ಹಠ ಬಿಡದ ‘ದ್ರೌಪದಿ’ಗೆ ಪಶ್ಚಿಮ ಬಂಗಾಳದ ಉಪ ಮುಖ್ಯಮಂತ್ರಿ ಪಟ್ಟ, ಯಾರು ಈ ರೂಪಾ ಗಂಗೂಲಿ? – Kannada News | Roopa Ganguly to became West Bengal DCM, Who is she what is her background

ಕೌರವರ ಪತನಕ್ಕಾಗಿ ಪಣತೊಟ್ಟು ಮುಡಿ ಕಟ್ಟದೆ ಕಾದಿದ್ದಳು ಮಹಾಭಾರತದ ದ್ರೌಪದಿ. ಅದೇ ಹಠದಿಂದ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪತನಕ್ಕಾಗಿ ದಶಕದಿಂದ ಕಾದಿದ್ದ ‘ದ್ರೌಪದಿ’ಗೆ ಈಗ ಪಶ್ಚಿಮ ಬಂಗಾಳದ (west Bengal) ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡಿದೆ ಬಿಜೆಪಿ. ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರ ಹಿಡಿದಿದೆ. ಸತತ ಹೊರಾಟ, ಪ್ರಯತ್ನಗಳ ಬಳಿಕ ಕೊನೆಗೂ ಮಮತಾ ಬ್ಯಾನರ್ಜಿಯನ್ನು ಕುರ್ಚಿಯಿಂದ ಕೆಳಗಿಳಿಸಿರುವ ಬಿಜೆಪಿ ಇದೀಗ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಸುವೇಂದು ಅಧಿಕಾರಿ ಇದೀಗ ಪಶ್ಚಿಮ ಬಂಗಾಳದ ಮೊಟ್ಟ ಮೊದಲ ಬಿಜೆಪಿ ಸಿಎಂ ಆಗಲಿದ್ದಾರೆ. ಮಾತ್ರವಲ್ಲದೆ, ಇಬ್ಬರನ್ನು ಡಿಸಿಎಂ ಅನ್ನಾಗಿ ಸಹ ಆಯ್ಕೆ ಮಾಡಲಾಗಿದ್ದು, ಅವರಲ್ಲಿ ಒಬ್ಬರು ನಟಿ ರೂಪಾ ಗಂಗೂಲಿ.

ರೂಪಾ ಗಂಗೂಲಿ ಎಂದರೆ ಹೆಚ್ಚು ಜನರಿಗೆ ತಿಳಿಯಲಿಕ್ಕಿಲ್ಲ, ಆದರೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ‘ಮಹಾಭಾರತ’ ಧಾರಾವಾಹಿಯ ದ್ರೌಪದಿ ಎಂದರೆ ಥಟ್ಟನೆ ನೆನಪಾಗುತ್ತದೆ. ಅದೇ ‘ದ್ರೌಪದಿ’ ಪಾತ್ರಧಾರಿ ರೂಪಾ ಗಂಗೂಲಿ ಈಗ ಪಶ್ಚಿಮ ಬಂಗಾಳದ ಉಪ ಮುಖ್ಯಮಂತ್ರಿ. ರೂಪಾ ಗಂಗೂಲಿ ಅವರದ್ದು ಟಿವಿ ಮತ್ತು ಸಿನಿಮಾ ಕ್ಷೇತ್ರದಲ್ಲಿ ಬಹು ದೊಡ್ಡ ಹೆಸರು. ರಾಜಕೀಯಕ್ಕೆ ಕಾಲಿಟ್ಟಮೇಲೂ ನಟನೆ ಮುಂದುವರೆಸಿದ್ದ ರೂಪಾ ಗಂಗೂಲಿ ಅವರಿಗೆ ಈಗಲೂ  ಸಿನಿಮಾ ರಂಗದಲ್ಲಿ ಬಹಳ ಬೇಡಿಕೆ ಇದೆ. ಆದರೆ ಈಗ ಉಪ ಮುಖ್ಯಮಂತ್ರಿ ಆದ ಬಳಿಕ ಅವರು ನಟನೆ ಮುಂದುವರೆಸುತ್ತಾರೋ ಇಲ್ಲವೋ ನೋಡಬೇಕು.

ರಾಜಕೀಯ ಜರ್ನಿ

ರೂಪಾ ಗಂಗೂಲಿ ಸಿನಿಮಾ ರಂಗದಲ್ಲಿ ಸೌಮ್ಯ, ಸುಂದರ ನಾಯಕಿಯಾಗಿ ಕಾಣಿಸಿಕೊಂಡಿದ್ದೇ ಹೆಚ್ಚು, ಆದರೆ ರಾಜಕೀಯದಲ್ಲಿ ಅವರದ್ದು ಹೋರಾಟದ ಹಾದಿ. 2015 ರಲ್ಲಿ ಬಿಜೆಪಿ ಸೇರುವ ಮೂಲಕ ಅವರು ರಾಜಕೀಯಕ್ಕೆ ಪದಾರ್ಪಣೆ ಮಾಡಿದರು. ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ಹವಾ ಬಲು ಜೋರಾಗಿದ್ದ ಕಾಲವದು. ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಯಾವ ಕಾಲದಲ್ಲೂ ಸುಲಭವಾಗಿರಲಿಲ್ಲ. ರಾಜಕೀಯ ಹಿಂಸಾಚಾರವಂತೂ ‘ಸಾಮಾನ್ಯ’ ಎಂಬಂತಿತ್ತು, ಅಂಥಹಾ ಸಮಯದಲ್ಲೂ ಗಟ್ಟಿ ಮನಸ್ಸು ಮಾಡಿ, ದೊಡ್ಡ ಪಕ್ಷದ ವಿರುದ್ಧ ಪಕ್ಷ ಸಂಘಟನೆ ಶುರು ಮಾಡಿದರು ರೂಪಾ ಗಂಗೂಲಿ.

2015 ರಲ್ಲಿ ಪಶ್ಚಿಮ ಬಂಗಾಳ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಆದ ರೂಪಾ ಗಂಗೂಲಿ, 2016 ರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು. ಆದರೆ ಛಲ ಬಿಡದೆ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು ರೂಪಾ. ಅದೇ ವರ್ಷ ಮೇ ತಿಂಗಳಲ್ಲಿ ಚುನಾವಣಾ ಹಿಂಸಾಚಾರದ ಸಂತ್ರಸ್ತರನ್ನು ಭೇಟಿಯಾಗಿ ಮರಳಿ ಬರುವಾಗ ಟಿಎಂಸಿ ಕಾರ್ಯಕರ್ತರು ರೂಪಾ ಅವರ ಮೇಲೆ ದಾಳಿ ನಡೆಸಿ ಹಲ್ಲೆ ಮಾಡಿದರು. ಹಲ್ಲೆಯಲ್ಲಿ ರೂಪಾ ಅವರ ತಲೆಗೆ ಗಂಭೀರ ಪೆಟ್ಟಾಗಿತ್ತು. ಅವರು ಆಸ್ಪತ್ರೆ ಸಹ ಸೇರಿದರು. ಅದೇ ವರ್ಷ ಅವರನ್ನು ರಾಜ್ಯಸಭೆಗೆ ನಾಮಿನೇಟ್ ಮಾಡಿ ಕಳಿಸಿತು ಬಿಜೆಪಿ. 2022 ರಲ್ಲಿ ತಮ್ಮ ಅವಧಿ ಮುಗಿಸಿದ ರೂಪಾ, ಈಗ ಮತ್ತೆ ಚುನಾವಣೆ ಸ್ಪರ್ಧಿಸಿ ಗೆದ್ದಿಲ್ಲದೆ, ಉಪ ಮುಖ್ಯಮಂತ್ರಿ ಸಹ ಆಗಲಿದ್ದಾರೆ.

ವೈಯಕ್ತಿಕ ಜೀವನ

ಇನ್ನು ರೂಪಾ ಅವರ ವೈಯಕ್ತಿಕ ಜೀವನ ಗಮನಿಸುವುದಾದರೆ ರೂಪಾ ಅವರು ಎಂಜಿನಿಯರ್ ಒಬ್ಬರನ್ನು 1992 ರಲ್ಲಿ ವಿವಾಹವಾಗಿ ಅವರಿಂದ ಒಂದು ಗಂಡು ಮಗುವನ್ನೂ ಪಡೆದರು. ಆದರೆ 2007 ರಲ್ಲಿ ಇಬ್ಬರೂ ವಿಚ್ಛೇದನ ಪಡೆದು ದೂರಾದರು. ಬಳಿಕ ರೂಪಾ ಅವರು ಬೆಂಗಾಲಿ ಗಾಯಕ ದಿವ್ಯೇಂದು ಮುಖರ್ಜಿ ಜೊತೆಗೆ ಲಿವಿನ್ ರಿಲೇಷನ್​​ನಲ್ಲಿದ್ದರು. ರೂಪಾ ಮತ್ತು ದಿವ್ಯೇಂದು ಮುಂಬೈನಲ್ಲಿ ಒಟ್ಟಿಗೆ ಹಲವು ವರ್ಷ ಇದ್ದರು. ಬಳಿಕ ಇಬ್ಬರೂ ದೂರಾದರು. ಆದರೆ ಆ ಬಳಿಕವೂ ಅವರು ಗೆಳೆತನ ಕಾಪಾಡಿಕೊಂಡಿದ್ದಾರೆ. ಪ್ರಸ್ತುತ ರೂಪಾ ಅವರು ಒಂಟಿ. ಪುತ್ರ ಜೊತೆಗಿದ್ದಾನೆ.

ಸಿನಿಮಾ ಜರ್ನಿ

ರೂಪಾ ಗಂಗೂಲಿ ಅದ್ಭುತ ನಟಿಯಾಗಿದ್ದವರು. ಟಿವಿ ಧಾರಾವಾಹಿ ಮಾತ್ರವೇ ಅಲ್ಲದೆ ಹಿಂದಿ, ಕನ್ನಡ, ತೆಲುಗು, ಒಡಿಯಾ, ಮಲಯಾಳಂ, ಮರಾಠಿ, ಬೆಂಗಾಲಿ, ಅಸ್ಸಾಮಿ ಹೀಗೆ ಹಲವಾರು ಭಾಷೆಯ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಕನ್ನಡದಲ್ಲಿ ಅವರು ವಿಷ್ಣುವರ್ಧನ್ ಜೊತೆಗೆ ‘ಪೊಲೀಸ್ ಮತ್ತು ದಾದ’, ‘ಕದನ’, ‘ಸಿಬಿಐ ವಿಜಿ’, ‘ಬಹದ್ಧೂರ್ ಹೆಣ್ಣು’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗಲೂ ಅವರ ಕೈಯಲ್ಲಿ ಮೂರು ಸಿನಿಮಾಗಳಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಂಗಳೂರಿಗರ ಬಹುವರ್ಷಗಳ ಬೇಡಿಕೆ ಶೀಘ್ರ ಈಡೇರಿಕೆ: ಸುತ್ತಿ ಬಳಸಿ ಓಡಾಟಕ್ಕೆ ಬೀಳಲಿದೆ ಬ್ರೇಕ್ – Kannada News | Mangaluru–Tannirubavi Bridge Work Near Completion, Likely to Open in August or September: Dinesh Gundu Rao

ಮಂಗಳೂರು-ತಣ್ಣೀರುಬಾವಿ ಬ್ರಿಡ್ಜ್Image Credit source: tv9 kannada

ಮಂಗಳೂರು, ಮೇ 08: ಮಂಗಳೂರು-ತಣ್ಣೀರುಬಾವಿ ಬ್ರಿಡ್ಜ್​​ (Mangaluru Tannirbhavi Bridge) ಮಂಗಳೂರಿನ ಬಹುವರ್ಷದ ಬೇಡಿಕೆ. ಸದ್ಯ ಬ್ರಿಡ್ಜ್ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದು, ಆಗಸ್ಟ್ ಅಥವಾ ಸೆಪ್ಟೆಂಬರ್​​ನಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ತಿಳಿಸಿದ್ದಾರೆ. ಆ ಮೂಲಕ ತಣ್ಣೀರುಬಾವಿ ಬೀಚ್‌ಗೆ ತೆರಳಲು ದಶಕಗಳಿಂದ ಇದ್ದ ಸಂಚಾರ ಸಂಕಷ್ಟಕ್ಕೆ ಶೀಘ್ರದಲ್ಲೇ ಪರಿಹಾರ ಸಿಗಲಿದೆ.

  • 64 ಕೋಟಿ ರೂ ವೆಚ್ಚದಲ್ಲಿ 285 ಮೀಟರ್ ಉದ್ದದ ಸೇತುವೆ ನಿರ್ಮಾಣ
  • 30-35 ನಿಮಿಷ ಬೇಕಾಗುವ ಪ್ರಯಾಣದ ಸಮಯ ಈ ಸೇತುವೆ ಮೂಲಕ ಕೇವಲ 10 ನಿಮಿಷಕ್ಕೆ ಕಡಿತ
  • ಆಗಸ್ಟ್ ಅಥವಾ ಸೆಪ್ಟೆಂಬರ್​​ನಲ್ಲಿ ಲೋಕಾರ್ಪಣೆ ಸಾಧ್ಯತೆ

ತಣ್ಣೀರುಬಾವಿ ಬೀಚ್‌ ಮಂಗಳೂರು ಸಿಟಿಗೆ ಹೊಂದಿಕೊಂಡಿರುವ ಬೀಚ್. ಮಂಗಳೂರು ಸಿಟಿಯ ಒಂದು ತುದಿಯಿಂದ ಸುಮಾರು ಒಂದೂವರೆ ಕಿ.ಮೀ ದೂರದಲ್ಲಿರುವ ಈ ಬೀಚ್​​ಗೆ ವಾಹನದಲ್ಲಿ ಹೋಗಬೇಕು ಅಂದರೆ 15 ರಿಂದ 20 ಕಿ.ಮೀ ಸುತ್ತಿಕೊಂಡು ಹೋಗಬೇಕಿತ್ತು. ಆದರೆ ಫೆರಿಯಲ್ಲಿ ಹೋಗೋದಾದರೆ ಕೆಲವೇ ಮೀಟರ್ ಕ್ರಮಿಸಿದರೆ ಸಾಕಿತ್ತು.

ಇದನ್ನೂ ಓದಿ: ಸಮುದ್ರ ಇದ್ರೂ ಮಂಗಳೂರಿನಲ್ಲಿ ನೀರಿಗೆ ಬರ: ವಾಹನಗಳನ್ನ ತೊಳೆಯದಂತೆ ಸೂಚನೆ

ಇನ್ನು ತಣ್ಣೀರುಬಾವಿ ಸುತ್ತಾಮುತ್ತಾ 4 ಸಾವಿರಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದು, ಅವರು ಮಂಗಳೂರಿಗೆ ಬರಬೇಕು ಅಂದರೆ ಫೆರಿಯಲ್ಲಿ ಬರಬೇಕಿತ್ತು. ರಸ್ತೆ ಮೂಲಕ ಬರಬೇಕು ಅಂದರೆ ಮತ್ತೆದೇ 15 ಕಿ.ಮೀ ಸುತ್ತಾಟ. ಆದ್ದರಿಂದ ಮೆಡಿಕಲ್ ಎಮರ್ಜೆನ್ಸಿ ಸೇರಿದಂತೆ ವಿವಿಧ ರೀತಿಯಲ್ಲಿ ಜನರಿಗೆ ತೊಂದರೆ ಆಗುತ್ತಿತ್ತು. ಆದರೆ ಇದೀಗ ಫಲ್ಗುಣಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡುತ್ತಿರುವುದರಿಂದ ಇದಕ್ಕೆ ಮುಕ್ತಿ ಸಿಗಲಿದೆ.

ವೆಚ್ಚ ಮತ್ತು ವಿನ್ಯಾಸ

64 ಕೋಟಿ ರೂ ವೆಚ್ಚದಲ್ಲಿ ಒಟ್ಟು 285 ಮೀಟರ್ ಸೇತುವೆ ಇದಾಗಿದ್ದು, 100 ಮೀಟರ್ ಬೋ-ಸ್ಟ್ರಿಂಗ್ ಸೇತುವೆ ನಿರ್ಮಾಣ ಮಾಡುಲಾಗುತ್ತಿದೆ. ಆ ಮೂಲಕ 30 ರಿಂದ 35 ನಿಮಿಷ ಸಾಗುವ ದಾರಿಯನ್ನು 8 ರಿಂದ 10 ನಿಮಿಷಕ್ಕೆ ಇಳಿಸುವಲ್ಲಿ ಈ ಸೇತುವೆ ಉಪಯೋಗಕಾರಿಯಾಗಿದೆ. ಈ ಸೇತುವೆ ಎಲ್ಲಾ ಮಾದರಿಯ ವಾಹನಗಳು ಸಂಚಾರ ಮಾಡುವ ಸಾಮರ್ಥ್ಯ ಹೊಂದಿದೆ. ಈ ಬ್ರಿಡ್ಜ್ ಆಗಸ್ಟ್ ಅಥವಾ ಸೆಪ್ಟೆಂಬರ್​ನಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ದೇಶದಲ್ಲೇ ಮೊದಲ ಬಾರಿಗೆ ‘ಧಾರ್ಮಿಕ ತ್ಯಾಜ್ಯ ವಿಲೇವಾರಿ’ ಅಭಿಯಾನಕ್ಕೆ ಸಾಕ್ಷಿಯಾದ ಮಂಗಳೂರು

ಇನ್ನೇನು ಮಳೆಗಾಲ ಆರಂಭವಾಗುತ್ತಿದೆ. ಹೀಗಾಗಿ ಕಾಮಗಾರಿ ಅದೆಷ್ಟು ವೇಗವಾಗಿ ಸಾಗುತ್ತದೆ ಎನ್ನುವುದು ಮುಂದಿರುವ ಪ್ರಶ್ನೆ. ಇನ್ನು ಸಚಿವರು ಲೋಕಾರ್ಪಣೆ ತಿಂಗಳು ಫಿಕ್ಸ್ ಮಾಡಿ ಹೋಗಿದ್ದಾರೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಅದಕ್ಕೆ ಬದ್ಧರಾಗಿರುತ್ತಾರಾ ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಭಾರತದ ಜಿಡಿಪಿ ಲೆಕ್ಕಾಚಾರದಲ್ಲಿ ಬದಲಾವಣೆ: ಮೂಲ ವರ್ಷ 2022-23ಕ್ಕೆ ವರ್ಗಾವಣೆ – ಇದರ ಅರ್ಥ ಮತ್ತು ಪರಿಣಾಮಗಳೇನು? – Kannada News | India’s GDP Base Year Shift from 2011 12 to 2022 23: Reasons, Impacts & New Calculations

ನವದೆಹಲಿ, ಮೆ 8: ಭಾರತ ಸರ್ಕಾರವು ದೇಶದ ಆರ್ಥಿಕ ಪ್ರಗತಿಯನ್ನು ಅಳೆಯುವ ಜಿಡಿಪಿ (GDP- ಒಟ್ಟು ದೇಶೀಯ ಉತ್ಪನ್ನ) ಲೆಕ್ಕಾಚಾರದ ಮೂಲ ವರ್ಷವನ್ನು (Base Year) 2011-12ರಿಂದ 2022-23ಕ್ಕೆ ಬದಲಾಯಿಸಿದೆ. ಈ ಬದಲಾವಣೆಯು ದೇಶದ ಆರ್ಥಿಕತೆಯ ನೈಜ ಚಿತ್ರಣವನ್ನು ನೀಡಲು ಸಹಕಾರಿಯಾಗಲಿದೆ. ಜಿಡಿಪಿ ಲೆಕ್ಕಾಚಾರ ಮಾಡುವಾಗ ಬೆಲೆ ಏರಿಕೆಯ (ಹಣದುಬ್ಬರ) ಪ್ರಭಾವವನ್ನು ಹೊರತುಪಡಿಸಿ, ಕೇವಲ ಉತ್ಪಾದನೆಯಲ್ಲಿನ ನೈಜ ಬೆಳವಣಿಗೆಯನ್ನು ಅಳೆಯಲು ಒಂದು ನಿರ್ದಿಷ್ಟ ವರ್ಷದ ಬೆಲೆಗಳನ್ನು ಆಧಾರವಾಗಿಟ್ಟುಕೊಳ್ಳಲಾಗುತ್ತದೆ. ಇದನ್ನೇ ‘ಮೂಲ ವರ್ಷ’ ಎನ್ನಲಾಗುತ್ತದೆ. ಇದುವರೆಗೆ 2011-12ರ ಬೆಲೆಗಳನ್ನು ಆಧರಿಸಿ ಜಿಡಿಪಿ ಲೆಕ್ಕ ಹಾಕಲಾಗುತ್ತಿತ್ತು. ಆದರೆ, ಪರಿಸ್ಥಿತಿ ಈಗ ಬದಲಾಗಿರುವ ಕಾರಣ ಜಿಡಿಪಿ ಲೆಕ್ಕಾಚಾರದ ಕ್ರಮಗಳಲ್ಲೂ ಬದಲಾವಣೆ ಮಾಡಬೇಕಾಗಿದೆ.

ಮೂಲ ವರ್ಷ ಬದಲಾವಣೆ ಯಾಕೆ?

ಕಳೆದ ಹತ್ತು ವರ್ಷಗಳಲ್ಲಿ ಭಾರತದ ಆರ್ಥಿಕ ರಚನೆ ಬದಲಾಗಿದೆ. ಡಿಜಿಟಲ್ ಸೇವೆಗಳು, ಗಿಗ್ ಎಕಾನಮಿ (Gig Economy) ಮತ್ತು ನವೋದ್ಯಮಗಳ ಪಾಲು ಹೆಚ್ಚಾಗಿದೆ. ಹಳೆಯ ಮೂಲ ವರ್ಷವು ಈ ಹೊಸ ಬದಲಾವಣೆಗಳನ್ನು ಸರಿಯಾಗಿ ಗುರುತಿಸುತ್ತಿರಲಿಲ್ಲ.

ಇದನ್ನೂ ಓದಿ: ಬೈನಾನ್ಸ್‌ನಿಂದ ಹೊಸ ‘ವಿತ್‌ಡ್ರಾ ಪ್ರೊಟೆಕ್ಷನ್’: ಬಳಕೆದಾರರ ಕ್ರಿಪ್ಟೋ ಆಸ್ತಿಗಳಿಗೆ ಈಗ ಹೆಚ್ಚುವರಿ ಭದ್ರತೆ

2019 ರಿಂದ 2021ರ ಅವಧಿಯು ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಆರ್ಥಿಕ ಏರಿಳಿತ ಕಂಡಿತ್ತು. 2022-23 ವರ್ಷವು ಒಂದು ‘ಸಾಮಾನ್ಯ’ (Normal) ವರ್ಷವೆಂದು ಪರಿಗಣಿಸಲ್ಪಟ್ಟಿದ್ದರಿಂದ ಅದನ್ನು ಮೂಲ ವರ್ಷವಾಗಿ ಆಯ್ಕೆ ಮಾಡಲಾಗಿದೆ.

ಈಗ ಜಿಎಸ್ಟಿ (GST), ಇ-ವಾಹನ್ ಪೋರ್ಟಲ್ ಮತ್ತು ಹೊಸ ಕಾರ್ಮಿಕ ಸಮೀಕ್ಷೆಗಳಂತಹ ಆಧುನಿಕ ದತ್ತಾಂಶಗಳನ್ನು ಲೆಕ್ಕಾಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ.

ಮೂಲ ವರ್ಷ ಬದಲಾವಣೆಯಿಂದ ಪರಿಣಾಮಗಳೇನು?

ಹೊಸ ಮೂಲ ವರ್ಷದ ಅನ್ವಯ 2025-26ರ ಹಣಕಾಸು ವರ್ಷದ ಅಂದಾಜು ಜಿಡಿಪಿ ಬೆಳವಣಿಗೆ ದರವು ಶೇ. 7.4 ರಿಂದ ಶೇ. 7.6ಕ್ಕೆ ಏರಿಕೆ ಆಗಬಹುದು. ಕೃಷಿ ಮತ್ತು ಕೈಗಾರಿಕಾ ವಲಯದ ಪಾಲು ಜಿಡಿಪಿಯಲ್ಲಿ ಸ್ವಲ್ಪ ಮಟ್ಟಿಗೆ ಹೆಚ್ಚಾಗಿದ್ದು, ಸೇವಾ ವಲಯದ ಪಾಲಿನಲ್ಲಿ ಅಲ್ಪ ಇಳಿಕೆ ಕಂಡುಬಂದಿದೆ.

ಜಿಡಿಪಿ ಲೆಕ್ಕಾಚಾರವು ಹೆಚ್ಚು ಪಾರದರ್ಶಕ ಮತ್ತು ನಿಖರವಾಗಿರುವುದರಿಂದ ಅಂತರಾಷ್ಟ್ರೀಯ ಹೂಡಿಕೆದಾರರಿಗೆ ಭಾರತದ ಆರ್ಥಿಕತೆಯ ಮೇಲೆ ಹೆಚ್ಚಿನ ವಿಶ್ವಾಸ ಮೂಡಲಿದೆ.

ಇದನ್ನೂ ಓದಿ: ಆಯುಷ್ಮಾನ್ ಭಾರತ್ ಹೆಲ್ತ್ ಇನ್ಷೂರೆನ್ಸ್; ಬೆಂಗಳೂರಿನಲ್ಲಿ ಎಐ ಹ್ಯಾಕಥಾನ್ ಶೋಕೇಸ್

ಜಿಡಿಪಿ ಲೆಕ್ಕಾಚಾರದಲ್ಲಿ ಕೆಲ ಪ್ರಮುಖ ಬದಲಾವಣೆಗಳಿವು, ಗಮನಿಸಿ

  1. ಉತ್ಪಾದನಾ ವಲಯದಲ್ಲಿ ‘ಡಬಲ್ ಡಿಫ್ಲೇಶನ್’ (Double Deflation) ಎಂಬ ಹೊಸ ತಂತ್ರಜ್ಞಾನ ಬಳಸಿ ಬೆಲೆ ಏರಿಕೆಯನ್ನು ಹೆಚ್ಚು ನಿಖರವಾಗಿ ಸರಿಹೊಂದಿಸಲಾಗುತ್ತಿದೆ.
  2. ಅನೌಪಚಾರಿಕ ವಲಯದ (Unorganised Sector) ಲೆಕ್ಕಾಚಾರಕ್ಕಾಗಿ ಹೊಸ ವಾರ್ಷಿಕ ಸಮೀಕ್ಷೆಗಳನ್ನು (ASUSE) ಬಳಸಲಾಗುತ್ತಿದೆ.

ಈ ಬದಲಾವಣೆಯು ಭಾರತವನ್ನು ವಿಶ್ವದ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿ ಮತ್ತಷ್ಟು ಬಲವಾಗಿ ಬಿಂಬಿಸಲು ಸಹಾಯ ಮಾಡಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಾಳೆ ಸುವೇಂದು ಅಧಿಕಾರಿ ಪ್ರಮಾಣವಚನ ಸ್ವೀಕಾರ; ಮಮತಾ ಬ್ಯಾನರ್ಜಿ ಬರುತ್ತಾರಾ? – Kannada News | Will Mamata Banerjee Attend West Bengal BJP CM Suvendu Adhikaris oath taking ceremony

ಕೊಲ್ಕತ್ತಾ, ಮೇ 8: ಇಂದು ಕೊಲ್ಕತ್ತಾದಲ್ಲಿ ಬಿಜೆಪಿ ಕೇಂದ್ರ ವೀಕ್ಷಕ ಅಮಿತ್ ಶಾ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಸುವೇಂದು ಅಧಿಕಾರಿ (Suvendu Adhikari) ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಆಯ್ಕೆಯಾಗಿದ್ದಾರೆ. ನಾಳೆ ನಡೆಯಲಿರುವ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಇತರ ಕೇಂದ್ರ ಸಚಿವರು ಉಪಸ್ಥಿತರಿರುತ್ತಾರೆ. ಹಾಗೇ, ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ನಾಳೆಯ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಈ ಅದ್ದೂರಿ ಕಾರ್ಯಕ್ರಮಕ್ಕೆ ಸ್ಥಳದಲ್ಲಿ ಸಿದ್ಧತೆಗಳು ನಡೆಯುತ್ತಿವೆ.

ಪಶ್ಚಿಮ ಬಂಗಾಳ ರಾಜ್ಯಪಾಲ ಆರ್.ಎನ್. ರವಿ ಅವರು ಮೇ 7ರಂದು ಪಶ್ಚಿಮ ಬಂಗಾಳ ವಿಧಾನಸಭೆಯನ್ನು ಅಧಿಕೃತವಾಗಿ ವಿಸರ್ಜಿಸಿದರು. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರದ ನಿರ್ಗಮಿತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ರಾಜ್ಯಪಾಲರೇ ಸಂಪುಟವನ್ನು ವಿಸರ್ಜಿಸಿದರು. ಈಗ ಮಮತಾ ಬ್ಯಾನರ್ಜಿ ನಾಳೆ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸುತ್ತಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ಇದನ್ನೂ ಓದಿ: Suvendu Adhikari: ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಆಯ್ಕೆ; ನಾಳೆಯೇ ಪ್ರಮಾಣವಚನ

ಹೊಸ ಮುಖ್ಯಮಂತ್ರಿಯ ಪ್ರಮಾಣವಚನ ಸಮಾರಂಭದಲ್ಲಿ ನಿರ್ಗಮಿಸುವ ಮುಖ್ಯಮಂತ್ರಿ ಭಾಗವಹಿಸಬೇಕೆಂದು ಯಾವುದೇ ಸ್ಥಿರ ಸಾಂವಿಧಾನಿಕ ನಿಯಮ ಅಥವಾ ಕಠಿಣ ಶಾಸನಬದ್ಧ ಕಾನೂನು ಇಲ್ಲದಿದ್ದರೂ ಸಾಮಾನ್ಯವಾಗಿ ಮಾಜಿ ಮುಖ್ಯಮಂತ್ರಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಂಪ್ರದಾಯವಿದೆ. ನಿರ್ಗಮಿಸುವ ಮುಖ್ಯಮಂತ್ರಿ ಗಣ್ಯರನ್ನು ಸ್ವಾಗತಿಸಲು ಮತ್ತು ಹೊಸ ಸಿಎಂ ಅವರನ್ನು ಅಭಿನಂದಿಸಲು ಹಾಜರಿರುವುದು ವಾಡಿಕೆಯಾಗಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದ ಸಂಪುಟವನ್ನು ವಿಸರ್ಜಿಸಿದ ರಾಜ್ಯಪಾಲ; ಮಮತಾ ಬ್ಯಾನರ್ಜಿ ಈಗ ಮಾಜಿ ಸಿಎಂ

ಆದರೂ ರಾಜಕೀಯ ಭಿನ್ನಾಭಿಪ್ರಾಯ, ಉದ್ವಿಗ್ನ ಸಂಬಂಧಗಳು, ಆರೋಗ್ಯ ಕಾರಣಗಳು ಅಥವಾ ವೇಳಾಪಟ್ಟಿ ಸಮಸ್ಯೆಗಳಿಂದಾಗಿ ನಿರ್ಗಮಿತ ಮುಖ್ಯಮಂತ್ರಿಗಳು ನೂತನ ಮುಖ್ಯಮಂತ್ರಿಯ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ತಪ್ಪಿಸಿಕೊಂಡ ಹಲವಾರು ಉದಾಹರಣೆಗಳಿವೆ. ಅವರ ಅನುಪಸ್ಥಿತಿಯನ್ನು ಶಿಷ್ಟಾಚಾರದ ಉಲ್ಲಂಘನೆ ಎಂದು ಪರಿಗಣಿಸಲಾಗುವುದಿಲ್ಲ. ಹೀಗಾಗಿ, ನಾಳೆಯ ಕಾರ್ಯಕ್ರಮಕ್ಕೆ ಮಮತಾ ಬ್ಯಾನರ್ಜಿ ಆಗಮಿಸುವ ಸಾಧ್ಯತೆ ಇಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

DC vs KKR IPL 2026 Live Score: ಟಾಸ್ ಗೆದ್ದ ಕೆಕೆಆರ್ ಬೌಲಿಂಗ್ ಆಯ್ಕೆ – Kannada News | Delhi Capitals vs Kolkata Knight Riders IPL 2026 Live Cricket Score DC vs KKR Match on 8th May latest news in Kannada

2026 ರ ಐಪಿಎಲ್ ಟೂರ್ನಿಯ 51 ನೇ ಪಂದ್ಯ ದೆಹಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯುತ್ತಿದೆ. ವಾಸ್ತವವಾಗಿ, ಈ ಪಂದ್ಯ ಎರಡೂ ತಂಡಗಳಿಗೆ ಮಾಡು ಇಲ್ಲವೇ ಮಡಿ ಪರಿಸ್ಥಿತಿಯಾಗಿದೆ. ಪ್ಲೇಆಫ್ ರೇಸ್‌ನಲ್ಲಿ ಉಳಿಯಲು ಎರಡೂ ತಂಡಗಳು ಯಾವುದೇ ಬೆಲೆ ತೆತ್ತಾದರೂ ಈ ಪಂದ್ಯವನ್ನು ಗೆಲ್ಲಲೇಬೇಕು. ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದರೆ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಎಂಟನೇ ಸ್ಥಾನದಲ್ಲಿದೆ.

Source link

ಹಂಟಾವೈರಸ್ ಎಂದರೇನು? ಇದು ಕೊರೊನಾದ ರೀತಿ ಹರಡುತ್ತದೆಯೇ? ಈ ಬಗ್ಗೆ ವೈದ್ಯರ ಅಭಿಪ್ರಾಯವೇನು? – Kannada News | Can Hantavirus Cause a Pandemic? Doctors Weigh In on Outbreak Risk

ಅಟ್ಲಾಂಟಿಕ್ ಸಮುದ್ರದಲ್ಲಿ ಸಂಚರಿಸುತ್ತಿದ್ದ ಡಚ್ ಎಕ್ಸ್‌ಪಿಡಿಷನ್ ಕ್ರೂಸ್ ಹಡಗಿನಲ್ಲಿ ಹಂಟಾವೈರಸ್ ಸೋಂಕು ಪತ್ತೆಯಾಗಿರುವುದು ಜಗತ್ತಿನ ಆರೋಗ್ಯ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಹಡಗಿನಲ್ಲಿ ಒಟ್ಟು 149 ಮಂದಿ ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದು, ಇವರಲ್ಲಿ ಇಬ್ಬರು ಭಾರತೀಯ ಸಿಬ್ಬಂದಿಯೂ ಸೇರಿದ್ದಾರೆ. ಈಗಾಗಲೇ ಮೂವರು ಸಾವನ್ನಪ್ಪಿದ್ದು, ಹಲವರು ಸೋಂಕಿಗೆ ಒಳಗಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತಿಳಿಸಿದೆ. ಹಾಗಾದರೆ ಹಂಟಾವೈರಸ್ (Hantavirus) ಎಂದರೇನು, ಇದು ಕೋವಿಡ್ (COVID-19) ರೀತಿಯಲ್ಲಿಯೇ ಹರಡುತ್ತದೆಯೇ, ಈ ಬಗ್ಗೆ ವೈದ್ಯರು ಏನು ಹೇಳುತ್ತಾರೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹಂಟಾವೈರಸ್ ಎಂದರೇನು?

ಹಂಟಾವೈರಸ್ ಅಥವಾ ಹಂಟಾವೈರಸ್ ಪಲ್ಮನರಿ ಸಿಂಡ್ರೋಮ್‌ ಹೊಸ ವೈರಸ್ ಅಲ್ಲ. ಸಾಮಾನ್ಯವಾಗಿ ಇಲಿ, ಹೆಗ್ಗಣ ಮತ್ತು ಪೋಲಿಕೋಲಗಳಂತಹ ಕೃಂತಕಗಳ (rodents) ಮೂಲಕ ಮನುಷ್ಯರಿಗೆ ಹರಡುವ ಗಂಭೀರವಾದ ಸೋಂಕಾಗಿದೆ. ಇದು ಸೋಂಕಿತ ಇಲಿಗಳ ಮೂತ್ರ, ಲಾಲಾರಸ, ಉಗುಳು ಅಥವಾ ಮಲದ ಮೂಲಕ ಮಣ್ಣಿನೊಂದಿಗೆ ಬೆರೆತು, ಒಣಗಿದ ನಂತರ ಗಾಳಿಯಲ್ಲಿ ಹರಡಿದಾಗ ಅದನ್ನು ಉಸಿರಾಡುವುದರಿಂದ ಸೋಂಕು ತಗಲುತ್ತದೆ. ಜೊತೆಗೆ ಸೋಂಕಿತ ಇಲಿ ಕಚ್ಚುವುದರಿಂದ ಅಥವಾ ಅವುಗಳ ಮಲ- ಮೂತ್ರ ನೇರವಾಗಿ ಗಾಯದ ಮೇಲೆ ಬಿದ್ದಾಗ ಸೋಂಕು ನೇರವಾಗಿ ಹರಡಬಹುದು. ಈ ಪ್ರಕರಣದಲ್ಲಿ ಪತ್ತೆಯಾಗಿರುವುದು “ಆಂಡೀಸ್ ಸ್ಟ್ರೇನ್” ಎನ್ನುವ ವಿಶೇಷ ಹಂಟಾವೈರಸ್ ರೂಪವಾಗಿದೆ. ಇದು ಮುಖ್ಯವಾಗಿ ಅರ್ಜೆಂಟಿನಾ ಮತ್ತು ಚಿಲಿ ಭಾಗಗಳಲ್ಲಿ ಕಂಡುಬರುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಈ ಸೋಂಕಿನ ಮೂಲ ದಕ್ಷಿಣ ಅರ್ಜೆಂಟಿನಾದ ಪಟಾಗೋನಿಯಾ ಪ್ರದೇಶವಾಗಿರಬಹುದು ಎಂಬ ಅನುಮಾನ ಇದೆ. ಹಡಗಿಗೆ ಏರುವ ಮೊದಲು ಕೆಲವು ಪ್ರಯಾಣಿಕರು ಪಕ್ಷಿ ವೀಕ್ಷಣಾ ಪ್ರವಾಸದಲ್ಲಿ ಭಾಗವಹಿಸಿದ್ದರು. ಆ ಸಮಯದಲ್ಲಿ ಸೋಂಕಿತ ಇಲಿ ಸಂಪರ್ಕದಿಂದ ವೈರಸ್ ಹರಡಿರಬಹುದು ಎಂದು ಶಂಕಿಸಲಾಗಿದೆ.

ಇದು ಕೊರೋನಾ ರೀತಿಯಲ್ಲಿ ಹರಡುತ್ತದೆಯೇ?

ತಜ್ಞರ ಪ್ರಕಾರ, ಹಂಟಾವೈರಸ್ ಸಾಮಾನ್ಯ ಕೊರೋನಾ ವೈರಸ್‌ನಂತೆ ಸುಲಭವಾಗಿ ಗಾಳಿಯ ಮೂಲಕ ಹರಡುವುದಿಲ್ಲ. ಆದರೆ “ಆಂಡೀಸ್” ಪ್ರಭೇದದಲ್ಲಿ ಅತ್ಯಂತ ಹತ್ತಿರದ ಸಂಪರ್ಕದಲ್ಲಿರುವವರ ನಡುವೆ ಮಾನವನಿಂದ ಮಾನವನಿಗೆ ಹರಡುವ ಸಾಧ್ಯತೆ ಇದೆ. ಕುಟುಂಬ ಸದಸ್ಯರು, ಜೊತೆಯಾಗಿ ಇರುವವರು ಅಥವಾ ವೈದ್ಯಕೀಯ ಆರೈಕೆ ನೀಡುವವರಲ್ಲಿ ಸೋಂಕು ಹರಡಿದ ಉದಾಹರಣೆಗಳು ಹಿಂದೆಯೂ ದಾಖಲಾಗಿವೆ.

ಯಾವ ಲಕ್ಷಣಗಳು ಕಾಣಿಸುತ್ತವೆ?

ಜ್ವರ, ದೇಹದ ನೋವು, ದೌರ್ಬಲ್ಯ, ಉಸಿರಾಟದ ತೊಂದರೆ, ಒಣ ಕೆಮ್ಮು ಮತ್ತು ಶ್ವಾಸಕೋಶ ಸಮಸ್ಯೆಗಳು ಮುಖ್ಯ ಲಕ್ಷಣಗಳಾಗಿವೆ. ಗಂಭೀರ ಸ್ಥಿತಿಯಲ್ಲಿ “ಹಂಟಾವೈರಸ್ ಪಲ್ಮನರಿ ಸಿಂಡ್ರೋಮ್” ಉಂಟಾಗಿ ಜೀವಕ್ಕೆ ಅಪಾಯ ಉಂಟಾಗಬಹುದು.

ವೈದ್ಯರ ಸಲಹೆ;

ಡಾ. ಟೆಡ್ರೋಸ್ ಅಧಾನೊಮ್ ಅವರ ಪ್ರಕಾರ, ಮುಂದಿನ ಕೆಲವು ವಾರಗಳಲ್ಲಿ ಇನ್ನಷ್ಟು ಈ ಪ್ರಕರಣಗಳು ಕಾಣಿಸಬಹುದು. ಆದರೆ ಆತಂಕಕ್ಕಿಂತ ಎಚ್ಚರಿಕೆ ಮುಖ್ಯ. ಹಡಗಿನಲ್ಲಿ ಈಗ ಕ್ವಾರಂಟೈನ್, ಸ್ಕ್ರೀನಿಂಗ್ ಮತ್ತು ಆರೋಗ್ಯ ಮೇಲ್ವಿಚಾರಣೆ ಮುಂದುವರಿದಿದೆ ಎಂದಿದ್ದಾರೆ. ಆರೋಗ್ಯ ತಜ್ಞರ ಸಲಹೆ ಏನೆಂದರೆ, ಇಲಿ ಸಂಪರ್ಕ ತಪ್ಪಿಸುವುದು, ಸ್ವಚ್ಛತೆ ಕಾಪಾಡುವುದು ಮತ್ತು ಜ್ವರ- ಉಸಿರಾಟ ಸಮಸ್ಯೆಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶೃಂಗೇರಿ ಕ್ಷೇತ್ರದ ಅಂಚೆ‌ ಮತ ಎಣಿಕೆ ವಿವಾದ: ಜೋರಾದ ಅಣೆ ಪ್ರಮಾಣ ರಾಜಕೀಯ – Kannada News | Sringeri Assembly Poll postal vote Row: BJP Leaders Promise Infront of God over Fixing Allegations

ಚಿಕ್ಕಮಗಳೂರು, (ಮೇ 08): ಹೈಕೋರ್ಟ್ ಆದೇಶದಂತೆ 2023ರ ಚುನಾವಣೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ (sringeri assembly constituency) ಅಂಚೆ ಮತಗಳ (ballot paper) ಮರು‌ ಎಣಿಕೆ ಮಾಡಲಾಗಿದ್ದು, ಈ ವೇಳೆ ಬಿಜೆಪಿಯ ಜೀವರಾಜ್ ಗೆಲುವು ಸಾಧಿಸಿದ್ದಾರೆ. 2023ರ ಸಾರ್ವತ್ರಿಕ ಚುನಾವಣೆ ಫಲಿತಾಂಶದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ 201 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.ಆದ್ರೆ, ಮರು ಮತ ಎಣಿಕೆಯಲ್ಲಿ ಕಾಂಗ್ರೆಸ್​ಗೆ ಸೋಲಾಗಿದ್ದು, ಬಿಜೆಪಿ ಗೆದ್ದು ಬೀಗಿದೆ. ಇದರೊಂದಿಗೆ ಮೂರು ವರ್ಷಗಳ ಬಳಿಕ ಡಿ.ಎನ್.ಜೀವರಾಜ್ ಶಾಸಕರಾಗಿ ವಿಧಾನಸಭೆ ಪ್ರವೇಶ ಮಾಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಕ್ಷೇತ್ರದಲ್ಲಿ ಆಣೆ-ಪ್ರಮಾಣ ರಾಜಕೀಯ ಶುರುವಾಗಿದೆ. ಹೌದು..2023ರಲ್ಲಿ ಮತ ಏಣಿಕೆ ಕೇಂದ್ರದ ಬಿಜೆಪಿ ಎಜೆಂಟ್ ಅಗಿದ್ದ ಇಬ್ಬರ ಮೇಲೆ ಫಿಕ್ಸ್ ಆರೋಪ ಕೇಳಿಬಂದಿದ್ದು, ಇದೀಗ ಅವರಿಬ್ಬರು ಅಣೆ ಪ್ರಮಾಣ ಮಾಡಿದ್ದಾರೆ.

  • ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಹಿನ್ನೆಲೆ
  • ಬಿಜೆಪಿ ಚುನಾವಣಾ ಏಜೆಂಟ್ ಗಳಿಂದ ದೇವಾಲಯದಲ್ಲಿ ಆಣೆಪ್ರಮಾಣ
  • ನಾವು ಯಾವುದೇ ತಪ್ಪು ಮಾಡಿಲ್ಲ ಎಂದು ಆಣೆ ಪ್ರಮಾಣ
  • ಶೃಂಗೇರಿ ಕ್ಷೇತ್ರದ ಮರು ಮತ ಎಣಿಕೆ ನಂತರದಲ್ಲಿ ನಡೆದ ಅಪಪ್ರಚಾರ ವಿರುದ್ಧ ಚುನಾವಣಾ ಏಜೆಂಟ್ ರಿಂದ ಆಣೆ ಪ್ರಮಾಣ
  • ಸತೀಶ್ ಅದ್ದಡ ಹಾಗೂ ರಾಮಸ್ವಾಮಿ ಶೆಟ್ಟಿಗದ್ದೆ ರಿಂದ ಆಣೆ ಪ್ರಮಾಣ

ಜೀವರಾಜ್ ಗೆಲ್ಲುತ್ತಿದ್ದಂತೆ ಶೃಂಗೇರಿ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಪಕ್ಷ ವಿರೋಧಿ ಕೆಲಸ ಮಾಡಿದವರಿಗೆ ಯಾವಾಗ ಗೇಟ್ ಪಾಸ್ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡುತ್ತಿದ್ದರು. ರಾಮಸ್ವಾಮಿ ಹಾಗೂ ಸತೀಶ್ ಕಾಂಗ್ರೆಸ್ ಜೊತೆ ಕೈ ಸೇರಿಸಿ ಬಿಜೆಪಿ ಸೋಲಿಗೆ ಕಾರಣರಾಗಿದ್ದರು ಎಂದು ಆರೋಪಿಸಿದ್ದರು. ಇದರ ಬೆನ್ನಲ್ಲೇ 2023ರಲ್ಲಿ ಬಿಜೆಪಿ ಪಕ್ಷದಿಂದ‌ ಚುನಾವಣಾ ಮತ ಎಣಿಕೆ ಕೇಂದ್ರದ ಏಜೆಂಟ್ ಆಗಿದ್ದ ರಾಮಸ್ವಾಮಿ ಶೆಟ್ಟಿಗದ್ದೆ ಹಾಗೂ ಸತೀಶ್‌ ಅದ್ದಡ ಕೊಪ್ಪ ತಾಲೂಕಿನ ವೀರಭದ್ರಸ್ವಾಮಿ ಹಾಗೂ ಗಬ್ಬಾನೆ ಬೂತರಾಯನ ದೇಗುಲದಲ್ಲಿ ಪ್ರಮಾಣ ಮಾಡಿದ್ದು 2023ರ ಮತ ಎಣಿಕೆ ಸರಳ ಹಾಗೂ ಪಾರದರ್ಶಕವಾಗಿ ನಡೆದಿದೆ ಎಂದು ನಮಗೆ ಅನ್ನಿಸಿದೆ ಎಂದು ದೇವರ ಮುಂದೆ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ನೋಡಿ: ಎರಡುವರೆ ವರ್ಷ ಬಳಿಕ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ ಜೀವರಾಜ್

ಅಂದು ರಾಮಸ್ವಾಮಿ ಶೆಟ್ಟಿಗದ್ದೆ ಇವಿಎಂ ಕೌಂಟ್ ನೋಡಿಕೊಳ್ಳುತ್ತಿದ್ದರೆ, ಸತೀಶ್ ಅದ್ದಡ ಅಂಚೆ ಮತಗಳ ಎಣಿಕೆ ನೋಡಿಕೊಳ್ಳುತ್ತಿದ್ದರು. ಇಂದು ಇಬ್ಬರು ದೇವಸ್ಥಾನದಲ್ಲಿ ಮತ ಎಣಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಾವು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಮತ ಎಣಿಕೆ ಪಾರದರ್ಶಕವಾಗಿತ್ತು. ನಮ್ಮ ವಿರುದ್ಧ ಅಪಪ್ರಚಾರ ಮಾಡುವವರಿಗೆ ದೇವರೇ ನೋಡಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.

ಏನಂತ ಆಣೆ ಪ್ರಮಾಣ?

ಬಹಳ ಸರಳ ಹಾಗೂ ಪಾರದರ್ಶಕ ವಾಗಿ ನಡೆದಿದೆ ಅನ್ನಿಸಿತು.ಘಟನೆಗಳ ನಂತರ ಮೇ 2ರಂದು ಮತ್ತೆ ಕೌಟಿಂಗ್ ನಡೆಯಿತು. ಆಗ ಶಾಸಕ ಸ್ಥಾನ ಬದಲಾಯಿತು.ಒಂದಷ್ಟು ಜನ ಸೇರಿ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಅವರ ಬಳಿ ಹಣ ತೆಗೆದುಕೊಂಡು ಅಲ್ಲಿ ಲ್ಯಾಪ್ಸ್ ಅಗಿದ್ದ ಓಟ್ ಗಳನ್ನ ಕಾಂಗ್ರೆಸ್ ಅಭ್ಯರ್ಥಿ ಗೆ ಹಾಕಲು ನಾನು ಸಹ ಭಾಗಿದಾರ ಅನ್ನೋ ರೀತಿ ಎಲ್ಲ ಮಾತನಾಡುತ್ತಿದ್ದಾರೆ. ಅದ್ರೆ ನನಗೆ ವಿಶ್ವಾಸ ಇದೆ ನಂಬಿಕೆ ನಾನು ಪಕ್ಷದಲ್ಲಿ 1993ರಿಂದ ಕೆಲಸ ಮಾಡಿಕೊಂಡು ಬಂದೋನು. ಇದುವರೆಗೆ ಪಕ್ಷ ದ್ರೋಹ, ವಿಶ್ಚಾಸ ದ್ರೋಹ, ಹಣಕ್ಕಾಗಿ ಕೆಲ್ಸ ಎಲ್ಲಿಯೂ ಮಾಡಿಲ್ಲ. ಅವತ್ತು ಸಹ ಸರಿಯಾಗಿಯೇ ಮಾಡಿದ್ದೀನಿ. ಯಾವುದೇ ಮೋಸನೂ ಮಾಡಿಲ್ಲ. ನಡೆದಂತಹ ಕೌಟಿಂಗ್ ಸಹ ಎಲ್ಲವೂ ಸರಿಯಾಗಿತ್ತು.ನನಗೆ ಹೆದರಿಕೆ ಇಲ್ಲ. ನಾನು ಎಲ್ಲಿಯೂ ತಪ್ಪಲಿ ಭಾಗಿಯಾಗಿಲ್ಲ. ಎನೂ ಹೇಳಿದ್ದಾರೆ ಅದನ್ನ ಭೂತರಾಯ ಸ್ವಾಮಿ ಮುಂದೆ ಹೇಳುತ್ತಿದ್ದೇನೆ. ನಾನು ಏನೂ ತಪ್ಪು ಮಾಡಿಲ್ಲ.ನಾನು ಏನಾದರೂ ತಪ್ಪು ಮಾಡಿದ್ರೆ ನಾನು ನಾಶ ಅಗಿ ಹೊಗಬೇಕು. ಸುಖಾಸುಮ್ಮನೆ ನನ್ನ ಚಾರಿತ್ರ್ಯವದೆ ಮಾಡುತ್ತಿರುವವರು ನಾಶ ಅಗಲಿ ಎಂದು ಕೇಳಿಕೊಳ್ಳಲ್ಲ ಭೂತರಾಯ ನೀನು ನೋಡ್ಕ ಅಂತಾ ಕೇಳಿಕೊಳ್ತೇನೆ ಎಂದು ಪ್ರಮಾಣ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 6:52 pm, Fri, 8 May 26

Source link

IPL 2026: ಟಾಪ್ 2 ಸ್ಥಾನಕ್ಕಾಗಿ 6 ತಂಡಗಳ ನಡುವೆ ಪೈಪೋಟಿ; ಯಾವ ತಂಡಕ್ಕೆ ಎಷ್ಟು ಗೆಲುವು ಬೇಕು? – Kannada News | IPL 2026 Top 2 Race: Six Teams Vying for Playoff Advantage and Final Path

ಐಪಿಎಲ್ 2026 (IPL 2026) ರ ಲೀಗ್ ಹಂತವು ಇನ್ನೇನು ಮುಗಿಯುವುದಕ್ಕೆ ಬಂತು. ಈಗಾಗಲೇ ಎಲ್ಲಾ ತಂಡಗಳು ತಲಾ 10 ಪಂದ್ಯಗಳನ್ನಾಡಿದ್ದು, ಅಂಕಪಟ್ಟಿಯಲ್ಲಿ ಟಾಪ್ 4 ಸ್ಥಾನಕ್ಕೇ ತೀವ್ರ ಪೈಪೋಟಿ ಏರ್ಪಟ್ಟಿದೆ. ಇದರ ಜೊತೆಗೆ, ಟಾಪ್-2 ಸ್ಥಾನಕ್ಕಾಗಿನ ಹೋರಾಟವು ಕೂಡ ಇನ್ನಷ್ಟು ಕುತೂಹಲಕಾರಿಯಾಗಿದೆ. ಟಾಪ್-2 ರಲ್ಲಿ ಸ್ಥಾನ ಪಡೆಯುವ ತಂಡಗಳಿಗೆ ಫೈನಲ್ ತಲುಪಲು ಎರಡು ಅವಕಾಶಗಳು ಸಿಗಲಿವೆ. ಅದಕ್ಕಾಗಿಯೇ ಪ್ರತಿ ತಂಡವು ಟಾಪ್ 2ರಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಿವೆ. ಪ್ರಸ್ತುತ, ಆರು ತಂಡಗಳು ಟಾಪ್-2 ಸ್ಥಾನಕ್ಕಾಗಿ ಸ್ಪರ್ಧಿಗಳಾಗಿವೆ. ಆದರೆ ಈ ತಂಡಗಳ ನಡುವಿನ ಪ್ರತಿಯೊಂದು ಪಂದ್ಯವು ನಿರ್ಣಾಯಕವಾಗಿರುತ್ತದೆ.

6 ತಂಡಗಳ ನಡುವೆ ಪೈಪೋಟಿ

ಪ್ರಸ್ತುತ, ಸನ್‌ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ್ ರಾಯಲ್ಸ್, ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಟಾಪ್-2 ಸ್ಥಾನಕ್ಕಾಗಿ ಪೈಪೋಟಿಯಲ್ಲಿವೆ. ಟಾಪ್-2 ತಲುಪಲು ತಂಡಗಳಿಗೆ ಕನಿಷ್ಠ 18 ಅಂಕಗಳು ಬೇಕಾಗುತ್ತವೆ. ಈ ತಂಡಗಳಲ್ಲಿ ಸನ್‌ರೈಸರ್ಸ್ ಟಾಪ್ 2 ರಲ್ಲಿ ಸ್ಥಾ ಪಡೆಯುವ ಸನಿಹದಲ್ಲಿದೆ. ಹಾಗೆಯೇ ಪಂಜಾಬ್ ಮತ್ತು ಆರ್​​ಸಿಬಿ ಕೂಡ ಈ ಸ್ಥಾನಕ್ಕಾಗಿ ಪ್ರಮುಖ ಸ್ಪರ್ಧಿಗಳಾಗಿವೆ. ಏತನ್ಮಧ್ಯೆ, ಗುಜರಾತ್ ಮತ್ತು ರಾಜಸ್ಥಾನ್ ಕೂಡ ಟಾಪ್-2 ರಲ್ಲಿ ಸ್ಥಾನ ಪಡೆಯುವ ಅವಕಾಶವನ್ನು ಹೊಂದಿವೆ. ಈ ಐದು ತಂಡಗಳಿಗೆ ಹೋಲಿಸಿದರೆ ಟಾಪ್ 2 ರಲ್ಲಿ ಸ್ಥಾನ ಪಡೆಯಲು ಸಿಎಸ್​ಕೆಗೆ ಕೊಂಚ ಕಠಿಣವಾದರೂ ಅವಕಾಶವಂತೂ ಇದೆ.

ಸನ್‌ರೈಸರ್ಸ್ ಹೈದರಾಬಾದ್ ತಂಡವು ಪ್ರಸ್ತುತ 11 ಪಂದ್ಯಗಳಿಂದ 7 ಗೆಲುವುಗಳೊಂದಿಗೆ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸನ್‌ರೈಸರ್ಸ್ ತಂಡವು ಉಳಿದ ಮೂರು ಪಂದ್ಯಗಳಲ್ಲಿ ಎರಡನ್ನು ಗೆಲ್ಲುವ ಮೂಲಕ 18 ಅಂಕಗಳನ್ನು ತಲುಪಬಹುದು. ಏತನ್ಮಧ್ಯೆ, ಪಂಜಾಬ್ ಕಿಂಗ್ಸ್ 10 ಪಂದ್ಯಗಳಿಂದ 13 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಉಳಿದ ನಾಲ್ಕು ಪಂದ್ಯಗಳಿಂದ ಮೂರು ಪಂದ್ಯಗಳನ್ನು ಗೆದ್ದರೆ ಅದರ ಅಂಕ 19 ಆಗುತ್ತದೆ. ಇದು ಮೊದಲ ಎರಡು ಸ್ಥಾನಗಳಲ್ಲಿ ಸ್ಥಾನ ಪಡೆಯಲು ಸಾಕು. ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು 18 ಅಂಕಗಳನ್ನು ತಲುಪಲು ಉಳಿದ ನಾಲ್ಕು ಪಂದ್ಯಗಳಿಂದ ತಲಾ ಮೂರು ಪಂದ್ಯಗಳನ್ನು ಗೆಲ್ಲುವುದು ಅಗತ್ಯವಾಗಿದೆ.

ಸಿಎಸ್​ಕೆಗೆ ದೊಡ್ಡ ಸವಾಲು

ಚೆನ್ನೈ ಸೂಪರ್ ಕಿಂಗ್ಸ್ ತಂಡವು ಅಗ್ರ ಎರಡು ಸ್ಥಾನಗಳ ರೇಸ್‌ನಲ್ಲಿ ಉಳಿದಿದ್ದರೂ, ಅಲ್ಲಿಗೆ ತಲುಪುವುದು ಕಷ್ಟಕರವಾದ ಕೆಲಸ. ಪ್ರಸ್ತುತ, ಆಡಿರುವ 10 ಪಂದ್ಯಗಳಿಂದ ಐದು ಗೆಲುವುಗಳೊಂದಿಗೆ 10 ಅಂಕಗಳನ್ನು ಹೊಂದಿದೆ. ಆದ್ದರಿಂದ, ಸಿಎಸ್​ಕೆ ತಂಡ 18 ಅಂಕಗಳನ್ನು ತಲುಪಲು ಉಳಿದಿರುವ ನಾಲ್ಕು ಪಂದ್ಯಗಳನ್ನು ಗೆಲ್ಲಬೇಕಾಗುತ್ತದೆ. ಅದೃಷ್ಟವಶಾತ್, ಸಿಎಸ್​ಕೆ ತಮ್ಮ ಕೊನೆಯ ಏಳು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದಿದೆ. ಹೀಗಾಗಿ ಸಿಎಸ್​ಕೆ ತನ್ನ ಉತ್ತಮ ಫಾರ್ಮ್ ಅನ್ನು ಹೀಗೆಯೇ ಮುಂದುವರಿಸಿದರೆ, ಅದು ಕೂಡ ಅಗ್ರ ಎರಡು ಸ್ಥಾನಗಳನ್ನು ತಲುಪಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:38 pm, Fri, 8 May 26

Source link

ಬೈನಾನ್ಸ್‌ನಿಂದ ಹೊಸ ‘ವಿತ್‌ಡ್ರಾ ಪ್ರೊಟೆಕ್ಷನ್’: ಬಳಕೆದಾರರ ಕ್ರಿಪ್ಟೋ ಆಸ್ತಿಗಳಿಗೆ ಈಗ ಹೆಚ್ಚುವರಿ ಭದ್ರತೆ – Kannada News | Secure Your Crypto: Binance Rolls Out New Withdrawal Protection Feature

ನವದೆಹಲಿ, ಮೇ 8: ಕ್ರಿಪ್ಟೋಕರೆನ್ಸಿ ಎಕ್ಸ್ಚೇಂಜ್ ಸಂಸ್ಥೆಯಾದ ಬೈನಾನ್ಸ್ (Binance) ತನ್ನ ಬಳಕೆದಾರರ ಸುರಕ್ಷತೆಗಾಗಿ ‘ವಿತ್‌ಡ್ರಾ ಪ್ರೊಟೆಕ್ಷನ್’ (Withdraw Protection) ಎಂಬ ಹೊಸ ಸೆಕ್ಯೂರಿಟಿ ಫೀಚರ್ ಅನ್ನು ಪರಿಚಯಿಸಿದೆ. ಬೈನಾನ್ಸ್ ಬಳಕೆದಾರರು ತಮ್ಮ ಖಾತೆಯಿಂದ ಹಣ ಅಥವಾ ಕ್ರಿಪ್ಟೋವನ್ನು ಬೇರೆಡೆಗೆ ವರ್ಗಾಯಿಸದಂತೆ (Withdrawal) ತಾವೇ ಸ್ವತಃ ತಾತ್ಕಾಲಿಕವಾಗಿ ಲಾಕ್ ಮಾಡಿಕೊಳ್ಳುವ ಸೌಲಭ್ಯ ಇದಾಗಿದೆ. ಬಳಕೆದಾರರು 1 ರಿಂದ 7 ದಿನಗಳವರೆಗೆ ಈ ಲಾಕ್ ಅವಧಿಯನ್ನು ನಿಗದಿಪಡಿಸಬಹುದು.

ವಿತ್​ಡ್ರಾ ಪ್ರೊಟೆಕ್ಷನ್ ಫೀಚರ್​ನ ಪ್ರಮುಖ ಉದ್ದೇಶಗಳೇನು?

  • ಬಲವಂತದ ವರ್ಗಾವಣೆ ತಡೆ: ಇತ್ತೀಚಿನ ದಿನಗಳಲ್ಲಿ ಕ್ರಿಪ್ಟೋ ಬಳಕೆದಾರರನ್ನು ಬೆದರಿಸಿ ಅಥವಾ ಒತ್ತಾಯಪೂರ್ವಕವಾಗಿ ಆಸ್ತಿ ವರ್ಗಾಯಿಸಿಕೊಳ್ಳುವ ಘಟನೆಗಳು (Wrench Attacks) ಹೆಚ್ಚುತ್ತಿವೆ. ಇಂತಹ ಸಂದರ್ಭಗಳಲ್ಲಿ ಈ ವೈಶಿಷ್ಟ್ಯವು ರಕ್ಷಣಾ ಕವಚವಾಗಿ ಕೆಲಸ ಮಾಡುತ್ತದೆ.
  • ಖಾತೆಯ ಸುರಕ್ಷತೆ: ಒಂದು ವೇಳೆ ನಿಮ್ಮ ಖಾತೆಗೆ ಬೇರೆಯವರು ಲಾಗ್-ಇನ್ ಆದರೂ ಸಹ, ನೀವು ಲಾಕ್ ಮಾಡಿದ್ದರೆ ಅವರು ತಕ್ಷಣವೇ ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ.
  • ಸಮಯದ ಅವಕಾಶ: ಹಣ ಹಿಂಪಡೆಯುವಿಕೆಗೆ ವಿಳಂಬ ಇರುವುದರಿಂದ, ತುರ್ತು ಸಂದರ್ಭಗಳಲ್ಲಿ ಬಳಕೆದಾರರಿಗೆ ಪ್ರತಿಕ್ರಿಯಿಸಲು ಮತ್ತು ಅಧಿಕಾರಿಗಳ ಸಹಾಯ ಪಡೆಯಲು ಸಮಯ ಸಿಗುತ್ತದೆ.

ಇದನ್ನೂ ಓದಿ: ಆಯುಷ್ಮಾನ್ ಭಾರತ್ ಹೆಲ್ತ್ ಇನ್ಷೂರೆನ್ಸ್; ಬೆಂಗಳೂರಿನಲ್ಲಿ ಎಐ ಹ್ಯಾಕಥಾನ್ ಶೋಕೇಸ್

ಈ ಫೀಚರ್ ಹೇಗೆ ಕೆಲಸ ಮಾಡುತ್ತದೆ?

ಬಳಕೆದಾರರು ತಮ್ಮ ಖಾತೆಯ ಸೆಟ್ಟಿಂಗ್ಸ್‌ನಲ್ಲಿ ಇದನ್ನು ಆಕ್ಟಿವೇಟ್ ಮಾಡಬಹುದು. ಒಮ್ಮೆ ಆಕ್ಟಿವೇಟ್ ಮಾಡಿದರೆ, ನಿಗದಿತ ಅವಧಿಯವರೆಗೆ ಹಣ ಹಿಂಪಡೆಯಲು ಸಾಧ್ಯವಿಲ್ಲ.

ಬಳಕೆದಾರರು ಬಯಸಿದರೆ ಅವಧಿಗೂ ಮುನ್ನ ಅನ್-ಲಾಕ್ ಮಾಡುವ ಆಯ್ಕೆಯನ್ನು ಇಟ್ಟುಕೊಳ್ಳಬಹುದು. ಆದರೆ ಇದಕ್ಕೆ ‘ಸೆಕ್ಯೂರಿಟಿ ಕೀ’ ಮತ್ತು ‘ಅಥೆಂಟಿಕೇಟರ್ ಆಪ್’ ನಂತಹ ಕಟ್ಟುನಿಟ್ಟಿನ ದೃಢೀಕರಣಗಳು ಬೇಕಾಗುತ್ತವೆ.

ಬಳಕೆದಾರರು ಇನ್ನೂ ಹೆಚ್ಚಿನ ಭದ್ರತೆ ಬಯಸಿದರೆ ‘ಸ್ಟ್ರಿಕ್ಟ್ ಲಾಕ್‌ಡೌನ್’ ಆಯ್ಕೆ ಮಾಡಬಹುದು. ಇದರಲ್ಲಿ ಅವಧಿಗೂ ಮುನ್ನ ಅನ್-ಲಾಕ್ ಮಾಡಲು ಬಳಕೆದಾರನಿಗೂ ಅಥವಾ ಬೈನಾನ್ಸ್ ಸಂಸ್ಥೆಗೂ ಸಾಧ್ಯವಿರುವುದಿಲ್ಲ.

ಇದನ್ನೂ ಓದಿ: ಗೂಗಲ್​ಗೆ ಆರಂಭದಲ್ಲೇ ಫಂಡಿಂಗ್ ನೀಡಿದ್ದ ರಾಮ್ ಶ್ರೀರಾಮ್; ಭಾರತದ ಈ ಕಂಪನಿಯತ್ತ ಈಗ ಅವರ ಚಿತ್ತ

ಗಮನಿಸಬೇಕಾದ ಅಂಶ ಎಂದರೆ ಈ ವೈಶಿಷ್ಟ್ಯವು ಕೇವಲ ಹಣ ಹಿಂಪಡೆಯುವಿಕೆಯನ್ನು (Withdrawal) ಮಾತ್ರ ನಿರ್ಬಂಧಿಸುತ್ತದೆ. ಲಾಕ್ ಅವಧಿಯಲ್ಲಿಯೂ ಬಳಕೆದಾರರು ಟ್ರೇಡಿಂಗ್ ಮಾಡುವುದು, ಕಾಯಿನ್ ಖರೀದಿಸುವುದು ಅಥವಾ ತಮ್ಮ ಪೋರ್ಟ್‌ಫೋಲಿಯೋ ನೋಡುವುದನ್ನು ಮುಂದುವರಿಸಬಹುದು.

ಕ್ರಿಪ್ಟೋ ಲೋಕದಲ್ಲಿ ಹೆಚ್ಚುತ್ತಿರುವ ಸೈಬರ್ ದಾಳಿ ಮತ್ತು ಭೌತಿಕ ಬೆದರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಬೈನಾನ್ಸ್ ಈ ಮಹತ್ವದ ಕ್ರಮ ಕೈಗೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಹವಾಮಾನ: 10 ಜಿಲ್ಲೆಗಳಲ್ಲಿ ನಾಳೆ ಸಾಧಾರಣ ಮಳೆ; ಉತ್ತರ ಕರ್ನಾಟದಲ್ಲಿ ಬಿಸಿಲಿನಬ್ಬರ – Kannada News | Karnataka weather alert moderate rain likely in 10 districts tomorrow

ಬೆಂಗಳೂರು, ಮೇ 08: ರಾಜ್ಯದ ಹಲವೆಡೆ ಬಿಸಿಲಿನ ಅಬ್ಬರದ ನಡುವೆಯೂ ಕರಾವಳಿ ಸೇರಿ ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಅಥವಾ ಮಧ್ಯಮ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಮುಂದಿನ ಮೂರು ದಿನಗಳ ಕಾಲ ಕರ್ನಾಟಕದಲ್ಲಿ ಮಳೆ ಮುಂದುವರಿಯಲಿದ್ದು, ಮೇ 11ರ ವರೆಗೂ ಕೆಲವೆಡೆ ಗುಡುಗು ಸಹಿತ ಮಳೆಯನ್ನು ಅಂದಾಜಿಸಲಾಗಿದೆ. ಅದಾಗಿಯೂ ಕರಾವಳಿ ಸೇರಿ ಉತ್ತರ ಒಳನಾಡು ಭಾಗದ ಜಿಲ್ಲೆಗಳಲ್ಲಿ ತೀವ್ರ ತಾಪಮಾನ ಕಂಡುಬರಲಿದೆ ಎನ್ನಲಾಗಿದೆ.

ಎಲ್ಲೆಲ್ಲಿ ಮಳೆ?

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಸಾಧಾರಣ ಮಳೆಯ ನಿರೀಕ್ಷೆ ಇದೆ. ಹಾಗೆಯೇ ಉತ್ತರ ಒಳನಾಡು ಭಾಗದ ಬೆಳಗಾವಿ, ಧಾರವಾಡ, ಗದಗ, ಹಾವೇರಿಯಲ್ಲಿಯೂ ವರುಣ ಆರ್ಭಟಿಸುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗದಲ್ಲಿಯೂ ಮಳೆ ಸಾಧ್ಯತೆ ಅಂದಾಜಿಸಲಾಗಿದೆ.

ಇದನ್ನೂ ಓದಿ:  ಮಳೆ ವೇಳೆ 15 ಕಿಮೀ ಪ್ರಯಾಣಿಸಲು ಬೆಂಗಳೂರಲ್ಲಿ ಆಟೋ ದರ 1,200 ರೂ.!; ಈ ಹಣದಲ್ಲಿ ಏರ್‌ಪೋರ್ಟ್‌ಗೇ ಹೋಗಬಹುದು ಎಂದ ನೆಟ್ಟಿಗರು

ಉಳಿದಂತೆ ಉತ್ತರ ಕನ್ನಡ, ಬಾಗಲಕೋಟೆ, ಬೀದರ್​​, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ.

ಬೆಂಗಳೂರಲ್ಲಿ ಮಳೆ ಸಾಧ್ಯತೆ ಇದ್ಯಾ?

ರಾಜಧಾನಿ ಬೆಂಗಳೂರಲ್ಲಿ ನಾಳೆ ಬಿಸಿಲು ಮತ್ತು ಮೋಡ ಕವಿದ ವಾತಾವರಣ ಕಂಡುಬರಲಿದ್ದು, ಮಳೆಯ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ. ನಗರದ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್​​ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್​​ ಇರಲಿದೆ. ಗಾಳಿಯ ವೇಗ ಗಂಟೆಗೆ 10-16 ಕಿಲೋ ಮೀಟರ್​​ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version