ಕರ್ನಾಟಕ ಕಾಂಗ್ರೆಸ್​​ನಲ್ಲಿ ನಾಯಕತ್ವ ಬದಲಾವಣೆ? ಬಿಗ್​​ ಅಪ್ಡೇಟ್​​ ಕೊಟ್ಟ ರಾಬರ್ಟ್ ವಾದ್ರಾ – Kannada News | Robert Vadra Reacts to CM Post Tussle in Karnataka Congress

ಬೆಂಗಳೂರು, ಫೆಬ್ರವರಿ 27: ಕಾಂಗ್ರೆಸ್​​ ವರಿಷ್ಠೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಬೆಂಗಳೂರಿಗೆ ಆಗಮಿಸಿದ್ದು, ನಗರದ ವಿವಿಧ ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಇಸ್ಕಾನ್ ದೇವಸ್ಥಾನ ಮತ್ತು ಮಸೀದಿಗೆ ಭೇಟಿ ನೀಡಿದ ಅವರು, ಮಿಷನರೀಸ್ ಆಫ್ ಚಾರಿಟಿ ಸೇವಾ ಕೇಂದ್ರದಲ್ಲಿಯೂ ಸಮಯ ಕಳೆದಿದ್ದಾರೆ. ಬೆಂಗಳೂರಿನಲ್ಲಿ ತಮಗೆ ದೊರೆತ ಅಪಾರ ಪ್ರೀತಿ ಮತ್ತು ಅಭಿಮಾನವನ್ನು ವಾದ್ರಾ ಶ್ಲಾಘಿಸಿದ್ದು, ಬೆಂಗಳೂರು ತಮಗೆ ಎರಡನೇ ಮನೆಯಂತಿದೆ ಎಂದು ಬಣ್ಣಿಸಿದ್ದಾರೆ. ಕರ್ನಾಟಕದ ಪ್ರಸ್ತುತ ರಾಜಕೀಯ ಪರಿಸ್ಥಿತಿ ಕುರಿತಾಗಿಯೂ ಮಾತನಾಡಿರುವ ವಾದ್ರಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರ್ನಾಟಕದ ಜನರ ಪ್ರಗತಿಗಾಗಿ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ, ಅವರು ಒಟ್ಟಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ನಾಯಕತ್ವ ಬದಲಾವಣೆಯ ಯಾವುದೇ ಸಾಧ್ಯತೆಯ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ವಾದ್ರಾ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ದಿ ಕೇರಳ ಸ್ಟೋರಿ 2’ ಸಿನಿಮಾದ ಬಿಡುಗಡೆಗೆ ಅನುಮತಿ ನೀಡಿದ ಹೈಕೋರ್ಟ್ – Kannada News | High Court lifts the stay on The Kerala Story 2 Goes Beyond and allows its release

ಟ್ರೇಲರ್ ರಿಲೀಸ್ ಬೆನ್ನಲ್ಲೇ ಸಾಕಷ್ಟು ವಿವಾದ ಸೃಷ್ಟಿ ಮಾಡಿದ್ದ ‘ದಿ ಕೇರಳ ಸ್ಟೋರಿ 2’ (The Kerala Story 2) ಸಿನಿಮಾದ ಬಿಡುಗಡೆಗೆ ವಿಘ್ನ ಎದುರಾಗಿತ್ತು. ಆದರೆ ಈಗ ಚಿತ್ರತಂಡ ನಿಟ್ಟುಸಿರು ಬಿಡುವಂತಾಗಿದೆ. ಈ ಮೊದಲು ‘ದಿ ಕೇರಳ ಸ್ಟೋರಿ 2’ ಚಿತ್ರದ ಬಿಡುಗಡೆಗೆ ಕೇರಳ ಹೈಕೋರ್ಟ್ (Kerala High Court) ತಡೆ ನೀಡಿತ್ತು. ಆದರೆ ಕೆಲವೇ ಗಂಟೆಗಳಲ್ಲಿ ಮರು ವಿಚಾರಣೆ ನಡೆಸಿ, ಚಿತ್ರದ ಬಿಡುಗಡೆಗೆ ಅನುಮತಿ ನೀಡಿದೆ. ಈಗ ನಿರ್ಮಾಪಕರು ಹೊಸ ಬಿಡುಗಡೆ ದಿನಾಂಕದ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಳ್ಳಲಿದ್ದಾರೆ.

ವಿಪುಲ್ ಅಮೃತ್​ಲಾಲ್ ಶಾ ಅವರು ‘ದಿ ಕೇರಳ ಸ್ಟೋರಿ 2’ ಸಿನಿಮಾವನ್ನು ನಿರ್ಮಿಸಿದ್ದಾರೆ. ಈ ಮೊದಲು ಕೇರಳ ಹೈಕೋರ್ಟ್ ತಡೆ ನೀಡಿದ್ದನ್ನು ಪ್ರಶ್ನಿಸಿ ಕೂಡಲೇ ಮೇಲ್ಮನವಿ ಸಲ್ಲಿಸಲಾಗಿತ್ತು. ತುರ್ತು ಪ್ರಕರಣ ಎಂದು ಪರಿಗಣಿಸಿದ ವಿಭಾಗೀಯ ಪೀಠವು ಅದೇ ದಿನ ಸಂಜೆ 7.30ಕ್ಕೆ ವಿಚಾರಣೆ ನಡೆಸಿತು. ಇಂದು (ಫೆಬ್ರವರಿ 27) ಸಂಜೆ ತೀರ್ಪು ಪ್ರಕಟಿಸಿತು.

‘ದಿ ಕೇರಳ ಸ್ಟೋರಿ 2’ ಸಿನಿಮಾದಲ್ಲಿ ಲವ್ ಜಿಹಾದ್ ಕುರಿತ ಕಥೆಯನ್ನು ಹೇಳಲಾಗುತ್ತಿದೆ. ಆದರೆ ಚಿತ್ರದ ಟೀಸರ್​ನಲ್ಲಿ ತೋರಿಸಿದ ಅಂಶಗಳು ವಿವಾದಾತ್ಮಕವಾಗಿವೆ ಎಂದು ಅನೇಕರು ತಕರಾರು ತೆಗೆದಿದ್ದರು. ಆ ವಿವಾದವು ಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ್ದ ನ್ಯಾಯಾಲಯವು ಚಿತ್ರದ ಟೀಸರ್ ಅನ್ನು ತೆಗೆದು ಹಾಕುವಂತೆ ಸೂಚನೆ ನೀಡಿತ್ತು. ಬಳಿಕ ಸಿನಿಮಾದ ಬಿಡುಗಡೆಯನ್ನು ಮುಂದೂಡುವಂತೆ ಆದೇಶಿಸಿತ್ತು.

ಆದರೆ ಈಗ ‘ದಿ ಕೇರಳ ಸ್ಟೋರಿ 2’ ಚಿತ್ರತಂಡಕ್ಕೆ ಹೈಕೋರ್ಟ್​​ನ ಹೊಸ ಆದೇಶದಿಂದ ರಿಲೀಫ್ ಸಿಕ್ಕಂತೆ ಆಗಿದೆ. ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿ ಕೂಡ ಈ ಸಿನಿಮಾ ಬಿಡುಗಡೆ ಆಗಲಿದೆ. ಗುರುವಾರ (ಫೆಬ್ರವರಿ 26) ಈ ಸಿನಿಮಾಗೆ ಅನೇಕ ಕಡೆಗಳಲ್ಲಿ ಬುಕಿಂಗ್ ಆಗಿತ್ತು. ಆದರೆ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪ್ರದರ್ಶನಗಳನ್ನು ರದ್ದು ಮಾಡಲಾಗಿತ್ತು.

ಇದನ್ನೂ ಓದಿ: ಹಿಂದೂ ಯುವತಿಯರೇ ಟಾರ್ಗೆಟ್: ಶಾಕಿಂಗ್ ಆಗಿದೆ ‘ದಿ ಕೇರಳ ಸ್ಟೋರಿ 2’ ಟ್ರೇಲರ್

ಇಷ್ಟೆಲ್ಲ ಸುದ್ದಿ ಆಗಿರುವ ‘ದಿ ಕೇರಳ ಸ್ಟೋರಿ 2’ ಸಿನಿಮಾದಲ್ಲಿ ಅಂಥದ್ದೇನಿದೆ ಎಂದು ತಿಳಿಯುವ ಕೌತುಕ ಪ್ರೇಕ್ಷಕರಲ್ಲಿ ಹೆಚ್ಚಿದೆ. ಕೇರಳದಲ್ಲಿ ಈ ಚಿತ್ರಕ್ಕೆ ಅನೇಕರಿಂದ ವಿರೋಧ ವ್ಯಕ್ತವಾಗುತ್ತಿದೆ. ಕಾಮಾಕ್ಯ ನಾರಾಯಣ್ ಸಿಂಗ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಉಲ್ಕಾ ಗುಪ್ತಾ, ಐಶ್ವರ್ಯಾ ಊಜಾ, ಅದಿತಿ ಭಾಟಿಯಾ ಅವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IND vs AUS: ಟಿ20 ಸರಣಿ ಗೆದ್ದು, ಏಕದಿನ ಸರಣಿ ಸೋತ ಟೀಂ ಇಂಡಿಯಾ – Kannada News | India Women’s Cricket Team Loses ODI Series to Australia: Batting Woes and Series Defeat

ಟಿ20 ಸರಣಿಯ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಪ್ರವಾಸವನ್ನು ಆರಂಭಿಸಿದ್ದ ಭಾರತ ಮಹಿಳಾ ತಂಡ (Australia Women vs India Women), ಇದೀಗ ಏಕದಿನ ಸರಣಿಯನ್ನು ಕಳೆದುಕೊಂಡಿದೆ. ಹೋಬಾರ್ಟ್‌ನಲ್ಲಿ ನಡೆದ ಸರಣಿಯ ಎರಡನೇ ಪಂದ್ಯವನ್ನು 5 ವಿಕೆಟ್​ಗಳಿಂದ ಗೆದ್ದುಕೊಂಡ ಆತಿಥೇಯ ಆಸ್ಟ್ರೇಲಿಯಾ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಿಂದ ಸರಣಿಯನ್ನು ವಶಪಡಿಸಿಕೊಂಡಿದೆ. ಸರಣಿಯ ಎರಡೂ ಪಂದ್ಯಗಳಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುವ ತಪ್ಪು ನಿರ್ಧಾರ ತೆಗೆದುಕೊಂಡು ಎರಡು ಪಂದ್ಯಗಳನ್ನು ಏಕಪಕ್ಷೀಯವಾಗಿ ಸೋತಿತು. ಏಕದಿನ ವಿಶ್ವಕಪ್ ಗೆದ್ದುಕೊಂಡ ಬಳಿಕ ಮೊದಲ ಏಕದಿನ ಸರಣಿಯನ್ನಾಡಿದ ಭಾರತ ವನಿತಾ ಪಡೆ ತಾನು ಮಾಡಿದ ಸ್ವಯಂಕೃತ ಅಪರಾದಗಳಿಂದಲೇ ಸರಣಿ ಸೋತಿತು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಬಲಿಷ್ಠ ಬ್ಯಾಟಿಂಗ್‌ ವಿಭಾಗವನ್ನು ಹೊಂದಿರುವ ಆಸ್ಟ್ರೇಲಿಯಾ ವಿರುದ್ಧ ಮೊದಲು ಬ್ಯಾಟಿಂಗ್‌ ಮಾಡಿ ಮೊದಲ ಪಂದ್ಯದಲ್ಲಿ ಕೇವಲ 214 ರನ್​ಗಳಿಗೆ ಆಲೌಟ್ ಆಗಿದ್ದ ಭಾರತ, ಆ ಪಂದ್ಯವನ್ನು ಇನ್ನು 70 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್​ಗಳಿಂದ ಸೋತಿತ್ತು. ಇದೀಗ ಎರಡನೇ ಪಂದ್ಯದಲ್ಲೂ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 251 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಇನ್ನು 8 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್​ಗಳಿಂದ ಈ ಪಂದ್ಯವನ್ನೂ ಗೆದ್ದುಕೊಂಡಿತು. ಈ ಎರಡೂ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತಕ್ಕೆ ಮುಕ್ತವಾಗಿ ಬ್ಯಾಟ್ ಬೀಸಲು ಸಾಧ್ಯವಾಗಲಿಲ್ಲ. ಆದರೆ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಸರಾಗವಾಗಿ ರನ್ ಕಲೆಹಾಕುವ ಮೂಲಕ ಎರಡು ಪಂದ್ಯಗಳನ್ನು ಗೆದ್ದುಕೊಂಡಿತು.

ಟೀಂ ಇಂಡಿಯಾದ ಬ್ಯಾಟಿಂಗ್ ವೈಫಲ್ಯ

ಹೋಬಾರ್ಟ್‌ನಲ್ಲಿ ನಡೆದ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಮತ್ತೊಮ್ಮೆ ಬ್ಯಾಂಟಿಗ್ ವಿಭಾಗ ಕೈಕೊಟ್ಟಿತು. ಸ್ಮೃತಿ ಮಂಧಾನ (31) ಮತ್ತು ಪ್ರತಿಕಾ ರಾವಲ್ (52) ಮೊದಲ ವಿಕೆಟ್​ಗೆ 78 ರನ್‌ಗಳನ್ನು ಸೇರಿಸುವ ಮೂಲಕ ಉತ್ತಮ ಆರಂಭವನ್ನು ನೀಡಿದರು. ಪ್ರತಿಕಾ ಕೂಡ ಅರ್ಧಶತಕ ಪೂರೈಸಿದರು. ಆದರೆ ತಂಡದ ಮೊತ್ತ 100 ರನ್ ದಾಟುವ ಮುನ್ನವೇ ಮೂರು ವಿಕೆಟ್‌ಗಳು ಪತನಗೊಂಡವು. ಅಲ್ಲಿಂದ ನಾಯಕಿ ಹರ್ಮನ್‌ಪ್ರೀತ್ ಕೌರ್ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟುವ ಕೆಲಸ ಮಾಡಿದರಾದರೂ ಅವರಿಗೆ ಇನ್ನೊಂದು ತುದಿಯಿಂದ ಯಾರಿಂದಲೂ ಬೆಂಬಲ ಸಿಗಲಿಲ್ಲ. ಆದಾಗ್ಯೂ ಹರ್ಮನ್‌ಪ್ರೀತ್ ಮತ್ತು ಕಾಶ್ವಿ ಗೌತಮ್ (25) 55 ರನ್‌ಗಳ ಜೊತೆಯಾಟ ನಡೆಸಿ ತಂಡವನ್ನು 251 ರನ್‌ಗಳಿಗೆ ಕೊಂಡೊಯ್ದರು.

ವಾಲ್-ಲಿಚ್‌ಫೀಲ್ಡ್‌ ಸ್ಫೋಟಕ ಬ್ಯಾಟಿಂಗ್

ಈ ಗುರಿ ಬೆನ್ನಟ್ಟಿದ ಆಸೀಸ್​ಗೆ ಆರಂಭಿಕ ಆಘಾತ ಎದುರಾಯಿತು. ತನ್ನ ಕೊನೆಯ ಸರಣಿಯನ್ನು ಆಡುತ್ತಿರುವ ಆಸ್ಟ್ರೇಲಿಯಾದ ನಾಯಕಿ ಅಲಿಸಾ ಹೀಲಿ (6) ಮತ್ತೊಮ್ಮೆ ಬೇಗನೆ ಔಟಾದರು, ಆದರೆ ಟೀಮ್ ಇಂಡಿಯಾ ಇದರ ಲಾಭವನ್ನು ಪಡೆಯುವಲ್ಲಿ ವಿಫಲವಾಯಿತು. ಫೋಬೆ ಲಿಚ್‌ಫೀಲ್ಡ್ (80 ರನ್‌ಗಳು, 62 ಎಸೆತಗಳು) ಮತ್ತು ಜಾರ್ಜಿಯಾ ವಾಲ್ 119 ರನ್‌ಗಳ ಜೊತೆಯಾಟ ನಡೆಸಿ, ಭಾರತದ ಪುನರಾಗಮನದ ಭರವಸೆಯನ್ನು ಭಗ್ನಗೊಳಿಸಿದರು. ಲಿಚ್‌ಫೀಲ್ಡ್ ಶತಕವನ್ನು ತಪ್ಪಿಸಿಕೊಂಡರಾದರೂ ವಾಲ್ (101 ರನ್‌ಗಳು, 82 ಎಸೆತಗಳು) ಕೇವಲ 80 ಎಸೆತಗಳಲ್ಲಿ ಅದ್ಭುತ ಶತಕ ಬಾರಿಸುವ ಮೂಲಕ ತಂಡದ ಗೆಲುವನ್ನು ಖಚಿತಪಡಿಸಿದರು. ಅಂತಿಮವಾಗಿ ಆಸ್ಟ್ರೇಲಿಯಾ ಕೇವಲ 36.1 ಓವರ್‌ಗಳಲ್ಲಿ ಪಂದ್ಯ ಮತ್ತು ಸರಣಿಯನ್ನು ಐದು ವಿಕೆಟ್‌ಗಳಿಂದ ಗೆದ್ದುಕೊಂಡಿತು. ಇದೀಗ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯ ಮಾರ್ಚ್ 1 ರಂದು ಹೋಬಾರ್ಟ್‌ನಲ್ಲಿ ನಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

March Festival List 2026: ಮಾರ್ಚ್ ತಿಂಗಳಲ್ಲಿ ಆಚರಿಸುವ ಹಬ್ಬಗಳಾವುವು? ಇಲ್ಲಿದೆ ಮಾಹಿತಿ – Kannada News | March Festival List 2026: List of Hindu Fasts And Festivals Celebrations

ಹಿಂದೂ ಧರ್ಮದಲ್ಲಿ (Hindu Religion) ವರ್ಷವಿಡೀ ಹತ್ತು ಹಲವು ಧಾರ್ಮಿಕ ಆಚರಣೆ, ಹಬ್ಬಗಳು ವ್ರತಾಚರಣೆಗಳಿವೆ. ಈ ವರ್ಷದ ಮೊದಲೆರಡು ತಿಂಗಳು ಮುಗಿದಿದ್ದು, ಮೂರನೇ ತಿಂಗಳಾದ ಮಾರ್ಚ್‌ಗೆ ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿವೆ. ಈ ತಿಂಗಳಲ್ಲಿ ಹಲವಾರು ಹಬ್ಬಗಳನ್ನು(festivals) ಆಚರಿಸಲಾಗುತ್ತದೆ. ಮಾರ್ಚ್ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿದೆ.

ಮಾರ್ಚ್ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳ ಪಟ್ಟಿ ಇಲ್ಲಿದೆ

  • ಮಾರ್ಚ್ 01- ಪ್ರದೋಷ
  • ಮಾರ್ಚ್ 02 – ಹೋಲಿಕಾ ಕಾಮದಹನ
  • ಮಾರ್ಚ್ 03 – ಹೋಳಿ ಹುಣ್ಣಿಮೆ
  • ಮಾರ್ಚ್ 04 – ಫಾಲ್ಗುನ ಕೃಷ್ಣ ಪಕ್ಷ
  • ಮಾರ್ಚ್ 06 – ಸಂಕಷ್ಟರ ಚತುರ್ಥಿ
  • ಮಾರ್ಚ್ 06 – ಶ್ರೀವಾದಿರಾಜರ ಆರಾಧನೆ
  • ಮಾರ್ಚ್ 07 – ಶ್ರೀವ್ಯಾಸರಾಯರ ಆರಾಧನೆ
  • ಮಾರ್ಚ್ 08 – ರಂಗ ಪಂಚಮಿ
  • ಮಾರ್ಚ್ 10 – ಶಬರಿ ಜಯಂತಿ
  • ಮಾರ್ಚ್ 11 – ಶಹರತ್ – ಇ – ಹಜರತ್ ಆಲಿ
  • ಮಾರ್ಚ್ 14 – ಮೀನ ಸಂಕ್ರಮಣ
  • ಮಾರ್ಚ್ 15 – ಸರ್ವೈಕಾದಶಿ ಪಾಪವಿಮೋಚನಿ
  • ಮಾರ್ಚ್ 16 – ಪ್ರದೋಷ
  • ಮಾರ್ಚ್ 17 – ಮಾಸ ಶಿವರಾತ್ರಿ
  • ಮಾರ್ಚ್ 18 – ಮಹಾ ನಕ್ಷತ್ರ ಉತ್ತರಭಾದ್ರಾ
  • ಮಾರ್ಚ್ 19 – ಚಾಂದ್ರಯುಗಾದಿ
  • ಮಾರ್ಚ್ 20 – ಚೈತ್ರ ಶುಕ್ಲ ಪಕ್ಷ
  • ಮಾರ್ಚ್ 21- ರಂಜನ್ ಈದ್ ಉಲ್ ಫಿತರ್ಮಾ
  • ರ್ಚ್ 21- ಮತ್ಸ್ಯ ಜಯಂತಿ
  • ಮಾರ್ಚ್ 23 – ಹಯವ್ರತಂ
  • ಮಾರ್ಚ್ 24 – ಸ್ಕಂದ ಷಷ್ಠಿ
  • ಮಾರ್ಚ್ 26 – ಶ್ರೀರಾಮ ನವಮಿ
  • ಮಾರ್ಚ್ 29 – ಸರ್ವೈಕಾದಶಿ ಕಾಮದಾ
  • ಮಾರ್ಚ್ 30 – ಪ್ರದೋಷ
  • ಮಾರ್ಚ್ 30 – ಅನಂಗ ತ್ರಯೋದಶಿ
  • ಮಾರ್ಚ್ 31 – ದಮನಕ ಚತುರ್ದಶಿ
  • ಮಾರ್ಚ್ 31 – ಮಹಾವೀರ ಜಯಂತಿ

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:17 pm, Fri, 27 February 26

Source link

ರಕ್ತ ಪರೀಕ್ಷೆಯಿಂದ ಅಲ್ಝೈಮರ್ ಕಾಯಿಲೆಯನ್ನು ಪತ್ತೆ ಹಚ್ಚಬಹುದೇ? ಏನಿದು ಹೊಸ ಸಂಶೋಧನೆ? – Kannada News | New Blood Test Boosts Alzheimer’s Diagnosis Accuracy

New Blood Test Boosts Alzheimer’s Diagnosis AccuracyImage Credit source: Getty Images

ಅಲ್ಝೈಮರ್ (Alzheimer’s) ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ. ಇದೊಂದು ಭಯಾನಕ ಮರೆವಿನ ರೋಗವಾಗಿದ್ದು ಇದರಲ್ಲಿ ವ್ಯಕ್ತಿಯ ಸ್ಮರಣಶಕ್ತಿ ತುಂಬಾ ದುರ್ಬಲಗೊಂಡು ತಮ್ಮ ದೈನಂದಿನ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಾಗುಡಿರುವ ಸ್ಥಿತಿಯಾಗಿದೆ. ಆದರೆ ಅಚ್ಚರಿ ವಿಷಯವೆನೆಂದರೆ ಈ ರೋಗವನ್ನು ಪತ್ತೆಹಚ್ಚುವಲ್ಲಿ ಮಹತ್ವದ ಸಾಧನೆ ನಡೆದಿದೆ. ಹೌದು, ಇತ್ತೀಚಿನ ಕ್ಲಿನಿಕಲ್ ಅಧ್ಯಯನವು, ಸರಳ ರಕ್ತ ಪರೀಕ್ಷೆಯೊಂದು ಆಲ್ಝೈಮರ್ ರೋಗದ ನಿರ್ಣಯದ ನಿಖರತೆಯನ್ನು 94.5% ರಷ್ಟು ಹೆಚ್ಚಿಸಬಹುದೆಂದು ತೋರಿಸಿದೆ. ಈ ಅಧ್ಯಯನದ ಫಲಿತಾಂಶಗಳು ಜರ್ನಲ್ ಆಫ್ ನ್ಯೂರಾಲಜಿನಲ್ಲಿ ಪ್ರಕಟಗೊಂಡಿವೆ. ಹಾಗಾದರೆ ಇದು ಭವಿಷ್ಯದಲ್ಲಿ ಅಲ್ಝೈಮರ್ ತಡೆಗಟ್ಟಲು ಸಹಾಯವಾಗಬಹುದೇ, ಹೇಗೆ ನಡೆದಿದೆ ಸಂಶೋಧನೆ ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.

ಈ ಅಧ್ಯಯನದಲ್ಲಿ ಸ್ಪೇನ್‌ನ ಸಂಶೋಧಕರು ಫಾಸ್ಫೊರಿಲೇಟೆಡ್ ಟೌ (p-tau217) ಎಂಬ ಪ್ರೋಟೀನ್ ಮೇಲೆ ಗಮನಹರಿಸಿದ್ದು. ಇದು ಮೆದುಳಿನಲ್ಲಿ ಸಹಜವಾಗಿ ಇರುವ ಪ್ರೋಟೀನ್ ಆಗಿದ್ದು, ನರಕೋಶಗಳನ್ನು (ನ್ಯೂರಾನ್‌ಗಳನ್ನು) ಸ್ಥಿರವಾಗಿಡಲು ಸಹಾಯ ಮಾಡುತ್ತದೆ. ಆದರೆ ಈ ಪ್ರೋಟೀನ್ ಅಸಹಜವಾಗಿ ಬದಲಾಗಿ ಗುಡ್ಡೆಯಾಗಲು ಪ್ರಾರಂಭಿಸಿದಾಗ, ಅದು ನರಕೋಶಗಳ ನಡುವೆ ಸಂವಹನವನ್ನು ಅಡ್ಡಿಪಡಿಸುವ ಟ್ಯಾಂಗಲ್‌ಗಳನ್ನು ರೂಪಿಸುತ್ತದೆ. ಇದರ ಪರಿಣಾಮವಾಗಿ ಮೆದುಳಿನ ಕಾರ್ಯಕ್ಷಮತೆ ಕುಗ್ಗಿ, ಆಲ್ಝೈಮರ್‌ ಮುಂತಾದ ನರಕ್ಷಯ ರೋಗಗಳು ಉಂಟಾಗಬಹುದು. ಫಾಸ್ಫೊರಿಲೇಟೆಡ್ ಟೌ ಅನ್ನು ರೋಗದ ನೇರ ಕಾರಣವೆಂದು ಪರಿಗಣಿಸದಿದ್ದರೂ, ರಕ್ತದಲ್ಲಿ ಇದರ ಪ್ರಮಾಣ ಹೆಚ್ಚಿರುವುದು ಆಲ್ಝೈಮರ್‌ನ ಆರಂಭಿಕ ಎಚ್ಚರಿಕೆ ಸೂಚಕಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ.

ಅಧ್ಯಯನ ಹೇಗೆ ನಡೆಸಲಾಯಿತು?

ಮರೆವಿಗೆ ಸಂಬಂಧಿತ ಸಮಸ್ಯೆಗಳೊಂದಿಗೆ ಬಂದಂತಹ 50 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನ 200 ಹೊಸ ರೋಗಿಗಳನ್ನು ಸಂಶೋಧಕರು ಪರಿಶೀಲಿಸಿದರು. ಮೊದಲು ವೈದ್ಯರು ಸಾಮಾನ್ಯ ಕ್ಲಿನಿಕಲ್ ಮೌಲ್ಯಮಾಪನದ ಆಧಾರದ ಮೇಲೆ ನಿರ್ಣಯ ಮಾಡಿದ್ದು ಅವುಗಳನ್ನು ದಾಖಲಿಸಿಕೊಂಡಿದ್ದಾರೆ. ನಂತರ p-tau217 ರಕ್ತ ಪರೀಕ್ಷೆಯ ಫಲಿತಾಂಶಗಳನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ನಿರ್ಣಯವನ್ನು ಪರಿಷ್ಕರಿಸಿದ್ದಾರೆ. ರಕ್ತ ಪರೀಕ್ಷೆಯಿಲ್ಲದೆ, ವೈದ್ಯರು 75.5% ಪ್ರಕರಣಗಳಲ್ಲಿ ಆಲ್ಝೈಮರ್ ಅನ್ನು ಸರಿಯಾಗಿ ಪತ್ತೆಹಚ್ಚಿದ್ದರು. ಆದರೆ p-tau217 ರಕ್ತ ಪರೀಕ್ಷೆಯ ಫಲಿತಾಂಶಗಳನ್ನು ಸೇರಿಸಿದಾಗ, ನಿರ್ಣಯದ ನಿಖರತೆ 94.5%ಕ್ಕೆ ಏರಿತು. ಅಂದರೆ 19% ರಷ್ಟು ಹೆಚ್ಚಳ ಕಂಡುಬಂದಿದೆ. ಹಾಗಾಗಿ ಸುಮಾರು ನಾಲ್ಕರಲ್ಲಿ ಒಬ್ಬ ರೋಗಿಯ ಪ್ರಾಥಮಿಕ ನಿರ್ಣಯವನ್ನು ಬದಲಿಸಬೇಕಾಗಿ ಬಂದಿದೆ. ಕೆಲವರು ಮೊದಲಿಗೆ ಆಲ್ಝೈಮರ್ ಎಂದು ಭಾವಿಸಲ್ಪಟ್ಟರೂ, ಅವರಿಗೆ ಬೇರೆ ರೋಗವಿರುವುದು ಪತ್ತೆಯಾಗಿದೆ. ಮತ್ತೊಂದೆಡೆ, ಸಾಮಾನ್ಯ ವಯೋ ಸಹಜ ಸಮಸ್ಯೆ ಎಂದು ಅಂದಾಜಿಸಲ್ಪಟ್ಟ ಕೆಲವರಲ್ಲಿ ಆಲ್ಝೈಮರ್‌ನಿಂದ ಬಳಲುತ್ತಿರುವುದು ದೃಢಪಟ್ಟಿದೆ.

ಇದನ್ನೂ ಓದಿ: ನೀವು ವಾಸಮಾಡುವ ಪ್ರದೇಶದಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದ್ಯಾ? ಹಾಗಿದ್ರೆ ನಿಮಗೂ ಬರಬಹುದು ಮರೆವಿನ ಕಾಯಿಲೆ

ಜನಸಂಖ್ಯೆ ವೇಗವಾಗಿ ವೃದ್ಧಿಯಾಗುತ್ತಿರುವ ಇಂದಿನ ಕಾಲದಲ್ಲಿ, ಆಲ್ಝೈಮರ್ ಮತ್ತು ಡಿಮೆನ್ಷಿಯಾ ಪ್ರಕರಣಗಳ ಸಂಖ್ಯೆಯೂ ಏರುತ್ತಿರುವುದು ಸುಳ್ಳಲ್ಲ. ಪ್ರಸ್ತುತ ಆಲ್ಝೈಮರ್ ಪತ್ತೆಹಚ್ಚಲು ಬಳಸುವ ಮೆದುಳು ಸ್ಕ್ಯಾನ್‌ಗಳು ಮತ್ತು ಸ್ಪೈನಲ್ ಟ್ಯಾಪ್ ಪರೀಕ್ಷೆಗಳು ದುಬಾರಿಯಾಗಿದ್ದು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವುದಿಲ್ಲ. ಇದರ ನಡುವೆ, ಸರಳ ರಕ್ತ ಪರೀಕ್ಷೆಯೊಂದು ಈ ರೀತಿ ಸುಲಭ ಫಲಿತಾಂಶ ನೀಡುತ್ತಿದೆ ಎಂದರೆ ಭವಿಷ್ಯದಲ್ಲಿ ಯಾರೂ ಬೇಕಾದರೂ ಮಾಡಿಸಬಹುದಾಗಿದೆ. ಇದು ಲಕ್ಷಾಂತರ ಜನರಿಗೆ ಸಮಯೋಚಿತ ಚಿಕಿತ್ಸೆ ಮತ್ತು ಉತ್ತಮ ಆರೈಕೆ ದೊರೆಯಲು ಸಹಾಯ ಮಾಡಬಹುದು. ಆದರೆ ಗಮನಿಸಬೇಕಾದ ವಿಷಯವೆಂದರೆ, ಈ ರಕ್ತ ಪರೀಕ್ಷೆ ಭಾರತದಲ್ಲಿ ಇನ್ನೂ ಪ್ರಾರಂಭವಾಗಿಲ್ಲ. ಇದು ಇನ್ನೂ ಸಂಶೋಧನಾ ಹಂತದಲ್ಲಿದ್ದು, ವ್ಯಾಪಕ ಬಳಕೆಗೆ ಲಭ್ಯವಿಲ್ಲ. ಜೊತೆಗೆ ಸಾಮಾನ್ಯ ಆಸ್ಪತ್ರೆಗಳಲ್ಲಿ ಅಥವಾ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಇದರ ಬಳಕೆ ಆರಂಭವಾಗಿಲ್ಲ. ಆದ್ದರಿಂದ, ಇದು ಭವಿಷ್ಯದಲ್ಲಿ ಭರವಸೆ ಮೂಡಿಸುವ ಸಾಧನವಾಗಿದ್ದರೂ, ಪ್ರಸ್ತುತ ಹಂತದಲ್ಲಿ ಇದು ಪ್ರಯೋಗಾತ್ಮಕ ವಿಧಾನವೆಂದು ಪರಿಗಣಿಸಬೇಕಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶೃಂಗೇರಿಯಲ್ಲಿ ಚೌಟ್ರಿವರೆಗೂ ಬಂದು ಮದುವೆ ಬೇಡ ಎಂದ ವಧು! – Kannada News | Alleged Case Against Groom Leads to Wedding Cancellation in Sringeri

ಚಿಕ್ಕಮಗಳೂರು, ಫೆಬ್ರವರಿ 27: ಚೌಟ್ರಿವರೆಗೂ ಬಂದ ಮದುಮಗಳೊಬ್ಬಳು ತನಗೆ ಈ ವಿವಾಹ ಬೇಡ ಎಂದು ಹಿಂದಿರುಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ನಡೆದಿದೆ. ವರನ ಮೇಲೆ ರೇಪ್ ಕೇಸ್ ಇದ್ದು, ಆತ ಕುಡುಕನಾಗಿರುವ ಕಾರಣ ತನಗೆ ಈ ವಿವಾಹ ಇಷ್ಟವಿಲ್ಲ ಎಂದು ವಧು ವಾಪಸ್​​ ಆಗಿದ್ದಾಳೆ. ಶೃಂಗೇರಿಯ ಈಡಿಗರ ಸಮುದಾಯ ಭವನದಲ್ಲಿ ಶೃಂಗೇರಿಯ ಯುವಕನ​​ ಜೊತೆ ಬಾಳೆಹೊನ್ನೂರಿನ ಯುವತಿ ವಿವಾಹ ಇಂದು ನಿಶ್ಚಯಗೊಂಡಿತ್ತು. ಎಷ್ಟೇ ಮನವೊಲಿಸಲು ಯತ್ನಿಸಿದ್ರೂ ಮದುವೆಗೆ ಯುವತಿ ಒಪ್ಪಿಲ್ಲ ಎನ್ನಲಾಗಿದೆ. ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ವರದಕ್ಷಿಣೆ ಆಸೆಗೆ 8 ವರ್ಷದಿಂದ ಪ್ರೀತಿಸಿದ ಯುವತಿಗೆ ಕೈಕೊಡಲು ಮುಂದಾದ ಶಿಕ್ಷಕ: ಮುಂದೇನಾಯ್ತು? – Kannada News | Chitradurga: Teacher marry his lover After Police Intervene in Dowry Cheating Case

ಚಿತ್ರದುರ್ಗ, ಫೆಬ್ರವರಿ 27: ಪೊಲೀಸರ ಸಮ್ಮುಖದಲ್ಲಿ ಪ್ರೇಯಸಿಗೆ ಶಿಕ್ಷಕ (Teacher) ತಾಳಿ ಕಟ್ಟಿರುವಂತಹ ಘಟನೆ ಚಿತ್ರದುರ್ಗ ತಾಲೂಕಿನ ಭರಮಸಾಗರ ಪೊಲೀಸ್ ಠಾಣೆ ಬಳಿ ದೇವಸ್ಥಾನದಲ್ಲಿ ನಡೆದಿದೆ. 8 ವರ್ಷದಿಂದ ಪ್ರೀತಿಸಿ ಬಳಿಕ  ಶಿಕ್ಷಕ ಹರೀಶ್ ವಂಚನೆಗೆ ಯತ್ನಿಸಿದ ಆರೋಪ ಕೇಳಿಬಂದಿತ್ತು. ಹರೀಶ್ ವಿರುದ್ಧ ಭರಮಸಾಗರ ಠಾಣೆಗೆ ಕಾವ್ಯಾ ದೂರು ನೀಡಿದ್ದರು. ಹೀಗಾಗಿ ಪೊಲೀಸರ ಸಮ್ಮುಖದಲ್ಲಿ ಚರ್ಚೆ ವೇಳೆ ಒಪ್ಪಿದ ಹಿನ್ನಲೆ ಇಬ್ಬರಿಗೂ ಮದುವೆ ಮಾಡಿಸಲಾಗಿದೆ.

ನಡೆದಿದ್ದೇನು? 

ಚಿತ್ರದುರ್ಗ ತಾಲೂಕಿನ ತಣಿಗೆಹಳ್ಳಿಯ ಹರೀಶ್​ ಪರಶುರಾಂಪುರ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಇಸಾಮುದ್ರ ಗೊಲ್ಲರಹಟ್ಟಿ ಕಾವ್ಯಾ ಮತ್ತು ಹರೀಶ್ ಸಂಬಂಧಿಕರಾಗಿದ್ದು 8 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ  ನಿಶ್ಚಿತಾರ್ಥ ಕೂಡ ಆಗಿತ್ತು.

ಇದನ್ನೂ ಓದಿ: ಅನ್ಯಕೋಮಿನ ಯುವಕನಿಂದ ಚಾಕು ಇರಿತ: ಸಿಡಿದೆದ್ದ ಹಿಂದೂ ಸಂಘಟನೆಗಳು, ಚಿತ್ರದುರ್ಗ ರಣಾಂಗಣ

ಈ ಮಧ್ಯೆ ವರದಕ್ಷಿಣೆ ಆಸೆಗೆ ಹರೀಶ್ ಬೇರೆ ಯುವತಿ ಜೊತೆ ಮದುವೆಗೆ ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ. ಹೀಗಾಗಿ ಹರೀಶ್ ವಿರುದ್ಧ ಭರಮಸಾಗರ ಠಾಣೆಗೆ ಕಾವ್ಯಾ ದೂರು ನೀಡಿದ್ದಾರೆ. ಹರೀಶ್ ವಿರುದ್ಧ ಕಾವ್ಯಾ ಮತ್ತು ಪೋಷಕರು ಕಾನೂನು ಕ್ರಮಕ್ಕೆ ಆಗ್ರಹಿಸಿದ್ದರು. ಇನ್ನು ಶಿಕ್ಷಕ ಹರೀಶ್​ನನ್ನು ಠಾಣೆಗೆ ಕರೆಸಿದ ಪೊಲೀಸರು ವಿಚಾರಣೆ ಮಾಡಿದ್ದಾರೆ. ಈ ವೇಳೆ ಪೊಲೀಸರ ಸಮ್ಮುಖದಲ್ಲಿ ಚರ್ಚೆ ವೇಳೆ ಕಾವ್ಯಾರನ್ನು ವಿವಾಹವಾಗಲು ಹರೀಶ್ ಒಪ್ಪಿದ್ದು, ಅಲ್ಲೇ ಪೊಲೀಸ್ ಠಾಣೆ ಬಳಿ ದೇಗುಲದಲ್ಲಿ ಪೊಲೀಸರ ಸಮ್ಮುಖದಲ್ಲಿ ಮದುವೆ ಆಗಿದ್ದಾರೆ.

ಪೋಷಕರ ವಿರೋಧದ ಆತಂಕ: ರಕ್ಷಣೆ ಕೋರಿ ಎಸ್​ಪಿ ಕಚೇರಿ ಮೆಟ್ಟಿಲೇರಿದ ನವಜೋಡಿ

ಪ್ರೀತಿಸಿ ಮದುವೆಯಾದ ಜೋಡಿಗೆ ಪೋಷಕರ ವಿರೋಧದ ಆತಂಕ ಹಿನ್ನಲೆ ಕೊಪ್ಪಳ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕಚೇರಿಗೆ ನವಜೋಡಿ ಆಗಮಿಸಿದ ಘಟನೆ ನಡೆದಿದೆ. ಮನೆಯವರು ವಿರೋಧಿಸುವ ಆತಂಕ ಇದೆ, ಹೀಗಾಗಿ ರಕ್ಷಣೆ ಬೇಕು ಅಂತ ಚಿನ್ಮಯಿ ಮತ್ತು ಬಸವರಾಜ್ ಮೇಟಿ ಜೋಡಿ ಎಸ್​ಪಿ ಕಚೇರಿ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರ ಪ್ರಕರಣ ತನಿಖೆ ವೇಳೆ ಬೆಚ್ಚಿಬಿದ್ದ ಖಾಕಿ: ವಿದ್ಯಾರ್ಥಿನಿಯರನ್ನೇ ಗುರಿಯಾಗಿಸಿಕೊಂಡಿದ್ದ ಮಾದಕ ಜಾಲ ಬಯಲು

ನವಜೋಡಿ ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ನಿವಾಸಿಗಳು. ಚಿನ್ಮಯಿ‌ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದು, ಬಸವರಾಜ್ ಮೇಟಿ ಲಿಂಗಾಯತ ಸಮುದಾಯಕ್ಕೆ ಸೇರಿದ ಯುವಕ. ಹುಬ್ಬಳ್ಳಿಯಲ್ಲಿ ಜನವರಿ 14ರಂದು ಮದುವೆ ಆಗಿದ್ದಾರೆ. ಇದೀಗ ಚಿನ್ಮಯಿ ಕುಟುಂಬದವರು ವಿರೋಧ ಮಾಡುವ ಆತಂಕ ಹಿನ್ನಲೆ ಕೊಪ್ಪಳ ಎಸ್​ಪಿ ಕಚೇರಿಗೆ ಬಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸಾಮೂಹಿಕ ಅತ್ಯಾಚಾರ ಪ್ರಕರಣ ತನಿಖೆ ವೇಳೆ ಬೆಚ್ಚಿಬಿದ್ದ ಖಾಕಿ: ವಿದ್ಯಾರ್ಥಿನಿಯರನ್ನೇ ಗುರಿಯಾಗಿಸಿಕೊಂಡಿದ್ದ ಮಾದಕ ಜಾಲ ಬಯಲು – Kannada News | Bengaluru: Drug, Assault and Blackmail Racket Targeting College Girls Busted

ಸಾಮೂಹಿಕ ಅತ್ಯಾಚಾರ ಕೇಸ್​​ ತನಿಖೆ ವೇಳೆ ಪೊಲೀಸರೇ ಶಾಕ್​​

ಬೆಂಗಳೂರು, ಫೆಬ್ರವರಿ 27: ಕಾಲೇಜು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ ಪ್ರಕರಣದ ತನಿಖೆ ವೇಳೆ ಬೆಚ್ಚಿಬೀಳಿಸುವ ಸಂಗತಿಗಳು ಬಯಲಾಗಿವೆ. ಯುವತಿಯರನ್ನು ಮಾದಕ ದ್ರವ್ಯಗಳ ಬಲೆಗೆ ಸಿಲುಕಿಸಿ, ನಂತರ ಅತ್ಯಾಚಾರ ಎಸಗಿ, ವಿಡಿಯೋ ಮಾಡಿ ಬ್ಲಾಕ್‌ಮೇಲ್ ಮಾಡುತ್ತಿದ್ದ ದೊಡ್ಡ ಜಾಲವೊಂದನ್ನು  ಅಮೃತಹಳ್ಳಿ ಪೊಲೀಸರು ಬಯಲಿಗೆಳೆದ್ದಿದ್ದಾರೆ. ನಿಖಿಲ್ ಮತ್ತು ಡಿಕ್ಸನ್ ಈ ಜಾಲದ ಪ್ರಮುಖ ಆರೋಪಿಗಳಾಗಿದ್ದು, ಈ ಪೈಕಿ ನಿಖಿಲ್ ಮಾಸ್ಟರ್‌ಮೈಂಡ್ ಎಂದು ತಿಳಿದುಬಂದಿದೆ. ಆರೋಪಿಗಳು ಇನ್‌ಸ್ಟಾಗ್ರಾಮ್ ಮೂಲಕ ಪ್ರತಿಷ್ಠಿತ ಕಾಲೇಜುಗಳ ಯುವತಿಯರೊಂದಿಗೆ ಸ್ನೇಹ ಬೆಳೆಸಿ, ಪಾರ್ಟಿಗಳಿಗೆ ಆಹ್ವಾನಿಸುತ್ತಿದ್ದರು. ಅಲ್ಲಿ ಅವರಿಗೆ ಡ್ರಗ್ಸ್ ಬೆರೆಸಿದ ಪಾನೀಯಗಳನ್ನು ನೀಡಿ ಅಥವಾ ನೇರವಾಗಿ ಡ್ರಗ್ಸ್ ನೀಡಿ ಪ್ರಜ್ಞಾಹೀನರನ್ನಾಗಿಸುತ್ತಿದ್ದರು.ನಂತರ ಅವರ ಮೇಲೆ ಅತ್ಯಾಚಾರ ಎಸಗಿ, ಬೆತ್ತಲೆ ವಿಡಿಯೋಗಳು ಮತ್ತು ಫೋಟೊಗಳನ್ನು ತೆಗೆದು ಬ್ಲಾಕ್‌ಮೇಲ್ ಮಾಡುತ್ತಿದ್ದರು. ಈ ಮೂಲಕ ಅವರನ್ನು ಮತ್ತೆ ಮತ್ತೆ ಬಳಸಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಪಾರ್ಟಿಯ ನಂತರ ಆರೋಪಿಗಳು ಏನೂ ಅರಿಯದವರಂತೆ ವರ್ತಿಸಿ, ಕುಡಿದ ನಶೆಯಲ್ಲಿದ್ದೆವು. ಏನಾಗಿದೆ ಎಂದು ಗೊತ್ತಿಲ್ಲ ಎಂದು ನಾಟಕವಾಡುತ್ತಿದ್ದರು. ಬಹಳಷ್ಟು ಯುವತಿಯರು ತಮ್ಮ ಗೌರವಕ್ಕೆ ಹೆದರಿ, ಪೊಲೀಸರಿಗೆ ದೂರು ನೀಡಲು ಹಿಂಜರಿದಿದ್ದರು. ಆದರೆ, ಇತ್ತೀಚೆಗೆ ನಡೆದ ಘಟನೆ ಸಂಬಂಧ ಯುವತಿಯೋರ್ವಳು ನೀಡಿರುವ ದೂರಿನಿಂದ ಆರೋಪಿಗಳ ಅಸಲಿ ಮುಖ ಬಯಲಾಗಿದೆ. ಸುಮಾರು 19 ಯುವತಿಯರು ದೌರ್ಜನ್ಯ ವಿಚಾರವಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಈ ಮಾದಕ ಜಾಲದ ಹಿಂದೆ ರಾಜಕಾರಣಿಗಳು ಮತ್ತು ದೊಡ್ಡ ಹುದ್ದೆಗಳಲ್ಲಿರುವವರು ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಹನಿಟ್ರ್ಯಾಪ್​​​​ ಕೇಸ್ ಆರೋಪಿ ಯುವತಿಯಿಂದ ಸಾಮೂಹಿಕ ಅತ್ಯಾಚಾರ ದೂರು

ಹುಡುಗಿಯರನ್ನು ಬಲೆಗೆ ಬೀಳಿಸುತ್ತಿದ್ದಿದ್ದು ಹೇಗೆ?

ಆರೋಪಿಗಳಾದ ಡಿಕ್ಸನ್ ಮತ್ತು ಇತರರು ಇನ್‌ಸ್ಟಾಗ್ರಾಮ್ ಮೂಲಕ ಯುವತಿಯರನ್ನು ಸಂಪರ್ಕಿಸಿ, ಫೋಟೋ ಶೂಟ್, ಮಾಡೆಲಿಂಗ್ ಅಥವಾ ಪಾರ್ಟಿಗಳ ನೆಪದಲ್ಲಿ ಆಹ್ವಾನಿಸುತ್ತಿದ್ದರು. ಆರಂಭದಲ್ಲಿ ಪಬ್‌ಗಳು ಮತ್ತು ಕೆಫೆಗಳಲ್ಲಿ ಸಭೆಗಳನ್ನು ನಡೆಸುತ್ತಿದ್ದರು, ಅಲ್ಲಿ ಯಾವುದೇ ಅಸಭ್ಯ ವರ್ತನೆ ಇರುತ್ತಿರಲಿಲ್ಲ. ನಂತರ, ಆಫ್ಟರ್ ಪಾರ್ಟಿ ನೆಪದಲ್ಲಿ ವಿಲ್ಲಾಗಳಿಗೆ ಆಹ್ವಾನಿಸಿ ಲೈಂಗಿಕವಾಗಿ ಸಹಕರಿಸಲು ಒತ್ತಾಯಿಸುತ್ತಿದ್ದರು. ಕೆಲವರು ಒಪ್ಪಿಕೊಂಡರೆ, ಕೆಲವರಿಗೆ ಮಾದಕ ದ್ರವ್ಯಗಳನ್ನು ಬಲವಂತವಾಗಿ ನೀಡಿ ಲೈಂಗಿಕ ದೌರ್ಜನ್ಯ ಎಸಗಲಾಗುತ್ತಿತ್ತು. ಆರೋಪಿಗಳು ಮುಖ್ಯವಾಗಿ ಪ್ರತಿಷ್ಠಿತ ಕಾಲೇಜುಗಳ ಯುವತಿಯರನ್ನು ಗುರಿಯಾಗಿಸಿಕೊಂಡಿದ್ದರು,  ಅನ್ಯ ರಾಜ್ಯದ ಯುವತಿಯರೇ ಇವರ ಟಾರ್ಗೆಟ್​​ ಆಗಿತ್ತು. ದೂರು ನೀಡಿರುವ ಸಂತ್ರಸ್ತ ಯುವತಿ ಕೂಡ ಮೂಲತಃ ತಮಿಳುನಾಡಿನವಳು. ಡಿಕ್ಸನ್ ಈ ಯುವತಿಯನ್ನು ಪ್ರೀತಿಸುವ ನೆಪದಲ್ಲಿ ಸಂಪರ್ಕಿಸಿ, ವಿಶ್ವಾಸ ಗಳಿಸಿ ಪಾರ್ಟಿಗೆ ಕರೆದುಕೊಂಡು ಹೋಗಿದ್ದನು. ಆಕೆ ಸಹಕರಿಸಲು ನಿರಾಕರಿಸಿದಾಗ, ಮಾದಕ ದ್ರವ್ಯ ನೀಡಿ ಇಬ್ಬರು ಆರೋಪಿಗಳು ಬಲವಂತವಾಗಿ ಆಕೆಯನ್ನು ಮಿಸ್ಯೂಸ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಸಂತ್ರಸ್ತ ಯುವತಿ ವಿರುದ್ಧವೇ ದೂರು

ಇನ್ನು ಘಟನೆ ಸಂಬಂಧ ಫೆಬ್ರವರಿ 21ರಂದು ಯುವತಿ ದೂರು ನೀಡುವ ಮೊದಲು, ಆರೋಪಿ ನಿಖಿಲ್ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಆ ಯುವತಿ ತನಗೆ ಬ್ಲಾಕ್‌ಮೇಲ್ ಮಾಡುತ್ತಿದ್ದಾಳೆ ಎಂದು ದೂರು ದಾಖಲಿಸಿದ್ದ. ನಂತರ, ಯುವತಿಯ ದೂರಿನ ಆಧಾರದ ಮೇಲೆ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಗ್ಯಾಂಗ್ ರೇಪ್ ಪ್ರಕರಣ ದಾಖಲಾಗಿತ್ತು. ಆರೋಪಿಗಳು ಯುವತಿಯೇ ತಪ್ಪಿತಸ್ಥೆ ಎಂದು ಬಿಂಬಿಸಲು ಯತ್ನಿಸಿದ್ದರು ಎನ್ನಲಾಗಿದೆ. ಪ್ರಕರಣ ಸಂಬಂಧ ಸಕಲೇಶಪುರದ ನಿಖಿಲ್​​ ಮತ್ತು ಪಶ್ಚಿಮ ಬಂಗಾಳದ ನಿಖಿಲ್​​ನ ಪೊಲೀಸರು ಬಂಧಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 5:24 pm, Fri, 27 February 26

Source link

T20 World Cup: ಬುಮ್ರಾರನ್ನು ಹಿಂದಿಕ್ಕಿ ಇತಿಹಾಸ ನಿರ್ಮಿಸಿದ ಅರ್ಷದೀಪ್ ಸಿಂಗ್

Source link

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ದಳಪತಿ ವಿಜಯ್ ಪತ್ನಿ: ನಟಿ ಜೊತೆ ಅನೈತಿಕ ಸಂಬಂಧ ಆರೋಪ – Kannada News | Thalapathy Vijay wife Sangeetha applies for divorce Alleging affair with an actress

ಕಾಲಿವುಡ್ ಖ್ಯಾತ ನಟ ದಳಪತಿ ವಿಜಯ್ (Thalapathy Vijay) ಸಂಸಾರದಲ್ಲಿ ಬಿರುಕು ಮೂಡಿದೆ. ವಿಜಯ್ ಪತ್ನಿ ಸಂಗೀತಾ (Sangeetha) ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 27 ವರ್ಷಗಳ ದಾಂಪತ್ಯದ ಬಳಿಕ ಅವರು ಡಿವೋರ್ಸ್ (Divorce) ಪಡೆಯಲು ಮುಂದಾಗಿದ್ದಾರೆ. ವಿಜಯ್ ಅವರಿಗೆ ನಟಿಯೊಬ್ಬರ ಜೊತೆ ಅನೈತಿಕ ಸಂಬಂಧ ಇದೆ ಎಂದು ಸಂಗೀತಾ ಆರೋಪಿಸಿದ್ದಾರೆ. ಸಿನಿಮಾಗಿಂತಲೂ ಹೆಚ್ಚಾಗಿ ರಾಜಕೀಯದಲ್ಲಿ ವಿಜಯ್ ಅವರು ಈಗ ಆಸಕ್ತಿ ಹೊಂದಿದ್ದಾರೆ. ಆದರೆ, ಅವರ ಮೇಲೆ ಅನೈತಿಕ ಸಂಬಂಧದ ಆರೋಪ ಕೇಳಿಬಂದಿರುವುದರಿಂದ ರಾಜಕೀಯದ ಹಾದಿಗೆ ಇದು ಕಪ್ಪು ಚುಕ್ಕಿ ಆಗಲಿದೆ.

ಚೆಂಗಲ್​ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ಸಂಗೀತಾ ಅವರು ಫೆಬ್ರವರಿ 27ರಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿದಿದ್ದಾರೆ. ಈ ವಿಷಯದ ಬಗ್ಗೆ ವಿಜಯ್ ಅವರು ಇನ್ನೂ ಅಧಿಕೃತ ಹೇಳಿಕೆ ನೀಡುವುದು ಬಾಕಿ ಇದೆ. ನಟಿಯ ಜೊತೆ ವಿಜಯ್ ಅವರಿಗೆ ಅನೈತಿಕ ಸಂಬಂಧ ಇದೆ ಎಂದು ಪತ್ನಿ ಆರೋಪ ಮಾಡಿದ್ದು, ಕೋರ್ಟ್ ವಿಚಾರಣೆ ವೇಳೆ ಆ ನಟಿಯ ಹೆಸರು ಹೊರಬರಲಿದೆ.

ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದೆ. ಅಪ್ಡೇಟ್ ತಿಳಿಯಲು ಪುಟ ರೀಫ್ರೆಶ್ ಮಾಡಿ…

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 5:26 pm, Fri, 27 February 26

Source link

Exit mobile version