ಹಂಟಾವೈರಸ್ ಎಂದರೇನು? ಇದು ಕೊರೊನಾದ ರೀತಿ ಹರಡುತ್ತದೆಯೇ? ಈ ಬಗ್ಗೆ ವೈದ್ಯರ ಅಭಿಪ್ರಾಯವೇನು? – Kannada News | Can Hantavirus Cause a Pandemic? Doctors Weigh In on Outbreak Risk
ಅಟ್ಲಾಂಟಿಕ್ ಸಮುದ್ರದಲ್ಲಿ ಸಂಚರಿಸುತ್ತಿದ್ದ ಡಚ್ ಎಕ್ಸ್‌ಪಿಡಿಷನ್ ಕ್ರೂಸ್ ಹಡಗಿನಲ್ಲಿ ಹಂಟಾವೈರಸ್ ಸೋಂಕು ಪತ್ತೆಯಾಗಿರುವುದು ಜಗತ್ತಿನ ಆರೋಗ್ಯ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಹಡಗಿನಲ್ಲಿ ಒಟ್ಟು 149 ಮಂದಿ ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದು, ಇವರಲ್ಲಿ ಇಬ್ಬರು ಭಾರತೀಯ ಸಿಬ್ಬಂದಿಯೂ ಸೇರಿದ್ದಾರೆ. ಈಗಾಗಲೇ ಮೂವರು ಸಾವನ್ನಪ್ಪಿದ್ದು, ಹಲವರು ಸೋಂಕಿಗೆ ಒಳಗಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತಿಳಿಸಿದೆ. ಹಾಗಾದರೆ ಹಂಟಾವೈರಸ್ (Hantavirus) ಎಂದರೇನು, ಇದು ಕೋವಿಡ್ (COVID-19) ರೀತಿಯಲ್ಲಿಯೇ ಹರಡುತ್ತದೆಯೇ, ಈ ಬಗ್ಗೆ ವೈದ್ಯರು ಏನು ಹೇಳುತ್ತಾರೆ…