Headlines

ಊಟ ಮಾಡಿದ ನಂತರ ಹೊಟ್ಟೆ ನೋವು ಬರುತ್ತಾ? ಹಾಗಿದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಿ – Kannada News | Stomach Pain Warning Signs: Seek Medical Help

ಕೆಲವರಿಗೆ ಊಟ ಮಾಡಿದ ನಂತರ ಹೊಟ್ಟೆ ನೋವು (Stomach Pain) ಕಾಣಿಸಿಕೊಳ್ಳುತ್ತದೆ. ಈ ನೋವು ಕೆಲವೊಮ್ಮೆ ಸಣ್ಣ ಮಟ್ಟದಲ್ಲಿರಬಹುದು, ಕೆಲವೊಮ್ಮೆ ತೀವ್ರವಾಗಿರಬಹುದು. ಹಲವರು ಇದನ್ನು ಗ್ಯಾಸ್ ಸಮಸ್ಯೆ ಅಥವಾ ದಿನನಿತ್ಯದ ಸಾಮಾನ್ಯ ತೊಂದರೆ ಎಂದು ನಿರ್ಲಕ್ಸ್ಯ ಮಾಡುತ್ತಾರೆ. ಆದರೆ ಈ ತೊಂದರೆ ಮತ್ತೆ ಮತ್ತೆ ಕಾಣಿಸಿಕೊಂಡರೆ, ಅದನ್ನು ಲಘುವಾಗಿ ತೆಗೆದುಕೊಳ್ಳುವುದು ಸರಿಯಲ್ಲ. ಊಟ ಮಾಡಿದ ನಂತರ ಹೊಟ್ಟೆ ನೋವು ಕಾಣಿಸುವುದು ದೇಹದ ಒಳಗಿರುವ ಸಮಸ್ಯೆಯ ಮುನ್ಸೂಚನೆಯಾಗಿರಬಹುದು. ಈ ನೋವು ಹೊಟ್ಟೆಯ ಮೇಲ್ಭಾಗದಲ್ಲಿ, ನಾಭಿ ಸುತ್ತಮುತ್ತ ಅಥವಾ ಸಂಪೂರ್ಣ…

Read More

ಗುಜರಾತ್​​ನಲ್ಲಿ ಮೈಕ್ರಾನ್‌ನ ಸೆಮಿಕಂಡಕ್ಟರ್ ಸೌಲಭ್ಯ ಉದ್ಘಾಟಿಸಿದ ಪ್ರಧಾನಿ ಮೋದಿ – Kannada News | PM Modi inaugurates Micron semiconductor ATMP facility in Gujarat

ಅಹಮದಾಬಾದ್, ಫೆಬ್ರವರಿ 28: ಇಂದು ಗುಜರಾತ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಸನಂದ್‌ನಲ್ಲಿರುವ ಮೈಕ್ರಾನ್ ಸೆಮಿಕಂಡಕ್ಟರ್ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸೆಮಿಕಂಡಕ್ಟರ್ ಅಸೆಂಬ್ಲಿ, ಟೆಸ್ಟ್ ಮತ್ತು ಪ್ಯಾಕೇಜಿಂಗ್ (ಎಟಿಎಂಪಿ) ಸೌಲಭ್ಯವನ್ನು ಉದ್ಘಾಟಿಸಿದರು. ಈ ಉದ್ಘಾಟನೆಯು ಭಾರತದ ಸೆಮಿಕಂಡಕ್ಟರ್ ಉತ್ಪಾದನಾ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ. ಸನಂದ್ ಎಟಿಎಂಪಿ ಸೌಲಭ್ಯದಿಂದ ಭಾರತದಲ್ಲಿ ತಯಾರಿಸಿದ ಮೊದಲ ಸೆಮಿಕಂಡಕ್ಟರ್ ಮೆಮೊರಿ ಮಾಡ್ಯೂಲ್‌ಗಳ ವಾಣಿಜ್ಯ ಉತ್ಪಾದನೆ ಮತ್ತು ಸಾಗಣೆಯನ್ನು ಪ್ರಾರಂಭಿಸಿದೆ. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ…

Read More

Chanakya Niti: ಮನೆಯಲ್ಲಿ ಹಣ ಉಳಿಯದಿರಲು ಕಾರಣವೇ ಈ ತಪ್ಪುಗಳು – Kannada News | Chanakya Niti: Chanakya Says These mistakes are the reason why money is not stay at home

ಹಣ (money) ಗಳಿಸಬೇಕು, ಶ್ರೀಮಂತಿಕೆ ಗಳಿಸಬೇಕು, ಒಂದೊಳ್ಳೆ ಜೀವನ ನಡೆಸಬೇಕು ಎಂಬ ಕಾರಣಕ್ಕಾಗಿ ಪ್ರತಿಯೊಬ್ಬರೂ ಸಹ ಕಷ್ಟಪಟ್ಟು ಹಗಲಿರುಳು ದುಡಿಯುತ್ತಾರೆ. ಹೀಗೆ ದುಡಿದು ಎಷ್ಟೇ ಹಣ ಸಂಪಾದಿಸಿದರೂ ಸಹ ಹಲವರ ಕೈಯಲ್ಲಿ ಹಣ ಎನ್ನುವುದು ನಿಲ್ಲುವುದೇ ಇಲ್ಲ. ಹಣ ಹೇಗಾದ್ರೂ ಖರ್ಚಾಗುತ್ತಿರುತ್ತದೆ. ಈ ರೀತಿ ಕೈಯಲ್ಲಿ ಹಣ ಉಳಿಯದಿರಲು ಕಾರಣವೇ ಒಂದಷ್ಟು ತಪ್ಪುಗಳು ಎಂದಿದ್ದಾರೆ ಆಚಾರ್ಯ ಚಾಣಕ್ಯರು. ಆ ತಪ್ಪಗಳು ಸರಿಪಡಿಸಿದರೆ ಖಂಡಿತವಾಗಿ ನಿಮ್ಮ ಕೈಯಲ್ಲಿ ಹಣ ಉಳಿಯುತ್ತೆ ಎಂದಿದ್ದಾರೆ. ಹಾಗಿದ್ರೆ ಆ ತಪ್ಪುಗಳು ಯಾವುವು ಎಂಬುದನ್ನು…

Read More

ಮಂತ್ರಾಲಯಕ್ಕೆ ಹೋಗುವುದು ಅವರ ಕನಸಾಗಿತ್ತು: ಹರಕೆ ತೀರಿಸಿ ರಾಯರ ದರ್ಶನ ಪಡೆಯಲು ಹೋದ ವ್ಯಕ್ತಿ ನಾಪತ್ತೆ – Kannada News | Mantralaya Mystery: Chamarajanagar Devotee Doreswamy Missing Since Feb 9, Police Probe

ಚಾಮರಾಜನಗರ, ಫೆ.28: ರಾಯರನ್ನು ನೋಡಲು ಸಾವಿರಾರೂ ಭಕ್ತರು ಪ್ರತಿದಿನ ಬರುತ್ತಾರೆ. ಅದೊಂದು ಕಾರ್ಣಿಕದ ಸ್ಥಳ, ನೆಮ್ಮದಿ, ಸಂಕಷ್ಟಕ್ಕೆ ಮುಕ್ತಿ ನೀಡುವ ಸ್ಥಳ, ಹೀಗೆ ರಾಯರ ಮೇಲೆ ಅಪಾರ ಭಕ್ತಿ ಹೊಂದಿದ್ದ ವ್ಯಕ್ತಿಯೊಬ್ಬರು ಹರಕೆ ತೀರಿಸಲು ಮಂತ್ರಾಲಯಕ್ಕೆ ಹೋಗಿ ಈಗ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ಚಾಮರಾಜನಗರದ ಗಾಳಿಪುರ ಬಡಾವಣೆಯ ನಿವಾಸಿ ದೊರೆಸ್ವಾಮಿ (55) ನಾಪತ್ತೆಯಾದ ದುರ್ದೈವಿ. ದೊರೆಸ್ವಾಮಿ ಅವರು ಕೂಲಿ ಕೆಲಸ ಮಾಡಿಕೊಂಡಿದ್ದರೂ ಪ್ರತಿ ಗುರುವಾರ ತಪ್ಪದೇ ರಾಘವೇಂದ್ರ ಸ್ವಾಮಿಗಳ ಆರಾಧನೆ ಮಾಡುತ್ತಿದ್ದರು. ಜೀವನದಲ್ಲಿ ಒಮ್ಮೆಯಾದರೂ ಮಂತ್ರಾಲಯಕ್ಕೆ…

Read More

ಕಟಕಟೆಯಲ್ಲಿ ದಳಪತಿ ವಿಜಯ್ ದಾಂಪತ್ಯ: ತ್ರಿಷಾ ಹಳೆ ವಿಡಿಯೋ ವೈರಲ್ ಆಗುತ್ತಿರೋದೇಕೆ? – Kannada News | Thalapathy Vijay’s Wife applied for Divorce Trisha’s old video getting viral

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ (Thalapathy Vijay) ಅವರ ಪತ್ನಿ ಸಂಗೀತ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಇಬ್ಬರ 27 ವರ್ಷಗಳ ದಾಂಪತ್ಯ ಮುರಿದು ಬೀಳುವ ಸ್ಥಿತಿಯಲ್ಲಿದೆ. ನಟಿಯೊಬ್ಬರೊಟ್ಟಿಗೆ ವಿಜಯ್ ಸಂಬಂಧ ಹೊಂದಿದ್ದು, ಅದೇ ಕಾರಣಕ್ಕೆ ತಮಗೆ ಅವರಿಂದ ವಿಚ್ಛೇದನ ಕೊಡಿಸಬೇಕೆಂದು ವಿಜಯ್ ಪತ್ನಿ ಸಂಗೀತ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ ಎನ್ನಲಾಗುತ್ತಿದೆ. ದಂಪತಿಯ ವಿಚ್ಛೇದನಕ್ಕೆ ನಟಿ ತ್ರಿಷಾ ಕಾರಣ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರ ನಡವೆಯೇ ತ್ರಿಷಾ ಅವರ ಹಳೆಯ ವಿಡಿಯೋ ಒಂದನ್ನು…

Read More

ಟ್ರಂಪ್​ಗೆ ಖಮೇನಿ ತಿರುಗೇಟು; 6 ದೇಶಗಳ ಅಮೆರಿಕದ ವಾಯುನೆಲೆಗಳ ಮೇಲೆ ಇರಾನ್ ದಾಳಿ – Kannada News | Iran attacks 7 cities including israel abu dhabi qatar bahrain after us israel strikes

ನವದೆಹಲಿ, ಫೆಬ್ರವರಿ 28: ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ಯುದ್ಧ ಸಾರಿವೆ. ಇರಾನ್ (Iran) ಮೇಲೆ ವೈಮಾನಿಕ ದಾಳಿಗಳನ್ನು ನಡೆಸಲಾಗಿದೆ. ಇದರಿಂದ ಹೆದರಿ ಸುಮ್ಮನೆ ಕೂರದ ಇರಾನ್ ಇಸ್ರೇಲ್ ಹಾಗೂ 6 ದೇಶಗಳಲ್ಲಿರುವ ಅಮೆರಿಕದ ವಾಯುನೆಲೆಗಳ ಮೇಲೆ ದಾಳಿ ನಡೆಸಿದೆ. ಆ 6 ದೇಶಗಳೆಂದರೆ ಯುಎಇ, ಸೌದಿ ಅರೇಬಿಯಾ, ಕುವೈತ್, ಜೋರ್ಡಾನ್, ಕತಾರ್ ಮತ್ತು ಬಹ್ರೇನ್. ಇರಾನ್ ತನ್ನ 6 ವಾಯು ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿ ಏಕಕಾಲದಲ್ಲಿ ನಾಶಪಡಿಸಿದ್ದರಿಂದ, ಇರಾನ್‌ನ ಪ್ರತೀಕಾರದಿಂದ ಅಮೆರಿಕ…

Read More

Ranji Trophy Final: ಚಾಂಪಿಯನ್ ತಂಡಕ್ಕೆ 2 ಕೋಟಿ ಬಹುಮಾನ ಘೋಷಿಸಿದ ಸಿಎಂ; ಬಿಸಿಸಿಐನಿಂದ ಸಿಕ್ಕಿದೆಷ್ಟು? – Kannada News | Ranji Trophy 2025 26 final Prize Money Jammu Kashmir vs Karnataka KSCA Hubli Cricket Ground Hubli

2025-26 ರ ರಣಜಿ ಟ್ರೋಫಿಯ ಫೈನಲ್ ಪಂದ್ಯವು ಭಾರತೀಯ ದೇಶೀಯ ಕ್ರಿಕೆಟ್ ಇತಿಹಾಸದಲ್ಲಿ ಸ್ಮರಣೀಯ ಅಧ್ಯಾಯವಾಗಿದೆ. ಹುಬ್ಬಳ್ಳಿಯ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು ಕರ್ನಾಟಕ ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದವು. ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್ ತಲುಪಿದ್ದ ಜಮ್ಮು ಮತ್ತು ಕಾಶ್ಮೀರ ಬರೋಬ್ಬರಿ 67 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಟ್ರೋಫಿಯನ್ನು ಎತ್ತಿಹಿಡಿದಿದೆ. ಈ ಪಂದ್ಯದಲ್ಲಿ, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಜಮ್ಮು ಮತ್ತು ಕಾಶ್ಮೀರ…

Read More

ಯಾರೂ ಹೊರಗೆ ಬರಬೇಡಿ; ಇಸ್ರೇಲ್​, ಇರಾನ್, ಕತಾರ್​​ನ ಭಾರತೀಯ ಪ್ರಜೆಗಳಿಗೆ ಸೂಚನೆ – Kannada News | Remain close to designated shelters Indias advisory for Indian nationals amid Israel, US attack on Iran

ನವದೆಹಲಿ, ಫೆಬ್ರವರಿ 28: ಇಸ್ರೇಲ್ ಮತ್ತು ಅಮೆರಿಕ ಇರಾನ್ ವಿರುದ್ಧ ಜಂಟಿ ದಾಳಿ ನಡೆಸಿದ ಕೆಲವೇ ಗಂಟೆಗಳ ನಂತರ, ಟೆಲ್ ಅವೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಶನಿವಾರ ಇಸ್ರೇಲ್‌ನಲ್ಲಿರುವ ಭಾರತೀಯ ಪ್ರಜೆಗಳು ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಅತ್ಯಂತ ಎಚ್ಚರಿಕೆಯಿಂದ ವರ್ತಿಸುವಂತೆ ಮತ್ತು ಜಾಗರೂಕರಾಗಿರಲು ಸಲಹೆ ನೀಡಿದೆ. ತುರ್ತು ಸಲಹೆ ಬಿಡುಗಡೆ ಮಾಡಿರುವ ಭಾರತ, ಇಸ್ರೇಲಿ ಅಧಿಕಾರಿಗಳು ಮತ್ತು ಹೋಮ್ ಫ್ರಂಟ್ ಕಮಾಂಡ್ ಹೊರಡಿಸಿದ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸುವಂತೆ ಭಾರತೀಯರಿಗೆ ಸೂಚಿಸಿದೆ. ಭಾರತೀಯರು ಅಧಿಕೃತ ಹೋಮ್ ಫ್ರಂಟ್ ಕಮಾಂಡ್…

Read More

ಇರಾನ್​​​-ಇಸ್ರೇಲ್​​​ ಯುದ್ಧ: ಯುದ್ಧಭೂಮಿಯಿಂದ ಕನ್ನಡಿಗ ಹೇಳಿದ್ದಿಷ್ಟು

ಬೆಂಗಳೂರು, ಫೆಬ್ರವರಿ 28: ಇಸ್ರೇಲ್ ಮತ್ತು ಇರಾನ್ ನಡುವೆ ಪ್ರಾದೇಶಿಕ ಉದ್ವಿಗ್ನತೆ ಉಲ್ಬಣಗೊಂಡಿದ್ದು, ಇರಾನ್ ಇಸ್ರೇಲ್ ವಿರುದ್ಧ ನಿರೀಕ್ಷಿತವಲ್ಲದ ಪ್ರತಿದಾಳಿ ನಡೆಸಿದೆ. ಟೆಲ್ ಅವಿವ್ ಸೇರಿದಂತೆ ಇಸ್ರೇಲ್‌ನ ಪ್ರಮುಖ ನಗರಗಳ ಮೇಲೆ ಸುಮಾರು 400 ಕ್ಷಿಪಣಿಗಳನ್ನು ಹಾರಿಸಲಾಗಿದೆ. ಇಸ್ರೇಲ್‌ನ ಹೋಲೋನ್‌ನಲ್ಲಿ ಕ್ಷಿಪಣಿಗಳು ಅಪ್ಪಳಿಸಿದ್ದು, ದಟ್ಟ ಹೊಗೆ ಆವರಿಸಿದೆ. ಇನ್ನು ಈ ಸಂಘರ್ಷ ಇಸ್ರೇಲ್‌ಗೆ ಮಾತ್ರ ಸೀಮಿತವಾಗಿಲ್ಲ. ಇರಾನ್ ಅರಬ್ ರಾಷ್ಟ್ರಗಳಾದ ಬಹರೈನ್, ಕತಾರ್, ಕುವೈತ್, ಸೌದಿ ಅರೇಬಿಯಾ, ಯುಎಇ, ಜೋರ್ಡಾನ್ ಮೇಲೂ ದಾಳಿ ನಡೆಸಿದೆ. ಬಹರೈನ್ ಮತ್ತು…

Read More

Lunar Eclipse 2026: ಮಾ.03 ಸಂಪೂರ್ಣ ಚಂದ್ರಗ್ರಹಣ; ಕರ್ನಾಟಕದಲ್ಲಿ ಎಷ್ಟು ನಿಮಿಷಗಳ ಕಾಲ ಗೋಚರಿಸಲಿದೆ? – Kannada News | Lunar Eclipse 2026: Director Gurusprasad Explains the Blood Moon Phenomenon

ಮಾರ್ಚ್ 3 ರಂದು ಸಂಪೂರ್ಣ ಚಂದ್ರಗ್ರಹಣ ಗೋಚರಿಸಲಿದ್ದು, ಇದು ರಕ್ತಚಂದ್ರ ಗ್ರಹಣ ಎಂದು ಸಹ ಗುರುತಿಸಲ್ಪಟ್ಟಿದೆ. ನೆಹರೂ ತಾರಾಲಯದ ನಿರ್ದೇಶಕ ಗುರುಪ್ರಸಾದ್ ಅವರು ಈ ಅಪರೂಪದ ಖಗೋಳ ವಿದ್ಯಮಾನದ ಬಗ್ಗೆ ವಿವರಣೆ ನೀಡಿದ್ದಾರೆ. ಚಂದ್ರ ಭೂಮಿಯ ದಟ್ಟವಾದ ನೆರಳನ್ನು ಪ್ರವೇಶಿಸಿದಾಗ, ಭೂಮಿಯ ವಾತಾವರಣದಿಂದ ಸೂರ್ಯನ ಕಿರಣಗಳು ವಕ್ರೀಭವನಗೊಂಡು ಚಂದ್ರನ ಮೇಲೆ ಬಿದ್ದು ಅದು ಕೆಂಪು, ಕಿತ್ತಳೆ ಅಥವಾ ಹಳದಿ ಬಣ್ಣದಲ್ಲಿ ಗೋಚರಿಸುತ್ತದೆ. ಭಾರತದ ಎಲ್ಲೆಡೆ ಈ ಗ್ರಹಣ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಮುಖ್ಯವಾಗಿ ಅಸ್ಸಾಂ, ಮೇಘಾಲಯ, ಸಿಕ್ಕಿಂ, ಅರುಣಾಚಲ…

Read More