2026ರ ಪರಾಭವ ನಾಮ ಸಂವತ್ಸರದ ಯುಗಾದಿಯು ಮಕರ ರಾಶಿಯವರಿಗೆ ಹಲವು ಶುಭ ಫಲಗಳನ್ನು ತರಲಿದೆ ಎಂದು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಹೇಳಿದ್ದಾರೆ. ಶನಿ ಗ್ರಹವು ಮೂರನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದು, ಶ್ರಮಕ್ಕೆ ತಕ್ಕ ಫಲ ಹಾಗೂ ನ್ಯಾಯ, ನೀತಿ, ಧರ್ಮಕ್ಕೆ ಪ್ರಾಶಸ್ತ್ಯ ಸಿಗಲಿದೆ. ಈ ರಾಶಿಯವರ ಆದಾಯ ಖರ್ಚಿಗಿಂತ ಹೆಚ್ಚಾಗಲಿದ್ದು, ಆರ್ಥಿಕವಾಗಿ ಲಾಭವಾಗಲಿದೆ. ತಾಳ್ಮೆ, ಸಹನೆ, ಒಳ್ಳೆಯತನ ಮತ್ತು ಕರುಣೆ ಹೆಚ್ಚಾಗಿರುತ್ತದೆ.
ಈ ವರ್ಷ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಇರುತ್ತದೆ ಮತ್ತು ಸ್ವಲ್ಪ ಹಣ ಉಳಿತಾಯವಾಗಲಿದೆ. ಮಹಿಳೆಯರಿಗೆ ರಾಜಕೀಯವಾಗಿ ಪ್ರಗತಿ, ಉದ್ಯೋಗದಲ್ಲಿ ಬಡ್ತಿ, ಹಾಗೂ ಹೊಸ ಆಲೋಚನೆಗಳಿಗೆ ಮನ್ನಣೆ ಸಿಗಲಿದೆ. ರಿಯಲ್ ಎಸ್ಟೇಟ್, ಕಟ್ಟಡ ವ್ಯಾಪಾರ, ಕಬ್ಬಿಣ ಮತ್ತು ಹಾರ್ಡ್‌ವೇರ್ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಿರುತ್ತದೆ. ಶಿಕ್ಷಣ ಕ್ಷೇತ್ರ ಮತ್ತು ವೈದ್ಯಕೀಯ ವೃತ್ತಿಯಲ್ಲಿರುವವರಿಗೆ ಶುಭ ಯೋಗವಿದೆ. ಆದಾಗ್ಯೂ, ವಿವಾಹ ವಿಷಯಗಳಲ್ಲಿ ಸ್ವಲ್ಪ ವಿಳಂಬವಾಗಬಹುದು. ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸುವುದು ಉತ್ತಮ. ದುರಾಸೆಗೆ ಹೂಡಿಕೆ ಮಾಡುವುದನ್ನು ತಪ್ಪಿಸಿ ಎಂದು ಗುರೂಜಿ ಎಚ್ಚರಿಸಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಚಾಂಪಿಯನ್ ಪಟ್ಟದ ಹಿಂದಿನ ರೂವಾರಿ ಕೋಚ್ ಗೌತಮ್ ಗಂಭೀರ್. ಚಾಂಪಿಯನ್ ಟ್ರೋಫಿ ಮುಕ್ತಾಯದ ಬೆನ್ನಲ್ಲೇ ಟಿ20 ವಿಶ್ವಕಪ್ಗಾಗಿ ಹೊಸ ಪಡೆ ಕಟ್ಟಿದ್ದ ಗಂಭೀರ್ ಇದೀಗ ತಮ್ಮ ರಣತಂತ್ರದೊಂದಿಗೆ ಭಾರತ ತಂಡಕ್ಕೆ ವಿಶ್ವಕಪ್ ತಂದುಕೊಟ್ಟಿದ್ದಾರೆ. ಈ ವಿಶ್ವಕಪ್ ಗೆಲುವಿನ ಖುಷಿಯಲ್ಲಿರುವ ಗಂಭೀರ್ ಈ ಹಿಂದಿನ ಸೋಲುಗಳ ಬಗ್ಗೆ ಮಾತನಾಡಿದ್ದಾರೆ. ಈ ಸೋಲುಗಳ ನಡುವೆ ತನ್ನ ಜೊತೆ ನಿಂತ ಏಕೈಕ ವ್ಯಕ್ತಿ ಜಯ್ ಶಾ ಎಂದಿದ್ದಾರೆ.
ಟೀಮ್ ಇಂಡಿಯಾ ಗೆಲುವಿನ ನಂತರ ಸುದ್ದಿ ಸಂಸ್ಥೆ ANI ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಗೌತಮ್ ಗಂಭೀರ್, ನ್ಯೂಝಿಲೆಂಡ್ ಮತ್ತು ಸೌತ್ ಆಫ್ರಿಕಾ ವಿರುದ್ಧದ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಸೋಲು ನನ್ನ ಕಾರ್ಯಾವಧಿಯ ಕೆಟ್ಟ ಘಳಿಗೆ.
ತವರಿನಲ್ಲಿನ ಎರಡು ಸೋಲುಗಳನ್ನು ನಾನು ಎಂದಿಗೂ ಮರೆಯುವುದಿಲ್ಲ. ಈ ಹೀನಾಯ ಸೋಲಿನ ಬಳಿಕ ನನಗೆ ಯಾರೂ ಸಹ ಕರೆ ಮಾಡಿರಲಿಲ್ಲ. ಆದರೆ ಜಯ್ ಶಾ ಒಬ್ಬರು ಮಾತ್ರ ಕರೆ ಮಾಡಿ ಮಾತನಾಡಿದ್ದರು.
ಮುಂಬೈನಲ್ಲಿ ನ್ಯೂಝಿಲೆಂಡ್ ವಿರುದ್ಧ ಸೋತ ಬಳಿಕ ಜಯ್ ಶಾ ಕರೆ ಮಾಡಿದ್ದರು. ನಾನು ಸೋಲಿನಿಂದ ಸಂಪೂರ್ಣ ಕುಗ್ಗಿದ್ದ ಸಮಯ ಅದು. ಈ ವೇಳೆ ಅವರು ಕರೆ ಮಾಡಿ ನೀಡಿದ ಬೆಂಬಲ ನಿಜಕ್ಕೂ ಸ್ಮರಣೀಯ. ಧೈರ್ಯವಾಗಿರಿ, ನಾವು ನಿಮ್ಮೊಂದಿಗಿದ್ದೇವೆ ಎಂದು ಅವರು ಬೆಂಬಲ ಸೂಚಿಸಿದ್ದರು.
ಇದಾದ ಬಳಿಕ ಸೌತ್ ಆಫ್ರಿಕಾ ವಿರುದ್ಧ ಕೂಡ ಸೋತಾಗ ಜಯ್ ಶಾ ಕರೆ ಮಾಡಿ ಸಮಾಧಾನ ಪಡಿಸಿದ್ದರು. ಅಷ್ಟೇ ಅಲ್ಲದೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ, ಹೊಸ ಉತ್ಸಾಹ ತುಂಬಿದ್ದರು. ಇದನ್ನು ನಾನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ.
ಏಕೆಂದರೆ ಇಂದು ಟಿ20 ವಿಶ್ವಕಪ್ ಗೆಲ್ಲಲು ಅಥವಾ ಕೋಚ್ ಆಗಿ ಮುಂದುವರೆಯಲು ಜಯ್ ಶಾ ನೀಡಿದ ಬೆಂಬಲವೇ ಕಾರಣ. ಅಷ್ಟೇ ಅಲ್ಲದೆ ನಾನು ಟೀಮ್ ಇಂಡಿಯಾ ಮುಖ್ಯ ಕೋಚ್ ಹುದ್ದೆ ಅಲಂಕರಿಸಲು ಕೂಡ ಅವರೇ ಕಾರಣಕರ್ತರು.
ಐಪಿಎಲ್ (2024) ನಲ್ಲಿ ಮುಂಬೈ vs ಕೆಕೆಆರ್ ಪಂದ್ಯದ ಸಮಯದಲ್ಲಿ ಜಯ್ ಭಾಯ್ (ಜಯ್ ಶಾ) ಅವರಿಂದ ನನಗೆ ಕರೆ ಬಂದಿತ್ತು. ಹೀಗೆ ಕರೆ ಮಾಡಿ ಅವರು ಹೇಳಿದ್ದು, ‘ನಾನು ನಿಮಗೆ ಒಂದು ಆಫರ್ ನೀಡಲು ಬಯಸುತ್ತೇನೆ, ಆದರೆ ನೀವು ನಿರಾಕರಿಸುಂತಿಲ್ಲ. ಇದಾದ ಬಳಿಕ ಅವರು ನೀವು ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಬೇಕು’ ಎಂದರು.
ಇದನ್ನು ಕೇಳಿ ನನಗೆ ಆಶ್ಚರ್ಯವಾಯಿತು. ಏಕೆಂದರೆ ಆ ಸಮಯದಲ್ಲಿ ನಾನು ಅದಕ್ಕೆ ಸಿದ್ಧನಾಗಿರಲಿಲ್ಲ. ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗುವುದು ನನಗೆ ದೊಡ್ಡ ಗೌರವವಾಗಿತ್ತು. ಏಕೆಂದರೆ ಕೆಲವೇ ಕೆಲವು ಮಾಜಿ ಆಟಗಾರರಿಗೆ ಮಾತ್ರ ಡ್ರೆಸ್ಸಿಂಗ್ ಕೋಣೆಗೆ ಕೋಚ್ ಆಗಿ ಮರಳುವ ಅವಕಾಶ ದೊರೆಯುತ್ತದೆ.
ಅಂತಹದೊಂದು ಅವಕಾಶ ನನ್ನ ಮುಂದಿತ್ತು. ಆದರೆ ನನ್ನಲ್ಲಿ ಮುಖ್ಯ ಕೋಚ್ ಅನುಭವ ಇರಲಿಲ್ಲ. ಇದಾಗ್ಯೂ ಜಯ್ ಶಾ ಅವರು ನನ್ನ ಮೇಲೆ ನಂಬಿಕೆ ಇರಿಸಿದ್ದರು. ಈ ನಂಬಿಕೆಗೆ ನಾನು ಅವರಿಗೆ ಕೃತಜ್ಞತೆ ಸಲ್ಲಿಸಲೇಬೇಕು. ಏಕೆಂದರೆ ಇದೀಗ ಟಿ20 ವಿಶ್ವಕಪ್ ಗೆದ್ದಿದ್ದೇವೆ.
ಆದರೆ ಅಂದು ನನ್ನನ್ನು ನಂಬಿದ್ದು ಜಯ್ ಶಾ ಮಾತ್ರ. ನ್ಯೂಝಿಲೆಂಡ್, ಸೌತ್ ಆಫ್ರಿಕಾ ವಿರುದ್ಧ ತವರಿನಲ್ಲಿ ಟೆಸ್ಟ್ ಸರಣಿ ಸೋತಾಗಲೂ ಅವರು ಮಾತ್ರ ನನ್ನ ಮೇಲೆ ನಂಬಿಕೆಯಿಟ್ಟಿದ್ದರು. ಹೀಗಾಗಿ ಜಯ್ ಶಾ ಅವರಿಗೆ ಧನ್ಯವಾದಗಳನ್ನು ಹೇಳಲೇಬೇಕು ಎಂದು ಗೌತಮ್ ಗಂಭೀರ್ ಹಳೆಯ ಘಟನೆಗಳನ್ನು ಸ್ಮರಿಸಿಕೊಂಡಿದ್ದಾರೆ.
ನವದೆಹಲಿ, ಮಾರ್ಚ್ 11: 8ನೇ ತರಗತಿಯ NCERT ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ (NCERT Row) ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಕುರಿತು ಅಧ್ಯಾಯವನ್ನು ಬರೆದ ಬಗ್ಗೆ ಸುಪ್ರೀಂ ಕೋರ್ಟ್ ಗಂಭೀರ ಕಳವಳ ವ್ಯಕ್ತಪಡಿಸಿದೆ. ಈ ಬಗ್ಗೆ ಮಹತ್ವದ ಆದೇಶ ಹೊರಡಿಸಲಾಗಿದ್ದು, ಈ ರೀತಿಯ ವಿವಾದಾತ್ಮಕ ವಿಷಯವನ್ನು ಸಿದ್ಧಪಡಿಸುವಲ್ಲಿ ಭಾಗಿಯಾಗಿರುವ ವ್ಯಕ್ತಿಗಳಿಂದ ದೂರವಿರಲು ಕೇಂದ್ರ, ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಸಾರ್ವಜನಿಕವಾಗಿ ಅನುದಾನ ಪಡೆದ ಶಿಕ್ಷಣ ಸಂಸ್ಥೆಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಅಧ್ಯಾಯದ ಲೇಖಕರು ಮುಂದಿನ ಪೀಳಿಗೆಗೆ ಎಂದಿಗೂ ಪಠ್ಯಪುಸ್ತಕಗಳನ್ನು ಸಿದ್ಧಪಡಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನ್ಯಾಯಾಂಗ ಅಧ್ಯಾಯದ ಕುರಿತು 8ನೇ ತರಗತಿಯ NCERT ಪಠ್ಯಪುಸ್ತಕಕ್ಕೆ ಸಂಬಂಧಿಸಿದ ಸುಮೋಟು ಪ್ರಕರಣದಲ್ಲಿ ನ್ಯಾಯಾಲಯದ ಹಿಂದಿನ ಆದೇಶದ ನಂತರ ಬೇಜವಾಬ್ದಾರಿಯಿಂದ ಪೋಸ್ಟ್ ಮಾಡಿದ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳ ವಿರುದ್ಧವೂ ಸುಪ್ರೀಂ ಕೋರ್ಟ್ ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ.
The Supreme Court has directed the Centre and all State governments along with all institutions receiving public funds, either partially or fully, to dissociate the chairperson of NCERT social science curriculum, Professor Michel Denino and his two other associate members who…
ಬೇರೆ ಎಲ್ಲಾ ತರಗತಿಗಳ ಪಠ್ಯಪುಸ್ತಕಗಳನ್ನು ಪರಿಶೀಲಿಸುವಂತೆ ಕೇಂದ್ರ ಸರ್ಕಾರವು NCERTಗೆ ನಿರ್ದೇಶನ ನೀಡಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಇಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ. “ಉಂಟಾದ ಅನಾನುಕೂಲತೆಗೆ ನಾವು ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ. ಶೈಕ್ಷಣಿಕ ವಿಷಯದಲ್ಲಿ ನಿಖರತೆ, ಸೂಕ್ಷ್ಮತೆ ಮತ್ತು ಜವಾಬ್ದಾರಿಯ ಅತ್ಯುನ್ನತ ಮಾನದಂಡಗಳನ್ನು ಕಾಪಾಡಿಕೊಳ್ಳಲು NCERT ಬದ್ಧವಾಗಿದೆ” ಎಂದು NCERT ತಿಳಿಸಿದೆ.
ಹಾಗೇ, NCERT ಅಧ್ಯಾಯದ ವಿಷಯವನ್ನು ಹೊಂದಿರುವ ಎಲ್ಲಾ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಡಿಲೀಟ್ ಮಾಡುವಂತೆ ಕರೆ ನೀಡಿತು. ಸುಪ್ರೀಂ ಕೋರ್ಟ್ ಸಮಾಜ ವಿಜ್ಞಾನ ಪುಸ್ತಕದ ಮೇಲೆ ನಿಷೇಧ ಹೇರಿದ ನಂತರ, ಕೇಂದ್ರ ಶಿಕ್ಷಣ ಸಚಿವಾಲಯ ಗುರುವಾರ ಮಾಹಿತಿ ಮತ್ತು ಪ್ರಸಾರ ಮತ್ತು ಎಲೆಕ್ಟ್ರಾನಿಕ್ಸ್ ಸಚಿವಾಲಯಗಳಿಗೆ ಪತ್ರ ಬರೆದಿದ್ದು, ವಿವಾದಾತ್ಮಕ NCERT ಪಠ್ಯಪುಸ್ತಕವನ್ನು ಡಿಜಿಟಲ್ ವೇದಿಕೆಗಳು ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವುದನ್ನು ನಿಲ್ಲಿಸುವಂತೆ ಸೂಚಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ತೆಲುಗು ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ. ಅವರು ತಮ್ಮ ಗರ್ಲ್ಫ್ರೆಂಡ್ನ ಅಭಿಮಾನಿಗಳ ಎದುರು ಪರಿಚಯಿಸಿದ್ದಾರೆ. ಈ ಸಂದರ್ಭದ ಫೋಟೋ ವೈರಲ್ ಆಗಿದೆ.
ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಅವರಿಂದ ಸ್ಪಷ್ಟನೆ ಸಿಗಲಿ ಎಂದು ಫ್ಯಾನ್ಸ್ ಬಯಸಿದ್ದರು. ಕೊನೆಗೂ ಇದಕ್ಕೆ ಉತ್ತರ ಸಿಕ್ಕಿದೆ. ಅವರು ಗರ್ಲ್ಫ್ರೆಂಡ್ ಫೋಟೋ ಪೋಸ್ಟ್ ಮಾಡಿದ್ದಾರೆ.
ಶ್ರೀನಿವಾಸ್ ಅವರ ಗೆಳತಿ ಹೆಸರು ಕಾವ್ಯಾ ರೆಡ್ಡಿ. ನಿಶ್ಚಿತಾರ್ಥ ಹಾಗೂ ಮದುವೆ ಇನ್ನಷ್ಟೇ ಜರುಗಬೇಕಿದೆ ಎಂದು ಅವರು ಹೇಳಿದ್ದಾರೆ. ತನ್ನವಳನನು ಪರಿಚಯಿಸುತ್ತಿರುವುದಾಗಿ ಅವರು ಕ್ಯಾಪ್ಶನ್ ಅಲ್ಲಿ ಬರೆದುಕೊಂಡಿದ್ದಾರೆ.
‘ನನ್ನ ಜೀವನದಲ್ಲಿ ಬಂದಿದ್ದಕ್ಕೆ ಧನ್ಯವಾದ’ ಎಂದು ಕಾವ್ಯಾಗೆ ಹೇಳಿದ್ದಾರೆ. ಇದು ಅನೌನ್ಸ್ಮೆಂಟ್ ಮಾಡಲು ಕ್ಲಿಕ್ಕಿಸಿಕೊಂಡ ಫೋಟೋ ಅಷ್ಟೇ ಎಂದು ಅವರು ಹೇಳಿದ್ದಾರೆ.
ಕಾವ್ಯಾ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಶ್ರೀನಿವಾಸ್ಗಿಂತ ಅವರು ಐದು ವರ್ಷ ಸಣ್ಣವರು. ಕಾವ್ಯಾ ಅವರ ಅಕ್ಕ ಶ್ರೀನಿವಾಸ್ ಕ್ಲಾಸ್ಮೇಟ್. ಹೀಗೆ ಇಬ್ಬರ ಮಧ್ಯೆ ಪರಿಚಯ ಬೆಳೆಯಿತು ಎಂದು ಹೇಳಲಾಗುತ್ತಿದೆ.
ಆನೇಕಲ್, ಮಾರ್ಚ್ 11: ಆನೇಕಲ್‌ನಲ್ಲಿ ಕಿಡ್ನ್ಯಾಪ್ (kidnapped) ಆಗಿದ್ದ ರಿಯಲ್ ಎಸ್ಟೇಟ್ ಏಜೆಂಟ್ ತಮಿಳುನಾಡಿನಲ್ಲಿ ಶವವಾಗಿ ಪತ್ತೆ ಪ್ರಕರಣಕ್ಕೆ ಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಠಾಣೆ ಪೊಲೀಸರಿಂದ ಓರ್ವ ಅಪ್ರಾಪ್ತ ಸೇರಿದಂತೆ 8 ಆರೋಪಿಗಳನ್ನು ಬಂಧಿಸಲಾಗಿದೆ. ಮೋಹನ್ ಬಾಬು, ತೇಜಸ್, ದರ್ಶನ್, ಲಿಖಿತ್, ನಿಖಿಲ್, ಆನಂದ್, ಪ್ರಶಾಂತ್ ಮತ್ತು ಓರ್ವ ಅಪ್ರಾಪ್ತ ಬಂಧಿತರು. ಆರೋಪಿಗಳು ಕಿಡ್ನ್ಯಾಪ್ ಮಾಡಲು ಬಳಸಿದ್ದ ಹುಂಡೈ ಕಾರನ್ನು ವಶಕ್ಕೆ ಪಡೆಯಲಾಗಿದೆ. ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಆರೋಪಿಗಳಿಗೆ ವೈದ್ಯಕೀಯ ಪರೀಕ್ಷೆ ಮಾಡಿ ಕೋರ್ಟ್‌ಗೆ ಹಾಜರುಪಡಿಸಲಾಗಿದೆ.
ನಡೆದದ್ದೇನು?
ಗೋಪಾಲ್ ಅಲಿಯಾಸ್ ಗೋಪಿ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಹೊನ್ನಕಳಶಾಪುರ ನಿವಾಸಿ. ಈತನ ಸಂಬಂಧಿ ಮೋಹನ್ ಬಾಬು ಆ್ಯಂಡ್ ಗ್ಯಾಂಗ್ನಿಂದ ಬರ್ಬರವಾಗಿ ಕೊಲೆಯಾಗಿದ್ದಾನೆ. ಸ್ನೇಹಿತನಿಗೆ ಹೆಣ್ಣು ನೋಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಾಪಸ್ ಬರುತ್ತಿದ್ದ ವೇಳೆ ಅತ್ತಿಬೆಲೆ ಮತ್ತು ಆನೇಕಲ್ ಮಾರ್ಗ ಮಧ್ಯೆ ಕರ್ಪೂರು ಬಳಿ ಗೂಡ್ಸ್ ವಾಹನ ಗೋಪಾಲ್ ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಕಾರು ನಿಲ್ಲಿಸಿ ಕೆಳಗಿಳಿಯುತ್ತಿದ್ದಂತೆ ಕಾರಿನಲ್ಲಿ ಹಿಂಬಾಲಿಸಿ ಬಂದ ಐದಾರು ಮಂದಿ ಗೋಪಾಲ್ ಮತ್ತು ಸ್ನೇಹಿತ ಸತೀಶ್ ಮುಖಕ್ಕೆ ಪೆಪ್ಪರ್ ಸ್ಪ್ರೇ ಹೊಡೆದಿದ್ದಾರೆ. ಕಿರುಚಾಡುತ್ತಿದ್ದಂತೆ ಕ್ಷಣಾರ್ಧದಲ್ಲಿ ಗೋಪಾಲ್ನನ್ನು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿ ಎಸ್ಕೇಪ್ ಆಗಿದ್ದರು.
ಗೋಪಾಲ್ ಸ್ನೇಹಿತ ಸತೀಶ್ ಕೂಡಲೇ ಆನೇಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇತ್ತ ಹಳೆ ದ್ವೇಷ ಹಿನ್ನೆಲೆ ಮೋಹನ್ ಬಾಬು ಕಿಡ್ನ್ಯಾಪ್ ಮಾಡಿಸಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದರು. ಸೋಮವಾರ ಬೆಳಗ್ಗೆ ತಮಿಳುನಾಡಿನ ಡೆಂಕಣೀಕೋಟೆ ಬಳಿ ಬರ್ಬರವಾಗಿ ಕೊಲೆಯಾದ ಸ್ಥಿತಿಯಲ್ಲಿ ಗೋಪಾಲ್ ಶವ ಪತ್ತೆಯಾಗಿತ್ತು. ಇತ್ತ ಆಕ್ರೋಶಗೊಂಡ ಮೃತ ಗೋಪಾಲ್ ಕುಟುಂಬದವರು ಮತ್ತು ಸಂಬಂಧಿಗಳು ಆನೇಕಲ್ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದು ಮಾತ್ರವಲ್ಲದೆ ಆರೋಪಿ ಮೋಹನ್ ಬಾಬು ಮನೆ ಮೇಲೆ ಕಲ್ಲು ತೂರಾಟ ಕೂಡ ಮಾಡಿದ್ದರು.
ತಾನೂ ಆಸೆಪಟ್ಟ ಯುವತಿ ಸಿಗಲಿಲ್ಲವೆಂದು ದ್ವೇಷ
ಮೃತ ಗೋಪಾಲ್ ಮತ್ತು ಆರೋಪಿ ಮೋಹನ್ ಬಾಬು ಮುಂಚೆ ಜೊತೆಯಾಗಿಯೇ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಆದರೆ ಹತ್ತು ವರ್ಷಗಳ ಹಿಂದೆ ಗೋಪಾಲ್ ಸ್ವಾತಿ ಎಂಬ ಯುವತಿಯನ್ನು ವಿವಾಹವಾಗಿದ್ದು, ಆರೋಪಿ ಮೋಹನ್ ಬಾಬುಗೆ ದ್ವೇಷಕ್ಕೆ ಕಾರಣವಾಗಿತ್ತು. ಗೋಪಾಲ್ ಮದುವೆ ಆದ ಸ್ವಾತಿಯನ್ನು ಮದುವೆ ಆಗಲು ಆರೋಪಿ ಮೋಹನ್ ಬಾಬು ಆಸೆ ಪಟ್ಟಿದ್ದ. ಆದರೆ ಗೋಪಾಲ್ ಹಿರಿಯರ ಸಮ್ಮುಖದಲ್ಲಿ ಮದುವೆ ಆಗಿದ್ದ. ಮದುವೆ ಬಳಿಕ ಇಬ್ಬರ ನಡುವೆ ವೈಷಮ್ಯ ಮೂಡಿತ್ತು. ಜೊತೆಗೆ ವ್ಯವಹಾರದಲ್ಲೂ ಗೋಪಾಲ್ ಚೆನ್ನಾಗಿ ಬೆಳೆಯುವುದನ್ನು ಸಹಿಸದ ಮೋಹನ್ ಬಾಬು ಎರಡು ವರ್ಷದ ಹಿಂದೆ ಕಿಡ್ನ್ಯಾಪ್ ಮಾಡಿ ಹಲ್ಲೆ ನಡೆಸಿ ಬಿಟ್ಟು ಕಳುಹಿಸಿದ್ದ. ಅಲ್ಲದೆ ಪದೇ ಪದೇ ನನ್ನ ವ್ಯವಹಾರಗಳಿಗೆ ನೀನು ಕೈ ಹಾಕುತ್ತಿಯಾ ಎಂದು ಮೋಹನ್ ಬಾಬು ಕೊಲೆ ಬೆದರಿಕೆ ಹಾಕುತ್ತಿದ್ದರು ಗೋಪಾಲ್ ಮಾತ್ರ ಪತ್ನಿ ಬಳಿ ಹೇಳಿಕೊಂಡು ರಾಜಿ ಮಾಡಿಕೊಳ್ಳುವ ಬಗ್ಗೆ ಮಾತನಾಡಿದ್ದನಂತೆ. ಆದರೂ ಮೋಹನ್ ಬಾಬು ದ್ವೇಷವನ್ನ ಬಿಡದೆ ಕಳೆದ ಭಾನುವಾರ 25 ಲಕ್ಷ ರೂ ಸುಪಾರಿ ನೀಡಿ ಗೋಪಾಲ್ನನ್ನು ಕಿಡ್ನ್ಯಾಪ್ ಮಾಡಿಸಿ ಕೊಲೆ ಮಾಡಿಸಿದ್ದಾಗಿ ಆರೋಪಿ ಮೋಹನ್ ಬಾಬು ತಪ್ಪೊಪ್ಪಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು, ಮಾರ್ಚ್ 11: ಎಲ್‌ಪಿಜಿ ಸಿಲಿಂಡರ್‌ಗಳ ಅಭಾವ ಕರ್ನಾಟಕದಲ್ಲಿ ಮತ್ತಷ್ಟು ಉಲ್ಬಣಿಸಿದ್ದು, ಬೆಂಗಳೂರಿನ ಕೆಲ ಪೇಯಿಂಗ್ ಗೆಸ್ಟ್‌ಗಳಲ್ಲಿ (ಪಿಜಿ) ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಕೊರತೆಯಿಂದಾಗಿ ಮಧ್ಯಾಹ್ನದ ಊಟದ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಗ್ಯಾಸ್ ಸಿಲಿಂಡರ್ ಸಮಸ್ಯೆ ಬಗೆಹರಿಯುವವರೆಗೂ ಊಟ ನೀಡದಿರಲು ನಿರ್ಧರಿಸಲಾಗಿದೆ ಎಂದು ಪಿಜಿ ಮಾಲೀಕರು ಘೋಷಿಸಿದ್ದು, ಎಲೆಕ್ಟ್ರಿಕ್ ಸ್ಟವ್ ಅಥವಾ ಸೌದೆ ಬಳಕೆಯಂತಹ ಪರ್ಯಾಯ ವ್ಯವಸ್ಥೆಗಳನ್ನು ರಾತ್ರೋರಾತ್ರಿ ಜಾರಿಗೊಳಿಸುವುದು ಸಾಧ್ಯವಿಲ್ಲ ಎಂದು ಅಲವತ್ತುಕೊಂಡಿದ್ದಾರೆ.
ಇನ್ನು ಗ್ಯಾಸ್ ಹೆಚ್ಚು ಬಳಕೆಯಾಗುವ ಆಹಾರಕ್ಕೆ ಬ್ರೇಕ್ ಹಾಕಿ ಬೆಂಗಳೂರಿನ ಪಿಜಿಗಳ ಊಟದ ಮೆನು ಬದಲಾವಣೆಗೆ ಪಿಜಿ ಮಾಲೀಕರ ಸಂಘ ನಿರ್ಧರಿಸಿದೆ. ಚಪಾತಿ ಹಾಗೂ ದೋಸೆಗಳ ಬದಲು ರೈಸ್ ಐಟಂಗಳತ್ತ ಹೆಚ್ಚು ಒಲವು ತೋರಿ. ತರಕಾರಿ, ಕಾಳುಗಳನ್ನು ವಿತರಿಸಿ ಎಂದು ಎಲ್ಲಾ ಪಿಜಿ ಮಾಲೀಕರಿಗೂ ಅಸೋಷಿಯೇಷನ್ನಿಂದ ಸೂಚನೆ ನೀಡಲಾಗಿದೆ.
ಹೆಚ್ಚಿನವರು ಉದ್ಯೋಗ ನಿಮಿತ್ತ ಅಥವಾ ವಿದ್ಯಾಭ್ಯಾಸಕ್ಕಾಗಿ ತಮ್ಮ ಮನೆಗಳಿಂದ ದೂರ ಉಳಿದು ಪಿಜಿಗಳನ್ನು ಆಶ್ರಯಿಸಿದ್ದಾರೆ. ಅವರು ಮಾಸಿಕ ಶುಲ್ಕವನ್ನು ಪಾವತಿಸಿದ್ದರೂ, ಸದ್ಯಕ್ಕೆ ಊಟದ ವ್ಯವಸ್ಥೆ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಹೋಟೆಲ್‌ಗಳೂ ಸಹ ವಾಣಿಜ್ಯ ಸಿಲಿಂಡರ್ ಕೊರತೆಯನ್ನು ಎದುರಿಸುತ್ತಿರುವುದರಿಂದ, ಹೊರಗಡೆ ಊಟ ಸಿಗುವುದು ಕಷ್ಟಕರವಾಗಿದೆ. ಗೃಹಬಳಕೆಯ ಸಿಲಿಂಡರ್‌ಗಳ ಪೂರೈಕೆಗೆ ಕೇಂದ್ರದಿಂದ ಸೂಚನೆಗಳು ಬಂದಿದ್ದು, ಅವುಗಳು ತಕ್ಕಮಟ್ಟಿಗೆ ಲಭ್ಯವಿವೆ. ತಿಂಗಳಿಗೆ ಒಂದು ಸಿಲಿಂಡರ್ ದೊರೆಯುತ್ತಿರುವುದು ಮನೆಗಳಲ್ಲಿರುವವರಿಗೆ ಸ್ವಲ್ಪ ಸಮಾಧಾನಕರ ಸಂಗತಿ. ಆದರೆ, ವಾಣಿಜ್ಯ ಸಿಲಿಂಡರ್‌ಗಳ ಅಭಾವ ಮಾತ್ರ ಹೆಚ್ಚುತ್ತಲೇ ಇದೆ.
ಎಲ್‌ಪಿಜಿ ಸಿಲಿಂಡರ್ ತೀವ್ರ ಕೊರತೆ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ತಯಾರಿಕೆಯ ಮೇಲೂ ಗಂಭೀರ ಪರಿಣಾಮ ಬೀರಿದೆ. ಮಕ್ಕಳಿಗೆ ಆಹಾರ ತಯಾರಿಸಲು ತಿಂಗಳಿಗೆ ಹಲವು ಸಿಲಿಂಡರ್‌ಗಳು ಬೇಕಾಗುತ್ತವೆ. ಆದರೆ, ಕೊರತೆಯಿಂದ ಕಡಿಮೆ ಸಂಖ್ಯೆಯಲ್ಲಿ ಸಿಲಿಂಡರ್ ಪೂರೈಕೆಯಾಗಿರೋದು, ಅಡುಗೆ ಸಿಬ್ಬಂದಿ ಮತ್ತು ಶಿಕ್ಷಕರನ್ನು ಆತಂಕಕ್ಕೆ ತಳ್ಳಿದೆ. ಹಳೇ ಬಾಗಲಕೋಟೆಯ 3ನೇ ನಂಬರ್ ಸರ್ಕಾರಿ ಶಾಲೆಯಲ್ಲಿ ಸಿಲಿಂಡರ್ ಕೊರತೆಯಿಂದ ಅಡುಗೆ ತಯಾರಿಸಲು ಸಿಬ್ಬಂದಿಗಳಿಗೆ ಕಷ್ಟವಾಗಿದ್ದು, ಏಜೆನ್ಸಿಯವರು ಒಂದು ಸಿಲಿಂಡರ್‌ನಲ್ಲಿ ಅಡ್ಜಸ್ಟ್ ಮಾಡಿಕೊಳ್ಳಿ. ನಂತರ ಹೆಚ್ಚಿನ ಸಿಲಿಂಡರ್‌ಗಳು ಬಂದಾಗ ತಲುಪಿಸುತ್ತೇವೆ ಎಂದು ತಿಳಿಸಿದ್ದಾರೆ. ಒಂದು ಸಿಲಿಂಡರ್‌ನಲ್ಲಿ ದೊಡ್ಡ ಪ್ರಮಾಣದ ಅಡುಗೆ ತಯಾರಿಸುವುದು ಕಷ್ಟಕರ ಎಂದು ಸಿಬ್ಬಂದಿ ಹೇಳಿದ್ದು, ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲು ನಿರ್ಧರಿಸಲಾಗಿದೆ.
ಮಾರ್ಚ್ 15 ರಿಂದ ಮಾರ್ಚ್ 25ರವೆರಗೆ ಮೀನ ರಾಶಿಯಲ್ಲಿ ಶುಕ್ರ ಮತ್ತು ಸೂರ್ಯನ ಸಂಯೋಜನೆಯಿಂದ ಉಂಟಾಗುವ ಶುಕ್ರಾದಿತ್ಯ ಯೋಗವು ದ್ವಾದಶ ರಾಶಿಗಳ ಮೇಲೆ ವೈವಿಧ್ಯಮಯ ಪ್ರಭಾವವನ್ನು ಬೀರುತ್ತದೆ. ಸೂರ್ಯನು ಆತ್ಮಕಾರಕನಾದರೆ, ಶುಕ್ರನು ಸುಖ ಮತ್ತು ಸಂಪತ್ತಿನ ಕಾರಕ. ಮೀನ ರಾಶಿಯು ಶುಕ್ರನಿಗೆ ಉಚ್ಚ ಸ್ಥಾನವಾದರೆ, ಸೂರ್ಯನಿಗೆ ಇದು ಮಿತ್ರ ರಾಶಿಯಾಗಿದೆ. ಈ ಸಂಯೋಜನೆಯಿಂದ ವಿವಿಧ ರಾಶಿಗಳಿಗೆ ಲಭಿಸುವ ಫಲಗಳು ಈ ಕೆಳಗಿನಂತಿವೆ.
ಶುಭ ಫಲ ಪಡೆಯುವ ರಾಶಿಗಳು
ವೃಷಭ ರಾಶಿ:
ಈ ಯೋಗವು ನಿಮ್ಮ ಲಾಭ ಸ್ಥಾನದಲ್ಲಿ ನಡೆಯುವುದರಿಂದ ಆರ್ಥಿಕವಾಗಿ ಉತ್ತಮ ಲಾಭವಿರುತ್ತದೆ. ಬಾಕಿ ಉಳಿದಿರುವ ಹಣ ಕೈ ಸೇರಬಹುದು ಮತ್ತು ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ಲಭಿಸುವ ಸಾಧ್ಯತೆಯಿದೆ.
ಮಿಥುನ ರಾಶಿ:
ಉದ್ಯೋಗ ಕ್ಷೇತ್ರದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಹೊಸ ಜವಾಬ್ದಾರಿಗಳು ಅಥವಾ ಬಡ್ತಿ ದೊರೆಯುವ ಯೋಗವಿದೆ. ಸಾಮಾಜಿಕವಾಗಿ ಗೌರವ ಹೆಚ್ಚಾಗಲಿದೆ.
ಕರ್ಕಾಟಕ ರಾಶಿ :
ನಿಮ್ಮ ರಾಶಿಯಿಂದ ಭಾಗ್ಯಸ್ಥಾನದಲ್ಲಿ ಈ ಯೋಗವು ಸಂಭವಿಸುತ್ತಿದೆ. ಇದು ಅತ್ಯಂತ ಶುಭಕರವಾದ ಸ್ಥಾನವಾಗಿದೆ. ಅದೃಷ್ಟವು ನಿಮ್ಮ ಕೈಹಿಡಿಯಲಿದೆ. ಸ್ಥಗಿತಗೊಂಡಿದ್ದ ಕೆಲಸಗಳು ಪುನರಾರಂಭಗೊಳ್ಳುತ್ತವೆ. ಆಧ್ಯಾತ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ತೀರ್ಥಯಾತ್ರೆ ಅಥವಾ ದೂರದ ಪ್ರಯಾಣದ ಯೋಗವಿದೆ. ಸಮಾಜದಲ್ಲಿ ನಿಮ್ಮ ಗೌರವ ಪ್ರತಿಷ್ಠೆಗಳು ಹೆಚ್ಚಾಗುತ್ತವೆ. ತಂದೆಯ ಕಡೆಯಿಂದ ಆಸ್ತಿ ಅಥವಾ ಸಹಾಯ ದೊರೆಯುವ ಸಾಧ್ಯತೆಯಿದೆ. ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಈ ಸಮಯವು ಅತ್ಯಂತ ಅನುಕೂಲಕರವಾಗಿದೆ.
ಕನ್ಯಾ ರಾಶಿ:
ಸಪ್ತಮ ಸ್ಥಾನದಲ್ಲಿ ಈ ಯೋಗವು ದಾಂಪತ್ಯ ಜೀವನದಲ್ಲಿ ಮಧುರತೆಯನ್ನು ತರುತ್ತದೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭವಿರುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಬಹುದು.
ವೃಶ್ಚಿಕ ರಾಶಿ:
ಈ ರಾಶಿಯವರಿಗೆ ಈ ಸಮಯವು ಸೃಜನಶೀಲ ಕೆಲಸಗಳಿಗೆ ಪೂರಕವಾಗಿದೆ. ಹೂಡಿಕೆಯಿಂದ ಲಾಭವಾಗುವ ಸಾಧ್ಯತೆಯಿದ್ದು, ಮಕ್ಕಳ ಕಡೆಯಿಂದ ಶುಭ ವಾರ್ತೆ ಕೇಳುವಿರಿ.
ಮಕರ ರಾಶಿ:
ನಿಮ್ಮ ರಾಶಿಯಿಂದ ೩ನೇ ಮನೆಯಲ್ಲಿ ಈ ಯೋಗವು ನಡೆಯುತ್ತಿದೆ. ಇದು ನಿಮಗೆ ಧೈರ್ಯ ಮತ್ತು ಯಶಸ್ಸನ್ನು ನೀಡುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸೂಕ್ತ ಸಮಯ. ಒಡಹುಟ್ಟಿದವರೊಂದಿಗೆ ಸಂಬಂಧ ಸುಧಾರಿಸುತ್ತದೆ ಮತ್ತು ಅವರಿಂದ ಬೆಂಬಲ ಸಿಗುತ್ತದೆ. ಬರವಣಿಗೆ, ಮಾಧ್ಯಮ ಅಥವಾ ಮಾರ್ಕೆಟಿಂಗ್ ಕ್ಷೇತ್ರದಲ್ಲಿರುವವರಿಗೆ ಉತ್ತಮ ಲಾಭ ಮತ್ತು ಮನ್ನಣೆ ಸಿಗಲಿದೆ. ಕಿರು ಪ್ರಯಾಣಗಳು ಲಾಭದಾಯಕವಾಗಿರುತ್ತವೆ. ಹೊಸ ವ್ಯವಹಾರದ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಯಿದೆ.
ಮಿಶ್ರ ಫಲ ಪಡೆಯುವ ರಾಶಿಗಳು
ಮೇಷ ರಾಶಿ:
ವ್ಯಯ ಸ್ಥಾನದಲ್ಲಿ ಈ ಯೋಗವಿರುವುದರಿಂದ ಶುಭ ಕಾರ್ಯಗಳಿಗಾಗಿ ಖರ್ಚು ಹೆಚ್ಚಾಗಬಹುದು. ದೂರ ಪ್ರಯಾಣದ ಸಾಧ್ಯತೆಯಿದ್ದರೂ ಆರೋಗ್ಯದ ಕಡೆ ಗಮನವಿರಲಿ.
ಸಿಂಹ ರಾಶಿ:
ಎಂಟನೇ ಮನೆಯಲ್ಲಿ ಈ ಸಂಯೋಜನೆ ಇರುವುದರಿಂದ ಅನಿರೀಕ್ಷಿತ ಧನಲಾಭವಾಗಬಹುದು, ಆದರೆ ಕೆಲಸದಲ್ಲಿ ಅಡೆತಡೆಗಳು ಎದುರಾಗಬಹುದು. ಮಾತು ಮತ್ತು ಸಿಟ್ಟಿನ ಮೇಲೆ ನಿಯಂತ್ರಣವಿರಲಿ.
ತುಲಾ ರಾಶಿ:
ನಿಮ್ಮ ರಾಶ್ಯಾಧಿಪತಿಯಾದ ಶುಕ್ರನು ಸೂರ್ಯನೊಂದಿಗೆ ಸೇರಿ ೬ನೇ ಮನೆಯಲ್ಲಿ ಇರುತ್ತಾನೆ. ಇಲ್ಲಿ ಫಲಗಳು ಮಿಶ್ರವಾಗಿರುತ್ತವೆ. ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡುವುದು ಅವಶ್ಯಕ. ಸಣ್ಣಪುಟ್ಟ ಸೋಂಕುಗಳು ಕಾಡಬಹುದು. ನಿಮ್ಮ ವಿರೋಧಿಗಳ ಮೇಲೆ ನೀವು ಮೇಲುಗೈ ಸಾಧಿಸುವಿರಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದೆ. ಸಾಲ ನೀಡುವಾಗ ಅಥವಾ ತೆಗೆದುಕೊಳ್ಳುವಾಗ ಎಚ್ಚರಿಕೆ ಇರಲಿ. ಅನಗತ್ಯ ಖರ್ಚುಗಳು ಹೆಚ್ಚಾಗುವ ಸಂಭವವಿದೆ. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಬಹುದು, ತಾಳ್ಮೆಯಿಂದ ವರ್ತಿಸಿ.
ಧನು ರಾಶಿ:
ಸುಖ ಸ್ಥಾನದಲ್ಲಿ ಈ ಯೋಗವಿರುವುದರಿಂದ ಆಸ್ತಿ ಅಥವಾ ವಾಹನ ಖರೀದಿ ಮಾಡುವ ಆಲೋಚನೆ ಬರಬಹುದು. ಆದರೆ ಮನೆಯಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡದಂತೆ ಎಚ್ಚರ ವಹಿಸಿ.
ಕುಂಭ ರಾಶಿ:
ನಿಮ್ಮ ರಾಶಿಯಿಂದ ೨ನೇ ಮನೆಯಲ್ಲಿ ಈ ಯೋಗವು ಉಂಟಾಗುತ್ತಿದೆ. ಇದು ಆರ್ಥಿಕ ದೃಷ್ಟಿಯಿಂದ ಬಹಳ ಮುಖ್ಯ. ಹಣಕಾಸಿನ ಹರಿವು ಹೆಚ್ಚಾಗುತ್ತದೆ. ಹೂಡಿಕೆಗಳಿಂದ ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ನಿಮ್ಮ ಮಾತಿನ ಪ್ರಭಾವ ಹೆಚ್ಚಾಗುತ್ತದೆ. ಸಭೆ ಸಮಾರಂಭಗಳಲ್ಲಿ ನಿಮ್ಮ ಮಾತಿಗೆ ಮನ್ನಣೆ ಸಿಗಲಿದೆ. ಕುಟುಂಬದಲ್ಲಿ ಸುಖ-ಸಂತೋಷದ ವಾತಾವರಣವಿರುತ್ತದೆ. ಶುಭ ಕಾರ್ಯಗಳು ಜರುಗುವ ಸಾಧ್ಯತೆಯಿದೆ.
ಮೀನ ರಾಶಿ:
ಲಗ್ನದಲ್ಲೇ ಈ ಯೋಗವಿರುವುದರಿಂದ ನಿಮ್ಮ ವ್ಯಕ್ತಿತ್ವದಲ್ಲಿ ಆಕರ್ಷಣೆ ಹೆಚ್ಚುತ್ತದೆ. ಆದರೆ ಅತಿಯಾದ ಆತ್ಮವಿಶ್ವಾಸ ಅಥವಾ ಭಾವನಾತ್ಮಕ ನಿರ್ಧಾರಗಳು ಸಮಸ್ಯೆ ತರಬಹುದು.
ಬೆಂಗಳೂರು, ಮಾರ್ಚ್ 11: ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಣಾಮವಾಗಿ ಸಿಲಿಂಡರ್ ಪೂರೈಕೆ ವ್ಯತ್ಯಯದಿಂದಾಗಿ ರಾಜ್ಯದಲ್ಲಿ ಹೋಟೆಲ್ ಉದ್ಯಮಗಳು, ಜನ ಸಾಮಾನ್ಯರು ವಿಪರೀತ ಸಂಕಷ್ಟಕ್ಕೆ ಸಿಲುಕಿರುವ ವಿಚಾರ ವಿಧಾನಸಭೆಯಲ್ಲೂ ಪ್ರತಿಧ್ವನಿಸಿದೆ. ಶೂನ್ಯವೇಳೆಯಲ್ಲಿ ಸಿಲಿಂಡರ್ ಕೊರತೆ ಬಗ್ಗೆ ಚರ್ಚೆಗೆ ಸ್ಪೀಕರ್ ಅವಕಾಶ ನೀಡಿದ್ದು, ಆಡಳಿತ ಮತ್ತು ವಿಪಕ್ಷಗಳ ನಡುವೆ ದೊಡ್ಡ ಹೈಡ್ರಾಮಾವೇ ನಡೆದಿದೆ. ಮಾತಿಗೆ ಮಾತು ಬೆಳೆದ ಪರಿಣಾಮ ಸದನದ ರಣಾಂಗಣವಾಗಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರು ಪರಸ್ಪರ ದೂಷಿಸಿಕೊಂಡಿದ್ದಾರೆ. ಚರ್ಚೆ ಮಧ್ಯೆ ಪ್ರಧಾನಿ ಮೋದಿ ಅವರ ಹೆಸರು ಪ್ರಸ್ತಾಪವಾಗಿರೋದು ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿದೆ.
ಸಿಲಿಂಡರ್ ಕೊರತೆ ಬಗ್ಗೆ ವಿಧಾನಸಭೆಯಲ್ಲಿ ಕುಣಿಗಲ್ ಶಾಸಕ ಡಾ.ರಂಗನಾಥ್ ಪ್ರಸ್ತಾಪ ಮಾಡಿದ್ದು, ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ವೇಳೆ ಆಹಾರ ಸಚಿವರಿಂದ ಉತ್ತರ ಕೊಡಿಸೋಣ ಎಂದು ಸ್ಪೀಕರ್ ಹೇಳಿದ್ದಾರೆ. ಶಾಸಕರ ಪ್ರಸ್ತಾಪಕ್ಕೆ ಉತ್ತರಿಸಿದ ಆಹಾರ ಸಚಿವ ಮುನಿಯಪ್ಪ, ಇರಾನ್-ಇಸ್ರೇಲ್ ಯುದ್ಧದಿಂದ ಸಿಲಿಂಡರ್ ಪೂರೈಕೆ ಆಗ್ತಿಲ್ಲ. ಆದರೆ ಗೃಹ ಬಳಕೆಯ ಸಿಲಿಂಡರ್ಗಳಿಗೆ ಯಾವುದೇ ಸಮಸ್ಯೆ ಇಲ್ಲ. 25 ದಿನಕ್ಕೊಮ್ಮೆ ಗೃಹ ಬಳಕೆಯ ಸಿಲಿಂಡರ್ ಕೊಡುತ್ತೇವೆ. ಗ್ಯಾಸ್ ಸಿಲಿಂಡರ್ಗೆ ಹೆಚ್ಚು ಖರ್ಚು ಮಾಡಿ ಸ್ಟೋರೇಜ್ ಮಾಡುವುದು ಬೇಡ ಎಂದಿದ್ದಾರೆ. ಈ ವೇಳೆ ಮುನಿಯಪ್ಪ ಮಾತಿಗೆ ರಂಗನಾಥ್ ಮರು ಪ್ರಶ್ನೆ ಮಾಡಿದ್ದು, 2000 ರೂ. ಕೊಟ್ಟು ವಾಣಿಜ್ಯ ಸಿಲಿಂಡರ್ ಪಡೆಯುವುದು ಹೇಗೆ? ಮೋದಿ ಸರ್ಕಾರ ದುರ್ಬಳಕೆ ಮಾಡಿಕೊಳ್ತಿದೆ ಎಂದಿದ್ದಾರೆ. ಈ ವೇಳೆ ಪ್ರತಿಪಕ್ಷ ಸದಸ್ಯರು ಆಕ್ಷೇಪ ತೆಗೆದಿದ್ದು, ಸುಖಾ ಸುಮ್ಮನೆ ಆರೋಪ ಮಾಡಬೇಡಿ ಎಂದಿದ್ದಾರೆ. ಇತ್ತ ಬಿಜೆಪಿ ವಿರುದ್ಧ ಕಾಂಗ್ರೆಸ್ ಶಾಸಕರಿಂದಲೂ ಆಕ್ರೋಶ ವ್ಯಕ್ತವಾಗಿದ್ದು, ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಸಮಸ್ಯೆ ಸರಿಪಡಿಸುವುದು ಯಾರು? ಬಿಜೆಪಿಯವರು ಯಾಕೆ ಮಾತನಾಡಲ್ಲ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದ್ದಾರೆ. ಮೋದಿ ಅಂದರೆ ಇವರಿಗೆಷ್ಟು ಭಯ ಎಂದು ಗೋಪಾಲಕೃಷ್ಣ ಹೇಳಿದ್ದು ಮತ್ತಷ್ಟು ಮಾತಿನ ಚಕಮಕಿಗೆ ಕಾರಣವಾಗಿದೆ.
ಈ ವೇಳೆ ಮಧ್ಯಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ, ಮುನಿಯಪ್ಪ ತೈಲ ಕಂಪನಿಯವರ ಜೊತೆ ಮಾತನಾಡಿದ್ದಾರೆ. ಗ್ಯಾಸ್ ಪೂರೈಕೆ ಮಾಡುವುದು ಕೇಂದ್ರ ಸರ್ಕಾರ ಅಲ್ಲವೇ? ಅವರು ಉತ್ತರ ಹೇಳೋಕೆ ಅವಕಾಶ ಕೊಡಿ. ಕೇಂದ್ರ ಸಚಿವರು ಹೇಳಿದ್ದನ್ನು ಅವರು ಪ್ರಸ್ತಾಪ ಮಾಡಿದ್ರು. ನೀವು ಕೇಂದ್ರ ಸರ್ಕಾರ ಅಂದರೆ ಎದ್ದು ನಿಂತಿಕೊಳ್ಳುತ್ತೀರಾ ಎಂದು ಸಿಎಂ ಹೇಳಿದ್ದಾರೆ. ಇದು ಸಿಎಂ ಮತ್ತು ವಿಪಕ್ಷ ನಾಯಕರ ನಡುವೆ ವಾಗ್ವಾದಕ್ಕೆ ಕಾರಣವಾಗಿದ್ದು, ವಾಣಿಜ್ಯ ಬಳಕೆ ಸಿಲಿಂಡರ್ ಬರಲಿಲ್ಲ ಅಂದ್ರೆ ಚಳವಳಿ ಮಾಡ್ಬೇಕಾಗುತ್ತೆ ಎಂದು ಸಿಎಂ ಹೇಳಿರೋದಾಗಿ ಅಶೋಕ್ ಕಿಡಿ ಕಾರಿದ್ದಾರೆ. ಆದ್ರೆ ಚಳವಳಿ ಮಾಡಿ ಅಂತಾ ಪ್ರಚೋದನೆ ಮಾಡಿಲ್ಲ ಎಂದು ಈ ವೇಳೆ ಸಿಎಂ ಸ್ಪಷ್ಟಪಡಿಸಿದರೂ ಕೇಳದ ಅಶೋಕ್, ಚಳವಳಿ ಮಾಡಿ ಎಂದಿದ್ದೀರಿ ಅಂತಾ ಮಾಧ್ಯಮಗಳಲ್ಲಿ ಬಂದಿದೆ. ಸ್ಟ್ರೈಕ್ ಮಾಡೋಕೆ ಬೆಂಬಲ ಇದೆ ಎಂದಿದ್ದೀರಿ ಎಂದಿದ್ದಕ್ಕೆ ಸಿದ್ದರಾಮಯ್ಯ ಸಿಟ್ಟಾದ ಪ್ರಸಂಗಕ್ಕೂ ವಿಧಾನಸಭೆ ಸಾಕ್ಷಿಯಾಗಿದೆ.
ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಟಿ20 ಕ್ರಿಕೆಟ್ನಿಂದ 18 ತಿಂಗಳುಗಳ ಕಾಲ ಬ್ರೇಕ್ ತೆಗೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಮುಂಬರುವ ಏಕದಿನ ವಿಶ್ವಕಪ್ಗಾಗಿ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದು ಈ ಮೂಲಕ ತಮ್ಮ ಕೆಲಸದ ಹೊರೆಯನ್ನು ಸರಿದೂಗಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಭಾರತ ತಂಡದ ದ್ವಿಪಕ್ಷೀಯ ಟಿ20 ಸರಣಿಗಳಿಂದ ಹೊರಗುಳಿಯಲಿದ್ದಾರೆ.
ಏಕದಿನ ಮತ್ತು ಟೆಸ್ಟ್ ಗಮನ:
ಜಸ್ಪ್ರೀತ್ ಬುಮ್ರಾ 2024ರ ಟಿ20 ವಿಶ್ವಕಪ್ ಬಳಿಕ ಸತತ ಟಿ20 ಪಂದ್ಯಗಳನ್ನಾಡಿದ್ದಾರೆ. ಇದಕ್ಕೆ ಮುಖ್ಯ ಕಾರಣ 2026ರ ಟಿ20 ವಿಶ್ವಕಪ್. ಇದೀಗ ಈ ವಿಶ್ವಕಪ್ನಲ್ಲಿ ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅಲ್ಲದೆ ಟೀಮ್ ಇಂಡಿಯಾದ ಮುಂದಿನ ಗುರಿ 2027ರ ಏಕದಿನ ವಿಶ್ವಕಪ್.
ಸೌತ್ ಆಫ್ರಿಕಾ, ನಮೀಬಿಯಾ ಹಾಗೂ ಝಿಂಬಾಬ್ವೆ ಜಂಟಿಯಾಗಿ ಆಯೋಜಿಸಲಿರುವ 2027ರ ಏಕದಿನ ವಿಶ್ವಕಪ್‌ಗೆ ಸಿದ್ಧರಾಗಲು ಅವರು ಟೆಸ್ಟ್ ಮತ್ತು ಏಕದಿನ ಪಂದ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲು ಜಸ್ಪ್ರೀತ್ ಬುಮ್ರಾ ನಿರ್ಧರಿಸಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಕಣಕ್ಕೆ:
ಪ್ರಸ್ತುತ ಮಾಹಿತಿ ಪ್ರಕಾರ, ಜಸ್ಪ್ರೀತ್ ಬುಮ್ರಾ ಮುಂದಿನ 18 ತಿಂಗಳುಗಳ ಕಾಲ ಭಾರತದ ಪರ ದ್ವಿಪಕ್ಷೀಯ ಟಿ20 ಸರಣಿಗಳನ್ನು ಆಡುವುದಿಲ್ಲ. ಆದಾಗ್ಯೂ, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಆಡುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮುಂಬರುವ ಒಲಿಂಪಿಕ್ಸ್ ತಂಡದಲ್ಲಿ ಬುಮ್ರಾ ಅವರನ್ನು ಎದುರು ನೋಡಬಹುದು.
ನಿವೃತ್ತಿಯಿಲ್ಲ:
ಭಾರತ ಟಿ20 ತಂಡದಿಂದ 18 ತಿಂಗಳುಗಳ ಕಾಲ ಹೊರಗುಳಿದರೂ ಜಸ್ಪ್ರೀತ್ ಬುಮ್ರಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸುತ್ತಿಲ್ಲ. ಬದಲಿಗೆ ಕೇವಲ ತಮ್ಮ ಫಿಟ್‌ನೆಸ್ ಕಾಪಾಡಿಕೊಳ್ಳಲು ಈ ವಿರಾಮ ಪಡೆಯುತ್ತಿದ್ದಾರೆ ಎಂದು ಸ್ಪಷ್ಟಪಡಿಸಲಾಗಿದೆ.
ಐಪಿಎಲ್ ಕಥೆಯೇನು?
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಹೊರಗುಳಿದರೂ ಜಸ್ಪ್ರೀತ್ ಬುಮ್ರಾ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ಬುಮ್ರಾ ಈ ಬಾರಿಯ ಐಪಿಎಲ್ ಟೂರ್ನಿಯಲ್ಲೂ ಕಣಕ್ಕಿಳಿಯಲಿದ್ದಾರೆ.
ಅಂದರೆ ಬುಮ್ರಾ ಬ್ರೇಕ್ ತೆಗೆದುಕೊಳ್ಳುತ್ತಿರುವುದು ಭಾರತ ತಂಡದ ಟಿ20 ಸರಣಿಗಳಿಂದ ಮಾತ್ರ. ಅಲ್ಲದೆ 2027ರ ಏಕದಿನ ವಿಶ್ವಕಪ್ ಹಾಗೂ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಬಳಿಕ ಅವರು ಮತ್ತೆ ಭಾರತ ಟಿ20 ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹೈದರಾಬಾದ್, ಮಾರ್ಚ್ 11: ಕಾರು ಓಡಿಸುವಾಗ ವ್ಯಕ್ತಿಯೊಬ್ಬರಿಗೆ ಹಠಾತ್ ಹೃದಯಾಘಾತವಾಗಿದ್ದು, ಅಲ್ಲೇ ಇದ್ದ ಟ್ರಾಫಿಕ್ ಪೊಲೀಸ್ ಕೂಡಲೇ ಸಿಪಿಆರ್ ನೀಡಿ ಪ್ರಾಣ ಉಳಿಸಿರುವ ಘಟನೆ ಹೈದರಾಬಾದ್ನ ಸಿಕಂದರಾಬಾದಿನಲ್ಲಿ ನಡೆದಿದೆ. ಸಂಗೀತ್ ಕ್ರಾಸ್‌ರೋಡ್ಸ್‌ನಲ್ಲಿರುವ ಇಸ್ಕಾನ್ ದೇವಾಲಯದ ಬಳಿ, ವೃದ್ಧರೊಬ್ಬರಿಗೆ ಕಾರು ಚಾಲನೆ ಮಾಡುವಾಗ ಎದೆನೋವು ಕಾಣಿಸಿಕೊಂಡಿತ್ತು.ಇದರಿಂದಾಗಿ ಕಾರು ನಿಯಂತ್ರಣ ತಪ್ಪಿ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಸ್ಥಳದಲ್ಲಿದ್ದ ಸಂಚಾರಿ ಕಾನ್‌ಸ್ಟೆಬಲ್ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು, ತಕ್ಷಣವೇ ಕಾರಿನ ಬಾಗಿಲುಗಳನ್ನು ತೆರೆದು ಪ್ರಜ್ಞೆ ತಪ್ಪಿದ ವೃದ್ಧನನ್ನು ಆಸ್ಪತ್ರೆಗೆ ಸಾಗಿಸುವ ಮೊದಲು ಸಿಪಿಆರ್ ನೀಡುವ ಮೂಲಕ ಜೀವ ಉಳಿಸಿದ್ದಾರೆ.