Headlines

ಭಾರತದ ಜಿಡಿಪಿ ಲೆಕ್ಕಾಚಾರದಲ್ಲಿ ಬದಲಾವಣೆ: ಮೂಲ ವರ್ಷ 2022-23ಕ್ಕೆ ವರ್ಗಾವಣೆ – ಇದರ ಅರ್ಥ ಮತ್ತು ಪರಿಣಾಮಗಳೇನು? – Kannada News | India’s GDP Base Year Shift from 2011 12 to 2022 23: Reasons, Impacts & New Calculations

ನವದೆಹಲಿ, ಮೆ 8: ಭಾರತ ಸರ್ಕಾರವು ದೇಶದ ಆರ್ಥಿಕ ಪ್ರಗತಿಯನ್ನು ಅಳೆಯುವ ಜಿಡಿಪಿ (GDP- ಒಟ್ಟು ದೇಶೀಯ ಉತ್ಪನ್ನ) ಲೆಕ್ಕಾಚಾರದ ಮೂಲ ವರ್ಷವನ್ನು (Base Year) 2011-12ರಿಂದ 2022-23ಕ್ಕೆ ಬದಲಾಯಿಸಿದೆ. ಈ ಬದಲಾವಣೆಯು ದೇಶದ ಆರ್ಥಿಕತೆಯ ನೈಜ ಚಿತ್ರಣವನ್ನು ನೀಡಲು ಸಹಕಾರಿಯಾಗಲಿದೆ. ಜಿಡಿಪಿ ಲೆಕ್ಕಾಚಾರ ಮಾಡುವಾಗ ಬೆಲೆ ಏರಿಕೆಯ (ಹಣದುಬ್ಬರ) ಪ್ರಭಾವವನ್ನು ಹೊರತುಪಡಿಸಿ, ಕೇವಲ ಉತ್ಪಾದನೆಯಲ್ಲಿನ ನೈಜ ಬೆಳವಣಿಗೆಯನ್ನು ಅಳೆಯಲು ಒಂದು ನಿರ್ದಿಷ್ಟ ವರ್ಷದ ಬೆಲೆಗಳನ್ನು ಆಧಾರವಾಗಿಟ್ಟುಕೊಳ್ಳಲಾಗುತ್ತದೆ. ಇದನ್ನೇ ‘ಮೂಲ ವರ್ಷ’ ಎನ್ನಲಾಗುತ್ತದೆ. ಇದುವರೆಗೆ 2011-12ರ ಬೆಲೆಗಳನ್ನು…

Read More

ನಾಳೆ ಸುವೇಂದು ಅಧಿಕಾರಿ ಪ್ರಮಾಣವಚನ ಸ್ವೀಕಾರ; ಮಮತಾ ಬ್ಯಾನರ್ಜಿ ಬರುತ್ತಾರಾ? – Kannada News | Will Mamata Banerjee Attend West Bengal BJP CM Suvendu Adhikaris oath taking ceremony

ಕೊಲ್ಕತ್ತಾ, ಮೇ 8: ಇಂದು ಕೊಲ್ಕತ್ತಾದಲ್ಲಿ ಬಿಜೆಪಿ ಕೇಂದ್ರ ವೀಕ್ಷಕ ಅಮಿತ್ ಶಾ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಸುವೇಂದು ಅಧಿಕಾರಿ (Suvendu Adhikari) ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಆಯ್ಕೆಯಾಗಿದ್ದಾರೆ. ನಾಳೆ ನಡೆಯಲಿರುವ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಇತರ ಕೇಂದ್ರ ಸಚಿವರು ಉಪಸ್ಥಿತರಿರುತ್ತಾರೆ. ಹಾಗೇ, ಬಿಜೆಪಿ…

Read More

DC vs KKR IPL 2026 Live Score: ಟಾಸ್ ಗೆದ್ದ ಕೆಕೆಆರ್ ಬೌಲಿಂಗ್ ಆಯ್ಕೆ – Kannada News | Delhi Capitals vs Kolkata Knight Riders IPL 2026 Live Cricket Score DC vs KKR Match on 8th May latest news in Kannada

2026 ರ ಐಪಿಎಲ್ ಟೂರ್ನಿಯ 51 ನೇ ಪಂದ್ಯ ದೆಹಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯುತ್ತಿದೆ. ವಾಸ್ತವವಾಗಿ, ಈ ಪಂದ್ಯ ಎರಡೂ ತಂಡಗಳಿಗೆ ಮಾಡು ಇಲ್ಲವೇ ಮಡಿ ಪರಿಸ್ಥಿತಿಯಾಗಿದೆ. ಪ್ಲೇಆಫ್ ರೇಸ್‌ನಲ್ಲಿ ಉಳಿಯಲು ಎರಡೂ ತಂಡಗಳು ಯಾವುದೇ ಬೆಲೆ ತೆತ್ತಾದರೂ ಈ ಪಂದ್ಯವನ್ನು ಗೆಲ್ಲಲೇಬೇಕು. ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದರೆ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಎಂಟನೇ ಸ್ಥಾನದಲ್ಲಿದೆ. Source link

Read More

ಹಂಟಾವೈರಸ್ ಎಂದರೇನು? ಇದು ಕೊರೊನಾದ ರೀತಿ ಹರಡುತ್ತದೆಯೇ? ಈ ಬಗ್ಗೆ ವೈದ್ಯರ ಅಭಿಪ್ರಾಯವೇನು? – Kannada News | Can Hantavirus Cause a Pandemic? Doctors Weigh In on Outbreak Risk

ಅಟ್ಲಾಂಟಿಕ್ ಸಮುದ್ರದಲ್ಲಿ ಸಂಚರಿಸುತ್ತಿದ್ದ ಡಚ್ ಎಕ್ಸ್‌ಪಿಡಿಷನ್ ಕ್ರೂಸ್ ಹಡಗಿನಲ್ಲಿ ಹಂಟಾವೈರಸ್ ಸೋಂಕು ಪತ್ತೆಯಾಗಿರುವುದು ಜಗತ್ತಿನ ಆರೋಗ್ಯ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಹಡಗಿನಲ್ಲಿ ಒಟ್ಟು 149 ಮಂದಿ ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದು, ಇವರಲ್ಲಿ ಇಬ್ಬರು ಭಾರತೀಯ ಸಿಬ್ಬಂದಿಯೂ ಸೇರಿದ್ದಾರೆ. ಈಗಾಗಲೇ ಮೂವರು ಸಾವನ್ನಪ್ಪಿದ್ದು, ಹಲವರು ಸೋಂಕಿಗೆ ಒಳಗಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತಿಳಿಸಿದೆ. ಹಾಗಾದರೆ ಹಂಟಾವೈರಸ್ (Hantavirus) ಎಂದರೇನು, ಇದು ಕೋವಿಡ್ (COVID-19) ರೀತಿಯಲ್ಲಿಯೇ ಹರಡುತ್ತದೆಯೇ, ಈ ಬಗ್ಗೆ ವೈದ್ಯರು ಏನು ಹೇಳುತ್ತಾರೆ…

Read More

ಶೃಂಗೇರಿ ಕ್ಷೇತ್ರದ ಅಂಚೆ‌ ಮತ ಎಣಿಕೆ ವಿವಾದ: ಜೋರಾದ ಅಣೆ ಪ್ರಮಾಣ ರಾಜಕೀಯ – Kannada News | Sringeri Assembly Poll postal vote Row: BJP Leaders Promise Infront of God over Fixing Allegations

ಚಿಕ್ಕಮಗಳೂರು, (ಮೇ 08): ಹೈಕೋರ್ಟ್ ಆದೇಶದಂತೆ 2023ರ ಚುನಾವಣೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ (sringeri assembly constituency) ಅಂಚೆ ಮತಗಳ (ballot paper) ಮರು‌ ಎಣಿಕೆ ಮಾಡಲಾಗಿದ್ದು, ಈ ವೇಳೆ ಬಿಜೆಪಿಯ ಜೀವರಾಜ್ ಗೆಲುವು ಸಾಧಿಸಿದ್ದಾರೆ. 2023ರ ಸಾರ್ವತ್ರಿಕ ಚುನಾವಣೆ ಫಲಿತಾಂಶದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ 201 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.ಆದ್ರೆ, ಮರು ಮತ ಎಣಿಕೆಯಲ್ಲಿ ಕಾಂಗ್ರೆಸ್​ಗೆ ಸೋಲಾಗಿದ್ದು, ಬಿಜೆಪಿ ಗೆದ್ದು ಬೀಗಿದೆ. ಇದರೊಂದಿಗೆ ಮೂರು ವರ್ಷಗಳ ಬಳಿಕ ಡಿ.ಎನ್.ಜೀವರಾಜ್ ಶಾಸಕರಾಗಿ ವಿಧಾನಸಭೆ ಪ್ರವೇಶ…

Read More

IPL 2026: ಟಾಪ್ 2 ಸ್ಥಾನಕ್ಕಾಗಿ 6 ತಂಡಗಳ ನಡುವೆ ಪೈಪೋಟಿ; ಯಾವ ತಂಡಕ್ಕೆ ಎಷ್ಟು ಗೆಲುವು ಬೇಕು? – Kannada News | IPL 2026 Top 2 Race: Six Teams Vying for Playoff Advantage and Final Path

ಐಪಿಎಲ್ 2026 (IPL 2026) ರ ಲೀಗ್ ಹಂತವು ಇನ್ನೇನು ಮುಗಿಯುವುದಕ್ಕೆ ಬಂತು. ಈಗಾಗಲೇ ಎಲ್ಲಾ ತಂಡಗಳು ತಲಾ 10 ಪಂದ್ಯಗಳನ್ನಾಡಿದ್ದು, ಅಂಕಪಟ್ಟಿಯಲ್ಲಿ ಟಾಪ್ 4 ಸ್ಥಾನಕ್ಕೇ ತೀವ್ರ ಪೈಪೋಟಿ ಏರ್ಪಟ್ಟಿದೆ. ಇದರ ಜೊತೆಗೆ, ಟಾಪ್-2 ಸ್ಥಾನಕ್ಕಾಗಿನ ಹೋರಾಟವು ಕೂಡ ಇನ್ನಷ್ಟು ಕುತೂಹಲಕಾರಿಯಾಗಿದೆ. ಟಾಪ್-2 ರಲ್ಲಿ ಸ್ಥಾನ ಪಡೆಯುವ ತಂಡಗಳಿಗೆ ಫೈನಲ್ ತಲುಪಲು ಎರಡು ಅವಕಾಶಗಳು ಸಿಗಲಿವೆ. ಅದಕ್ಕಾಗಿಯೇ ಪ್ರತಿ ತಂಡವು ಟಾಪ್ 2ರಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಿವೆ. ಪ್ರಸ್ತುತ, ಆರು ತಂಡಗಳು ಟಾಪ್-2 ಸ್ಥಾನಕ್ಕಾಗಿ ಸ್ಪರ್ಧಿಗಳಾಗಿವೆ….

Read More

ಬೈನಾನ್ಸ್‌ನಿಂದ ಹೊಸ ‘ವಿತ್‌ಡ್ರಾ ಪ್ರೊಟೆಕ್ಷನ್’: ಬಳಕೆದಾರರ ಕ್ರಿಪ್ಟೋ ಆಸ್ತಿಗಳಿಗೆ ಈಗ ಹೆಚ್ಚುವರಿ ಭದ್ರತೆ – Kannada News | Secure Your Crypto: Binance Rolls Out New Withdrawal Protection Feature

ನವದೆಹಲಿ, ಮೇ 8: ಕ್ರಿಪ್ಟೋಕರೆನ್ಸಿ ಎಕ್ಸ್ಚೇಂಜ್ ಸಂಸ್ಥೆಯಾದ ಬೈನಾನ್ಸ್ (Binance) ತನ್ನ ಬಳಕೆದಾರರ ಸುರಕ್ಷತೆಗಾಗಿ ‘ವಿತ್‌ಡ್ರಾ ಪ್ರೊಟೆಕ್ಷನ್’ (Withdraw Protection) ಎಂಬ ಹೊಸ ಸೆಕ್ಯೂರಿಟಿ ಫೀಚರ್ ಅನ್ನು ಪರಿಚಯಿಸಿದೆ. ಬೈನಾನ್ಸ್ ಬಳಕೆದಾರರು ತಮ್ಮ ಖಾತೆಯಿಂದ ಹಣ ಅಥವಾ ಕ್ರಿಪ್ಟೋವನ್ನು ಬೇರೆಡೆಗೆ ವರ್ಗಾಯಿಸದಂತೆ (Withdrawal) ತಾವೇ ಸ್ವತಃ ತಾತ್ಕಾಲಿಕವಾಗಿ ಲಾಕ್ ಮಾಡಿಕೊಳ್ಳುವ ಸೌಲಭ್ಯ ಇದಾಗಿದೆ. ಬಳಕೆದಾರರು 1 ರಿಂದ 7 ದಿನಗಳವರೆಗೆ ಈ ಲಾಕ್ ಅವಧಿಯನ್ನು ನಿಗದಿಪಡಿಸಬಹುದು. ವಿತ್​ಡ್ರಾ ಪ್ರೊಟೆಕ್ಷನ್ ಫೀಚರ್​ನ ಪ್ರಮುಖ ಉದ್ದೇಶಗಳೇನು? ಬಲವಂತದ ವರ್ಗಾವಣೆ ತಡೆ:…

Read More

ಕರ್ನಾಟಕ ಹವಾಮಾನ: 10 ಜಿಲ್ಲೆಗಳಲ್ಲಿ ನಾಳೆ ಸಾಧಾರಣ ಮಳೆ; ಉತ್ತರ ಕರ್ನಾಟದಲ್ಲಿ ಬಿಸಿಲಿನಬ್ಬರ – Kannada News | Karnataka weather alert moderate rain likely in 10 districts tomorrow

ಬೆಂಗಳೂರು, ಮೇ 08: ರಾಜ್ಯದ ಹಲವೆಡೆ ಬಿಸಿಲಿನ ಅಬ್ಬರದ ನಡುವೆಯೂ ಕರಾವಳಿ ಸೇರಿ ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಅಥವಾ ಮಧ್ಯಮ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಮುಂದಿನ ಮೂರು ದಿನಗಳ ಕಾಲ ಕರ್ನಾಟಕದಲ್ಲಿ ಮಳೆ ಮುಂದುವರಿಯಲಿದ್ದು, ಮೇ 11ರ ವರೆಗೂ ಕೆಲವೆಡೆ ಗುಡುಗು ಸಹಿತ ಮಳೆಯನ್ನು ಅಂದಾಜಿಸಲಾಗಿದೆ. ಅದಾಗಿಯೂ ಕರಾವಳಿ ಸೇರಿ ಉತ್ತರ ಒಳನಾಡು ಭಾಗದ ಜಿಲ್ಲೆಗಳಲ್ಲಿ ತೀವ್ರ ತಾಪಮಾನ ಕಂಡುಬರಲಿದೆ ಎನ್ನಲಾಗಿದೆ. ಎಲ್ಲೆಲ್ಲಿ ಮಳೆ? #ಮಳೆ #ಮುನ್ನೆಚ್ಚರಿಕೆ…

Read More

ಜಗದ್ಗುರುಗಳ ಸಮ್ಮುಖದಲ್ಲಿ ಸ್ವಾಮೀಜಿ-ಭಕ್ತರ ಸಂಧಾನ: ಏನಿದು ಕುಂದಗೋಳ ಮಠದ ವಿವಾದ? – Kannada News | Kundgol Panchagrah Hiremath Property Dispute Resolved: Swamiji Agrees Not to Sell Land

ಹುಬ್ಬಳ್ಳಿ, ಮೇ 08: ಧಾರವಾಡ (dharwad) ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿರುವ ಪಂಚಗ್ರಹ ಹಿರೇಮಠ (Panchagrah Hiremath) ಐತಿಹಾಸಿಕ ಹಿನ್ನೆಲೆಯುಳ್ಳ ದೊಡ್ಡ ಮಠ. ಆದರೆ ಇದೇ ಮಠದ ಆಸ್ತಿ ವಿಚಾರ ಸ್ವಾಮೀಜಿ ಮತ್ತು ಭಕ್ತರ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿತ್ತು. ಮಠದ ಆಸ್ತಿಯನ್ನು ಸೈಟ್ ಮಾಡಿ ಮಾರಾಟ ಮಾಡಲು ಮುಂದಾದ ಸ್ವಾಮೀಜಿ ನಡೆಗೆ ಭಕ್ತರು ಅಸಮಾಧಾನ ಹೊರಹಾಕಿದ್ದರು. ಕಳೆದ ಒಂದು ತಿಂಗಳಿಂದ ನಡೆದಿದ್ದ ಮುಸುಕಿನ ಗುದ್ದಾಟಕ್ಕೆ ಇಂದು ಪಂಚಪೀಠದ ಸ್ವಾಮೀಜಿಗಳು ಭಕ್ತರ ಸಭೆ ನಡೆಸಿ ಸಮಸ್ಯೆಗೆ ತೆರೆ ಎಳೆಯುವ…

Read More

ಟಿವಿಕೆಗೆ ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ಕೊನೆ ಕ್ಷಣದಲ್ಲಿ ವಿಜಯ್​​ ಕೈ ಹಿಡಿದ ಪಕ್ಷಗಳಾವುವು? – Kannada News | TVK Crossed Magic number For Government Formation In Tamil Nadu, here Is Which party support To Vijay

ಚೆನ್ನೈ, (ಮೇ 08): ತಮಿಳುನಾಡಿನಲ್ಲಿ (Tamil Nadu) ಸರ್ಕಾರ ರಚಿಸಲು ಟಿವಿಕೆಗೆ (TVK) ಅಗತ್ಯವಾದ ಮ್ಯಾಜಿಕ್‌ ನಂಬರ್‌ (118) ಗಿಂತಲೂ ಹೆಚ್ಚಿನ ಸಂಖ್ಯೆ ಲಭಿಸಿದೆ. ಹೌದು…ಆರಂಭದಲ್ಲಿ 118 ಮ್ಯಾಜಿಕ್ ನಂಬರ್ ತೋರಿಸಲು ಹರಸಾಹಸಪಟ್ಟಿದ್ದ ಟಿವಿಕೆ ಮುಖ್ಯಸ್ಥ ವಿಜಯ್‌ ಗೆ ಬರೋಬ್ಬರಿ 121 ಶಾಸಕರ ಬೆಂಬಲ ದೊರೆತಿದೆ. ಇದರೊಂದಿಗೆ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾದಂತಾಗಿದೆ. ಕಾಂಗ್ರೆಸ್‌ ಬೆನ್ನಲ್ಲೇ ಎಡಪಕ್ಷಗಳು ಮತ್ತು ವಿಸಿಕೆ ಶಾಸಕರು ಟಿವಿಕೆಗೆ ಬೆಂಬಲ ಸೂಚಿಸಿದ್ದು, ಸದ್ಯದಲ್ಲೇ ವಿಜಯ್‌ ಸರ್ಕಾರ ರಚನೆಯ ಹಕ್ಕು ಮಂಡಿಸಲಿದ್ದಾರೆ. ವಿಜಯ್ ಸರ್ಕಾರ ರಚನೆಗೆ…

Read More