ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧವೇ ತಿರುಗಿ ನಿಂತ ಆಸೀಸ್ ಆಟಗಾರರು! – Kannada News | Australia Cricket Turmoil: Stars Unhappy with New Contracts
ವಿಶ್ವ ಕ್ರಿಕೆಟ್‌ನ ಬಲಿಷ್ಠ ತಂಡಗಳಲ್ಲಿ ಒಂದಾದ ಆಸ್ಟ್ರೇಲಿಯಾ ತಂಡದಲ್ಲಿ ಈಗ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಮೈದಾನದಲ್ಲಿ ಎದುರಾಳಿಗಳನ್ನು ಮಣಿಸುವಲ್ಲಿ ಸಿದ್ಧಹಸ್ತರಿರುವ ಆಸೀಸ್ ತಾರೆಗಳು, ಇದೀಗ ತಮ್ಮದೇ ಕ್ರಿಕೆಟ್ ಮಂಡಳಿಯ ವಿರುದ್ಧ ಸಿಡಿದೆದ್ದಿದ್ದಾರೆ. ನಾಯಕ ಪ್ಯಾಟ್ ಕಮಿನ್ಸ್‌ಗೆ ನೀಡಲಾದ ಭಾರಿ ಮೊತ್ತದ ಒಪ್ಪಂದದ ಆಫರ್ ಮತ್ತು ಇತರ ಆಟಗಾರರ ನಡುವಿನ ವೇತನ ತಾರತಮ್ಯವು ಕ್ರಿಕೆಟ್ ಆಸ್ಟ್ರೇಲಿಯಾ (CA) ಮಂಡಳಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಸಂಘರ್ಷಕ್ಕೆ ಮುಖ್ಯ ಕಾರಣಗಳೇನು? ವೇತನ ತಾರತಮ್ಯ: ವರದಿಗಳ ಪ್ರಕಾರ, ನಾಯಕ ಪ್ಯಾಟ್ ಕಮಿನ್ಸ್‌ಗೆ…