಮಭಂಗ ಅನುಭವಿಸಿದವರಿಗೆ ಹೊಸ ಜೀವನ ಆರಂಭಿಸಲು ಇದು ಸಕಾಲ. ದಾಂಪತ್ಯದಲ್ಲಿ ಸುಖ-ಶಾಂತಿ ನೆಲೆಸಲಿದ್ದು, ಸಂತೋಷದ ವಾತಾವರಣವಿರುತ್ತದೆ.
ಮೀನ
ಪ್ರೇಮ ವ್ಯವಹಾರಗಳಲ್ಲಿ ಆತುರದ ನಿರ್ಧಾರ ಬೇಡ, ಭಾವನೆಗಳ ಮೇಲೆ ಹಿಡಿತವಿರಲಿ. ವಿವಾಹ ಆಕಾಂಕ್ಷಿಗಳಿಗೆ ಕಂಕಣ ಭಾಗ್ಯ ಕೂಡಿಬರಲಿದ್ದು, ಶುಭ ಕಾರ್ಯಗಳು ನೆರವೇರಲಿವೆ. ಸಂಗಾತಿಯ ಬೆಂಬಲದಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಲಿದೆ.
ಬೆಂಗಳೂರು, ಮಾ.14: ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಶಾಲೆಯೊಂದರ ಅಮಾನವೀಯ ವರ್ತನೆ ಈಗ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಕೇವಲ ಎರಡು ನಿಮಿಷ ತಡವಾಗಿ ಶಾಲೆಗೆ ಬಂದಿದ್ದಕ್ಕಾಗಿ ಆರನೇ ವರ್ಷದ ಪುಟ್ಟ ಮಗುವನ್ನು ಸುಮಾರು ಎರಡು ಗಂಟೆಗಳ ಕಾಲ ಸುಡುವ ಬಿಸಿಲಿನಲ್ಲಿ ನಿಲ್ಲಿಸುವ ಮೂಲಕ ಶಾಲಾ ಮಂಡಳಿ ತನ್ನ ಕ್ರೌರ್ಯ ಮೆರೆದಿದೆ. ನಗರದ ಸಂಚಾರ ದಟ್ಟಣೆಯಿಂದಾಗಿ ಮಗು ಶಾಲೆಗೆ ಕೇವಲ 2 ನಿಮಿಷ ತಡವಾಗಿ ತಲುಪಿದೆ. ಇದನ್ನೇ ದೊಡ್ಡ ಅಪರಾಧ ಎಂಬಂತೆ ಬಿಂಬಿಸಿದ ಶಾಲಾ ಸಿಬ್ಬಂದಿ, ಮೊದಲನೇ ತರಗತಿಯ ಮಗುವನ್ನು ಮಧ್ಯಾಹ್ನದ ಅತೀ ಹೆಚ್ಚು ತಾಪಮಾನವಿರುವ ಬಿಸಿಲಿನಲ್ಲಿ ಎರಡು ಗಂಟೆಗಳ ಕಾಲ ಮೈದಾನದಲ್ಲಿ ನಿಲ್ಲಿಸಿದ್ದಾರೆ. ಸುಡುವ ಬಿಸಿಲಿಗೆ ಮಗು ಕಂಗಾಲಾಗಿದ್ದು, ದೈಹಿಕವಾಗಿ ಅಸ್ವಸ್ಥಗೊಂಡಿದೆ. ಆರು ವರ್ಷದ ಮಗುವಿಗೆ ಇಂತಹ ಕಠಿಣ ಶಿಕ್ಷೆ ನೀಡಿರುವುದು ಮಕ್ಕಳ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಬಗ್ಗೆ ಪೋಷಕರು ಶಾಲಾ ಆಡಳಿತ ಮಂಡಳಿಯನ್ನು ಪ್ರಶ್ನಿಸಲು ಹೋದಾಗ, ಕ್ಷಮೆ ಕೇಳುವ ಬದಲು ಅತ್ಯಂತ ಅಹಂಕಾರದಿಂದ ವರ್ತಿಸಿದ್ದಾರೆ. “ನಮ್ಮ ಶಿಸ್ತೇ ಹೀಗೆ, ನಿಮಗೆ ಇಷ್ಟವಿಲ್ಲದಿದ್ದರೆ ಮಗುವನ್ನು ಕರೆದುಕೊಂಡು ಹೋಗಿ” ಎನ್ನುವ ರೀತಿಯಲ್ಲಿ ಬೇಜವಾಬ್ದಾರಿಯುತ ಉತ್ತರ ನೀಡಿದ್ದಾರೆ ಎಂದು ಪೋಷಕರು ದೂರಿದ್ದಾರೆ. ಈ ಬಗ್ಗೆ @gharkekalesh ಎಂಬ ಎಕ್ಸ್ ಖಾತೆ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ.