Headlines

ನನ್ನ ಕೈಯಲ್ಲಿ ಎರಡು ಮೊಣಕೈಗಳಿವೆ, ಅದಕ್ಕೆ ಹಿಂಗೆ ಬೌಲಿಂಗ್ ಮಾಡ್ತೀನಿ! – Kannada News | I Have Two Elbows In My Arm: Usman Tariq

ಪಾಕಿಸ್ತಾನ್ ಸ್ಪಿನ್ನರ್ ಉಸ್ಮಾನ್ ತಾರಿಖ್ ಸಖತ್ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಸುದ್ದಿಯಾಗಿರುವುದು ಮೊಣಕೈ ವಿಚಾರದಿಂದ. ಅಂದರೆ ನನ್ನ ಬಲಗೈನಲ್ಲಿ ಎರಡು ಮೊಣಕೈಗಳಿವೆ ಎಂಬ ವಿಚಾರವನ್ನು ಉಸ್ಮಾನ್ ತಾರಿಖ್ ಬಹಿರಂಗಪಡಿಸಿದ್ದಾರೆ. ಇದೇ ಕಾರಣದಿಂದಾಗಿ ನನ್ನ ಬೌಲಿಂಗ್ ಶೈಲಿ ವಿಭಿನ್ನವಾಗಿ ಎಂದಿದ್ದಾರೆ. “ಡಬಲ್ ಎಲ್ಬೋ” (double elbow) ಅಥವಾ ಎರಡು ಮೊಣಕೈಗಳ ವಿಶಿಷ್ಟ ಜೈವಿಕ ರಚನೆಯಿಂದಾಗಿ ಬೌಲಿಂಗ್ ಮಾಡುವಾಗ ನನ್ನ ಕೈ ಬಗ್ಗಿದಂತೆ ಕಾಣುತ್ತದೆ.  ಇದೇ ಕಾರಣದಿಂದಾಗಿ ನನ್ನ ಬೌಲಿಂಗ್ ಶೈಲಿ ನಿಮಗೆ ವಿಭಿನ್ನವಾಗಿ ಕಾಣಿಸುತ್ತಿದೆ ಎಂದು ಉಸ್ಮಾನ್…

Read More

ಮದುವೆಗೆಂದು ಹೋಗಿದ್ದ ಮಹಿಳೆ ನಿಗೂಢವಾಗಿ ನಾಪತ್ತೆ: ಬೇಲೂರಿನ ಕಲ್ಕೆರೆ ಸಮೀಪ ಒಳ ಉಡುಪು, ಚಪ್ಪಲಿ, ಬ್ಯಾಗ್ ಪತ್ತೆ – Kannada News | Kunigal Native Priyanka Missing After Attending Wedding: Undergarments, Slippers, Bag Found Near Kalkere in Belur

ಹಾಸನ, ಫೆಬ್ರವರಿ 14: ಮದುವೆಗೆ ಬಂದಿದ್ದ ಮಹಿಳೆ ನಿಗೂಢವಾಗಿ ನಾಪತ್ತಯಾದ ಘಟನೆ ಜಿಲ್ಲೆಯಲ್ಲಿ ಆತಂಕ ಮೂಡಿಸಿದೆ. ತುಮಕೂರು ಜಿಲ್ಲೆಯ ಕುಣಿಗಲ್ ಮೂಲದ ಪ್ರಿಯಾಂಕಾ (29) ಎಂಬ ಮಹಿಳೆ ಚಿಕ್ಕಮಗಳೂರಿನಲ್ಲಿ ನಡೆಯುತ್ತಿದ್ದ ಮದುವೆಗೆ ಆಗಮಿಸಿದ್ದ ವೇಳೆ ಕಾಣೆಯಾಗಿದ್ದಾರೆ. ಫೆಬ್ರವರಿ 12ರ ರಾತ್ರಿ 8 ಗಂಟೆ ಸುಮಾರಿಗೆ ಹಾಸನ ಜಿಲ್ಲೆಯ (Hassan) ಬೇಲೂರು ಬಸ್ ನಿಲ್ದಾಣದ ಬಳಿಯಿಂದ ಅವರು ನಿಗೂಢವಾಗಿ ಕಣ್ಮರೆಯಾಗಿರುವುದು ತಿಳಿದುಬಂದಿದೆ. ಕಾಣೆಯಾಗುವ ಮುನ್ನ ಸಂಜೆ 7.30ರ ಸುಮಾರಿಗೆ ಕುಟುಂಬ ಸದಸ್ಯರಿಗೆ ಕರೆ ಮಾಡಿದ್ದ ಪ್ರಿಯಾಂಕಾ, ‘ಯಾರೋ ಒಬ್ಬರ ಜೊತೆಯಲ್ಲಿ…

Read More

Maha Shivaratri: ಮಹಾ ಶಿವರಾತ್ರಿಯಂದು ನಿಮ್ಮ ರಾಶಿಗನುಗುಣವಾಗಿ ಶಿವನಿಗೆ ಈ ವಸ್ತು ಅರ್ಪಿಸಿ – Kannada News | Maha Shivaratri: Zodiac Specific Puja and Rituals for Blessings and Prosperity

ಮಹಾ ಶಿವರಾತ್ರಿಯನ್ನು ಸನಾತನ ಧರ್ಮದಲ್ಲಿ ಅತ್ಯಂತ ಪವಿತ್ರ ಹಬ್ಬವೆಂದು ಪರಿಗಣಿಸಲಾಗಿದೆ. ಪಂಚಾಂಗದ ಪ್ರಕಾರ, ಈ ವರ್ಷ ಮಹಾ ಶಿವರಾತ್ರಿಯನ್ನು ಫೆಬ್ರವರಿ 15 ರ ಭಾನುವಾರದಂದು ಆಚರಿಸಲಾಗುತ್ತದೆ. ಪುರಾಣಗಳ ಪ್ರಕಾರ, ಈ ಪವಿತ್ರ ರಾತ್ರಿಯಂದು ಶಿವ ಮತ್ತು ಪಾರ್ವತಿಯ ವಿವಾಹ ನಡೆಯಿತು ಎಂದು ನಂಬಲಾಗಿದೆ. ಈ ರಾತ್ರಿ ಉಪವಾಸ, ಜಾಗರಣೆ, ಅಭಿಷೇಕ ಮತ್ತು ಮಂತ್ರಗಳನ್ನು ಪಠಿಸುವುದರಿಂದ ಭಕ್ತರು ಕಷ್ಟಗಳಿಂದ ಮುಕ್ತರಾಗುತ್ತಾರೆ ಮತ್ತು ಅವರ ವೃತ್ತಿ, ಕುಟುಂಬ ಜೀವನ ಮತ್ತು ಆಧ್ಯಾತ್ಮಿಕ ಪ್ರಗತಿಯಲ್ಲಿ ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ….

Read More

ಇಂಡಿಗೋ ವಿಮಾನಕ್ಕೆ ಬಾಂಬ್​​ ಬೆದರಿಕೆ: ವಿಮಾನದ ಶೌಚಾಲಯದಲ್ಲಿ ಸಿಕ್ತು ಅಚ್ಚರಿಯ ಪತ್ರ – Kannada News | Airport Security Alert: Kolkata Indigo Bomb Scare, Hyderabad Hoax Threat

ಕೋಲ್ಕತ್ತಾ,ಫೆ.14: ಪಶ್ಚಿಮ ಬಂಗಾಳದ ಕೋಲ್ಕತ್ತಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಬೆಳಿಗ್ಗೆ ಬಾಂಬ್ ಬೇದರಿಕೆ ಪತ್ರವೊಂದು ಪತ್ತೆಯಾಗಿದೆ. ಈ ವೇಳೆ ಪ್ರಯಾಣಿಕರಲ್ಲಿ ಭಾರಿ ಆತಂಕ ಮೂಡಿಸಿದೆ. ಶಿಲ್ಲಾಂಗ್‌ಗೆ ಹೊರಡಲು ಸಿದ್ಧವಾಗಿದ್ದ ಇಂಡಿಗೋ ವಿಮಾನದ (Indigo flight )ಶೌಚಾಲಯದಲ್ಲಿ ಬಾಂಬ್ ಬೆದರಿಕೆ ಇರುವ ಪತ್ರವೊಂದು ಪತ್ತೆಯಾಗಿದೆ. ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣದಿಂದ ಮೇಘಾಲಯದ ಶಿಲ್ಲಾಂಗ್‌ಗೆ ತೆರಳಬೇಕಿದ್ದ ಇಂಡಿಗೋ ವಿಮಾನ (6E-7304) ಬೆಳಿಗ್ಗೆ 9:15ಕ್ಕೆ ಹೊರಡಲು ಸಿದ್ಧವಾಗಿತ್ತು. ಪ್ರಯಾಣಿಕರು ವಿಮಾನಕ್ಕೆ ಹತ್ತುತ್ತಿದ್ದ ಸಂದರ್ಭದಲ್ಲಿ, ವಿಮಾನದ ಸಿಬ್ಬಂದಿ…

Read More

ಮತ್ತೆ ಶಾಲೆಗೆ ಹೊರಟ ವೈಭವ್ ಸೂರ್ಯವಂಶಿ – Kannada News | Vaibhav Suryavanshi will attend CBSE Class 10 Board Exams

ಟೀಮ್ ಇಂಡಿಯಾದ ಯಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಮತ್ತೆ ಶಾಲೆಯತ್ತ ಮುಖ ಮಾಡಿದ್ದಾರೆ. ಅದು ಸಹ 14 ವಯಸ್ಸಿನೊಳಗೆ 3 ಭರ್ಜರಿ ಟಿ20 ಶತಕ, 4 ಏಕದಿನ ಶತಕ, ಒಂದು ಟೆಸ್ಟ್ ಸೆಂಚುರಿ ಸಿಡಿಸಿದ ಬಳಿಕ ಎಂಬುದು ವಿಶೇಷ. ಆದರೆ ಈ ಬಾರಿ ವೈಭವ್ ಶಾಲೆಗೆ ಹೋಗುತ್ತಿರುವುದು ಪರೀಕ್ಷೆ ಬರೆಯಲು. 2026ರ ಐಸಿಸಿ ಅಂಡರ್-19 ವಿಶ್ವಕಪ್ ಗೆದ್ದು ವಿಶ್ರಾಂತಿಯಲ್ಲಿದ್ದ ವೈಭವ್ ಸೂರ್ಯವಂಶಿ ಈಗ ತಮ್ಮ ಶೈಕ್ಷಣಿಕ ಪರೀಕ್ಷೆಗೆ ಸಜ್ಜಾಗಿದ್ದಾರೆ. ಫೆಬ್ರವರಿ 17, 2026 ರಿಂದ ಆರಂಭವಾಗಲಿರುವ CBSE 10ನೇ…

Read More

ಪಿಲಿಕುಳ ಮೃಗಾಲಯದ ಪ್ರಾಣಿಗಳ ಅಸಹಜ ಸಾವಿಗೆ ಕಾರಣವಾಯ್ತಾ ‘ಸ್ಲೋ ಪಾಯಿಸನ್’! – Kannada News | Pilikula Zoo Crisis: Over 150 Animals Dead from Suspected Poisoning

ಮೃತ ಜಿಂಕೆಯ ಶರೀರದಲ್ಲಿ ಸಿಕ್ಕಿದ್ದೇನು ಗೊತ್ತಾ? ಮಂಗಳೂರು, ಫೆಬ್ರವರಿ 14: ದಕ್ಷಿಣ ಕನ್ನಡದ (Dakshin Kannada) ಹೆಸರಾಂತ ಪಿಲಿಕುಳ ಮೃಗಾಲಯದಲ್ಲಿ ಪ್ರಾಣಿಗಳ ಅಸಹಜ ಸಾವುಗಳು ಇದೀಗ ಗಂಭೀರ ಅನುಮಾನಗಳಿಗೆ ಕಾರಣವಾಗಿವೆ. ಕಳೆದ ನಾಲ್ಕು ವರ್ಷಗಳಿಂದ ಸುಮಾರು 150ಕ್ಕೂ ಹೆಚ್ಚು ವನ್ಯಜೀವಿಗಳು ಸಾವನ್ನಪ್ಪಿರುವ ವಿಚಾರ ಬೆಳಕಿಗೆ ಬಂದಿದ್ದು, ಈ ಘಟನೆಗಳಿಗೆ ವಿಷಪೂರಿತ ಆಹಾರವೇ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಇತ್ತೀಚೆಗೆ ಸಾವನ್ನಪ್ಪಿದ ಜಿಂಕೆಯೊಂದರ ಮರಣೋತ್ತರ ವರದಿಯಲ್ಲಿ ಪ್ರಾಣಿಯ ದೇಹದಲ್ಲಿ ಹೈಡ್ರೋಸೈನೇಡ್ ಹಾಗೂ ನೈಟ್ರೇಟ್ ಅಂಶಗಳು ಪತ್ತೆಯಾಗಿರುವುದು ಬೆಚ್ಚಿಬೀಳಿಸುವ ಸಂಗತಿಯಾಗಿದೆ. ಮೃಗಾಲಯದ…

Read More

ಹಂಪಿ ಉತ್ಸವದಲ್ಲಿ ಡ್ಯಾನ್ಸ್ ಮಾಡಿ ರಂಜಿಸಿದ ಶಿವರಾಜ್​​ಕುಮಾರ್ – Kannada News | Shivarajkumar Superb Dance In Hampi Utsava

ಶಿವರಾಜ್​ಕುಮಾರ್ ಅವರು ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅವರು ಈಗ ಹಂಪಿ ಉತ್ಸವದಲ್ಲಿ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಅವರಿಗೆ 60+ ವರ್ಷವಾಯಿತು ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಹಂಪಿ ಉತ್ಸವ ಪ್ರತಿ ವರ್ಷವೂ ಅದ್ದೂರಿಯಾಗಿ ನಡೆಯುತ್ತದೆ. ಚಿತ್ರರಂಗದ ಅನೇಕರು ಇದರಲ್ಲಿ ಭಾಗಿ ಆಗುತ್ತಾರೆ. ಈ ಬಾರಿ ಶಿವಣ್ಣ ಭಾಗಿ ಆಗಿದ್ದು ವಿಶೇಷವಾಗಿತ್ತು. ಶಿವಣ್ಣ ಅವರು ಹಲವು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಕನ್ನಡದ ಜೊತೆಗೆ ಪರಭಾಷೆಯಲ್ಲೂ ಅವರು ಆ್ಯಕ್ಟೀವ್ ಆಗಿದ್ದಾರೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ. Source…

Read More

ಪನ್ನೂನ್ ಹತ್ಯೆ ಸಂಚು ಪ್ರಕರಣ: ಅಮೆರಿಕ ನ್ಯಾಯಾಲಯದಲ್ಲಿ ತಪ್ಪು ಒಪ್ಪಿಕೊಂಡ ಭಾರತೀಯ ಪ್ರಜೆ ನಿಖಿಲ್ ಗುಪ್ತಾ! – Kannada News | Pannun Assassination Plot: Nikhil Gupta Confesses in US Federal Court

ಪನ್ನೂನ್ ಹತ್ಯೆ ಸಂಚು, ನಿಖಿಲ್ ಗುಪ್ತಾ ನ್ಯೂಯಾರ್ಕ್,ಫೆ.14: ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಖಲಿಸ್ತಾನಿ ನಾಯಕ ಗುರುಪತ್‌ವಂತ್ ಸಿಂಗ್ ಪನ್ನೂನ್ ಹತ್ಯೆ ಯತ್ನದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಈ ಕೊಲೆ ಸಂಚಿನ ಪ್ರಮುಖ ಆರೋಪಿ ಎನ್ನಲಾದ ಭಾರತೀಯ ಮೂಲದ ನಿಖಿಲ್ ಗುಪ್ತಾ (Nikhil Gupta) ಅಮೆರಿಕದ ಮ್ಯಾನ್‌ಹ್ಯಾಟನ್ ಫೆಡರಲ್ ನ್ಯಾಯಾಲಯದಲ್ಲಿ ಹತ್ಯೆ ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಅಮೆರಿಕ ಮತ್ತು ಕೆನಡಾ ಪೌರತ್ವ ಹೊಂದಿರುವ ಸಿಖ್ಸ್ ಫಾರ್ ಜಸ್ಟಿಸ್ (SFJ) ಸಂಘಟನೆಯ ನಾಯಕ ಪನ್ನೂನ್ ಹತ್ಯೆಗೆ ನಿಖಿಲ್…

Read More

ಗಿರಿನಗರ ಬ್ಯಾಂಕ್​ನಲ್ಲಿಟ್ಟಿದ್ದ 4 ಕೋಟಿ ರೂ. ಮೌಲ್ಯದ ಚಿನ್ನಾಭರಣಕ್ಕೆ ಕನ್ನ! ಅಸಿಸ್ಟೆಂಟ್ ಮ್ಯಾನೇಜರ್​ನಿಂದಲೇ ನಡೀತು ಕಳ್ಳತನ – Kannada News | Girinagar Bank Manager Stole rs.4 Crore for Betting

ಗಿರಿನಗರ ಬ್ಯಾಂಕ್​ನಲ್ಲಿಟ್ಟಿದ್ದ 4 ಕೋಟಿ ರೂ. ಮೌಲ್ಯದ ಚಿನ್ನಾಭರಣಕ್ಕೆ ಕನ್ನ! ಬೆಂಗಳೂರು, ಫೆಬ್ರವರಿ 14: ಬೆಂಗಳೂರು ಗಿರಿನಗರದ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ಭಾರೀ ಚಿನ್ನ ಕಳ್ಳತನದ (Gold robbery) ಘಟನೆ ನಡೆದಿದ್ದು, ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್​ನಿಂದಲೇ ಈ ಕೃತ್ಯ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಬ್ಯಾಂಕ್‌ನಲ್ಲಿ ಅಡ ಇಟ್ಟಿದ್ದ ಗ್ರಾಹಕರ ಚಿನ್ನಾಭರಣವನ್ನು ಕದ್ದು ಬೆಟ್ಟಿಂಗ್ ಗೇಮ್ ಆಡುವ ಚಟಕ್ಕಿಳಿದಿದ್ದ ಈತ, ಸುಮಾರು 4 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ಜೇಬಿಗಿಳಿಸಿಕೊಂಡಿದ್ದಾನೆಂದು ಆರೋಪಿಸಲಾಗಿದೆ. ಆನ್‌ಲೈನ್ ಬೆಟ್ಟಿಂಗ್ ಗೀಳಿಗೆ…

Read More

ಶಿವರಾತ್ರಿಗೆ ಮಾದಪ್ಪನ ಸನ್ನಿಧಿಗೆ ತೆರಳುವ ಭಕ್ತರೇ ಎಚ್ಚರ: ಮಲೆಮಹದೇಶ್ವರ ಬೆಟ್ಟದ ಮಾರ್ಗದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ – Kannada News | Leopard Spotted on Road to Male Mahadeshwara Hills Ahead of Shivaratri, Devotees Alerted

ಚಾಮರಾಜನಗರ, ಫೆಬ್ರವರಿ 14: ಶಿವರಾತ್ರಿಗೆ ಇನ್ನೊಂದೇ ದಿನ ಬಾಕಿ ಇರುವಾಗ ಮಲೆಮಹದೇಶ್ವರ ಬೆಟ್ಟದ ಮಾರ್ಗದಲ್ಲಿ ಮತ್ತೆ ಚಿರತೆ ಆತಂಕ ಎದುರಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಹದೇಶ್ವರಬೆಟ್ಟದ ತಾಳುಬೆಟ್ಟದ 4ನೇ ತಿರುವಿನ ರಸ್ತೆಯಲ್ಲಿ ಯಾತ್ರಿಕರಿಗೆ ಚಿರತೆ ಕಾಣಿಸಿಕೊಂಡಿದೆ. ರಸ್ತೆಯಲ್ಲೇ ಚಿರತೆ ಕಾಣಿಸಿದ ಕಾರಣ ಮಾದಪ್ಪನ ಭಕ್ತರಲ್ಲಿ ಆತಂಕ ಸೃಷ್ಟಿಯಾಗಿದೆ. ವಾಹನಗಳು ಓಡಾಡುತ್ತಿದ್ದರೂ ಕ್ಯಾರೆ ಎನ್ನದೇ ಕುಳಿತಿರುವ ಚಿರತೆಯ ದೃಶ್ಯ ವಾಹನ ಸವಾರರೊಬ್ಬರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಶಿವರಾತ್ರಿ ಹಬ್ಬ ಹಿನ್ನೆಲೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಿರುವ…

Read More