IPL 2026: ಐಪಿಎಲ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಭುವನೇಶ್ವರ್ ಕುಮಾರ್

Source link

ವಿಜಯ್​ಗಿರೋ ಆಯ್ಕೆಗಳ ಬಗ್ಗೆ ತಮಿಳುನಾಡು ಕಾಂಗ್ರೆಸ್ ಉಸ್ತುವಾರಿ ಸೂರಜ್ ಹೆಗ್ಡೆ ಹೇಳಿದ್ದಿಷ್ಟು – Kannada News | Tamil Nadu Congress Incharge Suraj Hegde on Governor about government formation

ಚೆನ್ನೈ, (ಮೇ 08): ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶದ  (Tamil Nadu Assembly Election Result)  ನಂತರ ಸರ್ಕಾರ ರಚನೆಯ ಕಸರತ್ತು ಈಗ ರೋಚಕ ಹಂತಕ್ಕೆ ತಲುಪಿದೆ. ನಟ ವಿಜಯ್ (Vijay) ನೇತೃತ್ವದ ತಮಿಳಗ ವೆಟ್ರಿ ಕಳಗಂ TVK ಪಕ್ಷವು ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಬಹುಮತ ಸಾಬೀತುಪಡಿಸುವ ಸವಾಲು ಎದುರಾಗಿದೆ. ಎರಡು ಬಾರಿ ​ರಾಜ್ಯಪಾಲರನ್ನು ಭೇಟಿ ಮಾಡಿ ಹಕ್ಕು ಮಂಡಿಸಿದ್ರು ಕೂಡ, ಬಹುಮತ ಇಲ್ಲದ ಕಾರಣ ರಾಜ್ಯಪಾಲರು ಒಪ್ಪಿಗೆ ಸೂಚಿಸಿಲ್ಲ, ಇದು ತಮಿಳುನಾಡು ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಇನ್ನು ಈ ಬಗ್ಗೆ ತಮಿಳುನಾಡು ಕಾಂಗ್ರೆಸ್ ಉಸ್ತುವಾರಿ ಸೂರಜ್ ಹೆಗ್ಡೆ ಟಿವಿ9ಗೆ ಪ್ರತಿಕ್ರಿಯಿಸಿದ್ದು, ಎಲ್ಲಾ ಸೆಕ್ಯುಲರ್ ಫೋರ್ಸಸ್, ಅದು ಒಂದು ಕಡೆ ಬರಬೇಕಾಗುತ್ತೆ. ಹಾಗಾಗಿ ಟಿವಿಕೆಗೆ ಬೆಂಬಲ. ಇಲ್ಲದೆ ಇದ್ರೆ ಇವರು ಬೇರೆ ರೀತಿ ಇಲ್ಲಿ ಬೇರೆ ತರ ಸಪೋರ್ಟ್ ಕೊಡೋಕೆ ಹೋಗಿದ್ರು. ಅವರ ಸಪೋರ್ಟ್ ಕೊಟ್ರೆ ಗವರ್ನರ್ ಅವರನ್ನ ಕರೆಯೋಕು ರೆಡಿಯಾಗಿದ್ದರು. ಈಗ ಗವರ್ನರ್ ಯಾಕೆ ಕರೆಯುತ್ತಿಲ್ಲ, ಯಾಕೆ ಅವಕಾಶ ಕೊಡುತ್ತಿಲ್ಲ. ಕಾಂಗ್ರೆಸ್ ಬೆಂಬಲ ಕೊಟ್ಟಿದೆ ಅನ್ನುವಂತಹ ಒಂದೇ ಕಾರಣಕ್ಕೆ ಗವರ್ನರ್ ಅವಕಾಶ ಮಾಡಿಕೊಡುತ್ತಿಲ್ಲ.ಇದೇ ರೀತಿ ಕರ್ನಾಟಕದಲ್ಲಿ ಆದಾಗ ಯಡಿಯೂರಪ್ಪನವರಿಗೆ ಅವಕಾಶ ಕೊಟ್ಟಿರಲಿಲ್ವ? ಎಂದು ಪ್ರಶ್ನಿಸಿದರು.

ಇದೇ ರೀತಿ ಮಹಾರಾಷ್ಟ್ರದಲ್ಲಿ ಆದಾಗ ಇದೇ ರೀತಿ ಗೋವಾದಲ್ಲಿ ಆದಾಗ ಯಾಕೆ ಕರೆದ್ರು? ಇವರು ಒಂದೊಂದು ರಾಜ್ಯಕ್ಕೆ ಒಂದೊಂದು ತಾರತಮ್ಯ ಮಾಡೋಕೆ ಆಗಲ್ಲ. ಇದು ನಮ್ಮ ಸಂವಿಧಾನ ಏನ್ ಹೇಳುತ್ತೆ ಅದರ ಪ್ರಕಾರ ನಡೆದುಕೊಂಡು ಹೋಗಬೇಕಾಗುತ್ತೆ. ನಾವು ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡುತ್ತೇವೆ. ನಾವು ಚುನಾವಣೆಗೆ ಹೋಗಲು ಸಿದ್ಧ, ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ‌ ಹೊಸದಲ್ಲ. ಡಿಎಂಕೆ – ಎಐಎಡಿಎಂಕೆ ಒಂದಾದ್ರೆ ಅವರನ್ನು ಹೇಗೆ ಸರಕಾರ ರಚಿಸಲು ಕರೆಯುತ್ತಾರೆ? ಅವರಲ್ಲಿ ಬಹುಮತ ಇದೆಯಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ನೋಡಿ: ತಮಿಳುನಾಡಿನಲ್ಲಿ ಸರ್ಕಾರ ರಚನೆ ಮಾಡುವವರ್ಯಾರು? ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್

Source link

ಬಿಹಾರ್, ಜಾರ್ಖಂಡ್​ನಲ್ಲಿ ಆದಾಯ ತೆರಿಗೆ ಪಾವತಿಯಲ್ಲಿ ಉದ್ಯಮಿಗಳನ್ನೂ ಮೀರಿಸಿದ ಧೋನಿ – Kannada News | MS Dhoni reportedly highest individual tax payer in Jharkhand and Bihar

ರಾಂಚಿ, ಮೇ 8: ಮಾಜಿ ಕ್ರಿಕೆಟಿಗ ಮತ್ತು ಬ್ಯುಸಿನೆಸ್​ಮ್ಯಾನ್ ಆಗಿರುವ ಮಹೇಂದ್ರ ಸಿಂಗ್ ಧೋನಿ (MS Dhoni) ಅವರು ಹಲವು ವರ್ಷಗಳಿಂದ ಅತಿಹೆಚ್ಚು ತೆರಿಗೆ ಪಾವತಿದಾರರ (Income tax payers) ಸಾಲಿನಲ್ಲಿ ಇದ್ದಾರೆ. ಇದೀಗ ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳಲ್ಲಿನ ವೈಯಕ್ತಿಕ ಆದಾಯ ತೆರಿಗೆಪಾವತಿದಾರರ ಪೈಕಿ ಧೋನಿಯೇ ನಂಬರ್ ಒನ್ ಎನಿಸಿದ್ದಾರೆ. ಈ ಎರಡು ರಾಜ್ಯಗಳಲ್ಲೇ 2025-26ರಲ್ಲಿ ಅತಿಹೆಚ್ಚು ಟ್ಯಾಕ್ಸ್ ಕಟ್ಟಿರುವುದು ಧೋನಿಯೇ ಎಂದು ತೆರಿಗೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾಗಿ ಮನಿಕಂಟ್ರೋಲ್ ವರದಿ ಮಾಡಿದೆ.

ಬಹಳ ಹಿಂದುಳಿದ ರಾಜ್ಯಗಳೆನಿಸಿರುವ ಬಿಹಾರ ಮತ್ತು ಜಾರ್ಖಂಡ್​ನಲ್ಲಿ 2025-26ರ ವರ್ಷದಲ್ಲಿ ಒಟ್ಟು 20,000 ಕೋಟಿ ರೂ ಇನ್ಕಮ್ ಟ್ಯಾಕ್ಸ್ ಸಂಗ್ರಹವಾಗಿದೆ. ಇದರಲ್ಲಿ ವೈಯಕ್ತಿಕ ಆದಾಯ ತೆರಿಗೆ ಮತ್ತು ಕಾರ್ಪೊರೇಟ್ ತೆರಿಗೆಗಳು ಒಳಗೊಂಡಿವೆ. ಜಾರ್ಖಂಡ್ ರಾಜ್ಯದಿಂದ 12,000 ಕೋಟಿ ರೂ, ಬಿಹಾರದಿಂದ 8,000 ಕೋಟಿ ರೂ ಟ್ಯಾಕ್ಸ್ ಕಲೆಕ್ಷನ್ ಆಗಿದೆ.

ಇದನ್ನೂ ಓದಿ: ಗೂಗಲ್​ಗೆ ಆರಂಭದಲ್ಲೇ ಫಂಡಿಂಗ್ ನೀಡಿದ್ದ ರಾಮ್ ಶ್ರೀರಾಮ್; ಭಾರತದ ಈ ಕಂಪನಿಯತ್ತ ಈಗ ಅವರ ಚಿತ್ತ

ಧೋನಿ ಅತಿಹೆಚ್ಚು ಟ್ಯಾಕ್ಸ್ ಪಾವತಿಸಿದ ವ್ಯಕ್ತಿ ಎನಿಸಿದ್ದಾರೆ. ಬಿಹಾರ ಮತ್ತು ಜಾರ್ಖಂಡ್​ನಲ್ಲಿ ಪ್ಯಾನ್ ಕಾರ್ಡ್ ಹೊಂದಿರುವವರ ಸಂಖ್ಯೆ 5.5 ಕೋಟಿ ರೂ ಆದರೂ, ಐಟಿ ರಿಟರ್ನ್ಸ್ ಸಲ್ಲಿಸುವವರ ಸಂಖ್ಯೆ 40 ಲಕ್ಷ ಮಾತ್ರ. ಅವರ ಪೈಕಿ ಧೋನಿ ನಂಬರ್ ಒನ್ ಎನಿಸಿದ್ದಾರೆ. ಆದರೆ, ಧೋನಿ ಎಷ್ಟು ಕೋಟಿ ರೂ ಟ್ಯಾಕ್ಸ್ ಪಾವತಿಸಿದ್ದಾರೆ ಎನ್ನುವ ಮಾಹಿತಿ ಸದ್ಯಕ್ಕೆ ಗೊತ್ತಾಗಿಲ್ಲ. ಕಾರ್ಪೊರೇಟ್ ಟ್ಯಾಕ್ಸ್ ನೀಡುವಿಕೆಯಲ್ಲಿ ಮುಂಚೂಣಿಯಲ್ಲಿ ಇರುವುದು ಸೆಂಟ್ರಲ್ ಕೋಲ್​ಫೀಲ್ಡ್ಸ್ ಲಿಮಿಟೆಡ್, ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್ ಮತ್ತು ಸಿಎಂಪಿಡಿಐ ಕಂಪನಿಗಳು.

ರಾಷ್ಟ್ರಾದ್ಯಂತ ಅತಿಹೆಚ್ಚು ಇನ್ಕಮ್ ಟ್ಯಾಕ್ಸ್ ಸಂಗ್ರಹವಾಗುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ಟಾಪ್-2ನಲ್ಲಿವೆ. ಕರ್ನಾಟಕದಲ್ಲಿ 2025-26ರ ವರ್ಷದಲ್ಲಿ 2 ಲಕ್ಷ ಕೋಟಿ ರೂ ಆದಾಯ ತೆರಿಗೆ ಸಂಗ್ರಹವಾಗಿರುವ ನಿರೀಕ್ಷೆ ಇದೆ.

ವೈಯಕ್ತಿಕ ಆದಾಯ ತೆರಿಗೆ ಪಾವತಿಯಲ್ಲಿ ಅಗ್ರಗಣ್ಯ ಎನಿಸುವುದು ಮುಕೇಶ್ ಅಂಬಾನಿ. ಇವರು ಕಳೆದ ಹಣಕಾಸು ವರ್ಷದಲ್ಲಿ 3,000 ಕೋಟಿ ರೂಗೂ ಅಧಿಕ ಇನ್ಕಮ್ ಟ್ಯಾಕ್ಸ್ ಪಾವತಿಸಿರುವ ಅಂದಾಜಿದೆ. ಕಾಯಿನ್​ಡಿಸಿಎಕ್ಸ್​ನಲ್ಲಿ ಪ್ರಕಟವಾದ ಪಟ್ಟಿ ಪ್ರಕಾರ 2024-25ರಲ್ಲಿ ಅತಿಹೆಚ್ಚು ಟ್ಯಾಕ್ಸ್ ಪಾವತಿಸಿದವರು ಇಂತಿದ್ದಾರೆ:

  1. ಮುಕೇಶ್ ಅಂಬಾನಿ: 3,500 ಕೋಟಿ ರೂ
  2. ಗೌತಮ್ ಅದಾನಿ: 2,900 ಕೋಟಿ ರೂ
  3. ನಂದನ್ ನಿಲೇಕಣಿ: 1,700 ಕೋಟಿ ರೂ
  4. ಶಾರುಕ್ ಖಾನ್: 950 ಕೋಟಿ ರೂ
  5. ಸಲ್ಮಾನ್ ಖಾನ್: 850 ಕೋಟಿ ರೂ

ಇದನ್ನೂ ಓದಿ: ಪರಿಸರಸ್ನೇಹಿ ಯೋಜನೆಗಳಿಗೆ ಆಪಲ್ ಭರ್ಜರಿ ಹೂಡಿಕೆ; ಸ್ವಚ್ಛ ಇಂಧನ, ಪ್ಲಾಸ್ಟಿಕ್ ನಿವಾರಣೆ, ತ್ಯಾಜ್ಯ ನಿರ್ವಹಣೆ ಇತ್ಯಾದಿ ಉಪಕ್ರಮಗಳ ಘೋಷಣೆ

ಅತಿಹೆಚ್ಚು ತೆರಿಗೆ ಪಾವತಿದಾರರ ಸಾಲಿನಲ್ಲಿ ತಮಿಳುನಾಡು ಮುಖ್ಯಮಂತ್ರಿ ಆಕಾಂಕ್ಷಿ ವಿಜಯ್, ಅಮಿತಾಭ್ ಬಚ್ಚನ್, ವಿರಾಟ್ ಕೊಹ್ಲಿ, ಎಂಎಸ್ ಧೋನಿ ಮೊದಲಾದವರಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ವಿಜಯ್ ಆ ಗುಣ ನನಗೆ ಯಾವಾಗಲೂ ಇಷ್ಟ ಆಗಲ್ಲ’; ತ್ರಿಷಾ ಕೃಷ್ಣನ್

ಕಾಲಿವುಡ್‌ನ ಹಿಟ್ ಜೋಡಿ ಎನಿಸಿಕೊಂಡಿರುವ ದಳಪತಿ ವಿಜಯ್ ಮತ್ತು ತ್ರಿಷಾ ಕೃಷ್ಣನ್ ಅವರ ಸ್ನೇಹಕ್ಕೆ ಎರಡು ದಶಕಗಳ ಇತಿಹಾಸವಿದೆ. ಸದ್ಯ ತಮಿಳುನಾಡು ರಾಜಕೀಯದಲ್ಲಿ ವಿಜಯ್ ಅವರ ಟಿವಿಕೆ ಪಕ್ಷ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ, ವಿಜಯ್ ಅವರ ವ್ಯಕ್ತಿತ್ವದ ಬಗ್ಗೆ ನಟಿ ತ್ರಿಷಾ ಈ ಹಿಂದೆ ಆಡಿದ್ದ ಮಾತುಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ.

ವಿಜಯ್ ಮತ್ತು ತ್ರಿಷಾ ‘ಗಿಲ್ಲಿ’, ‘ಕುರುವಿ’, ‘ಲಿಯೋ’ ಸೇರಿದಂತೆ ಕೆಲವು ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಹಲವು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ತ್ರಿಷಾ, ವಿಜಯ್ ಅವರಲ್ಲಿ ತಮಗೆ ಇಷ್ಟವಾಗದ ಒಂದು ಅಂಶದ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ಆ ವಿಷಯ ಮತ್ತೆ ಚರ್ಚೆ ಆಗಿದೆ.

‘ವಿಜಯ್ ಸೆಟ್‌ನಲ್ಲಿ ತುಂಬಾ ಸೈಲೆಂಟ್ ಆಗಿರುತ್ತಾರೆ. ಶೂಟಿಂಗ್ ಇಲ್ಲದ ಸಮಯದಲ್ಲಿ ಎಲ್ಲರೂ ಹರಟೆ ಹೊಡೆಯುತ್ತಿದ್ದರೆ, ಇವರು ಮಾತ್ರ ಯಾವುದೋ ಮೂಲೆಯಲ್ಲಿ ಗೋಡೆ ಮುಖ ಮಾಡಿ ಗಂಟೆಗಟ್ಟಲೆ ಕುಳಿತಿರುತ್ತಾರೆ. ಆರಂಭದಲ್ಲಿ ನನಗೆ ಅವರ ಈ ಮೌನ ಅಸಹನೀಯ ಎನಿಸುತ್ತಿತ್ತು ಮತ್ತು ಅವರ ಬಗ್ಗೆ ತಪ್ಪು ಕಲ್ಪನೆ ಮೂಡಿಸಿತ್ತು’ ಎಂದು ತ್ರಿಷಾ ಹೇಳಿದ್ದರು.

ಅಷ್ಟೇ ಅಲ್ಲದೆ, ವಿಜಯ್ ಅವರನ್ನು ‘ಸೈಲೆಂಟ್ ಕಿಲ್ಲರ್’ ಎಂದು ಕರೆದಿದ್ದ ತ್ರಿಷಾ, ‘ಅವರು ಏನನ್ನೂ ಹೇಳದೆಯೇ ತಮ್ಮ ನಿಗೂಢ ಆಕರ್ಷಣೆಯಿಂದ ಎಲ್ಲರನ್ನೂ ಸೆಳೆಯಬಲ್ಲರು’ ಎಂದು ಬಣ್ಣಿಸಿದ್ದರು.

ಇದನ್ನೂ ಓದಿ: ದಳಪತಿ ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​.ಡಿ. ಕುಮಾರಸ್ವಾಮಿ: ಕಾರಣ ಇಲ್ಲಿದೆ

ಈಗ ವಿಜಯ್ ರಾಜಕೀಯ ಅಖಾಡದಲ್ಲಿ ‘ಸೈಲೆಂಟ್’ ಆಗಿಯೇ ಕ್ರಾಂತಿ ಮಾಡಿದ್ದಾರೆ. 234 ಸದಸ್ಯರ ವಿಧಾನಸಭೆಯಲ್ಲಿ 108 ಸ್ಥಾನಗಳನ್ನು ಗೆದ್ದು ಮ್ಯಾಜಿಕ್ ಮಾಡಿದ್ದಾರೆ. ಆದರೆ, ಬಹುಮತಕ್ಕೆ (118) ಇನ್ನೂ 10 ಸ್ಥಾನಗಳ ಕೊರತೆ ಇರುವುದರಿಂದ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರು ಪ್ರಮಾಣವಚನಕ್ಕೆ ತಡೆ ಒಡ್ಡಿದ್ದಾರೆ. ಈ ರಾಜಕೀಯ ಬಿಕ್ಕಟ್ಟಿನ ನಡುವೆ ವಿಜಯ್ ಸೈಲೆಂಟ್ ಆಗಿಯೇ ಪ್ಲ್ಯಾನ್ ರೂಪಿಸುತ್ತಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

Source link

ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಡ್ಯಾನ್ಸ್​​ ಮಾಡಿದ ಶಾಸಕ ಶರಣು ಸಲಗರ – Kannada News | Basavakalyan MLA Sharanu Salagar Dances With Wife at Aide’s Haldi; Video Goes Viral in Bidar

ಬೀದರ್​​, ಮೇ 08: ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದ ಕಾರ್ಯಕ್ರಮದಲ್ಲಿ ಬಸವಕಲ್ಯಾಣದ ಶಾಸಕ ಶರಣು ಸಲಗರ ತಮ್ಮ ಪತ್ನಿ ಜೊತೆಗೆ ಭರ್ಜರಿ ಡ್ಯಾನ್ಸ್​​ ಮಾಡಿ ಗಮನ ಸೆಳೆದಿದ್ದಾರೆ. ಬಸವಕಲ್ಯಾಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶರಣು ಸಲಗರ ದಂಪತಿ ಹಿಂದಿ ಹಾಡಿಗೆ ಸಖತ್​​ ಹೆಜ್ಜೆ ಹಾಕಿದ್ದು ನೆರೆದಿದ್ದವರು ಇವರ ನೃತ್ಯ ಕಂಡು ಫುಲ್​​ ಖುಷ್​​ ಆಗಿದ್ದಾರೆ. ಶರಣು ಸಲಗಾರ ಮತ್ತು ಸಾವಿತ್ರಿ ಸಲಗರ ಅವರ ಈ ಡ್ಯಾನ್ಸ್​​ ಕಂಡು ಅಭಿಮಾನಿಗಳೂ ಸಂತಸಪಟ್ಟಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ತಮಿಳುನಾಡಿನಲ್ಲಿ ಸರ್ಕಾರ ರಚನೆ ಮಾಡುವವರ್ಯಾರು? ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್ – Kannada News | BJP National General Secretary BL Santosh Post About Tamil Nadu Government Formation

ನವದೆಹಲಿ, (ಮೇ 08): ತಮಿಳುನಾಡು ವಿಧಾನಸಭಾ ಚುನಾವಣೆಯು (Tamil Nadu Assembly Elections) ಅತಂತ್ರ ಫಲಿತಾಂಶ ಕೊಟ್ಟಿರುವುದು ವಿವಿಧ ರಾಜಕೀಯ ಬಣ್ಣಗಳು ಹೊರಬರಲು ಕಾರಣವಾಗಿದೆ. 108 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಬಹುಮತ ಸಿಗುವಂತಹ ಬೆಂಬಲ ಬಂದಿಲ್ಲ. ಹೀಗಾಗಿ, ಸರ್ಕಾರ ರಚನೆಗೆ ರಾಜ್ಯಪಾಲರಿಂದ ಅನುಮತಿ ಸಿಕ್ಕಿಲ್ಲ. ಇನ್ನೊಂದೆಡೆ, ತನ್ನ ಬದ್ಧ ವೈರಿ ಡಿಎಂಕೆ ಜೊತೆ ಕೈ ಜೋಡಿಸಿ ಸರ್ಕಾರ ರಚನೆಗೆ ಎಐಎಡಿಎಂಕೆ ಇಂಗಿತ ಹೊಂದಿದಂತಿದ್ದು, ಇದಕ್ಕೆ ಪೂರಕವೆಂಬಂತೆ ರೆಸಾರ್ಟ್ ಪೊಲಿಟಿಕ್ಸ್ ಕೂಡ ಶುರುವಾಗಿದೆ. ಹೀಗಾಗಿ ತಮಿಳುನಾಡಿನಲ್ಲಿ ಯಾರು ಸರ್ಕಾರ ರಚನೆ ಮಾಡುತ್ತಾರೆ ಎನ್ನುವ ಚರ್ಚೆಗಳು ಶುರುವಾಗಿವೆ. ಇದರ ಮಧ್ಯೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಟ್ವೀಟ್ ಸಂಚಲನ ಮೂಡಿಸಿದೆ.

ತಮಿಳುನಾಡಿನಲ್ಲಿ ನೂತನ ಸರ್ಕಾರ ರಚನೆಗೆ ಕಸರತ್ತು ನಡೆದಿರುವ ಬಗ್ಗೆ ಎಕ್ಸ್​ ಖಾತೆಯಲ್ಲಿ ಬಿ.ಎಲ್​.ಸಂತೋಷ್ ಪೋಸ್ಟ್ ಮಾಡಿದ್ದು, ಯಾರು ಸರ್ಕಾರ ರಚಿಸುತ್ತಾರೆ ಎಂಬುದನ್ನು ಕಾಲವೇ ಹೇಳುತ್ತದೆ. ಆದರೆ ಒಂದು ವಿಷಯ ಅಂತೂ ಖಚಿತ. ಕಾಂಗ್ರೆಸ್ ಕೊನೆಯಲ್ಲಿ ಮುಖಕ್ಕೆ ಮೊಟ್ಟೆಯಲ್ಲಿ ಹೊಡೆಸಿಕೊಂಡಂತಾಗುತ್ತೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಟಿವಿಕೆಗೆ ಬೆಂಬಲ ಘೋಷಿಸಿರುವ ಕಾಂಗ್ರೆಸ್​​ಗೆ ಟಾಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ: ಎಲ್ಲಾ 108 ಟಿವಿಕೆ ಶಾಸಕರ ರಾಜೀನಾಮೆ ಬೆದರಿಕೆ; ಡಿಎಂಕೆ ಜೊತೆ ಮೈತ್ರಿಗೆ ಎಐಎಡಿಎಂಕೆ ಪ್ರಯತ್ನ; ತಮಿಳುನಾಡಿನಲ್ಲಿ ರಾಜಕೀಯ ರಂಗು

Source link

ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ – Kannada News | Bengaluru: Jigani Police Seize 250kg Ganja Worth 1.25 Crore; two arrested

ಆನೇಕಲ್, ಮೇ 08: 1 ಕೋಟಿ 25 ಲಕ್ಷ ರೂಪಾಯಿ ಮೌಲ್ಯದ 250 ಕೆಜಿ ಗಾಂಜಾವನ್ನು ಜಪ್ತಿ ಮಾಡುವ ಮೂಲಕ ಜಿಗಣಿ ಪೊಲೀಸರು ಭರ್ಜರಿ ಬೇಟೆ ಆಡಿದ್ದಾರೆ. ಸಿನಿಮಾ ಶೈಲಿಯಲ್ಲಿ ಗಾಂಜಾ ಸಾಗಿಸಿದ್ದ ಬಿಹಾರ ಮೂಲದ ಇಬ್ಬರನ್ನು ಬಂಧಿಸಿದ್ದಾರೆ. ರಾಮಾಯಣ್ ಯಾದವ್(56) ಮತ್ತು ಸಬೀರ್(51) ಬಂಧಿತರು. ಕಿಡಿಗೇಡಿಗಳು ಯಾರಿಗೂ ತಿಳಿಯದಂತೆ ಒಡಿಶಾದಿಂದ ಪೌಲ್ಟ್ರಿ ಫೀಡ್ಸ್ ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದರು. ಈ ವೇಳೆ ಜಿಗಣಿ ಇನ್ಸ್‌ಪೆಕ್ಟರ್‌ ಮಂಜುನಾಥ್ ನೇತೃತ್ವದ ತಂಡದಿಂದ ಬೇಗೂರು ಮುಖ್ಯರಸ್ತೆಯ ಕೊಪ್ಪ ಬಳಿ ದಾಳಿ ಮಾಡಿ, ಇಬ್ಬರನ್ನು ಬಂಧಿಸಿದ್ದಾರೆ. ಇನ್ನು ಪ್ರಮುಖ ಆರೋಪಿ ಬಿನೋದ್ ಸಿಂಗ್ ಮತ್ತು ಬಾಬುಗಾಗಿ ಶೋಧ ನಡೆಸಿದ್ದಾರೆ. ಪೊಲೀಸರ ಕಾರ್ಯಕ್ಕೆ ಬೆಂಗಳೂರು ಗ್ರಾಮಾಂತರ ಎಸ್​ಪಿ ಚಂದ್ರಕಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

NCRTC Recruitment 2026: ಕೇಂದ್ರ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವವರಿಗೆ ಸುವರ್ಣಾವಕಾಶ; ತಿಂಗಳಿಗೆ 2ಲಕ್ಷ ರೂ. ಸಂಬಳ, ಇಂದೇ ಅರ್ಜಿ ಸಲ್ಲಿಸಿ! – Kannada News | NCRTC Recruitment 2026: Manager and Engineer Posts with Attractive Salary

ಪ್ರತಿಷ್ಠಿತ ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ನಿಗಮದಲ್ಲಿ (NCRTC) ವೃತ್ತಿಜೀವನ ಆರಂಭಿಸಲು ಬಯಸುವವರಿಗೆ ಒಂದು ಸಿಹಿಸುದ್ದಿ ಇಲ್ಲಿದೆ. ನಿಗಮವು ವಿವಿಧ ತಾಂತ್ರಿಕ ಮತ್ತು ಆಡಳಿತಾತ್ಮಕ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಕರ್ಷಕ ವೇತನ ಹಾಗೂ ಕೇಂದ್ರ ಸರ್ಕಾರದ ಸೌಲಭ್ಯಗಳನ್ನು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ವೇದಿಕೆಯಾಗಿದೆ. ಆದರೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನಾಳೆಯೇ (ಮೇ 9) ಆಗಿರುವುದರಿಂದ, ಆಸ್ತರು ತಡಮಾಡದೇ ಅರ್ಜಿ ಸಲ್ಲಿಸಿ, ನಿಮ್ಮ ಕನಸಿನ ಉದ್ಯೋಗ ಪಡೆಯಿರಿ.

ಖಾಲಿ ಇರುವ ಹುದ್ದೆಗಳು:

ಮುಖ್ಯವಾಗಿ ಸಿವಿಲ್, ಎಲೆಕ್ಟ್ರಿಕಲ್, ಸಿಗ್ನಲಿಂಗ್ ಮತ್ತು ದೂರಸಂಪರ್ಕ ವಿಭಾಗಗಳಲ್ಲಿ ಈ ಕೆಳಗಿನ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ:

  • ವ್ಯವಸ್ಥಾಪಕ (Manager)
  • ಸಹಾಯಕ ವ್ಯವಸ್ಥಾಪಕ (Assistant Manager)
  • ಹಿರಿಯ ಕಾರ್ಯನಿರ್ವಾಹಕ (Senior Executive)

ಅರ್ಹತೆ ಮತ್ತು ವಯೋಮಿತಿ:

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ವಿಭಾಗದಲ್ಲಿ (Civil/Electrical/Electronics) ಬಿ.ಇ (BE) ಅಥವಾ ಬಿ.ಟೆಕ್ (B.Tech) ಪೂರ್ಣಗೊಳಿಸಿರಬೇಕು. ಹುದ್ದೆಯ ದರ್ಜೆಗೆ ಅನುಗುಣವಾಗಿ ಕನಿಷ್ಠ 3 ರಿಂದ 10 ವರ್ಷಗಳ ವೃತ್ತಿ ಅನುಭವ ಅಗತ್ಯವಿರುತ್ತದೆ. ಅಭ್ಯರ್ಥಿಗಳ ಗರಿಷ್ಠ ವಯಸ್ಸು 35 ರಿಂದ 50 ವರ್ಷಗಳ ಒಳಗಿರಬೇಕು. ಸರ್ಕಾರಿ ನಿಯಮಾವಳಿಯಂತೆ ಮೀಸಲಾತಿ ವರ್ಗದವರಿಗೆ ವಯೋಮಿತಿ ಸಡಿಲಿಕೆ ಇರುತ್ತದೆ.

ವೇತನ ಶ್ರೇಣಿ (Salary Package):

ಆಯ್ಕೆಯಾದ ಅಭ್ಯರ್ಥಿಗಳಿಗೆ ಹಿರಿಯ ಮಟ್ಟದ ಹುದ್ದೆಗಳಿಗೆ ಮಾಸಿಕ ರೂ. 50,000 ರಿಂದ ರೂ. 2,00,000 ವರೆಗೆ (IDA ಸ್ಕೇಲ್) ವೇತನ ನೀಡಲಾಗುತ್ತದೆ. ಇದರೊಂದಿಗೆ ವೈದ್ಯಕೀಯ ಭತ್ಯೆ, ಮನೆ ಬಾಡಿಗೆ ಭತ್ಯೆ (HRA) ಸೇರಿದಂತೆ ಕೇಂದ್ರ ಸರ್ಕಾರದ ಇತರೆ ಸೌಲಭ್ಯಗಳು ಸಿಗಲಿವೆ.

ಇದನ್ನೂ ಓದಿ: ಇನ್ಫೋಸಿಸ್‌ನಿಂದ ಭರ್ಜರಿ ಉದ್ಯೋಗಾವಕಾಶ; 20,000 ಫ್ರೆಶರ್ಸ್‌ ನೇಮಕಾತಿ ಘೋಷಣೆ

ಆಯ್ಕೆ ಪ್ರಕ್ರಿಯೆ ಹೇಗೆ?

ಯಾವುದೇ ಕಠಿಣ ಲಿಖಿತ ಪರೀಕ್ಷೆಯ ಬದಲಾಗಿ, ಸರಳವಾದ ಮೂರು ಹಂತಗಳಲ್ಲಿ ಆಯ್ಕೆ ನಡೆಯಲಿದೆ:

  • ಶಾರ್ಟ್‌ಲಿಸ್ಟ್: ಅಭ್ಯರ್ಥಿಗಳ ಶೈಕ್ಷಣಿಕ ಅಂಕಗಳು ಮತ್ತು ಅನುಭವದ ಆಧಾರದ ಮೇಲೆ ಕಿರುಪಟ್ಟಿ ಸಿದ್ಧಪಡಿಸಲಾಗುತ್ತದೆ.
  • ಸಂದರ್ಶನ: ಶಾರ್ಟ್‌ಲಿಸ್ಟ್ ಆದವರಿಗೆ ವೈಯಕ್ತಿಕ ಸಂದರ್ಶನ ಇರುತ್ತದೆ.
  • ವೈದ್ಯಕೀಯ ಪರೀಕ್ಷೆ: ಅಂತಿಮವಾಗಿ ವೈದ್ಯಕೀಯ ಫಿಟ್ನೆಸ್ ಪರೀಕ್ಷೆಯ ನಂತರ ನೇಮಕಾತಿ ಪತ್ರ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತರು NCRTC ಅಧಿಕೃತ ವೆಬ್‌ಸೈಟ್ www.ncrtc.in ಗೆ ಭೇಟಿ ನೀಡಿ, ‘Careers’ ವಿಭಾಗದಲ್ಲಿ ಲಭ್ಯವಿರುವ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು. ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಮೇ 9ರ ಒಳಗೆ ಪ್ರಕ್ರಿಯೆ ಪೂರ್ಣಗೊಳಿಸಿ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:57 pm, Fri, 8 May 26

Source link

TV9 Kannada News Live: ರಾಜ್ಯದಲ್ಲಿ SIR ವಿರೋಧಿ ಸಂಘಟನೆಗಳ ಜೊತೆ ಸಿಎಂ ಮೀಟಿಂಗ್‌! ಇಲ್ಲಿದೆ ಈ ಹೊತ್ತಿನ ಪ್ರಮುಖ ಸುದ್ದಿಗಳು – Kannada News | TV9 Kannada News Live: CM Siddaramaiah Meets Progressive Groups Over SIR Row; NCRB Ranks Bengaluru 3rd in Crimes Against Women

ಬೆಂಗಳೂರು, ಮೇ 08: ಕೇಂದ್ರದ ಎಸ್‌ಐಆರ್ (SIR) ಜಾರಿ ವಿಚಾರದಲ್ಲಿ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರೊಂದಿಗೆ ತುರ್ತು ಸಭೆ ನಡೆಸುತ್ತಿದ್ದಾರೆ. ಅದಲ್ಲದೆ ಸಿಲಿಕಾನ್ ಸಿಟಿಯಲ್ಲಿ ಮಹಿಳಾ ಸುರಕ್ಷತೆಯ ಪ್ರಶ್ನೆ ಮತ್ತೆ ಎದ್ದಿದ್ದು, ಎನ್‌ಸಿಆರ್‌ಬಿ (NCRB) ಬಿಡುಗಡೆ ಮಾಡಿರುವ 2024ರ ವರದಿಯ ಪ್ರಕಾರ, ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ಬೆಂಗಳೂರು 3ನೇ ಸ್ಥಾನದಲ್ಲಿದೆ. ಇನ್ನೊಂದೆಡೆ ಪಶ್ಚಿಮ ಬಂಗಾಳದ ಹತ್ಯೆ ಪ್ರಕರಣದ ತನಿಖೆ ದಿಗಿಲು ಹುಟ್ಟಿಸಿದೆ.

ಮುಖ್ಯಾಂಶಗಳು

  • ಎಸ್‌ಐಆರ್ ವಿರೋಧಿ ಸಂಘಟನೆಗಳ ಜೊತೆ ಸಿಎಂ ಸಿದ್ದರಾಮಯ್ಯ ಸಮಾಲೋಚನೆ
  • NCRB ವರದಿ ಪ್ರಕಾರ ಮಹಿಳಾ ಅಪರಾಧ ಪ್ರಕರಣಗಳಲ್ಲಿ ಬೆಂಗಳೂರಿಗೆ ದೇಶದಲ್ಲೇ 3ನೇ ಸ್ಥಾನ.
  • ಪಶ್ಚಿಮ ಬಂಗಾಳದ ಹತ್ಯೆ ಕೇಸ್, ಬಿಹಾರದ ಶಾರ್ಪ್ ಶೂಟರ್‌ಗಳಿಂದ ಸುಪಾರಿ ಕಿಲ್ಲಿಂಗ್.

ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಸಭೆ

ಕೇಂದ್ರ ಸರ್ಕಾರ ರಾಜ್ಯದಲ್ಲಿ ಎಸ್‌ಐಆರ್ ಜಾರಿಗೊಳಿಸಲು ಮುಂದಾಗಿರುವುದು ತೀವ್ರ ವಿರೋಧಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರೊಂದಿಗೆ ತುರ್ತು ಸಭೆ ನಡೆಸುತ್ತಿದ್ದಾರೆ. ಸಭೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಪ್ರಮುಖ ಸಚಿವರು ಭಾಗವಹಿಸಿದ್ದಾರೆ. ಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶದ ಮೇಲೆ ಎಸ್‌ಐಆರ್ ಬೀರಿದ ಪ್ರಭಾವವನ್ನು ಗಮನಿಸಿರುವ ಸಿಎಂ, ರಾಜ್ಯದಲ್ಲಿ ಇದರ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲಿದ್ದಾರೆ. ಡಿಎಸ್ಎಸ್, ಎದ್ದೇಳು ಕರ್ನಾಟಕ ಹಾಗೂ ವಿವಿಧ ಅಲ್ಪಸಂಖ್ಯಾತ ಮತ್ತು ರೈತ ಸಂಘಟನೆಗಳ ನಾಯಕರು ಎಸ್‌ಐಆರ್‌ನಿಂದ ಆಗುವ ಆಕ್ಷೇಪಾರ್ಹ ನಡೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಸರ್ಕಾರ ಈ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸಲು ನಿರ್ಧರಿಸಿದೆ.

ಮಹಿಳಾ ಸುರಕ್ಷತೆಯಲ್ಲಿ ಬೆಂಗಳೂರಿಗೆ 3ನೇ ಸ್ಥಾನ!

ಬೆಂಗಳೂರು ಪೊಲೀಸರು ಮಹಿಳೆಯರ ರಕ್ಷಣೆಗಾಗಿ ಎಷ್ಟೇ ಕ್ರಮ ಕೈಗೊಂಡರೂ ಅಪರಾಧ ಪ್ರಕರಣಗಳು ಇಳಿಮುಖವಾಗುತ್ತಿಲ್ಲ. ಎನ್‌ಸಿಆರ್‌ಬಿ (NCRB) ಬಿಡುಗಡೆ ಮಾಡಿರುವ 2024ರ ವರದಿಯ ಪ್ರಕಾರ, ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ಬೆಂಗಳೂರು ದೇಶದ 19 ಮೆಟ್ರೋಪಾಲಿಟನ್ ನಗರಗಳ ಪೈಕಿ 3ನೇ ಸ್ಥಾನದಲ್ಲಿದೆ. ದೆಹಲಿ ಮತ್ತು ಮುಂಬೈ ಮೊದಲ ಎರಡು ಸ್ಥಾನಗಳಲ್ಲಿವೆ. ನಗರದಲ್ಲಿ ಕಳೆದ ವರ್ಷ 169 ಅತ್ಯಾಚಾರ ಪ್ರಕರಣಗಳಿದ್ದರೆ, ಈ ವರ್ಷ 168 ಪ್ರಕರಣಗಳು ದಾಖಲಾಗಿವೆ. ವಿಶೇಷವಾಗಿ ಮಹಿಳೆಯರ ಮಾನಭಂಗಕ್ಕೆ ಯತ್ನಿಸಿದ ಕ್ರಿಮಿನಲ್ ದೌರ್ಜನ್ಯ ಪ್ರಕರಣಗಳಲ್ಲಿ ಬೆಂಗಳೂರು ರಾಷ್ಟ್ರಮಟ್ಟದಲ್ಲಿ 3ನೇ ಸ್ಥಾನ ಪಡೆದಿದ್ದು, ಐಟಿ ಹಬ್‌ನಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಮೂಡಿಸಿದೆ.

ಇದನ್ನೂ ಓದಿ ಮಹಿಳೆಯರ ವಿರುದ್ಧದ ಅಪರಾಧ: ದೇಶದ ಮೆಟ್ರೋ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ 3ನೇ ಸ್ಥಾನ

ಸುವೇಂದು ಅಧಿಕಾರಿ ಆಪ್ತನ ಹತ್ಯೆ: ಬಯಲಾಯ್ತು 40 ಲಕ್ಷದ ಸುಪಾರಿ ಸ್ಕೆಚ್!

ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಕಾರ್ಯದರ್ಶಿ ಚಂದ್ರನಾಥ್ ರಥ್ ಹತ್ಯೆ ಪ್ರಕರಣ ಈಗ ದಿಗಿಲು ಹುಟ್ಟಿಸುವ ತಿರುವು ಪಡೆದಿದೆ. ತನಿಖೆಯ ಪ್ರಕಾರ, ಈ ಹತ್ಯೆಗಾಗಿ ಬಿಹಾರದಿಂದ ಶಾರ್ಪ್ ಶೂಟರ್‌ಗಳನ್ನು ಕರೆಸಿ ಬರೋಬ್ಬರಿ 40 ಲಕ್ಷ ರೂ.ಗಳ ಸುಪಾರಿ ನೀಡಲಾಗಿತ್ತು. ಮಳೆಯಿಂದಾಗಿ ಕಾರಿನ ವೇಗ ಕಡಿಮೆಯಾದ ಸಮಯವನ್ನು ಹೊಂಚು ಹಾಕಿದ್ದ ಹಂತಕರು, ಅತ್ಯಂತ ಸಮೀಪದಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಕಳೆದ ಐದು ದಿನಗಳಿಂದ ಹಂತಕರು ಚಂದ್ರನಾಥ್ ಚಲನವಲನದ ಮೇಲೆ ಕಣ್ಣಿಟ್ಟಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಬಂಗಾಳದ ರಾಜಕೀಯ ವಲಯದಲ್ಲಿ ಈ ಘಟನೆ ಭಾರೀ ಸಂಚಲನ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:43 pm, Fri, 8 May 26

Source link

ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ: ಇದರ ವಿಶೇಷತೆಯೇನು? – Kannada News | BS Yediyurappa’s Iconic Ambassador Car Put on Display in Chitradurga Ahead of Abhimanotsava

ಚಿತ್ರದುರ್ಗ, ಮೇ 08: ನಗರದಲ್ಲಿ ನಾಳೆ (ಮೇ 09) ನಡೆಯಲಿರುವ ಬಿಎಸ್​ವೈ ಅಭಿಮಾನೋತ್ಸವ ಹಿನ್ನೆಲೆ ಮಾಜಿ ಸಿಎಂ ಬಿ.ಎಸ್​​. ಯಡಿಯೂರಪ್ಪ ಅವರರು ಬಳಸಿದ  ಅಂಬಾಸಿಡರ್ ಕಾರನ್ನು ಪ್ರದರ್ಶನಕ್ಕೆ ಇಡಲಾಗಿದೆ. ಬಿಜೆಪಿ ಮುಖಂಡರು, ಯಡಿಯೂರಪ್ಪ ಅಭಿಮಾನಿಗಳು ಕಾರಿನ ವೀಕ್ಷಣೆ ಮಾಡಿದ್ದಲ್ಲದೆ ಅದರ ಜೊತೆ ಸೆಲ್ಫೀ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ. ತಂದೆ ಬಳಸಿದ್ದ ಕಾರಿನ ಬಗ್ಗೆ ಮಾತನಾಡಿದ ಬಿ.ವೈ. ವಿಜಯೇಂದ್ರ, ಯಡಿಯೂರಪ್ಪರನ್ನು ಗುರುತಿಸುವಷ್ಟೇ ಈ ಕಾರನ್ನೂ ಜನ ಗುರುತಿಸುತ್ತಾರೆ. ಅಂದು ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಬಿಜೆಪಿಯನ್ನು ಹಳ್ಳಿ ಹಳ್ಳಿಗಳಿಗೂ ತಲುಪಿಸಲು ಯಡಿಯೂರಪ್ಪನವರಿಗೆ ಈ ಕಾರು ನೆರವಾಗಿದೆ. ಬಿಎಸ್​​ವೈ ಸೇರಿ ಪಕ್ಷದ ಅನೇಕ ಪ್ರಮುಖರು ಇದೇ ಕಾರಲ್ಲಿ ತೆರಳಿ ಪಕ್ಷದ ಪ್ರಚಾರ ಮಾಡಿದ್ದರು ಎಂದು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version