ಮಕ್ಕಳಿಂದ ದೊಡ್ಡವರವರೆಗೆ ಕಾಡುತ್ತಿದೆ ಥಲಸ್ಸೆಮಿಯಾ; ಮದುವೆಗೆ ಮುನ್ನ ಪರೀಕ್ಷೆ ಮಾಡಿಸುವುದಕ್ಕೆ ಕಾರಣ ಏನ್ ಗೊತ್ತಾ? – Kannada News | Blood Test Before Marriage: Thalassemia Risk, Genetics, and Prevention

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಥಲಸ್ಸೆಮಿಯಾ (Thalassemia) ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಥಲಸ್ಸೆಮಿಯಾ ಒಂದು ಆನುವಂಶಿಕ (inherited) ರಕ್ತದ ಕಾಯಿಲೆಯಾಗಿದ್ದು, ದೇಹವು ಸಾಕಷ್ಟು ಆರೋಗ್ಯಕರ ಹಿಮೋಗ್ಲೋಬಿನ್ ಅಥವಾ ಕೆಂಪು ರಕ್ತ ಕಣಗಳನ್ನು ಉತ್ಪಾದಿಸದ ಸ್ಥಿತಿಯಾಗಿದೆ ಅಂದರೆ ದೇಹದಲ್ಲಿ ಸಮರ್ಪಕ ಪ್ರಮಾಣದ ಹೀಮೋಗ್ಲೋಬಿನ್ ಉತ್ಪತ್ತಿಯಾಗುವುದಿಲ್ಲ. ಈ ರೀತಿ ಹೀಮೋಗ್ಲೋಬಿನ್ ಕಡಿಮೆಯಾಗುವುದರಿಂದ ದೇಹದ ಅಂಗಾಂಗಗಳಿಗೆ ಬೇಕಾದಷ್ಟು ಆಮ್ಲಜನಕ ತಲುಪದೇ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ವೈದ್ಯರ ಪ್ರಕಾರ, ಈ ಕಾಯಿಲೆ ಪೋಷಕರಿಂದ ಮಕ್ಕಳಿಗೆ ಹರಡುತ್ತದೆ. ತಂದೆ- ತಾಯಿ ಇಬ್ಬರೂ ಥಲಸ್ಸೆಮಿಯಾ ಟ್ರೈಟ್ ಹೊಂದಿದ್ದರೆ, ಮಗುವಿಗೆ ಗಂಭೀರ ಥಲಸ್ಸೆಮಿಯಾ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಈ ಕಾರಣದಿಂದ ವಿವಾಹಕ್ಕೂ ಮೊದಲು ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಅತ್ಯಂತ ಮುಖ್ಯ ಎಂದು ತಜ್ಞರು ಸಲಹೆ ನೀಡುತ್ತಾರೆ. ಹಾಗಾದರೆ ಥಲಸ್ಸೆಮಿಯಾ ಇದ್ದಾಗ ಯಾವ ರೀತಿ ಲಕ್ಷಣಗಳು ಕಂಡುಬರುತ್ತದೆ, ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಥಲಸ್ಸೆಮಿಯಾದ ಪ್ರಮುಖ ಲಕ್ಷಣಗಳು:

ಸಾಮಾನ್ಯವಾಗಿ ಥಲಸ್ಸೆಮಿಯಾ ಇರುವ ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ರಕ್ತಹೀನತೆ, ದೌರ್ಬಲ್ಯ, ಬೇಗ ದಣಿವು, ತೂಕ ಮತ್ತು ಎತ್ತರ ಸರಿಯಾಗಿ ಬೆಳೆಯದಿರುವುದು, ಚರ್ಮ ಬಿಳಿಯಾಗುವುದು ಹಾಗೂ ಉಸಿರಾಟದ ತೊಂದರೆ ಕಾಣಿಸಬಹುದು. ಕೆಲವು ಮಕ್ಕಳಲ್ಲಿ ಮುಖದ ಎಲುಬುಗಳ ಆಕಾರದಲ್ಲೂ ಬದಲಾವಣೆ ಕಂಡುಬರುವ ಸಾಧ್ಯತೆ ಇದೆ. ಗಂಭೀರ ಥಲಸ್ಸೆಮಿಯಾ ಹೊಂದಿರುವವರಿಗೆ ನಿಯಮಿತವಾಗಿ ರಕ್ತ ಹೇರಿಕೆ (Blood Transfusion) ಮಾಡಬೇಕಾಗುತ್ತದೆ. ಚಿಕಿತ್ಸೆ ವಿಳಂಬವಾದರೆ ಹೃದಯ, ಯಕೃತ್ತು ಮತ್ತು ಇತರ ಅಂಗಾಂಗಗಳ ಮೇಲೆ ಪರಿಣಾಮ ಬೀಳಬಹುದು.

ಚಿಕಿತ್ಸೆ ಮತ್ತು ಮುನ್ನೆಚ್ಚರಿಕೆ:

ವೈದ್ಯರ ಪ್ರಕಾರ, ಥಲಸ್ಸೆಮಿಯಾಗೆ ಸಂಪೂರ್ಣ ಚಿಕಿತ್ಸೆ ಕೆಲವು ಸಂದರ್ಭಗಳಲ್ಲಿ ಮಾತ್ರ ಸಾಧ್ಯ. ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಮೂಲಕ ಕೆಲವರಿಗೆ ಶಾಶ್ವತ ಪರಿಹಾರ ದೊರೆಯಬಹುದು. ಆದರೆ ಹೆಚ್ಚಿನ ರೋಗಿಗಳಿಗೆ ನಿಯಮಿತ ಚಿಕಿತ್ಸೆ ಮತ್ತು ವೈದ್ಯಕೀಯ ಮೇಲ್ವಿಚಾರಣೆ ಅಗತ್ಯವಾಗುತ್ತದೆ. ಸಮತೋಲನ ಆಹಾರ, ಐರನ್ ಮಟ್ಟದ ಮೇಲ್ವಿಚಾರಣೆ ಮತ್ತು ಸಮಯಕ್ಕೆ ಸರಿಯಾದ ವೈದ್ಯಕೀಯ ಪರೀಕ್ಷೆಗಳು ರೋಗ ನಿಯಂತ್ರಣದಲ್ಲಿ ಸಹಾಯ ಮಾಡುತ್ತವೆ. ಮುಖ್ಯವಾಗಿ, ಮದುವೆಗೆ ಮೊದಲು ಥಲಸ್ಸೆಮಿಯಾ ಸ್ಕ್ರೀನಿಂಗ್ ಮಾಡಿಸುವುದು ಈ ಕಾಯಿಲೆ ತಡೆಯಲು ಪರಿಣಾಮಕಾರಿ ಮಾರ್ಗವೆಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಿಂಗ್ ಕೊಹ್ಲಿ ವಿಕೆಟ್ ಕಿತ್ತ ಯುವ ವೇಗಿಗೆ ಭಾರತ ಟಿ20 ತಂಡದಲ್ಲಿ ಸ್ಥಾನ – Kannada News | IPL 2026 Star Prince Yadav to Replace Bumrah in India T20 Squad?

2026 ರ ಐಪಿಎಲ್‌ನಲ್ಲಿ (IPL 2026) ಲಕ್ನೋ ಸೂಪರ್‌ಜೈಂಟ್ಸ್ (LSG) ತಂಡದ ಪ್ರದರ್ಶನ ಅಷ್ಟೇನೂ ಉತ್ತಮವಾಗಿಲ್ಲ. ಆಡಿರುವ 10 ಪಂದ್ಯಗಳಲ್ಲಿ ತಂಡ 7 ಪಂದ್ಯಗಳನ್ನು ಸೋತು, ಪ್ಲೇಆಫ್ ರೇಸ್​​ನಿಂದ ಭಾಗಶಃ ಹೊರಬಿದ್ದಿದೆ. ಆದಾಗ್ಯೂ ತಂಡದ ಪರ ಯುವ ವೇಗದ ಬೌಲರ್ ಪ್ರಿನ್ಸ್ ಯಾದವ್ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಆಡಿರುವ 10 ಪಂದ್ಯಗಳಲ್ಲಿ ಪ್ರಿನ್ಸ್ ಯಾದವ್ ಕಡಿಮೆ ಎಕಾನಮಿ ರೇಟ್​​ನಲ್ಲಿ ರನ್ ಬಿಟ್ಟುಕೊಡುವುದರ ಜೊತೆಗೆ ಅವಶ್ಯಕ ಸಮಯದಲ್ಲಿ ವಿಕೆಟ್​ಗಳನ್ನು ತೆಗೆದುಕೊಟ್ಟಿದ್ದಾರೆ. ಆರ್​​ಸಿಬಿ ವಿರುದ್ಧದ ಪಂದ್ಯದಲ್ಲಿ ಲಕ್ನೋ ತಂಡ ಗೆಲುವು ಸಾಧಿಸುವಲ್ಲಿ ಪ್ರಿನ್ಸ್ ಯಾದವ್ (Prince Yadav) ಅವರ ಪ್ರದರ್ಶನ ಪ್ರಮುಖ ಪಾತ್ರವಹಿಸಿತ್ತು. ಈ ಪಂದ್ಯದಲ್ಲಿ ಅವರು ಪ್ರಮುಖ 3 ವಿಕೆಟ್‌ಗಳನ್ನು ಕಬಳಿಸಿದ್ದರು.

ಹೀಗಾಗಿ ಈ ಆವೃತ್ತಿಲ್ಲಿ ಅಮೋಘ ಪ್ರದರ್ಶನ ನೀಡಿರುವ ಪ್ರಿನ್ಸ್ ಯಾದವ್​ಗೆ ಇಷ್ಟರಲ್ಲೇ ಟೀಂ ಇಂಡಿಯಾದ ಕದ ತೆರೆಯಲಿದೆ ಎಂಬ ಮಾತು ಕೇಳಿಬರುತ್ತಿದೆ. ಅದರಲ್ಲೂ ಟಿ20 ಕ್ರಿಕೆಟ್​ಗೆ ಹೇಳಿ ಮಾಡಿಸಿರುವಂತಹ ಬೌಲರ್ ಎನಿಸಿಕೊಂಡಿರುವ ಪ್ರಿನ್ಸ್ ಯಾದವ್ ಟೀಂ ಇಂಡಿಯಾದ ಮುಂದಿನ ಟಿ20 ಸರಣಿಯಲ್ಲೇ ತಂಡದ ಪರ ಆಡುವುದನ್ನು ಕಾಣಬಹುದು. ಆದಾಗ್ಯೂ ಪ್ರಿನ್ಸ್ ಯಾದವ್ ಟಿ20 ತಂಡದಲ್ಲಿ ಯಾರ ಸ್ಥಾನವನ್ನು ತುಂಬಲಿದ್ದಾರೆ ಎಂಬ ಪ್ರಶ್ನೆ ಬಂದಾಗ ಅದಕ್ಕೆ ಉತ್ತರವೂ ಸಿದ್ಧವಾಗಿದ್ದು, ಅವರು ಜಸ್ಪ್ರೀತ್ ಬುಮ್ರಾ ಅವರ ಸ್ಥಾನವನ್ನು ತುಂಬಲಿದ್ದಾರೆ ಎಂದು ವರದಿಯಾಗಿದೆ.

ಬುಮ್ರಾ ಬದಲಿಗೆ ಪ್ರಿನ್ಸ್ ಯಾದವ್ ಆಯ್ಕೆ

ಮಾಧ್ಯಮ ವರದಿಗಳ ಪ್ರಕಾರ, 2026 ರ ಟಿ20 ವಿಶ್ವಕಪ್‌ ಬಳಿಕ, ಬಿಸಿಸಿಐ ಮತ್ತು ತಂಡದ ಆಡಳಿತವು ಜಸ್ಪ್ರೀತ್ ಬುಮ್ರಾಗೆ ಹೆಚ್ಚಿನ ವಿಶ್ರಾಂತಿ ನೀಡಲು ಮುಂದಾಗಿದೆ. ಅದರ ಪ್ರಕಾರ ಮುಂದಿನ 18 ರಿಂದ 24 ತಿಂಗಳುಗಳ ಕಾಲ ಬುಮ್ರಾ ಅವರಿಗೆ ಟಿ20 ಅಂತರರಾಷ್ಟ್ರೀಯ ಪಂದ್ಯಗಳಿಂದ ವಿಶ್ರಾಂತಿ ನೀಡಿ, ಟೆಸ್ಟ್ ಕ್ರಿಕೆಟ್ (ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್) ಮತ್ತು 2027 ರ ಏಕದಿನ ವಿಶ್ವಕಪ್‌ನತ್ತ ಗಮನಹರಿಸಲು ಅನುವು ಮಾಡಿಕೊಡುವುದು ಇದರ ಉದ್ದೇಶವಾಗಿದೆ. ಹೀಗಾಗಿ ಪ್ರಮುಖವಲ್ಲದ ಏಕದಿನ ಸರಣಿಗಳಿಂದಲೂ ಬುಮ್ರಾಗೆ ವಿಶ್ರಾಂತಿ ನೀಡಬಹುದು ಎನ್ನಲಾಗುತ್ತಿದೆ.

ಇಂತಹ ಪರಿಸ್ಥಿತಿಯಲ್ಲಿ, ಜಸ್ಪ್ರೀತ್ ಬುಮ್ರಾ ಬದಲಿಗೆ ಪ್ರಿನ್ಸ್ ಯಾದವ್ ಅವರನ್ನು ಭಾರತ ಟಿ20 ತಂಡದಲ್ಲಿ ಆಡಿಸಲು ಬಿಸಿಸಿಐ ಮುಂದಾಗಿದೆ ಎಂದು ವರದಿಯಾಗಿದೆ. ಮೇಲೆ ಹೇಳಿದಂತೆ 2026 ರ ಐಪಿಎಲ್​ನಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಪ್ರಿನ್ಸ್ ಯಾದವ್ ಶೀಘ್ರದಲ್ಲೇ ಭಾರತೀಯ ತಂಡಕ್ಕೆ ಪಾದಾರ್ಪಣೆ ಮಾಡಬಹುದು. ಇದು ಪ್ರಿನ್ಸ್ ಯಾದವ್ ಅವರ ಎರಡನೇ ಐಪಿಎಲ್ ಸೀಸನ್ ಆಗಿದ್ದು, ಈ ಸೀಸನ್​ನಲ್ಲಿ ಅವರು ಲಕ್ನೋ ತಂಡದ ಪರ 10 ಪಂದ್ಯಗಳಲ್ಲಿ 16 ವಿಕೆಟ್ ಕಬಳಿಸಿದ್ದಾರೆ. ಪರ್ಪಲ್ ಕ್ಯಾಪ್ ರೇಸ್​ನಲ್ಲಿ ಅವರು ಮೂರನೇ ಸ್ಥಾನದಲ್ಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:11 pm, Fri, 8 May 26

Source link

Vijay Swearing-In: ನಾಳೆ ಬೆಳಗ್ಗೆ 11 ಗಂಟೆಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸ್ವೀಕಾರ – Kannada News | TVK Chief Vijay to take oath as Tamil Nadu CM tomorrow at 11 am gets Governors nod to form government

ಚೆನ್ನೈ, ಮೇ 8: ತಮಿಳುನಾಡಿನಲ್ಲಿ ನಾಳೆಯಿಂದ ವಿಜಯ್ ದರ್ಬಾರ್ ಆರಂಭವಾಗಲಿದೆ. ಟಿವಿಕೆ ಮುಖ್ಯಸ್ಥ ಜೋಸೆಫ್ ವಿಜಯ್ ಬಹುಮತ ಸಾಬೀತುಪಡಿಸಲು ಯಶಸ್ವಿಯಾಗಿದ್ದಾರೆ. ಇಂದು ಸಂಜೆ ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರನ್ನು ಭೇಟಿಯಾದ ವಿಜಯ್ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಅಗತ್ಯವಿರುವ ಬಹುಮತವನ್ನು ವಿಜಯ್ ಸಾಬೀತುಪಡಿಸಿದ್ದರಿಂದ ರಾಜ್ಯಪಾಲರು ಸರ್ಕಾರ ರಚನೆಗೆ ಒಪ್ಪಿಗೆ ನೀಡಿದ್ದಾರೆ. ನಾಳೆಯೇ (ಶನಿವಾರ) ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ರಾಜ್ಯಪಾಲರು ಜೋಸೆಫ್ ವಿಜಯ್ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ.

ತಮಿಳುನಾಡು ವಿಕ್ಟರಿ ಪಾರ್ಟಿ (ಟಿವಿಕೆ) 118 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಹಾಗೂ ಇತರೆ ಎಡಪಕ್ಷಗಳ ಬೆಂಬಲ ಸೇರಿ ವಿಜಯ್ ಅವರಿಗೆ ಇರುವ ಬೆಂಬಲದ ಸಂಖ್ಯೆ 121 ಆಗಿದೆ. ಹೀಗಾಗಿ, ವಿಜಯ್ ಅವರು ನಾಳೆ, ಅಂದರೆ ಮೇ 9ರ ಬೆಳಿಗ್ಗೆ 11 ಗಂಟೆಗೆ ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈಗಾಗಲೇ ಸಮಾರಂಭಕ್ಕೆ ಭಾರೀ ಸಿದ್ಧತೆಗಳು ಆರಂಭವಾಗಿದೆ.

Published On – 7:55 pm, Fri, 8 May 26

Source link

Kailasagiri Hill: ರಾತ್ರಿಯ ವೇಳೆ ಬೆಳಗಲಿದೆ ಶಿವನ ದಿವ್ಯ ಆಯುಧ; ಕೈಲಾಸಗಿರಿಯ ಮೇಲೆ 2.5 ಕೋಟಿ ವೆಚ್ಚದ ಬೃಹತ್ ತ್ರಿಶೂಲ ನಾಳೆ ಉದ್ಘಾಟನೆ – Kannada News | Kailasagiri Hill: Vizag’s 65ft Trishul – New Must Visit Tourist Attraction in Visakhapatnam

ಆಂಧ್ರಪ್ರದೇಶದ ವಿಶಾಖಪಟ್ಟಣಂನ ಪ್ರವಾಸೋದ್ಯಮ ಭೂಪಟದಲ್ಲಿ ಕೈಲಾಸಗಿರಿ ಬೆಟ್ಟವು ಈಗಾಗಲೇ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಇದೀಗ ಈ ಪ್ರಸಿದ್ಧ ತಾಣದ ಮುಕುಟಕ್ಕೆ ಮತ್ತೊಂದು ಸುಂದರ ಗರಿ ಸೇರ್ಪಡೆಯಾಗಿದೆ. ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸಲು 65 ಅಡಿ ಎತ್ತರದ ಬೃಹತ್‌ ಮತ್ತು ಅತ್ಯಾಧುನಿಕ ‘ತ್ರಿಶೂಲ‘ ಕೈಲಾಸಗಿರಿಯ ಮೇಲೆ ತಲೆ ಎತ್ತಿ ನಿಂತಿದೆ. ಶನಿವಾರ (ಮೇ 9) ನಡೆಯಲಿರುವ ಅಧಿಕೃತ ಉದ್ಘಾಟನಾ ಸಮಾರಂಭದಲ್ಲಿ ಸಚಿವ ನಾರಾಯಣ್ ಮತ್ತು ವಿಎಂಆರ್‌ಡಿಎ ಅಧ್ಯಕ್ಷ ಪ್ರಣವ್ ಗೋಪಾಲ್ ಭಾಗವಹಿಸಲಿದ್ದು, ವೈಜಾಗ್ ಪ್ರವಾಸಿಗರಿಗೆ ಈ ವಾರಾಂತ್ಯದಿಂದಲೇ ಹೊಸ ಅನುಭವ ಸಿಗಲಿದೆ.

ವೈಜಾಗ್‌ನ ಹೊಸ ಸಂಕೇತ 65 ಅಡಿಯ ಬೃಹತ್ ತ್ರಿಶೂಲ:

ವಿಶಾಖಪಟ್ಟಣಂ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (VMRDA) ಕೈಲಾಸಗಿರಿ ಬೆಟ್ಟದ ಮೇಲೆ ಈ ಬೃಹತ್ ತ್ರಿಶೂಲವನ್ನು ಸ್ಥಾಪಿಸಿದೆ. ಶಿವ ಮತ್ತು ಪಾರ್ವತಿಯ ವಿಗ್ರಹಗಳ ಪಕ್ಕದಲ್ಲೇ ನಿರ್ಮಾಣವಾಗಿರುವ ಈ ತ್ರಿಶೂಲವು 65 ಅಡಿ ಎತ್ತರವಿದೆ. ಇದರ ವಿಶೇಷತೆಯೆಂದರೆ, ವಿಶಾಖಪಟ್ಟಣಂ ನಗರದ ಯಾವುದೇ ಮೂಲೆಯಿಂದ ಕೈಲಾಸಗಿರಿಯತ್ತ ಕಣ್ಣು ಹಾಯಿಸಿದರೂ ಈ ತ್ರಿಶೂಲ ಭವ್ಯವಾಗಿ ಗೋಚರಿಸುತ್ತದೆ.

2.50 ಕೋಟಿ ರೂ. ವೆಚ್ಚದ ಯೋಜನೆ:

ಸುಮಾರು 2.50 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ. ಈ ಬೃಹತ್ ತ್ರಿಶೂಲದ ವಿನ್ಯಾಸವನ್ನು ಪುಣೆಯಲ್ಲಿ ಸಿದ್ಧಪಡಿಸಲಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗಿದೆ. ಅರೆಪಾರದರ್ಶಕ ಫೈಬರ್ ಬಲವರ್ಧಿತ ಪ್ಲಾಸ್ಟಿಕ್‌ನಿಂದ (Fiber Reinforced Plastic) ಇದನ್ನು ತಯಾರಿಸಲಾಗಿದ್ದು, ಕರಾವಳಿ ತೀರದಲ್ಲಿ ಸಂಭವಿಸುವ ಬಲವಾದ ಗಾಳಿ ಮತ್ತು ಚಂಡಮಾರುತಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಇದು ಹೊಂದಿದೆ ಎಂದು ಹೇಳಲಾಗುತ್ತಿದೆ.

ರಾತ್ರಿಯ ವೇಳೆಯಲ್ಲಿ ಬೆಳಗಲಿದೆ ಶಿವನ ಆಯುಧ:

ಹಗಲಿಗಿಂತಲೂ ರಾತ್ರಿಯ ಸಮಯದಲ್ಲಿ ಈ ತ್ರಿಶೂಲದ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ತ್ರಿಶೂಲದ ಮೇಲ್ಭಾಗದಲ್ಲಿ 25 ಅಡಿ ಎತ್ತರದ ಗುಮ್ಮಟವಿದ್ದು, ಅದರ ಮೇಲೆ 110 ವ್ಯಾಟ್‌ನ ಶಕ್ತಿಯುತ ಎಲ್‌ಇಡಿ (LED) ಬಲ್ಬ್‌ಗಳನ್ನು ಅಳವಡಿಸಲಾಗಿದೆ. ಕಡು ಕತ್ತಲೆಯಲ್ಲಿಯೂ ಬೆಟ್ಟದ ಮೇಲೆ ಬೆಳಗುವ ಈ ತ್ರಿಶೂಲವು ಸಮುದ್ರ ತೀರದ ಪ್ರವಾಸಿಗರಿಗೆ ದಿವ್ಯ ಅನುಭವವನ್ನು ನೀಡಲಿದೆ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ

ಸೆಲ್ಫಿ ಪ್ರಿಯರಿಗಾಗಿ ವಿಶೇಷ ವೇದಿಕೆ:

ಪ್ರವಾಸಿಗರ ಅನುಕೂಲಕ್ಕಾಗಿ ತ್ರಿಶೂಲದ ಸುತ್ತಲೂ 30 ಅಡಿ ಅಗಲದ ಸುಂದರ ವೇದಿಕೆಯನ್ನು ನಿರ್ಮಿಸಲಾಗಿದೆ. ಇಲ್ಲಿ ಪ್ರವಾಸಿಗರು ಆರಾಮವಾಗಿ ವಿಶ್ರಾಂತಿ ಪಡೆಯಬಹುದು ಮತ್ತು ಸುಂದರವಾದ ಸೆಲ್ಫಿಗಳನ್ನು ತೆಗೆದುಕೊಳ್ಳಬಹುದು. ವಿಶೇಷವೆಂದರೆ, ಈ ತ್ರಿಶೂಲವನ್ನು ವೀಕ್ಷಿಸಲು ಪ್ರವಾಸಿಗರಿಗೆ ಯಾವುದೇ ಪ್ರವೇಶ ಶುಲ್ಕವನ್ನು ವಿಧಿಸಲಾಗುವುದಿಲ್ಲ, ಇದು ಸಂಪೂರ್ಣ ಉಚಿತವಾಗಿದೆ.

ಕೈಲಾಸಗಿರಿ ಪ್ರವಾಸಿಗರ ಆಕರ್ಷಣೆಯ ಕೇಂದ್ರ:

ಕೈಲಾಸಗಿರಿಯಲ್ಲಿ ಈಗಾಗಲೇ ರೋಪ್‌ವೇ, ಗಾಜಿನ ಸೇತುವೆ, ಟಾಯ್ ಟ್ರೈನ್ ಮತ್ತು ವಸ್ತುಸಂಗ್ರಹಾಲಯಗಳಂತಹ ಆಕರ್ಷಣೆಗಳಿವೆ. ಈಗ ಸೇರ್ಪಡೆಯಾಗಿರುವ ಈ ತ್ರಿಶೂಲವು ಆಧ್ಯಾತ್ಮಿಕತೆ ಮತ್ತು ಪ್ರವಾಸೋದ್ಯಮ ಎರಡನ್ನೂ ಬೆಸೆಯುವ ಪ್ರಯತ್ನವಾಗಿದೆ. ಪ್ರತಿ ವರ್ಷ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಈ ಬೆಟ್ಟಕ್ಕೆ, ಈ ಹೊಸ ಯೋಜನೆಯಿಂದಾಗಿ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್ – Kannada News | TVK Chief Vijay reaches Lok Bhavan to meet Governor for third Time

ಚೆನ್ನೈ, ಮೇ 8: ತಮಿಳುನಾಡಿನಲ್ಲಿ ನೂತನ ಸರ್ಕಾರ ರಚನೆಗೆ ಕೊನೆಗೂ ಕಾಲ ಕೂಡಿಬಂದಿದೆ. ಟಿವಿಕೆ ಮುಖ್ಯಸ್ಥ ವಿಜಯ್ (Vijay) ಮೂರನೇ ಬಾರಿಗೆ ರಾಜ್ಯಪಾಲರನ್ನು ಭೇಟಿ ಮಾಡಲು ಲೋಕಭವನಕ್ಕೆ ಆಗಮಿಸಿದ್ದಾರೆ. ಬಹುಮತ ಸಾಬೀತುಪಡಿಸಲು 118 ಶಾಸಕರ ಬೆಂಬಲ ಪತ್ರವನ್ನು ವಿಜಯ್ ಅವರು ರಾಜ್ಯಪಾಲರಿಗೆ ನೀಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಟಿವಿಕೆ ಮುಖ್ಯಸ್ಥ ವಿಜಯ್ ತಮಿಳುನಾಡಿನಲ್ಲಿ ಹೊಸ ಸರ್ಕಾರ ರಚನೆ ಕುರಿತು ಚರ್ಚಿಸಲು ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರನ್ನು ಭೇಟಿ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಠ ಬಿಡದ ‘ದ್ರೌಪದಿ’ಗೆ ಪಶ್ಚಿಮ ಬಂಗಾಳದ ಉಪ ಮುಖ್ಯಮಂತ್ರಿ ಪಟ್ಟ, ಯಾರು ಈ ರೂಪಾ ಗಂಗೂಲಿ? – Kannada News | Roopa Ganguly to became West Bengal DCM, Who is she what is her background

ಕೌರವರ ಪತನಕ್ಕಾಗಿ ಪಣತೊಟ್ಟು ಮುಡಿ ಕಟ್ಟದೆ ಕಾದಿದ್ದಳು ಮಹಾಭಾರತದ ದ್ರೌಪದಿ. ಅದೇ ಹಠದಿಂದ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪತನಕ್ಕಾಗಿ ದಶಕದಿಂದ ಕಾದಿದ್ದ ‘ದ್ರೌಪದಿ’ಗೆ ಈಗ ಪಶ್ಚಿಮ ಬಂಗಾಳದ (west Bengal) ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡಿದೆ ಬಿಜೆಪಿ. ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರ ಹಿಡಿದಿದೆ. ಸತತ ಹೊರಾಟ, ಪ್ರಯತ್ನಗಳ ಬಳಿಕ ಕೊನೆಗೂ ಮಮತಾ ಬ್ಯಾನರ್ಜಿಯನ್ನು ಕುರ್ಚಿಯಿಂದ ಕೆಳಗಿಳಿಸಿರುವ ಬಿಜೆಪಿ ಇದೀಗ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಸುವೇಂದು ಅಧಿಕಾರಿ ಇದೀಗ ಪಶ್ಚಿಮ ಬಂಗಾಳದ ಮೊಟ್ಟ ಮೊದಲ ಬಿಜೆಪಿ ಸಿಎಂ ಆಗಲಿದ್ದಾರೆ. ಮಾತ್ರವಲ್ಲದೆ, ಇಬ್ಬರನ್ನು ಡಿಸಿಎಂ ಅನ್ನಾಗಿ ಸಹ ಆಯ್ಕೆ ಮಾಡಲಾಗಿದ್ದು, ಅವರಲ್ಲಿ ಒಬ್ಬರು ನಟಿ ರೂಪಾ ಗಂಗೂಲಿ.

ರೂಪಾ ಗಂಗೂಲಿ ಎಂದರೆ ಹೆಚ್ಚು ಜನರಿಗೆ ತಿಳಿಯಲಿಕ್ಕಿಲ್ಲ, ಆದರೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ‘ಮಹಾಭಾರತ’ ಧಾರಾವಾಹಿಯ ದ್ರೌಪದಿ ಎಂದರೆ ಥಟ್ಟನೆ ನೆನಪಾಗುತ್ತದೆ. ಅದೇ ‘ದ್ರೌಪದಿ’ ಪಾತ್ರಧಾರಿ ರೂಪಾ ಗಂಗೂಲಿ ಈಗ ಪಶ್ಚಿಮ ಬಂಗಾಳದ ಉಪ ಮುಖ್ಯಮಂತ್ರಿ. ರೂಪಾ ಗಂಗೂಲಿ ಅವರದ್ದು ಟಿವಿ ಮತ್ತು ಸಿನಿಮಾ ಕ್ಷೇತ್ರದಲ್ಲಿ ಬಹು ದೊಡ್ಡ ಹೆಸರು. ರಾಜಕೀಯಕ್ಕೆ ಕಾಲಿಟ್ಟಮೇಲೂ ನಟನೆ ಮುಂದುವರೆಸಿದ್ದ ರೂಪಾ ಗಂಗೂಲಿ ಅವರಿಗೆ ಈಗಲೂ  ಸಿನಿಮಾ ರಂಗದಲ್ಲಿ ಬಹಳ ಬೇಡಿಕೆ ಇದೆ. ಆದರೆ ಈಗ ಉಪ ಮುಖ್ಯಮಂತ್ರಿ ಆದ ಬಳಿಕ ಅವರು ನಟನೆ ಮುಂದುವರೆಸುತ್ತಾರೋ ಇಲ್ಲವೋ ನೋಡಬೇಕು.

ರಾಜಕೀಯ ಜರ್ನಿ

ರೂಪಾ ಗಂಗೂಲಿ ಸಿನಿಮಾ ರಂಗದಲ್ಲಿ ಸೌಮ್ಯ, ಸುಂದರ ನಾಯಕಿಯಾಗಿ ಕಾಣಿಸಿಕೊಂಡಿದ್ದೇ ಹೆಚ್ಚು, ಆದರೆ ರಾಜಕೀಯದಲ್ಲಿ ಅವರದ್ದು ಹೋರಾಟದ ಹಾದಿ. 2015 ರಲ್ಲಿ ಬಿಜೆಪಿ ಸೇರುವ ಮೂಲಕ ಅವರು ರಾಜಕೀಯಕ್ಕೆ ಪದಾರ್ಪಣೆ ಮಾಡಿದರು. ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ಹವಾ ಬಲು ಜೋರಾಗಿದ್ದ ಕಾಲವದು. ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಯಾವ ಕಾಲದಲ್ಲೂ ಸುಲಭವಾಗಿರಲಿಲ್ಲ. ರಾಜಕೀಯ ಹಿಂಸಾಚಾರವಂತೂ ‘ಸಾಮಾನ್ಯ’ ಎಂಬಂತಿತ್ತು, ಅಂಥಹಾ ಸಮಯದಲ್ಲೂ ಗಟ್ಟಿ ಮನಸ್ಸು ಮಾಡಿ, ದೊಡ್ಡ ಪಕ್ಷದ ವಿರುದ್ಧ ಪಕ್ಷ ಸಂಘಟನೆ ಶುರು ಮಾಡಿದರು ರೂಪಾ ಗಂಗೂಲಿ.

2015 ರಲ್ಲಿ ಪಶ್ಚಿಮ ಬಂಗಾಳ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಆದ ರೂಪಾ ಗಂಗೂಲಿ, 2016 ರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು. ಆದರೆ ಛಲ ಬಿಡದೆ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು ರೂಪಾ. ಅದೇ ವರ್ಷ ಮೇ ತಿಂಗಳಲ್ಲಿ ಚುನಾವಣಾ ಹಿಂಸಾಚಾರದ ಸಂತ್ರಸ್ತರನ್ನು ಭೇಟಿಯಾಗಿ ಮರಳಿ ಬರುವಾಗ ಟಿಎಂಸಿ ಕಾರ್ಯಕರ್ತರು ರೂಪಾ ಅವರ ಮೇಲೆ ದಾಳಿ ನಡೆಸಿ ಹಲ್ಲೆ ಮಾಡಿದರು. ಹಲ್ಲೆಯಲ್ಲಿ ರೂಪಾ ಅವರ ತಲೆಗೆ ಗಂಭೀರ ಪೆಟ್ಟಾಗಿತ್ತು. ಅವರು ಆಸ್ಪತ್ರೆ ಸಹ ಸೇರಿದರು. ಅದೇ ವರ್ಷ ಅವರನ್ನು ರಾಜ್ಯಸಭೆಗೆ ನಾಮಿನೇಟ್ ಮಾಡಿ ಕಳಿಸಿತು ಬಿಜೆಪಿ. 2022 ರಲ್ಲಿ ತಮ್ಮ ಅವಧಿ ಮುಗಿಸಿದ ರೂಪಾ, ಈಗ ಮತ್ತೆ ಚುನಾವಣೆ ಸ್ಪರ್ಧಿಸಿ ಗೆದ್ದಿಲ್ಲದೆ, ಉಪ ಮುಖ್ಯಮಂತ್ರಿ ಸಹ ಆಗಲಿದ್ದಾರೆ.

ವೈಯಕ್ತಿಕ ಜೀವನ

ಇನ್ನು ರೂಪಾ ಅವರ ವೈಯಕ್ತಿಕ ಜೀವನ ಗಮನಿಸುವುದಾದರೆ ರೂಪಾ ಅವರು ಎಂಜಿನಿಯರ್ ಒಬ್ಬರನ್ನು 1992 ರಲ್ಲಿ ವಿವಾಹವಾಗಿ ಅವರಿಂದ ಒಂದು ಗಂಡು ಮಗುವನ್ನೂ ಪಡೆದರು. ಆದರೆ 2007 ರಲ್ಲಿ ಇಬ್ಬರೂ ವಿಚ್ಛೇದನ ಪಡೆದು ದೂರಾದರು. ಬಳಿಕ ರೂಪಾ ಅವರು ಬೆಂಗಾಲಿ ಗಾಯಕ ದಿವ್ಯೇಂದು ಮುಖರ್ಜಿ ಜೊತೆಗೆ ಲಿವಿನ್ ರಿಲೇಷನ್​​ನಲ್ಲಿದ್ದರು. ರೂಪಾ ಮತ್ತು ದಿವ್ಯೇಂದು ಮುಂಬೈನಲ್ಲಿ ಒಟ್ಟಿಗೆ ಹಲವು ವರ್ಷ ಇದ್ದರು. ಬಳಿಕ ಇಬ್ಬರೂ ದೂರಾದರು. ಆದರೆ ಆ ಬಳಿಕವೂ ಅವರು ಗೆಳೆತನ ಕಾಪಾಡಿಕೊಂಡಿದ್ದಾರೆ. ಪ್ರಸ್ತುತ ರೂಪಾ ಅವರು ಒಂಟಿ. ಪುತ್ರ ಜೊತೆಗಿದ್ದಾನೆ.

ಸಿನಿಮಾ ಜರ್ನಿ

ರೂಪಾ ಗಂಗೂಲಿ ಅದ್ಭುತ ನಟಿಯಾಗಿದ್ದವರು. ಟಿವಿ ಧಾರಾವಾಹಿ ಮಾತ್ರವೇ ಅಲ್ಲದೆ ಹಿಂದಿ, ಕನ್ನಡ, ತೆಲುಗು, ಒಡಿಯಾ, ಮಲಯಾಳಂ, ಮರಾಠಿ, ಬೆಂಗಾಲಿ, ಅಸ್ಸಾಮಿ ಹೀಗೆ ಹಲವಾರು ಭಾಷೆಯ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಕನ್ನಡದಲ್ಲಿ ಅವರು ವಿಷ್ಣುವರ್ಧನ್ ಜೊತೆಗೆ ‘ಪೊಲೀಸ್ ಮತ್ತು ದಾದ’, ‘ಕದನ’, ‘ಸಿಬಿಐ ವಿಜಿ’, ‘ಬಹದ್ಧೂರ್ ಹೆಣ್ಣು’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗಲೂ ಅವರ ಕೈಯಲ್ಲಿ ಮೂರು ಸಿನಿಮಾಗಳಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಂಗಳೂರಿಗರ ಬಹುವರ್ಷಗಳ ಬೇಡಿಕೆ ಶೀಘ್ರ ಈಡೇರಿಕೆ: ಸುತ್ತಿ ಬಳಸಿ ಓಡಾಟಕ್ಕೆ ಬೀಳಲಿದೆ ಬ್ರೇಕ್ – Kannada News | Mangaluru–Tannirubavi Bridge Work Near Completion, Likely to Open in August or September: Dinesh Gundu Rao

ಮಂಗಳೂರು-ತಣ್ಣೀರುಬಾವಿ ಬ್ರಿಡ್ಜ್Image Credit source: tv9 kannada

ಮಂಗಳೂರು, ಮೇ 08: ಮಂಗಳೂರು-ತಣ್ಣೀರುಬಾವಿ ಬ್ರಿಡ್ಜ್​​ (Mangaluru Tannirbhavi Bridge) ಮಂಗಳೂರಿನ ಬಹುವರ್ಷದ ಬೇಡಿಕೆ. ಸದ್ಯ ಬ್ರಿಡ್ಜ್ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದು, ಆಗಸ್ಟ್ ಅಥವಾ ಸೆಪ್ಟೆಂಬರ್​​ನಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ತಿಳಿಸಿದ್ದಾರೆ. ಆ ಮೂಲಕ ತಣ್ಣೀರುಬಾವಿ ಬೀಚ್‌ಗೆ ತೆರಳಲು ದಶಕಗಳಿಂದ ಇದ್ದ ಸಂಚಾರ ಸಂಕಷ್ಟಕ್ಕೆ ಶೀಘ್ರದಲ್ಲೇ ಪರಿಹಾರ ಸಿಗಲಿದೆ.

  • 64 ಕೋಟಿ ರೂ ವೆಚ್ಚದಲ್ಲಿ 285 ಮೀಟರ್ ಉದ್ದದ ಸೇತುವೆ ನಿರ್ಮಾಣ
  • 30-35 ನಿಮಿಷ ಬೇಕಾಗುವ ಪ್ರಯಾಣದ ಸಮಯ ಈ ಸೇತುವೆ ಮೂಲಕ ಕೇವಲ 10 ನಿಮಿಷಕ್ಕೆ ಕಡಿತ
  • ಆಗಸ್ಟ್ ಅಥವಾ ಸೆಪ್ಟೆಂಬರ್​​ನಲ್ಲಿ ಲೋಕಾರ್ಪಣೆ ಸಾಧ್ಯತೆ

ತಣ್ಣೀರುಬಾವಿ ಬೀಚ್‌ ಮಂಗಳೂರು ಸಿಟಿಗೆ ಹೊಂದಿಕೊಂಡಿರುವ ಬೀಚ್. ಮಂಗಳೂರು ಸಿಟಿಯ ಒಂದು ತುದಿಯಿಂದ ಸುಮಾರು ಒಂದೂವರೆ ಕಿ.ಮೀ ದೂರದಲ್ಲಿರುವ ಈ ಬೀಚ್​​ಗೆ ವಾಹನದಲ್ಲಿ ಹೋಗಬೇಕು ಅಂದರೆ 15 ರಿಂದ 20 ಕಿ.ಮೀ ಸುತ್ತಿಕೊಂಡು ಹೋಗಬೇಕಿತ್ತು. ಆದರೆ ಫೆರಿಯಲ್ಲಿ ಹೋಗೋದಾದರೆ ಕೆಲವೇ ಮೀಟರ್ ಕ್ರಮಿಸಿದರೆ ಸಾಕಿತ್ತು.

ಇದನ್ನೂ ಓದಿ: ಸಮುದ್ರ ಇದ್ರೂ ಮಂಗಳೂರಿನಲ್ಲಿ ನೀರಿಗೆ ಬರ: ವಾಹನಗಳನ್ನ ತೊಳೆಯದಂತೆ ಸೂಚನೆ

ಇನ್ನು ತಣ್ಣೀರುಬಾವಿ ಸುತ್ತಾಮುತ್ತಾ 4 ಸಾವಿರಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದು, ಅವರು ಮಂಗಳೂರಿಗೆ ಬರಬೇಕು ಅಂದರೆ ಫೆರಿಯಲ್ಲಿ ಬರಬೇಕಿತ್ತು. ರಸ್ತೆ ಮೂಲಕ ಬರಬೇಕು ಅಂದರೆ ಮತ್ತೆದೇ 15 ಕಿ.ಮೀ ಸುತ್ತಾಟ. ಆದ್ದರಿಂದ ಮೆಡಿಕಲ್ ಎಮರ್ಜೆನ್ಸಿ ಸೇರಿದಂತೆ ವಿವಿಧ ರೀತಿಯಲ್ಲಿ ಜನರಿಗೆ ತೊಂದರೆ ಆಗುತ್ತಿತ್ತು. ಆದರೆ ಇದೀಗ ಫಲ್ಗುಣಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡುತ್ತಿರುವುದರಿಂದ ಇದಕ್ಕೆ ಮುಕ್ತಿ ಸಿಗಲಿದೆ.

ವೆಚ್ಚ ಮತ್ತು ವಿನ್ಯಾಸ

64 ಕೋಟಿ ರೂ ವೆಚ್ಚದಲ್ಲಿ ಒಟ್ಟು 285 ಮೀಟರ್ ಸೇತುವೆ ಇದಾಗಿದ್ದು, 100 ಮೀಟರ್ ಬೋ-ಸ್ಟ್ರಿಂಗ್ ಸೇತುವೆ ನಿರ್ಮಾಣ ಮಾಡುಲಾಗುತ್ತಿದೆ. ಆ ಮೂಲಕ 30 ರಿಂದ 35 ನಿಮಿಷ ಸಾಗುವ ದಾರಿಯನ್ನು 8 ರಿಂದ 10 ನಿಮಿಷಕ್ಕೆ ಇಳಿಸುವಲ್ಲಿ ಈ ಸೇತುವೆ ಉಪಯೋಗಕಾರಿಯಾಗಿದೆ. ಈ ಸೇತುವೆ ಎಲ್ಲಾ ಮಾದರಿಯ ವಾಹನಗಳು ಸಂಚಾರ ಮಾಡುವ ಸಾಮರ್ಥ್ಯ ಹೊಂದಿದೆ. ಈ ಬ್ರಿಡ್ಜ್ ಆಗಸ್ಟ್ ಅಥವಾ ಸೆಪ್ಟೆಂಬರ್​ನಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ದೇಶದಲ್ಲೇ ಮೊದಲ ಬಾರಿಗೆ ‘ಧಾರ್ಮಿಕ ತ್ಯಾಜ್ಯ ವಿಲೇವಾರಿ’ ಅಭಿಯಾನಕ್ಕೆ ಸಾಕ್ಷಿಯಾದ ಮಂಗಳೂರು

ಇನ್ನೇನು ಮಳೆಗಾಲ ಆರಂಭವಾಗುತ್ತಿದೆ. ಹೀಗಾಗಿ ಕಾಮಗಾರಿ ಅದೆಷ್ಟು ವೇಗವಾಗಿ ಸಾಗುತ್ತದೆ ಎನ್ನುವುದು ಮುಂದಿರುವ ಪ್ರಶ್ನೆ. ಇನ್ನು ಸಚಿವರು ಲೋಕಾರ್ಪಣೆ ತಿಂಗಳು ಫಿಕ್ಸ್ ಮಾಡಿ ಹೋಗಿದ್ದಾರೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಅದಕ್ಕೆ ಬದ್ಧರಾಗಿರುತ್ತಾರಾ ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಭಾರತದ ಜಿಡಿಪಿ ಲೆಕ್ಕಾಚಾರದಲ್ಲಿ ಬದಲಾವಣೆ: ಮೂಲ ವರ್ಷ 2022-23ಕ್ಕೆ ವರ್ಗಾವಣೆ – ಇದರ ಅರ್ಥ ಮತ್ತು ಪರಿಣಾಮಗಳೇನು? – Kannada News | India’s GDP Base Year Shift from 2011 12 to 2022 23: Reasons, Impacts & New Calculations

ನವದೆಹಲಿ, ಮೆ 8: ಭಾರತ ಸರ್ಕಾರವು ದೇಶದ ಆರ್ಥಿಕ ಪ್ರಗತಿಯನ್ನು ಅಳೆಯುವ ಜಿಡಿಪಿ (GDP- ಒಟ್ಟು ದೇಶೀಯ ಉತ್ಪನ್ನ) ಲೆಕ್ಕಾಚಾರದ ಮೂಲ ವರ್ಷವನ್ನು (Base Year) 2011-12ರಿಂದ 2022-23ಕ್ಕೆ ಬದಲಾಯಿಸಿದೆ. ಈ ಬದಲಾವಣೆಯು ದೇಶದ ಆರ್ಥಿಕತೆಯ ನೈಜ ಚಿತ್ರಣವನ್ನು ನೀಡಲು ಸಹಕಾರಿಯಾಗಲಿದೆ. ಜಿಡಿಪಿ ಲೆಕ್ಕಾಚಾರ ಮಾಡುವಾಗ ಬೆಲೆ ಏರಿಕೆಯ (ಹಣದುಬ್ಬರ) ಪ್ರಭಾವವನ್ನು ಹೊರತುಪಡಿಸಿ, ಕೇವಲ ಉತ್ಪಾದನೆಯಲ್ಲಿನ ನೈಜ ಬೆಳವಣಿಗೆಯನ್ನು ಅಳೆಯಲು ಒಂದು ನಿರ್ದಿಷ್ಟ ವರ್ಷದ ಬೆಲೆಗಳನ್ನು ಆಧಾರವಾಗಿಟ್ಟುಕೊಳ್ಳಲಾಗುತ್ತದೆ. ಇದನ್ನೇ ‘ಮೂಲ ವರ್ಷ’ ಎನ್ನಲಾಗುತ್ತದೆ. ಇದುವರೆಗೆ 2011-12ರ ಬೆಲೆಗಳನ್ನು ಆಧರಿಸಿ ಜಿಡಿಪಿ ಲೆಕ್ಕ ಹಾಕಲಾಗುತ್ತಿತ್ತು. ಆದರೆ, ಪರಿಸ್ಥಿತಿ ಈಗ ಬದಲಾಗಿರುವ ಕಾರಣ ಜಿಡಿಪಿ ಲೆಕ್ಕಾಚಾರದ ಕ್ರಮಗಳಲ್ಲೂ ಬದಲಾವಣೆ ಮಾಡಬೇಕಾಗಿದೆ.

ಮೂಲ ವರ್ಷ ಬದಲಾವಣೆ ಯಾಕೆ?

ಕಳೆದ ಹತ್ತು ವರ್ಷಗಳಲ್ಲಿ ಭಾರತದ ಆರ್ಥಿಕ ರಚನೆ ಬದಲಾಗಿದೆ. ಡಿಜಿಟಲ್ ಸೇವೆಗಳು, ಗಿಗ್ ಎಕಾನಮಿ (Gig Economy) ಮತ್ತು ನವೋದ್ಯಮಗಳ ಪಾಲು ಹೆಚ್ಚಾಗಿದೆ. ಹಳೆಯ ಮೂಲ ವರ್ಷವು ಈ ಹೊಸ ಬದಲಾವಣೆಗಳನ್ನು ಸರಿಯಾಗಿ ಗುರುತಿಸುತ್ತಿರಲಿಲ್ಲ.

ಇದನ್ನೂ ಓದಿ: ಬೈನಾನ್ಸ್‌ನಿಂದ ಹೊಸ ‘ವಿತ್‌ಡ್ರಾ ಪ್ರೊಟೆಕ್ಷನ್’: ಬಳಕೆದಾರರ ಕ್ರಿಪ್ಟೋ ಆಸ್ತಿಗಳಿಗೆ ಈಗ ಹೆಚ್ಚುವರಿ ಭದ್ರತೆ

2019 ರಿಂದ 2021ರ ಅವಧಿಯು ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಆರ್ಥಿಕ ಏರಿಳಿತ ಕಂಡಿತ್ತು. 2022-23 ವರ್ಷವು ಒಂದು ‘ಸಾಮಾನ್ಯ’ (Normal) ವರ್ಷವೆಂದು ಪರಿಗಣಿಸಲ್ಪಟ್ಟಿದ್ದರಿಂದ ಅದನ್ನು ಮೂಲ ವರ್ಷವಾಗಿ ಆಯ್ಕೆ ಮಾಡಲಾಗಿದೆ.

ಈಗ ಜಿಎಸ್ಟಿ (GST), ಇ-ವಾಹನ್ ಪೋರ್ಟಲ್ ಮತ್ತು ಹೊಸ ಕಾರ್ಮಿಕ ಸಮೀಕ್ಷೆಗಳಂತಹ ಆಧುನಿಕ ದತ್ತಾಂಶಗಳನ್ನು ಲೆಕ್ಕಾಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ.

ಮೂಲ ವರ್ಷ ಬದಲಾವಣೆಯಿಂದ ಪರಿಣಾಮಗಳೇನು?

ಹೊಸ ಮೂಲ ವರ್ಷದ ಅನ್ವಯ 2025-26ರ ಹಣಕಾಸು ವರ್ಷದ ಅಂದಾಜು ಜಿಡಿಪಿ ಬೆಳವಣಿಗೆ ದರವು ಶೇ. 7.4 ರಿಂದ ಶೇ. 7.6ಕ್ಕೆ ಏರಿಕೆ ಆಗಬಹುದು. ಕೃಷಿ ಮತ್ತು ಕೈಗಾರಿಕಾ ವಲಯದ ಪಾಲು ಜಿಡಿಪಿಯಲ್ಲಿ ಸ್ವಲ್ಪ ಮಟ್ಟಿಗೆ ಹೆಚ್ಚಾಗಿದ್ದು, ಸೇವಾ ವಲಯದ ಪಾಲಿನಲ್ಲಿ ಅಲ್ಪ ಇಳಿಕೆ ಕಂಡುಬಂದಿದೆ.

ಜಿಡಿಪಿ ಲೆಕ್ಕಾಚಾರವು ಹೆಚ್ಚು ಪಾರದರ್ಶಕ ಮತ್ತು ನಿಖರವಾಗಿರುವುದರಿಂದ ಅಂತರಾಷ್ಟ್ರೀಯ ಹೂಡಿಕೆದಾರರಿಗೆ ಭಾರತದ ಆರ್ಥಿಕತೆಯ ಮೇಲೆ ಹೆಚ್ಚಿನ ವಿಶ್ವಾಸ ಮೂಡಲಿದೆ.

ಇದನ್ನೂ ಓದಿ: ಆಯುಷ್ಮಾನ್ ಭಾರತ್ ಹೆಲ್ತ್ ಇನ್ಷೂರೆನ್ಸ್; ಬೆಂಗಳೂರಿನಲ್ಲಿ ಎಐ ಹ್ಯಾಕಥಾನ್ ಶೋಕೇಸ್

ಜಿಡಿಪಿ ಲೆಕ್ಕಾಚಾರದಲ್ಲಿ ಕೆಲ ಪ್ರಮುಖ ಬದಲಾವಣೆಗಳಿವು, ಗಮನಿಸಿ

  1. ಉತ್ಪಾದನಾ ವಲಯದಲ್ಲಿ ‘ಡಬಲ್ ಡಿಫ್ಲೇಶನ್’ (Double Deflation) ಎಂಬ ಹೊಸ ತಂತ್ರಜ್ಞಾನ ಬಳಸಿ ಬೆಲೆ ಏರಿಕೆಯನ್ನು ಹೆಚ್ಚು ನಿಖರವಾಗಿ ಸರಿಹೊಂದಿಸಲಾಗುತ್ತಿದೆ.
  2. ಅನೌಪಚಾರಿಕ ವಲಯದ (Unorganised Sector) ಲೆಕ್ಕಾಚಾರಕ್ಕಾಗಿ ಹೊಸ ವಾರ್ಷಿಕ ಸಮೀಕ್ಷೆಗಳನ್ನು (ASUSE) ಬಳಸಲಾಗುತ್ತಿದೆ.

ಈ ಬದಲಾವಣೆಯು ಭಾರತವನ್ನು ವಿಶ್ವದ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿ ಮತ್ತಷ್ಟು ಬಲವಾಗಿ ಬಿಂಬಿಸಲು ಸಹಾಯ ಮಾಡಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಾಳೆ ಸುವೇಂದು ಅಧಿಕಾರಿ ಪ್ರಮಾಣವಚನ ಸ್ವೀಕಾರ; ಮಮತಾ ಬ್ಯಾನರ್ಜಿ ಬರುತ್ತಾರಾ? – Kannada News | Will Mamata Banerjee Attend West Bengal BJP CM Suvendu Adhikaris oath taking ceremony

ಕೊಲ್ಕತ್ತಾ, ಮೇ 8: ಇಂದು ಕೊಲ್ಕತ್ತಾದಲ್ಲಿ ಬಿಜೆಪಿ ಕೇಂದ್ರ ವೀಕ್ಷಕ ಅಮಿತ್ ಶಾ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಸುವೇಂದು ಅಧಿಕಾರಿ (Suvendu Adhikari) ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಆಯ್ಕೆಯಾಗಿದ್ದಾರೆ. ನಾಳೆ ನಡೆಯಲಿರುವ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಇತರ ಕೇಂದ್ರ ಸಚಿವರು ಉಪಸ್ಥಿತರಿರುತ್ತಾರೆ. ಹಾಗೇ, ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ನಾಳೆಯ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಈ ಅದ್ದೂರಿ ಕಾರ್ಯಕ್ರಮಕ್ಕೆ ಸ್ಥಳದಲ್ಲಿ ಸಿದ್ಧತೆಗಳು ನಡೆಯುತ್ತಿವೆ.

ಪಶ್ಚಿಮ ಬಂಗಾಳ ರಾಜ್ಯಪಾಲ ಆರ್.ಎನ್. ರವಿ ಅವರು ಮೇ 7ರಂದು ಪಶ್ಚಿಮ ಬಂಗಾಳ ವಿಧಾನಸಭೆಯನ್ನು ಅಧಿಕೃತವಾಗಿ ವಿಸರ್ಜಿಸಿದರು. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರದ ನಿರ್ಗಮಿತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ರಾಜ್ಯಪಾಲರೇ ಸಂಪುಟವನ್ನು ವಿಸರ್ಜಿಸಿದರು. ಈಗ ಮಮತಾ ಬ್ಯಾನರ್ಜಿ ನಾಳೆ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸುತ್ತಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ಇದನ್ನೂ ಓದಿ: Suvendu Adhikari: ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಆಯ್ಕೆ; ನಾಳೆಯೇ ಪ್ರಮಾಣವಚನ

ಹೊಸ ಮುಖ್ಯಮಂತ್ರಿಯ ಪ್ರಮಾಣವಚನ ಸಮಾರಂಭದಲ್ಲಿ ನಿರ್ಗಮಿಸುವ ಮುಖ್ಯಮಂತ್ರಿ ಭಾಗವಹಿಸಬೇಕೆಂದು ಯಾವುದೇ ಸ್ಥಿರ ಸಾಂವಿಧಾನಿಕ ನಿಯಮ ಅಥವಾ ಕಠಿಣ ಶಾಸನಬದ್ಧ ಕಾನೂನು ಇಲ್ಲದಿದ್ದರೂ ಸಾಮಾನ್ಯವಾಗಿ ಮಾಜಿ ಮುಖ್ಯಮಂತ್ರಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಂಪ್ರದಾಯವಿದೆ. ನಿರ್ಗಮಿಸುವ ಮುಖ್ಯಮಂತ್ರಿ ಗಣ್ಯರನ್ನು ಸ್ವಾಗತಿಸಲು ಮತ್ತು ಹೊಸ ಸಿಎಂ ಅವರನ್ನು ಅಭಿನಂದಿಸಲು ಹಾಜರಿರುವುದು ವಾಡಿಕೆಯಾಗಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದ ಸಂಪುಟವನ್ನು ವಿಸರ್ಜಿಸಿದ ರಾಜ್ಯಪಾಲ; ಮಮತಾ ಬ್ಯಾನರ್ಜಿ ಈಗ ಮಾಜಿ ಸಿಎಂ

ಆದರೂ ರಾಜಕೀಯ ಭಿನ್ನಾಭಿಪ್ರಾಯ, ಉದ್ವಿಗ್ನ ಸಂಬಂಧಗಳು, ಆರೋಗ್ಯ ಕಾರಣಗಳು ಅಥವಾ ವೇಳಾಪಟ್ಟಿ ಸಮಸ್ಯೆಗಳಿಂದಾಗಿ ನಿರ್ಗಮಿತ ಮುಖ್ಯಮಂತ್ರಿಗಳು ನೂತನ ಮುಖ್ಯಮಂತ್ರಿಯ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ತಪ್ಪಿಸಿಕೊಂಡ ಹಲವಾರು ಉದಾಹರಣೆಗಳಿವೆ. ಅವರ ಅನುಪಸ್ಥಿತಿಯನ್ನು ಶಿಷ್ಟಾಚಾರದ ಉಲ್ಲಂಘನೆ ಎಂದು ಪರಿಗಣಿಸಲಾಗುವುದಿಲ್ಲ. ಹೀಗಾಗಿ, ನಾಳೆಯ ಕಾರ್ಯಕ್ರಮಕ್ಕೆ ಮಮತಾ ಬ್ಯಾನರ್ಜಿ ಆಗಮಿಸುವ ಸಾಧ್ಯತೆ ಇಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

DC vs KKR IPL 2026 Live Score: ಟಾಸ್ ಗೆದ್ದ ಕೆಕೆಆರ್ ಬೌಲಿಂಗ್ ಆಯ್ಕೆ – Kannada News | Delhi Capitals vs Kolkata Knight Riders IPL 2026 Live Cricket Score DC vs KKR Match on 8th May latest news in Kannada

2026 ರ ಐಪಿಎಲ್ ಟೂರ್ನಿಯ 51 ನೇ ಪಂದ್ಯ ದೆಹಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯುತ್ತಿದೆ. ವಾಸ್ತವವಾಗಿ, ಈ ಪಂದ್ಯ ಎರಡೂ ತಂಡಗಳಿಗೆ ಮಾಡು ಇಲ್ಲವೇ ಮಡಿ ಪರಿಸ್ಥಿತಿಯಾಗಿದೆ. ಪ್ಲೇಆಫ್ ರೇಸ್‌ನಲ್ಲಿ ಉಳಿಯಲು ಎರಡೂ ತಂಡಗಳು ಯಾವುದೇ ಬೆಲೆ ತೆತ್ತಾದರೂ ಈ ಪಂದ್ಯವನ್ನು ಗೆಲ್ಲಲೇಬೇಕು. ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದರೆ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಎಂಟನೇ ಸ್ಥಾನದಲ್ಲಿದೆ.

Source link

Exit mobile version