ಬೆಂಗಳೂರಲ್ಲಿ ಅಬ್ಬರಿಸಿದ ವರುಣ: ಕೆರೆಗಳಂತಾದ ರಸ್ತೆಗಳು; ಸವಾರರು ಪರದಾಟ

ಬೆಂಗಳೂರು, ಆಗಸ್ಟ್​​ 10: ನಗರದಲ್ಲಿ ಇಂದು ಕೂಡ ಮಳೆರಾಯನ ಎಂಟ್ರಿ ಆಗಿದೆ. ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು, ಸಂಜೆ ಆಗುತ್ತಿದ್ದಂತೆ ಮಳೆ ಆರಂಭವಾಗಿದೆ. ವಿಜಯನಗರ, ನಾಗರಬಾವಿ, ಟೌನ್‌ಹಾಲ್, ಮಲ್ಲೇಶ್ವರಂ, ಪ್ಯಾಲೇಸ್ ಗುಟ್ಟಹಳ್ಳಿ, ಸ್ಯಾಟಲೈಟ್, ಯಶವಂತಪುರ, ವಿಧಾನಸೌಧ, ಕೆ.ಆರ್. ಸರ್ಕಲ್, ಚಾಲುಕ್ಯ ಸರ್ಕಲ್, ಮೆಜೆಸ್ಟಿಕ್, ಕೆ.ಆರ್. ಮಾರ್ಕೆಟ್, ಕಾರ್ಪೊರೇಷನ್ ಸುತ್ತಮುತ್ತ ಹಾಗೂ ಶಿವಾಜಿನಗರ ಸೇರಿದಂತೆ ಹಲವೆಡೆ ಮಳೆ ಸುರಿದಿದೆ. ಧಾರಾಕಾರ ಸುರಿದ ಮಳೆಗೆ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ತೀವ್ರ ಹೈರಾಣಾಗಿ ಅಂಡರ್‌ಪಾಸ್ ಹಾಗೂ ಬಸ್ ನಿಲ್ದಾಣಗಳಲ್ಲಿ ಆಶ್ರಯ ಪಡೆದರು. ಇನ್ನೊಂದೆಡೆ ನೆಲಮಂಗಲ-ಹಾಸನ ರಾಷ್ಟ್ರೀಯ ಹೆದ್ದಾರಿಯ ಕೆಂಪಲಿಂಗನಹಳ್ಳಿ ಬಳಿ ಮಳೆಯಿಂದಾಗಿ ರಸ್ತೆ ಸರಿಯಾಗಿ ಕಾಣದೆ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಡಿವೈಡರ್​ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಕಾರು ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು. ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಬುಧ ಸಂಚಾರ ಫಲ: ಈ ರಾಶಿಯವರಿಗೆ ಒಲಿಯಲಿದೆ ದಿಢೀರ್ ಧನಯೋಗ ಹಾಗೂ ವೃತ್ತಿ ಪ್ರಗತಿ – Kannada News | Mercury Transit: Zodiac Horoscope and Astrological Guide to Intellectual Triumph

ಮೇಷ ರಾಶಿ :

ಪಂಚಮ ಸ್ಥಾನದಲ್ಲಿ ಬುಧನ ಸಂಚಾರದಿಂದ ಬುದ್ಧಿಶಕ್ತಿ ಉತ್ತಮವಾಗಿರುತ್ತದೆ. ಆದರೆ ಬುಧ ಮೌಡ್ಯವಾಗಿರುವುದರಿಂದ ಮಕ್ಕಳ ವಿಷಯದಲ್ಲಿ ಸ್ವಲ್ಪ ಚಿಂತೆ, ಉದ್ಯೋಗದಲ್ಲಿ ಅನಗತ್ಯ ತರ್ಕ ಅಥವಾ ಗೊಂದಲ ಉಂಟಾಗಬಹುದು. ಶಿಕ್ಷಣ ಹಾಗೂ ಸೃಜನಶೀಲ ರಂಗದಲ್ಲಿರುವವರಿಗೆ ಹೊಸ ಅವಕಾಶಗಳು ಸಿಗಲಿವೆ. ವ್ಯಾಪಾರದಲ್ಲಿ ಲಾಭದಾಯಕ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೀರಿ.

​ವೃಷಭ ರಾಶಿ :

​ಚತುರ್ಥ ಸ್ಥಾನದಲ್ಲಿ ಬುಧನ ಸಂಚಾರ ಅತ್ಯಂತ ಶುಭ. ಗೃಹ ಸೌಖ್ಯ, ವಾಹನ ಹಾಗೂ ಆಸ್ತಿ ಖರೀದಿಗೆ ಸೂಕ್ತ ಸಮಯ. ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ. ಆಸ್ತಿ-ಪಾಸ್ತಿ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ. ತಾಯಿಯ ಆರೋಗ್ಯ ಸುಧಾರಿಸಲಿದ್ದು, ಬಂಧು-ಮಿತ್ರರಿಂದ ಸಹಕಾರ ದೊರೆಯುತ್ತದೆ.

​ಮಿಥುನ ರಾಶಿ :

ತೃತೀಯ ಭಾವದಲ್ಲಿ ಬುಧನ ಸಂಚಾರದಿಂದ ಧೈರ್ಯ ಹೆಚ್ಚಿದರೂ ಸಹೋದರರೊಂದಿಗೆ ಸಣ್ಣಪುಟ್ಟ ಅಭಿಪ್ರಾಯ ಭೇದಗಳು ಬರಬಹುದು. ಪ್ರವಾಸಗಳಿಂದ ಅಷ್ಟು ಲಾಭವಿಲ್ಲ. ಸಂವಹನ, ಬರವಣಿಗೆ ಹಾಗೂ ಮಾಧ್ಯಮ ರಂಗದಲ್ಲಿರುವವರಿಗೆ ಅದ್ಭುತ ಯಶಸ್ಸು. ನಿಮ್ಮ ಹೊಸ ಪ್ರಯತ್ನಗಳಿಗೆ ಉತ್ತಮ ಬೆಂಬಲ ಸಿಗುತ್ತದೆ.

​ಕರ್ಕಾಟಕ ರಾಶಿ :

​ದ್ವಿತೀಯ ಭಾವದಲ್ಲಿ ಬುಧನಿರುವುದರಿಂದ ಧನ ಲಾಭ ಮತ್ತು ಕುಟುಂಬದಲ್ಲಿ ಮಂಗಳ ಕಾರ್ಯಗಳು ಜರುಗಲಿವೆ. ಮಾತುಗಳಲ್ಲಿ ಸೌಮ್ಯತೆ ಹಾಗೂ ಚತುರತೆ ಇರುತ್ತದೆ. ಹಣಕಾಸಿನ ಸ್ಥಿತಿ ಬಲಗೊಳ್ಳಲಿದೆ. ಹೂಡಿಕೆಗಳಿಂದ ಸಕಾರಾತ್ಮಕ ಫಲಿತಾಂಶ ದೊರೆಯಲಿದ್ದು, ಕುಟುಂಬದ ಬೆಂಬಲದಿಂದ ಪ್ರಮುಖ ಕೆಲಸಗಳು ಪೂರ್ಣಗೊಳ್ಳುತ್ತವೆ.

​ಸಿಂಹ ರಾಶಿ :

ಬುಧ, ಸೂರ್ಯ ಮತ್ತು ಕೇತು ಒಟ್ಟಿಗಿರುವುದರಿಂದ ಮಾನಸಿಕ ಒತ್ತಡ, ಕೋಪ ಹಾಗೂ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ ಉಂಟಾಗಬಹುದು. ಆರೋಗ್ಯದ ಕಡೆ ಗಮನ ಅಗತ್ಯ. ಸ್ವಂತ ಉದ್ಯೋಗಿಗಳಿಗೆ ಸೂಕ್ತ ತಂತ್ರಗಾರಿಕೆಗಳಿಂದ ಜಯ ಸಿಗಲಿದೆ. ವ್ಯಕ್ತಿತ್ವದಲ್ಲಿ ಪ್ರಗತಿ ಕಂಡುಬಂದರೂ, ನಾಲಿಗೆಯ ಮೇಲೆ ಹಿತಮಿತ ಇರುವುದು ಒಳಿತು.

ಕನ್ಯಾ ರಾಶಿ :

​ದ್ವಾದಶ ಭಾವದಲ್ಲಿ ಬುಧನ ಸಂಚಾರದಿಂದ ಅನಗತ್ಯ ವೆಚ್ಚಗಳು ಹೆಚ್ಚಾಗಬಹುದು. ದೂರದ ಪ್ರಯಾಣಗಳು ಆಯಾಸ ತರಬಹುದು. ವಿದೇಶಿ ವ್ಯವಹಾರ ಅಥವಾ ವಿದೇಶಿ ಸಂಪರ್ಕಗಳಿಂದ ಲಾಭ. ಆಧ್ಯಾತ್ಮಿಕ ಚಿಂತನೆ ಹೆಚ್ಚಲಿದ್ದು, ಹಳೆಯ ಸಾಲಗಳನ್ನು ತೀರಿಸಲು ಮಾರ್ಗಗಳು ಸುಗಮವಾಗುತ್ತವೆ.

​ತುಲಾ ರಾಶಿ :

ಏಕಾದಶ ಭಾವದಲ್ಲಿ ಬುಧನ ಸಂಚಾರವು ಉತ್ತಮ ಆದಾಯ ಹಾಗೂ ವಿವಿಧ ಮೂಲಗಳಿಂದ ಧನ ಲಾಭವನ್ನು ನೀಡುತ್ತದೆ. ಸ್ನೇಹಿತರಿಂದ ಪೂರ್ಣ ಸಹಕಾರ ದೊರೆಯಲಿದೆ. ನಿಮ್ಮ ದೀರ್ಘಕಾಲದ ಆಸೆಗಳು ಈಡೇರುತ್ತವೆ. ವ್ಯಾಪಾರ-ವ್ಯವಹಾರಗಳಲ್ಲಿ ಲಾಭದ ಪ್ರಮಾಣ ಹೆಚ್ಚಾಗಲಿದ್ದು, ಹೊಸ ಉದ್ಯೋಗಾವಕಾಶಗಳು ಹುಡುಕಿಕೊಂಡು ಬರಲಿವೆ.

​ವೃಶ್ಚಿಕ ರಾಶಿ :

​ದಶಮ ಭಾವದಲ್ಲಿ ಬುಧನ ಉಪಸ್ಥಿತಿಯಿಂದ ಉದ್ಯೋಗ ಮತ್ತು ವ್ಯವಹಾರದಲ್ಲಿ ಸಫಲತೆ ಸಿಗಲಿದೆ. ಮೇಲಧಿಕಾರಿಗಳಿಂದ ಮೆಚ್ಚುಗೆ ದೊರೆಯುತ್ತದೆ. ವೃತ್ತಿಜೀವನದಲ್ಲಿ ಹೊಸ ಎತ್ತರವನ್ನು ತಲುಪುವಿರಿ. ಪದೋನ್ನತಿ ಹಾಗೂ ವೇತನ ಹೆಚ್ಚಳದ ಯೋಗವಿದೆ. ನಿಮ್ಮ ಕಾರ್ಯಕ್ಷಮತೆ ಪ್ರಶಂಸಿಸಲ್ಪಡುತ್ತದೆ.

​ಧನು ರಾಶಿ :

​ಭಾಗ್ಯ ಭಾವದಲ್ಲಿ ಬುಧ ಸಂಚಾರದಿಂದ ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ. ಉನ್ನತ ಶಿಕ್ಷಣ ಬಯಸುವ ವಿದ್ಯಾರ್ಥಿಗಳಿಗೆ ಶುಭ ಸಮಯ. ದೈವಾನುಗ್ರಹದಿಂದ ಕಾರ್ಯಗಳಲ್ಲಿ ಯಶಸ್ಸು ಹಾಗೂ ಸುದೀರ್ಘ ಪ್ರಯಾಣದ ಯೋಗವಿದೆ.

​ಮಕರ ರಾಶಿ :

ಅಷ್ಟಮ ಸ್ಥಾನದಲ್ಲಿ ಬುಧನ ಸಂಚಾರವು ಶುಭ ಫಲಗಳನ್ನು ನೀಡುತ್ತದೆ. ಹಠಾತ್ ಧನ ಲಾಭ, ಸಂಶೋಧನಾ ಕಾರ್ಯಗಳಲ್ಲಿ ಯಶಸ್ಸು ಹಾಗೂ ಶತ್ರು ಜಯ ಸಿಗಲಿದೆ. ಪಿತ್ರಾರ್ಜಿತ ಆಸ್ತಿ ಅಥವಾ ಇನ್ಶೂರೆನ್ಸ್ ಮೂಲಕ ಲಾಭ. ನಿಮ್ಮ ಗೂಢ ಜ್ಞಾನ ಮತ್ತು ವಿಶ್ಲೇಷಣಾತ್ಮಕ ಸಾಮರ್ಥ್ಯ ಹೆಚ್ಚಾಗುತ್ತದೆ.

​ಕುಂಭ ರಾಶಿ :

ಸಪ್ತಮ ಭಾವದಲ್ಲಿ ಬುಧನಿರುವುದರಿಂದ ವೈವಾಹಿಕ ಜೀವನದಲ್ಲಿ ಹಾಗೂ ಪಾಲುದಾರಿಕೆ ವ್ಯವಹಾರಗಳಲ್ಲಿ ಸಣ್ಣಪುಟ್ಟ ಮನಸ್ತಾಪಗಳು ಉಂಟಾಗಬಹುದು. ನೂತನ ಉದ್ಯೋಗಿಕ ಒಪ್ಪಂದಗಳಿಗೆ ಸೂಕ್ತ ಸಮಯ. ಸಾರ್ವಜನಿಕ ಸಂಬಂಧಗಳು ಬಲಗೊಳ್ಳುತ್ತವೆ ಹಾಗೂ ಜೀವನ ಸಂಗಾತಿಯಿಂದ ಬೆಂಬಲ ಸಿಗುತ್ತದೆ.

ಇದನ್ನೂ ಓದಿ: ನಿಮ್ಮ ರಾಶಿಗನುಗುಣವಾಗಿ ಈ ವಾರದ ಭವಿಷ್ಯ ಇಲ್ಲಿ ತಿಳಿದುಕೊಳ್ಳಿ

​ಮೀನ ರಾಶಿ :

ಷಷ್ಠ ಭಾವದಲ್ಲಿ ಬುಧನ ಸಂಚಾರ ಶುಭಕರವಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಹಾಗೂ ಆರೋಗ್ಯ ಸುಧಾರಣೆ ಕಂಡುಬರುತ್ತದೆ. ಕೋರ್ಟ್ ಕೇಸ್ ಅಥವಾ ವಿವಾದಗಳು ನಿಮ್ಮ ಪರವಾಗಿ ಬಗೆಹರಿಯಲಿವೆ. ಸಾಲದ ಬಾಧ್ಯತೆಗಳು ಕಡಿಮೆಯಾಗಿ ವೃತ್ತಿರಂಗದಲ್ಲಿ ಮೇಲುಗೈ ಸಾಧಿಸುವಿರಿ.

– ​ಲೋಹಿತ್ ಹೆಬ್ಬಾರ್

ಜ್ಯೋತಿಷ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:28 pm, Mon, 10 August 26

Source link

IND vs SL: 16 ವರ್ಷಗಳ ಬಳಿಕ ಈತನಿಲ್ಲದೆ ಟೆಸ್ಟ್ ಆಡಲಿದೆ ಟೀಂ ಇಂಡಿಯಾ

Source link

ಬೆಂಗಳೂರು ಪ್ರವೇಶಕ್ಕೂ ಮುನ್ನ ಜೆಡಿಎಸ್ ಪಾದಯಾತ್ರೆ ತಡೆದ ಪೊಲೀಸರು: ಭಾರಿ ಹೈಡ್ರಾಮಾ – Kannada News | JDS Padayatre Led by Nikhil Kumaraswamy Stopped by Police Near Bengaluru

ರಾಮನಗರ, ಆಗಸ್ಟ್​​ 10: ಬಿಡದಿ ಟೌನ್‌ಶಿಪ್‌ ಯೋಜನೆ ವಿರೋಧಿಸಿ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆಯನ್ನು ಬೆಂಗಳೂರು ಪ್ರವೇಶಕ್ಕೂ ಮುನ್ನ ಪೊಲೀಸರು ತಡೆದ ಪರಿಣಾಮ ಭಾರಿ ಹೈಡ್ರಾಮಾವೇ ನಡೆದಿದೆ. ಹೋರಾಟಗಾರರು ಹೆಜ್ಜಾಲ ಬಳಿ ಹಾಕಿದ್ದ ಬ್ಯಾರಿಕೇಡ್ ತಳ್ಳಿ ಬಂದಿದ್ದ ಕಾರಣ ಕ್ರೈಸ್ಟ್ ಕಾಲೇಜು ಬಳಿ ರಸ್ತೆಗೆ ಅಡ್ಡಲಾಗಿ ಬಸ್ ನಿಲ್ಲಿಸಿ ಪಾದಯಾತ್ರೆಯನ್ನು ಪೊಲೀಸರು ತಡೆದಿದ್ದಾರೆ. ಹೀಗಾಗಿ ರೊಚ್ಚಿಗೆದ್ದ JDS ಕಾರ್ಯಕರ್ತರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದು, ಪೊಲೀಸರ ಜೊತೆಗೆ ತೀವ್ರ ವಾಗ್ವಾದವನ್ನೂ ನಡೆಸಿದ್ದಾರೆ. ತಳ್ಳಾಟ ನೂಕಾಟ ವೇಳೆ SP ಶ್ರೀನಿವಾಸ್​ಗೌಡಗೆ ಅವರ ಎಡಗೈ ಬೆರಳಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತೆಯಲ್ಲಿ ಅವರು ಚಿಕಿತ್ಸೆ ಪಡೆದಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ರೈಲಿನಲ್ಲಿ ಪ್ರಯಾಣಿಕರಿಗೆ ಬಿಳಿ ಬಣ್ಣದ ಬೆಡ್ ಶೀಟ್ ಕೊಡುವುದರ ಹಿಂದಿದೆ ಕಾರಣ – Kannada News | Do you know why passengers are given white bedsheets on trains

ನೀವು ರೈಲಿನಲ್ಲಿ ಪ್ರಯಾಣಿಸಿದ್ದೀರಬಹುದು. ಅದರಲ್ಲೂ ಈ ಎಸಿ ಹಾಗೂ ಸ್ಲೀಪರ್ ಕೋಚ್‌ಗಳಲ್ಲಿ ಹೋಗಿದ್ದರೆ ಈ ವಿಷ್ಯವನ್ನು ನೀವು ಗಮನಿಸಿರುತ್ತೀರಿ. ಹೌದು, ಎಸಿ ಬೋಗಿಗಳಲ್ಲಿ ಬಿಳಿ ಬಣ್ಣದ ಬೆಡ್‌ಶೀಟ್‌ಗಳನ್ನೇ (white bed sheet) ಪ್ರಯಾಣಿಕರಿಗೆ ನೀಡುತ್ತಾರೆ. ಈ ಬಿಳಿ ಬಣ್ಣದ ಮೇಲೆ ಸ್ವಲ್ಪ ಕೊಳೆಯಾದ್ರು ಬೇಗನೆ ಕಾಣಿಸಿಕೊಳ್ಳುತ್ತವೆ. ಆದ್ರೂ ಯಾಕೆ ಈ ಬಣ್ಣದ ಬೆಡ್ ಶೀಟ್ ಹಾಗೂ ದಿಂಬನ್ನು ಪ್ರಯಾಣಿಕರಿಗೆ ನೀಡುತ್ತಾರೆ ಎಂಬ ಬಗ್ಗೆ ಯಾವತ್ತಾದ್ರೂ ಯೋಚನೆ ಮಾಡಿದ್ದೀರಾ. ಈ ಬಣ್ಣವು ಬೇಗನೆ ಮಾಸುವುದಿಲ್ಲ ಹಾಗೂ ಸ್ವಚ್ಛತೆಗೂ ಸುಲಭ ಸೇರಿದಂತೆ ಇನ್ನಿತರ ಕಾರಣಗಳು ಸೇರಿವೆ.

ರೈಲಿನಲ್ಲಿ ಬಿಳಿ ಬಣ್ಣದ ಬೆಡ್ ಶೀಟ್ ಕೊಡುವುದು ಯಾಕೆ?

  • ಬಿಳಿ ಬಣ್ಣದಲ್ಲಿ ಕೊಳೆ ಕಾಣಿಸುತ್ತದೆ. ಹೀಗಾಗಿ ಪ್ರಯಾಣಿಕರು ಬೆಡ್ ಶೀಟ್‌ಗಳು ಸ್ವಚ್ಛವಾಗಿದೆಯೇ ಎಂದು ಪರೀಕ್ಷಿಸುತ್ತಾರೆ. ಇದು ರೈಲು ಪ್ರಯಾಣಿಕರಿಗೆ ಸ್ವಚ್ಛತೆಯ ಭರವಸೆ ನೀಡಲು ಸಹಕಾರಿಯಾಗಿದೆ.
  • ಬಿಳಿ ಬಟ್ಟೆಗೆ ಬ್ಲೀಚ್ ಮಾಡುವುದು ಸುಲಭ ಹಾಗೂ ಈ ಬಟ್ಟೆ ದೀರ್ಘಕಾಲ ಬಾಳಿಕೆ ಬರುತ್ತದೆ.
  •  ಬಿಳಿ ಬಣ್ಣವು ಶುದ್ಧತೆ ಹಾಗೂ ಪ್ರಶಾಂತತೆಯ ಭಾವನೆಯನ್ನು ಮೂಡಿಸುತ್ತದೆ.
  • ಬಿಳಿ ಬೆಡ್ ಶೀಟ್ ಗಳನ್ನು ಅಧಿಕ ಉಷ್ಣಾಂಶದಲ್ಲಿ ಹಾಗೂ ರಾಸಾಯನಿಕ ಬಳಸಿ ತೊಳೆಯಲಾಗುತ್ತದೆ. ಇದು ಬಿಳಿಯಾಗಿರುವುದರಿಂದ ಬಣ್ಣ ಬೇಗ ಮಾಸುತ್ತದೆ ಎನ್ನುವ ಭಯ ಇರುವುದಿಲ್ಲ.

ಇದನ್ನೂ ಓದಿ: ಹೋಟೆಲ್ ರೂಮ್‌ಗಳಲ್ಲಿ ಬೆಡ್ ಮುಂದೆ ಕನ್ನಡಿ ಅಳವಡಿಸಿರುವುದರ ಹಿಂದಿದೆ ಈ ಕಾರಣ

  • ಬಿಳಿ ಬಣ್ಣದ ಬೆಡ್ ಶೀಟ್ ನ್ನು ಪದೇ ಪದೇ ಬಳಕೆ ಹಾಗೂ ಶುಚಿಗೊಳಿಸುವುದರಿಂದ ಬೇರೆ ಬಣ್ಣದ ಬಟ್ಟೆಗಳಂತೆ ಇದರ ಬಣ್ಣಗೆಡುತ್ತವೆ ಎನ್ನುವ ಭಯವಿರುವುದಿಲ್ಲ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಾಮಾಜಿಕ ಜಾಲತಾಣಗಳಲ್ಲಿ “ಬಾಡಿಗೆಗೆ ಗೆಳೆಯ” ಜಾಲ: ಯುವತಿಯರಿಗೆ ಪೊಲೀಸರಿಂದ ಬಿಗ್ ವಾರ್ನಿಂಗ್ – Kannada News | Beware of ‘Boyfriend for Rent’ Scams: Hyderabad Police Exposes New Online Fraud

ಹೈದರಾಬಾದ್, ಆ.10: ದೇಶದ ದೊಡ್ಡ ದೊಡ್ಡ ನಗರಗಳಲ್ಲಿ ಬಾಯ್‌ಫ್ರೆಂಡ್ ಫಾರ್ ರೆಂಟ್, ಗರ್ಲ್​​​ಫ್ರೆಂಡ್ ಫಾರ್ ರೆಂಟ್ ಎಂಬ ಟ್ರೆಂಡ್​​ ಶುರುವಾಗಿದೆ. ಒಬ್ಬಂಟಿ ಯುವಕ-ಯುವತಿಯರು ಅಥವಾ ಹುಚ್ಚುತನಕ್ಕೆ ಇಂತಹ ಆಪ್​​​ಗಳನ್ನು ಡೌನ್​​​ಲೋಡ್​​​ ಮಾಡಿಕೊಂಡು ತಮ್ಮ ಜೀವನ ಹಾಗೂ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಮೋಸ ಬಲೆಗೆ ಬಿದ್ದು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. ಇಂತಹ ಟ್ರೆಂಡ್​​​ಗಳು ದೆಹಲಿ, ಮುಂಬೈ, ಹೈದರಬಾದ್​​​, ಬೆಂಗಳೂರಂತಹ ಸಿಟಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯರು ಹಾಗೂ ಮಹಿಳೆಯರನ್ನು ಗುರಿಯಾಗಿಸಿಕೊಂಡು “ಬಾಯ್‌ಫ್ರೆಂಡ್ ಫಾರ್ ರೆಂಟ್” (Boyfriends for Rent) ಹೆಸರಿನಲ್ಲಿ ಆಕರ್ಷಕ ಜಾಹೀರಾತುಗಳನ್ನು ನೀಡಿ ಹಣ ಹಾಗೂ ವೈಯಕ್ತಿಕ ಮಾಹಿತಿ ದೋಚುತ್ತಿರುವ ನೂತನ ಸೈಬರ್ ವಂಚನೆ ಜಾಲದ ಕುರಿತು ಹೈದರಾಬಾದ್ ಪೊಲೀಸರು ತೀವ್ರ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಹೈದರಾಬಾದ್ ನಗರ ಪೊಲೀಸ್ ಆಯುಕ್ತವಿ.ಸಿ. ಸಜ್ಜನರ್ ಅವರು ಎಕ್ಸ್ (ಟ್ವಿಟರ್)ನಲ್ಲಿ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಸಂದೇಶ ರವಾನಿಸಿದ್ದು, ಆಕರ್ಷಕ ರಿಯಾಯಿತಿಗಳು ಹಾಗೂ ಸಂಗಾತಿ ಸೇವೆ ಒದಗಿಸುವುದಾಗಿ ನಂಬಿಸಿ ಸೈಬರ್ ವಂಚಕರು ಮೋಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಹಾಗೂ ಟೆಲಿಗ್ರಾಂಗಳಲ್ಲಿ “Rent Boyfriend Your Personal Companion” ಎಂಬಂತಹ ಶೀರ್ಷಿಕೆಗಳೊಂದಿಗೆ ಜಾಹೀರಾತುಗಳನ್ನು ಪೋಸ್ಟ್ ಮಾಡಲಾಗುತ್ತದೆ. AI (ಕೃತಕ ಬುದ್ಧಿಮತ್ತೆ) ಮೂಲಕ ರಚಿಸಿದ ಅಥವಾ ಇತರರ ಪ್ರೊಫೈಲ್‌ಗಳಿಂದ ಕದ್ದ ಸುಂದರ ಯುವಕರ ಫೋಟೋಗಳನ್ನು ಬಳಸಲಾಗುತ್ತದೆ. ಕಾಫಿ ಡೇಟ್‌ಗಳು, ಸಿನೆಮಾಗೆ ಹೋಗುವುದು ಹಾಗೂ ಶಾಪಿಂಗ್‌ಗೆ ಸಾಥ್ ನೀಡುವುದು ಮುಂತಾದ ಸೇವೆಗಳನ್ನು ನೀಡುವುದಾಗಿ ಆಸೆ ತೋರಿಸಲಾಗುತ್ತದೆ.

ಸೌಲಭ್ಯವನ್ನು ಬುಕ್ ಮಾಡಲು ಯುವತಿಯರು ಸಂಪರ್ಕಿಸಿದಾಗ, ಮಾತುಕತೆಯ ಮೂಲಕ ಅವರ ನಂಬಿಕೆ ಗಳಿಸಿ, ನೋಂದಣಿ ಶುಲ್ಕ, ಭದ್ರತಾ ಠೇವಣಿ ಅಥವಾ ಬುಕಿಂಗ್ ಶುಲ್ಕದ ಹೆಸರಿನಲ್ಲಿ QR ಕೋಡ್ ಹಾಗೂ UPI ಆಪ್‌ಗಳ ಮೂಲಕ ಮುಂಗಡ ಹಣ ವರ್ಗಾಯಿಸಿಕೊಳ್ಳಲಾಗುತ್ತದೆ. ಒಮ್ಮೆ ಹಣ ಖಾತೆಗೆ ಜಮೆಯಾದ ತಕ್ಷಣ ಸೈಬರ್ ಖದೀಮರು ಯುವತಿಯರ ನಂಬರ್‌ಗಳನ್ನು ಬ್ಲಾಕ್ ಮಾಡಿ ಸಂಪರ್ಕ ಕಡಿತಗೊಳಿಸುತ್ತಾರೆ.

ಬ್ಲ್ಯಾಕ್‌ಮೇಲ್ ಮತ್ತು ದೈಹಿಕ ಅಪಾಯದ ಎಚ್ಚರಿಕೆ:

ಪೊಲೀಸರ ಪ್ರಕಾರ, ಅಪರಿಚಿತ ಹಾಗೂ ಪರಿಶೀಲಿಸದ ಆನ್‌ಲೈನ್ ಖಾತೆಗಳೊಂದಿಗೆ ಫೋನ್ ಸಂಖ್ಯೆ, ಫೋಟೋ ಅಥವಾ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳುವುದರಿಂದ ಬ್ಲ್ಯಾಕ್‌ಮೇಲ್, ಕಿರುಕುಳ ಹಾಗೂ ನೇರವಾಗಿ ಭೇಟಿಯಾದಾಗ ದೈಹಿಕ ಅಪಾಯಕ್ಕೂ ಈಡಾಗುವ ಸಾಧ್ಯತೆಯಿರುತ್ತದೆ.

ಇದನ್ನೂ ಓದಿ: ದೇವಾಲಯಗಳಲ್ಲಿ ಸೆಪ್ಟೆಂಬರ್ 1 ರಿಂದ ‘ನೋ ಮೊಬೈಲ್’: ನಿಯಮ ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ

ಪೋಷಕರು ಮತ್ತು ಯುವತಿಯರಿಗೆ ಸಜ್ಜನ್ನಾರ್ ನೀಡಿದ ಪ್ರಮುಖ ಸಲಹೆಗಳು:

ಪೋಷಕರು ತಮ್ಮ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಏನು ವೀಕ್ಷಿಸುತ್ತಿದ್ದಾರೆ, ಯಾರೊಂದಿಗೆ ಮಾತನಾಡುತ್ತಿದ್ದಾರೆ ಹಾಗೂ ಯಾರನ್ನು ಭೇಟಿಯಾಗುತ್ತಿದ್ದಾರೆ ಎಂಬುದರ ಮೇಲೆ ನಿಗಾ ಇಡಬೇಕು. ಮಕ್ಕಳ ಸ್ಮಾರ್ಟ್‌ಫೋನ್ ಬಳಕೆಯನ್ನು ಗಮನಿಸುವುದರಿಂದ ಅವರನ್ನು ಇಂತಹ ವಂಚನೆಗಳಿಂದ ರಕ್ಷಿಸಬಹುದು. ಆನ್‌ಲೈನ್‌ನಲ್ಲಿ ಅಪರಿಚಿತ ಪ್ರೊಫೈಲ್‌ಗಳ ಜೊತೆ ಸಂವಹನ ನಡೆಸಬೇಡಿ ಹಾಗೂ ಇಂತಹ ಯಾವುದೇ ಸೇವೆಗಳಿಗೆ ಯಾವುದೇ ಕಾರಣಕ್ಕೂ ಮುಂಗಡ ಹಣ ಪಾವತಿಸಬೇಡಿ.

ಯಾವುದೇ ರೀತಿಯ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ಅಥವಾ ಸೈಬರ್ ವಂಚನೆಗೆ ಒಳಗಾದಲ್ಲಿ ತಕ್ಷಣವೇ ಸೈಬರ್ ಕ್ರೈಮ್ ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡಬಹುದು ಅಥವಾ ಅಧಿಕೃತ ರಾಷ್ಟ್ರೀಯ ಸೈಬರ್ ಕ್ರೈಮ್ ಪೋರ್ಟಲ್ (national cybercrime portal) ಮೂಲಕ ದೂರು ದಾಖಲಿಸಬಹುದು ಎಂದು ಹೈದರಾಬಾದ್​ ಪೊಲೀಸರು ಹೇಳಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಾರ್ಖಂಡ್​​ನಲ್ಲಿ ಪರೀಕ್ಷಾ ಅಕ್ರಮ; ಸಿಐಡಿಯಿಂದ ಜೆಪಿಎಸ್‌ಸಿ ಮಾಜಿ ಅಧ್ಯಕ್ಷ ಎಲ್. ಖಿಯಾಂಗ್ತೆ ಬಂಧನ – Kannada News | Jharkhand Exam Row Former JPSC Chairman L Khiyangte arrested by CID amid student protests in Ranchi

ರಾಂಚಿ, ಆಗಸ್ಟ್ 10: ಜಾರ್ಖಂಡ್‌ನ ಉದ್ಯೋಗ ಆಕಾಂಕ್ಷಿ ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆಯ ನಡುವೆ ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗದ (JPSC) ಮಾಜಿ ಅಧ್ಯಕ್ಷ ಎಲ್. ಖಿಯಾಂಗ್ತೆ (L. Khiangte) ಅವರನ್ನು ಸಿಐಡಿ (CID) ಅಧಿಕಾರಿಗಳು ಬಂಧಿಸಿದ್ದಾರೆ. ಜೆಪಿಎಸ್‌ಸಿ ಮತ್ತು ಜೆಎಸ್ಎಸ್‍ಸಿ (JSSC) ಉದ್ಯೋಗ ನೇಮಕಾತಿ ಅಕ್ರಮಗಳಿಗೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ನೇಮಕಾತಿ ಪರೀಕ್ಷೆಗಳ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಐಡಿ ಎಡಿಜಿ ಮನೋಜ್ ಕೌಶಿಕ್ ಅವರು ಖಿಯಾಂಗ್ತೆ ಅವರ ಬಂಧನವನ್ನು ಖಚಿತಪಡಿಸಿದ್ದಾರೆ. “ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಜೆಪಿಎಸ್‌ಸಿ ಮಾಜಿ ಅಧ್ಯಕ್ಷ ಎಲ್. ಖಿಯಾಂಗ್ತೆ ಅವರನ್ನು ಬಂಧಿಸಲಾಗಿದೆ” ಎಂದು ಅವರು ಪ್ರಕಟಿಸಿದ್ದಾರೆ.

ಇದನ್ನೂ ಓದಿ: ಜಾರ್ಖಂಡ್​ನಲ್ಲಿ 17ನೇ ದಿನಕ್ಕೆ ಕಾಲಿಟ್ಟ ವಿದ್ಯಾರ್ಥಿಗಳ ಪ್ರತಿಭಟನೆ; ವಿಧಾನಸೌಧ ಮುತ್ತಿಗೆಗೆ ಯತ್ನ; ಜಲಫಿರಂಗಿಗೂ ಬೆದರದ ಯುವಜನರು

ಬಂಧನಕ್ಕೂ ಮುನ್ನ 4 ಬಾರಿ ವಿಚಾರಣೆ:

1988ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಖಿಯಾಂಗ್ತೆ ಅವರು ಜಾರ್ಖಂಡ್ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತರಾದ ನಂತರ ಕಳೆದ ವರ್ಷದ ಫೆಬ್ರವರಿಯಲ್ಲಿ ಜೆಪಿಎಸ್‌ಸಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಈ ಪ್ರಕರಣದ ತನಿಖೆಯ ಭಾಗವಾಗಿ ಜುಲೈ 28ರಿಂದ ಸಿಐಡಿ ಅವರನ್ನು 4 ಬಾರಿ ವಿಚಾರಣೆಗೆ ಒಳಪಡಿಸಿತ್ತು. ಬಳಿಕ ಜುಲೈ 22ರಂದು ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಜೆಪಿಎಸ್‌ಸಿಯ ಮೂವರೂ ಸದಸ್ಯರ ರಾಜೀನಾಮೆ:

ಈ ಹಗರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಜೆಪಿಎಸ್‌ಸಿಯ ಹಾಲಿ ಸದಸ್ಯರಾದ ಅಜೀತಾ ಭಟ್ಟಾಚಾರ್ಯ, ಅನಿಮಾ ಹನ್ಸ್ಡಾ ಮತ್ತು ಜಮಾಲ್ ಅಹ್ಮದ್ ಭಾನುವಾರ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು. ಸಿಐಡಿ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿದ ಬೆನ್ನಲ್ಲೇ ಈ ಮೂವರೂ ರಾಜೀನಾಮೆ ನೀಡಿದ್ದರು. ಅಜೀತಾ ಭಟ್ಟಾಚಾರ್ಯ ಅವರು ಜೆಎಂಎಂ ನಾಯಕ ಸುಪ್ರಿಯೋ ಭಟ್ಟಾಚಾರ್ಯ ಅವರ ಪತ್ನಿಯಾಗಿದ್ದಾರೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಒಟ್ಟು 20 ಜನರನ್ನು ಸಿಐಡಿ ಬಂಧಿಸಿದೆ.

ಇದನ್ನೂ ಓದಿ: ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ಕೇಸ್ ದಾಖಲಿಸದಿರಲು ಬದ್ಧ; ಸುಪ್ರೀಂ ಕೋರ್ಟ್‌ಗೆ ಸರ್ಕಾರ ಸ್ಪಷ್ಟನೆ

ಸರ್ಕಾರದ ಪ್ರಸ್ತಾವನೆ ತಿರಸ್ಕರಿಸಿದ ವಿದ್ಯಾರ್ಥಿಗಳು:

ಸಿಎಂ ಹೇಮಂತ್ ಸೊರೆನ್ ನೇತೃತ್ವದ ಜಾರ್ಖಂಡ್ ಸರ್ಕಾರವು 14ನೇ ಜೆಪಿಎಸ್‌ಸಿ ಪರೀಕ್ಷೆ ಹಾಗೂ 2023, 2025ರ ಬಾಕಿ ನೇಮಕಾತಿ ಪರೀಕ್ಷೆಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿತ್ತು. ಆದರೂ ವಿದ್ಯಾರ್ಥಿಗಳು ಇದನ್ನು ತಿರಸ್ಕರಿಸಿದ್ದರು. ತಮ್ಮ ಮುಖ್ಯ ಬೇಡಿಕೆಯಾದ ಸಿಬಿಐ ತನಿಖೆಗೆ ಸರ್ಕಾರ ಒಪ್ಪಿಲ್ಲ ಮತ್ತು ಸರ್ಕಾರ ತಮಗೆ ಸುಳ್ಳು ಭರವಸೆಗಳನ್ನು ನೀಡುತ್ತಿದೆ ಎಂದು ವಿದ್ಯಾರ್ಥಿ ನಾಯಕರು ಆರೋಪಿಸಿದ್ದಾರೆ.

ರಾಷ್ಟ್ರಮಟ್ಟದಲ್ಲಿ ನೀಟ್ (NEET) ಪರೀಕ್ಷಾ ಅಕ್ರಮಗಳ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಿರುವ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮದೇ ಮೈತ್ರಿಕೂಟದ ಆಡಳಿತವಿರುವ ಜಾರ್ಖಂಡ್‌ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆಯ ಕುರಿತು ಮೌನ ವಹಿಸಿರುವುದು ಬಿಜೆಪಿಯ ವಾಗ್ದಾಳಿಗೆ ಕಾರಣವಾಗಿದೆ. ಪ್ರಸ್ತುತ ರಾಂಚಿಯಲ್ಲಿ ಉದ್ಯೋಗ ಆಕಾಂಕ್ಷಿಗಳು ಜೆಎಸ್ಎಸ್‍ಸಿ-ಸಿಜಿಎಲ್ (JSSC-CGL) ಪರೀಕ್ಷೆಯ ಕುರಿತು ಸ್ವತಂತ್ರ ಸಿಬಿಐ ತನಿಖೆಗೆ ಮತ್ತು ನೇಮಕಾತಿ ಮಂಡಳಿಗಳಲ್ಲಿ ಸಮಗ್ರ ಸುಧಾರಣೆಗಳಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ಮುಂದುವರಿಸಿದ್ದಾರೆ.

ಏನಿದು ಹಗರಣ?:

14ನೇ ಜೆಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆ ಮತ್ತು ಇತರ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಸಿಐಡಿ ತನಿಖೆ ನಡೆಸುತ್ತಿದೆ. ತನಿಖೆಯ ಭಾಗವಾಗಿ ಜುಲೈ 28ರಂದು ಖಿಯಾಂಗ್ತೆ ಅವರಿಗೆ ಸಿಐಡಿ ಸಮನ್ಸ್ ನೀಡಿತ್ತು. ಅಲ್ಲದೆ ಅವರ ಸರ್ಕಾರಿ ನಿವಾಸ ಮತ್ತು ಜೆಪಿಎಸ್‌ಸಿ ಕಚೇರಿಯ ಮೇಲೆಯೂ ದಾಳಿ ನಡೆಸಿತ್ತು. ಪರಿಶೀಲನೆಯ ವೇಳೆ ಸಿಐಡಿ ಅಧಿಕಾರಿಗಳು ಮಹತ್ವದ ದಾಖಲೆಗಳು, ಒಎಂಆರ್ ಶೀಟ್‌ಗಳು ಮತ್ತು ಡಿಜಿಟಲ್ ಸಾಕ್ಷ್ಯಾಧಾರಗಳನ್ನು ವಶಪಡಿಸಿಕೊಂಡಿದ್ದರು. ಆದರೆ ಖಿಯಾಂಗ್ತೆ ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದರು. ಈ ಪ್ರಕರಣದಲ್ಲಿ ಈಗಾಗಲೇ ಖಿಯಾಂಗ್ತೆ ಅವರ ಕಂಪ್ಯೂಟರ್ ಆಪರೇಟರ್ ಧರ್ಮೇಂದ್ರ ಅವರನ್ನು ಸಿಐಡಿ ಬಂಧಿಸಿದೆ. ಇದೀಗ ಖಿಯಾಂಗ್ತೆ ಅವರನ್ನು ಕೂಡ ಬಂಧಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಗಸ್ಟ್ 13ರಂದು ಕರ್ನಾಟಕ ಬಂದ್ ಇರುತ್ತಾ ಇಲ್ವಾ? ವಾಟಾಳ್ ನಾಗರಾಜ್ ಹೇಳಿದ್ದಿಷ್ಟು – Kannada News | Cauvery water Dispute: Karnataka Bandh on August 13: Will It Happen or Not; Here’s What Vatal Nagaraj Said

ಬೆಂಗಳೂರು, ಆಗಸ್ಟ್​​ 10: ಕಾವೇರಿ ನದಿ ನೀರು ಹಂಚಿಕೆ ವಿವಾದ (Cauvery Dispute) ಹಿನ್ನೆಲೆ ಆಗಸ್ಟ್ 13ರಂದು ಕರ್ನಾಟಕ ಬಂದ್​​ಗೆ ಕರೆ ನೀಡಲಾಗಿತ್ತು. ಆದರೆ ಇದೀಗ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಹಲವು ಸಂಘಟನೆಗಳು ಬೆಂಬಲ ಹಿಂಪಡೆಯುತ್ತಿದ್ದು, ಬಂದ್‌ ಬಹುತೇಕ ರದ್ದಾಗುವ ಸಾಧ್ಯತೆಯಿದೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಪಟ್ಟು ಸಡಿಲಿಸದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್​​ (Vatal Nagaraj), ‘ಬಂದ್ ಕೈಬಿಡುವ ಪ್ರಶ್ನೆಯೇ ಇಲ್ಲ, ಬಂದ್ ಮಾಡೇ ಮಾಡುತ್ತೇವೆ’ ಎಂದು ಹೇಳಿದ್ದಾರೆ.

ಕರ್ನಾಟಕದ ಉದ್ದಗಲಕ್ಕೂ ಬಂದ್​ಗೆ ಬೆಂಬಲವಿದೆ: ವಾಟಾಳ್ ನಾಗರಾಜ್

ಬೆಂಗಳೂರಿನ ಅತ್ತಿಬೆಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ‘ಇಡೀ ಕರ್ನಾಟಕದ ಉದ್ದಗಲಕ್ಕೂ ಬಂದ್​ಗೆ ಬೆಂಬಲವಿದೆ. 2000ಕ್ಕೂ ಮೇಲ್ಪಟ್ಟು ಸಂಘಟನೆಗಳು ಬೆಂಬಲ ನೀಡಿವೆ. ವಿಧ್ಯಾರ್ಥಿಗಳು ಅಭೂತಪೂರ್ವ ಬೆಂಬಲ ನೀಡುತ್ತಿದ್ದಾರೆ. ನಮ್ಮ ಬೇಡಿಕೆಗೆ ಬಂದ್ ಮಾಡಿದರೆ ಅದರ ಶಕ್ತಿಯೇ ಬೇರೆ’ ಎಂದರು.

ಮಳೆ ಬಂದು ಯಾವ ಡ್ಯಾಂ ತುಂಬಿದೆ? 

ಇನ್ನು ಬಂದ್​ ಬೇಡ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ಬಂದ್ ಮಾಡೋದು ಬೇಡ ಅಂತ ನನ್ನ ಹತ್ತಿರ ಯಾರು ಹೇಳಿಲ್ಲ. ಬಂದ್ ಮಾಡಬೇಕು ಅಂತಾನೇ ಎಲ್ಲರೂ ಹೇಳಿರೋದು. ಕನ್ನಡ ಒಕ್ಕೂಟದಲ್ಲಿ ಯಾವುದೇ ರೀತಿಯ ಬಿರುಕು ಮೂಡಿಲ್ಲ. ಬಿರುಕು ಮಾಡಿದರೆ ಸಿಮೆಂಟ್ ಹಾಕಿ ಸರಿ ಮಾಡುತ್ತೇವೆ. ಮಳೆ ಬಂದು ಯಾವ ಡ್ಯಾಂ ತುಂಬಿದೆ, ಕೆಆರ್​​ಎಸ್​ ಡ್ಯಾಂ ಇನ್ನೂ ತುಂಬಿಲ್ಲ’ ಎಂದು ಹೇಳಿದರು.

ಪ್ರತಿಯೊಬ್ಬರಿಗೂ ಕುಡಿಯುವ ನೀರಿನ ಅಭಾವ ಎದುರಾಗಲಿದೆ

‘ಮೇಕೆದಾಟಿಗಾಗಿ ಸಿಎಂ ಡಿಕೆ ಶಿವಕುಮಾರ್ ಪಾದಯಾತ್ರೆ ಮಾಡಿದರು. ಏಕೆ ಮೇಕೆದಾಟು ಯೋಜನೆಯನ್ನ ಮಾಡಿಲ್ಲ’ ಎಂದು ಪ್ರಶ್ನಿಸಿದರು. ಮೇಕೆದಾಟು ಯೋಜನೆ ಅನುಷ್ಠಾನಗೊಳ್ಳದಿದ್ದರೆ ಭವಿಷ್ಯದಲ್ಲಿ ಬೆಂಗಳೂರಿನಲ್ಲಿ ವಾಸಿಸುವ ತಮಿಳರು, ತೆಲುಗು, ಮಲಯಾಳಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ಕುಡಿಯುವ ನೀರಿನ ಅಭಾವ ಎದುರಾಗಲಿದೆ’ ಎಂದು ಎಚ್ಚರಿಸಿದರು.

ಇದನ್ನೂ ಓದಿ: ಕರ್ನಾಟಕ ಬಂದ್‌ಗೆ ಬ್ರೇಕ್? ಆಗಸ್ಟ್ 13ರ ಬಂದ್ ಬಹುತೇಕ ರದ್ದು ಸಾಧ್ಯತೆ

‘ಆಗಸ್ಟ್ 13ರ ಇಡೀ ಕರ್ನಾಟಕ ಬಂದ್‌ಗೆ ಸರ್ವ ಭಾಷಿಕರು ಬೆಂಬಲ ನೀಡಬೇಕು ಹಾಗೂ ಪ್ರತಿಯೊಬ್ಬರೂ ಬೀದಿಗಿಳಿದು ಮನೆ-ಮನೆಯಿಂದ ಈಡುಗಾಯಿ ಹೊಡೆದು ಬಂದ್ ಯಶಸ್ವಿಗೊಳಿಸುವಂತೆ’ ವಾಟಾಳ್ ನಾಗರಾಜ್​ ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ತ್ಯಾಜ್ಯ ಮುಕ್ತ ಅಭಿಯಾನ: ಖಾಲಿ ನಿವೇಶನ ಸ್ವಚ್ಛಗೊಳಿಸದ ಮಾಲೀಕರಿಗೆ ಬೀಳಲಿರುವ ದಂಡ ಎಷ್ಟು? – Kannada News | GBA Issues Strict Warning to Bengaluru Vacant Plot Owners: Clean Up by Aug 15 or Pay Heavy Penalties with Property Tax

ಖಾಲಿ ನಿವೇಶನ ಸ್ವಚ್ಛಗೊಳಿಸದ ಮಾಲೀಕರಿಗೆ ಬೀಳಲಿರುವ ದಂಡ ಎಷ್ಟು?

ಬೆಂಗಳೂರು, ಆಗಸ್ಟ್​​ 10: ತ್ಯಾಜ್ಯ ಮುಕ್ತ ಅಭಿಯಾನದಡಿ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸದ ಮಾಲೀಕರ ವಿರುದ್ಧ ವಿಧಿಸಲಾಗುವ ದಂಡದ ವಿವರಗಳ ಪಟ್ಟಿಯನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (GBA) ಬಿಡುಗಡೆ ಮಾಡಿದೆ. ಆಗಸ್ಟ್‌ 15ರ ಒಳಗೆ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸದಿದ್ದರೆ, ಜಿಬಿಎ ವತಿಯಿಂದಲೇ ತ್ಯಾಜ್ಯ ಮತ್ತು ಕಟ್ಟಡ ಅವಶೇಷಗಳನ್ನು ತೆರವುಗೊಳಿಸಲಾಗುತ್ತದೆ. ಸ್ವಚ್ಛತಾ ವೆಚ್ಚದ ಜತೆಗೆ ತ್ಯಾಜ್ಯ ಸಾಗಣೆ ವೆಚ್ಚವನ್ನೂ ಸಂಬಂಧಪಟ್ಟ ನಿವೇಶನ ಮಾಲೀಕರಿಂದ ವಸೂಲಿ ಮಾಡಲಾಗುತ್ತದೆ ಎಂದು ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ್‌ ರಾವ್‌ ತಿಳಿಸಿದ್ದಾರೆ.

ನಗರದಲ್ಲಿರುವ ಎಲ್ಲಾ ಖಾಲಿ ನಿವೇಶನಗಳ ಮಾಲೀಕರು ತಮ್ಮ ನಿವೇಶನಗಳನ್ನು ಸ್ವಚ್ಛಗೊಳಿಸಿ, ನಗರ ಪಾಲಿಕೆಗಳು ಗುರುತಿಸಿರುವ ನಿಗದಿತ ಸ್ಥಳಗಳಲ್ಲಿ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕು. ಅಗತ್ಯವಿದ್ದರೆ, ಸ್ವಚ್ಛತಾ ಕಾರ್ಯಕ್ಕಾಗಿ ಸಂಬಂಧಪಟ್ಟ ನಗರ ಪಾಲಿಕೆಗಳು ಅಧಿಸೂಚಿಸಿರುವ ಸೇವಾ ಪೂರೈಕೆದಾರರ ಸೇವೆಯನ್ನೂ ಪಡೆಯಬಹುದು ಎಂದು ತಿಳಿಸಲಾಗಿದೆ. ಕಸ, ಕಟ್ಟಡ ಅವಶೇಷಗಳು, ಗಿಡಗಂಟಿಗಳು ಅಥವಾ ಇತರ ತ್ಯಾಜ್ಯದಿಂದ ತುಂಬಿರುವ ಖಾಲಿ ನಿವೇಶನಗಳ ಫೋಟೋಗಳನ್ನು ಜಿಪಿಎಸ್‌ ಸ್ಥಳ ನಿರ್ದೇಶಾಂಕಗಳೊಂದಿಗೆ 9448197197 ವಾಟ್ಸ್‌ಆ್ಯಪ್‌ ಸಂಖ್ಯೆಗೆ ಕಳುಹಿಸಬಹುದು. ಮಾಹಿತಿ ನೀಡುವವರ ಗುರುತನ್ನು ಗೌಪ್ಯವಾಗಿಡಲಾಗುವುದು ಎಂದೂ ತಿಳಿಸಲಾಗಿದೆ.

ಇದನ್ನೂ ಓದಿ:  ಬೆಂಗಳೂರು ಸ್ಟಾರ್ ಹೋಟೆಲ್‌ಗಳ ಬಂಡವಾಳ ಬಯಲು: 26 ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತಾ ನಿಯಮ ಉಲ್ಲಂಘನೆ

ವಿಧಿಸಲಾಗುವ ದಂಡ ಎಷ್ಟು?

ಸೈಟ್​​ ಗಾತ್ರ ಸ್ವಚ್ಛತಾ ಶುಲ್ಕ (ಕಾಂಪೌಂಡ್​​ ಇಲ್ಲದ ಸೈಟ್​​) ಸ್ವಚ್ಛತಾ ಶುಲ್ಕ (ಕಾಂಪೌಂಡ್​​ ಇರುವ ಸೈಟ್​​) ತ್ಯಾಜ್ಯ ಸಾಗಣೆ ವೆಚ್ಚ
600 ಚದರ ಅಡಿ 6700 7700 19200
1200 ಚದರ ಅಡಿ 13400 14400 38400
1500 ಚದರ ಅಡಿ 16750 17750 48000
2500 ಚದರ ಅಡಿ 26800 27800 76800
4000 ಚದರ ಅಡಿ 46700 47700 128000
ಸೂಚನೆ: ಹೆಚ್ಚಿನ ವಿಸ್ತೀರ್ಣಕ್ಕೆ ಅನುಗುಣವಾಗಿ ವೆಚ್ಚ ನಿರ್ಧಾರ

ಘನತ್ಯಾಜ್ಯ ನಿರ್ವಹಣಾ ಉಪನಿಯಮ, 2020ರ ನಿಯಮ 18(1)(a)(ii) ಪ್ರಕಾರ, ಖಾಲಿ ನಿವೇಶನವನ್ನು ಸ್ವಚ್ಛಗೊಳಿಸದಿರುವ ಬಗ್ಗೆ ಮಾಲೀಕರಿಗೆ ನೋಟಿಸ್‌ ನೀಡಿದ ಬಳಿಕ, ನಾಗರಿಕ ಸಂಸ್ಥೆಗೆ ನಿವೇಶನ ಪ್ರವೇಶಿಸಿ ತ್ಯಾಜ್ಯ ತೆರವುಗೊಳಿಸುವ ಹಾಗೂ ಅದಕ್ಕೆ ತಗಲುವ ವೆಚ್ಚವನ್ನು ಸಂಬಂಧಪಟ್ಟ ವ್ಯಕ್ತಿಯಿಂದ ವಸೂಲಿ ಮಾಡುವ ಅಧಿಕಾರವಿದೆ. ಅದೇ ರೀತಿ, ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ, 2024ರ ಸೆಕ್ಷನ್‌ 285(2) ಅಡಿಯಲ್ಲಿ ಜಿಬಿಎ ವ್ಯಾಪ್ತಿಯ ನಗರ ಪಾಲಿಕೆಗಳಿಗೆ ಖಾಲಿ ನಿವೇಶನಗಳಿಂದ ತ್ಯಾಜ್ಯ, ಕಟ್ಟಡ ಅವಶೇಷಗಳು ಅಥವಾ ನಿರ್ವಹಣೆಯಾಗದ ಕಸವನ್ನು ತೆರವುಗೊಳಿಸಿ, ಅದರ ವೆಚ್ಚವನ್ನು ಆಸ್ತಿ ಮಾಲೀಕರಿಂದ ನೇರವಾಗಿ ಅವರ ಆಸ್ತಿ ತೆರಿಗೆಯೊಂದಿಗೆ ವಸೂಲಿ ಮಾಡುವ ಅಧಿಕಾರ ನೀಡಲಾಗಿದೆ ಎಂದು ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 4:45 pm, Mon, 10 August 26

Source link

ದರ್ಶನ್​ಗೆ ದೊಡ್ಡ ಸಂಕಷ್ಟ; ಪ್ರದೋಷ್ ಅರ್ಜಿಗೆ ಆಕ್ಷೇಪಣೆ ಪರಿಗಣಿಸಲು ಕೋರ್ಟ್ ನಕಾರ – Kannada News | Renukaswamy Case Big Shock to Darshan as Court Rejects objection against Pradosh becoming Approver

ನಟ ದರ್ಶನ್ ಅವರಿಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ಸಂಕಷ್ಟ ಹೆಚ್ಚಾಗಿದೆ. ಈ ಪ್ರಕರಣದ 14ನೇ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದು, ಅದಕ್ಕೆ ದರ್ಶನ್ ಪರ ವಕೀಲರು ಆಕ್ಷೇಪಣೆ ಸಲ್ಲಿಸಲು ಅವಕಾಶ ಕೋರಿದ್ದರು. ಇದರ ವಿಚಾರಣೆ ಬೆಂಗಳೂರಿನ 59ನೇ ಸಿಸಿಹೆಚ್ ಕೋರ್ಟ್​ನಲ್ಲಿ ನಡೆದಿದೆ. ರೇಣುಕಾಸ್ವಾಮಿ ಕೊಲೆ ಆದ ದಿನ ಏನೆಲ್ಲ ನಡೆಯಿತು ಎಂಬುದನ್ನು ನ್ಯಾಯಾಲಯದ ಮುಂದೆ ತೆರೆದಿಡಲು ಪ್ರದೋಷ್ (Pradosh) ಮುಂದಾಗಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ದರ್ಶನ್ ಪರ ವಾದವನ್ನು ಕೇಳಬೇಕಾ ಅಥವಾ ಬೇಡವಾ ಎಂಬುದನ್ನು ನಿರ್ಧರಿಸಲು ಇಂದು (ಆಗಸ್ಟ್ 10) ವಿಚಾರಣೆ ಮಾಡಲಾಯಿತು. ಬಳಿಕ ಕೋರ್ಟ್ ಈ ಆದೇಶ ನೀಡಿದೆ. ದರ್ಶನ್ (Darshan) ಹಾಗೂ ಇನ್ನುಳಿದ ಆರೋಪಿಗಳ ಆಕ್ಷೇಪಣೆ ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಆದೇಶಿಸಿದೆ.

ಇದರಿಂದಾಗಿ ದರ್ಶನ್ ಅವರಿಗೆ ದೊಡ್ಡ ಹಿನ್ನಡೆ ಆಗಿದೆ. ಪ್ರದೋಷ್ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ದರ್ಶನ್ ಹಾಗೂ ಇತರೆ ಆರೋಪಿಗಳ ವಾದ ಆಲಿಸುವ ಅವಶ್ಯಕತೆ ಇಲ್ಲ ಎಂದು ಕೋರ್ಟ್ ಹೇಳಿದೆ. ಆದರೆ ಪ್ರದೋಷ್​ನನ್ನು ಮಾಫಿಸಾಕ್ಷಿಯಾಗಿ ಪರಿಗಣಿಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಆಗಿಲ್ಲ. ಕಾನೂನಿನ ಪ್ರಕಾರ ಅದು ತೀರ್ಮಾನ ಆಗಲಿದೆ ಎಂದು ಜಡ್ಜ್ ಸುಜಾತಾ ಮಡಿವಾಳಪ್ಪ ಹೇಳಿದ್ದಾರೆ.

ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವುದಕ್ಕೂ ಮುನ್ನ ತಮ್ಮ ವಾದವನ್ನು ಕೂಡ ಆಲಿಸಬೇಕು ಎಂದು ದರ್ಶನ್ ಪರ ವಕೀಲರು ಮನವಿ ಮಾಡಿದ್ದರು. ಇನ್ನುಳಿದ ಆರೋಪಿಗಳ ಪರ ವಕೀಲರು ಕೂಡ ಅರ್ಜಿ ಹಾಕಿದ್ದರು. ಆದರೆ ಈಗ ದರ್ಶನ್ ಹಾಗೂ ಸಹ ಆರೋಪಿಗಳ ವಕೀಲರ ಮನವಿ ತಿರಸ್ಕೃತ ಆಗಿರುವ ಹಿನ್ನೆಲೆಯಲ್ಲಿ ದರ್ಶನ್ ಅವರಿಗೆ ಶಾಕ್ ಎದುರಾಗಿದೆ.

ಇದನ್ನೂ ಓದಿ: ದರ್ಶನ್​​ಗೆ ಶಾಕ್ ಮೇಲೆ ಶಾಕ್; ಪ್ರದೋಷ್ ಬಳಿಕ ಮತ್ತಿಬ್ಬರು ಮಾಫಿ ಸಾಕ್ಷಿ ಅರ್ಜಿ

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ತ್ವರಿತಗತಿಯಲ್ಲಿ ನಡೆಯುತ್ತಿದೆ. ಈ ಹಂತದಲ್ಲಿ ದರ್ಶನ್ ಹಾಗೂ ಇತರೆ ಆರೋಪಿಗಳ ವಾದವನ್ನು ಆಲಿಸುವ ಅವಶ್ಯಕತೆ ಇಲ್ಲ ಎಂದು ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಈ ಆದೇಶವನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲು ಏರುತ್ತಾರಾ ಅಥವಾ ನ್ಯಾಯಾಲಯದ ಮುಂದಿನ ಆದೇಶದವರೆಗೂ ಕಾಯುತ್ತಾರಾ ಎಂಬ ಪ್ರಶ್ನೆ ಮೂಡಿದೆ.

ಮಾಫಿ ಸಾಕ್ಷಿಯಾಗಿ ಪ್ರದೋಷ್​ನನ್ನು ಪರಿಗಣಿಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಇನ್ನೂ ಕೋರ್ಟ್ ತೀರ್ಮಾನ ಮಾಡಿಲ್ಲ. ಇದಕ್ಕೆ ಸಂಬಂಧಿಸಿದಂತೆ ಕೆಲವು ಪ್ರಕ್ರಿಯೆಗಳು ನಡೆಯುವುದು ಬಾಕಿ ಇದೆ. ಆ ತೀರ್ಮಾನ ಅಂತಿಮವಾದ ಬಳಿಕ ದರ್ಶನ್ ಹಾಗೂ ಇತರೆ ಆರೋಪಿಗಳು ಹೈಕೋರ್ಟ್​ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಒಂದು ವೇಳೆ ಪ್ರದೋಷ್​ಗೆ​ ಮಾಫಿಸಾಕ್ಷಿಯಾಗಲು ಅವಕಾಶ ಸಿಕ್ಕರೆ ಆತನ ಹೇಳಿಕೆಯಿಂದ ಈ ಪ್ರಕರಣಕ್ಕೆ ದೊಡ್ಡ ತಿರುವು ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version