ಬಿಜೆಪಿಯನ್ನು ಗೆಲ್ಲಿಸಿದ ಬಂಗಾಳದ ಜನತೆಗೆ ಪ್ರಧಾನಿ ಮೋದಿ ಶಿರ ಬಾಗಿ ನಮಸ್ಕಾರ – Kannada News | PM Narendra Modi bowed to the people of west Bengal as a token of gratitude

ಕೊಲ್ಕತ್ತಾ, ಮೇ 9: ಪಶ್ಚಿಮ ಬಂಗಾಳದಲ್ಲಿ (West Bengal) ಯಾರೂ ಊಹಿಸದ ರೀತಿಯಲ್ಲಿ ಟಿಎಂಸಿಯನ್ನು ಧೂಳೀಪಟ ಮಾಡಿದ ಬಿಜೆಪಿ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಈ ಹಿಂದೆ ಚುನಾವಣಾ ಪ್ರಚಾರದ ವೇಳೆ ಬಂಗಾಳಕ್ಕೆ ಬಂದಿದ್ದ ಪ್ರಧಾನಿ ಮೋದಿ ಮುಂದಿನ ಬಾರಿ ಬಿಜೆಪಿ ಸರ್ಕಾರದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಬರುತ್ತೇನೆ ಎಂದು ಭವಿಷ್ಯ ನುಡಿದಿದ್ದರು. ಅದರಂತೆ ಬಂಗಾಳದಲ್ಲಿ ಮೊದಲ ಬಿಜೆಪಿ ಸರ್ಕಾರ ರಚನೆಯಾಗಿದೆ. ಹೀಗಾಗಿ, ಇಂದು ಬಿಜೆಪಿ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭದ ವೇದಿಕೆಯಲ್ಲಿ ಪ್ರಧಾನಿ ಮೋದಿ ಅಲ್ಲಿ ಸೇರಿದ್ದ ಪಶ್ಚಿಮ ಬಂಗಾಳದ ಮತದಾರರ ಮುಂದೆ ಶಿರ ಬಾಗಿ ನಮಸ್ಕಾರ ಮಾಡಿದ್ದಾರೆ. ಈ ಮೂಲಕ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐಪಿಎಲ್ ವೀಕ್ಷಕರನ್ನು ಹೆಚ್ಚಿಸಲು ಖ್ಯಾತ ಉದ್ಯಮಿ ನೀಡಿದ ಸಲಹೆಗಳು ಹೀಗಿವೆ – Kannada News | IPL’s Identity Crisis: Harsh Goenka Calls for Balance

IPL 2026: ಐಪಿಎಲ್ ಅಂಗಳದಲ್ಲಿ ರನ್‌ಗಳ ಅಬ್ಬರವೇನೋ ಜೋರಾಗಿದೆ. ಆದರೆ ಕಿಕ್ಕಿರಿದು ತುಂಬುತ್ತಿದ್ದ ಪ್ರೇಕ್ಷಕರ ಗ್ಯಾಲರಿ ಮತ್ತು ಟಿವಿ ಪರದೆಯ ಮುಂದೆ ಕುಳಿತು ನೋಡುವವರ ಸಂಖ್ಯೆ ಮಾತ್ರ ಕುಸಿಯುತ್ತಿದೆ. ಐಪಿಎಲ್ ಟಿವಿ ವೀಕ್ಷಕರ ಸಂಖ್ಯೆಯಲ್ಲಿ ಶೇ. 26ರಷ್ಟು ಇಳಿಕೆಯಾಗಿರುವುದು ಈಗ ಬಿಸಿಸಿಐಗೆ ನಿದ್ದೆಗೆಡಿಸಿದೆ. ಈ ಕುಸಿತ ಕೇವಲ ತಾಂತ್ರಿಕ ಬದಲಾವಣೆಯೋ ಅಥವಾ ‘ಕ್ರಿಕೆಟ್ ಆಯಾಸ’ವೋ?  ಈ ಬಗ್ಗೆ ಖ್ಯಾತ ಉದ್ಯಮಿ ಹರ್ಷ್ ಗೋಯೆಂಕಾ ಅವರ ಸಲಹೆಗಳು ಐಪಿಎಲ್‌ನ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿವೆ. ಕ್ರೀಡಾಂಗಣದ ಅವ್ಯವಸ್ಥೆಯಿಂದ ಹಿಡಿದು ಆಟದ ನಿಯಮಗಳವರೆಗೆ ಅವರು ಎತ್ತಿ ತೋರಿಸಿರುವ ‘ನಾಲ್ಕು ಕಹಿ ಸತ್ಯ’ಗಳ ವಿಶ್ಲೇಷಣೆ ಇಲ್ಲಿದೆ…”

ಸಮತೋಲಿತ ಪಿಚ್‌ಗಳು: ಇಂದಿನ ಐಪಿಎಲ್ ಪಂದ್ಯಗಳು ಕೇವಲ ಬ್ಯಾಟರ್‌ಗಳ ಸ್ವರ್ಗವಾಗಿ ಮಾರ್ಪಟ್ಟಿವೆ. ಪ್ರತೀ ಪಂದ್ಯದಲ್ಲೂ 250 ರನ್‌ಗಳ ಗುರಿ ಕಾಣುವುದು ಅಭಿಮಾನಿಗಳಿಗೆ ಆರಂಭದಲ್ಲಿ ರೋಚಕ ಎನಿಸಿದರೂ, ಕ್ರಮೇಣ ಇದು ಏಕತಾನತೆಗೆ ಕಾರಣವಾಗುತ್ತದೆ.

  • ಪರಿಹಾರ: ಪಿಚ್‌ಗಳು ಬೌಲರ್‌ಗಳಿಗೂ ನೆರವಾಗುವಂತಿರಬೇಕು. ಸ್ಪಿನ್ನರ್‌ಗಳಿಗೆ ತಿರುವು ಮತ್ತು ವೇಗಿಗಳಿಗೆ ಸ್ವಿಂಗ್ ಸಿಗುವಂತಿದ್ದರೆ ಮಾತ್ರ ಪಂದ್ಯದಲ್ಲಿ ಅನಿಶ್ಚಿತತೆ ಇರುತ್ತದೆ. 160 ರನ್‌ಗಳ ಗುರಿಯನ್ನು ಬೆನ್ನಟ್ಟುವಾಗ ಬೌಲರ್‌ಗಳು ಸೃಷ್ಟಿಸುವ ಒತ್ತಡವೇ ಕ್ರಿಕೆಟ್‌ನ ನಿಜವಾದ ಸೌಂದರ್ಯ.

‘ಇಂಪ್ಯಾಕ್ಟ್ ಪ್ಲೇಯರ್’ ನಿಯಮ: ಈ ನಿಯಮವು ಪಂದ್ಯವನ್ನು 11 ಆಟಗಾರರ ಬದಲಿಗೆ 12 ಆಟಗಾರರ ಆಟವನ್ನಾಗಿ ಮಾಡಿದೆ. ಇದು ಪಂದ್ಯದ ಸಮತೋಲನವನ್ನು ಕೆಡಿಸಿದೆ ಎಂಬುದು ಹರ್ಷ್ ಗೋಯೆಂಕಾ ಅವರ ವಾದ.

  • ಸಮಸ್ಯೆ: ಈ ನಿಯಮದಿಂದಾಗಿ ಆಲ್‌ರೌಂಡರ್‌ಗಳ ಪ್ರಾಮುಖ್ಯತೆ ಕುಸಿಯುತ್ತಿದೆ. ತಂಡಗಳು ಒಬ್ಬ ಹೆಚ್ಚುವರಿ ಬ್ಯಾಟರ್‌ನನ್ನು ಕಣಕ್ಕಿಳಿಸುವುದರಿಂದ, ಯಾವುದೇ ಭಯವಿಲ್ಲದೆ ಬ್ಯಾಟರ್‌ಗಳು ಮನಬಂದಂತೆ ಬ್ಯಾಟ್ ಬೀಸುತ್ತಿದ್ದಾರೆ. ಇದು ಕ್ರಿಕೆಟ್‌ನ ಸಾಂಪ್ರದಾಯಿಕ ತಂತ್ರಗಾರಿಕೆಯನ್ನು ಮರೆಮಾಡುತ್ತಿದೆ. ಹೀಗಾಗಿ ನಿಯಮವನ್ನು ತೆಗೆದು ಹಾಕಬೇಕೆಂದು ಹರ್ಷ್ ಗೋಯೆಂಕಾ ಆಗ್ರಹಿಸಿದ್ದಾರೆ.

ಅಭಿಮಾನಿಗಳೊಂದಿಗಿನ ಸಂಬಂಧ: ಐಪಿಎಲ್ ಎನ್ನುವುದು ಕೇವಲ ಎರಡು ತಿಂಗಳ ಟೂರ್ನಿಯಾಗಬಾರದು. ಅಭಿಮಾನಿಗಳೊಂದಿಗೆ ಫ್ರಾಂಚೈಸಿಗಳು ವರ್ಷಪೂರ್ತಿ ಸಂಬಂಧ ಹೊಂದಿರಬೇಕು ಎಂದು ಹರ್ಷ್ ಗೋಯೆಂಕಾ ಅಭಿಪ್ರಾಯಪಟ್ಟಿದ್ದಾರೆ.

  • ಅಗತ್ಯತೆ: ಕೇವಲ ಪಂದ್ಯದ ದಿನವಷ್ಟೇ ಅಭಿಮಾನಿಗಳನ್ನು ನೆನಪಿಸಿಕೊಳ್ಳುವ ಬದಲು, ಸ್ಥಳೀಯ ಮಟ್ಟದಲ್ಲಿ ಕ್ರಿಕೆಟ್ ಚಟುವಟಿಕೆಗಳು, ಡಿಜಿಟಲ್ ಸಂವಾದಗಳು ಮತ್ತು ಅಭಿಮಾನಿಗಳಿಗೆ ವಿಶೇಷ ಮಾನ್ಯತೆ ನೀಡುವ ಮೂಲಕ ತಂಡದ ಬಗ್ಗೆ ನಿಷ್ಠೆ ಬೆಳೆಸಬೇಕು. ಈ ಬಗ್ಗೆ ಕೂಡ ಫ್ರಾಂಚೈಸಿಗಳು ಯೋಚಿಸಬೇಕಾದ ಅಗತ್ಯತೆ ಇದೆ.

ಕ್ರೀಡಾಂಗಣದಲ್ಲಿ ಉತ್ತಮ ಸೌಲಭ್ಯಗಳು: ಟಿವಿಯಲ್ಲಿ ಪಂದ್ಯ ನೋಡುವುದು ಸುಲಭವಾದರೂ, ಸ್ಟೇಡಿಯಂಗೆ ಬರುವ ಅಭಿಮಾನಿಗಳು ಅನುಭವಿಸುವ ಕಷ್ಟಗಳು ಸಾಕಷ್ಟಿವೆ. ಈ ಬಗ್ಗೆ ಫ್ರಾಂಚೈಸಿ ಹಾಗೂ ಕ್ರಿಕೆಟ್ ಸಂಸ್ಥೆಗಳು ಹೆಚ್ಚಿನ ಕಾಳಜಿವಹಿಸಬೇಕು ಎಂದು ಗೋಯೆಂಕಾ ತಿಳಿಸಿದ್ದಾರೆ.

  • ಸುಧಾರಣೆಗಳು: ಸ್ವಚ್ಛವಾದ ಶೌಚಾಲಯಗಳು, ಆರಾಮದಾಯಕ ಆಸನಗಳು, ಕೈಗೆಟುಕುವ ದರದಲ್ಲಿ ಗುಣಮಟ್ಟದ ಆಹಾರ ಮತ್ತು ಕ್ರೀಡಾಂಗಣಕ್ಕೆ ಸುಲಭ ಪ್ರವೇಶ ಒದಗಿಸಬೇಕು. ಅಭಿಮಾನಿಗಳಿಗೆ ಸ್ಟೇಡಿಯಂನಲ್ಲಿ ಸಿಗುವ ಅನುಭವ “ವಿಶ್ವದರ್ಜೆ”ಯದ್ದಾಗಿದ್ದರೆ ಮಾತ್ರ ಅವರು ಪಂದ್ಯ ನೋಡಲು ಮರಳಿ ಬರುತ್ತಾರೆ ಎಂದು ಗೋಯೆಂಕಾ ಅವರ ವಾದ.

ಇದಲ್ಲದೆ ಅನಿಶ್ಚಿತತೆಯೇ ಕ್ರಿಕೆಟ್‌ನ ಜೀವಾಳ ಎಂದು ಅಭಿಪ್ರಾಯಪಟ್ಟಿರುವ ಹರ್ಷ ಗೊಯೆಂಕಾ, ಪ್ರತಿದಿನ 225 vs 225 ರನ್‌ಗಳ ಪಂದ್ಯಗಳು ಬೇಸರ ತರಿಸುತ್ತವೆ. ಬ್ಯಾಟ್ ಮತ್ತು ಬಾಲ್ ನಡುವೆ ಸಮಬಲದ ಹೋರಾಟ ನಡೆದಾಗ ಮಾತ್ರ ವೀಕ್ಷಕರು ಟಿವಿಗೆ ಅಂಟಿಕೊಳ್ಳುತ್ತಾರೆ. ಹೀಗಾಗಿ ಸಮತೋಲಿತ ಪಿಚ್ ನಿರ್ಮಿಸಲು ಟೂರ್ನಿ ಆಯೋಜಕರು ಮುಂದಾಗಬೇಕು ಎಂದು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಐಪಿಎಲ್ ಇಂದು ಒಂದು ತಿರುವು ಘಟ್ಟದಲ್ಲಿದೆ. ಬಿಸಿಸಿಐ ಕೇವಲ ಬೌಂಡರಿ-ಸಿಕ್ಸರ್‌ಗಳ ಅಂಕಿಅಂಶಗಳಿಗೆ ಮರುಳಾಗದೆ, ಕ್ರೀಡೆಯ ನೈಜ ಆತ್ಮವಾದ ‘ಬ್ಯಾಟ್ ಮತ್ತು ಬಾಲ್ ನಡುವಿನ ಸಮರ’ವನ್ನು ಮತ್ತೆ ತರಬೇಕಿದೆ. ಹರ್ಷ್ ಗೋಯೆಂಕಾ ಅವರ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ, ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗೆ ಗೌರವ ನೀಡಿದಾಗ ಮಾತ್ರ ಐಪಿಎಲ್‌ನ ಗತವೈಭವ ಮರಳಲು ಸಾಧ್ಯ. ಅಭಿಮಾನಿಗಳೇ ಈ ಕ್ರೀಡೆಯ ಜೀವಾಳ, ಅವರ ಅತೃಪ್ತಿ ಲೀಗ್‌ನ ಅಳಿವು-ಉಳಿವಿನ ಪ್ರಶ್ನೆಯಾಗಬಹುದು ಎಂಬುದನ್ನು ಬಿಸಿಸಿಐ ಮರೆಯಬಾರದು.

Source link

ಇಂದು ಪ್ರಮಾಣವಚನ ಸ್ವೀಕರಿಸಿದ ಪಶ್ಚಿಮ ಬಂಗಾಳದ ಬಿಜೆಪಿ ಸಚಿವರ ಪಟ್ಟಿ ಇಲ್ಲಿದೆ – Kannada News | Dilip Ghosh to Agnimitra Paul Full list of BJP leaders who took oath as west Bengal ministers

ಕೊಲ್ಕತ್ತಾ, ಮೇ 9: 2014ರಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷವು ಅಂತಿಮವಾಗಿ ಪಶ್ಚಿಮ ಬಂಗಾಳದಲ್ಲಿ (West Bengal) ತನ್ನ ಮೊದಲ ಸರ್ಕಾರ ರಚಿಸಿದೆ. ಹೀಗಾಗಿ, ಪಶ್ಚಿಮ ಬಂಗಾಳದಲ್ಲಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಇಂದು ಒಂದು ಮಹತ್ವದ ದಿನವಾಗಿದೆ. ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರ ಜೊತೆಗೆ ದಿಲೀಪ್ ಘೋಷ್, ಅಗ್ನಿಮಿತ್ರ ಪಾಲ್, ಅಶೋಕ್ ಕೀರ್ತಾನಿಯಾ, ಕ್ಷುದಿರಾಮ್ ತುಡು, ನಿಸಿತ್ ಪ್ರಾಮಾಣಿಕ್ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಬಂಗಾಳದ ಬಿಜೆಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಯಾರೂ ಪ್ರಮಾಣವಚನ ಸ್ವೀಕರಿಸಿಲ್ಲ.

ಕೊಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ಪಶ್ಚಿಮ ಬಂಗಾಳ ರಾಜ್ಯಪಾಲ ಆರ್.ಎನ್.ರವಿ ಅಧಿಕಾರಿ ಮತ್ತು ಅವರ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಹಲವಾರು ಎನ್ಡಿಎ ಬ್ಲಾಕ್ ಸಿಎಂಗಳು ಭಾಗವಹಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Shani Puja: ಶನಿ ಪೂಜೆಯಲ್ಲಿ ತಾಮ್ರದ ಪಾತ್ರೆ ಬಳಸಬಾರದು ಯಾಕೆ? – Kannada News | Shani Puja: Why Copper Vessels are Forbidden and Which Metals Are Auspicious?

ಹಿಂದೂ ಧರ್ಮದಲ್ಲಿ ಸಾಮಾನ್ಯ ಅಥವಾ ವಿಶೇಷ ಪೂಜೆಗಳಿರಲಿ, ಪೂಜಾ ಸಾಮಗ್ರಿಗಳ ಜೊತೆಗೆ ಬಳಸುವ ಪಾತ್ರೆಗಳಿಗೆ ವಿಶೇಷ ಮಹತ್ವವಿದೆ. ಧಾರ್ಮಿಕ ವಿಧಿವಿಧಾನಗಳಿಗಾಗಿ ಸಾಮಾನ್ಯವಾಗಿ ಚಿನ್ನ, ಬೆಳ್ಳಿ, ಕಂಚು, ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳನ್ನು ಬಳಸುತ್ತಾರೆ. ಇವುಗಳನ್ನು ಅತ್ಯಂತ ಶುಭ ಲೋಹಗಳೆಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ, ಪೂಜೆಯ ತಟ್ಟೆ ಅಥವಾ ಬಟ್ಟಲುಗಳು ಹೆಚ್ಚಾಗಿ ತಾಮ್ರ ಅಥವಾ ಹಿತ್ತಾಳೆಯಿಂದ ಕೂಡಿರುತ್ತವೆ. ಆದರೆ, ಎಲ್ಲಾ ದೇವರುಗಳ ಪೂಜೆಯಲ್ಲಿ ತಾಮ್ರ ಶ್ರೇಷ್ಠವೆನಿಸಿದರೂ, ಶನಿ ದೇವರ ಪೂಜೆಯಲ್ಲಿ ಮಾತ್ರ ತಾಮ್ರದ ಪಾತ್ರೆಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಶನಿ ಪೂಜೆಯಲ್ಲಿ ತಾಮ್ರ ನಿಷೇಧಕ್ಕೆ ಕಾರಣವೇನು?

ಇತರ ದೇವತೆಗಳಿಗೆ ತಾಮ್ರವು ಅತ್ಯುತ್ತಮ ವಸ್ತುವಾಗಿದ್ದರೂ, ಶನಿ ದೇವರ ಆರಾಧನೆಯಲ್ಲಿ ತಾಮ್ರದ ಪಾತ್ರೆಗಳನ್ನು ಬಳಸುವುದು ಶನಿಯ ಕೋಪಕ್ಕೆ ಕಾರಣವಾಗಬಹುದು ಎಂದು ನಂಬಲಾಗಿದೆ. ಇದರ ಹಿಂದೆ ಸೂರ್ಯ ದೇವರಿಗೆ ಸಂಬಂಧಿಸಿದ ಪೌರಾಣಿಕ ಕಾರಣವಿದೆ. ತಾಮ್ರವು ಸೂರ್ಯ ದೇವನಿಗೆ ಅತ್ಯಂತ ಪ್ರಿಯವಾದ ಮತ್ತು ಅವನಿಗೆ ಸಂಬಂಧಿಸಿದ ಲೋಹವಾಗಿದೆ. ಸೂರ್ಯನಿಗೆ ಅರ್ಘ್ಯ ಅರ್ಪಿಸುವಾಗಲೂ ತಾಮ್ರದ ಪಾತ್ರೆಯನ್ನೇ ಬಳಸಲಾಗುತ್ತದೆ. ಸೂರ್ಯ ಮತ್ತು ಶನಿ ತಂದೆ-ಮಗನ ಸಂಬಂಧವನ್ನು ಹೊಂದಿದ್ದರೂ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅವರ ನಡುವೆ ದ್ವೇಷದ ಭಾವನೆಯಿದೆ. ಶತ್ರುತ್ವದ ಕಾರಣದಿಂದಾಗಿ, ತಂದೆಯಾದ ಸೂರ್ಯನಿಗೆ ಪ್ರಿಯವಾದ ತಾಮ್ರವನ್ನು ಮಗನಾದ ಶನಿಯ ಪೂಜೆಯಲ್ಲಿ ಬಳಸಬಾರದು ಎಂಬ ನಿಯಮವಿದೆ.

ಇದನ್ನೂ ಓದಿ: ನಿಮ್ಮ ಜನ್ಮ ದಿನಾಂಕದಲ್ಲೇ ಅಡಗಿದೆ ಮದುವೆಯ ರಹಸ್ಯ; ನಿಮಗಾಗುವುದು ಪ್ರೇಮ ವಿವಾಹವೋ ಅಥವಾ ಅರೇಂಜ್ ಮ್ಯಾರೇಜ್?

ಯಾವ ಲೋಹದ ಬಳಕೆ ಶನಿಗೆ ಪ್ರಿಯ?

ಸಾಮಾನ್ಯವಾಗಿ ಧಾರ್ಮಿಕ ಕಾರ್ಯಗಳಲ್ಲಿ ಕಬ್ಬಿಣದ ಬಳಕೆಯನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಆದರೆ, ಶನಿ ದೇವರಿಗೆ ಮಾತ್ರ ಇದು ಹೊರತಾಗಿದೆ. ಶನಿ ದೇವರಿಗೆ ಕಬ್ಬಿಣವು ಅತ್ಯಂತ ಪ್ರಿಯವಾದ ಲೋಹವಾಗಿದೆ. ಆದ್ದರಿಂದ ಅವನನ್ನು ಪೂಜಿಸುವಾಗ ಕಬ್ಬಿಣದ ಪಾತ್ರೆಗಳನ್ನು ಬಳಸಲಾಗುತ್ತದೆ. ಶನಿ ದೇವರಿಗೆ ಕಬ್ಬಿಣದ ಪಾತ್ರೆ ಮತ್ತು ಸಾಸಿವೆ ಎಣ್ಣೆಯಿಂದ ಅಭಿಷೇಕ ಅಥವಾ ಪೂಜೆ ಮಾಡಿದರೆ ಪ್ರಸನ್ನರಾಗುತ್ತಾರೆ ಮತ್ತು ಭಕ್ತರಿಗೆ ಶುಭ ಫಲಗಳನ್ನು ನೀಡುತ್ತಾರೆ ಎಂದು ಹೇಳಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಮಾನಸಿಕ ನೆಮ್ಮದಿ ನೀಡಿದ್ದು ವಿಜಯ್’; ರಶ್ಮಿಕಾ ಮಂದಣ್ಣ ಮನದಾಳದ ಮಾತು – Kannada News | Vijay Deverakonda Birthday: Rashmika Mandanna Says He Gave Me Mental Peace During Tough Times

ಟಾಲಿವುಡ್ ಖ್ಯಾತ ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ಪ್ರೀತಿಸಿ ಮದುವೆ ಆದರು. ಇಬ್ಬರೂ ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ. ಇಂದು (ಮೇ 9) ವಿಜಯ್ ತಮ್ಮ 37ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಬಾರಿಯ ಜನ್ಮದಿನ ಅವರಿಗೆ ಬಹಳ ವಿಶೇಷ. ಏಕೆಂದರೆ ವಿವಾಹದ ಬಳಿಕ ಅವರು ಆಚರಿಸಿಕೊಳ್ಳುತ್ತಿರುವ ಮೊದಲ ಹುಟ್ಟುಹಬ್ಬ. ಇಬ್ಬರೂ ವಿಶೇಷ ಸ್ಥಳಕ್ಕೆ ತೆರಳಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ರಶ್ಮಿಕಾ ಅವರ ಹಳೆಯ ಹೇಳಿಕೆ ಒಂದು ವೈರಲ್ ಆಗಿದೆ.

ಈ ಮೊದಲು ನೀಡಿದ ಸಂದರ್ಶನವೊಂದರಲ್ಲಿ ರಶ್ಮಿಕಾ ತಮ್ಮ ಕಹಿ ನೆನಪುಗಳ ಬಗ್ಗೆ ಮಾತನಾಡಿದ್ದರು. ಹಿಂದಿನ ಸಂಬಂಧವೊಂದರಲ್ಲಿ ತಾವು ಅನುಭವಿಸಿದ ಸಂಕಷ್ಟವನ್ನು ರಶ್ಮಿಕಾ ಸ್ಮರಿಸಿದ್ದರು. ಆ ಸಮಯದಲ್ಲಿ ತಮಗೆ ಮಾನಸಿಕ ನೆಮ್ಮದಿ ನೀಡಿದ್ದು ವಿಜಯ್ ಎಂದು ರಶ್ಮಿಕಾ ಹೇಳಿಕೊಂಡಿದ್ದರು. ಈ ಕಾರಣಕ್ಕೆ ರಶ್ಮಿಕಾಗೆ ವಿಜಯ್ ತುಂಬಾನೇ ಸ್ಪೆಷಲ್.

‘ಯಾರೂ ಕೂಡ ಇಷ್ಟವಿಲ್ಲದ ಅಥವಾ ಒತ್ತಡದ ಸಂಬಂಧದಲ್ಲಿ ಬಲವಂತವಾಗಿ ಮುಂದುವರಿಯಬಾರದು. ಜೀವನದಲ್ಲಿ ಶಾಂತಿ ಮತ್ತು ಸಂತೋಷವನ್ನು ತರುವಂತಹ ವ್ಯಕ್ತಿಯೊಂದಿಗೆ ಇರುವುದು ಎಷ್ಟು ಮುಖ್ಯ ಎಂಬುದನ್ನು ನಾನು ಈಗ ಅರಿತುಕೊಂಡಿದ್ದೇನೆ’ ಎಂದು ರಶ್ಮಿಕಾ ಹೇಳಿದ್ದರು.

‘ಗರ್ಲ್​​ಫ್ರೆಂಡ್’ ಸಿನಿಮಾ ವೇದಿಕೆ ಮೇಲೆ ವಿಜಯ್ ಬಗ್ಗೆ ಮಾತನಾಡಿದ್ದ ರಶ್ಮಿಕಾ, ‘ಈ ಸಿನಿಮಾದ ಆರಂಭದಿಂದಲೂ ನೀನು ನನ್ನ ಜೊತೆಗಿದ್ದೆ. ಪ್ರತಿಯೊಬ್ಬರ ಜೀವನದಲ್ಲೂ ಒಬ್ಬ ವಿಜಯ್ ದೇವರಕೊಂಡ ಇರಲಿ ಎಂದು ನಾನು ಹಾರೈಸುತ್ತೇನೆ, ಏಕೆಂದರೆ ಅಂತಹ ವ್ಯಕ್ತಿ ಸಿಗುವುದು ಒಂದು ಆಶೀರ್ವಾದ’ ಎಂದು ಭಾವುಕರಾಗಿದ್ದರು.

ಇದನ್ನೂ ಓದಿ: ವಿಜಯ್ ದೇವರಕೊಂಡಗೆ ನಾಯಕಿಯಾಗಿ ಬರುತ್ತಿದ್ದಾರೆ ಬಾಲಿವುಡ್​ನ ಸ್ಟಾರ್ ನಟಿ

‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೆಡ್’ ಚಿತ್ರಗಳ ಮೂಲಕ ಬೆಳ್ಳಿತೆರೆಯಲ್ಲಿ ಮೋಡಿ ಮಾಡಿದ್ದ ಈ ಜೋಡಿ, ನಿಜ ಜೀವನದಲ್ಲೂ ಉತ್ತಮ ಸ್ನೇಹಿತರಾಗಿದ್ದರು. ಡೇಟಿಂಗ್ ವದಂತಿಗಳನ್ನು ‘ಕ್ಯೂಟ್’ ಎಂದು ಕರೆಯುತ್ತಿದ್ದ ರಶ್ಮಿಕಾ, ವಿಜಯ್ ಅವರ ಪ್ರಾಮಾಣಿಕತೆಯನ್ನು ಯಾವಾಗಲೂ ಗೌರವಿಸುತ್ತಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

RCB ಗೆಲ್ಲಬೇಕಿದ್ದರೆ ಈ ಎರಡು ಬದಲಾವಣೆ ಮಾಡಲೇಬೇಕು! – Kannada News | IPL 2026: 2 Crucial Changes RCB Must Make to Strengthen Playing XI

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19 ರಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಿಶ್ರ ಫಲಿತಾಂಶಗಳನ್ನು ಕಾಣುತ್ತಿದೆ. ಮೊದಲಾರ್ಧದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಆರ್​ಸಿಬಿ, ದ್ವಿತೀಯಾರ್ಧದಲ್ಲಿ ಬ್ಯಾಕ್ ಟು ಬ್ಯಾಕ್ ಸೋಲನುಭವಿಸಿದೆ. ಈ ಸೋಲಿನ ಬೆನ್ನಲ್ಲೇ ತಂಡದ ಪ್ಲೇಯಿಂಗ್ ಇಲೆವೆನ್​​ನಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯ ಎಂಬ ಮಾತುಗಳು ಕೇಳಿ ಬಂದಿವೆ. ಆ ಬದಲಾವಣೆಗಳಾವುವು? ಅದರಿಂದ ಆರ್​ಸಿಬಿ ತಂಡಕ್ಕೆ ಆಗುವ ಲಾಭಗಳೇನು ಎಂದು ನೋಡುವುದಾದರೆ…  (PC: IPL)

ರೊಮಾರಿಯೊ ಶೆಫರ್ಡ್​: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ರೊಮಾರಿ ಶೆಫರ್ಡ್ ಈ ಬಾರಿ 10 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 55 ಎಸೆತಗಳನ್ನು ಎದುರಿಸಿದ ರೊಮಾರಿಯೊ ಕಲೆಹಾಕಿರುವುದು ಕೇವಲ 79 ರನ್​ಗಳು. ಅದು ಕೂಡ 143.64ರ ಸ್ಟ್ರೈಕ್ ರೇಟ್​ನಲ್ಲಿ. ಇನ್ನು ಬೌಲಿಂಗ್​ನಲ್ಲಿ 102 ಎಸೆತಗಳನ್ನು ಎಸೆದಿರುವ ಅವರು ಬರೋಬ್ಬರಿ 222 ರನ್ ನೀಡಿದ್ದಾರೆ. ಅಂದರೆ ಪ್ರತಿ ಓವರ್​ಗೆ 12.94ರ ಸರಾಸರಿಯಲ್ಲಿ ರನ್ ಬಿಟ್ಟು ಕೊಟ್ಟಿದ್ದಾರೆ. ಅಲ್ಲದೆ ಪಡೆದಿರುವುದು ಕೇವಲ 5 ವಿಕೆಟ್ ಮಾತ್ರ.  (PC: IPL)

ಜಿತೇಶ್ ಶರ್ಮಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಅವರ ಬ್ಯಾಟ್ ಈವರೆಗೆ ಸದ್ದು ಮಾಡಿಲ್ಲ. ಆಡಿದ 10 ಪಂದ್ಯಗಳಲ್ಲಿ ಕೇವಲ 59 ಎಸೆತಗಳನ್ನು ಎದುರಿಸಲಷ್ಟೇ ಶಕ್ತರಾಗಿರುವ ಜಿತೇಶ್ ಕಲೆಹಾಕಿದ್ದು ಕೇವಲ 64 ರನ್​ಗಳು ಮಾತ್ರ. ಅಂದರೆ 10ರ ಸರಾಸರಿಯಲ್ಲಿ ಮಾತ್ರ ರನ್​ ಗಳಿಸಿದ್ದಾರೆ.  (PC: IPL)

ಅಂದರೆ ಇಲ್ಲಿ ಆಲ್​ರೌಂಡರ್ ಆಗಿ ರೊಮಾರಿಯೊ ಶೆಫರ್ಡ್ ಹಾಗೂ ಬ್ಯಾಟರ್ ಆಗಿ ಜಿತೇಶ್ ಶರ್ಮಾ ಸಂಪೂರ್ಣ ವಿಫಲರಾಗಿದ್ದಾರೆ. ಹೀಗಾಗಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಈ ಇಬ್ಬರನ್ನು ಪ್ಲೇಯಿಂಗ್ ಇಲೆವೆನ್​ನಿಂದ ಕೈ ಬಿಡುವುದು ಸೂಕ್ತ. ಅವರ ಬದಲಿಗೆ… (PC: IPL)

ವೆಂಕಟೇಶ್ ಅಯ್ಯರ್: ರೊಮಾರಿಯೊ ಶೆಫರ್ಡ್ ಬದಲಿಗೆ ಆರ್​ಸಿಬಿ ವೆಂಕಟೇಶ್ ಅಯ್ಯರ್ ಅವರನ್ನು ಆಲ್​ರೌಂಡರ್​ ಆಗಿ ಕಣಕ್ಕಿಳಿಸುವುದು ಉತ್ತಮ. ವೆಂಕಿ ಯಾವುದೇ ಕ್ರಮಾಂಕದಲ್ಲೂ ಬ್ಯಾಟಿಂಗ್ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಅದರ ಜೊತೆ ಒಂದೆರಡು ಓವರ್​ಗಳನ್ನು ಸಹ ಎಸೆಯಬಲ್ಲರು. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ರೊಮಾರಿಯೊ ಬದಲಿಗೆ ವೆಂಟಕೇಶ್ ಅಯ್ಯರ್​ಗೆ ಚಾನ್ಸ್ ನೀಡುವುದು ಉತ್ತಮ. (PC: IPL)

ಜೋರ್ಡನ್ ಕಾಕ್ಸ್​: ವಿಕೆಟ್ ಕೀಪರ್ ಜಿತೇಶ್ ಶರ್ಮಾ ಬದಲಿಗೆ ಆರ್​ಸಿಬಿ ಇಂಗ್ಲೆಂಡ್​ನ ಸ್ಫೋಟಕ ದಾಂಡಿಗ ಜೋರ್ಡನ್ ಕಾಕ್ಸ್ ಅವರನ್ನು ಕಣಕ್ಕಿಳಿಸಬಹುದು. ಕಾಕ್ಸ್ ಕೂಡ ವಿಕೆಟ್ ಕೀಪರ್ ಬ್ಯಾಟರ್ ಆಗಿರುವುದರಿಂದ ಕೀಪಿಂಗ್ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಮಿಡಲ್ ಆರ್ಡರ್‌ನಲ್ಲಿ ವೇಗವಾಗಿ ರನ್ ಗಳಿಸುವ ಸಾಮರ್ಥ್ಯ ಹೊಂದಿರುವ ಕಾರಣ ಇವರು ತಂಡಕ್ಕೆ ಹೊಸ ಶಕ್ತಿ ತುಂಬಬಲ್ಲರು. ಜಿತೀಶ್‌ ಅವರ ಲಯ ತಪ್ಪಿರುವುದರಿಂದ ಕಾಕ್ಸ್ ಅವರನ್ನು ಕಣಕ್ಕಿಳಿಸುವುದು ತಂಡಕ್ಕೆ ಲಾಭದಾಯಕವಾಗಬಹುದು. (PC: IPL)

ಒಟ್ಟಾರೆಯಾಗಿ ಹೇಳುವುದಾದರೆ, ಆರ್​​ಸಿಬಿ ಕೇವಲ ಟಾಪ್-ಆರ್ಡರ್ ಬ್ಯಾಟರ್‌ಗಳ ಮೇಲೆ ಅವಲಂಬಿತವಾಗಿ ಪಂದ್ಯ ಗೆಲ್ಲುವ ಕಾಲ ಈಗ ಉಳಿದಿಲ್ಲ. ಮಧ್ಯಮ ಕ್ರಮಾಂಕದ ವೈಫಲ್ಯ ತಂಡಕ್ಕೆ ಪದೇ ಪದೇ ಮುಳುವಾಗುತ್ತಿದೆ. ಹೀಗಾಗಿ, ಜೋರ್ಡನ್ ಕಾಕ್ಸ್ ಮತ್ತು ವೆಂಕಟೇಶ್ ಅಯ್ಯರ್ ಅವರಂತಹ ಪ್ರತಿಭಾವಂತ ಆಟಗಾರರಿಗೆ ಅವಕಾಶ ನೀಡುವ ಮೂಲಕ ತಂಡದ ಬ್ಯಾಟಿಂಗ್ ಆಳವನ್ನು ಹೆಚ್ಚಿಸಿಕೊಳ್ಳುವುದು ಅನಿವಾರ್ಯ. ಈ ಎರಡು ಮಹತ್ವದ ಬದಲಾವಣೆಗಳು ತಂಡದ ಸಮತೋಲನವನ್ನು ಸುಧಾರಿಸುವುದಲ್ಲದೆ, 2026ರ ಐಪಿಎಲ್‌ನಲ್ಲಿ ಕಪ್ ಗೆಲ್ಲುವ ಆರ್​​ಸಿಬಿಯ ಕನಸಿಗೆ ಭದ್ರ ಬುನಾದಿ ಹಾಕಬಲ್ಲವು. ಹೀಗಾಗಿ ಆರ್​ಸಿಬಿ ತಂಡಕ್ಕೆ ಎರಡು ಬದಲಾವಣೆ ಅತ್ಯಗತ್ಯ. (PC: IPL)

Published On – 12:12 pm, Sat, 9 May 26

Source link

ಪ್ರಿಯಕರನ ಜೊತೆ ಸೇರಿ ಪತಿಯ ಮನೆಗೇ ಕನ್ನ ಹಾಕಿದ ಹಸೀನಾ! 21 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಚೋರಿ – Kannada News | Belagavi: Newlywed Woman Robs Husband’s House to Elope with Lover; Both Arrested

ಪ್ರಿಯಕರನ ಜೊತೆ ಸೇರಿ ಪತಿಯ ಮನೆಗೇ ಕನ್ನ ಹಾಕಿದ ಹಸೀನಾ!

ಬೆಳಗಾವಿ, ಮೇ 09: ಜಿಲ್ಲೆಯಲ್ಲಿ ಸಿನಿಮಾ ಮಾದರಿಯ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬಳು ಪ್ರಿಯಕರನ (Lover) ಜೊತೆ ಜೀವನ ನಡೆಸಲು ಪತಿಯ ಮನೆಗೇ ಕನ್ನ ಹಾಕಿದ ಘಟನೆ ಬೆಳಕಿಗೆ ಬಂದಿದೆ. ಪ್ರಕರಣದ ಹಿನ್ನೆಲೆ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಕಟಕೋಳ ಪೊಲೀಸರು ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ.

ಮುಖ್ಯಾಂಶಗಳು

  • ಪ್ರಿಯಕರನ ಜೊತೆ ಸೇರಿ ಪತಿ ಮನೆಗೆ ಕನ್ನ ಹಾಕಿದ ನವವಧು ಹಸೀನಾ ನದಾಫ್ ಬಂಧನ
  • 21 ಲಕ್ಷ ರೂಪಾಯಿ ಮೌಲ್ಯದ 154 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಕಿಲಾಡಿ ಜೋಡಿ
  • ದೂರು ದಾಖಲಾದ 48 ಗಂಟೆಗಳಲ್ಲಿ ಆರೋಪಿಗಳನ್ನು ಜೈಲಿಗಟ್ಟಿದ ಕಟಕೋಳ ಪೊಲೀಸರು

ನಡೆದಿದ್ದೇನು?

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹೊಸಕೋಟೆ ಗ್ರಾಮದಲ್ಲಿ ಈ ವಿಚಿತ್ರ ಕಳ್ಳತನ ನಡೆದಿದೆ. ಮೂಲತಃ ಮೂಡಲಗಿ ತಾಲೂಕಿನವಳಾದ ಹಸೀನಾ ನದಾಫ್ ಎಂಬಾಕೆಗೆ ಎರಡು ತಿಂಗಳ ಹಿಂದೆಯಷ್ಟೇ ಹೊಸಕೋಟೆ ಗ್ರಾಮದ ಶರೀಫ್ ಎಂಬುವವರ ಜೊತೆ ವಿವಾಹವಾಗಿತ್ತು. ಆದರೆ, ಹಸೀನಾ ಮದುವೆಗಿಂತ ಮುಂಚೆಯೇ ಹಣಮಂತ ಮಾರಾಪೂರ ಎಂಬಾತನನ್ನು ಪ್ರೀತಿಸುತ್ತಿದ್ದಳು. ಮದುವೆಯಾದ ಬಳಿಕವೂ ಆಕೆಯ ಪ್ರೇಮ ಪುರಾಣ ಮುಂದುವರಿದಿತ್ತು.

ತನ್ನ ಪ್ರಿಯಕರನ ಜೊತೆ ಶಾಶ್ವತವಾಗಿ ನೆಲೆಸಲು ನಿರ್ಧರಿಸಿದ ಹಸೀನಾ, ಅದಕ್ಕೆ ಬೇಕಾದ ಹಣಕ್ಕಾಗಿ ಪತಿಯ ಮನೆಯಲ್ಲಿದ್ದ ಚಿನ್ನಾಭರಣಗಳ ಮೇಲೆ ಕಣ್ಣು ಹಾಕಿದ್ದಳು. ನಾಲ್ಕು ದಿನಗಳ ಹಿಂದೆ ಮನೆಯಲ್ಲಿ ಯಾರೂ ಇಲ್ಲದ ಸಮಯ ಸಾಧಿಸಿ, ಸುಮಾರು 21 ಲಕ್ಷ ರೂಪಾಯಿ ಮೌಲ್ಯದ 154.6 ಗ್ರಾಂ ಚಿನ್ನಾಭರಣ ಹಾಗೂ 45 ಗ್ರಾಂ ಬೆಳ್ಳಿಯ ಆಭರಣಗಳನ್ನು ದೋಚಿಕೊಂಡು ಪ್ರಿಯಕರನ ಜೊತೆ ಪರಾರಿಯಾಗಿದ್ದಳು.

48 ಘಂಟೆಗಳಲ್ಲಿ ಪರಾರಿಯಾದವರನ್ನು ಹಿಡಿದ ಪೊಲೀಸರು

ಮನೆಯಲ್ಲಿ ಚಿನ್ನಾಭರಣ ನಾಪತ್ತೆಯಾದ ಬಗ್ಗೆ ಶರೀಫ್ ಅವರ ಸಂಬಂಧಿ ದಿಲ್ಶಾನ್ ನದಾಫ್ ಅವರು ಕಟಕೋಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆ ಪೊಲೀಸರು ತನಿಖೆ ಕೈಗೆತ್ತಿಕೊಂಡಾಗ ಹಸೀನಾ ಮೇಲೆ ಅನುಮಾನ ವ್ಯಕ್ತವಾಗಿದೆ. ದೂರು ದಾಖಲಾದ ಕೇವಲ 48 ಗಂಟೆಗಳ ಒಳಗಾಗಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಹಸೀನಾ ಮತ್ತು ಆಕೆಯ ಪ್ರಿಯಕರ ಹಣಮಂತ ಮಾರಾಪೂರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ ಬಿಟ್‌ಕಾಯಿನ್ ಹಗರಣ ಹಿನ್ನೆಲೆ ಶ್ರೀಕಿ ಅರೆಸ್ಟ್! ಮಹಮ್ಮದ್ ನಲಪಾಡ್​ಗೂ ಎದುರಾಗುತ್ತಾ ಸಂಕಷ್ಟ?

ಬಂಧಿತರಿಂದ ಕಳವು ಮಾಡಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಟಕೋಳ ಪೊಲೀಸರು ಇಬ್ಬರೂ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 12:08 pm, Sat, 9 May 26

Source link

ಪಶ್ಚಿಮ ಬಂಗಾಳ: ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ – Kannada News | PM Modi Touches Feet of 98 Year Old Veteran BJP Worker Makhanlal Sarkar in West Bengal CM Swearing in; Video Goes Viral

ಕೋಲ್ಕತ್ತಾ, ಮೇ 9: ಪಶ್ಚಿಮ ಬಂಗಾಳದ ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಗ್ರೌಂಡ್‌ನಲ್ಲಿ ನಡೆದ ಬಿಜೆಪಿ ಸರ್ಕಾರದ ಐತಿಹಾಸಿಕ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತೋರಿದ ಗೌರವದ ನಡವಳಿಕೆ ಈಗ ಎಲ್ಲರ ಗಮನ ಸೆಳೆಯುತ್ತಿದೆ. ವೇದಿಕೆಯ ಮೇಲಿದ್ದ 98 ವರ್ಷದ ಹಿರಿಯ ಬಿಜೆಪಿ ಕಾರ್ಯಕರ್ತ ಮಖನ್ ಲಾಲ್ ಸರ್ಕಾರ್ ಅವರ ಕಾಲು ಮುಟ್ಟಿ ನಮಸ್ಕರಿಸಿದ ಪ್ರಧಾನಿ, ಅವರಿಗೆ ಶಾಲು ಹೊದಿಸಿ ಆತ್ಮೀಯವಾಗಿ ಸನ್ಮಾನಿಸಿದರು. ಮಖನ್ ಲಾಲ್ ಸರ್ಕಾರ್ ಅವರು ಪಶ್ಚಿಮ ಬಂಗಾಳದ ಬಿಜೆಪಿಯ ಅತ್ಯಂತ ಹಿರಿಯ ಮತ್ತು ನಿಷ್ಠಾವಂತ ಕಾರ್ಯಕರ್ತರಲ್ಲಿ ಒಬ್ಬರು. ಸ್ವಾತಂತ್ರ್ಯಾನಂತರದ ರಾಷ್ಟ್ರೀಯತಾವಾದಿ ಚಳವಳಿಯಲ್ಲಿ ಸಕ್ರಿಯರಾಗಿದ್ದ ಇವರು, 1952ರಲ್ಲಿ ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಹೋರಾಟದಲ್ಲಿ ಶ್ಯಾಮ ಪ್ರಸಾದ್ ಮುಖರ್ಜಿ ಅವರೊಂದಿಗೆ ಭಾಗವಹಿಸಿ ಜೈಲು ವಾಸ ಅನುಭವಿಸಿದ್ದರು.

1980ರಲ್ಲಿ ಬಿಜೆಪಿ ಸ್ಥಾಪನೆಯಾದ ನಂತರ ಉತ್ತರ ಬಂಗಾಳದ ವಿವಿಧ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆಗೆ ಶ್ರಮಿಸಿ, ಕೇವಲ ಒಂದು ವರ್ಷದಲ್ಲಿ 10,000ಕ್ಕೂ ಹೆಚ್ಚು ಸದಸ್ಯರನ್ನು ಪಕ್ಷಕ್ಕೆ ಸೇರಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಸತತ ಏಳು ವರ್ಷಗಳ ಕಾಲ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರ ಸಮರ್ಪಣಾ ಮನೋಭಾವಕ್ಕೆ ಪ್ರಧಾನಿ ಮೋದಿ ಗೌರವ ಸಮರ್ಪಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Kedarnath Shivling: ಕೇದಾರನಾಥದಲ್ಲಿ ಶಿವಲಿಂಗ ತ್ರಿಕೋನ ಆಕಾರದಲ್ಲಿ ಯಾಕಿದೆ ಗೊತ್ತಾ? ಇಲ್ಲಿದೆ ಪೌರಾಣಿಕ ರಹಸ್ಯ! – Kannada News | Kedarnath: The Mystical Triangular Shivling and Its Mythological Secrets Revealed

ಕೇದಾರನಾಥದ ತ್ರಿಕೋನ ಶಿವಲಿಂಗದ ರಹಸ್ಯImage Credit source: Pinterest

ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಕೇದಾರನಾಥವು ಅತ್ಯಂತ ಪವಿತ್ರ ತಾಣ. ಸಮುದ್ರ ಮಟ್ಟದಿಂದ ಸುಮಾರು 11,000 ಅಡಿ ಎತ್ತರದಲ್ಲಿರುವ ಕೇದಾರನಾಥಕ್ಕೆ ಪ್ರತೀ ವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಮಂದಾಕಿನಿ ನದಿಯ ದಡದಲ್ಲಿ, ಹಿಮಚ್ಛಾದಿತ ಶಿಖರಗಳ ನಡುವೆ ನೆಲೆಸಿರುವ ಈ ದೇವಾಲಯವು ತನ್ನ ವಿಶಿಷ್ಟ ತ್ರಿಕೋನಾಕಾರದ ಶಿವಲಿಂಗದಿಂದ ಜಗತ್ಪ್ರಸಿದ್ಧವಾಗಿದೆ. ಇತರ ಜ್ಯೋತಿರ್ಲಿಂಗಗಳಿಗಿಂತ ಕೇದಾರನಾಥದಲ್ಲಿ ಶಿವನು ತ್ರಿಕೋನ ರೂಪದಲ್ಲಿ ಏಕೆ ನೆಲೆಸಿದ್ದಾನೆ ಎಂಬುದಕ್ಕೆ ಮಹಾಭಾರತದಲ್ಲಿ ಸ್ವಾರಸ್ಯಕರ ಕಥೆಯಿದೆ.

ತ್ರಿಕೋನಾಕಾರದ ಶಿವಲಿಂಗದ ಪೌರಾಣಿಕ ಹಿನ್ನೆಲೆ:

ಕುರುಕ್ಷೇತ್ರ ಯುದ್ಧದ ನಂತರ, ಪಾಂಡವರು ತಮ್ಮ ಪಾಪಪರಿಹಾರಕ್ಕಾಗಿ ಶಿವನ ದರ್ಶನ ಬಯಸಿದರು. ಆದರೆ ಪಾಂಡವರಿಂದ ತಪ್ಪಿಸಿಕೊಳ್ಳಲು ಶಿವನು ಹಿಮಾಲಯದಲ್ಲಿ ಗೂಳಿಯ (ವೃಷಭ) ರೂಪ ತಾಳಿದನು. ಭೀಮನು ಆ ಗೂಳಿಯನ್ನು ಹಿಡಿಯಲು ಪ್ರಯತ್ನಿಸಿದಾಗ, ಅದು ಭೂಮಿಯಲ್ಲಿ ವಿಲೀನವಾಯಿತು. ಈ ಸಂದರ್ಭದಲ್ಲಿ ಗೂಳಿಯ ಗೂನು (Hump) ಭಾಗ ಕೇದಾರನಾಥದಲ್ಲಿ ಉಳಿಯಿತು. ಭೂಮಿಯ ಮೇಲೆ ಉಳಿದ ಆ ಗೂನಿನ ಭಾಗವೇ ಇಂದು ನಾವು ಪೂಜಿಸುವ ತ್ರಿಕೋನ ಶಿವಲಿಂಗವಾಗಿದೆ ಎಂದು ಹೇಳಲಾಗುತ್ತದೆ.

ಆಧ್ಯಾತ್ಮಿಕ ದೃಷ್ಟಿಕೋನ:

ಆಧ್ಯಾತ್ಮಿಕ ದೃಷ್ಟಿಕೋನದಿಂದ ಈ ತ್ರಿಕೋನಾಕಾರದ ಶಿವಲಿಂಗವು ಕೇವಲ ಒಂದು ವಿಗ್ರಹವಲ್ಲ, ಬದಲಿಗೆ ಸೃಷ್ಟಿ, ಸ್ಥಿತಿ ಮತ್ತು ಲಯದ ತತ್ವಗಳನ್ನು ಪ್ರತಿನಿಧಿಸುವ ದೈವಿಕ ಶಕ್ತಿಯ ಸಂಕೇತವಾಗಿದೆ. ಇದನ್ನು ನಂಬಿಕೆ, ತಪಸ್ಸು ಮತ್ತು ಶಕ್ತಿಯ ಸಾಮರಸ್ಯವೆಂದು ವಿದ್ವಾಂಸರು ವಿವರಿಸುತ್ತಾರೆ. ಪಾಂಡವರ ಅಚಲ ಭಕ್ತಿ ಮತ್ತು ಶಿವನ ಕ್ಷಮಾ ಗುಣಕ್ಕೆ ಈ ರೂಪವು ಸಾಕ್ಷಿಯಾಗಿದೆ ಎಂಬುದು ಭಕ್ತರ ದೃಢ ನಂಬಿಕೆಯಾಗಿದೆ.

ಇದನ್ನೂ ಓದಿ: ನಿಮ್ಮ ಜನ್ಮ ದಿನಾಂಕದಲ್ಲೇ ಅಡಗಿದೆ ಮದುವೆಯ ರಹಸ್ಯ; ನಿಮಗಾಗುವುದು ಪ್ರೇಮ ವಿವಾಹವೋ ಅಥವಾ ಅರೇಂಜ್ ಮ್ಯಾರೇಜ್?

ಕೇದಾರನಾಥ ಮೋಕ್ಷದಾಯಕ ಕ್ಷೇತ್ರ:

ಧಾರ್ಮಿಕವಾಗಿ ಕೇದಾರನಾಥವು ಮೋಕ್ಷದಾಯಕ ಕ್ಷೇತ್ರವೆಂದು ಪ್ರಸಿದ್ಧವಾಗಿದೆ. ಇಲ್ಲಿನ ತ್ರಿಕೋನ ಜ್ಯೋತಿರ್ಲಿಂಗದ ದರ್ಶನದಿಂದ ಮನಸ್ಸಿಗೆ ಅಪಾರ ಶಾಂತಿ, ಧೈರ್ಯ ಮತ್ತು ದೈವಿಕ ಆಶೀರ್ವಾದಗಳು ಲಭಿಸುತ್ತವೆ ಎಂದು ಯಾತ್ರಿಕರು ನಂಬುತ್ತಾರೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಕಠಿಣ ಹಾದಿಯನ್ನು ಕ್ರಮಿಸಿ, ಹಿಮದಿಂದ ಆವೃತವಾದ ಈ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಶಿವನ ಕೃಪೆಗೆ ಪಾತ್ರರಾಗುತ್ತಾರೆ.

2026 ರ ಕೇದಾರನಾಥ ಯಾತ್ರೆ:

2026 ರ ಕೇದಾರನಾಥ ಯಾತ್ರೆಯು ಈಗಾಗಲೇ ಆರಂಭವಾಗಿದ್ದು, ದೇಶಾದ್ಯಂತ ಭಕ್ತ ಸಾಗರವು ಹಿಮಾಲಯದತ್ತ ಹರಿಯುತ್ತಿದೆ. ಪಂಚ ಕೇದಾರ ಕ್ಷೇತ್ರಗಳಲ್ಲಿ ಅತ್ಯಂತ ಪ್ರಮುಖವಾದ ಕೇದಾರನಾಥವು, ತುಂಗನಾಥ, ರುದ್ರನಾಥ, ಮಧ್ಯಮಹೇಶ್ವರ ಮತ್ತು ಕಲ್ಪೇಶ್ವರ ದೇವಾಲಯಗಳೊಂದಿಗೆ ನಿಕಟ ಸಂಬಂಧ ಹೊಂದಿದೆ. ಒಟ್ಟಾರೆಯಾಗಿ, ಕೇದಾರನಾಥದ ಈ ವಿಶಿಷ್ಟ ಶಿವಲಿಂಗವು ಭಕ್ತಿ, ಕ್ಷಮೆ ಮತ್ತು ದೈವಿಕ ಶಕ್ತಿಯ ಶಾಶ್ವತ ಸಂಕೇತವಾಗಿ ಇಂದಿಗೂ ಭಕ್ತರನ್ನು ಕೈಬೀಸಿ ಕರೆಯುತ್ತಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉಪೇಂದ್ರ ಚುನಾವಣೆಯಲ್ಲಿ ಏಕೆ ಸ್ಪರ್ಧಿಸಲ್ಲ? ಉತ್ತರಿಸಿದ ನಟ – Kannada News | Why Upendra Not Contesting In Election Actor Explain

ನಟ ಉಪೇಂದ್ರ ಅವರು ಪ್ರಜಾಕೀಯ ಸ್ಥಾಪಿಸಿದ್ದಾರೆ. ಆದರೆ, ಅವರು ಚುನಾವಣೆಗೆ ನಿಲ್ಲಲ್ಲ. ಈ ಬಗ್ಗೆ ಮಾತನಾಡಿದ್ದಾರೆ. ‘ನಾನು ಫಾಲೋವರ್​ ಅಲ್ಲ. ಯಾರೋ ಆ್ಯಕ್ಷನ್ ಸಿನಿಮಾ ಮಾಡಿ ಹಿಟ್ ಆದರೆ, ನಾನು ಆ್ಯಕ್ಷನ್ ಸಿನಿಮಾ ಮಾಡಲ್ಲ. ನಾನು ಮೊದಲಿನಿಂದ ಅದನ್ನೇ ಫಾಲೋ ಮಾಡುತ್ತಾ ಬರುತ್ತಿದ್ದೇನೆ. ನಾನು ಆರ್ಟಿಸ್ಟ್ ಎಂದು ಮತ ಹಾಕಬೇಡಿ, ಸ್ಪರ್ಧಿ ಎಂದು ಪರಿಗಣಿಸಿ ವೋಟ್ ಹಾಕಿ. ನಾನು ಚುನಾವಣೆಗೆ ನಿಲ್ಲಲ್ಲ ಎಂದಿದ್ದು ಇದೇ ಕಾರಣಕ್ಕೆ.ನಾನು ನಿಲ್ಲಲ್ಲ, ಬೇರೆಯವರು ನಿಲ್ಲುತ್ತಾರೆ ಎಂದಾಗ ವಿಚಾರಧಾರೆ ನೋಡಿ ವೋಟ್ ಮಾಡಿ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version