Video: ಬಲೆ ಭಾರವಾಗ್ತಿದೆ ದೊಡ್ಡ ಮೀನಿರಬಹುದು ಎಂದು ಎಳೆದವರಿಗೆ ಸಿಕ್ಕಿದ್ದು ಹೆಬ್ಬಾವು

Video: ಬಲೆ ಭಾರವಾಗ್ತಿದೆ ದೊಡ್ಡ ಮೀನಿರಬಹುದು ಎಂದು ಎಳೆದವರಿಗೆ ಸಿಕ್ಕಿದ್ದು ಹೆಬ್ಬಾವು

ತೆಲಂಗಾಣ, ಮಾರ್ಚ್​ 10: ತೆಲಂಗಾಣದ ಭದ್ರಾದ್ರಿ ಕೊಥಗುಡೆಮ್ ಜಿಲ್ಲೆಯಲ್ಲಿ ಅಪರೂಪದ ಘಟನೆ ನಡೆದಿದೆ. ತೇಕುಲಪಲ್ಲಿ ಮಂಡಲದ ರೋಲ್ಲಪಾಡು ಗ್ರಾಮದ ಕೊಳದಲ್ಲಿ ಮೀನುಗಾರಿಕೆಗೆ ಇಟ್ಟಿದ್ದ ಬಲೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವೊಂದು ಸಿಲುಕಿ ಸಾವನ್ನಪ್ಪಿದೆ.ಪ್ರತಿದಿನದಂತೆ, ಸ್ಥಳೀಯ ಮೀನುಗಾರರು ಮೀನು ಹಿಡಿಯಲು ಕೊಳದಲ್ಲಿ ಬಲೆ ಬೀಸಿದ್ದರು. ಮರುದಿನ ಬೆಳಿಗ್ಗೆ, ಕೊಳಕ್ಕೆ ಹೋಗಿ ಬಲೆ ಎಳೆಯುತ್ತಿದ್ದಾಗ, ಒಂದು ದೊಡ್ಡ ಭಾರವಾದ ವಸ್ತು ಸಿಕ್ಕಿಹಾಕಿಕೊಂಡಿದೆ ಎಂದು ಭಾವಿಸಿದ್ದರು. ಇದು ಮೀನುಗಾರರನ್ನು ಆಶ್ಚರ್ಯಗೊಳಿಸಿತು. ಏನಾಯಿತು ಎಂದು ನೋಡಲು ಅವರು ಬಲೆಯನ್ನು ದಡಕ್ಕೆ ಎಳೆದಾಗ, ಸುಮಾರು 12 ಅಡಿ ಉದ್ದ ಮತ್ತು ಸುಮಾರು 50 ಕೆಜಿ ತೂಕದ ಹೆಬ್ಬಾವು ಅದರಲ್ಲಿ ಸಿಲುಕಿಕೊಂಡಿರುವುದು ಕಂಡುಬಂದಿದೆ.

ಆದರೆ, ಹೆಬ್ಬಾವು ಈಗಾಗಲೇ ಸತ್ತಿದ್ದರಿಂದ, ಮೀನುಗಾರರು ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ತಲುಪಿದ ಅರಣ್ಯ ಅಧಿಕಾರಿಗಳು ಅದರ ಸಾವಿನ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಹೆಬ್ಬಾವು ಕೊಳದಲ್ಲಿ ಮೀನು ತಿನ್ನುವಾಗ ಬಲೆಗೆ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ಗ್ರಾಮಸ್ಥರು ಹೇಳಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

IDBI Bank Recruitment: ಪದವೀಧರರಿಗೆ ಸುವರ್ಣಾವಕಾಶ; IDBI ಬ್ಯಾಂಕ್‌ನಲ್ಲಿ ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ನೇಮಕಾತಿ

ಬೆಂಗಳೂರು: ಭಾರತೀಯ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ (IDBI) ದೇಶಾದ್ಯಂತ ಇರುವ ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ 1300 ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ (ಗ್ರೇಡ್ ‘O’) ಮತ್ತು ಅಸಿಸ್ಟೆಂಟ್ ಮ್ಯಾನೇಜರ್ (ಗ್ರೇಡ್ ‘A’) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಪೈಕಿ 1100 ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಹಾಗೂ 200 ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳು ಖಾಲಿ ಇವೆ. ದೇಶದ ಪ್ರಮುಖ ನಗರಗಳಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ 75 ಹುದ್ದೆಗಳು ಲಭ್ಯವಿವೆ.  ಆಸಕ್ತ ಅಭ್ಯರ್ಥಿಗಳು ಮಾರ್ಚ್ 19 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸತಕ್ಕದ್ದು.

ಆಯ್ಕೆ ಪ್ರಕ್ರಿಯೆಯು ಆನ್‌ಲೈನ್ ಲಿಖಿತ ಪರೀಕ್ಷೆ, ವೈಯಕ್ತಿಕ ಸಂದರ್ಶನ ಮತ್ತು ದಾಖಲೆಗಳ ಪರಿಶೀಲನೆಯನ್ನು ಒಳಗೊಂಡಿರುತ್ತದೆ. ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಕನಿಷ್ಠ ಶೇ. 60 ಅಂಕಗಳೊಂದಿಗೆ (SC/ST/ದಿವ್ಯಾಂಗರಿಗೆ 55%) ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಇನ್ನು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಪದವಿಯೊಂದಿಗೆ ಬ್ಯಾಂಕಿಂಗ್ ವಲಯದಲ್ಲಿ ಕನಿಷ್ಠ ಎರಡು ವರ್ಷಗಳ ಕೆಲಸದ ಅನುಭವ ಕಡ್ಡಾಯವಾಗಿದೆ.

ಇದನ್ನೂ ಓದಿ: ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವವರಿಗೆ ಸುವರ್ಣಾವಕಾಶ: 10th ಪಾಸಾಗಿದ್ರೆ ಸಾಕು!

ಮಾರ್ಚ್ 1, 2026 ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳು 20 ರಿಂದ 25 ವರ್ಷ ವಯಸ್ಸಿನವರಾಗಿರಬೇಕು (ಮೀಸಲಾತಿ ಅನ್ವಯ ವಯೋಮಿತಿ ಸಡಿಲಿಕೆ ಇದೆ). ಆಯ್ಕೆಯಾದವರಿಗೆ ವಾರ್ಷಿಕ ರೂ. 6.14 ಲಕ್ಷದಿಂದ ರೂ. 6.50 ಲಕ್ಷದವರೆಗೆ ವೇತನ ಸಿಗಲಿದೆ. ಸಾಮಾನ್ಯ ಅಭ್ಯರ್ಥಿಗಳಿಗೆ ರೂ. 1050 ಮತ್ತು ಮೀಸಲು ಅಭ್ಯರ್ಥಿಗಳಿಗೆ ರೂ. 250 ಅರ್ಜಿ ಶುಲ್ಕ ನಿಗದಿಪಡಿಸಲಾಗಿದ್ದು, ಏಪ್ರಿಲ್ 12 ರಂದು ಆನ್‌ಲೈನ್ ಪರೀಕ್ಷೆಗಳು ನಡೆಯಲಿವೆ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಕೆಲಸ ಮಾಡಲು ಅವಕಾಶವಿದ್ದು, ಉದ್ಯೋಗಾಕಾಂಕ್ಷಿಗಳು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.

ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ತಿಳಿಯಲು ಈ ಲಿಂಕ್​ ಕ್ಲಿಕ್​ ಮಾಡಿ: (Advertisement-Grade-O-2-year-exp-March072026)

ಅಧಿಕೃತ ವೆಬ್​ಸೈಟ್​​ ಲಿಂಕ್​ ಇಲ್ಲಿದೆ: idbi-bank-careers-current-openings.aspx

 

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಿಎಂ ಕಿಸಾನ್ ಯೋಜನೆ; ಮಾ. 13ಕ್ಕೆ ಸಿಗುತ್ತಾ 22ನೇ ಕಂತಿನ ಹಣ? ಇಲ್ಲಿದೆ ಈ ಸ್ಕೀಮ್​ನ ವಿವರ

ನವದೆಹಲಿ, ಮಾರ್ಚ್ 10: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ (PM Kisan scheme) 9-10 ಕೋಟಿ ರೈತರು ಸರ್ಕಾರದಿಂದ ವರ್ಷಕ್ಕೆ 6,000 ರೂ ಸಹಾಯಧನ ಪಡೆಯುತ್ತಿದ್ದಾರೆ. ವರ್ಷಕ್ಕೆ ಮೂರು ಕಂತುಗಳಲ್ಲಿ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಾಕಲಾಗುತ್ತದೆ. 2018-19ರಲ್ಲಿ ಆರಂಭವಾದ ಪಿಎಂ ಕಿಸಾನ್ ಯೋಜನೆಯಲ್ಲಿ ಈವರೆಗೂ 21 ಕಂತುಗಳನ್ನು ರೈತರಿಗೆ ನೀಡಲಾಗಿದೆ. ಈಗ 22ನೇ ಕಂತಿನ ನಿರೀಕ್ಷೆಯಲ್ಲಿ ರೈತರಿದ್ದಾರೆ.

ಕೆಲ ವರದಿಗಳ ಪ್ರಕಾರ ಹೋಳಿ ಹಬ್ಬಕ್ಕೆ (ಮಾ. 4) ಮುನ್ನವೇ ರೈತರ ಖಾತೆಗಳಿಗೆ ಒಂದು ಕಂತಿನ ಹಣವಾದ 2,000 ರೂ ಹಾಕುವ ನಿರೀಕ್ಷೆ ಇತ್ತು. ಆದರೆ, ಬಿಡುಗಡೆಯಾಗಿಲ್ಲ. ಕೆಲ ವರದಿಗಳು ಯುಗಾದಿ ಹಬ್ಬದ ಒಳಗೆ ಹಣ ಬಿಡುಗಡೆಯಾಗಬಹುದು ಎನ್ನುತ್ತಿವೆ. ಮತ್ತೂ ಕೆಲ ವರದಿಗಳು ಈ ವಾರವೇ ಕಂತಿನ ಹಣ ಸಿಗಬಹುದು ಎನ್ನುತ್ತಿವೆ.

ಮಾರ್ಚ್ 13, ಶುಕ್ರವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಮ್ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಆಗಲೇ ಅವರು ಪಿಎಂ ಕಿಸಾನ್ 22ನೇ ಕಂತಿನ ಬಿಡುಗಡೆ ಪ್ರಕಟಿಸುವ ನಿರೀಕ್ಷೆ ಇದೆ.

ಇದನ್ನೂ ಓದಿ: ವಾಹನ ಸವಾರರಿಗೆ ಗುಡ್​​ ನ್ಯೂಸ್​​ ನೀಡಿದ ಕೇಂದ್ರ: ಪೆಟ್ರೋಲ್, ಡೀಸೆಲ್ ದರ ಏರಿಕೆ ಬಗ್ಗೆ ಆತಂಕ ಬೇಡ

ಪಿಎಂ ಕಿಸಾನ್ ಯೋಜನೆಗೆ ಯಾರು ಅರ್ಹರು?

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ವರ್ಷಕ್ಕೆ 6,000 ರೂ ಅನ್ನು ಸರ್ಕಾರ ಸಹಾಯಧನವಾಗಿ ನೀಡುತ್ತದೆ. ವರ್ಷದಲ್ಲಿ ಮೂರು ಕಂತುಗಳಲ್ಲಿ ಈ ಹಣವನ್ನು ಬ್ಯಾಂಕ್ ಖಾತೆಗೆ ನೇರವಾಗಿ ಹಾಕಲಾಗುತ್ತದೆ. ಪ್ರತೀ ಕಂತಿನಲ್ಲಿ 2,000 ರೂ ಸಿಗುತ್ತದೆ.

ಈ ಯೋಜನೆಗೆ ನೊಂದಾಯಿಸುವವರು ರೈತರಾಗಿರಬೇಕು, ಕೃಷಿ ಜಮೀನು ಹೊಂದಿರಬೇಕು. ಗ್ರಾಮದ ಸಮೀಪ ಇರುವ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಜಮೀನಿನ ಪಹಣಿ ದಾಖಲೆ, ಆಧಾರ್, ಬ್ಯಾಂಕ್ ಅಕೌಂಟ್ ದಾಖಲೆಗಳನ್ನು ಕೊಟ್ಟು ಯೋಜನೆಗೆ ನೊಂದಾಯಿಸಬಹುದು. ಆನ್​ಲೈನ್​ನಲ್ಲಿ ಪಿಎಂ ಕಿಸಾನ್ ವೆಬ್​ಸೈಟ್​ಗೆ ಹೋಗಿ ಅಲ್ಲಿಯೂ ನೊಂದಾಯಿಸಬಹುದು. ಬ್ಯಾಂಕ್ ಖಾತೆಯು ಆಧಾರ್​ಗೆ ಜೋಡಿತವಾಗಿರಬೇಕು.

ಈ ರೈತರು ಯೋಜನೆಗೆ ಅರ್ಹರಿರುವುದಿಲ್ಲ…

ಕೃಷಿ ಭೂಮಿ ಹೊಂದಿದ್ದರೂ ಕೆಲ ರೈತರು ಈ ಯೋಜನೆಗೆ ಅರ್ಹರಿರುವುದಿಲ್ಲ. ಆದಾಯ ತೆರಿಗೆ ಪಾವತಿಸುತ್ತಿರುವವರು, ಅಥವಾ ಕುಟುಂಬದ ಬೇರೊಬ್ಬ ಸದಸ್ಯರು ಆದಾಯ ತೆರಿಗೆ ಪಾವತಿದಾರರಾಗಿದ್ದಾಗ್ಯೂ ಯೋಜನೆಗೆ ಅರ್ಹರಾಗಿರುವುದಿಲ್ಲ.

ಇದನ್ನೂ ಓದಿ: ಎಲ್‌ಪಿಜಿ ಗ್ರಾಹಕರಿಗೆ ಕೇಂದ್ರದಿಂದ ಹೊಸ ಮಾರ್ಗಸೂಚಿ: ಸಿಲಿಂಡರ್ ಬುಕಿಂಗ್​​​ನಲ್ಲಿ ಮಹತ್ವದ ಬದಲಾವಣೆ

ಹಾಗೆಯೇ, ಕುಟುಂಬದಲ್ಲಿ ಯಾರಾದರೂ ಸದಸ್ಯರು ಶಾಸಕ, ಸಂಸದ, ಜಿಪಂ ಸದಸ್ಯ ಇತ್ಯಾದಿ ಆಗಿರಕೂಡದು. ವೈದ್ಯ, ವಕೀಲ, ಎಂಜಿನಿಯರ್ ಇತ್ಯಾದಿ ವೃತ್ತಿಪರರಾಗಿರಕೂಡದು. ಸರ್ಕಾರಿ ನೌಕರರು ಆಗಿರಕೂಡದು. ತಿಂಗಳಿಗೆ 10,000 ರೂಗಿಂತ ಹೆಚ್ಚು ಸರ್ಕಾರಿ ಪಿಂಚಣಿ ಪಡೆಯುವವರು ಇರಕೂಡದು.

ಗಮನಿಸಬೇಕಾದ ಇನ್ನೂ ಕೆಲ ಸಂಗತಿಗಳೆಂದರೆ, ಒಂದೇ ಕುಟುಂಬದ ಇಬ್ಬರು ಸದಸ್ಯರು ಯೋಜನೆಯ ಫಲ ಪಡೆಯುವಂತಿಲ್ಲ. ಕುಟುಂಬದಲ್ಲಿ ಒಬ್ಬರಿಗೆ ಮಾತ್ರವೇ ಇದು ಸಿಗುವುದು. ಮತ್ತೊಂದು ಸಂಗತಿ ಎಂದರೆ, 2019ರ ನಂತರ ಅಪ್ಪ ಬದುಕಿರುವಾಗಲೇ ಅವರ ಜಮೀನನ್ನು ತಮ್ಮ ಹೆಸರಿಗೆ ಮಗ ಬರೆಸಿಕೊಂಡಿದ್ದರೆ ಆಗಲೂ ಪಿಎಂ ಕಿಸಾನ್ ಯೋಜನೆಗೆ ಅರ್ಹರಾಗಿರುವುದಿಲ್ಲ.

ಹೆಚ್ಚಿನ ವಿವರಗಳಿಗೆ ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ: pmkisan.gov.in/

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ಪ್ರಶ್ನೆಗೆ ಉತ್ತರ ಹೇಳಂದ್ರೆ ಹೊಟ್ಟೆ ನೋವೆಂದು ಕುಂಟು ನೆಪ ಹೇಳಿದ ಪುಟಾಣಿ, ಮುಂದೇನಾಯ್ತು ನೋಡಿ

ಈಗಿನ ಕಾಲದ ಮಕ್ಕಳು (children) ದೊಡ್ಡವರನ್ನು ಕೂಡ ಯಾಮಾರಿಸಿ ಬಿಡುತ್ತಾರೆ. ಶಾಲೆಗೆ ಹೋಗೋದು, ಹೋಮ್ ವರ್ಕ್ (home work) ಮಾಡುವ ವಿಷ್ಯದಲ್ಲಿ ನೆಪ ಹೇಳಿ ತಪ್ಪಿಸಿಕೊಳ್ತಾರೆ. ಇದಕ್ಕೆ ಉದಾಹರಣೆಯಂತಿದೆ ಈ ವಿಡಿಯೋ. ಶಾಲೆಯಲ್ಲಿ ಟೀಚರ್ ಜನವರಿ ಫೆಬ್ರವರಿ ಹೇಳು ಎನ್ನುತ್ತಿದ್ದಂತೆ ಪುಟ್ಟ ಹುಡುಗಿಯೂ ಹೊಟ್ಟೆ ನೋವಾಗ್ತಿದೆ ಎಂದು ಹೇಳಿ ನೆಪ ಹೇಳಿದ್ದು, ಈ ವಿಡಿಯೋ ಸದ್ಯ ವೈರಲ್ ಆಗಿದೆ. ಈ ಪುಟಾಣಿಯ ನಟನೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.

Royal Ranga ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಪುಟ್ಟ ಹುಡುಗಿ ಹಾಗೂ ಶಿಕ್ಷಕಿಯ ನಡುವಿನ ಸಂಭಾಷಣೆಯನ್ನು ಕಾಣಬಹುದು. ಈ ವಿಡಿಯೋದಲ್ಲಿ ಶಿಕ್ಷಕಿಯೂ, ಪುಟ್ಟ ಹುಡುಗಿಗೆ ಜನವರಿ, ಫೆಬ್ರವರಿ ಸೇರಿದಂತೆ ಹನ್ನೆರಡು ತಿಂಗಳ ಹೆಸರನ್ನು ಹೇಳು ಎನ್ನುವುದನ್ನು ನೋಡಬಹುದು. ಆದರೆ ಈ ಪುಟಾಣಿಯೂ ಹೊಟ್ಟೆ ನೋವಾಗ್ತಾ ಇದೆ ಎನ್ನುತ್ತಾ ಮುಖ ಸಣ್ಣ ಮಾಡಿದೆ. ಶಿಕ್ಷಕಿಯೂ ನಾನು  ಪ್ರಶ್ನೆ ಕೇಳಿದ್ದಕ್ಕೆ ಹೊಟ್ಟೆ ನೋವಾಗ್ತಾ ಇದೆಯೇ ಎಂದು ಕೇಳುತ್ತಿದ್ದಂತೆ ಪುಟಾಣಿಯೂ ಹೌದು ಎಂದು ತಲೆ ಅಲ್ಲಾಡಿಸಿದೆ. ಆ ಬಳಿಕ ಅಲ್ಲೇ ಇದ್ದವರ ಬಳಿ ಇವಳಿಗೆ ಒಂದು ಮಾತ್ರೆ ಕೊಡಿ ಎಂದಿದ್ದಾರೆ. ಈ ಪುಟ್ಟ ಬಾಲಕಿಯೂ ಜನವರಿ, ಫೆಬ್ರವರಿ ಹೇಳಲು ಶುರು ಮಾಡಿದೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಬಿಳಿ ಮಹಿಳೆಯನ್ನು ಕಂಡೊಡನೆ ಅಳುತ್ತಾ ಓಡಲು ಶುರು ಮಾಡಿದ ಆಫ್ರಿಕನ್ ಪುಟಾಣಿಗಳು

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಒಬ್ಬ ಬಳಕೆದಾರ ಕಳ್ಳಿ ಇವಳು ಎಂದರೆ, ಮತ್ತೊಬ್ಬರು ಮುಗ್ಧ ಮನಸ್ಸು ಎಂದಿದ್ದಾರೆ. ಇನ್ನೊಬ್ಬರು, ಈಗಿನ ಪುಟಾಣಿಗಳು ನಾಟಕ ಮಾಡೋದ್ರಲ್ಲಿ ಜಾಣರು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Video: ಆಟಿಕೆಯ ರೀತಿ ಹಾವಿನ ಜತೆ ಆಟವಾಡಿದ ಪೋರ

ದೊಡ್ಡವರೇ ಹಾವನ್ನು ನೋಡಿ ಭಯಪಡುತ್ತಾರೆ. ಆದರೆ ಪುಟ್ಟ ಬಾಲಕ ಆಟಿಕೆಯಂತೆ ಅದರೊಂದಿಗೆ ಆಟವಾಡಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿರುವ ಮಗು ತನ್ನ ಬರಿ ಕೈಗಳಿಂದಲೇ ಹಾವನ್ನು ಹಿಡಿಯುತ್ತದೆ, ಆದರೆ ಯಾವುದೇ ಭಯ ಇಲ್ಲ, ದೊಡ್ಡವರೂ ಅಕ್ಕಪಕ್ಕ ಇಲ್ಲ. ಕೆಲವರು ಮಗುವಿನ ಧೈರ್ಯವನ್ನು ಹೊಗಳುತ್ತಿದ್ದರೆ, ಇನ್ನೊಂದೆಡೆ ನೆಟ್ಟಿಗೆರು ಅದು ಅಪಾಯಕಾರಿ ಎಂದು ತಿಳಿದಿದ್ದರೂ ಹಾವಿನ ಪಕ್ಕ ಮಗುವನ್ನು ಬಿಟ್ಟ ಪೋಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಹಾವುಗಳು ಹೆಚ್ಚಿನ ಜನರು ದೂರವಿರಲು ಇಷ್ಟಪಡುವ ಜೀವಿ. ಅನೇಕ ಪ್ರಭೇದಗಳು ವಿಷಕಾರಿಯಾಗಿರುತ್ತವೆ, ಆದ್ದರಿಂದ ತಜ್ಞರು ಸರಿಯಾದ ಜ್ಞಾನ ಮತ್ತು ರಕ್ಷಣೆಯಿಲ್ಲದೆ ಹಾವಿನ ಬಳಿಗೆ ಹೋಗದಂತೆ ಸಲಹೆ ನೀಡುತ್ತಾರೆ. ಆದಾಗ್ಯೂ, ಈ ವೀಡಿಯೊದಲ್ಲಿ, ಮಗು ಹಾವಿನ ಪಕ್ಕದಲ್ಲಿ ತುಂಬಾ ಸುಲಭವಾಗಿ ಹಾವಿನ ಎದುರು ಕುಳಿತುಕೊಳ್ಳುತ್ತದೆ. ನಿಧಾನವಾಗಿ ಅದರೊಂದಿಗೆ ಆಟವಾಡಲು ಪ್ರಾರಂಭಿಸುತ್ತಾನೆ, ಮತ್ತು ನಂತರ ಇದ್ದಕ್ಕಿದ್ದಂತೆ, ತನ್ನ ಕೈಯಿಂದ ಹಾವಿನ ಮುಖವನ್ನು ಮುಟ್ಟಿ ಅದನ್ನು ಕೈಯಲ್ಲಿ ಹಿಡಿದುಕೊಳ್ಳುತ್ತಾನೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಜಕ್ಕೂರು ವಿಲ್ಲಾ ಗ್ಯಾಂಗ್ ರೇಪ್ ಕೇಸ್: ಪೊಲೀಸ್ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

ಬೆಂಗಳೂರು, ಮಾರ್ಚ್​ 10: ಜಕ್ಕೂರು ವಿಲ್ಲಾದಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಅಮೃತಹಳ್ಳಿ ಪೊಲೀಸರು ಹಲವು ಸ್ಫೋಟಕ ಮಾಹಿತಿಗಳನ್ನು ಬಯಲು ಮಾಡಿದ್ದಾರೆ. ಆರೋಪಿಗಳಾದ ಡಿಕ್ಸನ್ ಮತ್ತು ನಿಖಿಲ್ ಕಾಲೇಜು ಯುವತಿಯರನ್ನೇ ತಮ್ಮ ಗುರಿಯಾಗಿಸಿಕೊಂಡಿದ್ದರು. ಐಷಾರಾಮಿ ಹೋಟೆಲ್‌ಗಳಲ್ಲಿ ಸಭೆ ನಡೆಸಿ, ಯುವತಿಯರನ್ನು ಬಲೆಗೆ ಬೀಳಿಸಲು ಸಂಚು ರೂಪಿಸಿದ್ದರು. ಯುವತಿಯರನ್ನು ವಿಲ್ಲಾಗೆ ಕರೆತಂದು ಡ್ರಗ್ಸ್ ಪಾರ್ಟಿ ಆಯೋಜಿಸುತ್ತಿದ್ದರು. ಗೋವಾದಿಂದ ಎಕ್ಸ್‌ಟೆಸಿ ಮಾತ್ರೆಗಳನ್ನು ತರಿಸಿಕೊಂಡು, ಅವುಗಳನ್ನು ಯುವತಿಯರಿಗೆ ನೀಡಿ ಮತ್ತು ಬರುವಂತೆ ಮಾಡುತ್ತಿದ್ದರು. ಅರೆ ಪ್ರಜ್ಞಾ ಸ್ಥಿತಿಯಲ್ಲಿದ್ದ ಯುವತಿಯರ ಮೇಲೆ ಈ ಗ್ಯಾಂಗ್ ಅತ್ಯಾಚಾರ ಎಸಗುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ನಿಖಿಲ್ ಈ ಗ್ಯಾಂಗ್‌ನ ಮಾಸ್ಟರ್ ಮೈಂಡ್ ಆಗಿದ್ದು, ಈ ಜಾಲದ ಹಿಂದೆ ಇನ್ನಷ್ಟು ವ್ಯಕ್ತಿಗಳಿರುವ ಶಂಕೆ ವ್ಯಕ್ತವಾಗಿದೆ. ಡ್ರಗ್ಸ್ ಪೂರೈಕೆದಾರರ ಪತ್ತೆಗಾಗಿ ಪೊಲೀಸರ ತಂಡ ಗೋವಾಕ್ಕೆ ತೆರಳಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಬ್ಬಾ ಇಷ್ಟೊಂದಾ! ಟೀಮ್ ಇಂಡಿಯಾಗೆ ಬಹುಮಾನ ಘೋಷಣೆ

ಟಿ20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾಗೆ ಬಿಸಿಸಿಐ ಬರೋಬ್ಬರಿ 131 ಕೋಟಿ ರೂ. ನಗದು ಬಹುಮಾನ ಘೋಷಿಸಿದೆ. ಈ ಬಹುಮಾನ ಮೊತ್ತವನ್ನು ಭಾರತ ತಂಡದ ಆಟಗಾರರಿಗೆ ಮತ್ತು ಸಿಬ್ಬಂದಿ ವರ್ಗಗಳಿಗೆ ಹಂಚಲಾಗುವುದು ಎಂದು ಬಿಸಿಸಿಐ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

2024ರ ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ 125 ಕೋಟಿ ರೂ. ಬಹುಮಾನ ಮೊತ್ತ ನೀಡಲಾಗಿತ್ತು. ಈ ಬಾರಿ 6 ಕೋಟಿ ರೂ. ಹೆಚ್ಚಿಸಲಾಗಿದೆ. ಅದರಂತೆ ಟೀಮ್ ಇಂಡಿಯಾ ಬರೋಬ್ಬರಿ 131 ಕೋಟಿ ರೂ.ಗಳ ನಗದು ಬಹುಮಾನ ಪಡೆಯಲಿದ್ದಾರೆ.

ಇತ್ತ ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಐಸಿಸಿ ಕಡೆಯಿಂದ ಸಿಕ್ಕಿರುವುದು 27.60 ಕೋಟಿ ರೂ. ಮಾತ್ರ. ಇದೀಗ ಚಾಂಪಿಯನ್ ಪಟ್ಟ ಅಲಂಕರಿಸಿದ ಟೀಮ್ ಇಂಡಿಯಾಗೆ ಭಾರತೀಯ ಕ್ರಿಕೆಟ್ ಬೋರ್ಡ್ ದುಪ್ಪಟ್ಟು ಮೊತ್ತದ ಬಹುಮಾನ ಘೋಷಿಸಿ ಗಮನ ಸೆಳೆದಿದ್ದಾರೆ.

ಬಿಸಿಸಿಐ ಪ್ರಕಟಣೆ:

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ನ್ಯೂಝಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಭಾರತ ಪ್ರತಿಷ್ಠಿತ ಟ್ರೋಫಿಯನ್ನು ಎತ್ತಿಹಿಡಿದಿದೆ. ಈ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲೇ ಪ್ರಶಸ್ತಿ ಉಳಿಸಿಕೊಂಡ ಮೊದಲ ತಂಡವಾಗಿ ಟೀಮ್ ಇಂಡಿಯಾ ಐತಿಹಾಸಿಕ ಸಾಧನೆ ಮಾಡಿದೆ. ಈ ಮೂಲಕ ಮೂರನೇ ಬಾರಿ ಟಿ20 ವಿಶ್ವಕಪ್​ ಮುಡಿಗೇರಿಸಿಕೊಂಡಿದೆ.

ಈ ಐತಿಹಾಸಿಕ ಸಾಧನೆಗಾಗಿ ಮಂಡಳಿಯು ಆಟಗಾರರು, ಸಹಾಯಕ ಸಿಬ್ಬಂದಿ ಮತ್ತು ಆಯ್ಕೆದಾರರನ್ನು ಮತ್ತೊಮ್ಮೆ ಅಭಿನಂದಿಸುತ್ತದೆ ಮತ್ತು ಭವಿಷ್ಯದಲ್ಲಿ ಅವರಿಗೆ ಯಶಸ್ಸು ಮುಂದುವರಿಯಲಿ ಎಂದು ಹಾರೈಸುತ್ತದೆ.

ಇದನ್ನೂ ಓದಿ: ಪಾಕಿಸ್ತಾನ್ ಸೂಪರ್​ ಲೀಗ್​ಗೆ ‘ಇಂಧನದ ಕೊರತೆ’

ಅಲ್ಲದೆ ಟಿ20 ವಿಶ್ವಕಪ್‌ನಲ್ಲಿ ಜಯಗಳಿಸಿದ ಟೀಮ್ ಇಂಡಿಯಾಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)  131 ಕೋಟಿ ರೂಪಾಯಿ ನಗದು ಬಹುಮಾನವನ್ನು ನೀಡಲಿದೆ ಎಂದು ಘೋಷಿಸಿದೆ.

ವಿಶ್ವಕಪ್ ವಿಜೇತ:

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 255 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ ತಂಡವು 19 ಓವರ್​ಗಳಲ್ಲಿ 159 ರನ್​ ಬಾರಿಸಿ ಆಲೌಟ್ ಆಯಿತು.

ಈ ಮೂಲಕ ಭಾರತ ತಂಡವು 96 ರನ್​ಗಳ ಅಮೋಘ ಗೆಲುವು ದಾಖಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಈ ಚಾಂಪಿಯನ್ ತಂಡಕ್ಕೆ ಮತ್ತು ಸಿಬ್ಬಂದಿ ವರ್ಗಗಳಿಗೆ ಬಿಸಿಸಿಐ ಬರೋಬ್ಬರಿ 131 ಕೋಟಿ ರೂ. ಬಹುಮಾನವನ್ನು ಘೋಷಿಸಿದ್ದಾರೆ.

 

Source link

ಗಿಲ್ಲಿಗೆ ಇಷ್ಟ ಆಯ್ತು ಈ ಸೀರಿಯಲ್ ಟೈಟಲ್ ಟ್ರ್ಯಾಕ್

ರಾಣಿ ಸೀರಿಯಲ್ ಮಾರ್ಚ್ 9ರಿಂದ ಪ್ರಸಾರ ಆರಂಭಿಸಿದೆ. ಈ ಧಾರಾವಾಹಿಯ ಹಾಡು ಗಮನ ಸೆಳೆಯುವ ರೀತಿಯಲ್ಲಿ ಇದೆ. ಈ ಹಾಡನ್ನು ಗಿಲ್ಲಿ ನಟ ಅವರು ಇಷ್ಟಪಟ್ಟಿದ್ದಾರೆ. ಅವರ ಹೊಸ ವಿಡಿಯೋ ವೈರಲ್ ಆಗಿದೆ. ಅವರು ಹಾಡನ್ನು ಯಾಕೆ ಇಷ್ಟಪಟ್ಟಿದ್ದೇನೆ ಎಂಬುದನ್ನು ವಿವರಿಸಿದ್ದಾರೆ. ಗಿಲ್ಲಿ ಮಾತಿನಿಂದ ಧಾರಾವಾಹಿಗೆ ಒಂದಷ್ಟು ಹೈಪ್ ಸಿಕ್ಕಿದೆ. ಅವರು ಹೇಳಿದ ಹಾಡಿನ ವಿಡಿಯೋ ಇಲ್ಲಿದೆ ನೋಡಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಪ್ಪ ಏಳನೇ ಬಾರಿ ಮದುವೆಯಾಗ್ತಿದ್ದಾರೆ ಯಾರಾದ್ರೂ ತಡೀರಿ, ಪೊಲೀಸ್ ಠಾಣೆ ಮೆಟ್ಟಿಲೇರಿದ ಮಗ

ಅಹ್ರೌಲಾ, ಮಾರ್ಚ್​ 10: ಅಪ್ಪ ಏಳನೇ ಮದುವೆ(Marriage)ಯಾಗುತ್ತಿರುವುದನ್ನು ತಡೆಯುವಂತೆ ಮಗ ಪೊಲೀಸರ ಬಳಿ ದೂರು ನೀಡಿರುವ ಘಟನೆ ಅಜಂಗಢದ ಅಹ್ರೌಲಾದಲ್ಲಿ ನಡೆದಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ತನ್ನ ತಂದೆಯ ವಿವಾಹ ಸಿದ್ಧತೆಗಳನ್ನು ತಡೆಯಲು ಪೊಲೀಸ್ ಠಾಣೆಯಲ್ಲಿ ನಡೆದಿದೆ. ಅಪ್ಪನಿಗೆ ಎಷ್ಟೇ ಮನವಿ ಮಾಡಿದರೂ ಮತ್ತೊಂದು ಮದುವೆ ಆಗೇ ಆಗುತ್ತೇನೆ ಎಂದು ಹಠ ಹಿಡಿದಿದ್ದಾರೆ. ಅವರನ್ನು ತಡೆಯಲು ಸಾಧ್ಯವಿಲ್ಲ, ನೀವಾದ್ರೂ ನಿಲ್ಲಿಸಿ ಎಂದು ಪೊಲೀಸರ ಬಳಿ ಮನವಿ ಮಾಡಿದ್ದಾನೆ.

55 ವರ್ಷದ ವ್ಯಕ್ತಿಯೊಬ್ಬನ ಮೇಲೆ ಅವನ ಸ್ವಂತ ಮಗನೇ ಗಂಭೀರ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದಾನೆ. ಮಗನ ಪ್ರಕಾರ, ಅವನ ತಂದೆ ಆರು ಬಾರಿ ಮದುವೆಯಾಗಿದ್ದಾರೆ. ದೂರು ಕೊಟ್ಟವನು ವ್ಯಕ್ತಿಯ ಮೂರನೇ ಹೆಂಡತಿಯ ಮಗ.

2024 ರಲ್ಲಿ ತನ್ನ ತಂದೆ ಆರನೇ ಬಾರಿಗೆ ವಿವಾಹವಾದರು, ಆದರೆ ಅವರ ಪತ್ನಿ ಕೆಲವೇ ದಿನಗಳಲ್ಲಿ ಕುಟುಂಬವನ್ನು ತೊರೆದು ಭೂಮಿ ಮತ್ತು ಆಭರಣಗಳಿಗೆ ಬೇಡಿಕೆ ಇಟ್ಟಿದ್ದರು. ತನ್ನ ಏಳನೇ ಮದುವೆಗೆ ಹಣ ಹೂಡಲು ಪೂರ್ವಜರ ಭೂಮಿಯನ್ನು ಮಾರಾಟ ಮಾಡಲು ಅವನು ದೃಢನಿಶ್ಚಯ ಮಾಡಿದ್ದಾರೆ. ಭೂಮಿಯನ್ನು ಮಾರಾಟ ಮಾಡಲು 50,000 ರೂಪಾಯಿಗಳ ಮುಂಗಡ ಹಣವನ್ನು ಸಹ ಪಡೆದಿದ್ದಾನೆ ಎಂದು ಮಗ ಹೇಳಿದ್ದಾರೆ. ತಂದೆ ಈಗಾಗಲೇ ಅರ್ಧದಷ್ಟು ಭೂಮಿಯನ್ನು ಅಡಮಾನ ಇಟ್ಟಿದ್ದಾರೆ.

ಮತ್ತಷ್ಟು ಓದಿ: ಮದುವೆ ಮಂಟಪಕ್ಕೇ ನುಗ್ಗಿ ಮಾಜಿ ಪ್ರಿಯಕರನಿಗೆ ಶಾಕ್​​ಕೊಟ್ಟ ಯುವತಿ: ಫುಲ್​​ ಹೈಡ್ರಾಮಾ

ಈ ವಿಷಯ ಪೊಲೀಸ್ ವರಿಷ್ಠಾಧಿಕಾರಿ ಚಿರಾಗ್ ಜೈನ್ ಅಲ್ಲಿಗೆ ತಲುಪಿದಾಗ, ಕಥೆ ಮತ್ತೊಂದು ತಿರುವು ಪಡೆದುಕೊಂಡಿತು. ಈ ಪ್ರಕರಣವು ಬಹು ವಿವಾಹಗಳನ್ನು ಮಾತ್ರವಲ್ಲದೆ, ಭೂಮಿ ಮತ್ತು ಆಸ್ತಿ ಪಾಲನ್ನೂ ಒಳಗೊಂಡಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಪ್ರಸ್ತುತ, ಪೊಲೀಸರು ವಿವಾಹ ದಾಖಲೆಗಳು ಮತ್ತು ಭೂ ವ್ಯವಹಾರವನ್ನು ಆಳವಾಗಿ ತನಿಖೆ ಮಾಡುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಸೂರ್ಯಕುಮಾರ್​ ಯಾದವ್​​ಗೆ ಅದೃಷ್ಟ ತಂದುಕೊಟ್ಟ ಕಾಪು ಮಾರಿಯಮ್ಮ: ಟಿ20 ವಿಶ್ವಕಪ್​​ ಗೆಲುವಿನ ಬೆನ್ನಲ್ಲೇ ವಿಶೇಷ ಪೂಜೆ

ಉಡುಪಿ, ಮಾರ್ಚ್​ 10: ನ್ಯೂಜಿಲೆಂಡ್​​ ತಂಡದ ವಿರುದ್ಧ ಸೆಣೆಸಾಡಿ ಟಿ20 ವಿಶ್ವಕಪ್​​ನ ಭಾರತ ಕ್ರಿಕೆಟ್​​ ತಂಡ ಮತ್ತೊಮ್ಮೆ ತನ್ನ ಮುಡಿಗೇರಿಸಿಕೊಂಡಿದೆ. ಸತತ ಎರಡನೇ ಬಾರಿಗೆ ಕಪ್​​ ಗೆಲ್ಲುವ ಮೂಲಕ ಹೊಸ ದಾಖಲೆ ಬರೆದಿದೆ. ತಂಡದ ನಾಯಕನಾಗಿರುವ ಸೂರ್ಯಕುಮಾರ್ ಯಾದವ್ ಅವರಿಗೆ ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದೊಂದಿಗೆ ವಿಶೇಷ ಭಕ್ತಿಭಾವದ ನಂಟಿದ್ದು, ಉಡುಪಿಯ ಅಳಿಯನ ಹೆಸರಲ್ಲಿ ವಿಶೇಷ ಪೂಜೆಗೆ ಕಾಪು ಕ್ಷೇತ್ರದಲ್ಲಿ ಸಿದ್ಧತೆ ಭರದಿಂದ ಸಾಗಿದೆ.

ಸೂರ್ಯಕುಮಾರ್ ಯಾದವ್ ಅವರ ಪತ್ನಿ ದೇವಿಶಾ ಶೆಟ್ಟಿ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮೂಲದವರು. ಇವರ ಕುಟುಂಬ ಸದ್ಯ ಮುಂಬೈನಲ್ಲಿ ವಾಸವಾಗಿದೆ. ಆದರೆ ಕಾಪು ಹೊಸ ಮಾರಿಯಮ್ಮ ದೇವಸ್ಥಾನವು ಸೂರ್ಯಕುಮಾರ್ ಯಾದವ್ ಪತ್ನಿಯ ಕುಟುಂಬದ ಆರಾಧ್ಯ ಕ್ಷೇತ್ರವಾಗಿದೆ. ಸೂರ್ಯಕುಮಾರ್ ಯಾದವ್ ಮತ್ತು ದೇವಿಶಾ ಶೆಟ್ಟಿ ದಂಪತಿ ಈಗಾಗಲೇ ಎರಡು ಬಾರಿ ಕಾಪು ಮಾರಿಗುಡಿಗೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದಿದ್ದಾರೆ. 2024ರ ಜುಲೈ 9ರಂದು ಅವರು ಕಾಪು ಮಾರಿಗುಡಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ದೇವಾಲಯಕ್ಕೆ ಕಂಬವನ್ನು ದಾನವಾಗಿ ನೀಡಿದ್ದರು. ಅದಾದ ನಂತರ ಕೇವಲ 9 ದಿನಗಳಲ್ಲಿ, ಜುಲೈ 18ರಂದು ಸೂರ್ಯಕುಮಾರ್ ಯಾದವ್ ಅವರನ್ನು ಭಾರತೀಯ ಟಿ20 ಕ್ರಿಕೆಟ್ ತಂಡದ ನಾಯಕನಾಗಿ ಘೋಷಿಸಲಾಗಿತ್ತು.

ಇದನ್ನೂ ಓದಿ: ಟಿ20 ವಿಶ್ವಕಪ್‌ ಗೆದ್ದು ಇತಿಹಾಸವನ್ನೇ ಬುಡಮೇಲು ಮಾಡಿದ ಟೀಂ ಇಂಡಿಯಾ

ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅರ್ಚಕರು, ಮುಂದಿನ ದಿನಗಳಲ್ಲಿ ಸೂರ್ಯಕುಮಾರ್​​ ಭಾರತೀಯ ತಂಡದ ನಾಯಕನಾಗಲೆಂದು ಆಶೀರ್ವಾದ ಮಾಡಿದ್ದರು. ದೇವಿಯ ಸನ್ನಿಧಿಯಲ್ಲಿ ಅವರಾಡಿದ್ದ ಮಾತು ಸತ್ಯವಾಗಿತ್ತು. ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಇದೀಗ ಸೂರ್ಯಕುಮಾರ್ ಯಾದವ್ ದಂಪತಿ ಮತ್ತೆ ಕ್ಷೇತ್ರಕ್ಕೆ ಭೇಟಿ ನೀಡಬೇಕು ಎಂದು ದೇವಸ್ಥಾನದ ಪ್ರಮುಖರು ಸಂಕಲ್ಪ ಮಾಡಿಕೊಂಡಿದ್ದಾರೆ. ಇದೇ ವೇಳೆ ದೇವಿಗೆ ಬೆಲ್ಲ ಮತ್ತು ಸಕ್ಕರೆಯ ತುಲಾಭಾರ ನಡೆಸುವ ಸಂಕಲ್ಪವನ್ನೂ ಭಕ್ತರು ಮಾಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version