ಟೀಮ್ ಇಂಡಿಯಾ ಆಟಗಾರರು ಗಾಯಗೊಳ್ಳಲು IPL ಕಾರಣ! – Kannada News | IPL Teams Forcing Injured Indian Cricketers into Action
ಭಾರತೀಯ ಕ್ರಿಕೆಟ್‌ನಲ್ಲಿ ಸದ್ಯ ಆತಂಕಕಾರಿ ಮತ್ತು ಅತ್ಯಂತ ವಿವಾದಾತ್ಮಕ ವಿಷಯವೊಂದು ಮುನ್ನೆಲೆಗೆ ಬಂದಿದೆ. ನಗದು ಸಮೃದ್ಧ ಐಪಿಎಲ್ (IPL) ಫ್ರಾಂಚೈಸಿಗಳು ತಮ್ಮ ಆರ್ಥಿಕ ಲಾಭಕ್ಕಾಗಿ ಭಾರತದ ಪ್ರಮುಖ ಅಂತಾರಾಷ್ಟ್ರೀಯ ಆಟಗಾರರನ್ನು ಗಾಯದ ನಡುವೆಯೂ ಬಲವಂತವಾಗಿ ಆಡಿಸುತ್ತಿವೆ ಎಂದು ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ (CoE) ಮೂಲಗಳು ಗಂಭೀರ ಆರೋಪ ಮಾಡಿವೆ. ಸುದ್ದಿ ಸಂಸ್ಥೆ ‘ಎಎನ್‌ಐ’ ವರದಿ ಮಾಡಿರುವ ಈ ಆಘಾತಕಾರಿ ಮಾಹಿತಿ ಈಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮತ್ತು ಐಪಿಎಲ್ ತಂಡಗಳ ನಡುವಿನ…