ಟಿವಿ9 ಕನ್ನಡ ವತಿಯಿಂದ ಲೈಫ್​ಸ್ಟೈಲ್, ಆಟೊ, ಫರ್ನಿಚರ್ ಎಕ್ಸ್​ಪೋ 2026; ಇದು ಬೆಂಗಳೂರಿನ ಅತಿದೊಡ್ಡ ಮೇಳ – Kannada News | TV9 Kannada Presents Bengaluru’s Biggest Expo of the Year – Lifestyle, Automobile & Furniture Expo 2026

ಟಿವಿ9 ಲೈಫ್​ಸ್ಟೈಲ್, ಆಟೊ, ಫರ್ನಿಚರ್ ಎಕ್ಸ್​ಪೋ

ಬೆಂಗಳೂರು, ಮಾರ್ಚ್ 2: ಪ್ರತೀ ವರ್ಷ ಸಾವಿರಾರು, ಲಕ್ಷಾಂತರ ಬೆಂಗಳೂರಿಗರನ್ನು ಸೆಳೆಯುತ್ತಾ ಬಂದಿರುವ ಮಹಾಮೇಳ ಈ ವರ್ಷ ಮತ್ತೆ ಸಿಲಿಕಾನ್ ಸಿಟ್ಟಿಗೆ ಮರಳಿದೆ. ಕರ್ನಾಟಕದ ಅಗ್ರಮಾನ್ಯ ಸುದ್ದಿ ವಾಹಿನಿ ಎನಿಸಿರುವ ಟಿವಿ9 ಕನ್ನಡ ವತಿಯಿಂದ ಲೈಫ್​ಸ್ಟೈಲ್, ಆಟೊಮೊಬೈಲ್ ಮತ್ತು ಫರ್ನಿಚರ್ ಎಕ್ಸ್​ಪೋ 2026 ಮೇಳ (TV9 Kannada Lifestyle, Automobile & Furniture Expo 2026) ನಡೆಯಲಿದೆ. ಅರಮನೆ ಮೈದಾನದಲ್ಲಿ ಮಾರ್ಚ್ 6ರಿಂದ ಮೂರು ದಿನಗಳ ಕಾಲ ನಡೆಯುವ ಈ ಮೆಗಾ ಎಕ್ಸ್​ಪೋದಲ್ಲಿ ಹೊಚ್ಚ ಹೊಸ ಫ್ಯಾಷನ್, ವಾಹನಗಳು, ಗೃಹೋಪಕರಣಗಳನ್ನು ಕಾಣಬಹುದು.

ಟಿವಿ9 ಕನ್ನಡ ಲೈಫ್​ಸ್ಟೈಲ್, ಆಟೊಮೊಬೈಲ್, ಫರ್ನಿಚರ್ ಎಕ್ಸ್​ಪೋದಲ್ಲಿ ನಿರೀಕ್ಷಿಸಬಹುದಾದದ್ದು…

  • ವೈವಿಧ್ಯಮಯ ಮತ್ತು ಅತ್ಯಾಧುನಿಕ ಎಲೆಕ್ಟ್ರಾನಿಕ್ ಗ್ಯಾಜೆಟ್​ಗಳನ್ನು ಈ ಎಕ್ಸ್​ಪೋದಲ್ಲಿ ನೋಡಬಹುದು. ಸ್ಮಾರ್ಟ್​ಹೋಮ್ ಟೆಕ್ನಾಲಜಿ ಹೊಂದಿರುವ ಎಸಿಗಳು, ರೆಫ್ರಿಜರೇಟರ್​ಗಳು, ಅಡುಗೆ ಮನೆ ವಸ್ತುಗಳು, ಪರ್ಸನಲ್ ಗ್ಯಾಜೆಟ್​ಗಳು ನಿಮಗಾಗಿ ಕಾಯುತ್ತಿರುತ್ತವೆ.
  • ಉತ್ಕೃಷ್ಟ ಗುಣಮಟ್ಟದ ಪೀಠೋಪಕರಣ ಮತ್ತು ಹೋಮ್ ಡೆಕೋರೇಶನ್ ವಸ್ತುಗಳು ಇರುತ್ತವೆ. ಬಹಳ ಸುಂದರವಾದ, ಲಕ್ಷುರಿ ಎನಿಸುವ ಸೋಫಾ ಸೆಟ್​ಗಳು, ಡೈನಿಂಗ್ ಟೇಬಲ್, ಇಂಟೀರಿಯನ್ ಡೆಕೋರೇಶನ್, ಸ್ಮಾರ್ಟ್ ಲಿವಿಂಗ್ ಸಲ್ಯೂಶನ್​ಗಳು ಪ್ರದರ್ಶನಗೊಳ್ಳುತ್ತವೆ. ಅತ್ಯಾಧುನಿಕ ಮನೆಗಳಿಗೆ ಒಪ್ಪುವಂತಹ ಇನ್ನೋವೇಟಿವ್ ಎನಿಸುವ ಉತ್ಪನ್ನಗಳು ಇಲ್ಲಿರುತ್ತವೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಖ್ಯಾತ ಬ್ರ್ಯಾಂಡ್​ಗಳ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತದೆ.
  • ಲೇಟೆಸ್ಟ್ ಟೆಕ್ನಾಲಜಿಯೊಂದಿಗೆ ನಿರ್ಮಿಸಲಾಗಿರುವ ಹೊಸ ಎಲೆಕ್ಟ್ರಿಕ್ ವಾಹನಗಳು, ಎಸ್​ಯುವಿಗಳು, ಬೈಕ್​ಗಳು, ಕಾನ್ಸೆಪ್ಟ್ ಕಾರುಗಳು ನಿಮ್ಮನ್ನು ಆಕರ್ಷಿಸಲು ಎಕ್ಸ್ಪೋದಲ್ಲಿ ಕಾಯುತ್ತಿರುತ್ತವೆ.
  • ಫ್ಯಾಷನ್ ಮತ್ತು ಆಭರಣಗಳ ಕಲೆಕ್ಷನ್ಸ್ ಮನೋಹರವಾಗಿರಲಿವೆ. ಹೊಸ ಫ್ಯಾಷನ್ ಟ್ರೆಂಡ್​ಗಳು, ಡಿಸೈನರ್ ಕಲೆಕ್ಷನ್, ಆಭರಣಗಳನ್ನು ಇಲ್ಲಿ ಕಾಣಬಹುದು. ದೇಶ ವಿದೇಶಗಳ ಫ್ಯಾಷನ್ ಬ್ರ್ಯಾಂಡ್​ಗಳ ಉತ್ಪನ್ನಗಳು ಇಲ್ಲಿ ಪ್ರದರ್ಶನಕ್ಕೆ ಮತ್ತು ಮಾರಾಟಕ್ಕೆ ಲಭ್ಯ ಇರುತ್ತವೆ.

ಟಿವಿ9 ಕನ್ನಡ ಲೈಫ್​ಸ್ಟೈಲ್, ಆಟೊಮೊಬೈಲ್, ಫರ್ನಿಚರ್ ಎಕ್ಸ್​ಪೋ ಕೆಲವಾರು ವರ್ಷಗಳಿಂದ ನಡೆಯುತ್ತಾ ಬಂದಿದೆ. ಹಿಂದಿನ ಆವೃತ್ತಿಯ ಮೇಳಗಳಿಗೆ ಭರ್ಜರಿ ಸ್ಪಂದನೆ ಸಿಕ್ಕಿದೆ. ಪ್ರತೀ ಎಕ್ಸ್​ಪೋದಲ್ಲೂ ಸಾವಿರಾರು ಜನರು ಆಗಮಿಸಿ, ಲಾಭ ಪಡೆದಿದ್ದಾರೆ. ಕುಟುಂಬದವರು, ವೃತ್ತಿಪರರು ಮತ್ತು ಹೊಸ ಫ್ಯಾಷನ್ ಮತ್ತು ಗ್ಯಾಜೆಟ್​ಗಳ ಪ್ರೇಮಿಗಳು ಎಲ್ಲರಿಗೂ ಹೇಳಿ ಮಾಡಿಸಿದಂತಹ ಪ್ಲಾಟ್​ಫಾರ್ಮ್ ಇದು. ಈ ಎಕ್ಸ್​ಪೋದಲ್ಲಿ ಆಕರ್ಷಣೀಯ ಎನಿಸುವ ಡಿಸ್ಕೌಂಟ್​ಗಳು, ಡೀಲ್​ಗಳು ನಿಮಗಾಗಿ ಲಭ್ಯ ಇರುತ್ತವೆ.

ಟಿವಿ9 ಕನ್ನಡ ಲೈಫ್​ಸ್ಟೈಲ್, ಆಟೊಮೊಬೈಲ್, ಫರ್ನಿಚರ್ ಎಕ್ಸ್​ಪೋ ವೇಳಾಪಟ್ಟಿ

  • ಎಕ್ಸ್​ಪೋ ದಿನಾಂಕ: 2026ರ ಮಾರ್ಚ್ 6, 7 ಮತ್ತು 8ರಂದು.
  • ಸ್ಥಳ: ಬೆಂಗಳೂರಿನ ತ್ರಿಪುರವಾಸಿನಿ ಅರಮನೆ ಮೈದಾನ
  • ಸಮಯ: ಬೆಳಗ್ಗೆ 10ರಿಂದ ರಾತ್ರಿ 8ರವರೆಗೆ

ಪಾರ್ಕಿಂಗ್ ಮತ್ತು ಪ್ರವೇಶ ಉಚಿತ

Source link

ಮಧ್ಯ ಪ್ರಾಚ್ಯದಲ್ಲಿ ಯುದ್ಧ: ಪರದೇಶದಲ್ಲಿ ಸಿಲುಕಿ ಕನ್ನಡಿಗರ ಪರದಾಟ, ರಾಜ್ಯ ಸರ್ಕಾರದಿಂದ ಸಹಾಯವಾಣಿ ಆರಂಭ – Kannada News | Middle East War: Kannadigas Stranded Abroad Amidst Conflict, Govt Seeks Safe Return

ಬೆಂಗಳೂರು, ಮಾರ್ಚ್​​ 2: ಮಧ್ಯ ಪ್ರಾಚ್ಯದಲ್ಲಿ ಯುದ್ಧ ಆರಂಭವಾಗಿರುವ ಹಿನ್ನೆಲೆ ಕುಟುಂಬ ಸಮೇತ ವಿದೇಶ ಪ್ರವಾಸಕ್ಕೆ ತೆರಳಿದವರು, ಉದ್ಯೋಗ ಸಂಬಂಧ ಕೆಲಸಗಳಿಗಾಗಿ ದುಬೈಗೆ ಹೋಗಿರುವ ಕನ್ನಡಿಗರು ಸ್ವದೇಶಕ್ಕೆ ಹಿಂತಿರುಗಲಾರದೆ ಪರದಾಟ ನಡೆಸುತ್ತಿದ್ದಾರೆ. ಏಕಾಏಕಿ ವಿಮಾನಗಳ ಹಾರಾಟ ರದ್ದುಗೊಂಡಿರುವ ಕಾರಣ ಆತಂಕಕ್ಕೆ ಒಳಗಾಗಿದ್ದಾರೆ. ಕ್ಷಣ ಕ್ಷಣಕ್ಕೂ ಯುದ್ಧದ ತೀವ್ರತೆ ಹೆಚ್ಚುತ್ತಿರುವ ಕಾರಣ ಜೀವ ಭಯ ಕಾಡತೊಡಗಿದ್ದು, ಈ ನಡುವೆ ಕನ್ನಡಿಗರು ಸೇರಿದಂತೆ ಸರ್ವ ಭಾರತೀಯರ ಸುರಕ್ಷಿತಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳೋದಾಗಿ ತಿಳಿಸಿದೆ.

ಪ್ಯಾಮಿಲಿ ಜೊತೆ ಪ್ರವಾಸಕ್ಕೆ ಹೋದವರ ಪರದಾಟ

ಫ್ಯಾಮಿಲಿ ಜೊತೆ ದುಬೈ ಪ್ರವಾಸಕ್ಕೆ ಹೋಗಿದ್ದ ಚಿಕ್ಕಮಗಳೂರಿನ‌ ಮಯೂರ ಹೋಟೆಲ್ ಮಾಲೀಕ ಗಿರೀಶ್ ಮತ್ತು ಕುಣಿಗಲ್​​ನಲ್ಲಿ ವಾಸವಿರೋ ಅವರ ಸಹೋದರ ಹರೀಶ್ ಭಟ್ ಕುಟುಂಬಗಳು ದುಬೈನಲ್ಲಿ ಸಿಲುಕಿವೆ. ಅಲ್ಲಿಂದ ಭಾರತಕ್ಕೆ ಹಿಂದಿರುಗಲು ಮಾರ್ಚ್​​ 3ಕ್ಕೆ ಫ್ಲೈಟ್​​ ಬುಕ್​​ ಆಗಿತ್ತು. ಈ ನಡುವೆ ಯುದ್ಧ ಆರಂಭವಾಗಿರುವ ಕಾರಣ ಎರಡೂ ಕುಟುಂಬಗಳ ಒಟ್ಟು 9 ಜನ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ. ಫೆ. 23ರಂದು ಇವರು ಪ್ರವಾಸಕ್ಕೆ ತೆರಳಿದ್ದರು ಎನ್ನಲಾಗಿದೆ. ಹಾಗೆಯೇ ಚಿತ್ರದುರ್ಗದ ಬಾಪೂಜಿ ವಿದ್ಯಾ ಸಂಸ್ಥೆಯ ಕೆ.ಎಂ. ವೀರೇಶ್ ಕುಟುಂಬ ಕೂಡ ದುಬೈನಲ್ಲೇ ಲಾಕ್​​ ಆಗಿದೆ. ಕುಟುಂಬದವರೆಲ್ಲರೂ ಸುರಕ್ಷಿತವಾಗಿದ್ದು, ಖಾಸಗಿ ಪತ್ರಿಕೆಯ ಅವಾರ್ಡ್ ಕಾರ್ಯಕ್ರಮಕ್ಕೆಂದು ಇವರು ತೆರಳಿದ್ದರು.

ಪ್ಲೀಸ್​​ ನಮ್ಮನ್ನು ವಾಪಸ್​​ ಕರೆಸಿಕೊಳ್ಳಿ- ಮಹಿಳೆಯ ಅಳಲು


ಬೆಂಗಳೂರಿನ ಹೊಸಕೆರೆ ನಿವಾಸಿಯಾಗಿರುವ ಸುನೀತಾ ಅವರು ತಮ್ಮ ಕುಟುಂಬದೊಂದಿಗೆ ದುಬೈ ಪ್ರವಾಸಕ್ಕೆ ತೆರಳಿದ್ದಾಗ ಅನಿರೀಕ್ಷಿತ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಫೆಬ್ರವರಿ 23ರಂದು ದುಬೈಗೆ ಪ್ರಯಾಣಿಸಿದ್ದ ಈ ಕುಟುಂಬ, ಫೆಬ್ರವರಿ 28ರಂದು ಅಬುಧಾಬಿಯಿಂದ ಬೆಂಗಳೂರಿಗೆ ಮರಳಬೇಕಿತ್ತು. ಆದರೆ, ಇಸ್ರೇಲ್-ಇರಾನ್ ಸಂಘರ್ಷದ ಕಾರಣದಿಂದಾಗಿ ಅವ ಮರಳಬೇಕಿದ್ದ ವಿಮಾನಗಳು ರದ್ದುಗೊಂಡಿವೆ.

ಇದನ್ನೂ ಓದಿ: ಕನ್ನಡಿಗರಷ್ಟೇ ಅಲ್ಲ ಯಾರೂ ಆತಂಕ ಪಡಬೇಕಿಲ್ಲ, ಎಲ್ಲರನ್ನೂ ಸುರಕ್ಷಿತವಾಗಿ ಕರೆತರುತ್ತೇವೆ; ಪ್ರಲ್ಹಾದ್ ಜೋಶಿ ಅಭಯ

ಲಂಡನ್​​ಗೆ ಹೊರಟಿದ್ದ ಪ್ರಯಾಣಿಕ ದುಬೈನಲ್ಲಿ ಲಾಕ್​​

ಕೆಲಸದ ವಿಚಾರಕ್ಕೆ ಬೆಂಗಳೂರಿನಿಂದ ಲಂಡನ್​​ಗೆ ಹೊರಟಿದ್ದ ಸೀನಿಯರ್​ ಈಕ್ವಿಟಿ ಸಲಹಾಗಾರ ನಾಗೇಂದ್ರ ಎಂಬವರು ಕೂಡ ದುಬೈನಲ್ಲಿ ಸಿಲುಕಿಕೊಂಡು ಪರದಾಟ ನಡೆಸುತ್ತಿದ್ದಾರೆ. ಲಂಡನ್​​ಗೆ ಹೊರಟಿದ್ದ ಇವರು ದುಬೈನಲ್ಲಿ ವಿಮಾನ ಬದಲಾಯಿಸಬೇಕಿತ್ತು. ಕುಟುಂಬದ ಜೊತೆಗೆ ಮಾತನಾಡಿರುವ ನಾಗೇಂದ್ರ, ಸುತ್ತಮುತ್ತ ದೊಡ್ಡ ಶಬ್ದ ಕೇಳಿಬರುತ್ತಿದೆ ಎಂದು ಹೆಂಡತಿಗೆ ತಿಳಿಸಿದ್ದಾರೆ. ತಾನಿರುವ ಪ್ರದೇಶದಲ್ಲಿ ನೆಟ್​​ವರ್ಕ್​​ ಸಮಸ್ಯೆ ಇರೋದಾಗಿಯೂ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಸಹಾಯವಾಣಿ ಆರಂಭ

ಮಧ್ಯಪ್ರಾಚ್ಯ ದೇಶಗಳಲ್ಲಿ ಅನೇಕ ಕನ್ನಡಿಗರು ಸಿಲುಕಿರುವ ಹಿನ್ನೆಲೆ ರಾಜ್ಯ ಸರ್ಕಾರ ತುರ್ತು ಸಹಾಯವಾಣಿ ಆರಂಭಿಸಿದೆ. 080-22340676 ಅಥವಾ 22253707ಗೆ ಕರೆ ಮಾಡಬಹುದು ಎಂದು ತಿಳಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಟಾಕ್ಸಿಕ್’ಗೆ ತಿರುಗೇಟು ಕೊಡಲು ಸರ್​​​ಪ್ರೈಸ್ ಶಾಕ್ ರೆಡಿ ಮಾಡಿದ ‘ಧುರಂಧರ್ 2’ – Kannada News | Dhurandhar 2 vs Toxic: Can the Sequel’s Holi Trailer Overcome Yash’s Hype for March 19?

ಒಂದು ಸಿನಿಮಾ ಹಿಟ್ ಆಗಿ ಅದಕ್ಕೆ ಸೀಕ್ವೆಲ್ ಬರ್ತಿದೆ ಎಂದರೆ ಆ ಚಿತ್ರ ಹಿಟ್ ಆಗೋದು ಬಹುತೇಕ ಖಚಿತ ಎಂಬ ವಾತಾವರಣ ನಿರ್ಮಾಣ ಆಗಿದೆ. ‘ಬಾಹುಬಲಿ 2’, ‘ಕೆಜಿಎಫ್ 2’, ‘ಪುಷ್ಪ 2’ ಚಿತ್ರಗಳ ಮೂಲಕ ಇದು ಸಾಬೀತಾಗಿದೆ. ಈಗ ಮಾರ್ಚ್ 19ಕ್ಕೆ ‘ಧುರಂಧರ್ 2’ (Dhurandhar 2) ಸಿನಿಮಾ ರಿಲೀಸ್ ಆಗುತ್ತಿದೆ. ಆದರೆ, ಈ ಚಿತ್ರಕ್ಕೆ ಪ್ರಚಾರ ಆರಂಭ ಆಗಿಲ್ಲ. ಇದು ರಣವೀರ್ ಸಿಂಗ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಯಶ್ ಎದುರು ಬರಲು ಸಾಕಷ್ಟು ಸಿದ್ಧತೆ ಬೇಕು. ಆದರೆ, ಆ ಸಿದ್ಧತೆ ತಂಡದ ಕಡೆಯಿಂದ ಆಗುತ್ತಿಲ್ಲ ಎಂಬ ಕೊರಗು ಅಭಿಮಾನಿಗಳಿಗೆ ಇದೆ. ಹೀಗಿರುವಾಗಲೇ ಸಡನ್ ಶಾಕ್ ನೀಡಲು ‘ಧುರಂಧರ್ 2’ ತಂಡ ಪ್ಲ್ಯಾನ್ ಮಾಡಿದೆಯಂತೆ.

ಯಾವುದೇ ವಿಷಯವನ್ನು ಘೋಷಣೆ ಮಾಡಿ ರಿಲೀಸ್ ಮಾಡಿದರೆ ಅದಕ್ಕೆ ಹೈಪ್ ಸಿಗೋ ಸಾಧ್ಯತೆ ಕಡಿಮೆ. ಆದರೆ, ಯಾವುದೇ ಘೋಷಣೆ ಇಲ್ಲದೆ ಬಂದರೆ ಅದಕ್ಕೆ ಸಿಗೋ ಹೈಪ್ ಹೆಚ್ಚು. ಹೀಗಾಗಿ, ಹೋಳಿ ಹಬ್ಬದ ಪ್ರಯುಕ್ತ ಫೆಬ್ರವರಿ 3ರಂದು ‘ಧುರಂಧರ್ 2’ ಟ್ರೇಲರ್ ಲಾಂಚ್ ಮಾಡಲು ಪ್ಲ್ಯಾನ್ ರೂಪಿಸಲಾಗಿದೆಯಂತೆ. ಈ ಮೂಲಕ ಹಲ್ಚಲ್ ಎಬ್ಬಿಸಲು ಯೋಜನೆ ರೆಡಿ ಆಗಿದೆ.

‘ಟಾಕ್ಸಿಕ್’ ತಂಡ ನಿರಂತರವಾಗಿ ಸಿನಿಮಾ ಪ್ರಚಾರ ಮಾಡುತ್ತಿದೆ. ದಿನಕ್ಕೊಂದು ಅಪ್​​ಡೇಟ್ ಕೊಡುವ ಮೂಲಕ ಕುತೂಹಲ ಮೂಡಿಸುತ್ತಿದೆ. ಆದರೆ, ‘ಧುರಂಧರ್ 2’ ಟೀಂ ಆ ರೀತಿ ಅಲ್ಲ. ಈ ಮೊದಲು ‘ಧುರಂದರ್ 2’ ತಂಡದವರು ಟೀಸರ್ ರಿಲೀಸ್ ಮಾಡಿದ್ದರು. ಅದು ಮೊದಲ ಪಾರ್ಟ್​​ನ ಕೊನೆಯಲ್ಲಿ ಬರುವ ದೃಶ್ಯಗಳೇ ಇದ್ದವು. ಹೀಗಾಗಿ ಈ ಟೀಸರ್ ಗಮನ ಸೆಳೆಯುವಲ್ಲಿ ವಿಫಲವಾಗಿತ್ತು. ಈ ಕಾರಣದಿಂದ ಈಗ ಟ್ರೇಲರ್ ರಿಲೀಸ್ ಮಾಡಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ‘ಧುರಂದರ್ 2’ ತಂಡ ಪ್ಲ್ಯಾನ್ ಮಾಡಿಕೊಂಡಿದೆ.

ಇದನ್ನೂ ಓದಿ: ಅಬ್ಬಬ್ಬಾ.. ‘ಟಾಕ್ಸಿಕ್’ ಚಿತ್ರಕ್ಕಾಗಿ ಕಿಯಾರಾ ಪಡೆದ ಸಂಭಾವನೆ ಇಷ್ಟೊಂದಾ?

‘ಟಾಕ್ಸಿಕ್’ ವಿರುದ್ಧ ಗೆಲ್ಲಬೇಕು ಎಂದರೆ ಅದು ಸುಲಭದಲ್ಲಿ ಇಲ್ಲ. ಯಶ್ ಅವರು ಏನೇ ಪ್ಲ್ಯಾನ್ ಮಾಡಿದರೂ ದೊಡ್ಡ ಮಟ್ಟದಲ್ಲಿ ಆಲೋಚಿಸಿರುತ್ತಾರೆ. ಎದುರಾಳಿಯ ಪ್ಲ್ಯಾನ್ ಏನು ಎಂಬುದನ್ನು ತಿಳಿದೇ ‘ಟಾಕ್ಸಿಕ್’ ರಿಲೀಸ್ ಮಾಡಲು ಅವರು ಮುಂದೆ ಬಂದಿದ್ದಾರೆ. ದಕ್ಷಿಣ ಭಾರತದ ಜೊತೆಗೆ ಬಾಲಿವುಡ್​​​ನಲ್ಲೂ ಸಿನಿಮಾ ಅಬ್ಬರಿಸೋದು ಫಿಕ್ಸ್ ಆಗಿದೆ. ಹೀಗಾಗಿ,ಈ ಚಿತ್ರದ ಎದುರು ಅಬ್ಬರಿಸಲು ‘ಧುರಂಧರ್ 2’ ಸಿನಿಮಾ ದೊಡ್ಡ ಮಟ್ಟದಲ್ಲಿ ಪ್ಲ್ಯಾನ್ ಮಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಖಾಸಗಿ ವಿಡಿಯೋ ತೋರಿಸಿ ಬ್ಲ್ಯಾಕ್​ಮೇಲ್ ಮಾಡಿದ ಮಾಜಿ ಪ್ರಿಯಕರ, ಆತನ ಕೊಂದು, ಮುಖಕ್ಕೆ ಆ್ಯಸಿಡ್ ಹಾಕಿದ ಮಹಿಳೆ – Kannada News | Ballia Blackmail Murder: Woman Kills Ex Lover Over Private Videos, Disfigures Face

ಬಲ್ಲಿಯಾ, ಮಾರ್ಚ್​ 02: ಖಾಸಗಿ ವಿಡಿಯೋ ತೋರಿಸಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ ಮಾಜಿ ಪ್ರಿಯಕರನನ್ನು ಮಹಿಳೆಯೊಬ್ಬರು ಕೊಂದು, ಮುಖಕ್ಕೆ ಆ್ಯಸಿಡ್ ಹಾಕಿರುವ ಘಟನೆ ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ನಡೆದಿದೆ. ವಿವಾಹಿತ ಮಹಿಳೆಯೊಬ್ಬರು, ಸಂಬಂಧ ಕೊನೆಗೊಳಿಸಲು ಪ್ರಯತ್ನಿಸಿದಾಗ ಆಕೆಗೆ ಬ್ಲ್ಯಾಕ್‌ಮೇಲ್ ಮಾಡಿದ್ದ, ಹಾಗಾಗಿ ಆಕೆ ತನ್ನ ಸಹೋದರ ಮತ್ತು ಅತ್ತಿಗೆಯ ಸಹಾಯದಿಂದ ಆತನನ್ನು ಕೊಲೆ(Murder) ಮಾಡಿದ್ದಾಳೆ.

ತಮ್ಮ ಗ್ರಾಮಕ್ಕೆ ಬರುವಂತೆ ಕರೆದು, ಕತ್ತು ಹಿಸುಕಿ ಕೊಂದು, ನಂತರ ಗುರುತನ್ನು ಮರೆಮಾಚಲು ಆಸಿಡ್‌ನಿಂದ ಮುಖವನ್ನು ವಿರೂಪಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಫೆಬ್ರವರಿ 10 ರಂದು ಮುಖ ವಿರೂಪಗೊಂಡಿದ್ದ ಸ್ಥಿತಿಯಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿತ್ತು, ಅದಾದ ನಂತರ ಈ ಅಪರಾಧ ಬೆಳಕಿಗೆ ಬಂದಿದೆ. ನಂತರ ಪೊಲೀಸ್ ತನಿಖೆಯಲ್ಲಿ ಕೊಲೆಯ ವಿವರಗಳು ಬೆಳಕಿಗೆ ಬಂದಿತ್ತು.

ಪೊಲೀಸರ ಪ್ರಕಾರ, ಮೃತ ವ್ಯಕ್ತಿ ಪಂಕಜ್ ಗುಪ್ತಾ, ಅಜಮ್‌ಗಢ ನಿವಾಸಿಯಾಗಿದ್ದು, ಪಕ್ಕದ ಹಳ್ಳಿಯ ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ. ತನಿಖಾಧಿಕಾರಿಗಳು ಹೇಳುವಂತೆ ಮಹಿಳೆ ಸಂಬಂಧವನ್ನು ಕೊನೆಗೊಳಿಸಲು ಪ್ರಯತ್ನಿಸಿದ್ದಳು, ಆದರೆ ಗುಪ್ತಾ ಅಶ್ಲೀಲ ವೀಡಿಯೊಗಳನ್ನು ಬಳಸಿ ಆಕೆಗೆ ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿ, ಪದೇ ಪದೇ ಕಿರುಕುಳ ನೀಡುತ್ತಿದ್ದ.

ಮತ್ತಷ್ಟು ಓದಿ: ಅಮ್ಮಾ ಅವ್ನು ನನ್ನ ಬಳಿ ಕೆಟ್ಟದಾಗಿ ನಡೆದುಕೊಂಡ ಎಂದು ದೂರು ಕೊಟ್ಟಿದ್ದಕ್ಕೆ, ಬಾಲಕಿಯನ್ನೇ ಕತ್ತು ಸೀಳಿ ಕೊಂದ ಅಪ್ರಾಪ್ತ

ಬೆದರಿಕೆಗಳನ್ನು ತಾಳಲಾರದೆ ಮಹಿಳೆ ತನ್ನ ಸಹೋದರ ಮತ್ತು ಅತ್ತಿಗೆಯ ಬಳಿ ಹೇಳಿಕೊಂಡಿದ್ದಾಳೆ ಎನ್ನಲಾಗಿದೆ. ಫೆಬ್ರವರಿ 5 ರಂದು ನಡೆದ ವಿವಾಹ ಸಮಾರಂಭದಲ್ಲಿ ಮೂವರು ಮತ್ತು ಇತರರೊಂದಿಗೆ ಗುಪ್ತಾ ಅವರನ್ನು ಕೊಲ್ಲಲು ಯೋಜನೆ ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಫೆಬ್ರವರಿ 7 ರಂದು, ಗುಪ್ತಾ ಅವರನ್ನು ಒಂದು ನೆಪ ಹೇಳಿ ಗ್ರಾಮಕ್ಕೆ ಕರೆತಂದು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ನಂತರ ಆರೋಪಿಯು ಮೃತದೇಹವನ್ನು ಎಸೆಯುವ ಮೊದಲು ಮುಖವನ್ನು ವಿರೂಪಗೊಳಿಸುವ ಮೂಲಕ ಸಾಕ್ಷ್ಯಗಳನ್ನು ನಾಶಮಾಡಲು ಪ್ರಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ಸೇರಿದಂತೆ ಮೂವರು ಬಂಧಿತ ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ, ಉಳಿದ ಶಂಕಿತರನ್ನು ಬಂಧಿಸಲು ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕನ್ನಡಿಗರಷ್ಟೇ ಅಲ್ಲ ಯಾರೂ ಆತಂಕ ಪಡಬೇಕಿಲ್ಲ, ಎಲ್ಲರನ್ನೂ ಸುರಕ್ಷಿತವಾಗಿ ಕರೆತರುತ್ತೇವೆ: ಪ್ರಲ್ಹಾದ್ ಜೋಶಿ ಅಭಯ – Kannada News | No Need to Panic, All Indians Will Be Brought Back Safely from Iran Israel War Zone: Pralhad Joshi Assures

ನವದೆಹಲಿ, ಮಾರ್ಚ್ 2: ಇರಾನ್-ಇಸ್ರೇಲ್ ಯುದ್ಧ ಸನ್ನಿವೇಶದಲ್ಲಿ ಸಂಕಷ್ಟದಲ್ಲಿ ಸಿಲುಕಿದ ಎಲ್ಲಾ ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಕೇಂದ್ರ ಸರ್ಕಾರ ಸನ್ನದ್ಧವಾಗಿದೆ. ಅಲ್ಲಿನ ರಾಯಭಾರಿ ಕಚೇರಿ ಉನ್ನತ ಅಧಿಕಾರಿಗಳ ಜತೆ ಮಾತುಕತೆ ನಡೆಸಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಸೋಮವಾರ ತಿಳಿಸಿದ್ದಾರೆ. ಜಗತ್ತಿನ ಎಲ್ಲೇ ಆಗಲಿ ಕನ್ನಡಿಗರು ಸೇರಿದಂತೆ ಭಾರತೀಯರು ಸಂಕಷ್ಟಕ್ಕೆ ಸಿಲುಕಿದಾಗ ಕೇಂದ್ರ ಸರ್ಕಾರ ಸುರಕ್ಷಿತವಾಗಿ ಕರೆ ತಂದಿದೆ. ಹಿಂದೆ ಉಕ್ರೇನ್ ಅಲ್ಲಿ ಸಿಲುಕಿದ್ದವರನ್ನು ಮರಳಿ ಕರೆ ತಂದಿದ್ದೇವೆ. ಭಾರತೀಯರು ಎಲ್ಲೇ ಇದ್ದರೂ ಅವರ ಸುರಕ್ಷತೆಗೆ ಕೇಂದ್ರ ಸರ್ಕಾರ ಪ್ರಥಮ ಆದ್ಯತೆ ನೀಡುತ್ತದೆ ಎಂದು ಜೋಶಿ ಹೇಳಿದ್ದಾರೆ.

ಇರಾನ್-ಇಸ್ರೇಲ್ ಯುದ್ಧದ ಭೀಕರತೆಯಿಂದಾಗಿ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಸಂಕಷ್ಟ ಎದುರಿಸುತ್ತಿರುವ ಬಗ್ಗೆ ಮಾಹಿತಿಯಿದ್ದು, ಈ ಸಂಬಂಧ ಹಿರಿಯ ಸಚಿವರೊಂದಿಗೆ ತುರ್ತು ಚರ್ಚೆ ನಡೆಸಿದ್ದು, ಎಲ್ಲಾ ಕನ್ನಡಿಗರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕನ್ನಡಿಗರಷ್ಟೇ ಅಲ್ಲ, ಯಾರೂ ಆತಂಕ ಪಡಬೇಕಿಲ್ಲ: ಪ್ರಲ್ಹಾದ್ ಜೋಶಿ

ಕನ್ನಡಿಗರು ಮಾತ್ರವಲ್ಲ ಭಾರತೀಯರನ್ನೆಲ್ಲ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಸರ್ವ ಸನ್ನದ್ಧವಾಗಿದೆ. ಈಗಾಗಲೇ ರಾಯಭಾರಿ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗಿದೆ. ಯಾರೊಬ್ಬರೂ ಆತಂಕ ಪಡಬೇಕಿಲ್ಲ ಎಂದು ಸಚಿವ ಪ್ರಹ್ಲಾದ ಜೋಶಿ, ಆತಂಕಿತ ಕುಟುಂಬಸ್ಥರಿಗೆ ಸ್ಥೈರ್ಯ ಹೇಳಿದ್ದಾರೆ.

ಯುದ್ಧಪೀಡಿತ ಪ್ರದೇಶಗಳಲ್ಲಿ ವಿಮಾನ ಸಂಚಾರ ಅಪಾಯಕಾರಿ ಆಗಿದ್ದು, ತಜ್ಞರ ಸಲಹೆ ಪಡೆಯಲಾಗುತ್ತಿದೆ. ಭಾರತೀಯರ ಸುರಕ್ಷತೆಯೇ ಸರ್ಕಾರದ ಮೊದಲ ಆದ್ಯತೆ ಎಂದಿರುವ ಸಚಿವರು, ವಿಧಾನಪರಿಷತ್ ಸದಸ್ಯ ಭೋಜೇಗೌಡರು ಸೇರಿದಂತೆ ಸಂಕಷ್ಟದಲ್ಲಿರುವ ಎಲ್ಲಾ ಕನ್ನಡಿಗರ ರಕ್ಷಣೆಗೆ ಶ್ರಮಿಸುತ್ತೇವೆಂದು ಜೋಶಿ ಹೇಳಿದ್ದಾರೆ.

ಇದನ್ನೂ ಓದಿ: ತಾಯ್ನಾಡಿನಲ್ಲಿ ಯುದ್ಧದ ಕಾರ್ಮೋಡ: ಕುಸ್ತಿ ಕಾಳಗದಲ್ಲಿ ದಾವಣಗೆರೆ ಜನರ ಗಮನ ಸೆಳೆದ ಇರಾನ್ ಪೈಲ್ವಾನ್ ಮಿರ್ಜಾ

ದುಬೈನಲ್ಲಿ ಸಿಲುಕಿದ ಕನ್ನಡಿಗರನ್ನು ಕರೆತರುತ್ತೇವೆ ಇರಾನ್-ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ವೇಳೆ ದುಬೈನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆ ನಮ್ಮ ಆದ್ಯತೆಯಾಗಿದೆ. ಯಾರೂ ಆತಂಕಪಡಬೇಕಿಲ್ಲ. ಸದ್ಯ ದುಬೈನಿಂದ ಯಾವುದೇ ವಿಮಾನ ಹಾರಾಟ ನಡೆಯುತ್ತಿಲ್ಲ. ಅಲ್ಲಿರುವವರನ್ನು ವಾಪಸ್ ಕರೆತರುವ ಬಗ್ಗೆ ಗಂಭೀರವಾಗಿ ಪ್ರಯತ್ನ ಮಾಡಲಾಗುತ್ತಿದೆ ಎಂದು ಜೋಶಿ ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಂಜು ಸ್ಯಾಮ್ಸನ್ ಅಲ್ಲ, ಗೆಲುವಿಗೆ ಈತ ಕಾರಣ: ಗಂಭೀರ್ ಅಚ್ಚರಿಯ ಹೇಳಿಕೆ – Kannada News | Gautam Gambhir acknowledges Shivam Dube’s contribution

T20 World Cup 2026: ಟಿ20 ವಿಶ್ವಕಪ್ 2026ರ ಸೆಮಿಫೈನಲ್​ಗೆ ಟೀಮ್ ಇಂಡಿಯಾ ಲಗ್ಗೆಯಿಟ್ಟಿದೆ. ಅದು ಸಹ ಬಲಿಷ್ಠ ವೆಸ್ಟ್ ಇಂಡೀಸ್ ಪಡೆಯನ್ನು ಬಗ್ಗು ಬಡಿಯುವ ಮೂಲಕ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಸೂಪರ್-8 ಸುತ್ತಿನ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು 20 ಓವರ್​ಗಳಲ್ಲಿ 195 ರನ್ ಕಲೆಹಾಕಿದ್ದರು.

ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ಆರಂಭಿಕ ದಾಂಡಿಗ ಸಂಜು ಸ್ಯಾಮ್ಸನ್ ಅಜೇಯ 97 ರನ್ ಬಾರಿಸಿದರು. ಈ ಮೂಲಕ 19.2 ಓವರ್​ಗಳಲ್ಲಿ ಭಾರತ ತಂಡವನ್ನು ಗುರಿ ಮುಟ್ಟಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಗೆಲುವಿನೊಂದಿಗೆ ಭಾರತ ತಂಡವು ಟಿ20 ವಿಶ್ವಕಪ್​ನ ಸೆಮಿಫೈನಲ್​ಗೇರಿದೆ.

ಇನ್ನು ಈ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್, ಭಾರತದ ಗೆಲುವಿಗೆ ಸಂಜು ಸ್ಯಾಮ್ಸನ್ ಮಾತ್ರ ಕಾರಣರಲ್ಲ. ಇತರೆ ಆಟಗಾರರ ಕೊಡುಗೆ ಕೂಡ ಅತ್ಯಮೂಲ್ಯವಾಗಿತ್ತು ಎಂದಿದ್ದಾರೆ.

ಅದರಲ್ಲೂ 19 ನೇ ಓವರ್‌ನಲ್ಲಿ ಶಿವಂ ದುಬೆ ಬಾರಿಸಿದ ಎರಡು ಫೋರ್​ಗಳು ಸಂಜು ಸ್ಯಾಮ್ಸನ್ ಮೇಲಿನ ಅಗಾಧ ಒತ್ತಡವನ್ನು ನಿವಾರಿಸುವಲ್ಲಿ ನಿರ್ಣಾಯಕವಾಗಿದ್ದವು.  ಹಾರ್ದಿಕ್ ಪಾಂಡ್ಯ ಡಾಟ್ ಬಾಲ್‌ಗೆ ಔಟಾದ ನಂತರ 10 ಎಸೆತಗಳಲ್ಲಿ 17 ರನ್‌ಗಳು ಬೇಕಾಗಿದ್ದಾಗ, ದುಬೆ ಅವರ ತಕ್ಷಣದ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದರು.

ಶಿವಂ ದುಬೆ ಅವರ ಈ ನಿರ್ಣಾಯಕ ಪಾತ್ರವು ಪಂದ್ಯವು ಸಂಪೂರ್ಣವಾಗಿ ಭಾರತದ ಪರ ವಾಲುವಂತೆ ಮಾಡಿತು. ಹೀಗಾಗಿ ಟೀಮ್ ಇಂಡಿಯಾದ ಗೆಲುವಿನ ಶ್ರೇಯಸ್ಸು ದುಬೆ ಅವರಿಗೂ ಸಲ್ಲಬೇಕು ಎಂದು ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ.

ಸಾಮಾನ್ಯವಾಗಿ ಪಂದ್ಯ ಮುಗಿದಾಗ ನಾವು ಕೆಲವು ಕೊಡುಗೆಗಳ ಬಗ್ಗೆ ಮಾತ್ರ ಮಾಡುತ್ತೇವೆ. ನನ್ನ ಪ್ರಕಾರ, ಶಿವಂ ಅವರ ಆ ಎರಡು ಫೋರ್​ಗಳು ಸಂಜು ಅವರ 97 ರನ್​​ ಗಳಷ್ಟೇ ಮುಖ್ಯ. ಇದು ತಂಡದ ಆಟ.  ಅಲ್ಲದೆ ಯಾವಾಗಲೂ ತಂಡದ ಆಟವಾಗಿಯೇ ಉಳಿಯುತ್ತದೆ.

ಹೀಗಾಗಿಯೇ ಶಿವಂ ದುಬೆ ಬಾರಿಸಿದ 2 ಫೋರ್​ಗಳು ಸಂಜು ಅವರ ಇನ್ನಿಂಗ್ಸ್‌ನಷ್ಟೇ ಮುಖ್ಯ ದುಬೆ ನಿರ್ಣಾಯಕ ಹಂತದಲ್ಲಿ ಎರಡು ಬೌಂಡರಿಗಳನ್ನು ಬಾರಿಸದೇ ಇದ್ದಿದ್ದರೆ. ನಾವು ಇಂದು ಸಂಜು ಸ್ಯಾಮ್ಸನ್ ಬಗ್ಗೆ ಮಾತನಾಡುತ್ತಿರಲಿಲ್ಲ. ಅವರು ವಿಶೇಷ ಇನಿಂಗ್ಸ್ ಆಡಿದ್ದಾರೆ, ಆ ಸಣ್ಣ ಕೊಡುಗೆಗಳು ಪಂದ್ಯಗಳನ್ನು ಗೆಲ್ಲಲು ನಿಮಗೆ ಸಹಾಯ ಮಾಡುತ್ತವೆ.

ಇದನ್ನೂ ಓದಿ: ಅಂದು ಲೇವಡಿ ಮಾಡಿ, ಇಂದು ತಲೆಬಾಗಿ ನಿಂತ ಸೂರ್ಯ..!

ಇದಾಗ್ಯೂ ದೊಡ್ಡ ಕೊಡುಗೆಗಳು ಸುದ್ದಿಯಾಗುತ್ತವೆ. ಆದರೆ ಸಣ್ಣ ಕೊಡುಗೆಗಳು ತಂಡವನ್ನು ಪಂದ್ಯ ಗೆಲ್ಲಿಸಿಕೊಡುವಲ್ಲಿ ಸಹಾಯ ಮಾಡುತ್ತವೆ. ಹೀಗಾಗಿ ಇಂತಹ ಕೊಡುಗೆಗಳು ಬಹಳ ಮುಖ್ಯ. ಹೀಗಾಗಿಯೇ ಟೀಮ್ ಇಂಡಿಯಾ ಗೆಲುವಿಗೆ ಶಿವಂ ದುಬೆ ಕೂಡ ಕಾರಣಕರ್ತರು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

Source link

ಬಬಲಾದಿ ಕಾಲಜ್ಞಾನ ನಿಜವಾಯಿತೇ?: ಯುದ್ಧ ಆಯಿತು, ಮುಂದೆ ಪ್ರವಾಹ, ಭಾರತಕ್ಕೆ ಗಡಿ ಆತಂಕ! – Kannada News | Kala Jnana Realized: Babaladi Mutt’s Warnings on Middle East War and Disasters

ವಿಜಯಪುರ, ಮಾ.2: ಉತ್ತರ ಕರ್ನಾಟಕದ ಅತಿ ಹೆಚ್ಚು ನಂಬಿಕಸ್ತ ಕಾಲಜ್ಞಾನ ಕೇಂದ್ರಗಳಲ್ಲೊಂದಾದ ಬಬಲಾದಿ ಶ್ರೀ ಸದಾಶಿವ ಮುತ್ಯಾರ ಮಠದ ಭವಿಷ್ಯವಾಣಿ ಮತ್ತೊಮ್ಮೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಇತ್ತೀಚೆಗೆ ನಡೆದ ಮಠದ ಜಾತ್ರೆಯಲ್ಲಿ ನುಡಿಯಲಾಗಿದ್ದ ಅಶುಭ ಮುನ್ಸೂಚನೆಗಳು ಈಗ ಅಕ್ಷರಶಃ ನಿಜವಾಗುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ. “ಗಡಿಯಲ್ಲಿ ಭೀತಿ ಎದುರಾಗಲಿದೆ, ಯುದ್ಧದ ಕಾರ್ಮೋಡ ಕವಿಯಲಿದೆ” ಎಂದು ಪೀಠಾಧಿಪತಿಗಳು ಸ್ಪಷ್ಟವಾಗಿ ಹೇಳಿದ್ದರು. ಇದು ಪ್ರಸ್ತುತ ಅಮೇರಿಕಾ-ಇರಾನ್-ಇಸ್ರೇಲ್ ನಡುವಿನ ಸಂಘರ್ಷಕ್ಕೆ ನೇರ ಸಾಕ್ಷಿಯಂತಿದೆ. “ಜಾಗತಿಕ ಮಟ್ಟದಲ್ಲಿ ದೊಡ್ಡ ಕೆಡಕಾಗಲಿದೆ, ದೊಡ್ಡ ದುಃಖದ ಸುದ್ದಿಯೊಂದು ಬಂದೀತು” ಎಂದು ನುಡಿಯಲಾಗಿತ್ತು. ಇರಾನ್‌ನ ಪ್ರಮುಖ ನಾಯಕರ ಹತ್ಯೆ ಮತ್ತು ಮಧ್ಯಪ್ರಾಚ್ಯದಲ್ಲಿ ಸರಣಿ ಬಾಂಬ್ ದಾಳಿಗಳು ಈ ಭವಿಷ್ಯವನ್ನು ಪುಷ್ಟೀಕರಿಸುತ್ತಿವೆ. ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ ಮತ್ತು ಪ್ರತಿಯಾಗಿ ದುಬೈ, ಕತಾರ್, ಬಹ್ರೇನ್ ಮೇಲೆ ಇರಾನ್ ದಾಳಿ ನಡೆಸುವ ಸಾಧ್ಯತೆಗಳ ಬಗ್ಗೆ ಭವಿಷ್ಯದಲ್ಲಿ ಸುಳಿವು ನೀಡಲಾಗಿತ್ತು. ಯುದ್ಧದ ಜೊತೆಗೆ “ಮಳೆ-ಬೆಳೆ ವ್ಯತ್ಯಯ, ಪ್ರವಾಹ ಮತ್ತು ಗಡಿಯಲ್ಲಿ ಆತಂಕದ ಛಾಯೆ” ಇರಲಿದೆ ಎಂದು ಕಾಲಜ್ಞಾನ ಹೇಳಿತ್ತು. ಬಬಲಾದಿ ಮಠದಲ್ಲಿ ಪ್ರತಿ ವರ್ಷ ಶಿವರಾತ್ರಿಯ ಅಮಾವಾಸ್ಯೆಯ ನಂತರ ನಡೆಯುವ ಜಾತ್ರೆಯಲ್ಲಿ ಓಲೆಗರಿಯ ಕಾಲಜ್ಞಾನವನ್ನು ಓದಲಾಗುತ್ತದೆ. ಈ ವರ್ಷದ ಕಾಲಜ್ಞಾನವು ಶುಭಕ್ಕಿಂತ ಅಶುಭ ಫಲಗಳನ್ನೇ ಹೆಚ್ಚು ಸೂಚಿಸಿತ್ತು. ಗಡಿಯಲ್ಲಿ ಯುದ್ಧದ ಭೀತಿ ಮತ್ತು ದೇಶದ ಆರ್ಥಿಕತೆಗೆ ಪೆಟ್ಟು ಬೀಳುವ ಮುನ್ಸೂಚನೆಗಳನ್ನು ಸಿದ್ರಾಮಪ್ಪ ಹೋಳಿಮಠ ಅವರು ನೀಡಿದ್ದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಶ್ಮಿಕಾ-ವಿಜಯ್ ಫ್ಯಾನ್ಸ್​​ಗೆ ಕೊಟ್ಟ ಸ್ವೀಟ್ ಬಾಕ್ಸ್ ಅಲ್ಲಿ ಏನೆಲ್ಲ ಇದೆ?

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಮದುವೆ ಆದರು. ಅವರ ವಿವಾಹ ವಿಷಯ ಸಾಕಷ್ಟು ಚರ್ಚೆ ಹುಟ್ಟುಹಾಕಿತು. ವಿವಾಹ ಆದ ಬಳಿಕ ರಶ್ಮಿಕಾ ಹಾಗೂ ವಿಜಯ್ ಒಟ್ಟಾಗಿ ತಿರುಪತಿ ತೆರಳಿದ್ದರು. ಈ ವೇಳೆ ಅಭಿಮಾನಿಗಳಿಗೆ ಸಿಹಿ ವಿತರಣೆ ಮಾಡಿದ್ದರು. ಸ್ವೀಟ್ ಬಾಕ್ಸ್ ಸಿಕ್ಕ ಫ್ಯಾನ್ಸ್ ಇದನ್ನು ಶೇರ್ ಮಾಡಿಕೊಂಡಿದ್ದಾರೆ.  ರಸಗುಲ್ಲಾ, ಲಾಡು ಸೇರಿ ಮೂರು ವಿಧದ ಸ್ವೀಟ್ ಇವೆ. ಈ ವಿಡಿಯೋ ನೋಡಿದ ಅನೇಕರು, ‘ಸ್ವೀಟ್​​ಗಿಂತ ಬಾಕ್ಸ್​​ಗೆ ಹೆಚ್ಚು ಖರ್ಚಾಗಿದೆ’ ಎಂದು ಅಣಕಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೈಗಾ ಅಣು ವಿದ್ಯುತ್ ಯೋಜನೆಗೆ ಮೇಕ್​​ ಇನ್​ ಇಂಡಿಯಾ ಬಲ: 5 ಮತ್ತು 6ನೇ ಘಟಕಗಳಿಗೆ ಸ್ವದೇಶಿ ತಂತ್ರಜ್ಞಾನದ ರಿಯಾಕ್ಟರ್‌ಗಳ ಬಳಕೆ – Kannada News | Kaiga Nuclear Project Expansion: Indigenous Tech Boosts Karnataka’s Energy Security

ಬೆಂಗಳೂರು, ಮಾರ್ಚ್​​ 2: ರಕ್ಷಣಾ ಸೇರಿದಂತೆ ಹಲವು ಕ್ಷೇತ್ರಗಳನ್ನು ಒಳಗೊಂಡಿದ್ದ ಮೇಕ್​​ ಇನ್​ ಇಂಡಿಯಾ ಯೋಜನೆ ಈಗ ಅಣುಶಕ್ತಿ ಕ್ಷೇತ್ರಕ್ಕೂ ಕಾಲಿಟ್ಟಿದೆ. ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣು ವಿದ್ಯುತ್ ಯೋಜನೆಯ 5 ಮತ್ತು 6ನೇ ಘಟಕಗಳ ನಿರ್ಮಾಣ ಕಾಮಗಾರಿಗೆ ಅಧಿಕೃತ ಚಾಲನೆ ನೀಡಲಾಗಿದ್ದು, ಈ ಘಟಕಗಳಲ್ಲಿ ಸ್ಥಾಪನೆಯಾಗುವ ರಿಯಾಕ್ಟರ್‌ಗಳು ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಿತವಾಗಿವೆ ಎನ್ನುವುದು ವಿಶೇಷ.

ಈ ಬಗ್ಗೆ ಮಾಹಿತಿ ನೀಡಿರುವ ಕೈಗಾ ಘಟಕದ ಸೈಟ್ ನಿರ್ದೇಶಕ ಬಿ. ವಿನೋದ್ ಕುಮಾರ್ , 700 ಮೆಗಾವಾಟ್ ಸಾಮರ್ಥ್ಯದ ಪ್ರೆಷರೈಸ್ಡ್ ಹೆವಿ ವಾಟರ್ ರಿಯಾಕ್ಟರ್‌ಗಳನ್ನು ಮೇಕ್​​ ಇನ್​ ಇಂಡಿಯಾ ಯೋಜನೆಯಡಿ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗಿದೆ. ಕೇಂದ್ರ ಸರ್ಕಾರವು ಫ್ಲೀಟ್ ಮೋಡ್‌ನಲ್ಲಿ 10 ಅಣು ವಿದ್ಯುತ್ ಯೋಜನೆಗಳಿಗೆ ಅನುಮೋದನೆ ನೀಡಿದ್ದು, 700 ಮೆಗಾವಾಟ್ ರಿಯಾಕ್ಟರ್‌ಗಳನ್ನು ಗುಜರಾತ್, ರಾಜಸ್ಥಾನ ಹಾಗೂ ಕರ್ನಾಟಕ ರಾಜ್ಯಗಳಿಗೆಂದು ಅಭಿವೃದ್ಧಿಪಡಿಸಲಾಗಿದೆ. ಆ ಮೂಲಕ ಮೊದಲ ಬಾರಿಗೆ ಸ್ವದೇಶೀ ರಿಯಾಕ್ಟರ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಹಳೆಯ ಒಪ್ಪಂದದ ಪ್ರಕಾರ ರಾಜ್ಯಕ್ಕೆ ಉತ್ಪಾದಿತ ವಿದ್ಯುತ್‌ನ ಶೇ.20ರಷ್ಟು ಪಾಲು ಸಿಗುತ್ತಿತ್ತು. ಆದರೆ ಹೊಸ ಯೋಜನೆಯಡಿ ರಾಜ್ಯಕ್ಕೆ ಶೇ.50ರಷ್ಟು ಪಾಲು ದೊರೆಯಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:  ಶಿರಸಿ ಮಾರಿಕಾಂಬಾ ಜಾತ್ರೆಗೆ ಹೋಗುವ ಭಕ್ತರಿಗೆ ಡಬಲ್ ಗುಡ್​​​ ನ್ಯೂಸ್​​ ನೀಡಿದ ರೈಲ್ವೆ ಇಲಾಖೆ

ಪ್ರಸ್ತುತ ಕೈಗಾ ಅಣು ವಿದ್ಯುತ್ ಕೇಂದ್ರದ ಸ್ಥಾಪಿತ ಸಾಮರ್ಥ್ಯ 880 ಮೆಗಾವಾಟ್ ಆಗಿದ್ದು, 5 ಮತ್ತು 6ನೇ ಘಟಕಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದ ಬಳಿಕ ಇದು 2,280 ಮೆಗಾವಾಟ್‌ಗೆ ಹೆಚ್ಚಲಿದೆ. ಕರ್ನಾಟಕದಲ್ಲಿ ಇನ್ನೂ 7,000 ಮೆಗಾವಾಟ್ ಸಾಮರ್ಥ್ಯ ಹೆಚ್ಚಿಸಲು ಸಿದ್ಧತೆ ನಡೆದಿದ್ದು, ಎಲ್ಲವೂ ಯೋಜನೆಯಂತೆ ನಡೆದರೆ ಕರ್ನಾಟಕಕ್ಕೆ ಮತ್ತೊಂದು ಮಹತ್ವದ ಅಣು ವಿದ್ಯುತ್ ಯೋಜನೆ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ.

ನೂತನ ಘಟಕಗಳ ಕಾಮಗಾರಿಗೆ ಅಣುಶಕ್ತಿ ಆಯೋಗದ ಅಧ್ಯಕ್ಷ ಅಜಿತ್​​ ಕುಮಅರ್​ ಮೊಹಾಂತಿ ಹಾಗೂ ಅಣುಶಕ್ತಿ ಇಲಾಖೆಯ ಕಾರ್ಯದರ್ಶಿ ಚಾಲನೆ ನೀಡಿದ್ದು, ಈ ಸಂದರ್ಭದಲ್ಲಿ Nuclear Power Corporation of India Limited (NPCIL) ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಭುವನ್ ಚಂದ್ರ ಪಾಠಕ್ ಉಪಸ್ಥಿತರಿದ್ದರು. ಈ ಘಟಕಗಳು ಮುಂದಿನ 5 ವರ್ಷಗಳಲ್ಲಿ ಪೂರ್ಣ ಪ್ರಮಾಣದ ಕಾರ್ಯನಿರ್ವಹಣೆಯ ಗುರಿ ಹೊಂದಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:40 am, Mon, 2 March 26

Source link

ಪತ್ನಿಗೆ ವಿಮೆ ಹಣ ಸಿಗಲಿ ಎಂದು ಸತ್ತಂತೆ ನಾಟಕವಾಡಿದ ಪತಿ, ಅಗಲುವಿಕೆಯ ನೋವು ತಾಳಲಾರದೆ ಮಕ್ಕಳ ಕೊಂದು ಆತ್ಮಹತ್ಯೆಗೆ ಶರಣಾದ ಪತ್ನಿ – Kannada News | Insurance Fraud Triggers China Family Tragedy: Husband Fakes Death, Wife Kills Kids and Self

ಬೀಜಿಂಗ್, ಮಾರ್ಚ್​ 02: ಎಂಥಾ ವಿಪರ್ಯಾಸ ನೋಡಿ, ಹೆಂಡತಿ ಮಕ್ಕಳು ಸುಖವಾಗಿರಬೇಕು ಎಂದು ಪತಿ ಸತ್ತಂತೆ ನಾಟವಾಡಿದರೆ, ಅದೇ ನಿಜವೆಂದು ನಂಬಿ ಮನನೊಂದು ಪತ್ನಿ ಹಾಗೂ ಮಕ್ಕಳು ನಿಜವಾಗಿ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ಚೀನಾದಲ್ಲಿ ನಡೆದಿದೆ. ಆಗ್ನೇಯ ಚೀನಾದ ಹುನಾನ್ ಪ್ರಾಂತ್ಯದ ಗ್ರಾಮೀಣ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ತುಂಬಾ ಸಾಲ ಮಾಡಿಕೊಂಡಿದ್ದ, ಅದರಿಂದ ತಪ್ಪಿಸಿಕೊಳ್ಳಲು ಸತ್ತಂತೆ ನಾಟಕವಾಡಿದ್ದ.

ತನ್ನ ಪತಿಯ ಹಠಾತ್ ಸಾವಿನ ಸುದ್ದಿಯಿಂದ ಆ ವ್ಯಕ್ತಿಯ ಪತ್ನಿ ದಂಗಾಗಿದ್ದಳು. ಆಕೆಯ ಪತಿಯ ಕಾರು ನದಿಯಲ್ಲಿ ಪತ್ತೆಯಾಗಿತ್ತು. ಆದರೂ ಶವ ಸಿಕ್ಕಿರಲಿಲ್ಲ. ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ನಂಬಿದ್ದರು. ಆದರೆ ಸತ್ಯ ಬೇರೆಯದೇ ಆಗಿತ್ತು. ಆ ವ್ಯಕ್ತಿಗೆ 100,000 ಯುವಾನ್ ಅಥವಾ ಸುಮಾರು 1.2 ಮಿಲಿಯನ್ ರೂಪಾಯಿಗಳ ಸಾಲವಿತ್ತು, ಇದನ್ನು ಅವರು ತಮ್ಮ ಮೂರು ವರ್ಷದ ಮಗಳ ವೈದ್ಯಕೀಯ ಬಿಲ್‌ಗಳನ್ನು ಪಾವತಿಸಲು ಆನ್‌ಲೈನ್‌ನಲ್ಲಿ ವಿವಿಧ ಜನರಿಂದ ಸಾಲ ಪಡೆದಿದ್ದರು.

ಆ ವ್ಯಕ್ತಿಯ ಸಾವಿನ ಬಗ್ಗೆ ಅವರ ಪತ್ನಿಗೆ ತಿಳಿದಾಗ, ಅವರು ಚಿಂತಿತರಾಗಿದ್ದರು, ಏಕೆಂದರೆ ಅವರ ಅನಾರೋಗ್ಯ ಪೀಡಿತ ಮಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಸಂಪೂರ್ಣವಾಗಿ ಅವರ ಮೇಲೆ ಬಿದ್ದಿತ್ತು.
ಆತ ಪತ್ನಿಗೆ ತಿಳಿಯದಂತೆ 1 ಮಿಲಿಯನ್ ಯುವಾನ್ ವಿಮಾ ಯೋಜನೆ ಮಾಡಿದ್ದರು, ಆ ಹಣವು ಆಕೆಯ ಕೈ ಸೇರಿತ್ತು, ಅದರಿಂದ ಆಕೆ ಸಾಲ ತೀರಿಸಬಹುದು ಎಂಬುದು ವ್ಯಕ್ತಿಯ ಆಸೆ ಕೂಡ ಆಗಿತ್ತು.

ಮತ್ತಷ್ಟು ಓದಿ: ಕುವೈತ್​​ನಲ್ಲಿರುವ ತಾಯಿಗೆ ‘ಐ ಲವ್ ಯೂ ಸೋ ಮಚ್’ ಎಂದು ಸಂದೇಶ ಕಳುಹಿಸಿ ನೇಣಿನ ಕುಣಿಕೆಗೆ ಕೊರಳೊಡ್ಡಿದ ವಿದ್ಯಾರ್ಥಿನಿ

ಆದರೆ ಪತಿ ಇಲ್ಲ ಎಂಬ ಕೊರಗು ತಪ್ಪು ಹೆಜ್ಜೆಯನ್ನು ಇಡುವಂತೆ ಮಾಡಿತ್ತು, ಆಕೆ ನಾಲ್ಕು ವರ್ಷದ ಮಗ ಹಾಗೂ ಮಗಳನ್ನು ಕೊಂದು ತಾನೂ ಕೂಡ ಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ ಎನ್ನುವ ವಿಚಾರ ಬೆಳಕಿಗೆ ಬಂದಿತ್ತು. ಮೊದಲು ಮಗನನ್ನು ಮುಳುಗಿಸಿ ಕೊನೆಗೆ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಚೀನಾದ ಸಾಮಾಜಿಕ ಮಾಧ್ಯಮ ತಾಣವಾದ ವಿಚಾಟ್​​ನಲ್ಲಿ ಆತ್ಮಹತ್ಯೆ ಪತ್ರವನ್ನು ಪೋಸ್ಟ್ ಮಾಡಿದ್ದಾರೆ.

ನಾನು ಒಬ್ಬಂಟಿಯಾಗಿ ಹೋಗಲು ಬಯಸಿದ್ದೆ, ಆದರೆ ನನ್ನ ಹೆತ್ತವರಿಲ್ಲದಿದ್ದರೆ, ನನ್ನ ಮಗ ಮತ್ತು ಮಗಳು ನನ್ನಂತೆಯೇ ಬಳಲುತ್ತಾರೆ ಮತ್ತು ಕಿರುಕುಳಕ್ಕೊಳಗಾಗುತ್ತಾರೆ ಹಾಗಾಗಿ ಅವರನ್ನು ಕೊಲ್ಲುವುದಾಗಿ ಬರೆದಿದ್ದಾರೆ.

ಈ ಪೋಸ್ಟ್ ಚೀನಾದಲ್ಲಿ ಬೇಗನೆ ವೈರಲ್ ಆಗಿ, ಪ್ರಕರಣವನ್ನು ರಾಷ್ಟ್ರೀಯ ಸಂಚಲನವನ್ನಾಗಿ ಮಾಡಿತು. ಮಹಿಳೆಯ ಪತಿ ಪೊಲೀಸರಿಗೆ ಶರಣಾದರು ಸಾಲದಿಂದ ತಪ್ಪಿಸಿಕೊಳ್ಳಲು ತಾನು ನಾಟಕವಾಡಿದ್ದಾಗಿ ಹೇಳಿದ್ದಾರೆ.ವಿಮಾ ಪಾಲಿಸಿಯು ತನ್ನ ಮಗಳ ವೈದ್ಯಕೀಯ ಚಿಕಿತ್ಸೆಗೆ ಹಣ ನೀಡಲು ಸಹಾಯ ಮಾಡುತ್ತದೆ ಎಂದು ನಂಬಿದ್ದರು. ನಾನು ನನ್ನ ಪ್ಲ್ಯಾನ್ ಅನ್ನು ಆಕೆಗೆ ಹೇಳಿರಲಿಲ್ಲ ಅದೇ ತನ್ನ ದೊಡ್ಡ ತಪ್ಪು ಎಂದು ಕಣ್ಣೀರಿಟ್ಟಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version