ಗುಜರಾತ್ನಲ್ಲಿ ಮೈಕ್ರಾನ್‌ನ ಸೆಮಿಕಂಡಕ್ಟರ್ ಸೌಲಭ್ಯ ಉದ್ಘಾಟಿಸಿದ ಪ್ರಧಾನಿ ಮೋದಿ – Kannada News | PM Modi inaugurates Micron semiconductor ATMP facility in Gujarat
ಅಹಮದಾಬಾದ್, ಫೆಬ್ರವರಿ 28: ಇಂದು ಗುಜರಾತ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಸನಂದ್‌ನಲ್ಲಿರುವ ಮೈಕ್ರಾನ್ ಸೆಮಿಕಂಡಕ್ಟರ್ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸೆಮಿಕಂಡಕ್ಟರ್ ಅಸೆಂಬ್ಲಿ, ಟೆಸ್ಟ್ ಮತ್ತು ಪ್ಯಾಕೇಜಿಂಗ್ (ಎಟಿಎಂಪಿ) ಸೌಲಭ್ಯವನ್ನು ಉದ್ಘಾಟಿಸಿದರು. ಈ ಉದ್ಘಾಟನೆಯು ಭಾರತದ ಸೆಮಿಕಂಡಕ್ಟರ್ ಉತ್ಪಾದನಾ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ. ಸನಂದ್ ಎಟಿಎಂಪಿ ಸೌಲಭ್ಯದಿಂದ ಭಾರತದಲ್ಲಿ ತಯಾರಿಸಿದ ಮೊದಲ ಸೆಮಿಕಂಡಕ್ಟರ್ ಮೆಮೊರಿ ಮಾಡ್ಯೂಲ್‌ಗಳ ವಾಣಿಜ್ಯ ಉತ್ಪಾದನೆ ಮತ್ತು ಸಾಗಣೆಯನ್ನು ಪ್ರಾರಂಭಿಸಿದೆ. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ…