Video: ರಸ್ತೆಯಲ್ಲಿ ತನ್ನಷ್ಟಕ್ಕೆ ಹೋಗುತ್ತಿದ್ದ ಗೂಳಿಗೆ ಹೊಡೆಯಲು ಹೋದವನ ಗತಿ ಏನಾಯ್ತು ನೋಡಿ
ಮಿರ್ಜಾಪುರ, ಮೇ 05: ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಕಚ್ವಾ ಎಂಬಲ್ಲಿ ವ್ಯಕ್ತಿಯ ಮೂರ್ಖತನಕ್ಕೆ ಗೂಳಿಯೊಂದು ತಕ್ಕ ಪಾಠ ಕಲಿಸಿದ ವಿಡಿಯೋ ವೈರಲ್ ಆಗಿದೆ. ಅಲೆದಾಡುತ್ತಿದ್ದ ಹೋರಿಯನ್ನು ವಿನಾಕಾರಣ ಕೆಣಕಿದ ವ್ಯಕ್ತಿಯೊಬ್ಬ ಈಗ ಆಸ್ಪತ್ರೆ ಪಾಲಾಗಿದ್ದಾರೆ. ಸ್ಥಳೀಯ ನಿವಾಸಿಯಾದ ರಾಜು ಸಿಂಗ್ ಎಂಬ ವ್ಯಕ್ತಿ ರಸ್ತೆಯಲ್ಲಿ ಸುಮ್ಮನೆ ಓಡಾಡುತ್ತಿದ್ದ ಹೋರಿಗೆ ಹೊಡೆಯಲು ಹೋಗಿದ್ದಾರೆ. ಮೊದಲು ಇಟ್ಟಿಗೆಗಳನ್ನು ಹೋರಿಯ ಮೇಲೆ ಎಸೆದು ಅದನ್ನು ಓಡಿಸಲು ಪ್ರಯತ್ನಿಸಿದ ಆತ, ನಂತರ ಕೋಲನ್ನು ಹಿಡಿದು ಹೋರಿಗೆ ಮನಬಂದಂತೆ ಹೊಡೆಯಲು ಆರಂಭಿಸಿದ್ದ. ಸತತವಾಗಿ…