RRB Recruitment 2026: ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ; 11,127 ಸಹಾಯಕ ಲೋಕೋ ಪೈಲಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | RRB ALP Recruitment 2026: 11,127 Assistant Loco Pilot Jobs Announced! Apply Now!

ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿImage Credit source: Ai generated

ಭಾರತೀಯ ರೈಲ್ವೆಯಲ್ಲಿ ಕೆಲಸ ಪಡೆಯುವ ಕನಸು ಕಾಣುತ್ತಿರುವ ನಿರುದ್ಯೋಗಿ ಯುವಜನತೆಗೆ ರೈಲ್ವೆ ನೇಮಕಾತಿ ಮಂಡಳಿ (RRB) ಭರ್ಜರಿ ಸಿಹಿಸುದ್ದಿ ನೀಡಿದೆ. 2026ನೇ ಸಾಲಿನ ನೇಮಕಾತಿ ಪ್ರಕ್ರಿಯೆಯ ಭಾಗವಾಗಿ ದೇಶಾದ್ಯಂತ ಒಟ್ಟು 11,127 ಸಹಾಯಕ ಲೋಕೋ ಪೈಲಟ್ (Assistant Loco Pilot – ALP) ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ರೈಲ್ವೆ ಇಲಾಖೆಯ ಈ ಬೃಹತ್ ನೇಮಕಾತಿಯು ತಾಂತ್ರಿಕ ಹಿನ್ನೆಲೆಯುಳ್ಳ ಅಭ್ಯರ್ಥಿಗಳಿಗೆ ಸುವರ್ಣಾವಕಾಶವಾಗಿದೆ.

ಪ್ರಮುಖ ದಿನಾಂಕ ಮತ್ತು ಹುದ್ದೆಗಳ ವಿವರ:

ರೈಲ್ವೆ ಮಂಡಳಿಯ ಅಧಿಕೃತ ಪ್ರಕಟಣೆಯ ಪ್ರಕಾರ, ಒಟ್ಟು 11,127 ಖಾಲಿ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಮೇ 15 ರಿಂದ ಆರಂಭವಾಗಲಿದೆ. ಆಸಕ್ತ ಅಭ್ಯರ್ಥಿಗಳು ಜೂನ್ 14ರ ವರೆಗೆ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುತ್ತದೆ.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ (SSLC) ಉತ್ತೀರ್ಣರಾಗಿರಬೇಕು. ಇದರೊಂದಿಗೆ ಸಂಬಂಧಿತ ಟ್ರೇಡ್‌ಗಳಾದ ಫಿಟ್ಟರ್, ಎಲೆಕ್ಟ್ರಿಷಿಯನ್, ಮೆಕ್ಯಾನಿಕ್ ಮುಂತಾದವುಗಳಲ್ಲಿ ITI (ಐಟಿಐ) ಪೂರ್ಣಗೊಳಿಸಿರಬೇಕು. ತಾಂತ್ರಿಕ ಶಿಕ್ಷಣ ಪಡೆದವರಿಗೆ ಹೆಚ್ಚಿನ ಆದ್ಯತೆ ಇದ್ದು, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಅಥವಾ ಆಟೋಮೊಬೈಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಅಥವಾ ಪದವಿ (B.E/B.Tech) ಪಡೆದವರು ಸಹ ಅರ್ಹರಾಗಿರುತ್ತಾರೆ. ಅಭ್ಯರ್ಥಿಗಳ ವಯಸ್ಸು 18 ರಿಂದ 30 ವರ್ಷಗಳ ಒಳಗಿರಬೇಕು ಹಾಗೂ ನಿಯಮದಂತೆ ಮೀಸಲಾತಿ ವರ್ಗದವರಿಗೆ ವಯೋಮಿತಿ ಸಡಿಲಿಕೆ ಇರಲಿದೆ.

ಆಯ್ಕೆ ಪ್ರಕ್ರಿಯೆಯ ಹಂತಗಳು:

ಲೋಕೋ ಪೈಲಟ್ ಹುದ್ದೆಯು ಅತ್ಯಂತ ಜವಾಬ್ದಾರಿಯುತ ಕೆಲಸವಾಗಿರುವುದರಿಂದ, ಅಭ್ಯರ್ಥಿಗಳನ್ನು ಐದು ಕಠಿಣ ಹಂತಗಳಲ್ಲಿ ಆಯ್ಕೆ ಮಾಡಲಾಗುತ್ತದೆ. ಮೊದಲಿಗೆ ಎರಡು ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳು (CBT-1 ಮತ್ತು CBT-2) ನಡೆಯಲಿವೆ. ನಂತರ ಅಭ್ಯರ್ಥಿಗಳ ಮಾನಸಿಕ ಸಾಮರ್ಥ್ಯವನ್ನು ಅಳೆಯಲು CBAT (ಆಪ್ಟಿಟ್ಯೂಡ್ ಟೆಸ್ಟ್) ನಡೆಸಲಾಗುತ್ತದೆ. ಇವುಗಳಲ್ಲಿ ಉತ್ತೀರ್ಣರಾದವರಿಗೆ ದಾಖಲೆಗಳ ಪರಿಶೀಲನೆ ಹಾಗೂ ಅಂತಿಮವಾಗಿ ಅತ್ಯಂತ ಕಟ್ಟುನಿಟ್ಟಾದ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ವಿಶೇಷವಾಗಿ ಲೋಕೋ ಪೈಲಟ್ ಆಗಲು ದೃಷ್ಟಿ ಸಾಮರ್ಥ್ಯವು ‘A-1’ ಗುಣಮಟ್ಟದಲ್ಲಿರುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: ಇನ್ಫೋಸಿಸ್‌ನಿಂದ ಭರ್ಜರಿ ಉದ್ಯೋಗಾವಕಾಶ; 20,000 ಫ್ರೆಶರ್ಸ್‌ ನೇಮಕಾತಿ ಘೋಷಣೆ

ಆಕರ್ಷಕ ವೇತನ ಮತ್ತು ಭತ್ಯೆಗಳು:

ರೈಲ್ವೆಯಲ್ಲಿ ಆಯ್ಕೆಯಾದ ಸಹಾಯಕ ಲೋಕೋ ಪೈಲಟ್‌ಗಳಿಗೆ ಅತ್ಯುತ್ತಮ ವೇತನ ಶ್ರೇಣಿಯನ್ನು ನೀಡಲಾಗುತ್ತದೆ. ಆರಂಭಿಕವಾಗಿ ರೂ. 19,900 ಮೂಲ ವೇತನದೊಂದಿಗೆ ತುಟ್ಟಿಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA) ಮತ್ತು ರೈಲು ಚಲಾಯಿಸುವ ಸಮಯದ ಆಧಾರದ ಮೇಲೆ ನೀಡಲಾಗುವ ‘ರನ್ನಿಂಗ್ ಭತ್ಯೆ’ ಸೇರಿ ಮಾಸಿಕ ರೂ. 35,000 ರಿಂದ ರೂ. 45,000 ವರೆಗೆ ವೇತನ ದೊರೆಯಲಿದೆ. ಇದರೊಂದಿಗೆ ರೈಲ್ವೆ ಇಲಾಖೆಯ ಎಲ್ಲಾ ವೈದ್ಯಕೀಯ ಮತ್ತು ಪ್ರಯಾಣ ಸೌಲಭ್ಯಗಳು ಲಭ್ಯವಿರುತ್ತವೆ.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಅಭ್ಯರ್ಥಿಗಳು ಆಯಾ ವಲಯದ ಅಧಿಕೃತ ರೈಲ್ವೆ ನೇಮಕಾತಿ ಮಂಡಳಿಯ (RRB) ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಪರೀಕ್ಷೆಯು ತಾಂತ್ರಿಕ ಮತ್ತು ಸಾಮಾನ್ಯ ಸಾಮರ್ಥ್ಯವನ್ನು ಆಧರಿಸಿರುವುದರಿಂದ, ಅಭ್ಯರ್ಥಿಗಳು ಈಗಿನಿಂದಲೇ ಪಠ್ಯಕ್ರಮದ ಪ್ರಕಾರ ತಯಾರಿಯನ್ನು ಆರಂಭಿಸುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಗಮನಿಸಿ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:18 pm, Fri, 8 May 26

Source link

ಬಿಹಾರದಲ್ಲಿ ಶಿಕ್ಷಕರ ನೇಮಕಾತಿ ವಿಳಂಬ ವಿರೋಧಿಸಿ ಪ್ರತಿಭಟನೆ; ಪೊಲೀಸರಿಂದ ಲಾಠಿಚಾರ್ಜ್ – Kannada News | Bihar teacher recruitment protest Police uses lathicharge on TRE 4 aspirants

ಪಾಟ್ನಾ, ಮೇ 8: ಬಿಹಾರದಲ್ಲಿ ಶಿಕ್ಷಕರ ನೇಮಕಾತಿ ಪರೀಕ್ಷೆ (TRE) ಬರೆದ ಅಭ್ಯರ್ಥಿಗಳನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್‌ ನಡೆಸಿದ್ದಾರೆ. ಇದರಿಂದ ಬಿಹಾರದಲ್ಲಿ (Bihar) ಉದ್ವಿಗ್ನ ವಾತಾವರಣ ಸೃಷ್ಟಿಯಾಯಿತು. ಶಿಕ್ಷಕರ ನೇಮಕಾತಿ ಪರೀಕ್ಷೆ 4.0 ರ ಅಧಿಸೂಚನೆ ವಿಳಂಬವಾದ ಬಗ್ಗೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು. ಇದರ ಪರಿಣಾಮವಾಗಿ, ಬಿಹಾರ ಸಾರ್ವಜನಿಕ ಸೇವಾ ಆಯೋಗ (BPSC) ಶಿಕ್ಷಕರ ನೇಮಕಾತಿ ಪರೀಕ್ಷೆಯ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಲು ಆಕಾಂಕ್ಷಿಗಳು ಸಾಮೂಹಿಕವಾಗಿ ಪ್ರತಿಭಟನೆ ನಡೆಸಿದ್ದರು.

ಏಪ್ರಿಲ್ ಕಳೆದು ಮೇ ಎರಡನೇ ವಾರ ಪ್ರಾರಂಭವಾದರೂ ಪೋರ್ಟಲ್‌ನಲ್ಲಿ ಯಾವುದೇ ಅಧಿಕೃತ ನೇಮಕಾತಿ ಅಧಿಸೂಚನೆ ಇಲ್ಲ. ಇದರಿಂದ ಸಾವಿರಾರು ಅಭ್ಯರ್ಥಿಗಳು ಸೇರಿದ್ದ ಪಾಟ್ನಾ ಕಾಲೇಜು ಆವರಣದಲ್ಲಿ ಪ್ರತಿಭಟನೆ ಆರಂಭವಾಯಿತು. ಅಲ್ಲಿಂದ ಬಕರ್‌ಗಂಜ್ ಮತ್ತು ಮಚುವಾ ಟೋಲಿ ಮೂಲಕ ಪ್ರತಿಭಟನಾ ಮೆರವಣಿಗೆ ನಡೆದು, ನಂತರ ಜೆಪಿ ಗೋಲಂಬರ್ ಕಡೆಗೆ ಸಾಗಿತು.

ಇದನ್ನೂ ಓದಿ: ಬಿಹಾರ ರಾಜಕೀಯದಲ್ಲಿ ಹೊಸ ಪರ್ವ: ಸಂಪುಟ ಸೇರಿದ ನಿತೀಶ್ ಪುತ್ರ ನಿಶಾಂತ್, 31 ನಾಯಕರಿಂದ ಮಂತ್ರಿಗಳಾಗಿ ಪ್ರಮಾಣ ವಚನ

ಶಿಕ್ಷಕರ ನೇಮಕಾತಿ ಪರೀಕ್ಷೆ (TRE) 4.0ರ ಅಧಿಕೃತ ಅಧಿಸೂಚನೆ ಪ್ರಕಟಣೆಯಲ್ಲಿ ವಿಳಂಬದ ನಂತರ ಶುಕ್ರವಾರ ಬಿಹಾರ ಸಾರ್ವಜನಿಕ ಸೇವಾ ಆಯೋಗ (BPSC) ಶಿಕ್ಷಕರ ನೇಮಕಾತಿ ಪರೀಕ್ಷೆಯ ಮಾಹಿತಿಯನ್ನು ಸಕಾಲಿಕವಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಅಭ್ಯರ್ಥಿಗಳು ಒಟ್ಟುಗೂಡಿದರು. ಇದರಿಂದ ಜನಸಮೂಹವನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಬಳಸಿದರು. ಈ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಮಧ್ಯಪ್ರವೇಶಿಸಿದರು. ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸ್ ಸಿಬ್ಬಂದಿ ಲಾಠಿಚಾರ್ಜ್ ಮಾಡಿದಾಗ, ಅನೇಕ ಪ್ರತಿಭಟನಾಕಾರರು ಪ್ರತಿಭಟನಾ ಸ್ಥಳದಿಂದ ಓಡಿಹೋಗಲು ಪ್ರಾರಂಭಿಸಿದರು.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿಗೆ ಟಿಎಂಸಿಗೆ ಬೆಂಬಲಿಗರಿಂದ ಮುತ್ತಿಗೆ; ಮತಗಟ್ಟೆ ಬಳಿ ಲಾಠಿ ಚಾರ್ಜ್

ಬಿಹಾರ ಸಾರ್ವಜನಿಕ ಸೇವಾ ಆಯೋಗದ (ಬಿಪಿಎಸ್‌ಸಿ) ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಸೇರಿದ್ದ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು? – Kannada News | Kannada actor Vajrang acted in Jana Nayagan with Vijay, he shares his experience

ದಳಪತಿ ವಿಜಯ್ (Thalapathy Vijay) ಇದೀಗ ತಮಿಳುನಾಡು ಸಿಎಂ ಆಗುವ ಹೊಸ್ತಿಲಲ್ಲಿದ್ದಾರೆ. ಟಿವಿಕೆ ಪಕ್ಷ ಕಟ್ಟಿ ಎರಡೇ ವರ್ಷದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಜಯ ಗಳಿಸಿದ್ದಾರೆ. ವಿಜಯ್ ಅವರೊಟ್ಟಿಗೆ ಕೆಲವು ಕನ್ನಡದ ನಟರು ಆಗೊಮ್ಮೆ, ಈಗೊಮ್ಮೆ ನಟಿಸಿದ್ದಿದೆ. ವಿಜಯ್ ಅವರ ಕೊನೆಯ ಸಿನಿಮಾ ಎನ್ನಲಾಗುತ್ತಿರುವ ‘ಜನ ನಾಯಗನ್’ನಲ್ಲಿ ಕನ್ನಡದ ನಟ ವಜ್ರಾಂಗ್ ನಟಿಸಿದ್ದಾರೆ. ಇದೀಗ ವಜ್ರಾಂಗ್ ಅವರು ಟಿವಿ9 ಜೊತೆಗೆ ಮಾತನಾಡಿದ್ದು, ವಿಜಯ್ ಜೊತೆಗೆ ಸಿನಿಮಾನಲ್ಲಿ ನಟಿಸಿದ ಅನುಭವವನ್ನು ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಆಸ್ತಿಗಾಗಿ ಮಕ್ಕಳನ್ನ ಕೊಂದ್ರು, ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ – Kannada News | KR Nagar Brother Murder: A woman Says give Rs crore Asset To Orphanage

ಮೈಸೂರು, (ಮೇ 08): ಕೆ.ಆರ್ ನಗರದ (KR Nagar) ತಾಲೂಕಿನ ಅರ್ಜುನಹಳ್ಳಿಯಲ್ಲಿ ಸಹೋದರರಿಬ್ಬರನ್ನು ಅಣ್ಣನೇ ಬರ್ಬರವಾಗಿ ಕೊಲೆ ಮಾಡಿದ್ದಾನೆ. ರಾಘ ಹಾಗೂ ಹರ್ವ ಕೊಲೆಯಾದ ಸಹೋದರರು. ಅವರ ತಂದೆಯ ಮೊದಲ ಹೆಂಡತಿಯ ಮಗ ರೋಹಿತ್ ಕೊಲೆ ಆರೋಪಿಯಾಗಿದ್ದು, ಹಳೇ ವೈಷಮ್ಯ ಹಾಗೂ ಆಸ್ತಿ ವಿಚಾರಕ್ಕೆ ಸಹೋದರರನ್ನು ಕೊಂದಿದ್ದಾನೆ ಎಂದು ತಿಳಿದುಬಂದಿದೆ.

ಇನ್ನು ಕೊಲೆಯಾದ ಸಹೋದರರ ತಾಯಿ ಪ್ರತಿಕ್ರಿಯಿಸಿದ್ದು,ಐದು ಕೋಟಿ ರೂಪಾಯಿ ಆಸ್ತಿಗಾಗಿ ಮಕ್ಕಳನ್ನ ಕೊಂದಿದ್ದಾರೆ. ಕೊಲೆಗಾರರಿಗೆ ಸೂಕ್ತ ಶಿಕ್ಷೆಯಾಗಬೇಕು. ಇನ್ನು ಎಲ್ಲಾ ಆಸ್ತಿ ಅನಾಥಾಶ್ರಮಕ್ಕೆ ಬರೆಯುತ್ತೇನೆ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬೆಂಗಳೂರಿಗರೇ ಗಮನಿಸಿ: ಮೇ 10ರಂದು ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ – Kannada News | Namma Metro Service Disruption May 10: Bengaluru Purple Line Timings Affected

ಬೆಂಗಳೂರು, ಮೇ 08: ಅಗತ್ಯ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆ ನಮ್ಮ ಮೆಟ್ರೋ ರೈಲುಗಳ ಸಂಚಾರದಲ್ಲಿ ಮೇ 10ರ ಭಾನುವಾರ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (BMRCL) ಪ್ರಕಟಣೆ ಮೂಲಕ ತಿಳಿಸಿದೆ. ಪ್ರಯಾಣಿಕರು ತಾತ್ಕಾಲಿಕ ಸೇವಾ ವ್ಯತ್ಯಯವನ್ನು ಗಮನಿಸಿ ತಮ್ಮ ಪ್ರಯಾಣವನ್ನು ಪೂರ್ವಯೋಜನೆ ಮಾಡಿಕೊಳ್ಳುವಂತೆ ಬಿಎಂಆರ್​​ಸಿಎಲ್​​ ವಿನಂತಿಸಿಕೊಂಡಿದೆ.

  • ಮೇ 10ರ ಭಾನುವಾರ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ
  • ನಿರ್ವಹಣಾ ಕಾಮಗಾರಿಗಳ ಹಿನ್ನೆಲೆ ಸಂಚಾರ ತಾತ್ಕಾಲಿಕ ಸ್ಥಗಿತ
  • ಪ್ರಕಟಣೆ ಮೂಲಕ ಮಾಹಿತಿ ಹಂಚಿಕೊಂಡ ಬಿಎಂಆರ್​​ಸಿಎಲ್​​

ಇದನ್ನೂ ಓದಿ: ನಮ್ಮ ಮೆಟ್ರೋ ನೇರಳೆ ಮಾರ್ಗದ ಸೇವೆಯಲ್ಲಿ ವ್ಯತ್ಯಯ; 15 ನಿಮಿಷ ನಿಂತಲ್ಲೇ ನಿಂತ ರೈಲುಗಳು

ಭಾನುವಾರದಂದು ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ ಮತ್ತು ಸರ್.ಎಂ. ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣ, ಸೆಂಟ್ರಲ್ ಕಾಲೇಜ್ ನಡುವಿನ ನೇರಳೆ ಮಾರ್ಗದಲ್ಲಿ ಅಗತ್ಯ ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಈ ಕಾಮಗಾರಿಗಾಗಿ ನೇರಳೆ ಮಾರ್ಗದಲ್ಲಿನ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣ-ಹೊಸಹಳ್ಳಿ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳ ನಡುವಿನ ಮೆಟ್ರೋ ರೈಲು ಸೇವೆಯು ತಾತ್ಕಾಲಿಕವಾಗಿ ಎರಡು ಗಂಟೆಗಳ ಕಾಲ, ಅಂದರೆ ಬೆಳಿಗ್ಗೆ 7 ಗಂಟೆಯಿಂದ ಗಂಟೆಯಿಂದ 9ಎ ವರೆಗೆ ಸ್ಥಗಿತಗೊಳ್ಳಲಿದೆ.

ಆದಾಗ್ಯೂ, ಈ ಅವಧಿಯಲ್ಲಿ ಮೆಟ್ರೋ ರೈಲು ಸೇವೆಗಳು ಸಂಬಂಧಿತ ಟರ್ಮಿನಲ್ ನಿಲ್ದಾಣಗಳಿಂದ ಬೆಳಿಗ್ಗೆ 7 ಗಂಟೆಗೆ ನಿಯಮಿತ ವೇಳಾಪಟ್ಟಿಯಂತೆ ಪ್ರಾರಂಭವಾಗಿ, ಕೆಳಕಂಡ ಮಾರ್ಗಗಳಲ್ಲಿ ಎಂದಿನ ಸಂಚರಿಸಲಿವೆ.

  • ಚಲ್ಲಘಟ್ಟ – ವಿಜಯನಗರ
  • ಎಂ.ಜಿ. ರಸ್ತೆ – ವೈಟ್‌ಫೀಲ್ಡ್ (ಕಾಡುಗೋಡಿ)
  • ಮಾದಾವರ – ಸಿಲ್ಕ್ ಇನ್‌ಸ್ಟಿಟ್ಯೂಟ್
  • ಆರ್.ವಿ. ರಸ್ತೆ – ಬೊಮ್ಮಸಂದ್ರ

ಬೆಳಿಗ್ಗೆ 9 ಗಂಟೆಯ ನಂತರ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣ – ಹೊಸಹಳ್ಳಿ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳ ನಡುವೆ ಹಾಗೂ ಸಂಪೂರ್ಣ ನೇರಳೆ ಮಾರ್ಗದಲ್ಲಿ ಮೆಟ್ರೋ ಸೇವೆಗಳು ಎಂದಿನಂತೆ ಪುನಃ ಆರಂಭಗೊಳ್ಳಲಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮಾಹಿತಿ ನೀಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಧುರಂಧರ್ 2’ ಒಟಿಟಿ ಬಿಡುಗಡೆ ದಿನಾಂಕ ನಿಗದಿ, ಇದೆ ಟ್ವಿಸ್ಟ್ – Kannada News | Dhurandhar 2 movie to be streaming on Netflix and Jio Hotstar on May 15

ರಣವೀರ್ ಸಿಂಗ್ (Ranveer Singh) ನಟಿಸಿ ಆದಿತ್ಯ ಧರ್ ನಿರ್ದೇಶನ ಮಾಡಿರುವ ‘ಧುರಂಧರ್ ದಿ ರಿವೇಂಜ್’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ದಾಖಲೆಗಳನ್ನು ಬರೆದಿದೆ. ಸಿನಿಮಾ 1700 ಕೋಟಿಗೂ ಹೆಚ್ಚು ಮೊತ್ತವನ್ನು ಗಳಿಕೆ ಮಾಡಿದೆ. ಸಿನಿಮಾದ ಬಗ್ಗೆ ಸ್ವತಃ ನರೇಂದ್ರ ಮೋದಿ ಮೆಚ್ಚಿ ಮಾತನಾಡಿದ್ದಾರೆ. ಇದೀಗ ಸಿನಿಮಾ ಒಟಿಟಿಗೆ ಲಗ್ಗೆ ಇಡಲು ಸಜ್ಜಾಗಿದ್ದು, ಒಟಿಟಿ ಸ್ಟ್ರೀಮಿಂಗ್​​ನ ದಿನಾಂಕ ನಿಗದಿ ಆಗಿದೆ. ‘ಧುರಂದರ್ 2’ ಸಿನಿಮಾವನ್ನು ಒಟಿಟಿಯಲ್ಲಿ ವೀಕ್ಷಿಸುವವರಿಗೆ ಸಣ್ಣ ಸರ್ಪ್ರೈಸ್ ಸಹ ಕಾದಿದೆ.

ಈ ಹಿಂದೆ ವರದಿ ಮಾಡಿದಂತೆ ‘ಧುರಂಧರ್ 2: ದಿ ರಿವೇಂಜ್’ ಸಿನಿಮಾ ಎರಡು ಒಟಿಟಿಗಳಲ್ಲಿ ಬಿಡುಗಡೆ ಆಗಲಿದೆ. ಮೇ 15 ರಂದು ‘ಧುರಂಧರ್ 2’ ಸಿನಿಮಾವು ಜಿಯೋ ಹಾಟ್​​ಸ್ಟಾರ್ ಮತ್ತು ನೆಟ್​​ಫ್ಲಿಕ್ಸ್​​ಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ. ‘ಧುರಂಧರ್: ದಿ ರಿವೇಂಜ್’ ಸಿನಿಮಾವು ಒಟಿಟಿಯಲ್ಲಿ ‘ಧುರಂಧರ್: ದಿ ರಿವೇಂಜ್’ ಸಿನಿಮಾಕ್ಕೆ ‘ರಾ ಆಂಡ್ ಅನ್​​ದೇಕಾ’ (ಹಸಿ-ಬಿಸಿ ಮತ್ತು ಹಿಂದೆ ನೋಡದ್ದು) ಎಂಬ ಅಡಿಬರಹ ಸಹ ನೀಡಲಾಗಿದೆ.

‘ಧುರಂಧರ್ 2’ ಸಿನಿಮಾವನ್ನು ಭಾರತದಲ್ಲಿ ಜಿಯೋ ಹಾಟ್​​ಸ್ಟಾರ್​​ನಲ್ಲಿ ಹಿಂದಿ ಸೇರಿದಂತೆ ಇತರೆ ಭಾಷೆಗಳಲ್ಲಿ ವೀಕ್ಷಿಸಬಹುದಾಗಿದೆ. ಭಾರತದ ಹೊರತಾಗಿ ಬೇರೆ ದೇಶದವರು ‘ನೆಟ್​​ಫ್ಲಿಕ್ಸ್​’ನಲ್ಲಿ ವೀಕ್ಷಿಸಬಹುದಾಗಿದೆ. ಎರಡೂ ಒಟಿಟಿಗಳಲ್ಲಿ ಒಂದೇ ಕಾಪಿಯನ್ನು ಬಿಡುಗಡೆ ಮಾಡಲಾಗುತ್ತಿದೆ. ಚಿತ್ರಮಂದಿರದಲ್ಲಿ ಇಲ್ಲದ ಕೆಲವು ಹೆಚ್ಚುವರಿ ದೃಶ್ಯಗಳನ್ನು ಒಟಿಟಿಯಲ್ಲಿ ಸೇರಿಸಲಾಗಿದೆ. ಚಿತ್ರಮಂದಿರಕ್ಕಿಂತಲೂ ಮೂರು ನಿಮಿಷ ಹೆಚ್ಚಿನ ಸಮಯದ ದೃಶ್ಯಗಳು ಒಟಿಟಿಯಲ್ಲಿ ಇರಲಿವೆ.

ಇದನ್ನೂ ಓದಿ:ರಣವೀರ್ ಸಿಂಗ್ ದೈವಕ್ಕೆ ಅವಮಾನ ಮಾಡಿದ ಪ್ರಕರಣ ಇತ್ಯರ್ಥ; ಷರತ್ತುಗಳೇನು?

‘ಆರ್​​ಆರ್​​ಆರ್’ ಸೇರಿದಂತೆ ಇನ್ನೂ ಕೆಲ ಸಿನಿಮಾಗಳು ಒಂದಕ್ಕಿಂತಲೂ ಹೆಚ್ಚು ಒಟಿಟಿಗಳಲ್ಲಿ ಬಿಡುಗಡೆ ಆಗಿದ್ದವು. ಇದೀಗ ‘ಧುರಂಧರ್ 2’ ಸಿನಿಮಾ ಸಹ ಅದೇ ಹಾದಿ ಹಿಡಿದಿದೆ. ಆದರೆ ಇದೇ ಸಿನಿಮಾದ ಮೊದಲ ಭಾಗ ಕೇವಲ ನೆಟ್​ಫ್ಲಿಕ್ಸ್​ನಲ್ಲಿ ಮಾತ್ರವೇ ತೆರೆ ಕಂಡಿತ್ತು. ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾವು ಭಾರತೀಯ ಸೈನಿಕನೊಬ್ಬ ಗೂಢಚಾರಿಯಾಗಿ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಉಗ್ರರನ್ನು ಮಟ್ಟ ಹಾಕುವ ಕತೆಯನ್ನು ಒಳಗೊಂಡಿದೆ. ಸಿನಿಮಾವನ್ನು ಆದಿತ್ಯ ಧರ್ ನಿರ್ದೇಶಿಸಿದ್ದು, ಸಿನಿಮಾನಲ್ಲಿ ಅಕ್ಷಯ್ ಖನ್ನಾ, ಆರ್ ಮಾಧವನ್, ಅರ್ಜುನ್ ರಾಮ್​​ಪಾಲ್, ಸಂಜಯ್ ದತ್ ಇನ್ನೂ ಹಲವರು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಲ್ಲಂಗಡಿ ತಿಂದು ಇಡೀ ಕುಟುಂಬ ಮೃತಪಟ್ಟ ಕೇಸ್ ಇನ್ನಷ್ಟು ನಿಗೂಢ; ಆ ಹಣ್ಣಿನಲ್ಲಿತ್ತು ಇಲಿ ಪಾಷಾಣ! – Kannada News | Mumbai Watermelon Death Case Rat poison found in watermelon consumed by Mumbai family finds probe

ಮುಂಬೈ, ಮೇ 8: ಮುಂಬೈನ 44 ವರ್ಷದ ಅಬ್ದುಲ್ಲಾ ಡೊಕಾಡಿಯಾ, ಅವರ ಪತ್ನಿ ನಸ್ರೀನ್ (35) ಮತ್ತು ಅವರ ಹೆಣ್ಣುಮಕ್ಕಳಾದ ಆಯೇಷಾ (16) ಮತ್ತು ಜೈನಾಬ್ (13) ರಾತ್ರಿ ಬಿರಿಯಾನಿ ತಿಂದು, ಕಲ್ಲಂಗಡಿ (Watermelon) ಹಣ್ಣು ತಿಂದು ಮಲಗಿದ್ದವರು ಮರುದಿನ ಮೃತಪಟ್ಟಿದ್ದರು. ವಾಂತಿ, ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಬಿರಿಯಾನಿ ತಿಂದ ಬಳಿಕ ಕಲ್ಲಂಗಡಿ ಹಣ್ಣು ತಿಂದಿದ್ದರಿಂದಲೇ ಫುಡ್ ಪಾಯ್ಸನ್ ಆಗಿರಬಹುದು ಎಂಬ ಅನುಮಾನ ಪೊಲೀಸರನ್ನು ಕಾಡಿತ್ತು. ಇದೀಗ ವೈದ್ಯಕೀಯ ಪರೀಕ್ಷೆಯಲ್ಲಿ ಆ ಕಲ್ಲಂಗಡಿ ಹಣ್ಣಿನಲ್ಲಿ ಇಲಿ ಪಾಷಾಣವಿತ್ತು ಎಂಬ ಅಂಶ ಬಯಲಾಗಿದೆ. ಹಾಗಾದರೆ, ಆ ಕುಟುಂಬಸ್ಥರು ತಾವೇ ಕಲ್ಲಂಗಡಿ ಹಣ್ಣಿನಲ್ಲಿ ವಿಷ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದರಾ ಅಥವಾ ಯಾರಾದರೂ ಕೊಲೆ ಮಾಡಲು ಈ ರೀತಿ ಸಂಚು ಮಾಡಿದ್ದರಾ ಎಂಬುದು ಇನ್ನೂ ನಿಗೂಢವಾಗಿದೆ.

ಮೃತರ ದೇಹದಲ್ಲಿ ಇಲಿ ವಿಷ ಇರುವುದನ್ನು ದೃಢಪಡಿಸಿದ ನಂತರ, ತನಿಖಾಧಿಕಾರಿಗಳು ಈಗ ಮುಂಬೈನ ಪೈಧೋನಿಯಲ್ಲಿರುವ ಡೊಕಾಡಿಯಾ ಕುಟುಂಬದ ಮನೆಯಿಂದ ಇಲಿ ವಿಷವನ್ನು ವಶಪಡಿಸಿಕೊಂಡಿದ್ದಾರೆ. ಇದು ಕುಟುಂಬದ ನಾಲ್ವರು ಸದಸ್ಯರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಪ್ರಮುಖ ಬೆಳವಣಿಗೆಯಾಗಿದೆ. ಮೊಘಲ್ ಬಿಲ್ಡಿಂಗ್‌ನಲ್ಲಿರುವ ಕುಟುಂಬದ ನಿವಾಸದಿಂದ ಪೊಲೀಸರು 2 ಪ್ಯಾಕೆಟ್ ಇಲಿ ವಿಷ ಮತ್ತು ಇಲಿ ವಿಷದ ಸ್ಪ್ರೇ ಅನ್ನು ವಶಪಡಿಸಿಕೊಂಡಿದ್ದಾರೆ. ಆದರೆ ವಿಧಿವಿಜ್ಞಾನ ಪರೀಕ್ಷೆಗಳಲ್ಲಿ ಮೃತರು ಸೇವಿಸಿದ ಕಲ್ಲಂಗಡಿ ಹಣ್ಣಿನಲ್ಲಿ ವಿಷದ ಕುರುಹುಗಳನ್ನು ಸಹ ಪತ್ತೆಹಚ್ಚಿವೆ.

ಇದನ್ನೂ ಓದಿ: Biryani and Watermelon: ಬಿರಿಯಾನಿ ತಿಂದ ನಂತರ ಕಲ್ಲಂಗಡಿ ಸೇವನೆ ಮಾರಕವೇ? ಮುಂಬೈ ಘಟನೆಯ ಬೆನ್ನಲ್ಲೇ ತಜ್ಞರು ನೀಡಿದ ಎಚ್ಚರಿಕೆ ಇಲ್ಲಿದೆ!

ಒಂದು ಪ್ಯಾಕೆಟ್ ಇಲಿ ವಿಷವನ್ನು ಸೀಲ್ ಮಾಡಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಇಲಿ ವಿಷದ ಸ್ಪ್ರೇ ಅನ್ನು ಬಳಸಿರುವುದು ಪತ್ತೆಯಾಗಿದೆ. ಡೊಕಾಡಿಯಾ ಕುಟುಂಬ ವಾಸಿಸುತ್ತಿದ್ದ ಮೊಘಲ್ ಬಿಲ್ಡಿಂಗ್‌ನಲ್ಲಿ ತೀವ್ರ ಇಲಿಗಳ ಬಾಧೆ ಇತ್ತು ಎಂದು ಮೂಲಗಳು ತಿಳಿಸಿವೆ. ಹೀಗಾಗಿ, ಆ ಪಾಷಾಣವನ್ನು ಮನೆಯಲ್ಲಿಟ್ಟುಕೊಂಡಿರುವ ಸಾಧ್ಯತೆ ಇರುತ್ತದೆ.

ಫೋರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ (ಎಫ್‌ಎಸ್‌ಎಲ್) ಸಂಶೋಧನೆಗಳು ಎಲ್ಲಾ ನಾಲ್ವರು ಕುಟುಂಬ ಸದಸ್ಯರು ಇಲಿ ವಿಷ ಸೇವನೆಯಿಂದ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿವೆ ಎಂದು ವರದಿಯಾಗಿದೆ. ಮೃತರ ದೇಹಗಳಲ್ಲಿ ಹಾಗೂ ತನಿಖೆಯ ಸಮಯದಲ್ಲಿ ಸಂಗ್ರಹಿಸಲಾದ ಕಲ್ಲಂಗಡಿ ಮಾದರಿಗಳಲ್ಲಿ ಸತು ಫಾಸ್ಫೈಡ್‌ನ ಕುರುಹುಗಳು ಪತ್ತೆಯಾಗಿವೆ.

ಇದನ್ನೂ ಓದಿ: ರಾತ್ರಿ ಕಲ್ಲಂಗಡಿ ಹಣ್ಣು ತಿಂದವರು ಬೆಳಗ್ಗೆ ಹೆಣವಾದರು; ಮುಂಬೈನಲ್ಲಿ ಇಡೀ ಕುಟುಂಬದ ದುರಂತ ಅಂತ್ಯ

ಈ ಘಟನೆ ನಡೆದು 11 ದಿನಗಳು ಕಳೆದಿವೆ. ಅವರು ಸೇವಿಸಿದ್ದ ಹಣ್ಣಿನಲ್ಲಿ ವಿಷ ಇರುವುದು ದೃಢಪಟ್ಟಿರುವುದರಿಂದ ಪೊಲೀಸರ ತನಿಖೆಗೆ ಹೊಸ ಆಯಾಮ ಸಿಕ್ಕಂತಾಗಿದೆ. ಈ ಸಾವುಗಳು ಸಾಮೂಹಿಕ ಆತ್ಮಹತ್ಯೆಯ ಪರಿಣಾಮವೇ ಅಥವಾ ವಿಷವನ್ನು ಕಲ್ಲಂಗಡಿಯಲ್ಲಿ ಬೇರೆ ಯಾವುದಾದರೂ ವಿಧಾನದಿಂದ ಬೆರೆಸಲಾಗಿತ್ತೇ ಎಂದು ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಕಲಬುರಗಿ: 44 ಸಲ ಸಂಚಾರಿ ನಿಯಮ ಉಲ್ಲಂಘನೆ; 23,500 ರೂ ದಂಡ ತೆತ್ತ ಆಟೋ ಚಾಲಕ – Kannada News | Auto Driver Fined 23,500 for 44 Traffic Rule Violations, Vehicle Seized

ಕಲಬುರಗಿ, ಮೇ 08: ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಆಟೋ ಚಾಲಕನಿಗೆ (Auto driver) ಸಂಚಾರಿ ಪೋಲಿಸರು ಬರೋಬ್ಬರಿ 23,500 ರೂ. ದಂಡ (fine) ವಿಧಿಸಿರುವಂತಹ ಘಟನೆ ನಡೆದಿದೆ. ಶಹಬಾದ್ ಪಟ್ಟಣದ ನಿವಾಸಿ ಆಗಿರುವ ಆಟೋ ಚಾಲಕ, ಸಿಗ್ನಲ್ ಜಂಪ್, ನೋ ಪಾರ್ಕಿಂಗ್ ಮತ್ತು ಮೊಬೈಲ್ ಬಳಕೆ ಸೇರಿದಂತೆ 44 ಸಲ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಸಾವಿರಾರು ರೂ. ದಂಡ ವಿಧಿಸಿರುವ ಕಲಬುರಗಿ ಸಂಚಾರಿ ಠಾಣೆ-2 ಪೊಲೀಸರು, ಸದ್ಯ ಆಟೋ ಕೂಡ ಜಪ್ತಿ ಮಾಡಿಕೊಂಡಿದ್ದಾರೆ.

ಮುಖ್ಯಾಂಶಗಳು

  • 44 ಸಲ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದ ಆಟೋ ಚಾಲಕ
  • ಕಲಬುರಗಿ ಸಂಚಾರಿ ಠಾಣೆ-2 ಪೊಲೀಸರಿಂದ ಚಾಲಕನಿಗೆ 23,500 ರೂ. ದಂಡ
  • ದಂಡ ವಿಧಿಸಿ ಆಟೋ ಜಪ್ತಿ ಮಾಡಿರುವ ಸಂಚಾರಿ ಪೋಲಿಸರು

ರೀಲ್ಸ್ ಮಾಡುವ ಭರದಲ್ಲಿ  ಸಂಚಾರ ನಿಯಮ ಗಾಳಿಗೆ ತೂರಿದ ರೀಲ್ಸ್ ರಾಜಗೆ ಬಿತ್ತು ದಂಡ

ಇನ್ನು ಇತ್ತೀಚೆಗೆ ದೊಡ್ಡಬಳ್ಳಾಪುರದಲ್ಲಿ ಟ್ರಾಫಿಕ್ ರೂಲ್ಸ್ ಗಾಳಿಗೆ ತೂರಿ ರೀಲ್ಸ್ ಮಾಡಿದ್ದ ‘ರೀಲ್ಸ್ ರಾಜ’ನಿಗೆ ದಂಡ ವಿಧಿಸುವ ಮೂಲಕ ಪೊಲೀಸರು ಸರಿಯಾಗಿ ಬಿಸಿ ಮುಟ್ಟಿಸಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರಕ್ಕೆ ಬಂದಿದ್ದ ರೀಲ್ಸ್ ರಾಣಿಯರಾದ ಗಂಗಾರಂಗ ಹಾಗೂ ಸವಿತಾರನ್ನ ದೊಡ್ಡಬಳ್ಳಾಪುರ ಮಂಜ ಬರಮಾಡಿಕೊಂಡಿದ್ದ.

ಇದನ್ನೂ ಓದಿ: ತಪ್ಪು ಮಾಡಿದ್ರೆ ದಂಡ ಹಾಕಿ, ಕೈ ಮಾಡುವ ಹಕ್ಕಿಲ್ಲ: ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಟ್ರಾಫಿಕ್ ಪೊಲೀಸರ ದೌರ್ಜನ್ಯ

ಬಸ್ ನಿಲ್ದಾಣದಿಂದ ಪಿಕಪ್ ಮಾಡಿಕೊಂಡು ತ್ರಿಬಲ್ ರೈಡ್​​ನಲ್ಲಿ ಮನೆ ಕಡೆಗೆ ಹೊರಟ್ಟಿದ್ದರು. ಜೊತೆಗೆ ಹೆಲ್ಮೆಟ್ ಹಾಕಿಕೊಳ್ಳದೆ, ಹಿಂಬದಿ ಕುಳಿತಿದ್ದ ಸವಿತಾ, ಬೈಕ್ ಓಡುಸುತ್ತಿದ್ದ ಮಂಜನನ್ನ ತೋರಿಸುತ್ತಾ ಹುಲಿ ಹುಲಿ ದೊಡ್ಡಬಳ್ಳಾಪುರದ ಹುಲಿ ಅಂತ ರೀಲ್ಸ್​ ಮಾಡಿದ್ದರು. ಇದು ವೈರಲ್​ ಕೂಡ ಆಗಿತ್ತು. ಇನ್ನು ರೀಲ್ಸ್​ ನೋಡಿದ ನೆಟ್ಟಿಗರು ಹೆಲ್ಮೆಟ್ ಹಾಕದೆ ತ್ರಿಬಲ್ ರೈಡ್ ಮಾಡಿರುವ ಬಗ್ಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು. ದೂರು ಬೆನ್ನಲ್ಲೇ ಮಂಜನನ್ನ ಬೈಕ್ ಸಮೇತ ಠಾಣೆಗೆ ಕರೆದುಕೊಂಡು ಬಂದು ಬುದ್ಧವಾದ ಹೇಳಿ ಕಾನೂನು ಪಾಠ ಮಾಡಿದ್ದಾರೆ. ಜೊತೆಗೆ ಸಂಚಾರಿ ನಿಯಮ ಉಲ್ಲಂಘನೆ ಮಾಡಿದಕ್ಕೆ ಒಂದು ಸಾವಿರ ರೂ ದಂಡ ವಿಧಿಸಿ ಮತ್ತೊಮ್ಮೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 3:50 pm, Fri, 8 May 26

Source link

IPL 2026: ಐಪಿಎಲ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಭುವನೇಶ್ವರ್ ಕುಮಾರ್

Source link

ವಿಜಯ್​ಗಿರೋ ಆಯ್ಕೆಗಳ ಬಗ್ಗೆ ತಮಿಳುನಾಡು ಕಾಂಗ್ರೆಸ್ ಉಸ್ತುವಾರಿ ಸೂರಜ್ ಹೆಗ್ಡೆ ಹೇಳಿದ್ದಿಷ್ಟು – Kannada News | Tamil Nadu Congress Incharge Suraj Hegde on Governor about government formation

ಚೆನ್ನೈ, (ಮೇ 08): ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶದ  (Tamil Nadu Assembly Election Result)  ನಂತರ ಸರ್ಕಾರ ರಚನೆಯ ಕಸರತ್ತು ಈಗ ರೋಚಕ ಹಂತಕ್ಕೆ ತಲುಪಿದೆ. ನಟ ವಿಜಯ್ (Vijay) ನೇತೃತ್ವದ ತಮಿಳಗ ವೆಟ್ರಿ ಕಳಗಂ TVK ಪಕ್ಷವು ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಬಹುಮತ ಸಾಬೀತುಪಡಿಸುವ ಸವಾಲು ಎದುರಾಗಿದೆ. ಎರಡು ಬಾರಿ ​ರಾಜ್ಯಪಾಲರನ್ನು ಭೇಟಿ ಮಾಡಿ ಹಕ್ಕು ಮಂಡಿಸಿದ್ರು ಕೂಡ, ಬಹುಮತ ಇಲ್ಲದ ಕಾರಣ ರಾಜ್ಯಪಾಲರು ಒಪ್ಪಿಗೆ ಸೂಚಿಸಿಲ್ಲ, ಇದು ತಮಿಳುನಾಡು ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಇನ್ನು ಈ ಬಗ್ಗೆ ತಮಿಳುನಾಡು ಕಾಂಗ್ರೆಸ್ ಉಸ್ತುವಾರಿ ಸೂರಜ್ ಹೆಗ್ಡೆ ಟಿವಿ9ಗೆ ಪ್ರತಿಕ್ರಿಯಿಸಿದ್ದು, ಎಲ್ಲಾ ಸೆಕ್ಯುಲರ್ ಫೋರ್ಸಸ್, ಅದು ಒಂದು ಕಡೆ ಬರಬೇಕಾಗುತ್ತೆ. ಹಾಗಾಗಿ ಟಿವಿಕೆಗೆ ಬೆಂಬಲ. ಇಲ್ಲದೆ ಇದ್ರೆ ಇವರು ಬೇರೆ ರೀತಿ ಇಲ್ಲಿ ಬೇರೆ ತರ ಸಪೋರ್ಟ್ ಕೊಡೋಕೆ ಹೋಗಿದ್ರು. ಅವರ ಸಪೋರ್ಟ್ ಕೊಟ್ರೆ ಗವರ್ನರ್ ಅವರನ್ನ ಕರೆಯೋಕು ರೆಡಿಯಾಗಿದ್ದರು. ಈಗ ಗವರ್ನರ್ ಯಾಕೆ ಕರೆಯುತ್ತಿಲ್ಲ, ಯಾಕೆ ಅವಕಾಶ ಕೊಡುತ್ತಿಲ್ಲ. ಕಾಂಗ್ರೆಸ್ ಬೆಂಬಲ ಕೊಟ್ಟಿದೆ ಅನ್ನುವಂತಹ ಒಂದೇ ಕಾರಣಕ್ಕೆ ಗವರ್ನರ್ ಅವಕಾಶ ಮಾಡಿಕೊಡುತ್ತಿಲ್ಲ.ಇದೇ ರೀತಿ ಕರ್ನಾಟಕದಲ್ಲಿ ಆದಾಗ ಯಡಿಯೂರಪ್ಪನವರಿಗೆ ಅವಕಾಶ ಕೊಟ್ಟಿರಲಿಲ್ವ? ಎಂದು ಪ್ರಶ್ನಿಸಿದರು.

ಇದೇ ರೀತಿ ಮಹಾರಾಷ್ಟ್ರದಲ್ಲಿ ಆದಾಗ ಇದೇ ರೀತಿ ಗೋವಾದಲ್ಲಿ ಆದಾಗ ಯಾಕೆ ಕರೆದ್ರು? ಇವರು ಒಂದೊಂದು ರಾಜ್ಯಕ್ಕೆ ಒಂದೊಂದು ತಾರತಮ್ಯ ಮಾಡೋಕೆ ಆಗಲ್ಲ. ಇದು ನಮ್ಮ ಸಂವಿಧಾನ ಏನ್ ಹೇಳುತ್ತೆ ಅದರ ಪ್ರಕಾರ ನಡೆದುಕೊಂಡು ಹೋಗಬೇಕಾಗುತ್ತೆ. ನಾವು ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡುತ್ತೇವೆ. ನಾವು ಚುನಾವಣೆಗೆ ಹೋಗಲು ಸಿದ್ಧ, ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ‌ ಹೊಸದಲ್ಲ. ಡಿಎಂಕೆ – ಎಐಎಡಿಎಂಕೆ ಒಂದಾದ್ರೆ ಅವರನ್ನು ಹೇಗೆ ಸರಕಾರ ರಚಿಸಲು ಕರೆಯುತ್ತಾರೆ? ಅವರಲ್ಲಿ ಬಹುಮತ ಇದೆಯಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ನೋಡಿ: ತಮಿಳುನಾಡಿನಲ್ಲಿ ಸರ್ಕಾರ ರಚನೆ ಮಾಡುವವರ್ಯಾರು? ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್

Source link

Exit mobile version