ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ಸಿಎಂ ವಿಜಯ್ – Kannada News | Tamil Nadu CM Vijay meets rebel AIADMK leaders who are Supporting TVK ahead of floor test
ಚೆನ್ನೈ, ಮೇ 12: ತಮಿಳುನಾಡು ವಿಧಾನಸಭೆಯಲ್ಲಿ ನಾಳೆ ನಡೆಯಲಿರುವ ನಿರ್ಣಾಯಕವಾದ ಬಹುಮತ ಸಾಬೀತಿಗೂ ಮುನ್ನ ತಮಿಳುನಾಡಿನ ಮುಖ್ಯಮಂತ್ರಿ ಮತ್ತು ಟಿವಿಕೆ ಮುಖ್ಯಸ್ಥ ವಿಜಯ್ (CM Vijay) ಇಂದು ಎಐಎಡಿಎಂಕೆ ಬಂಡಾಯ ನಾಯಕರಾದ ಸಿ.ವಿ ಷಣ್ಮುಗಂ ಮತ್ತು ಎಸ್.ಪಿ ವೇಲುಮಣಿ ಅವರನ್ನು ಭೇಟಿ ಮಾಡಿದ್ದಾರೆ. ಈ ಬಣವು 30 ಶಾಸಕರ ಬೆಂಬಲವನ್ನು ಹೊಂದಿದ್ದು, ಇವರು ನಾಳೆಯ ವಿಶ್ವಾಸಮತಯಾಚನೆ ವೇಳೆ ಟಿವಿಕೆಗೆ ತನ್ನ ಬೆಂಬಲವನ್ನು ನೀಡುವುದಾಗಿ ಘೋಷಿಸಿರುವುದರಿಂದ ಈ ಭೇಟಿ ಹೆಚ್ಚಿನ ರಾಜಕೀಯ ಮಹತ್ವವನ್ನು ಪಡೆದುಕೊಂಡಿದೆ. ಇಂದು ಮೊದಲ ಬಾರಿಗೆ…