ರಸ್ತೆ ಗುಂಡಿಯಲ್ಲಿ ‘ಕೆರೆ-ದಂಡೆ’ ಆಟ: ಹಾಳಾದ ರಸ್ತೆ ವಿರುದ್ಧ ಯುವಕರ ವಿಶಿಷ್ಟ ಪ್ರತಿಭಟನೆ – Kannada News | Mangaluru Roads: Pothole ‘Kere Dande’ Protest by Youth Demands Immediate Repair

ಮಂಗಳೂರು, ಆ.10: ರಸ್ತೆಯಲ್ಲಿ ಬಿದ್ದಿರುವ ಬೃಹತ್ ಗುಂಡಿ ಹಾಗೂ ಅದರಲ್ಲಿ ನಿಂತಿರುವ ಕೆಸರು ನೀರಿಗೆ ಆಡಳಿತದ ಗಮನ ಸೆಳೆಯಲು ಯುವಕರ ಗುಂಪೊಂದು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ರಸ್ತೆಯ ಸ್ಥಿತಿ ಶೋಚನೀಯವಾಗಿದ್ದು, ಮಳೆಯಿಂದಾಗಿ ರಸ್ತೆ ಗುಂಡಿಗಳಲ್ಲಿ ನೀರು ನಿಂತು ಕೆರೆಯಂತಾಗಿದೆ. ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದ್ದರೂ ಅಧಿಕಾರಿಗಳು ದುರಸ್ತಿ ಕಾರ್ಯ ಕೈಗೊಳ್ಳದಿರುವುದನ್ನು ಖಂಡಿಸಿ, ಸ್ಥಳೀಯ ಯುವಕರು ಈ ರಸ್ತೆ ಗುಂಡಿಯನ್ನೇ ಅಂಗಳವನ್ನಾಗಿ ಮಾಡಿಕೊಂಡು ‘ಕೆರೆ-ದಂಡೆ’ ಆಟವಾಡುವ ಮೂಲಕ ತಮ್ಮ ಆಕ್ರೋಶ ಹಾಗೂ ವಿಡಂಬನಾತ್ಮಕ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ. ಕೆಸರು ನೀರಿನಿಂದ ತುಂಬಿದ್ದ ಬೃಹತ್ ಗುಂಡಿಯ ಸುತ್ತ ನಿಂತ ಯುವಕರು ‘ಕೆರೆ’ ಅಂದ ತಕ್ಷಣ ನೀರಿಗೆ ಜಿಗಿಯುವುದು, ‘ದಂಡೆ’ ಅಂದ ತಕ್ಷಣ ಹೊರಗೆ ಬರುವ ಆಟವಾಡಿ ಸಾರ್ವಜನಿಕರ ಗಮನ ಸೆಳೆದರು. ಯುವಕರ ಈ ವಿಶಿಷ್ಟ ಆಟದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದ್ದು, ಸಾರ್ವಜನಿಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಪ್ರತಿದಿನ ಸಂಚರಿಸುವ ವಾಹನ ಸವಾರರು ಹಾಗೂ ಹಾದಿಹೋಕರು ತೊಂದರೆ ಅನುಭವಿಸುತ್ತಿದ್ದು, ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ರಸ್ತೆ ದುರಸ್ತಿ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದು ಮಂಗಳೂರು – ಕೇರಳದ ರಸ್ತೆ ಎಂದು ಹೇಳಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bidadi Township: ಬಿಡದಿ ಟೌನ್‌ಶಿಪ್ ವಿರುದ್ಧ ಜೆಡಿಎಸ್ ಪಾದಯಾತ್ರೆ: ಎರಡನೇ ದಿನಕ್ಕೆ ದೇವೇಗೌಡರ ಸಾಥ್ – Kannada News | JDS Padayatra Bidadi Township Protest: Deve Gowda Joins Day 2 March Against Greater Bengaluru Project

ಬೆಂಗಳೂರು, ಆಗಸ್ಟ್ 10: ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ಜನತಾ ದಳ (ಸೆಕ್ಯುಲರ್) ಹಮ್ಮಿಕೊಂಡಿರುವ ಬೃಹತ್ ಪಾದಯಾತ್ರೆಯು ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ಈ ಮಹತ್ವದ ಹೋರಾಟಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಬೆಂಬಲವೂ ದೊರೆತಿದೆ. ನಿಖಿಲ್ ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಮತ್ತು ನಾಯಕರು ಇಂದು 16 ಕಿಲೋಮೀಟರ್ ದೂರ ಹೆಜ್ಜೆ ಹಾಕಲಿದ್ದಾರೆ.

ಪಾದಯಾತ್ರೆಯು ಇಂದು ಬೆಳಿಗ್ಗೆ 11 ಗಂಟೆಗೆ ಬಿಡದಿಯಿಂದ ಮೈಸೂರು ರಸ್ತೆ ನೈಸ್ ಜಂಕ್ಷನ್ ವರೆಗೆ ಸಾಗಲಿದೆ. ನಿನ್ನೆ, ಪಾದಯಾತ್ರೆಯ ಮೊದಲ ದಿನ ಏಳು ಕಿಲೋಮೀಟರ್ ಕ್ರಮಿಸಲಾಗಿತ್ತು. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಆರ್. ಅಶೋಕ್ ಅವರು ನಿನ್ನೆಯ ಪಾದಯಾತ್ರೆಗೆ ಚಾಲನೆ ನೀಡಿದ್ದರು. ಬಿಡದಿ ಟೌನ್‌ಶಿಪ್ ನಿರ್ಮಾಣದಿಂದ ಸ್ಥಳೀಯ ರೈತರು ಮತ್ತು ಜನರಿಗೆ ಆಗುವ ತೊಂದರೆಗಳನ್ನು ಎತ್ತಿ ಹಿಡಿದು, ಈ ಯೋಜನೆಯನ್ನು ಕೈಬಿಡಬೇಕೆಂದು ಆಗ್ರಹಿಸಿ ಈ ಪಾದಯಾತ್ರೆ ನಡೆಸಲಾಗುತ್ತಿದೆ. ಇದೊಂದು ಬೃಹತ್ ಪ್ರತಿಭಟನೆಯಾಗಿ ರೂಪುಗೊಂಡಿದ್ದು, ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪಕ್ಷದ ಹಿರಿಯ ನಾಯಕರು ಮತ್ತು ಯುವ ನಾಯಕರ ಒಗ್ಗೂಡುವಿಕೆಯು ಈ ಹೋರಾಟಕ್ಕೆ ಮತ್ತಷ್ಟು ಬಲ ನೀಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ಟಾರ್ ಗುರುತಿಗೆ ಸ್ಪಷ್ಟನೆ ನೀಡಿದ ವಿವಿಎಸ್ ಲಕ್ಷ್ಮಣ್! – Kannada News | VVS Laxman Breaks Silence on India Stars’ Injury Setbacks Ahead of SL Test Series

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಟೀಮ್ ಇಂಡಿಯಾವನ್ನು ಕಾಡುತ್ತಿರುವ ಇಂಜುರಿ ತಲೆನೋವಿನ ಬಗ್ಗೆ ಬಿಸಿಸಿಐ ತರಬೇತಿ ಕೇಂದ್ರದ (CoE) ಮುಖ್ಯಸ್ಥ ಹಾಗೂ ಭಾರತದ ಮಾಜಿ ದಿಗ್ಗಜ ಬ್ಯಾಟರ್ ವಿವಿಎಸ್ ಲಕ್ಷ್ಮಣ್ ಕೊನೆಗೂ ಮೌನ ಮುರಿದಿದ್ದಾರೆ. ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಲಕ್ಷ್ಮಣ್, ನಿತೀಶ್ ರೆಡ್ಡಿ ಅವರಂತಹ ಆಲ್‌ರೌಂಡರ್‌ಗಳ ದೈಹಿಕ ಸಾಮರ್ಥ್ಯದ ಸವಾಲುಗಳನ್ನು ಬಿಚ್ಚಿಟ್ಟಿದ್ದಾರೆ. ಹಾಗೆಯೇ ಆಸ್ಟರ್‌ರಿಸ್ ಚಿಹ್ನೆ ಯಾಕೆ ನೀಡುತ್ತಿದ್ದೇವೆ ಎಂಬುದಕ್ಕೆ ಸ್ಪಷ್ಟನೆ ನೀಡಿದ್ದಾರೆ.

ನಿತೀಶ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ತೊಡಗಿಸಿಕೊಳ್ಳುವುದರಿಂದ ಅವರ ದೇಹದ ಮೇಲಿನ ವರ್ಕ್‌ಲೋಡ್ (ಕಾರ್ಯದೊತ್ತಡ) ಹೆಚ್ಚಾಗಿರುತ್ತದೆ. ಇದನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಬೇಕಾಗುತ್ತದೆ ಎಂದು ಲಕ್ಷ್ಮಣ್ ತಿಳಿಸಿದ್ದಾರೆ.

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA/CoE) ಆಟಗಾರರ ಗಾಯದ ಸಮಸ್ಯೆಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎಂಬ ಮಾಧ್ಯಮಗಳ ಟೀಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಲಕ್ಷ್ಮಣ್, ಮಾನವನ ದೇಹವು ಯಂತ್ರವಲ್ಲ. ಪ್ರತಿಯೊಬ್ಬ ಆಟಗಾರನ ಚೇತರಿಕೆಯ ಅವಧಿಯು ವಿಭಿನ್ನವಾಗಿರುತ್ತದೆ. ನಿಗದಿತ ಸಮಯದೊಳಗೇ ಗಾಯ ವಾಸಿಯಾಗಬೇಕೆಂದು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆಸ್ಟರ್‌ರಿಸ್ (*) ಚಿಹ್ನೆಯ ರಹಸ್ಯ ಬಯಲು:

ಇತ್ತೀಚೆಗೆ ತಂಡದ ಆಯ್ಕೆ ಪಟ್ಟಿಯಲ್ಲಿ ಕೆಲವು ಆಟಗಾರರ ಹೆಸರಿನ ಮುಂದೆ ಸ್ಟಾರ್ (*) ಚಿಹ್ನೆ ಇರುವುದರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, “ಯಾರ ಹೆಸರಿನ ಮುಂದೆ ಸ್ಟಾರ್ ಇರುತ್ತದೆಯೋ, ಅವರು ‘ಫಿಟ್‌ನೆಸ್‌ಗೆ ಒಳಪಟ್ಟು ಆಯ್ಕೆಯಾಗಲಿದ್ದಾರೆ ಎಂದರ್ಥ. ಇದೇ ಕಾರಣದಿಂದಾಗಿ ಶ್ರೀಲಂಕಾ ಸರಣಿಗೆ ಆಯ್ಕೆಯಾಗಿದ್ದ ಜಸ್‌ಪ್ರೀತ್ ಬುಮ್ರಾ ಅಥವಾ ಸಾಯಿ ಸುದರ್ಶನ್ ಹೆಸರಿನ ಮುಂದೆ ಸ್ಟಾರ್ ನೀಡಲಾಗಿತ್ತು. ಹೀಗೆ ಹೆಸರಿನ ಮುಂದೆ ಸ್ಟಾರ್ (*) ಚಿಹ್ನೆ ಪಡೆದಿರುವ ಆಟಗಾರರು ಸರಣಿಗೂ ಮುನ್ನ CoE ಕಡೆಯಿಂದ ಸಂಪೂರ್ಣ ಕ್ಲಿನಿಕಲ್ ಗ್ರೀನ್ ಸಿಗ್ನಲ್ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದಿದ್ದಾರೆ.

ಕೇವಲ ರಿಹ್ಯಾಬ್ ಕೇಂದ್ರವಲ್ಲ:

ಹೊಸದಾಗಿ ನಿರ್ಮಿಸಲಾದ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಕೇವಲ ಗಾಯಗೊಂಡ ಆಟಗಾರರು ಬಂದು ಗುಣಮುಖರಾಗುವ ಕೇಂದ್ರವಲ್ಲ. ಇದು ಆಟಗಾರರ ದೀರ್ಘಾವಧಿ ಫಿಟ್‌ನೆಸ್, ಉನ್ನತ ಪ್ರದರ್ಶನ ಮತ್ತು ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡುವ ಅತ್ಯಾಧುನಿಕ ಸಂಸ್ಥೆಯಾಗಿದೆ ಎಂದು ಲಕ್ಷ್ಮಣ್ ವಿವರಿಸಿದ್ದಾರೆ. ಸದ್ಯ ನಿತೀಶ್ ರೆಡ್ಡಿ ಮಾತ್ರವಲ್ಲದೆ ಸಾಯಿ ಸುದರ್ಶನ್, ಹರ್ಷಿತ್ ರಾಣಾ ಮತ್ತು ವಾಷಿಂಗ್ಟನ್ ಸುಂದರ್ ಅವರಂತಹ ಯುವ ತಾರೆಗಳು ಇಲ್ಲಿ ಚಿಕಿತ್ಸೆ ಮತ್ತು ತರಬೇತಿ ಪಡೆಯುತ್ತಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಟೀಮ್ ಇಂಡಿಯಾದ ಆಟಗಾರರು ಪದೇ ಪದೇ ಗಾಯದ ಸಮಸ್ಯೆಗೆ ಒಳಗಾಗುತ್ತಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿರುವುದು ನಿಜ. ಆದರೆ ಬಿಸಿಸಿಐನ ‘ಸೆಂಟರ್ ಆಫ್ ಎಕ್ಸಲೆನ್ಸ್’ (CoE) ಮುಖ್ಯಸ್ಥರಾಗಿ ವಿವಿಎಸ್ ಲಕ್ಷ್ಮಣ್ ನೀಡಿರುವ ಈ ಸ್ಪಷ್ಟನೆ, ಮಂಡಳಿಯು ಆಟಗಾರರ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಎಷ್ಟು ಆದ್ಯತೆ ನೀಡುತ್ತಿದೆ ಎಂಬುದನ್ನು ತೋರಿಸುತ್ತದೆ.

ಇದನ್ನೂ ಓದಿ: ಸಿರಾಜ್ ಸಿಡಿಲಬ್ಬರ…. ಬ್ಯಾಟ್ ಚೆಕ್ ಮಾಡಿದ ಶ್ರೀಲಂಕಾ ಆಟಗಾರರು!

ವಿಶೇಷವಾಗಿ ನಿತೀಶ್ ಕುಮಾರ್ ರೆಡ್ಡಿಯವರಂತಹ ಆಲ್‌ರೌಂಡರ್‌ಗಳ ಮೇಲಿನ ಹೆಚ್ಚಿನ ಕೆಲಸದ ಒತ್ತಡವನ್ನು ಸಮರ್ಥವಾಗಿ ನಿರ್ವಹಿಸುವುದು ಮುಂಬರುವ ಸರಣಿಗಳಲ್ಲಿ ಭಾರತ ತಂಡದ ಯಶಸ್ಸಿಗೆ ಅತ್ಯಂತ ನಿರ್ಣಾಯಕವಾಗಲಿದೆ. ಆಟಗಾರರ ಸಂಪೂರ್ಣ ಫಿಟ್‌ನೆಸ್‌ಗೆ ಒತ್ತು ನೀಡುತ್ತಿರುವ ಈ ಕ್ರಮವು ದೀರ್ಘಾವಧಿಯಲ್ಲಿ ಭಾರತೀಯ ಕ್ರಿಕೆಟ್‌ಗೆ ಖಂಡಿತವಾಗಿಯೂ ವರದಾಯಕವಾಗಲಿದೆ.

Source link

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ವಿರುದ್ಧ ತೀವ್ರ ಕಾರ್ಯಾಚರಣೆ: 15 ಬಾಂಗ್ಲಾದೇಶಿಗರ ಬಂಧನ – Kannada News | 15 Bangladeshi Nationals Arrested in Bengaluru During Special Police Drive Against Illegal Immigrants

ಬೆಂಗಳೂರು, ಆಗಸ್ಟ್ 10: ನಗರದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಲು ಪೊಲೀಸರು ಶನಿವಾರ ಮುಂಜಾನೆ ಹಠಾತ್ ಜಂಟಿ ಕಾರ್ಯಾಚರಣೆ ನಡೆಸಿದ್ದು, ಸೂಕ್ತ ದಾಖಲೆಗಳಿಲ್ಲದೆ ಅಕ್ರಮವಾಗಿ ನೆಲೆಸಿದ್ದ 15 ಬಾಂಗ್ಲಾದೇಶಿ (Bangladeshi) ಪ್ರಜೆಗಳನ್ನು ಬಂಧಿಸಿದ್ದಾರೆ. ಎಲೆಕ್ಟ್ರಾನಿಕ್ಸ್ ಸಿಟಿ ವಿಭಾಗದ ವ್ಯಾಪ್ತಿಯಲ್ಲಿ ಈ ವಿಶೇಷ ಪರಿಶೀಲನಾ ಕಾರ್ಯಾಚರಣೆ ನಡೆದಿದ್ದು, ಅಕ್ರಮ ವಲಸಿಗರ ಪತ್ತೆಗಾಗಿ ಪೊಲೀಸರು ಬೃಹತ್ ಜಾಲ ಬೀಸಿದ್ದಾರೆ.

29 ಸ್ಥಳಗಳ ಮೇಲೆ ಏಕಕಾಲಕ್ಕೆ ಮುಂಜಾನೆ ದಾಳಿ

ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳನ್ನು ಗುರುತಿಸಲು ಎಲೆಕ್ಟ್ರಾನಿಕ್ಸ್ ಸಿಟಿ ವಿಭಾಗದ ಒಟ್ಟು 29 ಗುರುತಿಸಲಾದ ಸೂಕ್ಷ್ಮ ಪ್ರದೇಶಗಳಲ್ಲಿ ಶನಿವಾರ ಮುಂಜಾನೆ ಏಕಕಾಲಕ್ಕೆ ದಾಳಿ ನಡೆಸಲಾಯಿತು. ಈ ಬೃಹತ್ ಕಾರ್ಯಾಚರಣೆಗಾಗಿ 23 ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಒಟ್ಟು 295 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಜಂಟಿ ಶೋಧ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ವಿಭಾಗದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ನಿರ್ಮಾಣ ಹಂತದ ಕಟ್ಟಡಗಳು, ತಾತ್ಕಾಲಿಕ ಶೆಡ್‌ಗಳು ಮತ್ತು ಶಂಕಿತ ಅಡಗುದಾಣಗಳ ಮೇಲೆ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿದರು. ಈ ತಪಾಸಣೆಯ ಸಂದರ್ಭದಲ್ಲಿ ಸೂಕ್ತ ದಾಖಲೆಗಳಿಲ್ಲದ ಹಾಗೂ ಶಂಕಿತ ಸಂದರ್ಭಗಳಲ್ಲಿ ಕಂಡುಬಂದ ಒಟ್ಟು 1,909 ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲಾಯಿತು. ಅವರಲ್ಲಿ ಅಂತಿಮವಾಗಿ 15 ಬಾಂಗ್ಲಾದೇಶಿ ಪ್ರಜೆಗಳನ್ನು ಅಕ್ರಮ ವಾಸ್ತವ್ಯದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.

ಬೇಗೂರು ಮತ್ತು ಪರಪ್ಪನ ಅಗ್ರಹಾರದಲ್ಲಿ ಸಿಕ್ಕಿಬಿದ್ದ ವಲಸಿಗರು

ಪೊಲೀಸ್ ವರದಿಗಳ ಪ್ರಕಾರ, ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ಕು ಪ್ರಮುಖ ಸ್ಥಳಗಳಲ್ಲಿ ನಾಲ್ಕು ತಂಡಗಳು ಕಾರ್ಯಾಚರಣೆ ನಡೆಸಿ, 339 ವ್ಯಕ್ತಿಗಳನ್ನು ಪರಿಶೀಲಿಸಿದವು. ಈ ವೇಳೆ ಎಂಟು ಜನ ಬಾಂಗ್ಲಾದೇಶಿ ಪ್ರಜೆಗಳನ್ನು ವಶಕ್ಕೆ ಪಡೆಯಲಾಯಿತು. ಅದೇ ರೀತಿ, ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ಪೊಲೀಸ್ ತಂಡಗಳು ನಡೆಸಿದ ದಾಳಿಯಲ್ಲಿ 355 ಜನರನ್ನು ಪ್ರಶ್ನಿಸಲಾಗಿದ್ದು, ಕಾನೂನುಬಾಹಿರವಾಗಿ ವಾಸಿಸುತ್ತಿದ್ದ ಏಳು ಬಾಂಗ್ಲಾದೇಶಿಗರನ್ನು ಬಂಧಿಸಲಾಗಿದೆ.

ಇದನ್ನೂ ಓದಿ ಬೆಂಗಳೂರು: ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಭರ್ಜರಿ ಕಾರ್ಯಾಚರಣೆ, 40 ಮಂದಿ ವಶಕ್ಕೆ

ಎಲೆಕ್ಟ್ರಾನಿಕ್ಸ್ ಸಿಟಿ, ಬಂಡೇಪಾಳ್ಯ, ಹುಳಿಮಾವು ಮತ್ತು ಹೆಬ್ಬಗೋಡಿ ಪೊಲೀಸ್ ಠಾಣೆಗಳ ವ್ಯಾಪ್ತಿಯ 21 ಸ್ಥಳಗಳಲ್ಲೂ ತೀವ್ರ ಶೋಧ ನಡೆಸಲಾಯಿತಾದರೂ, ಅಲ್ಲಿ ಯಾವುದೇ ಅಕ್ರಮ ವಿದೇಶಿ ಪ್ರಜೆಗಳು ಪತ್ತೆಯಾಗಿಲ್ಲ. ಮತ್ತೊಂದೆಡೆ, ಈ ತಪಾಸಣಾ ಕಾರ್ಯಾಚರಣೆಯ ಸಂದರ್ಭದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನೂರಾರು ವಲಸೆ ಕಾರ್ಮಿಕರನ್ನು ಕಾನೂನುಬಾಹಿರವಾಗಿ ವಶಕ್ಕೆ ಪಡೆಯಲಾಗಿದೆ ಮತ್ತು ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ ಎಂದು ಆರೋಪಿಸಿ ಕೆಲವು ನಾಗರಿಕ ಹಕ್ಕುಗಳ ಸಂಘಟನೆಗಳು ರಾಜ್ಯ ಗೃಹ ಸಚಿವರು ಹಾಗೂ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:42 am, Mon, 10 August 26

Source link

ವೇದಿಕೆ ಮೇಲೆ ನಟಿಗೆ ಲಿಪ್​​ಲಾಕ್ ಮಾಡಿದ ಅಭಿಮಾನಿ; ತಳ್ಳಿದರೂ ಬಿಡದ ಫ್ಯಾನ್ – Kannada News | Nikita Rawal Shocked as Female Fan Kisses Her on the Lips During Red Carpet Event

ರೆಡ್ ಕಾರ್ಪೆಟ್ ಕಾರ್ಯಕ್ರಮಗಳು ಯಾವಾಗಲೂ ಝಗಮಗಿಸುತ್ತವೆ. ಆದರೆ ಕೆಲವೊಮ್ಮೆ ಇಲ್ಲಿ ನಟಿಯರಿಗೆ ಕಹಿ ಅನುಭವಗಳೂ ಎದುರಾಗುತ್ತವೆ. ‘ಗರಂ ಮಸಾಲಾ’ ಸಿನಿಮಾ ಖ್ಯಾತಿಯ ನಟಿ ನಿಕಿತಾ ರಾವಲ್ ಅವರಿಗೆ ಇತ್ತೀಚೆಗೆ ಇಂತಹದ್ದೇ ಒಂದು ಶಾಕಿಂಗ್ ಘಟನೆ ನಡೆದಿದೆ. ವೇದಿಕೆಯ ಮೇಲೆ ಅಭಿಮಾನಿಯೊಬ್ಬಳು ನಿಕಿತಾಗೆ ಹಠಾತ್ತಾಗಿ ಲಿಪ್ ಕಿಸ್ ಕೊಟ್ಟಿದ್ದಾಳೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪ್ರಸ್ತುತ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಕಾರ್ಯಕ್ರಮವೊಂದರಲ್ಲಿ ನಿಕಿತಾ ರಾವಲ್ ರೆಡ್ ಕಾರ್ಪೆಟ್ ಮೇಲೆ ಪೋಸ್ ನೀಡುತ್ತಿದ್ದರು. ಛಾಯಾಗ್ರಾಹಕರು ಫೋಟೋ ತೆಗೆಯುತ್ತಿದ್ದರು. ಆ ಸಮಯದಲ್ಲಿ ಮಹಿಳಾ ಅಭಿಮಾನಿಯೊಬ್ಬಳು ನಿಕಿತಾ ಬಳಿ ಬಂದಳು. ನಟಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮನವಿ ಮಾಡಿದಳು. ನಿಕಿತಾ ಕೂಡ ನಗುತ್ತಲೇ ಸೆಲ್ಫಿಗೆ ಒಪ್ಪಿಕೊಂಡರು. ಆಕೆಯ ಜೊತೆ ಪ್ರೀತಿಯಿಂದ ಫೋಟೋಗೆ ಪೋಸ್ ನೀಡಿದರು.

ಆದರೆ ಮುಂದಿನ ಕ್ಷಣದಲ್ಲೇ ಆಘಾತಕಾರಿ ಘಟನೆ ನಡೆಯಿತು. ಆ ಅಭಿಮಾನಿ ನಿಕಿತಾ ಅವರ ಕೆನ್ನೆಗೆ ಕಿಸ್ ಮಾಡಿದಳು. ತಕ್ಷಣವೇ ನಟಿಯನ್ನು ತನ್ನತ್ತ ಎಳೆದುಕೊಂಡಳು. ನೇರವಾಗಿ ನಿಕಿತಾ ತುಟಿಗೆ ಕಿಸ್ ಮಾಡಿದಳು. ಈ ದಿಢೀರ್ ಕೃತ್ಯದಿಂದ ನಟಿ ಸಂಪೂರ್ಣವಾಗಿ ಬೆಚ್ಚಿಬಿದ್ದರು. ಆಕೆಯಿಂದ ತಪ್ಪಿಸಿಕೊಳ್ಳಲು ನಿಕಿತಾ ಪ್ರಯತ್ನಿಸಿದರು.

ಇದನ್ನೂ ಓದಿ: ‘ಟಾಕ್ಸಿಕ್’ ಟ್ರೇಲರ್; ಕಿಯಾರಾ ಟ್ರೋಲ್ ಮಾಡಿದವರ ಬಾಯಿ ಮುಚ್ಚಿಸಿದ ಪತಿ ಸಿದ್ದಾರ್ಥ್

ಆದರೂ ಆ ಅಭಿಮಾನಿ ನಟಿಯನ್ನು ಬಿಡಲಿಲ್ಲ. ನಿಕಿತಾ ಅವರನ್ನು ಗಟ್ಟಿಯಾಗಿ ಹಿಡಿದುಕೊಂಡಳು. ನಿಕಿತಾ ಮುಖದಲ್ಲಿ ಅಸಹಾಯಕತೆ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಅಲ್ಲಿಂದ ಹೋಗುವ ಮುನ್ನ ಅಭಿಮಾನಿ ಮತ್ತೆ ಕೆನ್ನೆಗೆ ಕಿಸ್ ಮಾಡಿದಳು. ಈ ಎಲ್ಲಾ ದೃಶ್ಯಗಳು ಕ್ಯಾಮೆರಾದಲ್ಲಿ ದಾಖಲಾಗಿವೆ. ಪ್ರಸ್ತುತ ನೆಟ್ಟಿಗರು ಈ ವಿಡಿಯೋ ನೋಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಿಕಿತಾ ರಾವಲ್ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಬ್ಲ್ಯಾಕ್ ಅಂಡ್ ವೈಟ್’, ‘ಮಿಸ್ಟರ್ ಹಾಟ್ ಮಿಸ್ಟರ್ ಕೂಲ್’, ‘ದಿ ಹೀರೋ – ಅಭಿಮನ್ಯು’, ‘ಅಮ್ಮಾ ಕಿ ಬೋಲಿ’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಿರಾಜ್ ಸಿಡಿಲಬ್ಬರ…. ಬ್ಯಾಟ್ ಚೆಕ್ ಮಾಡಿದ ಶ್ರೀಲಂಕಾ ಆಟಗಾರರು! – Kannada News | Sri Lankan Players Playfully Check Siraj’s Bat After Cameo

ಭಾರತ ಮತ್ತು ಶ್ರೀಲಂಕಾ ಟೆಸ್ಟ್ ಸರಣಿಗೂ ಮುನ್ನ ಕೊಲಂಬೊದಲ್ಲಿ ನಡೆದ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದ್ದಾರೆ. ಶ್ರೀಲಂಕಾ ಇಲೆವೆನ್​ ವಿರುದ್ಧ ನಡೆದ ಈ ಪಂದ್ಯದಲ್ಲಿ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಿರಾಜ್ ಕೇವಲ 15 ಎಸೆತಗಳಲ್ಲಿ 32 ರನ್ ಚಚ್ಚುವ ಮೂಲಕ ಟೀಮ್ ಇಂಡಿಯಾಗೆ ರೋಚಕ ಜಯ ತಂದುಕೊಟ್ಟಿದ್ದರು.

ಸಿರಾಜ್ ಸಿಡಿಲಬ್ಬರ:

ಕೊಲಂಬೊದಲ್ಲಿ ನಡೆದ ಈ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ ಭಾರತ ತಂಡಕ್ಕೆ ಗೆಲ್ಲಲು 45 ಓವರ್​ಗಳಲ್ಲಿ 207 ರನ್​ಗಳ ಗುರಿ ನೀಡಲಾಗಿತ್ತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾಗೆ ಕೊನೆಯ 8 ಎಸೆತಗಳಲ್ಲಿ 27 ರನ್​ಗಳ ಅವಶ್ಯಕತೆಯಿತ್ತು. ಈ ವೇಳೆ ಕ್ರೀಸ್​ನಲ್ಲಿದ್ದ ಮೊಹಮ್ಮದ್ ಸಿರಾಜ್  6, 1, 6, 6, 6, 4 ಚಚ್ಚುವ ಮೂಲಕ ಇಡೀ ಪಂದ್ಯದ ಚಿತ್ರಣ ಬದಲಿಸಿಬಿಟ್ಟರು. ಈ ಮೂಲಕ ಭಾರತ ತಂಡಕ್ಕೆ 6 ವಿಕೆಟ್​ಗಳ ಭರ್ಜರಿ ಜಯ ತಂದುಕೊಟ್ಟಿದ್ದಾರೆ.

ಇತ್ತ ಕೇವಲ 15 ಎಸೆತಗಳನ್ನು ಎದುರಿಸಿದ ಸಿರಾಜ್ 4 ಭರ್ಜರಿ ಸಿಕ್ಸರ್ ಹಾಗೂ ಒಂದು ಫೋರ್​ನೊಂದಿಗೆ ಅಜೇಯ 32 ರನ್ ಬಾರಿಸಿ ಗೆಲುವಿನ ರೂವಾರಿ ಎನಿಸಿಕೊಂಡರು.

ಬ್ಯಾಟ್ ಚೆಕ್ ಮಾಡಿ ಲಂಕಾ ಆಟಗಾರರು!

ಸಿರಾಜ್ ಅವರ ಈ ಅನಿರೀಕ್ಷಿತ ಬ್ಯಾಟಿಂಗ್ ಪರಾಕ್ರಮವನ್ನು ಕಂಡು ಶ್ರೀಲಂಕಾ ಆಟಗಾರರು ಆಶ್ಚರ್ಯಚಕಿತರಾದರು. ಪಂದ್ಯ ಮುಗಿದ ಬಳಿಕ ಉಭಯ ತಂಡಗಳ ಆಟಗಾರರು ಪರಸ್ಪರ ಹಸ್ತಲಾಘವ  ಮಾಡುವಾಗ, ಶ್ರೀಲಂಕಾದ ಫೀಲ್ಡರ್‌ಗಳು ಸಿರಾಜ್ ಅವರನ್ನು ಸುತ್ತುವರಿದರು. ತಮಾಷೆಯಾಗಿ ಅವರ ಕೈಲಿದ್ದ ಬ್ಯಾಟ್ ಅನ್ನು ಕಸಿದುಕೊಂಡು, “ಇದರಲ್ಲಿ ಏನೋ ಮ್ಯಾಜಿಕ್ ಇದೆ” ಎಂಬಂತೆ ತಿರುಗಿಸಿ ಪರಿಶೀಲಿಸಲು ಆರಂಭಿಸಿದರು. ಸಿರಾಜ್ ಕೂಡ ನಗುತ್ತಲೇ ತಮ್ಮ ಬ್ಯಾಟ್ ಅನ್ನು ಅವರಿಗೆ ತೋರಿಸಿದರು. ಇದೀಗ ಈ ಬ್ಯಾಟ್ ಪರಿಶೀಲನೆಯ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಭಾರತ ಮತ್ತು ಶ್ರೀಲಂಕಾ ಸರಣಿ ಯಾವಾಗ?

ಭಾರತ ಮತ್ತು ಶ್ರೀಲಂಕಾ ನಡುವಣ ಟೆಸ್ಟ್ ಸರಣಿಯು ಆಗಸ್ಟ್ 15 ರಿಂದ ಶುರುವಾಗಲಿದೆ. ಈ ಸರಣಿಯ ಮೊದಲ ಪಂದ್ಯವು ಗಾಲೆಯ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದರೆ, ದ್ವಿತೀಯ ಪಂದ್ಯವು ಆಗಸ್ಟ್ 23 ರಂದು ಕೊಲಂಬೋದ ಎಸ್‌ಎಸ್‌ಸಿ ಮೈದಾನದಲ್ಲಿ ಜರುಗಲಿದೆ.

Source link

ಯುಬಿ ಸಿಟಿ ಫೈವ್ ಸ್ಟಾರ್ ಹೋಟೆಲ್‌ಗಳ ಮೇಲೆ ದಾಳಿ: 45 ಕೆಜಿ ಕೊಳೆತ ಮಾಂಸ, 15 ಲೀ. ಕರಿದ ಅಡುಗೆ ಎಣ್ಣೆ ಪತ್ತೆ – Kannada News | Bengaluru UB City 5 Star Hotel Raids: 45 Kg Rotten Meat, 15 Litres Used Cooking Oil Seized

ಯುಬಿ ಸಿಟಿ ಹೋಟೆಲ್‌ಗಳ ಮೇಲೆ ದಾಳಿImage Credit source: tv9

ಬೆಂಗಳೂರು, ಆಗಸ್ಟ್ 10: ಬೆಂಗಳೂರಿನ (Bengaluru) ಪ್ರತಿಷ್ಠಿತ ಯುಬಿ ಸಿಟಿಯಲ್ಲಿರುವ ಪಂಚತಾರಾ ಹೋಟೆಲ್‌ಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಹೋಟೆಲ್‌ಗಳ ಅಡುಗೆಮನೆಗಳಲ್ಲಿನ ಅವ್ಯವಸ್ಥೆ ಬಯಲಾಗಿದೆ. ಐದು ಹೋಟೆಲ್‌ಗಳ ಮೇಲೆ ನಡೆದ ಕಾರ್ಯಾಚರಣೆಯಲ್ಲಿ ಕೊಳೆತ ಮಾಂಸ, ಅವಧಿ ಮೀರಿದ ಆಹಾರ ಪದಾರ್ಥಗಳು ಸೇರಿದಂತೆ ಹಲವು ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

45 ಕೆಜಿ ಕೊಳೆತ ಮಾಂಸ, 15 ಲೀಟರ್ ಕರಿದ ಅಡುಗೆ ಎಣ್ಣೆ ಪತ್ತೆ

ಬೆಂಗಳೂರಿನಲ್ಲಿ ಆಹಾರ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ ಮುಂದುವರಿದಿದ್ದು, ರಾತ್ರಿ ಯುಬಿ ಸಿಟಿಯಲ್ಲಿರುವ ಐದು ಹೋಟೆಲ್‌ಗಳ ಮೇಲೆ ಸುಮಾರು 15 ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಸ್ಕೈ ಹೋಟೆಲ್, ರಾಯಲ್ ಚೈನ್, ಮದ್ರಾಸ್ ಕಿಚನ್, ಟೆಸ್ಕಾನ್ ಹೋಟೆಲ್ ಹಾಗೂ ಸೆಂಚೆಜ್ ಹೋಟೆಲ್‌ಗಳ ಅಡುಗೆಮನೆಗಳನ್ನು ಪರಿಶೀಲಿಸಲಾಗಿದೆ. ಈ ವೇಳೆ 45 ಕೆ.ಜಿ. ಕೊಳೆತ ಕೋಳಿ ಮತ್ತು ದನದ ಮಾಂಸ, 15 ಲೀಟರ್ ಬಳಸಿದ ಅಡುಗೆ ಎಣ್ಣೆ ಹಾಗೂ 6 ಕೆ.ಜಿ. ವೆಜಿಟೇಬಲ್ ಕಟ್ಲೆಟ್ ಸೇರಿದಂತೆ ಒಟ್ಟು 51 ಕೆ.ಜಿ. ಆಹಾರ ಪದಾರ್ಥಗಳನ್ನು ಸ್ಕೈ ಹೋಟೆಲ್‌ನಲ್ಲಿ ವಶಕ್ಕೆ ಪಡೆಯಲಾಗಿದೆ. ಕೊಳೆತ ಮಾಂಸ ಮತ್ತು ಅವಧಿ ಮೀರಿದ ಆಹಾರ ಪದಾರ್ಥಗಳು ಪತ್ತೆಯಾದ ಹಿನ್ನೆಲೆಯಲ್ಲಿ ಹೋಟೆಲ್‌ನ ಅಡುಗೆಮನೆಗೆ ಅಧಿಕಾರಿಗಳು ಬೀಗ ಹಾಕಿ ಸೀಲ್ ಮಾಡಿದ್ದಾರೆ.

ಇನ್ನು ಯುಬಿ ಸಿಟಿಯ ರಾಯಲ್ ಚೈನ್ ಹೋಟೆಲ್‌ನಲ್ಲೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, 50 ಕೆ.ಜಿ. ಬಾತುಕೋಳಿ ಮಾಂಸ ಹಾಗೂ 5 ಕೆ.ಜಿ. ಮೀನು ಸೇರಿದಂತೆ ಒಟ್ಟು 55 ಕೆ.ಜಿ. ಮಾಂಸವನ್ನು ವಶಕ್ಕೆ ಪಡೆದಿದ್ದಾರೆ.

ಮದ್ರಾಸ್ ಕಿಚನ್‌ನಲ್ಲಿ 5 ಕೆ.ಜಿ. ಹಸಿ ಬಟಾಣಿ, ಟೆಸ್ಕಾನ್ ಹೋಟೆಲ್‌ನಲ್ಲಿ 5 ಕೆ.ಜಿ. ಅಣಬೆ ವಶಕ್ಕೆ ಪಡೆಯಲಾಗಿದೆ. ಸೆಂಚೆಜ್ ಹೋಟೆಲ್‌ನಲ್ಲಿ 3 ಕೆ.ಜಿ. ಮೀನು, 7 ಕೆ.ಜಿ. ಕೇಕ್, ಆಲೂಗಡ್ಡೆ ಸೇರಿದಂತೆ ಇತರೆ ಆಹಾರ ಪದಾರ್ಥಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಶೀತಲೀಕರಣ ಮಾಡದೇ ಮಾಂಸ ಸಂಗ್ರಹ

ಯುಬಿ ಸಿಟಿ ಹಾಗೂ ಬ್ರಿಗೇಡ್ ರಸ್ತೆಯ ಸುತ್ತಮುತ್ತ ನಡೆದ ಪರಿಶೀಲನೆ ವೇಳೆ ಕೆಲವು ಹೋಟೆಲ್‌ಗಳಲ್ಲಿ ಚಿಕನ್, ಮಟನ್ ಹಾಗೂ ಮೀನುಗಳನ್ನು ಸರಿಯಾದ ರೀತಿಯಲ್ಲಿ ಶೀತಲೀಕರಣ ಮಾಡದೇ ಸಂಗ್ರಹಿಸಿರುವುದು ಪತ್ತೆಯಾಗಿದೆ ಎಂದು ಆಹಾರ ಸುರಕ್ಷತಾ ಇಲಾಖೆ ಆಯುಕ್ತ ಶ್ರೀನಿವಾಸ್ ತಿಳಿಸಿದ್ದಾರೆ.

ಆಹಾರ ಸುರಕ್ಷತಾ ಆಯುಕ್ತರ ಮಾತಿನ ವಿಡಿಯೋ


ಹೋಟೆಲ್​ಗಳ ವಿರುದ್ಧ ಕಾನೂನು ಕ್ರಮಕ್ಕೆ ಆಹಾರ ಇಲಾಖೆ ಸಿದ್ಧತೆ

ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಕಂಡುಬಂದಿರುವ ಹೋಟೆಲ್‌ಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ. ಪ್ರತಿಷ್ಠಿತ ಹೋಟೆಲ್‌ಗಳ ಅಡುಗೆಮನೆಗಳಲ್ಲೇ ಇಂತಹ ಅಕ್ರಮಗಳು ಪತ್ತೆಯಾಗಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಾರುಕಟ್ಟೆಗೆ ಬರಲಿದೆ ‘ವಾರಣಾಸಿ’ ‘ರುದ್ರ ಲಾಕೆಟ್’ ಹಾಗೂ ಟೀ-ಶರ್ಟ್ಸ್ – Kannada News | Mahesh Babu Starrer Varanasi Makers Announce Official Merchandise Launch Including Rudhra Locket

ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ಮುಂದಿನ ಬಿಗ್ ಬಜೆಟ್ ಸಿನಿಮಾ ‘ವಾರಣಾಸಿ’ ಕುರಿತು ದಿನಕ್ಕೊಂದು ಹೊಸ ಸುದ್ದಿಗಳು ಹೊರಬರುತ್ತಿವೆ. ಇತ್ತೀಚೆಗೆ ನಿರ್ಮಾಪಕ ಎಸ್. ಎಸ್. ಕಾರ್ತಿಕೇಯ ಹಂಚಿಕೊಂಡ ವಿಡಿಯೋ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಮಹೇಶ್ ಬಾಬು ಜನ್ಮದಿನದ ಅಂಗವಾಗಿ ದೊಡ್ಡ ಅಪ್‌ಡೇಟ್ ಸಿಗಲಿದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಇದೀಗ ಚಿತ್ರತಂಡ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ.

ಕೆಲ ದಿನಗಳ ಹಿಂದೆ ಕಾರ್ತಿಕೇಯ ಕೆಲವು ವಿಚಿತ್ರ ಶಬ್ದಗಳಿರುವ ವಿಡಿಯೋ ಹಂಚಿಕೊಂಡಿದ್ದರು. ಅದರಲ್ಲಿ ಬಾಬ್, ವಿ-ನೆಕ್, ರಾಮ, ಪಿರಮಿಡ್ ಮತ್ತು ಬೋರ್ಡ್ ಗೇಮ್ ಎಂಬ ಪದಗಳಿದ್ದವು. ಇದನ್ನು ನೋಡಿ ಅಭಿಮಾನಿಗಳು ಟೀಸರ್ ಅಥವಾ ಗ್ಲಿಂಪ್ಸ್ ಬರಬಹುದು ಎಂದು ಭಾವಿಸಿದ್ದರು. ಆದರೆ ಚಿತ್ರತಂಡ ಮಹೇಶ್ ಬಾಬು ಅವರ ಎರಡು ನಯವಾದ ಪೋಸ್ಟರ್‌ಗಳನ್ನು ಮಾತ್ರ ಬಿಡುಗಡೆ ಮಾಡಿತ್ತು. ಇದು ಅಭಿಮಾನಿಗಳಲ್ಲಿ ತುಸು ನಿರಾಶೆ ಮೂಡಿಸಿದರೂ ಪೋಸ್ಟರ್‌ಗಳು ಸಖತ್ ವೈರಲ್ ಆಗಿದ್ದವು.

ಇದೀಗ ‘ವಾರಣಾಸಿ’ ಸಿನಿಮಾದಿಂದ ಮತ್ತೊಂದು ಅಧಿಕೃತ ಅಪ್‌ಡೇಟ್ ಹೊರಬಿದ್ದಿದೆ. ಈ ಬಿಗ್ ಬಜೆಟ್ ಸಿನಿಮಾದ ಅಧಿಕೃತ ಮರ್ಚಂಡೈಸ್ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ. ಚಿತ್ರದಲ್ಲಿ ಮಹೇಶ್ ಬಾಬು ಧರಿಸಿರುವ ರುದ್ರ ಲಾಕೆಟ್ ಧರಿಸಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇದರ ಜೊತೆಗೆ ಪ್ರತ್ಯೇಕ ಟೀ-ಶರ್ಟ್‌ಗಳು ಹಾಗೂ ಇತರ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಈ ಸುದ್ದಿ ಅಭಿಮಾನಿಗಳಲ್ಲಿ ಹೊಸ ಹುಮ್ಮಸ್ಸು ತಂದಿದೆ.

ಇತ್ತೀಚೆಗಷ್ಟೇ ವಾರಣಾಸಿ ಚಿತ್ರತಂಡ ಅಧಿಕೃತ ವೆಬ್‌ಸೈಟ್ ಅನ್ನು ಪ್ರಾರಂಭಿಸಿತ್ತು. ಅಭಿಮಾನಿಗಳಿಗಾಗಿ ವಿಶೇಷ ಆನ್‌ಲೈನ್ ಗೇಮ್ ಒಂದನ್ನು ಪರಿಚಯಿಸಲಾಗಿತ್ತು. ಇದರಲ್ಲಿ ಗೆದ್ದವರಿಗೆ ಆಕರ್ಷಕ ಬಹುಮಾನಗಳನ್ನು ಘೋಷಿಸಲಾಗಿತ್ತು. ಈಗ ಮರ್ಚಂಡೈಸ್ ಬಿಡುಗಡೆ ಮಾಡುತ್ತಿರುವುದು ಪ್ರಚಾರದ ಮತ್ತೊಂದು ಭಾಗವಾಗಿದೆ. ಚಿತ್ರದ ಪ್ರಚಾರ ವೈಖರಿ ನೋಡಿ ಅಭಿಮಾನಿಗಳು ಮಂತ್ರಮುಗ್ಧರಾಗಿದ್ದಾರೆ. ಪ್ರತಿಯೊಂದು ಅಪ್‌ಡೇಟ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ದ್ವಿಗುಣಗೊಳಿಸುತ್ತಿದೆ.

ಇದನ್ನೂ ಓದಿ: ಮಹೇಶ್ ಬಾಬು ಹುಟ್ಟುಹಬ್ಬ: ‘ವಾರಣಾಸಿ’ಯ ‘ರುದ್ರ’ನ ಲುಕ್ ರಿಲೀಸ್

‘ವಾರಣಾಸಿ’ ಸಿನಿಮಾದಲ್ಲಿ ಮಹೇಶ್ ಬಾಬು ಜೊತೆಗೆ ಪ್ರಿಯಾಂಕಾ ಚೋಪ್ರಾ ನಟಿಸುತ್ತಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆ. ಎಲ್. ನಾರಾಯಣ ಹಾಗೂ ಎಸ್. ಎಸ್. ಕಾರ್ತಿಕೇಯ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಆಸ್ಕರ್ ವಿಜೇತ ಎಂ. ಎಂ. ಕೀರವಾಣಿ ಸಂಗೀತ ನೀಡುತ್ತಿದ್ದಾರೆ. ಈ ಬಹುನಿರೀಕ್ಷಿತ ಸಿನಿಮಾ 2027 ರ ಏಪ್ರಿಲ್ 7 ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶ್ರೀಲಂಕಾ ಸರಣಿಗೂ ಮುನ್ನ ಭಾರತ ತಂಡದಲ್ಲಿ 2 ಬದಲಾವಣೆ! – Kannada News | SL vs IND: Two Major Changes in Team India Squad

ಭಾರತ ಟೆಸ್ಟ್ ತಂಡ: ಶುಭ್‌ಮನ್ ಗಿಲ್ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ರಿಷಭ್ ಪಂತ್, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮಾನವ್ ಸುತಾರ್, ಸರಂಶ್ ಜೈನ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ಆಖಿಬ್ ನಬಿ, ಸರ್ಫರಾಝ್ ಖಾನ್. (PC: BCCI)

Source link

ತಂದೆ ವಿಜಯ್ ಬೆಂಬಲ ನೆನೆದು ಭಾವುಕರಾದ ಮಗ ಜೇಸನ್ – Kannada News | Jason Sanjay Credits Father Vijay For Supporting His Filmmaking Career Journey

ತಮಿಳು ನಟ ಹಾಗೂ ರಾಜಕಾರಣಿ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ಶೀಘ್ರದಲ್ಲೇ ಸಿನಿರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಅವರು ನಟನೆಯ ಬದಲು ನಿರ್ದೇಶನದ ಹಾದಿ ಹಿಡಿದಿದ್ದಾರೆ. ಸುಂದೀಪ್ ಕಿಶನ್ ಅಭಿನಯದ ‘ಸಿಗ್ಮಾ’ ಸಿನಿಮಾ ಮೂಲಕ ಜೇಸನ್ ಸಿನಿಮಾ ಜಗತ್ತಿಗೆ ಪರಿಚಯವಾಗುತ್ತಿದ್ದಾರೆ. ತಮ್ಮ ಸಿನಿಯಾನದ ಆರಂಭಿಕ ದಿನಗಳ ಬಗ್ಗೆ ಜೇಸನ್ ಇತ್ತೀಚೆಗೆ ಮುಕ್ತವಾಗಿ ಮಾತನಾಡಿದ್ದಾರೆ. ಚಿತ್ರರಂಗಕ್ಕೆ ಬರಲು ತಂದೆ ನೀಡಿದ ಬೆಂಬಲವನ್ನು ಅವರು ಸ್ಮರಿಸಿದ್ದಾರೆ.

ಚಿಕ್ಕಂದಿನಿಂದಲೂ ಜೇಸನ್ ಸಂಜಯ್ ಶೂಟಿಂಗ್ ಸೆಟ್‌ಗಳನ್ನು ಹತ್ತಿರದಿಂದ ನೋಡಿದ್ದಾರೆ. ಹೀಗಾಗಿ ಅವರಿಗೆ ಸಿನಿಮಾಗಳ ಬಗ್ಗೆ ಅಪಾರ ಆಸಕ್ತಿ ಇತ್ತು. ಪ್ರೇಕ್ಷಕರಂತೆ ಅವರು ಸಿನಿಮಾವನ್ನು ಕೇವಲ ಮನರಂಜನೆಗಾಗಿ ನೋಡಲಿಲ್ಲ. ಚಿತ್ರರಂಗದ ಬಗ್ಗೆ ಆಳವಾದ ಜ್ಞಾನ ಪಡೆಯಲು ಬಯಸಿದ್ದರು. ಅದಕ್ಕಾಗಿ ವಿದೇಶಕ್ಕೆ ಹೋಗಿ ಫಿಲ್ಮ್ ಮೇಕಿಂಗ್ ಕಲಿಯಲು ನಿರ್ಧರಿಸಿದರು.

ಈ ನಿರ್ಧಾರಕ್ಕೆ ತಂದೆ ವಿಜಯ್ ತಕ್ಷಣ ಒಪ್ಪಿಗೆ ನೀಡಿದರು. ಕುಟುಂಬದ ಇತರರಿಗಿಂತ ವಿಜಯ್ ಈ ನಿರ್ಧಾರವನ್ನು ಬೇಗನೇ ಅರ್ಥಮಾಡಿಕೊಂಡರು. ಸಿನಿಮಾ ಶಿಕ್ಷಣದ ಪ್ರಾಮುಖ್ಯತೆ ವಿಜಯ್ ಅವರಿಗೆ ಚೆನ್ನಾಗಿ ತಿಳಿದಿತ್ತು. ವಿದೇಶಕ್ಕೆ ಹೋಗಿ ಹೊಸ ವಿಷಯಗಳನ್ನು ಕಲಿಯುವಂತೆ ವಿಜಯ್ ಪ್ರೋತ್ಸಾಹಿಸಿದರು. ಈ ಕೋರ್ಸ್‌ನಿಂದ ನಿನಗೆ ಏನು ಇಷ್ಟ ಎಂಬುದು ತಿಳಿಯುತ್ತದೆ ಎಂದು ಹೇಳಿದರು. ಈ ವೃತ್ತಿ ನಿನಗೆ ಹೊಂದುತ್ತದೆಯೇ ಎಂದು ತಿಳಿಯಲು ಇದು ಸೂಕ್ತ ದಾರಿ ಎಂದರು. ತಂದೆಯ ಈ ಮಾತಿನಿಂದ ಜೇಸನ್ ಅವರಿಗೆ ಧೈರ್ಯ ಸಿಕ್ಕಿತು.

ಅಮ್ಮ ಸಂಗೀತಾ ಬಗ್ಗೆಯೂ ಜೇಸನ್ ಮನಬಿಚ್ಚಿ ಮಾತನಾಡಿದ್ದಾರೆ. ಅಮ್ಮ ಈಗಲೂ ನನ್ನನ್ನು ಮಗುವಿನಂತೆಯೇ ನೋಡಿಕೊಳ್ಳುತ್ತಾರೆ. ಕೆಲಸ ಆರಂಭಿಸಿದ ನಂತರ ಅಮ್ಮನ ಜೊತೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಆದರೂ ಅಮ್ಮ ನನ್ನ ಪ್ರತಿಯೊಂದು ಹೆಜ್ಜೆಯನ್ನೂ ಗಮನಿಸುತ್ತಾರೆ. ಅವರು ನನ್ನ ನಿರಂತರ ಪ್ರೇರಕಿಯಾಗಿದ್ದಾರೆ. ನನ್ನ ಮೊದಲ ಸಿನಿಮಾವನ್ನು ಅಮ್ಮ ನೋಡುವುದನ್ನು ಕಾಯುತ್ತಿದ್ದೇನೆ. ಅಮ್ಮ ಯಾವತ್ತೂ ನೇರ ಹಾಗೂ ಪ್ರಾಮಾಣಿಕ ಅಭಿಪ್ರಾಯ ನೀಡುತ್ತಾರೆ. ಅವರ ಸತ್ಯಸಂಧತೆ ನನಗೆ ತುಂಬಾ ಇಷ್ಟವಾಗುತ್ತದೆ.

ಇದನ್ನೂ ಓದಿ: ತಮಿಳುನಾಡು ಸಿಎಂ ವಿಜಯ್ ವಿರುದ್ಧದ ವಿಚ್ಛೇದನ ಅರ್ಜಿ ವಾಪಾಸ್ ಪಡೆದ ಪತ್ನಿ ಸಂಗೀತಾ; ಕೇಸ್ ಮುಕ್ತಾಯ

ಇನ್ನೊಂದೆಡೆ ವಿಜಯ್ ಹಾಗೂ ಸಂಗೀತಾ ಅವರ ವಿಚ್ಛೇದನ ಪ್ರಕರಣ ಅಂತ್ಯವಾಗಿದೆ. ಸಂಗೀತಾ ಅವರು ತಮ್ಮ ಅರ್ಜಿಯನ್ನು ಹಿಂಪಡೆದಿದ್ದಾರೆ. ಚೆಂಗಲ್ಪಟ್ಟು ಜಿಲ್ಲಾ ನ್ಯಾಯಾಲಯದಲ್ಲಿ ಈ ಅರ್ಜಿ ಸಲ್ಲಿಕೆಯಾಗಿತ್ತು. ದಂಪತಿಗಳ ಒಪ್ಪಂದದ ನಂತರ ನ್ಯಾಯಾಲಯ ಈ ಪ್ರಕರಣವನ್ನು ಮುಕ್ತಾಯಗೊಳಿಸಿದೆ. ಇದು ಕುಟುಂಬಕ್ಕೆ ದೊಡ್ಡ ಸಮಾಧಾನ ತಂದಿದೆ. ಜೇಸನ್ ಅವರ ನಿರ್ದೇಶನದ ಕನಸು ಈಗ ನನಸಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version