Headlines

Suvendu Adhikari: ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಆಯ್ಕೆ; ನಾಳೆಯೇ ಪ್ರಮಾಣವಚನ – Kannada News | Suvendu Adhikari selected as BJPs first Chief Minister in West Bengal Amit Shah Announces

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಐತಿಹಾಸಿಕ ಗೆಲುವಿನ ನಂತರ, ಸುವೇಂದು ಅಧಿಕಾರಿ ಅವರನ್ನು ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಘೋಷಿಸಲಾಗಿದೆ. ಅವರು ನಾಳೆ (ಶನಿವಾರ) ಬೆಳಗ್ಗೆ 11 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರು ಮೊದಲು ನಂದಿಗ್ರಾಮದಲ್ಲಿ ಮತ್ತು ಈಗ ಭವಾನಿಪುರದಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿ, ಬಂಗಾಳದಲ್ಲಿ ಬಿಜೆಪಿಯ ಅತ್ಯಂತ ಪ್ರಭಾವಿ ನಾಯಕನಾಗಿ ಹೊರಹೊಮ್ಮುವ ಮೂಲಕ ಟಿಎಂಸಿ ಸರ್ಕಾರಕ್ಕೆ ಸವಾಲು ಹಾಕಿದ್ದರು. Source link

Read More

ಪುನರ್ವಸತಿ ಕೇಂದ್ರಕ್ಕೆ ದಾಖಲಾಗಿದ್ದ ಯುವತಿ ಅನುಮಾನಾಸ್ಪದ ಸಾವು: ಮಗಳು ಗುಣಮುಖಳಾಗ್ತಾಳೆಂಬ ಆಸೆಯಲ್ಲಿದ್ದ ಪೋಷಕರಿಗೆ ಆಘಾತ – Kannada News | Shivamogga: Teen’s Suspicious Death at Rehab Center Sparks Negligence Probe

ಶಿವಮೊಗ್ಗ, ಮೇ 08: ನಗರದ ಪ್ರಸಿದ್ಧ ಮಾನಸಿಕ ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ಚಿಕಿತ್ಸೆಗೆಂದು ದಾಖಲಾಗಿದ್ದ ಯುವತಿ ಒಂದೇ ದಿನಕ್ಕೆ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿಕಾರಿಪುರದ ಈಸೂರಿನ ನಿವಾಸಿ ನೇಹಾ (17) ಮೃತ ಯುವತಿಯಾಗಿದ್ದು, ಮಗಳ ಹುಷಾರಾಗಿ ಮನೆಗೆ ಬರುತ್ತಾಳೆಂಬ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೀಗ ಆಘಾತ ಉಂಟಾಗಿದೆ. ಯುವತಿಯ ಸಾವಿನ ಹಿಂದೆ ನೂರೆಂಟು ಅನುಮಾನಗಳು ಹುಟ್ಟಿಕೊಂಡಿದ್ದು, ಈ ಬಗ್ಗೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 8 ತಿಂಗಳ ಹಿಂದೆ ಕಾಲೇಜಿಗೆ ಹೋಗುವಾಗ ಹಾವು ನೋಡಿ…

Read More

ಯಶ್ ಸಖತ್ ಐಡಿಯಾ, ಬಿಜಿಎಂಐ ಗೇಮಿನಲ್ಲಿ ‘ಟಾಕ್ಸಿಕ್’ ರಾಯ – Kannada News | Yash features in Indian famous game BGMI 4.4 update

ಯಶ್ (Yash) ಸಿನಿಮಾಗಳನ್ನು ಅಂತರಾಷ್ಟ್ರೀಯ ಗುಣಮಟ್ಟದಲ್ಲಿ ಮಾಡುವ ಜೊತೆಗೆ ಅದರ ಪ್ರಚಾರವನ್ನೂ ಸಹ ಭಿನ್ನವಾಗಿ ಮಾಡುತ್ತಾ ಬಂದಿದ್ದಾರೆ. ಪ್ರತಿ ಬಾರಿ ಹೊಸ ಹೊಸ ಆಡಿಯೆನ್ಸ್ ಅನ್ನು ತಲುಪುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಯಶ್ ಅವರ ‘ಟಾಕ್ಸಿಕ್’ ಸಿನಿಮಾ ಕೆಲವೇ ವಾರಗಳಲ್ಲಿ ಬಿಡುಗಡೆ ಆಗಲಿದೆ. ಜೂನ್ 04 ರಂದು ಬಿಡುಗಡೆ ಆಗಬೇಕಿದ್ದ ಈ ಸಿನಿಮಾವನ್ನು ಪ್ರಚಾರದ ಕಾರಣಕ್ಕೆಂದೇ ಮುಂದೂಡಲಾಗಿದೆ ಎನ್ನಲಾಗುತ್ತಿದೆ. ಇದೀಗ ಯಶ್ ಅವರು ಹೊಸ ರೀತಿಯ ಆಡಿಯೆನ್ಸ್ ಅನ್ನು ತಲುಪಲು ಗೇಮ್ ಒಂದರ ಜೊತೆಗೆ ಒಪ್ಪಂದ ಮಾಡಿಕೊಂಡಂತಿದ್ದಾರೆ….

Read More

ತಮಿಳುನಾಡಿನಲ್ಲಿ ಇನ್ಮುಂದೆ ವಿಜಯ್ ‘ಸರ್ಕಾರ್’; ಕೊನೆಗೂ ಟಿವಿಕೆಗೆ ಸಿಕ್ಕಿತು ಮ್ಯಾಜಿಕ್ ನಂಬರ್ – Kannada News | Tamil Nadu Elections Vijays TVK secures majority to form government as VCK, CPM and CPI extends support

ಚೆನ್ನೈ, ಮೇ 8: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ (Tamil Nadu Assembly Elections) 108 ಸ್ಥಾನಗಳನ್ನು ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಟಿವಿಕೆ (TVK) ಸರ್ಕಾರ ರಚಿಸಲು ಅಗತ್ಯವಿದ್ದ ಬಹುಮತವಾದ 118 ಸ್ಥಾನಗಳನ್ನು ಪಡೆಯಲು ಪರದಾಡಿತ್ತು. ಈಗಾಗಲೇ ಕಾಂಗ್ರೆಸ್ ಬೆಂಬಲ ಘೋಷಿಸಿದ್ದರೂ ಇನ್ನೂ 5 ಶಾಸಕರ ಬೆಂಬಲದ ಅಗತ್ಯವಿತ್ತು. ಇದೀಗ ಆ ಸಮಸ್ಯೆಗೂ ಪರಿಹಾರ ಸಿಕ್ಕಿದೆ. ಕಾಂಗ್ರೆಸ್, ವಿಸಿಕೆ, ಸಿಪಿಐ ಮತ್ತು ಸಿಪಿಐ(ಎಂ) ಬೆಂಬಲದೊಂದಿಗೆ ನಟ-ರಾಜಕಾರಣಿ ವಿಜಯ್ ಅವರು ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಹಕ್ಕು ಮಂಡಿಸಲಿದ್ದಾರೆ….

Read More

IPL 2026: ನಾಮಕಾವಸ್ತೆಗೆ ತಂಡದಲ್ಲಿರುವ ಇವರಿಬ್ಬರೇ ಆರ್​ಸಿಬಿ ಪಾಲಿನ ವಿಲನ್ಸ್ – Kannada News | RCB Batting Woes: Jacob Bethell and Jitesh Sharma’s Poor Form Hurting IPL 2026 Campaign

2026 ರ ಐಪಿಎಲ್ ಅನ್ನು ಅಬ್ಬರದಿಂದ ಆರಂಭಿಸಿದ್ದ ಆರ್​ಸಿಬಿ ಮೊದಲಾರ್ಧ ಮುಗಿದ ಬಳಿಕ ಅದ್ಯಾಕೋ ಅಳಿತಪ್ಪಿದಂತೆ ಕಾಣುತ್ತಿದ. ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಆರ್​ಸಿಬಿ ಇದೀಗ ಆ ಸ್ಥಾನವನ್ನು ಕಳೆದುಕೊಳ್ಳುವ ಆತಂಕದಲ್ಲಿದೆ. ಇದಕ್ಕೆ ಕಾರಣ ತಂಡದಲ್ಲಿ ಕೆಲವರ ಪ್ರದರ್ಶನ. ನಿರ್ಣಾಯಕ ಹಂತದಲ್ಲಿ ಕೆಲವರಿಂದ ನಿರೀಕ್ಷಿತ ಪ್ರದರ್ಶನ ಬರದಿರುವುದು ತಂಡವನ್ನು ಸಂಕಷ್ಟಕ್ಕೆ ದೂಡಿದೆ. ಅದರಲ್ಲೂ ಬ್ಯಾಟಿಂಗ್‌ ವಿಭಾಗದಲ್ಲಿ ಆರ್​ಸಿಬಿ ಯಾರ ಮೇಲೆ ಹೆಚ್ಚಿನ ಭರವಸೆ ಇಟ್ಟಿತ್ತೋ, ಆ ಆಟಗಾರರೇ ಆರ್​ಸಿಬಿ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದಾರೆ. ಅಂತಹ…

Read More

RRB Recruitment 2026: ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ; 11,127 ಸಹಾಯಕ ಲೋಕೋ ಪೈಲಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | RRB ALP Recruitment 2026: 11,127 Assistant Loco Pilot Jobs Announced! Apply Now!

ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿImage Credit source: Ai generated ಭಾರತೀಯ ರೈಲ್ವೆಯಲ್ಲಿ ಕೆಲಸ ಪಡೆಯುವ ಕನಸು ಕಾಣುತ್ತಿರುವ ನಿರುದ್ಯೋಗಿ ಯುವಜನತೆಗೆ ರೈಲ್ವೆ ನೇಮಕಾತಿ ಮಂಡಳಿ (RRB) ಭರ್ಜರಿ ಸಿಹಿಸುದ್ದಿ ನೀಡಿದೆ. 2026ನೇ ಸಾಲಿನ ನೇಮಕಾತಿ ಪ್ರಕ್ರಿಯೆಯ ಭಾಗವಾಗಿ ದೇಶಾದ್ಯಂತ ಒಟ್ಟು 11,127 ಸಹಾಯಕ ಲೋಕೋ ಪೈಲಟ್ (Assistant Loco Pilot – ALP) ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ರೈಲ್ವೆ ಇಲಾಖೆಯ ಈ ಬೃಹತ್ ನೇಮಕಾತಿಯು ತಾಂತ್ರಿಕ ಹಿನ್ನೆಲೆಯುಳ್ಳ ಅಭ್ಯರ್ಥಿಗಳಿಗೆ ಸುವರ್ಣಾವಕಾಶವಾಗಿದೆ. ಪ್ರಮುಖ ದಿನಾಂಕ…

Read More

ಬಿಹಾರದಲ್ಲಿ ಶಿಕ್ಷಕರ ನೇಮಕಾತಿ ವಿಳಂಬ ವಿರೋಧಿಸಿ ಪ್ರತಿಭಟನೆ; ಪೊಲೀಸರಿಂದ ಲಾಠಿಚಾರ್ಜ್ – Kannada News | Bihar teacher recruitment protest Police uses lathicharge on TRE 4 aspirants

ಪಾಟ್ನಾ, ಮೇ 8: ಬಿಹಾರದಲ್ಲಿ ಶಿಕ್ಷಕರ ನೇಮಕಾತಿ ಪರೀಕ್ಷೆ (TRE) ಬರೆದ ಅಭ್ಯರ್ಥಿಗಳನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್‌ ನಡೆಸಿದ್ದಾರೆ. ಇದರಿಂದ ಬಿಹಾರದಲ್ಲಿ (Bihar) ಉದ್ವಿಗ್ನ ವಾತಾವರಣ ಸೃಷ್ಟಿಯಾಯಿತು. ಶಿಕ್ಷಕರ ನೇಮಕಾತಿ ಪರೀಕ್ಷೆ 4.0 ರ ಅಧಿಸೂಚನೆ ವಿಳಂಬವಾದ ಬಗ್ಗೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು. ಇದರ ಪರಿಣಾಮವಾಗಿ, ಬಿಹಾರ ಸಾರ್ವಜನಿಕ ಸೇವಾ ಆಯೋಗ (BPSC) ಶಿಕ್ಷಕರ ನೇಮಕಾತಿ ಪರೀಕ್ಷೆಯ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಲು ಆಕಾಂಕ್ಷಿಗಳು ಸಾಮೂಹಿಕವಾಗಿ ಪ್ರತಿಭಟನೆ ನಡೆಸಿದ್ದರು. ಏಪ್ರಿಲ್ ಕಳೆದು ಮೇ ಎರಡನೇ ವಾರ…

Read More

ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು? – Kannada News | Kannada actor Vajrang acted in Jana Nayagan with Vijay, he shares his experience

ದಳಪತಿ ವಿಜಯ್ (Thalapathy Vijay) ಇದೀಗ ತಮಿಳುನಾಡು ಸಿಎಂ ಆಗುವ ಹೊಸ್ತಿಲಲ್ಲಿದ್ದಾರೆ. ಟಿವಿಕೆ ಪಕ್ಷ ಕಟ್ಟಿ ಎರಡೇ ವರ್ಷದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಜಯ ಗಳಿಸಿದ್ದಾರೆ. ವಿಜಯ್ ಅವರೊಟ್ಟಿಗೆ ಕೆಲವು ಕನ್ನಡದ ನಟರು ಆಗೊಮ್ಮೆ, ಈಗೊಮ್ಮೆ ನಟಿಸಿದ್ದಿದೆ. ವಿಜಯ್ ಅವರ ಕೊನೆಯ ಸಿನಿಮಾ ಎನ್ನಲಾಗುತ್ತಿರುವ ‘ಜನ ನಾಯಗನ್’ನಲ್ಲಿ ಕನ್ನಡದ ನಟ ವಜ್ರಾಂಗ್ ನಟಿಸಿದ್ದಾರೆ. ಇದೀಗ ವಜ್ರಾಂಗ್ ಅವರು ಟಿವಿ9 ಜೊತೆಗೆ ಮಾತನಾಡಿದ್ದು, ವಿಜಯ್ ಜೊತೆಗೆ ಸಿನಿಮಾನಲ್ಲಿ ನಟಿಸಿದ ಅನುಭವವನ್ನು ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ… ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ…

Read More

ಆಸ್ತಿಗಾಗಿ ಮಕ್ಕಳನ್ನ ಕೊಂದ್ರು, ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ – Kannada News | KR Nagar Brother Murder: A woman Says give Rs crore Asset To Orphanage

ಮೈಸೂರು, (ಮೇ 08): ಕೆ.ಆರ್ ನಗರದ (KR Nagar) ತಾಲೂಕಿನ ಅರ್ಜುನಹಳ್ಳಿಯಲ್ಲಿ ಸಹೋದರರಿಬ್ಬರನ್ನು ಅಣ್ಣನೇ ಬರ್ಬರವಾಗಿ ಕೊಲೆ ಮಾಡಿದ್ದಾನೆ. ರಾಘ ಹಾಗೂ ಹರ್ವ ಕೊಲೆಯಾದ ಸಹೋದರರು. ಅವರ ತಂದೆಯ ಮೊದಲ ಹೆಂಡತಿಯ ಮಗ ರೋಹಿತ್ ಕೊಲೆ ಆರೋಪಿಯಾಗಿದ್ದು, ಹಳೇ ವೈಷಮ್ಯ ಹಾಗೂ ಆಸ್ತಿ ವಿಚಾರಕ್ಕೆ ಸಹೋದರರನ್ನು ಕೊಂದಿದ್ದಾನೆ ಎಂದು ತಿಳಿದುಬಂದಿದೆ. ಇನ್ನು ಕೊಲೆಯಾದ ಸಹೋದರರ ತಾಯಿ ಪ್ರತಿಕ್ರಿಯಿಸಿದ್ದು,ಐದು ಕೋಟಿ ರೂಪಾಯಿ ಆಸ್ತಿಗಾಗಿ ಮಕ್ಕಳನ್ನ ಕೊಂದಿದ್ದಾರೆ. ಕೊಲೆಗಾರರಿಗೆ ಸೂಕ್ತ ಶಿಕ್ಷೆಯಾಗಬೇಕು. ಇನ್ನು ಎಲ್ಲಾ ಆಸ್ತಿ ಅನಾಥಾಶ್ರಮಕ್ಕೆ ಬರೆಯುತ್ತೇನೆ ಎಂದಿದ್ದಾರೆ….

Read More

ಬೆಂಗಳೂರಿಗರೇ ಗಮನಿಸಿ: ಮೇ 10ರಂದು ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ – Kannada News | Namma Metro Service Disruption May 10: Bengaluru Purple Line Timings Affected

ಬೆಂಗಳೂರು, ಮೇ 08: ಅಗತ್ಯ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆ ನಮ್ಮ ಮೆಟ್ರೋ ರೈಲುಗಳ ಸಂಚಾರದಲ್ಲಿ ಮೇ 10ರ ಭಾನುವಾರ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (BMRCL) ಪ್ರಕಟಣೆ ಮೂಲಕ ತಿಳಿಸಿದೆ. ಪ್ರಯಾಣಿಕರು ತಾತ್ಕಾಲಿಕ ಸೇವಾ ವ್ಯತ್ಯಯವನ್ನು ಗಮನಿಸಿ ತಮ್ಮ ಪ್ರಯಾಣವನ್ನು ಪೂರ್ವಯೋಜನೆ ಮಾಡಿಕೊಳ್ಳುವಂತೆ ಬಿಎಂಆರ್​​ಸಿಎಲ್​​ ವಿನಂತಿಸಿಕೊಂಡಿದೆ. ಮೇ 10ರ ಭಾನುವಾರ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆ ಸಂಚಾರ ತಾತ್ಕಾಲಿಕ ಸ್ಥಗಿತ ಪ್ರಕಟಣೆ ಮೂಲಕ ಮಾಹಿತಿ ಹಂಚಿಕೊಂಡ ಬಿಎಂಆರ್​​ಸಿಎಲ್​​…

Read More