ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ನಟ ವಜ್ರಾಂಗ್ ಮಾತು – Kannada News | Actor Vajrang talks about Vijay’s popularity in Tamil Nadu

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ (Thalapathy Vijay) ವಿಧಾನಸಭೆ ಚುನಾವಣೆ ಗೆದ್ದಿದ್ದು, ಇದೀಗ ಮುಖ್ಯ ಮಂತ್ರಿ ಆಗಲಿದ್ದಾರೆ. ವಿಜಯ್ ಅವರು ಚುನಾವಣಾ ಕಣಕ್ಕೆ ಇಳಿಯುವ ಮೊದಲು ‘ಜನ ನಾಯಗನ್’ ಸಿನಿಮಾನಲ್ಲಿ ನಟಿಸಿದ್ದರು. ಆ ಸಿನಿಮಾನಲ್ಲಿ ವಿಜಯ್ ಜೊತೆಗೆ ಕನ್ನಡದ ನಟ ವಜ್ರಾಂಗ್ ಸಹ ಪಾತ್ರವೊಂದರಲ್ಲಿ ನಟಿಸಿದ್ದರು. ವಿಜಯ್ ಅವರೊಟ್ಟಿಗೆ ಸುಮಾರು 21 ದಿನಗಳ ಕಾಲ ವಜ್ರಾಂಗ್ ಶೂಟಿಂಗ್​​ನಲ್ಲಿದ್ದರು. ಈ ವೇಳೆ ಸಾಕಷ್ಟು ಬಾರಿ ವಿಜಯ್ ಅವರೊಟ್ಟಿಗೆ ಸಂವಾದ ಮಾಡಿದ್ದಾಗಿ ಹೇಳಿರುವ ವಜ್ರಾಂಗ್, ಶೂಟಿಂಗ್ ಸೆಟ್​​ನಲ್ಲಿ ವಿಜಯ್ ಹೇಗಿರುತ್ತಿದ್ದರು. ತಮಿಳುನಾಡಿನಲ್ಲಿ ವಿಜಯ್ ಅವರ ಕ್ರೇಜ್ ಹೇಗಿದೆ ಇತ್ಯಾದಿ ವಿಷಯಗಳನ್ನು ಟಿವಿ9 ಜೊತೆಗೆ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಎಲ್ಲವೂ ಬಂದ್; ಬಿಸಿಸಿಐ ಎಚ್ಚೆರಿಕೆಯ ಬಳಿಕ ಎಚ್ಚೆತ್ತ ಫ್ರಾಂಚೈಸಿಗಳು – Kannada News | New BCCI Rules: IPL Teams Ban Player Vlogging and Enhance Security Measures

ತಂಡದ ಬಸ್​ಗಳಲ್ಲಿ ಹಾಗೂ ಡ್ರೆಸಿಂಗ್ ರೂಮ್​ಗಳಲ್ಲಿ ಅನಧಿಕೃತ ವ್ಯಕ್ತಿಗಳು ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ದೂರನ್ನು ಬಿಸಿಸಿಐ (BCCI) ಗಂಭೀರವಾಗಿ ಪರಿಗಣಿಸಿ ಎಲ್ಲಾ ಫ್ರಾಂಚೈಸಿಗಳಿಗೆ ಖಡಕ್ ಸಂದೇಶ ಕಳುಹಿಸಿತ್ತು. ಇದರ ಜೊತೆಗೆ ತಂಡದ ಗೌಪತ್ಯೆಯನ್ನು ಕಾಪಾಡಿಕ್ಕೊಳ್ಳುವಂತೆ ಹಾಗೂ ಡ್ರೆಸಿಂಗ್ ರೂಮ್ ಸಂಭಾಷಣೆ ಹೊರಗೆ ಸೋರಿಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಕಟ್ಟಪ್ಪಣೆಯನ್ನು ಹೊರಡಿಸಿತ್ತು. ಇದೀಗ ಬಿಸಿಸಿಐ ಎಚ್ಚೆರಿಕೆಯ ಬಳಿಕ ಎಚ್ಚೆತ್ತುಕೊಂಡಿರುವ ಐಪಿಎಲ್ (IPL) ಫ್ರಾಂಚೈಸಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿವೆ. ಅದರಂತೆ ಆಟಗಾರರು ವ್ಲಾಗ್ ಮಾಡುವುದನ್ನು ನಿಷೇಧಿಸಿವೆ. ಹಾಗೆಯೆ ಕೆಲವು ಫ್ರಾಂಚೈಸಿಗಳು ಡ್ರೆಸಿಂಗ್ ರೂಮ್​ಗೆ ಅಪರಿಚಿತರ ಪ್ರವೇಶವನ್ನು ನಿಷೇಧಿಸಿವೆ ಎಂದು ವರದಿಯಾಗಿದೆ.

ವ್ಲಾಗ್ ಮಾಡುವುದಕ್ಕೆ ತಡೆ

ಇದರ ಪರಿಣಾಮವಾಗಿ ಪಂಜಾಬ್ ಕಿಂಗ್ಸ್ ತಂಡದ ಸ್ಟಾರ್ ಬೌಲರ್ ಅರ್ಷದೀಪ್ ಸಿಂಗ್​ ವ್ಲಾಗ್ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ವರದಿಯಾಗಿದೆ. ವಾಸ್ತವವಾಗಿ ಅರ್ಷದೀಪ್ ಪಂದ್ಯ ಮುಗಿದ ನಂತರ ತಂಡದ ಆಟಗಾರರೊಂದಿಗೆ ಸಂವಹನ ನಡೆಸುವುದು. ಹಾಗೆಯೇ ತಂಡದ ವಿಮಾನ ಪ್ರಯಾಣದಲ್ಲಿ, ತಂಡ ವಾಸ್ತವ್ಯ ಹೂಡಿರುವ ಹೋಟೆಲ್‌ಗಳಲ್ಲಿಯೂ ತಮಾಷದಾಯಕ ವೀಡಿಯೊಗಳನ್ನು ಚಿತ್ರೀಕರಿಸಿ ಅವುಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹರಿಬಿಡುತ್ತಿರುತ್ತಾರೆ.

ಅದರಂತೆ ಇತ್ತೀಚೆಗೆ ಪಂಜಾಬ್ ಕಿಂಗ್ಸ್‌ ತಂಡ ವಿಮಾನದಲ್ಲಿ ಪ್ರಯಾಣ ಮಾಡುತ್ತಿರುವ ವಿಡಿಯೋವನ್ನು ಅರ್ಷದೀಪ್ ಚಿತ್ರೀಕರಿಸಿದ್ದರು. ಈ ವಿಡಿಯೋದಲ್ಲಿ ಯುಜ್ವೇಂದ್ರ ಚಾಹಲ್ ವ್ಯಾಪಿಂಗ್ ಮಾಡುತ್ತಿರುವುದು ರೆಕಾರ್ಡ್​ ಆಗಿತ್ತು. ವೈರಲ್ ಆದ ಬಳಿಕ ಈ ವೀಡಿಯೊ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಹಾಗಾಗಿ ಅರ್ಷದೀಪ್​ಗೆ ವ್ಲಾಗ್ ಮಾಡದಂತೆ ಆದೇಶ ನೀಡಲಾಗಿದೆ ಎಂದು ವರದಿಯಾಗಿದೆ.

ಬಿಸಿಸಿಐ ಖಡಕ್ ಎಚ್ಚರಿಕೆ

ಹಾಗೆಯೇ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಕೂಡ, ಆಟಗಾರರ ಕುಟುಂಬ ಸದಸ್ಯರು ಮತ್ತು ಸಹಾಯಕ ಸಿಬ್ಬಂದಿಗಳು ತಂಡಕ್ಕೆ ಸಂಬಂಧಪಟ್ಟ ವೀಡಿಯೊಗಳನ್ನು ಪೋಸ್ಟ್ ಮಾಡುವುದನ್ನು ಸಹ ನಿಷೇಧಿಸಿದೆ. ಹನಿ ಟ್ರಾಪ್‌ಗಳ ಅಪಾಯದಿಂದಾಗಿ ಐಪಿಎಲ್‌ನಲ್ಲಿ ಆಟಗಾರರು, ಸಹಾಯಕ ಸಿಬ್ಬಂದಿ ಸದಸ್ಯರು ಮತ್ತು ತಂಡದ ಅಧಿಕಾರಿಗಳ ಹೋಟೆಲ್ ಕೋಣೆಗಳಿಗೆ ಅಪರಿಚಿತರು ಪ್ರವೇಶಿಸುವುದನ್ನು ಬಿಸಿಸಿಐ ನಿಷೇಧಿಸಿದೆ. ಇದರ ಜೊತೆಗೆ ತಂಡದ ಮಾಲೀಕರಿಗೂ ಬಿಸಿಸಿಐ ಸೂಕ್ಷ್ಮ ಎಚ್ಚರಿಕೆಗಳನ್ನು ನೀಡಿದೆ.

IPL 2026: ಉಚಿತ ಟಿಕೆಟ್​ಗಳ ಬೇಡಿಕೆಯಿಂದಲೇ ಫೈನಲ್ ಪಂದ್ಯ ಶಿಫ್ಟ್; ಬಿಸಿಸಿಐ ಸ್ಪಷ್ಟನೆ

ಅದರಂತೆ ಐಪಿಎಲ್ ಫ್ರಾಂಚೈಸ್ ಮಾಲೀಕರು ಮತ್ತು ಅವರ ಪ್ರತಿನಿಧಿಗಳು ಪಂದ್ಯಗಳ ಸಮಯದಲ್ಲಿ ಡಗೌಟ್, ಡ್ರೆಸ್ಸಿಂಗ್ ರೂಮ್ ಅಥವಾ ಮೈದಾನದಲ್ಲಿ ಆಟಗಾರರು ಅಥವಾ ತಂಡದ ಅಧಿಕಾರಿಗಳೊಂದಿಗೆ ಸಂವಹನ ನಡೆಸುವುದನ್ನು ಅಥವಾ ದೈಹಿಕವಾಗಿ ಸಮೀಪಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಎಲ್ಲಾ ಮಾಲೀಕರು ಪ್ರೋಟೋಕಾಲ್ ಅನ್ನು ಪಾಲಿಸಬೇಕು. ಈ ನಿಯಮವನ್ನು ಉಲ್ಲಂಘಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಬಿಸಿಸಿಐ ಹೇಳಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vastu Shastra: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ಚಿನ್ನದ ಆಭರಣ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ – Kannada News | Why Gold Doesn’t Stay: Vastu and Astrology Remedies for Financial Stability at Home

ಚಿನ್ನವನ್ನು ಕೇವಲ ಆಭರಣವಾಗಿ ಮಾತ್ರವಲ್ಲದೆ, ಕಷ್ಟಕಾಲದ ಭದ್ರತೆಯಾಗಿ ಅಥವಾ ಒಂದು ಅಮೂಲ್ಯ ಆಸ್ತಿಯಾಗಿ ಭಾರತೀಯರು ಕಾಣುತ್ತಾರೆ. ಆದರೆ, ಅನೇಕ ಮನೆಗಳಲ್ಲಿ ಎಷ್ಟು ಚಿನ್ನ ಖರೀದಿಸಿದರೂ ಅದು ಕೈಯಲ್ಲಿ ನಿಲ್ಲುವುದಿಲ್ಲ; ಯಾವುದೋ ಒಂದು ಕಾರಣಕ್ಕೆ ಅದು ಮಾರಾಟವಾಗುತ್ತದೆ ಅಥವಾ ಕಳೆದುಹೋಗುತ್ತದೆ. ಇದಕ್ಕೆ ವಾಸ್ತು ದೋಷ ಮತ್ತು ಜ್ಯೋತಿಷ್ಯದ ಕಾರಣಗಳಿರಬಹುದು ಎಂದು ತಜ್ಞರು ಹೇಳುತ್ತಾರೆ. ನಿಮ್ಮ ಮನೆಯಲ್ಲಿ ಚಿನ್ನ ಸ್ಥಿರವಾಗಿ ನಿಲ್ಲದಿರಲು ಇರುವ ಪ್ರಮುಖ ಕಾರಣಗಳು ಮತ್ತು ಪರಿಹಾರಗಳ ಬಗ್ಗೆ ಮಾಹಿತಿ ಇಲ್ಲಿದೆ.

ಅಶುಚಿತ್ವ ಮತ್ತು ನಕಾರಾತ್ಮಕ ಶಕ್ತಿ:

ವಾಸ್ತು ಶಾಸ್ತ್ರದ ಪ್ರಕಾರ, ಚಿನ್ನವನ್ನು ಸಂಪತ್ತು, ಸಮೃದ್ಧಿ ಮತ್ತು ಲಕ್ಷ್ಮಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ದೇವಿಯು ಸ್ವಚ್ಛತೆ ಇರುವಲ್ಲಿ ಮಾತ್ರ ನೆಲೆಸುತ್ತಾಳೆ. ನಿರಂತರವಾಗಿ ಅಸ್ತವ್ಯಸ್ತವಾಗಿರುವ ವಸ್ತುಗಳು, ಮುರಿದ ಪಾತ್ರೆಗಳು, ಜೇಡರ ಬಲೆ ಅಥವಾ ಕಸ ತುಂಬಿರುವ ಮನೆಗಳಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಿರುತ್ತದೆ. ಅಂತಹ ಮನೆಗಳಲ್ಲಿ ಆರ್ಥಿಕ ಏರಿಳಿತಗಳು ಉಂಟಾಗುತ್ತವೆ ಮತ್ತು ಲಕ್ಷ್ಮಿಯ ಸ್ವರೂಪವಾದ ಚಿನ್ನವು ಮನೆಯಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ.

ತಪ್ಪು ದಿಕ್ಕಿನಲ್ಲಿ ಚಿನ್ನವನ್ನು ಇಡುವುದು:

ವಾಸ್ತುವಿನಲ್ಲಿ ದಿಕ್ಕಿನ ಪಾತ್ರ ಬಹಳ ದೊಡ್ಡದು. ಚಿನ್ನ ಮತ್ತು ಬೆಳ್ಳಿಯನ್ನು ಇಡುವಾಗ ದಿಕ್ಕಿನ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ದಕ್ಷಿಣ ಅಥವಾ ಆಗ್ನೇಯ (South-East) ದಿಕ್ಕನ್ನು ಅಗ್ನಿ ಮೂಲೆಯೆಂದು ಪರಿಗಣಿಸಲಾಗುತ್ತದೆ. ಇಲ್ಲಿ ಚಿನ್ನವನ್ನು ಇಡುವುದರಿಂದ ಅದು ‘ಕಳೆದುಹೋಗುವ’ ಅಥವಾ ‘ಖರ್ಚಾಗುವ’ ಸಾಧ್ಯತೆ ಹೆಚ್ಚು. ಆದ್ದರಿಂದ ಚಿನ್ನದಂತಹ ಬೆಲೆಬಾಳುವ ವಸ್ತುಗಳನ್ನು ಇಡಲು ನೈಋತ್ಯ (South-West) ದಿಕ್ಕು ಅತ್ಯಂತ ಶ್ರೇಷ್ಠ. ಇಲ್ಲಿ ಇರಿಸಲಾದ ಆಸ್ತಿ ಅಥವಾ ಸಂಪತ್ತು ಸ್ಥಿರವಾಗಿ ಬೆಳೆಯುತ್ತದೆ.

ಸಾಲದ ಮೂಲದಿಂದ ಖರೀದಿಸಿದ ಚಿನ್ನ:

ಶಾಸ್ತ್ರಗಳ ಪ್ರಕಾರ, ಅತಿಯಾದ ಸಾಲ ಮಾಡಿ ತಂದ ಹಣದಿಂದ ಚಿನ್ನವನ್ನು ಖರೀದಿಸುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಇಂತಹ ಚಿನ್ನವು ಮನೆಯಲ್ಲಿ ನಕಾರಾತ್ಮಕತೆಯನ್ನು ತರುತ್ತದೆ ಮತ್ತು ಯಾವುದೋ ಒಂದು ಹಣಕಾಸಿನ ಮುಗ್ಗಟ್ಟಿನಿಂದಾಗಿ ಅದು ಬೇಗನೆ ಮನೆಯಿಂದ ಹೊರಹೋಗುವಂತಾಗುತ್ತದೆ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ

ಜ್ಯೋತಿಷ್ಯದ ಪ್ರಭಾವ:

ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು (Jupiter) ಚಿನ್ನಕ್ಕೆ ಕಾರಕನಾದರೆ, ಶುಕ್ರ (Venus) ಐಶ್ವರ್ಯ ಮತ್ತು ಆಭರಣಗಳ ಕಾರಕ. ನಿಮ್ಮ ಜಾತಕದಲ್ಲಿ ಈ ಎರಡು ಗ್ರಹಗಳು ದುರ್ಬಲವಾಗಿದ್ದರೆ, ಚಿನ್ನವು ನಿಮ್ಮ ಕೈಯಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ. ಪದೇ ಪದೇ ಆಭರಣಗಳು ಒಡೆಯುವುದು ಅಥವಾ ಕಳೆದುಹೋಗುವುದು ಜಾತಕದಲ್ಲಿನ ಇಂತಹ ದೋಷಗಳ ಲಕ್ಷಣವಾಗಿರಬಹುದು.

ಮನೆಯಲ್ಲಿ ಚಿನ್ನ ಸ್ಥಿರವಾಗಿರಲು ಕೆಲವು ಸರಳ ಕ್ರಮಗಳು:

ವಾರಕ್ಕೊಮ್ಮೆ ಶುಕ್ರವಾರ ಲಕ್ಷ್ಮಿ ದೇವಿಯನ್ನು ಪೂಜಿಸಿ, ಆಭರಣಗಳಿಗೆ ಧೂಪ ತೋರಿಸುವುದರಿಂದ ಸಮೃದ್ಧಿ ಹೆಚ್ಚುತ್ತದೆ. ಮನೆಯ ಈಶಾನ್ಯ ಮೂಲೆಯನ್ನು ಸದಾ ಸ್ವಚ್ಛವಾಗಿಡಿ, ಇದು ದೈವಿಕ ಶಕ್ತಿಯ ಕೇಂದ್ರವಾಗಿದೆ. ಚಿನ್ನವನ್ನು ಯಾವಾಗಲೂ ಒಂದು ಕೆಂಪು ಬಣ್ಣದ ರೇಷ್ಮೆ ಬಟ್ಟೆಯಲ್ಲಿ ಸುತ್ತಿ ಸುರಕ್ಷಿತವಾಗಿಡುವುದು ಶುಭ ಫಲ ನೀಡುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡಿನಲ್ಲಿ TVK ಸರ್ಕಾರ ರಚನೆ ಬಹುತೇಕ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್ – Kannada News | Tamil Nadu Politics Row: Vijay’s TVK secures magic number 118 as VCK and Left come on board

ಚೆನ್ನೈ, (ಮೇ 8): ತಮಿಳುನಾಡು (Tamil Nadu) ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಶುರುವಾದ ರಾಜಕೀಯ ಹೈಡ್ರಾಮಾ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಸರ್ಕಾರ ರಚಿಸಲು ಟಿವಿಕೆಗೆ ಅಗತ್ಯವಾದ ಮ್ಯಾಜಿಕ್‌ ನಂಬರ್‌ 118 ಲಭಿಸಿದೆ. ಹೀಗಾಗಿ ವಿಜಯ್ ಸರ್ಕಾರ ಅಸ್ತಿತ್ವಕ್ಕೆ ಬರುವುದು ನಿಶ್ಚಿತವಾಗಿದೆ. ಹೌದು.. ವಿಜಯ್ ಅವರು ತಮ್ಮ 107 ಸ್ಥಾನಗಳ ಜೊತೆಗೆ ಕಾಂಗ್ರೆಸ್​​ನ 5, ವಿಸಿಕೆ 2, ಸಿಪಿಐ 2, ಸಿಪಿಐ(ಎಂ) 2 ಸ್ಥಾನ ಸೇರಿ 118 ಸ್ಥಾನವನ್ನು ಹೊಂದಿಸುವಲ್ಲಿ ಯಶಸ್ವಿಯಾಗಿದ್ದು, ಸದ್ಯದಲ್ಲೇ ವಿಜಯ್‌ ಸರ್ಕಾರ ರಚನೆಯ ಹಕ್ಕು ಮಂಡಿಸಲಿದ್ದಾರೆ.

ತಮಿಳಿಗ ವೆಟ್ರಿ ಕಳಗಂ ಪಕ್ಷ ಸರ್ಕಾರ ರಚನೆಗೆ ಎಡಪಕ್ಷಗಳ ಬೆಂಬಲ ಘೋಷಿಸಿವೆ. ಸಿಪಿಐ, ಸಿಪಿಐ(ಎಂ) ತಲಾ 2 ಕ್ಷೇತ್ರದಲ್ಲಿ ಗೆದ್ದಿದ್ದು, ಟಿವಿಕೆಗೆ ಬೆಂಬಲ ಘೋಷಿಸಿ ರಾಜ್ಯಪಾಲರಿಗೆ ಪತ್ರ ಬರೆದಿವೆ. ಇದರ ಬೆನ್ನಲ್ಲೇ ವಿಜಯ್ ರಾಜ್ಯಪಾಲರಿಗೆ ಪತ್ರ ಬರೆದಿದ್ದು, ತಮಗೆ 121 ಶಾಸಕರ ಬೆಂಬಲವಿದೆ . ಟಿವಿಕೆಗೆ ಕಾಂಗ್ರೆಸ್, ಮುಸ್ಲಿಂ ಲೀಗ್​, ಸಿಪಿಐ, ಸಿಪಿಐ(ಎಂ)ನಿಂದಲೂ ಬೆಂಬಲವಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ಇನ್ಮುಂದೆ ವಿಜಯ್ ‘ಸರ್ಕಾರ್’; ಕೊನೆಗೂ ಟಿವಿಕೆಗೆ ಸಿಕ್ಕಿತು ಮ್ಯಾಜಿಕ್ ನಂಬರ್

Source link

TV9 Kannada News Live: ತಮಿಳುನಾಡಿನಲ್ಲಿ ವಿಜಯ್ ಸರ್ಕಾರ ರಚಿಸುವುದು ನಿಶ್ಚಿತ; ಜಿಬಿಎ ಚುನಾವಣೆಗೆ ಮುಹೂರ್ತ ಫಿಕ್ಸ್? – Kannada News | TV9 Kannada News Live: Vijay’s TVK Set to Form Government in Tamil Nadu, Karnataka GBA Election likely soon

ಬೆಂಗಳೂರು, ಮೇ 08: ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಹೊಸ ಶಕೆಯನ್ನು ಬರೆಯಲು ಹೊರಟಿರುವ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ಇದೀಗ ಸರ್ಕಾರ ರಚನೆಯ ಹಾದಿ ಸುಗಮವಾಗಿದೆ. ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ ತಲುಪಲು ಎಡಪಕ್ಷಗಳು ಮತ್ತು ಮೈತ್ರಿ ಪಕ್ಷಗಳು ವಿಜಯ್​​ಗೆ ಸಾಥ್ ನೀಡಿವೆ. ಆ ಮೂಲಕ ಅಗತ್ಯ ಶಾಸಕರ ಬೆಂಬಲ ಗಳಿಸಿರುವ ವಿಜಯ್, ತಮಿಳುನಾಡಿನ ಮುಂದಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವುದು ಇದೀಗ ನಿಶ್ಚಿತವಾಗಿದೆ.

ಮುಖ್ಯಾಂಶಗಳು

  • ತಮಿಳುನಾಡಿನಲ್ಲಿ ವಿಜಯ್ ಸರ್ಕಾರ ರಚನೆಯ ಹಾದಿ ಸುಗಮ
  • ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಬಗ್ಗೆ ಸಂತೋಷ್ ಪೋಸ್ಟ್​​
  • ಜಿಬಿಎ ಚುನಾವಣೆಗೆ ಮುಹೂರ್ತ ಫಿಕ್ಸ್?

ತಮಿಳುನಾಡಿನ ಒಟ್ಟು 234 ವಿಧಾನಸಭಾ ಕ್ಷೇತ್ರಗಳ ಪೈಕಿ 108 ಸ್ಥಾನಗಳಲ್ಲಿ ಈಗಾಲೇ ವಿಜಯ್ ದೊಡ್ಡ ಮಟ್ಟದ ಯಶಸ್ಸು ಸಾಧಿಸಿದ್ದಾರೆ. ಪೆರಂಬೂರ್‌ ಹಾಗೂ ತಿರುಚ್ಚಿ ಪೂರ್ವ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ವಿಜಯ್ ಎರಡೂ ಕಡೆ ಜಯಗಳಿಸಿದ್ದು, ಶಾಸಕರ ಎಣಿಕೆಯ ನಿಯಮದಂತೆ ಸದ್ಯಕ್ಕೆ ಅವರ ಪಕ್ಷದ ಬಲ 107ಕ್ಕೆ ಸ್ಥಿರವಾಗಿದೆ.

ಇದನ್ನೂ ಓದಿ: ವಿಜಯ್​ಗಿರೋ ಆಯ್ಕೆಗಳ ಬಗ್ಗೆ ತಮಿಳುನಾಡು ಕಾಂಗ್ರೆಸ್ ಉಸ್ತುವಾರಿ ಸೂರಜ್ ಹೆಗ್ಡೆ ಹೇಳಿದ್ದಿಷ್ಟು

ಸಿಪಿಐ ಪಕ್ಷವು ಟಿವಿಕೆಗೆ ಬೇಷರತ್ ಬೆಂಬಲ ಘೋಷಿಸಿದ್ದು, ಇದರೊಂದಿಗೆ ಸಿಪಿಐ(ಎಂ) ಹಾಗೂ ವಿಸಿಕೆ ಪಕ್ಷಗಳು ಸಹ ವಿಜಯ್ ಬೆನ್ನಿಗೆ ನಿಂತಿವೆ. ಪ್ರಸ್ತುತ ಟಿವಿಕೆಯ 107 ಸ್ಥಾನಗಳೊಂದಿಗೆ ಕಾಂಗ್ರೆಸ್‌ನ 5, ವಿಸಿಕೆಯ 2, ಸಿಪಿಐನ 2 ಹಾಗೂ ಸಿಪಿಐ(ಎಂ)ನ 2 ಸ್ಥಾನಗಳು ಸೇರಿದಂತೆ ಒಟ್ಟು ಬಲ 118ಕ್ಕೆ ಏರಿದೆ ಆಗಿದೆ.

ತಮಿಳುನಾಡು ಸರ್ಕಾರ ರಚನೆ ಕುರಿತು ಬಿಎಲ್​​ ಸಂತೋಷ್ ಮಾರ್ಮಿಕ ಪೋಸ್ಟ್

ತಮಿಳುನಾಡಿನಲ್ಲಿ ನೂತನ ಸರ್ಕಾರ ರಚನೆಯ ಕಸರತ್ತು ಗರಿಗೆದರಿರುವ ಬೆನ್ನಲ್ಲೇ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್​​ ಸಂತೋಷ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: TV9 Kannada News Live: ರಾಜ್ಯದಲ್ಲಿ SIR ವಿರೋಧಿ ಸಂಘಟನೆಗಳ ಜೊತೆ ಸಿಎಂ ಮೀಟಿಂಗ್‌! ಇಲ್ಲಿದೆ ಈ ಹೊತ್ತಿನ ಪ್ರಮುಖ ಸುದ್ದಿಗಳು

ತಮಿಳುನಾಡಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾರ್ಮಿಕವಾಗಿ ಪ್ರತಿಕ್ರಿಯಿಸಿರುವ ಅವರು, “ತಮಿಳುನಾಡಿನಲ್ಲಿ ಅಂತಿಮವಾಗಿ ಯಾರು ಸರ್ಕಾರ ರಚಿಸುತ್ತಾರೆ ಎಂಬುದನ್ನು ಕಾಲವೇ ನಿರ್ಧರಿಸುತ್ತದೆ. ಆದರೆ ಒಂದು ವಿಷಯ ಮಾತ್ರ ಖಚಿತ, ಈ ಎಲ್ಲಾ ಬೆಳವಣಿಗೆಗಳ ಕೊನೆಯಲ್ಲಿ ಕಾಂಗ್ರೆಸ್ ಪಕ್ಷವು ಮುಖಕ್ಕೆ ಮೊಟ್ಟೆ ಹೊಡೆಸಿಕೊಳ್ಳುವ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ,” ಎಂದಿದ್ದಾರೆ.

ಜಿಬಿಎ ಚುನಾವಣೆಗೆ ಮುಹೂರ್ತ ಫಿಕ್ಸ್: ಜೂನ್ 14 ರಿಂದ 24ರ ನಡುವೆ ಬೆಂಗಳೂರಿನಲ್ಲಿ ಮತದಾನ?

ಬಹು ನಿರೀಕ್ಷಿತ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆಗೆ ಕೊನೆಗೂ ಮುಹೂರ್ತ ನಿಗದಿಯಾಗುವ ಲಕ್ಷಣಗಳು ಗೋಚರಿಸಿದ್ದು, ಜೂನ್ 14 ರಿಂದ ಜೂನ್ 24ರ ನಡುವೆ ಮತದಾನ ನಡೆಯುವ ಸಾಧ್ಯತೆಯಿದೆ. ರಾಜ್ಯ ಚುನಾವಣಾ ಆಯೋಗದ ಆಯುಕ್ತ ಸಂಗ್ರೇಶಿ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ನಡೆಯಿತು. ಜೂನ್ 30ರ ಒಳಗಾಗಿ ಚುನಾವಣೆ ಪ್ರಕ್ರಿಯೆ ಮುಗಿಸಿ ವರದಿ ನೀಡುವಂತೆ ಸುಪ್ರೀಂಕೋರ್ಟ್ ಸೂಚಿಸಿರುವ ಹಿನ್ನೆಲೆಯಲ್ಲಿ ಆಯೋಗವು ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಮಳೆಗಾಲ ಮತ್ತು ಶಾಲಾ-ಕಾಲೇಜುಗಳ ಆರಂಭದ ಸಮಯವನ್ನು ಗಮನದಲ್ಲಿಟ್ಟುಕೊಂಡು ಅಂತಿಮ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 5:06 pm, Fri, 8 May 26

Source link

ಆಯುಷ್ಮಾನ್ ಭಾರತ್ ಹೆಲ್ತ್ ಇನ್ಷೂರೆನ್ಸ್; ಬೆಂಗಳೂರಿನಲ್ಲಿ ಎಐ ಹ್ಯಾಕಥಾನ್ ಶೋಕೇಸ್ – Kannada News | NHA, IndiaAI Mission and IISc Bengaluru convene AB PM JAY Auto Adjudication Hackathon Showcase

ಬೆಂಗಳೂರು, ಮೇ 08, 2026: ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (NHA), ಇಂಡಿಯಾ ಎಐ ಮಿಷನ್ (IndiaAI Mission) ಮತ್ತು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಜಂಟಿಯಾಗಿ ‘AB PM-JAY ಆಟೋ-ಅಡ್ಜುಡಿಕೇಶನ್ ಹ್ಯಾಕಥಾನ್ ಶೋಕೇಸ್ 2026’ ಅನ್ನು (Auto Adjudication Hackathon Showcase) ಆಯೋಜಿಸಿವೆ. ಬೆಂಗಳೂರಿನ ಐಐಎಸ್​ಸಿ ಕ್ಯಾಂಪಸ್​ನಲ್ಲಿರುವ ರಾಮ ರಾವ್ ಆಡಿಟೋರಿಯಂನಲ್ಲಿ ನಡೆಯುತ್ತಿರುವ ಈ ಎರಡು ದಿನದ ಕಾರ್ಯಕ್ರಮದ ಪ್ರಮುಖ ಉದ್ದೇಶ ಆರೋಗ್ಯ ವಿಮೆಯ ಕ್ಲೈಮ್‌ಗಳನ್ನು ಪರಿಶೀಲಿಸುವ ಪ್ರಕ್ರಿಯೆಯಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಅಳವಡಿಸುವುದಾಗಿದೆ.

ಹ್ಯಾಕಥಾನ್‌ನಲ್ಲಿ ಭಾಗವಹಿಸಿದ್ದ ಸಂಶೋಧಕರು ಮತ್ತು ನವೋದ್ಯಮಗಳು ವೈದ್ಯಕೀಯ ದಾಖಲೆಗಳ ವಿಶ್ಲೇಷಣೆ, ರೇಡಿಯಾಲಜಿ ಆಧಾರಿತ ಕಾಯಿಲೆ ಪತ್ತೆ ಮತ್ತು ಡೀಪ್​ಫೇಕ್​ಗಳನ್ನು (Deepfakes) ಗುರುತಿಸಲು AI ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಪ್ರದರ್ಶಿಸಿದರು. ಈ ಮೂರು ಸಮಸ್ಯೆಗಳಿಗೆ ಎಐ ಪರಿಹಾರಗಳನ್ನು ಹುಡುಕಲು ನಡೆಸಲಾದ ಹ್ಯಾಕಥಾನ್​ನಲ್ಲಿ ವಿಜೇತರಾದ ತಂಡಗಳು ತಮ್ಮ ವಿಚಾರಗಳನ್ನು ಪ್ರಸ್ತುತಪಡಿಸಿದವು.

ಇದನ್ನೂ ಓದಿ: ಗೂಗಲ್​ಗೆ ಆರಂಭದಲ್ಲೇ ಫಂಡಿಂಗ್ ನೀಡಿದ್ದ ರಾಮ್ ಶ್ರೀರಾಮ್; ಭಾರತದ ಈ ಕಂಪನಿಯತ್ತ ಈಗ ಅವರ ಚಿತ್ತ

ಪ್ರಸ್ತುತ ಆಯುಷ್ಮಾನ್ ಭಾರತ್ ಯೋಜನೆಯಡಿ ಪ್ರತಿದಿನ ಸುಮಾರು 50,000 ಕ್ಲೈಮ್‌ಗಳು ಸಲ್ಲಿಕೆಯಾಗುತ್ತಿವೆ. ಇವುಗಳನ್ನು ಮನುಷ್ಯರೇ ಮ್ಯಾನುಯಲ್ ಆಗಿ ಪರಿಶೀಲಿಸುವುದಕ್ಕೆ ಹೆಚ್ಚಿನ ಸಮಯ ತಗುಲುತ್ತಿದೆ. AI ಬಳಕೆಯಿಂದ ಈ ಪ್ರಕ್ರಿಯೆಯು ಸ್ವಯಂಚಾಲಿತವಾಗಿ (Auto-Adjudication) ಮತ್ತು ಅತ್ಯಂತ ವೇಗವಾಗಿ ನಡೆಯಲಿದೆ.

AI ತಂತ್ರಜ್ಞಾನವು ಕ್ಲೈಮ್‌ಗಳಲ್ಲಿ ನಡೆಯಬಹುದಾದ ವಂಚನೆಗಳನ್ನು ಪತ್ತೆ ಹಚ್ಚಲು ಮತ್ತು ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಸಹಾಯ ಮಾಡುತ್ತದೆ. ಇದರಿಂದ ರೋಗಿಗಳಿಗೆ ಮತ್ತು ಆಸ್ಪತ್ರೆಗಳಿಗೆ ಹಣ ಪಾವತಿಯಾಗುವ ಸಮಯ ಉಳಿತಾಯವಾಗುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಅಧಿಕಾರಿಗಳು, ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ತಂತ್ರಜ್ಞಾನ ಆಧಾರಿತ ಆರೋಗ್ಯ ಸೇವೆಯನ್ನು ನೀಡಲು ಭಾರತ ಬದ್ಧವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಪರಿಸರಸ್ನೇಹಿ ಯೋಜನೆಗಳಿಗೆ ಆಪಲ್ ಭರ್ಜರಿ ಹೂಡಿಕೆ; ಸ್ವಚ್ಛ ಇಂಧನ, ಪ್ಲಾಸ್ಟಿಕ್ ನಿವಾರಣೆ, ತ್ಯಾಜ್ಯ ನಿರ್ವಹಣೆ ಇತ್ಯಾದಿ ಉಪಕ್ರಮಗಳ ಘೋಷಣೆ

ಈ ಕಾರ್ಯಕ್ರಮವು ಭಾರತದ ಡಿಜಿಟಲ್ ಆರೋಗ್ಯ ವ್ಯವಸ್ಥೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವತ್ತ ಮಹತ್ವದ ಹೆಜ್ಜೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Astrology: ಈ ಸಮಸ್ಯೆಗಳಿಂದ ನೀವು ಬಳಲುತ್ತಿದ್ದರೆ ಜಾತಕದಲ್ಲಿ ಸೂರ್ಯ ದುರ್ಬಲ ಸ್ಥಾನದಲ್ಲಿದ್ದಾನೆ ಎಂದರ್ಥ – Kannada News | Weak Sun in Astrology: Symptoms and Remedies for Sun Affliction in Kundali

ಜಾತಕದಲ್ಲಿ ಸೂರ್ಯ ದುರ್ಬಲImage Credit source: Pinterest

ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯನನ್ನು ‘ಗ್ರಹಗಳ ರಾಜ’ ಎಂದು ಕರೆಯಲಾಗುತ್ತದೆ. ಸೂರ್ಯನು ಕೇವಲ ಬೆಳಕಿನ ಮೂಲವಲ್ಲ, ಬದಲಿಗೆ ವ್ಯಕ್ತಿಯ ಶಕ್ತಿ, ಗೌರವ, ಯಶಸ್ಸು ಮತ್ತು ಆತ್ಮವಿಶ್ವಾಸದ ಸಂಕೇತ. ಜಾತಕದಲ್ಲಿ ಸೂರ್ಯನು ಬಲಿಷ್ಠನಾಗಿದ್ದರೆ ಸಮಾಜದಲ್ಲಿ ಉನ್ನತ ಸ್ಥಾನಮಾನ ಸಿಗುತ್ತದೆ. ಆದರೆ, ಅದೇ ಸೂರ್ಯನು ದುರ್ಬಲ ಅಥವಾ ನೀಚ ಸ್ಥಾನದಲ್ಲಿದ್ದರೆ ಜೀವನದ ಮೇಲೆ ಗಂಭೀರ ಪರಿಣಾಮ ಬೀರಬಹುದು. ನಿಮ್ಮ ಜಾತಕದಲ್ಲಿ ಸೂರ್ಯ ದುರ್ಬಲನಾಗಿದ್ದಾನೆ ಎಂದು ತಿಳಿಯುವುದು ಹೇಗೆ? ಅದರ ಲಕ್ಷಣಗಳು ಮತ್ತು ಪರಿಹಾರಗಳ ಬಗ್ಗೆ ಇಲ್ಲಿದೆ ಸಮಗ್ರ ಮಾಹಿತಿ.

ಸೂರ್ಯ ದುರ್ಬಲ ಸ್ಥಾನದಲ್ಲಿದ್ದರೆ ತಿಳಿಯುವುದು ಹೇಗೆ?

ಆತ್ಮವಿಶ್ವಾಸದ ಕುಸಿತ:

ಸೂರ್ಯನು ಆತ್ಮಬಲದ ಕಾರಕ. ಸೂರ್ಯ ದುರ್ಬಲನಾಗಿದ್ದರೆ ವ್ಯಕ್ತಿಯಲ್ಲಿ ವಿಪರೀತ ಭಯ ಮತ್ತು ಕೀಳರಿಮೆ ಕಾಡುತ್ತದೆ. ಸಣ್ಣ ನಿರ್ಧಾರ ತೆಗೆದುಕೊಳ್ಳಲು ಕೂಡ ಇತರರ ಮೇಲೆ ಅವಲಂಬಿತರಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು.

ಆರೋಗ್ಯ ಸಮಸ್ಯೆಗಳು (ಮೂಳೆ ಮತ್ತು ಕಣ್ಣು):

ದೈಹಿಕವಾಗಿ ಸೂರ್ಯನು ಕಣ್ಣಿನ ದೃಷ್ಟಿ ಮತ್ತು ಮೂಳೆಗಳಿಗೆ ಸಂಬಂಧಿಸಿದ್ದಾನೆ. ಚಿಕ್ಕ ವಯಸ್ಸಿನಲ್ಲೇ ದೃಷ್ಟಿ ದೋಷ ಕಾಣಿಸಿಕೊಳ್ಳುವುದು ಅಥವಾ ಪದೇ ಪದೇ ಕೀಲು ನೋವು ಅನುಭವಿಸುವುದು ಸೂರ್ಯನ ದೋಷದ ಲಕ್ಷಣಗಳಾಗಿವೆ.

ತಂದೆಯೊಂದಿಗೆ ಭಿನ್ನಾಭಿಪ್ರಾಯ:

ಜ್ಯೋತಿಷ್ಯದ ಪ್ರಕಾರ ಸೂರ್ಯನು ಪಿತೃತ್ವದ ಸಂಕೇತ. ಜಾತಕದಲ್ಲಿ ಸೂರ್ಯ ಸರಿಯಾದ ಸ್ಥಾನದಲ್ಲಿಲ್ಲದಿದ್ದರೆ ತಂದೆಯೊಂದಿಗೆ ಸೈದ್ಧಾಂತಿಕ ಸಂಘರ್ಷ ಉಂಟಾಗಬಹುದು ಅಥವಾ ತಂದೆಯ ಆರೋಗ್ಯದಲ್ಲಿ ಏರುಪೇರಾಗಬಹುದು.

ಗೌರವಕ್ಕೆ ಚ್ಯುತಿ:

ನೀವು ಎಷ್ಟೇ ಪ್ರಾಮಾಣಿಕವಾಗಿ ಕೆಲಸ ಮಾಡಿದರೂ ಸಮಾಜದಲ್ಲಿ ಅಥವಾ ಕಚೇರಿಯಲ್ಲಿ ನಿಮಗೆ ಸಲ್ಲಬೇಕಾದ ಗೌರವ ಸಿಗುತ್ತಿಲ್ಲವೇ? ಕಾರಣವಿಲ್ಲದೆ ಕಳಂಕ ಅಥವಾ ಅಪಪ್ರಚಾರ ಎದುರಿಸುತ್ತಿದ್ದರೆ ಅದಕ್ಕೆ ಸೂರ್ಯ ದುರ್ಬಲ ಸ್ಥಾನದಲ್ಲಿರುವುದೇ ಕಾರಣವಿರಬಹುದು.

ವೃತ್ತಿ ಬದುಕಿನಲ್ಲಿ ಹಿನ್ನಡೆ:

ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಅಥವಾ ಉದ್ಯೋಗದಲ್ಲಿ ಬಡ್ತಿ ನಿರೀಕ್ಷಿಸುತ್ತಿರುವವರಿಗೆ ಸೂರ್ಯನ ಬಲ ಬಹಳ ಮುಖ್ಯ. ದುರ್ಬಲ ಸೂರ್ಯನು ಮೇಲಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡುತ್ತದೆ ಮತ್ತು ವೃತ್ತಿಜೀವನದಲ್ಲಿ ಅಡೆತಡೆಗಳನ್ನು ತರುತ್ತದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಮಾನಸಿಕ ಅಶಾಂತಿ:

ಸೂರ್ಯನ ಪ್ರಭಾವ ಕಡಿಮೆಯಾದಾಗ ವ್ಯಕ್ತಿಯು ಸಂಕುಚಿತ ಮನೋಭಾವ ಬೆಳೆಸಿಕೊಳ್ಳಬಹುದು. ಇದು ಅತಿಯಾದ ಖಿನ್ನತೆ ಮತ್ತು ಮಾನಸಿಕ ಒತ್ತಡಕ್ಕೆ ದಾರಿ ಮಾಡಿಕೊಡುತ್ತದೆ.

ಜಾತಕದಲ್ಲಿ ಸೂರ್ಯನ ಬಲ ಹೆಚ್ಚಿಸಲು ಸರಳ ಪರಿಹಾರಗಳು:

ನಿಮ್ಮ ಜೀವನದಲ್ಲಿ ಈ ಮೇಲಿನ ಸಮಸ್ಯೆಗಳಿದ್ದರೆ ಸೂರ್ಯನನ್ನು ಪ್ರಸನ್ನಗೊಳಿಸಲು ಈ ಕ್ರಮಗಳನ್ನು ಅನುಸರಿಸಿ:

  • ಅರ್ಘ್ಯ ಅರ್ಪಣೆ: ಪ್ರತಿದಿನ ಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ ತಾಮ್ರದ ಪಾತ್ರೆಯಿಂದ ಸೂರ್ಯನಿಗೆ ನೀರನ್ನು ಅರ್ಪಿಸಿ.
  • ಮಂತ್ರ ಪಠನೆ: ಪ್ರತಿನಿತ್ಯ 108 ಬಾರಿ “ಓಂ ಘೃಣಿ ಸೂರ್ಯಾಯ ನಮಃ” ಎಂಬ ಮಂತ್ರವನ್ನು ಪಠಿಸುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ.
  • ದಾನದ ಮಹತ್ವ: ಭಾನುವಾರದಂದು ಬೆಲ್ಲ, ಗೋಧಿ, ತಾಮ್ರ ಅಥವಾ ಕೆಂಪು ಬಟ್ಟೆಯನ್ನು ದಾನ ಮಾಡುವುದು ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ.
  • ಭಾನುವಾರ ಉಪವಾಸ: ಸೂರ್ಯ ದೇವರ ಪ್ರೀತ್ಯರ್ಥ ಭಾನುವಾರದಂದು ಉಪವಾಸ ಆಚರಿಸಿ ಮತ್ತು ಸೂರ್ಯ ನಮಸ್ಕಾರ ಮಾಡುವುದರಿಂದ ಆರೋಗ್ಯ ಮತ್ತು ಯಶಸ್ಸು ಲಭಿಸುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Suvendu Adhikari: ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಆಯ್ಕೆ; ನಾಳೆಯೇ ಪ್ರಮಾಣವಚನ – Kannada News | Suvendu Adhikari selected as BJPs first Chief Minister in West Bengal Amit Shah Announces

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಐತಿಹಾಸಿಕ ಗೆಲುವಿನ ನಂತರ, ಸುವೇಂದು ಅಧಿಕಾರಿ ಅವರನ್ನು ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಘೋಷಿಸಲಾಗಿದೆ. ಅವರು ನಾಳೆ (ಶನಿವಾರ) ಬೆಳಗ್ಗೆ 11 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರು ಮೊದಲು ನಂದಿಗ್ರಾಮದಲ್ಲಿ ಮತ್ತು ಈಗ ಭವಾನಿಪುರದಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿ, ಬಂಗಾಳದಲ್ಲಿ ಬಿಜೆಪಿಯ ಅತ್ಯಂತ ಪ್ರಭಾವಿ ನಾಯಕನಾಗಿ ಹೊರಹೊಮ್ಮುವ ಮೂಲಕ ಟಿಎಂಸಿ ಸರ್ಕಾರಕ್ಕೆ ಸವಾಲು ಹಾಕಿದ್ದರು.

Source link

ಪುನರ್ವಸತಿ ಕೇಂದ್ರಕ್ಕೆ ದಾಖಲಾಗಿದ್ದ ಯುವತಿ ಅನುಮಾನಾಸ್ಪದ ಸಾವು: ಮಗಳು ಗುಣಮುಖಳಾಗ್ತಾಳೆಂಬ ಆಸೆಯಲ್ಲಿದ್ದ ಪೋಷಕರಿಗೆ ಆಘಾತ – Kannada News | Shivamogga: Teen’s Suspicious Death at Rehab Center Sparks Negligence Probe

ಶಿವಮೊಗ್ಗ, ಮೇ 08: ನಗರದ ಪ್ರಸಿದ್ಧ ಮಾನಸಿಕ ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ಚಿಕಿತ್ಸೆಗೆಂದು ದಾಖಲಾಗಿದ್ದ ಯುವತಿ ಒಂದೇ ದಿನಕ್ಕೆ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿಕಾರಿಪುರದ ಈಸೂರಿನ ನಿವಾಸಿ ನೇಹಾ (17) ಮೃತ ಯುವತಿಯಾಗಿದ್ದು, ಮಗಳ ಹುಷಾರಾಗಿ ಮನೆಗೆ ಬರುತ್ತಾಳೆಂಬ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೀಗ ಆಘಾತ ಉಂಟಾಗಿದೆ. ಯುವತಿಯ ಸಾವಿನ ಹಿಂದೆ ನೂರೆಂಟು ಅನುಮಾನಗಳು ಹುಟ್ಟಿಕೊಂಡಿದ್ದು, ಈ ಬಗ್ಗೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

8 ತಿಂಗಳ ಹಿಂದೆ ಕಾಲೇಜಿಗೆ ಹೋಗುವಾಗ ಹಾವು ನೋಡಿ ನೇಹಾ ಬೆಚ್ಚಿಬಿದ್ದಿದ್ದಳು. ಓದುವ ವಿಚಾರದಲ್ಲಿಯೂ ಮಂಕಾಗಿದ್ದ ಈಕೆ ಒಮ್ಮೆ ಬ್ಲೇಡ್​​ನಿಂದ ಕೈ ಸಹ ಕೊಯ್ದುಕೊಂಡಿದ್ದಳು. ಈ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಕೂಡ  ಬರೆದಿರಲಿಲ್ಲ. 3 ದಿನಗಳ ಹಿಂದೆಯೂ ಯುವತಿಯನ್ನು ಖಾಸಗಿ ನರ್ಸಿಂಗ್ ಹೋಂಗೆ ಕರೆತಂದು ಚಿಕಿತ್ಸೆ ಕೊಡಿಸಲಾಗಿತ್ತು. ಈ ನಡುವೆ ಶಿವಮೊಗ್ಗದ ಮಾನಸಧಾರ ಮಾನಸಿಕ ಸಾಮಾಜಿಕ ಪುನರ್ವಸತಿ ಕೇಂದ್ರದದವರು ನೇಹಾಳನ್ನು ಬೇಸಿಗೆ ಶಿಬಿರಕ್ಕೆ ಸೇರಿಸಿದರೆ ಗುಣಮುಖರಾಗುತ್ತಾಳೆ ಎಂದಿದ್ದರಂತೆ. ಹೀಗಾಗಿ ಮೊನ್ನೆ ಮಧ್ಯಾಹ್ನ 3 ಗಂಟೆಗೆ ಪುನರ್ ವಸತಿ ಕೇಂದ್ರಕ್ಕೆ ನೇಹಾಳನ್ನ ಕರೆತಂದು ಪೋಷಕರು ಸೇರಿಸಿದ್ದರು. ಆದರೆ ನಿನ್ನೆ ಮಧ್ಯಾಹ್ನದ ಹೊತ್ತಿಗೆ ಪುನರ್ವಸತಿ ಕೇಂದ್ರದ ಕಡೆಯಿಂದ ನೇಹಾ ಪೋಷಕರಿಗೆ ಸಾವರ್ ಲೈನ್ ರಸ್ತೆಯಲ್ಲಿರುವ ಖಾಸಗಿ ನರ್ಸಿಂಗ್​​ ಹೋಂಗೆ ಬನ್ನಿ. ನೇಹಾ ಮತ್ತೆ ಕೈ ಕೊಯ್ದುಕೊಂಡಿದ್ದಾಳೆ ಎಂಬ ಮಾಹಿತಿ ಬಂದಿದೆ. ಕುಟುಂಬ ನರ್ಸಿಂಗ್ ಹೋಂಗೆ ಬಂದ ವೇಳೆ ಆಕೆ ಮೃತಳಾಗಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಬಿಜೆಪಿ ಮುಖಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ; ಸೊರಬ ಪುರಸಭೆ ಮಾಜಿ ಅಧ್ಯಕ್ಷ ಅರೆಸ್ಟ್!

ಸಂಪೂರ್ಣ ಜವಾಬ್ದಾರಿ ನಮ್ಮದೇ ಎಂದು ಪುನರ್ ವಸತಿ ಕೇಂದ್ರಕ್ಕೆ ಸೇರಿಸಿಕೊಂಡಿದ್ದ ವೈದ್ಯರು ಇಂತಹ ಘಟನೆ ನಡೆದ್ರೂ ಪೊಲೀಸರಿಗೆ ಮಾಹಿತಿ ನೀಡದೇ ಖಾಸಗಿ ಆಸ್ಪತ್ರೆಗೆ ಆಕೆಯನ್ನು ಕರೆತಂದಿದ್ದಾರೆ. ಬೇಸಿಗೆ ಶಿಬಿರದಲ್ಲಿ ಸಮಾನ ಮನಸ್ಕರರೊಂದಿಗೆ ನೇಹಾಳನ್ನ ಬಿಡಲಾಗುವುದು ಎಂದಿದ್ದ ಆಸ್ಪತ್ರೆಯವರು ಮಾನಸಿಕ ರೋಗಿಗಳ ಜೊತೆ ಆಕೆಯನ್ನು ಬಿಟ್ಟಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದಾರೆ. ಅಲ್ಲದೆ ಪುನರ್​​ ವಸತಿ ಕೇಂದ್ರದ ಕೊಠಡಿಯಲ್ಲಿಯೇ ನೇಹಾ ವೇಲ್​​ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಗಂಭೀರ ಆರೋಪ ಮಾಡಿದ್ದಾರೆ. ಒಟ್ಟಿನಲ್ಲಿ ಪುನರ್ ವಸತಿ ಕೇಂದ್ರಕ್ಕೆ ಸೇರಿದ ಒಂದೇ ದಿನದಲ್ಲಿ ನೇಹಾ ಪ್ರಾಣಬಿಟ್ಟಿರೋದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 5:14 pm, Fri, 8 May 26

Source link

ಯಶ್ ಸಖತ್ ಐಡಿಯಾ, ಬಿಜಿಎಂಐ ಗೇಮಿನಲ್ಲಿ ‘ಟಾಕ್ಸಿಕ್’ ರಾಯ – Kannada News | Yash features in Indian famous game BGMI 4.4 update

ಯಶ್ (Yash) ಸಿನಿಮಾಗಳನ್ನು ಅಂತರಾಷ್ಟ್ರೀಯ ಗುಣಮಟ್ಟದಲ್ಲಿ ಮಾಡುವ ಜೊತೆಗೆ ಅದರ ಪ್ರಚಾರವನ್ನೂ ಸಹ ಭಿನ್ನವಾಗಿ ಮಾಡುತ್ತಾ ಬಂದಿದ್ದಾರೆ. ಪ್ರತಿ ಬಾರಿ ಹೊಸ ಹೊಸ ಆಡಿಯೆನ್ಸ್ ಅನ್ನು ತಲುಪುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಯಶ್ ಅವರ ‘ಟಾಕ್ಸಿಕ್’ ಸಿನಿಮಾ ಕೆಲವೇ ವಾರಗಳಲ್ಲಿ ಬಿಡುಗಡೆ ಆಗಲಿದೆ. ಜೂನ್ 04 ರಂದು ಬಿಡುಗಡೆ ಆಗಬೇಕಿದ್ದ ಈ ಸಿನಿಮಾವನ್ನು ಪ್ರಚಾರದ ಕಾರಣಕ್ಕೆಂದೇ ಮುಂದೂಡಲಾಗಿದೆ ಎನ್ನಲಾಗುತ್ತಿದೆ. ಇದೀಗ ಯಶ್ ಅವರು ಹೊಸ ರೀತಿಯ ಆಡಿಯೆನ್ಸ್ ಅನ್ನು ತಲುಪಲು ಗೇಮ್ ಒಂದರ ಜೊತೆಗೆ ಒಪ್ಪಂದ ಮಾಡಿಕೊಂಡಂತಿದ್ದಾರೆ. ಯಶ್ ಅವರು ಇದೀಗ ಭಾರತದ ಜನಪ್ರಿಯ ಗೇಮ್ ಆಗಿರುವ ಬಿಜಿಎಂಐನಲ್ಲಿ (BGMI) ಕಾಣಿಸಿಕೊಳ್ಳಲಿದ್ದಾರೆ.

‘ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ’ ಗೇಮ್ ಭಾರತದಲ್ಲಿ 25 ಕೋಟಿಗೂ ಹೆಚ್ಚು ಡೌನ್​​ಲೋಡ್ ಕಂಡಿರುವ ಗೇಮಾಗಿದೆ. ಬಿಜಿಎಂಐ ತನ್ನ ಮುಂದಿನ 4.4 ಅಪ್‌ಡೇಟ್‌ ಅನ್ನು ಶೀಘ್ರವೇ ಹೊರತರಲಿದೆ.  ಈ ಅಪ್​​ಡೇಟ್​​ನಲ್ಲಿ ಅಡಕವಾಗಿರುವ ಹೊಸ ಫೀಚರ್ ಕುರಿತಾಗಿ ಸುದ್ದಿ ಈಗಾಗಲೇ ಲೀಕ್ ಆಗಿದ್ದು, ಹೊಸ ಆವೃತ್ತಿಯಲ್ಲಿ ಯಶ್ ಅವರು ಸಹ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಮಾತ್ರವಲ್ಲದೆ ‘ಟಾಕ್ಸಿಕ್’ ಸಿನಿಮಾಕ್ಕೆ ಸಂಬಂಧಿಸಿದ ಕೆಲವು ವಿಷಯಗಳು ಸಹ ಗೇಮಿನಲ್ಲಿ ಇರಲಿವೆ. ಪ್ರಸ್ತುತ ಹರಿದಾಡುತ್ತಿರುವ ಮಾಹಿತಿಯಂತೆ, BGMI ನ 4.4 ಅಪ್‌ಡೇಟ್‌ನಲ್ಲಿ ಯಶ್ ಅವರ ‘ಟಾಕ್ಸಿಕ್’ ಚಲನಚಿತ್ರದ ಥೀಮ್ ಆಧಾರಿತ ವಿಶೇಷ ಸ್ಕಿನ್‌ಗಳು ಮತ್ತು ಔಟ್‌ಫಿಟ್‌ಗಳು ಲಭ್ಯವಿರಲಿವೆ. ಯಶ್ ಅವರ ವಿಶಿಷ್ಟ ಶೈಲಿಯ ಹೇರ್‌ಸ್ಟೈಲ್, ಉಡುಪು ಮತ್ತು ಆಕ್ಷನ್ ಮ್ಯಾನರಿಸಂಗಳನ್ನು ಗೇಮ್‌ನಲ್ಲಿ ಅಳವಡಿಸಲಾಗಿದೆಯಂತೆ.

ಇದನ್ನೂ ಓದಿ:‘ಟಾಕ್ಸಿಕ್’ ಟೀಸರ್​ನಲ್ಲಿ ಅಂಥ ದೃಶ್ಯ ಇದೆ ಎಂದು ಟೀಕಿಸಿದವರಿಗೆ ಉತ್ತರ ನೀಡಿದ ಯಶ್

ಈ ಹಿಂದಿನ ಅಪ್‌ಡೇಟ್‌ಗಳಲ್ಲಿ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ, ಶಾರುಖ್ ಖಾನ್ ಅವರ ಧ್ವನಿ ಕೇಳುತ್ತಿತ್ತು. ಹೊಸ ಆವೃತ್ತಿಯಲ್ಲಿ ಯಶ್ ಅವರ ಖಡಕ್ ಧ್ವನಿ ಸಹ ಇರಲಿದೆ. ‘ಎನಿಮೀಸ್ ಅಹೆಡ್’, ‘ಫಾಲೋ ಮಿ’ ಇನ್ನಿತರೆ ಗೇಮ್ ಕಮಾಂಡ್​​ಗಳು ಯಶ್ ಅವರ ಖಡಕ್ ಧ್ವನಿಯಲ್ಲಿ ಕೇಳಬಹುದಾಗಿದೆ. ಯಶ್ ಅಭಿಮಾನಿಗಳಿಗಂತೂ ಇದು ಹಬ್ಬವೇ ಸರಿ. ಬಿಜಿಎಂಐ ಹೊಸ ಅಪ್​​ಡೇಟ್​​ನ ಗೇಮ್ ಆಡುವವರು ವಿಶೇಷ ‘ಟಾಕ್ಸಿಕ್’ ಕ್ರೇಟ್‌ಗಳನ್ನು ಅನ್‌ಲಾಕ್ ಮಾಡಬಹುದು. ಇದರಲ್ಲಿ ಚಿತ್ರದ ಪೋಸ್ಟರ್‌ಗಳಲ್ಲಿ ಕಾಣಿಸಿಕೊಂಡಿರುವ ರೀತಿಯ ಗನ್‌ ಸ್ಕಿನ್‌ಗಳು ಮತ್ತು ಡ್ರೆಸ್‌ಗಳು ಇರಲಿವೆ. ಗೇಮ್​ ಜೊತೆಗೆ ಯಶ್ ಅವರ ಸಹಯೋಗವನ್ನು ಸೆಲೆಬ್ರೇಟ್ ಮಾಡಲು ಗೇಮ್‌ನಲ್ಲಿ ಸಣ್ಣ ಪುಟ್ಟ ಮಿಷನ್‌ಗಳನ್ನು ನೀಡಲಾಗುತ್ತದೆ. ಈ ಮಿಷನ್‌ಗಳನ್ನು ಪೂರ್ಣಗೊಳಿಸಿದರೆ ಉಚಿತವಾಗಿ ಯಶ್ ಸಂಬಂಧಿತ ರಿವಾರ್ಡ್‌ಗಳನ್ನು ಪಡೆಯಬಹುದಾಗಿರುತ್ತದೆ.

ಸಾಮಾನ್ಯವಾಗಿ BGMI ದೊಡ್ಡ ಬಾಲಿವುಡ್ ನಟರು ಅಥವಾ ಕ್ರೀಡಾಪಟುಗಳೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತದೆ. ಆದರೆ ಈಗ ದಕ್ಷಿಣ ಭಾರತದ, ವಿಶೇಷವಾಗಿ ಕನ್ನಡದ ನಟನೊಬ್ಬನ ಚಿತ್ರದೊಂದಿಗೆ ಜಾಗತಿಕ ಮಟ್ಟದ ಗೇಮ್ ಕೈಜೋಡಿಸುತ್ತಿರುವುದು ಯಶ್ ಅವರ ಜಾಗತಿಕ ಜನಪ್ರಿಯತೆಯನ್ನು ತೋರಿಸುತ್ತದೆ. ಇದು ‘ಟಾಕ್ಸಿಕ್’ ಚಿತ್ರದ ಪ್ರಚಾರಕ್ಕೆ ಭರ್ಜರಿ ವೇದಿಕೆ ಒದಗಿಸಲಿದೆ. ವರದಿಯ ಪ್ರಕಾರ, BGMI 4.4 ಅಪ್‌ಡೇಟ್ ಮುಂದಿನ ಕೆಲವು ವಾರಗಳಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಗೇಮರ್‌ಗಳು ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್ ಮೂಲಕ ಈ ಅಪ್‌ಡೇಟ್ ಪಡೆದ ನಂತರ ‘ಟಾಕ್ಸಿಕ್’ ಥೀಮ್ ಅನ್ನು ಆನಂದಿಸಬಹುದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version